All posts by nagaraj11081993

ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್! ಬಿಸಿಲಿನ ಬೇಗೆಯಲ್ಲೂ ಪ್ರಾಣಿಗಳು ಕೂಲ್ ಕೂಲ್ – Kannada News | Bannerghatta Zoo Fights Summer Heat: Ice candy and fruits fed to zoo animals

ಬೆಂಗಳೂರು, ಮಾರ್ಚ್​ 05: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪ್ರಾಣಿಗಳಿಗೆ ಬಿಸಿಲಿನ ತಾಪದಿಂದ ರಕ್ಷಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಝೂ ಸಿಬ್ಬಂದಿ ಪ್ರಾಣಿಗಳಿಗೆ ಎಳನೀರು, ಹಣ್ಣು, ತರಕಾರಿ ಬಳಸಿ ಲಾಲಿಪಾಪ್ ಮತ್ತು ಐಸ್‌ಕ್ಯಾಂಡಿ ರೂಪದಲ್ಲಿ ಪೌಷ್ಠಿಕ ಆಹಾರ ನೀಡುತ್ತಿದ್ದಾರೆ. ಆನೆ, ಜಿಂಕೆ, ಮಂಗ, ಕರಡಿ ಸೇರಿದಂತೆ ಎಲ್ಲಾ ಪ್ರಾಣಿಗಳಿಗೂ ತಂಪಾದ ಆಹಾರ ಮತ್ತು ನೀರಿನ್ನು ನೀಡಲಾಗುತ್ತಿದೆ. ದಿನಕ್ಕೆ ಆನೆಗಳಿಗೆ ಸ್ನಾನ, ಕಲ್ಲಂಗಡಿ ಹಣ್ಣು ಮತ್ತು ನೀರಿನ ಹೊಂಡಗಳ ಮೂಲಕ ತಂಪಾದ ವಾತಾವರಣ ನೀಡಲಾಗುತ್ತಿದೆ. ಪ್ರವಾಸಿಗರಿಗೆ ಸಹ ಮರಗಿಡಗಳ ನೆರವಿನಿಂದ ತಟ್ಟಿದ ಬಿಸಿಲಿನಿಂದ ರಕ್ಷಣೆ, ಕುಳಿತು ವಿಶ್ರಾಂತಿ ಪಡೆಯಲು ಶೆಲ್ಟರ್ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಸಿಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ

ಆಂಧ್ರಪ್ರದೇಶ, ಮಾರ್ಚ್​ 05: ವಿದ್ಯಾರ್ಥಿಗಳಿಗೆ ಹೊಡೆದು ಬುದ್ಧಿ ಹೇಳಿ ಪಾಠ ಕಲಿಸುವುದು ಹಾಗಿರಲಿ, ಈಗಿನ ಮಕ್ಕಳು ಶಿಕ್ಷಕರ ಮೇಲೆ ಹಲ್ಲೆ ನಡೆಸುವಷ್ಟರ ಮಟ್ಟಿಗೆ ಹೋಗಿದ್ದಾರೆ ಎನ್ನುವುದೇ ಆತಂಕಕಾರಿ ಸಂಗತಿಯಾಗಿದೆ. ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ವೀರವಳ್ಳಿಯ ಶಾಲೆಯೊಂದರಲ್ಲಿ 10ನೇ ತರಗತಿ ವಿದ್ಯಾರ್ಥಿಯೊಬ್ಬ ಶಿಕ್ಷಕರು ಬೈದರೆಂದು ಅವರ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾರೆ, ಮಕ್ಕಳ ಭವಿಷ್ಯವನ್ನು ರೂಪಿಸುತ್ತಾರೆ. ಆದರೆ ಅವರ ಬೆಲೆ ಗೊತ್ತಿಲ್ಲದ್ದ ವಿದ್ಯಾರ್ಥಿಗಳು ಇಂಥಾ ತಪ್ಪು ಮಾಡಿಬಿಡುತ್ತಾರೆ.

ಇಂತಹ ನಡವಳಿಕೆಯು ಕಲಿಕಾ ವಾತಾವರಣವನ್ನು ಹಾನಿಗೊಳಿಸುವುದಲ್ಲದೆ ಸಮಾಜಕ್ಕೆ ಅಪಾಯಕಾರಿ ಸಂದೇಶವನ್ನು ರವಾನಿಸುತ್ತದೆ.ವಿದ್ಯಾರ್ಥಿಗಳು ಅಧ್ಯಯನದ ಮೇಲೆ ಕೇಂದ್ರೀಕರಿಸಬೇಕಾದ ಮತ್ತು ಉತ್ತಮ ಭವಿಷ್ಯವನ್ನು ನಿರ್ಮಿಸಬೇಕಾದ ವಯಸ್ಸಿನಲ್ಲಿ, ವ್ಯಸನ ಮತ್ತು ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವುದು ತೀವ್ರ ಕಳವಳಕಾರಿಯಾಗಿದೆ.ಶಿಕ್ಷಕರನ್ನು ಗೌರವಿಸುವುದು ಆರೋಗ್ಯಕರ ಶಿಕ್ಷಣ ವ್ಯವಸ್ಥೆಯ ಅಡಿಪಾಯವಾಗಿದೆ ಮತ್ತು ಅಂತಹ ಹಿಂಸಾಚಾರವನ್ನು ಎಂದಿಗೂ ಸಹಿಸಬಾರದು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹುಲಿ ಕಾರ್ತಿಕ್​​ಗೆ ಚಾಲೆಂಜ್ ಮಾಡಿದ ಅನುಶ್ರೀ; ಗೆದ್ದಿದ್ದು ಯಾರು?

ಅನುಶ್ರೀ ಹಾಗೂ ಹುಲಿ ಕಾರ್ತಿಕ್ ಇದ್ದಲ್ಲಿ ಫನ್ ಇದ್ದೇ ಇರುತ್ತೆ.ಈಗ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅನುಶ್ರೀ ಅವರು ಕಾರ್ತಿಕ್​​ಗೆ ಚಾಲೆಂಜ್ ಮಾಡುತ್ತಾರೆ. ಈ ಚಾಲೆಂಜ್​​ನ ಕಾರ್ತಿಕ್ ಸ್ವೀಕಾರ ಮಾಡುತ್ತಾರೆ. ಅಷ್ಟಕ್ಕೂ ಏನು ಆ ಚಾಲೆಂಜ್? ‘ವಸಂತ ವಸಂತ..’ ಹಾಡಿಗೆ ಡ್ಯಾನ್ಸ್ ಮಾಡೋದು. ಹಾಗಾದರೆ ಈ ಚಾಲೆಂಜ್ ಅಲ್ಲಿ ಗೆದ್ದೋರು ಯಾರು? ಇದನ್ನು ತಿಳಿಯಲು ಮೇಲಿನ ವಿಡಿಯೋ ನೋಡಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಚೀಪ್ ಚಿನ್ನದ ಆಸೆಗೆ ಬಿದ್ದ ವ್ಯಕ್ತಿ ಕಳೆದುಕೊಂಡಿದ್ದು 20 ಲಕ್ಷ ರೂ! – Kannada News | Devanahalli Gold Scam: Man got robbed in the name of Cheap gold; looses Rs.20 lakhs

ಚೀಪ್ ಚಿನ್ನದ ಆಸೆಗೆ ಬಿದ್ದ ವ್ಯಕ್ತಿ ಕಳೆದುಕೊಂಡಿದ್ದು 20 ಲಕ್ಷ ರೂ!

ದೇವನಹಳ್ಳಿ, ಮಾರ್ಚ್​ 05: ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿ ವ್ಯಕ್ತಿಯನ್ನು ಕರೆಸಿಕೊಂಡು 20 ಲಕ್ಷ ರೂ. ಹಣ ದೋಚಿದ (Robbery) ಘಟನೆ ದೇವನಹಳ್ಳಿ ತಾಲೂಕಿನ ವೆಂಕಟಗಿರಿಕೋಟೆ ಬಳಿ ನಡೆದಿದೆ. ಆಂಧ್ರಪ್ರದೇಶ ಮೂಲದ ವಿಶ್ವಪ್ರಸಾದ್ ರೆಡ್ಡಿ ಎಂಬಾತನನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ದಾಳಿ ನಡೆಸಿ ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ದೊಣ್ಣೆಯಿಂದ ಹೊಡೆದು, ಬ್ಯಾಗ್ ಕಸಿದು ಪರಾರಿ

ವಿಶ್ವಪ್ರಸಾದ್ ರೆಡ್ಡಿಗೆ ಕುಮಾರ್ ಎಂಬಾತ ಪರಿಚಯವಾಗಿ, ತಮ್ಮ ಬಳಿ ಕಡಿಮೆ ಬೆಲೆಗೆ ಸುಮಾರು 4 ಕೆಜಿ ಗೋಲ್ಡ್ ಕಾಯಿನ್ ಇದೆ ಎಂದು ಹೇಳಿ ಆಸೆ ಹುಟ್ಟಿಸಿದ್ದ. ಮೊದಲಿಗೆ ಒಂದು ಕೆಜಿ ಚಿನ್ನಕ್ಕೆ 20 ಲಕ್ಷ ರೂ. ನೀಡುವಂತೆ ಹೇಳಿದ ಹಿನ್ನೆಲೆಯಲ್ಲಿ ವಿಶ್ವಪ್ರಸಾದ್ ಚಿನ್ನ ಖರೀದಿಸಲು ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಆಂಧ್ರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ವಿಶ್ವಪ್ರಸಾದ್, ನಂತರ ಯಲಹಂಕದಿಂದ 20 ಲಕ್ಷ ರೂ. ಹಣದೊಂದಿಗೆ ಟ್ಯಾಕ್ಸಿಯಲ್ಲಿ ದೇವನಹಳ್ಳಿ ಕಡೆಗೆ ಪ್ರಯಾಣಿಸಿದ್ದಾರೆ.

ಇದನ್ನೂ ಓದಿ ಕುಂಬಳಗೋಡು ಠಾಣೆ ಪಿಐ ವಿರುದ್ಧ 10 ಲಕ್ಷ ರೂ.ಲಂಚ ಕೇಳಿದ ಆರೋಪ: ಪೊಲೀಸ್ ಆಯುಕ್ತರಿಗೆ ವಕೀಲರಿಂದ ದೂರು

ಈ ವೇಳೆ ರಾಷ್ಟ್ರೀಯ ಹೆದ್ದಾರಿ 47ರ ಬಳಿ ಇರುವ ವೆಂಕಟಗಿರಿಕೋಟೆ ಸಮೀಪದ ಖಾಸಗಿ ಲೇಔಟ್ ಬಳಿ ತಲುಪುತ್ತಿದ್ದಂತೆ ದುಷ್ಕರ್ಮಿಗಳ ಗ್ಯಾಂಗ್ ದಾಳಿ ನಡೆಸಿದೆ. ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದೊಣ್ಣೆಗಳಿಂದ ವಿಶ್ವಪ್ರಸಾದ್ ಹಾಗೂ ಅವನ ಜೊತೆಗಿದ್ದ ಇನ್ನೊಬ್ಬ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ವಿಶ್ವಪ್ರಸಾದ್ ಬಳಿ ಇದ್ದ ಹಣದ ಬ್ಯಾಗ್ ಹಾಗೂ ಮೊಬೈಲ್ ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆ ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮಾನವೀಯತೆ ಮರೆತ್ರಾ ವೈದ್ಯರು?: ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ – Kannada News | Koppal Hospital Faces Negligence Allegations Over Injured Womans Treatment Delay

ಕೊಪ್ಪಳ, ಮಾರ್ಚ್​ 05: ಜಿಲ್ಲಾ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ. ಬಿದ್ದು ಗಾಯಗೊಂಡಿದ್ದ ಚಿಕ್ಕಬೊಮ್ಮನಾಳ ನಿವಾಸಿ ಹುಲಿಗೆಮ್ಮ ಎಂಬ ಮಹಿಳೆಯನ್ನು ರಾತ್ರಿ 11 ಗಂಟೆಗೆ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ, ವೈದ್ಯರು ಮಾನವೀಯತೆಯನ್ನು ಮರೆತು, ಅವರನ್ನು ಅಡ್ಮಿಟ್ ಮಾಡಿಕೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ. ಗಾಯಾಳು ಹುಲಿಗೆಮ್ಮ ಚಿಕಿತ್ಸೆಗಾಗಿ ರಾತ್ರಿಯಿಡೀ ಸ್ಟ್ರೆಚರ್ ಮೇಲೆ ಮಲಗಿದ್ದರು. ಬೆನ್ನು ಮೂಳೆಗೆ ಪೆಟ್ಟಾಗಿ, ನರ ಬ್ಲಾಕ್ ಆಗಿದೆ ಎಂದು ವೈದ್ಯರು ಹೇಳಿದ್ದು, ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದಿದ್ದಾರೆ. ಆದರೆ, ರಕ್ತದೊತ್ತಡ ಸಾಮಾನ್ಯ ಸ್ಥಿತಿಗೆ ಬರಲಿ, ಹಿಂದಿನ ಗಾಯ ವಾಸಿಯಾಗಲಿ, ಮೂತ್ರ ವಿಸರ್ಜನೆ ಸರಿಯಾಗಲಿ, ಊರಿಗೆ ಹೋಗಿ ಚಿಕಿತ್ಸೆ ಪಡೆದು ಬನ್ನಿ ಎಂದು ಹೇಳಿ ದಾಖಲಾತಿಯನ್ನು ನಿರಾಕರಿಸಿದ್ದಾರೆ. ಬೆಳಗ್ಗೆ 9 ಗಂಟೆಯಾದರೂ ಯಾವುದೇ ವೈದ್ಯರು ಅವರತ್ತ ತಿರುಗಿಯೂ ನೋಡಿಲ್ಲ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ಹುಬ್ಬಳ್ಳಿ: ದೇವಿಯರಿಗೆ ಉಡಿ ತುಂಬಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿ ಭಾವೈಕ್ಯತೆ ಮೆರೆದ ಮುಸ್ಲಿಂ ಮುಖಂಡರು – Kannada News | Muslim Leaders Offer Udi to Hindu Goddess in Hubballi Fair, Arrange Prasada for Devotees, Video Goes Viral

ಹುಬ್ಬಳ್ಳಿ, ಮಾರ್ಚ್ 5: ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿ ನಡೆಯುತ್ತಿರುವ ಗ್ರಾಮದೇವಿ ಜಾತ್ರೆ ಕೋಮು ಸಾಮರಸ್ಯಕ್ಕೆ ಮಾದರಿಯಾಗಿದೆ. ಅಂಜುಮನ್ ಇಸ್ಲಾಂ ಸಂಸ್ಥೆ ಮುಖಂಡರು ಗ್ರಾಮದೇವಿಯರಿಗೆ ಉಡಿ ತುಂಬಿದ್ದರ ಜತೆಗೆ, ಒಂದು ದಿನ ಭಕ್ತರಿಗೆ ತಾವೇ ಪ್ರಸಾದ ವ್ಯವಸ್ಥೆ ಮಾಡಿ ಭಾವೈಕ್ಯತೆ ಮೆರೆದಿದ್ದಾರೆ. ಸದ್ಯ, ಮುಸ್ಲಿಂ ಮುಖಂಡರು ಊಟದ ವ್ಯವಸ್ಥೆ ಮಾಡಿ ಭಕ್ತರಿಗೆ ಬಡಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದು, ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಪೆನ್ ಕ್ಯಾಪ್ ನುಂಗಿದ ಬಾಲಕನ ಜೀವ ಉಳಿಸಿದ ವೈದ್ಯರು: ಎಂಡೋಸ್ಕೋಪಿ ಚಿಕಿತ್ಸೆ ಯಶಸ್ವಿ – Kannada News | Child Choking Emergency: Doctors Remove Pen Cap, Save Boy’s Life in Mancherial

ಪೆನ್ ಕ್ಯಾಪ್ ನುಂಗಿ ಪ್ರಾಣಾಪಾಯಕ್ಕೆ ಸಿಲುಕಿದ್ದ ನಾಲ್ಕು ವರ್ಷದ ಬಾಲಕನೊಬ್ಬನಿಗೆ ವೈದ್ಯರು ಹೊಸ ಜನ್ಮ ನೀಡಿದ್ದಾರೆ. ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ನಸ್ಪೂರ್‌ನಲ್ಲಿ ಈ ಘಟನೆ ನಡೆದಿದ್ದು, ಸಮಯೋಚಿತ ಚಿಕಿತ್ಸೆಯಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದೆ. ಅಖಿಲ್ ಎಂಬ ಬಾಲಕ ತನ್ನ ಮನೆಯಲ್ಲಿ ಆಟವಾಡುವಾಗ ಆಕಸ್ಮಿಕವಾಗಿ ಪೆನ್ ಕ್ಯಾಪ್ ಅನ್ನು ಬಾಯಿಗೆ ಹಾಕಿಕೊಂಡಿದ್ದಾನೆ. ಅದು ಅನಿರೀಕ್ಷಿತವಾಗಿ ಗಂಟಲಿನಲ್ಲಿ ಸಿಲುಕಿ ಆತನಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಮಗು ಉಸಿರುಗಟ್ಟುತ್ತಿರುವುದನ್ನು ಗಮನಿಸಿದ ಪೋಷಕರು ಗಾಬರಿಗೊಂಡರೂ, ತಡಮಾಡದೆ ಮಗುವನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ವೈದ್ಯರ ತಂಡವು ತಕ್ಷಣವೇ ಎಂಡೋಸ್ಕೋಪಿ ಪ್ರಕ್ರಿಯೆಯನ್ನು ಆರಂಭಿಸಿ, ಜಾಗರೂಕತೆಯಿಂದ ಗಂಟಲಿನಲ್ಲಿ ಸಿಲುಕಿದ್ದ ಪೆನ್ ಕ್ಯಾಪ್ ಅನ್ನು ಹೊರತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಸದ್ಯ ಬಾಲಕ ಅಖಿಲ್ ಪ್ರಾಣಾಪಾಯದಿಂದ ಪಾರಾಗಿದ್ದು, ಗುಣಮುಖನಾಗುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅನರ್ಹ BPL ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಭರ್ಜರಿ ಶಾಕ್​​: 5 ತಿಂಗಳಲ್ಲಿ 15.12 ಲಕ್ಷ ಮಂದಿಗೆ ಆಘಾತ – Kannada News | Karnataka BPL Card Crackdown: 15 Lakh Ineligible Holders Hit, Cards Canceled and Converted

ಬೆಂಗಳೂರು, ಮಾರ್ಚ್​ 05: ಅನರ್ಹವಾಗಿ ಬಿಬಿಎಲ್​​ ಕಾರ್ಡ್​​ ಹೊಂದಿರುವವರ ವಿರುದ್ಧ ಸಮರ ಮುಂದುವರಿಸಿರುವ ರಾಜ್ಯ ಸರ್ಕಾರ ಕಳೆದ 5 ತಿಂಗಳಲ್ಲಿ 15.12 ಲಕ್ಷ ಮಂದಿಗೆ ಭಾರಿ ಆಘಾತ ನೀಡಿದೆ. ಅನರ್ಹರನ್ನು ಹೆಕ್ಕಿ ಹೆಕ್ಕಿ ಗುರುತಿಸಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಈ ಪೈಕಿ ಸುಮಾರು ಐದೂವರೆ ಸಾವಿರ ಬಿಪಿಎಲ್​​ ಕಾರ್ಡ್​​ಗಳನ್ನು ಶಾಶ್ವತವಾಗಿ ರದ್ದು ಮಾಡಿದೆ. 4 ಲಕ್ಷಕ್ಕೂ ಹೆಚ್ಚು ಕಾರ್ಡ್​​ಗಳನ್ನು ಬಿಪಿಎಲ್​​ನಿಂದ ಎಪಿಎಲ್​​ ಆಗಿ ಬದಲಾವಣೆ ಮಾಡಲಾಗಿದೆ. 23 ಸಾವಿರಕ್ಕೂ ಹೆಚ್ಚು ಪಡಿತರ ಚೀಟಿಗಳು ತಾತ್ಕಾಲಿಕವಾಗಿ ರದ್ದುಗೊಂಡಿರೋದು ಫಲಾನುಭವಿಗಳ ನಿದ್ದೆಗೆಡಿಸಿದೆ.

ಕಳೆದ 5 ತಿಂಗಳ ಕಾರ್ಯಾಚರಣೆ ಹೇಗಿದೆ?

  • ಬಿಪಿಎಲ್​​ನಿಂದ ಎಪಿಎಲ್​​ಗೆ ಪರಿವರ್ತನೆಗೊಂಡ ಕಾರ್ಡ್​​ಗಳು – 4.09 ಲಕ್ಷ (14,68,540 ಭಾದಿತರು)
  • ರದ್ದಾಗಿರುವ ಬಿಪಿಎಲ್ ಕಾರ್ಡ್​​ಗಳು – 5,632 (9,826 ಭಾದಿತರು)
  • ತಾತ್ಕಾಲಿಕವಾಗಿ ಅಮಾನತ್ತಾದ BPL ಕಾರ್ಡ್​​ಗಳು- 23,068 (34,617 ಭಾದಿತರು)

ಇದನ್ನೂ ಓದಿ: BPL ಕಾರ್ಡ್​​ದಾರರಿಗೆ ಶೀಘ್ರವೇ ಗುಡ್​​ನ್ಯೂಸ್​?; ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ

ಮತ್ತೊಂದೆಡೆ ಅರ್ಹರಿಗೆ ಬಿಪಿಎಲ್ ಕಾರ್ಡ್ ಸಿಗುತ್ತಿಲ್ಲ. ಬದಲಾಗಿ ಅವು ಅನರ್ಹರ ಪಾಲಾಗುತ್ತಿದೆ ಎಂದು ಜನ ಸಾಮಾನ್ಯರಿಂದಲೂ ಆಕ್ರೋಶ ಕೇಳಿಬಂದಿದೆ. ಕಾರು, ಬಂಗಲೆ, ಜಮೀನು ಇರುವ ಮಂದಿಯೇ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಹೀಗಾಗಿ ಅನರ್ಹರನ್ನು ಗುರುತಿಸಿ ಅವರ ಕಾರ್ಡ್ ರದ್ದು ಮಾಡುವ ಕಾರ್ಯ ತೀವ್ರಗೊಳಿಸಬೇಕು. ಕಡು ಬಡವರು, ದುಡಿದು ತಿನ್ನುವ ಮಂದಿಗೆ ಬಿಪಿಎಲ್ ಕಾರ್ಡ್ ಸಿಗಬೇಕು. ಕಾರ್ಯಾಚರಣೆ ಹೆಸರಲ್ಲಿ ಬಡವರ ಕಾರ್ಡ್ ಕಿತ್ತುಕೊಳ್ಳದೆ, ಶ್ರೀಮಂತರಿಗೆ ಬಿಸಿ ಮುಟ್ಟಿಸಬೇಕು ಎಂದು ಆಹಾರ ಇಲಾಖೆಯನ್ನು ಸಾರ್ವಜನಿಕರು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಪಡೆಯಲು ಇರುವ ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ ನಡೆದಿದೆ ಎಂದು ಈ ಹಿಂದೆ ಆಹಾರ ಸಚಿವ ಕೆ. ಹೆಚ್. ಮುನಿಯಪ್ಪ ತಿಳಿಸಿದ್ದ ಕಾರಣ ಬಿಪಿಎಲ್​​ ಕಾರ್ಡ್​​ ಹೊಂದಿರುವ ಅನೇಕ ಫಲಾನುಭವಿಗಳು ನಿಟ್ಟುಸಿರು ಬಿಟ್ಟಿದ್ದರು. ಕೇಂದ್ರ ಸರ್ಕಾರ ಬಿಪಿಎಲ್ ಕಾರ್ಡ್​​ದಾರರ ಆದಾಯವನ್ನು 1.20ಲಕ್ಷ ರೂ.ಗೆ ಮಿತಿಗೊಳಿಸಿದೆ. ಆದರೆ ಕೂಲಿ ಕೆಲಸಗಾರರಿಗೂ ಪ್ರತಿದಿನ 500 ರೂ. ದೊರೆಯುತ್ತದೆ. ಇದರ ಆಧಾರದಲ್ಲಿ ಅವರ ಆದಾಯವೂ ವರ್ಷಕ್ಕೆ 1.80 ಲಕ್ಷ ರೂ. ಗಿಂತ ಅಧಿಕವಾಗುತ್ತಿದೆ. ಹೀಗಾಗಿ ಈ ಬಗ್ಗೆ ಪರಿಷ್ಕರಣೆ ಕುರಿತು ಚಿಂತನೆ ನಡೆದಿದೆ ಎಂದು ಸಚಿವರು ಹೇಳಿದ್ದ ಹಿನ್ನೆಲೆ ಮಿತಿಗಿಂತ ಅಧಿಕ ಆದಾಯ ಹೊಂದಿದ್ದು, ಬಿಪಿಎಲ್​​ ಕಾರ್ಡ್​​ ಪಡೆದುಕೊಂಡಿದ್ದವರಲ್ಲಿ ಹೊಸ ಆಶಾಭಾವನೆ ಮೂಡಿತ್ತು. ಆದರೆ ಸರ್ಕಾರದ ಈಗಿನ ನಿರ್ಧಾರ ಅಕ್ರಮವಾಗಿ ಬಿಬಿಎಲ್​​ ಕಾರ್ಡ್​​ ಹೊಂದಿರುವವರಿಗೆ ಉಳಿಗಾಲವಿಲ್ಲ ಎಂಬುದನ್ನು ಸಾಬೀತುಪಡಿಸಿದೆ.

ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

RCB ಪರ 3 ವರ್ಷ ಬೆಂಚ್ ಕಾದಿದ್ದ ಫಿನ್ ಅಲೆನ್ – Kannada News | Finn Allen Spent 3 Years Bench Stint with RCB

ಅದು,  ಮಾರ್ಚ್ 10, 2021… ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಜೋಶ್ ಫಿಲಿಪೆ ಗಾಯಗೊಂಡಿದ್ದರು. ಹೀಗಾಗಿ ಅವರು ಐಪಿಎಲ್ ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದರು. ಅತ್ತ ನ್ಯೂಝಿಲೆಂಡ್ ಟಿ20 ಲೀಗ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಫಿನ್ ಅಲೆನ್​ಗೆ ಅದೃಷ್ಟ ಖುಲಾಯಿಸಿತು. ಜೋಶ್ ಫಿಲಿಪೆ ಸ್ಥಾನದಲ್ಲಿ ನ್ಯೂಜಿಲೆಂಡ್​ನ ಯುವ ಆಟಗಾರ ಆರ್​ಸಿಬಿ ತಂಡಕ್ಕೆ ಆಯ್ಕೆಯಾದರು.

Source link

ಇರಾನ್ ನಾಯಕ ಅಲಿ ಖಮೇನಿ ಹತ್ಯೆ ಖಂಡಿಸಿ ಪ್ರತಿಭಟನೆ: ಕಾಂಗ್ರೆಸ್ ಶಾಸಕ ಎನ್​ಎ ಹ್ಯಾರಿಸ್​ಗೆ ಎದುರಾಯ್ತು ಸಂಕಷ್ಟ – Kannada News | Bengaluru Protest Row: Complaint Filed Against Congress MLA NA Harris Over Protest Condemning Ali Khamenei Killing

ಅಲಿ ಖಮೇನಿ & ಎನ್ಎ ಹ್ಯಾರಿಸ್Image Credit source: TV9 Network

ಬೆಂಗಳೂರು, ಮಾರ್ಚ್​ 5: ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Ali Khamenei) ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ವಿಚಾರ ಇದೀಗ ರಾಜಕೀಯ ಹಾಗೂ ಕಾನೂನು ವಿವಾದಕ್ಕೆ ಕಾರಣವಾಗಿದೆ. ಹೈಕೋರ್ಟ್ ಆದೇಶ ಉಲ್ಲಂಘಿಸಿ ಪ್ರತಿಭಟನೆ ನಡೆಸಲಾಗಿದೆ ಎಂಬ ಆರೋಪದ ಹಿನ್ನೆಲೆ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ (Congress) ಶಾಸಕ ಎನ್ಎ ಹ್ಯಾರಿಸ್ (NA Harris) ವಿರುದ್ಧ ದೂರು ಸಲ್ಲಿಕೆಯಾಗಿದೆ. ಇರಾನ್ ನಾಯಕ ಅಲಿ ಖಮೇನಿ ಹತ್ಯೆ ಖಂಡಿಸಿ ಕೆಲವು ಸಂಘಟನೆಗಳು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದವು. ಆದರೆ, ಈ ವೇಳೆ ಹೈಕೋರ್ಟ್ ನಿರ್ದೇಶನ ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಸಾರ್ವಜನಿಕ ಪ್ರತಿಭಟನೆಗಳನ್ನು ಫ್ರೀಡಂ ಪಾರ್ಕ್‌ನಲ್ಲೇ ನಡೆಸಬೇಕು ಎಂದು ಹೈಕೋರ್ಟ್ ನಿರ್ದೇಶನ ಇದೆ. ಅದರ ಹೊರತಾಗಿ ಬೇರೆ ಸ್ಥಳದಲ್ಲಿ ಪ್ರತಿಭಟನೆ ನಡೆದಿರುವುದು ವಿವಾದಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತ ತೇಜಸ್ ಗೌಡ ಶಾಸಕ ಎನ್ಎ ಹ್ಯಾರಿಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಡಿಜಿ ಹಾಗೂ ಐಜಿಪಿಗೆ ದೂರು ಸಲ್ಲಿಸಿದ್ದಾರೆ. ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಪ್ರತಿಭಟನೆ ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಕುರಿತು ಪೊಲೀಸರು ಈಗಾಗಲೇ ಹೈಕೋರ್ಟ್ ಗಮನಕ್ಕೆ ತಂದಿದ್ದಾರೆ. ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಲಾಗಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಅಶೋಕ್ ನಗರ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ದೂರು ಸಲ್ಲಿಸಿರುವುದಾಗಿ ತಿಳಿದುಬಂದಿದೆ. ಘಟನೆಯ ಬಗ್ಗೆ ಕಾನೂನು ಪ್ರಕಾರ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ವಿಚಾರ ರಾಜಕೀಯವಾಗಿ ಮತ್ತಷ್ಟು ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.

ಖಮೇನಿ ಹತ್ಯೆ ಖಂಡಿಸಿ ಭಾರತದ ಹಲವೆಡೆ ಮುಸ್ಲಿಮರು ಪ್ರತಿಭಟನೆಗಳನ್ನು ನಡೆಸಿದ್ದಾರೆ. ಕರ್ನಾಟಕದಲ್ಲಿಯೂ ಚಿಕ್ಕಬಳ್ಳಾಪುರದ ಅಲೀಪುರ, ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಅಮೆರಿಕದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಭಾರತದಿಂದ ತೆರಳುತ್ತಿದ್ದ ಇರಾನ್ ಯುದ್ಧನೌಕೆಯ ಮುಳುಗಿಸಿದ ಅಮೆರಿಕ: ಸಾವಿನ ಸಂಖ್ಯೆ 87ಕ್ಕೆ ಏರಿಕೆ

ಮತ್ತೊಂದೆಡೆ ಇರಾನ್-ಇಸ್ರೇಲ್ ಸಂಘರ್ಷ ತೀವ್ರಗೊಂಡಿದ್ದು, ಸಾವಿರಕ್ಕೂ ಹೆಚ್ಚು ಮಂದಿ ಹತರಾಗಿದ್ದಾರೆ. ಬುಧವಾರವಷ್ಟೇ ಶ್ರೀಲಂಕಾ ವ್ಯಾಪ್ತಿಯಲ್ಲಿ ಹಿಂದೂ ಮಹಾಸಾಗರದಲ್ಲಿ ಇರಾನ್ ಯುದ್ಧನೌಕೆಯನ್ನು ಅಮೆರಿಕದ ಸಬ್​ಮರೀನ್ ಮುಳುಗಿಸಿದ ಪರಿಣಾಮ 87ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link