All posts by nagaraj11081993

ತಾವು ರಾಜ್ಯಸಭೆಗೆ ಹೋಗುವ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ನಿತೀಶ್ ಕುಮಾರ್ – Kannada News | Nitish Kumar Confirms Rajya Sabha Move: Bihar CM’s Parliament Shift Explained

ಪಾಟ್ನಾ, ಮಾರ್ಚ್​ 05: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್(Nitish Kumar) ತಮ್ಮ ಹುದ್ದೆ ತೊರೆದು ರಾಜ್ಯಸಭೆಗೆ ಪ್ರವೇಶಿಸುತ್ತಾರೆ ಎನ್ನುವ ಕುರಿತು ಚರ್ಚೆ ಆರಂಭವಾಗಿದೆ. ಅದಕ್ಕೆ ಪುಷ್ಟಿ ಎಂಬಂತೆ ನಿತೀಶ್ ಕುಮಾರ್ ಇಂದು ಎಕ್ಸ್​​ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ರಾಜ್ಯಸಭೆಗೆ ತೆರಳುವ ಬಗ್ಗೆ ಮೌನ ಮುರಿದಿದ್ದಾರೆ.ಈಗ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೇ ತಮ್ಮ ರಾಜ್ಯಸಭಾ ಚುನಾವಣೆಯ ಸುದ್ದಿಯನ್ನು ದೃಢಪಡಿಸಿದ್ದಾರೆ. ಅವರು ತಮ್ಮ ನಿರ್ಧಾರದ ಹಿಂದಿನ ಕಾರಣವನ್ನು ವಿವರಿಸಿದ ಅವರು ಬಿಹಾರದ ಜನರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಎರಡು ದಶಕಗಳಿಗೂ ಹೆಚ್ಚು ಕಾಲ, ನೀವು ನಿಮ್ಮ ನಂಬಿಕೆ ಮತ್ತು ಬೆಂಬಲವನ್ನು ನಿರಂತರವಾಗಿ ನನ್ನ ಮೇಲಿಟ್ಟಿದ್ದೀರಿ, ಅದನ್ನು ನಾನು ಉಳಿಸಿಕೊಂಡಿದ್ದೇನೆ, ಈ ಶಕ್ತಿಯ ಮೂಲಕವೇ ನಾವು ಬಿಹಾರ ಮತ್ತು ನಿಮ್ಮೆಲ್ಲರಿಗೂ ಸಂಪೂರ್ಣ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದೇವೆ. ನಿಮ್ಮ ನಂಬಿಕೆ ಮತ್ತು ಬೆಂಬಲದಿಂದಾಗಿ ಬಿಹಾರ ಇಂದು ಅಭಿವೃದ್ಧಿ ಮತ್ತು ಗೌರವದ ಹೊಸ ಆಯಾಮವನ್ನು ಅಳವಡಿಸಿಕೊಳ್ಳುತ್ತಿದೆ. ಇದಕ್ಕಾಗಿ ನಾನು ಹಿಂದೆ ಹಲವು ಬಾರಿ ನಿಮಗೆ ನನ್ನ ಕೃತಜ್ಞತೆಯನ್ನು ತಿಳಿಸುತ್ತೇನೆ ಎಂದು ಬರೆದಿದ್ದಾರೆ.

ನನ್ನ ಸಂಸದೀಯ ವೃತ್ತಿಜೀವನದ ಆರಂಭದಿಂದಲೂ, ನಾನು ಬಿಹಾರ ಶಾಸಕಾಂಗ ಮತ್ತು ಸಂಸತ್ತಿನ ಎರಡೂ ಸದನಗಳ ಸದಸ್ಯರಾಗಲು ಬಯಸುತ್ತೇನೆ. ಈ ನಿಟ್ಟಿನಲ್ಲಿ, ಈ ಚುನಾವಣೆಯಲ್ಲಿ ನಾನು ರಾಜ್ಯಸಭೆಯ ಸದಸ್ಯರಾಗಲು ಬಯಸುತ್ತೇನೆ ಎಂದಿದ್ದಾರೆ.

ಮತ್ತಷ್ಟು ಓದಿ: ಬಿಹಾರ ರಾಜಕಾರಣದಲ್ಲಿ ಮಹತ್ವದ ಬದಲಾವಣೆ, ಸಿಎಂ ಸ್ಥಾನದಿಂದ ನಿತೀಶ್ ಕುಮಾರ್ ಕೆಳಗಿಳಿಯುವ ಸಾಧ್ಯತೆ

ನಿಮ್ಮೊಂದಿಗಿನ ಈ ಸಂಬಂಧವು ಭವಿಷ್ಯದಲ್ಲಿ ಮುಂದುರೆಯುತ್ತದೆ ಮತ್ತು ಅಭಿವೃದ್ಧಿ ಹೊಂದಿದ ಬಿಹಾರವನ್ನು ನಿರ್ಮಿಸಲು ನಿಮ್ಮೊಂದಿಗೆ ಒಟ್ಟಾಗಿ ಕೆಲಸ ಮಾಡುವ ನನ್ನ ಸಂಕಲ್ಪವು ಅಚಲವಾಗಿ ಉಳಿಯುತ್ತದೆ ಎಂದು ನಾನು ನಿಮಗೆ ಪ್ರಾಮಾಣಿಕವಾಗಿ ಭರವಸೆ ನೀಡುತ್ತೇನೆ. ರಚನೆಯಾಗಲಿರುವ ಹೊಸ ಸರ್ಕಾರಕ್ಕೆ ನನ್ನ ಸಂಪೂರ್ಣ ಬೆಂಬಲ ಮತ್ತು ಮಾರ್ಗದರ್ಶನವಿರುತ್ತದೆ ಎಂದಿದ್ದಾರೆ.

ನಿತೀಶ್ ಕುಮಾರ್ ಪೋಸ್ಟ್​

ಬಿಹಾರ ರಾಜ್ಯದಲ್ಲಿನ ಪ್ರಕ್ಷುಬ್ಧ ಸ್ಥಿತಿಗೆ ಪರಿಹಾರ ಎಂಬಂತೆ ಸಂಕಷ್ಟ ಸಂದರ್ಭದಲ್ಲಿ ರಾಜ್ಯದ ಚುಕ್ಕಾಣಿ ಹಿಡಿದ ನಿತೀಶ್ ಕುಮಾರ್ ಪ್ರಸ್ತುತ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ 6 ಬಾರಿ ಅವರು ಈ ಹುದ್ದೆ ನಿರ್ವಹಿಸಿದ್ದಾರೆ. ಈಗ ಏಳನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ಇಂದು ರಾಜ್ಯಸಭೆಗೆ ನಾಮಪತ್ರ ಸಲ್ಲಿಸಲಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕುಂಬಳಗೋಡು ಠಾಣೆ ಪಿಐ ವಿರುದ್ಧ 10 ಲಕ್ಷ ರೂ.ಲಂಚ ಕೇಳಿದ ಆರೋಪ: ಪೊಲೀಸ್ ಆಯುಕ್ತರಿಗೆ ವಕೀಲರಿಂದ ದೂರು – Kannada News | Kumbalagodu PI Bribery: Rs 10 Lakh Demand, Rs 30K Taken; Complaint Filed Against Hoogar

ಕುಂಬಳಗೋಡು ಠಾಣೆ ಪಿಐ ವಿರುದ್ಧ 10 ಲಕ್ಷ ರೂ.ಲಂಚ ಕೇಳಿದ ಆರೋಪ: ಪೊಲೀಸ್ ಆಯುಕ್ತರಿಗೆ ವಕೀಲರಿಂದ ದೂರು

ಬೆಂಗಳೂರು, ಮಾರ್ಚ್​ 05: ಲಂಚ ಪಡೆದ ಆರೋಪದಡಿ ಕುಂಬಳಗೋಡು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಿರುದ್ಧ ಗಂಭೀರ ದೂರು ದಾಖಲಾಗಿದೆ. ಪಿಐ ಮಂಜುನಾಥ ಹೂಗಾರ್ 10 ಲಕ್ಷ ರೂ ಲಂಚಕ್ಕೆ ಬೇಡಿಕೆ ಇಟ್ಟು, ನಂತರ 30 ಸಾವಿರ ರೂ. ಪಡೆದು ಮೂವರನ್ನು ಬಿಡಿಸಿದ ಆರೋಪ ಕೇಳಿಬಂದಿದೆ. ಈ ಕುರಿತು ವಕೀಲ ವರ್ಷಿತ್ ರೆಡ್ಡಿ ಅವರು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್​ಗೆ ದೂರು ನೀಡಿದ್ದಾರೆ.

ಅಕ್ರಮ ಬಂಧನದಲ್ಲಿಟ್ಟು ಲಂಚಕ್ಕೆ ಬೇಡಿಕೆ

ಫೆಬ್ರವರಿ 25ರಂದು ಕುಂಬಳಗೋಡು ಠಾಣಾ ವ್ಯಾಪ್ತಿಯ ಎಂ.ಆರ್. ಬಾರ್‌ನಲ್ಲಿ ರಾಕೇಶ್, ಸ್ವಾಮಿ ಮತ್ತು ಗೋಪಿ ಎಂಬ ಮೂವರು ಕ್ಯಾಶಿಯರ್ ಜೊತೆ ಗಲಾಟೆ ಮಾಡಿಕೊಂಡಿದ್ದರು. ಘಟನೆ ವೇಳೆ ಬಾರ್ ಸಿಬ್ಬಂದಿ ಹೊಯ್ಸಳ ಪೊಲೀಸರಿಗೆ ಕರೆ ಮಾಡಿದ್ದು, ಸ್ಥಳಕ್ಕೆ ಬಂದ ಸಿಬ್ಬಂದಿ ಮೂವರನ್ನು ಠಾಣೆಗೆ ಕರೆದೊಯ್ದಿದ್ದರು. ಮೂವರನ್ನು ಸುಮಾರು ಮೂರು ದಿನಗಳ ಕಾಲ ಅಕ್ರಮ ಬಂಧನದಲ್ಲಿಟ್ಟುಕೊಂಡು ಹಣಕ್ಕೆ ಬೇಡಿಕೆ ಇಡಲಾಗಿದೆ ಎನ್ನಲಾಗಿದೆ. ಈ ವೇಳೆ ರಾಕೇಶ್ ತನ್ನ ಸ್ನೇಹಿತ ಕಾರ್ತಿಕ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ನಂತರ ಕಾರ್ತಿಕ್ ಕುಂಬಳಗೋಡು ಠಾಣೆಗೆ ತೆರಳಿ ವಿಚಾರಿಸಿದಾಗ 10 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿರುವುದು ತಿಳಿದುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ ಬೆಂಗಳೂರು, ಬಾಗಲಕೋಟೆ ಸೇರಿದಂತೆ ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ!

ನಂತರ ವಕೀಲರೊಂದಿಗೆ ಠಾಣೆಗೆ ತೆರಳಿದಾಗಲೂ ಲಂಚಕ್ಕಾಗಿ ಒತ್ತಾಯ ಮಾಡಲಾಗಿದೆ ಎನ್ನಲಾಗಿದೆ. ಕೊನೆಗೆ 30 ಸಾವಿರ ರೂ. ಹಣ ಪಡೆದು ಮೂವರನ್ನು ಪೊಲೀಸರು ಬಿಡಿಸಿದ್ದಾಗಿ ಆರೋಪಿಸಲಾಗಿದೆ. ಇನ್ನು ಪಿಐ ಮಂಜುನಾಥ ಹೂಗಾರ್ ಲಂಚ ಕೇಳುತ್ತಿರುವುದಾಗಿ ಹೇಳಿದ ವೀಡಿಯೋವೂ ಸೆರೆಯಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಮನವಿ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Aiden Markram: ನಂಗೆ ಮುಖಕ್ಕೆ ಹೊಡೆದಂಗಾಯ್ತು..! – Kannada News | It felt like a slap in the face: Aiden Markram on Semi Final Loss

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಾಗಿ ಸೆಮಿಫೈನಲ್​ಗೆ ಪ್ರವೇಶಿಸಿದ್ದ ಸೌತ್ ಆಫ್ರಿಕಾ ತಂಡವನ್ನು ನ್ಯೂಝಿಲೆಂಡ್ ತಂಡ ಹೀನಾಯವಾಗಿ ಸೋಲಿಸಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕಿವೀಸ್ ಪಡೆಯ ನಾಯಕ ಮಿಚೆಲ್ ಸ್ಯಾಂಟ್ನರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡ ಆರಂಭಿಕ ಆಘಾತಕ್ಕೆ ಒಳಗಾಯಿತು. ಇದಾಗ್ಯೂ ಮಾರ್ಕೊ ಯಾನ್ಸೆನ್ (55) ಬಾರಿಸಿದ ಅರ್ಧಶತಕದ ನೆರವಿನೊಂದಿಗೆ ಸೌತ್ ಆಫ್ರಿಕಾ ತಂಡವು 20 ಓವರ್​ಗಳಲ್ಲಿ 169 ರನ್ ಕಲೆಹಾಕಿತು.

ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ನ್ಯೂಝಿಲೆಂಡ್ ಪರ ಆರಂಭಿಕ ದಾಂಡಿಗರಾದ ಫಿನ್ ಅಲೆನ್ ಹಾಗೂ ಟಿಮ್ ಸೈಫರ್ಟ್ ಅಬ್ಬರಿಸಿದ್ದರು. ಅಷ್ಟೇ ಅಲ್ಲದೆ ಅಲೆನ್ ಕೇವಲ 33 ಎಸೆತಗಳಲ್ಲಿ ಶತಕ ಸಿಡಿಸಿದರು. ಈ ಮೂಲಕ ನ್ಯೂಝಿಲೆಂಡ್ ತಂಡವು 12.5 ಓವರ್​ಗಳಲ್ಲಿ 173 ರನ್​ ಬಾರಿಸಿ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಇದರೊಂದಿಗೆ ಟಿ20 ವಿಶ್ವಕಪ್​ನಲ್ಲಿ ಸೌತ್ ಆಫ್ರಿಕಾ ತಂಡದ ಅಭಿಯಾನ ಅಂತ್ಯವಾಗಿದೆ. ಈ ಅಭಿಯಾನ ಅಂತ್ಯದ ಬಳಿಕ ಮಾತನಾಡಿದ ಸೌತ್ ಆಫ್ರಿಕಾ ತಂಡದ ನಾಯಕ ಐಡೆನ್ ಮಾರ್ಕ್ರಾಮ್ ತಂಡದ ಪ್ರದರ್ಶನದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ.

ನ್ಯೂಝಿಲೆಂಡ್ ತಂಡವು ಆರಂಭಿಕ ಪರಿಸ್ಥಿತಿಗಳಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದರು. ನಾವು ನಿರೀಕ್ಷಿಸಿದಂತೆ ಚೆಂಡು ಬರುತ್ತಿರಲಿಲ್ಲ. ಕೆಲ ಬ್ಯಾಟರ್​ಗಳು ಕ್ರೀಸ್ ಕಚ್ಚಿ ನಿಲ್ಲುವ ಪ್ರಯತ್ನ ಮಾಡಿದರೂ ರನ್ ಬರುತ್ತಿರಲಿಲ್ಲ. ಇದಕ್ಕೆ ಕಾರಣ ನ್ಯೂಝಿಲೆಂಡ್ ತಂಡದ ಅತ್ಯುತ್ತಮ ದಾಳಿಯಾಗಿತ್ತು.

ಇದಾಗ್ಯೂ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳು ಸ್ಪರ್ಧಾತ್ಮಕ ಗುರಿ ಪೇರಿಸಿದ್ದರು. ಹೀಗಾಗಿ ನಾವು ಫೀಲ್ಡಿಂಗ್ ಮೂಲಕ ಪಂದ್ಯದ ಫಲಿತಾಂಶ ಬದಲಿಸುವ ನಿರೀಕ್ಷೆಯಲ್ಲಿದ್ದೆವು. ಆದರೆ ನ್ಯೂಝಿಲೆಂಡ್​ನ ಆರಂಭಿಕ ದಾಂಡಿಗರು ಪವರ್​ಪ್ಲೇನಲ್ಲೇ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು.

ಇದನ್ನೂ ಓದಿ: ಸೆಮಿಫೈನಲ್​ಗೂ ಮುನ್ನ ಟೀಮ್ ಇಂಡಿಯಾದ ಅತೀ ದೊಡ್ಡ ‘ಚಿಂತೆ’ ಬಹಿರಂಗ

ನಿಜವಾಗಿಯೂ ಫಿನ್ ಅಲೆನ್ ಹಾಗೂ ಟಿಮ್ ಸೈಫರ್ಟ್ ಆಡಿದ ಆಟಕ್ಕೆ ಕ್ರೆಡಿಟ್ ನೀಡಲೇಬೇಕು. ಅವರು ಆರಂಭದಲ್ಲೇ ನಮ್ಮಿಂದ ಪಂದ್ಯವನ್ನು ಕಿತ್ತುಕೊಂಡಿದ್ದರು. ಅಲ್ಲದೆ ನಮಗೆ ಕಂಬ್ಯಾಕ್ ಮಾಡಲು ಯಾವುದೇ ಅವಕಾಶವನ್ನು ಸಹ ನೀಡಿಲ್ಲ. ಹೀಗಾಗಿ ಈ ಗೆಲುವಿನ ಶ್ರೇಯಸ್ಸು ಫಿನ್ ಹಾಗೂ ಟಿಮ್​ಗೆ ಸಲ್ಲುತ್ತದೆ ಎಂದು ಐಡೆನ್ ಮಾರ್ಕ್ರಾಮ್ ಹೇಳಿದ್ದಾರೆ.

ಇದೇ ವೇಳೆ ಪಿಚ್ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಲ್ಲಿ ನಮ್ಮ ಬ್ಯಾಟರ್​ಗಳು ಎಡವಿದ್ದಾರೆ ಎಂದು ಒಪ್ಪಿಕೊಂಡ ಮಾರ್ಕ್ರಾಮ್, ನಾವು ನಿಜವಾಗಿಯೂ ಈ ಪಿಚ್​ನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಬಹುದು ನಿರೀಕ್ಷಿಸಿದ್ದೆವು. ಅಲ್ಲದೆ ಪಿಚ್​ ಕಣ್ಣಿಗೆ ಚೆನ್ನಾಗಿ ಕಾಣುತ್ತಿತ್ತು.  ಆದರೆ ಬ್ಯಾಟಿಂಗ್​ಗೆ ಹೋದಾಗ ಪಿಚ್ ವಿಭಿನ್ನವಾಗಿತ್ತು. ಇದನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ಎಡವಿದ್ದೇವೆ.

ಇದಾಗ್ಯೂ ಇದೇ ಪಿಚ್​ನಲ್ಲಿ ನ್ಯೂಝಿಲೆಂಡ್ ಆರಂಭಿಕರು ಅತ್ಯುತ್ತಮವಾಗಿ ಬ್ಯಾಟ್ ಬೀಸಿದ್ದರು. ಅವರ ಭರ್ಜರಿ ಪ್ರದರ್ಶನದಿಂದಾಗಿ ಸೋಲಾಗಿದೆ. ಈ ಸೋಲು ನಿಜಕ್ಕೂ ನನ್ನಲ್ಲಿ ನಿರಾಶೆ ಮೂಡಿಸಿದೆ. ಅದರಲ್ಲೂ ನಿರ್ಣಾಯಕ ಮ್ಯಾಚ್​ನಲ್ಲಿ ಸೋತಿರುವುದು ನನಗೆ ಮುಖಕ್ಕೆ ಹೊಡೆದಂಗೆ ಫೀಲ್ ಆಯ್ತು ಎಂದು ಐಡೆನ್ ಮಾರ್ಕ್ರಾಮ್ ಹೇಳಿದ್ದಾರೆ.

Source link

ದಿವ್ಯಾಂಗ ಮಗಳನ್ನು ರಕ್ಷಿಸಲು ತನ್ನ ಪ್ರಾಣವನ್ನು ಲೆಕ್ಕಿಸದೆ ಬಾವಿಗೆ ಹಾರಿದ ತಾಯಿ – Kannada News | Disabled Daughter Well Rescue: Mother’s Heroic Leap in Tamil Nadu

ನಂಬಿಯೂರ್, ಮಾರ್ಚ್​ 05: ಮಗಳೆಂಬ ಮಮಕಾರ ಆಕೆ ದಿವ್ಯಾಂಗಳೆಂದು ಹೋದೀತೆ, ಪ್ರೀತಿ ತುಸು ಹೆಚ್ಚೇ ಆದೀತು. ದಿವ್ಯಾಂಗ ಮಗಳು ಬಾವಿ(Well)ಯೊಳಗೆ ಆಯತಪ್ಪಿ ಬಿದ್ದಿದ್ದಕ್ಕೆ, ಕೂಡಲೇ ತಾಯಿಯೂ ಕೂಡ ಹಿಂದೆ ಮುಂದೆ ನೋಡದೆ ಬಾವಿಗೆ ಜಿಗಿದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ದಿವ್ಯಾಂಗ ಮಗಳನ್ನು ರಕ್ಷಿಸಲು ಮಹಿಳೆಯೊಬ್ಬರು ಬಾವಿಗೆ ಹಾರಿರುವ ಘಟನೆ ತಮಿಳುನಾಡಿನ ನಂಬಿಯೂರ್ ಬಳಿಯ ಅಯ್ಯಂಕಟ್ಟುವಿನಲ್ಲಿ ನಡೆದಿದೆ.

ಊಂಜಪಾಳಯಂನ ಸುಂದರಂ ಅವರ ಪುತ್ರಿ ದಿವ್ಯಾ ವೆಟ್ಟಾಯಂಪಳಯಂ ಪ್ರದೇಶದ ಬಾವಿಗೆ ಹಾರಿದ್ದಾರೆ ಎಂದು ವರದಿಯಾಗಿದೆ. ಸ್ಥಳೀಯ ಮೂಲಗಳ ಪ್ರಕಾರ,ಆಕೆ ದಿವ್ಯಾಂಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರು.
ಯಾವುದೇ ಹಿಂಜರಿಕೆಯಿಲ್ಲದೆ, ಆಕೆಯ ತಾಯಿ ಮುತ್ತುಮಣಿ ಅವಳನ್ನು ಹಿಂಬಾಲಿಸಿ ನೀರು ತುಂಬಿದ ಬಾವಿಗೆ ಹಾರಿದ್ದಾರೆ.

ಒಳಗೆ ಅವರು ತನ್ನ ಮಗಳನ್ನು ಹಿಡಿದುಕೊಂಡು ಹಗ್ಗವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದರು. ಸಹಾಯಕ್ಕಾಗಿ ಆಕೆಯ ಕೂಗು ಆ ಪ್ರದೇಶದಾದ್ಯಂತ ಪ್ರತಿಧ್ವನಿಸಿತು, ಅಕ್ಕಪಕ್ಕದ ಮನೆಯವರು ಅದನ್ನು ಗಮನಿಸಿದ್ದರು, ಅವರು ತಕ್ಷಣವೇ ಕಡ್ತೂರು ಪೊಲೀಸರು ಮತ್ತು ನಂಬಿಯೂರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಓದಿ: ಬಾವಿ ಕಟ್ಟೆ ಹತ್ತಿ ಎರಡೂ ಕೈಗಳಲ್ಲೂ ಮಕ್ಕಳನ್ನು ಹಿಡಿದು ಮಹಿಳೆಯ ಡ್ಯಾನ್ಸ್​

ಅಗ್ನಿಶಾಮಕ ದಳದವರು ವಿಶೇಷ ರಕ್ಷಣಾ ಸಲಕರಣೆಗಳೊಂದಿಗೆ ಆಗಮಿಸಿ ಹಗ್ಗಗಳು ಮತ್ತು ಸುರಕ್ಷತಾ ಸರಂಜಾಮುಗಳನ್ನು ಬಳಸಿ ಬಾವಿಗೆ ಇಳಿದರು. ಬಿಗುವಿನ ಕಾರ್ಯಾಚರಣೆಯ ನಂತರ, ಇಬ್ಬರೂ ಮಹಿಳೆಯರನ್ನು ಎಚ್ಚರಿಕೆಯಿಂದ ಸುರಕ್ಷಿತಗೊಳಿಸಿ ಸುರಕ್ಷಿತವಾಗಿ ಮೇಲೆತ್ತಲಾಯಿತು.

ದಣಿದಿದ್ದರೂ ತಾಯಿ ಮಗಳನ್ನು ಹಿಡಿದುಕೊಂಡಿದ್ದ ಭಾವನಾತ್ಮಕ ದೃಶ್ಯಗಳು ಎಲ್ಲರ ಕಣ್ಣಂಚಲ್ಲೂ ನೀರು ತರಿಸಿತ್ತು, ಮುತ್ತುಮಣಿಯವರ ಧೈರ್ಯ ಮತ್ತು ದುರಂತವನ್ನು ತಡೆಗಟ್ಟಿದ ಅಗ್ನಿಶಾಮಕ ಇಲಾಖೆಯ ತ್ವರಿತ ಪ್ರತಿಕ್ರಿಯೆಯನ್ನು ನಿವಾಸಿಗಳು ಶ್ಲಾಘಿಸಿದರು.ಘಟನೆಯ ಸುತ್ತಲಿನ ಸನ್ನಿವೇಶಗಳ ಬಗ್ಗೆ ಪೊಲೀಸರು ನಿಯಮಿತ ವಿಚಾರಣೆಯನ್ನು ಪ್ರಾರಂಭಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 11:26 am, Thu, 5 March 26

Source link

‘ಧುರಂಧರ್’ ನಟಿ ಮೇಲೆ ನಡೆದಿತ್ತು ಅತ್ಯಾಚಾರ ಪ್ರಯತ್ನ; ಈಗಲೂ ಕಾಡುತ್ತೆ ಭಯ – Kannada News | Bigg Boss 17 Ayesha Khan: Shararat Star Reveals Rape Threats, Assault Attempts and Women’s Struggles

ಬಿಗ್ ಬಾಸ್ 17 ಖ್ಯಾತಿಯ ಆಯೇಷಾ ಖಾನ್ ‘ಧುರಂಧರ್’ ಚಿತ್ರದ ಹಾಡಿನ ಮೂಲಕ ಸುದ್ದಿಯಲ್ಲಿದ್ದಾರೆ.
ಈ ಚಿತ್ರದ ಶರಾರತ್ ಹಾಡು ಗಮನ ಸೆಳೆದಿದೆ. ಈ ಹಾಡನ್ನು ಹಲವು ಸ್ಥಳಗಳಲ್ಲಿ ಪ್ಲೇ ಮಾಡಲಾಗುತ್ತಿದೆ. ಜನರು ಈ ಹಾಡಿನ ಹುಕ್ ಸ್ಟೆಪ್ ಅನ್ನು ಮೆಚ್ಚಿಕೊಂಡಿದ್ದಾರೆ. ಈಗ ಆಯೇಷಾ ಖಾನ್ ಇತ್ತೀಚೆಗೆ ಆಘಾತಕಾರಿ ವಿಷಯ ಹೇಳಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಮಹಿಳೆಯರು ಎದುರಿಸಬೇಕಾದ ಸವಾಲುಗಳು ಮತ್ತು ಕಷ್ಟಕರ ಸಂದರ್ಭಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.

‘ಶರಾರತ್’ ಹಾಡಿನ ಚಿತ್ರೀಕರಣದ ಸಮಯದಲ್ಲಿ ಋತುಚಕ್ರದಲ್ಲಿದ್ದೆ ಎಂದು ಅವರು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದರು. ಈ ಹೇಳಿಕೆಯಿಂದ ಅವರು ಬಹಳಷ್ಟು ತೊಂದರೆಗಳನ್ನು ಅನುಭವಿಸಬೇಕಾಯಿತು. ಅವರು ಬಹಳಷ್ಟು ಟ್ರೋಲ್​ಗೆ ಒಳಗಾದರಂತೆ. ಅವರು ಪ್ರತಿದಿನ ತನಗೆ ಬರುವ ಅತ್ಯಾಚಾರ ಬೆದರಿಕೆಗಳ ಬಗ್ಗೆ ಹೇಳಿದ್ದಲ್ಲದೆ, ತಮ್ಮ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಲಾಯಿತು ಎಂದಿದ್ದಾರೆ..

‘ನಾನು ಸರಳ ಟಾಪ್ ಧರಿಸಿದರೆ ಜನರಿಗೆ ಸಮಸ್ಯೆ ಇರುತ್ತದೆ ಮತ್ತು ನಾನು ಸ್ಕರ್ಟ್ ಧರಿಸಿದರೂ ಅವರಿಗೆ ಸಮಸ್ಯೆ ಇರುತ್ತದೆ. ಪೋಸ್ಟ್ ಮಾಡುವ ಮೊದಲು ನಾನು ಏನು ಧರಿಸಬೇಕೆಂದು ಸಾಕಷ್ಟು ಯೋಚಿಸಬೇಕು’ ಎಂದು ಆಯೇಷಾ ಹೇಳಿದರು. ‘ನಾನು ಪ್ರತಿ ಬಾರಿ ಪೋಸ್ಟ್ ಮಾಡಿದಾಗ ಅಥವಾ ಉಡುಗೆ ಧರಿಸಿದಾಗ ಜನರು ಏನು ಯೋಚಿಸುತ್ತಾರೆ, ಅವರು ನನ್ನನ್ನು ತಪ್ಪಾಗಿ ಅರ್ಥಮಾಡಿಕೊಳ್ಳುತ್ತಾರೆಯೇ ಎಂಬುದರ ಬಗ್ಗೆ ನಾನು ಚಿಂತಿಸಬೇಕು ಎಂದರೆ ಅದು ದುಃಖಕರ ಮನಸ್ಥಿತಿ’ ಎಂದು ಅವರು ಹೇಳಿದರು.

ತಮ್ಮ ಜೀವನದ ಅತ್ಯಂತ ಭಯಾನಕ ಮತ್ತು ನೋವಿನ ಅನುಭವವನ್ನು ವಿವರಿಸಿದರು. ‘ನನ್ನ ಮೇಲೆ ಅತ್ಯಾಚಾರಕ್ಕೆ ಪ್​ರಯತ್ನ ನಡೆದಿತ್ತು. ನಾನು ಅದರ ಬಗ್ಗೆ ಹೆಚ್ಚು ಮಾತನಾಡಲು ಬಯಸುವುದಿಲ್ಲ. ಆದರೆ ಕೆಲವೊಮ್ಮೆ ಆ ಗಾಯ ಮತ್ತೆ ತೆರೆದುಕೊಳ್ಳುತ್ತದೆ. ನಾನು ಸೆಟ್‌ನಲ್ಲಿರುವಾಗ ಅಥವಾ ಪ್ರಯಾಣಿಸುವಾಗಲೆಲ್ಲಾ, ಅದೇ ದುರದೃಷ್ಟಕರ ಘಟನೆ ಮತ್ತೆ ಸಂಭವಿಸುತ್ತದೆ ಎಂದು ನಾನು ನಿರಂತರವಾಗಿ ಭಯಪಡುತ್ತೇನೆ’ ಎಂದು ಆಯೇಷಾ ಹೇಳಿದರು.

ಇದನ್ನೂ ಓದಿ: ಪತ್ನಿ ಬಿಗ್ ಬಾಸ್​ ಮನೆಯಲ್ಲಿದ್ದಾರೆಂದು ಬೇರೆ ನಟಿಯರ ಜೊತೆ ಪಾರ್ಟಿ ಮಾಡಿದ ವಿಕ್ಕಿ

‘ನಾನು ಒಮ್ಮೆ ಒಂದು ಚಿತ್ರದ ಚಿತ್ರೀಕರಣದಲ್ಲಿದ್ದೆ. ನನ್ನ ತಂದೆಯೂ ಅಲ್ಲಿದ್ದರು. ಇದ್ದಕ್ಕಿದ್ದಂತೆ, ನಾನು ಇನ್‌ಸ್ಟಾಗ್ರಾಮ್ ಪರಿಶೀಲಿಸಿದಾಗ ಒಬ್ಬ ವ್ಯಕ್ತಿ ಬಹಳ ಸಮಯದಿಂದ ವಾಯ್ಸ್​ ನೋಟ್ ಕಳುಹಿಸುತ್ತಿರುವುದನ್ನು ಗಮನಿಸಿದೆ. ಅದನ್ನು ಪರಿಶೀಲಿಸಿದ ನಂತರ, ಅವನು ತನ್ನ ಸೆಟ್‌ನ ಸ್ಪಾಟ್‌ಬಾಯ್ ಎಂದು ನನಗೆ ಅರಿವಾಯಿತು. ಅದರ ನಂತರ, ಆಯೇಷಾ ತಕ್ಷಣ ತನ್ನ ತಂದೆ ಮತ್ತು ನಿರ್ಮಾಣ ತಂಡಕ್ಕೆ ದೂರು ನೀಡಿದರು. ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳಲಾಯಿತು’ ಎಂದು ಅವರು ವಿವರಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಬಣ್ಣ ಎರಚಿದ್ದಕ್ಕೆ 4 ವರ್ಷದ ಮೊಮ್ಮಗನ ಮೇಲೆ ಬಿಸಿನೀರು ಸುರಿದ ಅಜ್ಜಿ: ವಿಲವಿಲನೆ ಒದ್ದಾಡಿದ ಬಾಲಕ – Kannada News | Nagpur Shock: Grandma Arrested After Pouring Boiling Water on Grandson for Color Spill

ಮುಂಬೈ, ಮಾ.5: ಪುಟ್ಟ ಮಕ್ಕಳಿಗೆ ಅಜ್ಜಿ ಅಂದ್ರೆ ಪಂಚ ಪ್ರಾಣ, ಅಜ್ಜಿಗೂ ಅಷ್ಟೇ ಮೊಮ್ಮಕ್ಕಳು ತುಂಬಾ ಪ್ರೀತಿ, ಆದರೆ ಇಲ್ಲೊಂದು ಘಟನೆ ಅದಕ್ಕೆ ವಿರುದ್ಧವಾಗಿದೆ. ನೆನ್ನೆ ದೇಶದ ಎಲ್ಲ ಕಡೆ ಬಣ್ಣಗಳ ಹಬ್ಬ ತುಂಬಾ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ ಹಾಗೂ ಇದನ್ನು ಅತ್ಯಂತ ತಮಾಷೆಯಾಗಿ ಆಡುತ್ತಾರೆ. ಅದರಲ್ಲೂ ಈ ಹಬ್ಬವನ್ನು ಮಕ್ಕಳು ತುಂಬಾ ಖುಷಿಯಿಂದ ಆಚರಣೆ ಮಾಡಿದ್ದಾರೆ. ಆದರೆ ಈ ಬಣ್ಣದ ಹಬ್ಬ ಈ ಪುಟ್ಟ ಬಾಲಕನಿಗೆ ಕರಾಳ ದಿನವಾಗಿದೆ. ತಮಾಷೆಯಾಗಿ ತನ್ನ ಮೇಲೆ ಬಣ್ಣ ಎರಚಿದ್ದ ಎಂದು ಅಜ್ಜಿ ತನ್ನ ಮೊಮ್ಮಗನ ಮೇಲೆ ಬಿಸಿ ಬಿಸಿ ನೀರನ್ನು ಸುರಿದು ವಿಕೃತಿ ಮೆರೆದಿದ್ದಾರೆ. ಈ ಭೀಕರ ಘಟನೆಯು ನಾಗ್ಪುರ ಜಿಲ್ಲೆಯ ಕೋರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಾರ್ಚ್ 3 ರಂದು ಓಂ ಹರೀಶ್ ವಂಗೆ ಎಂಬ ಬಾಲಕ ತನ್ನ ಮನೆಯ ಹೊರಗೆ ಬಣ್ಣದ ಸ್ಪ್ರೇ ಬಾಟಲಿಯೊಂದಿಗೆ ಆಟವಾಡುತ್ತಿದ್ದನು. ಈ ವೇಳೆ ಆಕಸ್ಮಿಕವಾಗಿ ಅಜ್ಜಿ ಸಿಂಧು ಠಾಕ್ರೆ ಅವರ ಮೇಲೆ ಬಣ್ಣದ ನೀರು ಬಿದ್ದಿದೆ. ಇದರಿಂದ ಕೆರಳಿದ ಅಜ್ಜಿ, ಬಕೆಟ್‌ನಲ್ಲಿ ತುಂಬಿದ್ದ ಕುದಿಯುವ ಬಿಸಿನೀರನ್ನು ಮೊಮ್ಮಗನ ಮೇಲೆ ಸುರಿದಿದ್ದಾರೆ. 4 ವರ್ಷದ ಬಾಲಕ ಓಂ ಹರೀಶ್ ವಂಗೆ ಬಿಸಿ ನೀರಿನ ಉರಿಯಲ್ಲಿ ಒದ್ದಾಡಿದ್ದಾನೆ. ಇದೀಗ ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ. ಈ ಕೃತ್ಯದ ವಿಡಿಯೋ ಸಿಸಿಟಿವಿಯಲ್ಲಿ ಸೇರಿಯಾಗಿದೆ.

ಇದನ್ನೂ ಓದಿ: ಇರಾನ್​​​​ ಹೊತ್ತಿ ಉರಿಯಲು ಈ ಹುಡುಗಿಯೇ ಕಾರಣ: 2024ರ ಈ ವಿಡಿಯೋ ನೆನಪಿದ್ಯಾ?

ಇಲ್ಲಿದೆ ನೋಡಿ ವಿಡಿಯೋ:

ಬಿಸಿನೀರು ಸುರಿದ ರಭಸಕ್ಕೆ ಮಗುವಿನ ಸೊಂಟದ ಕೆಳಭಾಗದ ಚರ್ಮ ಸಂಪೂರ್ಣವಾಗಿ ಸುಟ್ಟುಹೋಗಿದೆ. ಸುಮಾರು ಶೇ. 45ರಷ್ಟು ಸುಟ್ಟ ಗಾಯಗಳಾಗಿರುವ ಬಾಲಕನನ್ನು ನಾಗ್ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಈ ವಿಡಿಯೋ ಮಗು ನೋವಿನಿಂದ ಕಿರುಚುತ್ತಾ ಓಡುತ್ತಿರುವ ದೃಶ್ಯ ಎಂತಹವರನ್ನೂ ಕಣ್ಣೀರು ಹಾಕಿಸುವಂತಿದೆ. ಘಟನೆಗೆ ಸಂಬಂಧಿಸಿದಂತೆ ಕೋರಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಜ್ಜಿ ಸಿಂಧು ಠಾಕ್ರೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಹಬ್ಬದ ದಿನವೇ ಅಜ್ಜಿಯ ಇಂತಹ ಅಮಾನವೀಯ ವರ್ತನೆ ಕಂಡ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gold Rates: ಚಿನ್ನದ ಬೆಲೆ ಗುರುವಾರ ಮತ್ತೂ ಇಳಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 5th March 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಮಾರ್ಚ್ 5: ಯುದ್ಧದ ನಡುವೆಯೂ ಚಿನ್ನದ ಬೆಲೆ (Gold Rates) ಮತ್ತೆ ಇಳಿದಿದೆ. ನಿನ್ನೆ ಬುಧವಾರ ಗ್ರಾಮ್​ಗೆ 500 ರೂನಷ್ಟು ಕಡಿಮೆಗೊಂಡಿದ್ದ ಚಿನ್ನದ ಬೆಲೆ ಇವತ್ತು ಗುರುವಾರ 90 ರೂ ತಗ್ಗಿದೆ. 15,000 ರೂ ಮಟ್ಟಕ್ಕಿಂತ ಕೆಳಗೆ ಬಂದಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಇದರ ಬೆಲೆ ಕಡಿಮೆಗೊಂಡಿದೆ. ಇದೇ ವೇಳೆ, ಬೆಳ್ಳಿ ಬೆಲೆ ಕುಸಿತ ಇವತ್ತು ಆಗಿಲ್ಲ. ನಿನ್ನೆಯ ಬೆಲೆಯೇ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,49,900 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,63,530 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,49,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 28,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮಾರ್ಚ್ 5ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,353 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,990 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,265 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,353 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,990 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,990 ರೂ
  • ಚೆನ್ನೈ: 15,120 ರೂ
  • ಮುಂಬೈ: 14,990 ರೂ
  • ದೆಹಲಿ: 15,005 ರೂ
  • ಕೋಲ್ಕತಾ: 14,990 ರೂ
  • ಕೇರಳ: 14,990 ರೂ
  • ಅಹ್ಮದಾಬಾದ್: 14,995 ರೂ
  • ಜೈಪುರ್: 15,005 ರೂ
  • ಲಕ್ನೋ: 15,005 ರೂ
  • ಭುವನೇಶ್ವರ್: 14,990 ರೂ

ಇದನ್ನೂ ಓದಿ: ಹಾರ್ಮುಜ್ ಮಾರ್ಗದಲ್ಲಿ ಚೀನಾಗೆ ಮಾತ್ರ ಅವಕಾಶ ಎಂದ ಇರಾನ್; ಭಾರತಕ್ಕೆ ನಾವು ತೈಲ ಕೊಡುತ್ತೇವೆ ಎಂದ ರಷ್ಯಾ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 623 ರಿಂಗಿಟ್ (14,466 ರುಪಾಯಿ)
  • ದುಬೈ: 573.50 ಡಿರಾಮ್ (14,297 ರುಪಾಯಿ)
  • ಅಮೆರಿಕ: 161 ಡಾಲರ್ (14,745 ರುಪಾಯಿ)
  • ಸಿಂಗಾಪುರ: 205.30 ಸಿಂಗಾಪುರ್ ಡಾಲರ್ (14,730 ರುಪಾಯಿ)
  • ಕತಾರ್: 570 ಕತಾರಿ ರಿಯಾಲ್ (14,313 ರೂ)
  • ಸೌದಿ ಅರೇಬಿಯಾ: 582 ಸೌದಿ ರಿಯಾಲ್ (14,198 ರುಪಾಯಿ)
  • ಓಮನ್: 61 ಒಮಾನಿ ರಿಯಾಲ್ (14,510 ರುಪಾಯಿ)
  • ಕುವೇತ್: 46.71 ಕುವೇತಿ ದಿನಾರ್ (13,970 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 285 ರೂ
  • ಚೆನ್ನೈ: 295 ರೂ
  • ಮುಂಬೈ: 285 ರೂ
  • ದೆಹಲಿ: 285 ರೂ
  • ಕೋಲ್ಕತಾ: 285 ರೂ
  • ಕೇರಳ: 295 ರೂ
  • ಅಹ್ಮದಾಬಾದ್: 285 ರೂ
  • ಜೈಪುರ್: 285 ರೂ
  • ಲಕ್ನೋ: 285 ರೂ
  • ಭುವನೇಶ್ವರ್: 295 ರೂ
  • ಪುಣೆ: 285

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸಿನಿಮಾಗಳಿಗೆ ದೇವತೆಗಳ ಹೆಸರಿಡುವಂತಿಲ್ಲ? ಸೆನ್ಸಾರ್ ಅಘೋಷಿತ ನಿರ್ಧಾರ? – Kannada News | No God or Goddess name for Movies Censor new unwritten rule

ಭಾರತದಲ್ಲಿ (India) ದೇವರುಗಳ ಹೆಸರುಗಳನ್ನು ಮನುಷ್ಯರಿಗೆ, ಉದ್ಯಮಗಳಿಗೆ ಹೀಗೆ ಎಲ್ಲದಕ್ಕೂ ಇಡುವ ರೂಢಿ. ದೇವರುಗಳ ಹೆಸರುಗಳನ್ನು ಇರಿಸಿದರೆ ದೇವರ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ. ನಮ್ಮಲ್ಲಿ ಬಾರುಗಳಿಗೆ, ಕಸದ ಗಾಡಿಗಳಿಗೂ ದೇವರ ಹೆಸರುಗಳನ್ನು ಇರಿಸಲಾಗಿದೆ. ಆದರೆ ಇತ್ತೀಚೆಗೆ ಸಿನಿಮಾಗಳಿಗೆ ದೇವರ ಹೆಸರ ಇರಿಸಿದರೆ ಸೆನ್ಸಾರ್ ಮಂಡಳಿಯವರು ತಕರಾರು ತೆಗೆಯಲು ಆರಂಭಿಸಿದಂತಿದ್ದಾರೆ. ಇತ್ತೀಚೆಗಿನ ಕೆಲ ಸಿನಿಮಾಗಳಿಗೆ ಅವು ದೇವರುಗಳ ಹೆಸರೆಂಬ ಕಾರಣಕ್ಕೆ ಹೆಸರುಗಳನ್ನು ಬದಲಾವಣೆ ಮಾಡಿಸಲಾಗಿದೆ.

ವರಲಕ್ಷ್ಮಿ ಶರತ್​​ಕುಮಾರ್ ನಟನೆಯ ‘ಸರಸ್ವತಿ’ ಹೆಸರಿನ ನಾಳೆ ಬಿಡುಗಡೆ ಆಗಲಿದೆ. ಆದರೆ ಈ ಸಿನಿಮಾದ ಹೆಸರನ್ನು ಕಡ್ಡಾಯವಾಗಿ ಬದಲು ಮಾಡಲೇ ಬೇಕೆಂದು ಸೆನ್ಸಾರ್ ಮಂಡಳಿ ಪಟ್ಟು ಹಿಡಿದು, ಹೆಸರನ್ನು ‘ಎಸ್ ಸರಸ್ವತಿ’ ಎಂದು ಬದಲಾವಣೆ ಮಾಡಿಸಿದೆ. ಅಸಲಿಗೆ ಇದು ಸರಸ್ವತಿ ಹೆಸರಿನ ಸಾಮಾನ್ಯ ಮಹಿಳೆಯೊಬ್ಬಳ ಕತೆ. ಆದರೆ ಸೆನ್ಸಾರ್ ಮಂಡಳಿ ಅತಿ ಸೂಕ್ಷ್ಮತೆ ಪ್ರದರ್ಶಿಸಿ ಸಿನಿಮಾದ ಹೆಸರನ್ನು ಪದಲು ಮಾಡಿ, ತನ್ನ ಬುದ್ಧಿವಂತಿಕೆ ಪ್ರದರ್ಶಿಸಿದೆ.

ಇದನ್ನೂ ಓದಿ:‘ದಿ ಕೇರಳ ಸ್ಟೋರಿ 2’ ಸಿನಿಮಾದ ಶೀರ್ಷಿಕೆ ಬಗ್ಗೆ ತಕರಾರು; ರಾಜ್ಯದ ಹೆಸರು ಕೈಬಿಡಲು ಆಗ್ರಹ

ಇದು ಮೊದಲೇನೂ ಅಲ್ಲ ಈ ಹಿಂದೆ ‘ಹೇ ಭಗವಾನ್’ ಹೆಸರಿನ ಸಿನಿಮಾ ಒಂದು ಇತ್ತೀಚೆಗೆ ಬಿಡುಗಡೆ ಆಗಿತ್ತು. ಆ ಸಿನಿಮಾದ ಹೆಸರಿನಲ್ಲಿ ‘ಭಗವಾನ್’ ಹೆಸರನ್ನು ಸಹ ಸೆನ್ಸಾರ್ ಮಂಡಳಿ ಬದಲಾಯಿಸಿತು. ಸಿನಿಮಾದ ಹೆಸರನ್ನು ‘ಹೇ ಭಗವಂತ್’ ಎಂದು ಬದಲಾಯಿಸಿ ಬಿಡುಗಡೆ ಮಾಡಲಾಯ್ತು. ಒಂದೊಮ್ಮೆ ಸಿನಿಮಾದ ಕತೆಯು ದೇವರ ಕುರಿತಾಗಿಯೇ ಇದ್ದರೆ, ಅಥವಾ ದೇವರ ಭಕ್ತನ ಕುರಿತಾದ ಕತೆ ಇದ್ದರೆ ದೇವರು ಹೆಸರಿಟ್ಟುಕೊಳ್ಳುವುದು ಮಾತ್ರವಲ್ಲ, ಹೆಸರನ್ನು ತಿರುಚಿ ಬಳಸಿದರೂ ಸಹ ಸೆನ್ಸಾರ್ ಮಂಡಳಿ ಆಕ್ಷೇಪ ಎತ್ತುವುದಿಲ್ಲ. ‘ಹನುಮ್ಯಾನ್’ ಸಿನಿಮಾ ಇದಕ್ಕೆ ಉದಾಹರಣೆ.

ಸೆನ್ಸಾರ್ ಮಂಡಳಿ ಇತ್ತೀಚೆಗೆ ಅತಿಯಾದ ಸೂಕ್ಷ್ಮತೆ ಪ್ರದರ್ಶಿಸುತ್ತಿದೆ ಅದರಲ್ಲೂ ಧರ್ಮದ ವಿಷಯಗಳಲ್ಲಿ ಅತಿಯಾದ ಸೂಕ್ಷ್ಮತೆ ಪ್ರದರ್ಶಿಸುತ್ತಿದೆ. ಆದರೆ ಧರ್ಮಗಳ ನಡುವೆ ದ್ವೇಷ ಹುಟ್ಟಿಸುವ ಸಿನಿಮಾಗಳಿಗೆ ಸುಲಭವಾಗಿ ಪ್ರಮಾಣ ಪತ್ರಗಳು ಸಿಗುತ್ತಿವೆ. ಆದರೆ ಅಧಿಕಾರವನ್ನು ಪ್ರಶ್ನಿಸುವ, ವ್ಯವಸ್ಥೆಯನ್ನು ಟೀಕೆ ಮಾಡುವ ಸಿನಿಮಾಗಳಿಗೆ ಸಮಸ್ಯೆ ಎದುರಾಗುತ್ತಿವೆ. ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾಕ್ಕೂ ಸಮಸ್ಯೆ ಎದುರಾಗಿದ್ದು, ಅದು ರಾಜಕೀಯ ಪ್ರೇರಿತ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

VIDEO: ಅದ್ಭುತ ಕ್ಯಾಚ್ ಹಿಡಿದ ಪ್ರೇಕ್ಷಕನಿಗೆ ಸಿಕ್ತು 20 ಸಾವಿರ ರೂ..! – Kannada News | Unbelievable catch in tape ball cricket

ಪಂದ್ಯ ವೀಕ್ಷಿಸಲು ಹೋಗಿ ಅದ್ಭುತ ಕ್ಯಾಚ್ ಹಿಡಿದು ಪ್ರೇಕ್ಷಕನೋರ್ವ 20 ಸಾವಿರ ರೂ. ಬಹುಮಾನ ಗಿಟ್ಟಿಸಿಕೊಂಡಿದ್ದಾರೆ. ಇಂತಹದೊಂದು ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು ಪಾಕಿಸ್ತಾನದ ಟೇಪ್​ ​​ಬಾಲ್ ಚಾಂಪಿಯನ್​ಶಿಪ್ ಟೂರ್ನಿ. ಈ ಪಂದ್ಯದಲ್ಲಿ ಮುಲ್ತಾನ್ ಹಾಗೂ ಸಿಯಾಕೋಟ್ ತಂಡಗಳು ಮುಖಾಮುಖಿಯಾಗಿದ್ದವು.

ಮೊದಲು ಬ್ಯಾಟ್ ಮಾಡಿದ ಮುಲ್ತಾನ್ ಪರ ವಿಕ್ಕಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಪ್ರದರ್ಶನದೊಂದಿಗೆ ಬಾರಿಸಿದ ಸಿಕ್ಸರ್​ವೊಂದು ಪ್ರೇಕ್ಷಕರಿದ್ದ ಗ್ಯಾಲರಿಗೆ ಸಾಗಿತ್ತು. ಈ ವೇಳೆ ವ್ಯಕ್ತಿಯೋರ್ವ ಓಡಿ ಬಂದು ಚೆಂಡು ಹಿಡಿದಿದ್ದಾರೆ.

ಓಡಿ ಬಂದ ರಭಸಕ್ಕೆ ನಿಯಂತ್ರಣ ತಪ್ಪಿದರೂ ಗ್ಯಾಲರಿ ವಿಭಜಿಸಲು ಹಾಕಿದ್ದ ಮರಗಳ ಲೈನ್​ ನಡುವೆ ಹಾರಿದ್ದಾರೆ. ಇದಾಗ್ಯೂ ಚೆಂಡನ್ನು ಕೈ ಬಿಟ್ಟಿರಲಿಲ್ಲ. ಈ ಅದ್ಭುತ ಕ್ಯಾಚ್ ನೋಡಿ ಪಾಕಿಸ್ತಾನ್ ಟೇಪ್ ​ಬಾಲ್ ಚಾಂಪಿಯನ್​ಶಿಪ್ ಆಯೋಜಕರು ಆತನಿಗೆ 20 ಸಾವಿರ ರೂ. (PKR) ಬಹುಮಾನ ನೀಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಲ್ತಾನ್ ತಂಡವು 6 ಓವರ್​ಗಳಲ್ಲಿ 127 ರನ್ ಬಾರಿಸಿದ್ದರು. ಈ ಗುರಿಯನ್ನು ಬೆನ್ನತ್ತಿದ ಸಿಯಾಲ್​ಕೋಟ್ ತಂಡ 6 ಓವರ್​ಗಳಲ್ಲಿ ಕೇವಲ 70 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಈ ಮೂಲಕ ಮುಲ್ತಾನ್ 57 ರನ್​ಗಳ ಜಯ ಸಾಧಿಸಿದೆ.

Source link

Karnataka Budget 2026: ದಾಖಲೆಯ 17ನೇ ಬಜೆಟ್​ಗೆ ಸಿದ್ದರಾಮಯ್ಯ ಸಿದ್ಧ, ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ – Kannada News | Karnataka Budget 2026: CM Siddaramaiah Set to Present Record 17th Budget, Key Facts You Should Know

ಬೆಂಗಳೂರು, ಮಾರ್ಚ್ 5: ಕರ್ನಾಟಕದ ರಾಜಕೀಯ ಮತ್ತು ಆರ್ಥಿಕ ವಲಯದ ಗಮನ ಸೆಳೆದಿರುವ 2026–27ನೇ ಸಾಲಿನ ರಾಜ್ಯ ಬಜೆಟ್‌ (Karnataka Budget 2026) ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಲಿದ್ದಾರೆ. ಇದು ಸಿದ್ದರಾಮಯ್ಯ ಅವರು ಮಂಡಿಸಲಿರುವ 17ನೇ ಬಜೆಟ್ ಆಗಿದ್ದು, ರಾಜ್ಯದ ಇತಿಹಾಸದಲ್ಲೇ ಅತಿಹೆಚ್ಚು ಬಾರಿ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಎಂಬ ದಾಖಲೆಯನ್ನು ಅವರು ನಿರ್ಮಿಸಲಿದ್ದಾರೆ. ಕರ್ನಾಟಕದ ಇತಿಹಾಸದಲ್ಲೇ ಅತೀ ಹೆಚ್ಚು ಕಾಲ ಮುಖ್ಯಮಂತ್ರಿಯಾದ ದಾಖಲೆಗೆ ಜನವರಿಯಲ್ಲಿ ಸಿದ್ದರಾಮಯ್ಯ ಪಾತ್ರರಾಗಿದ್ದಾರೆ. 7 ವರ್ಷ 239 ದಿನಗಳ ಕಾಲ ಸಿಎಂ ಆಗಿದ್ದ ದೇವರಾಜ ಅರಸು ದಾಖಲೆಯನ್ನು ಸಿದ್ದರಾಮಯ್ಯ ಹಿಂದಿಕ್ಕಿದ್ದಾರೆ. ಇದೀಗ ಬಜೆಟ್ ಮಂಡನೆಯಲ್ಲಿಯೂ ದಾಖಲೆ ನಿರ್ಮಿಸಲಿದ್ದಾರೆ.

ಬಜೆಟ್ ಮಂಡನೆಗೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಿಧ ಇಲಾಖೆಗಳೊಂದಿಗೆ ಸಭೆ ನಡೆಸಿ ಆಯವ್ಯಯದ ಅಂತಿಮ ರೂಪುರೇಷೆಗಳನ್ನು ಸಿದ್ಧಪಡಿಸಿದ್ದಾರೆ. ಈ ಬಾರಿ ಬಜೆಟ್‌ನಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ ಆದ್ಯತೆ ನೀಡುವುದರ ಜೊತೆಗೆ, ರಾಜ್ಯದ ಆರ್ಥಿಕ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲವು ಯೋಜನೆಗಳಲ್ಲಿ ಬದಲಾವಣೆಗಳು ಆಗಬಹುದೇ ಎಂಬ ಕುತೂಹಲವೂ ಮೂಡಿದೆ.

ಮೂಲಸೌಕರ್ಯ ಅಭಿವೃದ್ಧಿ, ಶಿಕ್ಷಣ, ಕೃಷಿ, ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ, ರಾಜ್ಯದ ಜನತೆ ಮತ್ತು ವಿವಿಧ ವಲಯಗಳು ಈ ಬಜೆಟ್‌ ಮೇಲೆ ದೊಡ್ಡ ನಿರೀಕ್ಷೆ ಇಟ್ಟುಕೊಂಡಿವೆ.

ಕರ್ನಾಟಕ ಬಜೆಟ್ ಅಧಿವೇಶನ ವೇಳಾಪಟ್ಟಿ

ಕರ್ನಾಟಕ ಬಜೆಟ್ ಅಧಿವೇಶನವು ಮಾರ್ಚ್ 6ರಿಂದ ಮಾರ್ಚ್ 27ರವರೆಗೆ ನಡೆಯಲಿದ್ದು, ಒಟ್ಟು 14 ದಿನಗಳ ಕಾಲ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಚರ್ಚೆಗಳು ನಡೆಯಲಿವೆ. ಬಜೆಟ್‌ ಮಂಡನೆಯ ಬಳಿಕ ವಿವಿಧ ಇಲಾಖೆಗಳ ಅನುದಾನಗಳ ಕುರಿತು ಚರ್ಚೆ ನಡೆಯಲಿದೆ.

ಕರ್ನಾಟಕದಲ್ಲಿ ಈವರೆಗೆ ಎಷ್ಟು ಬಜೆಟ್ ಮಂಡನೆಯಾಗಿದೆ?

ಮೂಲಗಳ ಪ್ರಕಾರ, ಕರ್ನಾಟಕದಲ್ಲಿ 1956 ರ ನಂತರ ಇದುವರೆಗೆ ಚುನಾವಣಾ ವರ್ಷಗಳ ಮಧ್ಯಂತರ ಬಜೆಟ್‌ಗಳನ್ನು ಹೊರತುಪಡಿಸಿ 70ಕ್ಕೂ ಹೆಚ್ಚು ವಾರ್ಷಿಕ ಬಜೆಟ್‌ಗಳು ಮಂಡಿಸಲ್ಪಟ್ಟಿವೆ. ರಾಜ್ಯದ ಆರ್ಥಿಕ ವ್ಯಾಪ್ತಿ ವರ್ಷದಿಂದ ವರ್ಷಕ್ಕೆ ವಿಸ್ತರಿಸಿಕೊಂಡಿದ್ದು, 2025–26ನೇ ಹಣಕಾಸು ವರ್ಷದಲ್ಲಿ ಬಜೆಟ್ ಗಾತ್ರ ಮೊದಲ ಬಾರಿಗೆ 4 ಲಕ್ಷ ಕೋಟಿ ರೂ. ಗಡಿ ದಾಟಿತ್ತು.

ಅತಿಹೆಚ್ಚು ಬಜೆಟ್ ಮಂಡಿಸಿದ ಮುಖ್ಯಮಂತ್ರಿಗಳು

ಕರ್ನಾಟಕದ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ಬಜೆಟ್ ಮಂಡಿಸಿದ ಮುಖ್ಯಮಂತ್ರಿಗಳ ಪಟ್ಟಿ ಹೀಗಿದೆ;

  • ಸಿದ್ದರಾಮಯ್ಯ – 17 (ಮಾರ್ಚ್ 6ರ ಬಜೆಟ್ ಮಂಡನೆ ನಂತರ)
  • ರಾಮಕೃಷ್ಣ ಹೆಗಡೆ – 13
  • ಬಿಎಸ್ ಯಡಿಯೂರಪ್ಪ – 8

ಒಟ್ಟಾರೆಯಾಗಿ, ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್ ರಾಜ್ಯದ ಆರ್ಥಿಕ ಸ್ಥಿತಿ, ಅಭಿವೃದ್ಧಿ ಯೋಜನೆಗಳು ಹಾಗೂ ಜನಪರ ಕಾರ್ಯಕ್ರಮಗಳ ದಿಕ್ಕನ್ನು ನಿರ್ಧರಿಸುವ ಮಹತ್ವದ ಆಯವ್ಯಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಹೀಗಾಗಿ, ಸದ್ಯ ಎಲ್ಲರ ಚಿತ್ತ ಬಜೆಟ್​​ನತ್ತ ನೆಟ್ಟಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link