All posts by nagaraj11081993

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಮೂಢನಂಬಿಕೆ ಹೆಚ್ಚು, ಕಾರ್ಯದಲ್ಲಿ ನಿರುತ್ಸಾಹ – Kannada News | Horoscope May 14 Thursaday 2026; Dina Rashi Bhavishya Today, Checkout the details here

ಮೇಷ ರಾಶಿ:

ಯಾರದರು ಪ್ರೀತಿಯಿಂದ ಏನನ್ನೇ ಕೊಟ್ಟರೂ ಅದನ್ನು ಸ್ವೀಕರಿಸಿ.‌ ಅದರ ಬಗ್ಗೆ ಟೀಕೆಗಳನ್ನು ಮಾಡಿ ಭಾವನೆಗೆ ಹೊಡೆತ ಕೊಡುವುದು ಬೇಡ. ಉದ್ಯೋಗದಲ್ಲಿ ಬದಲಾವಣೆ ಯೋಗವಿದೆ. ಶೀತಲ ಸಮರದಿಂದ ವಿರಾಮ ಸಿಗಲಿದೆ. ಹಣಕಾಸಿನಲ್ಲಿ ಲಾಭದ ಸೂಚನೆಗಳಿವೆ. ದಾಂಪತ್ಯದಲ್ಲಿ ಪರಸ್ಪರ ಹೊಂದಾಣಿಕೆಯಾಗಲಿದೆ. ಹಿರಿಯರಿಂದ ಆಶೀರ್ವಾದವನ್ನು ಪಡೆಯಿರಿ. ಶರೀರದಲ್ಲಿ ಅಸಮತೋಲನವು ಇರಲಿದೆ.

ವೃಷಭ ರಾಶಿ:

ನಿಮಗೆ ಆತ್ಮವಿಶ್ವಾಸವು ನಿಮ್ಮ ಆಲೋಚನೆಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ಬುದ್ದಿಯ ಚಾತುರ್ಯದಿಂದ ಸಮಸ್ಯೆಗಳನ್ನು ಪರಿಹರಿಸಬಹುದು. ವ್ಯವಹಾರಗಳಲ್ಲಿ ಹೊಸ ಅವಕಾಶಗಳು ಸಿಗುತ್ತವೆ. ಹಣಕಾಸಿನಲ್ಲಿ ಸ್ವಲ್ಪ ಎಚ್ಚರತೆ ಅಗತ್ಯವಿದೆ. ಮನಸ್ಸು ಸ್ವಲ್ಪ ಗೊಂದಲದಲ್ಲಿದ್ದರೂ ನಿರ್ಧಾರ ತಾಳ್ಮೆಯಿಂದ ತೆಗೆದುಕೊಳ್ಳಿ. ದಾಂಪತ್ಯದಲ್ಲಿ ಮನಸ್ತಾಪವನ್ನು ಶಾಂತಗೊಳಿಸಿಕೊಳ್ಳುವುದು ಒಳ್ಳೆಯದು. ಸಂಗಾತಿಯ ಕಾರಣದಿಂದ ನಿಮಗೆ ಬೇಸರವಾಗುವುದು.

ಮಿಥುನ ರಾಶಿ:

ಇಂದು ನೀವು ಮತ್ತು ನಿಮ್ಮ ಸಂಗಾತಿ ಉತ್ತಮ ಸಮಯವನ್ನು ಹೊಂದುವಿರಿ. ವೃತ್ತಿಪರ ಜೀವನದಲ್ಲಿ ಪ್ರಗತಿಯ ಮಾರ್ಗ ತೆರೆಯಲಿದೆ. ಹಣಕಾಸಿನ ಲೆಕ್ಕಾಚಾರ ನಿಖರವಾಗಿರಲಿ. ಸಾಲವನ್ನು ಹಂತವಾಗಿ ತೀರಿಸಲು ಒಪ್ಪಿಗೆ ತೆಗೆದುಕೊಳ್ಳುವಿರಿ. ಸಜ್ಜನರೊಂದಿಗೆ ಮಾತುಕತೆ ನಿರ್ಣಯವನ್ನು ಬಲಪಡಿಸಬಹುದು. ನಿಮ್ಮ ಜೀವನ ಸಂಗಾತಿಯನ್ನು ಹುಡುಕಲು ಇಂದು ಅತ್ಯುತ್ತಮ ದಿನವಾಗಲಿದೆ. ಎಲ್ಲವೂ ಗೊತ್ತಿದ್ದರೂ ಏನೂ ಗೊತ್ತಿಲ್ಲದಂತೆ ಇರುವಿರಿ. ಸರ್ಕಾರಿ ಕೆಲಸವನ್ನು ಮಾಡಿಸಿಕೊಳ್ಳುವುದು ನಿಧಾನವಾಗಲಿದೆ.

ಕರ್ಕಾಟಕ ರಾಶಿ:

ನಿಮ್ಮ ಯಾತ್ರೆಯ ಯೋಜನೆಗಳು ಯಶಸ್ವಿಯಾಗಲಿವೆ. ಉದ್ಯೋಗದಲ್ಲಿ ನವೀನ ಅವಕಾಶಗಳು ಲಭ್ಯ. ಕಳೆದ ವಸ್ತುಗಳು ನಿಮ್ಮ ಕೈ ಸೇರಲಿದೆ. ಹಣಕಾಸಿನ ಬಗ್ಗೆ ನಿಯಂತ್ರಣವಹಿಸಿ. ಮನೆಯೊಳಗಿನ ಒತ್ತಡದ ಪರಿಸ್ಥಿತಿಗಳಲ್ಲಿ ಶಾಂತಿ ಕಾಪಾಡುವುದು ಮುಖ್ಯ. ಭೂಮಿಯ ಖರೀದಿಯನ್ನು ಏಕಮುಖವಾಗಿ ಮಾಡುವುದು ಬೇಡ. ಬರಬೇಕಾದ ಧನಾಗಮನದ ನಿರೀಕ್ಷೆಯಲ್ಲಿ ಇಂದು ಇರುವಿರಿ. ಭಾವುಕರಾಗುವ ಸಂದರ್ಭವು ಬರಬಹುದು. ನಿರಂತರ ಕಾರ್ಯದಿಂದ ವಿಶ್ರಾಂತಿಯನ್ನು ಪಡೆಯುವಿರಿ.

ಸಿಂಹ ರಾಶಿ:

ಆಪ್ತವಾದ ಬಾಂಧವ್ಯದಲ್ಲಿ ಮನಸ್ತಾಪ ಕಾಣಿಸಿಕೊಳ್ಳುವುದು. ನಿಮ್ಮ ಸಂಗಾತಿಯು ನಿಮ್ಮ ಕೆಲವು ಅಭ್ಯಾಸಗಳನ್ನು ಬದಲಾಯಿಸಲು ಪ್ರಯತ್ನಿಸುತ್ತಾರೆ. ನಿರ್ಧಾರಗಳಲ್ಲಿ ಸ್ಪಷ್ಟತೆಯಿರುವುದರಿಂದ ಮುನ್ನಡೆ ಸುಲಭವಾಗುತ್ತದೆ. ಕುಟುಂಬದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವಿರಿ. ಹಣಕಾಸಿನಲ್ಲಿ ನೆಮ್ಮದಿಯ ಚಲನವಿದೆ. ಅಮೇಧ್ಯವಾದ ಆಹಾರವನ್ನು ಸೇವಿಸುವ ಸಂದರ್ಭವು ಬರಬಹುದು. ರಕ್ಷಣೆಯ ಜವಾಬ್ದಾರಿ ಇದ್ದವರಿಗೆ ಒತ್ತಡವಿರುವುದು.

ಕನ್ಯಾ ರಾಶಿ:

ನಿಮಗೆ ಆರ್ಥಿಕತೆಯಲ್ಲಿ ಸ್ಪಷ್ಟತೆ ಅವಶ್ಯವಾಗಿ ಇರಬೇಕು. ಇಂದೇ ಆಲೋಚನೆ ಸ್ಥಿರವಾಗಿ ಇರದು. ಕಲಾತ್ಮಕ ಕ್ಷೇತ್ರದಲ್ಲಿ ಇರುವವರಿಗೆ ಅವಕಾಶಗಳು ಲಭಿಸಲಿವೆ. ಆರ್ಥಿಕವಾಗಿ ಮಿತವ್ಯಯವೂ ಲಾಭವೂ ಸಮಾಮವಾಗಿರುವುದು. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವ ಮೂಲಕ ಹೆಸರು ಮಾಡಬಹುದು. ಜವಾಬ್ದಾರಿಗಳಲ್ಲಿ ಕಷ್ಟವಾಗಿದ್ದರೂ ಯಶಸ್ಸು ಖಚಿತ. ಸಹೋದ್ಯೋಗಿಗೆ ಸಹಾಯ ಮಾಡುವ ಸ್ಥಿತಿಯು ನಿಮಗೆ ಬರಬಹುದು.

ತುಲಾ ರಾಶಿ:

ನಿಮಗೆ ಆಶ್ಚರ್ಯಗಳಿಂದ ಕೂಡಿದ ಕೆಲವು ಸಂಗತಿಗಳು ಗೊತ್ತಾಗಬಹುದು. ಅನ್ಯರ ಸಂಧಾನಕ್ಕೆ ನಿಮ್ಮನ್ನು ಭೇಟಿ ಮಾಡಲು ಆಪ್ತರು ಬರಬಹುದು. ಕೆಲಸದ ಕ್ಷೇತ್ರದಲ್ಲಿ ನೀವಂದುಕೊಂಡಂತೆ ಆಗಲಿದೆ. ಪುಣ್ಯಸ್ಥಳದಿಂದ ಮನಸ್ಸು ಶಾಂತವಾಗಿರಲು ಧ್ಯಾನ ಸಹೋದ್ಯೋಗಿಗಳ ಸುಲಭವಾಗಬಹುದು. ಸಹಕಾರದಿಂದ ಕೆಲಸ ದೂರದ ಪ್ರಯಾಣದ ಯೋಗವಿದೆ. ಕೆಲವು ವ್ಯಕ್ತಿಗಳಿಂದ ನೀವು ದೂರವಿರಲು ಇಚ್ಛಿಸುವಿರಿ. ನಿಮ್ಮ ಅಸಹಕಾರದಿಂದ ಮಕ್ಕಳಿಗೆ ಬೇಸರವಾದೀತು. ಅಯಾಚಿತ ಭಾಗ್ಯದಿಂದ ಖುಷಿಯಾಗಲಿದೆ.

ವೃಶ್ಚಿಕ ರಾಶಿ:

ನಿಮಗೆ ಉದ್ಯೋಗಕ್ಕೆ ಬೇಕಾದ ಉಪಯುಕ್ತ ಮಾಹಿತಿಯನ್ನು ಪಡೆಯುವಿರಿ. ಈ ದಿನ ನೀವು ಎಂದಿನಂತೆ ಇರದೇ ಶಾಂತಿಯುತವಾಗಿ ನಡೆದುಕೊಳ್ಳುವಿರಿ. ಹಣಕಾಸಿನ ಲೆಕ್ಕಾಚಾರ ಸರಿಯಾಗಿ ನಿಭಾಯಿಸಬೇಕು. ಶತ್ರುಗಳಿಗೆ ನಿಮ್ಮ ಸಂದೇಶವನ್ನು ನೀಡುವಿರಿ. ಆಸ್ತಿ ಸಂಬಂಧಿತ ವಿಚಾರಗಳಲ್ಲಿ ಮುನ್ನೋಟವಿರಲಿ. ಅನಿರೀಕ್ಷತ ಅನಾರೋಗ್ಯದಿಂದ ಹಣವು ಖರ್ಚಾಗಬಹುದು. ನಿಮ್ಮ ಉದ್ವೇಗದ ಮನಸ್ಸನ್ನು ಇತರರಿಗೆ ತೋರಿಸುವಿರಿ.

ಧನು ರಾಶಿ:

ಭಾವುಕತೆಯಿಂದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಕುಟುಂಬದ ಬೆಂಬಲದಿಂದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಬಹುದು. ವೃತ್ತಿಪರ ಜೀವನದಲ್ಲಿ ಗುರುತುಪಡಿಸುವ ಅವಕಾಶ ಸಿಗಲಿದೆ. ಮಾತನಾಡಲು ಯಾರಿಲ್ಲದೇ ನಿಮ್ಮ ಸ್ನೇಹಿತರೊಂದಿಗೆ ಸಮಯ ಕಳೆಯಿರಿ. ನಿಮ್ಮನ್ನು ಸಂತೋಷದಿಂದ ಇಟ್ಟುಕೊಳ್ಳಲು ಬೇಕಾದ ಮಾರ್ಗವನ್ನು ಕಂಡುಕೊಳ್ಳಿ. ನಿಮ್ಮ ಪೋಷಕರ ಸಲಹೆಯನ್ನು ಅನುಸರಿಸಿ, ಸಂಬಂಧವನ್ನು ಉತ್ತಮವಾಗಿಸಿಕೊಳ್ಳಿ.

ಮಕರ ರಾಶಿ:

ನಿಮ್ಮ ಸ್ವಲ್ಪ ಕೆಲಸದಿಂದ ನೀವು ಗಣನೀಯ ಪ್ರಮಾಣದ ಹಣ ಪಡೆಯಬಹುದು. ನೀವು ಯುವಕರ ಜೊತೆ ಸಮಯ ಕಳೆಯುವಿರಿ. ನಿಮ್ಮೊಳಗಿನ ಶತ್ರುಗಳಿಂದ ನಿಮ್ಮ ಕಾರ್ಯ ಕುಂಟುತ್ತ ಹೋಗುವುದು. ಸಂವಹನ ಶಕ್ತಿಯಿಂದ ಕಾರ್ಯಕ್ಷೇತ್ರದಲ್ಲಿ ಉತ್ಸಾಹದಿಂದ ಮುಂದುವರೆಯಲು ಅವಕಾಶ ಸಿಗುವುದು. ಉದ್ಯಮದಲ್ಲಿ ಹೊಸ ಪ್ರಯತ್ನಗಳು ಫಲ ನೀಡುವವು. ದಾಂಪತ್ಯದಲ್ಲಿ ಮನಸ್ತಾಪಗಳು ಎದ್ದು ಶಾಂತವಾಗುವುದು. ಉಚಿತವಾದುದನ್ನು ಮಾತ್ರ ಪಡೆಯಿರಿ. ನಿಮ್ಮ ಆರೋಗ್ಯವು ಇಂದು ಚೆನ್ನಾಗಿರಲಿದೆ.

ಕುಂಭ ರಾಶಿ:

ಇಂದು ಭೂಮಿಗೆ ಸಂಬಂಧಿಸಿದಂತೆ ಲಾಭ ಪಡೆಯುವಿರಿ. ಕುಟುಂಬದ ಸದಸ್ಯರೊಂದಿಗೆ ಅಲ್ಪವಿರಾಮ ತೆಗೆದು ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳಿ. ಹೊಸ ಯೋಜನೆಗಳನ್ನು ಆರಂಭಿಸಲು ಉತ್ತಮ ದಿನ. ಉದ್ಯೋಗದಲ್ಲಿ ಶ್ಲಾಘನೆಗೆ ಪಾತ್ರರಾಗುವಿರಿ. ಮುಂಜಾಗ್ರತೆಯಿಂದ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಇಂದಿನ ಅಗತ್ಯ. ಅಪರೂಪದ ಬಂಧುಗಳ ಸಮಾಗಮವಾಗಲಿದ್ದು, ಸಂತೋಷವಾಗಲಿದೆ. ದೇವಾಲಯಕ್ಕೆ ಹೋಗಿ ನೆಮ್ಮದಿಯನ್ನು ಪಡೆದುಕೊಳ್ಳುವಿರಿ.

ಮೀನ ರಾಶಿ:

ಯಾವುದೇ ಮಹತ್ವದ ಹಣಕಾಸಿನ ವಹಿವಾಟುಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ನೀವು ಸಣ್ಣ ವಿಷಯಗಳ ಬಗ್ಗೆಯೂ ಗಾಢವಾಗಿ ಇಂದು ಚಿಂತಿಸುವಿರಿ. ಮನಸ್ಸಿನಲ್ಲಿ ಉತ್ಸಾಹವಿದ್ದು ಹೊಸ ಕಾರ್ಯಗಳಲ್ಲಿ ತೊಡಗಲು ಇಚ್ಛೆ ಮೂಡುತ್ತದೆ. ಉದ್ಯೋಗದಲ್ಲಿ ಪ್ರಗತಿಯ ಸುಳಿವುಗಳು ಸಿಗುತ್ತವೆ. ಹಣಕಾಸಿನ ವಿಷಯದಲ್ಲಿ ಹೆಚ್ಚು ಎಚ್ಚರಿಕೆ ವಹಿಸುವುದು ಒಳಿತು. ಸಂತೋಷಕ್ಕೆ ಅಡ್ಡಿಯಾಗುವ ಕಾರ್ಯವನ್ನು ಮಾಡಿಕೊಂಡು ಪಶ್ಚಾತ್ತಾಪ ಪಡುವಿರಿ. ಅಜಾಗರೂಕತೆಯಿಂದ ನಿಮ್ಮ ವಸ್ತುವು ಇನ್ನೊಬ್ಬರ ಪಾಲಾಗಬಹುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಕೃತ್ತಿಕಾ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ರೇವತೀ, ಯೋಗ : ಪ್ರೀತಿ, ಕರಣ : ಗರಜ, ಸೂರ್ಯೋದಯ – 05 – 58 am, ಸೂರ್ಯಾಸ್ತ – 06 – 42 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:56 – 15:32, ಯಮಗಂಡ ಕಾಲ 05:59 – 07:34, ಗುಳಿಕ ಕಾಲ 09:10 – 10:45

-ಲೋಹಿತ ಹೆಬ್ಬಾರ್ – 8762924271 (what’s app only)

Source link

RCB vs KKR: ಕಿಂಗ್ ಕೊಹ್ಲಿ ಶತಕ; ಕೆಕೆಆರ್​ ವಿರುದ್ಧ ಗೆದ್ದ ಆರ್​ಸಿಬಿಗೆ ಅಗ್ರಸ್ಥಾನ – Kannada News | IPL 2026: Virat Kohli Century Powers RCB to Top Spot; KKR Eliminated in Raipur

ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ 57ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡವನ್ನು 6 ವಿಕೆಟ್​ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಆವೃತ್ತಿಯಲ್ಲಿ 8ನೇ ಗೆಲುವು ದಾಖಲಿಸುವ ಮೂಲಕ ಅಂಕಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದೆ. ಇತ್ತ ಆರ್​​ಸಿಬಿ ವಿರುದ್ಧ ಸೋತ ಕೆಕೆಆರ್ ಮೂರನೇ ತಂಡವಾಗಿ ಪ್ಲೇಆಫ್‌ನಿಂದ ಹೊರಬಿದ್ದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್ 192 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆರ್​ಸಿಬಿ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿಯ ಅಬ್ಬರದ ಶತಕದ ನೆರವಿನಿಂದ ಸುಲಭವಾಗಿ ಜಯದ ನಗೆ ಬೀರಿತು. ಕಳೆದ 2 ಪಂದ್ಯಗಳಲ್ಲಿ ಸೊನ್ನೆಗೆ ಔಟಾಗಿದ್ದ ಕೊಹ್ಲಿ ಈ ಪಂದ್ಯದಲ್ಲಿ ಸ್ಮರಣೀಯ ಇನ್ನಿಂಗ್ಸ್ ಆಡಿ ಆರ್​ಸಿಬಿ ಗೆಲುವಿನ ರೂವಾರಿ ಎನಿಸಿಕೊಂಡರು.

Source link

ಸಮವಸ್ತ್ರ ಆದೇಶ ರದ್ದು: ಸರ್ಕಾರದ ನಿರ್ಧಾರದ ವಿರುದ್ಧ ಕಾನೂನು ಸಮರದ ಎಚ್ಚರಿಕೆ; ಓಲೈಕೆ ರಾಜಕಾರಣದ ಆರೋಪ! – Kannada News | Karnataka Revokes Uniform Order: A Deep Dive into the Hijab Row and SDMC Powers

 

ಬೆಂಗಳೂರು, ಮೇ.13: ಕರ್ನಾಟಕ ಸರ್ಕಾರವು ಇತ್ತೀಚೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಮೂಲಕ ಶಾಲಾ ಸಮವಸ್ತ್ರಗಳಿಗೆ ಸಂಬಂಧಿಸಿದ ಹೊಸ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಯು 2022ರಲ್ಲಿ ಬಿಜೆಪಿ ಸರ್ಕಾರ ಹೊರಡಿಸಿದ್ದ ಹಿಂದಿನ ಅಧಿಸೂಚನೆಯನ್ನು ರದ್ದುಪಡಿಸಿದೆ. ರದ್ದುಗೊಂಡ ಅಧಿಸೂಚನೆಯು ಶಾಲಾ-ಕಾಲೇಜುಗಳಲ್ಲಿ ಸಮಾನತೆ ಮತ್ತು ಏಕತೆಯನ್ನು ಕಾಯ್ದುಕೊಳ್ಳಲು ಸಮವಸ್ತ್ರವನ್ನು ಕಡ್ಡಾಯಗೊಳಿಸಿ, ಶಾಲಾ ಆಡಳಿತ ಮಂಡಳಿಗಳ ನಿರ್ಣಯದಂತೆ ಪಾಲಿಸಬೇಕೆಂದು ಹೇಳಿತ್ತು.ಹೊಸ ಆದೇಶವು ಹಿಜಾಬ್, ಟೋಪಿ ಸೇರಿದಂತೆ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಲು ಅನುಮತಿ ನೀಡುತ್ತದೆ. ಈ ನಿರ್ಧಾರವು ಶಾಲಾ ಮಕ್ಕಳಲ್ಲಿ ಭೇದಭಾವ ಮೂಡಿಸುತ್ತದೆ ಮತ್ತು ಮುಸ್ಲಿಂ ಸಮುದಾಯವನ್ನು ಓಲೈಸುವ ಉದ್ದೇಶದಿಂದ ಮಾಡಲಾಗಿದೆ ಎಂದು ಗಂಭೀರ ಆರೋಪಗಳು ಕೇಳಿಬಂದಿವೆ. ಹಿಂದೆ ಇಂದಿರಾ ಗಾಂಧಿ ಅವರ ಕಾಲದಲ್ಲಿ ಯಾವುದೇ ರೀತಿಯ ಭೇದ-ಭಾವನೆ ಇಲ್ಲದೆ ವಿದ್ಯಾರ್ಥಿಗಳಲ್ಲಿ ಸಮಾನತೆ ಮೂಡಿಸಲು ಸಮವಸ್ತ್ರವನ್ನು ಜಾರಿಗೊಳಿಸಲಾಗಿತ್ತು ಎಂದು ಟೀಕಾಕಾರರು ಹೇಳುತ್ತಾರೆ. ಇದಲ್ಲದೆ, ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಗಳ ನಿರ್ಣಯ ಕೈಗೊಳ್ಳುವ ಹಕ್ಕುಗಳನ್ನು ಸರ್ಕಾರ ಕಸಿದುಕೊಂಡಿದೆ ಎಂಬ ಆಕ್ಷೇಪವೂ ವ್ಯಕ್ತವಾಗಿದೆ. ಈ ನಿರ್ಣಯದ ವಿರುದ್ಧ ಕಾನೂನು ಹೋರಾಟ ಮತ್ತು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಚಿಂತನೆ ನಡೆಸಲಾಗುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದಲ್ಲಿ ಹಿಜಾಬ್​​​ ವಿವಾದ ಮತ್ತೆ ಮುನ್ನೆಲೆಗೆ: ಸರ್ಕಾರದ ನಡೆಗೆ ಸಿಡಿದೆದ್ದ ವಿಪಕ್ಷ ಬಿಜೆಪಿ – Kannada News | BJP And Hindu Leaders Hits out at Siddaramaiah Governmnet Over Allows Hijab In School And Colleges

ಬೆಂಗಳೂರು, (ಮೇ 13): ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ (School And College)  ಹಿಜಾಬ್‌ (Hijab) ಹಾಗೂ ಧಾರ್ಮಿಕ ವಸ್ತುಗಳನ್ನು ಧರಿಸಲು ಅವಕಾಶ ನೀಡಿ ಸಿದ್ದರಾಮಯ್ಯ ಸರ್ಕಾರ ಆದೇಶ ಹೊರಡಿಸಿದೆ. ಹೌದು…2022ರಲ್ಲಿ ಬಿಜೆಪಿ (BJP) ಸರ್ಕಾರದ ಆದೇಶವನ್ನು ಹಿಂಪಡೆದು ಜನಿವಾರ, ಶಿವದಾರ, ರುದ್ರಾಕ್ಷಿ, ಹಿಜಾಬ್, ಪೇಟ ಸೇರಿದಂತೆ ನಿಗದಿತ ಸಮವಸ್ತ್ರದೊಂದಿಗೆ ಧಾರ್ಮಿಕ ವಸ್ತ್ರಗಳನ್ನು ಧರಿಸಲು ಅವಕಾಶ ನೀಡಲಾಗಿದೆ. ಸರ್ಕಾರದ ಈ ನಿರ್ಣಯದಿಂದ ಹಿಜಾಬ್​ ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು, ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಆಕ್ರೋಶಗೊಂಡಿವೆ.

  • ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡಿದ ರಾಜ್ಯ ಸರ್ಕಾರ
  • ಸಿದ್ದರಾಮಯ್ಯ ಸರ್ಕಾರದ ಈ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
  • ಮುಸ್ಲಿಮರ ಮುನಿಸಿಗೆ ಹಿಜಾಬ್ ಮುಲಾಮು ಎಂದ ಅಶೋಕ್
  • ಹೈಕೋರ್ಟ್​ಗೆ ಪಿಐಎಲ್ ಸಲ್ಲಿಸುವ ಬಗ್ಗೆ ಚರ್ಚೆ ಮಾಡ್ತೇವೆ ಎಂದ ಮುತಾಲಿಕ್

ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ಹಾಗೂ ಧಾರ್ಮಿಕ ವಸ್ತುಗಳನ್ನು ಧರಿಸಲು ಅವಕಾಶ ನೀಡಲಾಗುವುದು ಎಂದು ಸರ್ಕಾರ ನಿರ್ಧಾರ ಮಾಡಿದ್ದು, ಈ ಬೆನ್ನಲ್ಲೇ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್​. ಅಶೋಕ್​​ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಹಿಜಾಬ್ ಅನ್ನು ನಿಷೇಧಿಸಲಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಅತಿ ಓಲೈಕೆ ಮಾಡಿ ಮಮತಾ ಬ್ಯಾನರ್ಜಿ ಸೋತು ಮನೆಗೆ ಸೇರಿದ್ದಾರೆ. ತಮಿಳುನಾಡಲ್ಲಿ ಹಿಂದುಗಳನ್ನು ಬೈದು ಸ್ಟಾಲಿನ್ ಸೋತರು. ಅದೇ ರೀತಿಯಲ್ಲಿ ಕೇರಳ ಸಿಎಂ ಆಗಿದ್ದ ಪಿಣರಾಯಿಯನ್ನೂ ಸೋಲಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿಯ 2022ರ ಆದೇಶ ಹಿಂಪಡೆದ ಸರ್ಕಾರ: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ

ಮುಸ್ಲಿಮರ ಮುನಿಸಿಗೆ ಹಿಜಾಬ್ ಮುಲಾಮು

ದಾವಣಗೆರೆ ಉಪಚುನಾವಣೆ ಸುತ್ತ ನಡೆದ ಘಟನೆಗಳ ನಂತರ ಅಲ್ಪಸಂಖ್ಯಾತರ ಆಕ್ರೋಶಕ್ಕೆ ಕಾಂಗ್ರೆಸ್ ಸರ್ಕಾರ ಬೆದರಿದೆ. ಹೀಗಾಗಿ ತನ್ನ ಮತಬ್ಯಾಂಕ್ ಉಳಿಸಿಕೊಳ್ಳಲು ಹಿಜಾಬ್ ಅಸ್ತ್ರ ಕೈಗೆತ್ತಿಕೊಂಡಿದೆ. ರಾಜ್ಯದ ನೈಜ ಸಮಸ್ಯೆಗಳಾದ ಬೆಲೆ ಏರಿಕೆ, ಭ್ರಷ್ಟಾಚಾರ, ರೈತರ ಸಂಕಷ್ಟ, ಕಾನೂನು ಸುವ್ಯವಸ್ಥೆಯ ವೈಫಲ್ಯ ಇವೆಲ್ಲದರ ಬಗ್ಗೆ ಸರ್ಕಾರ ಮೌನವಾಗಿದ್ದು, ಮುನಿಸಿಕೊಂಡಿರುವ ಮುಸ್ಲಿಂ ಮತ ಬ್ಯಾಂಕ್‌ಗೆ ಹಿಜಾಬ್ ಮೂಲಕ ಮುಲಾಮು ಹಚ್ಚಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಕಿಡಿಕಾರಿದ್ದಾರೆ.

ಕೋರ್ಟ್ ಆದೇಶವನ್ನೇ ಕಾಂಗ್ರೆಸ್ ಸರ್ಕಾರ ಗಾಳಿಗೆ ತೂರಿದೆ

ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ 2022ರಲ್ಲಿ ಅಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ವಸ್ತ್ರಸಂಹಿತೆಯನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಶಿಕ್ಷಣ ಸಂಸ್ಥೆಗಳಲ್ಲಿ ಶಿಸ್ತು ಮುಖ್ಯ ಎಂದು ತೀರ್ಪು ನೀಡಿತ್ತು. ಈಗ ಕೋರ್ಟ್ ಆದೇಶವನ್ನೇ ಗಾಳಿಗೆ ತೂರಿ ಒಂದು ಸಮುದಾಯದ ಓಲೈಕೆಗೆ ಮುಂದಾಗಿರುವುದು ಯಾವ ಸೀಮೆ ಜಾತ್ಯತೀತತೆ? ಎಂದು ಪ್ರಶ್ನಿಸಿದ ಅಶೋಕ್, ಒಂದು ಸಮುದಾಯದ ಹಿಜಾಬ್‌ಗೆ ಹಸಿರು ನಿಶಾನೆ ತೋರಿರುವ ಸಿದ್ದರಾಮಯ್ಯ ಸರ್ಕಾರ ಕೇಸರಿ ಶಾಲುವಿಗೆ ಮಾತ್ರ ನಿಷೇಧ ಹೇರಿದೆ. ಓಲೈಕೆ ರಾಜಕಾರಣ ಹಿಂದೂಗಳಿಗೆ ಅರ್ಥವಾಗಲ್ಲ ಅಂತ ಭಾವಿಸಿದ್ದೀರಾ ಸಿಎಂ? ಶಾಲಾ-ಕಾಲೇಜುಗಳನ್ನು ಸಮಾನತೆಯ ಕೇಂದ್ರಗಳನ್ನಾಗಿ ನೋಡುವ ಬದಲು ಧರ್ಮದ ಆಧಾರದಲ್ಲಿ ಮಕ್ಕಳನ್ನ ವಿಭಜಿಸ್ತಿರುವ ನಿಮ್ಮ ನಡೆಯೇ ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಕನ್ನಡಿಗರು ತಕ್ಕ ಪಾಠ

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸರ್ಕಾರ ಅತಿಯಾದ ಓಲೈಕೆ ರಾಜಕಾರಣ ಮಾಡಿ ಯಾವ ದುಸ್ಥಿತಿಗೆ ತಲುಪಿದೆಯೋ ಕರ್ನಾಟಕದಲ್ಲಿ ನಿಮಗೂ ಅದೇ ಗತಿ ಕಾದಿದೆ. ಕರ್ನಾಟಕದಲ್ಲಿ ತುಷ್ಟೀಕರಣದ ಪರಾಕಾಷ್ಠೆ ತಲುಪಿರುವ ಕಾಂಗ್ರೆಸ್ ಪಕ್ಷಕ್ಕೆ ಕನ್ನಡಿಗರು ತಕ್ಕ ಪಾಠ ಕಲಿಸುವುದು ಗ್ಯಾರಂಟಿ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಸಂವಿಧಾನ ಮತ್ತು ನ್ಯಾಯಾಂಗದ ಆಶಯಗಳನ್ನು ಬಲಿ ಕೊಡುತ್ತಿರುವ ಸರ್ಕಾರಕ್ಕೆ ಜನರೇ ಅಂತ್ಯ ಹಾಡಲಿದ್ದಾರೆ ಎಂದು ಟ್ವಿಟ್ಟರ್​​ನಲ್ಲಿ ಬರೆದುಕೊಂಡಿದ್ದಾರೆ.

ಮೋದ್ ಮುತಾಲಿಕ್ ಕೆಂಡಾಮಂಡಲ

ಹಿಜಾಬ್‌ಗೆ ಅವಕಾಶ ನೀಡಿ ರಾಜ್ಯ ಸರ್ಕಾರ ಆದೇಶಿಸಿರುವ ಬಗ್ಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿದ್ದು, ಸರ್ಕಾರದ ಆದೇಶದ ಪ್ರತಿಯನ್ನು ನಾಳೆ ರಾಜ್ಯಾದ್ಯಂತ ಹರಿದು ಹಾಕುತ್ತೇವೆ. ಹೈಕೋರ್ಟ್‌ನಲ್ಲಿ ಪಿಐಎಲ್ ಹಾಕುವ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ. ಶಾಲಾ, ಕಾಲೇಜುಗಳಲ್ಲಿ ಸಮಾನತೆ, ಏಕತೆ ಸರ್ಕಾರಕ್ಕೆ ಬೇಡವಾಗಿದೆ. ಮುಸ್ಲಿಮರ ತುಷ್ಟೀಕರಣಕ್ಕಾಗಿ ಇಂತಹ ಆದೇಶ ಹೊರಡಿಸಿದ್ದಾರೆ ಎಂದು ಕಿಡಿಕಾರಿದರು.

ಶಾಲಾ ಮಕ್ಕಳಲ್ಲಿ ಭೇದ ಭಾವ ಮಾಡ್ತಿದ್ದಾರೆ. ಹಿಜಾಬ್ ಧರಿಸಿ ಬಂದ ಮೇಲೆ ಅವರು ಮುಸ್ಲಿಮರು ಎಂದು ಗೊತ್ತಾಗುತ್ತದೆ. ಶಿವದಾರ, ಜನಿವಾರ ಒಳಗಡೆ ಇರುತ್ತೆ. ಅದು ಯಾರಿಗೂ ಗೊತ್ತಾಗಲ್ಲ. ರಾಜ್ಯ ಸರ್ಕಾರ ಕಣ್ಣಿಗೆ ಮಣ್ಣು ಹಾಕುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌ ಸರ್ಕಾರಕ್ಕೆ ಸಮಾನತೆ ಬೇಕಾಗಿಲ್ಲ, ಒಡಕು ಬೇಕಾಗಿದೆ. ಎಸ್‌ಡಿಎಂಸಿ ಹಕ್ಕನ್ನು ಕಸಿದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

MLC ಸಿ.ಟಿ ರವಿ ಆಕ್ರೋಶ

1965ರಿಂದ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರಗಳಿದೆ. ಶಾಲಾ‌‌ ಕಾಲೇಜಿನಲ್ಲಿ ವಸ್ತ್ರ ಸಂಹಿತೆಯನ್ನ 1969 ರಿಂದ ಕಡ್ಡಾಯ ಮಾಡಲಾಗಿದೆ. 1969 ರಲ್ಲಿ ಯಾವ ಕಾರಣಕ್ಕೆ ಸಮವಸ್ತ್ರ ಜಾರಿ ಮಾಡಿದ್ವಿ ಅನ್ನೋದನ್ನ ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದಾರೆ. ಮಕ್ಕಳಲ್ಲಿ ಯಾವುದೇ ಭೇದಭಾವ ತರಬಾರದು ಎಂಬ ಕಾರಣಕ್ಕೆ ಸಮವಸ್ತ್ರ ಜಾರಿ ಮಾಡಲಾಗಿತ್ತು. ಇದೀಗ ಸರ್ಕಾರ ಮತಿಯ ಚಿಹ್ನೆಗಳನ್ನು ಬಳಸಲು ಅವಕಾಶ ನೀಡಿದೆ. ಹಾಗಾದ್ರೆ ಸಮವಸ್ತ್ರದ ಭಾಗನಾ ಮತಿಯ ಚಿಹ್ನೆಗಳು? ಇದನ್ನ‌ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಕೇಸರಿ ಬಣ್ಣದ ಹಿಜಾಬ್ ಹಾಕಿ ಬಂದ್ರೆ ನೀವು ಹೊರಗೆ ಕಳಿಸುತ್ತೀರಾ?

ಮತಿಯ ಚಿಹ್ನೆಗಳು ಬೇರೆ ಸಂಸ್ಕೃತಿಕ ಚಿಹ್ನೆಗಳು ಬೇರೆ. ಹಿಜಾಬ್ ಮತಿಯ ಚಿಹ್ನೆಯೋ ಸಂಸ್ಕೃತಿಯ ಚಿಹ್ನೆಯೋ ಅನ್ನುವುದನ್ನ ಸ್ಪಷ್ಟಪಡಿಸ್ಬೇಕು. ಹಿಜಾಬ್ ಇರಬಾರದು ಅಂತ ನಾವು ಹೇಳಲ್ಲ. ಶಾಲೆಗಳಲ್ಲಿ ಹಿಜಾಬ್ ಇರಬೇಕಾ ಅಥವಾ ಸಮವಸ್ತ್ರ ಇರಬೇಕಾ? ಹಿಜಾಜ್ ಸಮವಸ್ತ್ರದ ಭಾಗವಾದ್ರೆ ಯಾರು ಪ್ರಶ್ನೆ ಮಾಡುವ ಅವಶ್ಯಕತೆ ಇಲ್ಲ. ಆದ್ರೆ ಸಮವಸ್ತ್ರದ ಭಾಗವಾಗದೆ ಇದ್ರೆ ಅದನ್ನ ಸರ್ಕಾರ ಹೇಗೆ ಸಮರ್ಥನೆ ಮಾಡುತ್ತೆ. ಕೆಲವು ಶಾಲೆಗಳಲ್ಲಿ ಅವರದ್ದೆ ಸಮವಸ್ತ್ರಗಳಿದೆ . ಸಮವಸ್ತ್ರಗಳನ್ನ ಶಾಲಾ ಕಾಲೇಜುಗಳು ನಿಗದಿ ಮಾಡಿರುತ್ತದೆ. ಅಂತಹ ಶಾಲೆಗಳಲ್ಲಿ ಹಿಜಾಬ್ ಸಮವಸ್ತ್ರದ ಭಾಗವಾದ್ರೆ ಯಾರು ಪ್ರಶ್ನೆ ಮಾಡುವಂತಿಲ್ಲ. ಆದ್ರೆ ಹಿಜಾಬ್ ಸಮವಸ್ತ್ರದ ಭಾಗವಾಗದೆ ಇದ್ರೆ ಸರ್ಕಾರ ಏನ್ ಹೇಳುತ್ತೆ ಈ ವಿಷಯದಲ್ಲಿ ಕೇಸರಿ ಧಾರ್ಮಿಕ ಚಿಹ್ನೆ ಅಲ್ಲ ಅಂತ ಹೇಳುವ ಅಧಿಕಾರ ಕೊಟ್ಟಿದ್ದು ಯಾರು? ನೀವೇನು ಧಾರ್ಮಿಕ ಪಂಡಿತರ? ನೀವು ಹಿಜಾಬ್ ಗೆ ಅನುಮತಿ ಕೊಟ್ಟು ಕೆಸರಿಗೆ ಅನುಮತಿ ಇಲ್ಲ ಎನ್ನುವುದರ ಅರ್ಥವೇನು? ಹಾಗಾದ್ರೆ ಕೇಸರಿ ಬಣ್ಣದ ಹಿಜಾಬ್ ಹಾಕಿ ಬಂದ್ರೆ ನೀವು ಹೊರಗೆ ಕಳಿಸುತ್ತೀರಾ? ಕೇಸರಿಗೆ ವಿರೋಧ ಯಾಕೆ ನಿಮ್ದು? ಎಂದು ಪ್ರಶ್ನಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಸ್ತೆಯಲ್ಲಿ ಬಿದ್ದಿದ್ದ ಮಗುವಿನ ಕತ್ತರಿಸಿದ ತಲೆ ತಿಂದ ನಾಯಿಗಳು; ವಾಕಿಂಗ್ ಹೋದವರಿಗೆ ಶಾಕ್ – Kannada News | Dogs eating Newborn Head in Bhadradri Kothagudem district Telangana Viral News

ಹೈದರಾಬಾದ್, ಮೇ 13: ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದವರು ಒಂದು ಕಡೆ ನಾಯಿಗಳ (Dogs) ಹಿಂಡು ನಿಂತಿರುವುದನ್ನು ಕಂಡು ಕುತೂಹಲದಿಂದ ಆ ಕಡೆ ಹೋದರು. ರಸ್ತೆಬದಿಯಲ್ಲಿ ಬಿದ್ದಿದ್ದ ಮಗುವಿನ ತುಂಡಾದ ತಲೆಯನ್ನು ಆ ನಾಯಿಗಳು ಕಚ್ಚಿ ಎಳೆದಾಡುತ್ತಿದ್ದವು. ಅದನ್ನು ನೋಡಿದ ಜನರು ಗಾಬರಿಯಿಂದ ಅಲ್ಲಿಂದ ಓಡಿಹೋದರು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರಿಗೂ ಆ ದೃಶ್ಯ ನೋಡಿ ಶಾಕ್ ಆಗಿತ್ತು. ಈ ರೀತಿ ಯಾರಾದರೂ ಪೋಷಕರು ಹಸುಗೂಸನ್ನು ಬಿಸಾಡಿ ಹೋಗಲು ಸಾಧ್ಯವೇ? ಎಮಬ ಅಚ್ಚರಿಯೂ ಮೂಡಿತ್ತು.

ಈ ಘಟನೆ ನಡೆದಿರುವುದು ತೆಲಂಗಾಣದ ಕೊಥಗುಡೆಮ್ ಜಿಲ್ಲೆಯ ಪಲೋಂಚ ಮಂಡಲದ ಬೊಲ್ಲೊರಿಗುಡೆಮ್‌ನಲ್ಲಿ. ಇಲ್ಲಿನ ಸ್ಥಳೀಯರು ಮಗುವಿನ ಕತ್ತರಿಸಿದ ತಲೆಯನ್ನು ಬೀದಿ ನಾಯಿಗಳು ಕಚ್ಚಿ ಎಳೆಯುತ್ತಿರುವುದನ್ನು ನೋಡಿದ ನಂತರ ಭಯಭೀತರಾಗಿದ್ದರು.

ಇದನ್ನೂ ಓದಿ: ವಿಷಕಾರಿ ಹಾವಿನಿಂದ 30 ಮಕ್ಕಳನ್ನು ಕಾಪಾಡಿ ಪ್ರಾಣ ಬಿಟ್ಟ ಬೀದಿ ನಾಯಿ ಕಾಳಿ!

ಮಗುವಿನ ಕೊಳೆತ ತಲೆಯನ್ನು ನಾಯಿಗಳು ತಿನ್ನುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ಮಗುವಿನ ತಲೆ ಎಲ್ಲಿಂದ ಅಲ್ಲಿಗೆ ಬಂದಿತು ಎಂಬುದು ಸ್ಪಷ್ಟವಾಗಿಲ್ಲ. ಮೃತ ಮಗುವಿನ ದೇಹ ಎಲ್ಲಿರಬಹುದು ಮತ್ತು ಮಗುವನ್ನು ಯಾರು ಎಸೆದು ಹೋಗಿರಬಹುದು ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.

ದುರ್ವಾಸನೆಯಿಂದಾಗಿ ಮನೆ ಮಾಲೀಕರು ಮತ್ತು ಕಾಲೋನಿಯ ನಿವಾಸಿಗಳು ಭಯಭೀತರಾಗಿದ್ದಾರೆ. ಮಗುವಿನ ಶವ ಎಲ್ಲಿಂದ ಬಂತು? ಯಾರಾದರೂ ಅಪರಿಚಿತ ವ್ಯಕ್ತಿ ಅದನ್ನು ಅಲ್ಲಿ ಎಸೆದಿದ್ದಾರೆಯೇ? ಅಥವಾ ಬೇರೆ ಏನಾದರೂ ಘಟನೆ ನಡೆದಿದೆಯೇ? ಈ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ. ಮಾಹಿತಿ ಪಡೆದ ನಂತರ, ಪೊಲೀಸರು ಸ್ಥಳಕ್ಕೆ ತಲುಪಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೋಪಿಗೆ ಪೂಜೆ ಮಾಡಿ ಕ್ಷಮೆ ಕೇಳಿದ ಖ್ಯಾತ ಹಾಸ್ಯನಟ ಆಲಿ – Kannada News | Comedian Ali asked apology for using goddess Lakshmi song in Ghar soap advertisement

ಗರ್ ಸೋಪಿನ ಜಾಹೀರಾತುಗಳು ಸಾಮಾಜಿಕ ಜಾಲತಾಣದಲ್ಲಿ (Social Media) ತುಂಬಿ ಹೋಗಿವೆ. ಸ್ಟಾರ್ ನಟರಲ್ಲದ ಆದರೆ ಜನಪ್ರಿಯತೆ ಹೊಂದಿರುವ ನಟ-ನಟಿಯರು ಹಲವಾರು ಮಂದಿ ಈ ಗರ್ ಸೋಪಿನ ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಈ ಸೋಪಿನಿಂದ ಕಪ್ಪಗಿರುವ ದೇಹದ ಬಣ್ಣ ಬಿಳಿ ಆಗುತ್ತದೆ ಎಂಬುದು ಈ ಸೋಪು ಕಂಪೆನಿಯ ವಾದ. ಆದರೆ ಇದೇ ಸೋಪಿನ ಜಾಹೀರಾತಿನಲ್ಲಿ ನಟಿಸಿ ತೆಲುಗಿನ ಬಲು ಜನಪ್ರಿಯ ಹಾಸ್ಯನಟರೊಬ್ಬರು ವಿವಾದಕ್ಕೆ ಸಿಲುಕಿದ್ದಾರೆ. ಬಳಿಕ ಕ್ಷಮೆಯನ್ನೂ ಕೋರಿದ್ದಾರೆ.

ಮೊಹಮ್ಮದ್ ಅಲಿ ಅಲಿಯಾಸ್ ಆಲಿ, ತೆಲುಗು ಚಿತ್ರರಂಗದ ಬಲು ಜನಪ್ರಿಯ ಹಾಸ್ಯನಟ. ಬ್ರಹ್ಮಾನಂದಂ ಬಳಿಕ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಹಾಸ್ಯನಟರೂ ಹೌದು ಆಲಿ. ಇತ್ತೀಚೆಗೆ ಇವರು ನಟಿಸಿರುವ ಗರ್ ಸೋಪಿನ ಜಾಹೀರಾತೊಂದು ಬಿಡುಗಡೆ ಆಗಿತ್ತು. ಜಾಹೀರಾತಿನಲ್ಲಿ ಆಲಿ, ಗರ್ ಸೋಪಿಗೆ ಪೂಜೆ ಮಾಡುತ್ತಿರುವ ದೃಶ್ಯವಿತ್ತು. ಹೀಗೆ ಪೂಜೆ ಮಾಡುವ ವೇಳೆ ಆಲಿ ಲಕ್ಷ್ಮಿ ದೇವಿಯ ಕುರಿತು ಹಾಡನ್ನು ಹಾಡುತ್ತಿದ್ದರು. ಅದೀಗ ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ತ್ರಿಶಾ ನಟನೆಯ ‘ಕರುಪ್ಪು’ ಸಿನಿಮಾಗೆ ವಿಶೇಷ ಅನುಮತಿ ನೀಡಿದ ಸಿಎಂ ವಿಜಯ್

ಆಲಿ ಅವರು ‘ದೇವುಡು ಚೇಸಿನ ಮನುಷುಲು’ ಸಿನಿಮಾನಲ್ಲಿ ಲಕ್ಷ್ಮಿ ದೇವಿನ ಅಪ್ಪಟ ಭಕ್ತನ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾನಲ್ಲಿ ಅವರು ಲಕ್ಷ್ಮಿ ದೇವಿಯ ಪೂಜಿಸುವಾಗ ಹಾಡೊಂದನ್ನು ಹಿನ್ನೆಲೆಯಲ್ಲಿ ಬಳಸಲಾಗಿತ್ತು. ಆ ಹಾಡು, ಆ ದೃಶ್ಯ ಮತ್ತು ಆಲಿ ನಟಿಸಿದ್ದ ಲಕ್ಷ್ಮಿದೇವಿಯ ಭಕ್ತನ ಪಾತ್ರ ಸಖತ್ ಹಿಟ್ ಆಗಿತ್ತು. ಅದೇ ಕಾರಣಕ್ಕೆ ಆಲಿ ಅವರು ಸೋಪಿನ ಜಾಹೀರಾತಿನಲ್ಲಿ ಅದನ್ನೇ ರೀ ಕ್ರಿಯೇಟ್ ಮಾಡಿದ್ದರು. ಆದರೆ ಹಿಂದೂಪರ ಸಂಘಟನೆಗಳ ಕೆಲ ಸದಸ್ಯರು, ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದು, ಸೋಪಿನ ಪೂಜೆಗೆ ಲಕ್ಷ್ಮಿ ದೇವಿಯ ಹಾಡು ಬಳಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಇದೀಗ ವಿಡಿಯೋ ಹಂಚಿಕೊಂಡಿರುವ ನಟ ಆಲಿ, ತಮ್ಮ ಕೃತ್ಯಕ್ಕೆ ಕ್ಷಮೆ ಕೇಳಿದ್ದಾರೆ. ‘ಕಂಪೆನಿಯವರು ಹೇಳಿದ್ದಕ್ಕ ನಾನು ನನ್ನದೇ ಹಳೆಯ ಸಿನಿಮಾದ ಬಿಟ್ ಅನ್ನು ತುಸು ಬದಲಾಯಿಸಿ ಮಾಡಿದೆ. ಆದರೆ ಜಾಹೀರಾತು ನೋಡಿದ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಕೂಡಲೇ ಆ ಜಾಹೀರಾತನ್ನು ಡಿಲೀಟ್ ಮಾಡಿದ್ದೇವೆ. ಕಂಪೆನಿ ಸಹ ಅದನ್ನು ಡಿಲೀಟ್ ಮಾಡಿದೆ. ಯಾರಿಗಾದರೂ ಆ ಜಾಹೀರಾತಿನಿಂದ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇವೆ’ ಎಂದಿದ್ದಾರೆ ಆಲಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 10:29 pm, Wed, 13 May 26

Source link

ಮಗಳೊಟ್ಟಿಗೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದರು ದಿಲೀಪ್ ರಾಜ್: ವಿಡಿಯೋ – Kannada News | Dileep Raj’s old video dancing with daughter getting viral

ಸಿನಿಮಾ (Cinema) ಮತ್ತು ಟಿವಿ ಲೋಕದಲ್ಲಿ ಜನಪ್ರಿಯರಾಗಿದ್ದ ನಟ ದಿಲೀಪ್ ರಾಜ್ ಇಂದು (ಮೇ 13) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ ಕೇವಲ 47 ವರ್ಷ ವಯಸ್ಸಾಗಿತ್ತು. ಬಹುಮುಖ ಪ್ರತಿಭೆ ಹೊಂದಿದ್ದ ದಿಲೀಪ್ ಅವರು ಒಳ್ಳೆಯ ನಟ ಆಗಿರುವ ಜೊತೆಗೆ ಒಳ್ಳೆಯ ನೃತ್ಯಗಾರ ಸಹ ಆಗಿದ್ದರು. ನಿಧನ ಹೊಂದುವ ಕೆಲ ತಿಂಗಳ ಮೊದಲ ಮಗಳೊಟ್ಟಿಗೆ ಸೇರಿ ಸಖತ್ ಆಗಿ ಡ್ಯಾನ್ಸ್ ಮಾಡಿದ್ದರು ದಿಲೀಪ್. ಇಲ್ಲಿದೆ ನೋಡಿ ಆ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಬೆಂಗಳೂರಿನಲ್ಲಿ 2,384 ಕೋಟಿ ರೂ. ನಕಲಿ ಜಿಎಸ್‌ಟಿ ಜಾಲ ಪತ್ತೆ: ಇಬ್ಬರು ಕಿಂಗ್‌ಪಿನ್‌ಗಳ ಬಂಧನ! – Kannada News | Karnataka Tax Dept Uncovers Massive 2384 Cr Fake ITC Fraud in Bengaluru

ಬೆಂಗಳೂರು, ಮೇ.13: ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯು ರಾಜ್ಯದ ರಾಜಧಾನಿಯಲ್ಲಿ ಭಾರಿ ಪ್ರಮಾಣದ ನಕಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ವಂಚನೆ ಜಾಲವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಸುಮಾರು 2,384 ಕೋಟಿ ರೂ. ಮೊತ್ತದ ಈ ನಕಲಿ ಜಾಲಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ಅಧಿಕಾರಿಗಳು ಬಂಧಿಸಿದ್ದಾರೆ.

ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗ (ದಕ್ಷಿಣ ವಲಯ) ಹಾಗೂ ಸೇವಾ ವಿಶ್ಲೇಷಣೆ ಮತ್ತು ಗುಪ್ತಚರ ವಿಭಾಗದ ಅಧಿಕಾರಿಗಳು ಅತ್ಯಂತ ಚಾಣಾಕ್ಷತನದಿಂದ ಈ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತ ಆರೋಪಿಗಳು ನಕಲಿ ಕಂಪನಿಗಳನ್ನು ಸೃಷ್ಟಿಸಿ, ಯಾವುದೇ ಸರಕು ಅಥವಾ ಸೇವೆಗಳ ಪೂರೈಕೆ ಮಾಡದೆಯೇ ಬಿಲ್‌ಗಳನ್ನು ಸೃಷ್ಟಿಸುವ ಮೂಲಕ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸುತ್ತಿದ್ದರು.

ಇದನ್ನೂ ಓದಿ: ಕೋಲಾರ ಗಡಿಯಲ್ಲಿ ಭಾರಿ ಪ್ರಮಾಣದ ಲೈವ್ ಬುಲೆಟ್ ಪತ್ತೆ: 1969ರ ಬ್ಯಾಚ್‌ನ ಗುಂಡುಗಳನ್ನು ವಶಪಡಿಸಿಕೊಂಡ ಪೊಲೀಸರು

ನಕಲಿ ಐಟಿಸಿ ಹಗರಣಗಳಿಗೆ ಸಂಬಂಧಿಸಿದಂತೆ ವಾಣಿಜ್ಯ ತೆರಿಗೆ ಇಲಾಖೆಯು ಈ ವರ್ಷ ತನಿಖೆಯನ್ನು ತೀವ್ರಗೊಳಿಸಿದ್ದು, ಈ ಇಬ್ಬರ ಬಂಧನದೊಂದಿಗೆ ಈ ವರ್ಷ ಒಟ್ಟು ಬಂಧಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ತೆರಿಗೆ ವಂಚಕರ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ ಎಂದು ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಕೆಕೆಆರ್ ವಿರುದ್ಧ ಕಣಕ್ಕಿಳಿದು ಇತಿಹಾಸ ನಿರ್ಮಿಸಿದ ವಿರಾಟ್ ಕೊಹ್ಲಿ

Source link

ಅಂಜನಾದ್ರಿ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರ ವಿವಾದಕ್ಕೆ ತೆರೆ, ಜನಾರ್ದನ ರೆಡ್ಡಿ ನಿರಾಳ – Kannada News | Anjanadri Temple Gold Row: hyderabad businessman Donates real Gold clarified By gangavathi tahsildar

ಕೊಪ್ಪಳ, (ಮೇ 13): ಜಿಲ್ಲೆಯ ಅಂಜನಾದ್ರಿಯ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರದ ಆಭರಣಗಳ ಕುರಿತು ಹರಿದಾಡುತ್ತಿದ್ದ ವದಂತಿಗೆ ಕೊನೆಗೂ ತೆರೆ ಬಿದ್ದಿದೆ. ಗಂಗಾವತಿ ಶಾಸಕ‌ ಜನಾರ್ದನರೆಡ್ಡಿ ಆಪ್ತ ಉದ್ಯಮಿ ಮಹೇಶ ರೆಡ್ಡಿ ಅವರು ನೀಡಿದ್ದ ಬಂಗಾರ ನಕಲಿ ಎಂದು ಸುದ್ದಿ ಹರಿದಾಡಿದ್ದು, ಇದರ ಬೆನ್ನಲ್ಲೇ ಕೂಲಂಕಷವಾಗಿ ಪರಿಶೀಲನೆ ಮಾಡಲಾಗಿದೆ. ಈ ವೇಳೆ 1400 ಗ್ರಾಂ ಬಂಗಾರದಲ್ಲಿ 1280 ಗ್ರಾಂ ಬಂಗಾರ ಸಂಪೂರ್ಣ ಅಸಲಿ ಎಂದು ಸಾಬೀತಾಗಿದೆ.

ಉದ್ಯಮಿ ಮಹೇಶ ರೆಡ್ಡಿ ಒಟ್ಟು 1400 ಗ್ರಾಂ ಬಂಗಾರ ಆಭರಣಗಳು ನೀಡಿದ್ದು, ಇದರಲ್ಲಿ 120 ಗ್ರಾಂ ವೇಸ್ಟೇಜ್ ತೆಗೆದು 1280 ಗ್ರಾಂ ಬಂಗಾರ ಸಂಪೂರ್ಣ ಅಸಲಿಯದ್ದು ಎಂದು ವಾಸ್ತುಶಿಲ್ಪಿ ಗುಂಡಾಚಾರಿ ಸ್ಥಪತಿ ತಿಳಿಸಿದ್ದಾರೆ. ಬಳಿಕ ಗಂಗಾವತಿ ತಹಶಿಲ್ದಾರ್, ಎಲ್ಲಾ ಬಂಗಾರವನ್ನು ಸ್ವೀಕಾರ ಮಾಡಿ ಖಜಾನೆಗೆ ಕಳುಹಿಸಿದರು. ಇನ್ನು ಆಪ್ತ ನೀಡಿದ್ದ ಚಿನ್ನ ಅಸಲಿ ಎಂದು ಸಾಬೀತಾಗುತ್ತಿದ್ದಂತಯೇ ಶಾಸಕ‌ ಜನಾರ್ದನರೆಡ್ಡಿ ನಿರಾಳರಾಗಿದ್ದಾರೆ.

ಇದನ್ನೂ ಓದಿ: 2.5 ಕೋಟಿ ರೂ. ಮೌಲ್ಯದ ಆಭರಣದಲ್ಲಿ ಇರೋದು ಬರೀ 28 ಗ್ರಾಂ ಬಂಗಾರ! ಅಂಜನಾದ್ರಿ ದೇಣಿಗೆಯಲ್ಲಿ ಮಹಾ ಗೋಲ್‌ಮಾಲ್?

Source link