All posts by nagaraj11081993

Video: ಪೈಲ್ಸ್​ ಆಪರೇಷನ್ ಆಗಿದ್ದಕ್ಕೆ ಸಾಕ್ಷ್ಯ ಕೇಳಿದ ಹಿರಿಯ ಅಧಿಕಾರಿ, ಪ್ಯಾಂಟ್ ಬಿಚ್ಚಿ ಗಾಯ ತೋರಿಸಿದ ರೈಲ್ವೆ ಸಿಬ್ಬಂದಿ – Kannada News | Heated Scene in Lucknow Rail Unit After Staffer Asked to Prove Surgery

ಲಕ್ನೋ, ಮಾರ್ಚ್​ 05: ರೈಲ್ವೆ ಸಿಬ್ಬಂದಿಯೊಬ್ಬರಿಗೆ ಪೈಲ್ಸ್​ ಆಪರೇಷನ್ ಮಾಡಲಾಗಿತ್ತು. ಗಾಯ ವಾಸಿಯಾಗದ ಕಾರಣ ಕುಳಿತುಕೊಳ್ಳಲು ಆಗುತ್ತಿಲ್ಲ, ರಜೆ ಕೊಡಿ ಎಂದು ಹಿರಿಯ ಅಧಿಕಾರಿ ಬಳಿ ಮನವಿ ಮಾಡಿದ್ದರು. ಆಗ ಅಧಿಕಾರಿಯೊಬ್ಬರು ನಿನಗೆ ಆಪರೇಷನ್ ಆಗಿದೆ ಎಂಬುದಕ್ಕೆ ಏನು ಸಾಕ್ಷಿ ಇದೆ ಸಅಕ್ಷಿ ತೋರಿಸು ಬಳಿಕ ರಜೆ ಬಗ್ಗೆ ಮಾತನಾಡೋಣ ಎಂದಿದ್ದಾರೆ. ಅದಕ್ಕೆ ಬೇಸರಲ್ಲಿ ಸಿಬ್ಬಂದಿ ತಮ್ಮ ಪ್ಯಾಂಟ್ ಬಿಚ್ಚಿ ಆಪರೇಷನ್ ಆಗಿರುವ ಜಾಗವನ್ನು ತೋರಿಸಿರುವ ವಿಡಿಯೋ ವೈರಲ್ ಆಗಿದ್ದು, ಹಿರಿಯ ಅಧಿಕಾರಿಯ ವರ್ತನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಲಕ್ನೋದಲ್ಲಿ ನಡೆದಿದೆ. ಲೋಕೋ ಪೈಲಟ್ ರಾಜೇಶ್ ಮೀನಾ ಮೂಲವ್ಯಾಧಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಲಕ್ನೋದಲ್ಲಿ ನಡೆದ ಶಸ್ತ್ರಚಿಕಿತ್ಸೆಗಾಗಿ ಮೀನಾ ಅವರಿಗೆ ಫೆಬ್ರವರಿ 22 ರಿಂದ 28 ರವರೆಗೆ ರಜೆ ನೀಡಲಾಗಿದೆ. ಆದರೆ, ನಿಗದಿತ ಸಮಯದೊಳಗೆ ಅವರ ಗಾಯ ಮಾಗದ ಕಾರಣ ರಜೆ ವಿಸ್ತರಿಸುವಂತೆ ಮನವಿ ಮಾಡಿದ್ದರು.ಬಳಿಕ ಸಿಬ್ಬಂದಿ ತಮ್ಮ ಪ್ಯಾಂಟ್ ಬಿಚ್ಚಿ ಗಾಯವನ್ನು ತೋರಿಸಿದ್ದಾರೆ. ಇದಾದ ಬಳಿಕ ರೈಲ್ವೆ ಆರೋಗ್ಯ ಘಟಕಕ್ಕೆ ಭೇಟಿ ನೀಡಿದ ನಂತರ, ವೈದ್ಯರು ಅವರನ್ನು ಪರೀಕ್ಷಿಸಿದರು ಮತ್ತು ಅವರು ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ದೃಢಪಡಿಸಿದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅಲ್ಲು ಅರ್ಜುನ್ ಕುಟುಂಬ ಸೇರುತ್ತಿರುವ ಈ ನಯಾನಿಕಾ ಯಾರು? ಇದೆ ದೊಡ್ಡ ಉದ್ಯಮ – Kannada News | Who is Nayanika Reddy? Allu Sirish to Marry Prominent Businesswoman, Allu Family’s New Member

ದಕ್ಷಿಣ ಭಾರತದ ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅವರ ಸಹೋದರ ಅಲ್ಲು ಸಿರೀಶ್ (Allu Sirish) ವಿವಾಹವಾಗುತ್ತಿದ್ದಾರೆ. ಅಲ್ಲು ಅರ್ಜುನ್ ಅವರ ಭಾವಿ ಅತ್ತಿಗೆ ನಯಾನಿಕಾ ರೆಡ್ಡಿ ಯಾರು ಎಂದು ಎಲ್ಲರೂ ಹುಡುಕುತ್ತಿದ್ದಾರೆ. ಅಲ್ಲು ಅರ್ಜುನ್ ಕುಟುಂಬ ತುಂಬಾನೇ ದೊಡ್ಡದು. ಹೀಗಾಗಿ, ಇವರ ವಿವಾಹ ಆಗುತ್ತಿರುವ ಹುಡುಗಿ ಕೂಡ ದೊಡ್ಡ ಕುಟುಂಬದವರೇ ಆಗಿರುತ್ತಾರೆ ಎಂಬ ಬಗ್ಗೆ ಅನುಮಾನ ಬೇಡ. ಈ ಮದುವೆಗಾಗಿ ಅಲ್ಲು ಅರ್ಜುನ್ ಕುಟುಂಬ ಸಾಕಷ್ಟು ಹಣವನ್ನು ಖರ್ಚು ಮಾಡಿದೆ.

ಅಲ್ಲು ಅರ್ಜುನ್ ಅವರ ಸಹೋದರ ಅಲ್ಲು ಸಿರೀಶ್ ವಿವಾಹವಾಗುತ್ತಿದ್ದು, ಅವರ ವಿವಾಹಪೂರ್ವ ಕಾರ್ಯಕ್ರಮಗಳು ಅದ್ದೂರಿಯಾಗಿ ಆರಂಭವಾಗಿವೆ. ಅಲ್ಲು ಸಿರೀಶ್ ಮತ್ತು ನಯನಿಕಾ ರೆಡ್ಡಿ ಮಾರ್ಚ್ 6ರಂದು ವಿವಾಹವಾಗಲಿದ್ದಾರೆ. ಹೈದರಾಬಾದ್​ ಅಲ್ಲಿ ಈ ವಿವಾಹ ಜರುಗಲಿದೆ.

ಅಲ್ಲು ಅರ್ಜುನ್ ಅವರ ಅತ್ತಿಗೆ ನಯಾನಿಕಾ ರೆಡ್ಡಿ ಹೈದರಾಬಾದ್‌ನವರಾಗಿದ್ದು, ಉದ್ಯಮಿಯಾಗಿದ್ದಾರೆ. ನಯಾನಿಕಾ ಅವರ ಕುಟುಂಬವೂ ದೊಡ್ಡ ವ್ಯವಹಾರವನ್ನು ಹೊಂದಿದೆ. ಅವರಿಗೆ ಚಿತ್ರರಂಗದೊಂದಿಗೆ ಯಾವುದೇ ಸಂಬಂಧವಿಲ್ಲ. ಅದೇ ರೀತಿ, ಅವರು ಹೆಚ್ಚು ಸುದ್ದಿಯಲ್ಲಿರಲು ಇಷ್ಟಪಡುವುದಿಲ್ಲ.

ನಯಾನಿಕಾ ತನ್ನ ಕುಟುಂಬ ವ್ಯವಹಾರವನ್ನು ನಡೆಸುತ್ತಾ ಇದ್ದಾರೆ. ಅಲ್ಲು ಸಿರೀಶ್ ಜೊತೆ ವಿವಾಹವಾಗುವ ಮೊದಲು ಅವರು ಹೆಚ್ಚು ಪರಿಚಿತರಾಗಿರಲಿಲ್ಲ. ಅವರು ಸಾಮಾಜಿಕ ಮಾಧ್ಯಮದಲ್ಲಿಯೂ ಹೆಚ್ಚು ಸಕ್ರಿಯರಾಗಿಲ್ಲ. ತೆಲುಗು ನಟರಾದ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಅವರ ವಿವಾಹ ಪೂರ್ವ ಪಾರ್ಟಿಯಲ್ಲಿ ನಯಾನಿಕಾ ಮತ್ತು ಅಲ್ಲು ಸಿರೀಶ್ ಮೊದಲು ಭೇಟಿಯಾದರು ಎನ್ನಲಾಗಿದೆ.

ಇದನ್ನೂ ಓದಿ: ಕೊರಿಯಾಕ್ಕೆ ಹೋಗಿ ಶಾಕ್ ಆದ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್

ವಿವಾಹ ಪೂರ್ವ ಪಾರ್ಟಿಯ ನಂತರ, ನಯಾನಿಕಾ ಮತ್ತು ಅಲ್ಲು ಸಿರೀಶ್ ಕ್ರಮೇಣ ಒಳ್ಳೆಯ ಸ್ನೇಹಿತರಾದರು ಮತ್ತು ಈ ಸ್ನೇಹ ಪ್ರೀತಿಗೆ ತಿರುಗಿತು. 2025ರಲ್ಲಿ, ಅಲ್ಲು ಸಿರೀಶ್ ನಯಾನಿಕಾ ಜೊತೆಗಿನ ಫೋಟೋವನ್ನು ಪೋಸ್ಟ್ ಮಾಡಿದರು. ಅಂದಿನಿಂದ, ಇವರ ನಿಶ್ಚಿತಾರ್ಥದ ವದಂತಿಗಳು ಹಬ್ಬಿದವು. ಇಬ್ಬರೂ ಕಳೆದ ವರ್ಷ ಅಕ್ಟೋಬರ್ 31ರಂದು ನಿಶ್ಚಿತಾರ್ಥ ಮಾಡಿಕೊಂಡರು. ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಶುಭ ಸುದ್ದಿಯನ್ನು ಹಂಚಿಕೊಂಡರು. ನಯಾನಿಕಾ ಮತ್ತು ಅಲ್ಲು ಸಿರೀಶ್ ಹೊಸ ಜೀವನವನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Horoscope Today 5​th​​ March​: ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ತೃಪ್ತಿ

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್​ 5​, ಗುರುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ,ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಕೃಷ್ಣ ಪಕ್ಷ ಬಿದಿಗೆ, ಉತ್ತರಾ ನಕ್ಷತ್ರ, ಶೂಲ ಯೋಗ, ಗರ್ಜ ಕರಣದ ಈ ದಿನದ ರಾಹುಕಾಲ ಮಧ್ಯಾಹ್ನ 1:59 ರಿಂದ 3:27 ರ ತನಕ ಇರಲಿದೆ. ಶುಭಕಾಲ ಮಧ್ಯಾಹ್ನ 12:31 ರಿಂದ 1:59 ರ ತನಕ ಇರಲಿದೆ.

ಇಂದು ಕೋಲಕುಡಿ ಕಾಳಿಕಾಂಬ ಉತ್ಸವ, ಕೊಳಗದಾಳ ಉತ್ಸವ ಹಾಗೂ ಸಂತ ತುಕಾರಾಮರ ಪುಣ್ಯದಿನದ ಉತ್ಸವ ನಡೆಯಲಿದೆ. ಕಳಲೆಯಲ್ಲಿ ರಥೋತ್ಸವ ಕೂಡ ಇರಲಿದೆ. ರವಿ ಕುಂಭ ರಾಶಿಯಲ್ಲಿ ಮತ್ತು ಚಂದ್ರ ಕನ್ಯಾ ರಾಶಿಯ ಉತ್ತರಾ ನಕ್ಷತ್ರದಲ್ಲಿ ಸಂಚಾರ ಮಾಡುತ್ತಿದ್ದಾರೆ. ಡಾ. ಗುರೂಜಿ ಅವರು ಪ್ರತಿಯೊಂದು ರಾಶಿಯವರಿಗೂ ಆರ್ಥಿಕ ಪ್ರಗತಿ, ವೃತ್ತಿ ಸಂತೃಪ್ತಿ, ಆರೋಗ್ಯ, ಕೌಟುಂಬಿಕ ಸಂಬಂಧಗಳು, ಪ್ರಯಾಣ ಯೋಗ, ಅದೃಷ್ಟದ ಬಣ್ಣ, ಸಂಖ್ಯೆ ಮತ್ತು ಜಪಿಸಬೇಕಾದ ಮಂತ್ರಗಳ ಬಗ್ಗೆ ಗುರೂಜಿ ವಿವರಣೆ ನೀಡಿದ್ದಾರೆ.

 

Source link

ಇಷ್ಟೆಲ್ಲ ಆದ್ರೂ ಕೆವಿಎನ್​​ಗೆ ಇಲ್ಲ ಚಿಂತೆ; ಕೈಯಲ್ಲಿವೆ ಇನ್ನೂ ಹಲವು ಬಿಗ್ ಬಜೆಟ್ ಸಿನಿಮಾಗಳು – Kannada News | KVN Productions Unfazed by Film Delays: Mega Budget Projects and Strategic Planning

ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಬೇಕು ಎಂದರೆ ಅದು ಸುಲಭದ ಮಾತಲ್ಲ. ಸಾಕಷ್ಟು ರಿಸ್ಕ್ ಇರುತ್ತದೆ. ಒಂದು ಬಿಗ್ ಬಜೆಟ್ ಸಿನಿಮಾ ನಿರ್ಮಾಣ ಮಾಡುವಾಗಲೇ ಕೆಲವರು ಸುಸ್ತಾಗಿಬಿಡುತ್ತಾರೆ. ಆದರೆ, ಕನ್ನಡದ ‘ಕೆವಿಎನ್​ ಪ್ರೊಡಕ್ಷನ್ಸ್’ ಒಟ್ಟೊಟ್ಟಿಗೆ ಹಲವು ಬಿಗ್ ಬಜೆಟ್ ಚಿತ್ರಗಳನ್ನು ನಿರ್ಮಿಸುತ್ತಿದೆ. ಈ ನಿರ್ಮಾಣ ಸಂಸ್ಥೆಯ ಬತ್ತಳಿಕೆಯಲ್ಲಿ ಇನ್ನೂ ಕೆಲವು ಸಿನಿಮಾಗಳು ಇವೆ. ಹಾಗಾದರೆ ಯಾವುದು ಆ ಚಿತ್ರ? ಸಿನಿಮಾಗಳು ಮುಂದಕ್ಕೆ ಹೋಗಿದ್ದರಿಂದ ಸಂಸ್ಥೆಗೆ ಏನಾದರೂ ತೊಂದರೆ ಆಯಿತೇ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದಾಗ ಅಂದುಕೊಂಡ ದಿನಾಂಕದಂದು ಅದನ್ನು ರಿಲೀಸ್ ಮಾಡೋಕೆ ಸಾಧ್ಯ ಇಲ್ಲ ಎಂಬ ಐಡಿಯಾ ನಿರ್ಮಾಣ ಸಂಸ್ಥೆಗೆ ಇದ್ದೇ ಇರುತ್ತದೆ. ಅದರಲ್ಲೂ ‘ಜನ ನಾಯಗನ್’, ‘ಟಾಕ್ಸಿಕ್’ ರೀತಿಯ ಸಿನಿಮಾಗಳನ್ನು ಮಾಡುವಾಗ ಎದುರಾಗಬಹುದಾದ ಅಡೆತಡೆಗಳ ಬಗ್ಗೆ ನಿರ್ಮಾಣ ಸಂಸ್ಥೆ ಮೊದಲೇ ಆಲೋಚಿಸಿರುತ್ತದೆ. ಅದಕ್ಕೆ ತಕ್ಕಂತೆಯೇ ಉಳಿದೆಲ್ಲ ಸಿದ್ಧತೆಗಳು ನಡೆದಿರುತ್ತವೆ.

ಈಗಾಗಲೇ ಪ್ರೀ ಬಿಸ್ನೆಸ್​​ನಿಂದ ಸಾಕಷ್ಟು ಹಣ ಬಂದಿರುವುದರಿಂದ ನಿರ್ಮಾಣ ಸಂಸ್ಥೆ ಚಿಂತಿಸುತ್ತಿಲ್ಲ ಎನ್ನಲಾಗಿದೆ.
‘ಜನ ನಾಯಗನ್’ ಸಿನಿಮಾ ರಿಲೀಸ್ ಮುಂದಕ್ಕೆ ಹೋಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಸೆನ್ಸಾರ್ ಸಮಸ್ಯೆಯಿಂದ ಚಿತ್ರವನ್ನು ಮುಂದಕ್ಕೆ ಹಾಕಲಾಯಿತು. ಇದಕ್ಕೆ ರಾಜಕೀಯ ಶಕ್ತಿಗಳು ಕೆಲಸ ಮಾಡಿರಬಹುದು ಎಂದು ಊಹಿಸಲಾಗುತ್ತಿದೆ. ‘ಟಾಕ್ಸಿಕ್’ ಸಿನಿಮಾ ವಿಳಂಬಕ್ಕೆ ವಿಶ್ವದಲ್ಲಿ ನಡೆಯುತ್ತಿರುವ ಯುದ್ಧಭೀತಿ ಕಾರಣ. ತರಾತುರಿ ಮಾಡುವ ಬದಲು ಸ್ವಲ್ಪ ಕಾದು ರಿಲೀಸ್ ಮಾಡೋಣ ಎಂಬ ತಂತ್ರ ತಂಡದ್ದು. ಸದ್ಯದ ಪ್ಲ್ಯಾನ್ ಪ್ರಕಾರ, ಏಪ್ರಿಲ್ ಅಲ್ಲಿ ‘ಕೆಡಿ’, ಮೇ ತಿಂಗಳಲ್ಲಿ ‘ಜನ ನಾಯಗನ್’ ಹಾಗೂ ಜೂನ್ ಅಲ್ಲಿ, ‘ಟಾಕ್ಸಿಕ್’ ರಿಲೀಸ್ ಮಾಡುವ ಆಲೋಚನೆಯಲ್ಲಿ ನಿರ್ಮಾಣ ಸಂಸ್ಥೆ ಇದೆ.

ಇದನ್ನೂ ಓದಿ: ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡಿಕೆ ನಿರ್ಧಾರಕ್ಕೆ ಕಾರಣವೇನು?

ಈ ಮೂರು ಸಿನಿಮಾಗಳ ಹೊರತಾಗಿ ಇನ್ನೂ ಕೆಲವು ಚಿತ್ರಗಳು ನಿರ್ಮಾಣ ಸಂಸ್ಥೆ ಕೈಯಲ್ಲಿದೆ. ಬಾಲಿವುಡ್​​ನಲ್ಲಿ ಅಕ್ಷಯ್ ಕುಮಾರ್ ಜೊತೆ ಸಿನಿಮಾ ಮಾಡುತ್ತಿದೆ. ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಮಲಯಾಳಂನಲ್ಲಿ ‘ಮಂಜುಮೇಲ್​ ಬಾಯ್ಸ್’ ಟೀಂ ಜೊತೆ ಇವರು ಸಿನಿಮಾ ಮಾಡುತ್ತಿದ್ದು, ಕೆಲಸಗಳು ಸಾಗುತ್ತಿವೆ. ಇನ್ನು, ಟಾಲಿವುಡ್​​ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರ 158ನೇ ಚಿತ್ರದ ಕೆಲಸ ಕೂಡ ಇನ್ನಷ್ಟೇ ಆರಂಭ ಆಗಬೇಕಿದ್ದು, ಇದಕ್ಕೆ ಕೆವಿಎನ್ ಬಂಡವಾಳ ಹೂಡತ್ತಿದೆ. ಇನ್ನೂ ಕೆಲವು ಸಿನಿಮಾಗಳು ಮಾತುಕತೆ ಹಂತದಲ್ಲಿ ಇವೆಯಂತೆ. ಸಿನಿಮಾಗಳಿಗಾಗಿಯೇ ಸರಿ ಸುಮಾರು 2000 ಕೋಟಿ ರೂಪಾಯಿಯನ್ನು ಈ ಸಂಸ್ಥೆ ಹೂಡಿಕೆ ಮಾಡಿದೆ ಎಂಬುದು ನಿರ್ಮಾಣ ಸಂಸ್ಥೆಯ ಹೆಚ್ಚುಗಾರಿಕೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Nepal Elections: ಇಂದು ನೇಪಾಳದಲ್ಲಿ ಸಾರ್ವತ್ರಿಕ ಚುನಾವಣೆ, ಜೆನ್​ ಝಿ ಚಳವಳಿ ಬಳಿಕ ಮೊದಲ ಬಾರಿಗೆ ಮತದಾನ – Kannada News | Nepal Elections: Nepal Decides, India Watches: Stakes Behind the March 5 Polls

ಕಠ್ಮಂಡು, ಮಾರ್ಚ್​ 05: ನೇಪಾಳ(Nepal)ದಲ್ಲಿ ಇಂದು ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಗಳು ದೇಶದ ರಾಜಕೀಯಕ್ಕೆ ನಿರ್ಣಾಯಕವೆಂದು ಪರಿಗಣಿಸಲಾಗಿದೆ. ಮತಪೆಟ್ಟಿಗೆಗಳನ್ನು ಸಂಗ್ರಹಿಸಿದ 24 ಗಂಟೆಗಳ ಒಳಗೆ 65 ಫಸ್ಟ್-ಪಾಸ್ಟ್-ದಿ-ಪೋಸ್ಟ್ (ಎಫ್‌ಪಿಪಿ) ಸ್ಥಾನಗಳ ಫಲಿತಾಂಶಗಳನ್ನು ಘೋಷಿಸಲು ಪ್ರಯತ್ನಿಸಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ.

ಪಿಆರ್ ಅಡಿಯಲ್ಲಿ ನಿರ್ಧರಿಸಲಾದ 110 ಸ್ಥಾನಗಳ ಎಣಿಕೆಯು ಎರಡರಿಂದ ಮೂರು ದಿನಗಳನ್ನು ತೆಗೆದುಕೊಳ್ಳಬಹುದು.2022ರಲ್ಲಿ ಫಲಿತಾಂಶವನ್ನು ಅಂತಿಮಗೊಳಿಸಲು ಎರಡು ವಾರಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಲಾಗಿತ್ತು. ನೇಪಾಳವನ್ನು ಏಳು ಪ್ರಾಂತ್ಯಗಳನ್ನಾಗಿ ವಿಂಗಡಿಸಲಾಗಿದೆ. ಕೋಶಿ, ಮಾಧೇಶ್, ಬಾಗ್ಮತಿ, ಗಂಡಕಿ, ಲುಂಬಿನಿ, ಕರ್ನಾಲಿ ಮತ್ತು ಸುದುರ್​ಪಶ್ಚಿಮ್. ಈ ಎಲ್ಲಾ ಪ್ರದೇಶಗಳಲ್ಲಿ ಇಂದು ಮತದಾನ ನಡೆಯಲಿದೆ. ಹಲವಾರು ಪ್ರಮುಖ ಪಕ್ಷಗಳು ಮತ್ತು ಹೊಸ ರಾಜಕೀಯ ಗುಂಪುಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಿವೆ.

ಪ್ರಮುಖ ಪಕ್ಷಗಳಲ್ಲಿ ರಾಷ್ಟ್ರೀಯ ಸ್ವತಂತ್ರ ಪಕ್ಷ (RSP), ನೇಪಾಳಿ ಕಾಂಗ್ರೆಸ್, ನೇಪಾಳ ಕಮ್ಯುನಿಸ್ಟ್ ಪಕ್ಷ (UML), ನೇಪಾಳ ಕಮ್ಯುನಿಸ್ಟ್ ಪಕ್ಷ (NCP), ರಾಷ್ಟ್ರೀಯ ಪ್ರಜಾತಂತ್ರ ಪಕ್ಷ (RPP), ಜನತಾ ಸಮಾಜವಾದಿ ಪಕ್ಷ-ನೇಪಾಳ (PSP-N), ಜನ್ಮತ್ ಪಕ್ಷ ಮತ್ತು ಏಕೀಕೃತ ರಾಷ್ಟ್ರೀಯ ಪಕ್ಷ (UNP) ಸೇರಿವೆ. ಹಲವಾರು ಸಣ್ಣ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ಸಹ ಸ್ಪರ್ಧಿಸುತ್ತಿದ್ದಾರೆ.

ನೇಪಾಳದ ಜನರು ಇಂದು ಮಾರ್ಚ್ 5 ರಂದು ತಮ್ಮ ಹೊಸ ಸರ್ಕಾರವನ್ನು ಆಯ್ಕೆ ಮಾಡಲಿದ್ದಾರೆ. ಚುನಾವಣಾ ಆಯೋಗವು ಚುನಾವಣೆಗೆ ವಿಸ್ತಾರವಾದ ಭದ್ರತಾ ವ್ಯವಸ್ಥೆಗಳನ್ನು ಮಾಡಿದೆ, 300,000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದೆ. ಚುನಾವಣೆಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಹಂಗಾಮಿ ಚುನಾವಣಾ ಆಯುಕ್ತ ರಾಮ್ ಪ್ರಸಾದ್ ಭಂಡಾರಿ ತಿಳಿಸಿದ್ದಾರೆ.
ಮತಪೆಟ್ಟಿಗೆಗಳನ್ನು ಸಂಗ್ರಹಿಸಿದ ತಕ್ಷಣ ಎಣಿಕೆ ಪ್ರಾರಂಭವಾಗುತ್ತದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಹಿಂಸಾತ್ಮಕ ಯುವ ಪ್ರತಿಭಟನೆಗಳ ನಡುವೆ ಕೆ.ಪಿ. ಶರ್ಮಾ ಓಲಿ ಅವರ ಸರ್ಕಾರದ ಪತನದ ನಂತರ ಈ ಚುನಾವಣೆ ನಡೆಯುತ್ತದೆ.

ಮತ್ತಷ್ಟು ಓದಿ: ನೇಪಾಳದಲ್ಲಿ ಮಿತಿ ಮೀರಿದ ಹಿಂಸಾಚಾರ; ಪ್ರತಿಭಟನಾಕಾರರಿಂದ ಮಾಜಿ ಪ್ರಧಾನಿಯ ಪತ್ನಿಯ ಸಜೀವ ದಹನ!

ಪ್ರಮುಖ ಮುಖಗಳು
ಕೆ.ಪಿ. ಶರ್ಮಾ ಓಲಿ: ನೇಪಾಳದ ಮಾಜಿ ಪ್ರಧಾನಿ ಮತ್ತು ಕಮ್ಯುನಿಸ್ಟ್ ಪಕ್ಷದ (ಯುಎಂಎಲ್) ಪ್ರಮುಖ ನಾಯಕ. ವಿವಾದಗಳ ಹೊರತಾಗಿಯೂ, ಅವರು ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ.

ಗಗನ್ ಥಾಪಾ: ನೇಪಾಳಿ ಕಾಂಗ್ರೆಸ್‌ನ ಪ್ರಭಾವಿ ನಾಯಕ. ಭ್ರಷ್ಟಾಚಾರ ನಿರ್ಮೂಲನೆ ಮತ್ತು ಉದ್ಯೋಗ ಹೆಚ್ಚಿಸುವತ್ತ ಅವರ ಗಮನ.

ಬಾಲೆನ್ ಶಾ: ಈ ಚುನಾವಣೆಯಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ಹೊಸ ಮುಖ. ಹಿಂದೆ ಕಠ್ಮಂಡುವಿನ ಜನಪ್ರಿಯ ಮೇಯರ್ ಆಗಿದ್ದ ಬಾಲೆನ್ ಶಾ, ಮಾಜಿ ರ‍್ಯಾಪರ್ ಮತ್ತು ಸಿವಿಲ್ ಎಂಜಿನಿಯರ್. ಅವರು ಸುಧಾರಣಾವಾದಿ ನಾಯಕರಾಗಿ ಖ್ಯಾತಿಯನ್ನು ಹೊಂದಿದ್ದಾರೆ ಮತ್ತು ವಿಶೇಷವಾಗಿ ಯುವ ಮತ್ತು ನಗರ ಮತದಾರರಲ್ಲಿ ಜನಪ್ರಿಯರಾಗಿದ್ದಾರೆ.

ನೇಪಾಳದ ಚುನಾವಣಾ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ?
ನೇಪಾಳದ ಸರಿಸುಮಾರು 30 ಮಿಲಿಯನ್ ಜನಸಂಖ್ಯೆಯಲ್ಲಿ, 19 ಮಿಲಿಯನ್ ಮತದಾರರು ಹೊಸ ಸರ್ಕಾರವನ್ನು ಆಯ್ಕೆ ಮಾಡಲು ತಮ್ಮ ಮತಗಳನ್ನು ಚಲಾಯಿಸುತ್ತಾರೆ. 275 ಸದಸ್ಯರ ಪ್ರತಿನಿಧಿ ಸಭೆ ಅಥವಾ ಸಂಸತ್ತಿನಲ್ಲಿ 165 ಸ್ಥಾನಗಳಿಗೆ ಮತ ಚಲಾಯಿಸಲಾಗುವುದು. ಮತದಾರರು ನೇರವಾಗಿ 165 ಸದಸ್ಯರನ್ನು ಆಯ್ಕೆ ಮಾಡುತ್ತಾರೆ, ಉಳಿದ 110 ಸ್ಥಾನಗಳನ್ನು ಪಕ್ಷಗಳಿಗೆ ಅವರ ಮತ ಹಂಚಿಕೆಗೆ ಅನುಗುಣವಾಗಿ ನೀಡಲಾಗುತ್ತದೆ.

ಈ ಚುನಾವಣೆ ಏಕೆ ಮುಖ್ಯ?
ಕಳೆದ ಒಂದು ವರ್ಷದಿಂದ ನೇಪಾಳ ರಾಜಕೀಯ ಪ್ರಕ್ಷುಬ್ಧತೆಯನ್ನು ಅನುಭವಿಸುತ್ತಿರುವ ಸಮಯದಲ್ಲಿ ಈ ಚುನಾವಣೆ ನಡೆಯುತ್ತಿದೆ. ಸೆಪ್ಟೆಂಬರ್ 2025 ರಲ್ಲಿ, ಭ್ರಷ್ಟಾಚಾರ, ನಿರುದ್ಯೋಗ ಮತ್ತು ರಾಜಕೀಯ ವ್ಯವಸ್ಥೆಯ ವಿರುದ್ಧ ಬೃಹತ್ Gen-Z ಪ್ರತಿಭಟನೆಗಳು ನಡೆದವು. ವಿಶೇಷವಾಗಿ ಯುವಕರು ಸರ್ಕಾರದ ವಿರುದ್ಧ ಪ್ರತಿಭಟಿಸಲು ಬೀದಿಗಿಳಿದರು.

ಈ ಪ್ರತಿಭಟನೆಗಳು ಹಿಂಸಾಚಾರ ಮತ್ತು ಘರ್ಷಣೆಗಳಿಗೆ ಕಾರಣವಾದವು, ಇದರಿಂದಾಗಿ ಪ್ರಧಾನಿ ರಾಜೀನಾಮೆ ನೀಡಬೇಕಾಯಿತು. ಬಳಿಕ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆಯಾಯಿತು, ಅವರು ಆರು ತಿಂಗಳೊಳಗೆ ಚುನಾವಣೆ ನಡೆಸುವುದಾಗಿ ಭರವಸೆ ನೀಡಿದ್ದರು. ಮಾರ್ಚ್ 5 ರಂದು ನಿಗದಿಯಾಗಿರುವ ಚುನಾವಣೆ ಆ ಭರವಸೆಯ ಭಾಗವಾಗಿದೆ.

ನೇಪಾಳ ಚುನಾವಣೆ ಭಾರತಕ್ಕೆ ಏಕೆ ಮುಖ್ಯ?

ನೇಪಾಳದಲ್ಲಿನ ರಾಜಕೀಯ ಬದಲಾವಣೆಗಳು ಭಾರತದ ಕಾರ್ಯತಂತ್ರ, ಆರ್ಥಿಕ ಮತ್ತು ಭದ್ರತಾ ಹಿತಾಸಕ್ತಿಗಳ ಮೇಲೆ ನೇರ ಪರಿಣಾಮ ಬೀರುವುದರಿಂದ ನೇಪಾಳದ ಚುನಾವಣೆಗಳ ಫಲಿತಾಂಶವನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತದೆ.

ನೇಪಾಳದ ಚುನಾವಣೆಗಳು ಭಾರತಕ್ಕೆ ಮುಖ್ಯ ಏಕೆಂದರೆ ಅವು ಪ್ರಾದೇಶಿಕ ಸ್ಥಿರತೆ, ಭದ್ರತೆ, ಆರ್ಥಿಕ ಸಹಕಾರ ಮತ್ತು ದಕ್ಷಿಣ ಏಷ್ಯಾದಲ್ಲಿನ ವಿಶಾಲ ಭೌಗೋಳಿಕ ರಾಜಕೀಯ ಸಮತೋಲನದ ಮೇಲೆ ಪ್ರಭಾವ ಬೀರುತ್ತವೆ.

ಲಕ್ಷಾಂತರ ನೇಪಾಳಿಗಳು ಭಾರತದಲ್ಲಿ ವಾಸಿಸುತ್ತಿದ್ದಾರೆ ಮತ್ತು ಕೆಲಸ ಮಾಡುತ್ತಿದ್ದಾರೆ, ಮತ್ತು ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಬಂಧಗಳು ಗಡಿಯ ಎರಡೂ ಬದಿಗಳಲ್ಲಿರುವ ಸಮುದಾಯಗಳನ್ನು ಬೆಸೆಯುತ್ತವೆ.
ಭಾರತವು ನೇಪಾಳದಲ್ಲಿ ಹಲವಾರು ಜಲವಿದ್ಯುತ್ ಮತ್ತು ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ ಮಾಡಿದೆ. ಮುಂದಿನ ನೇಪಾಳಿ ಸರ್ಕಾರದ ವಿಧಾನವು ಈ ಯೋಜನೆಗಳು ಎಷ್ಟು ಬೇಗನೆ ಮುಂದುವರೆಯುತ್ತವೆ ಮತ್ತು ಹೊಸ ಒಪ್ಪಂದಗಳಿಗೆ ಸಹಿ ಹಾಕಲಾಗುತ್ತದೆಯೇ ಎಂಬುದನ್ನು ನಿರ್ಧರಿಸುತ್ತದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Daily Devotional: ದೇವಾಲಯಗಳಲ್ಲಿ ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು? – Kannada News | Lunar Eclipse March 05​: How Many Pradakshinas for Which Deity?

ಬೆಂಗಳೂರು, ಮಾರ್ಚ್​​ 05​: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ದೇವಾಲಯಗಳಲ್ಲಿ ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ದೇವಾಲಯಗಳಲ್ಲಿ ಪ್ರದಕ್ಷಿಣೆ ಹಾಕುವ ಸಂಪ್ರದಾಯವು ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿದೆ. ಸಾಮಾನ್ಯವಾಗಿ, ಭಕ್ತರು ದೇವರಿಗೆ ಮೂರು ಪ್ರದಕ್ಷಿಣೆಗಳನ್ನು ಹಾಕುತ್ತಾರೆ. ಇದಕ್ಕೆ ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣಗಳೆರಡೂ ಇವೆ. ಮೂರು ಪ್ರದಕ್ಷಿಣೆಗಳು ತ್ರಿಗುಣಗಳಾದ ಸತ್ವ, ರಜಸ್, ತಮಸ್ ಹಾಗೂ ಮತ್ಸ್ಯಲೋಕ, ಸ್ವರ್ಗಲೋಕ, ಪಾತಾಳಲೋಕಗಳ ಸಂಕೇತವಾಗಿವೆ. ಇದು ಭಗವಂತನಿಗೆ ಕಾಯ, ವಾಚ, ಮನಸಗಳಿಂದ ಶರಣಾಗತಿಯನ್ನು ಸೂಚಿಸುತ್ತದೆ.

ಆದರೆ, ಕೆಲವು ನಿರ್ದಿಷ್ಟ ದೇವರುಗಳಿಗೆ ಪ್ರದಕ್ಷಿಣೆಯ ಸಂಖ್ಯೆಯು ಭಿನ್ನವಾಗಿರುತ್ತದೆ. ಉದಾಹರಣೆಗೆ, ಗಣಪತಿಗೆ ಒಂದು ಪೂರ್ಣ ಪ್ರದಕ್ಷಿಣೆ, ಶಿವನಿಗೆ ಅರ್ಧ ಪ್ರದಕ್ಷಿಣೆ ಸಾಕು. ದೇವಿಯ ದೇವಸ್ಥಾನಗಳಲ್ಲಿ ನಾಲ್ಕು ಪ್ರದಕ್ಷಿಣೆಗಳನ್ನು ಮಾಡುವುದು ರೂಢಿ. ಸೂರ್ಯ ಭಗವಾನರಿಗೆ ಆತ್ಮ ನಮಸ್ಕಾರದ ರೂಪದಲ್ಲಿ ಏಳು ಸುತ್ತು ಸುತ್ತುವುದರಿಂದ ಪರಿಪೂರ್ಣ ಅನುಗ್ರಹ ದೊರೆಯುತ್ತದೆ ಎಂಬ ನಂಬಿಕೆ ಇದೆ. ಪ್ರದಕ್ಷಿಣೆಗಳು ಕೇವಲ ಒಂದು ಆಚರಣೆಯಾಗದೆ, ನಮ್ಮ ಭಕ್ತಿ ಮತ್ತು ಸಮರ್ಪಣೆಯನ್ನು ವ್ಯಕ್ತಪಡಿಸುವ ಮಾರ್ಗವಾಗಿವೆ ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.

Source link

ಹೇಗಿದ್ದಾರೆ ನೋಡಿ ರಶ್ಮಿಕಾ ತಂದೆ-ತಾಯಿ, ತಂಗಿ; ರಿಸೆಪ್ಶನ್​ ಅಲ್ಲಿ ಗಮನ ಸೆಳೆದ ಫ್ಯಾಮಿಲಿ ಫೋಟೋ

Source link

ದುಬೈನಿಂದ ಬೆಂಗಳೂರಿಗೆ ಬಂದಿಳಿದ 5ನೇ ವಿಮಾನ: 3 ದಿನಗಳಲ್ಲಿ 1,500 ಮಂದಿ ಸುರಕ್ಷಿತವಾಗಿ ವಾಪಸ್ – Kannada News | 5th Flight from Dubai Lands in Bengaluru; 1,500 Indians Return Safely in 3 Days Amid Iran Israel War

3 ದಿನಗಳಲ್ಲಿ 1,500 ಮಂದಿ ಸುರಕ್ಷಿತವಾಗಿ ವಾಪಸ್Image Credit source: tv9

ಬೆಂಗಳೂರು, ಮಾರ್ಚ್ 5: ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿ ದಾಳಿಯಿಂದ ದುಬೈ, ಅಬುಧಾಬಿ, ಜೆದ್ದಾ, ದೋಹಾ ಸೇರಿ ಹಲವೆಡೆ ವಿಮಾನ ನಿಲ್ದಾಣಗಳು ಬಂದ್ ಆಗಿವೆ. ಅಲ್ಲಿನ ಏರ್‌ಪೋರ್ಟ್‌ಗಳಲ್ಲೇ ಸಿಕ್ಕಿಹಾಕಿರುವ ಆಗಿರುವ ಸಾವಿರಾರು ಜನ ಪ್ರಯಾಣಿಕರನ್ನು ಕಳೆದ ಸೋಮವಾರ ರಾತ್ರಿಯಿಂದ ಎಮಿರೇಟ್ಸ್, ಎತಿಹಾದ್ ಮತ್ತು ಇಂಡಿಗೋ ಏರ್ಲೈನ್ಸ್‌ಗಳ ಮೂಲಕ ಬೆಂಗಳೂರಿಗೆ (Bangalore) ಕರೆತರಲಾಗುತ್ತಿದೆ. ದಿನಕ್ಕೆ ಒಂದು ಅಥವಾ ಎರಡು ವಿಮಾನಗಳು ದುಬೈ ಮತ್ತ ಅಬುಧಾಬಿಯಿಂದ ಬೆಂಗಳೂರಿಗೆ ಟೇಕ್ ಆಫ್ ಆಗುತ್ತಿವೆ. ತವರಿಗೆ ಬರಲು ನಾ ಮುಂದು ತಾ ಮುಂದು ಎಂದು ಪ್ರಯಾಣಿಕರು ಮುಗಿಬೀಳುತ್ತಿದ್ದಾರೆ. ಮಂಗಳವಾರ ರಾತ್ರಿ 5ನೇ ವಿಮಾನದಲ್ಲಿ 246 ಮಂದಿ ತಾಯ್ನಾಡಿಗೆ ಬಂದಿಳಿದಿದ್ದಾರೆ.

ಇನ್ನು ಅಮೆರಿಕಗೆ ತೆರಳುತ್ತಿದ್ದ ಮಹಿಳೆಯೊಬ್ಬರು ಫ್ಲೈಟ್‌ ಕ್ಯಾನ್ಸಲ್‌ ಆಗಿದ್ದರಿಂದ ದುಬೈನಲ್ಲೇ ಸಿಲುಕಿಕೊಂಡಿದ್ದರು. ಇದೀಗ ಯುಎಸ್‌ಗೆ ತೆರಳದೆ ಬೆಂಗಳೂರಿಗೆ ವಾಪಸ್‌ ಆಗಿದ್ದಾರೆ.

ಮತ್ತೊಂದೆಡೆ ಯುಎಸ್‌ನಿಂದ ಬಂದು ದುಬೈನಲ್ಲಿ 2 ದಿನ ಪ್ರವಾಸ ಮುಗಿಸಿ ಬರುವ ಪ್ಲ್ಯಾನ್‌ನಲ್ಲಿದ್ದವರು ವಿಧಿಯಿಲ್ಲದೆ ಬೆಂಗಳೂರಿಗೆ ಮರಳಿದ್ದಾರೆ.

ಇದನ್ನೂ ಓದಿ: ಇರಾನ್- ಇಸ್ರೇಲ್ ಯುದ್ಧದಿಂದ ತೈಲ ಬೆಲೆ ಏರಿಕೆ ಸುದ್ದಿ: ಭಟ್ಕಳದಲ್ಲಿ ಡೀಸೆಲ್, ಪೆಟ್ರೋಲ್​​ಗೆ ಮುಗಿಬಿದ್ದ ಜನ

ಕಳೆದ ಸೋಮವಾರ 2ನೇ ತಾರೀಕು ರಾತ್ರಿ 9.40ಕ್ಕೆ ಬಂದ ಮೊದಲ ಫ್ಲೈಟ್‌ನಲ್ಲಿ 213 ಜನ ವಾಪಸ್ ಆಗಿದ್ದರೆ, 3ನೇ ತಾರೀಕು ಮುಂಜಾನೆ 3 ಗಂಟೆಗೆಬಂದ 2ನೇ ಫ್ಲೈಟ್‌ನಲ್ಲಿ 490 ಜನ, ಹಾಗೇ ಅದೇ ದಿನ ಸಂಜೆ 7 ಗಂಟೆಗೆ ಬಂದ 3ನೇ ಫ್ಲೈಟ್‌ನಲ್ಲಿ 350 ಮಂದಿ, ನಾಲ್ಕನೇ ತಾರೀಕು ಮಧ್ಯರಾತ್ರಿ 1 ಗಂಟೆಗೆ ಬಂದ ಫ್ಲೈಟ್‌ನಲ್ಲಿ 200 ಜನ, ಉಳಿದಂತೆ ಬುಧವಾರ ಸಂಜೆ 7 ಗಂಟೆಗೆ ಬಂದ ವಿಮಾನದಲ್ಲಿ 246 ಪ್ರಯಾಣಿಕರು ವಾಪಸಾಗಿದ್ದು ಈವರೆಗೆ 1500 ಮಂದಿ ಸುರಕ್ಷಿತವಾಗಿ ಮರಳಿದ್ದಾರೆ.

ಸೀಮಿತ ವಿಮಾನಗಳು ದುಬೈನಿಂದ ಬರುತ್ತಿರುವುದರಿಂದ ಇನ್ನೂ ಸಾಕಷ್ಟು ಕನ್ನಡಿಗರು ಅಲ್ಲಿನ ಏರ್‌ಪೋರ್ಟ್‌ಗಳಲ್ಲೇ ಸಿಲುಕಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನ ಭವಿಷ್ಯ: ಇಂದು ಈ ರಾಶಿಯವರು ಅಪಪ್ರಚಾರದಿಂದ ಗೆಲ್ಲುವುದು ಕಷ್ಟ – Kannada News | Horoscope March 05 Thursday 2026; Dina Rashi Bhavishya Today, Checkout the details here

ಮೇಷ ರಾಶಿ:

ನಿಮ್ಮ ಕೋಪವನ್ನು ಮಾತಿನಿಂದ ಹೊರಹಾಕಲಾರಿರಿ. ಇಂದು ನಿಮ್ಮ ಮಾತುಗಳಿಗೆ ತೂಕವು ಕಡಿಮೆ ಆಗಬಹುದು. ಸ್ಥಾನಕ್ಕಾಗಿ ನೀವು ಎದುರುನೋಡುತ್ತಿದ್ದರೆ ನಿಮಗೆ ಅದು ಸಿಗಬಹುದು. ಕಷ್ಟದ ಸಮಯದಲ್ಲಿ ಆಪ್ತರು ನಿಮ್ಮನ್ನು ಬೆಂಬಲಿಸುತ್ತಾರೆ. ಪ್ರಭಾವೀ ವ್ಯಕ್ತಿಗಳ ಒತ್ತಡಕ್ಕೆ ಕೊನೆಗೂ ಶರಣಾಗಬೇಕಾಗುವುದು. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಮುಂದಡಿ ಇಡುವಿರಿ. ನಿಮ್ಮನ್ನು ಇಷ್ಟಪಟ್ಟವರ ಜೊತೆ ಸಮಯವನ್ನು ಕಳೆಯುವಿರಿ. ಹೊಸ ವಸ್ತುಗಳು ಖರೀದಿಯಿಂದ ತೃಪ್ತಿ ಸಿಗುವುದು.

ವೃಷಭ ರಾಶಿ:

ಯಾರ ಮಾತೂ ನಿಮಗೆ ಸಾಂತ್ವನವನ್ನು ನೀಡದು. ಹಿರಿಯರ ಮೂಲಕ ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ. ಹಿಂದೆ ಬಾಕಿ ಇರುವ ಹಣವನ್ನು ವಸೂಲಿ ಮಾಡಲಾಗುತ್ತದೆ. ಐಷಾರಾಮಿ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ. ನಿಮ್ಮ ಇಂದಿನ ಕಾರ್ಯದಲ್ಲಿ ಸಾವಧಾನತೆ ಇರಲಿದೆ. ಯಾರದೋ ಸುದ್ದಿಯನ್ನು ಮತ್ಯಾರಿಗೋ ಹೇಳುತ್ತ ಸಮಯವನ್ನು ಕಳೆಯುವಿರಿ. ಕಲಾವಿದರು ಸನ್ಮಾನಕ್ಕೆ ಭಾಜರಾಗುವರು. ಹಣಕಾಸಿನ ವಿಚಾರದಲ್ಲಿ ಬಹಳ ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ.

ಮಿಥುನ ರಾಶಿ:

ಹೂಡಿಕೆಗಳತ್ತ ಸರಿಯಾಗಿ ಗಮನ ಹರಿಸಿ. ಆರ್ಥಿಕ ನೆರವು ಸಾಕಾಗುವುದಿಲ್ಲ. ನಿಮ್ಮ ಆದ್ಯತೆಗಳನ್ನು ಮೃದುವಾಗಿ ವ್ಯಕ್ತಪಡಿಸಿ. ಕೆಲಸಗಳು ಆತುರದಿಂದ ನಡೆಯುತ್ತಿವೆ. ಸಂಗತಿಯನ್ನು ಹಣಕ್ಕಾಗಿ ಪೀಡಿಸುವಿರಿ.ಇಷ್ಟವಿಲ್ಲದ ಕಡೆ ಬಲವಂತವಾಗಿ ಹೋಗುವಿರಿ. ಆಪ್ತರು ನೀಡಿದ ವಸ್ತುವನ್ನು ಕಳೆದುಕೊಳ್ಳುವಿರಿ. ಅತಿಥಿಗಳ ಆಗಮನದಿಂದ ಸಂತೋಷವಾಗುವುದು. ನಿಮ್ಮ ಬಲದ ಪ್ರದರ್ಶನವನ್ನು ಮಾಡುವಿರಿ. ಸಂಗಾತಿಯ ಜೊತೆ ಸಣ್ಣ ವಿಚಾರಕ್ಕೂ ಕಲಹ ಮಾಡಿಕೊಳ್ಳುವಿರಿ. ಹೂಡಿಕೆಯ ಬಗ್ಗೆ ಸರಿಯಾದ ನಿರ್ಧಾರವಿರಲಿ.

ಕರ್ಕಾಟಕ ರಾಶಿ:

ನಿರೀಕ್ಷೆಗಳು ನಿಜವಾಗುತ್ತವೆ. ಕೆಲಸಗಳು ಸ್ಥಿರವಾಗಿ ಪೂರ್ಣಗೊಳ್ಳುತ್ತವೆ. ದಾಖಲೆಗಳಲ್ಲಿನ ಬದಲಾವಣೆಗಳು ಅನುಕೂಲಕರವಾಗಿರುತ್ತವೆ. ಎಲ್ಲರೊಂದಿಗೆ ಮಿತವಾಗಿ ಮಾತನಾಡಿ. ಮನೆಯಲ್ಲಿ ಆಸ್ತಿಯ ವಿಚಾರವಾಗಿ ಸಣ್ಣ ಬಿರುಸಿನ ಮಾತುಗಳು ಕೇಳಿಬರಬಹುದು. ನಿಮ್ಮ ಮೌನವು ಅಸಹಾಯಕತೆಯನ್ನು ತೋರಿಸಬಹುದು. ನಿಮ್ಮ ಕಾರ್ಯದಲ್ಲಿ ಉದ್ದೇಶವು ಸ್ಪಷ್ಟವಾಗಿ ಇರಲಿ. ಕೆಲಸವು ಪೂರ್ಣವಾಗದೇ ಒದ್ದಾಡಿಕೊಂಡು ಇಂದಿನ ಕೆಲಸವನ್ನು ಮಾಡುವಿರಿ. ಸಂಗಾತಿಯ ಕೋಪವನ್ನು ನೀವು ಕಡಿಮೆ ಮಾಡುವಿರಿ.

ಸಿಂಹ ರಾಶಿ:

ಪ್ರೀತಿಪಾತ್ರರ ಆಗಮನವು ಸಂತೋಷವನ್ನು ತರುತ್ತದೆ. ಅವಕಾಶಗಳನ್ನು ತಕ್ಷಣವೇ ಬಳಸಿಕೊಳ್ಳಿ. ನಿಮ್ಮ ಮಾತನ್ನು ನಿಯಂತ್ರಿಸಿ. ಅಸಹಜ ವರ್ತನೆಯ ಬಗ್ಗೆ ನೀವು ಏನನ್ನೂ ಹೇಳುವುದು ಬೇಡ. ಮಕ್ಕಳಿಂದ ನಿಮಗೆ ಆರ್ಥಿಕ ನೆರವು ಸಿಗುವುದು. ನೀವು ಇಂದು ವಿದ್ಯುತ್ ಉಪಕರಣದ ಮಾರಟಗಾರರಾಇದ್ದರೆ ಅಧಿಕ ಲಾಭವು ಸಿಗುವುದು. ಸಾರ್ವಜನಿಕವಾಗಿ ಹೆಚ್ಚು ಪ್ರಭಾವ ಉಳ್ಳವರಾಗಿದ್ದು ಗೌರವವು ಸಿಗಲಿದೆ. ಬೆಳವಣಿಗೆಗೆ ಅವಕಾಶಗಳು ಸಿಕ್ಕರೂ ಅದು ನಿಮಗೆ ಸರಿಯಾಗದು.

ಕನ್ಯಾ ರಾಶಿ:

ನೀವು ಎಲ್ಲರನ್ನೂ ಸಮಾನವಾಗಿ ನಡೆಸಿಕೊಳ್ಳುತ್ತೀರಿ. ಕೈಗೊಂಡ ಕೆಲಸಗಳು ಸಕ್ರಿಯವಾಗಿ ಮುಂದುವರಿಯುತ್ತವೆ. ಸಂಬಂಧಿಕರು ಮತ್ತು ಸ್ನೇಹಿತರ ಭೇಟಿ ಸಾಧ್ಯತೆ. ನಿಮ್ಮ ಬಗ್ಗೆ ಯಾವುದನ್ನೂ ಹೇಳಿಕೊಳ್ಳದೇ ಮಾಡುವ ಕಾರ್ಯದ ಕಡೆ ಗಮನ ಇರಲಿ. ಹಣಕಾಸಿನ ವಿಚಾರಕ್ಕೆ ಅಪವಾದ ಬರಬಹುದು. ನಿಮ್ಮನ್ನು ಪರೋಕ್ಷವಾಗಿ ಯಾರದರೂ ನಿವಾರಿಸಬಹುದು. ಸಂಗಾತಿಯ ಮಾತಿಗೆ ನೀವು ಉತ್ತರಿಸಲಾರಿರಿ. ನಿಮ್ಮ ಲಾಭಾಂಶದ ಕೆಲವು ಭಾಗವನ್ನು ನೀವು ದಾನ ಮಾಡುವಿರಿ.

ತುಲಾ ರಾಶಿ:

ನಿಮ್ಮ ಅಮೂಲ್ಯ ದಾಖಲೆಗಳ ವಿಚಾರದಲ್ಲಿ ಜಾಗರೂಕರಾಗಿರಿ. ಟೀಕೆಗಳನ್ನು ನಿರ್ಲಕ್ಷಿಸಿ. ಶುಭ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೀರಿ. ನಿಮಗೆ ಬೇಡದ ವಸ್ತುಗಳನ್ನು ನೀವು ಇನ್ನೊಬ್ಬರಿಗೆ ದಾನವಾಗಿ ಕೊಡುವಿರಿ. ಯಾರಿಂದಲೋ ಪ್ರೇರಿತರಾಗಿ ಆಸ್ತಿಯನ್ನು ಪಡೆಯುವ ಹುನ್ನಾರ ನಡೆಸುವಿರಿ. ಕೆಲಸಗಳಲ್ಲಿ ನೀವು ಜಯವನ್ನು ಸಾಧಿಸಬಹುದು. ಸೊಂಟದ ನೋವು ಅಧಿಕವಾಗಿ ಕಾಡಬಹುದು. ಸಂಗಾತಿಯ ಮೇಲೆ ಯಾರದೋ ಕಾರಣಕ್ಕೆ ಮುನಿಸಿಕೊಳ್ಳುವಿರಿ.

ವೃಶ್ಚಿಕ ರಾಶಿ:

ನಿಮ್ಮ ಆಲೋಚನೆಗಳಲ್ಲಿ ಬದಲಾವಣೆ ಉಂಟಾಗಲಿದೆ. ನಿಮ್ಮ ವೃತ್ತಿಯಲ್ಲಿ ಭವಿಷ್ಯವನ್ನು ಹೆಚ್ಚಿಸಲು ನಿಮ್ಮ ಪರಿಣತಿಯನ್ನು ಬಳಸಿ. ಇಂದು ನಿಮ್ಮ ಮಾರ್ಗದರ್ಶನವನ್ನು ಕೇಳಿಕೊಂಡು ಬರಬಹುದು. ಇಂದಿನ ನಿಮ್ಮ ಕೆಲಸಗಳು ಬಹಳ ವಿಳಂಬವಾಗುದು. ಶಿಸ್ತಿನ ವ್ಯವಹಾರವನ್ನು ಬಿಡದೇ ಮುಂದುವರಿಸುವಿರಿ. ನಿಮ್ಮ ಬಳಿ ಇರುವ ವಸ್ತುಗಳನ್ನು ಬಳಸಿಕೊಂಡು ನಿಮ್ಮ ಕಾರ್ಯವನ್ನು ಪೂರೈಸಿಕೊಳ್ಳಿ. ಹೊಸ ವಸ್ತುವಿಗೆ ಧನವನ್ನು ವ್ಯಯಮಾಡುವುದು ಬೇಡ.

ಧನು ರಾಶಿ:

ಮೇಲಾಧಿಕಾರಿಗಳಿಗೆ ನಿಮ್ಮ ಮೇಲೆ ಕೆಲವು ತಪ್ಪುಕಲ್ಪನೆ ಇರಬಹುದು. ಯಾವುದೇ ವಿಚಾರದಲ್ಲಿ ಅನಗತ್ಯ ಹಸ್ತಕ್ಷೇಪ ಸೂಕ್ತವಲ್ಲ. ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡಿ. ಕುಟುಂಬದಲ್ಲಿ ನಿಮ್ಮ ಪ್ರಾಮುಖ್ಯವು ಅರಿವಿಗೆ ಬರಬಹುದು. ಬೇಡದ ಆಲೋಚನೆಯನ್ನು ದೂರಮಾಡಿಕೊಳ್ಳಿ. ಉದ್ಯೋಗವನ್ನು ಬಿಡುವ ಸಂದರ್ಭವೂ ಬರಬಹುದು. ಮನೋ ವ್ಯಥೆಯನ್ನು ಯಾರ ಬಳಿಯಾದರೂ ಹೇಳಿಕೊಳ್ಳುವಿರಿ. ಸಂಬಂಧಗಳಲ್ಲಿ ವಿಷಮತೆ ಕಾಣಿಸಿಕೊಂಡೀತು. ನಿಮ್ಮ ಗುರಿಯನ್ನು ತಲುಪಲು ಬೇರೆ ಮಾರ್ಗವನ್ನೂ ಅನುಸರಿಸುವಿರಿ.

ಮಕರ ರಾಶಿ:

ಸರಿಯಾದ ಹೊಂದಾಣಿಕೆಯನ್ನು ಮಾಡಿಕೊಳ್ಳುವಿರಿ. ಆತ್ಮೀಯ ಸಂಬಂಧವು ಕಾರಣಾಂತರಗಳಿಂದ ಕಡಿತವಾಗಿದ್ದು ನೀವು ಪುನಃ ಸ್ಥಾಪಿಸಿಕೊಂಡು ಎಂದಿನಂತೆ ನೆಮ್ಮದಿಯಿಂದ ಇರುವಿರಿ. ಯಾರಾದರೂ ರಾಜಕೀಯ ವ್ಯಕ್ತಿಗಳ ಸಂಪರ್ಕವನ್ನು ನೀವು ಮಾಡುವಿರಿ. ದೈವದ ಮೇಲೆ ಭಕ್ತಿ ಉಂಟಾದೀತು. ಸ್ತ್ರೀಯರು ತಾಳ್ಮೆಯನ್ನು ಕಳೆದುಕೊಂಡು ಕೂಗಾಡಬಹುದು. ನಿಮ್ಮ ಅಭಿಪ್ರಾಯವನ್ನು ಹೇಳಬೇಕಾದಲ್ಲಿ ಹೇಳುವ ರೀತಿಯಲ್ಲಿ ಹೇಳಿ.

ಕುಂಭ ರಾಶಿ:

ಪ್ರೀತಿಪಾತ್ರರಿಗೆ ಆರ್ಥಿಕ ನೆರವು ನೀಡುತ್ತೀರಿ. ನಿಮ್ಮ ಒಳಗೊಳ್ಳುವಿಕೆಯಿಂದ ಸಮಸ್ಯೆ ಸಕಾರಾತ್ಮಕವಾಗುತ್ತದೆ. ಸ್ನೇಹ ಸಂಬಂಧ ಬಲಗೊಳ್ಳುತ್ತವೆ. ಸಂಗಾತಿಯ ಬೇಸರವನ್ನು ಮಾತುಗಳಿಂದ ಸರಿಮಾಡುವಿರಿ. ಅಮೂಲ್ಯ ವಸ್ತುವಿನ ಲಾಭದಿಂದ ಸಂತಸವಾಗಲಿದೆ. ಬಹಳ ದಿನಗಳಿಂದ ನಡೆಯುತ್ತಿದ್ದ ನ್ಯಾಯಾಲಯದ ವ್ಯವಹಾರವನ್ನು ಮುಕ್ತಾಯ ಮಾಡಿಕೊಳ್ಳುವಿರಿ. ಮಿತ್ರರೆಂದು ಹೇಳಿಕೊಂಡು ಯಾರಾದರೂ ಬರಬಹುದು. ಸರಿಯಾದ ಮೂಲದಿಂದ ಬಂದ ಸುದ್ದಿ ಮಾತ್ರ ನಂಬಲು ಅರ್ಹವಾಗಿರುವುದು.

ಮೀನ ರಾಶಿ:

ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಹೂಡಿಕೆಗಳು ಹೆಚ್ಚಾಗುವುದಿಲ್ಲ. ಬೇಜವಾಬ್ದಾರಿ ನಿರ್ಧಾರಗಳು ಹಾನಿಯನ್ನುಂಟುಮಾಡಬಹುದು. ಅನುಭವಿ ಜನರ ಸಲಹೆಯನ್ನು ಅನುಸರಿಸಿ. ಎದರುರಾಗು ಅಡ್ಡಿ, ಆತಂಕಗಳನ್ನು ನೀವು ಅನಾಯಾಸವಾಗಿ ದೂರ ಸರಿಸುವಿರಿ. ನಿಮ್ಮ ಇಂದಿನ ಶ್ರಮಕ್ಕೆ ತಕ್ಕುದಾದ ಫಲವು ಸಿಗಬಹುದು. ಭೂಮಿಯ ವ್ಯಾಪಾರದಲ್ಲಿ ಜಯವಾಗಲಿದೆ. ಇಂದು ಸರ್ಕಾರಿ ಕೆಲಸಕ್ಕೆ ಓಡಾಟ ಮಾಡುವಿರಿ. ನಿಮಗೆ ಕೆಲಸದಲ್ಲಿ ಅನೇಕ ಗೊಂದಲಗಳು ಇರಬಹುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಕುಂಭ, ಮಹಾನಕ್ಷತ್ರ : ಪೂರ್ವಾಭಾದ್ರ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಉತ್ತರಾಫಲ್ಗುಣೀ, ಯೋಗ : ಶೂಲಿ, ಕರಣ : ಗರಜ, ಸೂರ್ಯೋದಯ – 06 – 39 am, ಸೂರ್ಯಾಸ್ತ – 06 – 32 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 14:05 – 15:34, ಯಮಗಂಡ ಕಾಲ 06:40 – 08:09, ಗುಳಿಕ ಕಾಲ 09:38 – 11:07

-ಲೋಹಿತ ಹೆಬ್ಬಾರ್ – 8762924271 (what’s app only)

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 5ರ ದಿನಭವಿಷ್ಯ

ಮನೆಯನ್ನು ಒರೆಸುವ ನೀರಿಗೆ ಸ್ವಲ್ಪ ಕಲ್ಲು ಉಪ್ಪನ್ನು ಸೇರಿಸಿ. ಇದು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು (Negative Energy) ದೂರ ಮಾಡುತ್ತದೆ. ವಿನಾಕಾರಣ ಜಗಳ- ಕಲಹ ಆಗುತ್ತಿದ್ದಲ್ಲಿ ಆ ಸಮಸ್ಯೆ ನಿವಾರಣೆ ಆಗುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನಿಮ್ಮ ಸಮಯಪ್ರಜ್ಞೆ ನಿರ್ಧಾರಗಳಿಗೆ ಇತರರು ಅಚ್ಚರಿ ಪಡುತ್ತಾರೆ. ಯಾಕೆ ಬೇಕು- ಯಾಕೆ ಬೇಡ ಎಂಬ ಬಗ್ಗೆ ನಿಮಗಿರುವಂಥ ಸ್ಪಷ್ಟತೆ ಕಾರಣಕ್ಕೆ ಕಷ್ಟ ಎನಿಸಿದಂಥ ಕೆಲಸ -ಕಾರ್ಯಗಳು ಅಚ್ಚುಕಟ್ಟಾಗಿ ಆಗಲಿವೆ. ಈಚೆಗಷ್ಟೇ ನಿವೃತ್ತರಾಗಿದ್ದೀರಿ ಅಂತಾದಲ್ಲಿ ನಿಮಗೆ ಬರಬೇಕಾದ ಫೈನಲ್ ಸೆಟ್ಲ್ ಮೆಂಟ್ ಹಣಕಾಸಿನ ವ್ಯವಹಾರಗಳಿಗೆ ಓಡಾಟ ಇರುತ್ತದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಹೌಸಿಂಗ್ ಸೊಸೈಟಿಯಲ್ಲಿ ಸೈಟಿಗಾಗಿ ಈಗಾಗಲೇ ಹಣ ಕಟ್ಟಿಯಾಗಿದೆ, ವಿತರಣೆ ಮಾತ್ರ ಬಾಕಿ ಇದೆ ಎಂದಾದಲ್ಲಿ ಆ ಬಗ್ಗೆ ಮಾಹಿತಿ ದೊರೆಯಲಿದೆ. ನೀರು ಮಾರಾಟದ ಮೂಲಕ ಆದಾಯವನ್ನು ಪಡೆಯುತ್ತಾ ಇರುವವರಿಗೆ ದೀರ್ಘಾವಧಿಗೆ- ದೊಡ್ಡ ಪ್ರಮಾಣದ ಆರ್ಡರ್ ದೊರೆಯುವಂಥ ಸಾಧ್ಯತೆ ಇದೆ. ಕನಿಷ್ಠ ಪ್ರಮಾಣದ ಹೂಡಿಕೆ ಜತೆಗೆ ಆರಂಭಿಸಿದ ವ್ಯವಹಾರವೊಂದು ಹೆಚ್ಚಿನ ಪ್ರಮಾಣದ ಲಾಭ ತಂದುಕೊಡಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನಿಂತ ನಿಲವಿನಲ್ಲೇ ನಿಮ್ಮ ಅಭಿಪ್ರಾಯ ತಿಳಿಸಿಬಿಡಬೇಕು ಎಂದು ಪಟ್ಟು ಹಿಡಿಯುವಂಥವರ ಜತೆಗಿನ ವ್ಯವಹಾರ ಮುಂದುವರಿಸಲಿಕ್ಕೆ ಹೋಗಬೇಡಿ. ಬ್ಯಾಂಕ್ ಗೆ ಕಟ್ಟಲೇಬೇಕಾದ ಹಣವನ್ನು ಹೊಂದಿಸಲು ಹೆಚ್ಚು ಶ್ರಮ ಹಾಕಲಿದ್ದೀರಿ. ಇನ್ನು ನಿಮ್ಮಲ್ಲಿ ಕೆಲವರು ಉಳಿತಾಯ ಅಥವಾ ಹೂಡಿಕೆ ಹಣವನ್ನು ಹಿಂತೆಗೆದುಕೊಂಡು, ಸಾಲವನ್ನು ಚುಕ್ತಾ ಮಾಡುವುದಕ್ಕೆ ತೀರ್ಮಾನ ಮಾಡುತ್ತೀರಿ.

ಲೇಖನ- ಸ್ವಾತಿ ಎನ್.ಕೆ.

Source link