All posts by nagaraj11081993

ಭಾರತದಿಂದ ತೆರಳುತ್ತಿದ್ದ ಇರಾನ್ ಯುದ್ಧನೌಕೆಯ ಮುಳುಗಿಸಿದ ಅಮೆರಿಕ: ಸಾವಿನ ಸಂಖ್ಯೆ 87ಕ್ಕೆ ಏರಿಕೆ – Kannada News | US Sinks Iranian Warship IRIS Dena in Indian Ocean; Death Toll Rises to 87 Amid Escalating Iran US Tensions

ಕೊಲಂಬೋ, ಮಾರ್ಚ್​ 4: ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಜಲಾಂತರ್ಗಾಮಿಯು ಇರಾನ್ ಯುದ್ಧನೌಕೆಯನ್ನು ಮುಳುಗಿಸಿದ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಕನಿಷ್ಠ 87 ಕ್ಕೆ ಏರಿಕೆಯಾಗಿದೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಐಆರ್​ಐಎಸ್ ದೇನಾ (IRIS Dena) ಎಂಬ ಯುದ್ಧನೌಕೆ ಕೆಲವೇ ವಾರಗಳ ಹಿಂದೆ ಭಾರತದಲ್ಲಿ ನೌಕಾ ಸಮರಾಭ್ಯಾಸದಲ್ಲಿ ಭಾಗವಹಿಸಿ ಇರಾನ್​ಗೆ ಮರಳುತ್ತಿತ್ತು. ಯುದ್ಧನೌಕೆಯನ್ನು ಹೊಡೆದುರುಳಿಸಿದ್ದು ತಾನೇ ಎಂದು ಈಗಾಗಲೇ ಅಮೆರಿಕ ದೃಢಪಡಿಸಿದೆ. ಐಆರ್​ಐಎಸ್ ದೇನಾ 2024 ರಲ್ಲಿ ಭಾರತಕ್ಕೆ ಬಂದಿದ್ದು, ನೌಕಾ ಸಮರಾಭ್ಯಾಸದಲ್ಲಿ ಭಾಗವಹಿಸಿತ್ತು.

ಮೃತರ ಸಂಖ್ಯೆಯನ್ನು ಅಮೆರಿಕ ದೃಢಪಡಿಸದಿದ್ದರೂ, ರಕ್ಷಣಾ ಸಚಿವ ಪೀಟ್ ಹೆಗ್ಸೆತ್, ಜಲಾಂತರ್ಗಾಮಿ ದಾಳಿಯನ್ನು ದೃಢಪಡಿಸಿದ್ದಾರೆ. ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕದ ಜಾಗತಿಕ ವ್ಯಾಪ್ತಿಗೆ ಇದು ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

ಅಂತರರಾಷ್ಟ್ರೀಯ ಜಲ ಪ್ರದೇಶದಲ್ಲಿ ಸುರಕ್ಷಿತವಾಗಿದೆ ಎಂದು ಭಾವಿಸಿದ ಇರಾನಿನ ಯುದ್ಧನೌಕೆಯನ್ನು ಅಮೆರಿಕದ ಜಲಾಂತರ್ಗಾಮಿ ನೌಕೆ ಮುಳುಗಿಸಿದೆ ಎಂದು ಹೆಗ್ಸೆತ್ ತಿಳಿಸಿದ್ದಾರೆ.

ಟ್ರಂಪ್‌ ದುರ್ಬುದ್ಧಿಯಿಂದಾಗಿ ಅಮೆರಿಕದ 500 ಯೋಧರು ಸಾವು!

ಏತನ್ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದುರ್ಬುದ್ಧಿಯಿಂದಾಗಿ ಅಮೆರಿಕದ 500 ಯೋಧರು ಹತರಾಗಿದ್ದಾರೆ ಎಂದು ಇರಾನ್‌ ನ್ಯಾಷನಲ್‌ ಸೆಕ್ಯೂರಿಟಿ ಕೌನ್ಸಿಲ್‌ ಕಾರ್ಯದರ್ಶಿ ಅಲಿ ಪೋಸ್ಟ್‌ ಮಾಡಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಸೇರಿ ಟ್ರಂಪ್‌ ಇರಾನ್‌ ಮೇಲೆ ದಾಳಿ ನಡೆಸಿದರು. ಇರಾನ್‌ ನಡೆಸಿದ ಪ್ರತಿದಾಳಿಯಲ್ಲಿ ಅಮೆರಿಕದ 500 ಯೋಧರು ಸಾವಿಗೀಡಾಗಿದ್ದಾರೆ. ಇದೇನು ಟ್ರಂಪ್‌ ಅವರ ಅಮೆರಿಕ ಫಸ್ಟ್‌ ನೀತಿನಾ ಅಥವಾ ಇಸ್ರೇಲ್‌ ಫಸ್ಟ್‌ ನೀತಿಯಾ ಎಂದು ಅಲಿ ಪ್ರಶ್ನಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಅಮೆರಿಕದ ಜನತೆ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

IND vs ENG: ಭಾರತ- ಇಂಗ್ಲೆಂಡ್ ಕಾಳಗಕ್ಕೆ ಮಳೆ ಅಡ್ಡಿ? ಪಂದ್ಯ ರದ್ದಾದರೆ ಯಾರು ಫೈನಲ್​ಗೆ? – Kannada News | India vs England T20 WC 2026 Semi Final: Mumbai Pitch, Weather Report and Match Preview

2026 ರ ಟಿ20 ವಿಶ್ವಕಪ್ (T20 World Cup 2026) ಕೊನೆಯ ಹಂತವನ್ನು ತಲುಪಿದೆ. ವೆಸ್ಟ್ ಇಂಡೀಸ್ ವಿರುದ್ಧದ ಗೆಲುವಿನೊಂದಿಗೆ ಟೀಂ ಇಂಡಿಯಾ ಸೆಮಿಫೈನಲ್ ಪ್ರವೇಶಿಸಿದೆ. ಮಾರ್ಚ್ 5 ರಂದು ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಭಾರತ, ಇಂಗ್ಲೆಂಡ್ (India vs England) ತಂಡವನ್ನು ಎದುರಿಸಲಿದೆ. ಈ ಎರಡೂ ತಂಡಗಳು ಸೆಮಿಫೈನಲ್‌ನಲ್ಲಿ ಸತತ ಮೂರನೇ ಬಾರಿಗೆ ಮುಖಾಮುಖಿಯಾಗುತ್ತಿವೆ. 2022 ರಲ್ಲಿ ಇಂಗ್ಲೆಂಡ್, ಭಾರತವನ್ನು ಸೋಲಿಸಿ ಕಪ್ ಗೆದ್ದರೆ, 2024 ರಲ್ಲಿ ಭಾರತ, ಇಂಗ್ಲೆಂಡ್ ತಂಡವನ್ನು ಸೋಲಿಸಿ ಕಪ್ ಗೆದ್ದಿತು. ಈಗ 2026 ರಲ್ಲಿ ಈ ಎರಡೂ ತಂಡಗಳು ಪರಸ್ಪರ ಎದುರಾಗುತ್ತಿವೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಒಂದೇ ಎದುರಾಳಿಯ ವಿರುದ್ಧ ಸತತ ಮೂರು ಸೆಮಿಫೈನಲ್‌ಗಳನ್ನು ಆಡುತ್ತಿರುವುದು ಅಪರೂಪದ ಕ್ಷಣವಾಗಿದೆ.

ಮುಂಬೈ ಹವಾಮಾನ ಹೇಗಿರಲಿದೆ?

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮಾರ್ಚ್ 5 ರಂದು ಮುಂಬೈನಲ್ಲಿ ಮಳೆಯಾಗುವ ಸಾಧ್ಯತೆಗಳಿಲ್ಲ. ಹಗಲಿನ ಗರಿಷ್ಠ ತಾಪಮಾನವು ಸುಮಾರು 33 ಡಿಗ್ರಿ ಸೆಲ್ಸಿಯಸ್ ತಲುಪುವ ನಿರೀಕ್ಷೆಯಿದ್ದರೆ, ರಾತ್ರಿಯ ತಾಪಮಾನವು 25 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರಲಿದೆ. ಆರ್ದ್ರತೆಯ ಮಟ್ಟವು 35 ರಿಂದ 51 ಪ್ರತಿಶತದವರೆಗೆ ಇರುತ್ತದೆ, ಅಂದರೆ ಆಟಗಾರರು ಯಾವುದೇ ಹವಾಮಾನ ಸಂಬಂಧಿತ ಸಮಸ್ಯೆಗಳನ್ನು ಎದುರಿಸುವುದಿಲ್ಲ.

ಪಿಚ್ ಹೇಗಿರಲಿದೆ?

ವಾಂಖೆಡೆ ಕ್ರೀಡಾಂಗಣದ ಪಿಚ್ ಸಾಮಾನ್ಯವಾಗಿ ಬ್ಯಾಟ್ಸ್‌ಮನ್ ಸ್ನೇಹಿ ಪಿಚ್ ಆಗಿರುವುದರಿಂದ ಎರಡೂ ಕಡೆಗಳಿಂದಲೂ ರನ್ ಮಳೆಯನ್ನು ನಿರೀಕ್ಷಿಸಬಹುದು. ಅಲ್ಲದೆ ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್‌ ಮಾಡುವ ತಂಡಕ್ಕೆ ಇಬ್ಬನಿಯ ನೆರವು ಸಿಗುವ ಕಾರಣದಿಂದಾಗಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದು ಖಚಿತ.

IND vs ENG: ಭಾರತ- ಇಂಗ್ಲೆಂಡ್‌ ಮುಖಾಮುಖಿ ದಾಖಲೆ ಹೇಗಿದೆ? ಇಲ್ಲಿದೆ ಪೂರ್ಣ ಜಾತಕ

ಮೀಸಲು ದಿನ ಇದೆಯಾ?

ಪಂದ್ಯದ ದಿನದಂದು ಮಳೆ ಬರುವ ಸಾಧ್ಯತೆ ಇಲ್ಲದಿದ್ದರೂ, ಐಸಿಸಿ ಮುನ್ನೆಚ್ಚರಿಕೆಯಾಗಿ ಮೀಸಲು ದಿನವನ್ನು ನಿಗದಿಪಡಿಸಿದೆ. ಯಾವುದೇ ಕಾರಣದಿಂದ ಮಾರ್ಚ್ 5 ರಂದು ಪಂದ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ಮಾರ್ಚ್ 6 ರ ಶುಕ್ರವಾರದಂದು ಮೀಸಲು ದಿನದಂದು ಪಂದ್ಯವನ್ನು ನಡೆಸಲಾಗುತ್ತದೆ. ಆದಾಗ್ಯೂ, ಸೆಮಿಫೈನಲ್ ಮತ್ತು ಮೀಸಲು ದಿನ ಎರಡೂ ಮಳೆಯಿಂದಾಗಿ ರದ್ದಾದರೆ, ನಿಯಮದ ಪ್ರಕಾರ ಇಂಗ್ಲೆಂಡ್ ನೇರವಾಗಿ ಫೈನಲ್‌ಗೆ ಮುನ್ನಡೆಯುತ್ತದೆ. ಏಕೆಂದರೆ ಸೂಪರ್ 8 ಹಂತದಲ್ಲಿ ಇಂಗ್ಲೆಂಡ್ ತನ್ನ ಗುಂಪಿನಲ್ಲಿ ಮೊದಲ ಸ್ಥಾನ ಪಡೆದರೆ, ಭಾರತ ಎರಡನೇ ಸ್ಥಾನ ಗಳಿಸಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:47 pm, Wed, 4 March 26

Source link

ಬೈಕ್‌ಗೆ ಕಾರು ಡಿಕ್ಕಿ ಹೊಡೆದು ಬಳಿಕ ಡಿವೈಡರ್‌ಗೆ ಗುದ್ದಿ ಪಲ್ಟಿ: ಓರ್ವ ವ್ಯಕ್ತಿ ಸಾವು – Kannada News | Fatal Srinivaspur Car Crash: One Dead, Car Overturns After Hitting Bike at Hakkipikki Colony

ಕೋಲಾರ, ಮಾ.4: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹಕ್ಕಿಪಿಕ್ಕಿ ಕಾಲೋನಿ ಬಳಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಅತಿ ವೇಗವಾಗಿ ಬಂದ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದ ಬಳಿಕ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗುದ್ದಿ ಪಲ್ಟಿಯಾಗಿದೆ. ಈ ಘಟನೆಯಲ್ಲಿ ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿಯನ್ನು ಆಂಧ್ರಪ್ರದೇಶ ಮೂಲದ ಬಶೀರ್ (40) ಎಂದು ಗುರುತಿಸಲಾಗಿದೆ.

ಕಾರಿನಲ್ಲಿದ್ದ ಮತ್ತೋರ್ವ ವ್ಯಕ್ತಿಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಾರು ಬೈಕ್‌ಗೆ ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದೆ. ನಂತರ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಮಧ್ಯದ ಡಿವೈಡರ್‌ಗೆ ಅಪ್ಪಳಿಸಿ ಪಲ್ಟಿಯಾಗಿದೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಇದನ್ನೂ ಓದಿ: “ಅಪ್ಪ ನಾನು ಮದುವೆಯಾಗಿದ್ದೇನೆ, ನನ್ನನ್ನು ಬಿಟ್ಟುಬಿಡಿ”: ಮಗಳ ಕಣ್ಣೀರಿಗೂ ಬೆಲೆ ಕೊಡದೆ ಎಳೆದೊಯ್ದ ತಂದೆ

ಘಟನಾ ಸ್ಥಳಕ್ಕೆ ರಾಯಲ್ಪಾಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:40 pm, Wed, 4 March 26

Source link

IND vs ENG: ಸೆಮೀಸ್​ಗೂ ಮುನ್ನ ಸಿದ್ಧಿ ವಿನಾಯಕನ ಪಾದಕ್ಕೆರಗಿದ ಟೀಂ ಇಂಡಿಯಾ ಆಟಗಾರರು – Kannada News | Ishan, Abhishek, Axar Visit Siddhivinayaka temple Before India vs England T20 WC Semi Final

2026 ರ ಟಿ20 ವಿಶ್ವಕಪ್​ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಮಾರ್ಚ್​ 5 ರಂದು ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಫೈನಲ್ ಟಿಕೆಟ್ ಸಿಕ್ಕರೆ, ಸೋತ ತಂಡಕ್ಕೆ ಟಿ20 ವಿಶ್ವಕಪ್​ನಿಂದ ಗೇಟ್​ಪಾಸ್ ಸಿಗಲಿದೆ. ಹೀಗಾಗಿ ಇಂತಹ ಮಹತ್ವದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದ ಇಶಾನ್ ಕಿಶನ್, ಅಭಿಷೇಕ್ ಶರ್ಮಾ ಮತ್ತು ಅಕ್ಷರ್ ಪಟೇಲ್ ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಭಗವಂತನ ಆಶೀರ್ವಾದ ಪಡೆದಿದ್ದಾರೆ.

ವಾಸ್ತವವಾಗಿ ಪ್ರಮುಖ ಪಂದ್ಯಗಳಿಗೂ ಮೊದಲು ಭಾರತೀಯ ಆಟಗಾರರು ದೇವಾಲಯಗಳಿಗೆ ಭೇಟಿ ನೀಡುವುದು ವಾಡಿಕೆ. ಅದರಂತೆ ಇಶಾನ್ ಕಿಶನ್, ಅಭಿಷೇಕ್ ಶರ್ಮಾ ಮತ್ತು ಅಕ್ಷರ್ ಪಟೇಲ್ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ. ಮೂವರು ಆಟಗಾರರು ಟೀಂ ಇಂಡಿಯಾದ ಪ್ಲೇಯಿಂಗ್ 11ನಲ್ಲಿ ಆಡುವವರಾಗಿದ್ದಾರೆ. ಅದರಲ್ಲೂ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಅಭಿಷೇಕ್ ಶರ್ಮಾಗೆ ಸೆಮಿಫೈನಲ್ ಕಾಳಗ ನಿರ್ಣಾಯಕವಾಗಿದೆ. ಇತ್ತ ಉತ್ತಮ ಫಾರ್ಮ್‌ನಲ್ಲಿರುವ ಇಶಾನ್ ಕಿಶನ್ ಮತ್ತು ಆಲ್‌ರೌಂಡರ್ ಆಗಿ ನಿರ್ಣಾಯಕ ಪಾತ್ರ ವಹಿಸುತ್ತಿರುವ ಅಕ್ಷರ್ ಪಟೇಲ್ ಕೂಡ ಭಗವಂತನ ದರ್ಶನ ಪಡೆದರು.

2026 ರ ಟಿ20 ವಿಶ್ವಕಪ್ ಪ್ರಾರಂಭವಾಗುವ ಮೊದಲು ಕುಲ್ದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ ಕೂಡ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಗಣೇಶನ ಆಶೀರ್ವಾದ ಪಡೆದಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಸೂಪರ್ 8 ಪಂದ್ಯಕ್ಕೂ ಮುನ್ನ ಕೋಲ್ಕತ್ತಾದ ಕಾಳಿಘಾಟ್ ಕಾಳಿ ದೇವಸ್ಥಾನದಲ್ಲಿ ಅಕ್ಷರ್ ಪಟೇಲ್ ಮತ್ತು ಅಭಿಷೇಕ್ ಶರ್ಮಾ ಪೂಜೆ ಸಲ್ಲಿಸಿದ್ದರು. ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಅವರ ಪತ್ನಿ ದೇವಿಶಾ ಶೆಟ್ಟಿ ಕೂಡ ಹಾಜರಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪವಿತ್ರಾ ಗೌಡ ಮನೆ ಊಟಕ್ಕೆ ಸಂಪೂರ್ಣ ಬ್ರೇಕ್: ಹೈಕೋರ್ಟ್ ಆದೇಶ – Kannada News | Renuka Swamy case: High court cancels trail court order on Pavithra Gowda home food

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪವಿತ್ರಾ ಗೌಡಗೆ ಹೈಕೋರ್ಟ್​ನಲ್ಲಿ ಹಿನ್ನಡೆ ಆಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾ ಗೌಡ ವಿಶೇಷ ಅನುಮತಿಗಳೊಂದಿಗೆ ಜೈಲಿಗೆ ಮನೆಯಿಂದಲೇ ಊಟ ತರಿಸಿಕೊಳ್ಳುತ್ತಿದ್ದರು. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ಪವಿತ್ರಾ ಗೌಡ, ನಾಗರಾಜ್ ಮತ್ತು ಲಕ್ಷ್ಮಣ್ ಅವರುಗಳು ಮನೆಯಿಂದ ಊಟ ತರಿಸಿಕೊಳ್ಳುತ್ತಿದ್ದರು. ಇದೀಗ ಆ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದ್ದು, ಪವಿತ್ರಾ ಗೌಡ ಸೇರಿದಂತೆ ಇತರೆ ಆರೋಪಿಗಳ ಮನೆ ಊಟಕ್ಕೆ ಬ್ರೇಕ್ ಬಿದ್ದಿದೆ. ಅವರ ಮನೆ ಊಟಕ್ಕೆ ಬ್ರೇಕ್ ಬಿದ್ದಿದೆ.

ಈ ಹಿಂದೆ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ಈ ಕುರಿತು ವಿವರವಾದ ವಿಚಾರಣೆ ನಡೆದು, ವಾರಕ್ಕೊಮ್ಮೆ ಅಥವಾ ವೈದ್ಯಕೀಯ ಕಾರಣಗಳಿದ್ದರೆ ಮನೆ ಊಟ ತರಿಸಿಕೊಳ್ಳಬಹುದು ಎಂಬ ಆದೇಶ ಹೊರಬಿದ್ದಿತ್ತು. ಅದರಂತೆ ಪವಿತ್ರಾ ಗೌಡ, ನಾಗರಾಜ್ ಮತ್ತು ಲಕ್ಷ್ಮಣ್ ಅವರುಗಳು ಮನೆಯಿಂದ ಊಟ ತರಿಸಿಕೊಳ್ಳುತ್ತಿದ್ದರು. ಈ ವಿಶೇಷ ಸೇವೆಯನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಹೈಕೋರ್ಟ್​​ನಲ್ಲಿ ಈ ಬಗ್ಗೆ ವಿಚಾರಣೆ ನಡೆದಿದ್ದು, ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠವು 57ನೇ ಸಿಸಿಹೆಚ್ ಕೋರ್ಟ್ ನೀಡಿದ್ದ ಆದೇಶ ರದ್ದುಪಡಿಸಿದೆ. ಅಲ್ಲದೆ, ‘ಆರೋಪಿ ಕೇಳಿದ ಕೂಡಲೇ ಮನೆ ಊಟ ಕೊಡಲು ಅನುಮತಿ ನೀಡಲು ಆಗದು, ವೈದ್ಯಕೀಯ ಸಲಹೆ ಇದ್ದರೆ ಮಾತ್ರ ಮನೆ ಊಟಕ್ಕೆ ಅವಕಾಶ’ ಎಂದಿದೆ.

ಟ್ರಯಲ್ ಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಿ ಪವಿತ್ರಾ, ನಾಗರಾಜ್ ಮತ್ತು ಲಕ್ಷ್ಮಣ್ ಅವರು ಮನೆ ಊಟ ಸಿಗುವಂತೆ ಮಾಡಿಕೊಂಡಿದ್ದರು. ಬಳಿಕ ಸಾಕಷ್ಟು ವಾದ-ವಿವಾದಗಳ ಬಳಿಕ ವಾರಕ್ಕೊಮ್ಮೆ ಮಾತ್ರ ತರಿಸಿಕೊಳ್ಳಬಹುದು ಎಂದಾಗಿತ್ತು. ಅಲ್ಲದೆ ವೈದ್ಯಕೀಯ ಕಾರಣ ನೀಡಿದರೆ ದರ್ಶನ್ ಹಾಗೂ ಇತರೆ ಆರೋಪಿಗಳೂ ಸಹ ಮನೆ ಊಟ ತರಿಸಿಕೊಳ್ಳಬಹುದು ಎಂದಾಯ್ತು. ಆದರೆ ಇದಕ್ಕೆ ಜೈಲಧಿಕಾರಿಗಳು ಆರಂಭದಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದರು. ಜೈಲಿನಲ್ಲಿ ಎಫ್​​ಎಸ್​​ಎಸ್​​ಎಐ ಸೂಚನೆಯಂತೆ ಫೋರ್ ಸ್ಟಾರ್ ಆಹಾರವನ್ನೇ ಎಲ್ಲ ಕೈದಿಗಳಿಗೂ ನೀಡಲಾಗುತ್ತಿದೆ. ಜೈಲಿನ ಆಹಾರ ಶುಚಿಯಾಗಿಯೂ, ರುಚಿಯಾಗಿಯೂ, ಆರೋಗ್ಯಕರವಾಗಿಯೂ ಇದೆ ಹೀಗಿರುವಾಗ ಮನೆಯಿಂದ ಊಟ ನೀಡುವ ಔಚಿತ್ಯ ಏನಿದೆ? ಎಂದಿದ್ದರು. ವಾದ ಆಲಿಸಿದ್ದ ಹೈಕೋರ್ಟ್ ಕಳೆದ ತಿಂಗಳೇ ಮನೆ ಊಟಕ್ಕೆ ತಡೆ ನೀಡಿತ್ತು. ಇದೀಗ ತಡೆಯನ್ನು ಆದೇಶವನ್ನಾಗಿ ಬದಲಾಯಿಸಿದ್ದು, ಇದೀಗ ಪವಿತ್ರಾ ಮತ್ತು ಇತರೆ ಆರೋಪಿಗಳ ಮನೆ ಊಟಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿದೆ.

ಇದನ್ನೂ ಓದಿ:ದರ್ಶನ್ ಜೊತೆ ‘ಭೀಮ ತೀರದಲ್ಲಿ’ ಸಿನಿಮಾ ಯಾಕೆ ಮಾಡಲಿಲ್ಲ? ಸಿಕ್ತು ಉತ್ತರ

ನಿನ್ನೆಯೂ ಸಹ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ಕೆಲವು ಮಹತ್ವದ ವಾದ ನಡೆದಿವೆ. ಎ3 ಆರೋಪಿ ಪರ ವಕೀಲರು ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಯನ್ನೇ ಆರೋಪಿಯನ್ನಾಗಿ ಮಾಡಲು ಹಾಕಿರುವ ಅರ್ಜಿ ಕುರಿತು ವಾದ ಮಂಡಿಸಿ, ಅದೊಂದು ಹಾಸ್ಯಾಸ್ಪದ ಅರ್ಜಿ ಎಂದರು. ಅಲ್ಲದೆ, ಒಂದೊಮ್ಮೆ ತನಿಖಾಧಿಕಾರಿ ಸಾಕ್ಷ್ಯ ತಿದ್ದಿದ್ದರೆ, ಸುಳ್ಳು ಸಾಕ್ಷ್ಯ ಸೃಷ್ಟಿಸಿದ್ದರೆ ವಿಚಾರಣೆ ವೇಳೆ ಅವರೇ ಅದಕ್ಕೆಲ್ಲ ಉತ್ತರ ನೀಡಲಿದ್ದಾರೆ ಎಂದರು. ಇನ್ನು ದರ್ಶನ್ ಪರ ವಕೀಲರು, ಪ್ರತಿದಿನವೂ ವಿಚಾರಣೆ ನಡೆಸುವಂತೆ ನ್ಯಾಯಾಲಯಕ್ಕೆ ಅರ್ಜಿ ಹಾಕಿದರು. ಆದರೆ ಎಸ್​​ಪಿಪಿ ಅವರು ಪ್ರತಿದಿನವೂ ವಿಚಾರಣೆ ನಡೆಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 3:35 pm, Wed, 4 March 26

Source link

ಬಿಹಾರ ರಾಜಕಾರಣದಲ್ಲಿ ಮಹತ್ವದ ಬದಲಾವಣೆ, ಸಿಎಂ ಸ್ಥಾನದಿಂದ ನಿತೀಶ್ ಕುಮಾರ್ ಕೆಳಗಿಳಿಯುವ ಸಾಧ್ಯತೆ – Kannada News | Bihar Political Shake Up: Nitish Kumar to Rajya Sabha, Nishant CM BJP’s Next Move

ಪಾಟ್ನಾ, ಮಾರ್ಚ್​ 04: ಬಿಹಾರ ರಾಜಕಾರಣದಲ್ಲಿ ಮಹತ್ವದ ಬದಲಾವಣೆ ಸಂಭವಿಸುವ ಸಾಧ್ಯತೆ ಇದೆ. ಮುಖ್ಯಮಂತ್ರಿ ನಿತೀಶ್ ಕುಮಾರ್(Nitish Kumar) ಸಿಎಂ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆ ಇದ್ದು, ಅವರ ಮಗ ನಿಶಾಂತ್ ಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸುವ ಸಾಧ್ಯತೆ ಬಲವಾಗಿದೆ. ನಿತೀಶ್ ಕುಮಾರ್ ರಾಜ್ಯಸಭೆಗೆ ತೆರಳಬಹುದು ಎನ್ನುವ ಮಾಹಿತಿ ಹರಿದಾಡುತ್ತಿದೆ.

ಈ ಹಿಂದೆ, ನಿಶಾಂತ್ ರಾಜ್ಯಸಭೆಗೆ ನಾಮನಿರ್ದೇಶನಗೊಳ್ಳುವ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಬಹುದು ಎಂದು ಮಾಧ್ಯಮ ವರದಿಗಳು ಸೂಚಿಸಿದ್ದವು. ಆದಾಗ್ಯೂ, ಜನತಾದಳ ಯುನೈಟೆಡ್‌ನಿಂದ ಅವರ ಉಮೇದುವಾರಿಕೆಗೆ ಸಂಬಂಧಿಸಿದ ದಾಖಲೆಗಳು ಇನ್ನೂ ಸಿದ್ಧವಾಗಿಲ್ಲ.

ನಿತೀಶ್ ಕುಮಾರ್ ಅನುಪಸ್ಥಿತಿಯಲ್ಲಿ ಬಿಹಾರದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನದೇ ಆದ ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 2026 ರ ರಾಜ್ಯಸಭಾ ಚುನಾವಣೆಗಳ ಮಧ್ಯೆ ಈ ಪ್ರಮುಖ ಆಡಳಿತಾತ್ಮಕ ಮತ್ತು ರಾಜಕೀಯ ಬದಲಾವಣೆಯ ಲಕ್ಷಣಗಳು ಹೊರಹೊಮ್ಮುತ್ತಿವೆ.

ಮತ್ತಷ್ಟು ಓದಿ: Nitish Kumar Resigns: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ

ನಿತೀಶ್ ಕುಮಾರ್ ರಾಜ್ಯಸಭಾ ಅಭ್ಯರ್ಥಿಯಾಗಲಿದ್ದಾರೆ ಎಂಬ ವರದಿಗಳ ನಡುವೆ, ಬಿಹಾರದ ಉಸ್ತುವಾರಿ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಉದ್ಭವಿಸಿದೆ. ನಿತೀಶ್ ಕುಮಾರ್ ಕೇಂದ್ರದಲ್ಲಿ ಪ್ರಮುಖ ಪಾತ್ರ ವಹಿಸಿದರೆ, ಬಿಜೆಪಿ ಬಿಹಾರದ ಮುಖ್ಯಮಂತ್ರಿ ತಮ್ಮ ಪಕ್ಷದವರನ್ನೇ ನೇಮಿಸಬಹುದು ಎಂದು ರಾಜಕೀಯ ತಜ್ಞರು ನಂಬಿದ್ದಾರೆ.

ಜೆಡಿಯು ನಾಯಕರು ನಿಶಾಂತ್ ರಾಜಕೀಯ ಪ್ರವೇಶಕ್ಕೆ ಅನುಕೂಲ ಮಾಡಿಕೊಡುತ್ತಿದ್ದರೆ, ಅವರು ಕೇಂದ್ರ ಸರ್ಕಾರದ ಮೇಲೆ ಅಲ್ಲ, ಬಿಹಾರ ರಾಜಕೀಯದ ಮೇಲೆ ಕೇಂದ್ರೀಕರಿಸಲು ಬಯಸುತ್ತಾರೆ ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಬಿಹಾರದಲ್ಲಿ ಬಿಜೆಪಿ ಖಂಡಿತವಾಗಿಯೂ ಅಚ್ಚರಿಯ ನಿರ್ಧಾರ ತೆಗೆದುಕೊಳ್ಳಬಹುದು.

ಬಿಹಾರ ರಾಜ್ಯದಲ್ಲಿನ ಪ್ರಕ್ಷುಬ್ಧ ಸ್ಥಿತಿಗೆ ಪರಿಹಾರ ಎಂಬಂತೆ ಸಂಕಷ್ಟ ಸಂದರ್ಭದಲ್ಲಿ ರಾಜ್ಯದ ಚುಕ್ಕಾಣಿ ಹಿಡಿದ ನಿತೀಶ್ ಕುಮಾರ್ ಪ್ರಸ್ತುತ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ 6 ಬಾರಿ ಅವರು ಈ ಹುದ್ದೆ ನಿರ್ವಹಿಸಿದ್ದಾರೆ. ಈಗ ಏಳನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪತಿ ಮನೆಗೆ ಬಾರದ್ದಕ್ಕೆ ಸಿಟ್ಟು: ಶಾಲೆಗೆ ಬಂದು ಮುಖ್ಯ ಶಿಕ್ಷಕನ 2ನೇ ಪತ್ನಿಯ ಹೈಡ್ರಾಮಾ – Kannada News | Teachers Second Wife Hydrama: Incident at Komalapura School in Kukanur

ಕೊಪ್ಪಳ, ಮಾರ್ಚ್​​ 04: ಪ್ರೌಢಶಾಲೆಯ ಮುಖ್ಯ ಶಿಕ್ಷಕನ ಎರಡನೇ ಪತ್ನಿ ಶಾಲೆಗೆ ಬಂದು ದೊಡ್ಡ ಹೈಡ್ರಾಮಾ ಸೃಷ್ಟಿಸಿರುವ ಘಟನೆ ಕುಕನೂರು ತಾಲೂಕಿನ ಕೋಮಲಾಪುರ ಗ್ರಾಮದಲ್ಲಿ ನಡೆದಿದೆ.ಮುಖ್ಯ ಶಿಕ್ಷಕ ಸಿದ್ದೇಶ ಶೆಟ್ಟರ್ ಮನೆಗೆ ಬರುತ್ತಿಲ್ಲ ಎಂದು ಆರೋಪಿಸಿ, ಶಾಲೆ ಆವರಣದಲ್ಲಿಯೇ ಎರಡನೇ ಪತ್ನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಸ್ಥಳದಲ್ಲಿ ನೆರೆದಿದ್ದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರಲ್ಲಿ ಆಶ್ಚರ್ಯ ಮೂಡಿಸಿದೆ. ಸ್ಥಳೀಯವಾಗಿ ಸಾಕಷ್ಟು ಚರ್ಚೆಗೂ ಗ್ರಾಸವಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಾರ್ಚ್ 6ರಂದು ರಿಲೀಸ್ ಆಗಲಿದೆ ಮಕ್ಕಳ ಸಿನಿಮಾ ‘ಪಂಚ ರತ್ನಗಳು’ – Kannada News | Kannada children movie Pancha Ratnagalu releasing on 6 March

ಮಾಸ್, ಕಮರ್ಷಿಯಲ್ ಸಿನಿಮಾಗಳ ನಡುವೆ ಅಲ್ಲೊಂದು ಇಲ್ಲೊಂದು ಮಕ್ಕಳ ಚಿತ್ರಗಳು (Children Movie) ಬರುತ್ತವೆ. ಕನ್ನಡದಲ್ಲಿ ಈಗ ‘ಪಂಚ ರತ್ನಗಳು’ ಎಂಬ ಮಕ್ಕಳ ಸಿನಿಮಾ ತಯಾರಾಗಿದೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಮತ್ತು ಹಾಡುಗಳ ಬಿಡುಗಡೆ ಕಾರ್ಯಕ್ರಮ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಪ್ರದರ್ಶಕ ಹಾಗೂ ವಿತರಕ ಜಿ.ಆರ್. ನಾರಾಯಣ ಗೌಡ ಅವರು ‘ಶ್ರೀ ಕ್ಯಾಲಮ್ಮ ದೇವಿ ಫಿಲ್ಮ್ಸ್’ ಬ್ಯಾನರ್ ಮೂಲಕ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಮಾರ್ಚ್ 6ರಂದು ‘ಪಂಚ ರತ್ನಗಳು’ (Pancha Ratnagalu) ಸಿನಿಮಾ ರಿಲೀಸ್ ಆಗಲಿದೆ.

ಒಂದಷ್ಟು ಸಿನಿಮಾಗಳಲ್ಲಿ ನಟನೆ ಮಾಡಿರುವ ಮೈಸೂರು ಮೂಲದ ಗಾಯಕ ಗೌತಮ್ ಆರ್. ಅವರು ‘ಪಂಚ ರತ್ನಗಳು’ ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಮೂರು ಹಾಡುಗಳಿಗೆ ಸಾಹಿತ್ಯ ಬರೆದು ನಿರ್ದೇಶನ ಕೂಡ ಮಾಡಿದ್ದಾರೆ. ಈ ಸಿನಿಮಾದ ಪಾತ್ರವರ್ಗದಲ್ಲಿ ಬಾಲ ಕಲಾವಿದರಾದ ಪ್ರಥಮ್, ಯಶಸ್, ವಿಹಾನ್, ತನ್ವಿ, ಆಧ್ಯ ಪ್ರಥಮ್ ನಟಿಸಿದ್ದಾರೆ.

ತಾಯಿ ಪಾತ್ರದಲ್ಲಿ ಬಿಂದೂ ಆಚಾರ್ಯ, ಶಿಕ್ಷಣ ಸಚಿವರ ಪಾತ್ರದಲ್ಲಿ ಆನಂದ್ ನಗರ್ಕರ್ ಅವರು ಅಭಿನಯಿಸಿದ್ದಾರೆ. ಪ್ರಣವ್ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅನಿಲ್ ಕಶ್ಯಪ್ ಅವರ ಛಾಯಾಗ್ರಹಣ , ಅಭಿಷೇಕ್ ಅವರ ಸಂಕಲನ ಈ ಸಿನಿಮಾಗಿದೆ. ಅಜಿತ್ ಅವರು ಸಿಂಕ್ ಸೌಂಡ್ ಕಾರ್ಯ ನಿರ್ವಹಿಸಿದ್ದಾರೆ. ವೆಂಕಟ್‌ ಗೌಡ ಅವರು ಸುಮಾರು 60 ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್ ಮಾಡಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಗೌತಮ್ ಆರ್. ಅವರು ಮಾತನಾಡಿದರು. ‘ಇಂದಿನ ಸಮಾಜದ ದೈನಂದಿಕ ಸಮಸ್ಯೆಗಳನ್ನು ದೊಡ್ಡವರು ಗಮನಕ್ಕೆ ತೆಗೆದುಕೊಳ್ಳದೇ ಇರುವುದರಿಂದ, ವಿಷಯವು ಸರ್ಕಾರಕ್ಕೆ ತಲುಪದೇ ಇರುವುದರಿಂದ ಯಾರನ್ನು ದೂರುವುದರಿಂದ ಪ್ರಯೋಜನವಿಲ್ಲ. ಇದನ್ನು ಅರಿತ ಐದು ಮಕ್ಕಳು ನಾವೇ ಮುಂದಾಗಿ ಸರಿಪಡಿಸುವ ತೀರ್ಮಾನಕ್ಕೆ ಬರುತ್ತಾರೆ’ ಎಂದು ಕಥೆಯ ಎಳೆಯನ್ನು ಅವರು ವಿವರಿಸಿದರು.

ಇದನ್ನೂ ಓದಿ: ಮಾರ್ಚ್ 19ಕ್ಕೆ ‘ಟಾಕ್ಸಿಕ್’ ಬದಲು ರಿಲೀಸ್ ಆಗಲಿದೆ ‘ಲವ್ ಮಾಕ್ಟೇಲ್ 3’ ಸಿನಿಮಾ

‘ಪ್ರಾರಂಭದಲ್ಲಿ ಪಂಚಭೂತಗಳು ಎಂದು ಟೈಟಲ್ ಇಡಲಾಗಿತ್ತು. ವಿತರಕ ವೆಂಕಟ್‌ ಗೌಡ ಅವರ ಸಲಹೆ ಮೇರೆಗೆ ಪಂಚ ರತ್ನಗಳು ಎಂದು ಶೀರ್ಷಿಕೆ ಬದಲಾಯಿಸಿದೆವು. ಪ್ರಕೃತಿಯ ಅಂಶಗಳಾದ ಭೂಮಿ, ನೀರು, ಬೆಂಕಿ, ಗಾಳಿ, ಆಕಾಶ ಇವುಗಳನ್ನು ಭುವನ್, ಜೀವಿತಾ, ಜ್ಯೋತಿ, ಅನಿಲ್ ಹಾಗೂ ಆಕಾಶ್ ಪಾತ್ರದ ಹೆಸರಿನಲ್ಲಿ ಬಿಂಬಿಸಲಾಗಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ’ ಎಂದು ನಿರ್ದೇಶಕರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

“ಅಪ್ಪ ನಾನು ಮದುವೆಯಾಗಿದ್ದೇನೆ, ನನ್ನನ್ನು ಬಿಟ್ಟುಬಿಡಿ”: ಮಗಳ ಕಣ್ಣೀರಿಗೂ ಬೆಲೆ ಕೊಡದೆ ಎಳೆದೊಯ್ದ ತಂದೆ – Kannada News | Police Inaction: Parents Kidnap Registered Wife in Hangal Love Marriage Case

ಹಾನಗಲ್ ಮಾ.4: ಹೆಚ್ಚಿನ ಹೆತ್ತವರು ಮಕ್ಕಳ ಪ್ರೀತಿ ಒಪ್ಪುವುದಿಲ್ಲ. ಜಾತಿ ಪ್ರೇಮ, ಸಮಾಜ ಏನು ಹೇಳುತ್ತೋ ಎಂಬೆಲ್ಲ ಭಯ ಇರುತ್ತದೆ. ಅದರಲ್ಲೂ ಸಂಬಂಧಿಕ ಕಾಟ ಯಾರಿಗೂ ಬೇಡ. ಪ್ರೀತಿಸಿ ಓಡಿ ಹೋಗಿ ಮದುವೆಯಾದರೆ ಎರಡು ಕುಟುಂಬಗಳು ಸಂಬಂಧ ಕಳೆದುಕೊಳ್ಳಬೇಕು ಎಂಬ ಹೆದರಿಕೆ. ಇದರ ನಡುವೆ ಧೈರ್ಯ ಮಾಡಿ ಮದುವೆಯಾದರೆ ಈ ಪರಿಸ್ಥಿತಿ ನೋಡಿ. ಪ್ರೀತಿಸಿ ಅಧಿಕೃತವಾಗಿ ರಿಜಿಸ್ಟರ್ ಮ್ಯಾರೇಜ್ ಯಾಗಿದ್ದ ನವಜೋಡಿಯನ್ನು ಯುವತಿಯ ಪೋಷಕರು ಮತ್ತು ಸಂಬಂಧಿಕರು ಸಿನಿಮೀಯ ರೀತಿಯಲ್ಲಿ ದಾಳಿ ನಡೆಸಿ ಬೇರ್ಪಡಿಸಿರುವ ಘಟನೆ ಹಾನಗಲ್ ತಾಲೂಕಿನ ತಿಳವಳ್ಳಿ ಗ್ರಾಮದಲ್ಲಿ ನಡೆದಿದೆ. “ನಾನು ಪ್ರೀತಿಸಿ ಮದುವೆಯಾಗಿದ್ದೇನೆ, ನನಗೆ ನನ್ನ ಗಂಡ ಬೇಕು” ಎಂದು ಯುವತಿ ಗೋಳಾಡಿದರೂ ಕಿವಿಗೊಡದ ಪೋಷಕರು ಆಕೆಯನ್ನು ಹೊಡೆದು ಎಳೆದೊಯ್ದಿದ್ದಾರೆ.

ಮಣಿಕಂಠ ಮತ್ತು ಸೃಷ್ಟಿ ಎಂಬುವವರು ಕಳೆದ ಕೆಲವು ಕಾಲದಿಂದ ಪ್ರೀತಿಸುತ್ತಿದ್ದರು. ಪೋಷಕರ ವಿರೋಧದ ನಡುವೆಯೂ ಈ ಜೋಡಿ ಇತ್ತೀಚೆಗೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದರು. ಮದುವೆಯಾದ ಬಳಿಕ ಸೃಷ್ಟಿ ತನ್ನ ಪತಿ ಮಣಿಕಂಠನ ಮನೆಯಲ್ಲಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಸೃಷ್ಟಿಯ ತಂದೆ ಮತ್ತು ಸಂಬಂಧಿಕರು ಮಣಿಕಂಠನ ಮನೆಗೆ ನುಗ್ಗಿದ್ದಾರೆ. ಅಲ್ಲಿ ಸೃಷ್ಟಿಯನ್ನು ಬಲವಂತವಾಗಿ ಹೊಡೆದು, ಎಳೆದಾಡಿ ಕಾರಿಗೆ ಹಾಕಿಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಸಾವಿರಾರು ಮುಸ್ಲಿಮರಿಂದ ಬೃಹತ್ ಪ್ರತಿಭಟನೆ, ಪೊಲೀಸ್ ಠಾಣೆಗೆ ಮುತ್ತಿಗೆ ಯತ್ನ

ಇಲ್ಲಿದೆ ನೋಡಿ ವಿಡಿಯೋ:

“ಅಪ್ಪಾ ನಾನು ಮದುವೆಯಾಗಿದ್ದೇನೆ, ನನ್ನನ್ನು ಬಿಟ್ಟುಬಿಡಿ” ಎಂದು ಸೃಷ್ಟಿ ಕಣ್ಣೀರಿಟ್ಟು ಬೇಡಿಕೊಂಡ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಘಟನೆ ಕುರಿತು ದೂರು ನೀಡಲು ಹೋದರೆ ಆಡೂರು ಪೊಲೀಸ್ ಠಾಣೆಯ ಅಧಿಕಾರಿಗಳು ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಮಣಿಕಂಠ ಆರೋಪಿಸಿದ್ದಾರೆ. ಕಾನೂನುಬದ್ಧವಾಗಿ ಮದುವೆಯಾಗಿದ್ದರೂ ರಕ್ಷಣೆ ನೀಡಬೇಕಾದ ಪೊಲೀಸರೇ ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವರದಿ: ಅಣ್ಣಪ್ಪ ಬಾರ್ಕಿ

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:56 pm, Wed, 4 March 26

Source link

ಬೇಸಿಗೆಯಲ್ಲಿ ದೇಹ ತಂಪಾಗಿರಿಸಲು ಈ ಹಣ್ಣುಗಳನ್ನು ಸೇವನೆ ಮಾಡಲೇಬೇಕು – Kannada News | These are the fruits that keep the body cool on hot summer

ಮಾರ್ಚ್‌ ತಿಂಗಳ ಆರಂಭದೊಂದಿಗೆ ಬೇಸಿಗೆಯೂ (summer) ಶುರುವಾಗಿದೆ. ಈ ಸುಡು ಬೇಸಿಗೆಯಲ್ಲಿ ವಾತಾವರಣ ಮಾತ್ರವಲ್ಲ ದೇಹ ಕೂಡ ತುಂಬಾನೆ ಬಿಸಿಯಾಗಿರುತ್ತದೆ. ಇನ್ನೂ ತಾಪಮಾನ ಹೆಚ್ಚಾದಂತೆ ನಿರ್ಜಲೀಕರಣ, ಶಾಖದ ಹೊಡೆತ ಮತ್ತು ಆಯಾಸದಂತಹ ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭಿಸುತ್ತದೆ. ಹೀಗಿರುವಾಗ ದೇಹವನ್ನು ತಂಪಾಗಿರಿಸಲು ದೇಹದಲ್ಲಿ ನೀರಿನಾಂಶವನ್ನು ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯ. ಇದಕ್ಕಾಗಿ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯುವುದರ  ಜೊತೆಗೆ ಈ ಬೇಸಿಗೆಯಲ್ಲಿ ಕೆಲವೊಂದಷ್ಟು ಹಣ್ಣುಗಳನ್ನು ಸೇವನೆ ಮಾಡಬೇಕು. ಇದು ನಿರ್ಜಲೀಕರಣವನ್ನು ತಡೆಯುವುದು ಮಾತ್ರವಲ್ಲದೆ ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ.

ಬೇಸಿಗೆಯಲ್ಲಿ ಸೇವನೆ ಮಾಡಲೇಬೇಕಾದ ಹಣ್ಣುಗಳಿವು:

ಕಲ್ಲಂಗಡಿ: ಕಲ್ಲಂಗಡಿ ಹಣ್ಣಿನಲ್ಲಿ ಸುಮಾರು ಶೇ. 92 ರಷ್ಟು ನೀರು ಇದ್ದು, ಇದು ದೇಹಕ್ಕೆ ಜಲಸಂಚಯನ ಒದಗಿಸಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಚರ್ಮವನ್ನು ಆರೋಗ್ಯಕರವಾಗಿಡುವುದರ ಜೊತೆಗೆ ನಿರ್ಜಲೀಕರಣವನ್ನು ತಡೆಯುತ್ತದೆ. ಕಲ್ಲಂಗಡಿ ದೇಹವನ್ನು ತಂಪಾಗಿಸುವ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಈ ಬೇಸಿಗೆಯಲ್ಲಿ ಈ ಹಣ್ಣನ್ನು ಸೇವನೆ ಮಾಡಲೇಬೇಕು.

ದಾಳಿಂಬೆ: ದಾಳಿಂಬೆ ಬೇಸಿಗೆ ಕಾಲದಲ್ಲಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಕಬ್ಬಿಣಾಂಶ ಸಮೃದ್ಧವಾಗಿದ್ದು, ಇದು ರಕ್ತಹೀನತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಈ ಹಣ್ಣಿನಲ್ಲಿ ನೀರಿನ ಅಂಶ ಸಮೃದ್ಧವಾಗಿದ್ದು, ಇದು ದೇಹಕ್ಕೆ ಜಲಸಂಚಯನವನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ, ದಾಳಿಂಬೆ ಮಲಬದ್ಧತೆ, ಹೊಟ್ಟೆ ನೋವು ಮತ್ತು ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಶಾಖದ ಹೊಡೆತವನ್ನು ತಪ್ಪಿಸಲು, ದಾಳಿಂಬೆ ಮತ್ತು ದಾಳಿಂಬೆ ಜ್ಯೂಸ್‌ ಸೇವಿಸಿ.

ಕಿತ್ತಳೆ: ಕಿತ್ತಳೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅವುಗಳಲ್ಲಿರುವ ವಿಟಮಿನ್ ಸಿ ದೇಹಕ್ಕೆ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ. ಕಿತ್ತಳೆ ತಿನ್ನುವುದರಿಂದ ಆಯಾಸ ಕಡಿಮೆಯಾಗುತ್ತದೆ ಮತ್ತು ದೇಹಕ್ಕೆ ಉಲ್ಲಾಸ ದೊರೆಯುತ್ತದೆ. ಬೇಸಿಗೆಯಲ್ಲಿ ದೇಹದಲ್ಲಿನ ನೀರಿನ ಕೊರತೆಯನ್ನು ನೀಗಿಸುತ್ತದೆ.

ದ್ರಾಕ್ಷಿಗಳು:  ಸಿಹಿ ಮತ್ತು ಹುಳಿ ರುಚಿಯನ್ನು ಹೊಂದಿರುವ ದ್ರಾಕ್ಷಿ ಹಣ್ಣನ್ನು ಬೇಸಿಗೆಯಲ್ಲಿ ಸೇವನೆ ಮಾಡುವುದು ಉತ್ತಮ. ದ್ರಾಕ್ಷಿ ಶೇಕಡಾ 70 ಕ್ಕಿಂತ ಹೆಚ್ಚು ನೀರನ್ನು ಹೊಂದಿದ್ದು, ಇದು ದೇಹಕ್ಕೆ ಜಲಸಂಚಯನವನ್ನು ಒದಗಿಸುತ್ತದೆ. ಶಾಖದ ಹೊಡೆತವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಹಾಗಾಗಿ ಈ ಬೇಸಿಗೆಯಲ್ಲಿ ನೀವು ಉಪಾಹಾರ, ಮಧ್ಯಾಹ್ನದ ಭೋಜನ  ಮತ್ತು ಸಂಜೆ ತಿಂಡಿ ಸಮಯದಲ್ಲಿ ದ್ರಾಕ್ಷಿಯನ್ನು ಸೇವಿಸಬಹುದು.

ಸೌತೆಕಾಯಿ: ಬೇಸಿಗೆಯಲ್ಲಿ ದೇಹವನ್ನು ಕೂಲ್‌ ಆಗಿರಿಸಲು ಸೌತೆಕಾಯಿ ಸೇವನೆ ಮಾಡುವುದು ಸಹ ಬೆಸ್ಟ್.‌ ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ನಿರ್ಜಲೀಕರಣವನ್ನು ತಡೆಯಲು ಸಹಾಯ ಮಾಡುತ್ತದೆ. ಅಲ್ಲದೆ ಸೌತೆಕಾಯಿಯಲ್ಲಿರುವ ಎಲೆಕ್ಟ್ರೋಲೈಟ್‌ಗಳು ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಮಣ್ಣಿನ ಮಡಿಕೆ ನೀರು ಕುಡಿಯೋದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ?

 ತೆಂಗಿನ ನೀರು: ದೇಹವನ್ನು ನೈಸರ್ಗಿಕವಾಗಿ ತಂಪಾಗಿಸಲು ಮತ್ತು ಹೈಡ್ರೇಟ್ ಮಾಡಲು ಎಳನೀರು ಸೇವನೆ ಮಾಡುವುದು ಬೆಸ್ಟ್.‌ ಎಲೆಕ್ಟ್ರೋಲೈಟ್‌ಗಳಲ್ಲಿ ಸಮೃದ್ಧವಾಗಿರುವ ಇದು ಈ ಬಿಸಿಲ ಶಾಖದಲ್ಲಿ ಆಯಾಸವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ದೇಹವನ್ನು ನಿರ್ವಿಷಗೊಳಿಸಲು ಸಹ ಸಹಾಯ ಮಾಡುತ್ತದೆ.

ಪಪ್ಪಾಯಿ: ಪಪ್ಪಾಯಿ ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತದೆ. ಇದರಲ್ಲಿ ದೇಹವನ್ನು ಚೈತನ್ಯಪೂರ್ಣವಾಗಿಡುವ ಉತ್ಕರ್ಷಣ ನಿರೋಧಕಗಳಿದ್ದು, ಇದು ಬೇಸಿಗೆಯಲ್ಲಿ ದೇಹವನ್ನು ಕೂಲ್‌ ಆಗಿಡುತ್ತದೆ.

ಲಿಚಿ: ಲಿಚಿ ನೀರಿನಲ್ಲಿ ಸಮೃದ್ಧವಾಗಿದ್ದು ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಇದರ ವಿಟಮಿನ್ ಸಿ ಮತ್ತು ಬಿ-ಕಾಂಪ್ಲೆಕ್ಸ್ ಅಂಶವು ದೇಹವನ್ನು ಚೈತನ್ಯಗೊಳಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link