All posts by nagaraj11081993

ಇರಾನ್-ಇಸ್ರೇಲ್ ಸಂಘರ್ಷದ ಬಗ್ಗೆ ನೋಡಬಹುದಾದ ಸಿನಿಮಾಗಳಿವು – Kannada News | Movies, Web series and Documentary about Israel and Iran conflict

ಇರಾನ್ ಮತ್ತು ಇಸ್ರೇಲ್ ನಡುವೆ ಮತ್ತೊಮ್ಮೆ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಅಮೆರಿಕ ಇಸ್ರೇಲ್​​ ನೆರವಿಗೆ ನಿಂತಿದ್ದು ಕಳೆದ ಕೆಲ ದಿನಗಳಿಂದಲೂ ಬಾಂಬ್ ದಾಳಿಗಳು ನಡೆಯುತ್ತಲೇ ಇವೆ. ಅಂದಹಾಗೆ ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಇಂದು-ನಿನ್ನೆಯದ್ದಲ್ಲ. ಇದಕ್ಕೆ ದಶಕಗಳ ಇತಿಹಾಸವಿದೆ. ಇರಾನ್ ಮತ್ತು ಇಸ್ರೇಲ್ ಸಂಘರ್ಷದ ಬಗ್ಗೆ ಡಾಕ್ಯುಮೆಂಟರಿಗಳು ಕೆಲ ಸಿನಿಮಾಗಳು ಸಹ ನಿರ್ಮಾಣ ಆಗಿವೆ. ಇವುಗಳ ಮೂಲಕ ಪ್ರಸ್ತುತ ಪರಿಸ್ಥಿತಿಯನ್ನು ಇನ್ನಷ್ಟು ಆಳವಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದ ಬಗೆಗೆ ನಿರ್ಮಾಣಗೊಂಡಿರುವ ಡಾಕ್ಯುಮೆಂಟರಿ ಮತ್ತು ಸಿನಿಮಾಗಳ ಪಟ್ಟಿ ಇಲ್ಲಿದೆ…

ಸಿನಿಮಾ ಮತ್ತು ವೆಬ್ ಸರಣಿ

ಹಿಂದಿ ಸಿನಿಮಾ ‘ಟೆಹ್ರಾನ್’ 2012 ರಲ್ಲಿ ನಡೆದ ಇಸ್ರೇಲಿ ಅಧಿಕಾರಿಗಳ ಮೇಲಿನ ದಾಳಿಯ ಕತೆಯನ್ನು ಹೊಂದಿದೆ. ಆದರೆ ಇದು ಸಂಪೂರ್ಣ ಸತ್ಯ ಘಟನೆ ಆಧರಿತ ಸಿನಿಮಾ ಅಲ್ಲ. ಸಿನಿಮಾನಲ್ಲಿ ಜಾನ್ ಅಬ್ರಹಾಂ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಜೀ5 ಮತ್ತು ನೆಟ್​​ಫ್ಲಿಕ್ಸ್​​ನಲ್ಲಿ ವೀಕ್ಷಿಸಬಹುದಾಗಿದೆ.

ಫೌಡಾ (Fauda) ವೆಬ್ ಸರಣಿ ಮುಖ್ಯವಾಗಿ ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷದ ಬಗ್ಗೆ ಇದ್ದರೂ, ನಂತರದ ಸೀಸನ್‌ಗಳಲ್ಲಿ ಇರಾನ್ ಹೇಗೆ ಈ ಸಂಘರ್ಷಕ್ಕೆ ಹಣಕಾಸು ಮತ್ತು ಬೆಂಬಲ ನೀಡುತ್ತದೆ ಎಂಬುದನ್ನು ತೋರಿಸಲಾಗಿದೆ. ಇದನ್ನು ನೆಟ್​​ಫ್ಲಿಕ್ಸ್​ನಲ್ಲಿ ವೀಕ್ಷಿಸಬಹುದಾಗಿದೆ.

ಆಪಲ್ ಟಿವಿಯಲ್ಲಿ ಸ್ಟ್ರೀಮ್ ಆಗುವ ‘ಟೆಹ್ರಾನ್’ ವೆಬ್ ಸರಣಿ ಇಸ್ರೇಲ್ ಮತ್ತು ಇರಾನ್ ಸಂಘರ್ಷದ ಬಗ್ಗೆ ಅತ್ಯಂತ ನೇರವಾದ ಚಿತ್ರಣ ನೀಡುವ ಸರಣಿ ಎನ್ನಲಾಗುತ್ತದೆ. ಇರಾನ್‌ನ ಪರಮಾಣು ರಿಯಾಕ್ಟರ್ ಅನ್ನು ನಿಷ್ಕ್ರಿಯಗೊಳಿಸಲು ಟೆಹ್ರಾನ್‌ಗೆ ಹೋಗುವ ಮೊಸಾದ್ (Mossad) ಹ್ಯಾಕರ್-ಏಜೆಂಟ್‌ನ ಕಥೆ ಇದು. 2025/2026 ರಲ್ಲಿ ಇದರ ಮೂರನೇ ಸೀಸನ್ ಬಿಡುಗಡೆ ಆಗಿದೆ.

ದಿ ಏಂಜೆಲ್ (The Angel) ಇದು ಇಸ್ರೇಲ್ ಅನ್ನು ಆಕಸ್ಮಿಕ ದಾಳಿಯಿಂದ ರಕ್ಷಿಸಿದ ಡಬಲ್ ಏಜೆಂಟ್ ಕತೆಯನ್ನು ಒಳಗೊಂಡಿರುವ ಸಿನಿಮಾ ಆಗಿದೆ. ‘ರೆಡ್ ಸೀ ಡೈವಿಂಗ್ ರೆಸಾರ್ಟ್’ (Red Sea Diving Resort) ಶತ್ರು ರಾಷ್ಟ್ರಗಳ ಭೂಮಿಯಲ್ಲಿ ಇಸ್ರೇಲ್​​ನ ವಿಶೇಷ ಪಡೆ ಮೊಸಾದ್ ಹೇಗೆ ಸಾಹಸಮಯ ಕಾರ್ಯಾಚರಣೆ ನಡೆಸುತ್ತದೆ ಎಂಬುದನ್ನು ಇದು ತೋರಿಸುತ್ತದೆ. ಇವುಗಳು ಮಾತ್ರವಲ್ಲದೆ, ಆಸ್ಕರ್ ವಿಜೇತ ‘ಆರ್ಗೊ’, ‘ಮ್ಯೂನಿಚ್’ ಇನ್ನೂ ಕೆಲವು ಸಿನಿಮಾಗಳು ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಇಸ್ರೇಲ್​​ನ ಮೋಸಾದ್ ಬಗ್ಗೆ, ಇರಾನಿನ ಆಂತರಿಕ ಸಂಘರ್ಷಗಳ ಬಗ್ಗೆ ಕತೆಗಳನ್ನು ಒಳಗೊಂಡಿವೆ.

ಇದನ್ನೂ ಓದಿ:ಇರಾನ್- ಇಸ್ರೇಲ್ ಯುದ್ಧದಿಂದ ತೈಲ ಬೆಲೆ ಏರಿಕೆ ಸುದ್ದಿ: ಭಟ್ಕಳದಲ್ಲಿ ಡೀಸೆಲ್, ಪೆಟ್ರೋಲ್​​ಗೆ ಮುಗಿಬಿದ್ದ ಜನ

ಡಾಕ್ಯುಮೆಂಟರಿ

ಇಸ್ರೇಲ್ ಅಂಡ್ ಇರಾನ್: ದಿ ಹಿಡನ್ ವಾರ್ (Israel and Iran: The Hidden War – 2022): ಇಸ್ರೇಲ್ ಮತ್ತು ಇರಾನ್ ನಡುವೆ ದಶಕಗಳಿಂದ ನಡೆಯುತ್ತಿರುವ ಗುಪ್ತ ಸಂಘರ್ಷವನ್ನು ಈ ಸಾಕ್ಷ್ಯಚಿತ್ರವು ಪರಿಶೋಧಿಸುತ್ತದೆ. ಇದರಲ್ಲಿ ಗುಪ್ತಚರ ಕಾರ್ಯಾಚರಣೆಗಳು, ಪರಮಾಣು ಉದ್ವಿಗ್ನತೆಗಳು ಮತ್ತು ಎರಡೂ ದೇಶಗಳ ನಡುವಿನ ಪ್ರತೀಕಾರದ ದಾಳಿಗಳ ಬಗ್ಗೆ ವಿವರಿಸಲಾಗಿದೆ.

ರಿಮೇಕಿಂಗ್ ದಿ ಮಿಡಲ್ ಈಸ್ಟ್: ಇಸ್ರೇಲ್ ವರ್ಸಸ್ ಇರಾನ್ (Remaking the Middle East: Israel vs. Iran): ಇದು ಸುಮಾರು 1 ಗಂಟೆ 54 ನಿಮಿಷಗಳ ವಿಶೇಷ ಸಾಕ್ಷ್ಯಚಿತ್ರ. ಇರಾನ್‌ನ ಪರಮಾಣು ಕಾರ್ಯಕ್ರಮ ಮತ್ತು ಪ್ರಾಕ್ಸಿ ಯುದ್ಧಗಳು ಹೇಗೆ ನೇರ ಸಂಘರ್ಷಕ್ಕೆ ಕಾರಣವಾದವು ಮತ್ತು ಈ ಪೈಪೋಟಿಯಲ್ಲಿ ಅಮೆರಿಕದ ಪಾತ್ರವೇನು ಎಂಬುದನ್ನು ಇದು ತೋರಿಸುತ್ತದೆ. ನಿಜ ದೃಶ್ಯಗಳು, ಸಂದರ್ಶನಗಳನ್ನು ಇದು ಒಳಗೊಂಡಿದೆ.

ದಿ ಬಿಗ್ ವಾರ್: ಇರಾನ್, ಲೆಬನಾನ್ ಅಂಡ್ ಇಸ್ರೇಲ್ (The Big War: Iran, Lebanon and Israel): ಲೆಬನಾನ್‌ನಲ್ಲಿ ಇರಾನ್‌ನ ಪ್ರಭಾವ ಮತ್ತು ಇಸ್ರೇಲ್‌ನೊಂದಿಗಿನ ಉದ್ವಿಗ್ನತೆಯಿಂದಾಗಿ ಬೆಳೆಯುತ್ತಿರುವ ಪ್ರಾದೇಶಿಕ ಸಂಘರ್ಷದ ಮೇಲೆ ಈ ಸಾಕ್ಷ್ಯಚಿತ್ರವು ಬೆಳಕು ಚೆಲ್ಲುತ್ತದೆ.

12 ಡೇಸ್ ದಟ್ ಶೂಕ್ ಇರಾನ್ (12 Days That Shook Iran): ಅಲ್ ಜಜೀರಾ ವಾಹಿನಿಯ ಈ ಸಾಕ್ಷ್ಯಚಿತ್ರವು 2025 ರ ಇಸ್ರೇಲ್-ಇರಾನ್ ಸಂಘರ್ಷದಿಂದ ಜನಸಾಮಾನ್ಯರ ಮೇಲೆ ಉಂಟಾದ ಪರಿಣಾಮದ ಬಗ್ಗೆ ವರದಿ ಇದೆ. ಇದು ಜನಪ್ರಿಯ ಸಾಕ್ಷ್ಯಚಿತ್ರ ಸಹ ಆಗಿದೆ.

ಇರಾನ್, ಇಸ್ರೇಲ್ ಅಂಡ್ ದಿ ಬಾಂಬ್ (Iran, Israel and the Bomb): ಈ ಎರಡು ರಾಷ್ಟ್ರಗಳ ನಡುವಿನ ಕಳೆದ ಮೂವತ್ತು ವರ್ಷಗಳ ಪರಮಾಣು ಮತ್ತು ವ್ಯೂಹಾತ್ಮಕ ಉದ್ವಿಗ್ನತೆಗಳ ಕುರಿತಾದ ಸಾಕ್ಷ್ಯಚಿತ್ರ ಇದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

SA vs NZ, T20 Semi Final Live Score: ಸೆಮಿಫೈನಲ್​ ಕಾಳಗಕ್ಕೆ ಕ್ಷಣಗಣನೆ – Kannada News | South Africa vs New Zealand1st Semi Final Live Cricket Score ICC Men T20 World Cup 2026 SA vs NZ Today Match Latest News and Updates in Kannada

LIVE NEWS & UPDATES

  • 04 Mar 2026 06:19 PM (IST)

    SA vs NZ, T20 Semi Final Live: ಮೊದಲ ಸೆಮಿಫೈನಲ್ ಪಂದ್ಯ

    2026 ರ ಟಿ20 ವಿಶ್ವಕಪ್‌ನ ಮೊದಲ ಸೆಮಿಫೈನಲ್ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯವು ಸಂಜೆ 7 ಗಂಟೆಗೆ ಪ್ರಾರಂಭವಾಗಲಿದ್ದು, ಟಾಸ್ ಸಂಜೆ 6:30 ಕ್ಕೆ ನಡೆಯಲಿದೆ.

2026 ರ ಟಿ20 ವಿಶ್ವಕಪ್​ನ ನಾಕೌಟ್ ಸುತ್ತು ಇಂದಿನಿಂದ ಆರಂಭವಾಗಿದೆ. ಅದರಂತೆ ಮೊದಲ ಸೆಮಿಫೈನಲ್ ಪಂದ್ಯ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಎರಡೂ ತಂಡಗಳು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ದಕ್ಷಿಣ ಆಫ್ರಿಕಾವನ್ನು ಐಡೆನ್ ಮಾರ್ಕ್ರಾಮ್ ಮತ್ತು ನ್ಯೂಜಿಲೆಂಡ್ ತಂಡವನ್ನು ಮಿಚೆಲ್ ಸ್ಯಾಂಟ್ನರ್ ಮುನ್ನಡೆಸುತ್ತಿದ್ದಾರೆ. ಎರಡೂ ತಂಡಗಳು ಒಮ್ಮೆಯೂ ಟಿ20 ವಿಶ್ವಕಪ್ ಗೆದ್ದಿಲ್ಲ. ಹೀಗಾಗಿ ಉಭಯ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಜಿದ್ದಾಜಿದ್ದಿನ ಹೋರಾಟ ನೀಡುವ ಇರಾದೆಯಲ್ಲಿವೆ.

Published On – Mar 04,2026 6:19 PM

Source link

‘ಟಾಕ್ಸಿಕ್’ ರಿಲೀಸ್ ಮುಂದೂಡಿಕೆ: ಲಾಭ ಪಡೆಯಲು ಮುಂದಾದ ಪವನ್ ಕಲ್ಯಾಣ್ – Kannada News | Pawan Kalyan’s Ustad Bhagat Singh movie may release on March 19

ಯಶ್ (Yash) ನಟನೆಯ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಟಾಕ್ಸಿಕ್’ ಬಿಡುಗಡೆ ಮುಂದೂಡಲ್ಪಟ್ಟಿದೆ. ಮಾರ್ಚ್ 19ಕ್ಕೆ ಬಿಡುಗಡೆ ಆಗಬೇಕಿದ್ದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿದ್ದು, ಸಿನಿಮಾ ಜೂನ್ 04 ರಂದು ಬಿಡುಗಡೆ ಆಗಲಿದೆ. ಆದರೆ ಇದೀಗ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿರುವುದರಿಂದ ಅದರ ಲಾಭ ಪಡೆಯಲು ಕೆಲ ಸಿನಿಮಾಗಳು ಮುಂದಾಗಿವೆ. ಈಗಾಗಲೇ ಡಾರ್ಲಿಂಗ್ ಕೃಷ್ಣ ಅವರು ತಮ್ಮ ‘ಲವ್ ಮಾಕ್ಟೆಲ್ 3’ ಸಿನಿಮಾವನ್ನು ಮಾರ್ಚ್ 19ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಇದೀಗ ತೆಲುಗು ಸಿನಿಮಾ ಒಂದು ಸಹ ಈಗಾಗಲೇ ಘೋಷಣೆಯಾಗಿದ್ದ ದಿನಾಂಕಕ್ಕಿಂತಲೂ ಮುಂಚಿತವಾಗಿ ಬಿಡುಗಡೆ ಮಾಡಲು ಯೋಜನೆ ಹಾಕಿದ್ದಾರೆ.

ಆಂಧ್ರ ಡಿಸಿಎಂ ಸಹ ಆಗಿರುವ ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಹಲವು ಬಾರಿ ರಿಲೀಸ್ ಮುಂದೂಡಿಕೆಗಳ ಬಳಿಕ ಅಂತಿಮವಾಗಿ ಮಾರ್ಚ್ 26ರಂದು ಬಿಡುಗಡೆ ಆಗುವುದಾಗಿ ಘೋಷಿಸಲಾಗಿತ್ತು. ಮಾರ್ಚ್ 19 ರಂದು ‘ಟಾಕ್ಸಿಕ್’ ಬಿಡುಗಡೆ ಇದ್ದ ಕಾರಣಕ್ಕಾಗಿಯೇ ಒಂದು ವಾರ ತಡವಾಗಿ ಸಿನಿಮಾವನ್ನು ಬಿಡುಗಡೆ ಮಾಡುವ ನಿರ್ಧಾರ ಮಾಡಲಾಗಿತ್ತು. ಆದರೆ ಈಗ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿರುವ ಕಾರಣ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾವನ್ನು ಒಂದು ವಾರ ಮುಂಚಿತವಾಗಿ ಅಂದರೆ ಮಾರ್ಚ್ 19ರಂದೇ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಮಾರ್ಚ್ 19 ಹಿಂದೂಗಳ ಹೊಸ ವರ್ಷವಾದ ಯುಗಾದಿ ಹಬ್ಬವಿದ್ದು ಸತತ ರಜೆ ಸಹ ಇದೆ. ಹಾಗಾಗಿ ಚಿತ್ರತಂಡಗಳು ಆ ದಿನಾಂಕದ ಮೇಲೆ ಕಣ್ಣಿಟ್ಟಿವೆ. ಮೊದಲಿಗೆ ‘ಟಾಕ್ಸಿಕ್’ ಸಿನಿಮಾ ಸಹ ಇದೇ ಕಾರಣಕ್ಕೆ ಮಾರ್ಚ್ 19ನ್ನು ಬಿಡುಗಡೆಗೆ ಆಯ್ಕೆ ಮಾಡಿತ್ತು. ಆದರೆ ಈಗ ಮಧ್ಯ ಪ್ರಾಚ್ಯದಲ್ಲಿ ಉಂಟಾಗಿರುವ ಯುದ್ಧ ಭೀತಿಯ ಕಾರಣಕ್ಕೆ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ.

ಇದನ್ನೂ ಓದಿ:ಪವನ್ ಕಲ್ಯಾಣ್ ಹೊಸ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

ಅದೇ ದಿನ ಹಿಂದಿಯ ಬಹು ನಿರೀಕ್ಷಿತ ಸಿನಿಮಾ ‘ಧುರಂಧರ್ 2’ ಸಿನಿಮಾ ಬಿಡುಗಡೆ ಆಗುತ್ತಿದೆ. ಆದರೆ ದಕ್ಷಿಣದಲ್ಲಿ ‘ಧುರಂಧರ್ 2’ ಸಿನಿಮಾಕ್ಕೆ ಹೆಚ್ಚಿನ ಹೈಪ್ ಸಾಮಾನ್ಯವಾಗಿ ಇರುವುದಿಲ್ಲವಾದ್ದರಿಂದ ಪವನ್ ಕಲ್ಯಾಣ್ ಅವರು ‘ಧುರಂಧರ್ 2’ ಎದುರು ತಮ್ಮ ಸಿನಿಮಾ ಬಿಡುಗಡೆಗೆ ಮುಂದಾಗಿದ್ದಾರೆ. ಅಲ್ಲದೆ, ‘ಟಾಕ್ಸಿಕ್’ ರೀತಿ ಅವರದ್ದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ಅವರ ಸಿನಿಮಾ ಮಾರುಕಟ್ಟೆ ದಕ್ಷಿಣ ಭಾರತ ಮಾತ್ರವೇ ಆಗಿರುವ ಕಾರಣ ಅವರಿಗೆ ‘ಧುರಂಧರ್ 2’ ಎದುರು ಸ್ಪರ್ಧೆ ಮಾಡುವುದು ಕಷ್ಟವೇನೂ ಅಲ್ಲ.

‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ, ಪವನ್ ಅವರು ಚುನಾವಣೆಗೆ ಮುಂಚೆ ಚಿತ್ರೀಕರಣ ಆರಂಭಿಸಿದ ಸಿನಿಮಾಗಳಲ್ಲಿ ಕೊನೆಯ ಸಿನಿಮಾ ಆಗಿದೆ. ಈ ಸಿನಿಮಾವನ್ನು ಅವರ ಆಪ್ತ ಹರೀಶ್ ಶಂಕರ್ ನಿರ್ದೇಶನ ಮಾಡಿದ್ದು, ಸಿನಿಮಾನಲ್ಲಿ ಕನ್ನಡತಿ ಶ್ರೀಲೀಲಾ ನಾಯಕಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs ENG, T20 Semi Final Live Streaming: ಭಾರತ- ಇಂಗ್ಲೆಂಡ್ ಸೆಮೀಸ್ ಕಾಳಗ ಯಾವಾಗ, ಎಲ್ಲಿ, ಎಷ್ಟು ಗಂಟೆಗೆ ಆರಂಭ? – Kannada News | India vs England Semi Final Live Streaming When and Where to Watch IND vs ENG T20 World Cup Cricket Match Today in Kannada

2026 ರ ಟಿ20 ವಿಶ್ವಕಪ್‌ನ ಸೆಮಿಫೈನಲ್ (T20 World Cup 2026 Semifinal) ಪಂದ್ಯಗಳು ಇಂದಿನಿಂದ ಆರಂಭವಾಗಲಿವೆ. ಇಂದು ಮೊದಲ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌ ತಂಡವನ್ನು ಎದುರಿಸಲಿದೆ. ನಾಳೆ ಆತಿಥೇಯ ಭಾರತ ತಂಡವನ್ನು ಇಂಗ್ಲೆಂಡ್‌ (India vs England) ಎದುರಿಸಲಿದೆ. ಒಂದೆಡೆ ಭಾರತ ತಂಡ ಗುಂಪು ಹಂತದಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದು ಸೂಪರ್ 8 ಸುತ್ತಿಗೆ ಅರ್ಹತೆ ಪಡೆದಿತ್ತು. ಇತ್ತ ಇಂಗ್ಲೆಂಡ್‌ ಒಂದು ಪಂದ್ಯದಲ್ಲಿ ಸೋತಿತ್ತಾದರೂ ಸೂಪರ್ 8 ಸುತ್ತಿಗೆ ಎಂಟ್ರಿಕೊಟ್ಟಿತ್ತು. ಸೂಪರ್ 8 ಸುತ್ತಿನಲ್ಲಿ ಭಾರತ 1 ಪಂದ್ಯವನ್ನು ಸೋತು, 2 ಪಂದ್ಯಗಳನ್ನು ಗೆದ್ದು ಸೆಮಿಫೈನಲ್‌ಗೆ ಟಿಕೆಟ್ ಪಡೆದರೆ, ಇತ್ತ ಇಂಗ್ಲೆಂಡ್‌ ಆಡಿದ ಮೂರು ಪಂದ್ಯಗಳನ್ನು ಗೆದ್ದು ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ. ಹೀಗಾಗಿ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಕಾಳಗವನ್ನು ನಿರೀಕ್ಷಿಸಲಾಗಿದೆ. ಹೀಗಾಗಿ ಈ ಹೈವೋಲ್ಟೇಜ್ ಕದನದ ಪೂರ್ಣ ವಿವರ ಇಲ್ಲಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯ ಯಾವಾಗ ನಡೆಯಲಿದೆ?

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯ ಫೆಬ್ರವರಿ 5 ರಂದು ನಡೆಯಲಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯ ಎಷ್ಟು ಗಂಟೆಗೆ ಆರಂಭ?

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಟಾಸ್ ಸಂಜೆ 6:30 ಕ್ಕೆ ನಡೆಯಲಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯವನ್ನು ಟಿವಿಯಲ್ಲಿ ವೀಕ್ಷಿಸುವುದು ಹೇಗೆ?

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯವನ್ನು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್​ನ ವಿವಿಧ ಚಾನೆಲ್​ಗಳಲ್ಲಿ ವೀಕ್ಷಿಸಬಹುದು. ಹಾಗೆಯೇ ಜಿಯೋ ಹಾಟ್ ಸ್ಟಾರ್​ನಲ್ಲೂ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು.

IND vs SA: ಟಿ20 ವಿಶ್ವಕಪ್​ನಲ್ಲಿ ಹೊಸ ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ

ಉಭಯ ತಂಡಗಳು

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರಿಂಕು ಸಿಂಗ್.

ಇಂಗ್ಲೆಂಡ್ ತಂಡ: ಹ್ಯಾರಿ ಬ್ರೂಕ್ (ನಾಯಕ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಟಾಮ್ ಬ್ಯಾಂಟನ್, ಜಾಕೋಬ್ ಬೆಥೆಲ್, ಜೋಸ್ ಬಟ್ಲರ್, ಸ್ಯಾಮ್ ಕರನ್, ಲಿಯಾಮ್ ಡಾಸನ್, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಜೇಮೀ ಓವರ್ಟನ್, ಆದಿಲ್ ರಶೀದ್, ಫಿಲಿಪ್ ಸಾಲ್ಟ್, ಜೋಶ್ ಟಂಗ್, ಲ್ಯೂಕ್ ವುಡ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ವಯಸ್ಸು 90 ದಾಟಿದ್ರೂ ರಸ್ತೆಯಲ್ಲಿ ಬಿಂದಾಸ್ ಆಗಿ ಕಾರು ಓಡಿಸುವ ಅಜ್ಜಿ – Kannada News | An elderly woman who drives a car with confidence on the road despite being over 90 years old

ವಯಸ್ಸು ಆಗುತ್ತಿದ್ದಂತೆ ದೇಹದಲ್ಲಿ ಶಕ್ತಿ ಇರಲ್ಲ. ದಿನನಿತ್ಯದ ಕೆಲಸಗಳಿಗೂ ಇನ್ನೊಬ್ಬರ ಅವಲಂಬಿಸಬೇಕಾದ ಪರಿಸ್ಥಿತಿ. ಆದರೆ ಈ ವೃದ್ಧೆ ಮಹಿಳೆ (old woman) ಮಾತ್ರ ಈ ಮಾತಿಗೆ ತದ್ವಿರುದ್ಧವಾಗಿದ್ದಾರೆ. ವಯಸ್ಸು 90 ಆದ್ರೂ ಈ ಅಜ್ಜಿಯ ಉತ್ಸಾಹಕ್ಕೇನು ಕಮ್ಮಿ ಇಲ್ಲ. ತಮ್ಮ ಇಳಿವಯಸ್ಸಿನಲ್ಲಿಯೂ ಜಮ್ಮುಕಾಶ್ಮೀರದ (Jammu Kashmir) ರಸ್ತೆಗಳಲ್ಲಿ ಆಲ್ಟೋ ಕಾರನ್ನು ಬಿಂದಾಸ್ ಆಗಿ ಓಡಿಸುತ್ತಿದ್ದು, ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೃದ್ಧೆಯ ಉತ್ಸಾಹ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.

ಟೈಮ್ಸ್‌ ನೌ (Times Now) ಹೆಸರಿನ ಎಕ್ಸ್ ಖಾತೆಯಲ್ಲಿ 90 ರ ವೃದ್ಧೆ ಮಹಿಳೆಯೊಬ್ಬರು ಕಾರು ಓಡಿಸುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಬ್ಲಾಗರ್ ವಿಶಾಲ್ ಅವರು ಅಜ್ಜಿ ಕಾರು ಓಡಿಸುವ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ವೃದ್ಧೆಯನ್ನು ಮಾತನಾಡಿಸಿದ ವೇಳೆ ಅವರ 90ಕ್ಕಿಂತ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ರಸ್ತೆಗಳಲ್ಲಿ ಸಲೀಸಾಗಿ ಕಾರು ಓಡಿಸುವುದನ್ನು ನೋಡಿ ಬ್ಲಾಗರ್ ಶಾಕ್ ಆಗಿರುವುದನ್ನು ನೀವು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ರೈಲಿನಲ್ಲಿ ಬ್ರೇಸ್ಲೆಟ್‌ ಮಾರಿ ಸ್ವಾಭಿಮಾನದ ಬದುಕು ಕಟ್ಟಿಕೊಂಡ ಅಜ್ಜಿ, ವೈರಲ್ ಆಯ್ತು ದೃಶ್ಯ

ಮಾರ್ಚ್ 4 ರಂದು ಹಂಚಿಕೊಳ್ಳಲಾದ ಈ ವಿಡಿಯೋವು ಐವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಅವರು ಮಿನಿ ಹಾರ್ಟ್ ಅಟ್ಯಾಕ್ ಮಾಡಿ ಎಲ್ಲರ ಹೃದಯ ಗೆದ್ದಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನನ್ನ ಕಣ್ಣಿನಿಂದಲೇ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ಎಕ್ಸ್ಪರ್ಟ್ ಗಳಿಗೂ ಸೆಡ್ಡು ಹೊಡೆಯುವಂತಿದ್ದಾರೆ ಈ ಅಜ್ಜಿ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಾರ್ಚ್ 11ರಂದು ತಮಿಳುನಾಡಿಗೆ ಪ್ರಧಾನಿ ಮೋದಿ ಭೇಟಿ; ಬಿಜೆಪಿಯ ಅದ್ಧೂರಿ ಸಾರ್ವಜನಿಕ ಸಭೆಯಲ್ಲಿ ಭಾಗಿ – Kannada News | PM Narendra Modi to visit Tamil Nadu on March 11

ತಿರುಚ್ಚಿ, ಮಾರ್ಚ್ 4: ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಾರ್ಚ್ 11ರಂದು ತಿರುಚ್ಚಿಯಲ್ಲಿ ನಡೆಯಲಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಭವ್ಯ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲು ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ತಮಿಳುನಾಡಿನಲ್ಲಿ ಶೀಘ್ರದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮಾರ್ಚ್ ತಿಂಗಳಲ್ಲಿ ಪ್ರಧಾನಿ ಮೋದಿ ಅವರು ತಮಿಳುನಾಡಿಗೆ ಭೇಟಿ ನೀಡುತ್ತಿರುವುದು ಇದು ಎರಡನೇ ಬಾರಿ.

ಮುಂದಿನ ವಾರ ತಮಿಳುನಾಡು ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಲಿದೆ. ತಮಿಳುನಾಡು ಶೀಘ್ರದಲ್ಲೇ ವಿಧಾನಸಭಾ ಚುನಾವಣೆಯನ್ನು ಎದುರಿಸಲಿರುವುದರಿಂದ ವಿವಿಧ ರಾಜಕೀಯ ಪಕ್ಷಗಳು ತೀವ್ರ ಚುನಾವಣಾ ಕೆಲಸದಲ್ಲಿ ತೊಡಗಿವೆ. ಚುನಾವಣೆಗೆ ಕೆಲವೇ ವಾರಗಳು ಬಾಕಿ ಇರುವುದರಿಂದ ತಮಿಳುನಾಡಿನ ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಮೈತ್ರಿ ಲೆಕ್ಕಾಚಾರದಲ್ಲಿ ನಿರತವಾಗಿವೆ. ಕಳೆದ ಚುನಾವಣೆಯಂತೆ, ಡಿಎಂಕೆ ಇಂಡಿಯ ಮೈತ್ರಿಕೂಟದೊಂದಿಗೆ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದೆ.

ಇದನ್ನೂ ಓದಿ: ಮಧ್ಯಪ್ರಾಚ್ಯ ಬಿಕ್ಕಟ್ಟು; ಭಾರತೀಯರಿಗಾಗಿ ನಿಯಂತ್ರಣ ಕೊಠಡಿ ಸ್ಥಾಪಿಸಿದ ಮೋದಿ ಸರ್ಕಾರ

ಮತ್ತೊಂದೆಡೆ, ಎಐಎಡಿಎಂಕೆ ಬಿಜೆಪಿ, ಪಿಎಂಕೆ, ಎಎಂಎಂಕೆ, ಟಿಎಂಸಿ, ಇಂಡಿಯನ್ ಡೆಮಾಕ್ರಟಿಕ್ ಪಾರ್ಟಿ, ನ್ಯೂ ಜಸ್ಟೀಸ್ ಪಾರ್ಟಿ ಮತ್ತು ಪೆರುಂತಲೈವರ್ ಮಕ್ಕಳ್ ಕಚ್ಚಿ ಜೊತೆ ಬಲವಾದ ಮೈತ್ರಿಯನ್ನು ದೃಢಪಡಿಸಿದೆ. ಎರಡೂ ಪಕ್ಷಗಳು ಮೈತ್ರಿಯನ್ನು ದೃಢಪಡಿಸಿದ್ದರೂ ಅವರು ಇನ್ನೂ ಸೀಟು ಹಂಚಿಕೆಯನ್ನು ಘೋಷಿಸಿಲ್ಲ. ಈ ಹಿನ್ನೆಲೆಯಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಮಾರ್ಚ್ 2ರಂದು ದೆಹಲಿಗೆ ಹೋಗಿ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸೀಟು ಹಂಚಿಕೆ ಕುರಿತು ಮಾತುಕತೆ ನಡೆಸಿದ್ದರು.

ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ ವೇಳೆಯೇ ಇರಾನ್ ಮೇಲೆ ದಾಳಿಗೆ ನಡೆದಿತ್ತಾ ಪ್ಲಾನ್? ಸೀಕ್ರೆಟ್ ಬಯಲು ಮಾಡಿದ ಇಸ್ರೇಲ್

ಮಾರ್ಚ್ 1ರಂದು ತಮಿಳುನಾಡಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 11ರಂದು ಮತ್ತೆ ತಮಿಳುನಾಡಿಗೆ ತೆರಳಲಿದ್ದಾರೆ. ತಿರುಚ್ಚಿಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಪರವಾಗಿ ನಡೆಯಲಿರುವ ಭವ್ಯ ಸಾರ್ವಜನಿಕ ಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಸೇರಿದಂತೆ ಮೈತ್ರಿ ಪಕ್ಷದ ನಾಯಕರು ಭಾಗವಹಿಸಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮನೆ ಲೀಸ್​​ ಹಣದ ವಿಚಾರಕ್ಕೆ ಕಿರಿಕ್​​: ಅಳಿಯನಿಂದಲೇ ಹೋಯ್ತು ಮಾವನ ಜೀವ – Kannada News | Lease Money Row Turns Fatal: Nephew Murders Disabled Uncle in Austin Town, Bengaluru

ಮೃತ ವ್ಯಕ್ತಿ ಮತ್ತು ಆರೋಪಿImage Credit source: Tv9 Kannada

ಬೆಂಗಳೂರು, ಮಾರ್ಚ್​ 04: ಮನೆ ಲೀಸ್​​ ಹಣದ ವಿಚಾರವಾಗಿ ಅಕ್ಕ-ತಮ್ಮನ ನಡುವೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ವಿವೇಕನಗರ ಪೊಲೀಸ್​​ ಠಾಣಾ ವ್ಯಾಪ್ತಿಯ ಆಸ್ಟಿನ್ ಟೌನ್​​ನಲ್ಲಿ ನಡೆದಿದೆ. ಅಕ್ಕ-ತಮ್ಮನ ಗಲಾಟೆ ವೇಳೆ ಮಧ್ಯಪ್ರವೇಶಿದ್ದ ಅಳಿಯನೇ ಮಾವನ ಮೇಲೆ ದಾರುಣವಾಗಿ ದಾಳಿ ನಡೆಸಿ ಕೊಂದಿದ್ದಾನೆ. ಇನಾಯತ್ ಪಾಷಾ ಮೃತ ದುರ್ದೈವಿಯಾಗಿದ್ದು, ಆರೋಪಿ ಮಶ್ರೂರ್ ಅಹ್ಮದ್​​ನನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ 11 ವರ್ಷಗಳಿಂದ ವಿವೇಕನಗರದ ಆಸ್ಟಿನ್ ಟೌನ್‌ನಲ್ಲಿರುವ ಅಕ್ಕನ ಮನೆಯನ್ನೇ ಲೀಸ್​​ಗೆ ತೆಗೆದುಕೊಂಡು ಇನಾಯತ್ ಒಬ್ಬನೇ ವಾಸವಿದ್ದ. ಮೆಕಾನಿಕ್ ಆಗಿ ಕೆಲಸ ಮಾಡ್ಕೊಂಡಿದ್ದ ಈತ ಅಂಗವಿಕಲ ಕೂಡ. ಈ ನಡುವೆ ಲೀಸ್​​ ಹಣ ವಾಪಸ್​​ ನೀಡದೆ ಮನೆ ಖಾಲಿ ಮಾಡುವಂತೆ ಇನಾಯತ್ ಪಾಷಾನನ್ನು ಅಕ್ಕ ಪೀಡಿಸುತ್ತಿದ್ದಳು. ಇದೇ ವಿಚಾರಕ್ಕೆ ಅಕ್ಕ ಮತ್ತು ತಮ್ಮನ ನಡುವೆ ಆಗಾಗ ಕಿರಿಕ್​​ ನಡೆಯುತ್ತಲೇ ಇತ್ತು. ಭಾನುವಾರ ಕೂಡ ಇನಾಯತ್ ಮನೆಗೆ ಬಂದ ಕೂಡಲೇ ಮನೆ ಖಾಲಿ ಮಾಡು ಎಂದು ಜಗಳ ನಡೆದಿದೆ. ಈ ವೇಳೆ ಇನಾಯತ್ ಅಕ್ಕನ ಮಗ ಮಶ್ರೂರ್ ಅಹ್ಮದ್ ಕೂಡ ಜಗಳಕ್ಕೆ ಎಂಟ್ರಿಯಾಗಿದ್ದ. ಆದ್ರೆ ಜಗಳ ಮಧ್ಯೆ ಮಸ್ರೂರ್ ಮಾರಣಾಂತಿಕ ಹಲ್ಲೆ ಮಾಡಿದ್ರಿಂದ ಕುಸಿದು ಬಿದ್ದ ಇನಾಯತ್ ಪ್ರಾಣ ಬಿಟ್ಟಿದ್ದಾನೆ.

ಇದನ್ನೂ ಓದಿ: ಅಡುಗೆ ವಿಷಯದಲ್ಲಿ ಅತ್ತೆ ಕಿರಿಕ್; ನೊಂದ ಸೊಸೆ ಸಾವಿಗೆ ಶರಣು!

ಇನ್ನು ಘಟನೆಯನ್ನು ಮರೆಮಾಚಲು ಯತ್ನಿಸಿದ್ದ ಆರೋಪಿಗಳು ಇನಾಯತ್ ಅತಿಯಾಗಿ ಕುಡಿದು ಬಿದ್ದು ಸತ್ತುಹೋದ ಎಂದು ಸಂಬಂಧಿಕರು, ಸ್ಥಳೀಯರುನ್ನ ನಂಬಿಸಿದ್ದರು. ಆ ಬಳಿಕ ಇನಾಯತ್ ಅಂತ್ಯ ಸಂಸ್ಕಾರಕ್ಕೂ ಸಿದ್ದತೆ ನಡೆದಿತ್ತು. ಆದರೆ ಸಾವಿನ ಮಾಹಿತಿ ತಿಳೀದು ಸ್ಥಳಕ್ಕೆ ಹೋಗಿದ್ದ ವಿವೇಕ್ ನಗರ ಪೊಲೀಸರ ಬಳಿ ಕೆಲ ಸಂಬಂಧಿಕರು ಕೊಲೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪೊಲೀಸರು ಪ್ರಕರಣ ಕೆದಕಿದಾಗ ಕೊಲೆ ರಹಸ್ಯ ಬಯಲಾಗಿದೆ. ಇನ್ನು ಇನಾಯತ್​​ ಮೃತದೇಹ ಪರಿಶೀಲನೆ ವೇಳೆಯೂ ಮೈಮೇಲೆ ಗಾಯದ ಗುರುತುಗಳು ಕಂಡುಬಂದಿವೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲೂ ಇನಾಯತ್​​ ಸಾವು ಕೊಲೆ ಎಂಬುದು ದೃಢಪಟ್ಟಿದೆ. ಹೀಗಾಗಿ ಕೊಲೆಯನ್ನ ಸಹಜ ಸಾವೆಂದು ಬಿಂಬಿಸಲು ಹೋಗಿದ್ದ ಮಶ್ರೂರ್ ಈಗ ಖಾಕಿ ಅತಿಥಿಯಾಗಿದ್ದಾನೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ಬೆಚ್ಚಿಬೀಳಿಸುವ ವಿಡಿಯೋ ವೈರಲ್ – Kannada News | Horrific Accident on Agra Lucknow Expressway; Two Killed, Video Goes Viral

ಉನ್ನಾವೊ, ಮಾರ್ಚ್​ 4: ಉತ್ತರ ಪ್ರದೇಶದ ಉನ್ನಾವೊದ ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಬುಧವಾರ ಭೀಕರ ಅಪಘಾತ ಸಂಭವಿಸಿದೆ. ಬಂಗಾರ್ಮೌ ಪೊಲೀಸ್ ಠಾಣೆ ಪ್ರದೇಶದ ಗಹರ್ ಪೂರ್ವಾ ಗ್ರಾಮದ ಬಳಿ ಅತಿ ವೇಗವಾಗಿ ಬಂದ ಪಿಕಪ್ ನಿಯಂತ್ರಣ ತಪ್ಪಿ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅವಘಡ ಸಂಭವಿಸಿದೆ. ಪಿಕಪ್ ಚಾಲಕ ಮತ್ತು 3 ವರ್ಷದ ಬಾಲಕಿ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದಾರೆ. ಪಿಕಪ್​ನಲ್ಲಿದ್ದ 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾದ ಭಯಾನಕ ವಿಡಿಯೋ ಇಲ್ಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

KSP Recruitment 2025: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಬೃಹತ್ ನೇಮಕಾತಿ; 8,000ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಸರ್ಕಾರ ಆದೇಶ! – Kannada News | KSP Recruitment 2025: Apply for 8176 Constable and SI Posts in Karnataka Police Dept

ಪೊಲೀಸ್ ಇಲಾಖೆಯಲ್ಲಿ ಬೃಹತ್ ನೇಮಕಾತಿ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶವೊಂದು ಒದಗಿಬಂದಿದೆ. ಇಲಾಖೆಯ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 8,176 ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲು ಸರ್ಕಾರವು ಅನುಮೋದನೆ ನೀಡಿದ್ದು, ಈ ಕುರಿತು ಅಧಿಕೃತ ಆದೇಶ ಹೊರಬಿದ್ದಿದೆ. ಈ ಬೃಹತ್ ನೇಮಕಾತಿ ಪ್ರಕ್ರಿಯೆಯು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಹುದ್ದೆಗಳ ವರ್ಗೀಕರಣ ಮತ್ತು ವಿವರಗಳು:

ಈ ನೇಮಕಾತಿಯಲ್ಲಿ ವಿವಿಧ ಶ್ರೇಣಿಯ ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕೇತರ ವಲಯಗಳಿಗೆ ಹಂಚಿಕೆ ಮಾಡಲಾಗಿದೆ. ಅವುಗಳ ವಿವರ ಹೀಗಿದೆ:

ನಾಗರಿಕ ಪೊಲೀಸ್ ಕಾನ್ಸ್ಟೇಬಲ್ (Civil):

ಒಟ್ಟು 4,110 ಹುದ್ದೆಗಳಿದ್ದು, ಇದರಲ್ಲಿ 3,500 ಹುದ್ದೆಗಳು ಕಲ್ಯಾಣ ಕರ್ನಾಟಕೇತರ ವಲಯಕ್ಕೆ ಹಾಗೂ 610 ಹುದ್ದೆಗಳು ಕಲ್ಯಾಣ ಕರ್ನಾಟಕ ಭಾಗಕ್ಕೆ ಮೀಸಲಾಗಿವೆ.

ಸ್ಪೆಷಲ್ ರಿಸರ್ವ್ ಪೊಲೀಸ್ ಕಾನ್ಸ್ಟೇಬಲ್ (KSRP):

ಒಟ್ಟು 2,032 ಹುದ್ದೆಗಳ ಭರ್ತಿಗೆ ಅವಕಾಶ ನೀಡಲಾಗಿದ್ದು, ಇದರಲ್ಲಿ 1,500 ಹುದ್ದೆಗಳು ಕಲ್ಯಾಣ ಕರ್ನಾಟಕೇತರ ಹಾಗೂ 532 ಹುದ್ದೆಗಳು ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಲಭ್ಯವಿವೆ.

ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (APC):

ಈ ವಿಭಾಗದಲ್ಲಿ 1,650 ಹುದ್ದೆಗಳಿದ್ದು, 1,375 ಹುದ್ದೆಗಳು ಕಲ್ಯಾಣ ಕರ್ನಾಟಕೇತರ ಮತ್ತು 275 ಹುದ್ದೆಗಳು ಕಲ್ಯಾಣ ಕರ್ನಾಟಕ ವಲಯಕ್ಕೆ ಹಂಚಿಕೆಯಾಗಿವೆ.

ಪೊಲೀಸ್ ಕಾನ್ಸ್ಟೇಬಲ್ (KSISF):

ಕಲ್ಯಾಣ ಕರ್ನಾಟಕ ಭಾಗಕ್ಕೆ ಮಾತ್ರ ಮೀಸಲಾದ 364 ಹುದ್ದೆಗಳನ್ನು ಈ ವಿಭಾಗದಲ್ಲಿ ಭರ್ತಿ ಮಾಡಲಾಗುತ್ತಿದೆ.

ಡಿಟೆಕ್ಟಿವ್ ಸಬ್ ಇನ್ಸ್‌ಪೆಕ್ಟರ್ (DSI):

ಒಟ್ಟು 20 ಹುದ್ದೆಗಳಿದ್ದು, ಇದರಲ್ಲಿ 15 ಹುದ್ದೆಗಳು ಕಲ್ಯಾಣ ಕರ್ನಾಟಕೇತರ ಹಾಗೂ 5 ಹುದ್ದೆಗಳು ಕಲ್ಯಾಣ ಕರ್ನಾಟಕ ಭಾಗಕ್ಕೆ ಸೇರಿವೆ.

ಇದನ್ನೂ ಓದಿ: ರಾಮನಗರದಲ್ಲಿ ಮಾ. 5ರಂದು ಬೃಹತ್ ಉದ್ಯೋಗ ಮೇಳ

ಮೀಸಲಾತಿ ನಿಯಮ ಮತ್ತು ನ್ಯಾಯಾಲಯದ ಆದೇಶ:

ಈ ನೇಮಕಾತಿಯು ಪರಿಷ್ಕೃತ ಮೀಸಲಾತಿ ನಿಯಮಗಳ ಅನ್ವಯ ನಡೆಯಲಿದೆ. ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ. 15 ರಿಂದ ಶೇ. 17 ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. 3 ರಿಂದ ಶೇ. 7 ಕ್ಕೆ ಹೆಚ್ಚಿಸಲಾಗಿದೆ. ಈ ಸಂಬಂಧ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಗಳ (ಸಂಖ್ಯೆ: 200448/2025, 17968/2025 ಮತ್ತು 3145/2025) ವಿಚಾರಣೆ ನಡೆಸಿ, ನ್ಯಾಯಾಲಯವು 27.11.2025 ರಂದು ನೀಡಿದ ಮಧ್ಯಂತರ ಆದೇಶವನ್ನು ಪರಿಗಣಿಸಿ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಲು ಸರ್ಕಾರವು ನಿರ್ದೇಶನ ನೀಡಿದೆ.

ಈ ಮೇಲೆ ತಿಳಿಸಿದ ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಸರ್ಕಾರದಿಂದ ನೇಮಕಾತಿ ಅಧಿಸೂಚನೆ ಬಂದ ನಂತರ ಅರ್ಜಿಯನ್ನು ಸಲ್ಲಿಸಿ ಎಲ್ಲಾ ತಯಾರಿಯನ್ನು ನಡೆಸಿ ಪರೀಕ್ಷೆಯನ್ನ ಎದುರಿಸಿ ನಿಮ್ಮ ಕನಸಿನ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿ.

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ: Karnataka Recruitment

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಏಕದಿನ ತಂಡದಿಂದಲೂ ಬಾಬರ್ ಔಟ್; 6 ಹೊಸ ಮುಖಗಳಿಗೆ ಚೊಚ್ಚಲ ಅವಕಾಶ – Kannada News | PCB Axes Babar Azam from ODI Team, Announces New Squad for Bangladesh Series

2026 ರ ಟಿ20 ವಿಶ್ವಕಪ್‌ನಲ್ಲಿ (T20 World Cup  2026) ಪಾಕಿಸ್ತಾನ ತಂಡದ ಪ್ರದರ್ಶನ ಸಾಧಾರಣವಾಗಿತ್ತು. ಲೀಗ್ ಸುತ್ತನ್ನು ದಾಟಿ, ಸೂಪರ್ 8 ಸುತ್ತಿಗೆ ಬಂದಿದ್ದ ಪಾಕ್ ತಂಡಕ್ಕೆ ಈ ಸುತ್ತನ್ನು ಮೀರಿ ಮುಂದೆ ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ತಂಡದ ಕಳಪೆ ಪ್ರದರ್ಶನದಿಂದ ಕೆರಳಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಇತ್ತೀಚೆಗಷ್ಟೇ ಆಟಗಾರರಿಗೆ ದಂಡ ವಿಧಿಸಿತ್ತು. ಏತನ್ಮಧ್ಯೆ, ಅಲೀಮ್ ದಾರ್ ಆಯ್ಕೆದಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ತಂಡದ ಸ್ಟಾರ್ ಆಟಗಾರ ಬಾಬರ್ ಆಝಂ (Babar Azam) ವಿರುದ್ಧ ಮಂಡಳಿಯು ಮಹತ್ವದ ಕ್ರಮ ಕೈಗೊಂಡಿದೆ. ವಾಸ್ತವವಾಗಿ ಟಿ20 ವಿಶ್ವಕಪ್​ನಲ್ಲಿ ಬಾಬರ್ ಆಝಂ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರನ್ನು ಟಿ20 ವಿಶ್ವಕಪ್ ತಂಡದಿಂದ ಕೈಬಿಡಲಾಗಿತ್ತು. ಈಗ, ಏಕದಿನ ತಂಡದಿಂದಲೂ ಹೊರಹಾಕಲಾಗಿದೆ.

ಏಕದಿನ ತಂಡದಿಂದ ಆಝಂಗೆ ಗೇಟ್​ಪಾಸ್

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಂಬರುವ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಮೂರು ಪಂದ್ಯಗಳ ಸರಣಿಯು ಮಾರ್ಚ್ 11, 13 ಮತ್ತು 15, 2026 ರಂದು ಢಾಕಾದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ತಂಡದಲ್ಲಿ ಪ್ರಮುಖ ಬದಲಾವಣೆಗಳಾಗಿದ್ದು, ಹಲವಾರು ಹಿರಿಯ ಆಟಗಾರರನ್ನು ಕೈಬಿಡಲಾಗಿದ್ದು, ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಇದರ ಪರಿಣಾಮವಾಗಿ ಪ್ರಸ್ತುತ ಕಳಪೆ ಫಾರ್ಮ್‌ನೊಂದಿಗೆ ಹೋರಾಡುತ್ತಿರುವ ಬಾಬರ್ ಆಝಂ ಕೂಡ ತಂಡದಿಂದ ಹೊರಗುಳಿದಿದ್ದಾರೆ.

ಬಾಬರ್ ಆಝಂ ಜೊತೆಗೆ, ಸ್ಯಾಮ್ ಅಯೂಬ್ ಮತ್ತು ಮೊಹಮ್ಮದ್ ನವಾಜ್ ಅವರಂತಹ ಅನುಭವಿ ಆಟಗಾರರನ್ನು ಸರಣಿಯಿಂದ ಹೊರಗಿಡಲಾಗಿದೆ. ಟಿ20 ವಿಶ್ವಕಪ್ ತಂಡದಿಂದ ಹೊರಗುಳಿದಿದ್ದ ಹ್ಯಾರಿಸ್ ರೌಫ್ ಅವರನ್ನು ಏಕದಿನ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇವರೊಂದಿಗೆವಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫೈಸಲ್ ಅಕ್ರಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರಂತಹ ಆಟಗಾರರು ಸಹ ತಂಡದ ಭಾಗವಾಗಿದ್ದಾರೆ.

ಈ ಹೊಸ ಆಟಗಾರರಿಗೆ ಅವಕಾಶ

ಮತ್ತೊಂದೆಡೆ, ಶಹೀನ್ ಶಾ ಅಫ್ರಿದಿ ಏಕದಿನ ತಂಡದ ನಾಯಕನಾಗಿ ಮುಂದುವರಿಯಲಿದ್ದಾರೆ. ತಂಡದಲ್ಲಿ ಆರು ಮಂದಿ ಹೊಸ ಆಟಗಾರರಿಗೆ ಅವಕಾಶ ನೀಡಲಾಗಿದೆ. ಅವರಲ್ಲಿ ಅಬ್ದುಲ್ ಸಮದ್, ಮಾಜ್ ಸದಾಕತ್, ಮುಹಮ್ಮದ್ ಘಾಜಿ ಘೋರಿ, ಸಾದ್ ಮಸೂದ್, ಸಾಹಿಬ್ಜಾದಾ ಫರ್ಹಾನ್ ಮತ್ತು ಶಮಯಾಲ್ ಹುಸೇನ್ ಸೇರಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಸಾಹಿಬ್ಜಾದಾ ಫರ್ಹಾನ್ ಈಗ ಏಕದಿನ ಮಾದರಿಯಲ್ಲಿ ಛಾಪು ಮೂಡಿಸಲು ಸಿದ್ಧರಾಗಿದ್ದಾರೆ. ಅಬ್ದುಲ್ ಸಮದ್ ಪಾಕಿಸ್ತಾನದ ಟಿ20 ತಂಡದ ಭಾಗವಾಗಿದ್ದು, ಇದೀಗ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲಿದ್ದಾರೆ.

ಟಿ20 ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನ; ಪಾಕ್ ತಂಡದಲ್ಲಿ ಮೊದಲ ವಿಕೆಟ್ ಪತನ

ಪಾಕಿಸ್ತಾನ ತಂಡ: ಶಾಹೀನ್ ಶಾ ಅಫ್ರಿದಿ (ನಾಯಕ), ಅಬ್ದುಲ್ ಸಮದ್, ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫೈಸಲ್ ಅಕ್ರಮ್, ಹ್ಯಾರಿಸ್ ರೌಫ್, ಹುಸೇನ್ ತಲಾತ್, ಮಾಜ್ ಸದಾಕತ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ವಾಸಿಂ ಜೂನಿಯರ್, ಮೊಹಮ್ಮದ್ ಘಾಜಿ ಘೋರಿ (ವಿಕೆಟ್ ಕೀಪರ್), ಸಾದ್ ಮಸೂದ್, ಸಾಹಿಬ್‌ಜಾದಾ ಫರ್ಹಾನ್, ಸಲ್ಮಾನ್ ಅಲಿ ಅಘಾ ಮತ್ತು ಶಮಿಲ್ ಹುಸೇನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:33 pm, Wed, 4 March 26

Source link