All posts by nagaraj11081993

KAS ಗ್ರೂಪ್ ಎ,ಬಿ ಪರೀಕ್ಷೆ ರಿಸಲ್ಟ್ ವಿರುದ್ಧ ವಿದ್ಯಾರ್ಥಿಗಳ ಅಪಸ್ವರ: ಸಿಬಿಐ ತನಿಖೆಗೆ ಒತ್ತಾಯ – Kannada News | KPSC KAS Results: Students Allege Corruption, Demand CBI Probe for Irregularities

ಬೆಂಗಳೂರು, ಮಾರ್ಚ್​​ 04: ಗೆಜೆಟೆಡ್​​ ಪ್ರೊಬೇಷನರಿ ಗ್ರೂಪ್ ಎ ಮತ್ತು ಬಿ ವೃಂದದ 384 ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ 1:3 ಅನುಪಾತದಲ್ಲಿ ವ್ಯಕ್ತಿತ್ವ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿ ಪಟ್ಟಿಯನ್ನು ನಿನ್ನೆ ಪ್ರಕಟಿಸಲಾಗಿದೆ. ಸದ್ಯ ಈ ಫಲಿತಾಂಶ ವಿರುದ್ಧ ವಿದ್ಯಾರ್ಥಿಗಳು ಅಪಸ್ವರ ಎತ್ತಿದ್ದಾರೆ. ಒಂದೇ ಕುಟುಂಬದ ಕೆಲವರು ಆಯ್ಕೆ ಆಗಿರುವ ಬಗ್ಗೆ ಗಂಭೀರ ಆರೋಪ ಮಾಡಲಾಗಿದ್ದು, CBI ತನಿಖೆಗೆ ಒತ್ತಾಯಿಸಿದ್ದಾರೆ.

ಮತ್ತಷ್ಟು ಮಾಹಿತಿ ಅಪ್​​ಡೇಟ್ ಆಗಲಿದೆ.

Source link

ದೊಡ್ಡಬಳ್ಳಾಪುರ ಬಳಿ ಕಲ್ಲಂಗಡಿ ಕ್ಯಾಂಟರ್ ಪಲ್ಟಿ, ಹಣ್ಣು ಹೊತ್ತೊಯ್ದ ಜನ! – Kannada News | Watermelon Canter Overturns in Doddaballapura, Driver Escapes Unhurt

ದೊಡ್ಡಬಳ್ಳಾಪುರ, ಮಾರ್ಚ್​ 04: ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಲ್ಲಂಗಡಿ ಸಾಗಿಸುತ್ತಿದ್ದ ಕ್ಯಾಂಟರ್ ಪಲ್ಟಿಯಾದ ಘಟನೆ ದೊಡ್ಡಬಳ್ಳಾಪುರ ಹೊರ ವಲಯದಲ್ಲಿ ನಡೆದಿದೆ.ದೊಡ್ಡಬಳ್ಳಾಪುರ ಹೊರ ವಲಯದ ಮೇಷ್ಟ್ರು ಮನೆ ಸರ್ಕಲ್‌ ಬಳಿ ಈ ಅಪಘಾತ ಸಂಭವಿಸಿದೆ. ಚೆನ್ನೈನಿಂದ ದಾವಣಗೆರೆಯ ಹೊನ್ನಾಳಿಗೆ ಕಲ್ಲಂಗಡಿ ಸಾಗಿಸುತ್ತಿದ್ದ ಈ ಕ್ಯಾಂಟರ್, ಅನಿರೀಕ್ಷಿತವಾಗಿ ನಿಯಂತ್ರಣ ಕಳೆದುಕೊಂಡಿದೆ. ವೇಗವಾಗಿ ಬರುತ್ತಿದ್ದ ಕ್ಯಾಂಟರ್ ಹೆದ್ದಾರಿಯಲ್ಲಿದ್ದ ಮೂರು ಡಿವೈಡರ್‌ಗಳನ್ನು ದಾಟಿ ಪಕ್ಕದ ಪಳ್ಳಕ್ಕೆ ಬಂದು ಬಿದ್ದಿದೆ. ಅಪಘಾತದ ತೀವ್ರತೆಗೆ ಕ್ಯಾಂಟರ್‌ನಲ್ಲಿದ್ದ ಸಾವಿರಾರು ಕಲ್ಲಂಗಡಿಗಳು ರಸ್ತೆಯ ಮೇಲೆ ಹಾಗೂ ಸುತ್ತಮುತ್ತ ಚಲ್ಲಾಪಿಲ್ಲಿಯಾಗಿ ಬಿದ್ದಿವೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸ್ಥಳೀಯರು, ರಸ್ತೆಯ ಮೇಲೆ ಚೆಲ್ಲಿದ್ದ ಕಲ್ಲಂಗಡಿ ಹಣ್ಣುಗಳನ್ನು ಹೊತ್ತೊಯ್ದಿದ್ದಾರೆ. ಕೆಲವರು ತಮ್ಮ ವಾಹನಗಳಲ್ಲಿ ಕಲ್ಲಂಗಡಿಗಳನ್ನು ತುಂಬಿಕೊಂಡು ಹೋದ ದೃಶ್ಯ ಕಂಡುಬಂದಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಘಟನೆಯಲ್ಲಿ ಕ್ಯಾಂಟರ್ ಚಾಲಕ ವೇದಮೂರ್ತಿ (22) ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸಣ್ಣಪುಟ್ಟ ಗಾಯಗಳಾಗಿದ್ದು, ಚಾಲಕ ಚೇತರಿಸಿಕೊಳ್ಳುತ್ತಿದ್ದಾನೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

 

Source link

‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡಿಕೆ ನಿರ್ಧಾರಕ್ಕೆ ಕಾರಣವೇನು? – Kannada News | Why Toxic movie release postponed what is the reason

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಭಾರತದ ಅತ್ಯಂತ ನಿರೀಕ್ಷೆಯ ಸಿನಿಮಾ ಎನಿಸಿಕೊಂಡಿತ್ತು. ಸಿನಿಮಾದ ಟೀಸರ್, ಪೋಸ್ಟರ್, ಹಾಡುಗಳು ಬಿಡುಗಡೆ ಆಗಿ ಸಿನಿಮಾಕ್ಕೆ ಹೈಪ್ ನೀಡಿದ್ದವು. ಸಿನಿಮಾ ನೋಡಲು ಪ್ರೇಕ್ಷಕರು ಸಹ ತುದಿಗಾಲಲ್ಲಿ ಎದುರು ನೋಡುತ್ತಿದ್ದರು. ಮಾರ್ಚ್ 19ರಂದು ‘ಟಾಕ್ಸಿಕ್’ ಬಿಡುಗಡೆ ಆಗಲಿತ್ತು, ಸಿನಿಮಾದ ವಿತರಣೆ ಹಕ್ಕುಗಳ ಮಾರಾಟ ಸಹ ಆಗಿಬಿಟ್ಟಿತ್ತು. ಆದರೆ ಇದೀಗ ಹಠಾತ್ತನೆ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಮುಂದೂಡಿದೆ. ಇದು ಯಶ್ ಅವರ ಅಭಿಮಾನಿಗಳಿಗೆ ಮಾತ್ರವಲ್ಲದೆ ಸಿನಿಮಾ ಪ್ರೇಮಿಗಳಿಗೂ ಸಹ ಸಾಕಷ್ಟು ಬೇಸರ ಮೂಡಿಸಿದೆ. ಆದರೆ ಯಶ್ ಹಾಗೂ ಚಿತ್ರತಂಡದ ಈ ನಿರ್ಧಾರದ ಹಿಂದೆ ಮುಖ್ಯವಾದ ಕಾರಣವೂ ಇದೆ.

ಪ್ರಸ್ತುತ ನಡೆಯುತ್ತಿರುವ ಇಸ್ರೇಲ್-ಅಮೆರಿಕ ಮತ್ತು ಇರಾನ್ ದೇಶಗಳ ನಡುವಿನ ಸಂಘರ್ಷದ ಕಾರಣದಿಂದ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗುತ್ತಿದೆ ಎಂದು ಚಿತ್ರತಂಡ ಹೇಳಿದೆ. ಅಲ್ಲೆಲ್ಲೋ ಆಗುತ್ತಿರುವ ಯುದ್ಧಕ್ಕೆ ಭಾರತದಲ್ಲಿ ಸಿನಿಮಾ ಬಿಡುಗಡೆ ಮಾಡದಿರುವುದೇಕೆ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಬ್ಯುಸಿನೆಸ್ ದೃಷ್ಟಿಯಿಂದ ನೋಡಿದಲ್ಲಿ ಯಶ್ ಮತ್ತು ತಂಡ ಭಾವನೆಗಳನ್ನು ಪಕ್ಕಕ್ಕಿಟ್ಟು ಸೂಕ್ತ ಮತ್ತು ಉದ್ಯಮಸಹಜ ನಿರ್ಣಯವನ್ನೇ ಕೈಗೊಂಡಿದೆ.

ಇಸ್ರೇಲ್-ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧ ಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ಭಾರತೀಯ ಸಿನಿಮಾಗಳಿಗೆ ಉತ್ತಮ ಮಾರುಕಟ್ಟೆ ಆಗಿರುವ ಅರಬ್ ದೇಶಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ದುಬೈ, ಅಬುದಾಭಿ, ಶಾರ್ಜಾ, ಅಲ್ ಐನ್,ಯುಎಕ್ಯು ಇನ್ನೂ ಕೆಲವು ನಗರಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಯುಎಇಯಲ್ಲಿ ವಿಷಮ ಪರಿಸ್ಥಿತಿ ಇದ್ದು, ಈ ಸಮಯದಲ್ಲಿ ಅಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಅಸಾಧ್ಯ ಮಾತ್ರವಲ್ಲ ಅಮಾನವೀಯವೂ ಎನಿಸಿಕೊಳ್ಳಲಿದೆ.

ಇದನ್ನೂ ಓದಿ:ಕೊನೇ ಕ್ಷಣದಲ್ಲಿ ಅಭಿಮಾನಿಗಳಿಗೆ ಶಾಕ್ ಕೊಟ್ಟ ಯಶ್; ಟಾಕ್ಸಿಕ್ ಸಿನಿಮಾ ರಿಲೀಸ್ ಮುಂದಕ್ಕೆ 

ಯುಎಇ ಮಾತ್ರವೇ ಅಲ್ಲದೆ ಭಾರತೀಯ ಸಿನಿಮಾಗಳಿಗೆ ಒಳ್ಳೆಯ ಮಾರುಕಟ್ಟೆ ಆಗಿರುವ ಕುವೈತ್, ಒಮಾನ್ ದೇಶಗಳು ಸಹ ಈ ಯುದ್ಧ ಪರಿಸ್ಥಿತಿಯಿಂದ ವಿಷಮ ಸ್ಥಿತಿಯಲ್ಲಿದ್ದು, ಅಲ್ಲಿಯೂ ಸಹ ಸಿನಿಮಾ ಬಿಡುಗಡೆ ಅಸಾಧ್ಯವೇ ಆಗಿದೆ. ಕತಾರ್​​ನಲ್ಲಿಯೂ ಇದೇ ಪರಿಸ್ಥಿತಿ ಇದೆ. ಅರಬ್ ರಾಷ್ಟ್ರಗಳು ಮಾತ್ರವೇ ಅಲ್ಲದೆ ಈ ಅಮೆರಿಕದಲ್ಲಿಯೂ ಸಹ ಪರಿಸ್ಥಿತಿ ಶಾಂತವಾಗಿಲ್ಲ. ಅಮೆರಿಕದಲ್ಲಿ ಪರ-ವಿರೋಧ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಇಂಥಹಾ ಪರಿಸ್ಥಿತಿಯಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಸಿನಿಮಾದ ಕಲೆಕ್ಷನ್ ದೃಷ್ಟಿಯಿಂದ ಒಳಿತಲ್ಲ.

ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವಾದರೂ ಸಹ ಇದರಿಂದ ನೇರವಾಗಿ, ಪರೋಕ್ಷವಾಗಿ ಹಲವಾರು ದೇಶಗಳು ಪರಿಣಾಮ ಎದುರಿಸುತ್ತಿವೆ. ಭಾರತವೂ ಸೇರಿದಂತೆ ಬಹ್ರೇನ್, ಕತಾರ್, ಸೌದಿ ಅರೆಬಿಯಾ, ಯುಎಇ, ಲೆಬನಾನ್, ಪೂರ್ವ ಮತ್ತು ಆಗ್ನೇಯ ಏಷ್ಯಾದ ದೇಶಗಳಾದ ಚೀನಾ, ಜಪಾನ್ ದಕ್ಷಿಣ ಕೊರಿಯಾ, ಕೊರಿಯಾ, ಇಂಡೊನೇಷಿಯಾ, ಥೈಲಾಂಡ್, ಸಿಂಗಪುರ, ವಿಯೇತ್ನಾಮ್ ಹಾಗೂ ಯುರೋಪಿಯನ್ ಯೂನಿಯನ್​​ನಲ್ಲಿರು ಹಲವಾರು ದೇಶಗಳು ಸಹ ಪರೋಕ್ಷ ಪರಿಣಾಮ ಎದುರಿಸುತ್ತಿವೆ. ‘ಟಾಕ್ಸಿಕ್’ ಸಿನಿಮಾ ಪ್ಯಾನ್ ಇಂಡಿಯಾ ಅಲ್ಲ ಬದಲಿಗೆ ಪ್ಯಾನ್ ವರ್ಲ್ಡ್​ ಎಂಬುದು ಯಶ್ ಅವರ ಕನಸಾಗಿದ್ದು, ವಿಶ್ವದ ಹಲವು ದೇಶಗಳು ಯುದ್ಧದ ಆತಂಕದಲ್ಲಿರುವಾಗ ಸಿನಿಮಾ ಬಿಡುಗಡೆ ಮಾಡುವುದು ಸೂಕ್ತವಲ್ಲ ಎಂದು ಚಿತ್ರತಂಡಕ್ಕೆ ಸಹಜವಾಗಿಯೇ ಅನಿಸಿದಂತಿದೆ.

ಅಲ್ಲದೆ ಸಿನಿಮಾದ ಪ್ರಚಾರಕ್ಕಾಗಿ ಯಶ್ ಹಾಗೂ ಚಿತ್ರತಂಡ ಭಾರತ ಮಾತ್ರವಲ್ಲದೆ ಅಮೆರಿಕ, ದುಬೈ, ಮಲೇಷ್ಯಾ, ಜಪಾನ್ ಇನ್ನೂ ಹಲವು ಕಡೆಗಳಿಗೆ ಸುತ್ತು ಹಾಕಲಿತ್ತು. ಆದರೆ ಯುದ್ಧ ಪರಿಸ್ಥಿತಿ ಇರುವ ಕಾರಣ ವೈಮಾನಿಕ ಸಂಚಾರ ವ್ಯವಸ್ಥೆಯೇ ಅಸ್ಥವ್ಯಸ್ಥವಾಗಿದ್ದು, ಇದು ಸಿನಿಮಾದ ಪ್ರಚಾರದ ಮೇಲೆ ಪರಿಣಾಮ ಬೀರುವುದು ಮಾತ್ರವೇ ಅಲ್ಲದೆ ಯಶ್ ಸೇರಿದಂತೆ ಚಿತ್ರತಂಡದ ಜೀವಕ್ಕೂ ಅಪಾಯವಾಗುವ ಸಾಧ್ಯತೆ ಇದೆ. ಇದೆಲ್ಲ ವಿಷಯಗಳನ್ನು ಪರಿಗಣಿಸಿ ಚಿತ್ರತಂಡ ಸಿನಿಮಾದ ಬಿಡುಗಡೆಯನ್ನು ಚಿತ್ರತಂಡ ಮುಂದಕ್ಕೆ ಹಾಕಿಕೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Vastu Warning: ಈ ಒಂದು ವಸ್ತುವನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿ; ಅಪಾಯ ತಪ್ಪಿದ್ದಲ್ಲ! – Kannada News | Vastu Warning: Why Keeping Taj Mahal Replicas at Home Can Attract Negative Energy

ಮನೆಯಲ್ಲಿ ಇಡುವ ಪ್ರತಿಯೊಂದು ವಸ್ತುವೂ ಮನೆಯ ಸದಸ್ಯರ ಮನಸ್ಥಿತಿ, ಶಕ್ತಿ ಮತ್ತು ವಾತಾವರಣದ ಮೇಲೆ ಪರಿಣಾಮ ಬೀರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಪ್ರೀತಿಯ ಪ್ರತೀಕವಾಗಿ ಜಗತ್ತಿನಲ್ಲಿ ಪ್ರಸಿದ್ಧಿ ಪಡೆದಿರುವ ತಾಜ್​ ಮಹಲ್​​ ಎಷ್ಟೇ ಸುಂದರವಾಗಿದ್ದರೂ, ಅದು ವಾಸ್ತವವಾಗಿ ಒಂದು ಸಮಾಧಿ ಸ್ಮಾರಕವಾಗಿದೆ. ಆದ್ದರಿಂದ ಶಾಸ್ತ್ರ ಸಂಪ್ರದಾಯಗಳ ಪ್ರಕಾರ ತಾಜ್ ಮಹಲ್ ಚಿತ್ರ ಅಥವಾ ಶೋಪೀಸ್‌ ಗಳನ್ನು ಮನೆಯಲ್ಲಿ ಇಡದಿರುವುದು ಒಳಿತು ಎಂದು ಹೇಳಲಾಗುತ್ತದೆ.

ಸಮಾಧಿಯ ಸಂಕೇತ:

ತಾಜ್ ಮಹಲ್ ಮುಮ್ತಾಜ್ ಸಮಾಧಿಯಾಗಿ ನಿರ್ಮಿಸಲ್ಪಟ್ಟ ಸ್ಮಾರಕ. ವಾಸ್ತು ಪ್ರಕಾರ, ಸಾವು ಅಥವಾ ಸ್ಮಶಾನಕ್ಕೆ ಸಂಬಂಧಿಸಿದ ವಸ್ತುಗಳು ಮನೆಯಲ್ಲಿ ಇರಬಾರದು ಎಂದು ನಂಬಿಕೆ ಇದೆ. ಇವು ಮನೆಯಲ್ಲಿನ ಸಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಿ, ಮನಶ್ಶಾಂತಿಗೆ ಧಕ್ಕೆಯುಂಟುಮಾಡಬಹುದು ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.

ಪ್ರಗತಿಗೆ ಅಡಚಣೆ:

ವಾಸ್ತು ನಂಬಿಕೆಗಳ ಪ್ರಕಾರ, ಸಮಾಧಿ ಸಂಕೇತವನ್ನು ಮನೆ ಅಲಂಕಾರವಾಗಿ ಬಳಸುವುದರಿಂದ ಕುಟುಂಬ ಸದಸ್ಯರ ಬೆಳವಣಿಗೆ ಮತ್ತು ಆರ್ಥಿಕ ಪ್ರಗತಿಗೆ ಅಡ್ಡಿಯಾಗಬಹುದು. ಕೆಲಸಗಳಲ್ಲಿ ವಿಳಂಬ, ನಿರಾಶೆ ಅಥವಾ ಅಸಮಾಧಾನ ಹೆಚ್ಚಾಗಬಹುದು ಎಂಬ ಅಭಿಪ್ರಾಯವೂ ಇದೆ.

ಇದನ್ನೂ ಓದಿ: ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಈ ರಾಶಿಗೆ ಡಬಲ್ ಧಮಾಕ!

ಮಾನಸಿಕ ಆರೋಗ್ಯದ ಮೇಲೆ ಪರಿಣಾಮ:

ಸಾವು ಮತ್ತು ವಿಯೋಗವನ್ನು ಪ್ರತಿನಿಧಿಸುವ ಚಿತ್ರಗಳು ಮನಸ್ಸಿನಲ್ಲಿ ನಕಾರಾತ್ಮಕ ಭಾವನೆಗಳನ್ನು ಹುಟ್ಟಿಸಬಹುದು. ಇದರಿಂದ ಆತಂಕ, ಭಯ ಅಥವಾ ದುಃಖದ ಭಾವನೆಗಳು ಹೆಚ್ಚಾಗಬಹುದು ಎಂದು ಕೆಲವರು ನಂಬುತ್ತಾರೆ.

ಉಡುಗೊರೆಯಾಗಿ ನೀಡುವ ವಿಚಾರ:

ಮದುವೆ ಅಥವಾ ಶುಭ ಸಂದರ್ಭಗಳಲ್ಲಿ ತಾಜ್ ಮಹಲ್ ಶೋಪೀಸ್ ನೀಡುವುದು ಸಾಮಾನ್ಯ. ಆದರೆ ವಾಸ್ತು ನಂಬಿಕೆಗಳ ಪ್ರಕಾರ, ಸಮಾಧಿ ಸಂಕೇತವನ್ನು ಉಡುಗೊರೆಯಾಗಿ ನೀಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಾಯಿಯೂ ಇಲ್ಲ, ಗೊಂಬೆಯನ್ನೇ ಸರ್ವಸ್ವ ಎಂದುಕೊಂಡಿರುವ ಪಂಚ್ ಕೋತಿಯಿಂದ ಗೊಂಬೆಯನ್ನು ದೂರ ಮಾಡ್ತಾರಾ? – Kannada News | Viral Star Punch May Be Separated From Signature Plushie, Fans React

ಜಪಾನ್, ಮಾರ್ಚ್​ 04: ಜಪಾನ್​​ನ ಮೃಗಾಲಯದಲ್ಲಿರುವ ಪಂಚ್ ಕೋತಿಯ ಬಗ್ಗೆ ಈಗ ಇಡೀ ಪ್ರಪಂಚಕ್ಕೆ ಗೊತ್ತಿದೆ. ಹುಟ್ಟಿನಿಂದಲೇ ತಾಯಿ ಪ್ರೀತಿ ಕಳೆದುಕೊಂಡಿದ್ದ ಕೋತಿಗೆ ಅದರ ಬಳಿ ಇರುವ ಕೋತಿಯ ಗೊಂಬೆಯೇ ಆಸರೆ. ನೋವಾದರೂ, ಬೇಸರವೆನಿಸಿದರೂ, ಬೇರೆ ಕೋತಿಗಳು ದಾಳಿ ಮಾಡಿದಾಗಲೂ ಈ ಕೋತಿ ಹೋಗಿ ಅಪ್ಪಿಕೊಂಡಿದ್ದು, ಆ ಗೊಂಬೆಯನ್ನೇ ಹೊರತು ಮತ್ತೊಂದು ಕೋತಿಯನ್ನಲ್ಲ.

ಅದರ ಮೇಲೆ ತಲೆಇಟ್ಟು ಮಲಗುವ, ತಿಂಡಿ ಮಾಡುವಾಗಲೂ, ಎಲ್ಲೇ ನಡೆದಾಡುವಾಗಲೂ ಆ ಗೊಂಬೆಯನ್ನೇ ಹೊತ್ತು ತಿರುಗುವ ಕೋತಿಯಿಂದ ಆ ಗೊಂಬೆಯನ್ನು ಕಸಿದುಕೊಳ್ಳಲಾಗುತ್ತಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ಆ ಗೊಂಬೆಯನ್ನು ಐಕಿಯಾದಿಂದ ಖರೀದಿಸಲಾಗಿದೆ.

ಒಂದೊಮ್ಮೆ ಆ ಗೊಂಬೆ ಅದರೊಟ್ಟಿಗಿದ್ದರೆ ಈ ಕೋತಿ ಮರಿ ಉಳಿದ ಕೋತಿಗಳ ಜತೆ ಸ್ನೇಹ ಬೆಳೆಸುವುದಿಲ್ಲ, ಕೊನೆಯವರೆಗೂ ಅದು ಒಂಟಿಯಾಗಿರುವ ಪ್ರಸಂಗ ಬಂದರೂ ಬರಬಹುದು ಈ ದೃಷ್ಟಿಯಿಂದ ಆ ಮತಿಯಿಂದ ಗೊಂಬೆಯನ್ನು ಹಿಂಪಡೆಯಲಾಗುತ್ತದೆ ಎನ್ನುವ ಮಾತು ಕೇಳಿಬರುತ್ತಿದೆ.

ಆರು ತಿಂಗಳ ವಯಸ್ಸಿನಲ್ಲಿ ಈ ಕೋತಿಗಳು ಹಾಲು ಕುಡಿಯುವುದು ಬಿಡಬೇಕು ಹಾಗೂ ಸ್ವತಂತ್ರವಾಗಿರಬೇಕು ಇದೇ ನಿಯಮ. ಹಾಗಾಗಿ ಅದರ ಬಳಿ ಇರುವ ಆಟಿಕೆಯನ್ನು ಶೀಘ್ರ ತೆಗೆದುಕೊಂಡು ಹೋಗಲಾಗುವುದು ಎಂದು ಪೋಸ್ಟ್​ನಲ್ಲಿ ತಿಳಿಸಲಾಗಿದೆ.

ಈ ವಿಡಿಯೋಗೆ ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದು, ಸ್ವಲ್ಪ ದಿನ ಆಟಿಕೆ ಅದರ ಬಳಿಯೇ ಇರಬಹುದಲ್ಲಾ ಎಂದಿದ್ದಾರೆ. ಇನ್ನು ಮನುಷ್ಯನ ಬಗ್ಗೆ ಮಾತನಾಡುವುದಾಗಿ ಮಕ್ಕಳು ಚಿಕ್ಕವರಿದ್ದಾಗಲೇ ಯಾವುದೇ ಒಂದಕ್ಕೆ ಅಡಿಕ್ಟ್​ ಆದರೆ ಅದನ್ನು ಬಿಡಿಸುವುದು ಕಷ್ಟ ಹಾಗೆಯೇ ಕೋತಿಗಳು ಕೂಡ. ಅವರ ಬೆಳವಣಿಗೆಗೆ ಈ ಗೊಂಬೆಗಳು ಅಡ್ಡಿಯಾಗಬಹುದು. ಜಪಾನಿನ ಮಕಾಕ್ ಪ್ರಸ್ತುತ ಇಚಿಕಾವಾ ಸಿಟಿ ಮೃಗಾಲಯದಲ್ಲಿದೆ. ಆದರೆ ಮೃಗಾಲಯದಿಂದ ಇದರ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳು ಬಂದಿಲ್ಲ. ಪಂಚ್​​ಗೆ ಈಗ 8 ತಿಂಗಳಾಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೆವಿಎನ್​​ಗೆ ಕೈಕೊಟ್ಟ ಅದೃಷ್ಟ, ಎರಡು ದೊಡ್ಡ ಸಿನಿಮಾ ಬಿಡುಗಡೆ ಮುಂದೂಡಿಕೆ – Kannada News | Double trouble for KVN Productions two big movie release postponed

ಈ ಹಿಂದೆ 2021-22 ರಲ್ಲಿ ‘ಸಖತ್’, ‘ಬೈ ಟು ಲವ್’ ಅಂಥಹಾ ಸಾಮಾನ್ಯ ಬಜೆಟ್​​ನ ಕನ್ನಡ ಸಿನಿಮಾಗಳನ್ನು ನಿರ್ಮಿಸಿದ್ದ ಕೆವಿಎನ್ ನಿರ್ಮಾಣ ಸಂಸ್ಥೆ ಎರಡನೇ ಇನ್ನಿಂಗ್ಸ್​ ಅನ್ನು ಭಾರಿ ಉತ್ಸಾಹದಿಂದ ಆರಂಭಿಸಿತ್ತು. ಭಾರತದ ಇಬ್ಬರು ಅತಿ ದೊಡ್ಡ ಸ್ಟಾರ್ ನಟರ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಬಂಡವಾಳ ಹೂಡಿತು, ಆದರೆ ಕೆವಿಎನ್ ಅದೃಷ್ಟ ಕೈಕೊಟ್ಟು, ಎರಡೂ ಸಿನಿಮಾಗಳ ಬಿಡುಗಡೆ ಮುಂದೂಡಲ್ಪಟ್ಟಿದೆ. ಒಂದು ಸಿನಿಮಾದ ಬಿಡುಗಡೆಯೇ ಅಡಕತ್ತರಿಯಲ್ಲಿ ಸಿಲುಕಿದೆ.

2022 ರಲ್ಲಿ ‘ಬೈ ಟು ಲವ್’ ಸಿನಿಮಾ ನಿರ್ಮಿಸಿದ್ದ ಕೆವಿನ್ ಆ ಬಳಿಕ ಅಚಾನಕ್ಕಾಗಿ ದೊಡ್ಡ ಸಿನಿಮಾಗಳತ್ತ ಹೊರಳಿತು. ನಿರ್ಮಾಪಕ ವೆಂಕಟ್ ಅವರು ಕೆಲವೇ ತಿಂಗಳುಗಳ ಅಂತರದಲ್ಲಿ ಯಶ್ ಅವರೊಟ್ಟಿಗೆ ‘ಟಾಕ್ಸಿಕ್’ ಸಿನಿಮಾ ಮತ್ತು ದಳಪತಿ ವಿಜಯ್ ಅವರೊಟ್ಟಿಗೆ ‘ಜನ ನಾಯಗನ್’ ಸಿನಿಮಾ ಘೋಷಿಸಿದರು. ಒಟ್ಟಿಗೆ ಇಬ್ಬರು ಸೂಪರ್ ಸ್ಟಾರ್ ನಟರ ಬಹುದೊಡ್ಡ ಸಿನಿಮಾಗಳನ್ನು ನಿರ್ಮಾಣಕ್ಕೆ ಏಕಕಾಲದಲ್ಲಿ ಕೈಹಾಕಿದ್ದು ಅತ್ಯಂತ ಸಾಹಸಮಯ ನಿರ್ಧಾರವಾಗಿತ್ತು.

ಆದರೆ ಆ ಸವಾಲವನ್ನು ಸೂಕ್ತವಾಗಿ ಕೆವಿಎನ್ ನಿಭಾಯಿಸಿತಾದರೂ ಅದೃಷ್ಟ ಅವರಿಗೆ ಸಾಥ್ ನೀಡಿಲ್ಲ. ‘ಜನ ನಾಯಗನ್’ ಸಿನಿಮಾ ಇನ್ನೇನು ಬಿಡುಗಡೆ ಆಗಲಿದೆ ಎನ್ನುವಾಗ ರಾಜಕೀಯ ತಂತ್ರಗಳಿಗೆ ಸಿಲುಕಿ ಸಿನಿಮಾದ ಬಿಡುಗಡೆ ಮುಂದಕ್ಕೆ ಹೋಯ್ತು. ಕೆವಿಎನ್ ಅವರು ನ್ಯಾಯಾಲಯದ ಮೆಟ್ಟಿಲೇರಿದರೂ ಸಹ ಅವರಿಗಿನ್ನೂ ನ್ಯಾಯ ದೊರಕಿಲ್ಲ. ತಮಿಳುನಾಡು ಚುನಾವಣೆ ಮುಗಿವ ವರೆಗೆ ಸಿನಿಮಾ ಬಿಡುಗಡೆ ಆಗುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ‘ಜನ ನಾಯಗನ್’ ಬಿಡುಗಡೆ ವಿಳಂಬ ಆಗಿರುವುದರಿಂದ ಕೆವಿಎನ್​​ಗೆ ದೊಡ್ಡ ನಷ್ಟವೇ ಆಗಿದೆ.

ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡಿಕೆ ನಿರ್ಧಾರಕ್ಕೆ ಕಾರಣವೇನು?

‘ಜನ ನಾಯಗನ್’ ವಿಳಂಬವಾದರೂ ‘ಟಾಕ್ಸಿಕ್’ ಸಿನಿಮಾ ಮೇಲೆ ಕೆವಿಎನ್​​ಗೆ ಬಹಳ ವಿಶ್ವಾಸವಿತ್ತು. ಮಾರ್ಚ್ 19ರಂದು ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಇದೀಗ ಹಠಾತ್ತನೆ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ಮುಂದೂಡಲ್ಪಟ್ಟಿದೆ. ಇಸ್ರೇಲ್-ಅಮರಿಕ ಮತ್ತು ಇರಾನ್ ದೇಶಗಳ ನಡುವೆ ಉಂಟಾಗಿರುವ ಯುದ್ಧ ರೀತಿ ಪರಿಸ್ಥಿತಿಯಿಂದಾಗಿ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ. ಇದು ಕೆವಿಎನ್ ನಿರ್ಮಾಣ ಸಂಸ್ಥೆಗೆ ಮತ್ತೊಂದು ದೊಡ್ಡ ಹೊಡೆತವನ್ನೇ ನೀಡಿದಂತಿದೆ.

ಕೆವಿಎನ್ ಅವರು ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾಕ್ಕೂ ಸಹ ಬಂಡವಾಳ ಹೂಡಿದ್ದು, ಆ ಸಿನಿಮಾವನ್ನು ಪ್ರೇಮ್ ನಿರ್ದೇಶನ ಮಾಡಲಿದ್ದಾರೆ. ಪ್ರೇಮ್-ದರ್ಶನ್ ಕಾಂಬಿನೇಷನ್​​ನ ಹೊಸ ಸಿನಿಮಾಕ್ಕೂ ಕೆವಿಎನ್ ಬಂಡವಾಳ ಹೂಡಬೇಕಿತ್ತು, ಆದರೆ ಆ ಸಿನಿಮಾ ಸೆಟ್ಟೇರಲೇ ಇಲ್ಲ. ಇದೀಗ ‘ಜನ ನಾಯಗನ್’, ‘ಟಾಕ್ಸಿಕ್’ ಎರಡೂ ಸಿನಿಮಾಗಳ ಬಿಡುಗಡೆ ಮುಂದಕ್ಕೆ ಹೋಗಿದ್ದು, ‘ಕೆಡಿ’ ಬಿಡುಗಡೆಯೂ ಮುಂದೂಡಲ್ಪಡುತ್ತಾ ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪರೀಕ್ಷೆಗೆ ಹೆದರಿ ಮನೆ ಬಿಟ್ಟ ಪಿಯು ವಿದ್ಯಾರ್ಥಿನಿಯರು! ಮಕ್ಕಳಿಗಾಗಿ ಕುಟುಂಬಸ್ಥರ ಕಣ್ಣೀರು – Kannada News | Bengaluru PU Students Missing: Exam Fear Suspected, High Court Intervention

ಪರೀಕ್ಷೆಗೆ ಹೆದರಿ ಮನೆ ಬಿಟ್ಟ ಪಿಯು ವಿದ್ಯಾರ್ಥಿನಿಯರು! ಮಕ್ಕಳಿಗಾಗಿ ಕುಟುಂಬಸ್ಥರ ಕಣ್ಣೀರು

ಬೆಂಗಳೂರು, ಮಾರ್ಚ್​ 04: ರಾಜ್ಯದಲ್ಲಿ ಪಿಯುಸಿ ಪರೀಕ್ಷೆ (PUC Exams) ನಡೆಯುತ್ತಿರುವ ಬೆನ್ನಲ್ಲೇ ಇಬ್ಬರು ಪಿಯು ವಿದ್ಯಾರ್ಥಿನಿಯರು ನಾಪತ್ತೆಯಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜನವರಿ 31ರಂದು 2ನೇ ಪಿಯು ಓದುತ್ತಿದ್ದ ತನಿಷ್ಕಾ ಹಾಗೂ 1ನೇ ಪಿಯು ವಿದ್ಯಾರ್ಥಿನಿ ತೇಜಸ್ವಿನಿ ಕಾಣೆಯಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ಹಿಂದೆಯೂ ಪರೀಕ್ಷೆ ವೇಳೆ ಕೈ ಕತ್ತರಿಸಿಕೊಂಡಿದ್ದ ವಿದ್ಯಾರ್ಥಿನಿ

ಪರೀಕ್ಷೆ ಸಮೀಪಿಸುತ್ತಿದ್ದ ಹಿನ್ನೆಲೆ ಎಕ್ಸಾಮ್ ಭಯದಿಂದ ಸೀನಿಯರ್ ವಿದ್ಯಾರ್ಥಿನಿ ತನ್ನ ಜೂನಿಯರ್ ಸ್ನೇಹಿತೆಯನ್ನು ಕರೆದುಕೊಂಡು ಮನೆ ಬಿಟ್ಟು ತೆರಳಿರುವ ಶಂಕೆ ವ್ಯಕ್ತವಾಗಿದೆ. ಕಳೆದ ವರ್ಷ ಪರೀಕ್ಷೆ ತಪ್ಪಿಸಿಕೊಳ್ಳಲು ತನಿಷ್ಕಾ ತನ್ನ ಕೈ ಕತ್ತರಿಸಿಕೊಂಡಿದ್ದಳೆಂದು ತಿಳಿದುಬಂದಿದೆ. ಹೀಗಾಗಿ ಈ ಬಾರಿ ಎಕ್ಸಾಮ್ ಬರೆಯಲು ಇಚ್ಚಿಸದೆ ಈ ನಿರ್ಧಾರ ಕೈಗೊಂಡಿರಬಹುದೆಂದು ಕುಟುಂಬಸ್ಥರು ಮತ್ತು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಕಾಣೆಯಾಗಿರುವ ಈ ಇಬ್ಬರು ವಿದ್ಯಾರ್ಥಿನಿಯರು ತಮ್ಮ ಮೊಬೈಲ್ ಫೋನ್‌ಗಳನ್ನು ಮನೆಯಲ್ಲೇ ಬಿಟ್ಟು ಹೋಗಿದ್ದು, ಎಟಿಎಂ ಕಾರ್ಡ್ ಸೇರಿದಂತೆ ಯಾವುದೇ ಹಣಕಾಸು ಕೊಂಡೊಯ್ದಿಲ್ಲವೆಂದು ಹೇಳಲಾಗಿದೆ. ಆಧಾರ್ ಕಾರ್ಡ್ ಹಾಗೂ ಕಾಲೇಜು ಬ್ಯಾಗ್ ಮಾತ್ರ ತೆಗೆದುಕೊಂಡು ನಾಪತ್ತೆಯಾಗಿರುವ ಇವರು, ಉಚಿತ ಬಸ್ ಪ್ರಯಾಣ ಸೌಲಭ್ಯ ಬಳಸಿಕೊಂಡಿರುವ ಶಂಕೆಯೂ ವ್ಯಕ್ತವಾಗಿದೆ.

ಇದನ್ನೂ ಓದಿ ಕೊಡಲಿಯಿಂದ ತಂದೆಯನ್ನೇ ಕಡಿದು ಕೊಂದು, ಟ್ಯಾಂಕ್​ಗೆ ಎಸೆದು ನೆಮ್ಮದಿಯಿಂದ ಕುಳಿತು ಬಿರಿಯಾನಿ ತಿಂದ ಮಗ

ಒಂದು ವಾರದ ಗಡುವು ನೀಡಿರುವ ಹೈ ಕೋರ್ಟ್​

ಕಳೆದ ಕೆಲ ದಿನಗಳ ಹಿಂದೆ ಸ್ನೇಹಿತರಿಗೆ ಕರೆ ಮಾಡಿ ಮಲೆ ಮಹಾದೇಶ್ವರ ಬೆಟ್ಟದಲ್ಲಿದ್ದೇವೆ ಎಂದು ತಿಳಿದಿದ್ದರಂತೆ. ಒಂದು ವಾರದಲ್ಲಿ ಮತ್ತೆ ಸಂಪರ್ಕಿಸುವುದಾಗಿಯೂ ಹೇಳಿದ್ದರು ಎನ್ನಲಾಗಿದೆ. ಆದರೆ ಅದಾದ ಬಳಿಕ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಸಂಬಂಧ ಪೊಲೀಸರು 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹೈ ಕೋರ್ಟ್​ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಒಂದು ವಾರದ ಗಡುವು ನೀಡಿದೆ ಎಂದು ತಿಳಿದುಬಂದಿದೆ. ಒಂದು ತಿಂಗಳಿಂದ ಮಕ್ಕಳಿಗಾಗಿ ಕಣ್ಣೀರಿಡುತ್ತಿರುವ ಕುಟುಂಬಸ್ಥರು, ಸುರಕ್ಷಿತವಾಗಿ ಮರಳಿ ಬರುವಂತೆ ಮನವಿ ಮಾಡಿದ್ದಾರೆ. ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಇರಾನ್-ಇಸ್ರೇಲ್, ಅಮೆರಿಕ ಸಂಘರ್ಷ; ಗಲ್ಫ್​ ರಾಷ್ಟ್ರಗಳಲ್ಲಿ ಸಿಲುಕಿದ ಭಾರತೀಯರನ್ನು ಕರೆತರಲಿವೆ 58 ವಿಮಾನಗಳು – Kannada News | Indian Airlines to operate 58 Flights To The Gulf Region Today to evacuate citizens

ನವದೆಹಲಿ, ಮಾರ್ಚ್ 4: ಇರಾನ್- ಇಸ್ರೇಲ್, ಅಮೆರಿಕದ (Iran-Israel Conflict) ನಡುವೆ ದಾಳಿ-ಪ್ರತಿದಾಳಿ ಮುಂದುವರೆದಿದೆ. ಹೀಗಾಗಿ, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗಿರುವುದರಿಂದಾಗಿ ಭಾರತದಿಂದ ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿತ್ತು. ಇಂದು ಆ ಪ್ರದೇಶದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಕರೆತರಲು 58 ವಿಮಾನಗಳು ಗಲ್ಫ್ ರಾಷ್ಟ್ರಗಳಿಗೆ ಹಾರಾಟ ನಡೆಸಲಿವೆ. ಮಧ್ಯಪ್ರಾಚ್ಯ ಬಿಕ್ಕಟ್ಟಿನ ಮಧ್ಯೆ 1,221ಕ್ಕೂ ಹೆಚ್ಚು ಭಾರತೀಯ ವಿಮಾನಯಾನ ಸಂಸ್ಥೆಗಳು ಮತ್ತು 388 ವಿದೇಶಿ ವಿಮಾನಯಾನ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಪಶ್ಚಿಮ ಏಷ್ಯಾದ ಕೆಲವು ಭಾಗಗಳಲ್ಲಿ ವಾಯುಪ್ರದೇಶಗಳನ್ನು ಮುಚ್ಚಲಾಗಿದೆ.

“ಸಿಕ್ಕಿಬಿದ್ದ ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ, ವಿಮಾನಯಾನ ಸಂಸ್ಥೆಗಳು ಅಗತ್ಯವಿರುವ ಕಡೆ ಹೆಚ್ಚುವರಿ ವಿಮಾನಗಳನ್ನು ನಿಯೋಜಿಸುತ್ತಿವೆ. ಈ ಅವಧಿಯಲ್ಲಿ ಟಿಕೆಟ್ ಬೆಲೆಗಳಲ್ಲಿ ಅನಗತ್ಯ ಏರಿಕೆಯಾಗದಂತೆ ನೋಡಿಕೊಳ್ಳಲು ವಿಮಾನ ದರಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: Mojtaba Khamenei: ಇರಾನ್​​ನ ನೂತನ ಸರ್ವೋಚ್ಚ ನಾಯಕನಾಗಿ ಅಯತೊಲ್ಲಾ ಖಮೇನಿ ಮಗ ಮೊಜ್ತಬಾ ನೇಮಕ

ಭಾರತೀಯ ವಿಮಾನಯಾನ ಸಂಸ್ಥೆಗಳು ಇಂದು ಇಂಡಿಗೋದಿಂದ 30 ಮತ್ತು ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಿಂದ 23 ಸೇರಿದಂತೆ 58 ವಿಮಾನಗಳನ್ನು ಗಲ್ಫ್ ರಾಷ್ಟ್ರಗಳಿಗೆ ಕಳುಹಿಸುತ್ತಿವೆ. ಮಧ್ಯಪ್ರಾಚ್ಯ ಬಿಕ್ಕಟ್ಟಿನ ಮಧ್ಯೆ ಸಿಲುಕಿರುವ ಭಾರತೀಯ ಪ್ರಯಾಣಿಕರನ್ನು ಮರಳಿ ಕರೆತರಲು ಸ್ಪೈಸ್‌ಜೆಟ್ ಇಂದು ಯುಎಇಯಿಂದ 8 ವಿಶೇಷ ವಿಮಾನಗಳನ್ನು ನಿರ್ವಹಿಸಲಿದೆ. ಇದರಲ್ಲಿ 4 ದೆಹಲಿಗೆ, 3 ಮುಂಬೈಗೆ ಮತ್ತು 1 ಕೊಚ್ಚಿಗೆ ಸೇರಿವೆ.

ಇದನ್ನೂ ಓದಿ: ಇಸ್ರೇಲ್-ಯುಎಸ್ ದಾಳಿಯಿಂದಾಗಿ ಇರಾನ್​ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತ ಸ್ಥಳಕ್ಕೆ ಶಿಫ್ಟ್

ಇಲ್ಲಿಯವರೆಗೆ, ಭಾರತೀಯ ವಿಮಾನಯಾನ ಸಂಸ್ಥೆಗಳ 1,221 ವಿಮಾನಗಳು ಮತ್ತು ವಿದೇಶಿ ವಿಮಾನಯಾನ ಸಂಸ್ಥೆಗಳ 388 ವಿಮಾನಗಳು ರದ್ದಾಗಿವೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಫೆಬ್ರವರಿ 28ರಿಂದ ಸಚಿವಾಲಯ ಒದಗಿಸಿದ ಅಂಕಿ-ಅಂಶಗಳ ಪ್ರಕಾರ ಮಂಗಳವಾರ ಭಾರತೀಯ ವಿಮಾನಯಾನ ಸಂಸ್ಥೆಗಳು 104 ಅಂತಾರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಕಾರ್ಖಾನೆಗಳು ವಾಯುಮಾಲಿನ್ಯ ಕಡಿಮೆ ಮಾಡಬೇಕು: ಇಲ್ಲಾಂದ್ರೆ ಬಂದ್​​ ನಿಶ್ಚಿತ; ಶಾಸಕ ಎಚ್ಚರಿಕೆ – Kannada News | Koppal Hirebaganal Villagers Confront MLA Hitnal Over Factory Dust and Pollution Crisis

ಹಿರೇಬಗನಾಳ ಗ್ರಾಮಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ್ ಭೇಟಿImage Credit source: tv9 kannada

ಕೊಪ್ಪಳ, ಮಾರ್ಚ್​​ 04: ಕಳೆದ ಕೆಲ ದಿನಗಳಿಂದ ಬಲ್ಡೋಟಾ ಸ್ಟೀಲ್ ಫವರ್ ಲಿಮಿಟಿಡ್ (Baldota Factory) ಹೆಸರು ಬಹಳ ಚರ್ಚೆಯಲ್ಲಿದೆ. ಜಿಲ್ಲೆಯಲ್ಲಿ ವಿಸ್ತರಣೆಯಾಗಿರುವ ಈ ಕಾರ್ಖಾನೆಗೆ ಮೊದಲಿನಿಂದಲೂ ವಿರೋಧ ವ್ಯಕ್ತವಾಗುತ್ತಾ ಬಂದಿದೆ. ಒಂದು ಕಡೆ ವಾಯು ಮಾಲಿನ್ಯ ಕಡಿಮೆ ಮಾಡಲು ಶಾಸಕರು, ಮಾಜಿ ಸಂಸದರು ಸಭೆ ಮಾಡಿದ್ದರೆ, ಮತ್ತೊಂದು ಕಡೆ ಕಾರ್ಖಾನೆಗಳಿಂದ ಅಪಾರ ಪ್ರಮಾಣದ ಹೊಗೆ ಬರುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ರಾಘವೇಂದ್ರ ಹಿಟ್ನಾಳ್​​​, ತಂತ್ರಜ್ಞಾನ ಬಳಸಿಕೊಂಡು ವಾಯುಮಾಲಿನ್ಯ ಕಡಿಮೆ ಮಾಡಬೇಕು. ಇಲ್ಲವಾದರೆ ನೂರಕ್ಕೆ ನೂರರಷ್ಟು ಕಾರ್ಖಾನೆ ಬಂದ್ ಮಾಡಿಸೋದು ನಿಶ್ಚಿತ ಎಂದು  ಹೇಳಿದ್ದಾರೆ.

ಕೊಪ್ಪಳದಲಿಂದ ಕೂಗಳತೇ ದೂರದಲ್ಲಿರುವ ಗಿಣಗೇರಾ ಬಳಿ ಇರುವ ಕಾರ್ಖಾನೆಗಳಿಂದ ಅಪಾರ ಪ್ರಮಾಣದ ಹೊಗೆ ಬರುತ್ತಿದೆ. ಬೆಳಗಿನ ಸಮಯದಲ್ಲಿ ಕಾರ್ಖಾನೆಗಳಿಂದ ಹೊರ ಹೋಗುವ ಅಪಾರ ಪ್ರಮಾಣದ ಹೊಗೆಗೆ ಜನರು ರೋಸಿ ಹೋಗಿದ್ದಾರೆ. ಹೊಗೆ ಕಡಿಮೆ‌ ಮಾಡಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬಲ್ಡೋಟಾ ಕಾರ್ಖಾನೆ ವಿರುದ್ಧ ಸಿಡಿದ ರೈತರು: ಸರ್ಕಾರದ ಶವಯಾತ್ರೆ, ಜನಪ್ರತಿನಿಧಿಗಳಿಗೆ ತರಾಟೆ

ಇನ್ನು ಇತ್ತೀಚಿಗೆ ಹಿರೇಬಗನಾಳ ಗ್ರಾಮಕ್ಕೆ ಹೋಗಿದ್ದ ವೇಳೆ ಧೂಳಿನ ಸಮಸ್ಯೆ ಬಗ್ಗೆ ಗ್ರಾಮದ ಯುವಕರು ಹೇಳಿಕೊಂಡಿದ್ದರು. ಈ ವೇಳೆ ಸಮಸ್ಯೆ ಆಲಿಸದೇ ಶಾಸಕ ಹಿಟ್ನಾಳ್​​ ವಾಪಸ್​ ಹೋಗಿದ್ದರು. ಈ ಬಗ್ಗೆ ಸಾಕಷ್ಟು  ವಿರೋಧ ಕೂಡ ವ್ಯಕ್ತವಾಗಿತ್ತು. ವಿರೋಧದ ಬೆನ್ನಲ್ಲೇ ಇಂದು ಹಿರೇಬಗನಾಳ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಹಿಟ್ನಾಳ್, ಗ್ರಾಮದಲ್ಲಿ ಸಂಚರಿಸಿ ಜನರ ಸಮಸ್ಯೆ ಆಲಿಸಿದ್ದಾರೆ. ಈ ವೇಳೆ ಇಲ್ಲಿ ನಾವು ಹೇಗೆ ಜೀವನ ಮಾಡಬೇಕು. ಗ್ರಾಮ ಸ್ಥಳಾಂತರ ಮಾಡುವಂತೆ ಗ್ರಾಮದ ಮಹಿಳೆಯ ಒತ್ತಾಯಿಸಿದ್ದಾರೆ.

ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದ್ದಿಷ್ಟು

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ, ಶಾಸಕ ರಾಘವೇಂದ್ರ ಹಿಟ್ನಾಳ್​​​, ತಂತ್ರಜ್ಞಾನ ಬಳಸಿಕೊಂಡು ವಾಯುಮಾಲಿನ್ಯ ಕಡಿಮೆ ಮಾಡಬೇಕು. ಇಲ್ಲವಾದರೆ ನೂರಕ್ಕೆ ನೂರರಷ್ಟು ಕಾರ್ಖಾನೆ ಬಂದ್ ಮಾಡಿಸೋದು ನಿಶ್ಚಿತ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಾಳೆ ಕೊಪ್ಪಳ ಬಂದ್​​ ಹಿನ್ನೆಲೆ ಖಾಸಗಿ ಶಾಲೆಗಳಿಗೆ ರಜೆ, ವಿವಿ ಪರೀಕ್ಷೆ ಮುಂದೂಡಿಕೆ

ನಾನು ಮತ್ತೆ ಗ್ರಾಮಕ್ಕೆ ಭೇಟಿ ನೀಡುತ್ತೇನೆ, ಡಿಸಿ ಕೂಡ ಬರುತ್ತಾರೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಬರುತ್ತಾರೆ. ಕಾರ್ಖಾನೆ ಯಾರದ್ದಾದರೂ ಆಗಿರಲಿ ನಮಗೆ ಆರೋಗ್ಯ ಮುಖ್ಯ. ಮಾಲಿನ್ಯ ತಡೆ ಸಂಬಂಧ ತಜ್ಞರನ್ನ ಕರೆಸಿ ಚರ್ಚಿಸಲು ಚಿಂತನೆ ನಡೆಸಿದ್ದೇವೆ. ಮಧ್ಯಪ್ರದೇಶದ ಭೋಪಾಲ್​​ ನಗರದಲ್ಲೇ ಕಾರ್ಖಾನೆ ಇದೆ. ಅಲ್ಲಿ ಯಾವ ರೀತಿ ಕ್ರಮ ಇದೆಯೋ ಇಲ್ಲೂ ಅದೇ ರೀತಿ ಆಗಲಿ. ಕಿರ್ಲೋಸ್ಕರ್ ಕಾರ್ಖಾನೆಯಿಂದ ನಮ್ಮ ಮನೆ 2 ಕಿ.ಮೀ.ದೂರದಲ್ಲಿದೆ. ಅಲ್ಲಿ ಧೂಳು ಬರಲ್ಲ, ಆ ತರಹದ ತಂತ್ರಜ್ಞಾನ ಇಲ್ಲೂ ಬಳಸಲಿ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 10:53 am, Wed, 4 March 26

Source link

IPL 2026: RCB ಅಭಿಮಾನಿಗಳಿಗೆ 3 ಗುಡ್ ನ್ಯೂಸ್… ಒಂದು ಬ್ಯಾಡ್ ನ್ಯೂಸ್ – Kannada News | M. Chinnaswamy Stadium in Bengaluru To Host 3 Big Matches

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮತ್ತೆ ಕ್ರಿಕೆಟ್ ಕಲರವ ಶುರುವಾಗಲಿದೆ. ಕಳೆದ ಕೆಲ ತಿಂಗಳುಗಳಿಂದ ನಿಷೇಧಕ್ಕೆ ಒಳಗಾಗಿದ್ದ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕಣಕ್ಕಿಳಿಯುವುದು ಖಚಿತವಾಗಿದೆ. ಈ ಖಚಿತತೆಯೊಂದಿಗೆ ಆರ್​ಸಿಬಿ ಅಭಿಮಾನಿಗಳಿಗೆ ಮೂರು ಗುಡ್ ನ್ಯೂಸ್ ಕೂಡ ಸಿಕ್ಕಿದೆ. ಇದರ ಜೊತೆಗೆ ಒಂದು ಬ್ಯಾಡ್ ನ್ಯೂಸ್ ಕೂಡ ಇದೆ.

ಇಲ್ಲಿ ಗುಡ್ ನ್ಯೂಸ್ ಏನೆಂದರೆ… ಈ ಬಾರಿಯ ಐಪಿಎಲ್​ನ ಪ್ರಮುಖ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಕಾರ್ಯದರ್ಶಿ ಸಂತೋಷ್ ಮೆನನ್ ಅವರು ಖಚಿತಪಡಿಸಿದ್ದಾರೆ. ಅದರಂತೆ ಐಪಿಎಲ್​ 2026ರ ಮೂರು ಪ್ರಮುಖ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿದೆ. ಆ ಪಂದ್ಯಗಳಾವುವು ಎಂದರೆ…

  • ಉದ್ಘಾಟನಾ ಪಂದ್ಯ: ಇಂಡಿಯನ್ ಪ್ರೀಮಿಯರ್ ಲೀಗ್​ನ ಉದ್ಘಾಟನಾ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವಹಿಸಲಿದೆ ಎಂದು ಕೆಎಸ್​ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ತಿಳಿಸಿದ್ದಾರೆ. ಅಂದರೆ ಈ ಭಅರಿಯ ಐಪಿಎಲ್ ಶುರುವಾಗುವುದು ಬೆಂಗಳೂರಿನಲ್ಲಿ.
  • ಪ್ಲೇಆಫ್ ಪಂದ್ಯ: ಉದ್ಘಾಟನಾ ಪಂದ್ಯವಲ್ಲದೇ, ಪ್ಲೇಆಫ್ ಸುತ್ತಿನ ಒಂದು ಪಂದ್ಯ ಕೂಡ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಜರುಗಲಿದೆ. ಅದು ಎಲಿಮಿನೇಟರ್ ಪಂದ್ಯ ಆಗಿರಬಹುದು ಇಲ್ಲಾ ಮೊದಲ ಕ್ವಾಲಿಫೈಯರ್ ಮ್ಯಾಚ್ ಆಗಿರಬಹುದು.
  • ಫೈನಲ್ ಪಂದ್ಯ: ಈ ಬಾರಿಯ ಐಪಿಎಲ್​ನ ಫೈನಲ್ ಪಂದ್ಯ ಕೂಡ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಆಯೋಜಿಸಲು ನಿರ್ಧರಿಸಲಾಗಿದೆ. ಅದರಂತೆ ಐಪಿಎಲ್ 2026ರ ಕೊನೆಯ ಪಂದ್ಯ ಕೂಡ ಬೆಂಗಳೂರಿನಲ್ಲೇ ನಡೆಯಲಿದೆ.

ಆರ್​ಸಿಬಿ ತಂಡದ 5 ಪಂದ್ಯಗಳೊಂದಿಗೆ ಈ ಬಾರಿ ಹೆಚ್ಚುವರಿ 2 ಮ್ಯಾಚ್​ಗಳೂ ಕೂಡ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಆರ್​ಸಿಬಿ ಅಭಿಮಾನಿಗಳ ಪಾಲಿಗೆ ಗುಡ್ ನ್ಯೂಸ್ ಎಂದೇ ಹೇಳಬಹುದು. ಇನ್ನು ಬ್ಯಾಡ್ ನ್ಯೂಸ್ ಯಾವುದು ಎಂದರೆ…

  • ಪ್ರೇಕ್ಷಕರ ಮಿತಿ: ಈ ಬಾರಿಯ ಐಪಿಎಲ್ ಪಂದ್ಯಗಳಿಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪ್ರೇಕ್ಷಕರ ಮಿತಿ ಇರಲಿದೆ. ಅಂದರೆ ಕ್ರೀಡಾಂಗಣದ ಸುರಕ್ಷತೆಯ ದೃಷ್ಟಿಯಿಂದ ಪ್ರೇಕ್ಷಕರ ಸಂಖ್ಯೆಯನ್ನು 30 ರಿಂದ 35 ಸಾವಿರಕ್ಕೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ. ಅಂದರೆ ಈ ಬಾರಿ ಸಂಪೂರ್ಣ ಸೀಟಿಂಗ್ ಟಿಕೆಟ್​ಗಳನ್ನು ಮಾರಾಟ ಮಾಡುವುದಿಲ್ಲ. ಹೀಗಾಗಿ ಸೀಮಿತ ಪ್ರೇಕ್ಷಕರಿಗೆ ಮಾತ್ರ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸಲು ಅವಕಾಶ ದೊರೆಯಲಿದೆ ಎಂದು ತಿಳಿದು ಬಂದಿದೆ.

ಆರ್​ಸಿಬಿ 5+2 ಪಂದ್ಯ:

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ 2 ಹೋಮ್​ ಗ್ರೌಂಡ್​ನಲ್ಲಿ ಕಣಕ್ಕಿಳಿಯಲಿದೆ. ಅಂದರೆ ಲೀಗ್ ಹಂತದ 7 ಪಂದ್ಯಗಳಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 5 ಮ್ಯಾಚ್​ಗಳನ್ನು ಮಾತ್ರ ಆಡಲಿದೆ.

ಇನ್ನುಳಿದ ಎರಡು ಪಂದ್ಯಗಳನ್ನು ಛತ್ತೀಸ್‌ಗಢದ ರಾಯ್‌ಪುರದಲ್ಲಿರುವ ಶಾಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಡಲಿದೆ.

ಇದನ್ನೂ ಓದಿ: RCB ತಂಡದ 2 ಪಂದ್ಯಗಳನ್ನು ಶಿಫ್ಟ್ ಮಾಡಲು ಇದುವೇ ಕಾರಣ..!

ಇದಾಗ್ಯೂ ಪ್ಲೇಆಫ್ ಪಂದ್ಯ ಹಾಗೂ ಫೈನಲ್ ಪಂದ್ಯ ಬೆಂಗಳೂರಿನಲ್ಲೇ ಜರುಗುತ್ತಿರುವುದರಿಂದ ಆರ್​ಸಿಬಿ ಅಭಿಮಾನಿಗಳಿಗೆ ಒಟ್ಟು 7 ಪಂದ್ಯಗಳನ್ನು ವೀಕ್ಷಿಸಲು ಅವಕಾಶ ದೊರೆಯಲಿದೆ.

Source link