All posts by nagaraj11081993

ವಿಜಯ್ ಜೊತೆಗಿನ ನಂಟಿನಿಂದ ಹೆಚ್ಚಿದ ತ್ರಿಶಾ ಕ್ರೇಜ್; ಗಗನಕ್ಕೇರಿದ ಸಂಭಾವನೆ – Kannada News | Trisha Krishnan Remuneration hike after Thalapathy Vijay TVK win

ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ (Trisha Krishnan) ಅವರ ವೃತ್ತಿಜೀವನ ಈಗ ಸುವರ್ಣ ಕಾಲದಲ್ಲಿದೆ. ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಚಿತ್ರರಂಗದಲ್ಲಿ ಮಿಂಚುತ್ತಿರುವ ಈ ಸೌತ್ ಸುಂದರಿ ಈಗ ತಮ್ಮ ಸಂಭಾವನೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ತಮಿಳುನಾಡು ಮುಖ್ಯಮಂತ್ರಿ ಆಗಿರುವ ವಿಜಯ್ (Thalapathy Vijay) ಜೊತೆ ತ್ರಿಶಾ ಅವರು ಆಪ್ತವಾಗಿದ್ದಾರೆ. ವಿಜಯ್ ಅವರ ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆಯೇ ತ್ರಿಶಾ ಜನಪ್ರಿಯತೆ ಕೂಡ ಡಬಲ್ ಆಗಿದೆ. ಅದಕ್ಕೆ ತಕ್ಕಂತೆ ಅವರಿಗೆ ದೊಡ್ಡ ದೊಡ್ಡ ಅವಕಾಶಗಳು ಸಿಗುತ್ತಿವೆ. ಆದ್ದರಿಂದ ಸಂಭಾವನೆ (Trisha Krishnan Remuneration) ಕೂಡ ಜಾಸ್ತಿ ಆಗುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ‘ಪೊನ್ನಿಯಿನ್ ಸೆಲ್ವನ್’ ಮತ್ತು ‘ಲಿಯೋ’ ರೀತಿಯ ದೊಡ್ಡ ಚಿತ್ರಗಳ ನಂತರ ತ್ರಿಶಾ ಅವರ ಮಾರುಕಟ್ಟೆ ಮೌಲ್ಯ ಗಣನೀಯವಾಗಿ ಹೆಚ್ಚಿದೆ. ಸದ್ಯ ಕಾಲಿವುಡ್ ಮತ್ತು ಟಾಲಿವುಡ್‌ನ ದೊಡ್ಡ ಬಜೆಟ್ ಚಿತ್ರಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಮೂಲಗಳ ಪ್ರಕಾರ, ತ್ರಿಶಾ ಈಗ ಪ್ರತಿ ಚಿತ್ರಕ್ಕೆ ಸುಮಾರು 10ರಿಂದ 12 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಈ ಮೂಲಕ ದಕ್ಷಿಣ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪಟ್ಟಿಯಲ್ಲಿ ಅವರು ಅಗ್ರಸ್ಥಾನಕ್ಕೇರಿದ್ದಾರೆ.

ತ್ರಿಶಾ ಕೈಯಲ್ಲಿ ಈಗ ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳಿವೆ. ಚಿರಂಜೀವಿ ಅಭಿನಯದ ‘ವಿಶ್ವಂಭರ’ ಸಿನಿಮಾಗೆ ತ್ರಿಶಾ ನಾಯಕಿ ಆಗಿದ್ದಾರೆ. ಸೂರ್ಯ ಅಭಿನಯದ ‘ಕರುಪ್ಪು’ ಸಿನಿಮಾದಲ್ಲಿ ಕೂಡ ತ್ರಿಶಾ ನಟಿಸಿದ್ದಾರೆ. ಕಮಲ್ ಹಾಸನ್ ಹಾಗೂ ರಜನಿಕಾಂತ್ ಕಾಂಬಿನೇಷನ್​ನ ಹೊಸ ಸಿನಿಮಾಗೂ ಅವರೇ ನಾಯಕಿ ಆಗುವ ಸಾಧ್ಯತೆ ಇದೆ. ಹೊಸ ಹೊಸ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.

ಕೇವಲ ಗ್ಲಾಮರ್ ಪಾತ್ರಗಳಿಗೆ ಸೀಮಿತವಾಗದೆ, ನಟನಾ ಪ್ರಾಧಾನ್ಯತೆಯ ಪಾತ್ರಗಳ ಮೂಲಕವೂ ತ್ರಿಶಾ ಗಮನ ಸೆಳೆಯುತ್ತಿದ್ದಾರೆ. ಚಿತ್ರರಂಗಕ್ಕೆ ಹೊಸ ನಟಿಯರ ಆಗಮನವಾಗುತ್ತಿದ್ದರೂ, ತ್ರಿಶಾ ಅವರ ಬೇಡಿಕೆ ಕುಗ್ಗಿಲ್ಲದಿರುವುದು ವಿಶೇಷ. ಈಗಿನ ಸಂಭಾವನೆ ಏರಿಕೆಯು ಅವರ ಜನಪ್ರಿಯತೆ ಮತ್ತು ನಟನಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ತ್ರಿಶಾಗೆ ಒಲಿದು ಬಂದ ಬಿಗ್ ಆಫರ್; ರಜನಿ-ಕಮಲ್ ಹೊಸ ಸಿನಿಮಾಗೆ ನಾಯಕಿ?

ದಳಪತಿ ವಿಜಯ್ ಮತ್ತು ತ್ರಿಶಾ ಕೃಷ್ಣನ್ ಅವರು ಹಲವು ವರ್ಷಗಳಿಂದ ಆಪ್ತವಾಗಿದ್ದಾರೆ. ಅವರ ಒಡನಾಟದ ಬಗ್ಗೆ ಸಾಕಷ್ಟು ಗಾಸಿಪ್​ಗಳಿವೆ. ಇತ್ತೀಚೆಗೆ ವಿಜಯ್ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ತ್ರಿಶಾ ಮತ್ತು ವಿಜಯ್ ಅವರು ಒಟ್ಟಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು. ಈ ಎಲ್ಲ ಕಾರಣಗಳಿಂದ ಅವರು ಹೆಚ್ಚು ಸುದ್ದಿಯಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಾದರಿ ದಂಪತಿಯಾಗಿದ್ದ ದಿಲೀಪ್-ಶ್ರೀವಿದ್ಯಾ; ಕಾಂಬಿನೇಷನ್​​ನಲ್ಲಿ ಬಂದಿತ್ತು ಹಿಟ್ ಸೀರಿಯಲ್ – Kannada News | Dileep Raj and Srividya: A Beautiful Love Story and a Successful Production Journey

ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ದಿಲೀಪ್ ರಾಜ್ ಅವರ ಅಕಾಲಿಕ ನಿಧನವು ಅವರ ಪತ್ನಿ ಶ್ರೀವಿದ್ಯಾ ಮತ್ತು ಅಭಿಮಾನಿಗಳನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಇವರಿಬ್ಬರದು ಕೇವಲ ದಾಂಪತ್ಯವಲ್ಲ, ಅದೊಂದು ಸುಂದರ ಸೃಜನಶೀಲ ಜರ್ನಿ. ಇಬ್ಬರೂ ಪ್ರೀತಿಸಿ ವಿವಾಹವಾಗಿದ್ದರು. ಕಾಲೇಜು ದಿನಗಳಿಂದಲೇ ಪರಿಚಿತರಾಗಿದ್ದ ಇವರು, ಪರಸ್ಪರರ ಕನಸುಗಳಿಗೆ ಬೆನ್ನೆಲುಬಾಗಿ ನಿಂತವರು. ದಿಲೀಪ್ ರಾಜ್ ನಟನೆಯಲ್ಲಿ ತೊಡಗಿಸಿಕೊಂಡರೆ, ಶ್ರೀವಿದ್ಯಾ ಅವರು ಅವರಿಗೆ ಪ್ರತಿಯೊಂದು ಹಂತದಲ್ಲೂ ಶಕ್ತಿಯಾಗಿ ನಿಂತರು.

ನಟನೆಯ ಜೊತೆಗೆ ನಿರ್ಮಾಣದಲ್ಲೂ ತೊಡಗಿಸಿಕೊಳ್ಳಬೇಕೆಂಬ ಹಂಬಲದಿಂದ ದಿಲೀಪ್ ರಾಜ್ ಮತ್ತು ಶ್ರೀವಿದ್ಯಾ ಜಂಟಿಯಾಗಿ ‘ಡಿ2ಆರ್ ಮೀಡಿಯಾ ಪ್ರೊಡಕ್ಷನ್ಸ್’ ಸಂಸ್ಥೆಯನ್ನು ಆರಂಭಿಸಿದರು. ಶ್ರೀವಿದ್ಯಾ ಅವರು ನಿರ್ಮಾಣದ ಆರ್ಥಿಕ ಮತ್ತು ಆಡಳಿತಾತ್ಮಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ, ದಿಲೀಪ್ ಕ್ರಿಯೇಟಿವ್ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. ಈ ಜೋಡಿಯ ಕಠಿಣ ಪರಿಶ್ರಮದ ಫಲವಾಗಿ ಕನ್ನಡ ಕಿರುತೆರೆಗೆ ಅನೇಕ ಸೂಪರ್ ಹಿಟ್ ಧಾರಾವಾಹಿಗಳು ಲಭಿಸಿದವು.

ಜೀ ಕನ್ನಡ ವಾಹಿನಿಯ ಅತಿದೊಡ್ಡ ಯಶಸ್ಸಾದ ‘ಹಿಟ್ಲರ್ ಕಲ್ಯಾಣ’ ಇವರ ಜಂಟಿ ನಿರ್ಮಾಣದ ಹೆಗ್ಗುರುತು. ಈ ಧಾರಾವಾಹಿಯಲ್ಲಿ ದಿಲೀಪ್ ನಾಯಕನಾಗಿ ನಟಿಸುವುದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದರು.

‘ಪಾರು’ ಹಾಗೂ ಇತ್ತೀಚಿನ ‘ಕೃಷ್ಣ ರುಕ್ಕು’ ಧಾರಾವಾಹಿಗಳ ಹಿಂದೆ ಈ ದಂಪತಿಗಳ ಸೃಜನಶೀಲ ಶ್ರಮವಿತ್ತು. ಸದಾ ನಗುಮುಖದಿಂದ ಕೆಲಸ ಮಾಡುತ್ತಿದ್ದ ಈ ಜೋಡಿ, ನೂರಾರು ತಂತ್ರಜ್ಞರಿಗೆ ಬದುಕು ನೀಡಿದ್ದರು.

ವೃತ್ತಿ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಹೇಗೆ ಎಂಬುದಕ್ಕೆ ದಿಲೀಪ್ ಮತ್ತು ಶ್ರೀವಿದ್ಯಾ ಉದಾಹರಣೆಯಾಗಿದ್ದರು. ಶ್ರೀವಿದ್ಯಾ ಅವರ ಪ್ರತಿಯೊಂದು ನಿರ್ಧಾರಕ್ಕೂ ದಿಲೀಪ್ ಗೌರವ ನೀಡುತ್ತಿದ್ದರು.

ಇಂದು ದಿಲೀಪ್ ರಾಜ್ ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರು ಪತ್ನಿಯೊಂದಿಗೆ ಸೇರಿ ಕಟ್ಟಿದ ಈ ಕಲಾ ಸಾಮ್ರಾಜ್ಯ ಮತ್ತು ಅವರು ನೀಡಿದ ಅದ್ಭುತ ಧಾರಾವಾಹಿಗಳು ಸದಾ ಕನ್ನಡಿಗರ ನೆನಪಿನಲ್ಲಿರುತ್ತವೆ.

Published On – 9:20 am, Wed, 13 May 26

Source link

ಮಿತವ್ಯಯಕ್ಕೆ ಪ್ರಧಾನಿ ಮೋದಿ ಮೊದಲ ಹೆಜ್ಜೆ: ಬೆಂಗಾವಲು ಪಡೆಗೆ ಕತ್ತರಿ, ಸಚಿವರು, ಎನ್​ಡಿಎ ಸಿಎಂಗಳಿಗೂ ಸೂಚನೆ – Kannada News | PM Modi Leads by Example: Cuts SPG Convoy by 50 Percent and Switches to Electric Vehicles for Fuel Saving

ಪ್ರಧಾನಿ ಮೋದಿ (ಸಂಗ್ರಹ ಚಿತ್ರ)Image Credit source: TV9 Network

ನವದೆಹಲಿ, ಮೇ 13: ಮಧ್ಯಪ್ರಾಚ್ಯ ಯುದ್ಧ ಹಾಗೂ ಅಂತರರಾಷ್ಟ್ರೀಯ ಅನಿಶ್ಚಿತತೆಗಳ ಹಿನ್ನೆಲೆಯಲ್ಲಿ ಒಂದು ವರ್ಷ ಚಿನ್ನ ಖರೀದಿ ಮಾಡದಂತೆ ಹಾಗೂ ಇಂಧನ ಮಿತ ಬಳಕೆಗೆ ದೇಶದ ಜನತೆಗೆ ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಇದೀಗ ತಾವೇ ಆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಖುದ್ದು ತಮ್ಮದೇ ಎಸ್‌ಪಿಜಿ ಭದ್ರತಾ ಪಡೆಗೆ ನಿಯೋಜನೆಗೊಳ್ಳುವ ವಾಹನಗಳ ಸಂಖ್ಯೆಯಲ್ಲಿ ಕಡಿತ ಹಾಗೂ ಪೆಟ್ರೋಲ್, ಡೀಸೆಲ್ ಚಾಲಿತ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಪ್ರಧಾನಿ ಕಚೇರಿ ಸೂಚನೆ ನೀಡಿದೆ.

ಮುಖ್ಯಾಂಶಗಳು

  • ಪ್ರಧಾನಿ ಮೋದಿಯವರ ಬೆಂಗಾವಲು ಪಡೆಯ ವಾಹನಗಳ ಸಂಖ್ಯೆ ಶೇ 50 ರಷ್ಟು ಕಡಿತಗೊಳಿಸಲು ಪಿಎಂಒ ಆದೇಶ.
  • ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಬದಲಿಗೆ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳನ್ನು (EV) ಬಳಸಲು ನಿರ್ಧಾರ.
  • ಇದೇ ಮಾದರಿಯನ್ನು ಅನುಸರಿಸುವಂತೆ ಕೇಂದ್ರ ಸಚಿವರು ಮತ್ತು ಎನ್‌ಡಿಎ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಪ್ರಧಾನಿ ಸೂಚನೆ.

ಭಾರತವು ಕಚ್ಚಾ ತೈಲ, ಚಿನ್ನ ಮತ್ತು ಅಡುಗೆ ಎಣ್ಣೆಯಂತಹ ಅನೇಕ ಉತ್ಪನ್ನಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವುದರಿಂದ ದೇಶದ ಆರ್ಥಿಕತೆಯ ಮೇಲೆ ಅವುಗಳ ಖರೀದಿಯು ಬೀರುವ ಪರಿಣಾಮಗಳ ಬಗ್ಗೆ ಮೋದಿ ಇತ್ತೀಚೆಗೆ ನೀಡಿದ ಸಂದೇಶದಲ್ಲಿ ಪ್ರಸ್ತಾಪಿಸಿದ್ದರು. ವಿದೇಶಿ ವಿನಿಮಯವನ್ನು ಉಳಿಸಲು, ಈ ವಸ್ತುಗಳ ಬಳಕೆಯನ್ನು ಕಡಿಮೆ ಮಾಡುವಂತೆ ಅವರು ಕರೆ ನೀಡಿದ್ದರು. ಈಗ ತಮ್ಮದೇ ಭದ್ರತಾ ಪಡೆಯಲ್ಲಿ ಬದಲಾವಣೆಗಳನ್ನು ತರುವ ಮೂಲಕ, ಅವರು ಆ ಮಾತುಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ.

ಪ್ರಧಾನಿ ಬೆಂಗಾವಲು ಪಡೆಯ ವಾಹನಗಳ ಸಂಖ್ಯೆ ಶೇ 50 ರಷ್ಟು ಕಡಿತ

ಪ್ರಧಾನಿ ಬೆಂಗಾವಲು ಪಡೆಯ ವಾಹನಗಳ ಸಂಖ್ಯೆಯನ್ನು ಶೇ 50ರಷ್ಟು ಕಡಿತಗೊಳಿಸುವಂತೆ ಪಿಎಂಒ ಆದೇಶಿಸಿದೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ತಿಳಿದುಬಂದಿದೆ. ಇದು ಮಿತವ್ಯಯದ ಕ್ರಮಗಳ ಭಾಗವಾಗಿದ್ದು, ಸರ್ಕಾರದ ವೆಚ್ಚಗಳನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ. ಇಂಧನ ಉಳಿತಾಯದ ಜೊತೆಗೆ, ಎಲೆಕ್ಟ್ರಿಕ್ ವಾಹನಗಳ ಬಳಕೆಯು ಪರಿಸರ ಮಾಲಿನ್ಯವನ್ನು ತಡೆಗಟ್ಟುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಅಲ್ಲದೆ, ಬೆಂಗಾವಲು ಪಡೆಯ ಗಾತ್ರ ಚಿಕ್ಕದಾಗುವುದರಿಂದ ರಸ್ತೆಗಳಲ್ಲಿ ಸಂಚಾರದ ವೇಳೆ ಉಂಟಾಗುವ ಅಡಚಣೆಗಳನ್ನು ಕಡಿಮೆ ಮಾಡಲು ಸಹಾಯಕವಾಗಲಿದೆ.

ಕಟ್ಟುನಿಟ್ಟಿನ ಕ್ರಮ ಪ್ರಧಾನಿ ಕಚೇರಿಗಷ್ಟೇ ಸಿಮಿತವಲ್ಲ!

ಈ ಕ್ರಮಗಳು ಕೇವಲ ಪ್ರಧಾನಿ ಕಚೇರಿಗೆ ಸೀಮಿತವಾಗಿಲ್ಲ. ಕೇಂದ್ರ ಸಚಿವರು ಮತ್ತು ಎನ್‌ಡಿಎ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಇದೇ ರೀತಿಯ ಸೂಚನೆಯನ್ನು ಪ್ರಧಾನಿ ನೀಡಿದ್ದಾರೆ. ಇಂಧನ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಒತ್ತು ನೀಡುವಂತೆ ಮತ್ತು ಬೆಂಗಾವಲು ಪಡೆಯನ್ನು ಆದಷ್ಟು ಕಡಿಮೆ ಮಾಡುವಂತೆ ಅವರು ಕರೆ ನೀಡಿದ್ದಾರೆ. ಇದು ಇಂಧನ ಉಳಿತಾಯಕ್ಕೆ ರಾಷ್ಟ್ರವ್ಯಾಪಿ ಚಳುವಳಿಗೆ ನಾಂದಿ ಹಾಡುವ ನಿರೀಕ್ಷೆಯಿದೆ.

ಇದನ್ನೂ ಓದಿ: ವರ್ಕ್ ಫ್ರಂ ಹೋಂ, ಆನ್​ಲೈನ್ ಕ್ಲಾಸ್, ಚಿನ್ನ ಬೇಡ, ಇಂಧನದ ಮಿತ ಬಳಕೆ; ಮತ್ತೊಮ್ಮೆ ಪ್ರಧಾನಿ ಮೋದಿ ಮನವಿ

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಐ ತಂತ್ರಜ್ಞಾನದ ಕುರಿತ ಕನ್ನಡ ಸಿನಿಮಾ ‘ಗರುಡ’; ಇದರಲ್ಲಿವೆ 4 ಪ್ರತ್ಯೇಕ ಕಥೆ – Kannada News | Garuda Kannada movie based on AI technology will have 4 different stories

ಎಲ್ಲ ಕ್ಷೇತ್ರಕ್ಕೂ ಈಗ ಎಐ (AI) ತಂತ್ರಜ್ಞಾನ ಕಾಲಿಡುತ್ತಿದೆ. ಈಗಾಗಲೇ ಅದು ಹಲವು ಕ್ಷೇತ್ರಗಳಲ್ಲಿ ಹೇರಳವಾಗಿ ಬಳಕೆ ಆಗುತ್ತಿದೆ. ಮುಂಬರುವ ದಿನಗಳಲ್ಲಿ ಜನರ ಮೇಲೆ ಮತ್ತು ಮಕ್ಕಳ ಮೇಲೆ ಎಐ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬ ಕುತೂಹಲ ಸಹಜ. ಎಐ ಎಂಬುದು ಜನರಿಗೆ ಮಾರಕವಾಗುತ್ತಾ ಅಥವಾ ಉಪಯೋಗ ಆಗುತ್ತಾ ಎಂಬ ವಿಷಯವನ್ನು ಇಟ್ಟುಕೊಂಡು ಕನ್ನಡದಲ್ಲಿ ‘ಗರುಡ’ (Garuda) ಸಿನಿಮಾ ತಯಾರಾಗಿದೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಆ ವೇಳೆ ಚಿತ್ರತಂಡದವರು ಮಾತನಾಡಿದರು.

‘ಶೈವಂ ಫಿಲ್ಮ್ಸ್’ ಮೂಲಕ ಕಿರಣ್ ಎಸ್. ಅವರು ‘ಗರುಡ’ ಸಿನಿಮಾವನ್ನು ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಕೂಡ ಮಾಡಿದ್ದಾರೆ. ಛಾಯಾಗ್ರಹಣದ ಜವಾಬ್ದಾರಿಯನ್ನು ಕೂಡ ಅವರೇ ನಿಭಾಯಿಸಿದ್ದಾರೆ. ಈ ಸಿನಿಮಾ ಈಗ ಬಿಡುಗಡೆಗೆ ಸಿದ್ಧವಾಗಿದೆ. ಪ್ರಚಾರದ ಮೊದಲ ಹಂತವಾಗಿ ಟ್ರೇಲರ್ ರಿಲೀಸ್ ಮಾಡಲಾಗಿದೆ.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಕಿರಣ್ ಅವರು ಮಾಹಿತಿ ನೀಡಿದರು. ‘ಇದೊಂದು ಆ್ಯಕ್ಷನ್, ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ. 2024ರಲ್ಲಿ ಪೈಲಟ್ ಸಿನಿಮಾ ಮಾಡಲು ಹೊರಟಿದ್ದೆವು. ಅದೇ ಈಗ ಗರುಡ ಆಗಿದೆ. ಇದೊಂದು ಫಿಕ್ಷನಲ್, ನಾನ್ ಲೀನಿಯರ್ ಪ್ರಕಾರದ ಸಿನಿಮಾ. 4 ಕಥೆಗಳು ಬೇರೆ ಬೇರೆಯಾಗಿ ಸಾಗುತ್ತ ಒಂದು ಹಂತದಲ್ಲಿ ಸೇರುತ್ತವೆ. ಶೇಕಡ 30ರಿಂದ 40ರಷ್ಟು ಕಥೆ ಎಐ ಕುರಿತು ಇದೆ’ ಎಂದು ಅವರು ಹೇಳಿದರು.

‘ಗರುಡ’ ಸಿನಿಮಾ ಟ್ರೇಲರ್:

ರಿತ್ವಾನ್ ಶ್ರೀನಿವಾಸ್ ಅವರು ‘ಗರುಡ’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ. ಈ ಹಿಂದೆ ಕೆಲವು ಧಾರಾವಾಹಿಗಳಲ್ಲಿ ನಟಿಸಿದ ಅನುಭವ ಅವರಿಗೆ ಇದೆ. ಇನ್ನೋರ್ವ ನಟ ಸೌರವ್ ಪ್ರಶಾಂತ್ ಅವರು ಈ ಚಿತ್ರದಲ್ಲಿ ಎರಡು ಶೇಡ್ ಇರುವ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ದಿವ್ಯಾ ಚಂದ್ರ ಅವರು ಅಭಿನಯಿಸಿದ್ದಾರೆ. ಈ ಮೊದಲು ಅವರು ‘ನಮೋ ಭೂತಾತ್ಮ’ ಚಿತ್ರದಲ್ಲಿ ನಟಿಸಿದ್ದರು.

ಇದನ್ನೂ ಓದಿ: ಮೆಟಾ, ಮೈಕ್ರೋಸಾಫ್ಟ್​ನಲ್ಲಿ ಎಐ ಸಂಚಲನ; 23,000 ಉದ್ಯೋಗಗಳಿಗೆ ಕುತ್ತು

ವಿವೇಕ್, ಅಭಿಮಹೇಶ್, ಅಭಿಷೇಕ್, ಕಿರಣ್, ನಯ್ ಪ್ರಭಾಕರ್, ವಿಲ್ ಫ್ರೆಡ್ ವಿವೇಕ್, ಸೌಭಾಗ್ಯ ಹಂದ್ರಾಳ್, ದಿಲೀಪ್ ಕುಮಾರ್, ಬಾಹುಬಲಿ ಮಂಜು ಕೂಡ ‘ಗರುಡ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಜೂನ್ ತಿಂಗಳಲ್ಲಿ ಈ ಸಿನಿಮಾವನ್ನು ತೆರೆಕಾಣಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಸಂತೋಷ್ ಜೋಶ್ವಾ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:54 am, Wed, 13 May 26

Source link

‘ಲವ್ ಮಾಕ್ಟೇಲ್ 3’ ಚಿತ್ರ ಒಟಿಟಿಯಲ್ಲಿ ಗಮನ ಸೆಳೆಯುವಾಗಲೇ ಕೊನೆಯುಸಿರೆಳೆದ ದಿಲೀಪ್ ರಾಜ್ – Kannada News | Dileep Raj Last Movie Is Love Mocktail 3 He acted as Lawyer

ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ನಟ ದಿಲೀಪ್ ರಾಜ್ ಅವರು ನಿಧನ ಹೊಂದಿದ್ದಾರೆ. ಅವರಿಗೆ ಹೃದಯಾಘಾತವಾಯಿತು ಮತ್ತು ಅವರನ್ನು ಆಸ್​ಪತ್ರೆಗೆ ದಾಖಲು ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಈಗ ಅವರ ಶವವನ್ನು ಮನೆಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಅಕಾಲಿಕ ನಿಧನವು ಅಭಿಮಾನಿಗಳಿಗೆ ಮತ್ತು ಚಿತ್ರೋದ್ಯಮಕ್ಕೆ ಆಘಾತ ತಂದಿದೆ.

ಸುಮಾರು ಎರಡು ದಶಕಗಳ ಕಾಲ ನಟನೆಯಲ್ಲಿ ತೊಡಗಿದ್ದ ಅವರು, ತಮ್ಮ ವೃತ್ತಿಜೀವನದ ಕೊನೆಯ ಹಂತದವರೆಗೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದರು ಎಂಬುದನ್ನು ಇಲ್ಲಿ ನೆನೆಯಲೇ ಬೇಕು. ವಿಶೇಷವೆಂದರೆ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಸಾರ್ವಕಾಲಿಕ ಹಿಟ್ ಚಿತ್ರ ‘ಮಿಲನ’ದಲ್ಲಿ ಅಣ್ಣನ ಪಾತ್ರ ಮಾಡುವ ಮೂಲಕ ಮನೆಮಾತಾಗಿದ್ದ ದಿಲೀಪ್, ತಮ್ಮ ಕೊನೆಯ ದಿನಗಳಲ್ಲಿ ‘ಲವ್ ಮಾಕ್ಟೇಲ್ 3′ ಚಿತ್ರದಲ್ಲಿ ಅವರು ವಕೀಲರ ಪಾತ್ರ ಮಾಡಿದ್ದರು.

‘ಲವ್ ಮಾಕ್ಟೇಲ್ 3’ ಸಿನಿಮಾದಲ್ಲಿ ದಿಲೀಪ್ ರಾಜ್ ಅವರು ಬಹಳ ಗಂಭೀರವಾದ ಮತ್ತು ಜವಾಬ್ದಾರಿಯುತವಾದ ವಕೀಲನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಲಾಯರ್ ಪಾತ್ರಕ್ಕೆ ಬೇಕಾದ ಗಾಂಭೀರ್ಯ ಮತ್ತು ಸಂಯಮವನ್ನು ಅವರು ಬಹಳ ಅಚ್ಚುಕಟ್ಟಾಗಿ ತೆರೆಯ ಮೇಲೆ ತಂದಿದ್ದರು. ವೃತ್ತಿಜೀವನದ ಆರಂಭದಲ್ಲಿ ಚಾಕೊಲೇಟ್ ಹೀರೊ ಆಗಿ ಕಾಣಿಸಿಕೊಂಡಿದ್ದ ಅವರು, ನಂತರ ಪೋಷಕ ಪಾತ್ರಗಳಲ್ಲಿ ಹಾಗೂ ಪಕ್ವ ನಟನಾಗಿ ಬೆಳೆದಿದ್ದಕ್ಕೆ ಈ ಚಿತ್ರದ ಪಾತ್ರವೇ ಸಾಕ್ಷಿ.

ಇದನ್ನೂ ಓದಿ: ‘ಜೀ5’ ಮೂಲಕ ಒಟಿಟಿ ಅಂಗಳಕ್ಕೆ ಕಾಲಿಡುತ್ತಿದೆ ‘ಲವ್ ಮಾಕ್ಟೇಲ್ 3’ ಸಿನಿಮಾ; ಪ್ರಸಾರ ಯಾವಾಗ?

ನಟನೆಯಷ್ಟೇ ಅಲ್ಲದೆ, ಡಬ್ಬಿಂಗ್ ಮತ್ತು ನಿರ್ಮಾಣದಲ್ಲೂ ಯಶಸ್ಸು ಕಂಡಿದ್ದ ದಿಲೀಪ್ ರಾಜ್, ‘ಹಿಟ್ಲರ್ ಕಲ್ಯಾಣ’ದಂತಹ ಜನಪ್ರಿಯ ಧಾರಾವಾಹಿಗಳ ಮೂಲಕ ಕರ್ನಾಟಕದ ಮನೆಮಗನಾಗಿದ್ದರು. ಶಿಸ್ತು ಮತ್ತು ನಗುಮುಖದ ವ್ಯಕ್ತಿತ್ವಕ್ಕೆ ಹೆಸರಾಗಿದ್ದರು. ಅವರ ಪಾತ್ರಗಳು ಇಂದು ಅಭಿಮಾನಿಗಳ ಕಣ್ಣ ಮುಂದೆ ಹಸಿರಾಗಿದೆ. ಬೆಳ್ಳಿತೆರೆಯಲ್ಲಿ ವಕೀಲನಾಗಿ ಅವರು ನೀಡಿದ ಆ ಕೊನೆಯ ಅಭಿನಯವು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅವರ ನೆನಪನ್ನು ಚಿರಸ್ಥಾಯಿಯಾಗಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:56 am, Wed, 13 May 26

Source link

IPL 2026: ಪ್ಲೇಆಫ್​ಗೇರಲು ಯಾವ ತಂಡ ಎಷ್ಟು ಮ್ಯಾಚ್ ಗೆಲ್ಲಬೇಕು? ಇಲ್ಲಿದೆ ಮಾಹಿತಿ – Kannada News | IPL 2026 playoff qualification scenarios of All Teams

IPL 2026: ಐಪಿಎಲ್ 2026ರ ಲೀಗ್ ಹಂತವು ಈಗ ರೋಚಕ ಘಟ್ಟಕ್ಕೆ ತಲುಪಿದ್ದು, ಪ್ಲೇ-ಆಫ್ ತಲುಪಲು ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಸದ್ಯದ ಅಂಕಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಸನ್ ರೈಸರ್ಸ್ ಹೈದರಾಬಾದ್ (SRH) ಮತ್ತು ಗುಜರಾತ್ ಟೈಟಾನ್ಸ್ (GT) ಹಾಗೂ ಪಂಜಾಬ್ ಕಿಂಗ್ಸ್ (PBKS)​  ತಂಡಗಳು ಟಾಪ್-4 ನಲ್ಲಿವೆ. ಇನ್ನುಳಿದ 4 ತಂಡಗಳೂ ಕೂಡ ಪ್ಲೇಆಫ್ ರೇಸ್​ನಲ್ಲಿವೆ. ಅದರಂತೆ ಪ್ಲೇಆಫ್​ಗೇರಲು ಯಾವ ತಂಡ ಎಷ್ಟು ಪಂದ್ಯಗಳನ್ನು ಗೆಲ್ಲಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ… (PC: BCCI)

Source link

ಕನ್ನಡದ ಖ್ಯಾತ ನಟ ದಿಲೀಪ್ ರಾಜ್ ಇನ್ನಿಲ್ಲ; ಹೃದಯಾಘಾತದಿಂದ ನಿಧನ – Kannada News | Kannada actor Dileep Raj dies due to Heart Attack at the age of 47

ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಖ್ಯಾತ ನಟ ದಿಲೀಪ್ ರಾಜ್ (Dileep Raj) ಅವರು ನಿಧನರಾಗಿದ್ದಾರೆ. ಹೃದಯಾಘಾತದಿಂದ ಅವರು ಕೊನೆಯುಸಿರು ಎಳೆದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಮನೆಯಲ್ಲೇ ದಿಲೀಪ್ ರಾಜ್ ಅವರಿಗೆ ಹಾರ್ಟ್ ಅಟ್ಯಾಕ್ (Heart Attack) ಆಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೂ ಅವರು ಬದುಕುಳಿಯಲಿಲ್ಲ. ದಿಲೀಪ್ ರಾಜ್ ನಿಧನಕ್ಕೆ (Dileep Raj Death) ಚಿತ್ರರಂಗದ ಅನೇಕರು ಹಾಗೂ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.

‘ಮಿಲನ’, ‘ಯು ಟರ್ನ್’, ‘ಆರ್ಕೆಸ್ಟ್ರಾ ಮೈಸೂರು’, ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಸೇರಿದಂತೆ ಹಲವು ಚಿತ್ರಗಳಲ್ಲಿ ದಿಲೀಪ್ ರಾಜ್ ಅವರು ನಟಿಸಿದ್ದರು. ಸಿನಿಮಾ ಮಾತ್ರವಲ್ಲದೇ ಕಿರುತೆರೆಯಲ್ಲೂ ಅವರು ಸಕ್ರಿಯರಾಗಿದ್ದರು. ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ಅವರು ನಟಿಸಿದ್ದರು. ‘ಪಾರು’, ‘ನಾ ನಿನ್ನ ಬಿಡಲಾರೆ’ ಧಾರಾವಾಹಿಗಳನ್ನು ಅವರು ನಿರ್ಮಾಣ ಮಾಡಿದ್ದರು.

ದಿಲೀಪ್ ರಾಜ್ ನಿಧನಕ್ಕೆ ಹಿರಿಯ ನಟ ದೊಡ್ಡಣ್ಣ ಸಂತಾಪ ಸೂಚಿಸಿದ್ದಾರೆ. ‘ದಿಲೀಪ್ ರಾಜ್ ಅವರ ತಂದೆ ಹೆಚ್.ಎಂ. ಶಿವರುದ್ರಪ್ಪ. ಅವರು ಮೂಲತಃ ಅರಸಿಕೆರೆಯವರು. ನಮ್ಮ ಅಣ್ಣ ಹಾಗೂ ಅವರು ಒಟ್ಟಿಗೆ ಓದಿದವರು. ದಿಲೀಪ್ ರಾಜ್ ನಿಧನದ ಸುದ್ದಿ ತಿಳಿದು ನನಗೆ ಬಹಳ ಶಾಕ್ ಆಯಿತು. ಹೊಟ್ಟೆ ಉರಿಯುತ್ತದೆ. ಅವರು ನಮ್ಮ ಮಕ್ಕಳ ರೀತಿ’ ಎಂದು ನಟ ದೊಡ್ಡಣ್ಣ ಅವರು ಹೇಳಿದ್ದಾರೆ.

ಕಿರುತೆರೆಯಲ್ಲಿ ನಟಿಸಿದ್ದ ದಿಲೀಪ್ ರಾಜ್ ಅವರು ಹೀರೋ ಆಗಿ ‘ಬಾಯ್ ಫ್ರೆಂಡ್’ ಸಿನಿಮಾ ಮೂಲಕ 2005ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಅನೇಕ ಸಿನಿಮಾಗಳಲ್ಲಿ ಅವರು ಅಭಿನಯಿಸಿದರು. ಪುನೀತ್ ರಾಜ್​ಕುಮಾರ್ ಜೊತೆ ನಟಿಸಿದ ‘ಮಿಲನ’ ಸಿನಿಮಾದಿಂದ ಅವರಿಗೆ ಹೆಚ್ಚು ಜನಪ್ರಿಯತೆ ಸಿಕ್ಕಿತು. ಬಳಿಕ ಅವರಿಗೆ ಸಾಕಷ್ಟು ಅವಕಾಶಗಳು ಸಿಕ್ಕವು.

ಇದನ್ನೂ ಓದಿ: ‘ಮಹಾನ್ ಕಲಾವಿದ’ನಾದ ದಿಲೀಪ್ ರಾಜ್; ಇದು ‘ಹಿಟ್ಲರ್​ ಕಲ್ಯಾಣ’ ನಾಯಕನ ಸಿನಿಮಾ

ನಟನಾಗಿ ಮಾತ್ರವಲ್ಲದೇ ಡಬ್ಬಿಂಗ್ ಕಲಾವಿದನಾಗಿ ಕೂಡ ದಿಲೀಪ್ ರಾಜ್ ಅವರು ಕೆಲಸ ಮಾಡಿದ್ದರು. ಅವರ ನಿಧನದಿಂದ ಅಭಿಮಾನಿಗಳಿಗೆ, ಕುಟುಂಬದವರಿಗೆ, ಆಪ್ತರಿಗೆ ತೀವ್ರ ನೋವಾಗಿದೆ. ಸೋಶಿಯಲ್ ಮೀಡಿಯಾ ಮೂಲಕ ಎಲ್ಲರೂ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:06 am, Wed, 13 May 26

Source link

ದಿಲೀಪ್ ರಾಜ್ ನಿಧನ; ಬೆಳ್ಳಿ ತೆರೆ ಜೊತೆ ಕಿರುತೆರೆಯಲ್ಲೂ ಮಿಂಚಿದ್ದ ನಟ – Kannada News | Remembering Dileep Raj: The ‘Hitler Kalyana’ Star and Versatile Producer of Sandalwood

ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯ ಪ್ರತಿಭಾವಂತ ನಟ ಮತ್ತು ಯಶಸ್ವಿ ನಿರ್ಮಾಪಕರಾದ ದಿಲೀಪ್ ರಾಜ್ ಅವರ ಅಕಾಲಿಕ ನಿಧನವು ಚಂದನವನಕ್ಕೆ ದೊಡ್ಡ ನಷ್ಟವಾಗಿದೆ. ಅವರು ಹೃದಯಾಘಾತದಿಂದ ನಿಧನ ಹೊಂದಿದರು. ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದ ಅವರು, ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದರು. ಅವರ ಚಿತ್ರರಂಗದ ಜರ್ನಿ ಬಗ್ಗೆ ಇಂದು ನೋಡೋಣ.

ದಿಲೀಪ್ ರಾಜ್ ಅವರು 2005ರಲ್ಲಿ ತೆರೆಗೆ ಬಂದ ‘ಬಾಯ್​​ಫ್ರೆಂಡ್’ ಚಿತ್ರದ ಮೂಲಕ ಅವರು ಬೆಳ್ಳಿ ಪರದೆಗೆ ಕಾಲಿಟ್ಟರು ಮತ್ತು ಇದರಲ್ಲಿ ಶಿವ ಹೆಸರಿನ ಪಾತ್ರವನ್ನು ಮಾಡಿದ್ದರು. ಕೇವಲ ಕಿರುತೆರೆಗೆ ಸೀಮಿತವಾಗದೆ, ಉತ್ತಮ ಸಿನಿಮಾಗಳ ಮೂಲಕವೂ ಪ್ರೇಕ್ಷಕರನ್ನು ತಲುಪಿದ್ದರು. ‘ಮಿಲನ’ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಸಹೋದರನಾಗಿ ನಟಿಸಿ ಅಪಾರ ಮೆಚ್ಚುಗೆ ಗಳಿಸಿದ್ದರು. ‘ಪರಿಚಯ’, ‘ನನ್ನಿ ಪಾರು’, ‘ಬಾರ್ಡರ್’, ಮತ್ತು ‘ಪಂಚಾಮೃತ’ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.

ನಟನೆಯ ಜೊತೆಗೆ ಅವರು ಉತ್ತಮ ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಗುರುತಿಸಿಕೊಂಡಿದ್ದರು. ದಿಲೀಪ್ ರಾಜ್ ಅವರಿಗೆ ಅತೀ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು ಕಿರುತೆರೆ. ‘ಜನನಿ’ ಧಾರಾವಾಹಿಯ ಮೂಲಕ ನಟನೆ ಆರಂಭಿಸಿದ ಅವರು ನಂತರ ನಿರ್ಮಾಪಕರಾಗಿ ಯಶಸ್ವಿಯಾದರು.

ತಮ್ಮ ಪತ್ನಿ ಶ್ರೀವಿದ್ಯಾ ಅವರೊಂದಿಗೆ ಸೇರಿ ಡಿ2ಆರ್ ಮೀಡಿಯಾ ಪ್ರೊಡಕ್ಷನ್ಸ್ ಸಂಸ್ಥೆಯಡಿ ಅನೇಕ ಸೂಪರ್ ಹಿಟ್ ಧಾರಾವಾಹಿಗಳನ್ನು ನೀಡಿದರು. ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಹಿಟ್ಲರ್ ಕಲ್ಯಾಣ’ ಇವರ ನಿರ್ಮಾಣದ ಅತಿದೊಡ್ಡ ಯಶಸ್ಸು. ಇದರಲ್ಲಿ ಅವರು ‘ಅಭಿರಾಮ್ ಜಯಶಂಕರ್’ ಪಾತ್ರದಲ್ಲಿ ನಟಿಸಿ ಮನೆಮಾತಾಗಿದ್ದರು. ಇದರ ಹೊರತಾಗಿ ‘ಪಾರು’ ಸೇರಿದಂತೆ ಹಲವು ಸರಣಿಗಳಿಗೆ ಇವರು ಕೆಲಸ ಮಾಡಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಕೃಷ್ಣ ರುಕ್ಕು’ ಧಾರಾವಾಹಿಯನ್ನು ಅವರು ನಿರ್ಮಾಣ ಮಾಡುತ್ತಿದ್ದಾರೆ ಹಾಗೂ ಇದಕ್ಕೆ ಕ್ರಿಯೇಟಿವ್ ಹೆಡ್ ಕೂಡ ಹೌದು. ಇತ್ತೀಚೆಗೆ ತೆರೆಗೆ ಬಂದ ‘ಮಿಲನ’ ಚಿತ್ರದಲ್ಲಿ ಅವರು ಲಾಯರ್ ಪಾತ್ರ ಮಾಡಿದ್ದರು.

ಇದನ್ನೂ ಓದಿ: ಕನ್ನಡದ ಖ್ಯಾತ ನಟ ದಿಲೀಪ್ ರಾಜ್ ಇನ್ನಿಲ್ಲ; ಹೃದಯಾಘಾತದಿಂದ ನಿಧನ

ದಿಲೀಪ್ ರಾಜ್ ಅವರು ಕೇವಲ ಒಬ್ಬ ಕಲಾವಿದರಾಗಿರದೆ, ಶಿಸ್ತು ಮತ್ತು ಸಮಯಪ್ರಜ್ಞೆಗೆ ಹೆಸರಾದವರು. ಅವರ ನಗುಮುಖದ ವ್ಯಕ್ತಿತ್ವ ಮತ್ತು ಕಲಾಬದುಕು ಎಂದಿಗೂ ಅಭಿಮಾನಿಗಳ ನೆನಪಿನಲ್ಲಿರುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಶಿಸೋಣ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:24 am, Wed, 13 May 26

Source link

IPL 2026: 4+2+6 ಸಂಯೋಜನೆಯಲ್ಲಿ ಕಣಕ್ಕಿಳಿಯಲಿದೆ RCB – Kannada News | IPL 2026: RCB Playing XI Against KKR

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 57ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್​ ತಂಡಗಳು ಮುಖಾಮುಖಿಯಾಗಲಿದೆ. ಇಂದು (ಮೇ 13) ರಾಯ್​ಪುರದ ಶಾಹೀದ್ ವೀರ್ ನಾರಾಯಣ್ ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಆರ್​ಸಿಬಿ ತಂಡ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ರೂಪಿಸಲಿದೆ. ಇದಕ್ಕಾಗಿ ಕಳೆದ ಬಾರಿ ಕಣಕ್ಕಿಳಿದಂತೆ 4+2+6 ಸಂಯೋಜನೆಯನ್ನು ರೂಪಿಸಲಿದ್ದಾರೆ.

ಅದರಂತೆ ಆರ್​ಸಿಬಿ ಪರ ಪೂರ್ಣ ಪ್ರಮಾಣದ ಬ್ಯಾಟರ್​ಗಳಾಗಿ ವಿರಾಟ್ ಕೊಹ್ಲಿ, ಜೇಕಬ್ ಬೆಥೆಲ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಜಿತೇಶ್ ಶರ್ಮಾ ಹಾಗೂ ಟಿಮ್ ಡೇವಿಡ್ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಆಲ್​ರೌಂಡರ್​ಗಳಾಗಿ ಕೃನಾಲ್ ಪಾಂಡ್ಯ ಹಾಗೂ ರೊಮಾರಿಯೊ ಶೆಫರ್ಡ್ ಕಣಕ್ಕಿಳಿಯಲಿದ್ದಾರೆ. ಹಾಗೆಯೇ ಬೌಲರ್​ಗಳಾಗಿ ಆರ್​ಸಿಬಿ ಪರ ಜೋಶ್ ಹೇಝಲ್​ವುಡ್, ಭುವನೇಶ್ವರ್ ಕುಮಾರ್, ರಾಸಿಖ್ ದಾರ್ ಕಾಣಿಸಿಕೊಳ್ಳುವುದು ಖಚಿತ. ಇವರೊಂದಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಸ್ಪಿನ್ನರ್ ಸುಯಶ್ ಶರ್ಮಾ ಕೂಡ ಸೇರ್ಪಡೆಯಾಗಲಿದ್ದಾರೆ.

ಅಂದರೆ ಆರು ಬ್ಯಾಟರ್​ಗಳು, ಇಬ್ಬರು ಆಲ್​ರೌಂಡರ್​ಗಳು ಮತ್ತು ನಾಲ್ವರು ಬೌಲರ್​ಗಳೊಂದಿಗೆ ಆರ್​ಸಿಬಿ ತಂಡವು ತನ್ನ ಪ್ಲೇಯಿಂಗ್ ಇಲೆವೆನ್ ರೂಪಿಸಲಿದೆ. ಅದರಂತೆ ಆರ್​ಸಿಬಿ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

  • ವಿರಾಟ್ ಕೊಹ್ಲಿ
  • ಜೇಕಬ್ ಬೆಥೆಲ್
  • ದೇವದತ್ ಪಡಿಕ್ಕಲ್
  • ರಜತ್ ಪಾಟಿದಾರ್ (ನಾಯಕ)
  • ಟಿಮ್ ಡೇವಿಡ್
  • ಜಿತೇಶ್ ಶರ್ಮಾ
  • ರೊಮಾರಿಯೊ ಶೆಫರ್ಡ್​
  • ಕೃನಾಲ್ ಪಾಂಡ್ಯ
  • ಜೋಶ್ ಹೇಝಲ್​ವುಡ್​
  • ಭುವನೇಶ್ವರ್ ಕುಮಾರ್
  • ರಾಸಿಖ್ ದಾರ್
  • ಸುಯಶ್ ಶರ್ಮಾ (ಇಂಪ್ಯಾಕ್ಟ್ ಪ್ಲೇಯರ್).

ಇದನ್ನೂ ಓದಿ: IPL 2026: ಐಪಿಎಲ್ ಪ್ಲೇಆಫ್ ವೇಳಾಪಟ್ಟಿ ಪ್ರಕಟ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್​ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಯಶ್ ದಯಾಳ್, ರಾಸಿಖ್ ಸಲಾಂ, ವೆಂಕಟೇಶ್ ಅಯ್ಯರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾನ್.

Source link

ಚಿನ್ನ, ಬೆಳ್ಳಿ ದರ ಇನ್ನಷ್ಟು ಏರಿಕೆಯಾಗೋದು ಫಿಕ್ಸ್: ಆಮದು ಸುಂಕ ಭರ್ಜರಿ ಹೆಚ್ಚಿಸಿದ ಕೇಂದ್ರ ಸರ್ಕಾರ – Kannada News | Gold and Silver Prices to Surge in India as Govt Hikes Import Duty to 15 percent Following PM Modi’s Appeal

ನವದೆಹಲಿ, ಮೇ 13: ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ಇಂಧನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆಯನ್ನು ರಕ್ಷಿಸುವ ಸಲುವಾಗಿ ಕೇಂದ್ರ ಸರ್ಕಾರವು ಚಿನ್ನ ಮತ್ತು ಬೆಳ್ಳಿಯ (Gold and Silver) ಮೇಲಿನ ಆಮದು ಸುಂಕವನ್ನು (Customs Duty) ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮಾಡಿದ ‘ಆರ್ಥಿಕ ಮಿತವ್ಯಯ’ದ ಮನವಿಯ ಬೆನ್ನಲ್ಲೇ ಈ ಮಹತ್ವದ ನಿರ್ಧಾರ ಹೊರಬಿದ್ದಿದೆ. ಇದರಿಂದ ಚಿನ್ನದ ದರ (Gold Rate) ಹಾಗೂ ಬೆಳ್ಳಿಯ ಬೆಲೆ ಹೆಚ್ಚಾಗಲಿದೆ. ಚಿನ್ನ ಖರೀದಿಯನ್ನು ಒಂದು ವರ್ಷ ಮುಂದೂಡುವಂತೆ ಪ್ರಧಾನಿ ಮನವಿ ಮಾಡಿದ್ದರು ಎಂಬುದೂ ಗಮನಾರ್ಹ.

ಮುಖ್ಯಾಂಶಗಳು

  • ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಶೇ 6 ರಿಂದ ಶೇ 15 ಕ್ಕೆ ಏರಿಸಿದ ಕೇಂದ್ರ ಸರ್ಕಾರ.
  • ಆಮದು ಸುಂಕದ ಜೊತೆಗೆ ಶೇ 5 ರಷ್ಟು ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ (AIDC) ಅನ್ವಯ.
  • ರೂಪಾಯಿ ಮೌಲ್ಯ ಕುಸಿತ ತಡೆಯಲು ಮತ್ತು ವ್ಯಾಪಾರ ಕೊರತೆ ನೀಗಿಸಲು ಈ ಕಟ್ಟುನಿಟ್ಟಿನ ಕ್ರಮ.

ಬೆಲೆ ಏರಿಕೆಯ ಬಿಸಿ

ಈಗಾಗಲೇ ಗಗನಮುಖಿಯಾಗಿರುವ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು, ಸರ್ಕಾರದ ಈ ಹೊಸ ನಿರ್ಧಾರದಿಂದಾಗಿ ಮತ್ತಷ್ಟು ದುಬಾರಿಯಾಗಲಿವೆ. ಈ ಹಿಂದೆ ಶೇ 6 ರಷ್ಟಿದ್ದ ಒಟ್ಟಾರೆ ಆಮದು ಸುಂಕವನ್ನು ಈಗ ಶೇ 15 ಕ್ಕೆ ಹೆಚ್ಚಿಸಲಾಗಿದೆ. ಇದರಲ್ಲಿ ಶೇ 10 ರಷ್ಟು ಮೂಲ ಕಸ್ಟಮ್ಸ್ ಸುಂಕ ಮತ್ತು ಶೇ 5 ರಷ್ಟು ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್ ಸೇರಿದೆ. ಡಾಲರ್ ಎದುರು ರೂಪಾಯಿ ಮೌಲ್ಯವು 95.75 ರ ಸಾರ್ವಕಾಲಿಕ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ, ವಿದೇಶಿ ವಿನಿಮಯ ಮೀಸಲು ರಕ್ಷಿಸಲು ಈ ಕ್ರಮ ಅನಿವಾರ್ಯ ಎಂದು ಸರ್ಕಾರ ಭಾವಿಸಿದೆ.

ಪ್ರಧಾನಿ ಮೋದಿ ಅವರ ಮಿತವ್ಯಯದ ಕರೆ

ಇರಾನ್ ಯುದ್ಧ ಮತ್ತು ಜಾಗತಿಕ ತೈಲ ಬೆಲೆ ಏರಿಕೆಯಿಂದ ಉಂಟಾಗಬಹುದಾದ ಆರ್ಥಿಕ ಆಘಾತವನ್ನು ಎದುರಿಸಲು ಪ್ರಧಾನಿ ಮೋದಿ ಅವರು ನಾಗರಿಕರಲ್ಲಿ ವಿಶೇಷ ಮನವಿ ಮಾಡಿದ್ದರು. ಕನಿಷ್ಠ ಒಂದು ವರ್ಷದವರೆಗೆ ಮದುವೆ ಸಮಾರಂಭಗಳಿಗೆ ಚಿನ್ನ ಖರೀದಿಸುವುದನ್ನು ತಡೆಯಿರಿ, ವಿದೇಶಿ ಪ್ರವಾಸಗಳನ್ನು ಮುಂದೂಡಿ ಮತ್ತು ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸಿ ಎಂದು ಅವರು ಸಲಹೆ ನೀಡಿದ್ದರು. ಆಮದು ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ ದೇಶದ ಆರ್ಥಿಕತೆಯನ್ನು ಸದೃಢಗೊಳಿಸುವುದು ಪ್ರಧಾನಿಯವರ ಈ ಕರೆಯ ಮುಖ್ಯ ಉದ್ದೇಶವಾಗಿದೆ.

ಚಿನ್ನದ ಮಾರುಕಟ್ಟೆ ಮೇಲೆ ಪರಿಣಾಮ

ಭಾರತವು ವಿಶ್ವದಲ್ಲೇ ಚಿನ್ನದ ಎರಡನೇ ಅತಿದೊಡ್ಡ ಗ್ರಾಹಕ ದೇಶವಾಗಿದ್ದು, ಆಮದು ಸುಂಕದ ಏರಿಕೆಯಿಂದಾಗಿ ಬೇಡಿಕೆಯಲ್ಲಿ ಕುಸಿತ ಉಂಟಾಗುವ ಸಾಧ್ಯತೆಯಿದೆ. ಬುಲಿಯನ್ ಮಾರುಕಟ್ಟೆ ತಜ್ಞರ ಪ್ರಕಾರ, ಅಧಿಕ ತೆರಿಗೆಯಿಂದಾಗಿ ಚಿನ್ನದ ಕಳ್ಳಸಾಗಣೆ (Smuggling) ಮತ್ತೆ ಹೆಚ್ಚಾಗುವ ಆತಂಕವಿದೆ.

ಇದನ್ನೂ ಓದಿ: ವರ್ಕ್ ಫ್ರಂ ಹೋಂ, ಆನ್​ಲೈನ್ ಕ್ಲಾಸ್, ಚಿನ್ನ ಬೇಡ, ಇಂಧನದ ಮಿತ ಬಳಕೆ; ಮತ್ತೊಮ್ಮೆ ಪ್ರಧಾನಿ ಮೋದಿ ಮನವಿ

ಈಗಾಗಲೇ ಏಪ್ರಿಲ್ ತಿಂಗಳಲ್ಲಿ ಭಾರತದ ಚಿನ್ನದ ಆಮದು ಕಳೆದ 30 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ತಲುಪಿತ್ತು, ಈಗಿನ ಸುಂಕ ಏರಿಕೆ ಈ ಪ್ರಮಾಣವನ್ನು ಮತ್ತಷ್ಟು ತಗ್ಗಿಸಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link