All posts by nagaraj11081993

‘ನಾವು ಗುಲಾಮರಲ್ಲ’: ಸರ್ಕಾರದ ವಿರುದ್ಧ ತಿರುಗಿಬಿದ್ದ ಸರ್ಕಾರಿ ಆಸ್ಪತ್ರೆ ವೈದ್ಯರು – Kannada News | KGMOA Protest: Karnataka Doctors Demand Rights, Threaten Indefinite Strike

ಬೆಂಗಳೂರ, ಮಾ.3: ಒಂದು ಕಡೆ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ, ಮತ್ತೊಂದು ಕಡೆ ಗುತ್ತಿದಾರರು, ಇದೀಗ ಇವರ ಜತೆಗೆ ಸರ್ಕಾರಿ ವೈದ್ಯರು ಕೂಡ ಸೇರಿಕೊಂಡಿದ್ದಾರೆ, ಸರ್ಕಾರ ಇದೊಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ (KGMOA) ಮತ್ತು ಆರೋಗ್ಯ ಇಲಾಖೆಯ ನೌಕರರ ಸಂಘಗಳು ಸರ್ಕಾರದ ವಿರುದ್ಧ ಸಿಡಿದೆದ್ದಿವೆ. ಪದೇ ಪದೇ ಮನವಿ ಮಾಡಿದರೂ ಸಮಸ್ಯೆಗಳಿಗೆ ಸ್ಪಂದಿಸದ ಕಾರಣ, ರಾಜ್ಯದಾದ್ಯಂತ ವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHC) ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ (CHC) ಹೊರರೋಗಿ ಸೇವೆ (OPD) ಸ್ಥಗಿತಗೊಳ್ಳಲಿದೆ. ವೈದ್ಯರು ಕಪ್ಪು ಪಟ್ಟಿ ಧರಿಸಿ ಕೇವಲ ತುರ್ತು ಸೇವೆಗಳನ್ನು ಮಾತ್ರ ನೀಡಲಿದ್ದಾರೆ. ಸರ್ಕಾರ ಸ್ಪಂದಿಸದಿದ್ದರೆ, ತುರ್ತು ಸೇವೆಗಳೂ ಸೇರಿದಂತೆ ಸಂಪೂರ್ಣವಾಗಿ ಕೆಲಸ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಸಲಾಗಿದೆ.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಈ ಮುಷ್ಕರವನ್ನು ಗಂಭೀರವಾಗಿ ಪರಿಗಣಿಸಿದ್ದು, “ಸಾರ್ವಜನಿಕರಿಗೆ ತೊಂದರೆಯಾದರೆ ಶಿಸ್ತು ಕ್ರಮ ಅಥವಾ ಕಾನೂನು ಕ್ರಮ (ESMA ಮಾದರಿ) ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ. ಆದರೆ ವೈದ್ಯರು “ನಾವು ಗುಲಾಮರಲ್ಲ, ನಮಗೂ ಗೌರವಯುತ ಬದುಕು ಬೇಕು” ಎಂದು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: ಚಂದ್ರ ಗ್ರಹಣದ ದಿನವೇ ಗದಗದಲ್ಲಿ ಸಪ್ತಪದಿ ತುಳಿದ 19 ಜೋಡಿಗಳು: ಗ್ರಹಣ ಶುಭ ಕಾರ್ಯಗಳಿಗೆ ಅಡ್ಡಿಯಲ್ಲ

ವೈದ್ಯರ ಪ್ರಮುಖ ಬೇಡಿಕೆಗಳೇನು?

ಮುಂಬಡ್ತಿ ಮತ್ತು ಜ್ಯೇಷ್ಠತಾ ಪಟ್ಟಿ: ಕಳೆದ ಹಲವು ವರ್ಷಗಳಿಂದ ಬಾಕಿ ಇರುವ ವೈದ್ಯರ ಮುಂಬಡ್ತಿ (Promotion) ಪ್ರಕ್ರಿಯೆಯನ್ನು ಕೂಡಲೇ ಪೂರ್ಣಗೊಳಿಸಬೇಕು ಮತ್ತು ಜ್ಯೇಷ್ಠತಾ ಪಟ್ಟಿಯನ್ನು ಪರಿಷ್ಕರಿಸಬೇಕು.

ನೇಮಕಾತಿ ನಿಯಮಗಳ ತಿದ್ದುಪಡಿ: 1973 ರಿಂದ ಬದಲಾಗದ ವೃಂದ ಮತ್ತು ನೇಮಕಾತಿ ನಿಯಮಗಳನ್ನು (C&R Rules) ಪ್ರಸ್ತುತ ಕಾಲಕ್ಕೆ ತಕ್ಕಂತೆ ತಿದ್ದುಪಡಿ ಮಾಡಬೇಕು.

ಔಷಧಿಗಳ ಕೊರತೆ: ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ಸುಲಿನ್, ಆಂಟಿಬಯೋಟಿಕ್ಸ್ ಸೇರಿದಂತೆ ಅಗತ್ಯ ಔಷಧಿಗಳ ತೀವ್ರ ಕೊರತೆಯಿದ್ದು, ಇದನ್ನು ಕೂಡಲೇ ನೀಗಿಸಬೇಕು.

ಉನ್ನತ ವ್ಯಾಸಂಗಕ್ಕೆ ಅವಕಾಶ: ಸರ್ಕಾರಿ ವೈದ್ಯರು ಸ್ನಾತಕೋತ್ತರ (PG) ವ್ಯಾಸಂಗ ಮಾಡಲು ಇರುವ ನಿರ್ಬಂಧಗಳನ್ನು ಸಡಿಲಿಸಬೇಕು ಮತ್ತು ವೇತನ ಸಹಿತ ರಜೆ ನೀಡಬೇಕು.

ವೇತನ ಮತ್ತು ಭದ್ರತೆ: ಗುತ್ತಿಗೆ ಮತ್ತು ಎನ್.ಎಚ್.ಎಂ (NHM) ಸಿಬ್ಬಂದಿಗೆ ಉದ್ಯೋಗ ಭದ್ರತೆ ಹಾಗೂ ಪ್ರತಿ ತಿಂಗಳು ಮೊದಲ ವಾರದಲ್ಲೇ ವೇತನ ಪಾವತಿಸಬೇಕು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಆಫ್ರಿಕಾ- ಕಿವೀಸ್ ಸೆಮಿಫೈನಲ್‌ ಪಂದ್ಯ ಆರಂಭದ ಸಮಯದಲ್ಲಿ ಬದಲಾವಣೆ? ಎಲ್ಲಿ, ಯಾವಾಗ, ಎಷ್ಟು ಗಂಟೆಗೆ ಆರಂಭ? – Kannada News | 2026 T20 World Cup Semi Final: SA vs NZ Match Details, Live Stream, Date and Venue

2026 ರ ಟಿ20 ವಿಶ್ವಕಪ್‌ನ ಮೊದಲ ಸೆಮಿಫೈನಲ್ ( 2026 T20 World Cup Semi-Final) ಪಂದ್ಯ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ (South Africa vs New Zealand) ನಡುವೆ ನಡೆಯಲಿದೆ. ದಕ್ಷಿಣ ಆಫ್ರಿಕಾ ಸೂಪರ್ 8 ರ ಗ್ರೂಪ್ ಎ ನಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಸೆಮಿಫೈನಲ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡರೆ, ನ್ಯೂಜಿಲೆಂಡ್ ಗ್ರೂಪ್ ಬಿ ನಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಸೆಮಿಫೈನಲ್ ತಲುಪಿದೆ. ಇನ್ನು ಈ ಪಂದ್ಯದಲ್ಲಿ ಗೆದ್ದ ತಂಡ ಮೊದಲ ತಂಡವಾಗಿ ಫೈನಲ್​ಗೆ ಅರ್ಹತೆ ಪಡೆಯಲಿದೆ. ಇತ್ತ ಸೋತ ತಂಡಕ್ಕೆ ಟೂರ್ನಿಯಿಂದ ಗೇಟ್​ಪಾಸ ಸಿಗಲಿದೆ. ಹೀಗಾಗಿ ಉಭಯ ತಂಡಗಳು ಗೆಲುವಿಗಾಗಿ ಸಕಲ ತಯಾರಿ ಮಾಡಿಕೊಂಡು ಅಖಾಡಕ್ಕಿಳಿಯಲು ಸಜ್ಜಾಗಿದೆ. ಆದರೆ ಅದಕ್ಕೂ ಮುನ್ನ ಈ ಪಂದ್ಯ ಯಾವಾಗ, ಎಲ್ಲಿ ನಡೆಯಲಿದೆ? ಎಷ್ಟು ಗಂಟೆಗೆ ಆರಂಭವಾಗಲಿದೆ? ಉಚಿತವಾಗಿ ವೀಕ್ಷಿಸುವುದು ಹೇಗೆ ಎಂಬಿತ್ಯಾದಿ ವಿವರಗಳನ್ನು ನಾವು ನೀಡಲಿದ್ದೇವೆ.

ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯ ಯಾವಾಗ ನಡೆಯಲಿದೆ?

ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯ ಫೆಬ್ರವರಿ 4 ರಂದು ನಡೆಯಲಿದೆ.

ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯ ಎಲ್ಲಿ ನಡೆಯಲಿದೆ?

ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ.

ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯ ಎಷ್ಟು ಗಂಟೆಗೆ ಆರಂಭ?

ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಟಾಸ್ ಸಂಜೆ 6:30 ಕ್ಕೆ ನಡೆಯಲಿದೆ.

ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯವನ್ನು ಟಿವಿಯಲ್ಲಿ ವೀಕ್ಷಿಸುವುದು ಹೇಗೆ?

ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯವನ್ನು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್​ನ ವಿವಿಧ ಚಾನೆಲ್​ಗಳಲ್ಲಿ ವೀಕ್ಷಿಸಬಹುದು. ಹಾಗೆಯೇ ಜಿಯೋ ಹಾಟ್ ಸ್ಟಾರ್​ನಲ್ಲೂ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು.

PAK vs SL: ಟಿ20 ವಿಶ್ವಕಪ್​ನಿಂದ ಹೊರಬಿದ್ದ ‘ಪ್ಯಾಕಿ’ಸ್ತಾನ; ಕಿವೀಸ್​ಗೆ ಸೆಮೀಸ್ ಟಿಕೆಟ್

ಉಭಯ ತಂಡಗಳು

ನ್ಯೂಜಿಲೆಂಡ್ ತಂಡ: ಫಿನ್ ಅಲೆನ್, ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಕೈಲ್ ಜೇಮಿಸನ್, ಇಶ್ ಸೋಧಿ, ಲಾಕಿ ಫರ್ಗುಸನ್, ಜಾಕೋಬ್ ಡಫಿ, ಜೇಮ್ಸ್ ನೀಶಮ್, ಮ್ಯಾಟ್ ಹೆನ್ರಿ, ಡೆವೊನ್ ಕಾನ್ವೇ, ಮಾರ್ಕ್ ಚಾಪ್ಮನ್.

ದಕ್ಷಿಣ ಆಫ್ರಿಕಾ ತಂಡ: ಐಡೆನ್ ಮಾರ್ಕ್ರಾಮ್ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಿಯಾನ್ ರಿಕೆಲ್ಟನ್, ಡೆವಾಲ್ಡ್ ಬ್ರೆವಿಸ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಯಾನ್ಸೆನ್, ಕಾರ್ಬಿನ್ ಬಾಷ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ, ಜೇಸನ್ ಸ್ಮಿತ್, ಜಾರ್ಜ್ ಲಿಂಡೆ, ಅನ್ರಿಚ್ ನೋಕಿಯಾ, ಕ್ವೆನಾ ಮಫಕಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:39 pm, Tue, 3 March 26

Source link

ನನ್ನ ಮನೆ ಹಾಳು ಮಾಡಿದ್ದೀರಿ, ಸಾಲ ಮಾಡಿದ್ದೇನೆ: ವೇದಿಕೆ ಮೇಲೆ ಗಳಗಳನೇ ಅತ್ತ ಕಾಂಗ್ರೆಸ್‌ ಶಾಸಕ – Kannada News | They Giving problem to my family: sringeri congress mla TD Rajegowda Alleged with Tears Against Jeevaraj

ಚಿಕ್ಕಮಗಳೂರು, (ಮಾರ್ಚ್ 03): ನನ್ನ ಕುಟುಂಬ ಬೀದಿಗೆ ತಂದಿದ್ದೀರಿ. ದಿನ ನಿತ್ಯ ನ್ಯಾಯಾಲಯಕ್ಕೆ ಆಲೆಯುವಂತೆ ಮಾಡಿದ್ದೀರಿ. ನನ್ನ ಮನೆ ಹಾಳು ಮಾಡಿದ್ದೀರಿ. ಸಾಲ ಮಾಡಿದ್ದೇನೆ ಎಂದು ಶೃಂಗೇರಿ ಶಾಸಕ ಶಾಸಕ ಟಿಡಿ ರಾಜೇಗೌಡ (sringeri congress mla TD Rajegowda) ಬಹಿರಂಗ ಕಾರ್ಯಕ್ರಮದಲ್ಲೇ ಗಳಗಳನೇ ಅತ್ತಿರುವ ಪ್ರಸಂಗ ನಡೆದಿದೆ. ಬಾಳೆಹೊನ್ನೂರಿನಲ್ಲಿ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ನಿನ್ನೆ (ಮಾರ್ಚ್ 02) ಹಮ್ಮಿಕೊಂಡಿದ್ದ ಶೃಂಗೇರಿ ಕ್ಷೇತ್ರದ ರೈತರ, ಕಾರ್ಮಿಕರ ಮತ್ತು ನೆಲವಾಸಿಗಳ ಸಮಸ್ಯೆ ಕುರಿತು ನಡೆದ ಜನಾಂದೋಲನ ಸಮಾವೇಶದಲ್ಲಿ ಶಾಸಕ ಟಿಡಿ ರಾಜೇಗೌಡ ಅವರು ಬಿಜೆಪಿ ಮಾಜಿ ಸಚಿವ ಡಿಎನ್‌ ಜೀವರಾಜ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಇಬ್ಬರೂ ಮುಂದಿನ ಚುನಾವಣೆಗೆ ನಿಲ್ಲುವುದು ಬೇಡ ಎಂದು ಆಕ್ರೋಶ ಹೊರಹಾಕಿದ್ದಾರೆ.

ಜನಾಂದೋಲನ ಸಮಾವೇಶದಲ್ಲಿ ಕಣ್ಣೀರಿಟ್ಟ ಶಾಸಕ

ಮುಂದೆ ಚುನಾವಣೆಗೆ ಸ್ಪರ್ಧಿಸದಿದ್ದರೂ ಜೀವ ಕೊಟ್ಟ ಕ್ಷೇತ್ರದ ಜನರಿಗಾಗಿ ದುಡಿಯುತ್ತೇನೆ. ನನ್ನ ಜೀವ ತಿಂದಿದ್ದೀರ, ನನ್ನ ಕುಟುಂಬ ಬೀದಿಗೆ ತಂದಿದ್ದೀರಿ. ದಿನ ನಿತ್ಯ ನ್ಯಾಯಾಲಯಕ್ಕೆ ಆಲೆಯುವಂತೆ ಮಾಡಿದ್ದೀರಿ. ನನ್ನ ಮನೆ ಹಾಳು ಮಾಡಿದ್ದೀರಿ. ಸಾಲ ಮಾಡಿದ್ದೇನೆ. ನಾನು ಚುನಾವಣೆಗೆ ನಿಲ್ಲುವುದಿಲ್ಲ. ನೀವು ಯಾರಾದರೂ ನಿಲ್ಲಿ ಎಂದು ಗದ್ಗದಿತರಾದ ರಾಜೇಗೌಡ, ಕೆಟ್ಟ ಮನಸ್ಥಿತಿಯ ಮನುಷ್ಯ ಕ್ಷೇತ್ರದಲ್ಲಿ ಮತ್ತೆ ಶಾಸಕನಾಗಬಾರದು. ಆದರೆ ಕ್ಷೇತ್ರಕ್ಕೆ ದೊಡ್ಡ ಮಾರಕ. ಯಾರ ಮನೆ ಹೆಣ್ಣು ಮಕ್ಕಳಿಗೆ ಏನು ಮಾಡುತ್ತಾರೋ ಗೊತ್ತಿಲ್ಲ. ಎಲ್ಲೂ ಮುಕ್ತವಾಗಿ ಯಾರೂ ಓಡಾಡುವಂತಿಲ್ಲ ಎಂದು ಮಾಜಿ ಶಾಸಕ ಡಿ ಎನ್ ಜೀವರಾಜ್ ಹೆಸರು ಹೇಳದೆಯೇ ಕಣ್ಣೀರಿಟ್ಟಿದ್ದಾರೆ.

ಮಾಜಿ ಎಂಎಲ್​​ಗೆ ಹಾಲಿ ಶಾಸಕ ಸವಾಲ್

ನನ್ನ ಹೆಂಡತಿ, ಮಗನಿಗೆ ತೊಂದರೆ ಕೊಡುತ್ತಿದ್ದಾರೆ, ನಾನು ಈ ಸಮಾವೇಶದ ಮೂಲಕ ಒಂದು ಘೋಷಣೆ ಮಾಡುತ್ತಿದ್ದೇನೆ. ಈ ಕ್ಷೇತ್ರದಲ್ಲಿ ಜನರಿಗೆ ವಿನಾಕಾರಣ ತೊಂದರೆ ಕೊಡುತ್ತಾ, ಮಹಿಳೆಯರಿಗೆ ತೊಂದರೆ ಕೊಟ್ಟಿರುವುದನ್ನು ಮನದಟ್ಟು ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸಲ್ಲ ಅಂತ ಘೋಷಣೆ ಮಾಡಲಿ ಎಂದು ಜೀವರಾಜ್ ಹೆಸರು ಹೇಳದೇ ಶಾಸಕ ರಾಜೇಗೌಡ ಸವಾಲು ಹಾಕಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಕೆಲಸದ ಸ್ಥಳದಲ್ಲಿ ಗೌರವ, ಪ್ರಗತಿ ಸಾಧಿಸಬೇಕೆಂದರೆ ಚಾಣಕ್ಯರ ಈ ತತ್ವಗಳನ್ನು ಪಾಲಿಸಿ – Kannada News | Chanakya Niti: What should you do to gain respect and success in the workplace?

ವೃತ್ತಿ ಜೀವನದಲ್ಲಿ ಯಶಸ್ಸಿನ  (success) ಮೆಟ್ಟಿಲೇರಬೇಕು ಎಂಬ ಕನಸ್ಸು ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಕೆಲವೊಮ್ಮೆ, ಕಠಿಣ ಪರಿಶ್ರಮದ ಹೊರತಾಗಿಯೂ,  ಅರ್ಹವಾದ ಗೌರವ ಮತ್ತು ಪ್ರಗತಿ ಸಿಗುವುದಿಲ್ಲ. ಯಶಸ್ಸು ಸಾಧಿಸಲು, ಕೆಲಸದ ಸ್ಥಳದಲ್ಲಿ ಗೌರವ ಗಳಿಸಲು ಕೇವಲ ಕಠಿಣ ಪರಿಶ್ರಮ ಸಾಕಾಗುವುದಿಲ್ಲ, ನಿಮ್ಮ ಬುದ್ಧಿವಂತಿಕೆ ಮತ್ತು ಒಂದಷ್ಟು ನಡವಳಿಕೆಗಳನ್ನು ಅಳವಡಿಸಿಕೊಳ್ಳುವುದು ತುಂಬಾ ಮುಖ್ಯ ಎಂದು ಆಚಾರ್ಯ ಚಾಣಕ್ಯರು ಶತಮಾನಗಳ ಹಿಂದೆಯೇ ತಿಳಿಸಿಕೊಟ್ಟಿದ್ದಾರೆ. ನೀವು ಸಹ ಕೆಲಸದಲ್ಲಿ ಯಶಸ್ಸನ್ನು ಗಳಿಸಲು ಬಯಸಿದರೆ ಚಾಣಕ್ಯರ ಈ ಕೆಲವು ರಹಸ್ಯ ಮಂತ್ರಗಳನ್ನು ತಪ್ಪದೆ ಪಾಲಿಸಿ.

ಕೆಲಸದ ಸ್ಥಳದಲ್ಲಿ ಗೌರವ ಗಳಿಸಲು ಪಾಲಿಸಬೇಕಾದ ತತ್ವಗಳು:

ನಮ್ಮ ದೌರ್ಬಲ್ಯವನ್ನು ಯಾರಿಗೂ ಹೇಳಬೇಡಿ: ಆಚಾರ್ಯ ಚಾಣಕ್ಯ ಹೇಳುವಂತೆ, ಒಬ್ಬ ವ್ಯಕ್ತಿಯು ತನ್ನ ದೌರ್ಬಲ್ಯಗಳನ್ನು ಎಂದಿಗೂ ಇತರರಿಗೆ ಬಹಿರಂಗಪಡಿಸಬಾರದು. ನೀವು ಕಚೇರಿಯಲ್ಲಿ ನಿಮ್ಮ ನ್ಯೂನತೆಗಳನ್ನು ಬಹಿರಂಗವಾಗಿ ಹೇಳಿದರೆ, ನಿಮ್ಮ ವಿರೋಧಿಗಳು ಅವುಗಳನ್ನು ಬಳಸಿಕೊಳ್ಳಬಹುದು. ಹಾಗಾಗಿ ನಿಮ್ಮ ದೌರ್ಬಲ್ಯಗಳ ಬಗ್ಗೆ ಕೆಲಸದ ಸ್ಥಳದಲ್ಲಿ ಯಾರೊಂದಿಗೂ ಹಂಚಿಕೊಳ್ಳಬೇಡಿ. ಬದಲಿಗೆ ನಿಮ್ಮ ಕಠಿಣ ಪರಿಶ್ರಮ ಮತ್ತು ಸಾಮರ್ಥ್ಯಗಳನ್ನು ನಂಬಿರಿ.

ಇತರರ ತಪ್ಪುಗಳಿಂದ ಕಲಿಯಿರಿ: ಆಚಾರ್ಯ ಚಾಣಕ್ಯರು  ಹೇಳುವಂತೆ ಬುದ್ಧಿವಂತ ವ್ಯಕ್ತಿ ಎಂದರೆ ಆತ ಇತರರ ತಪ್ಪುಗಳಿಂದ ಕಲಿಯುವವನು. ಕಚೇರಿ ವಾತಾವರಣವನ್ನು ಅರ್ಥಮಾಡಿಕೊಳ್ಳಿ, ಇತರರು ವಿಫಲರಾದಾಗ ಅದಕ್ಕೆ ಕಾರಣಗಳೇನು ಎಂಬುದನ್ನು ಗಮನಿಸಿ ಮತ್ತು ಅದೇ ತಪ್ಪುಗಳನ್ನು  ನೀವು ಪುನರಾವರ್ತಿಸುವುದನ್ನು ತಪ್ಪಿಸಿ.

ನಿಮ್ಮ ಯೋಜನೆಗಳನ್ನು ರಹಸ್ಯವಾಗಿಡಿ: ನಿಮ್ಮ ಕೆಲಸ ಅಥವಾ ಯೋಜನೆ ಪೂರ್ಣಗೊಳ್ಳುವವರೆಗೆ ಅದರ ಬಗ್ಗೆ ಯಾರೊಂದಿಗೂ ಹಂಚಿಕೊಳ್ಳಬೇಡಿ. ಇದರಿಂದ ನಿಮ್ಮ ಪ್ರಗತಿಗೆ ಅಡ್ಡಿಯಾಗಬಹುದು. ನಿಮ್ಮ ಯೋಜನೆಗಳನ್ನು ಹಂಚಿಕೊಳ್ಳಲೇಬೇಕೆಂದರೆ ನಿಮ್ಮ ಮುಂದಿನ ಹೆಜ್ಜೆಗಳನ್ನು ವಿಶ್ವಾಸಾರ್ಹ ವ್ಯಕ್ತಿಗಳೊಂದಿಗೆ ಮಾತ್ರ ಹಂಚಿಕೊಳ್ಳಿ.

ಶಿಸ್ತು ಮತ್ತು ಸಮಯಕ್ಕೆ ಗೌರವ: ಸಮಯವನ್ನು ಗೌರವಿಸದವರಿಗೆ ಯಶಸ್ಸು ಸಿಗುವುದಿಲ್ಲ. ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುವುದು ಮತ್ತು ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸಗಳನ್ನು ಪೂರ್ಣ ಗೊಳಿಸುವುದು, ಇದು ನಿಮಗೆ ವೃತ್ತಿಪರ ಇಮೇಜ್ ನೀಡುತ್ತದೆ. ಅಷ್ಟೇ ಅಲ್ಲದೆ ಇದು ನಿಮಗೆ ಕೆಲಸದ ಸ್ಥಳದಲ್ಲಿ ಯಶಸ್ಸು ಮತ್ತು ಗೌರವವನ್ನು ತಂದುಕೊಡುತ್ತದೆ.

ಇದನ್ನೂ ಓದಿ: ತಪ್ಪಿಯೂ ಇಂತಹ ಜನರಿಗೆ ಸಹಾಯ ಮಾಡಬಾರದು

ಕೆಲಸ ಪ್ರಾರಂಭಿಸುವ ಮೊದಲು ನಿಮ್ಮನ್ನು ನೀವು  ಕೇಳಬೇಕಾದ 3 ಪ್ರಶ್ನೆಗಳು:

ಚಾಣಕ್ಯನ ಪ್ರಕಾರ, ಯಾವುದೇ ದೊಡ್ಡ ಯೋಜನೆ ಅಥವಾ ಕೆಲಸವನ್ನು ಕೈಗೆತ್ತಿಕೊಳ್ಳುವ ಮೊದಲು, ನಿಮ್ಮನ್ನು ನೀವು ಮೂರು ಪ್ರಶ್ನೆಗಳನ್ನು ಕೇಳಿಕೊಳ್ಳಿ.

  • ನಾನು ಈ ಕೆಲಸ ಏಕೆ ಮಾಡುತ್ತಿದ್ದೇನೆ?
  • ಇದರ ಫಲಿತಾಂಶ ಏನಾಗುತ್ತದೆ?
  • ನಾನು ಇದರಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆಯೇ?

ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಗಳು ನಿಮ್ಮಲ್ಲಿ ಇದ್ದಾಗ ಮಾತ್ರ ನೀವು ಮುಂದುವರಿಯಬೇಕು. ಈ ಸ್ಪಷ್ಟತೆಯು ನಿಮ್ಮನ್ನು ಕಚೇರಿಯಲ್ಲಿ ಹೆಚ್ಚು ಗಂಭೀರವಾಗಿ ಮತ್ತು ಸಂಯಮದಿಂದ ಕಾಣುವಂತೆ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದುಬೈನಿಂದ ಬೆಂಗಳೂರಿಗೆ ಆಗಮಿಸಿದ ಮತ್ತೊಂದು ವಿಮಾನ: ಇಲ್ಲಿಯವರೆಗೆ ತಾಯ್ನಡಿಗೆ ಬಂದ 1,053 ಪ್ರಯಾಣಿಕರು – Kannada News | Middle East Rescue: Over 1000 Kannadigas Evacuated from Dubai and Abu Dhabi to KIA

ದೇವನಹಳ್ಳಿ, ಮಾ.3: ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಯುದ್ಧದ ಭೀತಿಯ ನಡುವೆ ಅತಂತ್ರರಾಗಿದ್ದ ಅನಿವಾಸಿ ಕನ್ನಡಿಗರನ್ನು ರಕ್ಷಿಸುವ ಕಾರ್ಯ ಸಮರೋಪಾದಿಯಲ್ಲಿ ಸಾಗುತ್ತಿದೆ. ಇಂದು ದುಬೈನಿಂದ ಹೊರಟಿದ್ದ ಎಮಿರೇಟ್ಸ್ (Emirates) EK-566 ವಿಮಾನವು 350 ಪ್ರಯಾಣಿಕರೊಂದಿಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಬಂದಿಳಿದಿದೆ. ಇಂದು ಮುಂಜಾನೆಯಷ್ಟೇ ದುಬೈನಿಂದ 490 ಪ್ರಯಾಣಿಕರನ್ನು ಹೊತ್ತು ಮೊದಲ ವಿಮಾನ ಬಂದಿಳಿದಿತ್ತು. ಇದೀಗ ಮಧ್ಯಾಹ್ನ 3 ಗಂಟೆಗೆ ದುಬೈನಿಂದ ಹೊರಟಿದ್ದ ಎರಡನೇ ವಿಮಾನ (EK-566) ಸಂಜೆ ಬೆಂಗಳೂರಿಗೆ ಆಗಮಿಸಿದೆ.

ಈ ವಿಮಾನದಲ್ಲಿ ಒಟ್ಟು 350 ಕನ್ನಡಿಗರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ. ವಿಮಾನ ನಿಲ್ದಾಣದ ಸಿಬ್ಬಂದಿ ಮತ್ತು ಅಧಿಕಾರಿಗಳು ಸಂತ್ರಸ್ತ ಪ್ರಯಾಣಿಕರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಕಳೆದ ರಾತ್ರಿ ಅಬುಧಾಬಿಯಿಂದಲೂ 213 ಪ್ರಯಾಣಿಕರು ಬೆಂಗಳೂರಿಗೆ ಬಂದಿಳಿದಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಮನ್ವಯದೊಂದಿಗೆ ಈ ‘ರೆಸ್ಕ್ಯೂ ಮಿಷನ್’ ಸಾಗುತ್ತಿದೆ. ಯುದ್ಧದ ಭೀತಿಯಿಂದಾಗಿ ಆತಂಕದಲ್ಲಿದ್ದ ಪ್ರಯಾಣಿಕರು ಬೆಂಗಳೂರಿನ ಮಣ್ಣಿಗೆ ಕಾಲಿಡುತ್ತಿದ್ದಂತೆ ನಿಟ್ಟುಸಿರು ಬಿಟ್ಟರು. ವಿಮಾನ ನಿಲ್ದಾಣದ ಹೊರಗೆ ಕಾಯುತ್ತಿದ್ದ ಕುಟುಂಬ ಸದಸ್ಯರ ಮೊಗದಲ್ಲಿ ಮಂದಹಾಸ ಮೂಡಿದೆ.

ಇದನ್ನೂ ಓದಿ: ಖಮೇನಿ ಸಾವಿನ ಕುರಿತಾದ ಪ್ರತಿಭಟನೆಗಳನ್ನು ಖಂಡಿಸಿದ ಮುಂಬೈನ ಶಿಯಾ ನಾಯಕ ಮೌಲಾನಾ ಹಸನ್ ಅಲಿ

ಕಳೆದ ರಾತ್ರಿಯಿಂದ ಇಲ್ಲಿಯವರೆಗೆ 1,053 ಪ್ರಯಾಣಿಕರು ಆಗಮಿಸಿದ್ದಾರೆ. ಅಬುಧಾಬಿಯಿಂದ ಮೊದಲ ವಿಮಾನದಲ್ಲಿ ಆಗಮಿಸಿದ್ದ 213 ಜನ ಬಂದಿದ್ದರು. ಮುಂಜಾನೆ ದುಬೈನಿಂದ ಆಗಮಿಸಿದ್ದ ವಿಮಾನದಲ್ಲಿ 490 ಪ್ರಯಾಣಿಕರು ಇದ್ದರು. ಇದೀಗ ದುಬೈನಿಂದ ಬಂದಿಳಿದ ವಿಮಾನದಲ್ಲಿ 350 ಜನರ ಆಗಮನ ಆಗಿದೆ. ಇನ್ನು ಈ ಪ್ರಯಾಣಿಕರನ್ನು ಕೆಐಎಬಿ ಸಿಬ್ಬಂದಿಗಳು ಆತ್ಮೀಯತೆಯಿಂದ ಬರಮಾಡಿಕೊಂಡಿದ್ದಾರೆ. ಇನ್ನು ಪ್ರಯಾಣಿಕರನ್ನು ಅವರವರ ಮನೆಗಳಿಗೆ ಕಳುಹಿಸಿದ ಕೆಲಸವನ್ನೂ ಕೂಡ ಮಾಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತುಂಬ ತಡವಾಗಿದೆ, ಇರಾನ್ ಜೊತೆ ಮಾತುಕತೆ ಸಾಧ್ಯವಿಲ್ಲ; ಟ್ರಂಪ್ ಘೋಷಣೆ – Kannada News | Donald Trump declares too late for talks with Iran as US Israel strikes escalate conflict

ವಾಷಿಂಗ್ಟನ್, ಮಾರ್ಚ್ 3: ಇಂದು ಸಂಜೆ ಡೊನಾಲ್ಡ್ ಟ್ರಂಪ್ (Donald Trump) ಯುದ್ಧದ ಅಂತ್ಯದ ಬಗ್ಗೆ ಮಾತನಾಡಿದ್ದಾರೆ. ಇರಾನ್‌ನ ವಾಯುಪಡೆ ಮತ್ತು ನೌಕಾಪಡೆ ನಾಶವಾಯಿತು. ಇರಾನ್​ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿಯಿಂದ ಪ್ರಾರಂಭಿಸಿ ಇರಾನ್​ನ ಎಲ್ಲ ನಾಯಕರನ್ನೂ ಹತ್ಯೆ ಮಾಡಲಾಗಿದೆ. ಹೀಗಾಗಿ ತನ್ನಿಂದ ತಾನಾಗೇ ಯುದ್ಧ ನಿಲ್ಲುತ್ತದೆ. ಈಗಾಗಲೇ ತಡವಾಗಿರುವುದರಿಂದ ಮಾತುಕತೆ ಸಾಧ್ಯವಿಲ್ಲ ಎಂದಿದ್ದಾರೆ.

ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್‌ನ ಪ್ರಭಾವಿ ಮುಖ್ಯಸ್ಥ ಅಲಿ ಲಾರಿಜಾನಿ, ಇರಾನ್ ಅಮೆರಿಕದ ಜೊತೆ ಮಾತುಕತೆ ನಡೆಸುವುದಿಲ್ಲ ಎಂದು ಹೇಳಿದ ಒಂದು ದಿನದ ನಂತರ ಟ್ರಂಪ್ ಅವರ ಈ ಘೋಷಣೆ ಹೊರಬಿದ್ದಿದೆ. ಇರಾನಿನ ಅಧಿಕಾರಿಗಳು ಟ್ರಂಪ್ ಜೊತೆ ಮಾತುಕತೆ ನಡೆಸಲು ಪ್ರಯತ್ನಿಸಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಅಮೆರಿಕ ನಿರಾಕರಿಸಿದೆ.

ಇದನ್ನೂ ಓದಿ: ಇಸ್ರೇಲ್-ಯುಎಸ್ ದಾಳಿಯಿಂದಾಗಿ ಇರಾನ್​ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತ ಸ್ಥಳಕ್ಕೆ ಶಿಫ್ಟ್

ಯುಎಸ್-ಇಸ್ರೇಲ್ ದಾಳಿಗಳು ಗಣ್ಯ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ ಸೇರಿದಂತೆ ಟೆಹ್ರಾನ್‌ನಲ್ಲಿರುವ ಇರಾನ್ ಆಡಳಿತ ಕಟ್ಟಡಗಳನ್ನು ಗುರಿಯಾಗಿಸಿಕೊಂಡವು. ಬಾಲಕಿಯರ ಶಾಲೆ ಸೇರಿದಂತೆ ನಾಗರಿಕ ಕೇಂದ್ರಗಳನ್ನು ಸಹ ಹೊಡೆದವು ಎಂದು ವರದಿಯಾಗಿದೆ. ಇದರಲ್ಲಿ ಮಕ್ಕಳು ಸೇರಿದಂತೆ 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.

ಇಂದು ಕ್ಷಿಪಣಿಗಳು ಮತ್ತು ದಾಳಿ ಡ್ರೋನ್‌ಗಳು ಟೆಹ್ರಾನ್‌ನ ಹಲವಾರು ಗುರಿಗಳ ಮೇಲೆ ದಾಳಿ ಮಾಡಿದವು, ಅವುಗಳಲ್ಲಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರಿರುವ ಕಟ್ಟಡ ಕೂಡ ಸೇರಿತ್ತು. ನಂತರ ಅವರನ್ನು ಕೊಲ್ಲಲಾಗಿದೆ ಎಂದು ದೃಢಪಡಿಸಲಾಯಿತು. ಇರಾನ್ ಟೆಲ್ ಅವೀವ್, ಇತರ ಇಸ್ರೇಲಿ ನಗರಗಳು ಮತ್ತು ಪಶ್ಚಿಮ ಏಷ್ಯಾದಾದ್ಯಂತದ ಯುಎಸ್ ಮಿಲಿಟರಿ ನೆಲೆಗಳು ಮತ್ತು ರಾಯಭಾರ ಕಚೇರಿಗಳ ಮೇಲೆ ದಾಳಿ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡಿತು. ಸೌದಿ ಅರೇಬಿಯಾದಲ್ಲಿನ ತೈಲ ಸಂಸ್ಕರಣಾಗಾರ ಮತ್ತು ದುಬೈನಲ್ಲಿರುವ ಐಷಾರಾಮಿ ಹೋಟೆಲ್ ಸೇರಿದಂತೆ ನಾಗರಿಕ ಮತ್ತು ಇಂಧನ ಸೌಲಭ್ಯಗಳು ಸಹ ಹಾನಿಗೊಳಗಾದವು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ ಸಚಿವ ವಿ. ಸೋಮಣ್ಣ – Kannada News | V Somanna released Sarkari Nyaya Bele Angadi movie poster

ಕುಮಾರ್ ಬಂಗಾರಪ್ಪ, ದೊಡ್ಡಣ್ಣ, ರಾಗಿಣಿ ದ್ವಿವೇದಿ (Ragini Dwivedi) ಮುಂತಾದವರು ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಈಗಾಗಲೇ ಶೂಟಿಂಗ್ ಪೂರ್ಣಗೊಂಡಿದೆ. ಚಿತ್ರದ ಶೀರ್ಷಿಕೆಯೇ ತಿಳಿಸುತ್ತಿರುವಂತೆ ಸರ್ಕಾರಿ ನ್ಯಾಯಬೆಲೆ ಅಂಗಡಿ (Sarkari Nyaya Bele Angadi) ಮತ್ತು ಪಡಿತರ ವ್ಯವಸ್ಥೆಯ ಸುತ್ತ ನಡೆಯುವಂತಹ ಕಥಾಹಂದರವನ್ನು ಈ ಸಿನಿಮಾ ತೆರೆದಿಡಲಿದೆ. ಗ್ರಾಮೀಣ ಸೊಗಡಿನ ಕಥೆಯಿರುವ ಈ ಸಿನಿಮಾದ ಸಂಪೂರ್ಣ ಚಿತ್ರೀಕರಣವನ್ನು ಮಂಡ್ಯ ಜಿಲ್ಲೆಯಲ್ಲಿ ಮಾಡಲಾಗಿದೆ. ಕೇಂದ್ರ ಜಲ ಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ (V Somanna) ಅವರು ಈ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

ಭಾ.ಮ. ಹರೀಶ್‌, ಭಾ.ಮ. ಗಿರೀಶ್‌, ಚೆಲುವ ಮೂರ್ತಿ ಸೇರಿದಂತೆ ಚಿತ್ರರಂಗ ಮತ್ತು ರಾಜಕೀಯದ ಅನೇಕ ಗಣ್ಯರು ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಪೋಸ್ಟರ್ ಬಿಡುಗಡೆ ವೇಳೆ ಹಾಜರಿದ್ದರು. ಪೋಸ್ಟರ್ ಬಿಡುಗಡೆ ಬಳಿಕ ಸಿನಿಮಾ ಬಗ್ಗೆ ವಿ. ಸೋಮಣ್ಣ ಅವರು ಮಾತನಾಡಿದರು. ಚಿತ್ರತಂಡ ಪ್ರಯತ್ನವನ್ನು ಮೆಚ್ಚಿ ಅವರು ಶುಭ ಹಾರೈಸಿದರು.

‘ಬಡವರು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸರ್ಕಾರಿ ನ್ಯಾಯಬೆಲೆ ಅಂಗಡಿ ಮೂಲಕ ದಿನಸಿ ಮತ್ತು ಆಹಾರವನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಆದರೆ ಈ ವ್ಯವಸ್ಥೆಯಲ್ಲಿರುವ ಕೆಲವು ಲೋಪಗಳಿಂದ ಇದರ ಉದ್ದೇಶ ಪರಿಣಾಮಕಾರಿಯಾಗಿ ಈಡೇರುತ್ತಿಲ್ಲ. ಇದೇ ವಿಷಯವನ್ನು ಇಟ್ಟುಕೊಂಡು ಸಿನಿಮಾ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ಸಾಮಾಜಿಕ ಕಳಕಳಿಯ ವಿಷಯಗಳನ್ನು ಸಿನಿಮಾ ಮೂಲಕ ಹೇಳಿದಾಗ ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ತಲುಪುತ್ತದೆ’ ಎಂದು ವಿ. ಸೋಮಣ್ಣ ಹೇಳಿದರು.

ನಟ ಕುಮಾರ್ ಬಂಗಾರಪ್ಪ ಅವರು ಮಾತನಾಡಿ, ‘ಪಡಿತರ ವ್ಯವಸ್ಥೆಯ ಮೇಲೆ ಮೂಡಿಬರುತ್ತಿರುವ ಮೊಟ್ಟ ಮೊದಲ ಸಿನಿಮಾ ಇದು. ಮನರಂಜನೆ ಜೊತೆಗೆ ಒಂದು ಒಳ್ಳೆಯ ಸಂದೇಶ ಸಹ ಈ ಸಿನಿಮಾದಲ್ಲಿದೆ. ನ್ಯಾಯಬೆಲೆ ಅಂಗಡಿಯಲ್ಲಿ ಏನೇನು ಅವ್ಯವಹಾರಗಳು ನಡೆಯುತ್ತದೆ ಎಂಬುದನ್ನು ಸಮಾಜಕ್ಕೆ ತೋರಿಸುವಂಥ ಕಥೆ ಈ ಸಿನಿಮಾದಲ್ಲಿದೆ’ ಎಂದು ಹೇಳಿದರು.

ಇದನ್ನೂ ಓದಿ: ‘ಡೆವಿಲ್​​ನಲ್ಲಿ ನಾನು ನಟಿಸಬೇಕಿತ್ತು, ಆದರೆ..’; ವಿವರಿಸಿದ ರಾಗಿಣಿ ದ್ವಿವೇದಿ

ನಟಿ ರಾಗಿಣಿ ದ್ವಿವೇದಿ ಅವರು ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾದಲ್ಲಿ ಪಾರ್ವತಿ ಎಂಬ ಗ್ರಾಮೀಣ ಮಹಿಳೆಯ ಪಾತ್ರವನ್ನು ಮಾಡಿದ್ದಾರೆ. ‘ಜಯಶಂಕರ ಟಾಕೀಸ್‌’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ತೇಜು ಮೂರ್ತಿ ಹಾಗೂ ಪದ್ಮಾವತಿ ಚಂದ್ರಶೇಖರ್‌ ಅವರು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಅನಂತ್‌ ಆರ್ಯನ್‌ ಸಂಗೀತ ನೀಡಿದ್ದಾರೆ. ಬಿ. ರಾಮಮೂರ್ತಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಸಾತ್ವಿಕ್‌ ಪವನ್‌ ಕುಮಾರ್‌ ಅವರು ಛಾಯಾಗ್ರಹಣ ಹಾಗೂ ನಿರ್ದೇಶನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಾಂಗ್ಲಾ ವೇಗಿ ಮುಸ್ತಾಫಿಜುರ್ ರೆಹಮಾನ್​ಗಾಗಿ ಬೇಡಿಕೆ ಇಟ್ಟ ಐಪಿಎಲ್ ಫ್ರಾಂಚೈಸಿಗಳು

Source link

ಖಮೇನಿ ಸಾವಿನ ಕುರಿತಾದ ಪ್ರತಿಭಟನೆಗಳನ್ನು ಖಂಡಿಸಿದ ಮುಂಬೈನ ಶಿಯಾ ನಾಯಕ ಮೌಲಾನಾ ಹಸನ್ ಅಲಿ – Kannada News | Shia Leader Maulana Hasan Ali Rajani In Mumbai Condemns Protests Over Khamenei Death

ಮುಂಬೈ, ಮಾರ್ಚ್ 3: ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯ (Ayatollah Ali Khamenei) ಸಾವಿನ ಬಗ್ಗೆ ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಮಹಾರಾಷ್ಟ್ರದ ಮುಂಬೈನಲ್ಲಿ ಪ್ರತಿಕ್ರಿಯೆ ನೀಡಿರುವ ಅಖಿಲ ಭಾರತ ಶಿಯಾ ವೈಯಕ್ತಿಕ ಕಾನೂನು ಮಂಡಳಿಯ ಉಪಾಧ್ಯಕ್ಷ ಮೌಲಾನಾ ಹಸನ್ ಅಲಿ ರಜನಿ, “ಅಲ್ಲಿ ಮಡಿದವರಿಗೆ ನಾವು ನಮ್ಮ ಸಂತಾಪ ಸೂಚಿಸುತ್ತೇವೆ. ನಾವು ಕೂಡ ಅವರ ದುಃಖವನ್ನು ಹಂಚಿಕೊಳ್ಳುತ್ತೇವೆ. ಆದರೆ ಪ್ರತಿಯೊಂದು ದೇಶವು ತನ್ನ ವಿವಾದಗಳನ್ನು ತನ್ನ ದೇಶದೊಳಗೆ ಇಟ್ಟುಕೊಳ್ಳಬೇಕು, ಅವುಗಳನ್ನು ಬೇರೆಡೆಗೆ ತರಬಾರದು” ಎಂದು ಹೇಳಿದ್ದಾರೆ.

“ಇಂದು ಪ್ರಪಂಚದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ, ಅವು ಭಾರತದಲ್ಲಿರಲಿ ಅಥವಾ ಪಾಕಿಸ್ತಾನದಲ್ಲಿರಲಿ, ಏಕೆಂದರೆ ಸಾಯುತ್ತಿರುವವರು ನಮ್ಮ ನಾಯಕರಲ್ಲ. ನಾವು ನಮ್ಮ ದೇಶಕ್ಕೆ ನಿಷ್ಠರಾಗಿರಬೇಕು. ಬೇರೆ ದೇಶದ ಹಿಂಸಾಚಾರಗಳು ನಮ್ಮ ದೇಶದೊಳಗೆ ಪ್ರವೇಶಿಸಬಾರದು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

‘ಮೆಜೆಸ್ಟಿಕ್ 2’ ಸಿನಿಮಾದ ಬಿಡುಗಡೆಯ ಖುಷಿಯಲ್ಲಿ ನಟಿ ಸಂಹಿತಾ ವಿನ್ಯಾ – Kannada News | Actress Samhita Vinya excited to know audience reaction for Majestic 2 movie

ಶೀರ್ಷಿಕೆ ಕಾರಣದಿಂದಲೇ ‘ಮೆಜೆಸ್ಟಿಕ್ 2’ (Majestic 2) ಸಿನಿಮಾ ಗಮನ ಸೆಳೆದಿದೆ. ದರ್ಶನ್ ಅವರು ನಟಿಸಿದ ‘ಮೆಜೆಸ್ಟಿಕ್’ ಸಿನಿಮಾ 2002ರಲ್ಲಿ ಬಿಡುಗಡೆ ಆಗಿತ್ತು. ಈಗ ‘ಮೆಜೆಸ್ಟಿಕ್ 2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ನಟ ಭರತ್ ಕುಮಾರ್ ಅವರಿಗೆ ಜೋಡಿಯಾಗಿ ನಟಿ ಸಂಹಿತಾ ವಿನ್ಯಾ ಅಭಿನಯಿಸಿದ್ದಾರೆ. ರಾಮು ಎಸ್. ಅವರು ನಿರ್ದೇಶನ ಮಾಡಿದ ಈ ಸಿನಿಮಾದಲ್ಲಿ ತಮ್ಮ ಪಾತ್ರ ವಿಶೇಷವಾಗಿದೆ ಎಂದು ಸಂಹಿತಾ ವಿನ್ಯಾ (Samhita Vinya) ಅವರು ಖುಷಿಯಾಗಿದ್ದಾರೆ. ಬಿಡುಗಡೆ ಹೊಸ್ತಿಲಲ್ಲಿ ಅವರ ಎಗ್ಸೈಟ್​ಮೆಂಟ್ ಹೆಚ್ಚಿದೆ.

2026ರ ವರ್ಷವನ್ನು ತಮ್ಮ ಪಾಲಿನ ಲಕ್ಕಿ ಇಯರ್ ಎನ್ನುತ್ತಿದ್ದಾರೆ ನಟಿ ಸಂಹಿತಾ ವಿನ್ಯಾ. ‘ಮೆಜೆಸ್ಟಿಕ್ 2’ ಸಿನಿಮಾದಲ್ಲಿ ಅವರ ಪಾತ್ರ ಹೇಗಿರಲಿದೆ ಎಂಬುದು ಟ್ರೇಲರ್ ಮೂಲಕ ಗೊತ್ತಾಗಿದೆ. ಎರಡು ತಿಂಗಳ‌ ಹಿಂದಷ್ಟೇ ಸಂಹಿತಾ ಅಭಿನಯದ ‘ಜಿ.ಎಸ್.ಟಿ’ ಸಿನಿಮಾ ರಿಲೀಸ್ ಆಗಿತ್ತು. ಅಲ್ಲದೇ, ಕಳೆದ ತಿಂಗಳು ‘ಮಿಕ್ಸಿಂಗ್ ಪ್ರೀತಿ’ ಸಿನಿಮಾ ತೆರೆಕಂಡಿತ್ತು.

ಹೀಗೆ ಒಂದರ ಮೇಲೊಂದರಂತೆ ಸಿನಿಮಾಗಳು ಬಿಡುಗಡೆ ಆಗುತ್ತಿರುವುದು ಸಂಹಿತಾ ವಿನ್ಯಾ ಅವರಿಗೆ ಖುಷಿ ನೀಡಿದೆ. ‘ಮೆಜೆಸ್ಟಿಕ್ 2’ ಸಿನಿಮಾಗೆ ಜನರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ತಿಳಿಯಲು ಅವರು ಕಾದಿದ್ದಾರೆ. ಈಗಾಗಲೇ ಕನ್ನಡ, ತೆಲುಗು, ತಮಿಳು ಸೇರಿದಂತೆ 18ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲೂ ಅವರು ಸಕ್ರಿಯರಾಗಿದ್ದಾರೆ.

‘ಮೆಜೆಸ್ಟಿಕ್ 2’ ಸಿನಿಮಾದ ಟ್ರೇಲರ್:

‘ಮೆಜೆಸ್ಟಿಕ್ 2’ ಸಿನಿಮಾದಲ್ಲಿ ತಮ್ಮ ಪಾತ್ರ ಹೇಗಿರಲಿದೆ ಎಂಬುದನ್ನು ಸಂಹಿತಾ ವಿನ್ಯಾ ಅವರು ವಿವರಿಸಿದ್ದಾರೆ. ಕೆಲಸ ಹುಡುಕಿಕೊಂಡು ಹಳ್ಳಿಯಿಂದ ಮಹಾನಗರಕ್ಕೆ ಬರುವ ಬಡ ಯುವತಿಯ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಮಾಲಾಶ್ರೀ, ಶ್ರುತಿ ಮುಂತಾದ ಅನುಭವಿ ಕಲಾವಿದರ ನಟಿಸಿದ್ದಾರೆ. ಅವರ ಜೊತೆ ಅಭಿನಯಿಸಿದ್ದಕ್ಕೆ ಸಂಹಿತಾ ವಿನ್ಯಾ ಖುಷಿಯಾಗಿದ್ದಾರೆ.

ಇದನ್ನೂ ಓದಿ: ಭಯಾನಕ ಪೋಸ್ಟರ್​ನಿಂದ ಗಮನ ಸೆಳೆದ ‘ಯೂ ಆರ್​ ಮೈ ಹೀರೋ’; ಕನ್ನಡತಿ ಸಂಹಿತಾ ವಿನ್ಯಾ ನಾಯಕಿ

‘ಮೊದಲ ಬಾರಿಗೆ ಮೆಜೆಸ್ಟಿಕ್​ಗೆ ಬಂದಿಳಿಯುವ ಬಡ ಹುಡುಗಿಗೆ, ರೌಡಿಸಂ ಮಾಡಿಕೊಂಡಿದ್ದ ನಾಯಕ ಮರಿದಾಸನ ಪರಿಚಯ ಆಗುತ್ತದೆ. ಆತನ ಜತೆ ಲವ್ ಕೂಡ ಆಗಿ ನಂತರ ಏನೇನೆಲ್ಲ ನಡೆದು ಹೋಗುತ್ತದೆ ಎನ್ನುವುದೇ ‘ಮೆಜೆಸ್ಟಿಕ್ 2’ ಚಿತ್ರದ ಕಥೆಯ ಒಂದೆಳೆ. ಮಾಲಾಶ್ರೀ, ಶೃತಿಯಂಥ ಹಿರಿಯ ನಟಿಯರ ಜೊತೆ ಅಭಿನಯಿಸಿದ್ದು ನನ್ನ ಜೀವನದ ಮರೆಯಲಾಗದ ಅನುಭವ’ ಎಂದು ಸಂಹಿತಾ ವಿನ್ಯಾ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link