All posts by nagaraj11081993

ಹೀಗಾದ್ರೆ ಸೌತ್ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವೆ ಫೈನಲ್! – Kannada News | If semi finals washed out south africa and England Will Play Final

T20 World Cup 2026: ಟಿ20 ವಿಶ್ವಕಪ್​ನ ಸೆಮಿಫೈನಲ್ ಪಂದ್ಯಗಳಿಗೆ ವೇದಿಕೆ ಸಿದ್ಧವಾಗಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಜರುಗಲಿರುವ ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿದೆ.

ಈ ಎರಡು ಪಂದ್ಯಗಳಲ್ಲಿ ಗೆಲ್ಲುವ ತಂಡಗಳು ಫೈನಲ್​ಗೆ ಪ್ರವೇಶಿಸಲಿದೆ. ಒಂದು ವೇಳೆ ಸೆಮಿಫೈನಲ್ ಪಂದ್ಯವು ಕಾರಣಾಂತರಗಳಿಂದ ರದ್ದಾದರೆ ಯಾರು ಫೈನಲ್​ಗೆ ಅರ್ಹತೆ ಪಡೆಯಲಿದ್ದಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಗಳಲ್ಲಿರುವ ತಂಡಗಳು.

ಐಸಿಸಿ ನಿಯಮವೇನು?

ಐಸಿಸಿ ನಿಯಮದ ಪ್ರಕಾರ, ಸೆಮಿಫೈನಲ್ ಪಂದ್ಯಗಳು ನಿಗದಿತ ದಿನ ಮತ್ತು ಮೀಸಲು ದಿನದಂದು (Reserve Day) ಮಳೆಯಿಂದಾಗಿ ನಡೆಯದಿದ್ದರೆ ಅಥವಾ ಇನ್ನತರೆ ಕಾರಣಗಳಿಂದ ಪಂದ್ಯ ಆಯೋಜಿಸಲು ಸಾಧ್ಯವಾಗದೇ ಇದ್ದರೆ ಈ ಹಿಂದಿನ ಅಂಕ ಪಟ್ಟಿಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಇಲ್ಲಿ ಸೆಮಿಫೈನಲ್​ಗೂ ಮುನ್ನ ಸೂಪರ್-8 ಪಂದ್ಯಗಳು ನಡೆದಿದ್ದವು. ಹೀಗಾಗಿ ಸೂಪರ್-8 ಸುತ್ತಿನ ಅಂಕ ಪಟ್ಟಿಯನ್ನು ಪರಿಗಣಿಸಲಾಗುತ್ತದೆ. ಅದರಂತೆ ಸೂಪರ್-8 ಸುತ್ತಿನ ಗ್ರೂಪ್-1 ರ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಸೌತ್ ಆಫ್ರಿಕಾ ಹಾಗೂ ಗ್ರೂಪ್-2 ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಇಂಗ್ಲೆಂಡ್ ತಂಡಗಳು ಫೈನಲ್​ಗೇರಲಿದೆ.

  • ಸೆಮಿಫೈನಲ್ 1 (ಸೌತ್ ಆಫ್ರಿಕಾ vs ನ್ಯೂಜಿಲೆಂಡ್): ಸೂಪರ್ 8ರ ಗ್ರೂಪ್ 1ರಲ್ಲಿ ಸೌತ್ ಆಫ್ರಿಕಾ ತಂಡವು ಎಲ್ಲಾ 3 ಪಂದ್ಯಗಳನ್ನು ಗೆದ್ದು 6 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ನ್ಯೂಝಿಲೆಂಡ್ ಎರಡನೇ ಸ್ಥಾನದಲ್ಲಿದೆ. ಹಾಗಾಗಿ ಮಳೆಯಿಂದಾಗಿ ಪಂದ್ಯ ರದ್ದಾದರೆ ಸೌತ್ ಆಫ್ರಿಕಾ ಫೈನಲ್ ತಲುಪುತ್ತದೆ.
  • ಸೆಮಿಫೈನಲ್ 2 (ಭಾರತ vs ಇಂಗ್ಲೆಂಡ್): ಸೂಪರ್ 8ರ ಗ್ರೂಪ್ 2ರಲ್ಲಿ ಇಂಗ್ಲೆಂಡ್ ತಂಡವು 6 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಭಾರತವು 4 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಒಂದು ವೇಳೆ ಮಳೆಯಿಂದ ಈ ಪಂದ್ಯ ರದ್ದಾದರೆ, ಇಂಗ್ಲೆಂಡ್ ಫೈನಲ್‌ಗೆ ಮುನ್ನಡೆಯುತ್ತದೆ.

ಐಸಿಸಿ ಮಳೆಯ ನಿಯಮಗಳು:

  • ಟಿ20 ವಿಶ್ವಕಪ್​ನ ಸೆಮಿಫೈನಲ್ ಪಂದ್ಯದ ವೇಳೆ ಮಳೆ ಬಂದರೆ ಮ್ಯಾಚ್​ನ ಫಲಿತಾಂಶ ನಿರ್ಧರಿಸಲು ಎರಡೂ ತಂಡಗಳು ಕನಿಷ್ಠ 10 ಓವರ್‌ಗಳನ್ನು ಆಡಲೇಬೇಕು.
  • ಒಂದು ವೇಳೆ ಮಳೆಯ ಕಾರಣ ಅಥವಾ ಇನ್ನಿತರೆ ಕಾರಣಗಳಿಂದಾಗಿ ಪಂದ್ಯ ಶುರುವಾಗುವುದು ವಿಳಂಬವಾದರೆ ಅಥವಾ ಪಂದ್ಯಕ್ಕೆ ಅಡಚಣೆಯುಂಟಾದರೆ ನಿಗದಿತ ದಿನದಂದು 90 ನಿಮಿಷಗಳನ್ನು ನೀಡಲಾಗುತ್ತದೆ.
  • ನಿಗದಿತ ದಿನದಂದು ಪಂದ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗದೇ ಇದ್ದರೆ ಮಾತ್ರ ಮೀಸಲು ದಿನದಂದು ಮ್ಯಾಚ್ ಮುಂದುವರೆಸಲಾಗುತ್ತದೆ.
  • ಮೀಸಲು ದಿನದಂದು ಕೂಡ ಪಂದ್ಯ ಆಯೋಜಿಸಲು ಸಾಧ್ಯವಾಗದೇ ಇದ್ದರೆ ಸೂಪರ್-8 ಸುತ್ತಿನ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಗಳಲ್ಲಿರುವ ತಂಡಗಳು ಫೈನಲ್​ಗೆ ಅರ್ಹತೆ ಪಡೆಯಲಿದೆ.

ಇದನ್ನೂ ಓದಿ: OTD: ಭಯೋತ್ಪಾದಕರ ದಾಳಿ: ಕ್ರಿಕೆಟ್ ಇತಿಹಾಸದ ಕರಾಳ ದಿನ

ಅಂದರೆ ಸೌತ್ ಆಫ್ರಿಕಾ-ನ್ಯೂಝಿಲೆಂಡ್, ಭಾರತ-ಇಂಗ್ಲೆಂಡ್ ನಡುವಣ ಸೆಮಿಫೈನಲ್ ಪಂದ್ಯಗಳು ಕಾರಣಾಂತರಗಳಿಂದ ರದ್ದಾದರೆ ಸೂಪರ್-8 ಸುತ್ತಿನ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸೌತ್ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳು ಫೈನಲ್​ಗೇರಲಿದೆ.

Source link

Srikalahasti Temple: ಗ್ರಹಣ ಕಾಲದಲ್ಲೂ ತೆರೆದಿರುವ ಶ್ರೀಕಾಳಹಸ್ತಿ ದೇವಸ್ಥಾನದ ಇಂಟರೆಸ್ಟಿಂಗ್​ ಸಂಗತಿ ಇಲ್ಲಿದೆ – Kannada News | Srikalahasti Temple: Open During Eclipses? Rahu Ketu’s Abode and Unique Grahan Pujas

ಗ್ರಹಣ ಕಾಲದಲ್ಲೂ ತೆರೆದಿರುವ ಶ್ರೀಕಾಳಹಸ್ತಿ ದೇವಸ್ಥಾನ

ಸಾಮಾನ್ಯವಾಗಿ ಗ್ರಹಣ ಬಂತೆಂದರೆ ಸಾಕು, ಇಡೀ ಭಾರತದಾದ್ಯಂತ ಆಧ್ಯಾತ್ಮಿಕ ಮೌನ ಆವರಿಸುತ್ತದೆ. ಆಕಾಶದಲ್ಲಿ ಚಂದ್ರ ಅಥವಾ ಸೂರ್ಯ ಮರೆಯಾಗುತ್ತಿದ್ದಂತೆ, ಭೂಮಿಯ ಮೇಲಿನ ಪ್ರಸಿದ್ಧ ದೇವಸ್ಥಾನಗಳ ಬಾಗಿಲುಗಳು ಮುಚ್ಚಲ್ಪಡುತ್ತವೆ. ಗ್ರಹಣಕ್ಕೆ ಕನಿಷ್ಠ ಆರು ಗಂಟೆಗಳ ಮೊದಲೇ ಗರ್ಭಗುಡಿಯ ದ್ವಾರಗಳನ್ನು ಮುಚ್ಚುವುದು, ಗ್ರಹಣ ಮುಗಿದ ನಂತರ ದೇವಸ್ಥಾನವನ್ನು ಶುದ್ಧೀಕರಿಸಿ ‘ಸಂಪ್ರೋಕ್ಷಣೆ’ ಮಾಡುವುದು ಶತಮಾನಗಳಿಂದ ನಡೆದು ಬಂದ ಪದ್ಧತಿ. ಆದರೆ, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಶ್ರೀಕಾಳಹಸ್ತಿ ಎಂಬ ಪವಿತ್ರ ಕ್ಷೇತ್ರದಲ್ಲಿ ಮಾತ್ರ ದೃಶ್ಯವೇ ಬೇರೆ!

ರಾಹು-ಕೇತುಗಳ ಅಧಿಪತಿ ನೆಲೆಸಿರುವ ತಾಣ:

ಶ್ರೀಕಾಳಹಸ್ತಿಯನ್ನು ‘ದಕ್ಷಿಣ ಕಾಶಿ’ ಎಂದೇ ಕರೆಯಲಾಗುತ್ತದೆ. ಪುರಾಣಗಳ ಪ್ರಕಾರ, ಈ ಕ್ಷೇತ್ರವು ರಾಹು ಮತ್ತು ಕೇತುಗಳ ಪ್ರಭಾವಕ್ಕೆ ಮೀರಿದ್ದು. ಗ್ರಹಣಕ್ಕೆ ಕಾರಣರಾದವರೇ ಈ ರಾಹು-ಕೇತುಗಳಾದ್ದರಿಂದ, ಅವರ ಅಧಿಪತಿಯಾದ ಶ್ರೀಕಾಳಹಸ್ತೀಶ್ವರನಿಗೆ ಗ್ರಹಣದ ದೋಷ ತಟ್ಟುವುದಿಲ್ಲ ಎಂಬುದು ಇಲ್ಲಿನ ಅಚಲ ನಂಬಿಕೆ. ಹೀಗಾಗಿಯೇ, ಇಡೀ ದೇಶದ ದೇವಸ್ಥಾನಗಳು ಗ್ರಹಣದ ಸಮಯದಲ್ಲಿ ಭಕ್ತರಿಗಾಗಿ ಬಾಗಿಲು ಹಾಕಿದ್ದರೆ, ಶ್ರೀಕಾಳಹಸ್ತಿಯಲ್ಲಿ ಮಾತ್ರ ಶಿವ ಮತ್ತು ಜ್ಞಾನಪ್ರಸೂನಾಂಬಿಕೆಯ ದರ್ಶನ ಎಂದಿನಂತೆ ಲಭ್ಯವಿರುತ್ತದೆ.

ಗ್ರಹಣ ಕಾಲದ ವಿಶೇಷ ‘ಶಾಂತಿ ಅಭಿಷೇಕ’:

ಚಂದ್ರಗ್ರಹಣದ ಸಂದರ್ಭದಲ್ಲಿ ಇಲ್ಲಿನ ವಾತಾವರಣ ಭಕ್ತಿಯ ಪರಾಕಾಷ್ಠ ತಲುಪಿರುತ್ತದೆ. ಉದಾಹರಣೆಗೆ, ಮಧ್ಯಾಹ್ನದಿಂದ ಸಂಜೆಯವರೆಗೆ ಗ್ರಹಣ ಕಾಲವಿದ್ದಾಗ, ಅರ್ಚಕರು ದೇವರಿಗೆ ವಿಶೇಷವಾದ ಶಾಂತಿ ಅಭಿಷೇಕ ವನ್ನು ನೆರವೇರಿಸುತ್ತಾರೆ. ವಿಜ್ಞಾನ ಮತ್ತು ಜ್ಯೋತಿಷ್ಯದ ಪ್ರಕಾರ ಗ್ರಹಣದ ಕಿರಣಗಳು ಹಾನಿಕಾರಕ ಎಂದು ಭಾವಿಸಲಾಗುತ್ತದೆಯಾದರೂ, ಆ ಸಮಯದಲ್ಲಿ ಇಲ್ಲಿ ನಡೆಯುವ ಪೂಜೆಯಲ್ಲಿ ಪಾಲ್ಗೊಂಡರೆ ಸಕಲ ಪಾಪಗಳು ದೂರವಾಗುತ್ತವೆ ಎಂಬುದು ಭಕ್ತರ ನಂಬಿಕೆ. ಈ ವಿಶಿಷ್ಟ ಪೂಜೆಯನ್ನು ಕಣ್ಣಾರೆ ಕಾಣಲು ಭಕ್ತಸಾಗರವೇ ಹರಿದುಬರುತ್ತದೆ.

ಇದನ್ನೂ ಓದಿ: ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಈ ರಾಶಿಗೆ ಡಬಲ್ ಧಮಾಕ!

ಭಕ್ತರ ದಟ್ಟಣೆ ಮತ್ತು ಸಿದ್ಧತೆ:

ಗ್ರಹಣದ ನಿಯಮಗಳಿಗೆ ಹೆದರಿ ಜಗತ್ತು ಮನೆ ಸೇರಿಕೊಂಡರೆ, ಶ್ರೀಕಾಳಹಸ್ತಿಯಲ್ಲಿ ಮಾತ್ರ ಭಕ್ತರ ಸಂಭ್ರಮ ಮನೆಮಾಡಿರುತ್ತದೆ. ವಿಶೇಷವಾಗಿ ರಾಹು-ಕೇತು ದೋಷ ನಿವಾರಣಾ ಪೂಜೆಗಾಗಿ ಸಾವಿರಾರು ಜನರು ಈ ಸಮಯದಲ್ಲಿ ಇಲ್ಲಿಗೆ ಧಾವಿಸುತ್ತಾರೆ. ಈ ದಟ್ಟಣೆಯನ್ನು ನಿಭಾಯಿಸಲು ದೇವಸ್ಥಾನದ ಮಂಡಳಿಯು ಅಚ್ಚುಕಟ್ಟಾದ ವ್ಯವಸ್ಥೆಗಳನ್ನು ಮಾಡುತ್ತದೆ. ಶಿವನ ಧ್ಯಾನದಲ್ಲಿ ಮಗ್ನರಾದ ಭಕ್ತರಿಗೆ ಗ್ರಹಣದ ಕಿರಣಗಳ ಭಯವಿರುವುದಿಲ್ಲ; ಬದಲಾಗಿ ಆ ಪರಶಿವನ ಕೃಪೆಯ ಮೇಲೆ ಅಪಾರ ನಂಬಿಕೆಯಿರುತ್ತದೆ.

ಶ್ರೀಕಾಳಹಸ್ತಿಯು ಕೇವಲ ಒಂದು ದೇವಸ್ಥಾನವಲ್ಲ, ಅದು ಪ್ರಕೃತಿಯ ನಿಯಮಗಳನ್ನೂ ಮೀರಿದ ಭಕ್ತಿಯ ಸಂಕೇತ. ಗ್ರಹಣದ ಸಮಯದಲ್ಲಿ ಭೂಮಿಯ ಮೇಲೆ ಉಳಿದ ಎಲ್ಲವೂ ಸ್ಥಗಿತಗೊಂಡರೂ, ಇಲ್ಲಿನ ಶಿವನ ಆರಾಧನೆ ಮಾತ್ರ ನಿರಂತರವಾಗಿ ಹರಿಯುವ ಗಂಗೆಯಂತೆ ಮುಂದುವರಿಯುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:05 pm, Tue, 3 March 26

Source link

ಮೊಬೈಲ್ ಕದಿಯೋಕೆ ಫ್ಲೈಟ್​​ನಲ್ಲಿ ಬರ್ತಿದ್ದ ಖದೀಮರು ಖಾಕಿ ಬಲಗೆ ಬಿದ್ದಿದ್ದೇ ರೋಚಕ! – Kannada News | Bengaluru Cops Nab Delhi Gang Flying in for Luxury Mobile Thefts

ಬೆಂಗಳೂರು, ಮಾರ್ಚ್​ 03: ದ್ವಿಚಕ್ರ ವಾಹನ ಅಥವಾ ಕಾರಲ್ಲಿ ಬಂದು ಮೊಬೈಲ್​​ಗಳನ್ನು ಎಗರಿಸುವ ಖದೀಮರ ಬಗ್ಗೆ ನೀವು ಸಾಕಷ್ಟು ಕೇಳಿರುತ್ತೀರಿ. ಆದ್ರೆ ಇಲ್ಲೊಂದು ಮೊಬೈಲ್​​ ಕಳ್ಳತನ ಜಾಲವನ್ನು ಭೇದಿಸಿರುವ ಪೊಲೀಸರು ಅಕ್ಷರಶಃ ಶಾಕ್​​ ಆಗಿದ್ದಾರೆ. ಯಾಕೆಂದ್ರೆ ಈ ಕಳ್ಳರು ಮೊಬೈಲ್​​ ಕಳವು ಮಾಡಲೆಂದು ಬರುತ್ತಿದ್ದಿದ್ದು ವಿಮಾನದಲ್ಲಿ. ಈ ವಿಷಯ ನಂಬೋದು ತುಸು ಕಷ್ಟವಾದರೂ ಇದು ಅಕ್ಷರಶಃ ಸತ್ಯ. ಪೊಲೀಸರ ತನಿಖೆ ವೇಳೆ ಈ ಹೈಫೈ ಕಳ್ಳರ ಕರಾಮತ್ತು ಒಂದೊಂದೇ ಬಯಲಾಗಿದ್ದು, ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಇನ್ನು ಈ ಖದೀಮರು ಸಣ್ಣ ಪುಟ್ಟ ಮೊಬೈಲ್​​ಗಳನ್ನು ಮುಟ್ಟುತ್ತಲೂ ಇರಲಿಲ್ಲ. ಐಫೋನ್​ ಸೇರಿದಂತೆ ಇತರ ದುಬಾರಿ ಫೋನ್​​ಗಳು ಮಾತ್ರ ಇವರ ಟಾರ್ಗೆಟ್​​ ಆಗಿದ್ದವು. ದೊಡ್ಡ ದೊಡ್ಡ ಪಾರ್ಟಿ, ಕಾರ್ಯಕ್ರಮಗಳಿಗೆ ಎಂಟ್ರಿ ಕೊಡ್ತಿದ್ದ ಆರೋಪಿಗಳು, ಅಲ್ಲಿ ತಮ್ಮ ಕೈಚಳಕ ತೋರುತ್ತಿದ್ದರು. ಜೊತೆಗೆ ಐಷಾರಾಮಿ ಬಸ್​​ಗಳಲ್ಲೂ ಕಳ್ಳತನ ನಡೆಸುತ್ತಿದ್ದರು. ಒಂದೆರಡು ಸಂಗೀತ ಕಾರ್ಯಕ್ರಮಗಳಲ್ಲಿ ಕೇವಲ ಒಂದೇ ಗಂಟೆಯಲ್ಲಿ 14 ಮೊಬೈಲ್​​ಗಳನ್ನು ಇವರು ಕದ್ದಿದ್ದರು. ದೇವನಹಳ್ಳಿ ಬಳಿಯ ಚನ್ನರಾಯಪಟ್ಟಣದಲ್ಲಿಯೂ ಆರೋಪಿಗಳು ಮೊಬೈಲ್ ಕಳವು ಮಾಡಿದ್ದು, ಅಲ್ಲಿಂದ ವೈಟ್​​ಫೀಲ್ಡ್ ಕಡೆ ಬರೋವಾಗ ಬಸ್​​ನಲ್ಲಿ ಮತ್ತೊಂದು ಐಫೋನ್ ಎಸ್ಕೇಪ್​​ ಮಾಡಿದ್ದರು. ಈ ಮೊಬೈಲ್​​ ಪತ್ತೆಗಾಗಿ ಪೊಲೀಸರು ಬೆನ್ನುಬಿದ್ದಾಗ ಆರೋಪಿಗಳು ಲಾಕ್​​ ಆಗಿದ್ದಾರೆ.

ಇದನ್ನೂ ಓದಿ: ಸಿಸಿಬಿ ಪೊಲೀಸರ ಮೆಗಾ ರೇಡ್​​; ಪ್ರತಿಷ್ಠಿತ ಅಪಾರ್ಟ್​ಮೆಂಟ್​ನಲ್ಲಿ 10 ಕೋಟಿ ರೂ. ಮೌಲ್ಯದ ಡ್ರಗ್ಸ್​​ ಸೀಜ್​

ಲಾಡ್ಜ್​​ ಒಂದರಲ್ಲಿ ಕದ್ದ ಮೊಬೈಲ್ ನೋಡುವಾಗ ಎಂಟ್ರಿಕೊಟ್ಟಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ದೆಹಲಿ ಮೂಲದ ಜಯಚಂದ್ರ ಮತ್ತು ತರುಣ್ ಬಂಧಿತರಾಗಿದ್ದು, ಇವರಿಂದ 10 ಲಕ್ಷ ಮೌಲ್ಯದ 14 ಮೊಬೈಲ್​​ಗಳನ್ನು ವಶಕ್ಕೆ ಪಡೆಯಲಾಗಿದೆ. ಮೊಬೈಲ್​​ಗಳನ್ನು ಕದಿಯಲೆಂದೇ ಆರೋಪಿಗಳು ದೆಹಲಿಂದ ನಗರಕ್ಕೆ ಫ್ಲೈಟ್​​ನಲ್ಲಿ ಬರುತ್ತಿದ್ದರು ಎಂಬುದು ಗೊತ್ತಾಗಿದ್ದು, ಈ ಬಗ್ಗೆ ತನಿಖೆ ಮುಂದುವರಿದಿದೆ.

ಮನೆಗಳ್ಳರ ಬಂಧನ

ಕಾಶಿಯಾತ್ರೆಗೆ ಹೋಗಿದ್ದವರ ಮನೆ ದೋಚಿದ್ದ ಆರೋಪಿಗಳನ್ನು ಹೆಬ್ಬಗೋಡಿ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಪಾಂಡ್ಯರಾಜು, ಪೃಥ್ವಿ ಮತ್ತು ಮಂಜುನಾಥ್ ಬಂಧಿತರಾಗಿದ್ದು, ಲಾಕ್ ಮಾಡಿದ ಮನೆಗಳನ್ನು ಟಾರ್ಗೆಟ್ ಮಾಡಿ ಇವರು ಕಳ್ಳತನ ಮಾಡುತ್ತಿದ್ದರು. ಕಾಶಿಯಾತ್ರೆಗೆ ಹೋಗಿದ್ದವರ ಮನೆಗೀ ಇವರು ಕನ್ನ ಹಾಕಿದ್ದು, ಮನೆಯವರು ವಾಪಸ್ ಬಂದಾಗ ಕಳ್ಳತನ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಂಧಿತರ ಪೈಕಿ ಪಾಂಡ್ಯರಾಜು ಮೇಲೆ ಅಮೃತಹಳ್ಳಿ, ವೈಟ್ ಫೀಲ್ಡ್, ಕಲಾಸಿಪಾಳ್ಯ, ಬೆಳ್ಳಂದೂರಿನಲ್ಲಿ ಮನೆಗಳ್ಳತನ ಪ್ರಕರಣಗಳು ಇವೆ ಎನ್ನುವುದು ಗೊತ್ತಾಗಿದೆ. ಆರೋಪಿಗಳಿಂದ 44 ಲಕ್ಷ ಮೌಲ್ಯದ 3 ಕೆಜಿ ಬೆಳ್ಳಿ, 220 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 1:58 pm, Tue, 3 March 26

Source link

IND vs ENG: ‘ನಾಣ್ಯ’ದಲ್ಲೇ ನಿರ್ಧಾರವಾಗಲಿದೆ ಪಂದ್ಯದ ಅರ್ಧ ಫಲಿತಾಂಶ – Kannada News | T20 World Cup 2026: Wankhede Stadium Toss Results

T20 World Cup 2026: ಟಿ20 ವಿಶ್ವಕಪ್​ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾದರೆ, ದ್ವಿತೀಯ ಸೆಮಿಫೈನಲ್ ಮ್ಯಾಚ್​ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಎದುರುಬದುರಾಗಲಿದೆ. ಇಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಣ ಪಂದ್ಯವು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವುದರಿಂದ ಟಾಸ್ ಪಾತ್ರವು ನಿರ್ಣಾಯಕ. ಅಂದರೆ ಟಾಸ್ ಗೆಲ್ಲುವ ತಂಡವು ಅರ್ಧ ಪಂದ್ಯವನ್ನು ಗೆದ್ದಂತೆ.

ಏಕೆಂದರೆ ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ಒಟ್ಟು 7 ಪಂದ್ಯಗಳನ್ನಾಡಲಾಗಿದೆ. ಈ ಆರು ಮ್ಯಾಚ್​ಗಳಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ 4 ತಂಡಗಳು ಗೆಲುವು ದಾಖಲಿಸಿದೆ. ಇನ್ನು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ಗೆದ್ದಿರುವುದು ಟೀಮ್ ಇಂಡಿಯಾ ಮಾತ್ರ. ಆದರೆ ಈ ಗೆಲುವು ಭಾರತದ ಪಾಲಿಗೆ ಕಷ್ಟಕರವಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.

  • ಫೆಬ್ರವರಿ 7 ರಂದು ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಯುಎಸ್​ಎ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡವು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಇದಾಗ್ಯೂ ಸೂರ್ಯಕುಮಾರ್ ಯಾದವ್ ಅವರ ಅಮೋಘ ಆಟದ ನೆರವಿನೊಂದಿಗೆ ಟೀಮ್ ಇಂಡಿಯಾ 161 ರನ್​ ಪೇರಿಸಿದ್ದರು. ಈ ಗುರಿಯನ್ನು ಬೆನ್ನತ್ತಿದ ಯುಎಸ್​ಎ 131 ರನ್​ಗಳಿಸಲು ಶಕ್ತರಾಗಿದ್ದರು. ಅಂದರೆ ದುರ್ಬಲ ತಂಡದ ವಿರುದ್ಧ ತವರು ಮೈದಾನದಲ್ಲಿ ಭಾರತ ತಂಡ ಗೆದ್ದಿರುವುದು ಕೇವಲ 29 ರನ್​ಗಳ ಅಂತರದಿಂದ.
  • ಫೆಬ್ರವರಿ 8 ರಂದು ವಾಂಖೆಡೆ ಮೈದಾನದಲ್ಲಿ ನಡೆದ ನೇಪಾಳ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 184 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ನೇಪಾಳ ತಂಡವು 180 ರನ್​ಗಳಿಸಿ 4 ರನ್​ಗಳಿಂದ ವಿರೋಚಿತವಾಗಿ ಸೋಲೊಪ್ಪಿಕೊಂಡಿದ್ದರು. ಈ ಪಂದ್ಯವು ಸಂಜೆ 3 ಗಂಟೆಯಿಂದ ಶುರುವಾಗಿತ್ತು ಎಂಬುದು ಉಲ್ಲೇಖಾರ್ಹ.
  • ಫೆಬ್ರವರಿ 11 ರಂದು ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ದುಕೊಂಡಿದ್ದರು.  ಅದರಂತೆ ಮೊದಲು ಬ್ಯಾಟ್ ಮಾಡಿದ ವಿಂಡೀಸ್ 196 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ 166 ರನ್​ಗಳಿಗೆ ಆಲೌಟ್ ಆಗಿ 30 ರನ್​ಗಳಿಂದ ಸೋಲೊಪ್ಪಿಕೊಂಡಿದ್ದರು.
  • ಫೆಬ್ರವರಿ 12 ರಂದು ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಇಟಲಿ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದು ಇಟಲಿ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡವು 123 ರನ್​ಗಳಿಗೆ ಆಲೌಟ್ ಆಗಿದ್ದರು. ಈ ಗುರಿಯನ್ನು ಬೆನ್ನತ್ತಿ ಇಟಲಿ ತಂಡ 10 ವಿಕೆಟ್​ಗಳ ಜಯ ಸಾಧಿಸಿತ್ತು.
  • ಫೆಬ್ರವರಿ 15 ರಂದು ನಡೆದ ನೇಪಾಳ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡವು 133 ರನ್​ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ವಿಂಡೀಸ್ ಪಡೆ 15.2 ಓವರ್​ಗಳಲ್ಲಿ ಚೇಸ್ ಮಾಡಿದ್ದರು.
  • ಫೆಬ್ರವರಿ 17 ರಂದು ನಡೆದ ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನೇಪಾಳ ತಂಡವು ಟಾಸ್ ಗೆದ್ದಿದ್ದರು. ಅದರಂತೆ ಬೌಲಿಂಗ್ ಆಯ್ದುಕೊಂಡ ನೇಪಾಳ ತಂಡವು ಸ್ಕಾಟ್ಲೆಂಡ್ ಅನ್ನು 170 ರನ್​ಗಳಿಗೆ ನಿಯಂತ್ರಿಸಿದ್ದರು. ಅಷ್ಟೇ ಅಲ್ಲದೆ 19.2 ಓವರ್​ಗಳಲ್ಲಿ 171 ರನ್​ಗಳ ಗುರಿ ಬೆನ್ನತ್ತಿ ನೇಪಾಳ ತಂಡವು ಐತಿಹಾಸಿಕ ಗೆಲುವು ದಾಖಲಿಸಿತ್ತು.
  • ಫೆಬ್ರವರಿ 23 ರಂದು ವಾಂಖೆಡೆಯಲ್ಲಿ ನಡೆದ ಸೂಪರ್-8 ಪಂದ್ಯದಲ್ಲಿ ಟಾಸ್ ಗೆದ್ದ ಝಿಂಬಾಬ್ವೆ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ವಿಂಡೀಸ್ ಪಡೆ ಬರೋಬ್ಬರಿ 254 ರನ್ ಬಾರಿಸಿದ್ದರು. ಈ ಗುರಿಯನ್ನು ಬೆನ್ನತ್ತಿದ ಝಿಂಬಾಬ್ವೆ 147 ರನ್​ಗಳಿಗೆ ಆಲೌಟ್ ಆಗಿದ್ದರು. ಈ ಮೂಲಕ ವೆಸ್ಟ್ ಇಂಡೀಸ್ ತಂಡ 107 ರನ್​ಗಳ ಅಮೋಘ ಗೆಲುವು ದಾಖಲಿಸಿತ್ತು.

ಅಂದರೆ ವಾಂಖೆಡೆ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ 4 ತಂಡಗಳು ಚೇಸಿಂಗ್ ಮೂಲಕ ಗೆಲುವು ದಾಖಲಿಸಿದೆ. ಇನ್ನು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಯುಎಸ್​ಎ ವಿರುದ್ಧ ಗೆಲುವು ದಾಖಲಿಸಿದರೆ, ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್ ವಿರುದ್ಧ ಸೋಲನುಭವಿಸಿತ್ತು. ಹಾಗೆಯೇ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡು ಝಿಂಬಾಬ್ವೆ ತಂಡ ಸೋಲನುಭವಿಸಿದೆ.

ಇಲ್ಲಿ ಝಿಂಬಾಬ್ವೆ ವಿರುದ್ಧ ವೆಸ್ಟ್ ಇಂಡೀಸ್ ತಂಡ ಗೆಲ್ಲಲು ಮುಖ್ಯ ಕಾರಣ ಬೃಹತ್ ಮೊತ್ತ ಎನ್ನಬಹುದು. ಅಂದರೆ ವಾಂಖೆಡೆ ಮೈದಾನದಲ್ಲಿ ಟಾಸ್ ಸೋತರೆ ಬೃಹತ್ ಮೊತ್ತ ಪೇರಿಸಿದರೆ ಮಾತ್ರ ಗೆಲುವು ದಕ್ಕಬಹುದು. ಇಲ್ಲದಿದ್ದರೆ ಎರಡನೇ ಬ್ಯಾಟಿಂಗ್ ಮಾಡುವ ತಂಡವು ನಿರಾಯಾಸವಾಗಿ ಚೇಸಿಂಗ್ ಮಾಡಲಿದೆ. ಇದಕ್ಕೆ ಸಾಕ್ಷಿ ಈ ಕೆಳಗಿನ ಅಂಕಿ ಅಂಶಗಳು…

  • ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಈವರೆಗೆ 143 ಟಿ20 ಪಂದ್ಯಗಳನ್ನಾಡಲಾಗಿದೆ.
  • ಈ ವೇಳೆ ಮೊದಲು ಬ್ಯಾಟ್ ಮಾಡಿದ ತಂಡ 66 ಬಾರಿ ಗೆದ್ದಿದೆ.
  • ಇನ್ನು ಚೇಸಿಂಗ್ ಮಾಡಿದ ತಂಡ ಬರೋಬ್ಬರಿ 77 ಪಂದ್ಯಗಳಲ್ಲಿ ಜಯ ಸಾಧಿಸಿದೆ.

ಅಂದರೆ ವಾಂಖೆಡೆ ಪಿಚ್​ನಲ್ಲಿ ಚೇಸಿಂಗ್ ಮಾಡುವುದು ಸುಲಭ. ಹೀಗಾಗಿಯೇ ಟಾಸ್ ಗೆಲ್ಲುವ ತಂಡಗಳು ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುತ್ತದೆ.

ಏಕೆಂದರೆ ರಾತ್ರಿ ಸಮುದ್ರದ ಗಾಳಿ ಮತ್ತು ಇಬ್ಬನಿಯ ಗಮನಾರ್ಹ ಪ್ರಭಾವದಿಂದಾಗಿ ಎರಡನೇ ಇನಿಂಗ್ಸ್​ ವೇಳೆ ಬೌಲಿಂಗ್ ಮಾಡುವುದು ಕಷ್ಟಕರ. ಅತ್ತ ಬೌಲರ್​ಗಳಿಗೆ ಚೆಂಡಿನ ಮೇಲೆ ಗ್ರಿಪ್ ಸಿಗದಿರುವುದರಿಂದ ಬ್ಯಾಟರ್​ಗಳು ನಿರಾಯಾಸವಾಗಿ ರನ್​ಗಳಿಸುತ್ತಾರೆ. ಇದೇ ಕಾರಣದಿಂದಾಗಿ ವಾಂಖೆಡೆಯಲ್ಲಿ ಟಾಸ್ ಗೆಲ್ಲುವ ತಂಡ ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತಾರೆ.

ಇದನ್ನೂ ಓದಿ: ಟೀಮ್ ಇಂಡಿಯಾಗೆ ಆಯ್ಕೆ ಮಾಡಿ… ಸೌರವ್ ಗಂಗೂಲಿ ಮನವಿ

ಅಂದರೆ ವಾಂಖೆಡೆ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಅರ್ಧ ಪಂದ್ಯ ಗೆದ್ದಂತೆ. ಇದಾಗ್ಯೂ ಮೊದಲು ಬ್ಯಾಟ್ ಮಾಡುವ ತಂಡ ಬೃಹತ್ ಮೊತ್ತ ಪೇರಿಸಿದರೆ ಮಾತ್ರ ಗೆಲುವನ್ನು ದಕ್ಕಿಸಿಕೊಳ್ಳಬಹುದು. ಹೀಗಾಗಿ ಮಾರ್ಚ್ 5 ರಂದು ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣ ಪಂದ್ಯದ ವೇಳೆ ಟಾಸ್ ಕೂಡ ನಿರ್ಣಾಯಕ ಪಾತ್ರವಹಿಸಲಿದೆ.

Source link

Gold Rate Today: ಚಿನ್ನ, ಬೆಳ್ಳಿ ಬೆಲೆ ವಿದೇಶಗಳಲ್ಲಿ ಏರಿದರೂ ಭಾರತದಲ್ಲಿ ಇಳಿಕೆ – Kannada News | Gold Price Today on 3rd March 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಮಾರ್ಚ್ 3: ಇರಾನ್ ಯುದ್ಧದ ಪರಿಣಾಮ ವಿದೇಶಗಳಲ್ಲಿ ಭರ್ಜರಿ ಏರಿಕೆ ಕಾಣುತ್ತಿರುವ ಚಿನ್ನದ ಬೆಲೆ (Gold Rate) ಭಾರತದಲ್ಲಿ ಸತತ ಎರಡನೇ ಬಾರಿ ಇಳಿಕೆ ಕಂಡಿದೆ. ನಿನ್ನೆ ಸೋಮವಾರ 235 ರೂಗಳಷ್ಟು ಇಳಿಕೆ ಕಂಡಿದ್ದ ಸ್ವರ್ಣ ದರ ಇವತ್ತು ಮಂಗಳವಾರ 45 ರೂ ತಗ್ಗಿದೆ. ಅಪರಂಜಿ ಚಿನ್ನದ ಬೆಲೆ 17,000 ರೂ ಸಮೀಪಕ್ಕೆ ಇಳಿದಿದೆ. ಬೆಳ್ಳಿ ಬೆಲೆಯೂ ತಗ್ಗಿದೆ. ನಿನ್ನೆ 20 ರೂ ಹೆಚ್ಚಿದ್ದ ಬೆಳ್ಳಿ ಬೆಲೆ ಇವತ್ತು ಅಷ್ಟೇ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,55,850 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,70,020 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 29,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,55,850 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 29,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 31,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮಾರ್ಚ್ 3ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 17,002 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,585 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,752 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 295 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 17,002 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,585 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 295 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 15,585 ರೂ
  • ಚೆನ್ನೈ: 15,650 ರೂ
  • ಮುಂಬೈ: 15,585 ರೂ
  • ದೆಹಲಿ: 15,600 ರೂ
  • ಕೋಲ್ಕತಾ: 15,585 ರೂ
  • ಕೇರಳ: 15,585 ರೂ
  • ಅಹ್ಮದಾಬಾದ್: 15,590 ರೂ
  • ಜೈಪುರ್: 15,600 ರೂ
  • ಲಕ್ನೋ: 15,600 ರೂ
  • ಭುವನೇಶ್ವರ್: 15,585 ರೂ

ಇದನ್ನೂ ಓದಿ: ಇಪಿಎಫ್ ಅಕೌಂಟ್​ಗೆ ಜಮೆ ಆಗಲಿದೆ ಈ ವರ್ಷದ ಬಡ್ಡಿ ಹಣ; ಬ್ಯಾಲನ್ಸ್ ಹೇಗೆ ಪರಿಶೀಲಿಸುವುದು?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 637 ರಿಂಗಿಟ್ (14,845 ರುಪಾಯಿ)
  • ದುಬೈ: 590.25 ಡಿರಾಮ್ (14,748 ರುಪಾಯಿ)
  • ಅಮೆರಿಕ: 167 ಡಾಲರ್ (15,324 ರುಪಾಯಿ)
  • ಸಿಂಗಾಪುರ: 212 ಸಿಂಗಾಪುರ್ ಡಾಲರ್ (15,288 ರುಪಾಯಿ)
  • ಕತಾರ್: 588.50 ಕತಾರಿ ರಿಯಾಲ್ (14,811 ರೂ)
  • ಸೌದಿ ಅರೇಬಿಯಾ: 602 ಸೌದಿ ರಿಯಾಲ್ (14,719 ರುಪಾಯಿ)
  • ಓಮನ್: 62.85 ಒಮಾನಿ ರಿಯಾಲ್ (14,974 ರುಪಾಯಿ)
  • ಕುವೇತ್: 48.22 ಕುವೇತಿ ದಿನಾರ್ (14,475 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 295 ರೂ
  • ಚೆನ್ನೈ: 315 ರೂ
  • ಮುಂಬೈ: 295 ರೂ
  • ದೆಹಲಿ: 295 ರೂ
  • ಕೋಲ್ಕತಾ: 295 ರೂ
  • ಕೇರಳ: 315 ರೂ
  • ಅಹ್ಮದಾಬಾದ್: 295 ರೂ
  • ಜೈಪುರ್: 295 ರೂ
  • ಲಕ್ನೋ: 295 ರೂ
  • ಭುವನೇಶ್ವರ್: 315 ರೂ
  • ಪುಣೆ: 295

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪೆಟ್ರೋಲ್ ಕೊರತೆ ಎದುರಾಗದಂತೆ ಎಚ್ಚರವಹಿಸಲು ಮುನ್ನೆಚ್ಚರಿಕೆಯ ಪ್ಲಾನ್ ಹಾಕಿದ ಭಾರತ – Kannada News | India thinks up oil contingency plan to avoid shortage of petrol, diesel, LNG, LPG supply

ನವದೆಹಲಿ, ಮಾರ್ಚ್ 3: ಇರಾನ್ ಯುದ್ಧದ ಪರಿಣಾಮ ಹಾರ್ಮುಜ್ ಜಲಸಂಧಿಯಲ್ಲಿ (Hormuz Strait) ತೈಲ ಸಾಗಣೆಗೆ ಅಡ್ಡಿಯಾಗಿರುವುದರಿಂದ ಭಾರತಕ್ಕೆ ತೈಲ ಪೂರೈಕೆಯಲ್ಲಿ ವ್ಯತ್ಯಯ ಆಗುವ ಸಾಧ್ಯತೆ ದಟ್ಟವಾಗಿದೆ. ಹಲವು ವಾರಗಳ ಕಾಲ ಈ ಪರಿಸ್ಥಿತಿ ಮುಂದುವರಿಯುವುದರಿಂದ ಭಾರತವು ತೈಲ ಸರಬರಾಜು ಅಬಾಧಿತವಾಗಿ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಅದಕ್ಕಾಗಿ ವಿವಿಧ ಕ್ರಮಗಳನ್ನು ಅದು ಯೋಜಿಸಿದೆ.

ಪೆಟ್ರೋಲ್ ಮತ್ತು ಡೀಸಲ್ ರಫ್ತನ್ನು ಕಡಿಮೆಗೊಳಿಸುವುದು, ರಷ್ಯಾದಿಂದ ಕಚ್ಚಾ ತೈಲ ಖರೀದಿ ಹೆಚ್ಚಿಸುವುದು, ಎಲ್​ಪಿಜಿ ರೇಶನ್ ಇತ್ಯಾದಿ ಕ್ರಮಗಳನ್ನು ಭಾರತ ಆಲೋಚಿಸುತ್ತಿದೆ. ಪೆಟ್ರೋಲ್ ಮತ್ತು ಡೀಸಲ್ ರಫ್ತನ್ನು ನಿರ್ಬಂಧಿಸುವುದು ಭಾರತದ ಮೊದಲ ಆದ್ಯತೆಯಾಗಿದೆ.

ಭಾರತ ಕಚ್ಚಾ ತೈಲವನ್ನು ಆಮದು ಮಾಡಿಕೊಂಡು, ಆಯಿಲ್ ರಿಫೈನರಿಗಳಲ್ಲಿ ತೈಲದ ಸಂಸ್ಕರಣೆ ಮಾಡಿ, ಪೆಟ್ರೋಲ್, ಡೀಸಲ್ ಅನ್ನು ತಯಾರಿಸಲಾಗುತ್ತದೆ. ನಂತರ ಅದನ್ನು ಯೂರೋಪ್ ಸೇರಿದಂತೆ ಬೇರೆ ಬೇರೆ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಪೆಟ್ರೋಲ್ ಉತ್ಪಾದನೆಯಲ್ಲಿ ಮೂರನೇ ಒಂದು ಭಾಗದಷ್ಟನ್ನು ಭಾರತ ರಫ್ತು ಮಾಡುತ್ತದೆ. ಶೇ. 25ರಷ್ಟು ಡಿಸಲ್ ಅನ್ನು ರಫ್ತು ಮಾಡುತ್ತದೆ. ಪೆಟ್ರೋಲ್ ರಫ್ತಿನಲ್ಲಿ ಭಾರತ ಐದನೇ ಸ್ಥಾನ ಹೊಂದಿದೆ. ಈಗ ಇವುಗಳ ರಫ್ತನ್ನು ಭಾರತ ಕಡಿಮೆ ಮಾಡುವ ಒಂದು ಮುಂಜಾಗ್ರತಾ ಕ್ರಮವನ್ನು ಯೋಜಿಸಿದೆ.

ಇದನ್ನೂ ಓದಿ: ಜನವರಿವರೆಗೂ ಭಾರತದ ಒಟ್ಟಾರೆ ರಫ್ತು 720 ಬಿಲಿಯನ್ ಡಾಲರ್; ಹಿಂದಿನ ವರ್ಷದಕ್ಕಿಂತ ಶೇ. 6.15 ಹೆಚ್ಚಳ

ಭಾರತದಕ್ಕೆ ಪೆಟ್ರೋಲ್, ಡೀಸಲ್​ಗಿಂತ ಎಲ್​ಪಿಜಿ ಚಿಂತೆ ಅಧಿಕ

ಭಾರತದಲ್ಲಿ ತಕ್ಕ ಮಟ್ಟಿಗೆ ಪೆಟ್ರೋಲ್ ಮತ್ತು ಡೀಸಲ್ ಸಂಗ್ರಹ ಇದೆ. ಆದರೆ, ಎಲ್​ಪಿಜಿ ಗ್ಯಾಸ್​ನದ್ದೇ ಹೆಚ್ಚು ಚಿಂತೆ ಇರುವುದು. ಭಾರತಕ್ಕೆ ಬೇಕಾದ ಎಲ್​ಪಿಜಿಯಲ್ಲಿ ಮುಕ್ಕಾಲು ಭಾಗವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಆಮದಿನಲ್ಲಿ ಶೇ. 85ಕ್ಕಿಂತ ಹೆಚ್ಚಿನದನ್ನು ಗಲ್ಫ್ ಪ್ರದೇಶದಿಂದ ಪಡೆಯಲಾಗುತ್ತಿದೆ. ದೇಶದೊಳಗೆ ಸದ್ಯ ಇರುವ ಎಲ್​ಪಿಜಿ ಸಂಗ್ರಹ ಎರಡು ವಾರಗಳಿಗೂ ಸಾಕಾಗುವುದಿಲ್ಲ ಎನ್ನಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ಇಂಡಿಯನ್ ಆಯಿಲ್, ಹೆಚ್​ಪಿಸಿಎಲ್, ಬಿಪಿಸಿಎಲ್ ಸಂಸ್ಥೆಗಳು ಪೆಟ್ರೋಕೆಮಿಕಲ್ ರಿಫೈನರಿಗಳಲ್ಲಿ ಎಲ್​ಪಿಜಿ ಉತ್ಪಾದನೆ ಹೆಚ್ಚಿಸುತ್ತಿವೆ.

ಹಾಗೆಯೇ, ಎಲ್​ಎನ್​ಜಿ ಪೂರೈಕೆಯಲ್ಲೂ ಭಾರತಕ್ಕೆ ತೊಂದರೆ ಇದೆ. ಭಾರತದಲ್ಲಿ ಎಲ್​ಎನ್​ಜಿ ಗ್ಯಾಸ್ ಸಂಗ್ರಹವು 10-12 ದಿನಗಳಿಗೆ ಆಗುವಷ್ಟು ಮಾತ್ರ ಇರುವುದು.

ಇದನ್ನೂ ಓದಿ: ಕಚ್ಚಾ ತೈಲ ಬೆಲೆ ಸಿಕ್ಕಾಪಟ್ಟೆ ಏರಿಕೆ; ಬ್ಯಾರಲ್​ಗೆ ಒಂದು ಡಾಲರ್ ಬೆಲೆ ಹೆಚ್ಚಿದಂತೆ ಭಾರತಕ್ಕೆ ಹೊರೆ ಎಷ್ಟು ಹೆಚ್ಚುತ್ತೆ ಗೊತ್ತಾ?

ಗಲ್ಫ್ ಪ್ರದೇಶದಿಂದ ಹೊಸ ತೈಲ ಮಾಲು ಹೊರಬರದೇ ಹೋದರೆ ಭಾರತಕ್ಕೆ ಪೆಟ್ರೋಲ್ ಸಂಕಷ್ಟ ಎದುರಾಗಲಿದೆ. ಈಗ ಭಾರತಕ್ಕೆ ಭರವಸೆಯ ಬೆಳಕಂತೆ ಇರುವುದು ರಷ್ಯಾದ ತೈಲ. ಅಮೆರಿಕದ ನಿಷೇಧದಿಂದಾಗಿ ರಷ್ಯನ್ ತೈಲವು ಸಾಕಷ್ಟು ಪ್ರಮಾಣದಲ್ಲಿ ಹಾಗೆಯೇ ಉಳಿದಿದೆ. ರಷ್ಯನ್ ತೈಲ ಹೊತ್ತ ಹಡಗುಗಳು ಸಮುದ್ರದಲ್ಲಿ ಸ್ಥಗಿತಗೊಂಡಿವೆ. ಹೀಗಾಗಿ, ಬಹಳ ಬೇಗ ಈ ಹಡಗುಗಳನ್ನು ಭಾರತಕ್ಕೆ ತಿರುಗಿಸುವ ಅವಕಾಶ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Horoscope Today 03 March : ಇಂದು ಈ ರಾಶಿಯವರು ಇಟ್ಟ ಹೆಜ್ಜೆಯನ್ನು ಹಿಂದಿಡಲಾರರು – Kannada News | Horoscope March 03 Tuesday 2026; Dina Rashi Bhavishya Today, Checkout the details here

ಇಂದು ಈ ರಾಶಿಯವರು ಇಟ್ಟ ಹೆಜ್ಜೆಯನ್ನು ಹಿಂದಿಡಲಾರರು

ಮೇಷ ರಾಶಿ :

ನೀವು ಯಾರ ಪರವಿರೋಧವೂ ಇಲ್ಲದೇ ತಟಸ್ಥರಾಗಿ ಇರುವಿರಿ. ನಿಮ್ಮದು ಉದ್ದೇಶಪೂರ್ವಕ ಆಡಿದ ಮಾತಾಗಿದ್ದು ಸಮಸ್ಯೆಗಳನ್ನು ಎದುರಿಸಬೇಕಾದೀತು. ಜವಾಬ್ದಾರಿಯನ್ನು ಸಡಿಲಮಾಡಿಕೊಂಡು ತಪ್ಪಿಗೆ ದಾರಿ‌ಮಾಡಿಕೊಡುವಿರಿ. ನಂಬಿಕೆಯನ್ನು ಗಳಿಸುವುದು ನಿಮಗೆ ಸವಾಲಾಗಬಹುದು. ಆಭರಣ ಪ್ರಿಯರಿಗೆ ಸಂತೋಷವಾಗುವುದು. ಸಹೋದರರು ನಿಮ್ಮ ಯೋಜನೆಗೆ ಸಹಕರಿಸಬಹುದು. ಹಳೆಯ ವ್ಯವಹಾರವು ಪುನಃ ಮುನ್ನೆಲೆಗೆ ಬಂದು ಕಲಹದಲ್ಲಿ ಅಂತ್ಯವಾಗಬಹುದು.

ವೃಷಭ ರಾಶಿ :

ನಿಮ್ಮ ದುರಾಲೋಚನೆಗೆ ಸ್ನೇಹಿತರು ಅಡ್ಡಿ ಮಾಡುವರು. ಶತ್ರುವಿನ ಬಲವನ್ನು ನಿಯಂತ್ರಿಸಲು ಸಿದ್ಧತೆ ನಡೆಸುವಿರಿ. ಧಾರ್ಮಿಕ‌ಚಿಂತನೆಗಳು ನಿಮ್ಮ ಮನಸ್ಸಿನಲ್ಲಿ ಓಡಬಹುದು. ಒಗ್ಗಟ್ಟಿನಿಂದ ಕಾರ್ಯವನ್ನು ಸಾಧಿಸುವುದು ಇಂದಿನ ಅಗತ್ಯವೂ ಇದೆ. ನಿಮ್ಮನ್ನು ನೋಡುವ ದೃಷ್ಟಿಕೋನವು ಬದಲಾದೀತು. ನಿಮ್ಮ ಕಾರ್ಯದಲ್ಲಿ ಗುಣಮಟ್ಟ ಕಡಿಮೆ ಆಗಬಹುದು. ಯಾರ ಬೆಂಬಲವನ್ನು ಬಯಸದೇ ಸ್ವತಂತ್ರವಾಗಿ ಕೆಲಸವನ್ನು ಮಾಡುವಿರಿ. ಮನೆಯಲ್ಲಿ ನಿಮಗೆ ಪೂರಕವಾದ ವಾತಾವರಣವಿದ್ದರೂ ಸಂತೋಷವು ಇರದು.

ಮಿಥುನ ರಾಶಿ :

ಇಂದು ಪುರುಷ ಪ್ರಯತ್ನವು ಹೆಚ್ಚಿರಬೇಕಾಗುವುದು. ಕುಟುಂಬ ಸದಸ್ಯರು ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದು, ಕುಟುಂಬವೇ ನಿಮ್ಮ ಶಕ್ತಿ. ಸರಿಯಾದುದನ್ನು ಆಯ್ಕೆ ಮಾಡುವುದು ನಿಮ್ಮಿಂದಾಗದು. ಸರ್ಕಾರಿ ಉದ್ಯೋಗದ ಕಡೆ ನಿಮ್ಮ ಮನಸ್ಸು ಹೊರಳುವುದು. ನಿಶ್ಚಿತ ಕಾರ್ಯವು ನಿಮ್ಮಿಂದ ಆಗದೇ ಹೋಗಬಹುದು. ಶತ್ರುಗಳನ್ನು ಹಿಮ್ಮೆಟ್ಟಿಸುವ ಕಾರ್ಯವು ನಿಮ್ಮ ಕಡೆಯಿಂದ ಆಗುವುದು. ಯಾವುದಾದರೂ ರೀತಿಯಲ್ಲಿ ನೀವು ಆರ್ಥಿಕ ಉಳಿತಾಯವನ್ನು ಮಾಡಬೇಕಾಗುವುದು.

ಕರ್ಕಾಟಕ ರಾಶಿ :

ನಿಮ್ಮ ಯಶಸ್ಸಿನ ವಿಧಾನವವನ್ನು ಹೇಳಿಕೊಳ್ಳುವುದು ಬೇಡ. ವಾಹನ ಚಾಲನೆಗೆ ಅತ್ಯುತ್ಸಾಹವಿದ್ದರೂ ಎಚ್ಚರಿಕೆಯನ್ನು ಹೆಚ್ಚು ಇಟ್ಟುಕೊಳ್ಳುವುದು ಮುಖ್ಯ. ಉದ್ಯಮವನ್ನು ಬಿಟ್ಟು ಬೇರೆಯ ಕಾರ್ಯವನ್ನು ಮಾಡಲು ಆಗದು. ಕುಟುಂಬದ ಜವಾಬ್ದಾರಿಯು ನಿಮ್ಮ ಮೇಲೇ ಬರಬಹುದು. ಯಾವುದೇ ವ್ಯವಸ್ಥೆಯಲ್ಲಿ ಮುಂದುವರಿಯಲು ಇಷ್ಟವಾಗದು. ವ್ಯಂಗ್ಯ ಮಾತುಗಳನ್ನು ಆಡಿ ಯಾರಿಂದಲೂ ಏನನ್ನೂ ನಿರೀಕ್ಷಿಸಲಾಗದು. ಸ್ತ್ರೀಯರಿಂದ ನಿಮಗೆ ನಿಂದನೆಯಾಗಬಹುದು. ಅವಿವಾಹಿತರಿಗೆ ವಿವಾಹದ ಬಗ್ಗೆ ಚಿಂತೆಯಾದೀತು.

ಸಿಂಹ ರಾಶಿ :

ಹಿತಶತ್ರುಗಳಿಂದ ನಿಮ್ಮ ವಿವಾಹವು ತಪ್ಪಬಹುದು. ಸ್ಥಗಿತಗೊಂಡಿರುವ ಕಾಮಗಾರಿಗಳು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ವಿರೋಧಿಗಳು ಸೋಲುತ್ತಾರೆ. ಪ್ರಯಾಣಕ್ಕೆ ತೊಂದರೆಯಾಗಬಹುದು. ತಾಳ್ಮೆ ಮತ್ತು ಸಂಯಮ ಮೇಲುಗೈ ಸಾಧಿಸುತ್ತದೆ. ಪ್ರಭಾವಿ ಜನರ ಸಂಸರ್ಗದಿಂದ ಹೊಸ ಆಯಾಮವು ತೆರೆದುಕೊಳ್ಳುವುದು. ಬೆನ್ನು ನೋವು ನಿಮ್ಮನ್ನು ಬಾಧಿಸೀತು. ಎಲ್ಲರಿಂದ ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಇಷ್ಟಪಡುವಿರಿ. ಯಾರ ಮೇಲೇ ರೇಗದೇ ಇರುವುದು ನಿಮಗೆ ಇಷ್ಟವಾದೀತು.

ಕನ್ಯಾ ರಾಶಿ :

ಸ್ನೇಹಿತರು ವೈಯಕ್ತಿಕ ಸಮಸ್ಯೆಗಳಿಗೆ ನಿಮ್ಮನ್ನು ಭೇಟಿಯಾಗುವ ಸಾಧ್ಯತೆ ಇದೆ. ಏನೇ ಬಂದರೂ ಇರುವ ಸತ್ಯವನ್ನು ಹೇಳಲು ಇಂದು ನೀವು ಹಿಂಜರಿಯಲಾರಿರಿ. ತನ್ನಿಂದ ತನ್ನವರಿಗೆ ತೊಂದರೆಯಾಗುವುದೆಂಬ ಭಯವೂ ಕಾಡಬಹುದು. ಕೃಷಿಗೆ ಸಂಬಂಧಿಸಿದ ನೂತನ ಅನ್ವೇಷಣೆಯನ್ನು ಮಾಡುವ ಹೊಸ ಆಲೋಚನೆಯನ್ನು ಮಾಡುವಿರಿ. ಮಕ್ಕಳ ಅನಾರೋಗ್ಯದಿಂದ ನೀವು ಆತಂಕಕ್ಕೆ ಒಳಗಾಗುವಿರಿ. ವಿದೇಶೀ ವ್ಯಾಪಾರದಲ್ಲಿ ಅನಿಶ್ಚಿತತೆ ಕಾಡಬಹುದು.

ತುಲಾ ರಾಶಿ :

ಯಾವುದೇ ಸವಾಲುಗಳನ್ನು ಧೈರ್ಯದಿಂದ ಎದುರಿಸಿ. ನಿಮ್ಮ ಭಯವೇ ಶಕ್ತಿಯನ್ನು ಬೇಕಾದ ಶಕ್ತಿಯನ್ನು ಕೊಡದೆ ಕುಗ್ಗಿಸುತ್ತದೆ. ಹಣಕಾಸಿನ ವಿಚಾರದಲ್ಲಿ ಅಧಿಕವಾಗಿ ಕೊಡುವುದು ಒಳ್ಳೆಯದಲ್ಲ. ಕೋಪ ಮೇಲೆ ನಿಯಂತ್ರಣವನ್ನು ಕಾಪಾಡಿಕೊಳ್ಳಿ. ಆಪತ್ಕಾಲಕ್ಕೆ ಬೇಕಾದ ಹಣವನ್ನು ತೆಗೆದಿರಿಸುವಿರಿ. ಸ್ತ್ರೀಯರು ಆಭರಣಗಳನ್ನು ಜತನದಿಂದ ಇರಿಕೊಳ್ಳಿ. ಚರಾಸ್ತಿಯು ಅನ್ಯರ ಪಾಲಾಗಬಹುದು. ಅವಶ್ಯಕ ವಸ್ತುಗಳನ್ನು ನೀವು ಕಳೆದುಕೊಳ್ಳುವಿರಿ. ಇನ್ನೊಬ್ಬರನ್ನು ನೋಡಿ ಕಲಿಯುವ ವಿಚಾರವು ಸಾಕಷ್ಟಿರಬಹುದು.

ವೃಶ್ಚಿಕ ರಾಶಿ :

ಇಂದು ವ್ಯಾಪಾರಕ್ಕಾಗಿ ಮಾಡಿದ ಪ್ರವಾಸ ಯಶಸ್ವಿಯಾಗಲಿದೆ. ಹಲವು ದಿನಗಳ ನಿಮ್ಮ ಋಣವು ಮುಕ್ತಾಯವಾಗಿದ್ದು ಸಂತಸದ ವಿಚಾರವಾಗಿದೆ. ಯಾರಿಂದ ಬಂದರೂ ಉಡುಗೊರೆಗಳನ್ನು ಸ್ವೀಕರಿಸುವಿರಿ. ಅಪಾಯ ಸೂಚನೆಯನ್ನು ಧಿಕ್ಕರಿಸಲೊಲ್ಲಿರಿ. ಕೃಷಿಯ ವ್ಯಾಪಾರದಲ್ಲಿ ಹಿನ್ನಡೆಯನ್ನು ಕಾಣಬೇಕಾಗುವುದು. ಪ್ರತಿಫಲದ ನಿರೀಕ್ಷೆ ಇಲ್ಲದೇ ನೀವು ಸ್ನೇಹಿತನಿಗೆ ಸಹಾಯವನ್ನು ಮಾಡುವಿರಿ. ನಿರ್ದಿಷ್ಟ ಕ್ರಮವನ್ನು ಅಳವಡಿಸಿಕೊಂಡು ಉದ್ಯಮವನ್ನು ಕ್ರಮಬದ್ಧವಾಗಿಸಿ.

ಧನು ರಾಶಿ :

ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ಕೆಲಸ ಇರುತ್ತದೆ. ಪೂರ್ವ ಕರ್ಮಗಳು ಫಲ ನೀಡುವುದು ನಿಮ್ಮ ಅನುಭವಕ್ಕೆ ಬಂದರೂ ಒಪ್ಪಿಕೊಳ್ಳಲಾರಿರಿ. ಕುಟುಂಬದಲ್ಲಿ ಆಹ್ಲಾದಕರ ವಾತಾವರಣ ಇರುತ್ತದೆ. ವ್ಯಾಪಾರದಲ್ಲಿ ಅಪೇಕ್ಷಿತ ಲಾಭ ದೊರೆಯಲಿದೆ. ಇಂದು ನಿಮ್ಮ ಕೆಲಸಕ್ಕೆ ಇತರರ ಹಸ್ತಕ್ಷೇಪವು ಇರಲಿದ್ದು ಅದನ್ನು ಸಹಿಸುವುದು ಆಗದು. ಹಣಕಾಸಿನ ವ್ಯವಹಾರದ ಪ್ರತಿನಿಧಿಗಳು ಅಂದುಕೊಂಡ ಕೆಲಸವನ್ನು ಸಾಧಿಸಿಕೊಳ್ಳುವರು. ಹಿರಿಯರ ಆರೋಗ್ಯದಲ್ಲಿ ವ್ಯತ್ಯಸಾವಾಗಿದ್ದು ತುರ್ತು ಚಿಕಿತ್ಸೆಯ ಅವಶ್ಯಕತೆ ಇರಲಿದೆ.

ಮಕರ ರಾಶಿ :

ಬಹಳ ದಿನಗಳ ಅನಂತರ ಅತಿಥಿಗಳ ಆಗಮನ ಇರುತ್ತದೆ. ನೀವು ಯಾರಿಂದಲಾದರೂ ಉತ್ಸಾಹ ಬರುವ ಮಾಹಿತಿಯನ್ನು ಪಡೆಯುವಿರಿ. ಸ್ವಾಭಿಮಾನ ಹಾಗೇ ಉಳಿಯುತ್ತದೆ. ಹೊಸ ಯೋಜನೆಗಳನ್ನು ಪ್ರಾರಂಭಿಸಲಾಗುವುದು. ಕಾರ್ಯದ ಒತ್ತಡವಿರುವ ಕಾರಣ ಸಂಭ್ರಮವನ್ನು ಕಳೆದುಕೊಳ್ಳಬೇಕಾಗುವುದು. ಶಿಕ್ಷಕವೃತ್ತಿಯವರು ಉನ್ನತ ಸ್ಥಾನದ ನಿರೀಕ್ಷೆಯಲ್ಲಿ ಇರುವರು. ಖಾಸಗಿ ಸಂಸ್ಥೆಯ ಹುದ್ದೆಯನ್ನು ನೀವು ಪಡೆಯಲಿದ್ದೀರಿ. ಇಂದು ನಿಮ್ಮ ನೇತೃತ್ವದಲ್ಲಿ ಕೆಲವು ಕಾರ್ಯಗಳು ನಡೆಯುವುದು.

ಕುಂಭ ರಾಶಿ :

ಏನೇ ಮಾಡಿದರೂ ಕಳೆದುಕೊಂಡ ವಸ್ತುವಿನ ಚಿಂತೆಯನ್ನು ನೀವು ಬಿಡುವುದು ಕಷ್ಟವಾದೀತು. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ವ್ಯಾಪಾರದ ನಿಮಿತ್ತ ಹೊರಗೆ ಹೋಗಬೇಕಾಗಬಹುದು. ಮಾತಿನಲ್ಲಿ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಿ. ಆರಾಮಾಗಿ ಹಣ ಗಳಿಸಲಾಗುವುದು. ಆಸ್ತಿಯ ವಿಚಾರದಲ್ಲಿ ನಿಮ್ಮ ನಿಲುವಿಗೆ ಅಪಜಯ. ಔಷಧಗಳ ವ್ಯತ್ಯಾಸದಿಂದ ಆರೋಗ್ಯ ತಪ್ಪುವುದು ಇಂದು ನೀವು ಸಂಗಾತಿಯ ಮಾತನ್ನೇ ಹೆಚ್ಚು ಕೇಳಬೇಕಾದೀತು.

ಮೀನ ರಾಶಿ :

ಪ್ರಣಯದಲ್ಲಿ ಇಂದು ಸಮಯ ಕಳೆಯಲಾಗುವುದು. ನಿಮ್ಮ ಶ್ರಮಕ್ಕೆ ಫಲವನ್ನು ಇಂದೇ ನಿರೀಕ್ಷಿಸಬೇಡಿ. ಕಾರ್ಯಯಿಂದ ಸಂತಸವಿರುತ್ತದೆ. ವ್ಯಾಪಾರದಲ್ಲಿ ಯಾವುದೇ ಉದ್ವೇಗವಿಲ್ಲದೇ ಚೆನ್ನಾಗಿ ನಡೆಯುತ್ತದೆ. ಕಾರ್ಯದ ಒತ್ತಡದಿಂದ ನೀವು ವಿಶ್ರಾಂತಿಯನ್ನು ಪಡೆಯುವುದು ಕಷ್ಟವಾದೀತು. ಕಲಾವಿದರಿಗೆ ಅವಕಾಶದ ದೊಡ್ಡ ಬಾಗಿಲು ತೆರೆದುಕೊಳ್ಳಬಹುದು. ಎದುರಿಸಬಹುದಾದ ಸಮಸ್ಯೆಯನ್ನು ಧೈರ್ಯದಿಂದ ಮುನ್ನುಗ್ಗಿ. ಇಂದು ನಿಮಗೆ ಕೆಲಸವು ಆಗಬೇಕಾಗಿದ್ದು ಪ್ರಯಾಣವು ಅನಿವಾರ್ಯವಾಗುವುದು.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಕುಂಭ, ಮಹಾನಕ್ಷತ್ರ : ಶತಭಿಷಾ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ಪೂರ್ಣಿಮಾ, ನಿತ್ಯನಕ್ಷತ್ರ : ಮಘಾ, ಯೋಗ : ಸುಕರ್ಮ, ಕರಣ : ಬವ, ಸೂರ್ಯೋದಯ – 06 – 41 am, ಸೂರ್ಯಾಸ್ತ – 06 – 31 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:34 – 07:03, ಯಮಗಂಡ ಕಾಲ 09:39 – 11:08, ಗುಳಿಕ ಕಾಲ 12:36 – 14:05

-ಲೋಹಿತ ಹೆಬ್ಬಾರ್ – 8762924271 (what’s app only)

Published On – 11:13 am, Tue, 3 March 26

Source link

ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಸಂಗೀತ್ ಕಾರ್ಯಕ್ರಮದ ಸುಂದರ ಫೋಟೋಸ್ – Kannada News | Rashmika Mandanna And Vijay Devarakonda Shares Sangeeth Program Photos

ಈಗ ರಶ್ಮಿಕಾ ಅವರು ವಿವಾಹ ಪೂರ್ವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಂಗೀತ ಕಾರ್ಯಕ್ರಮದ ಫೋಟೋಸ್ ಇದಾಗಿದ್ದು, ರಶ್ಮಿಕಾ ಹಾಗೂ ವಿಜಯ್ ಕಲರ್​​ಫುಲ್ ಆಗಿ ಮಿಂಚಿದ್ದಾರೆ.

Source link

ಮೋಸ ಮಾಡಿ ಇಸ್ರೇಲ್​​-ಅಮೆರಿಕಾದಿಂದ ಖಮೇನಿ ಹತ್ಯೆ: ಬಿ.ಕೆ. ಹರಿಪ್ರಸಾದ್ ಆರೋಪ – Kannada News | Congress Leader BK Hariprasad Condemns Alleged Deceitful Assassination of Iranian President

ಬೆಂಗಳೂರು, ಮಾರ್ಚ್​ 03: ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಇರಾನ್‌ನಲ್ಲಿ ನಡೆದ ಘಟನೆಯನ್ನು ಖಂಡಿಸಿದ್ದು, ಇರಾನ್​​ನ ಪರಮೋಚ್ಛ ನಾಯಕ ಖಮೇನಿಯನ್ನು ಮೋಸದಿಂದ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಇದು ವಿಶ್ವಸಂಸ್ಥೆಯ ಚಾರ್ಟರ್‌ನ ಸಂಪೂರ್ಣ ಉಲ್ಲಂಘನೆಯಾಗಿದ್ದು, ಒಂದು ರಾಷ್ಟ್ರದ ಸಾರ್ವಭೌಮತೆ ಮತ್ತು ಸ್ವಾತಂತ್ರ್ಯವನ್ನು ನಾಶಪಡಿಸುವ ಕೆಲಸವನ್ನು ಯುಎಸ್‌ಎ ಮತ್ತು ಇಸ್ರೇಲ್ ಮಾಡಿವೆ ಎಂದು ಅವರು ಹೇಳಿದ್ದಾರೆ. ಭಾರತದ ವಿದೇಶಾಂಗ ನೀತಿಯು ಪಂಡಿತ್ ಜವಾಹರಲಾಲ್ ನೆಹರೂ ಅವರ ಕಾಲದಿಂದಲೂ ಅಲಿಪ್ತ ರಾಷ್ಟ್ರಕೂಟದ ತತ್ವಗಳನ್ನು ಅನುಸರಿಸುತ್ತಿದೆ ಎಂದು ಹರಿಪ್ರಸಾದ್ ನೆನಪಿಸಿದ್ದು, 1994ರಲ್ಲಿ ಕಾಶ್ಮೀರ ವಿಚಾರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಇಸ್ಲಾಮಿಕ್ ಸಹಕಾರ ಸಂಘಟನೆ (OIC) ನಿರ್ಣಯವನ್ನು ಮಂಡಿಸಿದಾಗ ಇರಾನ್ ಭಾರತಕ್ಕೆ ಪ್ರಬಲವಾಗಿ ಬೆಂಬಲ ನೀಡಿತ್ತು ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ನೂತನ ದಂಪತಿಗಳಿಂದ ಜಗಮೆಚ್ಚುವ ಕಾರ್ಯ: ಸರ್ಕಾರಿ ಶಾಲೆಗಳಿಗೆ ರಶ್ಮಿಕಾ-ವಿಜಯ್ ದೇಣಿಗೆ – Kannada News | Rashmika and Vijay giving scholarships to students of 44 government schools

ವಿಜಯ್ ದೇವರಕೊಂಡ (Vijay Deverakonda) ಮತ್ತು ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೆ ಮದುವೆ ಆಗಿದ್ದಾರೆ. ಇವರ ಮದುವೆ ಭಾರಿ ಅದ್ಧೂರಿಯಾಗಿ ನೆರವೇರಿದೆ. ಇವರ ಮದುವೆಗೆ ಸುಮಾರು ಕೋಟಿಗಳೇ ಖರ್ಚಾಗಿವೆ. ಇವರು ಮದುವೆಗೆ ಧರಿಸಿದ್ದ ಚಿನ್ನದ ಬೆಲೆಯೇ ಸುಮಾರು 6-7 ಕೋಟಿಗಳದ್ದಾಗಿತ್ತು ಎನ್ನಲಾಗುತ್ತಿದೆ. ಮದುವೆಗೆ ಭಾರಿ ಮೊತ್ತ ಖರ್ಚು ಮಾಡಿರುವ ಈ ದಂಪತಿ ಇದೀಗ ತಮ್ಮ ದುಡಿಮೆಯ ಕೆಲ ಭಾಗವನ್ನು ಸಮಾಜ ಸೇವೆಗೂ ಬಳಸುತ್ತಿದ್ದಾರೆ. ಈಗಾಗಲೇ ತಮ್ಮ ಅಭಿಮಾನಿಗಳಿಗೆ ಸಿಹಿ ಕಳಿಸುವ ಮೂಲಕ ಗಮನ ಸೆಳೆದಿರುವ ರಶ್ಮಿಕಾ ಮತ್ತು ವಿಜಯ್ ಇದೀಗ ಅದಕ್ಕೂ ಮಿಗಿಲಾದ ಸೇವೆಯೊಂದಕ್ಕೆ ಕೈ ಹಾಕಿದ್ದಾರೆ.

ವಿಜಯ್ ದೇವರಕೊಂಡ ಅವರು ತಮ್ಮ ಚಾರಿಟೇಬಲ್ ಟ್ರಸ್ಟ್ ಮೂಲಕ ಸುಮಾರು 44 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಮುಂದಾಗಿದ್ದಾರೆ. ತೆಲಂಗಾಣದ ನಾಗರ್ ಕರ್ನೂಲ್ ಜಿಲ್ಲೆಯ ಅಚ್ಚಂಪೇಟೆ ವಿಭಾಗದ ಸುಮಾರು 44 ಸರ್ಕಾರಿ ಶಾಲೆಗಳ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ‘ದೇವರಕೊಂಡ ಚಾರಿಟಬಲ್ ಟ್ರಸ್ಟ್’ ಮೂಲಕ ವಿದ್ಯಾರ್ಥಿವೇತನ ನೀಡಲು ವಿಜಯ್ ಮತ್ತು ರಶ್ಮಿಕಾ ನಿರ್ಧರಿಸಿದ್ದಾರೆ.

ಮದುವೆಯ ನಂತರ ವಿಜಯ್ ಅವರ ಪೂರ್ವಜರ ಗ್ರಾಮವಾದ ತುಮ್ಮನಪೇಟೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಘೋಷಣೆ ಮಾಡಲಾಗಿದೆ. ಈ ವೇಳೆ ವಿಜಯ್ ಅವರ ತಾಯಿ ಮಾಧವಿ ದೇವರಕೊಂಡ ಕೂಡ ಉಪಸ್ಥಿತರಿದ್ದರು. ಈಗಾಗಲೇ ಈ ಜೋಡಿ ದೇಶದ ವಿವಿಧೆಡೆ ದೇವಸ್ಥಾನಗಳಲ್ಲಿ ಅನ್ನದಾನ ಮಾಡಿದೆ ಮತ್ತು ಅಭಿಮಾನಿಗಳಿಗಾಗಿ ಸಿಹಿಯನ್ನು ವಿತರಿಸಿದೆ. ಇದೀಗ ಸರ್ಕಾರಿ ಶಾಲೆ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ:ಮದುವೆ ಬಳಿಕ ಊರಿಗೆ ಬಂದ ವಿಜಯ್ ದೇವರಕೊಂಡ, ರಶ್ಮಿಕಾಗೆ ಭರ್ಜರಿ ಸ್ವಾಗತ

ವಿಜಯ್ ಮತ್ತು ರಶ್ಮಿಕಾ ಫೆಬ್ರವರಿ 26, 2024 ರಂದು ರಾಜಸ್ಥಾನದ ಉದಯಪುರದಲ್ಲಿ ಅತ್ಯಂತ ಆಪ್ತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ರಶ್ಮಿಕಾ ಮತ್ತು ವಿಜಯ್ ಕಾಲಿಟ್ಟಿದ್ದಾರೆ. ಇಬ್ಬರೂ ಕಳೆದ ಕೆಲವಾರು ವರ್ಷಗಳಿಂದ ಪರಸ್ಪರ ಪ್ರೀತಿಯಲ್ಲಿದ್ದರು, ಇದೀಗ ಕೊನೆಗೂ ತಮ್ಮ ಪ್ರೀತಿಗೆ ದಾಂಪತ್ಯದ ಮುದ್ರೆ ಒತ್ತಿದ್ದಾರೆ. ವಿವಾಹದ ನಂತರ ತೆಲಂಗಾಣದ ತಮ್ಮ ಹಳ್ಳಿಯ ಮನೆಯಲ್ಲಿ ಗೃಹಪ್ರವೇಶ ಮತ್ತು ಸತ್ಯನಾರಾಯಣ ಸ್ವಾಮಿ ಪೂಜೆಯನ್ನು ಈ ದಂಪತಿ ನೆರವೇರಿಸಿದ್ದಾರೆ.

ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ಅದ್ಧೂರಿ ವಿವಾಹ ಆರತಕ್ಷತೆಯನ್ನು ಈ ಜೋಡಿ ಹಮ್ಮಿಕೊಂಡಿದೆ. ಈ ಸಮಾರಂಭಕ್ಕೆ ದಕ್ಷಿಣ ಭಾರತದ ಚಿತ್ರರಂಗದ ಗಣ್ಯರು, ಬಾಲಿವುಡ್ ತಾರೆಯರು ಹಾಗೂ ರಾಜಕೀಯ ಮುಖಂಡರು ಆಗಮಿಸುವ ನಿರೀಕ್ಷೆಯಿದೆ. ಹೈದರಾಬಾದ್​​ನ ತಾಜ್ ಕೃಷ್ಣನಲ್ಲಿ ಈ ಜೋಡಿ ಅದ್ಧೂರಿ ಆರತಕ್ಷತೆ ನಡೆಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link