All posts by nagaraj11081993

OTD: ಭಯೋತ್ಪಾದಕರ ದಾಳಿ: ಕ್ರಿಕೆಟ್ ಇತಿಹಾಸದ ಕರಾಳ ದಿನ – Kannada News | OTD: Sri Lanka’s cricket team attacked in Pakista

ಮಾರ್ಚ್ 3 ಅನ್ನು ಕ್ರಿಕೆಟ್ ಇತಿಹಾಸದ ಅತ್ಯಂತ ಕರಾಳ ದಿನ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ 2009 ರಲ್ಲಿ ಕ್ರಿಕೆಟಿಗರ ಮೇಲೆ ನಡೆದ ಭಯೋತ್ಪಾದಕರ ದಾಳಿ.  ಮಾರ್ಚ್ 3, 2009 ರಂದು ಪಾಕಿಸ್ತಾನದ ಲಾಹೋರ್‌ನಲ್ಲಿ ಶ್ರೀಲಂಕಾ ತಂಡದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ಭೀಕರ ದಾಳಿ ನಡೆದು ಇಂದಿಗೆ ಬರೋಬ್ಬರಿ 17 ವರ್ಷಗಳಾಗಿವೆ.

ಲಾಹೋರ್​ನಲ್ಲಿ ನಡೆಯುತ್ತಿದ್ದ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟಕ್ಕಾಗಿ ಗಡಾಫಿ ಕ್ರೀಡಾಂಗಣಕ್ಕೆ ಬಸ್‌ನಲ್ಲಿ ತೆರಳುತ್ತಿದ್ದಾಗ ಲಿಬರ್ಟಿ ಚೌಕದ ಬಳಿಕ ಸುಮಾರು 12 ಶಸ್ತ್ರಸಜ್ಜಿತ ಭಯೋತ್ಪಾದಕರು ರಾಕೆಟ್ ಲಾಂಚರ್ ಬಳಸಿ ದಾಳಿ ನಡೆಸಿದರು. ಈ ದಾಳಿಯಲ್ಲಿ 6 ಪಾಕಿಸ್ತಾನಿ ಪೊಲೀಸ್ ಅಧಿಕಾರಿಗಳು ಮತ್ತು ಇಬ್ಬರು ನಾಗರಿಕರು ಮೃತಪಟ್ಟಿದ್ದರು.

ಹಾಗೆಯೇ ಶ್ರೀಲಂಕಾ ತಂಡದ ನಾಯಕ ಮಹೇಲ ಜಯವರ್ಧನೆ, ಕುಮಾರ್ ಸಂಗಕ್ಕಾರ, ತಿಲಾನ್ ಸಮರವೀರ, ತರಂಗ ಪರನವಿತಾನ, ಅಜಂತ ಮೆಂಡಿಸ್, ಚಾಮಿಂದ ವಾಸ್ ಮತ್ತು ಸುರಂಗ ಲಕ್ಮಲ್ ಸೇರಿದಂತೆ ಒಟ್ಟು 6-7 ಆಟಗಾರರು ಗಾಯಗೊಂಡಿದ್ದರು.

ಈ ಘಟನೆಯ ನಂತರ ಅಂತರರಾಷ್ಟ್ರೀಯ ತಂಡಗಳು ಪಾಕಿಸ್ತಾನಕ್ಕೆ ಭೇಟಿ ನೀಡಲು ನಿರಾಕರಿಸಿದವು. ಇದರಿಂದಾಗಿ ಸುಮಾರು 10 ವರ್ಷಗಳ ಕಾಲ ಪಾಕಿಸ್ತಾನದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಥಗಿತಗೊಂಡಿತು. ಇದಾದ 6 ವರ್ಷಗಳ ಬಳಿಕ, ಅಂದರೆ 2015 ರಲ್ಲಿ ಝಿಂಬಾಬ್ವೆ ತಂಡವು ಪಾಕ್​ಗೆ ಭೇಟಿ ನೀಡಿತು.

ಆ ಬಳಿಕ 2017 ರಲ್ಲಿ ಶ್ರೀಲಂಕಾ ತಂಡವು ಪಾಕಿಸ್ತಾನಕ್ಕೆ ಭೇಟಿ ನೀಡುವುದರೊಂದಿಗೆ ಪಾಕ್​ನಲ್ಲಿ ಮತ್ತೆ ಅಂತಾರಾಷ್ಟ್ರೀಯ ಸರಣಿಗಳು ಶುರುವಾದವು.

 

Source link

ಇಬ್ಬರು ಹೀರೋಯಿನ್​​​ಗಳ ಜೊತೆ ‘ಪ್ರೇಮದ ಊರಲಿ’ ಶ್ರೀರಾಮ್ ಪಯಣ – Kannada News | Sriram’s ‘Premada Oorali’ Teaser: Village Love Story with Rangayana Raghu Shines

ನಟ ಶ್ರೀರಾಮ್ ಅವರು ಕಿರುತೆರೆ ಮೂಲಕ ಗುರುತಿಸಿಕೊಂಡವರು. ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಮೂಲಕ ಗಮನ ಸೆಳೆದರು. ಈಗ ಅವರು ಹಿರಿತೆರೆಯಲ್ಲಿ ಬ್ಯುಸಿ ಆಗಿದ್ದಾರೆ. ‘ಪ್ರೇಮದ ಊರಲಿ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದು, ಚಿತ್ರದ ಟೀಸರ್ ರಿಲೀಸ್ ಆಗಿ ಗಮನ ಸೆಳೆದಿದೆ. ಈ ಟೀಸರ್ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆಯುತ್ತಿದೆ. ಒಂದು ಸುಂದರ ಪ್ರೇಮಕಥೆ ಜೊತೆಗೆ ಹಳ್ಳಿ ಜೀವನವನ್ನು ಸುಂದರವಾಗಿ ಕಟ್ಟಿಕೊಡುವ ಪ್ರಯತ್ನ ನಡೆದಿದೆ.

ಈ ಮೊದಲು ‘ಅಕ್ಷಿ’ ಹೆಸರಿನ ಮಾಡಿ ನ್ಯಾಷನಲ್ ಅವಾರ್ಡ್ ಗೆದ್ದ ಮನೋಜ್ ಕುಮಾರ್ ಅವರು, ‘ಪ್ರೇಮದ ಊರಲಿ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಶ್ರೀರಾಮ್ ಹೀರೋ ಆದರೆ, ತಪಸ್ವಿನಿ ಪೂಣಚ್ಚ ಹಾಗೂ ರಮಿಕಾ ಶಿವು ನಾಯಕಿ ಆಗಿದ್ದಾರೆ. ಈ ಚಿತ್ರದಲ್ಲಿ ಶ್ರೀರಾಮ್ ತಂದೆ ಪಾತ್ರದಲ್ಲಿ ರಂಗಾಯಣ ರಘು ನಟಿಸಿದ್ದಾರೆ. ಸಿನಿಮಾದ ಟೀಸರ್ ಅಲ್ಲಿ ಹಳ್ಳಿ ಜೀವನ, ಹಳ್ಳಿಯಲ್ಲಿ ಸಂಬಂಧಗಳಿಗೆ ಕೊಡೋ ಪ್ರಾಮುಖ್ಯತೆ ಬಗ್ಗೆ ಹೇಳಲಾಗಿದೆ. ಒಂದು ಸೊಗಸಾದ ಪ್ರೇಮ ಕಥೆಯನ್ನು ಕೂಡ ಹೇಳಲಾಗುತ್ತಿದೆ.

ಇದನ್ನೂ ಓದಿ: ‘ಸನ್ ಆಫ್ ಮುತ್ತಣ್ಣ’ ಸಿನಿಮಾದ ಬಗ್ಗೆ ನಟ ರಂಗಾಯಣ ರಘು ಮಾತು 

ಈ ಚಿತ್ರದ ಬಹುತೇಕ ಶೂಟ್ ನಡೆದಿದ್ದು ಹಾಸನದ ಭಾಗದಲ್ಲಂತೆ. ಅಲ್ಲಿನ ಮಳೆಗಾಲದ ಸುಂದರ ಪರಿಸವರನ್ನು ಸೆರೆಹಿಡಿಯಲಾಗಿದೆ. ರಂಗಾಯಣ ರಘು ಅವರಿಗೆ ಹಳ್ಳಿ ಜೀವನ ಎಂದರೆ ಸಖತ್ ಇಷ್ಟ. ಈ ಸಿನಿಮಾ ಸಿಕ್ಕಾಗ ಅವರು ಖುಷಿಯಿಂದ ಒಪ್ಪಿಕೊಂಡರು. ಇನ್ನು, ಶ್ರೀರಾಮ್ ಅವರು, ಈ ಚಿತ್ರಕ್ಕಾಗಿ ಒಂದು ತಿಂಗಳು ಆಳಾಗಿ ಕೆಲಸ ಮಾಡಿದರು. ಹೀಗೆ ಕೆಲಸ ಕಲಿತರು.

‘ಪ್ರೇಮದ ಊರಲಿ’ ಚಿತ್ರವನ್ನು ಮಮತಾ ದೇವೇಂದ್ರ, ಪ್ರಶಾಂತ್ ಹಾಗೂ ರಮೇಶ್ ಅವರು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದ್ದು, ರಿಲೀಸ್​​​ಗಾಗಿ ಪ್ಲ್ಯಾನಿಂಗ್ ನಡೆಯುತ್ತಿದೆ. ಒಳ್ಳೆಯ ಸಂದರ್ಭದ ನೋಡಿ ಚಿತ್ರವನ್ನು ತೆರೆಗೆ ತರುವ ಆಲೋಚನೆ ನಿರ್ಮಾಪಕರಿಗೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 1:04 pm, Tue, 3 March 26

Source link

ಸಿಸಿಬಿ ಪೊಲೀಸರ ಮೆಗಾ ರೇಡ್​​: ಪ್ರತಿಷ್ಠಿತ ಅಪಾರ್ಟ್​ಮೆಂಟ್​ನಲ್ಲಿ 10 ಕೋಟಿ ರೂ. ಮೌಲ್ಯದ ಡ್ರಗ್ಸ್​​ ಸೀಜ್​ – Kannada News | Bengaluru CCB Mega Raid: Rs 10 Cr Drugs Seized, Peddlers Arrested

ಬೆಂಗಳೂರು, ಮಾರ್ಚ್​​ 03: ಡ್ರಗ್ಸ್​​ ದಂಧೆಕೋರರಿಗೆ ಬೆಂಗಳೂರು ಪೊಲೀಸರು ಭರ್ಜರಿ ಶಾಕ್​​ ಕೊಟ್ಟಿದ್ದಾರೆ. ನಗರದ ಪ್ರತಿಷ್ಠಿತ ಅಪಾರ್ಟ್​ಮೆಂಟ್​ನಲ್ಲಿ ಡ್ರಗ್ಸ್ ಪತ್ತೆ ಮಾಡಲಾಗಿದ್ದು, ಬರೋಬ್ಬರಿ 10 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಸಿಸಿಬಿ ವಶಕ್ಕೆ ಪಡೆದಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕೇರಳ ಮೂಲದ ಅಶ್ವಿನ್(27), ಮೊಬಿನಾ(25) ಬಂಧಿತ ಆರೋಪಿಗಳಾಗಿದ್ದು, LSD, ಹೈಡ್ರೋ ಗಾಂಜಾ ಮತ್ತು ಚರಸ್​​ನ ಆರೋಪಿಗಳಿಂದ ಸೀಜ್​​ ಮಾಡಲಾಗಿದೆ. LSD ಸ್ಟ್ರಿಪ್ಸ್​​ಗಳನ್ನು ಕರ್ನಾಟಕದಲ್ಲಿ ವಶಪಡಿಸಿಕೊಂಡಿರೋದು ಇದೇ ಮೊದಲು ಎನ್ನಲಾಗಿದೆ.

ಡ್ರಗ್ಸ್​​ ಮಾರಾಟಕ್ಕೆ ಖತರ್ನಾಕ್​​ ಪ್ಲ್ಯಾನ್​​

ಸೀಜ್​​ ಮಾಡಲಾದ ಡ್ರಗ್ಸ್​

ಆರೋಪಿಗಳು ದೇವರ ಚಿತ್ರ ಸೇರಿ ವಿವಿಧ ಚಿತ್ರಕಲಾ ರೂಪದಲ್ಲಿ LSD ಸ್ಟ್ರಿಪ್ಟ್ ಮಾರಾಟ ಮಾಡುತ್ತಿದ್ದರು ಎಂಬುದು ಬೆಂಗಳೂರು ಸಿಸಿಬಿ ನಾರ್ಕೊಟಿಕ್ಸ್ ವಿಭಾಗದ ಕಾರ್ಯಾಚರಣೆಯ ವೇಳೆ ಬಯಲಾಗಿದೆ. ಬಂಧಿತ ಇಬ್ಬರೂ ಆರೋಪಿಗಳು ಡ್ರಗ್ಸ್ ಪೆಡ್ಲಿಂಗ್ ಅನ್ನೇ ವೃತ್ತಿ ಮಾಡಿಕೊಂಡಿದ್ದರು. ಇವರಿಗೆ ವಿನ್ಸೆಂಟ್​ ಎಂಬಾತ ಥಾಯ್​ಲ್ಯಾಂಡ್​​ನಿಂದ ಡ್ರಗ್ಸ್​ ಕಳಿಸುತ್ತಿದ್ದ. ವಿಮಾನದ ಮೂಲಕ ಆಗಾಗ ಅಲ್ಪ ಪ್ರಮಾಣದಲ್ಲಿ ಡ್ರಗ್ಸ್ ಪೂರೈಕೆ ಆಗುತ್ತಿತ್ತು. ವಿನ್ಸೆಂಟ್ ಸೂಚಿಸಿದ ಜಾಗದಲ್ಲಿ ಅಶ್ವಿನ್ ಮತ್ತು ಮೊಬಿನಾ ಡ್ರಗ್ಸ್ ಇಡುತ್ತಿದ್ದರು ಎಂಬುದು ಗೊತ್ತಾಗಿದೆ. ಇನ್ನು ಪ್ರಕರಣ ಸಂಬಂಧ ಫ್ಲ್ಯಾಟ್​​​​ ಮಾಲೀಕನ ಪಾತ್ರದ ಬಗ್ಗೆಯೂ ಸಿಸಿಬಿಯಿಂದ ಪರಿಶೀಲನೆ ಮುಂದುವರಿದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕೇರಳ ಪೊಲೀಸರ ಭರ್ಜರಿ ಕಾರ್ಯಾಚರಣೆ; 1 ಕೋಟಿ ರೂ ಮೌಲ್ಯದ ಡ್ರಗ್ಸ್ ಸೀಜ್, ಪೆಡ್ಲರ್ ಅರೆಸ್ಟ್

ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಡ್ರಗ್ಸ್​ ಮಾರಾಟ: ಆರೋಪಿ ಅರೆಸ್ಟ್​​

ವಿದ್ಯಾರ್ಥಿಗಳು, ಐಟಿಬಿಟಿ ಉದ್ಯೋಗಿಗಳಿಗೆ ಡ್ರಗ್ಸ್​ ಮಾರಾಟ ಮಾಡುತ್ತಿದ್ದ ಒಡಿಶಾ ಮೂಲದ ಡ್ರಗ್ ಪೆಡ್ಲರ್​​ ಓವರ್ನನ್ನು ಬೆಂಗಳೂರಿನ ವೈಟ್​ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಲಿಂಗರಾಜ್ ದಾಸ್​​ ಬಂಧಿತ ಆರೋಪಿಯಾಗಿದ್ದು, ಈತನಿಂದ 55 ಲಕ್ಷ ಮೌಲ್ಯದ 27 ಕೆಜಿ ಗಾಂಜಾ, 3 ಕೆಜಿ 200 ಗ್ರಾಂ ಆ್ಯಶಿಸ್ ಆಯಿಲ್ ಜಪ್ತಿ ಮಾಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಮೆರಿಕದ ಟ್ರಂಪ್ ಟವರ್​​ನಲ್ಲಿ ಅನುಮಾನಾಸ್ಪದ ಬಾಕ್ಸ್​ ಪತ್ತೆ – Kannada News | Security Scare at Trump Tower After Suspicious Package Alert

ವಾಷಿಂಗ್ಟನ್, ಮಾರ್ಚ್​ 03: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಯುದ್ಧ ಘೋಷಿಸಿದ್ದಾರೆ. ಅಮೆರಿಕ ಸೇನೆಯು ಹಲವಾರು ದಿನಗಳಿಂದ ಇರಾನ್ ಮೇಲೆ ಭಾರೀ ಬಾಂಬ್ ದಾಳಿ ನಡೆಸುತ್ತಿದೆ. ಆದಾಗ್ಯೂ, ಈ ಯುದ್ಧದ ಮಧ್ಯೆ, ಟ್ರಂಪ್‌ಗೆ ಸಂಬಂಧಿಸಿದ ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ.ಮಾಹಿತಿಯ ಪ್ರಕಾರ, ಅಮೆರಿಕದ ಮ್ಯಾನ್‌ಹ್ಯಾಟನ್‌ನಲ್ಲಿರುವ ಟ್ರಂಪ್ ಟವರ್‌ನಲ್ಲಿ ಅನುಮಾನಾಸ್ಪದ ಬಾಕ್ಸ್​​ ಪತ್ತೆಯಾಗಿದೆ. ಟ್ರಂಪ್ ಟವರ್‌ನಿಂದ ಸೀಕ್ರೆಟ್ ಸರ್ವಿಸ್ ಈ ಪ್ಯಾಕ್ ಅನ್ನು ವಶಪಡಿಸಿಕೊಂಡಿದೆ.

ಸೋಮವಾರ ಮಧ್ಯಾಹ್ನ ಮ್ಯಾನ್‌ಹ್ಯಾಟನ್‌ನಲ್ಲಿರುವ ಪ್ರಸಿದ್ಧ ಟ್ರಂಪ್ ಟವರ್‌ನ ಮೇಲ್ ಕೋಣೆಯಲ್ಲಿ ಅನುಮಾನಾಸ್ಪದ ಪ್ಯಾಕ್ ಕಂಡುಬಂದಿದೆ.ನ್ಯೂಯಾರ್ಕ್ ನಗರ ಪೊಲೀಸ್ ಇಲಾಖೆ (NYPD) ಬಾಂಬ್ ಸ್ಕ್ವಾಡ್ ಕೂಡಲೇ ಅದನ್ನು ವಶಪಡಿಸಿಕೊಂಡಿದೆ. 725 ಫಿಫ್ತ್ ಅವೆನ್ಯೂದಲ್ಲಿರುವ ಕಟ್ಟಡದೊಳಗೆ ಬಾಕ್ಸ್​ ಪತ್ತೆಯಾದ ನಂತರ ಸೀಕ್ರೆಟ್ ಸರ್ವಿಸ್ 911 ಗೆ ಕರೆ ಮಾಡಲಾಗಿತ್ತು. ತನಿಖೆಯ ಸಮಯದಲ್ಲಿ ಯಾರನ್ನೂ ಕಟ್ಟಡದಿಂದ ಸ್ಥಳಾಂತರಿಸಲಾಗಿಲ್ಲ, ಅಥವಾ ಯಾವುದೇ ಗಾಯಗಳೂ ಆಗಿಲ್ಲ, ಯಾರನ್ನೂ ಬಂಧಿಸಲಾಗಿಲ್ಲ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹೋಳಿ ಹುಣ್ಣಿಮೆಯಂದೇ ಗ್ರಹಣ: ಜಲಕಂಟಕ, ಅಗ್ನಿ ಅನಾಹುತ!, ಸಾಲು ಸಾಲು ಅವಘಡಗಳು ಫಿಕ್ಸ್​​? – Kannada News | Eclipse on Holi Full Moon: Water Crisis, Fire Accidents; Series of Mishaps Ahead?

ಬೆಂಗಳೂರು, ಮಾರ್ಚ್​​ 03: ಹೋಳಿ ಹುಣ್ಣಿಮೆಯಂದು ಗ್ರಹಣ ಹಿನ್ನೆಲೆ ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಜಲಕಂಟಕ ಮತ್ತು ಅಗ್ನಿ ಅವಘಡಗಳು ಸಂಭವಿಸುವ ಸಾಧ್ಯತೆಯಿದೆ. ಏಕೆಂದರೆ ಚಂದ್ರನು ಜಲಕಾರಕನಾಗಿದ್ದಾನೆ ಮತ್ತು ಹೋಳಿ ಹುಣ್ಣಿಮೆಯು ಅಗ್ನಿಗೆ ಸಂಬಂಧಿಸಿದೆ. ಈ ಅವಘಡಗಳು ಸಂಭವಿಸದಂತೆ ಪರಮೇಶ್ವರನಲ್ಲಿ ಪ್ರಾರ್ಥಿಸುವುದರಿಂದ ಎಲ್ಲವೂ ನಿವೃತ್ತಿಯಾಗುತ್ತವೆ ಎಂದು ಗವಿ ಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ತಿಳಿಸಿದ್ದಾರೆ. ಭಾರತದಲ್ಲಿ ಕೇವಲ 16 ನಿಮಿಷಗಳ ಕಾಲ ಗ್ರಹಣ ಕಾಣಿಸಿಕೊಂಡಿದ್ದರೂ, ಸಣ್ಣ ಪ್ರಮಾಣದಲ್ಲಿ ತೊಂದರೆಗಳು ಬರಬಹುದು. ಆದರೆ, ಈ ತೊಂದರೆಗಳಿಂದ ಮುಕ್ತಿಯಾಗಲು ಪರಮೇಶ್ವರನ ಪ್ರಾರ್ಥನೆ ಅಗತ್ಯ. ಪ್ರಸ್ತುತ ನಡೆಯುತ್ತಿರುವ ಇರಾನ್-ಇಸ್ರೇಲ್ ಯುದ್ಧಕ್ಕೂ ಮತ್ತು ಗ್ರಹಣಕ್ಕೂ ಯಾವುದೇ ಸಂಬಂಧವಿಲ್ಲ.  ಭಾರತ ದೇಶವು ಕರ್ಮಭೂಮಿ, ಜಪಭೂಮಿ, ತಪೋಭೂಮಿ ಮತ್ತು ಯಜ್ಞಭೂಮಿ ಆಗಿರುವುದರಿಂದ ಯಾವುದೇ ತೊಂದರೆಗಳು ಬರದಂತೆ ಪರಮೇಶ್ವರನನ್ನು ಪ್ರಾರ್ಥಿಸುವುದು ಮುಖ್ಯ. ಒಂದು ಕೊಳಗ ಹಾಲಿಗೆ ಒಂದು ಚಮಚ ಮೊಸರು ಹಾಕಿದರೆ ಹಾಲು ಕೆಡುವಂತೆ, ಗ್ರಹಣವು ಸಣ್ಣ ಪ್ರಮಾಣದಲ್ಲಿ ಕಂಡರೂ ಅದರ ದೋಷ ಇದ್ದೇ ಇರುತ್ತದೆ. ಈ ದೋಷ ದೇಶಕ್ಕೆ ತೊಂದರೆ ನೀಡದಿರಲಿ ಎಂದು ಪ್ರಾರ್ಥಿಸುವುದು ಈ ದಿನದ ವಿಶೇಷ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಚಂದ್ರ ಗ್ರಹಣ ದಿನವೇ ವೈಭವದಿಂದ ನೆರವೇರಿದ ಹೊಳೆನರಸೀಪುರ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ – Kannada News | Lakshmi Narasimha Swamy Rathotsava Held Grandly in Holenarasipura on Lunar Eclipse Day, Watch video

ಹಾಸನ, ಮಾರ್ಚ್​ 3: ಕೇತುಗ್ರಸ್ತ ಚಂದ್ರ ಗ್ರಹಣ ದಿನವೇ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ರಥೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು. ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭಕ್ತರು ರಥಬೀದಿಯಲ್ಲಿ ತೇರನ್ನು ಎಳೆದು ಭಕ್ತಿ ಸಮರ್ಪಿಸಿದರು. ರಥೋತ್ಸವದಲ್ಲಿ ಸಂಸದ ಶ್ರೇಯಸ್ ಪಟೇಲ್, ಶಾಸಕ ಎಚ್.ಡಿ. ರೇವಣ್ಣ ಹಾಗೂ ವಿಧಾನಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಭಾಗವಹಿಸಿದರು. ದೇವರಿಗೆ ಪೂಜೆ ಸಲ್ಲಿಸಿ ತೇರನ್ನೆಳೆದು ಪುನೀತರಾದರು. ಗ್ರಹಣ ದಿನವಾದರೂ ಭಕ್ತರ ಸಂಭ್ರಮ ಜೋರಾಗಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chandra Grahan 2026: ಗ್ರಹಣ ಕಾಲದಲ್ಲಿ ಮಾಂಸಾಹಾರ ಸೇವಿಸಬಹುದೇ? ಜ್ಯೋತಿಷ್ಯ ಮತ್ತು ವಿಜ್ಞಾನ ಹೇಳುವುದೇನು? – Kannada News | Lunar Eclipse and Non Veg: Astrology vs Science on Grahan Food Rules and Health Impact

ಗ್ರಹಣ ಕಾಲದಲ್ಲಿ ಮಾಂಸಾಹಾರImage Credit source: Pinterest

2026ರ ಮೊದಲ ಸೂರ್ಯಗ್ರಹಣ ಫೆಬ್ರವರಿ 17ರಂದು ಸಂಭವಿಸಿದ್ದು, ಇದೀಗ ಕೆಲವೇ ದಿನಗಳ ಅಂತರದಲ್ಲಿ ಇಂದು ವರ್ಷದ ಮೊದಲ ಚಂದ್ರಗ್ರಹಣವು ಸಂಭವಿಸಲಿದೆ. ಮಧ್ಯಾಹ್ನ 3:20 ಕ್ಕೆ ಚಂದ್ರಗ್ರಹಣ ಆರಂಭವಾಗಲಿದೆ. ಸಂಜೆ 6:47 ಕ್ಕೆ ಕೊನೆಗೊಳ್ಳಲಿದೆ. ಭಾರತದಲ್ಲಿ ಚಂದ್ರೋದಯ ಸಂಜೆ 6:22 ಕ್ಕೆ ಸಂಭವಿಸುತ್ತದೆ. ಗ್ರಹಣವು ಸಂಜೆ 6:47 ಕ್ಕೆ ಕೊನೆಗೊಳ್ಳುತ್ತದೆ. ಗ್ರಹಣದ ಸಮಯದಲ್ಲಿ ಮಂತ್ರ ಪಠಣ, ದಾನ-ಧರ್ಮಗಳಿಗೆ ವಿಶೇಷ ಮಹತ್ವವಿದೆ. ಆದರೆ, ಅನೇಕರಲ್ಲಿ ಕಾಡುವ ಒಂದು ದೊಡ್ಡ ಪ್ರಶ್ನೆಯೆಂದರೆ ಗ್ರಹಣದ ದಿನ ಮಾಂಸಾಹಾರ ಸೇವಿಸಬಹುದೇ? ಈ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಮತ್ತು ಆಧುನಿಕ ವಿಜ್ಞಾನದ ಭಿನ್ನ ದೃಷ್ಟಿಕೋನಗಳು ಇಲ್ಲಿವೆ.

ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಕೋನ:

ಹಿಂದೂ ಧರ್ಮ ಮತ್ತು ಜ್ಯೋತಿಷ್ಯದ ಪ್ರಕಾರ, ಗ್ರಹಣದ ಸಮಯವನ್ನು ‘ಅಶುಭ ಕಾಲ’ ಅಥವಾ ‘ಸೂತಕ ಕಾಲ’ ಎಂದು ಪರಿಗಣಿಸಲಾಗುತ್ತದೆ. ರಾಹು ಮತ್ತು ಕೇತುಗಳ ಪ್ರಭಾವದಿಂದ ಈ ಸಮಯದಲ್ಲಿ ಪರಿಸರದಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಿರುತ್ತವೆ ಎಂಬ ನಂಬಿಕೆಯಿದೆ. ಮಾಂಸಾಹಾರವನ್ನು ‘ತಾಮಸಿಕ’ ಎಂದು ವರ್ಗೀಕರಿಸಲಾಗಿದೆ. ಇದು ಮನುಷ್ಯನಲ್ಲಿ ಆಲಸ್ಯ, ಅಶಾಂತಿ ಮತ್ತು ಕೋಪವನ್ನು ಪ್ರಚೋದಿಸುತ್ತದೆ. ಗ್ರಹಣದ ಅವಧಿಯಲ್ಲಿ ಮನಸ್ಸಿನ ಶಾಂತಿಗಾಗಿ ಹಣ್ಣು, ಹಾಲು ಅಥವಾ ಹಗುರವಾದ ಸಾತ್ವಿಕ ಆಹಾರ ಸೇವಿಸುವುದು ಅಥವಾ ಉಪವಾಸ ಇರುವುದು ಶ್ರೇಷ್ಠ ಎಂದು ಶಾಸ್ತ್ರಗಳು ಹೇಳುತ್ತವೆ.

ವೈಜ್ಞಾನಿಕ ಮತ್ತು ಆರೋಗ್ಯದ ಹಿನ್ನೆಲೆ:

ಗ್ರಹಣದ ಸಮಯದಲ್ಲಿ ಮಾಂಸಾಹಾರ ತ್ಯಜಿಸಲು ಕೆಲವು ತಾರ್ಕಿಕ ಕಾರಣಗಳನ್ನು ನೀಡಲಾಗುತ್ತದೆ. ಗ್ರಹಣದ ವೇಳೆ ಸೂರ್ಯನ ಕಿರಣಗಳ ಕೊರತೆ ಮತ್ತು ವಾತಾವರಣದ ಬದಲಾವಣೆಯಿಂದಾಗಿ ಮನುಷ್ಯನ ಜೀರ್ಣಾಂಗ ವ್ಯೂಹವು ಸ್ವಲ್ಪ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಮಾಂಸಾಹಾರವು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ, ಇದು ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಈ ರಾಶಿಗೆ ಡಬಲ್ ಧಮಾಕ!

ಸೂರ್ಯನ ಅತಿನೇರಳೆ ಕಿರಣಗಳ ಅನುಪಸ್ಥಿತಿಯಲ್ಲಿ ಬ್ಯಾಕ್ಟೀರಿಯಾಗಳು ವೇಗವಾಗಿ ಹರಡಬಹುದು. ಮಾಂಸವು ಬೇಗನೆ ಕೆಟ್ಟು ಹೋಗುವ ಗುಣ ಹೊಂದಿರುವುದರಿಂದ, ಆರೋಗ್ಯದ ದೃಷ್ಟಿಯಿಂದ ಇದನ್ನು ತಪ್ಪಿಸುವುದು ಉತ್ತಮ ಎಂಬ ಅಭಿಪ್ರಾಯವಿದೆ.

ಆಧುನಿಕ ವಿಜ್ಞಾನದ ಪ್ರಕಾರ, ಗ್ರಹಣವು ಕೇವಲ ಸೂರ್ಯ, ಚಂದ್ರ ಮತ್ತು ಭೂಮಿಯ ನಡುವೆ ನಡೆಯುವ ಒಂದು ನೆರಳಿನ ಆಟ. ಗ್ರಹಣದ ದಿನ ಮಾಂಸಾಹಾರ ಸೇವಿಸುವುದರಿಂದ ನೇರವಾಗಿ ದೇಹಕ್ಕೆ ಹಾನಿಯಾಗುತ್ತದೆ ಎಂಬುದಕ್ಕೆ ಯಾವುದೇ ಬಲವಾದ ವೈಜ್ಞಾನಿಕ ಸಾಕ್ಷ್ಯಗಳಿಲ್ಲ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನನ್ನ ಮಗ ಸುರಕ್ಷಿತವಾಗಿ ಬರಬೇಕು’: ಮೋದಿಗೆ ಮನವಿ ಮಾಡಿದ ಯುವಕನ ತಾಯಿ! – Kannada News | Tumakuru’s Manoj Stranded in Iran War: Family Urges Govt for Repatriation

‘ನನ್ನ ಮಗ ಸುರಕ್ಷಿತವಾಗಿ ಬರಬೇಕು’: ಮೋದಿಗೆ ಮನವಿ ಮಾಡಿದ ಇರಾನ್​ನಲ್ಲಿ ಸಿಲುಕಿರುವ ಯುವಕನ ತಾಯಿ!

ತುಮಕೂರು, ಮಾರ್ಚ್​ 03: ಉದ್ಯೋಗ ಅರಸಿ ಇರಾನ್‌ಗೆ ತೆರಳಿದ್ದ ತುಮಕೂರಿನ (Tumkuru) ಯುವಕ ಯುದ್ಧ ಪರಿಸ್ಥಿತಿಯ ನಡುವೆ ಅಲ್ಲಿಯೇ ಸಿಲುಕಿರುವ ಘಟನೆ ಆತಂಕ ಮೂಡಿಸಿದ್ದು, ಆತನನ್ನು ಕರೆತರುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಗುಬ್ಬಿ ತಾಲ್ಲೂಕಿನ ಡಿ. ರಾಂಪುರ ನಿವಾಸಿ ಮನೋಜ್ (25) ಇರಾನ್‌ನಲ್ಲಿ ಮರ್ಚೆಂಟ್ ನೇವಿ ಹಡಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಸ್ರೇಲ್–ಇರಾನ್ ಯುದ್ಧ ಆರಂಭವಾದ ನಂತರ ಸಂಪರ್ಕ ಕಡಿತಗೊಂಡಿರುವುದು ಕುಟುಂಬದವರಲ್ಲಿ ಕಳವಳ ಉಂಟುಮಾಡಿದೆ.

ನಾನು ಸೇಫಾಗಿದ್ದೀನಿ ಎಂದಿರುವ ಯುವಕ

ಮನೋಜ್ ರೈತ ಶಿವಕುಮಾರ್ ಹಾಗೂ ಲೀಲಾವತಿ ದಂಪತಿಯ ಪುತ್ರ. ತುಮಕೂರಿನ ಸಿಐಟಿ ಕಾಲೇಜಿನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿದ ನಂತರ, ಆನ್‌ಲೈನ್ ಮೂಲಕ ಇರಾನ್‌ನ ಮರ್ಚೆಂಟ್ ನೇವಿಯಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದ. ಉತ್ತರ ಪ್ರದೇಶದಲ್ಲಿ ತರಬೇತಿ ಪಡೆದು ಸುಮಾರು ಎಂಟು ತಿಂಗಳ ಹಿಂದೆ ಇರಾನ್‌ಗೆ ತೆರಳಿದ್ದಾನೆ.

ಅಲ್ಲಿ ಪೋರ್ಟ್‌ನಿಂದ ಕಾರ್ಮಿಕರನ್ನು ತೈಲ ನಿಕ್ಷೇಪ (ರಿಗ್) ಪ್ರದೇಶಗಳಿಗೆ ಕರೆದೊಯ್ಯುವುದು ಹಾಗೂ ವಾಪಸ್ ಕರೆತರುವ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ರಜೆ ಪಡೆದು ಊರಿಗೆ ಬರಲು ಸಿದ್ಧತೆ ನಡೆಸುತ್ತಿದ್ದ ವೇಳೆ ಯುದ್ಧ ಆರಂಭಗೊಂಡಿದೆ. ಯುದ್ಧ ಪ್ರಾರಂಭವಾದ ನಂತರ ಮನೋಜ್ ಒಮ್ಮೆ ಮಾತ್ರ ಕರೆ ಮಾಡಿ, ನಾನು ಸುರಕ್ಷಿತವಾಗಿದ್ದೇನೆ, ನಾನು ಇರುವ ಸ್ಥಳದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ತಾಯಿಗೆ ಧೈರ್ಯ ತುಂಬಿದ್ದ. ಆದರೆ ಆ ಬಳಿಕ ಸಂಪರ್ಕ ಸಾಧ್ಯವಾಗಿಲ್ಲ ಎಂದು ಪೋಷಕರು ತಿಳಿಸಿದ್ದಾರೆ.

ಇದನ್ನೂ ಓದಿ ದುಬೈನಲ್ಲಿ ಎಂಜಾಯ್ ಮಾಡ್ತಿರುವಾಗ್ಲೇ ದಾಳಿ ಆಯ್ತು: ಯುದ್ಧದ ಭಯಾನಕತೆ ಬಿಚ್ಚಿಟ್ಟ ಕನ್ನಡಿಗ

ಟಿವಿ9 ಜೊತೆ ಮಾತನಾಡಿದ ಮನೋಜ್ ತಾಯಿ ಲೀಲಾವತಿ, ತಮ್ಮ ಮಗನನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಪ್ರಧಾನಮಂತ್ರಿ ನರೇಂದ್ರ ಮೋದಿಗೂ ಮನವಿ ಮಾಡಿದ್ದಾರೆ. ನಮ್ಮ ಮಗ ಕ್ಷೇಮವಾಗಿ ಮನೆಗೆ ಬರಬೇಕು ಎಂದು ಕಣ್ಣೀರಿಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರಿ ಅಧಿಕಾರಿಗಳು ಕುಟುಂಬದವರನ್ನು ಸಂಪರ್ಕಿಸಿ, ಮನೋಜ್ ಸುರಕ್ಷಿತವಾಗಿದ್ದಾನೆ ಎಂಬ ಮಾಹಿತಿ ನೀಡಿದ್ದಾರೆ. ಅವನನ್ನು ಶೀಘ್ರದಲ್ಲೇ ಭಾರತಕ್ಕೆ ಕರೆತರಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 12:24 pm, Tue, 3 March 26

Source link

ವನತಾರಾ ಸಂಸ್ಥಾಪನಾ ದಿನ: ಪ್ರಧಾನಿಗಳಿಂದ ಉದ್ಘಾಟನೆಯಾಗಿ ಒಂದು ವರ್ಷ; ಹಲವು ಪ್ರಾಣಿಗಳ ಜೀವ ಉಳಿಸಿ ಕಾಡಿಗೆ ಮರಳಿಸಿದ ಸಾಧನೆ – Kannada News | VANTARA FOUNDATION DAY: ONE YEAR AFTER INAUGURATION BY PRIME MINISTER NARENDRA MODI, MANY ANIMALS RESTORED TO HEALTH AND RETURNED TO THE WILD

ವನತಾರಾ ಉದ್ಘಾಟನೆ ವೇಳೆ ನರೇಂದ್ರ ಮೋದಿ ಜೊತೆ ಅಂಬಾನಿ ಕುಟುಂಬ

ಜಾಮನಗರ್, ಗುಜರಾತ್: ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ (2025ರ ಮಾರ್ಚ್ 2) ವನತಾರಾ ಸಂಸ್ಥೆಗೆ ಒಂದು ವರ್ಷದ ಸಂಭ್ರಮ (Vantara Foundation Day). ವನ್ಯಜೀವಿ ರಕ್ಷಣೆ, ಸುಧಾರಿತ ವೈದ್ಯಕೀಯ ಆರೈಕೆ, ವೈಜ್ಞಾನಿಕ ವಿಧಾನದಲ್ಲಿ ಸಂರಕ್ಷಣೆಯ ಕಾರ್ಯಗಳನ್ನು ವನತಾರಾ ಈ ಒಂದು ವರ್ಷದಲ್ಲಿ ಮಾಡಿದೆ. ಅನಂತ್ ಮುಕೇಶ್ ಅಂಬಾನಿ ಅವರು ಸಂಸ್ಥಾಪಿಸಿದ ವಂತಾರಾ, ಈ ಒಂದು ವರ್ಷದಲ್ಲಿ ಸಾವಿರಾರು ವನ್ಯಜೀವಿಗಳ ರಕ್ಷಣೆ ಮಾಡಿ, ವೈದ್ಯಕೀಯ ಚಿಕಿತ್ಸೆ ನೀಡಿ ಕಾಡಿಗೆ ಮರಳಿಸಿದೆ. ಹುಲಿ, ಸಿಂಹ, ಪಕ್ಷಿಗಳು, ಸರೀಸೃಪ ಇತ್ಯಾದಿ ಪ್ರಾಣಿಗಳನ್ನು ಆರೈಕೆ ಮಾಡಿ ಕಳುಹಿಸಲಾಗಿದೆ. ಒಂದು ವರ್ಷದಲ್ಲಿ ವನತಾರಾದ ಪಶುವೈದ್ಯಕೀಯ ತಂಡಗಳು ಹಲವು ಪ್ರಾಣಿಗಳಿಗೆ ಸಂಕೀರ್ಣವಾದ ಸರ್ಜರಿಗಳನ್ನು ಮಾಡಿ, ಆ ಪ್ರಾಣಿಗಳ ಸಹಜ ವಾಸಸ್ಥಾನಕ್ಕೆ ಕಳುಹಿಸಲು ಶ್ರಮ ಪಟ್ಟಿದ್ದಾರೆ.

ಅನಂತ್ ಅಂಬಾನಿ ವನ್ಯಜೀವಿ ಆರೈಕೆ ಮತ್ತು ಸಂರಕ್ಷಣೆಗೆ ನೀಡಿದ ಗಮನಾರ್ಹ ಜಾಗತಿಕ ಕೊಡುಗೆಗಾಗಿ ಪ್ರತಿಷ್ಠಿತ ಜಾಗತಿಕ ಮಾನವೀಯ ಪ್ರಶಸ್ತಿಯನ್ನು ಪಡೆದಿದ್ದಾರೆ, ಇದು ಸಹಾನುಭೂತಿಯುಳ್ಳ, ವಿಜ್ಞಾನ ನೇತೃತ್ವದ ಸಂರಕ್ಷಣೆಗೆ ಬದ್ಧತೆಯನ್ನು ಒತ್ತಿಹೇಳುತ್ತದೆ. EARAZA ಮತ್ತು SEAZA ಸದಸ್ಯತ್ವಗಳು, ಜಾಗತಿಕ ಮಾನವ ಸಂರಕ್ಷಣಾ ಪ್ರಮಾಣೀಕರಣ ಮತ್ತು ಪ್ರಾಣಿ ಮಿತ್ರ ಪ್ರಶಸ್ತಿ 2025 ರ ಮೂಲಕ ವಂಟಾರ ಅವರ ಕಾರ್ಯವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲಾಗಿದೆ. ಗುರುತಿಸುವಿಕೆ ಮೀರಿ, ಸಂಸ್ಥೆಯು ಶಾಶ್ವತ ಪರಿಣಾಮವನ್ನು ನಿರ್ಮಿಸುವುದು, ಸಂರಕ್ಷಣಾ ಔಷಧದಲ್ಲಿ ನೂರಾರು ಪಶುವೈದ್ಯರಿಗೆ ತರಬೇತಿ ನೀಡುವುದು, 50 ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಜ್ಞಾನ ಹಂಚಿಕೆ ಕಾರ್ಯಕ್ರಮಗಳನ್ನು ಆಯೋಜಿಸುವುದು ಮತ್ತು ಮುಂದಿನ ಪೀಳಿಗೆಯ ಸಂರಕ್ಷಣಾ ಮೇಲ್ವಿಚಾರಕರನ್ನು ಪ್ರೇರೇಪಿಸಲು ವಿನ್ಯಾಸಗೊಳಿಸಲಾದ ಔಟ್ರೀಚ್ ಕಾರ್ಯಕ್ರಮಗಳ ಮೂಲಕ ಸಾವಿರಾರು ಮಕ್ಕಳನ್ನು ತೊಡಗಿಸಿಕೊಳ್ಳುವುದರ ಮೇಲೆ ಕೇಂದ್ರೀಕರಿಸಿದೆ.

ಕಳೆದ ವರ್ಷದಲ್ಲಿ, ವಂಟಾರವು ಸಂಕಷ್ಟದಲ್ಲಿರುವ ಮತ್ತು ಶೋಷಣೆಯ ಪರಿಸ್ಥಿತಿಗಳಿಂದ ಪ್ರಾಣಿಗಳನ್ನು ರಕ್ಷಿಸಿದೆ, ಅದೇ ಸಮಯದಲ್ಲಿ ಮರ ಕಡಿಯುವುದು, ಸರ್ಕಸ್‌ಗಳು, ಸವಾರಿಗಳು ಮತ್ತು ಭಿಕ್ಷಾಟನೆಯಿಂದ ರಕ್ಷಿಸಲ್ಪಟ್ಟ 250 ಕ್ಕೂ ಹೆಚ್ಚು ಆನೆಗಳಿಗೆ ವಿಶ್ವ ದರ್ಜೆಯ ಪಶುವೈದ್ಯಕೀಯ ಆರೈಕೆ ಮತ್ತು ದೀರ್ಘಕಾಲೀನ, ವಿಶೇಷ ಬೆಂಬಲವನ್ನು ಒದಗಿಸಿದೆ, ಅನೇಕರು ಸಂಧಿವಾತ ಮತ್ತು ಇತರ ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ವಂಟಾರವು ಜನದಟ್ಟಣೆಯ ಸೌಲಭ್ಯಗಳಿಂದ ರಕ್ಷಿಸಲ್ಪಟ್ಟ ಸಾವಿರಾರು ಮೊಸಳೆಗಳಿಗೆ ನಿರಂತರ ಆರೈಕೆಯನ್ನು ಸಹ ಒದಗಿಸುತ್ತದೆ. ಜಾಗತಿಕವಾಗಿ ಮತ್ತು ಭಾರತದಾದ್ಯಂತ ಬೆಂಬಲವನ್ನು ವಿಸ್ತರಿಸುವುದರೊಂದಿಗೆ, ವಂಟಾರವು ಸಹಾನುಭೂತಿ, ಕಲ್ಯಾಣ ಮತ್ತು ವಿಜ್ಞಾನವನ್ನು ಆಧರಿಸಿದ ಜಾಗತಿಕವಾಗಿ ತೊಡಗಿಸಿಕೊಂಡಿರುವ ಸಂರಕ್ಷಣಾ ಮಾದರಿಯನ್ನು ಪ್ರತಿಬಿಂಬಿಸುತ್ತದೆ.

ವನ್ಯಜೀವಿಗಳ ರಾಷ್ಟ್ರೀಯ ಉಲ್ಲೇಖ ಕೇಂದ್ರ (ಪಶ್ಚಿಮ ವಲಯ) ಎಂದು ಗೊತ್ತುಪಡಿಸಲಾದ ವಂಟಾರಾ, ವನ್ಯಜೀವಿ ಆರೋಗ್ಯವನ್ನು ವಿಶಾಲವಾದ ರೋಗ ಕಣ್ಗಾವಲು ಮತ್ತು ಸಂಘಟಿತ ಪ್ರತಿಕ್ರಿಯೆ ವ್ಯವಸ್ಥೆಗಳಲ್ಲಿ ಸಂಯೋಜಿಸುವ ಮೂಲಕ ಭಾರತದ ಒನ್ ಹೆಲ್ತ್ ಪರಿಸರ ವ್ಯವಸ್ಥೆಯನ್ನು ಬಲಪಡಿಸಿದೆ. ಇದರ ವೈಜ್ಞಾನಿಕ ಬೆನ್ನೆಲುಬಾಗಿ ವೈಜ್ಞಾನಿಕ ಪ್ರಯೋಗಾಲಯ ಮತ್ತು 11 ಉಪಗ್ರಹ ಪ್ರಯೋಗಾಲಯಗಳು ಸೇರಿವೆ, ಇವುಗಳನ್ನು 70 ಕ್ಕೂ ಹೆಚ್ಚು ತಜ್ಞರು ಬೆಂಬಲಿಸುತ್ತಾರೆ ಮತ್ತು ಪ್ರತಿದಿನ 2,000 ಕ್ಕೂ ಹೆಚ್ಚು ರೋಗನಿರ್ಣಯ ಮಾದರಿಗಳನ್ನು ಸಂಸ್ಕರಿಸುತ್ತಾರೆ, ಬಯೋ-ಬ್ಯಾಂಕಿಂಗ್, ಮುಂದಿನ-ಪೀಳಿಗೆಯ ಅನುಕ್ರಮ, ಆಣ್ವಿಕ ರೋಗನಿರ್ಣಯ, ರೋಗಶಾಸ್ತ್ರ, ಪರಾವಲಂಬಿ ಶಾಸ್ತ್ರ ಮತ್ತು ವಿಷಶಾಸ್ತ್ರವನ್ನು ಒಳಗೊಂಡ ಸಾಮರ್ಥ್ಯಗಳನ್ನು ಹೊಂದಿದ್ದಾರೆ.

ಪ್ರತಿದಿನ ಸಾವಿರಾರು ಪ್ರಾಣಿಗಳನ್ನು ಬೆಂಬಲಿಸುವ ವಂಟಾರಾ, ಸಂಪೂರ್ಣ ಸ್ವಯಂಚಾಲಿತ ವ್ಯವಸ್ಥೆಗಳ ಮೂಲಕ 1,56,000 ಕೆಜಿ ಉತ್ತಮ-ಗುಣಮಟ್ಟದ ಪೋಷಣೆಯನ್ನು ಉತ್ಪಾದಿಸುತ್ತದೆ, 50 ತಾಪಮಾನ-ನಿಯಂತ್ರಿತ ವಾಹನಗಳ ಮೂಲಕ ವಿತರಿಸಲಾಗುತ್ತದೆ ಮತ್ತು 200 ಅರ್ಹ ವೃತ್ತಿಪರರಿಂದ ನಿರ್ವಹಿಸಲ್ಪಡುತ್ತದೆ, ಮೇವು ಮತ್ತು ಪಶು ಆಹಾರವನ್ನು ಬೆಳೆಸುವ 1,000 ಕ್ಕೂ ಹೆಚ್ಚು ರೈತರಿಂದ ಬೆಂಬಲಿತವಾಗಿದೆ. ಈ ಸಮಗ್ರ ಆರೈಕೆಯ ಪ್ರಮಾಣವನ್ನು 50 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ರಕ್ಷಣಾ ಕಾರ್ಯಾಚರಣೆಗಳು ಮತ್ತು 15 ವನ್ಯಜೀವಿ ಕ್ಷಿಪ್ರ ಪ್ರತಿಕ್ರಿಯೆ ಮತ್ತು ರಕ್ಷಣಾ ತಂಡದ ನಿಯೋಜನೆಗಳನ್ನು ಬೆಂಬಲಿಸಿರುವ 200 ಸದಸ್ಯರ ಸುತ್ತಿನ ಗಡಿಯಾರ ಪ್ರತಿಕ್ರಿಯೆ ತಂಡವು ಹೊಂದಿಸುತ್ತದೆ.

ಸಂರಕ್ಷಣೆಯು ಅಂತಿಮವಾಗಿ ಜಾತಿಗಳಿಗೆ ಬದುಕುಳಿಯುವ ಎರಡನೇ ಅವಕಾಶವನ್ನು ನೀಡುವ ಬಗ್ಗೆ. ಕಳೆದ ವರ್ಷದಲ್ಲಿ, ರಚನಾತ್ಮಕ ಸಂತಾನೋತ್ಪತ್ತಿ ಮತ್ತು ಮರುವನ್ಯಜೀವಿ ವನ್ಯಜೀವಿ ವನ್ಯಜೀವಿ ಧಾಮವು ಅಳಿವಿನಂಚಿನಲ್ಲಿರುವ ಹಲವಾರು ಪ್ರಭೇದಗಳಿಗೆ ಭರವಸೆಯನ್ನು ಪುನಃಸ್ಥಾಪಿಸಲು ಸಹಾಯ ಮಾಡಿದೆ. ಗುಜರಾತ್ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ 53 ಚುಕ್ಕೆ ಜಿಂಕೆಗಳನ್ನು ಬರ್ಡಾ ವನ್ಯಜೀವಿ ಧಾಮಕ್ಕೆ ಬಿಡುಗಡೆ ಮಾಡುವುದು ಮತ್ತು ಇಂಡೋನೇಷ್ಯಾದಲ್ಲಿ ಹಾವಿನ ಕುತ್ತಿಗೆಯ ಆಮೆ ಮರುವನ್ಯಜೀವಿ ವನ್ಯಜೀವಿ ವನ್ಯಜೀವಿ ವನ್ಯಜೀವಿಗಳ ಮರುಸ್ಥಾಪನೆಗೆ ವಂಟಾರಾದ ಆಳವಾದ ಬದ್ಧತೆಯನ್ನು ಮತ್ತು ವನ್ಯಜೀವಿಗಳನ್ನು ಅವುಗಳ ನೈಸರ್ಗಿಕ ಮನೆಗಳಿಗೆ ಎಚ್ಚರಿಕೆಯಿಂದ, ಸಹಾನುಭೂತಿಯಿಂದ ಹಿಂದಿರುಗಿಸುವುದನ್ನು ಅತ್ಯಂತ ಅರ್ಥಪೂರ್ಣ ಮೈಲಿಗಲ್ಲುಗಳಲ್ಲಿ ಒಂದಾಗಿವೆ.

ಪಂಜಾಬ್‌ನಲ್ಲಿ ವಿನಾಶಕಾರಿ ಪ್ರವಾಹ ಉಂಟಾದಾಗ, ವಂಟಾರಾ ಪೀಡಿತ ಸಮುದಾಯಗಳ ಜೊತೆಗೆ ನಿಂತು, ಸಾವಿರಾರು ಪ್ರಾಣಿಗಳನ್ನು ರಕ್ಷಿಸಿದ ಮತ್ತು ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಬೆಂಬಲಿಸಿದ ಮಾನವೀಯ ಮತ್ತು ವಿಪತ್ತು ಪ್ರತಿಕ್ರಿಯೆ ಪ್ರಯತ್ನಗಳನ್ನು ಬೆಂಬಲಿಸಿತು. ಈ ಪ್ರತಿಕ್ರಿಯೆಯು ಸರಳವಾದ ಆದರೆ ಶಕ್ತಿಯುತವಾದ ಸತ್ಯವನ್ನು ಬಲಪಡಿಸಿತು: ಪರಿಸರ ಸ್ಥಿತಿಸ್ಥಾಪಕತ್ವ ಮತ್ತು ಮಾನವ ಯೋಗಕ್ಷೇಮವು ಆಳವಾಗಿ ಪರಸ್ಪರ ಸಂಬಂಧ ಹೊಂದಿದೆ, ಮತ್ತು ಒಂದನ್ನು ನೋಡಿಕೊಳ್ಳುವುದು ಎಂದರೆ ಇನ್ನೊಂದನ್ನು ನೋಡಿಕೊಳ್ಳುವುದು.

ಅರಂಭದ ಒಂದು ವರ್ಷದ ನಂತರ, ವಂಟಾರಾ ಸಮಗ್ರ, ವಿಜ್ಞಾನ-ನೇತೃತ್ವದ ಸಂರಕ್ಷಣಾ ಪರಿಸರ ವ್ಯವಸ್ಥೆಯಾಗಿ ಬೆಳೆದಿದೆ, ರಕ್ಷಣೆ, ಸಂಶೋಧನೆ, ಮರು-ವನ್ಯಜೀವಿ ಮತ್ತು ಸಮುದಾಯ ತೊಡಗಿಸಿಕೊಳ್ಳುವಿಕೆಯನ್ನು ಪ್ರಮಾಣದಲ್ಲಿ ಮುಂದುವರಿಸುತ್ತಿದೆ. ಅದರ ಹೃದಯಭಾಗದಲ್ಲಿ ಸ್ಪಷ್ಟ ಮತ್ತು ಸಹಾನುಭೂತಿಯ ಧ್ಯೇಯವಿದೆ: ವನ್ಯಜೀವಿಗಳನ್ನು ರಕ್ಷಿಸುವ, ಸಮುದಾಯಗಳನ್ನು ಬಲಪಡಿಸುವ ಮತ್ತು ಭಾರತ ಮತ್ತು ಪ್ರಪಂಚದಾದ್ಯಂತ ಹೆಚ್ಚು ಸುಸ್ಥಿರ ಭವಿಷ್ಯಕ್ಕೆ ಕೊಡುಗೆ ನೀಡುವ ಅಳೆಯಬಹುದಾದ ಸಂರಕ್ಷಣಾ ಪರಿಣಾಮವನ್ನು ಸೃಷ್ಟಿಸುವುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 11:44 am, Tue, 3 March 26

Source link

ಹುಳ ತಿನ್ನುತ್ತಾರಂತೆ ಪ್ರಿಯಾಂಕಾ ಚೋಪ್ರಾ: ಅದೂ ಯಾವ ಹುಳ ಗೊತ್ತೆ? – Kannada News | Actress Priyanka Chopra said she eat worms

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಬಾಲಿವುಡ್ ತ್ಯಜಿಸಿ ಹಾಲಿವುಡ್​​ಗೆ ಹಾರಿ ವರ್ಷಗಳೇ ಆಗಿವೆ. ಆದರೆ ಇದೀಗ ‘ವಾರಣಾಸಿ’ ಸಿನಿಮಾ ಮೂಲಕ ಸುಮಾರು ಆರೇಳು ವರ್ಷಗಳ ಬಳಿಕ ಮತ್ತೆ ಭಾರತೀಯ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಪ್ರಿಯಾಂಕಾ ಚೋಪ್ರಾ ನಟಿಸಿರುವ ಹಾಲಿವುಡ್ ಆಕ್ಷನ್ ಸಿನಿಮಾ ‘ದಿ ಬ್ಲಫ್’ ಬಿಡುಗಡೆ ಆಗಿದೆ. ಸಿನಿಮಾ ಅಮೆಜಾನ್ ಪ್ರೈಂನಲ್ಲಿ ನೇರವಾಗಿ ಬಿಡುಗಡೆ ಆಗಿದ್ದು, ನಂಬರ್ 1 ಸಿನಿಮಾ ಆಗಿ ಟ್ರೆಂಡ್ ಆಗುತ್ತಿದೆ. ಸಿನಿಮಾದ ಪ್ರಚಾರಕ್ಕೆಂದು ಹಾಲಿವುಡ್​​ನ ಜನಪ್ರಿಯ ಟಾಕ್ ಶೋ ಒಂದರಲ್ಲಿ ಪ್ರಿಯಾಂಕಾ ಭಾಗಿ ಆಗಿದ್ದರು. ಈ ವೇಳೆ ಪ್ರಿಯಾಂಕಾ ಚೋಪ್ರಾ ತಾವು ಹುಳ ತಿನ್ನುವುದಾಗಿ ಹೇಳಿಕೊಂಡಿದ್ದಾರೆ.

ಜಿಮ್ಮಿ ಫ್ಯಾಲನ್ ನಡೆಸಿಕೊಡುವ ಜನಪ್ರಿಯ ಟಾಕ್ ಶೋಗೆ ಪ್ರಿಯಾಂಕಾ ಹೋಗಿದ್ದರು. ಅಲ್ಲಿ ಜಿಮ್ಮಿ ಫ್ಯಾಲನ್ ಜೊತೆಗೆ ‘ಬ್ಲಫ್’ ಗೇಮ್ ಒಂದನ್ನು ಅವರು ಆಡಿದರು. ಅದರ ಪ್ರಕಾರ, ಪ್ರಿಯಾಂಕಾ ಮೂರು ಹೇಳಿಕೆಗಳನ್ನು ತಮ್ಮ ಜೀವನದ ಬಗ್ಗೆ ನೀಡಬೇಕು ಅದರಲ್ಲಿ ನಿಜ ಯಾವುದು ಸುಳ್ಳು ಯಾವುದು ಎಂಬುದನ್ನು ಜಿಮ್ಮಿ ಊಹಿಸಬೇಕು. ಅದರಂತೆ ಪ್ರಿಯಾಂಕಾ, ‘ತಮ್ಮ ಬಳಿ ವಿಮಾನ ಓಡಿಸುವ ಲೈಸೆನ್ಸ್ ಇದೆ’ ಎಂದರು. ಅದಕ್ಕೆ ಜಿಮ್ಮಿ ಇದು ನಿಜ ಎಂದರು. ಬಳಿಕ ಪ್ರಿಯಾಂಕಾ, ‘ನಾನು ಹುಳ ತಿನ್ನುತ್ತೇನೆ’ ಎಂದರು. ಅದಕ್ಕೆ ಜಿಮ್ಮಿ ಇದು ಸುಳ್ಳು ಎಂದರು. ಬಳಿಕ ಪ್ರಿಯಾಂಕಾ ‘ನಾನು ನನ್ನ ಕಪ್ಪು ಗುಡ್ಡೆಗಳನ್ನು ಪ್ರತ್ಯೇಕವಾಗಿ ಚಲಿಸುವಂತೆ ಮಾಡಬಲ್ಲೆ’ ಎಂದರು. ಅದಕ್ಕೆ ಜಿಮ್ಮಿ, ಹಾಗೆ ಮಾಡಲು ಯಾವ ಮನುಷ್ಯನ ಕೈಯಲ್ಲೂ ಆಗಲ್ಲ, ಅದು ಸುಳ್ಳು ಎಂದರು.

ಇದನ್ನೂ ಓದಿ:ಪತ್ನಿ ಪ್ರಿಯಾಂಕಾ ಚೋಪ್ರಾಗಾಗಿ ಡ್ರಿಂಕ್ಸ್ ಮಾಡಿಕೊಟ್ಟ ನಿಕ್ ಜೋನಸ್: ವಿಡಿಯೋ

ಆದರೆ ಪ್ರಿಯಾಂಕಾ ಹೇಳಿದ ಮೊದಲನೇಯದ್ದು ಸುಳ್ಳು, ಇನ್ನೆರಡು ಹೇಳಿಕೆಗಳು ಸತ್ಯವಾಗಿದ್ದವು. ಪ್ರಿಯಾಂಕಾ ಬಳಿಕ ವಿಮಾನ ಚಲಾಯಿಸಲು ಪರವಾನಗಿ ಇಲ್ಲ. ಎರಡನೇ ಹೇಳಿಕೆಯಾದ ಹುಳ ತಿನ್ನುವ ಹೇಳಿಕೆ ನಿಜವೆಂದು ಸ್ವತಃ ಪ್ರಿಯಾಂಕಾ ಹೇಳಿದರು. ಅವರು ಜಿಂಬಾಬ್ವೆಗೆ ಹೋದಾಗ ಅಲ್ಲಿನ ಜನಪ್ರಿಯ ಆಹಾರ ಆಗಿರುವ ಮೊಪಾನಿ ಹುಳ (ಮೊಪಾನಿ ವರ್ಮ್ಸ್) ಅನ್ನು ತಿಂದಿದ್ದರಂತೆ. ಮಾತ್ರವಲ್ಲದೆ ಶೀಘ್ರವೇ ಅವರು ಮತ್ತೊಮ್ಮೆ ಜಿಂಬಾಬ್ವೆಗೆ ಹೋಗಲಿದ್ದು ಅವರು ಮತ್ತೊಮ್ಮೆ ಆ ಮೊಪಾನಿ ವರ್ಮ್ಸ್ ನಿಂದ ಮಾಡಿದ ಆಹಾರ ಸವಿಯಲಿದ್ದಾರಂತೆ. ಅಸಲಿಗೆ ಮೊಪಾನಿ ಹುಳ ರೇಷ್ಮೆ ಹುಳುವಿನ ರೀತಿಯೇ ಇರುತ್ತದೆ. ಆದರೆ ಆಕಾರದಲ್ಲಿ ದೊಡ್ಡದಾಗಿರುತ್ತದೆ. ಜಿಂಬಾಬ್ವೆಯ ಪ್ರಮುಖ ಮತ್ತು ವಿಶೇಷ ಆಹಾರಗಳಲ್ಲಿ ಇದು ಸಹ ಒಂದಾಗಿದೆ.

ಇನ್ನು ಕೊನೆಯ ಹೇಳಿಕೆ ಸಹ ನಿಜವಾಗಿದ್ದು, ಪ್ರಿಯಾಂಕಾ ತಮ್ಮ ಕಣ್ಣು ಗುಡ್ಡೆಗಳನ್ನು ಪ್ರತ್ಯೇಕವಾಗಿ ಚಲಿಸುವಂತೆ ಮಾಡಬಲ್ಲರು, ಅಸಲಿಗೆ ತಮ್ಮ ಆ ‘ಪ್ರತಿಭೆ’ಯನ್ನು ಜಿಮ್ಮಿ ಫ್ಯಾಲನ್ ಶೋನಲ್ಲಿ ಮಾಡಿ ತೋರಿಸಿದರು. ಪ್ರಿಯಾಂಕಾರ ಕಣ್ಣು ಗುಡ್ಡೆಗಳನ್ನು ನೋಡಿ ಜಿಮ್ಮಿ ಫ್ಯಾಲನ್ ಶಾಕ್ ಆದರು.

ಪ್ರಿಯಾಂಕಾ ಚೋಪ್ರಾ ನಟನೆಯ ‘ದಿ ಬ್ಲಫ್’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿದ್ದು, ಪ್ರಿಯಾಂಕಾ ಸಖತ್ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾನಲ್ಲಿ ಅವರು ಪೈರೇಟ್ (ಸಮುದ್ರ ಲೂಟಿಕೋರರು) ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ‘ವಾರಣಾಸಿ’ ಸಿನಿಮಾನಲ್ಲಿಯೂ ಪ್ರಿಯಾಂಕಾ ನಟಿಸುತ್ತಿದ್ದು, ಸಿನಿಮಾದ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link