ತಣ್ಣಗಾಗಿದ್ದ ಭಟ್ಕಳದಲ್ಲಿ ಮತ್ತೆ ಕೊಮು ಸಂಘರ್ಷ: ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ – Kannada News | Another Communal Clash in Bhatkal: Protest Erupts Outside Police Station
ಕಾರವಾರ, ಜೂನ್ 17: ಹಿಂದೂ ಯುವತಿಯನ್ನು ಕರೆದುಕೊಂಡು ಕಾಡಿನತ್ತ ಹೋಗುತ್ತಿದ್ದ ಮುಸ್ಲಿಂ ಯುವಕನ ಕಾರನ್ನು ಅಡ್ಡಗಟ್ಟಿ ಪೊಲೀಸರಿಗೆ ಒಪ್ಪಿಸಿದ್ದ ಹಿಂದೂ ಸಂಘಟನೆಯ ಮುಖಂಡರ ವಿರುದ್ಧವೇ ಪ್ರಕರಣ ದಾಖಲಿಸಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಸೂಕ್ಷ್ಮ ಪ್ರದೇಶವಾದ ಭಟ್ಕಳದಲ್ಲಿ ನಡೆದಿದೆ. ಇದರಿಂದ ಆಕ್ರೋಶಗೊಂಡ ನೂರಾರು ಹಿಂದೂ ಕಾರ್ಯಕರ್ತರು ಭಟ್ಕಳ ಶಹರ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಪ್ರತಿಭಟನೆ ಮಾಡಿದರು. ಹಿಂದೂ ಯುವತಿ ಕರೆದೊಯ್ಯುತ್ತಿದ್ದ ಮುಸ್ಲಿಂ ಯುವಕನ ಕಾರನ್ನು ಭಟ್ಕಳದಲ್ಲಿ ಹಿಂದೂ ಸಂಘಟನೆಗಳಿಂದ ತಡೆದಿದ್ದಾರೆ. ಭಟ್ಕಳದಿಂದ ಸಾಗರದ ಕಾಡಿನತ್ತ ಕರೆದೊಯ್ಯುತ್ತಿರುವುದು…