All posts by nagaraj11081993

ಹಲಸಿನ ಹಣ್ಣಿನ ಬೀಜಗಳನ್ನು ಎಸೆಯುತ್ತಿದ್ದೀರಾ? ಇದರ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನ ತಿಳಿದ್ರೆ ಶಾಕ್ ಆಗ್ತೀರಾ? – Kannada News | From Digestion to Heart Health: Amazing Benefits of Jackfruit Seeds

ಹಲಸಿನ ಹಣ್ಣು (Jackfruit) ರುಚಿ ಮತ್ತು ಪೌಷ್ಟಿಕಾಂಶಗಳಿಂದ ಸಮೃದ್ಧವಾದ ಹಣ್ಣು ಎಂಬುದು ತಿಳಿದ ವಿಚಾರ. ಆದರೆ ಹೆಚ್ಚಿನವರು ಹಣ್ಣನ್ನು ತಿಂದ ನಂತರ ಅದರ ಬೀಜಗಳನ್ನು ತ್ಯಾಜ್ಯವೆಂದು ಭಾವಿಸಿ ಎಸೆಯುತ್ತಾರೆ. ಇನ್ನು ಕೆಲವರು ಇದರಿಂದ ಕೆಲವು ರೆಸಿಪಿಗಳನ್ನು ತಯಾರಿಸುತ್ತಾರೆ. ಆದರೆ ವಾಸ್ತವದಲ್ಲಿ, ಹಲಸಿನ ಬೀಜಗಳು (Jackfruit Seeds) ಹಲವು ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ನೈಸರ್ಗಿಕ ಸೂಪರ್‌ಫುಡ್‌ಗಳಾಗಿವೆ. ಇವುಗಳಲ್ಲಿ ಫೈಬರ್, ಪ್ರೋಟೀನ್, ಪೊಟ್ಯಾಸಿಯಂ, ಕಬ್ಬಿಣ ಹಾಗೂ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಹಾಗಾದರೆ ಇದರ ಸೇವನೆಯಿಂದ ಸಿಗುವ ಮತ್ತಷ್ಟು ಆರೋಗ್ಯ ಪ್ರಯೋಜನಗಳ ಬಗ್ಗೆ ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ. ಹಲಸಿನ ಹಣ್ಣನ್ನು ತಿಂದು ಬೀಜ ಎಸೆಯುವ ಮುನ್ನ ಇದು ಎಷ್ಟು ಉಪಯೋಗಕಾರಿ ಎಂಬುದನ್ನು ತಿಳಿದುಕೊಳ್ಳಿ.

ಜೀರ್ಣಕ್ರಿಯೆಗೆ ಉತ್ತಮ

ಹಲಸಿನ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ನಾರು (ಫೈಬರ್) ಇರುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಮಲಬದ್ಧತೆ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ, ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಉತ್ತೇಜಿಸಿ ಹೊಟ್ಟೆಯ ಆರೋಗ್ಯವನ್ನು ಕಾಪಾಡುತ್ತದೆ.

ಹೃದಯ ಆರೋಗ್ಯಕ್ಕೆ ಸಹಕಾರಿ

ಈ ಬೀಜಗಳಲ್ಲಿ ಇರುವ ಪೊಟ್ಯಾಸಿಯಂ ರಕ್ತದೊತ್ತಡವನ್ನು ನಿಯಂತ್ರಿಸಲು ನೆರವಾಗುತ್ತದೆ. ಫೈಬರ್ ಅಂಶವು ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟವನ್ನು ಕಡಿಮೆ ಮಾಡಿ ಹೃದಯದ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುತ್ತದೆ. ಇದರಿಂದ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯ ಕೂಡ ಕಡಿಮೆಯಾಗಬಹುದು.

ತೂಕ ನಿಯಂತ್ರಣಕ್ಕೆ ನೆರವಾಗುತ್ತದೆ

ಹಲಸಿನ ಬೀಜಗಳಲ್ಲಿ ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿರುವುದರಿಂದ ಹೊಟ್ಟೆ ತುಂಬಿದ ಅನುಭವ ಹೆಚ್ಚು ಕಾಲ ಇರುತ್ತದೆ. ಇದರಿಂದ ಅನಗತ್ಯ ತಿಂಡಿ ತಿನ್ನುವುದು ಕಡಿಮೆಯಾಗಿ ತೂಕ ನಿಯಂತ್ರಣಕ್ಕೆ ಸಹಾಯವಾಗುತ್ತದೆ.

ಇದನ್ನೂ ಓದಿ: ಮಧುಮೇಹಿಗಳೇ ಊಟಕ್ಕೂ ಮುನ್ನ ಒಂದು ನೆಲ್ಲಿಕಾಯಿ ತಿಂದು ನೋಡಿ! ದೇಹದಲ್ಲಾಗುವ ಬದಲಾವಣೆ ನಿಮಗೆ ತಿಳಿಯುತ್ತೆ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಕಬ್ಬಿಣ, ಜಿಂಕ್ ಮತ್ತು ಇತರೆ ಖನಿಜಾಂಶಗಳು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ಇದರಿಂದ ಋತುಬದ್ಧ ಸೋಂಕುಗಳು ಮತ್ತು ಸಾಮಾನ್ಯ ಅನಾರೋಗ್ಯಗಳಿಂದ ರಕ್ಷಣೆ ಪಡೆಯಬಹುದು.

ಚರ್ಮದ ಆರೋಗ್ಯ ಕಾಪಾಡುತ್ತದೆ

ಹಲಸಿನ ಬೀಜಗಳಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ದೇಹದಲ್ಲಿನ ಫ್ರೀ ರಾಡಿಕಲ್‌ಗಳ ಹಾನಿಯನ್ನು ಕಡಿಮೆ ಮಾಡುತ್ತವೆ.

ಹೇಗೆ ಸೇವಿಸಬಹುದು?

ಹಲಸಿನ ಬೀಜಗಳನ್ನು ನೀರಿನಲ್ಲಿ ಬೇಯಿಸಿ ತಿನ್ನಬಹುದು ಅಥವಾ ಸ್ವಲ್ಪ ಹುರಿದು ಆರೋಗ್ಯಕರ ಸ್ನ್ಯಾಕ್ ಆಗಿ ಸೇವಿಸಬಹುದು. ಕರಿ, ಸೂಪ್ ಅಥವಾ ಇತರೆ ಅಡುಗೆಗಳಲ್ಲಿ ಕೂಡ ಸೇರಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪರಿಷತ್ 5 ಸ್ಥಾನ ಗೆಲ್ಲಲು ಕಾಂಗ್ರೆಸ್ ಬಿಗ್ ಪ್ಲಾನ್, ಡಿಕೆಶಿ ತಂತ್ರಗಾರಿಕೆ ಹೇಗಿದೆ ಗೊತ್ತಾ? – Kannada News | Karnataka MLC Polls 2026: 8 Candidates, 7 seats, here is Congress Plan winning In Five seats

ಬೆಂಗಳೂರು, (ಜೂನ್ 17): ಕರ್ನಾಟಕ ವಿಧಾನ ಪರಿಷತ್​​ ಚುನಾವಣೆ (Legislative Council Election) ರಂಗೇರಿದೆ. ಎಲ್ಲಾ ರಾಜಕೀಯ ಪಕ್ಷಗಳು ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಇನ್ನಿಲ್ಲದ ಕಸರತ್ತು ನಡೆಸ್ತಿವೆ. ಅಡ್ಡಮತದಾನ ಭೀತಿ ಹಿನ್ನೆಲೆ ರೆಸಾರ್ಟ್​ ಪಾಲಿಟಿಕ್ಸ್ (Resort Politics)​ ಕೂಡ ಶುರುವಾಗಿದ್ದು, ನಾಳೆ (ಜೂನ್ 18) ನಡೆಯಲಿರುವ ವಿಧಾನ ಪರಿಷತ್​ ಚುನಾವಣೆಯಲ್ಲಿ ಐದು ಸ್ಥಾನ ಗೆಲ್ಲಲು ಕಾಂಗ್ರೆಸ್ (Congress) ಪಕ್ಷ ರಣತಂತ್ರ ಹೂಡಿದೆ.

ಕಾಂಗ್ರೆಸ್ ತನ್ನ ಪಾಲಿನ ನಾಲ್ಕು ಸ್ಥಾನಗಳ ಜೊತೆ ಇನ್ನೊಂದು ಹೆಚ್ಚುವರಿ ಸ್ಥಾನವನ್ನು ಗೆಲ್ಲಲು ಕಸರತ್ತು ನಡೆಸಿದ್ದು, ಇದಕ್ಕೆ ಬೇಕಾದ ಎಲ್ಲಾ ಕಾರ್ಯತಂತ್ರಗಳನ್ನು ಮಾಡಿದೆ. ಕೈ ಶಾಸಕರು ನಾಳೆ (ಜೂನ್ 18) ‌ ನೇರವಾಗಿ ರೆಸಾರ್ಟ್ನಿಂದ ವಿಧಾನಸೌಧಕ್ಕೆ ತೆರಳಿ ಮತದಾನ ಮಾಡಲಿದ್ದಾರೆ. ಇದಕ್ಕೆ ಐವರು ಅಭ್ಯರ್ಥಿಗಳಿಗೆ ಐದು ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಲಾಗಿದೆ. ಇನ್ನು ಯಾವ ಅಭ್ಯರ್ಥಿ ಪರ ಯಾರು ಮತ ಚಲಾವಣೆ ಮಾಡಬೇಕು ಎಂದು ಶಾಸಕರ ವರ್ಗೀಕರಣ ಸಹ ಮಾಡಲಾಗಿದ್ದು, ವರ್ಗೀಕರಣದ ಪ್ರಕಾರವೇ ವಿಧಾನಸೌಧಕ್ಕೆ ಪ್ರತ್ಯೇಕ ಬಸ್ ನಲ್ಲಿ ತೆರಳಲು ಸೂಚನೆ ನೀಡಲಾಗಿದೆ. ಐವರು ಅಭ್ಯರ್ಥಿಗಳಲ್ಲಿ ಮೂರು ಅಭ್ಯರ್ಥಿಗಳಿಗೆ 28 ಮತಗಳು, ಇಬ್ಬರು ಅಭ್ಯರ್ಥಿಗಳಿಗೆ 29 ಮತ ಹಾಕಲು ಸದ್ಯಕ್ಕೆ ನಿರ್ಧರಿಸಲಾಗಿದೆ.ಯಾವುದೇ ಅಭ್ಯರ್ಥಿ ಸೋತರೆ, ಅಡ್ಡ ಮತದಾನ ಮಾಡಿದರೆ ಎಂದು ಸುಲಭವಾಗಿ ಪತ್ತೆ ಮಾಡಲು ಈ ವ್ಯವಸ್ಥೆ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಊಟವಾದ ಬಳಿಕ ಒಂದು ಚಿಟಿಕೆ ಸೋಂಪು ತಿನ್ನುವ ಅಭ್ಯಾಸ ದೇಹದಲ್ಲಿ ಎಷ್ಟೆಲ್ಲಾ ಬದಲಾವಣೆಗಳಿಗೆ ಕಾರಣವಾಗುತ್ತೆ ಗೊತ್ತಾ? – Kannada News | From Digestion to Fresh Breath: Why Fennel Seeds Matter

ಕೆಲವರಿಗೆ ಊಟವಾದ ನಂತರ ಸೋಂಪು (Fennel Seeds) ತಿನ್ನುವ ಅಭ್ಯಾಸವಿರುತ್ತದೆ. ಇದು ನಮ್ಮ ಅಡುಗೆಮನೆಯಲ್ಲಿ ಸುಲಭವಾಗಿ ದೊರೆಯುವ ಮಸಾಲೆ ಪದಾರ್ಥಗಳಲ್ಲಿ ಒಂದು. ಆದರೆ ಇದು ಕೇವಲ ಬಾಯಿಗೆ ಸುವಾಸನೆ ನೀಡುವುದಷ್ಟೇ ಅಲ್ಲ, ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ವಿಶೇಷವಾಗಿ ಊಟದ ನಂತರ ಸ್ವಲ್ಪ ಸೋಂಪನ್ನು ಜಗಿದು ತಿನ್ನುವ ಅಭ್ಯಾಸ ಜೀರ್ಣಕ್ರಿಯೆಯನ್ನು ಸುಧಾರಿಸಿ ದೇಹದ ಒಟ್ಟಾರೆ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಹೌದು, ಒಂದು ಚಿಕ್ಕ ಅಭ್ಯಾಸ ಆರೋಗ್ಯ ಕಾಪಾಡಿಕೊಳ್ಳಲು ತುಂಬಾ ಸಹಾಯ ಮಾಡುತ್ತದೆ. ಹಾಗಾದರೆ ಇದರಿಂದ ಯಾವ ರೀತಿಯ ಪ್ರಯೋಜನಗಳು ಸಿಗುತ್ತದೆ, ಯಾಕೆ ಸೇವನೆ ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಜೀರ್ಣಕ್ರಿಯೆ ಸುಧಾರಿಸುತ್ತದೆ

ಸೋಂಪು ಜೀರ್ಣರಸಗಳು ಮತ್ತು ಎನ್ಜೈಮ್‌ಗಳ ಉತ್ಪತ್ತಿಯನ್ನು ಉತ್ತೇಜಿಸುತ್ತದೆ. ಇದರಿಂದ ಅಜೀರ್ಣ, ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಹಾಗೂ ಮಲಬದ್ಧತೆ ಸಮಸ್ಯೆಗಳು ಕಡಿಮೆಯಾಗಲು ನೆರವಾಗುತ್ತದೆ. ಊಟದ ನಂತರ ಸ್ವಲ್ಪ ಸೋಂಪು ತಿನ್ನುವುದು ಜೀರ್ಣಕ್ರಿಯೆಗೆ ಉತ್ತಮ.

ಬಾಯಿಯ ದುರ್ವಾಸನೆ ನಿವಾರಣೆ

ಸೋಂಪಿನಲ್ಲಿರುವ ನೈಸರ್ಗಿಕ ಸುಗಂಧ ತೈಲಗಳು ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡುತ್ತವೆ. ಆದ್ದರಿಂದ ಊಟದ ಬಳಿಕ ಸೋಂಪು ಸೇವಿಸುವುದು ಉಸಿರಾಟವನ್ನು ತಾಜಾವಾಗಿರಿಸುತ್ತದೆ.

ಕಣ್ಣಿನ ಆರೋಗ್ಯಕ್ಕೆ ಸಹಕಾರಿ

ಸೋಂಪಿನಲ್ಲಿ ವಿಟಮಿನ್ ಎ ಮತ್ತು ಆಂಟಿಆಕ್ಸಿಡೆಂಟ್‌ಗಳು ಇದ್ದು, ಕಣ್ಣಿನ ಆರೋಗ್ಯವನ್ನು ಕಾಪಾಡಲು ನೆರವಾಗುತ್ತವೆ. ನಿಯಮಿತ ಸೇವನೆಯಿಂದ ದೃಷ್ಟಿ ಆರೋಗ್ಯಕ್ಕೆ ಲಾಭವಾಗಬಹುದು.

ಚರ್ಮದ ಕಾಂತಿ ಹೆಚ್ಚಿಸುತ್ತದೆ

ಸೋಂಪಿನಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಫ್ರೀ ರಾಡಿಕಲ್‌ಗಳ ಹಾನಿಯನ್ನು ತಡೆಯಲು ಸಹಾಯ ಮಾಡುತ್ತವೆ. ಇದರಿಂದ ಚರ್ಮದ ಆರೋಗ್ಯ ಸುಧಾರಿಸಿ, ಬೇಗ ವಯಸ್ಸಾಗುವ ಲಕ್ಷಣಗಳನ್ನು ಕಡಿಮೆ ಮಾಡಲು ನೆರವಾಗುತ್ತದೆ.

ಇದನ್ನೂ ಓದಿ: ಮಧುಮೇಹಿಗಳೇ ಊಟಕ್ಕೂ ಮುನ್ನ ಒಂದು ನೆಲ್ಲಿಕಾಯಿ ತಿಂದು ನೋಡಿ! ದೇಹದಲ್ಲಾಗುವ ಬದಲಾವಣೆ ನಿಮಗೆ ತಿಳಿಯುತ್ತೆ

ತೂಕ ನಿಯಂತ್ರಣಕ್ಕೆ ಸಹಕಾರಿ

ಸೋಂಪು ಹಸಿವಿನ ನಿಯಂತ್ರಣಕ್ಕೆ ಸಹಕಾರಿ. ಇದನ್ನು ಜಗಿಯುವುದರಿಂದ ಹೊಟ್ಟೆ ತುಂಬಿದ ಅನುಭವ ಉಂಟಾಗಿ ಅನಗತ್ಯ ತಿಂಡಿ ತಿನ್ನುವ ಆಸೆ ಕಡಿಮೆಯಾಗಬಹುದು.

ರಕ್ತದೊತ್ತಡ ನಿಯಂತ್ರಣ

ಸೋಂಪಿನಲ್ಲಿ ಪೊಟ್ಯಾಸಿಯಂ ಸಮೃದ್ಧವಾಗಿದೆ. ಇದು ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ.

ಮಾನಸಿಕ ಆರೋಗ್ಯ ಮತ್ತು ಚಯಾಪಚಯ ಕ್ರಿಯೆಗೆ ಒಳ್ಳೆಯದು

ಸೋಂಪಿನಲ್ಲಿರುವ ಪೋಷಕಾಂಶಗಳು ದೇಹದ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಜೊತೆಗೆ ಚಯಾಪಚಯ ಕ್ರಿಯೆಯನ್ನು (Metabolism) ಉತ್ತೇಜಿಸಿ ದೇಹವನ್ನು ಚುರುಕಾಗಿರಿಸುತ್ತದೆ.

ಭೋಜನದ ನಂತರ ಒಂದು ಚಿಟಿಕೆ ಸೋಂಪು ತಿನ್ನುವುದು ಸರಳ ಅಭ್ಯಾಸ ಎನಿಸಿದರೂ ಕೂಡ ಆರೋಗ್ಯಕರ ಅಭ್ಯಾಸವಾಗಿದೆ. ಇದು ಜೀರ್ಣಕ್ರಿಯೆ, ಬಾಯಿಯ ಆರೋಗ್ಯ, ಚರ್ಮ, ಹೃದಯ ಹಾಗೂ ಒಟ್ಟಾರೆ ಆರೋಗ್ಯಕ್ಕೆ ಸಹಕಾರಿ. ಆದರೆ ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs AFG: ನಾಯಕನಾಗಿ ಚೊಚ್ಚಲ ಏಕದಿನ ಸರಣಿ ಗೆದ್ದ ಶುಭ್​ಮನ್ ಗಿಲ್ – Kannada News | India Dominates Afghanistan: Gill’s Maiden Series Win, 170 Run Victory in Lucknow ODI

ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡವು ಅಫ್ಘಾನಿಸ್ತಾನವನ್ನು 170 ರನ್‌ಗಳಿಂದ ಸೋಲಿಸಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ. ಇದರೊಂದಿಗೆ ಶುಭ್​ಮನ್ ಗಿಲ್ ನಾಯಕನಾಗಿ ತಮ್ಮ ಮೊದಲ ಏಕದಿನ ಸರಣಿಯನ್ನು ಗೆದ್ದ ಸಾಧನೆಯನ್ನು ಮಾಡಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 49.5 ಓವರ್‌ಗಳಲ್ಲಿ 402 ರನ್‌ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ 44.3 ಓವರ್​ಗಳಲ್ಲಿ 232 ರನ್​ಗಳಿಗೆ ಆಲೌಟ್ ಆಯಿತು. ಭಾರತದ ಪರ ಬೌಲಿಂಗ್‌ನಲ್ಲಿ ಮಿಂಚಿದ ಗುರ್ನೂರ್ ಬ್ರಾರ್ ಮತ್ತು ಅರ್ಷದೀಪ್ ಸಿಂಗ್ ತಲಾ ಮೂರು ವಿಕೆಟ್‌ಗಳನ್ನು ಪಡೆದರೆ, ಪ್ರಿನ್ಸ್ ಯಾದವ್ ಎರಡು ವಿಕೆಟ್‌ಗಳನ್ನು ಪಡೆದರು.

Source link

International Picnic Day 2026: ಫ್ರೆಂಡ್ಸ್‌, ಫ್ಯಾಮಿಲಿ ಜೊತೆ ಪಿಕ್ನಿಕ್‌ ಹೋಗುವ ಖುಷಿಯೇ ಬೇರೆ – Kannada News | International Picnic Day 2026: Why is International Picnic Day celebrated? Here’s the information

ಅಂತಾರಾಷ್ಟ್ರೀಯ ಪಿಕ್ನಿಕ್‌ ದಿನImage Credit source: Pexels

ಪಿಕ್ನಿಕ್‌ (Picnic) ಹೋಗೋದು ಎಂದ್ರೆ ಎಲ್ಲರಿಗೂ ಇಷ್ಟ. ಪಿಕ್ನಿಕ್ ಎಂದರೆ ಸ್ನೇಹಿತರು, ಕುಟುಂಬ ಮತ್ತು ಆಪ್ತರೊಂದಿಗೆ ಸುಂದರವಾದ ಸ್ಥಳಕ್ಕೆ ಹೋಗುವುದು ಮತ್ತು  ಪ್ರಕೃತಿಯ ನಡುವೆ ಆನಂದಿಸುವುದು. ಇದೊಂದು ರೀತಿಯಲ್ಲಿ ಸಣ್ಣ ಪ್ರವಾಸವಾಗಿದ್ದು, ಪ್ರೀತಿಪಾತ್ರರೊಂದಿಗೆ ಹೊರಗಡೆ ಹೋಗುವ ಮೂಲಕ ಒಂದೊಳ್ಳೆ ಸಮಯವನ್ನು ಕಳೆಯಬಹುದು. ಅನೇಕರು ತಮ್ಮ ಫ್ರೆಂಡ್ಸ್‌, ಫ್ಯಾಮಿಲಿಯೊಂದಿಗೆ ಸುಂದರ ಪಾರ್ಕ್‌, ಬೀಚ್‌, ವಾಟರ್‌ಫಾಲ್ಸ್‌ನಂತಹ ಸುಂದರ ತಾಣಗಳಿಗೆ  ಊಟ ತಿಂಡಿ, ಹಣ್ಣು ಇತ್ಯಾದಿ ವಸ್ತುಗಳನ್ನು ತೆಗೆದುಕೊಂಡು ಹೋಗಿ, ಅದನ್ನು ತಿನ್ನುತ್ತಾ ತಮ್ಮವರೊಂದಿಗೆ ಮೋಜು ಮಾಡುತ್ತಾ ಪಿಕ್ನಿಕ್‌ ಆನಂದಿಸುತ್ತಾರೆ. ಹೀಗೆ ಪಿಕ್ನಿಕ್‌ ಹೋಗುವ ಮೂಲಕ ಪ್ರೀತಿಪಾತ್ರರೊಂದಿಗೆ ಒಂದೊಳ್ಳೆ ಸಮಯವನ್ನು ಕಳೆಯುವುದರ ಜೊತೆಗೆ ಹೀಗೆ ಹೊರಗಡೆ ಸುತ್ತಾಡಲು ಹೋಗುವುದರಿಂದ ಒತ್ತಡ ಕಡಿಮೆಯಾಗಿ ಮನಸ್ಸಿಗೂ ಒಂದು ರೀತಿಯ ಮುದ ಸಿಗುತ್ತದೆ. ಈ ಪಿಕ್ನಿಕ್‌ಗೂ ಒಂದು ದಿನವಿದ್ದು, ಆ ವಿಶೇಷ ದಿನದ ಹಿನ್ನೆಲೆಯ ಬಗ್ಗೆ ತಿಳಿಯಿರಿ.

ಅಂತಾರಾಷ್ಟ್ರೀಯ ಪಿಕ್ನಿಕ್ ದಿನದ ಇತಿಹಾಸವೇನು?

ಅಂತಾರಾಷ್ಟ್ರೀಯ ಪಿಕ್ನಿಕ್ ದಿನವನ್ನು ಪ್ರತಿ ವರ್ಷ ಜೂನ್ 18 ರಂದು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಪಿಕ್ನಿಕ್ ಎಂಬ ಪದವು ಫ್ರೆಂಚ್ ಪದ ‘ಪಿಕ್-ನಿಕ್’ ನಿಂದ ಬಂದಿದೆ, ಇದರರ್ಥ ಎಲ್ಲರೂ  ಆಹಾರವನ್ನು ಹಂಚಿಕೊಳ್ಳುವ ಸಾಮಾಜಿಕ ಕಾರ್ಯಕ್ರಮ. ಪಿಕ್ನಿಕ್ ದಿನದ ಇತಿಹಾಸ ಇನ್ನೂ ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲವಾದರೂ, ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಪಿಕ್ನಿಕ್‌ಗಳು ಒಂದು ರೀತಿಯ ಅನೌಪಚಾರಿಕ ಊಟದ ಕಾರ್ಯಕ್ರವಾಗಿ ಪ್ರಾರಂಭವಾಯಿತು ಎಂದು ನಂಬಲಾಗಿದೆ.

ವರದಿಯ ಪ್ರಕಾರ, 19 ನೇ ಶತಮಾನದಲ್ಲಿ ಇಂಗ್ಲೆಂಡ್‌ನಲ್ಲಿ ಪಿಕ್ನಿಕ್‌ಗಳು ಜನಪ್ರಿಯವಾದವು. ನಂತರದ ವರ್ಷಗಳಲ್ಲಿ, ರಾಜಕೀಯ ಪ್ರತಿಭಟನೆಗಳ ಸಮಯದಲ್ಲಿ ಪಿಕ್ನಿಕ್‌ಗಳು ಸಾಮಾನ್ಯ ಸಭೆಯಾದವು. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪೋರ್ಚುಗಲ್‌ನಲ್ಲಿ ನಡೆದ ಪಿಕ್ನಿಕ್ ಅನ್ನು ಅತಿದೊಡ್ಡ ಪಿಕ್ನಿಕ್ ಎಂದು ದಾಖಲಿಸಿದೆ. ಆ ಕಾರ್ಯಕ್ರಮದಲ್ಲಿ ಸುಮಾರು 20,000 ಜನರು ಭಾಗವಹಿಸಿದ್ದರು.

ಇದನ್ನೂ ಓದಿ: ಬರಡಾಗುತ್ತಿರುವ ಭೂಮಿಯ ರಕ್ಷಣೆ ನಮ್ಮೆಲ್ಲರ ಹೊಣೆ

ಪಿಕ್ನಿಕ್‌ ಹೋಗುವುದರಿಂದ ಲಭಿಸುವ ಪ್ರಯೋಜನಗಳು:

  • ಬೀಚ್‌, ಫಾಲ್ಸ್‌, ಪಾರ್ಕ್‌ನಂತಹ ಸ್ಥಳಗಳಿಗೆ ಪಿಕ್ನಿಕ್‌ಗೆ ಹೋದಾಗ ದಿನವಿಡೀ ತಾಜಾ ಗಾಳಿಯನ್ನು ಉಸಿರಾಡಲು ನಮಗೆ ಅವಕಾಶ ಸಿಗುತ್ತದೆ. ಇದು ದೇಹಕ್ಕೆ ಉಲ್ಲಾಸವನ್ನು ನೀಡುತ್ತದೆ. ಮನಸ್ಸನ್ನು ರಿಫ್ರೆಶ್‌ ಮಾಡುತ್ತದೆ.
  • ಆಗಾಗ್ಗೆ ಪಿಕ್ನಿಕ್‌ಗಳಿಗೆ ಹೋಗುವುದರಿಂದ ವಿವಿಧ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಹಾಯವಾಗುತ್ತದೆ. ಇದು ನಿಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
  • ಪ್ರಕೃತಿ, ಫ್ರೆಂಡ್ಸ್‌, ಸ್ನೇಹಿತರೊಂದಿಗೆ ಸಮಯ ಕಳೆಯುವ ಮೂಲಕ ಒತ್ತಡದಿಂದಲೂ ಮುಕ್ತಿ ಪಡೆಯಬಹುದು. ನಿಯಮಿತವಾಗಿ ಪಿಕ್ನಿಕ್‌ಗೆ ಹೋಗುವುದರಿಂದ ಒತ್ತಡ ಮತ್ತು ಆತಂಕದಂತಹ ಮಾನಸಿಕ ಸಮಸ್ಯೆಗಳು ಗಣನೀಯವಾಗಿ ಕಡಿಮೆಯಾಗುತ್ತದೆ.
  • ಇತ್ತೀಚಿನ ಬ್ಯುಸಿ ಜೀವನಶೈಲಿ, ಕೆಲಸದ ಒತ್ತಡದ ಕಾರಣ ಜನರಿಗೆ ತಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸಮಯ ಕಳೆಯಲು ಟೈಂ ಸಿಗುತ್ತಿಲ್ಲ. ಹೀಗಿರುವಾಗ ಪಿಕ್ನಿಕ್‌ ಡೇ ಸಂದರ್ಭದಲ್ಲಿ ಒಂದೊಳ್ಳೆ ಸ್ಥಳಕ್ಕೆ ಪಿಕ್ನಿಕ್‌ ಹೋಗುವ ಮೂಲಕ ಪ್ರೀತಿಪಾತ್ರರೊಂದಿಗೆ ಒಂದೊಳ್ಳೆ ಟೈಮ್‌ ಸ್ಪೆಂಡ್‌ ಮಾಡುವುದರ ಜೊತೆಗೆ ಬಾಂಧವ್ಯವನ್ನು ಇನ್ನಷ್ಟು ಬಲಗೊಳಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೋದಿ ಬಹಳ ಸುಂದರ ವ್ಯಕ್ತಿ, ಕೆಲಸದ ವಿಷಯದಲ್ಲಿ ಮಾತ್ರ ಕಿಲ್ಲರ್; ಗೆಳೆಯನನ್ನು ಹೊಗಳಿದ ಟ್ರಂಪ್ – Kannada News | Donald Trump calls PM Modi is most beautiful looking man but Negotiates Like A Killer

ಎವಿಯಾನ್, ಜೂನ್ 17: ಫ್ರಾನ್ಸ್​ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ (G7 Summit) ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ದ್ವಿಪಕ್ಷೀಯ ಸಭೆ ನಡೆಸಿದ್ದಾರೆ. ಈ ವೇಳೆ ಟ್ರಂಪ್ ಪ್ರಧಾನಿ ಮೋದಿಯವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. “ಮೋದಿ ನೋಡಲು ಅತ್ಯಂತ ಸುಂದರವಾದ ವ್ಯಕ್ತಿ. ಏಂಜಲ್ ರೀತಿ ಕಾಣುತ್ತಾರೆ. ಆದರೆ ಒಪ್ಪಂದಗಳ ವಿಷಯಕ್ಕೆ ಬಂದರೆ ಅವರು ಅಷ್ಟೇ ಕಠಿಣ ಮತ್ತು ಕಿಲ್ಲರ್. ಕಠಿಣ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಅವರನ್ನು ಮೀರಿಸಲಾಗದು” ಎಂದು ಟ್ರಂಪ್ ತಮ್ಮದೇ ಶೈಲಿಯಲ್ಲಿ ಹೊಗಳಿದ್ದಾರೆ.

“ಮೋದಿ ನೋಡಲು ತುಂಬಾ ಶಾಂತವಾಗಿ ಕಾಣುವುದರಿಂದ, ತಮ್ಮ ಶಾಂತ ಸ್ವಭಾವ ಮತ್ತು ಕಠಿಣ ನಿಲುವುಗಳ ಮೂಲಕ ಎದುರಾಳಿಯನ್ನು ದಿಢೀರ್ ಆಗಿ ಆಶ್ಚರ್ಯಚಕಿತರನ್ನಾಗಿಸುತ್ತಾರೆ. ಜಗತ್ತಿನಲ್ಲಿ ಇಂತಹ ಗುಣ ಹೊಂದಿರುವ ಕೆಲವೇ ಕೆಲವು ಜನರಿದ್ದಾರೆ. ಜನರು ಇವರನ್ನು ತುಂಬಾ ಒಳ್ಳೆಯ ಮನುಷ್ಯ ಎನ್ನುತ್ತಾರೆ, ಬಹಳ ಇಷ್ಟಪಡುತ್ತಾರೆ. ಆದರೆ ವ್ಯಾಪಾರ ಮತ್ತು ದೇಶದ ಹಿತಾಸಕ್ತಿಯ ವಿಷಯ ಬಂದಾಗ ಇವರು ಅತ್ಯಂತ ಕಠಿಣವಾಗಿರುತ್ತಾರೆ” ಎಂದು ಟ್ರಂಪ್ ಹೇಳಿದ್ದಾರೆ.

ಪ್ರಧಾನಿ ಮೋದಿಯವರು ಭಾರತದ ಜನರನ್ನು ಎಷ್ಟು ಪ್ರೀತಿಸುತ್ತಾರೋ, ಅಷ್ಟೇ ಅಮೆರಿಕವನ್ನೂ ಪ್ರೀತಿಸುತ್ತಾರೆ ಎಂದು ಟ್ರಂಪ್ ಹೇಳಿದರು. ಹಳೆಯ ದಿನಗಳನ್ನು ನೆನಪಿಸಿಕೊಂಡ ಅವರು, “ನಾವು ಹೂಸ್ಟನ್‌ನಲ್ಲಿ ‘ಹೌಡಿ ಮೋದಿ’ ಕಾರ್ಯಕ್ರಮ ಮಾಡಿದ್ದೆವು. ಆಗ ಸ್ಟೇಡಿಯಂ ಸಂಪೂರ್ಣ ತುಂಬಿತ್ತು. ಭಾರತ ಹಾಗೂ ಅಮೆರಿಕದ ನಡುವೆ ಸದ್ಯ ಭಾರಿ ಪ್ರಮಾಣದ ವ್ಯಾಪಾರ ಒಪ್ಪಂದಗಳು ನಡೆಯುತ್ತಿವೆ ಮತ್ತು ನಾವು ಒಪ್ಪಂದದ ಅತ್ಯಂತ ಸಮೀಪದಲ್ಲಿದ್ದೇವೆ. ಭವಿಷ್ಯದಲ್ಲಿ ನಾನು ಖಂಡಿತವಾಗಿ ಮತ್ತೊಮ್ಮೆ ಭಾರತಕ್ಕೆ ಭೇಟಿ ನೀಡಲಿದ್ದೇನೆ” ಎಂದು ತಿಳಿಸಿದರು.

(Video Source: ANI)

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಒಂದೇ ದಿನ ಜಯದೇವ ಆಸ್ಪತ್ರೆಯಲ್ಲಿ 11 ರೋಗಿಗಳ ಸಾವು: ಆಗಿದ್ದೇನು? ಸ್ಪಷ್ಟನೆ ನೀಡಿದ ನಿರ್ದೇಶಕ – Kannada News | 11 Patients Die in a Single Day at Jayadeva Hospital: Director Explains the Cause

ಜಯದೇವ ಆಸ್ಪತ್ರೆ ವೈದ್ಯರ ಸುದ್ದಿಗೋಷ್ಠಿImage Credit source: tv9 kannada

ಮೈಸೂರು, ಜೂನ್​​ 17: ಜಯದೇವ ಹೃದ್ರೋಗ ಆಸ್ಪತ್ರೆ (Jayadeva Hospital) ರಾಜ್ಯದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿರುವ ಆಸ್ಪತ್ರೆ. ಹೃದಯ ಸಂಬಂಧಿ ಕಾಲೆಗಳಿಗೆ ಚಿಕಿತ್ಸೆ ನೀಡುವುದರಲ್ಲಿ ಎತ್ತಿದ ಕೈ. ಆದರೆ ಇಂತಹ ಆಸ್ಪತ್ರೆ ವಿರುದ್ಧ ಇದೀಗ ಗಂಭೀರ ಆರೋಪವೊಂದು ಕೇಳಿಬಂದಿದೆ. ಕಳೆದ 24 ಗಂಟೆಯಲ್ಲಿ ಮೈಸೂರಿನ (mysuru) ಜಯದೇವ ಆಸ್ಪತ್ರೆಯಲ್ಲಿ 11 ರೋಗಿಗಳು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಮೃತ ರೋಗಿಗಳ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆಂದು ಹೇಳಲಾಗುತ್ತಿರುವ ವಿಡಿಯೋಗಳು ವೈರಲ್​ ಆಗಿದೆ. ಆದರೆ ಇದೀಗ ಸಂಸ್ಥೆಯ ನಿರ್ದೇಶಕ ಡಾ.ದಿನೇಶ್ ಸ್ಪಷ್ಟನೆ ನೀಡಿದ್ದಾರೆ.

ಮುಖ್ಯಾಂಶಗಳು

  • ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ 11 ರೋಗಿಗಳ ಸಾವು
  • ಮೃತ ರೋಗಿಗಳ ಕುಟುಂಬಸ್ಥರಿಂದ ಗಂಭೀರ ಆರೋಪ
  • ಸ್ಪಷ್ಟನೆ ನೀಡಿದ ಸಂಸ್ಥೆಯ ನಿರ್ದೇಶಕ ಡಾ.ದಿನೇಶ್

11 ರೋಗಿಗಳು ಸಾವು: ಕುಟುಂಬಸ್ಥರು ಆಕ್ರೋಶ

ಸಾಂಸ್ಕೃತಿಕ ನಗರಿ ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ರೋಗಿಗಳ ಸರಣಿ ಸಾವುಗಳು ಮುಂದುವರಿದಿದ್ದು, 24 ಗಂಟೆಯಲ್ಲಿ ಬರೋಬ್ಬರಿ 11 ಜನ ರೋಗಿಗಳು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಆತಂಕಗೊಂಡಿರುವ ಸಾರ್ವಜನಿಕರು ಮತ್ತು ಮೃತ ರೋಗಿಗಳ ಕುಟುಂಬಸ್ಥರು ಆಸ್ಪತ್ರೆಯಲ್ಲಿ ವೈದ್ಯರೇ ಇರಲಿಲ್ಲ ಎಂಬ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸದ್ಯ ಇದು ಸಾಕಷ್ಟು ಚರ್ಚೆಗೆ  ಗ್ರಾಸವಾಗಿದೆ.

ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ದಿನೇಶ್ ಸ್ಪಷ್ಟನೆ

ಇನ್ನು ಈ ವಿಚಾರ ವೈರಲ್​ ಆಗುತ್ತಿದ್ದಂತೆ ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ದಿನೇಶ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿನಿತ್ಯ 600 ರಿಂದ 800 ಜನ ಹೊರ ರೋಗಿಗಳು ಬರುತ್ತಾರೆ. 100 ರಷ್ಟು ಜನ ದಾಖಲಾಗುತ್ತಾರೆ. ಈ ಪೈಕಿ ಬಹುತೇಕ ರೋಗಿಗಳು ತೀವ್ರ ಹೃದಯಾಘಾತ ಹೊಂದಿರುತ್ತಾರೆ. ನಮ್ಮಲ್ಲಿ ಚಿಕಿತ್ಸೆ ಮೊದಲು. ಇಂದು ಆಸ್ಪತ್ರೆಯಲ್ಲಿ ನಿಧನರಾದ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರು. ನಮ್ಮ ವೈದ್ಯರು ಈ ಎಲ್ಲಾ ರೋಗಿಗಳಿಗೂ ಚಿಕಿತ್ಸೆ ನೀಡಿದ್ದಾರೆ. ಸಾವನ್ನಪ್ಪಿರುವ ರೋಗಿಗಳು ಒಂದೇ ದಿನ ದಾಖಲಾದವರಲ್ಲ. ಹಲವು ದಿನಗಳಿಂದ ದಾಖಲಾದವರು ಇಂದು ಸಾವನ್ನಪ್ಪಿದ್ದಾರೆ. ಎಲ್ಲರೂ ಕೂಡ 60 ವರ್ಷ ವಯಸ್ಸು ಮೇಲ್ಪಟ್ಟವರು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಹಾಸನ ಹೃದಯಾಘಾತ ಪ್ರಕರಣಗಳಿಗೆ ಕೋವಿಡ್ ಲಸಿಕೆ ಕಾರಣವಾ? ಐಸಿಎಂಆರ್ ಅಧ್ಯಯನ ಏನು ಹೇಳುತ್ತೆ?

ವೈದ್ಯರು ಇರಲಿಲ್ಲ ಎಂಬ ವಿಚಾರವಾಗಿ ಮಾತನಾಡಿದ ಅವರು, ರಾತ್ರಿ ಪಾಳಯದಲ್ಲಿ ನಾಲ್ಕು ಜನ ವೈದ್ಯರು ಇದ್ದೆ ಇರುತ್ತಾರೆ. ವೈದ್ಯರು ಇರಲಿಲ್ಲ ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು. ಜಯದೇವ ಆಸ್ಪತ್ರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ವಾಸಿಯಾಗಿದೆ. ಇಂತಹ ಸಂಸ್ಥೆಗೆ ಮಸಿ ಬಳೆಯುವ ಕೆಲಸ ಮಾಡುವುದು ಬೇಡ. ವಾರದ ಪ್ರಾರಂಭದಲ್ಲಿ ಹೆಚ್ಚಿನ ಸಂಖ್ಯೆಯ ರೋಗಿಗಳು ಆಸ್ಪತ್ರೆಗೆ ಬರುತ್ತಾರೆ. ನಮ್ಮಲ್ಲಿ 5ರಿಂದ 7% ವೈದ್ಯರ ಕೊರತೆ ಇದೆ. ಈ ಕಾರಣಕ್ಕಾಗಿಯೇ ಖಾಯಂ ಹುದ್ದೆಗಳನ್ನು ಕರೆಯಲಾಗಿದೆ. ಬೆಂಗಳೂರು, ಮೈಸೂರು ಎರಡು ಆಸ್ಪತ್ರೆಗಳಿಗೆ 25 ಖಾಯಂ ವೈದ್ಯರ ನೇಮಕಾತಿಗೆ ಕರೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಕೂಡ ಬಗೆಹರಿಯಲಿದೆ ಎಂದು ಡಾ.ದಿನೇಶ್ ಹೇಳಿದ್ದಾರೆ.

ಸಾವಿನ ಬಗ್ಗೆ ನಿಖರ ಮಾಹಿತಿ ಕೇಳಿದ್ದೇನೆ ಎಂದ ಸಚಿವ ಶರಣ ಪ್ರಕಾಶ್ ಪಾಟೀಲ್

ಇನ್ನು ಮೈಸೂರಿನ ಜಯದೇವ ಆಸ್ಪತ್ರೆಗೆ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಭೇಟಿ ನೀಡಿ ರೋಗಿಗಳ ಸಾವಿನ ಸಂಬಂಧ ವೈದ್ಯರಿಂದ ಮಾಹಿತಿ ಪಡೆದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದೇ ದಿನ 11 ಜನ ಸಾವಿನ ಬಗ್ಗೆ ಮಾಹಿತಿ ಕೇಳಿದ್ದೇನೆ. ಕಳೆದ ಹತ್ತಾರು ವರ್ಷಗಳ ಸಾವಿನ ಪ್ರಮಾಣ ನೋಡಿದರೆ 4 ರಿಂದ 5% ಇದೆ. ಜಯದೇವ ಆಸ್ಪತ್ರೆ ರಾಜ್ಯಕ್ಕೆ ಮಾತ್ರವಲ್ಲ ದೇಶಕ್ಕೆ ಮಾದರಿಯಾಗಿದೆ. ಸಾವಿನ ಬಗ್ಗೆ ಲೋಪ, ದೋಷ ಇದ್ದರೆ ವೈದ್ಯರ ಬಳಿ ಕೇಳಿ ಮಾಹಿತಿ ಕೊಡುತ್ತೇವೆ. ಸಾವಿನ ಬಗ್ಗೆ ನಿಖರ ಮಾಹಿತಿ ಕೇಳಿದ್ದೇನೆ. ಅವಲೋಕನ ಮಾಡುವಂತೆ ವೈದ್ಯರಿಗೆ ಹೇಳಿದ್ದೇನೆ ಎಂದರು.

ಇದನ್ನೂ ಓದಿ: ಏಕಾಏಕಿ ಕುಸಿದು ಬಿದ್ದು ಬಾಡಿ ಬಿಲ್ಡರ್ ಸಾವು: ಹೆತ್ತ ತಾಯಿ ಕಣ್ಣೆದುರೇ ಮಗನ ದುರಂತ ಅಂತ್ಯ!

ಜಯದೇವ ಆಸ್ಪತ್ರೆ ವಿರುದ್ಧ ತಪ್ಪು ಮಾಹಿತಿ ರವಾನೆಯಾದರೆ ಖಾಸಗಿ ಆಸ್ಪತ್ರೆಗಳಿಗೆ ಲಾಭವಾಗುತ್ತದೆ. ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಕೊಡುವುದನ್ನ ನಾವು ಮಾಡಿದ್ದೇವೆ. ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತ ಚಿಕಿತ್ಸೆ ಕೊಡುತ್ತೇವೆ. ಕಲಬುರಗಿ, ಮೈಸೂರು ಎಲ್ಲವನ್ನೂ ಬೆಂಗಳೂರಿನಿಂದ ನಿರ್ವಹಣೆ ಮಾಡುತ್ತೇವೆ. ಹೀಗಾಗಿ ಕಲಬುರ್ಗಿ ಹಾಗೂ ಮೈಸೂರು ಜಯದೇವ ಆಸ್ಪತ್ರೆಗಳಿಗೆ ಸ್ವತಂತ್ರ ನಿರ್ಧಾರ ಕೈಗೊಳ್ಳಲು, ತೀರ್ಮಾನ ಮಾಡಲು ಅಧಿಕಾರ ಕೊಡಲು ತೀರ್ಮಾನ ಮಾಡಿದ್ದೇವೆ. ಕೆಲ ನಿರ್ಧಾರಗಳನ್ನು ಸ್ಥಳೀಯವಾಗಿಯೇ ಕೈಗೊಳ್ಳಬೇಕಿದೆ. ಇನ್ನೆರಡು ತಿಂಗಳಲ್ಲಿ ಸಿಬ್ಬಂದಿಗಳ ಕೊರತೆ ನಿವಾರಣೆಯಾಗುತ್ತದೆ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತಮಿಳುನಾಡು ಸಿಎಂ ದಳಪತಿ ವಿಜಯ್ ಭೇಟಿಯಾದ ನಟಿ ಸಮಂತಾ ರುತ್ ಪ್ರಭು – Kannada News | Samantha meets Tamil Nadu CM Thalapathy Vijay in Chennai ahead of Maa Inti Bangaram release

ಬಹುಭಾಷಾ ನಟಿ ಸಮಂತಾ ರುತ್ ಪ್ರಭು (Samantha) ಅವರು ಬುಧವಾರ (ಜೂನ್ 17) ಚೆನ್ನೈನಲ್ಲಿ ತಮಿಳುನಾಡಿನ ನೂತನ ಮುಖ್ಯಮಂತ್ರಿ ದಳಪತಿ ವಿಜಯ್ ಅವರನ್ನು ಭೇಟಿಯಾಗಿದ್ದಾರೆ. ಇತ್ತೀಚೆಗಷ್ಟೇ ರಾಜಕೀಯ ರಂಗ ಪ್ರವೇಶಿಸಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ವಿಜಯ್ (CM Vijay) ಅವರನ್ನು ಭೇಟಿ ಮಾಡಿದ ಫೋಟೋಗಳನ್ನು ಸಮಂತಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅವರ ಬಗ್ಗೆ ದೀರ್ಘವಾದ ಪೋಸ್ಟ್ ಬರೆದುಕೊಂಡಿದ್ದಾರೆ. ‘ಮಾ ಇಂಟಿ ಬಂಗಾರಂ’ (Maa Inti Bangaram) ಸಿನಿಮಾದ ಪ್ರಚಾರ ಕಾರ್ಯಗಳ ನಡುವೆ ಅವರು ಈ ಭೇಟಿ ಮಾಡಿದ್ದಾರೆ.

ವಿಜಯ್ ಅವರೊಂದಿಗೆ ಇರುವ ಎರಡು ಸುಂದರ ಫೋಟೋಗಳನ್ನು ಹಂಚಿಕೊಂಡಿರುವ ಸಮಂತಾ, ತಮಿಳುನಾಡಿನ ಮುಖ್ಯಮಂತ್ರಿಯಾಗಿ ಸಿನಿಮಾ ರಂಗದ ತಮ್ಮ ಹಳೆಯ ಸಹ-ನಟನನ್ನು ನೋಡಿದಾಗ ಆದ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ‘ಇಂದು ನಾನು ಚೆನ್ನೈನಲ್ಲಿ ಕಾಲಿಟ್ಟಾಗ ಮನಸ್ಸಿನಲ್ಲಿ ಅಪಾರ ಸಂತೋಷ ಮೂಡಿತು. ನಾನು ನಮ್ಮ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಹೊರಟಿದ್ದೆ. ವಿಜಯ್ ಸರ್ ಕೇವಲ ಬೆಳ್ಳಿಪರದೆಯ ಮೇಲಿನ ಹೀರೋ ಆಗಿರಲು ಮಾತ್ರ ಸೀಮಿತವಲ್ಲ ಎಂದು ನನಗೆ ಯಾವಾಗಲೂ ಅನಿಸುತ್ತಿತ್ತು. ಅವರ ಎನರ್ಜಿ, ಅವರ ವ್ಯಕ್ತಿತ್ವ ಮತ್ತು ಅವರ ಪರವಾಗಿ ಜನರು ತೋರುವ ಪ್ರೀತಿಯನ್ನು ನೋಡಿದಾಗ, ಅವರು ಇದಕ್ಕಿಂತ ದೊಡ್ಡ ಸಾಧನೆಗಾಗಿಯೇ ಬಂದಿದ್ದಾರೆ ಅಂತ ಭಾವಿಸಿದ್ದೆ’ ಎಂದು ಸಮಂತಾ ಬರೆದಿದ್ದಾರೆ.

‘ತಾವು ಈಗಾಗಲೇ ಸಂಪೂರ್ಣ ಹಿಡಿತ ಸಾಧಿಸಿರುವ, ಉತ್ತುಂಗದಲ್ಲಿರುವ ಕ್ಷೇತ್ರವನ್ನು (ಸಿನಿಮಾ ರಂಗ) ಬಿಟ್ಟು, ತಮಗೆ ಹೊಸದಾದ, ದೊಡ್ಡ ಸವಾಲುಗಳು ಹಾಗೂ ಜವಾಬ್ದಾರಿಗಳಿರುವ ರಾಜಕೀಯ ರಂಗಕ್ಕೆ ಕಾಲಿಡಲು ಬಹಳ ಧೈರ್ಯ ಬೇಕು. ವಿಜಯ್ ಸರ್ ಆ ಧೈರ್ಯ ತೋರಿದ್ದಾರೆ. ಅವರು ಕೇವಲ ಒಂದು ಹುದ್ದೆಯಲ್ಲಿದ್ದಾರೆ ಎನ್ನುವುದಕ್ಕಿಂತ, ಅವರು ಯಾವ ಉದಾತ್ತ ಉದ್ದೇಶದಿಂದ ಈ ಕ್ಷೇತ್ರಕ್ಕೆ ಬಂದಿದ್ದಾರೆ ಎನ್ನುವುದು ಮುಖ್ಯ. ಅವರು ಇದಕ್ಕಿಂತಲೂ ಹೆಚ್ಚಿನದಾಗಿ ಎಲ್ಲರನ್ನೂ ಆಶ್ಚರ್ಯಗೊಳಿಸಲಿದ್ದಾರೆ ಎನ್ನುವ ನಂಬಿಕೆ ನನಗಿದೆ’ ಎಂದು ವಿಜಯ್ ಅವರ ರಾಜಕೀಯ ಯಾನಕ್ಕೆ ಸಮಂತಾ ಶುಭ ಕೋರಿದ್ದಾರೆ.

ಸಿನಿಮಾ ರಂಗದಿಂದ ಬಂದು ತಮಿಳುನಾಡು ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸಿದ ಎನ್.ಟಿ. ರಾಮರಾವ್, ಎಂ.ಜಿ. ರಾಮಚಂದ್ರನ್ ಹಾಗೂ ಜೆ. ಜಯಲಲಿತಾ ಅವರ ಸಾಲಿಗೆ ನಟ ವಿಜಯ್ ಕೂಡ ಸೇರ್ಪಡೆಯಾಗಿದ್ದಾರೆ. 2024ರ ಫೆಬ್ರವರಿಯಲ್ಲಿ ತಮ್ಮ ‘ತಮಿಳಗ ವೆಟ್ರಿ ಕಳಗಂ’ ಪಕ್ಷವನ್ನು ಸ್ಥಾಪಿಸಿದ್ದ ವಿಜಯ್, 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಯಶಸ್ಸು ಸಾಧಿಸಿ ಮುಖ್ಯಮಂತ್ರಿಯಾಗಿ ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ.

ಇದನ್ನೂ ಓದಿ: ವೇದಿಕೆ ಮೇಲೆ ಸಮಂತಾಗೆ ‘ಐ ಲವ್ ಯೂ’ ಹೇಳಲು ನಿರಾಕರಿಸಿದ ಪತಿ ರಾಜ್ ನಿಡಿಮೋರು

ರಾಜಕೀಯ ಪ್ರವೇಶಕ್ಕಾಗಿ ಸಿನಿಮಾ ರಂಗಕ್ಕೆ ವಿದಾಯ ಹೇಳಿರುವ ವಿಜಯ್ ನಟನೆಯ ಕೊನೆಯ ಚಿತ್ರ ‘ಜನ ನಾಯಕನ್’ ಸದ್ಯ ಸೆನ್ಸಾರ್ ಮಂಡಳಿಯ ಒಪ್ಪಿಗೆಗಾಗಿ ಕಾಯುತ್ತಿದೆ. ಸಮಂತಾ ಮತ್ತು ವಿಜಯ್ ಈ ಹಿಂದೆ ಸೂಪರ್ ಹಿಟ್ ಚಿತ್ರಗಳಾದ ‘ಕತ್ತಿ’, ‘ಥೇರಿ’ ಮತ್ತು ‘ಮೆರ್ಸಲ್’ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಈಗ ಇವರಿಬ್ಬರ ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿಧಾನಪರಿಷತ್ ಎಲೆಕ್ಷನ್: ಎಚ್​​​ಡಿಕೆ, ಡಿಕೆ ನಡುವಿನ ಪ್ರತಿಷ್ಠೆಯ ಕಣದಲ್ಲಿ ಗೆಲ್ಲೋರ್ಯಾರು? ಹೇಗಿದೆ ನಂಬರ್ ಗೇಮ್? – Kannada News | Karnataka MLC Poll: 7 seat 8 candidates, What Is HD Kumaraswamy And DK Shivakumar game Plan

ಬೆಂಗಳೂರು, (ಜೂನ್ 17): ಕರ್ನಾಟಕ ವಿಧಾನ ಪರಿಷತ್​​ನ 7 ಸ್ಥಾನಗಳಿಗೆ ನಾಳೆ (ಜೂನ್ 18) ಚುನಾವಣೆ ನಡೆಯಲಿದೆ. ಆದ್ರೆ, ಪರಿಷತ್ ಕಣದಲ್ಲಿ 8ನೇ ಅಭ್ಯರ್ಥಿ ಅಖಾಡಕ್ಕಿಳಿಸಿರುವುದು ಮೇಲ್ಮನೆ ಚುನಾವಣೆ ರಂಗೇರಿದೆ. ಕಾಂಗ್ರೆಸ್ ಪಕ್ಷದ ನಾಲ್ಕು ಅಭ್ಯರ್ಥಿಗಳ ಆಯ್ಕೆ ನಿರಾಯಸವಾಗಿದ್ದು, ಐದನೇ ಅಭ್ಯರ್ಥಿಯ ಗೆಲುವು ಸವಾಲಾಗಿದೆ. ಈ ನಡುವೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನಾಗಿ ಗೋವಿಂದರಾಜು ಅವರನ್ನು ಕಣಕ್ಕಿಳಿಸಿದೆ. ಹೀಗಾಗಿ ಚುನಾವಣೆ ಕಾವು ಪಡೆದುಕೊಂಡಿದ್ದು, ಸಿಎಂ ಡಿಕೆಶಿ, ಕುಮಾರಸ್ವಾಮಿಗೆ ಪ್ರತಿಷ್ಠೆಯಾಗಿದೆ. ಕಾಂಗ್ರೆಸ್​ 5ನೇ ಅಭ್ಯರ್ಥಿ ಕಣಕ್ಕಿಳಿಸೋ ಮೂಲಕ ಕದನ ಕಣ ಮತ್ತಷ್ಟು ರೋಚಕತೆ ಪಡೆದಿದೆ. ಕಾಂಗ್ರೆಸ್​, ಎನ್​ಡಿಎ ಮಧ್ಯೆ ಜಿದ್ದಾಜಿದ್ದಿನ ಫೈಟ್ ಇದ್ದು, ಎರಡೂ ಕಡೆಯ ನಂಬರ್ ಗೇಮ್ ಹೇಗಿದೆ? ಏನೆಲ್ಲಾ ಲೆಕ್ಕಚಾರಗಳು ನಡೆಯುತ್ತಿವೆ ಎನ್ನುವ ಫುಲ್ ಡಿಟೇಲ್ಸ್ ಇಲ್ಲಿದೆ ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗಣಿತ ಪರೀಕ್ಷೆಯಲ್ಲಿ 51 ಅಂಕ ಗಳಿಸಿದ್ದ ಹುಡುಗ ಇವತ್ತು ಭಾರತದ ಅತಿದೊಡ್ಡ ಖಾಸಗಿ ಬಾಹ್ಯಾಕಾಶ ಕಂಪನಿ ಒಡೆಯ – Kannada News | Skyroot Aerospace founder Pawan Kumar Chandana’s inspirational story

ಬೆಂಗಳೂರು, ಜೂನ್ 17: ಒಬ್ಬ ವಿದ್ಯಾರ್ಥಿಯ ನೈಜ ಸಾಮರ್ಥ್ಯವನ್ನು ಪರೀಕ್ಷೆಯಲ್ಲಿ ಆತ ತೆಗೆದುಕೊಳ್ಳುವ ಅಂಕಗಳಿಂದ ಅಳೆಯಲಾಗದು. ಶಾಲೆಗೆ ಹೋಗದವರು, ಪರೀಕ್ಷೆಯಲ್ಲಿ ಫೇಲ್ ಆದವರು ಜೀವನದಲ್ಲಿ ಉನ್ನತ ಹಂತಕ್ಕೆ ಹೋದ ಲೆಕ್ಕವಿಲ್ಲದಷ್ಟು ನಿದರ್ಶನಗಳು ಸಿಗುತ್ತವೆ. ಅಂಥವರಲ್ಲಿ ಒಬ್ಬರು ‘ಸ್ಕೈರೂಟ್ ಏರೋಸ್ಪೇಸ್’ ಕಂಪನಿಯ ಸ್ಥಾಪಕ ಪವನ್ ಕುಮಾರ್ ಚಂದನಾ’. ಇವರು ಗಣಿತ ಪರೀಕ್ಷೆಯಲ್ಲಿ ನೂರಕ್ಕೆ 51 ಅಂಕ ಪಡೆದಿದ್ದರು. ಆದರೆ, ಇವತ್ತು ಗಣಿತವನ್ನೇ ಇವರು ತಮ್ಮ ಸಾಧನೆಯ ತಳಹದಿಯಾಗಿ ಮಾಡಿಕೊಂಡಿದ್ದಾರೆ. ಭಾರತದ ಬಾಹ್ಯಾಕಾಶ ರಂಗದಲ್ಲಿ ಕ್ರಾಂತಿ ಸೃಷ್ಟಿಸುತ್ತಿರುವ ಯುವ ಉದ್ಯಮಿ ಪವನ್ ಕುಮಾರ್ ಚಂದನಾ ಅವರದ್ದು ಸ್ಪೂರ್ತಿದಾಯಕ ಯಶೋಗಾಥೆ. ಭಾರತದ ಅತಿ ದೊಡ್ಡ ಖಾಸಗಿ ರಾಕೆಟ್ ಕಾರ್ಖಾನೆಯ ಮಾಲೀಕನಾಗಿ ಬೆಳೆದ ರೋಚಕ ಕಥೆ ಇದು.

ಗಣಿತದಲ್ಲಿ ಕಡಿಮೆ ಅಂಕದಿಂದ ಐಐಟಿ ಹಾದಿಯವರೆಗೆ

ಪವನ್ ಕುಮಾರ್ ಚಂದನಾ ಅವರ ಯಶಸ್ಸಿನ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಶಾಲಾ ದಿನಗಳಲ್ಲಿ ಅವರು ಗಣಿತ ಪರೀಕ್ಷೆಯೊಂದರಲ್ಲಿ 100 ಕ್ಕೆ ಕೇವಲ 51 ಅಂಕಗಳನ್ನು ಪಡೆದಿದ್ದರು. ಸಾಮಾನ್ಯವಾಗಿ ಇಷ್ಟು ಕಡಿಮೆ ಅಂಕ ಬಂದಾಗ ಅನೇಕರು ಧೃತಿಗೆಡುತ್ತಾರೆ, ಆದರೆ ಪವನ್ ಅದನ್ನು ಸವಾಲಾಗಿ ಸ್ವೀಕರಿಸಿದರು. ಕಠಿಣ ಪರಿಶ್ರಮ ಪಟ್ಟ ಅವರು ಮುಂದೆ ದೇಶದ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾದ ಐಐಟಿ ಖರಗ್‌ಪುರದಲ್ಲಿ (IIT Kharagpur) ಪ್ರವೇಶ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅಲ್ಲಿ ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಹಾಗೂ ಬಿಲ್ಡಿಂಗ್ ಟೆಕ್ನಾಲಜಿಯಲ್ಲಿ ದ್ವಿಪದವಿ (Dual Degree) ಪಡೆದರು.

ಇಸ್ರೋ (ISRO) ವಿಜ್ಞಾನಿಯಾಗಿ ಸೇವೆ

ಐಐಟಿ ಮುಗಿಸಿದ ನಂತರ ಪವನ್ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸೇರಿದರು. ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ (VSSC) ವಿಜ್ಞಾನಿಯಾಗಿ ಕಾರ್ಯನಿರ್ವಹಿಸಿದ ಅವರು, ಭಾರತದ ಹೆಮ್ಮೆಯ ರಾಕೆಟ್‌ಗಳಾದ ಜಿಎಸ್‌ಎಲ್‌ವಿ ಎಂಕೆ-3 (GSLV Mk-III – ಈಗಿನ LVM3) ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಇಸ್ರೋದಲ್ಲಿ ಸಿಕ್ಕ ಅನುಭವ ಅವರಲ್ಲಿದ್ದ ಉದ್ಯಮಿಯಾಗುವ ಕನಸಿಗೆ ದೊಡ್ಡ ರೆಕ್ಕೆಗಳನ್ನು ನೀಡಿತು.

ಇದನ್ನೂ ಓದಿ: ಬೆಂಗಳೂರಿನ ಐಐಎಂ ಕ್ಯಾಂಪಸ್​ನಲ್ಲಿ ಹೊಸ ಕಾಲೇಜು; ಎರಡು ಪದವಿ ಕೋರ್ಸ್​ಗಳು ಆಫರ್; ಟಾಟಾ ಟ್ರಸ್ಟ್ಸ್​ನಿಂದ ಅನುದಾನ

ಇಸ್ರೋ ಕೆಲಸಕ್ಕೆ ರಿಸೈನ್: ‘ಸ್ಕೈರೂಟ್ ಏರೋಸ್ಪೇಸ್’ ಸ್ಥಾಪನೆ

ಭಾರತದ ಖಾಸಗಿ ಬಾಹ್ಯಾಕಾಶ ರಂಗದಲ್ಲಿ ಅಪಾರ ಅವಕಾಶಗಳಿವೆ ಎಂಬುದನ್ನು ಮನಗಂಡ ಪವನ್, 2018 ರಲ್ಲಿ ತಮ್ಮ ಸುರಕ್ಷಿತ ಇಸ್ರೋ ವಿಜ್ಞಾನಿ ಉದ್ಯೋಗಕ್ಕೆ ರಾಜೀನಾಮೆ ನೀಡಿದರು. ತಮ್ಮ ಸಹೋದ್ಯೋಗಿ ನಾಗ ಭರತ್ ಡಾಕಾ ಅವರೊಂದಿಗೆ ಸೇರಿ ಹೈದರಾಬಾದ್‌ನಲ್ಲಿ ‘ಸ್ಕೈರೂಟ್ ಏರೋಸ್ಪೇಸ್’ (Skyroot Aerospace) ಎಂಬ ಸ್ಟಾರ್ಟ್‌ಅಪ್ ಆರಂಭಿಸಿದರು.

ಭಾರತದ ಅತಿ ದೊಡ್ಡ ರಾಕೆಟ್ ಕಾರ್ಖಾನೆಯ ಸಾಧನೆಗಳು

  • ನವೆಂಬರ್ 2022 ರಲ್ಲಿ ಸ್ಕೈರೂಟ್ ಸಂಸ್ಥೆಯು ‘ವಿಕ್ರಮ್-ಎಸ್’ ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು. ಇದರೊಂದಿಗೆ ಬಾಹ್ಯಾಕಾಶಕ್ಕೆ ರಾಕೆಟ್ ಕಳುಹಿಸಿದ ಭಾರತದ ಮೊದಲ ಖಾಸಗಿ ಕಂಪನಿ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಈ ಸಂಸ್ಥೆ ಪಾತ್ರವಾಯಿತು.
  • ಹೈದರಾಬಾದ್‌ನ ಜಿಎಂಆರ್ ಏರೋಸ್ಪೇಸ್ ಪಾರ್ಕ್​ನಲ್ಲಿರುವ ಇವರ ಕಂಪನಿಯ ಮುಖ್ಯ ಕಚೇರಿಯಾದ MAX-Q ಕ್ಯಾಂಪಸ್​ನಲ್ಲಿರುವ ಇವರ ಕಾರ್ಖಾನೆಯು ಭಾರತದ ಅತ್ಯಂತ ದೊಡ್ಡ ಖಾಸಗಿ ರಾಕೆಟ್ ಉತ್ಪಾದನಾ ಸೌಲಭ್ಯವಾಗಿದೆ. ಇಲ್ಲಿ ಅತ್ಯಾಧುನಿಕ 3D ಪ್ರಿಂಟಿಂಗ್ ತಂತ್ರಜ್ಞಾನ ಬಳಸಿ ರಾಕೆಟ್ ಇಂಜಿನ್‌ಗಳನ್ನು ತಯಾರಿಸಲಾಗುತ್ತದೆ.
  • ಪವನ್ ಅವರ ಈ ಅಸಾಧಾರಣ ಸಾಧನೆಯನ್ನು ಗುರುತಿಸಿ ಪ್ರಸಿದ್ಧ ‘ಫೋರ್ಬ್ಸ್’ (Forbes) ಪತ್ರಿಕೆಯು ತನ್ನ “30 ಅಂಡರ್ 30” (30 ವರ್ಷದೊಳಗಿನ ಸಾಧಕರು) ಏಷ್ಯಾ ಪಟ್ಟಿಯಲ್ಲಿ ಇವರ ಹೆಸರನ್ನು ಸೇರಿಸಿತ್ತು.
  • ಅಮೆರಿಕಕ್ಕೆ ಸ್ಪೇಸ್ ಎಕ್ಸ್ ಇದ್ದಂತೆ ಭಾರತಕ್ಕೆ ಸ್ಕೈರೂಟ್ ಎಂದು ಹೇಳುವವರು ಇದ್ದಾರೆ. ಆ ಮಟ್ಟಕ್ಕೆ ಪವನ್ ನೇತೃತ್ವದ ಈ ಕಂಪನಿ ಭರವಸೆ ಮೂಡಿಸಿದೆ.

ಇದನ್ನೂ ಓದಿ: ಸಾಫ್ಟ್‌ವೇರ್ ಮತ್ತು ಸೇವೆಗಳ ರಫ್ತಿನಲ್ಲಿ ಕರ್ನಾಟಕವೇ ಅಗ್ರಗಣ್ಯ: 2025-26ನೇ ಹಣಕಾಸು ವರ್ಷದಲ್ಲಿ 173 ಬಿಲಿಯನ್ ಡಾಲರ್‌ ವಹಿವಾಟು

ಪರೀಕ್ಷೆಯ ಅಂಕಗಳು ಒಬ್ಬ ವ್ಯಕ್ತಿಯ ಸಂಪೂರ್ಣ ಭವಿಷ್ಯ ಅಥವಾ ಅವರ ಬುದ್ಧಿವಂತಿಕೆಯನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂಬುದಕ್ಕೆ ಪವನ್ ಕುಮಾರ್ ಚಂದನಾ ಅವರ ಜೀವನವೇ ಅತ್ಯುತ್ತಮ ಉದಾಹರಣೆ. ದೃಢ ಸಂಕಲ್ಪವಿದ್ದರೆ ಶಾಲಾ ದಿನಗಳಲ್ಲಿ ಸಾಧಾರಣ ವಿದ್ಯಾರ್ಥಿಯಾಗಿದ್ದವರೂ ಜಗತ್ತೇ ಮೆಚ್ಚುವ ಸಾಧನೆ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link