nagaraj11081993

ಬೆಂಗಳೂರು ಕರಗ 2026: ಏನಿದು ಅಲಗು ಸೇವೆ? ವೀರಕುಮಾರರು ಖಡ್ಗದಿಂದ ಎದೆಗೆ ಬಡಿದುಕೊಳ್ಳುವುದರ ಹಿಂದಿದೆ ರೋಚಕ ಇತಿಹಾಸ!

ಬೆಂಗಳೂರು, ಮಾರ್ಚ್​ 31: ಬೆಂಗಳೂರಿನ ಅತ್ಯಂತ ಹಳೆಯ ಮತ್ತು ಸಾಂಪ್ರದಾಯಿಕ ಉತ್ಸವವಾದ ‘ಬೆಂಗಳೂರು ಕರಗ ಶಕ್ತ್ಯೋತ್ಸವ’ಕ್ಕೆ (Karaga Shaktyotsava) ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಧರ್ಮರಾಯಸ್ವಾಮಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಲಕರಿ ನಾರಾಯಣಸ್ವಾಮಿ ಅವರು ಕರಗದ ಪೌರಾಣಿಕ ಹಿನ್ನೆಲೆ ಮತ್ತು ವೀರಕುಮಾರರ ಆಚರಣೆಗಳ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಏನಿದು ಅಲಗು ಸೇವೆ? ಇದರ ಹಿನ್ನೆಲೆ ಏನು? ಪೌರಾಣಿಕ ನಂಬಿಕೆಯಂತೆ, ಚೈತ್ರ ಪೂರ್ಣಿಮೆಯ ಮೂರು ದಿನಗಳ ಮೊದಲು ತಾಯಿ ದ್ರೌಪದಿ ದೇವಿ ಭೂಮಿಗೆ ಬರುತ್ತಾಳೆ ಎಂಬ…

Read More

Video: ನೀಚ ಕೃತ್ಯ: ಸೂಪರ್​ ಮಾರ್ಕೆಟ್​ನಲ್ಲಿ ವಸ್ತುಗಳ ಹುಡುಕುತ್ತಿದ್ದವಳ ಕಿವಿಗೆ ಪ್ಯಾಂಟ್ ಸಡಿಲಿಸಿ ಗುಪ್ತಾಂಗ ತಾಗಿಸಿದ ವ್ಯಕ್ತಿ

ಲಾಸ್ ಏಂಜಲೀಸ್, ಮಾರ್ಚ್​ 31: ಎಂಥಾ ನೀಚ ಕೃತ್ಯ, ಸಾರ್ವಜನಿಕ ಸ್ಥಳಗಳಲ್ಲೇ ಎಲ್ಲರೆದುರೇ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿರುವುದು ಆತಂಕಕಾರಿ ಸಂಗತಿ. ಲಾಸ್ ಏಂಜಲೀಸ್​ನ ಸೂಪರ್ ಮಾರ್ಕೆಟ್​ನಲ್ಲಿ ವ್ಯಕ್ತಿಯೊಬ್ಬ ಯುವತಿಗೆ ಲೈಂಗಿಕ ಕಿರುಕುಳ(Physical Harassment) ನೀಡಿರುವ ಘಟನೆ ವರದಿಯಾಗಿದೆ. ವಿಡಿಯೋ ಕೂಡ ವೈರಲ್ ಆಗಿದ್ದು, ಆತನ ಕೃತ್ಯದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸೂಪರ್ ಮಾರ್ಕೆಟ್​​ನಲ್ಲಿ ವ್ಯಕ್ತಿಯೊಬ್ಬ ಪ್ಯಾಂಟ್ ಸಡಿಲಿಸಿ ಗುಪ್ತಾಂಗವನ್ನು ಯುವತಿಯೊಬ್ಬಳ ಕಿವಿಗೆ ತಾಗಿಸಿರುವ ಘಟನೆ ಇದಾಗಿದೆ. ಲಾಸ್ ಏಂಜಲೀಸ್ ಕೌಂಟಿಯ ಹೋಲ್ ಫುಡ್ಸ್…

Read More

ವಿಜಯಲಕ್ಷ್ಮೀ ರಂಭಾ ಆಗಿದ್ದು ಹೇಗೆ? ಕಂಬ್ಯಾಕ್​​​ಗೆ ನಡೆದಿದೆ ಪ್ಲ್ಯಾನ್

ನಟಿ ರಂಭಾ ಅವರು ಈಗ ವಿದೇಶದಲ್ಲಿ ಸೆಟಲ್ ಆಗಿದ್ದಾರೆ. 90ರ ದಶಕದಲ್ಲಿ ಮಿಂಚಿದ್ದ ಅವರು ಈಗ ಚಿತ್ರರಂಗದಿಂದ ಸಂಪೂರ್ಣವಾಗಿ ಹಿಂದೆ ಸರಿದಿದ್ದಾರೆ. ಅವರು ಮತ್ತೆ ಬಣ್ಣದ ಲೋಕಕ್ಕೆ ಮರಳಬೇಕು ಎಂದು ಕನಸು ಕಾಣುತ್ತಿದ್ದಾರೆ. ಹಾಗಾದರೆ ರಂಭಾ ಅವರು ಯಾರು? ಅವರ ನಿಜವಾದ ಹೆಸರು ಏನು? ಆ ಬಗ್ಗೆ ಈ ಸ್ಟೋರಿಯಲ್ಲಿ ಇದೆ ಉತ್ತರ. ರಂಭಾ ಅವರ ನಿಜವಾದ ಹೆಸರು ವಿಜಯಲಕ್ಷ್ಮಿ. ಸಿನಿಮಾ ರಂಗಕ್ಕೆ ಕಾಲಿಟ್ಟ ಬಳಿಕ ಅವರು ಹೆಸರನ್ನು ರಂಭಾ ಎಂದು ಬದಲಿಸಿಕೊಂಡರು. ರಂಭಾ ಕನ್ನಡದಲ್ಲಿ ರವಿಚಂದ್ರನ್…

Read More

Bengaluru Karaga: ಇಂದು ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯೋತ್ಸವ; ಹಸಿ ಕರಗ ಹೊತ್ತು ದ್ರೌಪದಿ ದೇವಿ ದರ್ಶನ!

ಬೆಂಗಳೂರು, ಮಾರ್ಚ್​ 31: ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವವು ಪ್ರತಿ ವರ್ಷದಂತೆ ಈ ಬಾರಿಯೂ ಸಡಗರದಿಂದ ನಡೆಯಲು ಸಿದ್ಧವಾಗಿದೆ. ಧರ್ಮರಾಯಸ್ವಾಮಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಲಕರಿ ನಾರಾಯಣಸ್ವಾಮಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಚೈತ್ರ ಹುಣ್ಣಿಮೆಗೆ ಮೂರು ದಿನಗಳ ಮೊದಲು ದ್ರೌಪದಿ ದೇವಿ ಭೂಮಿಗೆ ಬರುವ ನಂಬಿಕೆ ಈ ಉತ್ಸವದ ಪ್ರಮುಖ ಅಂಶವಾಗಿದೆ. ಈ ಆಚರಣೆಗೆ ಮಹಾಭಾರತ ಕಾಲದ ಇತಿಹಾಸವಿದೆ. ಪಾಂಡವರ ಸ್ವರ್ಗಾರೋಹಣದ ಸಂದರ್ಭದಲ್ಲಿ ತಾಯಿ ದ್ರೌಪದಿ ದೇವಿ ಮೂರ್ಛೆ ಹೋದಾಗ, ತಿಮಿರಾಸುರ ಎಂಬ…

Read More

Karnataka 1st PUC Result 2026: ಪ್ರಥಮ ಪಿಯುಸಿ ಫಲಿತಾಂಶ ಚೆಕ್ ಮಾಡಲು, ಅಂಕಪಟ್ಟಿ ಡೌನ್‌ಲೋಡ್ ಇಲ್ಲಿದೆ ಲಿಂಕ್

ಬೆಂಗಳೂರು, ಮಾರ್ಚ್​ 31: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) 2026ನೇ ಸಾಲಿನ ಪ್ರಥಮ ಪಿಯುಸಿ (1st PUC) ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಇಂದು ಅಧಿಕೃತವಾಗಿ ಪ್ರಕಟಿಸುತ್ತಿದೆ. ರಾಜ್ಯಾದ್ಯಂತ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ನಡೆದಿದ್ದ ಪರೀಕ್ಷೆಗೆ ಹಾಜರಾಗಿದ್ದ ಲಕ್ಷಾಂತರ ವಿದ್ಯಾರ್ಥಿಗಳು ಫಲಿತಾಂಶವನ್ನು ಆನ್‌ಲೈನ್ ಮೂಲಕ ವೀಕ್ಷಿಸಬಹುದಾಗಿದೆ. ವಿದ್ಯಾರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ karresults.nic.in ಗೆ ಭೇಟಿ ನೀಡಿ, ತಮ್ಮ ರಿಜಿಸ್ಟರ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸುವ ಮೂಲಕ ಅಂಕಪಟ್ಟಿಯನ್ನು ಪಡೆಯಬಹುದು. ಫಲಿತಾಂಶದ…

Read More

Hindu Rituals: ಪೂಜೆ, ಹವನ ಅಥವಾ ಅಭಿಷೇಕಗಳಲ್ಲಿ ಹಸುವಿನ ಹಾಲು ಇರಲೇಬೇಕು ಏಕೆ ಗೊತ್ತಾ?

ಹಿಂದೂ ಧರ್ಮದ ಪೂಜೆ, ಹವನ ಮತ್ತು ಅಭಿಷೇಕಗಳಂತಹ ಧಾರ್ಮಿಕ ವಿಧಿಗಳಲ್ಲಿ ಹಾಲಿಗೆ ವಿಶೇಷ ಸ್ಥಾನವಿದೆ. ನೀರ ಅಭಿಷೇಕ, ಪಂಚಾಮೃತ ಅಭಿಷೇಕ ಸೇರಿದಂತೆ ಅನೇಕ ರೀತಿಯ ಅಭಿಷೇಕಗಳಲ್ಲಿ ಹಾಲು, ಅದರಲ್ಲೂ ಶುದ್ಧವಾದ ಹಸುವಿನ ಹಾಲನ್ನು ಹೆಚ್ಚು ಪ್ರಾಶಸ್ತ್ಯಪೂರ್ಣವೆಂದು ಪರಿಗಣಿಸಲಾಗುತ್ತದೆ. ನಮ್ಮ ಸಂಪ್ರದಾಯಗಳಲ್ಲಿ ಕ್ಷೀರವನ್ನು ಅಮೃತಕ್ಕೆ ಸಮಾನವೆಂದು ಬಣ್ಣಿಸಲಾಗಿದೆ. ಈ ಅಮೃತ ಸಮಾನವಾದ ಹಾಲಿನಲ್ಲಿ ಭಗವಂತನ ಶಕ್ತಿಗಳನ್ನು ಆಕರ್ಷಿಸುವ ಮತ್ತು ಗ್ರಹಿಸುವ ಶಕ್ತಿ ಅಡಗಿದೆ ಎಂಬುದು ಧಾರ್ಮಿಕ ನಂಬಿಕೆ. ಪ್ರತಿನಿತ್ಯದ ಪೂಜೆಯಲ್ಲಿ ಹಾಲಿನ ಅವಶ್ಯಕತೆ ಮತ್ತು ಆಧ್ಯಾತ್ಮಿಕ ಪ್ರಯೋಜನಗಳ ಬಗ್ಗೆ…

Read More

ವಿಮಾನದ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನಿಸಿದ್ದಲ್ಲದೆ, ಬಿಟ್ಟುಕಳುಹಿಸಿದ ಪೊಲೀಸರನ್ನೇ ನಿಂದಿಸಿದಾತನ ವಿರುದ್ಧ ಎಫ್​ಐಆರ್

ದೇವನಹಳ್ಳಿ, ಮಾರ್ಚ್ 31: ಸಂಚರಿಸುತ್ತಿದ್ದ ವಿಮಾನದಲ್ಲಿ ತುರ್ತು ನಿರ್ಗಮನದ ಬಾಗಿಲು (Emergency Door) ತೆರೆಯಲು ಯತ್ನಿಸಿ ಆತಂಕ ಸೃಷ್ಟಿಸಿದ್ದ ಮಹಾರಾಷ್ಟ್ರ ಮೂಲದ ಪ್ರಯಾಣಿಕನೊಬ್ಬ, ಬುದ್ಧಿಹೇಳಿ ಬಿಟ್ಟು ಕಳುಹಿಸಿದ ಬೆಂಗಳೂರು (Bangalore) ಏರ್​ಪೋರ್ಟ್​ ಪೊಲೀಸರ ವಿರುದ್ಧವೇ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಸದ್ಯ ಆರೋಪಿಯ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ. ಅಚಾತುರ್ಯದಿಂದ ತಪ್ಪು ಮಾಡಿರಬಹುದು ಎಂದು ಬೆಂಗಳೂರು ಏರ್​ಪೋರ್ಟ್ ಪೊಲೀಸರು ಆತನ ವಿರುದ್ಧ ಎನ್​​ಸಿಆರ್ (Non-Cognizable Report) ಅಥವಾ ಗಂಭೀರವಲ್ಲದ ಪ್ರಕರಣ ದಾಖಲಿಸಿ ಬಿಟ್ಟು ಕಳುಹಿಸಿದ್ದರು. ಆದರೆ,…

Read More

Video: ಇರಾನ್​​ನ ಇಸ್ಫಹಾನ್​ನಲ್ಲಿ ಅಮೆರಿಕ-ಇಸ್ರೇಲ್ ದಾಳಿ, ವಿಡಿಯೋ ಹಂಚಿಕೊಂಡ ಟ್ರಂಪ್

ಟೆಹ್ರಾನ್, ಮಾರ್​ಚ್​ 31: ಇರಾನ್​ನಲ್ಲಿ ಇಂದು(ಮಾರ್ಚ್​31) ಮುಂಜಾನೆ ಭಾರಿ ಸ್ಫೋಟ ಸಂಭವಿಸಿದೆ. ಇರಾನ್​ನ ಇಸ್ಫಹಾನ್​ನಲ್ಲಿ ಇಸ್ರೇಲ್-ಅಮೆರಿಕ ದಾಳಿ ನಡೆಸಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 2.3 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಮತ್ತು ಬದ್ರ್ ಮಿಲಿಟರಿ ವಾಯುನೆಲೆಯ ನೆಲೆಯಾಗಿರುವ ಇರಾನ್ ನಗರವಾದ ಇಸ್ಫಹಾನ್‌ನಲ್ಲಿರುವ ಪ್ರಮುಖ ಶಸ್ತ್ರಾಸ್ತ್ರ ಡಿಪೋದ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ಮಾಡಿವೆ ಎಂದು ವರದಿಗಳು ಹೇಳುತ್ತಿವೆ. ಇರಾನ್​ನ ಪರಮಾಣು ಸೌಲಭ್ಯ, ಜಲಸ್ಥಾವರಗಳನ್ನು ನಾಶಪಡಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ.    …

Read More

ತಂದೆ, ಮಕ್ಕಳಿಗೂ ಸಾಲ ಕೊಟ್ಟಿದ್ದಾರೆ ದಳಪತಿ ವಿಜಯ್; ಟೀಕೆ ಎದುರಿಸಿದ ನಟ

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ದಳಪತಿ ವಿಜಯ್ ಅವರು ಟಿವಿಕೆ ಪಕ್ಷದ ಮೂಲಕ ಸ್ಪರ್ಧೆಗೆ ಇಳಿದಿದ್ದಾರೆ. ಅವರು ಈಗ ಅಫಿಡವಿಟ್ ಸಲ್ಲಿಕೆ ಮಾಡಿದ್ದು, ಇದರಲ್ಲಿ ತಮ್ಮ ಆಸ್ತಿ ವಿವರವನ್ನು ಘೋಷಣೆ ಮಾಡಿದ್ದಾರೆ. ವಿಜಯ್ ಅವರು 603 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಅಫಿಡವಿಟ್ ಅಲ್ಲಿ ಸಾಲ ಕೊಟ್ಟ ವಿವರ ಕೂಡ ಇದೆ. ಇದೇ ವಿಷಯವನ್ನು ಇಟ್ಟುಕೊಂಡು ಕೆಲವರು ಟೀಕೆ ಮಾಡುತ್ತಿದ್ದಾರೆ. ಆದರೆ, ಇದರ ಅಸಲಿಯತ್ತು ಬೇರೆಯದೇ ಇದೆ. ವಿಜಯ್ ಅವರು 603 ಕೋಟಿ ರೂಪಾಯಿ ಆಸ್ತಿಯಲ್ಲಿ 404.58 ಕೋಟಿ…

Read More

‘ಸ್ಮಶಾನಕ್ಕೆ ಕಳುಹಿಸುತ್ತೇವೆ’: ಮೊಬೈಲ್ ವಶಕ್ಕೆ ಪಡೆಯಲು ಬಂದ ಜೈಲು ಸಿಬ್ಬಂದಿಗೆ ಕೈದಿಗಳ ಜೀವ ಬೆದರಿಕೆ!

ಬೆಂಗಳೂರು, ಮಾರ್ಚ್​ 31: ಇತ್ತೀಚೆಗೆ ಪರಪ್ಪನ ಅಗ್ರಹಾರ (Parappana Agrahara) ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಮೊಬೈಲ್ ಬಳಸಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಭಾನುವಾರ ಬೆಳಕಿಗೆ ಬಂದ ಬೆನ್ನಲ್ಲೇ ಹಲವು ಮೊಬೈಲ್ ಫೋನ್​ಗಳನ್ನು ಡ್ರೈನೇಜ್ ಮಾರ್ಗದಲ್ಲಿ ಬಚ್ಚಿಟ್ಟಿದ್ದೂ ತಿಳಿದು ಬಂದಿತ್ತು. ಕಟ್ಟುನಿಟ್ಟಿನ ನಿಯಮಗಳಿದ್ದರೂ ಈ ರೀತಿಯ ಅಕ್ರಮ ನಡೆಯುತ್ತಿರುವುದು ಆತಂಕ ಸೃಷ್ಟಿಸಿದೆ. ಅಷ್ಟೇ ಅಲ್ಲದೆ ಈ ಮೊಬೈಲ್​ಗಳನ್ನು ವಶಪಡಿಸಿಕೊಳ್ಳಲು ಮುಂದಾದ ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿರುವುದೂ ತಿಳಿದುಬಂದಿದೆ. ಹತ್ತು ದಿನಗಳಲ್ಲಿ 21 ಮೊಬೈಲ್ ಪತ್ತೆ, ಡಿಜಿಪಿ…

Read More