ಸಿಎಸ್ಕೆಗೆ ದುಸ್ವಪ್ನವಾದ ಜಡೇಜಾ; ವಿಕೆಟ್ ತೆಗೆದು ಗನ್ ಶಾಟ್ ಸೆಲೆಬ್ರೇಷನ್
ರವೀಂದ್ರ ಜಡೇಜಾ ಅವರಿಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಡುವೆ ಅವಿನಾಭಾವ ಸಂಬಂಧ ಇತ್ತು. ಜಡೇಜಾ ಎಂದರೆ ನೆನಪಾಗುತ್ತಿದ್ದುದು ಸಿಎಸ್ಕೆ. ಆದರೆ, ಸಿಎಸ್ಕೆ ತಂಡ ಸಂಜು ಸ್ಯಾಮ್ಸನ್ ಅವರನ್ನು ಖರೀದಿ ಮಾಡಲು ಜಡೇಜಾ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಬಿಟ್ಟುಕೊಟ್ಟಿತು. ಈ ವಿಷಯ ಜಡೇಜಾಗೆ ನೋವು ತರಿಸಿದ್ದಿರಬಹುದು. ಹೀಗಾಗಿ, ಸಿಎಸ್ಕೆ ವಿರುದ್ಧ ಮಾರಕ ಬೌಲಿಂಗ್ ದಾಳಿ ಮಾಡಿ, ಎರಡು ವಿಕೆಟ್ ಪಡೆದು ಅವರು ಭರ್ಜರಿ ಸೆಲೆಬ್ರೇಷನ್ ಮಾಡಿದರು. ಮೂರು ಓವರ್ ಎಸೆದ ಜಡೇಜಾ, ಎರಡು ವಿಕೆಟ್ ಕಿತ್ತು…