All posts by nagaraj11081993

Personality Test: ಕಾಲ್ಬೆರಳುಗಳಲ್ಲಿ ಕೂದಲಿದ್ದರೆ ಏನರ್ಥ ಗೊತ್ತಾ? – Kannada News | Personality Test: Do you know what it means to have hair on your toes?

ವ್ಯಕ್ತಿತ್ವ ಪರೀಕ್ಷೆImage Credit source: Getty Images

ಜ್ಯೋತಿಷ್ಯಶಾಸ್ತ್ರ, ಸಂಖ್ಯಾಶಾಸ್ತ್ರದ ಮೂಲಕ ಒಬ್ಬ ವ್ಯಕ್ತಿಯ ಭವಿಷ್ಯ, ವ್ಯಕ್ತಿತ್ವವನ್ನು (Personality) ತಿಳಿದುಕೊಳ್ಳುವಂತೆ ದೇಹ ರಚನೆ ಮತ್ತು ದೇಹಾಕಾರದ ಮೂಲಕವೂ ವ್ಯಕ್ತಿಯ  ಭವಿಷ್ಯ,  ಆತನ ವೈಯಕ್ತಿಕ ಮತ್ತು ವೃತ್ತಿಪರ ಜೀವನ ಹೇಗಿರುತ್ತದೆ ಎಂಬುದನ್ನು ತಿಳಿಯಬಹುದು. ಹೌದು ಕಾಲ್ಬೆರಳುಗಳ ಆಕಾರದಿಂದ ಹಿಡಿದು ದೇಹದ ಮೇಲೆ ಇರುವಂತಹ ಮಚ್ಚೆಯ ವರೆಗೆ, ದೇಹದ ಸಣ್ಣ ವಿವರಗಳು ಸಹ ನಮ್ಮ ವ್ಯಕ್ತಿತ್ವದ ಹಲವು ಅಂಶಗಳನ್ನು ಬಹಿರಂಗಪಡಿಸುತ್ತವೆ. ನೀವು ಕೂಡ ಹಣೆಯ ಆಕಾರ, ಕಣ್ಣುಗಳ ಬಣ್ಣ, ಮೂಗು, ಕಿವಿ, ಕಾಲ್ಬೆರಳುಗಳ ಆಕಾರದ ಮೂಲಕ ನಿಮ್ಮ ವ್ಯಕ್ತಿತ್ವದ ರಹಸ್ಯವನ್ನು ತಿಳಿದಿರಬಹುದಲ್ವಾ. ಅದೇ ರೀತಿ ಇಂದಿನ ಈ ಪರ್ಸನಾಲಿಟಿ ಟೆಸ್ಟ್‌ನಲ್ಲಿ ಕಾಲ್ಬೆರಳುಗಳಲ್ಲಿ ಕೂದಲನ್ನು ಹೊಂದಿರುವ ವ್ಯಕ್ತಿಗಳ ವ್ಯಕ್ತಿತ್ವದ ರಹಸ್ಯವನ್ನು ತಿಳಿಯೋಣ.

ಕಾಲ್ಬೆರಳುಗಳಲ್ಲಿ ಕೂದಲಿರುವ ಜನರ ವ್ಯಕ್ತಿತ್ವ ಹೇಗಿರುತ್ತದೆ?

ಅದೃಷ್ಟವಂತರು, ಸ್ವಾವಲಂಬಿಗಳು:

ಯಾರ ಕಾಲ್ಬೆರಳುಗಳ ಮೇಲೆ ಕೂದಲು ಇದೆಯೋ ಅಂತಹ ಜನರು ಬಲವಾದ ಮತ್ತು ಸ್ವಾವಲಂಬಿ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ. ಅಂತಹ ಜನರು ತಮ್ಮದೇ ಆದ ಆಲೋಚನೆ ಮತ್ತು ತೀರ್ಪಿನ ಮೇಲೆ ನಂಬಿಕೆ ಇಡುತ್ತಾರೆ ಮತ್ತು ಇತರರೊಂದಿಗೆ ಆತ್ಮವಿಶ್ವಾಸದಿಂದ ಮಾತನಾಡುತ್ತಾರೆ. ಅಂತಹ ಜನರು ತಮ್ಮ ಸ್ವಂತ ಪ್ರಯತ್ನದ ಮೂಲಕ ಯಶಸ್ಸನ್ನು ಸಾಧಿಸುತ್ತಾರೆ.  ಅದು ಉದ್ಯೋಗವಾಗಿರಲಿ ಅಥವಾ ವ್ಯವಹಾರವಾಗಿರಲಿ, ಅವರು ಯಾವುದೇ ಕ್ಷೇತ್ರದಲ್ಲಿ ಸುಲಭವಾಗಿ ತಮ್ಮ ಖ್ಯಾತಿಯನ್ನು ಗಳಿಸುತ್ತಾರೆ. ಕಾಲ್ಬೆರಳುಗಳ ಮೇಲೆ ಕೂದಲು ಇರುವ ಜನರು ತುಂಬಾ ಸ್ವಾವಲಂಬಿಗಳು. ಅವರು ದೃಢವಾದ ನಿಲುವನ್ನು ಹೊಂದಿರುತ್ತಾರೆ. ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಹಿಂಜರಿಯುವುದಿಲ್ಲ. ಅಂತಹ ಜನರು ಅತ್ಯುತ್ತಮ ನಾಯಕತ್ವದ ಸಾಮರ್ಥ್ಯಗಳನ್ನು ಹೊಂದಿರುತ್ತಾರೆ.

ಇದನ್ನೂ ಓದಿ: ಪುರುಷರೇ… ಇಂತಹ ಹೆಣ್ಣನ್ನು ಯಾವ ಕಾರಣಕ್ಕೂ ಮದುವೆಯಾಗಬೇಡಿ

ಆತ್ಮವಿಶ್ವಾಸ ಹೊಂದಿದವರು:

ಆತ್ಮವಿಶ್ವಾಸದಿಂದ ಕೂಡಿದ ಇವರು ತಮ್ಮ ಮಾತಿನಲ್ಲಿ ಬಹಳ ದೃಢವಾಗಿರುತ್ತಾರೆ ಮತ್ತು ಯಾವುದೇ ವಿಷಯದ ಬಗ್ಗೆ ಬಹಳ ಬೇಗನೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರು ಎಂದಿಗೂ ತಮ್ಮ ಜವಾಬ್ದಾರಿಗಳಿಂದ ಹಿಂದೆ ಸರಿಯುವುದಿಲ್ಲ. ಯಾವುದೇ ವಿಷಯದಲ್ಲಿ ಅವರು ಬಹಳ ಚೆನ್ನಾಗಿ ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.  ಇವರು ಜವಾಬ್ದಾರಿಯನ್ನು ತೆಗೆದುಕೊಳ್ಳುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇವರು ತಂಡ ಅಥವಾ ಕುಟುಂಬದಲ್ಲಿ ನಾಯಕತ್ವದ ಪಾತ್ರಗಳನ್ನು ಬೇಗನೆ ವಹಿಸಿಕೊಳ್ಳುತ್ತಾರೆ. ಇವರ ನಿರ್ಧಾರಗಳು ಹೆಚ್ಚಾಗಿ ಸದೃಢ ಮತ್ತು ಪ್ರಾಯೋಗಿಕವಾಗಿರುತ್ತವೆ, ಅದಕ್ಕಾಗಿಯೇ  ಸುತ್ತಲಿನವರು ಇವರನ್ನು ಬೇಗನೇ ನಂಬುತ್ತಾರೆ.

ಇವರಿಗೆ ಆಧ್ಯಾತ್ಮಿಕತೆಯ ಕಡೆಗೆ ಬಲವಾದ ಒಲವು ಇರುತ್ತದೆ. ಇವರ ಆಲೋಚನೆಗಳು ತುಂಬಾ ಆಳವಾದವು ಮತ್ತು ಅವರು ಏನನ್ನಾದರೂ ಅರ್ಥಮಾಡಿಕೊಳ್ಳುವ ದೊಡ್ಡ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇನ್ನೂ ಯಾರ ಕಾಲ್ಬೆರಳ ಕೂದಲು ತುಂಬಾ ದಪ್ಪ ಅಥವಾ ಒರಟಾಗಿರುತ್ತದೋ  ಅಂತಹವರು ಸ್ವಲ್ಪ ಸೊಕ್ಕಿನವರಾಗಿರುತ್ತಾರೆ. ಅವರು ಅತಿಯಾದ ಕೋಪವನ್ನು ಹೊಂದಿರುತ್ತಾರೆ, ಇದು ಕೆಲವೊಮ್ಮೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾಪತ್ತೆಯಾಗಿದ್ದ ದಲಿತ ಮಹಿಳೆ ಮೂರು ದಿನದ ಬಳಿಕ ಶವವಾಗಿ ಪತ್ತೆ: ಸಾವಿನ ಸುತ್ತ ಹತ್ತಾರು ಅನುಮಾನ – Kannada News | Tumakuru Woman Found Dead: Missing Chennamma’s Decomposed Body Sparks Murder Probe

ತುಮಕೂರು, ಮೇ 10: ನಾಪತ್ತೆಯಾಗಿದ್ದ ಮಹಿಳೆ ಮೂರು ದಿನಗಳ ಬಳಿಕ ಶವವಾಗಿ ಪತ್ತೆಯಾಗಿರುವ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ. ತಿಪಟೂರು ತಾಲ್ಲೂಕಿನ ಮಾರಗೊಂಡನಹಳ್ಳಿ ನಿವಾಸಿ ಚೆನ್ನಮ್ಮ ಮೃತ ದುದೈವಿಯಾಗಿದ್ದು, ಗ್ರಾಮದ ವ್ಯಕ್ತಿಯೋರ್ವರ ತೆಂಗಿನ ತೋಟದಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಚೆನ್ನಮ್ಮರದ್ದು ಅಸಹಜ ಸಾವೋ ಅಥವಾ ಕೊಲೆಯೋ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದ್ದು, ಆ ಬಳಿಕವೇ ಸಾವಿನ ಹಿಂದಿನ ಸತ್ಯ ಬಯಲಾಗಬೇಕಿದೆ.

ಮುಖ್ಯಾಂಶಗಳು

  • ನಾಪತ್ತೆಯಾಗಿದ್ದ ಮಹಿಳೆ ಮೂರು ದಿನಗಳ ಬಳಿಕ ಶವವಾಗಿ ಪತ್ತೆ
  • ತಿಪಟೂರಿನ ಮಾರಗೊಂಡನಹಳ್ಳಿ ನಿವಾಸಿ ಚೆನ್ನಮ್ಮ ಮೃತ ಮಹಿಳೆ
  • ತೆಂಗಿನ ತೋಟದಲ್ಲಿ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿರುಬ ಶವ

ಪತಿ ಹಾಗೂ ಮಕ್ಕಳೊಂದಿಗೆ ಗ್ರಾಮದಲ್ಲಿ ವಾಸವಿದ್ದ ಚೆನ್ನಮ್ಮ ಮೇ 7ರ ಸಂಜೆ 5.30ರ ವೇಳೆಗೆ ಮನೆಯಿಂದ ಹೊರ ಹೋಗಿದ್ದವಳು ಮರಳಿ ಬಂದಿರಲಿಲ್ಲ. ಆಕೆಗಾಗಿ ಮೂರು ದಿನಗಳ ಕಾಲ ಕುಟುಂಬಸ್ಥರು ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈ ನಡುವೆ ಯಾರ ಸಹವಾಸಕ್ಕೂ ಹೊಗದ ಚೆನ್ನಮ್ಮ ಶವ ಪತ್ತೆಯಾಗಿರೋದು ಕುಟುಂಬಸ್ಥರಿಗೆ ಬರ ಸಿಡಿಲು ಬಡಿದಂತಾಗಿದೆ. ಕೂಡಲೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ದೇಹದ ಮೇಲಿದ್ದ ಆಭರಣ ಕೂಡ ಹಾಗೆಯೇ ಇರೋದು ಕಂಡುಬಂದಿದೆ. ಹೀಗಿದ್ದರೂ ಈಕೆಯ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಇದೊಂದು ಉದ್ದೇಶ ಪೂರ್ವಕ ಕೊಲೆ ಎಂದು ದೂರಿದ್ದಾರೆ.

ಇದನ್ನೂ ಓದಿ: ಅತ್ತೆ ಜೊತೆ ಅಳಿಯನ ಅಕ್ರಮ ಸಂಬಂಧಕ್ಕೆ ಹೋಗಿದ್ದು ಮೂರು ಜೀವ!; ತುಮಕೂರಲ್ಲಿ ದಾರುಣ ಘಟನೆ

ಅಸಲಿಗೆ ಕೆಲ ವರ್ಷಗಳಿಂದ ಊರಿನಲ್ಲಿ ದಲಿತರು ಹಾಗೂ ಸವರ್ಣೀಯರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಇದಕ್ಕೆ ಕಾರಣ ನಾಲ್ಕು ವರ್ಷದ ಹಿಂದೆ‌ ಇದೇ ಊರಿನ ದೇವಸ್ಥಾನದೊಳಗೆ ದಲಿತರ ಪ್ರವೇಶ. ಇದಾದ ಬಳಿಕ ದಲಿತರ ಉದ್ದೇಶ ಪೂರ್ವಕವಾಗಿ ತುಳಿಯುವ ಪ್ರಯತ್ನ ಗ್ರಾಮದಲ್ಲಿ ಕೆಲವರಿಂದ ಆಗುತ್ತಿದೆ ಎಂದು ಆರೋಪ ಸಹ ಕೇಳಿ ಬಂದಿದೆ. ಮೃತ ಚೆನ್ನಮ್ಮ ದಲಿತ ಮಹಿಳೆಯಾಗಿದ್ದು, ಮೇಲ್ವರ್ಗದವರ ಜಮೀನಿನೊಳಗೆ ಬಂದಿದ್ದಾಳೆಂದು ಕೊಲೆ ಮಾಡಿರಬಹುದೆಂಬ ಆರೋಪ ಮಾಡಲಾಗಿದೆ. ಆದರೆ ಸ್ಥಳಕ್ಕೆ ಭೇಟಿ ನೀಡಿದ್ದ ಹೊನ್ನವಳ್ಳಿ ಪೊಲೀಸರ ಸಹಿತ ಮೇಲಾಧಿಕಾರಿಗಳು ಇದು ಅಸಹಜ ಸಾವೆಂದು ಅನುಮಾನಿಸಿದ್ದಾರೆ. ತೋಟಕ್ಕೆ ಬಂದ ಆಕೆ ಹಾವು ಕಚ್ಚಿಯೋ ಅಥವಾ ದಿಬ್ಬದಿಂದ ಕುಸಿದು ನೆಲಕ್ಕೆ ಬಿದ್ದೋ ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ನಡುವೆಯೂ ಕುಟುಂಬಸ್ಥರ ಆರೋಪ ಹಿನ್ನೆಲೆ ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೊತ್ತರ ಪರಿಕ್ಷೆಗೆ ರವಾನಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ವಿಜಯ್ ಮಂತ್ರಿಮಂಡಲ; ಎಂಜಿಆರ್ ಒಡನಾಡಿ, ವೈದ್ಯ, ಸಂಘಟನಾ ಚತುರ, ಯುವತಿ, ಚಿತ್ರ ನಟ ಮೊದಲಾದವರು… – Kannada News | Actor Vijay’s TVK Cabinet: Meet the 9 Ministers Shaping Tamil Nadu’s Future

ಚೆನ್ನೈ, ಮೇ 10: ನಟ ವಿಜಯ್ (TN CM Vijay) ತಮಿಳುನಾಡು ರಾಜಕೀಯ ಇತಿಹಾಸದಲ್ಲಿ ಹೊಸ ಶಕೆ ಆರಂಭಿಸಿದ್ದಾರೆ. ಚೊಚ್ಚಲ ಪ್ರಯತ್ನದಲ್ಲೇ ಅವರ ಟಿವಿಕೆ ಪಕ್ಷ ಭರ್ಜರಿಯಾಗಿ ಗೆದ್ದು, ಸರ್ಕಾರ ಕೂಡ ರಚಿಸಿದೆ. ವಿಜಯ್ ಸಿಎಂ ಆಗಿ ಅಧಿಕಾರ ಪಡೆದಿದ್ದಾರೆ. ಅವರ ಜೊತೆ 9 ಮಂದಿ ಟಿವಿಕೆ ಶಾಸಕರು ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿಜಯ್ ಅವರ ಆರಂಭಿಕ ಮಂತ್ರಿಮಂಡಲದಲ್ಲಿ ಅನುಭವ, ಸಾಮರ್ಥ್ಯ, ಉತ್ಸಾಹ ಎಲ್ಲವೂ ಮಿಳಿತಗೊಂಡಿವೆ.

1. ಬಹಳ ಅನುಭವಿ ಕೆಎ ಚೆಂಗೋಟ್ಟೈಯನ್

ಕೆ.ಎ. ಚೆಂಗೋಟ್ಟೈಯನ್ ಅವರು ಸದ್ಯ ವಿಜಯ್ ಮಂತ್ರಿಮಂಡಲದಲ್ಲಿ ಇರುವ ಅತ್ಯಂತ ಅನುಭವಿ ರಾಜಕಾರಣಿ. ಇವರು ಮಾಜಿ ಮುಖ್ಯಮಂತ್ರಿಗಳಾದ ಎಂಜಿಆರ್ ಮತ್ತು ಜಯಲಲಿತಾ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದವರು. ಎಐಎಡಿಎಂಕೆಯ ನಾಯಕರಾಗಿದ್ದವರು. ಹಲವು ಬಾರಿ ಸಚಿವರೂ ಆಗಿದ್ದರು. ಆದರೆ, ಆ ಪಕ್ಷದಿಂದ ಉಚ್ಛಾಟನೆಗೊಂಡಿದ್ದ ಹಿನ್ನೆಲೆಯಲ್ಲಿ ಟಿವಿಕೆ ಅನ್ನು ಸೇರಿದ್ದರು. ಈಗ ಅವರು ದೊಡ್ಡ ಸಚಿವ ಸ್ಥಾನ ಪಡೆಯುವ ನಿರೀಕ್ಷೆ ಇದೆ.

2. ಟಿವಿಕೆ ಗೆಲುವಿನ ಹಿಂದಿನ ತಂತ್ರಗಾರ ಆಧವ್ ಅರ್ಜುನ

ಟಿವಿಕೆ ಸಂಘಟನೆಯನ್ನು ಗಟ್ಟಿಗೊಳಿಸಲು ಪ್ರಮುಖ ಪಾತ್ರ ವಹಿಸಿದವರು ಆಧವ್ ಅರ್ಜುನ. ಇವರು ಲಾಟರಿ ಬ್ಯುಸಿನೆಸ್​ಮ್ಯಾನ್ ಸಾಂಟಿಯಾಗೊ ಮಾರ್ಟಿನ್ ಅವರ ಅಳಿಯ. ವಿಜಯ್ ಅವರು ನಂಬುವ ತಂತ್ರಗಾರರಲ್ಲಿ ಆಧವ್ ಕೂಡ ಒಬ್ಬರು.

ಇದನ್ನೂ ಓದಿ: ರಾಹುಲ್ ಗಾಂಧಿ ಮಾಡಿದ ಸಾಲು ಸಾಲು ತಪ್ಪುಗಳು… ಅಸ್ಸಾಂ, ಆಂಧ್ರದಂತೆ ತಮಿಳುನಾಡನ್ನೂ ಕಾಂಗ್ರೆಸ್ ಕಳೆದುಕೊಂಡಿತಾ?

3. ಮಾಜಿ ಬಿಜೆಪಿಗ ನಿರ್ಮಲ್ ಕುಮಾರ್

ಬಿಜೆಪಿಯ ಮಾಜಿ ನಾಯಕ ನಿರ್ಮಲ್ ಕುಮಾರ್ ಅವರು ಮದುರೈನ ತಿರುಪರಂಕುಂಡ್ರಂ ಕ್ಷೇತ್ರದಿಂದ ಗೆದ್ದು ಶಾಸಕರಾಗಿ ಈಗ ಮಂತ್ರಿ ಸ್ಥಾನ ಗಿಟ್ಟಿಸಿದ್ದಾರೆ. ಟಿವಿಕೆಯ ಜನಪ್ರಿಯ ಮುಖಗಳಲ್ಲಿ ನಿರ್ಮಲ್ ಕುಮಾರ್ ಕೂಡ ಒಬ್ಬರು.

4. ಪ್ರಧಾನ ಕಾರ್ಯದರ್ಶಿ ಎನ್ ಆನಂದ್

ಚೆನ್ನೈನ ಟಿ ನಗರ್ ಕ್ಷೇತ್ರದಿಂದ ಗೆದ್ದು ಶಾಸಕರಾಗಿ ಈಗ ಮಂತ್ರಿಯಾಗಿರುವ ಎನ್ ಆನಂದ್ ಅಕಾ ಬಸ್ಸಿ ಆನಂದ್ ಅವರು ಪಕ್ಷ ಸಂಘಟನೆಯಲ್ಲಿ ಚತುರರೆನಿಸಿದ್ದಾರೆ. ಟಿವಿಕೆ ಪ್ರಧಾನ ಕಾರ್ಯದರ್ಶಿಯಾಗಿ ಅವರು ಪಕ್ಷವನ್ನು ಬೂತ್ ಮಟ್ಟದಲ್ಲಿ ನೆಲೆಗೊಳಿಸಲು ಮಾಡಿದ್ದ ಪ್ರಯತ್ನ ಯಶಸ್ವಿಯಾಗಿತ್ತು.

5. ವೈದ್ಯ ಮತ್ತು ಮಾಜಿ ಸರ್ಕಾರಿ ಅಧಿಕಾರಿ ಅರುಣ್ ರಾಜ್

ನಾಮಕ್ಕಲ್ ಜಿಲ್ಲೆಯ ತಿರುಚೆಂಗೊಡೆ ಕ್ಷೇತ್ರವನ್ನು ಗೆದ್ದಿರುವ ಕೆ.ಜಿ. ಅರುಣರಾಜ್ ಅವರು ಮೂಲತಃ ವೈದ್ಯರಾಗಿದ್ದಾರೆ. ಹಾಗೆಯೇ, ರಾಜಕೀಯಕ್ಕೆ ಬರುವ ಮುನ್ನ ಐಆರ್​ಎಸ್ ಅಧಿಕಾರಿಯೂ ಆಗಿದ್ದರು. ಆದಾಯ ತೆರಿಗೆ ಇಲಾಖೆಯಲ್ಲಿ ಜಂಟಿ ಆಯುಕ್ತ ಮತ್ತು ಹೆಚ್ಚುವರಿ ಆಯುಕ್ತ ಸ್ಥಾನಗಳನ್ನು ನಿರ್ವಹಿಸುತ್ತಿದ್ದರು.

6. ಸಿನಿಮಾ, ಕಿರುತೆರೆ ನಟ ರಾಜ್ ಮೋಹನ್

ಸಿನಿಮಾ ನಟ ಮತ್ತು ಕಿರುತೆರೆ ನಟರಾದ ರಾಜ್ ಮೋಹನ್ ಅವರಿಗೆ ವಿಜಯ್ ಮಂತ್ರಿಮಂಡಲದಲ್ಲಿ ಸ್ಥಾನ ಸಿಕ್ಕಿದೆ. ಇವರು ಒಳ್ಳೆಯ ವಾಗ್ಮಿ ಎನಿಸಿದ್ದಾರೆ.

7. ವಕೀಲ ಪಿ ವಿಂಕಟರಮಣನ್

ಮೈಲಾಪುರ್ ಕ್ಷೇತ್ರವನ್ನು ಗೆದ್ದಿರುವ ಪಿ ವೆಂಕಟರಮಣನ್ ಅವರು ಸಕ್ರಿಯ ವಕೀಲರಾಗಿರುವವರು. ಅಷ್ಟೇ ಅಲ್ಲ, ವಿಜಯ್ ಅವರ ನಿಷ್ಠಾವಂತರಲ್ಲಿ ಒಬ್ಬರೆನಿಸಿದ್ದಾರೆ. ಕಳೆದ 25 ವರ್ಷಗಳಿಂದಲೂ ಅವರು ವಿಜಯ್​ಗೆ ಮ್ಯಾನೇಜರ್ ಆಗಿದ್ದಾರೆ.

ಇದನ್ನೂ ಓದಿ: ಮೊದಲ ಭಾಷಣದಲ್ಲೇ ಸಾಲದ ಬಗ್ಗೆ ಮಾತಾಡಿದ ತಮಿಳುನಾಡು ಸಿಎಂ ಜೋಸೆಫ್​​ ವಿಜಯ್​​

8. ದಂತ ವೈದ್ಯ ಟಿ.ಕೆ. ಪ್ರಭು

ಶಿವಗಂಗಾ ಜಿಲ್ಲೆಯ ಕಾರೈಕ್ಕುಡಿ ಕ್ಷೇತ್ರದ ಶಾಸಕರಾಗಿರುವ ಟಿ.ಕೆ. ಪ್ರಭು ಅವರು ವೃತ್ತಿಯಲ್ಲಿ ದಂತ ವೈದ್ಯರಾಗಿದ್ದವರು.

9. ಕಿರಿಯ ವಯಸ್ಸಿನ ಎಸ್ ಕೀರ್ತನಾ

ವಿರುದನಗರ್ ಜಿಲ್ಲೆಯ ಶಿವಕಾಶಿ ಕ್ಷೇತ್ರದಲ್ಲಿ ಗೆದ್ದಿರುವ ಎಸ್ ಕೀರ್ತನಾ ಅವರು 1996ರಲ್ಲಿ ಜನಿಸಿದವರು. ಇನ್ನೂ 29-30 ವರ್ಷ ವಯಸ್ಸು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮೋದಿ ಸಂಚರಿಸುವ ರಸ್ತೆ ಬಳಿ ಜಿಲೆಟಿನ್ ಕಡ್ಡಿ ಪತ್ತೆ: ತನಿಖೆ ಬಗ್ಗೆ ಕೇಂದ್ರ ವಲಯ ಡಿಐಜಿ ಮಾಹಿತಿ – Kannada News | Gelatin Sticks Found Near PM Modi’s Route; Central Range DGP Reveals Probe Details

ಬೆಂಗಳೂರು, ಮೇ 10: ಪ್ರಧಾನಿ ನರೇಂದ್ರ ಮೋದಿ  ಭೇಟಿ ವೇಳೆ ಬೆಂಗಳೂರಲ್ಲಿ ಭಾರೀ ಭದ್ರತಾ ಲೋಪದ ಶಂಕೆ ವ್ಯಕ್ತವಾಗಿದೆ. ಮೋದಿ ಅವರ ಕಾರ್ಯಕ್ರಮಕ್ಕೂ ಸುಮಾರು ಒಂದೂವರೆ ಗಂಟೆಗೂ ಮೊದಲು, ಕಗ್ಗಲೀಪುರದ ತಾತಗುಣಿ ಬಳಿಯ ಆರ್ಟ್ ಆಫ್ ಲಿವಿಂಗ್ ಆಶ್ರಮದ ಹೊರಗೆ ಎರಡು ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ನೈಸ್ ರಸ್ತೆ ಜಂಕ್ಷನ್‌ನಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ, ರಸ್ತೆಯಿಂದ 20-25 ಅಡಿ ದೂರದಲ್ಲಿರುವ ಕಾಂಪೌಂಡ್ ಬಳಿ ಅನುಮಾನಾಸ್ಪದ ಪ್ಯಾಕೆಟ್ ಒಂದನ್ನು ಕರ್ತವ್ಯ ನಿರತ ಕಾನ್‌ಸ್ಟೆಬಲ್ ಗಮನಿಸಿದ್ದಾರೆ. ಪರಿಶೀಲಿಸಿದಾಗ ಅದರಲ್ಲಿ ಎರಡು ಜಿಲೆಟಿನ್ ಕಡ್ಡಿಗಳು ಇರುವುದು ಕಂಡುಬಂದಿದೆ. ಪೊಲೀಸರು ತಕ್ಷಣವೇ ಜಿಲೆಟಿನ್ ಕಡ್ಡಿಗಳನ್ನು ತೆರವುಗೊಳಿಸಿ ಯಾವುದೇ ಅನಾಹುತವಾಗದಂತೆ ಕ್ರಮ ಕೈಗೊಂಡಿದ್ದಾರೆ. ಈ ಘಟನೆ ಸಂಬಂಧ ಬೆಂಗಳೂರು ನಗರ ಪೊಲೀಸರು ಮತ್ತು ರಾಮನಗರ ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ. ಕೇಂದ್ರ ವಲಯದ ಡಿಐಜಿ ಗಿರೀಶ್ ಅವರು ಟಿವಿ9 ಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಜಿಲೆಟಿನ್ ಕಡ್ಡಿಗಳು ಅಲ್ಲಿಗೆ ಹೇಗೆ ಬಂದವು, ಇಟ್ಟವರು ಯಾರು ಎಂಬ ಬಗ್ಗೆ ತೀವ್ರ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

CBSE 12th Results 2026: ಸಿಬಿಎಸ್‌ಇ 12ನೇ ತರಗತಿ ಪರೀಕ್ಷಾ ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ; ಡಿಜಿಲಾಕರ್‌ನಲ್ಲಿ ಮಹತ್ವದ ಅಪ್‌ಡೇಟ್! – Kannada News | CBSE 12th Results 2026: DigiLocker Update, Expected Date and Pass Criteria

CBSE 12ನೇ ತರಗತಿ ಫಲಿತಾಂಶImage Credit source: Ai generated

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (CBSE) 2026ರ ಸಾಲಿನ 12ನೇ ತರಗತಿಯ ಬೋರ್ಡ್ ಪರೀಕ್ಷಾ ಫಲಿತಾಂಶಗಳನ್ನು ಪ್ರಕಟಿಸಲು ಸಕಲ ಸಿದ್ಧತೆ ನಡೆಸುತ್ತಿದೆ. ಈ ಕುರಿತಾದ ಮಹತ್ವದ ಸೂಚನೆಯು ಡಿಜಿಲಾಕರ್ (DigiLocker) ಪೋರ್ಟಲ್‌ನಲ್ಲಿ ಈಗಾಗಲೇ ಕಾಣಿಸಿಕೊಂಡಿದ್ದು, “ಶೀಘ್ರದಲ್ಲೇ ಬರಲಿದೆ” (Coming Soon) ಎಂದು ತೋರಿಸುತ್ತಿದೆ. ಮಂಡಳಿಯು ಅಧಿಕೃತ ದಿನಾಂಕವನ್ನು ಇನ್ನೂ ಘೋಷಿಸದಿದ್ದರೂ, ಕಳೆದ ವರ್ಷಗಳ ಅಂಕಿಅಂಶಗಳನ್ನು ಗಮನಿಸಿದರೆ ಮೇ 12 ಅಥವಾ 13ರಂದು ಫಲಿತಾಂಶ ಹೊರಬರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಫಲಿತಾಂಶ ವೀಕ್ಷಿಸುವುದು ಹೇಗೆ?

ಫಲಿತಾಂಶಗಳು ಅಧಿಕೃತವಾಗಿ ಬಿಡುಗಡೆಯಾದ ತಕ್ಷಣ, ವಿದ್ಯಾರ್ಥಿಗಳು ಈ ಕೆಳಗಿನ ವೆಬ್‌ಸೈಟ್‌ಗಳ ಮೂಲಕ ತಮ್ಮ ಅಂಕಗಳನ್ನು ಪರಿಶೀಲಿಸಬಹುದು:

ಅಷ್ಟೇ ಅಲ್ಲದೆ, ಡಿಜಿಲಾಕರ್ ಮೂಲಕ ವಿದ್ಯಾರ್ಥಿಗಳು ತಮ್ಮ ಡಿಜಿಟಲ್ ಅಂಕಪಟ್ಟಿ (Marksheet) ಮತ್ತು ಪ್ರಮಾಣಪತ್ರದ ಮೂಲ ಪ್ರತಿಯನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: ನಟ ವಿಜಯ್ ಪುತ್ರಿ ದಿವ್ಯಾ ಸಾಶಾ ಬಗ್ಗೆ ನಿಮಗೆಷ್ಟು ಗೊತ್ತು? ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಇಲ್ಲಿದೆ ಮಾಹಿತಿ

ಉತ್ತೀರ್ಣರಾಗಲು ಬೇಕಾದ ಕನಿಷ್ಠ ಅಂಕಗಳು:

CBSE ನಿಯಮಗಳ ಪ್ರಕಾರ, 12ನೇ ತರಗತಿಯಲ್ಲಿ ಉತ್ತೀರ್ಣರಾಗಲು ವಿದ್ಯಾರ್ಥಿಗಳು ಸಿದ್ಧಾಂತ (Theory) ಮತ್ತು ಪ್ರಾಯೋಗಿಕ (Practical) ಪರೀಕ್ಷೆಗಳೆರಡರಲ್ಲೂ ಕನಿಷ್ಠ ಶೇಕಡಾ 33ರಷ್ಟು ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿದೆ. ಒಂದು ವೇಳೆ ವಿದ್ಯಾರ್ಥಿಯು ಯಾವುದೇ ವಿಷಯದಲ್ಲಿ ಈ ನಿಗದಿತ ಅಂಕಗಳನ್ನು ಪಡೆಯಲು ವಿಫಲವಾದರೆ, ಅವರನ್ನು ‘ಅನುತ್ತೀರ್ಣ’ ಎಂದು ಪರಿಗಣಿಸಲಾಗುತ್ತದೆ.

ಅನುತ್ತೀರ್ಣರಾದವರಿಗೆ ಎರಡನೇ ಅವಕಾಶ:

ಒಂದು ವೇಳೆ ವಿದ್ಯಾರ್ಥಿಗಳು ಕನಿಷ್ಠ ಅಂಕಗಳನ್ನು ಪಡೆಯಲು ವಿಫಲವಾದರೆ ಚಿಂತಿಸುವ ಅಗತ್ಯವಿಲ್ಲ. ಮಂಡಳಿಯು ಅಂತಹ ವಿದ್ಯಾರ್ಥಿಗಳಿಗೆ ತಮ್ಮ ಫಲಿತಾಂಶವನ್ನು ಸುಧಾರಿಸಿಕೊಳ್ಳಲು ‘ಕಂಪಾರ್ಟ್‌ಮೆಂಟ್ ಪರೀಕ್ಷೆ’ (Compartment Exam) ಬರೆಯುವ ಎರಡನೇ ಅವಕಾಶವನ್ನು ನೀಡುತ್ತದೆ. ಇದರ ಮೂಲಕ ವಿದ್ಯಾರ್ಥಿಗಳು ಮರುಪರೀಕ್ಷೆ ಬರೆದು ಅದೇ ವರ್ಷ ಉತ್ತೀರ್ಣರಾಗಬಹುದು.

ಶಿಕ್ಷಣಕ್ಕೆಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅನಾರೋಗ್ಯದಿಂದ ಸಚಿವ ಡಿ. ಸುಧಾಕರ್ ವಿಧಿವಶ: ಚಿತ್ರದುರ್ಗದಲ್ಲಿ ನಾಳೆ ಸಾರ್ವಜನಿಕ ರಜೆ; ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ – Kannada News | Minister D. Sudhakar Passes Away Due to Illness: Public Holiday in Chitradurga Tomorrow

ರಾಜ್ಯಾದ್ಯಂತ 3 ದಿನಗಳ ಕಾಲ ಶೋಕಾಚರಣೆಯನ್ನೂ ಆಚರಿಸುತ್ತಿರುವ ಬಗ್ಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದು, ನಾಳೆ ಸಂಜೆ 4 ಗಂಟೆಗೆ ಡಿ.ಸುಧಾಕರ್ ಅಂತ್ಯಕ್ರಿಯೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್​​ ನಾಯಕ ಸುರ್ಜೇವಾಲ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿರಲಿದ್ದಾರೆ.

Source link

ರಾಹುಲ್ ಗಾಂಧಿ ಮಾಡಿದ ಸಾಲು ಸಾಲು ತಪ್ಪುಗಳು… ಅಸ್ಸಾಂ, ಆಂಧ್ರದಂತೆ ತಮಿಳುನಾಡನ್ನೂ ಕಾಂಗ್ರೆಸ್ ಕಳೆದುಕೊಂಡಿತಾ? – Kannada News | Congress Blunder: Vijay’s Entry & Rahul Gandhi’s Missed Political Opportunities

ರಾಹುಲ್ ಗಾಂಧಿ ಜೊತೆ ತಮಿಳುನಾಡು ಸಿಎಂ ವಿಜಯ್Image Credit source: PTI

ಚೆನ್ನೈ, ಮೇ 10: ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷ (TVK) ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (Tamil Nadu Assembly Elections) ಅತಿದೊಡ್ಡ ಪಕ್ಷವಾಗಿ ಹೊಮ್ಮಿದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ಬೆಂಬಲ ಪ್ರಕಟಿಸಲು ಹೆಚ್ಚು ತಡ ಮಾಡಲಿಲ್ಲ. ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದರೂ ಲೆಕ್ಕಿಸದೆ ಟಿವಿಕೆಗೆ ಕಾಂಗ್ರೆಸ್ ಬೆಂಬಲ ಘೋಷಿಸಿತು. ರಾಹುಲ್ ಗಾಂಧಿ ಈ ಹಿಂದೆ ಮಾಡಿದ ತಪ್ಪನ್ನು ಪುನರಾವರ್ತಿಸಬಾರದು ಎಂದು ನಿರ್ಧರಿಸಿದಂತಿತ್ತು ಈ ಬೆಳವಣಿಗೆ.

ರಾಹುಲ್ ಗಾಂಧಿ 2009ರಲ್ಲಿ ಆ ತಪ್ಪು ಮಾಡಿರದಿದ್ದಿದ್ದರೆ?

ರಾಹುಲ್ ಗಾಂಧಿ 2009ರಲ್ಲಿ ವಿಜಯ್ ವಿಚಾರದಲ್ಲಿ ತಪ್ಪು ನಿರ್ಧಾರ ಮಾಡಿದ್ದು ಇವತ್ತು ಅದು ದುಬಾರಿ ಎನಿಸಿದೆ. 17 ವರ್ಷದ ಹಿಂದೆ ವಿಜಯ್ ಅವರು ಕಾಂಗ್ರೆಸ್ ಪಕ್ಷ ಸೇರಲು ಬಯಸಿದ್ದರು. ಯಾವುದೇ ಹುದ್ದೆ ಅಥವಾ ಟಿಕೆಟ್ ಬೇಡಿಕೆ ಮುಂದಿಡದೆ ಕೇವಲ ಕಾಂಗ್ರೆಸ್ ಪಕ್ಷದ ಸದಸ್ಯನಾಗುವುದಾಗಿ ವಿಜಯ್ ಅವರು ಕೇಳಿಕೊಂಡಿದ್ದರು. ಆದರೆ, ಅಂದು ರಾಹುಲ್ ಗಾಂಧಿ ಈ ಮನವಿಗೆ ಸೂಕ್ತವಾಗಿ ಸ್ಪಂದಿಸಲಿಲ್ಲ.

ಇದನ್ನೂ ಓದಿ: ಮೊದಲ ಭಾಷಣದಲ್ಲೇ ಸಾಲದ ಬಗ್ಗೆ ಮಾತಾಡಿದ ತಮಿಳುನಾಡು ಸಿಎಂ ಜೋಸೆಫ್​​ ವಿಜಯ್​​

ವಿಜಯ್ ಅವರಿಗೆ ಕಾಂಗ್ರೆಸ್ ಸೇರಲು ರಾಹುಲ್ ನಿರಾಕರಿಸಲಿಲ್ಲ. ಆದರೆ, ಯುವ ಕಾಂಗ್ರೆಸ್ ಚುನಾವಣೆಗಳಲ್ಲಿ ಸ್ಪರ್ಧಿಸಬೇಕೆಂದು ವಿಜಯ್​ಗೆ ರಾಹುಲ್ ಗಾಂಧಿ ಸಲಹೆ ನೀಡಿದ್ದರು. ಕಾಂಗ್ರೆಸ್​ನ ವಿದ್ಯಾರ್ಥಿ ಘಟಕವಾದ ಎನ್​ಎಸ್​ಯುಐನ ಅಂದಿನ ಮುಖ್ಯಸ್ಥ ಹೀಬಿ ಈಡನ್ ಸೇರಿದಂತೆ ಕೆಲ ರಾಷ್ಟ್ರೀಯ ಪದಾಧಿಕಾರಿಗಳನ್ನು ವಿಜಯ್ ಭೇಟಿ ಕೂಡ ಮಾಡಿದ್ದರು. ಆದರೆ, ವಿಜಯ್ ಅದೇಕೋ ಕಾಂಗ್ರೆಸ್ ಸೇರಲು ಹಿಂದೇಟು ಹಾಕಿದ್ದರು.

ವಿಜಯ್ ಅದಾಗಲೇ ಜನಪ್ರಿಯತೆಯ ಉತ್ತುಂಗದಲ್ಲೇ ಇದ್ದರು. ರಾಹುಲ್ ಗಾಂಧಿ ಅಂದೇ ವಿಜಯ್ ಅವರನ್ನು ಮುಕ್ತವಾಗಿ ಬರಮಾಡಿಕೊಂಡಿದ್ದರೆ ಇವತ್ತು ತಮಿಳುನಾಡಿನಲ್ಲಿ ಕಾಂಗ್ರೆಸ್ ಮತ್ತೆ ನೆಲೆ ಕಂಡುಕೊಳ್ಳಲು ಸಾಧ್ಯವಾಗುತ್ತಿದ್ದಿರಬಹುದು.

ಅಸ್ಸಾಂ ಮತ್ತು ಆಂಧ್ರದಲ್ಲೂ ಕಾಂಗ್ರೆಸ್ ತಪ್ಪು ಮಾಡಿತ್ತು…

ಅಸ್ಸಾಮ್ ಸಿಎಂ ಹಿಮಂತ ಬಿಸ್ವ ಶರ್ಮಾ ಅವರು ಸದ್ಯ ಬಿಜೆಪಿಯ ಬಲಿಷ್ಠ ಸಿಎಂಗಳಲ್ಲಿ ಒಬ್ಬರೆನಿಸಿದ್ದಾರೆ. ಆದರೆ ಈ ಹಿಂದೆ ಇವರು ಕಾಂಗ್ರೆಸ್​ನಲ್ಲಿದ್ದು ಅಲ್ಲಿಂದ ಬಿಜೆಪಿಗೆ ಬಂದವರು. ಕಾಂಗ್ರೆಸ್​ನಲ್ಲಿ ಸರಿಯಾದ ಸ್ಥಾನಮಾನ ಸಿಗದ ಕಾರಣ ಬಿಜೆಪಿಗೆ ಪಕ್ಷಾಂತರ ಮಾಡಿದ್ದರು. ರಾಹುಲ್ ಗಾಂಧಿ ಆಗ ಹಿಮಂತರ ಬದಲು ತರುಣ್ ಗೊಗೋಯ್ ಅವರಿಗೆ ಮಣೆ ಹಾಕಿದರು. ಹಿಮಂತ ಬಿಸ್ವ ಸರ್ಮಾ ಅಂದು ಕಾಂಗ್ರೆಸ್​ನಲ್ಲೇ ಇರುತ್ತಿದ್ದರೆ ಇವತ್ತು ಅಸ್ಸಾಮ್ ಕೂಡ ಕೈ ಕೋಟೆಯಾಗುತ್ತಿದ್ದಿರಬಹುದು.

ಇದನ್ನೂ ಓದಿ: ತಮಿಳುನಾಡು ಸಾಲದ ಬಗ್ಗೆ ಆರೋಪಿಸಿದ್ದ ಮುಖ್ಯಮಂತ್ರಿ ವಿಜಯ್​​ ಮಾತಿಗೆ ಮಾಜಿ ಸಿಎಂ ಸ್ಟಾಲಿನ್​​ ಆಕ್ರೋಶ

ಆಂಧ್ರದಲ್ಲಿ ಜಗನ್ ವಿಚಾರದಲ್ಲಿ ರಾಹುಲ್ ತಪ್ಪು…

ಅಖಂಡ ಆಂಧ್ರ ಇದ್ದಾಗ ಡಾ. ವೈ.ಎಸ್. ರಾಜಶೇಖರ ರೆಡ್ಡಿ ಅವರು ಸಿಎಂ ಆಗಿದ್ದರು. ಅವರು ಕಾಂಗ್ರೆಸ್ ಕಟ್ಟಾಳು. ಅವರು ಅಪಘಾತದಲ್ಲಿ ಮೃತಪಟ್ಟಾಗ ಅವರ ಮಗ ಜಗನ್ ಮೋಹನ್ ರೆಡ್ಡಿ ಅವರು ಮುಖ್ಯಮಂತ್ರಿಯಾಗಲು ಬಯಸಿದ್ದರು. ಆದರೆ, ಕಾಂಗ್ರೆಸ್ ಪಕ್ಷ ಇದಕ್ಕೆ ಒಪ್ಪಲಿಲ್ಲ. ವರ್ಷಗಳ ನಂತರ ಜಗನ್ ಅವರು ತಮ್ಮದೇ ಪಕ್ಷ ಸ್ಥಾಪಿಸಿ, ನಂತರ ಚುನಾವಣೆಯಲ್ಲಿ ಗೆದ್ದು ಸಿಎಂ ಕೂಡ ಆದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸಿನಿಮಾ ರಂಗದಿಂದ ಸಿಎಂ ಗದ್ದುಗೆಗೆ ಏರಿದ ಸಾಧಕರು ಇವರು – Kannada News | Here is the list of movie stars who became CM

ಎಂ ಕರುಣಾನಿಧಿ ಸಹ ತಮಿಳು ಚಿತ್ರರಂಗದಿಂದಲೇ ಬಂದವರು. ಹಲವಾರು ಸಿನಿಮಾಗಳಿಗೆ ಕತೆ, ಚಿತ್ರಕತೆ, ಹಾಡುಗಳನ್ನು ಕರುಣಾನಿಧಿ ಬರೆದಿದ್ದಾರೆ. ಅಣ್ಣಾದೊರೈ ಅವರ ಬಳಿಕ ಸಿಎಂ ಆದ ಇವರು ಆರು ವರ್ಷಕ್ಕೂ ಹೆಚ್ಚು ಸಮಯ ಸಿಎಂ ಸ್ಥಾನದಲ್ಲಿದ್ದು ಮಾತ್ರವಲ್ಲದೆ ಆ ನಂತರವು ಕೆಲವು ಬಾರಿ ಸಿಎಂ ಆಗಿ ಆಡಳಿತ ನಡೆಸಿದರು.

Source link

ವಿಜಯ್ ಪ್ರಮಾಣವಚನ ನೋಡಲು ಬರಲಿಲ್ಲ ಪತ್ನಿ, ಮಕ್ಕಳು; ಮಿಂಚಿದ್ದು ಮಾತ್ರ ತ್ರಿಶಾ – Kannada News | Absence of Vijay wife Sangeetha and children from swearing in ceremony sparks debate

ನಟ ದಳಪತಿ ವಿಜಯ್ (Vijay) ಅವರು ರಾಜಕಾರಣಿಯಾಗಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಭಾನುವಾರ (ಮೇ 10) ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅವರು ಅಧಿಕಾರ ಸ್ವೀಕರಿಸಿದರು. ಈ ಸಂಭ್ರಮದ ಕ್ಷಣದಲ್ಲಿ ವಿಜಯ್ ಅವರ ತಂದೆ ಎಸ್.ಎ. ಚಂದ್ರಶೇಖರ್ ಮತ್ತು ತಾಯಿ ಶೋಭಾ ಚಂದ್ರಶೇಖರ್ ಅವರು ಮುಂದಿನ ಸಾಲಿನಲ್ಲಿ ಕುಳಿತು ಮಗನ ಸಾಧನೆಯನ್ನು ಕಂಡು ಹೆಮ್ಮೆಪಟ್ಟರು. ಆಪ್ತ ಗೆಳತಿ ತ್ರಿಶಾ ಕೃಷ್ಣನ್ ಕೂಡ ಈ ಕ್ಷಣಕ್ಕೆ ಸಾಕ್ಷಿ ಆದರು. ಆದರೆ, ಇಡೀ ಸಮಾರಂಭದಲ್ಲಿ ವಿಜಯ್ ಪತ್ನಿ ಸಂಗೀತಾ (Vijay wife Sangeetha) ಮತ್ತು ಮಕ್ಕಳ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

ವಿಜಯ್ ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ, ಪುತ್ರ ಜೇಸನ್ ಸಂಜಯ್ ಮತ್ತು ಪುತ್ರಿ ದಿವ್ಯಾ ಸಾಶಾ ಈ ಮಹತ್ವದ ಕಾರ್ಯಕ್ರಮಕ್ಕೆ ಬರದಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ‘ಇಂತಹ ಐತಿಹಾಸಿಕ ಕ್ಷಣದಲ್ಲಿ ವಿಜಯ್ ಅವರ ಕುಟುಂಬ ಜೊತೆಗಿರಬೇಕಿತ್ತು. ಪತ್ನಿ ಬರದಿದ್ದರೂ ಪರವಾಗಿಲ್ಲ, ಮಕ್ಕಳನ್ನಾದರೂ ಆಹ್ವಾನಿಸಬೇಕಿತ್ತು’ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಸಂಗೀತಾ ಅವರು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ವಿಜಯ್ ಅವರ ಜೀವನದಲ್ಲಿ ಮತ್ತೊಬ್ಬ ನಟಿಯ ಪ್ರವೇಶವಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಬೆನ್ನಲ್ಲೇ, ವಿಜಯ್ ಅವರ ಆಪ್ತ ಸ್ನೇಹಿತೆ ಎನ್ನಲಾದ ನಟಿ ತ್ರಿಶಾ ಕೃಷ್ಣನ್ ಅವರು ಪ್ರಮಾಣವಚನ ಸಮಾರಂಭಕ್ಕೆ ಆಗಮಿಸಿರುವುದು ವದಂತಿಗಳಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ. ಇದು ಅಭಿಮಾನಿಗಳ ವಲಯದಲ್ಲಿ ಪರ-ವಿರೋಧದ ಚರ್ಚೆಗೆ ಕಾರಣ ಆಗಿದೆ.

‘ಒಬ್ಬ ಅಭಿಮಾನಿಯಾಗಿ ನನಗೆ ಇದು ಪರ್ಸನಲ್ ಆಗಿ ನೋವುಂಟು ಮಾಡಿದೆ. ವಿಜಯ್ ಅವರ ವೈಯಕ್ತಿಕ ಜೀವನ ಏನೇ ಇರಲಿ, ಮಕ್ಕಳಾದರೂ ಅವರ ಯಶಸ್ಸಿನ ಭಾಗವಾಗಬೇಕಿತ್ತು’ ಎಂದು ಅಭಿಮಾನಿಯೊಬ್ಬರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ವಿಜಯ್ ಬೆಂಬಲಕ್ಕೆ ನಿಂತಿದ್ದು, ‘ಅವರು ಪ್ರಬುದ್ಧ ವ್ಯಕ್ತಿಗಳು. ಅವರ ನಿರ್ಧಾರ ಅವರಿಗೆ ಬಿಟ್ಟಿದ್ದು. ನಮಗೆ ಬೇಕಿರುವುದು ಒಬ್ಬ ಒಳ್ಳೆಯ ಮುಖ್ಯಮಂತ್ರಿ ಅಷ್ಟೇ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ವಿಜಯ್ ಪ್ರಮಾಣವಚನ ಸಮಾರಂಭಕ್ಕೆ ಬಂದು ಮೊದಲ ಸಾಲಿನಲ್ಲೇ ಕುಳಿತ ತ್ರಿಶಾ

ಒಟ್ಟಾರೆಯಾಗಿ, ರಾಜಕೀಯವಾಗಿ ವಿಜಯ್ ಅವರಿಗೆ ಇದು ದೊಡ್ಡ ಗೆಲುವಾಗಿದ್ದರೂ, ಕುಟುಂಬದ ಈ ಅಂತರವು ಅವರ ಅಭಿಮಾನಿಗಳಲ್ಲಿ ಸಣ್ಣದೊಂದು ನೋವು ಉಳಿಸಿದೆ. ಶೀಘ್ರದಲ್ಲೇ ವಿಜಯ್ ಅವರ ವಿಚ್ಛೇದನದ ಅರ್ಜಿ ವಿಚಾರಣೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Flipkart Sasa Lele Sale 2026: ಐಫೋನ್ 17 ಮೇಲೆ ಇದುವರೆಗಿನ ಅತಿದೊಡ್ಡ ಬೆಲೆ ಕಡಿತ: ಈ ಆಫರ್ ಮಿಸ್ ಮಾಡ್ಬೇಡಿ – Kannada News | Biggest price cut ever on iPhone 17 in Flipkart Sasa Lele Sale 2026 Don’t miss this offer

ಬೆಂಗಳೂರು (ಮೇ. 10): ಕಳೆದ ವರ್ಷ ಆಪಲ್ (Apple) ಕಂಪನಿ ಬಿಡುಗಡೆ ಮಾಡಿದ ಐಫೋನ್ 17 ಇದುವರೆಗಿನ ಅತಿದೊಡ್ಡ ಬೆಲೆ ಕಡಿತವನ್ನು ಪಡೆದಿದೆ. ಮೇ 9 ಕ್ಕೆ ಫ್ಲಿಪ್​ಕಾರ್ಟ್​ನಲ್ಲಿ ಶುರುವಾಗಿರುವ ಸಾಸಾ ಲೇಲೆ ಸೇಲ್​ನಲ್ಲಿ ಐಫೋನ್ 17 ಮೇಲೆ ಬಂಪರ್ ರಿಯಾಯಿತಿ ಘೋಷಿಸಲಾಗಿದೆ. ಈ ಐಫೋನ್ 256GB, 512GB ಮತ್ತು 1TB ಸ್ಟೋರೇಜ್ ರೂಪಾಂತರಗಳಲ್ಲಿ ಬರುತ್ತದೆ. ಫ್ಲಿಪ್‌ಕಾರ್ಟ್‌ನ ಮಾರಾಟದಲ್ಲಿ ಈ ಫೋನ್ ಅನ್ನು ಅದರ ಬಿಡುಗಡೆ ಬೆಲೆಗಿಂತ ₹11,000 ಕಡಿಮೆ ಬೆಲೆಗೆ ಖರೀದಿಸಬಹುದು.

ಐಫೋನ್ 17 ಬೆಲೆ ಇಳಿಕೆ

ಆಪಲ್ ಈ ಐಫೋನ್ ಅನ್ನು 82,900 ರೂ. ಗಳ ಆರಂಭಿಕ ಬೆಲೆಗೆ ಬಿಡುಗಡೆ ಮಾಡಿತು. ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಪ್ರಾರಂಭವಾಗುವ ಮೊದಲು, ಈ ಐಫೋನ್ ಅನ್ನು 71,900 ರೂ. ಗಳ ಆರಂಭಿಕ ಬೆಲೆಗೆ ಪಟ್ಟಿ ಮಾಡಲಾಗಿತ್ತು. ಇದಲ್ಲದೆ, ಐಫೋನ್ ಏರ್‌ನಲ್ಲೂ ದೊಡ್ಡ ಬೆಲೆ ಕಡಿತವಾಗಿದೆ. 1,19,900 ರೂ. ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾದ ಈ ಐಫೋನ್ ಅನ್ನು ಫ್ಲಿಪ್‌ಕಾರ್ಟ್ ಮಾರಾಟದಲ್ಲಿ 99,900 ರೂ. ಗಳ ಆರಂಭಿಕ ಬೆಲೆಗೆ ಪಟ್ಟಿ ಮಾಡಲಾಗಿದೆ. ಈ ಐಫೋನ್ ಅನ್ನು 20,000 ರೂ. ಗಳ ದೊಡ್ಡ ಬೆಲೆ ಕಡಿತಗೊಳಿಸಲಾಗಿದೆ.

ಐಫೋನ್ 17 ವೈಶಿಷ್ಟ್ಯಗಳು

ಈ ಆಪಲ್ ಐಫೋನ್ 6.1-ಇಂಚಿನ ಪ್ರೊಮೋಷನ್ ಸೂಪರ್ ಎಕ್ಸ್‌ಡಿಆರ್ ಡಿಸ್ಪ್ಲೇಯೊಂದಿಗೆ ಬರುತ್ತದೆ. 120Hz ರಿಫ್ರೆಶ್ ದರವನ್ನು ಬೆಂಬಲಿಸುವ OLED ಡಿಸ್​ಪ್ಲೇ ಪ್ಯಾನೆಲ್ ಅನ್ನು ಹೊಂದಿದೆ. ಈ ಐಫೋನ್ ಆಪಲ್‌ನ ಇತ್ತೀಚಿನ A19 ಬಯೋನಿಕ್ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದು ಆಪಲ್ ಇಂಟೆಲಿಜೆನ್ಸ್ ಅಥವಾ AI ಅನ್ನು ಸಹ ಒಳಗೊಂಡಿದೆ. ಡ್ಯುಯಲ್ 5G ಸಿಮ್ ಕಾರ್ಡ್‌ಗಳನ್ನು ಬೆಂಬಲಿಸುತ್ತದೆ. ಸಂಪರ್ಕ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ ವೈಫೈ, ಬ್ಲೂಟೂತ್, ಎನ್‌ಎಫ್‌ಸಿ ಮತ್ತು ಯುಎಸ್‌ಬಿ ಟೈಪ್-ಸಿ ಸೇರಿವೆ.

Amazon Summer Sale: ಅಮೆಜಾನ್​ನಲ್ಲಿ ಶುರುವಾಯಿತು ಸಮ್ಮರ್ ಸೇಲ್: ಸ್ಮಾರ್ಟ್‌ಫೋನ್‌ಗಳಿಂದ ಟಿವಿಗಳವರೆಗೆ ಎಲ್ಲವೂ ಅಗ್ಗ

ಐಫೋನ್ 17 ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದರಲ್ಲಿ 48MP ಪ್ರಾಥಮಿಕ ಕ್ಯಾಮೆರಾ ಮತ್ತು 48MP ದ್ವಿತೀಯ ಕ್ಯಾಮೆರಾ ಸೇರಿವೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಾಗಿ, ಈ ಐಫೋನ್ 18MP ಸೆಂಟರ್ ಸ್ಟೇಜ್ ಕ್ಯಾಮೆರಾವನ್ನು ಹೊಂದಿದೆ. 40W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಸಹ ಹೊಂದಿದೆ. iOS 26 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಅಮೆಜಾನ್​ ಸಮ್ಮರ್ ಸೇಲ್​ನಲ್ಲಿ ಸ್ಯಾಮ್‌ಸಂಗ್ ಫೋನ್‌ಗಳು ಅಗ್ಗ

ಇತ್ತೀಚೆಗೆ ಬಿಡುಗಡೆಯಾದ ಗ್ಯಾಲಕ್ಸಿ ಎಸ್ 26 ಅಲ್ಟ್ರಾ ಮತ್ತು ಕಳೆದ ವರ್ಷ ಬಿಡುಗಡೆಯಾದ ಗ್ಯಾಲಕ್ಸಿ ಎಸ್ 25 ಅಲ್ಟ್ರಾ ಸೇರಿದಂತೆ ಸ್ಯಾಮ್‌ಸಂಗ್ ತನ್ನ ಹಲವಾರು ಫೋನ್‌ಗಳ ಬೆಲೆಗಳನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಈ ದಕ್ಷಿಣ ಕೊರಿಯಾದ ಫೋನ್‌ಗಳು ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್‌ನ ಗ್ರೇಟ್ ಸಮ್ಮರ್ ಸೇಲ್​ನಲ್ಲಿ ಬಹಳ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.

ಗ್ಯಾಲಕ್ಸಿ ಎಸ್ 26 ಅಲ್ಟ್ರಾವನ್ನು ಅದರ ಬಿಡುಗಡೆ ಬೆಲೆಯಲ್ಲಿ ₹9,000 ವರೆಗೆ ರಿಯಾಯಿತಿಗೆ ಖರೀದಿಸಬಹುದು. ಸ್ಯಾಮ್‌ಸಂಗ್ ಈ ಫ್ಲ್ಯಾಗ್‌ಶಿಪ್ ಫೋನ್ ಅನ್ನು ₹1,39,999 ಆರಂಭಿಕ ಬೆಲೆಗೆ ಬಿಡುಗಡೆ ಮಾಡಿತ್ತು. ಈ ಸ್ಯಾಮ್‌ಸಂಗ್ ಫೋನ್ ಅನ್ನು ಅಮೆಜಾನ್ ಮಾರಾಟದ ಸಮಯದಲ್ಲಿ ₹1,30,999 ಆರಂಭಿಕ ಬೆಲೆಗೆ ಖರೀದಿಸಬಹುದು. ಫೋನ್ ಖರೀದಿಯೊಂದಿಗೆ ಹೆಚ್ಚುವರಿ ಬ್ಯಾಂಕ್ ಮತ್ತು ಕೂಪನ್ ರಿಯಾಯಿತಿಗಳು ಸಹ ಲಭ್ಯವಿದೆ.

ಹಾಗೆಯೆ ಕಳೆದ ವರ್ಷ ಬಿಡುಗಡೆಯಾದ ಗ್ಯಾಲಕ್ಸಿ S25 ಆಲ್ಟ್ರಾ ಅದರ ಬಿಡುಗಡೆ ಬೆಲೆಗಿಂತ ₹35,000 ಕಡಿಮೆ ಬೆಲೆಗೆ ಲಭ್ಯವಿದೆ. ದಕ್ಷಿಣ ಕೊರಿಯಾದ ಕಂಪನಿಯು ಈ ಫೋನ್ ಅನ್ನು ₹129,999 ಆರಂಭಿಕ ಬೆಲೆಗೆ ಬಿಡುಗಡೆ ಮಾಡಿತು. ಅಮೆಜಾನ್‌ನಲ್ಲಿ ನಡೆಯುತ್ತಿರುವ ಮಾರಾಟದಲ್ಲಿ, ಈ ಫೋನ್ ಕೇವಲ ₹94,999 ಗೆ ಲಭ್ಯವಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link