All posts by nagaraj11081993

ವಿಜಯ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಮೊದಲು ವಂದೇ ಮಾತರಂ, ನಂತರ ಜನಗಣಮನ, ತಮಿಳು ಗೀತೆ; ಇದು ಹೊಸ ಮೆಸೇಜಾ? – Kannada News | Tamil Nadu CM Vijay’s Oath: Vande Mataram, Jan Gana Mana, Tamil Thai Vazhthu Protocol Explained

ವಿಜಯ್ ಅವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ…Image Credit source: PTI

ಚೆನ್ನೈ, ಮೇ 10: ತಮಿಳುನಾಡು ನೂತನ ಮುಖ್ಯಮಂತ್ರಿಯಾಗಿ ವಿಜಯ್ (Thalapathi Joseph Vijay) ಅವರು ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಚೆನ್ನೈನಲ್ಲಿರುವ ರಾಜಭವನ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲರು ವಿಜಯ್​ಗೆ ಪ್ರಮಾಣವಚನ ಬೋಧಿಸಿದರು. ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಹಾಡಾಗಿರುವ ವಂದೇ ಮಾತರಂ (National song Vande Mataram) ಅನ್ನು ಹಾಡಿಸಲಾಯಿತು. ನಂತರ ರಾಷ್ಟ್ರಗೀತೆ (National Anthem) ಹಾಗೂ ಆ ಬಳಿಕ ತಮಿಳುನಾಡಿನ ನಾಡಗೀತೆಯನ್ನು ಹಾಡಲಾಯಿತು.

ಬಂಗಾಳಿ ಕವಿ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಬರೆದ ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ಹಾಡಲಾಯಿತು. ನಂತರ, ರವೀಂದ್ರನಾಥ್ ಠಾಗೋರ್ ವಿರಚಿತ ಜನ ಗಣ ಮನ ರಾಷ್ಟ್ರ ಗೀತೆಯನ್ನು ಹಾಡಲಾಯಿತು. ಮೂರನೇ ಕ್ರಮಾಂಕದಲ್ಲಿ ತಮಿಳ್ ತಾಯ್ ವಾಳ್ತು ಹಾಡನ್ನು ಹಾಡಿಸಲಾಯಿತು.

ತಮಿಳ್ ತಾಯ್ ವಾಳ್ತು ಹಾಡನ್ನು 19ನೇ ಶತಮಾನದ ತಮಿಳು ಕವಿ ಮನೋನ್ಮಣಿಯಮ್ ಸುಂದಂ ಪಿಳ್ಳೈ ಅವರು ಬರೆದಿದ್ದಾರೆ. ತಮಿಳು ದೈವಕ್ಕೆ ಪ್ರಾರ್ಥನೆ ಸಲ್ಲಿಸುವ ಹಾಡು ಇದು. 1970ರಲ್ಲಿ ಈ ಹಾಡನ್ನು ತಮಿಳುನಾಡು ಸರ್ಕಾರ ಅಧಿಕೃತ ಪ್ರಾರ್ಥನೆ ಎನ್ನುವ ಸ್ಥಾನ ಕೊಟ್ಟಿತು. 2021ರಲ್ಲಿ ಇದು ತಮಿಳುನಾಡಿನ ನಾಡಗೀತೆಯಾಯಿತು.

ಇದನ್ನೂ ಓದಿ: ವಿಜಯ್ ಮಂತ್ರಿಮಂಡಲ; ಎಂಜಿಆರ್ ಒಡನಾಡಿ, ವೈದ್ಯ, ಸಂಘಟನಾ ಚತುರ, ಯುವತಿ, ಚಿತ್ರ ನಟ ಮೊದಲಾದವರು…

1970ರಿಂದಲೂ ತಮಿಳುನಾಡಿನಲ್ಲಿ ಪ್ರಮಾಣ ವಚನ ಬೋಧನೆಯಂತಹ ಕಾರ್ಯಕ್ರಮಗಳಲ್ಲಿ ತಮಿಳ್ ತಾಯ್ ವಾಳ್ತುವನ್ನು ಮೊದಲು ಹಾಡಲಾಗುತ್ತದೆ. ನಂತರ ಜನ ಗಣ ಮನ ಹಾಡಿಸಲಾಗುತ್ತಾ ಬಂದಿದೆ. ಮಧ್ಯದಲ್ಲಿ ಒಮ್ಮೆ ಜಯಲಲಿತಾ ಅವರ ಕಾರ್ಯಕ್ರಮದಲ್ಲಿ ವಂದೇ ಮಾತರಂ ಹಾಡಲಾಗಿತ್ತು. ಉಳಿದಂತೆ, ತಮಿಳು ನಾಡಗೀತೆ ಮೊದಲು, ನಂತರ ರಾಷ್ಟ್ರ ಗೀತೆ. ಈ ಪರಿಪಾಟವೇ ಇದ್ದದ್ದು.

ಜೋಸೆಫ್ ವಿಜಯ್ ಕಾರ್ಯಕ್ರಮದಲ್ಲಿ ತಮಿಳು ನಾಡಗೀತೆಗೆ 3ನೇ ಸ್ಥಾನ ಯಾಕೆ?

ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಕ್ರಮವಾಗಿ ವಂದೇ ಮಾತರಂ, ಜನಗಣಮನ ಹಾಗೂ ತಮಿಳು ತಾಯ್ ವಾಳ್ತು ಹಾಡಲಾಯಿತು. ಮೊದಲು ಇರುತ್ತಿದ್ದ ತಮಿಳು ನಾಡಗೀತೆ ಮೂರನೇ ಕ್ರಮಾಂಕಕ್ಕೆ ಹೋಗಿರುವುದು ಕೆಲವರಿಗೆ ಅಚ್ಚರಿ ಎನಿಸಬಹುದು. ಅದಕ್ಕೆ ಕಾರಣಗಳಿವೆ.

2026ರ ಫೆಬ್ರುವರಿಯಲ್ಲಿ ಕೇಂದ್ರ ಸರ್ಕಾರವು ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಡುಗಳಿಗೆ ಒಂದು ನಿಯಮಾವಳಿ ಮತ್ತು ಕ್ರಮಗಳನ್ನು ನಿಗದಿ ಮಾಡಿದೆ. ಅದರ ಪ್ರಕಾರ ಮೊದಲು ವಂದೇ ಮಾತರಂ ಹಾಡಬೇಕು. ನಂತರ ಜನ ಗಣ ಮನ ಇರಬೇಕು.

ಇದನ್ನೂ ಓದಿ: ರಾಹುಲ್ ಗಾಂಧಿ ಮಾಡಿದ ಸಾಲು ಸಾಲು ತಪ್ಪುಗಳು… ಅಸ್ಸಾಂ, ಆಂಧ್ರದಂತೆ ತಮಿಳುನಾಡನ್ನೂ ಕಾಂಗ್ರೆಸ್ ಕಳೆದುಕೊಂಡಿತಾ?

ಈ ಪ್ರೋಟೋಕಾಲ್ ಅನ್ನು ವಿಜಯ್ ಕಾರ್ಯಕ್ರಮದಲ್ಲಿ ನೆರವೇರಿಸಲಾಗಿದೆ. ಇದು ವಿಜಯ್ ಅವರ ರಾಜಕೀಯ ನಿಲುವಿನಲ್ಲಾದ ಬದಲಾವಣೆ ಎಂದಾಗಲೀ, ದ್ರಾವಿಡ ಸಿದ್ಧಾಂತಗಳಿಂದ ದೂರ ಹೋಗಿದ್ದಾರೆಂದಾಲೀ ಅರ್ಥೈಸಲು ಆಗುವುದಿಲ್ಲ. ಪಶ್ಚಿಮ ಬಂಗಾಳ ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲೂ ರಾಷ್ಟ್ರೀಯ ಹಾಡು, ರಾಷ್ಟ್ರ ಗೀತೆ ಹಾಗೂ ಬಂಗಾಳಿ ನಾಡಗೀತೆಯನ್ನು ಅನುಕ್ರಮವಾಗಿ ಹಾಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ರುದ್ರಾಭಿಷೇಕಂ’ ಸಿನಿಮಾ ಬಗ್ಗೆ ನಟಿ ಪ್ರಿಯಾಂಕಾ ತಿಮ್ಮೇಶ್ ಮಾತು – Kannada News | Priyanka Thimmesh talks about her Rudrabhishekham movie

ವಿಜಯ್ ರಾಘವೇಂದ್ರ (Vijay Raghavendra) ನಟಿಸಿರುವ ‘ರುದ್ರಾಭಿಷೇಕಂ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ನಿನ್ನೆಯಷ್ಟೆ ನಗರದ ಜಿಟಿ ಮಾಲ್​​ನಲ್ಲಿ ಆಡಿಯೋ ಲಾಂಚ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಹಾಡೊಂದನ್ನು ಬಿಡುಗಡೆ ಮಾಡಲಾಯ್ತು. ವಿಜಯ್ ರಾಘವೇಂದ್ರ ಅವರು ಈ ಹಿಂದೆ ಎಂದೂ ನಟಿಸಿರದ ಪಾತ್ರದಲ್ಲಿ ಈ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾದ ನಾಯಕಿ ಪ್ರಿಯಾಂಕಾ ತಿಮ್ಮೇಶ್. ನಿನ್ನೆ ನಡೆದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ತಿಮ್ಮೇಶ್ ಅವರು ಸಿನಿಮಾದ ಬಗ್ಗೆ, ಸಿನಿಮಾದ ಹಾಡಿನ ಬಗ್ಗೆ ಮಾತನಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಪ್ಪಿತಪ್ಪಿಯೂ ಈ ಆಹಾರಗಳ ಸೇವನೆ ಮಾಡಬೇಡಿ ಇದು ಕಿಡ್ನಿ ಸ್ಟೋನ್ ಆಗಲು ಕಾರಣವಾಗುತ್ತೆ ಎಚ್ಚರ! – Kannada News | Kidney Stone Diet: Foods to Avoid and Safer Alternatives

ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸ್ಟೋನ್‌ (Kidney Stone) ಸಮಸ್ಯೆ ಅನೇಕರಲ್ಲಿ ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು, ನೀರನ್ನು ಕಡಿಮೆ ಪ್ರಮಾಣದಲ್ಲಿ ಕುಡಿಯುವುದು ಮತ್ತು ಅಸ್ವಸ್ಥ ಜೀವನಶೈಲಿ ಇದಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆರಂಭದಲ್ಲಿ ಸಾಮಾನ್ಯ ಸಮಸ್ಯೆಯಂತೆ ಕಾಣಿಸಿದರೂ, ಸಮಯ ಕಳೆದಂತೆ ಇದು ತೀವ್ರ ನೋವು ಮತ್ತು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ವೈದ್ಯರ ಪ್ರಕಾರ, ದೇಹದಲ್ಲಿ ಕೆಲವು ಖನಿಜಗಳು ಅಧಿಕ ಪ್ರಮಾಣದಲ್ಲಿ ಸೇರುವುದರಿಂದ ಕಿಡ್ನಿಯಲ್ಲಿ ಕಲ್ಲು ರೂಪುಗೊಳ್ಳುತ್ತದೆ. ದಿನನಿತ್ಯ ಸೇವಿಸುವ ಕೆಲವು ಆಹಾರಗಳು ಈ ಅಪಾಯವನ್ನು ಹೆಚ್ಚಿಸಬಹುದು. ಹೀಗಾಗಿ ಆಹಾರ ಪದ್ಧತಿಯ ಬಗ್ಗೆ ಜಾಗ್ರತೆ ವಹಿಸುವುದು ಬಹಳ ಮುಖ್ಯವಾಗಿದೆ. ಹಾಗಾದರೆ ಯಾವ ಆಹಾರಗಳು ಕಿಡ್ನಿ ಸ್ಟೋನ್ ಅಪಾಯ ಹೆಚ್ಚಿಸುತ್ತದೆ, ಕಿಡ್ನಿ ಆರೋಗ್ಯ ಕಾಪಾಡಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕಿಡ್ನಿ ಸ್ಟೋನ್ ಅಪಾಯ ಹೆಚ್ಚಿಸುವ ಆಹಾರಗಳು:

ಲೇಡಿ ಹಾರ್ಡಿಂಗ್ ಆಸ್ಪತ್ರೆಯ ಮೆಡಿಸಿನ್ ವಿಭಾಗದ ನಿರ್ದೇಶಕ ಡಾ. ಎಲ್.ಎಚ್. ಘೋಟೇಕರ್ ಹೇಳುವ ಪ್ರಕಾರ, ಹೆಚ್ಚು ಉಪ್ಪು ಇರುವ ಆಹಾರ, ಪ್ರೊಸೆಸ್ಡ್ ಫುಡ್ ಮತ್ತು ಅಧಿಕ ಸಕ್ಕರೆ ಇರುವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಕಿಡ್ನಿ ಸ್ಟೋನ್ ಅಪಾಯ ಹೆಚ್ಚಾಗುತ್ತದೆ. ಇದರ ಜೊತೆಗೆ ಕೆಲವು ಆಹಾರಗಳಲ್ಲಿ ಆಕ್ಸಲೇಟ್ ಪ್ರಮಾಣ ಹೆಚ್ಚಿರುತ್ತದೆ. ಈ ಅಂಶ ದೇಹದಲ್ಲಿ ಜಮೆಯಾಗುತ್ತಾ ಕಲ್ಲು ರೂಪುಗೊಳ್ಳಲು ಕಾರಣವಾಗಬಹುದು. ಜಂಕ್ ಫುಡ್, ಪ್ಯಾಕೇಜ್ಡ್ ಸ್ನ್ಯಾಕ್ಸ್, ಕೋಲ್ಡ್ ಡ್ರಿಂಕ್ಸ್ ಮತ್ತು ಸಾಫ್ಟ್ ಡ್ರಿಂಕ್ಸ್‌ಗಳ ಅಧಿಕ ಸೇವನೆಯೂ ಕಿಡ್ನಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಜೊತೆಗೆ ಕಡಿಮೆ ನೀರು ಕುಡಿಯುವ ಅಭ್ಯಾಸವೂ ಕಿಡ್ನಿ ಸ್ಟೋನ್ ಸಮಸ್ಯೆಯನ್ನು ಹೆಚ್ಚಿಸುತ್ತದೆ. ದೇಹದಲ್ಲಿ ನೀರಿನ ಕೊರತೆ ಉಂಟಾದರೆ ಖನಿಜಗಳು ಮೂತ್ರದ ಮೂಲಕ ಹೊರಹೋಗದೆ ಕಲ್ಲಾಗಿ ರೂಪುಗೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ.

ಇದನ್ನೂ ಓದಿ: ಕಿಡ್ನಿ ಆರೋಗ್ಯವಾಗಿ ಇರಬೇಕು ಅಂದ್ರೆ ಆರೋಗ್ಯ ತಜ್ಞರು ಹೇಳಿದ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಲೇಬೇಕು!

ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು?

ಸಾಮಾನ್ಯವಾಗಿ ಕಿಡ್ನಿಯನ್ನು ಆರೋಗ್ಯವಾಗಿಡಲು ದಿನಪೂರ್ತಿ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಅತ್ಯಂತ ಮುಖ್ಯ. ಜೊತೆಗೆ ತಾಜಾ ಹಣ್ಣು, ಹಸಿರು ತರಕಾರಿಗಳು ಸೇವಿಸುವುದು ಉತ್ತಮ. ನಿಂಬೆ ರಸ, ಎಳನೀರು ಹಾಗೂ ಫೈಬರ್‌ಯುಕ್ತ ಆಹಾರ ದೇಹವನ್ನು ಹೈಡ್ರೇಟ್ ಆಗಿಡಲು ಸಹಾಯಕವಾಗುತ್ತದೆ.

ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ:

ಹೊಟ್ಟೆ ಅಥವಾ ಬೆನ್ನಿನ ಭಾಗದಲ್ಲಿ ತೀವ್ರ ನೋವು, ಮೂತ್ರವಿಸರ್ಜನೆ ವೇಳೆ ಉರಿ, ಪದೇಪದೇ ಮೂತ್ರ ಬರುವುದು ಅಥವಾ ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು ಕಿಡ್ನಿ ಸ್ಟೋನ್‌ನ ಪ್ರಮುಖ ಲಕ್ಷಣಗಳಾಗಿರಬಹುದು. ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆತ್ಮೀಯ ಸ್ನೇಹಿತ, ಸಚಿವ ಡಿ.ಸುಧಾಕರ್ ಅಗಲಿಕೆಗೆ ಡಿಸಿಎಂ ಡಿ.ಕೆ. ಶಿವಕುಮಾರ್​​ ಕಣ್ಣೀರು – Kannada News | DK Shivakumar Breaks Down After Paying Last Respects to Minister D. Sudhakar

ಚಿತ್ರದುರ್ಗ, ಮೇ 10: ಸಚಿವ ಡಿ. ಸುಧಾಕರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಆಗಮಿಸಿದ ಡಿ.ಕೆ. ಶಿವಕುಮಾರ್ ಆತ್ಮೀಯ ಸ್ನೇಹಿತ ಕಂಡು ಬಿಕ್ಕಿ ಬಿಕ್ಕಿ ಅತ್ತ ಪ್ರಸಂಗ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಸುಧಾಕರ್​​ ಅವರ ಪಾರ್ಥಿವ ಶರೀರ ನೋಡುತ್ತಿದ್ದಂತೆ ದುಃಖ ತಡೆದುಕೊಳ್ಳಲಾಗದೆ ಡಿಕೆಶಿ ಕಣ್ಣೀರು ಹಾಕಿದ್ದಾರೆ. ಬಳಿಕ ಡಿ.ಸುಧಾಕರ್ ಪುತ್ರ ಸುಹಾಸ್ ಬೆನ್ನುತಟ್ಟಿ ಸಾಂತ್ವನ ಹೇಳಿದ್ದು, ಡಿಕೆಶಿ ನೋಡುತ್ತಿದ್ದಂತೆ ಡಿ.ಸುಧಾಕರ್ ಪುತ್ರ ಸುಹಾಸ್ ಕೂಡ ಭಾವುಕರಾಗಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

RCB vs MI: ಮುಂಬೈ ವಿರುದ್ಧದ ಪಂದ್ಯದಲ್ಲಿ ಎರಡೆರಡು ಇತಿಹಾಸ ಸೃಷ್ಟಿಸುವ ಸನಿಹದಲ್ಲಿ ಕೊಹ್ಲಿ – Kannada News | Virat Kohli: IPL 1000 Runs vs MI & T20 14K Record in RCB vs MI Match 54

ಐಪಿಎಲ್ 2026 ರ 54 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಆರ್​​ಸಿಬಿ ತಂಡದ ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ವಿಶೇಷ ದಾಖಲೆ ಸೃಷ್ಟಿಸುವ ದಾಖಲೆ ಹೊಂದಿದ್ದಾರೆ. ಈ ಒಂದು ಪಂದ್ಯದಲ್ಲಿ ಕೊಹ್ಲಿ ಎರಡು ಪ್ರಮುಖ ದಾಖಲೆಗಳನ್ನು ನಿರ್ಮಿಸಲಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದೀರ್ಘ ಇನ್ನಿಂಗ್ಸ್ ಆಡಿದರೆ, ಎರಡು ಪ್ರಮುಖ ಮೈಲಿಗಲ್ಲುಗಳನ್ನು ಸಾಧಿಸಲಿದ್ದಾರೆ. ಈ ಪಂದ್ಯದಲ್ಲಿ ಕೊಹ್ಲಿ ಕೇವಲ 28 ರನ್‌ ಗಳಿಸಿದರೆ, ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 1,000 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.

ಕೊಹ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 34 ಇನ್ನಿಂಗ್ಸ್‌ಗಳಲ್ಲಿ 32.40 ಸರಾಸರಿ ಮತ್ತು 128 ಸ್ಟ್ರೈಕ್ ರೇಟ್‌ನಲ್ಲಿ 972 ರನ್ ಗಳಿಸಿದ್ದಾರೆ. ಅವರು ಈ ತಂಡದ ವಿರುದ್ಧ ಏಳು ಅರ್ಧಶತಕಗಳನ್ನು ಬಾರಿಸಿದ್ದಾರೆ. ಆದರೆ ಕೊಹ್ಲಿಗೆ ಈ ತಂಡದ ವಿರುದ್ಧ ಒಂದೇ ಒಂದು ಶತಕ ಬಾರಿಸಲು ಸಾಧ್ಯವಾಗಿಲ್ಲ. ಈ ಅಂಕಿಅಂಶಗಳು ಐಪಿಎಲ್ ಜೊತೆಗೆ ಚಾಂಪಿಯನ್ಸ್ ಲೀಗ್ ಟಿ20 ಪಂದ್ಯಗಳನ್ನು ಒಳಗೊಂಡಿವೆ.

ಕೊಹ್ಲಿ ಈಗಾಗಲೇ ನಾಲ್ಕು ಐಪಿಎಲ್ ತಂಡಗಳ ವಿರುದ್ಧ 1,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ. ಅವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 1,174 ರನ್, ದೆಹಲಿ ಕ್ಯಾಪಿಟಲ್ಸ್ ವಿರುದ್ಧ 1,172, ಪಂಜಾಬ್ ಕಿಂಗ್ಸ್ ವಿರುದ್ಧ 1,159 ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 1,021 ರನ್ ಗಳಿಸಿದ್ದಾರೆ. ಈಗ, ಅವರು ಮುಂಬೈ ಇಂಡಿಯನ್ಸ್ ವಿರುದ್ಧ ಈ ಸಾಧನೆ ಮಾಡುವ ಅಂಚಿನಲ್ಲಿದ್ದಾರೆ.

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ಮೈಲಿಗಲ್ಲು ದಾಟುವ ಅವಕಾಶ ಹೊಂದಿದ್ದು, ಈ ಪಂದ್ಯದಲ್ಲಿ ಕೊಹ್ಲಿ 72 ರನ್​ಗಳ ಇನ್ನಿಂಗ್ಸ್ ಆಡಿದರೆ, ತಮ್ಮ ಟಿ20ವೃತ್ತಿಜೀವನದಲ್ಲಿ 14,000 ರನ್ ಗಡಿ ತಲುಪಿದ ಸಾಧನೆ ಮಾಡಲಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ ಇಲ್ಲಿಯವರೆಗೆ 407 ಇನ್ನಿಂಗ್ಸ್‌ಗಳನ್ನಾಡಿರುವ ಕೊಹ್ಲಿ 108 ಅರ್ಧಶತಕಗಳು ಮತ್ತು ಒಂಬತ್ತು ಶತಕಗಳು ಸೇರಿದಂತೆ 13,922 ರನ್ ಗಳಿಸಿದ್ದಾರೆ.

ಹೀಗಾಗಿ ಮುಂಬೈ ವಿರುದ್ಧ ಕೊಹ್ಲಿ 72 ರನ್ ಬಾರಿಸಿದರೆ, ಟಿ20ಕ್ರಿಕೆಟ್‌ನಲ್ಲಿ 14,000 ರನ್ ತಲುಪಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಪ್ರಸ್ತುತ, ಕ್ರಿಸ್ ಗೇಲ್, ಕೀರನ್ ಪೊಲಾರ್ಡ್, ಅಲೆಕ್ಸ್ ಹೇಲ್ಸ್, ಡೇವಿಡ್ ವಾರ್ನರ್ ಮತ್ತು ಜೋಸ್ ಬಟ್ಲರ್ ಮಾತ್ರ ಈ ಪಟ್ಟಿಯಲ್ಲಿದ್ದಾರೆ.

Published On – 6:12 pm, Sun, 10 May 26

Source link

ಬ್ಲಾಸ್ಟ್​​ ಬೆದರಿಕೆ, ಜಿಲೆಟಿನ್​​ ಪತ್ತೆ: ಪ್ರಧಾನಿ ಮೋದಿ ಬೆಂಗಳೂರು ಭೇಟಿ ವೇಳೆ ಖಾಕಿಗೆ ಟೆನ್ಷನ್​​ ತಂದ ಭದ್ರತೆ – Kannada News | PM Modi Bengaluru Security Scare: Gelatin Sticks Found, Bomb Threat Investigated

ಪ್ರಧಾನಿ ಮೋದಿ ಬೆಂಗಳೂರು ಭೇಟಿ ವೇಳೆ ಖಾಕಿಗೆ ಟೆನ್ಷನ್​​ ತಂದ ಭದ್ರತೆ

ಬೆಂಗಳೂರು, ಮೇ 10: ಎರಡು ಕಾರ್ಯಕ್ರಮಗಳ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಇಂದು (ಮೇ 10) ಬೆಂಗಳೂರಿಗೆ ಭೇಟಿ ನೀಡಿದ್ದರು. ಈ ನಡುವೆ ನಡೆದ ಕೆಲವು ಘಟನೆಗಳು ಪ್ರಧಾನಿಗೆ ಭದ್ರತೆ ಸಂಬಂಧಿಸಿ ಪೊಲೀಸರಿಗೆ ಟೆನ್ಷನ್​​ ತಂದ ಪ್ರಸಂಗ ನಡೆದಿದೆ. ಒಂದು ಕಡೆ ಬ್ಲಾಸ್ಟ್​​ ಬೆದರಿಕೆ ಬಂದಿದ್ದರೆ ಮತ್ತೊಂದು ಕಡೆ ದಾರಿಯ ಸಮೀಪವೇ ಜಿಲೆಟಿನ್​​ ಕಡ್ಡಿಗಳು ಸಿಕ್ಕಿವೆ. ಪೊಲೀಸರು ಈ ಬಗ್ಗೆ ತನಿಖೆ ಮುಂದುವರಿಸಿದ್ದು, ಬೆದರಿಕೆ ಕರೆ ಮಾಡಿದ್ದು ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿರುವ ವ್ಯಕ್ತಿ ಎಂಬುದು ಗೊತ್ತಾಗಿದೆ. ಇನ್ನು ಜಿಲೆಟಿನ್​​ ಪತ್ತೆ ಪ್ರಕರಣ ಸಂಬಂಧ ತನಿಖೆಗೆ ರಾಮನಗರ ಡಿವೈಎಸ್​ಪಿ ಶ್ರೀನಿವಾಸ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ.

ಪ್ರಧಾನಿ ಮೋದಿ ಭಾಗಿಯಾಗಲಿರುವ ಎರಡೂ ಕಾರ್ಯಕ್ರಮಗಳಲ್ಲಿ ಬ್ಲಾಸ್ಟ್​​ ಮಾಡೋದಾಗಿ ಬೆಳಿಗ್ಗೆ 7 ಗಂಟೆಯ ಹೊತ್ತಿಗೆ ಕೋರಮಂಗಲ ಪೊಲೀಸರಿಗೆ ಬೆದರಿಕೆ ಕರೆ ಬಂದಿತ್ತು. ಈ ಸಂಬಂಧ ಕೂಡಲೇ ಅಲರ್ಟ್​​ ಆದ ಪೊಲೀಸರು 7.30ರ ವೇಳೆಗೆ ಲೋಹಿತ್ ಎಂಬಾತನನ್ನು ಬನ್ನೇರುಘಟ್ಟ ರಸ್ತೆಯ ಮಸೀದಿ ಬಳಿಯಲ್ಲಿ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಈತ ಮಾನಸಿಕ ಅಸ್ವಸ್ಥತನ ರೀತಿ ವರ್ತನೆ ಮಾಡಿದ್ದು, ಈ ಹಿಂದೆ ದೇಶದ ಗಣ್ಯ ವ್ಯಕ್ತಿಗಳು ಆಗಮಿಸಿದಾಗಲೂ ಇದೇ ರೀತಿ ಬೆದರಿಕೆ ಕರೆ ಮಾಡಿದ್ದ ಎಂಬುದು ಗೊತ್ತಾಗಿದೆ.  ಖುದ್ದು ವಿಚಾರಣೆ ನಡೆಸಿರುವ ಆಗ್ನೇಯ ವಿಭಾಗ ಡಿಸಿಪಿ ಮಹಮ್ಮದ್ ಸುಜೀತಾ, ಮೇಲ್ನೋಟಕ್ಕೆ ಈತನಿಗೆ ಬೇರೆ ಯಾವುದೇ ಲಿಂಕ್ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಸಂಚರಿಸೋ ರಸ್ತೆ ಬಳಿ ಜಿಲೆಟಿನ್ ಕಡ್ಡಿಗಳು ಪತ್ತೆ; ಶಂಕಿತ ವ್ಯಕ್ತಿ ಪೊಲೀಸ್ ವಶಕ್ಕೆ

ಈ ನಡುವೆ ಬೆಳಿಗ್ಗೆ 10.30ರ ಹೊತ್ತಿಗೆ ಪ್ರಧಾನಿ ಆರ್ಟ್​​ ಆಫ್​​ ಲೀವಿಂಗ್​​ಗೆ ಸಾಗುವ ದಾರಿಯಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಜಗದೀಶ ಎಂಬ ಪೊಲೀಸ್ ಕಾನ್ಸ್​ಟೇಬಲ್​​ಗೆ ತಾತಗುಣಿ ಬಳಿಯ ರಸ್ತೆ ಬಳಿ ಅಂದ್ರೆ ರಸ್ತೆಯಿಂದ ಸುಮಾರು ಮೂವತ್ತು ಮೀಟರ್ ದೂರದ ಕಾಂಪೌಂಡ್ ಬಳಿ ಅನುಮಾನಾಸ್ಪದ ಒಂದು ಕವರ್ ಗಮನಿಸಿದ್ದಾರೆ. ಅದನ್ನು ಪರಿಶೀಲನೆ ನಡೆಸಿದಾಗ ಜಿಲೆಟಿನ್​​ ಕಡ್ಡಿಗಳು ಇರೋದು ಕಂಡುಬಂದಿದೆ. ತಕ್ಷಣ ಅವನ್ನು ವಶಕ್ಕೆ ಪಡೆದಿರುವ ಪೊಲೀಸರು ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಏxplosive ACT 1884 ಅಡಿಯಲ್ಲಿ ಕೇಸ್ ದಾಖಲು ಮಾಡಿದ್ದಾರೆ. ಪ್ರಧಾನಿ ಅಗಮಿಸುವ ಮೊದಲೇ ಸ್ಪೋಟಕ ವಸ್ತು ಪತ್ತೆಯಾದ ಹಿನ್ನಲೆ ತಕ್ಷಣ ಸಂಪೂರ್ಣ ರಸ್ತೆಯನ್ನು ಮತ್ತೊಮ್ಮೆ ಪರಿಶೀಲಿಸಿ ಯಾವುದೇ ಭದ್ರತಾ ಸಮಸ್ಯೆ ಇಲ್ಲ ಎಂಬುದನ್ನು ಪಕ್ಕಾ ಮಾಡಿಕೊಳ್ಳಲಾಗಿದೆ. ಆ ಬಳಿಕವೇ ಪ್ರಧಾನಿ ಅವರನ್ನು ಅದೇ ರಸ್ತೆ ಮೂಲಕ ಕರೆತಂದು ಕಾರ್ಯಕ್ರಮ ಮುಗಿದ ಬಳಿಕ ವಾಪಸ್ಸು ಕಳಿಸಲಾಗಿದೆ. ಆರಂಭದಲ್ಲಿ ಕೋರಮಂಗಲದ ವ್ಯಕ್ತಿಗೂ ಸಿಕ್ಕ ಜಿಲೆಟಿನ್​​ಗೂ ಲಿಂಕ್ ಇದೆಯಾ ಎಂದು ಅನುಮಾನ ಇತ್ತು. ಆದರೆ ವಿಚಾರಣೆ ವೇಳೆ ಆತನಿಗೂ ಇದಕ್ಕೂ ಸಂಬಂಧ ಇಲ್ಲವೆಂಬುದು ದೃಢಪಟ್ಟಿದೆಯಂತೆ.

ಎರಡೂ ಘಟನೆಗಳ ಬಳಿಕ ಬೆಂಗಳೂರು ನಗರದ ಆಗ್ನೇಯ ವಿಭಾಗ ಮತ್ತು ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸರು ಈ ಬಗ್ಗೆ ತನಿಖೆ ನಡೆಸುತಿದ್ದಾರೆ.  ಡಿವೈಎಸ್ಪಿ ಶ್ರೀನಿವಾಸ್ ನೇತ್ರತ್ವದಲ್ಲಿ ನಾಲ್ಕು ಇನ್ಸ್ಪೆಕ್ಟರ್​​ಗಳನ್ನು ಒಳಗೊಂಡ ಆರು ತಂಡಗಳನ್ನು ಬೆಂಗಳೂರು ದಕ್ಷಿಣ ಜಿಲ್ಲಾ ಎಸ್​ಪಿ ಶ್ರೀನಿವಾಸ ಗೌಡ ರಚನೆ ಮಾಡಿದ್ದು, ಜಿಲೆಟಿನ್ ಕಡ್ಡಿಗಳು ಹೇಗೆ ಬಂತು? ಯಾರು ತಂದಿದ್ದರು? ಮತ್ತು ಯಾವ ಉದ್ದೇಶಕ್ಕೆ ತಂದಿದ್ದರು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:58 pm, Sun, 10 May 26

Source link

ಎಫ್​ಎಸ್​ಆರ್ ಗ್ಲೋಬಲ್​ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ವೇತಾ ರವಿಕುಮಾರ್​ಗೆ ‘ಎನರ್ಜಿ ಇನ್​ಸ್ಟಿಟ್ಯೂಟ್ ಫೆಲೋ’ ಗೌರವ – Kannada News | Swetha Ravi Kumar, Executive Director of FSR Global elected as a Fellow of the Energy Institute through the eminence route

ಶ್ವೇತಾ ರವಿ ಕುಮಾರ್ ಮತ್ತಿತರರು…Image Credit source: https://www.linkedin.com/in/swethark22

ಹೈದರಾಬಾದ್, ಮೇ 10: ಎಫ್‌ಎಸ್‌ಆರ್ ಗ್ಲೋಬಲ್ (FSR Global) ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಹಾಗೂ ಹೈದರಾಬಾದ್ ಮೂಲದವರಾದ ಶ್ವೇತಾ ರವಿ ಕುಮಾರ್ ಅವರು ಪ್ರತಿಷ್ಠಿತ ‘ಎನರ್ಜಿ ಇನ್‌ಸ್ಟಿಟ್ಯೂಟ್’ನ ಫೆಲೋ ಆಗಿ ಆಯ್ಕೆಯಾಗಿದ್ದಾರೆ. ಇಂಧನ ಕ್ಷೇತ್ರದಲ್ಲಿ ಅವರು ಮಾಡಿರುವ ಮಹತ್ವದ ಸಾಧನೆಯನ್ನು ಪರಿಗಣಿಸಿ ‘ಎಮಿನೆನ್ಸ್ ರೂಟ್’ (Eminence Route) ಮೂಲಕ ಈ ಗೌರವವನ್ನು ನೀಡಲಾಗಿದೆ.

ಶ್ವೇತಾ ಅವರು ಕೇಂದ್ರ ವಿದ್ಯುತ್ ಸಚಿವಾಲಯದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವಾದ (ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್) ‘ಇಂಡಿಯಾ ಎನರ್ಜಿ ಸ್ಟಾಕ್’ನ (IES) ಕಾರ್ಯಕ್ರಮ ನಿರ್ದೇಶಕಿ ಮತ್ತು ರಾಷ್ಟ್ರೀಯ ಕಾರ್ಯಪಡೆಯ ಸದಸ್ಯೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ: ಭಾರತದ ಜಿಡಿಪಿ ಲೆಕ್ಕಾಚಾರದಲ್ಲಿ ಬದಲಾವಣೆ: ಮೂಲ ವರ್ಷ 2022-23ಕ್ಕೆ ವರ್ಗಾವಣೆ – ಇದರ ಅರ್ಥ ಮತ್ತು ಪರಿಣಾಮಗಳೇನು?

ಶ್ವೇತಾ ರವಿ ಕುಮಾರ್ ಅವರ ಪ್ರತಿಕ್ರಿಯೆ

ತಮ್ಮ ಈ ಸಾಧನೆಯ ಬಗ್ಗೆ ಲಿಂಕ್ಡ್‌ಇನ್‌ನಲ್ಲಿ ಸಂತಸ ಹಂಚಿಕೊಂಡಿರುವ ಅವರು ಹೀಗೆ ಬರೆದಿದ್ದಾರೆ:

“ಎನರ್ಜಿ ಇನ್‌ಸ್ಟಿಟ್ಯೂಟ್‌ನ ಫೆಲೋ ಆಗಿ ಆಯ್ಕೆಯಾಗಿರುವುದು ನನಗೆ ಸಂದ ಗೌರವ ಎಂದು ಭಾವಿಸುತ್ತೇನೆ. ಇಂಧನ ಕ್ಷೇತ್ರವು ಡಿಜಿಟಲೀಕರಣ, ವಿಕೇಂದ್ರೀಕರಣ ಮತ್ತು ಕೃತಕ ಬುದ್ಧಿಮತ್ತೆಯಂತಹ (AI) ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿರುವ ಈ ಸಮಯದಲ್ಲಿ, ಜಾಗತಿಕ ಇಂಧನ ಚರ್ಚೆಗಳಲ್ಲಿ ಹೆಚ್ಚು ಸಕ್ರಿಯವಾಗಿ ಕೊಡುಗೆ ನೀಡುವ ಜವಾಬ್ದಾರಿ ನನ್ನ ಮೇಲಿದೆ.”

ಎಫ್‌ಎಸ್‌ಆರ್ ಗ್ಲೋಬಲ್​ನ (FSR Global) ಕಾರ್ಯವೈಖರಿ

ಆಡಳಿತ, ಮಾರುಕಟ್ಟೆ ವಿನ್ಯಾಸ, ಡೇಟಾ ವ್ಯವಸ್ಥೆಗಳು ಮತ್ತು ಸಾಮರ್ಥ್ಯ ವೃದ್ಧಿಯಂತಹ ಪ್ರಾಯೋಗಿಕ ಸುಧಾರಣೆಗಳ ಮೇಲೆ ಸಂಸ್ಥೆ ಕೆಲಸ ಮಾಡುತ್ತಿದೆ. ಅಭಿವೃದ್ಧಿಶೀಲ ರಾಷ್ಟ್ರಗಳ (Global South) ಇಂಧನ ಪರಿವರ್ತನೆಗೆ ಪೂರಕವಾದ ನಿಯಮಗಳನ್ನು ರೂಪಿಸುವುದು ಇವರ ಮುಖ್ಯ ಉದ್ದೇಶವಾಗಿದೆ. ಇಂಧನ ಪರಿವರ್ತನೆಯ ಮುಂದಿನ ಹಂತವು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ವಿದ್ಯುತ್, ಅನಿಲ, ಸಾರಿಗೆ ಮತ್ತು ಡಿಜಿಟಲ್ ಮೂಲಸೌಕರ್ಯಗಳು ಪರಸ್ಪರ ಸಂಬಂಧ ಹೊಂದಿದ್ದು, ನಿಯಂತ್ರಕ ಸಂಸ್ಥೆಗಳು ಈ ವಾಸ್ತವಕ್ಕೆ ತಕ್ಕಂತೆ ಕೆಲಸ ಮಾಡಬೇಕೆಂದು ಶ್ವೇತಾ ರವಿಕುಮಾರ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಬೈನಾನ್ಸ್‌ನಿಂದ ಹೊಸ ‘ವಿತ್‌ಡ್ರಾ ಪ್ರೊಟೆಕ್ಷನ್’: ಬಳಕೆದಾರರ ಕ್ರಿಪ್ಟೋ ಆಸ್ತಿಗಳಿಗೆ ಈಗ ಹೆಚ್ಚುವರಿ ಭದ್ರತೆ

ಪ್ರಧಾನಿ ನರೇಂದ್ರ ಮೋದಿ ಅವರ ‘ಆತ್ಮನಿರ್ಭರ ಭಾರತ’ ಪರಿಕಲ್ಪನೆಯಡಿ, ಸಲಹಾ ಮತ್ತು ನೀತಿ ನಿರೂಪಣಾ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸಲು ಇಟಲಿಯ ಫ್ಲಾರೆನ್ಸ್ ಸ್ಕೂಲ್ ಆಫ್ ರೆಗ್ಯುಲೇಶನ್‌ನ ಸೋದರಸಂಸ್ಥೆಯಾಗಿ ಇದು ಆರಂಭವಾಯಿತು. ಪ್ರಸ್ತುತ, ಎಫ್‌ಎಸ್‌ಆರ್ ಗ್ಲೋಬಲ್ ಭಾರತ ಮೂಲದ ಸ್ವತಂತ್ರ ನೀತಿ ಸಂಶೋಧನಾ ಸಂಸ್ಥೆಯಾಗಿ (Policy Think-tank) ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

CSK vs LSG: 6,6,6,6,6,6.. ಸಿಎಸ್​ಕೆ ವಿರುದ್ಧ ಅಬ್ಬರಿಸಿದ ಜೋಶ್ ಇಂಗ್ಲಿಸ್ – Kannada News | LSG vs CSK: Josh Inglis Hits Record 17 Ball Half Century in Chepauk Thriller*

ಐಪಿಎಲ್ 2026 ರ 53ನೇ ಪಂದ್ಯ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಿತು. ಈ ಪಂದ್ಯ ಪ್ಲೇಆಫ್ ದೃಷ್ಟಿಯಿಂದ ಸಿಎಸ್​ಕೆಗೆ ಬಹುಮುಖ್ಯವಾಗಿದ್ದರೆ, ಲಕ್ನೋ ತಂಡಕ್ಕೆ ಕೇವಲ ಔಪಚಾರಿಕವಾಗಿತ್ತು. ಏಕೆಂದರೆ ಲಕ್ನೋ ತಂಡ ಪ್ಲೇಆಫ್ ತಲುಪುವುದು ಅಸಾಧ್ಯವೆಂದು ಹೇಳಲಾಗುತ್ತಿದೆ. ಇದರ ನಡುವೆಯೂ ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಲಕ್ನೋ ತಂಡದ ಆರಂಭಿಕ ಆಟಗಾರ ಜೋಶ್ ಇಂಗ್ಲಿಸ್, ಕೇವಲ 17 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ತಂಡಕ್ಕೆ ಭರ್ಜರಿ ಆರಂಭ ನೀಡಿದರು.

ಮೇ 10 ರಂದು ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಮೊದಲು ಬ್ಯಾಟಿಂಗ್ ಮಾಡಿತು. ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಜೋಶ್ ಇಂಗ್ಲಿಸ್ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆ ಸುರಿಸಿ ಕೇವಲ 17 ಎಸೆತಗಳಲ್ಲಿ, ಆರು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಅರ್ಧಶತಕ ಪೂರೈಸಿದರು. ಅಂದರೆ ಇಂಗ್ಲಿಸ್ ಕೇವಲ ಬೌಂಡರಿ ಹಾಗೂ ಸಿಕ್ಸರ್​ಗಳಿಂದಲೇ 48 ರನ್ ಕಲೆಹಾಕಿದರು.

ಶತಕದಂಚಿನಲ್ಲಿ ಎಡವಿದ ಇಂಗ್ಲಿಸ್

ಇಂಗ್ಲಿಸ್ ಸ್ಫೋಟಕ ಬ್ಯಾಟಿಂಗ್‌ ಮಾಡುವುದರ ಜೊತೆಗೆ ಮಿಚೆಲ್ ಮಾರ್ಷ್ ಅವರೊಂದಿಗೆ 77 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಅದರಲ್ಲಿ ಇಂಗ್ಲಿಸ್ ಒಬ್ಬರೇ 66 ರನ್‌ಗಳ ಕೊಡುಗೆ ನೀಡಿದರು. ಆದಾಗ್ಯೂ, ಶತಕದಂಚಿನಲ್ಲಿ ಎಡವಿದ ಇಂಗ್ಲಿಸ್ ಕೇವಲ 33 ಎಸೆತಗಳಲ್ಲಿ 85 ರನ್ ಬಾರಿಸಿ ಔಟಾದರು. ಇಂಗ್ಲಿಸ್ ಅವರ ಇನ್ನಿಂಗ್ಸ್‌ನಲ್ಲಿ 10 ಬೌಂಡರಿಗಳು ಮತ್ತು 6 ಸಿಕ್ಸರ್‌ಗಳು ಸೇರಿದ್ದವು.

3 ವರ್ಷಗಳ ನಂತರ ಸಿಎಸ್‌ಕೆಗೆ ಆಘಾತ

ಇಂಗ್ಲಿಸ್ ಅವರ ಸ್ಫೋಟಕ ಆರಂಭದ ಪರಿಣಾಮವಾಗಿ ಲಕ್ನೋ ತಂಡವು ಕೇವಲ 3.4 ಓವರ್‌ಗಳಲ್ಲಿ 50 ರನ್‌ಗಳ ಗಡಿ ತಲುಪಿತು. ಈ ಮೂಲಕ ಲಕ್ನೋ ತಂಡ ಅತಿ ವೇಗವಾಗಿ 50 ರನ್ ಗಳಿಸಿದ ತನ್ನದೇ ಆದ ದಾಖಲೆಯನ್ನು ಸರಿಗಟ್ಟಿತು. ಪ್ರಾಸಂಗಿಕವಾಗಿ, ತಂಡದ ಹಿಂದಿನ ದಾಖಲೆಯು ಮೂರು ವರ್ಷಗಳ ಹಿಂದೆ ಅಂದರೆ 2023 ರಲ್ಲಿ ಇದೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೃಷ್ಟಿಯಾಗಿತ್ತು. ಆ ಪಂದ್ಯದಲ್ಲಿಯೂ ಸಹ, ತಂಡವು ಕೇವಲ 3.4 ಓವರ್‌ಗಳಲ್ಲಿ 50 ರನ್‌ಗಳ ಗಡಿ ದಾಟಿತು.

Source link

SSB Constable Recruitment 2026: SSB ಕಾನ್ಸ್‌ಟೇಬಲ್ ನೇಮಕಾತಿ; ಕ್ರೀಡಾ ಕೋಟಾದಡಿ 404 ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | SSB Constable Recruitment 2026: Sports Quota 404 Posts, No Exam Selection! Apply Now

SSB ಕಾನ್ಸ್‌ಟೇಬಲ್ ನೇಮಕಾತಿImage Credit source: Ai generated

ಭಾರತ ಸರ್ಕಾರದ ಸಚಿವಾಲಯದ ಅಡಿಯಲ್ಲಿ ಬರುವ ಸಶಸ್ತ್ರ ಸೀಮಾ ಬಲ್ (SSB), 2026ನೇ ಸಾಲಿನ ಗ್ರೂಪ್ ‘ಸಿ’ ನಾನ್-ಗೆಜೆಟೆಡ್ ಕಾನ್ಸ್‌ಟೇಬಲ್ (ಜನರಲ್ ಡ್ಯೂಟಿ) ಹುದ್ದೆಗಳ ಭರ್ತಿಗೆ ಚಾಲನೆ ನೀಡಿದೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಒಟ್ಟು 404 ಹುದ್ದೆಗಳು ಲಭ್ಯವಿವೆ. ಆಯ್ಕೆಯಾದ ಅಭ್ಯರ್ಥಿಗಳು ಭಾರತದಾದ್ಯಂತ ಅಥವಾ ವಿದೇಶಗಳಲ್ಲಿ ಸೇವೆಯನ್ನು ಸಲ್ಲಿಸಲು ಸಿದ್ಧರಿರಬೇಕು.

ಶೈಕ್ಷಣಿಕ ಮತ್ತು ಕ್ರೀಡಾ ಅರ್ಹತೆಗಳು:

ಕನಿಷ್ಠ 10ನೇ ತರಗತಿ ಅಥವಾ ಮೆಟ್ರಿಕ್ಯುಲೇಷನ್ ಉತ್ತೀರ್ಣರಾಗಿರಬೇಕು. ಅಥ್ಲೆಟಿಕ್ಸ್, ಈಜು, ಬಾಕ್ಸಿಂಗ್, ಫುಟ್‌ಬಾಲ್, ಹಾಕಿ, ಕಬಡ್ಡಿ, ವಾಲಿಬಾಲ್, ಕುಸ್ತಿ, ಯೋಗಾಸನ ಸೇರಿದಂತೆ ವಿವಿಧ ಕ್ರೀಡಾ ವಿಭಾಗಗಳಲ್ಲಿ ಅಂತರರಾಷ್ಟ್ರೀಯ ಅಥವಾ ರಾಷ್ಟ್ರೀಯ ಮಟ್ಟದಲ್ಲಿ ದೇಶ ಅಥವಾ ರಾಜ್ಯವನ್ನು ಪ್ರತಿನಿಧಿಸಿರಬೇಕು. ಇದಲ್ಲದೇ ಸೀನಿಯರ್ ಅಥವಾ ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಲ್ಲಿ ಪದಕ ಗೆದ್ದವರು ಮತ್ತು ಖೇಲೋ ಇಂಡಿಯಾ ಗೇಮ್ಸ್ ಪದಕ ವಿಜೇತರಿಗೂ ಅರ್ಜಿ ಸಲ್ಲಿಸಲು ಅವಕಾಶವಿದೆ.

ವಯೋಮಿತಿ ಮತ್ತು ಸಡಿಲಿಕೆ:

ಅಭ್ಯರ್ಥಿಗಳ ವಯಸ್ಸು 18 ರಿಂದ 23 ವರ್ಷಗಳ ನಡುವೆ ಇರಬೇಕು. ಸರ್ಕಾರದ ನಿಯಮಗಳ ಪ್ರಕಾರ, ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ (SC/ST/OBC) ವಯೋಮಿತಿಯಲ್ಲಿ ನಿಯಮಾನುಸಾರ ಸಡಿಲಿಕೆ ನೀಡಲಾಗುತ್ತದೆ.

ಇದನ್ನೂ ಓದಿ: ಇನ್ಫೋಸಿಸ್‌ನಿಂದ ಭರ್ಜರಿ ಉದ್ಯೋಗಾವಕಾಶ; 20,000 ಫ್ರೆಶರ್ಸ್‌ ನೇಮಕಾತಿ ಘೋಷಣೆ

ವೇತನ ಶ್ರೇಣಿ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕ ವೇತನ ಪ್ಯಾಕೇಜ್ ದೊರೆಯಲಿದೆ. ಮಾಸಿಕ ರೂ. 21,700 ರಿಂದ ರೂ. 69,100 ರವರೆಗೆ ವೇತನದ ಜೊತೆಗೆ ಸರ್ಕಾರದ ಇತರ ಸೌಲಭ್ಯಗಳು ಮತ್ತು ಭತ್ಯೆಗಳು ಲಭ್ಯವಿರುತ್ತವೆ.

ಅರ್ಜಿ ಶುಲ್ಕ ಮತ್ತು ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. ಜೂನ್ 7. ಸಾಮಾನ್ಯ (General), EWS ಮತ್ತು OBC ಅಭ್ಯರ್ಥಿಗಳಿಗೆ 100ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಎಸ್‌ಸಿ (SC), ಎಸ್‌ಟಿ (ST) ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.

ಆಯ್ಕೆ ಪ್ರಕ್ರಿಯೆ:

ಈ ನೇಮಕಾತಿಯ ವಿಶೇಷತೆಯೆಂದರೆ ಅಭ್ಯರ್ಥಿಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಕ್ರೀಡಾ ಕ್ಷೇತ್ರದಲ್ಲಿನ ಅವರ ಸಾಧನೆ, ಅರ್ಹತೆ ಮತ್ತು ದಾಖಲೆಗಳ ಆಧಾರದ ಮೇಲೆ ನೇರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಪ್ಪು ಕೋಟು ಧರಿಸಿ ಪ್ರಮಾಣ ವಸನ ಸ್ವೀಕರಿಸಿದ್ದೇಕೆ ದಳಪತಿ ವಿಜಯ್ – Kannada News | Why Thalapathy Vijay wear black dress for his oath taking ceremony

ಕಳೆದ 60 ವರ್ಷಗಳಿಂದಲೂ ಡಿಎಂಕೆ, ಎಐಎಡಿಎಂಕೆ ಹೊರತಾಗಿ ಇನ್ಯಾವ ಪಕ್ಷದವರು ಸಹ ತಮಿಳುನಾಡಿನಲ್ಲಿ ಸಿಎಂ ಆಗಿರಲಿಲ್ಲ. ಇದೀಗ ಆ 60 ವರ್ಷದ ದಾಖಲೆಯನ್ನು ಮುರಿದು ದಳಪತಿ ವಿಜಯ್ ಇಂದು (ಮೇ 10) ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಚುನಾವಣಾ ಫಲಿತಾಂಶದ ಬಳಿಕ ಕೆಲವು ಸಣ್ಣ-ಪುಟ್ಟ ಅಡತಡೆಗಳನ್ನು ಎದುರಿಸಿದ ವಿಜಯ್, ಕೊನೆಗೂ ಕಾಂಗ್ರೆಸ್, ಸಿಪಿಐ, ಸಿಪಿಐಎಂ, ವಿಸಿಕೆ, ಐಯು​​ಎಂಎಲ್ ಪಕ್ಷಗಳ ಬೆಂಬಲದೊಂದಿಗೆ ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

ಇಂದು ವಿಜಯ್ ಪ್ರಮಾಣ ವಚನ ಸ್ವೀಕಾರದ ಸಮಯದಲ್ಲಿ ಅವರು ಧರಿಸಿದ್ದ ಉಡುಪು ಗಮನ ಸೆಳೆಯಿತು. ಭಾರತದಲ್ಲಿ ರಾಜಕಾರಣಿಗಳೆಂದರೆ ಬಿಳಿ ಬಟ್ಟೆ ಅದರಲ್ಲೂ ಸೆಲ್ವಾರ್ ಕಮೀಜ್ ಮಾದರಿಯ, ದಕ್ಷಿಣದಲ್ಲಾದರೆ ಬಿಳಿ ಶರ್ಟು, ಪಂಚೆ ಉಡುವುದು ತೀರ ಸಾಮಾನ್ಯ. ಆದರೆ ವಿಜಯ್ ಇಂದು ಕಪ್ಪು ಬಣ್ಣದ ಸೂಟು ಧರಿಸಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಸೂಟು ಧರಿಸುವ ಮೂಲಕ ತಾವು ಸಂಪ್ರದಾಯವಾದಿ ರಾಜಕಾರಣಿ ಅಲ್ಲ ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನಿಸಿದರು.

ವಿಜಯ್, ಸೂಟು ಧರಿಸಿದ್ದೇನೋ ಸರಿ, ಆದರೆ ಕಪ್ಪು ಬಣ್ಣದ ಸೂಟನ್ನೇ ಧರಿಸಿದ್ದೇಕೆ? ಕಪ್ಪು ಬಣ್ಣವನ್ನು ಬಹುತೇಕ ಭಾರತೀಯ ಮಂದಿ ಅಪಶಕುನವೆಂದು ಪರಿಗಣಿಸುತ್ತಾರೆ. ಶುಭ ಸಂದರ್ಭಗಳಲ್ಲಿ ಕಪ್ಪು ಬಣ್ಣದ ಧಿರಿಸುಗಳನ್ನು ಧರಿಸುವುದಿಲ್ಲ. ವಿಜಯ್ ಕ್ರಿಶ್ಚಿಯನ್ ಧರ್ಮದವರಾಗಿದ್ದು, ಅವರ ಧರ್ಮದಲ್ಲಿ ಸಹ ಕಪ್ಪು ಉಡುಪನ್ನು ಶುಭ ಸಂದರ್ಭಗಳಲ್ಲಿ ಧರಿಸುವುದಿಲ್ಲ, ಹಾಗಿದ್ದರೂ ಸಹ ವಿಜಯ್ ಅವರು ಪ್ರಮಾಣ ವಚನ ಸ್ವೀಕಾರಕ್ಕೆ ಕಪ್ಪು ಬಣ್ಣದ ಧಿರಿಸು ಧರಿಸಿ ಬಂದಿದ್ದರು.

ಇದನ್ನೂ ಓದಿ:ವಿಜಯ್ ಪ್ರಮಾಣವಚನ ನೋಡಲು ಬರಲಿಲ್ಲ ಪತ್ನಿ, ಮಕ್ಕಳು; ಮಿಂಚಿದ್ದು ಮಾತ್ರ ತ್ರಿಶಾ

ವಿಜಯ್ ಕಪ್ಪು ಬಣ್ಣದ ಧಿರಿಸು ಧರಿಸುವುದಕ್ಕೆ ಕಾರಣವಿದೆ. ಕಪ್ಪು ಬಣ್ಣವು ತಮಿಳುನಾಡಿನಲ್ಲಿ ದ್ರಾವಿಡ ಚಳುವಳಿಯ ಸಂಕೇತವಾಗಿದೆ. ದ್ರಾವಿಡ ಚಳವಳಿಯ ಪ್ರಸಾರಕ್ಕೆ ಕಾರಣರ್ತ ಮತ್ತು ‘ದ್ರಾವಿಡ ಕಳಗಂ’ ಸಂಸ್ಥಾಪಕ ಪೆರಿಯಾರ್ ಅವರು ಜಾತಿ ತಾರತಮ್ಯ, ಸಾಮಾಜಿಕ ತಾರತಮ್ಯ ಮತ್ತು ಮೌಢ್ಯದ ವಿರುದ್ಧ ಪ್ರತಿಭಟನಾರ್ತವಾಗಿ ಕಪ್ಪು ಬಟ್ಟೆ ಉಡಲು ಕರೆ ನೀಡಿದ್ದರು. ಪೆರಿಯಾರ್ ಹಿಂಬಾಲಕರು, ಅವರ ವಿಚಾರವನ್ನು ಪ್ರತಿಪಾದಿಸುವವರು ಕಪ್ಪು ಬಟ್ಟೆಗಳನ್ನು ಧರಿಸುತ್ತಿದ್ದರು.

ವಿಜಯ್ ಸಹ ಪೆರಿಯರ್ ಅವರ ಆದರ್ಶಗಳಲ್ಲಿ ನಂಬಿಕೆ ಇರಿಸಿದವರಾಗಿದ್ದು, ಅವರ ಚುನಾವಣಾ ಪ್ರಚಾರದ ಎಲ್ಲ ವೇದಿಕೆಗಳಲ್ಲಿಯೂ ಪೆರಿಯಾರ್ ಅವರ ಚಿತ್ರಗಳನ್ನು ಇರಿಸಿಕೊಂಡಿದ್ದರು. ಹಾಗಾಗಿ ಪೆರಿಯಾರ್ ಆದರ್ಶಗಳ ಪ್ರದಿಪಾದಕರಾಗಿ ಅವರು ಇಂದು ಕಪ್ಪು ಬಣ್ಣದ ಉಡುಪು ಧರಿಸಿ ಬಂದಿದ್ದರು. ಕಪ್ಪು ಬಣ್ಣದ ಕೋಟು, ಪ್ಯಾಂಟು ಮತ್ತು ಬಿಳಿ ಬಣ್ಣದ ಶರ್ಟ್ ಧರಿಸಿ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link