All posts by nagaraj11081993

ವಿಶ್ವ ದಾಖಲೆ ಬರೆಯುತ್ತದೆಯೇ ‘ಮೈಖಲ್’ ಸಿನಿಮಾ: ಗಳಿಸಿರುವುದೆಷ್ಟು? ಗಳಿಸಬೇಕಾದ್ದೆಷ್ಟು? – Kannada News | Michael movie collects 570 million dolor will beat Avatar

ವಿಶ್ವದ ನಂಬರ್ 1 ಪಾಪ್ ಸ್ಟಾರ್, ಎಂಟರ್ಟೈನರ್ ಎಂದೇ ಕರೆಯಲಾಗುವ ದಿವಂಗತ ಮೈಖಲ್ ಜಾಕ್ಸನ್ (Michael) ಜೀವನ ಆಧರಿಸಿದ ‘ಮೈಖಲ್’ ಸಿನಿಮಾ ಮೂರು ವಾರಗಳ ಹಿಂದೆ ವಿಶ್ವದಾದ್ಯಂತ ಬಿಡುಗಡೆ ಆಗಿದೆ. ಮೊದಲ ದಿನ ವಿಮರ್ಶಕರಿಂದ ಧನಾತ್ಮಕ ವಿಮರ್ಶೆಗಳನ್ನು ಗಳಿಸದೇ ಇದ್ದರು, ಪ್ರೇಕ್ಷಕರು ಮಾತ್ರ ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಮೈಖಲ್ ಜಾಕ್ಸನ್ ಅಭಿಮಾನಿಗಳು ವಿಶ್ವದಾದ್ಯಂತ ಇದ್ದು, ಎಲ್ಲೆಡೆ ಈ ಸಿನಿಮಾ ಉತ್ತಮ ಗಳಿಕೆ ಮಾಡುತ್ತಿದೆ. ಈ ಸಿನಿಮಾ ಸಾರ್ವಕಾಲಿಕ ಬಾಕ್ಸ್ ಆಫೀಸ್ ರೆಕಾರ್ಡ್ ಅನ್ನು ಮುರಿಯುವ ಸಾಧ್ಯತೆ ಇದೆ ಎಂದು ಕೆಲ ಬಾಕ್ಸ್ ಆಫೀಸ್ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

‘ಮೈಖಲ್’ ಸಿನಿಮಾ ಬಿಡುಗಡೆ ಆದ ಮೂರು ವಾರಗಳಲ್ಲಿ 570 ಮಿಲಿಯನ್​​ಗೂ ಹೆಚ್ಚು ಹಣವನ್ನು ಗಳಿಕೆ ಮಾಡಿದೆ. ಅಂದರೆ ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಈ ಸಿನಿಮಾ ಈಗಾಗಲೇ 5300 ಕೋಟಿಗೂ ಹೆಚ್ಚು ಮೊತ್ತವನ್ನು ಗಳಿಸಿದೆ. ಆದರೆ ಸಾರ್ವಕಾಲಿಕ ಬಾಕ್ಸ್ ಆಫೀಸ್ ದಾಖಲೆಯನ್ನು ಮುರಿಯಲು ಸಿನಿಮಾ ಇನ್ನೂ ಸಾಕಷ್ಟು ಮೊತ್ತ ಗಳಿಸಬೇಕಿದೆ. ಅದು ಅಷ್ಟು ಸುಲಭವಲ್ಲ.

ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಈ ವರೆಗೆ ಅತಿ ಹೆಚ್ಚು ಹಣ ಗಳಿಸಿರುವ ಸಿನಿಮಾ 2009 ರಲ್ಲಿ ಬಿಡುಗಡೆ ಆಗಿರುವ ‘ಅವತಾರ್’ ಆ ಸಿನಿಮಾ 2.97 ಬಿಲಿಯನ್ ಡಾಲರ್​​ಗಳನ್ನು ಗಳಿಸಿದೆ. ಅಂದರೆ ಭಾರತೀಯ ಲೆಕ್ಕಾಚಾರದಲ್ಲಿ ಆ ಸಿನಿಮಾ 27 ಸಾವಿರ ಕೋಟಿಗೂ ಹೆಚ್ಚು ಮೊತ್ತವನ್ನು ಗಳಿಕೆ ಮಾಡಿದೆ. ಅದರ ನಂತರದ ಸ್ಥಾನದಲ್ಲಿರುವ ‘ಅವೇಂಜರ್ಸ್: ದಿ ಎಂಡ್​​ಗೇಮ್’ ಸಿನಿಮಾ ಸುಮಾರು 25 ಸಾವಿರ ಕೋಟಿ ಮೊತ್ತ ಗಳಿಸಿದೆ. ಈ ಸಿನಿಮಾಗಳನ್ನು ಹಿಂದಿಕ್ಕಲು ‘ಮೈಖಲ್’ ಸಿನಿಮಾ ಈಗ ಗಳಿಸಿರುವುದಕ್ಕಿಂತಲೂ ಆರು ಪಟ್ಟು ಹೆಚ್ಚು ಮೊತ್ತ ಗಳಿಸಬೇಕಿದೆ. ಅದು ಸುಲಭ ಸಾಧ್ಯವಲ್ಲ.

ಇದನ್ನೂ ಓದಿ:ಗರ್ಲ್​​ಫ್ರೆಂಡ್ ಜೊತೆಗೆ ಬಿಗ್​​ಬಾಸ್ ಮೈಖಲ್ ವರ್ಕೌಟ್?

‘ಮೈಖಲ್’ ಸಿನಿಮಾದ ಗಳಿಕೆ ದಿನೇ-ದಿನೇ ಹೆಚ್ಚಾಗುತ್ತಿದೆ. ಆದರೂ ಈಗಿನ ಗಳಿಕೆಯ ಆರು ಪಟ್ಟು ಮೊತ್ತವನ್ನು ಗಳಿಸುವುದು ಸುಲಭದ ಮಾತಲ್ಲ. ‘ಮೈಖಲ್’ ಸಿನಿಮಾ ಭಾರತದಲ್ಲಿ ಸಹ ಉತ್ತಮ ಗಳಿಕೆ ಮಾಡುತ್ತಿದ್ದು, ಮೂರು ವಾರಗಳಲ್ಲಿ ಭಾರತದಲ್ಲಿ 58 ಕೋಟಿ ರೂಪಾಯಿಗಳ ಗಳಿಕೆ ಮಾಡಿದೆ. ಇದು ಸಹ ದೊಡ್ಡ ಮೊತ್ತವೇನೂ ಅಲ್ಲ. ‘ಅವೇಂಜರ್ಸ್’, ‘ಸ್ಪೈಡರ್​​ಮ್ಯಾನ್’ ಸಿನಿಮಾಗಳು ಭಾರತದಲ್ಲಿ 200 ಕೋಟಿ ಗಳಿಸಿದ ಉದಾಹರಣೆ ಇದೆ.

‘ಮೈಖಲ್’ ಸಿನಿಮಾವು ಮೈಖಲ್ ಜಾಕ್ಸನ್ ಅವರ ಮೊದಲಾರ್ಧದ ಜೀವನದ ಕತೆಯನ್ನು ಒಳಗೊಂಡಿದೆ. ಮೈಖಲ್ ಪಾತ್ರದಲ್ಲಿ, ಮೈಖಲ್ ಜಾಕ್ಸನ್ ಅವರ ಸಹೋದರನ ಮಗ ಜಫ್ಪಾರ್ ಮೈಖಲ್ ನಟಿಸಿದ್ದಾರೆ. ಭಾರತೀಯ ಮೂಲದ ಪಾಪ್ ಗಾಯಕ ಪ್ರಿನ್ಸ್ ಅವರ ಜೀವನವನ್ನು ತೆರೆಗೆ ತಂದಿದ್ದ ಆಂಟೊನಿ ಫಕು ಅವರೇ ಈ ಸಿನಿಮಾವನ್ನೂ ನಿರ್ದೇಶಿಸಿದ್ದು, ಸಿನಿಮಾದ ಎರಡನೇ ಭಾಗವೂ ಸಹ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಯ್ಯೂಟೂಬೇ ಗುರು: ಬಿಸಿಲಿನ ಅಬ್ಬರದ ನಡುವೆ ಚಿಕ್ಕಬಳ್ಳಾಪುರದಲ್ಲಿ ಕಾಶ್ಮೀರಿ ಆ್ಯಪಲ್​​ ಬೆಳೆದ ರೈತ! – Kannada News | From YouTube to Orchard: Chikkaballapur Farmer Cultivates Kashmiri Apples Successfully

ಬೆಳೆದ ಬೆಳೆ ಜೊತೆ ರೈತImage Credit source: Tv9 Kannada

ಚಿಕ್ಕಮಗಳೂರು, ಮೇ 10: ಸೇಬು ಅಂದ ತಕ್ಷಣ ನಮಗೆ ನೆನಪಾಗೋದೇ ಕಾಶ್ಮೀರ. ಯಾಕೆಂದರೆ ಶೀತವಲಯದ ಪ್ರಮುಖ ಬೆಳೆಗಳಲ್ಲೊಂದಾದ ಸೇಬನ್ನು ಭಾರದಲ್ಲಿ ಹೆಚ್ಚಾಗಿ ಬೆಳೆಯುವ ರಾಜ್ಯಗಳೆಂದರೆ ಅವು ಹಿಮಾಚಲ ಪ್ರದೇಶ ಮತ್ತು ಜಮ್ಮು ಕಾಶ್ಮೀರ. ಆದರೆ ಜನರ ಈ ಅನಿಸಿಕೆಯನ್ನು ಸುಳ್ಳು ಮಾಡುವ ನಿಟ್ಟಿನಲ್ಲಿ ನಮ್ಮದೇ ಕರ್ನಾಟಕದ ರೈತರೊಬ್ಬರು ಗಮನ ಸೆಳೆದಿದ್ದಾರೆ. ರಾಜಧಾನಿ ಬೆಂಗಳೂರಿನ ಪಕ್ಕವೇ ಕಾಶ್ಮೀರಿ ಆ್ಯಪಲ್​​ ಬೆಳೆ ಬೆಳೆದು ಸೈ ಎನಿಸಿಕೊಂಡಿದ್ದಾರೆ.

ಮುಖ್ಯಾಂಶಗಳು

  • ಚಿಕ್ಕಬಳ್ಳಾಪುರದಲ್ಲಿ ಕಾಶ್ಮೀರಿ ಆ್ಯಪಲ್​​ ಬೆಳೆದ ರೈತ
  • ಅಡ್ಡಗಲ್ಲದ ವ್ಯಕ್ತಿಯೋರ್ವರಿಂದ ವಿಶಿಷ್ಠ ಸಾಧನೆ
  • ಬಿಸಲಿನ ಅಬ್ಬರದ ನಡುವೆಯೂ ಕೈ ಹಿಡಿದ ಬೆಳೆ

ಚಿಕ್ಕಬಳ್ಳಾಪುರ ತಾಲೂಕಿನ ಅಡ್ಡಗಲ್ಲ ಗ್ರಾಮದ ರೈತ ಅನಿಲ್ ಎನ್ನುವವರು ತನ್ನ ಒಂದು ಎಕರೆ ಜಮೀನಿನಲ್ಲಿ ಸೇಬು ಬೆಳೆ ಬೆಳೆದಿದ್ದಾರೆ. ಈ ಜಮೀನಿಲ್ಲಿ ಟೊಮ್ಯಾಟೋ ಸೇರಿದಂತೆ ಇತರ ತರಕಾರಿ ಬೆಳೆದಿದ್ದ ಅನಿಲ್,​​ ಈ ಹಿಂದೆ ಸಾಕಷ್ಟು ಬಾರಿ ಕೈಸುಟ್ಟುಕೊಂಡಿದ್ದರು. ಹೀಗಾಗಿ ಇದೇ ಬೆಳೆಯನ್ನು ಮತ್ತೆ ಬೆಳೆದು ನಷ್ಟ ಅನುಭವಿಸುವ ಬದಲು ಹೊಸತೇನನ್ನಾದರೂ ಮಾಡಬೇಕೆಂದು ಯೋಚಿಸಿದ್ದಾರೆ. ಅದರಂತೆ ಹೊಲದಲ್ಲಿ ಅವರು 400 ಆ್ಯಪಲ್​​ ಗಿಡಗಳನ್ನು ಹಾಕಿದ್ದು, ಅವುಗಳಲ್ಲೀಗ ಭರ್ಜರಿ ಫಸಲು ಬಂದಿದೆ.

ಇದನ್ನೂ ಓದಿ: ರಣಬಿಸಿಲಲ್ಲೂ ನಳನಳಿಸಿದ ‘ದಿಲ್ ಖುಷ್’; ವಿಶಿಷ್ಟ ತಳಿಯ ದ್ರಾಕ್ಷಿಗೆ ಭಾರೀ ಡಿಮ್ಯಾಂಡ್

ಯ್ಯೂಟೂಬೇ ಗುರು!

ಅಷ್ಟಕ್ಕೂ ಸೇಬು ಬೆಳೆ ಬೆಳೆಯೋದು ಹೇಗೆಂದು ಯೂಟ್ಯೂಬ್​​ ನೋಡಿ ರೈತ ಅನಿಲ್​​ ಗಿಡಗಳನ್ನು ಹಾಕಿದ್ದರು. ಜೊತೆಗೆ ಅಲ್ಲಿ ಸಿಕ್ಕ ಮಾಹಿತಿಯನ್ನು ಅಧರಿಸಿ ತುಮಕೂರು ಮೂಲಕ ಕೃಷಿ ಪದವಿಧರ ಶಶಿಕುಮಾರ್ ಮಾರ್ಗದರ್ಶನದಲ್ಲಿ ಆ್ಯಪಲ್​​ ಬೆಳೆದಿದ್ದಾರೆ. ಇಸ್ರೇಲ್ ಮೂಲದ ತಳಿಯ ಗಿಡಗಳನ್ನು ತರಿಸಿ ಪ್ರಯೋಗ ಮಾಡಿದ್ದು,  ಸೇಬಿನ ಫಸಲು ಉತ್ತಮವಾಗಿ ಬಂದಿದೆ. ಸದ್ಯ ಒಂದು ಗಿಡದಲ್ಲಿ ಹತ್ತು ಕೆಜಿಯಷ್ಟು ಬೆಳೆ ಬಂದಿದ್ದು, ಹಣ್ಣುಗಳನ್ನು ವರ್ತಕರಿಗೆ ಕೊಡುವುದರ ಬದಲು ಸಾರ್ವಜನಿಕರು ತೋಟಕ್ಕೆ ಬಂದು ಮನಸ್ಸೋ ಇಚ್ಚೆ ಕಿತ್ತುಕೊಂಡು ಹಣ ನೀಡುವಂತೆ ರೈತ ಅನಿಲ್​ ಮನವಿ ಮಾಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಸ್ಸಾಂ ಮುಖ್ಯಮಂತ್ರಿಯಾಗಿ ಮತ್ತೊಮ್ಮೆ ಹಿಮಂತ ಬಿಸ್ವ ಶರ್ಮಾ ಆಯ್ಕೆ: ಮೇ 12ಕ್ಕೆ ಪ್ರಮಾಣ ವಚನ ಸ್ವೀಕಾರ – Kannada News | Himanta Biswa Sarma to be Assam CM for Second Term; Oath on May 12 After NDA Selects Leader

ಗುವಾಹಟಿ, ಮೇ 10: ಹಿಮಂತ ಬಿಸ್ವ ಶರ್ಮಾ (Himanta Biswa Sarma) ಅವರು ಎರಡನೇ ಬಾರಿಗೆ ಅಸ್ಸಾಂನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ಇಂದು ನಡೆದ ಎನ್‌ಡಿಎ (NDA) ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರನ್ನು ಸರ್ವಾನುಮತದಿಂದ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಹಿಮಂತ ಬಿಸ್ವ ಶರ್ಮಾ ಅವರು ಮೇ 12 ರಂದು ಅಸ್ಸಾಂನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಅಸ್ಸಾಮ್ ರಾಜಧಾನಿ ಗುವಾಹಟಿಯಲ್ಲಿ ಭಾನುವಾರ ನಡೆದ ಪ್ರಮುಖ ಸಭೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಾದ ಎಜಿಪಿ (AGP) ಮತ್ತು ಯುಪಿಪಿಎಲ್ (UPPL) ಶಾಸಕರು ಶರ್ಮಾ ಅವರನ್ನು ತಮ್ಮ ನಾಯಕನೆಂದು ಘೋಷಿಸಿದರು. ಅಸ್ಸಾಂನಲ್ಲಿ ಬಿಜೆಪಿಯನ್ನು ಸತತವಾಗಿ ಎರಡನೇ ಬಾರಿಗೆ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶರ್ಮಾ ಅವರಿಗೆ ಹೈಕಮಾಂಡ್ ಮತ್ತೊಮ್ಮೆ ಮನ್ನಣೆ ನೀಡಿದೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ 10 ಲಕ್ಷ ಕೋಟಿ ರೂ ಸಾಲದ ಫಜೀತಿ; ಇಲ್ಲಿದೆ ಅತಿಹೆಚ್ಚು ಸಾಲ ಇರುವ ರಾಜ್ಯಗಳ ಪಟ್ಟಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಬಿಜೆಪಿ ಶಾಸಕಾಂಗ ಪಕ್ಷ ಹಾಗೂ ಎನ್​ಡಿಎ ಶಾಸಕಾಂಗ ಪಕ್ಷದ ಸಭೆ ನಡೆಸಿದರು. ಇದರಲ್ಲಿ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಹಿಮಂತ ಬಿಸ್ವ ಶರ್ಮಾ ಅವರ ಹೆಸರನ್ನು ಪ್ರಸ್ತಾಪಿಸಿ ಎಂಟು ನಿರ್ಣಯಗಳ ಸಲ್ಲಿಕೆಯಾಯಿತು. ರಂಜೀತ್ ಕುಮಾರ್ ದಾಸ್, ಬಿಸ್ವಜಿತ್ ದೈಮರಿ, ರಾಮೇಶ್ವರ್ ತೇಲಿ, ಅಶೋಕ್ ಸಿಂಘಾಲ್, ಪಿಜುಶ್ ಹಜಾರಿಕಾ ಮೊದಲಾದ ಹಿರಿಯ ನಾಯಕರು ಹಿಮಂತರ ಹೆಸರನ್ನು ಮುಂದಿಟ್ಟರು. ಸಭೆಯಲ್ಲಿದ್ದ ಬಹುತೇಕ ಎಲ್ಲಾ ಸದಸ್ಯರೂ ಈ ನಿರ್ಣಯಗಳನ್ನು ಬೆಂಬಲಿಸಿದರು. ಇದರೊಂದಿಗೆ ಹಿಮಂತ ಅವರು ಸರ್ವಾನುಮತದಿಂದ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದರು.

ಇತ್ತೀಚೆಗೆ ನಡೆದ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಸ್ಪಷ್ಟ ಬಹುಮತವನ್ನು ಪಡೆದುಕೊಂಡಿತ್ತು. 126 ಕ್ಷೇತ್ರಗಳ ಪೈಕಿ ಎನ್​ಡಿಎ 102 ಸ್ಥಾನ ಗಳಿಸಿತು. ಈ ಮೈತ್ರಿಕೂಟದಲ್ಲಿ ಬಿಜೆಪಿಯೊಂದೇ 82 ಸ್ಥಾನ ಪಡೆದಿದೆ. ಎಜಿಪಿ ಮತ್ತು ಬಿಒಪಿಎಫ್ ತಲಾ 20 ಸ್ಥಾನ ಗಳಿಸಿವೆ.

ಇದನ್ನೂ ಓದಿ: ವಿಜಯ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಮೊದಲು ವಂದೇ ಮಾತರಂ, ನಂತರ ಜನಗಣಮನ, ತಮಿಳು ಗೀತೆ; ಇದು ಹೊಸ ಮೆಸೇಜಾ?

ಮೇ 12, ಮಂಗಳವಾರ ನಡೆಯುವ ಈ ಕಾರ್ಯಕ್ರಮದೊಂದಿಗೆ ಅಸ್ಸಾಂನಲ್ಲಿ ಹೊಸ ಸರ್ಕಾರದ ಆಡಳಿತ ಅಧಿಕೃತವಾಗಿ ಆರಂಭವಾಗಲಿದೆ. ರಾಜಕೀಯ ವಿಶ್ಲೇಷಕರ ಪ್ರಕಾರ, ಹಿಮಂತ ಬಿಸ್ವ ಶರ್ಮಾ ಅವರ ಆಡಳಿತ ವೈಖರಿ ಮತ್ತು ಈಶಾನ್ಯ ಭಾರತದಲ್ಲಿ ಬಿಜೆಪಿಯನ್ನು ಬಲಪಡಿಸಿದ ಅವರ ಕಾರ್ಯತಂತ್ರವೇ ಈ ಪುನರಾಯ್ಕೆಗೆ ಪ್ರಮುಖ ಕಾರಣವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವಿಜಯ್ ಬಗ್ಗೆ ಸ್ಟಾಲಿನ್ ಮಾತು, ವೈರಲ್ ಆಗುತ್ತಿದೆ ಹಳೆ ವಿಡಿಯೋ – Kannada News | CM Stalin’s old video talking about Thalapathy Vijay getting viral

ದಳಪತಿ ವಿಜಯ್ (Thalapathy Vijay) ತಮಿಳುನಾಡಿನ ಸಿಎಂ ಆಗಿದ್ದಾರೆ. ಡಿಎಂಕೆ, ಎಐಎಡಿಎಂಕೆಗಳ ಕಪಿಮುಷ್ಠಿಯಿಂದ ಸಿಎಂ ಸ್ಥಾನವನ್ನು ಕಸಿದುಕೊಂಡಿದ್ದಾರೆ. ಆರು ದಶಕಗಳ ಬಳಿಕ ಮೊದಲ ಬಾರಿಗೆ ಈ ಎರಡೂ ಪಕ್ಷಗಳ ಹೊರತಾಗಿ ಮೂರನೇ ಪಕ್ಷವೊಂದು ಸರ್ಕಾರ ರಚಿಸಿದೆ, ಅದುವೇ ವಿಜಯ್ ಅವರ ಟಿವಿಕೆ ಪಕ್ಷ. ಚುನಾವಣೆಗೆ ಮುಂಚೆ, ಆಡಳಿತದಲ್ಲಿದ್ದ ಡಿಎಂಕೆ ಪಕ್ಕಾ ಚುನಾವಣೆ ಗೆಲ್ಲುತ್ತದೆ ಎನ್ನಲಾಗುತ್ತಿತ್ತು. ಎಐಎಡಿಎಂಕೆಗೂ ಅವಕಾಶಗಳಿವೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಸ್ವತಃ ಸಿಎಂ ಸ್ಟಾಲಿನ್ ಸಹ ಈ ಬಾರಿ ವಿಜಯ ಖಾತ್ರಿ ಎಂಬ ಭರವಸೆಯಲ್ಲಿದ್ದರು, ಆದರೆ ವಿಜಯ್ ಭರ್ಜರಿ ಹೊಡೆತ ನೀಡಿದರು. ಅದರ ಬೆನ್ನಲ್ಲೆ ಇದೀಗ ಸ್ಟಾಲಿನ್ ಮತ್ತು ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರ ಹಳೆಯ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ.

ಸ್ಟಾಲಿನ್ ಅವರು ಸಿಎಂ ಆಗಿದ್ದಾಗೊಮ್ಮೆ ಖಾಸಗಿ ಚಾನೆಲ್ ಒಂದರಲ್ಲಿ ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿದ್ದರು. ಆಗ ವಿದ್ಯಾರ್ಥಿನಿ ಒಬ್ಬಾಕೆ, ನೀವು ಸಿನಿಮಾಗಳನ್ನು ನೋಡುತ್ತೀರ, ನೋಡುತ್ತೀರಾದರೆ ನಿಮಗೆ ಯಾವ ನಟ ಇಷ್ಟ ಎಂದು ಕೇಳುತ್ತಾರೆ. ಅದಕ್ಕೆ ಸಿಎಂ ಸ್ಟಾಲಿನ್, ‘ನಾನು ಸಿನಿಮಾಗಳನ್ನು ನೋಡುತ್ತೇನೆ. ಒಳ್ಳೆಯ ಸಿನಿಮಾ ಎಂದಾದರೆ ಸಮಯ ಮಾಡಿಕೊಂಡು ನೋಡುತ್ತೇನೆ. ನನಗೆ ಇಷ್ಟವಾದ ಸ್ಟೈಲ್ ಆದ ನಟ ರಜನೀಕಾಂತ್, ಯುವಕರನ್ನು ಆಕರ್ಷಿಸುವಂಥಹಾ ನಟ ವಿಜಯ್ ಸಹ ಇಷ್ಟ. ನವರಸಗಳ ನಟ ಅಜಿತ್ ಅವರೂ ಸಹ ನನಗೆ ಇಷ್ಟವಾದ ನಟ’ ಎಂದಿದ್ದರು.

ಸ್ಟಾಲಿನ್ ಅವರಿಗೆ ವಿಜಯ್ ಇಷ್ಟವಾದ ನಟ ಆಗಿದ್ದರು, ಆದರೆ ತಮ್ಮ ಇಷ್ಟದ ನಟನೇ ಈಗ ತಮ್ಮ ಪಕ್ಷಕ್ಕೆ ಹೀನಾಯ ಸೋಲು ಕಾಣಿಸಿದ್ದಾರೆ. ಸ್ಟಾಲಿನ್ ಅವರು ಕಾರ್ಯಕ್ರಮವೊಂದರಲ್ಲಿ ವಿಜಯ್ ಅವರನ್ನು ಭೇಟಿ ಆಗಿ, ಹಸ್ತಲಾಘವ ಮಾಡುತ್ತಿರುವ ಹಳೆಯ ವಿಡಿಯೋ ಒಂದು ಸಹ ಇದೇ ಸಮಯದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ:ದಳಪತಿ ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​.ಡಿ. ಕುಮಾರಸ್ವಾಮಿ: ಕಾರಣ ಇಲ್ಲಿದೆ

ಸ್ಟಾಲಿನ್ ಅವರ ಪುತ್ರ, ನಟ, ಮಾಜಿ ಸಚಿವ ಉದಯ ನಿಧಿ ಸ್ಟಾಲಿನ್ ಅವರು ವಿಜಯ್ ಬಗ್ಗೆ ಮಾತನಾಡಿದ್ದ ವಿಡಿಯೋ ಒಂದು ಸಹ ಇದೀಗ ವೈರಲ್ ಆಗುತ್ತಿದೆ. ಅದರಲ್ಲಿ ಉದಯನಿಧಿ ಅವರು ವಿಜಯ್ ಅವರೊಟ್ಟಿಗಿನ ತಮ್ಮ ಗೆಳೆತನದ ಬಗ್ಗೆ ಮಾತನಾಡಿದ್ದಾರೆ. ‘ನಾನು ಅವರನ್ನು ಭೇಟಿಯಾಗಿ ಸಾಕಷ್ಟು ಸಮಯ ಆಯ್ತು, ಹೊಸ ವರ್ಷಕ್ಕೆ ಭೇಟಿ ಆಗಿದ್ದೆ. ವಿಜಯ್ ಅವರು ಸುಲಭವಾಗಿ ಯಾರನ್ನೂ ತಮ್ಮ ಹತ್ತಿರದ ಸರ್ಕಲ್​​ಗೆ ಸೇರಿಸಿಕೊಳ್ಳುವುದಿಲ್ಲ. ಸೇರಿಸಿಕೊಂಡರೆಂದರೆ ಅವರು ಅತ್ಯಾಪ್ತ ಸ್ನೇಹಿತರಾದಂತೆ. ನಾನು ಮುಂಚೆ ಅವರ ಬಹಳ ಆತ್ಮೀಯ ಸ್ನೇಹಿತನಾಗಿದ್ದೆ ಆದರೆ ಆ ಬಳಿಕ ನನಗೂ ಅವರಿಗೂ ತುಸು ಮುನಿಸುಗಳು ಏರ್ಪಟ್ಟಿತು’ ಎಂದಿದ್ದಾರೆ.

‘ಕೆಲವರು ನನ್ನ ಬಗ್ಗೆ ಅವರ ಬಳಿ, ಅವರ ಬಗ್ಗೆ ನನ್ನ ಬಳಿ ಚಾಡಿಗಳನ್ನು ಹೇಳಿದ್ದರು. ಇದರಿಂದ ನಮ್ಮ ಗೆಳೆತನದಲ್ಲಿ ಬಿರುಕು ಬಿಟ್ಟತು. ಬಳಿಕ ಒಂದು ದಿನ ನಾನೇ ಹೋಗಿ ಅವರಿಗೆ ಪರಿಸ್ಥಿತಿ ವಿವರಿಸಿದೆ. ಬಳಿಕ ಎಲ್ಲವೂ ತಿಳಿ ಆಯ್ತು. ಆಗೊಮ್ಮೆ, ಈಗೊಮ್ಮೆ ನಾವು ಭೇಟಿ ಆಗುತ್ತೇವೆ. ನನ್ನನ್ನು ಆಗಾಗ್ಗೆ ಮನೆಗೆ ಅವರು ಆಹ್ವಾನಿಸುತ್ತಾರೆ, ಆದರೆ ಭೇಟಿ ಆಗಿ ಸಾಕಷ್ಟು ದಿನಗಳಾದವು’ ಎಂದಿದ್ದರು. ಈ ವಿಡಿಯೋ ಸಹ ವೈರಲ್ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಬ್ಬಬ್ಬಾ… ಮನೆಯಲ್ಲಿ ನಾಯಿ ಸಾಕುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ – Kannada News | Do you know what are the benefits of having a dog at home?

ಮನುಷ್ಯ ಮತ್ತು ಶ್ವಾನದ (dog) ನಡುವೆ ಅವಿನಾಭಾವ ಸಂಬಂಧವಿದೆ.  ಅಲ್ಲದೆ ನಾಯಿ ಮನುಷ್ಯನ ಉತ್ತಮ ಸ್ನೇಹಿತನೂ ಹೌದು. ನಿಷ್ಠೆಯಿಂದ ಮಾಲೀಕನ ಸೇವೆ ಮಾಡುವ ಶ್ವಾನಗಳು ಮನೆಯ ಭದ್ರತೆಯಲ್ಲೂ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇದೇ ಕಾರಣಕ್ಕೆ ಅನೇಕರು ನಾಯಿಗಳನ್ನು ತಮ್ಮ ಮನೆಯಲ್ಲಿ ಸಾಕಲು ಇಷ್ಟಪಡುತ್ತಾರೆ. ಮನೆಯಲ್ಲಿರುವ ನಾಯಿಗಳು ನಮಗೆ ಖುಷಿಯನ್ನು ನೀಡುವುದರ ಜೊತೆಗೆ ನಮ್ಮ ಆರೋಗ್ಯ ವೃದ್ಧಿಗೂ ಸಹಾಯವನ್ನು ಮಾಡುತ್ತವಂತೆ. ಹೌದು ತಜ್ಞರು ಹೇಳುವಂತೆ ಮನೆಯಲ್ಲಿ ನಾಯಿ ಸಾಕುವುದರಿಂದ ಸಾಕಷ್ಟು ಪ್ರಯೋಜನಗಳು ಲಭಿಸುತ್ತವಂತೆ. ಹಾಗಿದ್ರೆ ನಾಯಿ ಸಾಕುವುದರಿಂದ ಲಭಿಸುವ ಪ್ರಯೋಜನಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಮನೆಯಲ್ಲಿ ನಾಯಿ ಸಾಕುವುದರಿಂದ ಆಗುವ ಪ್ರಯೋಜನಗಳು:

ನಕಾರಾತ್ಮಕತೆಯನ್ನು ದೂರ ಮಾಡುತ್ತವೆ: ಮನೆಯಲ್ಲಿ ನಾಯಿ ಇದ್ದರೆ ನಕಾರಾತ್ಮಕ ಆಲೋಚನೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ಹತ್ತಿರದಲ್ಲಿ ನಾಯಿ ಇದ್ದರೆ ನಿಮ್ಮ ಗಮನ ಅದರ ಮೇಲೆ ಕೇಂದ್ರೀಕೃತವಾಗಿರುತ್ತದೆ ಮತ್ತು ನಕಾರಾತ್ಮಕ ಭಾವನೆಗಳು ಬರುವುದಿಲ್ಲ. ಅಲ್ಲದೆ ನಾಯಿಯಿದ್ದರೆ ಮನೆಯ ವಾತಾವರಣವೂ ಸಕಾರಾತ್ಮಕವಾಗಿರುತ್ತವೆ.

ಒತ್ತಡದಿಂದ ಮುಕ್ತಿ ಪಡೆಯಲು ಸಹಕಾರಿ: ಮನೆಯಲ್ಲಿ  ನಾಯಿಯನ್ನು ಸಾಕುವುದರಿಂದ ಒತ್ತಡವನ್ನು ದೂರವಿಡಬಹುದು. ವಾಸ್ತವವಾಗಿ, ಅನೇಕ ಜನರು ತಮ್ಮ ಹೆಚ್ಚಿನ ಸಮಯವನ್ನು ಹತ್ತಿರದ ನಾಯಿಯೊಂದಿಗೆ ಕಳೆಯುತ್ತಾರೆ, ಇದು ಯೋಚಿಸುವುದನ್ನು ಕಡಿಮೆ ಮಾಡುತ್ತದೆ. ಒತ್ತಡವನ್ನು ಉಂಟುಮಾಡುವ ವಿಷಯಗಳ ಮೇಲೆ ಗಮನ ಹರಿಸುವುದನ್ನು ಕಡಿಮೆ ಮಾಡುತ್ತವೆ.  ಇದು ಒತ್ತಡವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ತೂಕ ಇಳಿಕೆಗೆ ಸಹಕಾರಿ: ಮನೆಯಲ್ಲಿ ನಾಯಿಯನ್ನು ಸಾಕುವುದರಿಂದ ತೂಕ ಬೇಗನೆ ಕಡಿಮೆಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ನಿಮ್ಮ ನಾಯಿಯನ್ನು ಪ್ರತಿದಿನ ನಡಿಗೆಗೆ ಕರೆದುಕೊಂಡು ಹೋಗುವುದರಿಂದ ದೀರ್ಘ ನಡಿಗೆ ಅನುಭವವಾಗುತ್ತದೆ. ಇದು ನಿಮ್ಮ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ತೂಕವನ್ನು ವೇಗವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ.

ಸಕ್ರಿಯವಾಗಿರಿಸುತ್ತದೆ: ನಿಮ್ಮ ಮನೆಯಲ್ಲಿ ನಾಯಿ ಇದ್ದರೆ, ಅದು ನಿಮ್ಮನ್ನು ಫಿಟ್ ಆಗಿ ಮತ್ತು ಸಕ್ರಿಯವಾಗಿಡಲು ಸಹಾಯ ಮಾಡುತ್ತದೆ. ಅದರೊಂದಿಗೆ ಆಟವಾಡುವುದು ಮತ್ತು ನಡೆಯಲು ಹೋಗುವುದರಿಂದ ನಿಮಗೆ ದೈಹಿಕ ಚಟುವಟಿಕೆಯೂ ಸಿಗುತ್ತದೆ. ನಾಯಿಗಳು ನಿಮ್ಮನ್ನು ದೈಹಿಕವಾಗಿ ಆರೋಗ್ಯವಾಗಿಡುವುದಲ್ಲದೆ ಮಾನಸಿಕವಾಗಿಯೂ ಆರೋಗ್ಯವಾಗಿ ಮತ್ತು ಸಂತೋಷವಾಗಿಡುತ್ತವೆ.

ಒಂಟಿತನ ನಿವಾರಣೆಯಾಗುತ್ತದೆ: ನೀವು ಒಂಟಿತನದಿಂದ ಬಳಲುತ್ತಿದ್ದರೆ, ನಿಮ್ಮ ನಾಯಿಗಳು ನಿಮ್ಮ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು. ನಾಯಿಯ ದೈಹಿಕ ಸ್ಪರ್ಶವು ನಿಮ್ಮ ಸಕಾರಾತ್ಮಕ ಮನಸ್ಥಿತಿಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮನ್ನು ಉತ್ತಮಗೊಳಿಸುತ್ತದೆ.

ಇದನ್ನೂ ಓದಿ: ರಾತ್ರಿ ಮಲಗೋ ಮುನ್ನ ಪಾದಗಳನ್ನು ತೊಳೆಯೋದು ಎಷ್ಟು ಮುಖ್ಯ ಗೊತ್ತಾ?

ಖಿನ್ನತೆ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ: ನಾಯಿಗಳು ಮಾನಸಿಕ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ನಾಯಿಯನ್ನು ಹೊಂದುವುದು ಖಿನ್ನತೆ ಮತ್ತು ಆತಂಕದ ಲಕ್ಷಣಗಳನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ನಾಯಿಯ ಪ್ರೀತಿ ಮತ್ತು ಒಡನಾಟವು ಈ ಮಾನಸಿಕ ಕಾಯಿಲೆಗಳನ್ನು ಎದುರಿಸಲು ನಿಮಗೆ ಸಹಾಯ ಮಾಡುತ್ತದೆ.

ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ: ನಾಯಿಗಳು ನಿಮ್ಮ ಜೀವನದಲ್ಲಿ ಸಂತೋಷ ಮತ್ತು ವಿನೋದವನ್ನು ತರುತ್ತವೆ, ಈ ಮೂಲಕ ನಮ್ಮ ಜೀವನದ ಗುಣಮಟ್ಟವೂ ಸುಧಾರಿಸುತ್ತದೆ.

ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ:  ನಾಯಿಗಳೊಂದಿಗೆ ಆಟವಾಡುವುದರಿಂದ ನಿಮ್ಮ ದೈಹಿಕ ಆರೋಗ್ಯ ಸುಧಾರಿಸುತ್ತದೆ ಮತ್ತು ನಿಮ್ಮ ರೋಗನಿರೋಧಕ ಶಕ್ತಿಯೂ ಬಲಗೊಳ್ಳುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡಿನಲ್ಲಿ 10 ಲಕ್ಷ ಕೋಟಿ ರೂ ಸಾಲದ ಫಜೀತಿ; ಇಲ್ಲಿದೆ ಅತಿಹೆಚ್ಚು ಸಾಲ ಇರುವ ರಾಜ್ಯಗಳ ಪಟ್ಟಿ – Kannada News | Indian states with highest debt and states with high debt to gsdp ratio

ಚೆನ್ನೈ, ಮೇ 10: ನಟ ಕಮ್ ರಾಜಕಾರಣಿ ಕಮ್ ತಮಿಳುನಾಡು ನೂತನ ಸಿಎಂ ಜೋಸೆಫ್ ವಿಜಯ್ (Tamil Nadu CM Joseph Vijay) ಅವರು ತಮ್ಮ ಸರ್ಕಾರಕ್ಕೆ 10 ಲಕ್ಷ ಕೋಟಿ ರೂ ಸಾಲದ ಹೊರೆ ಇದೆ ಎಂದು ಹಿಂದಿನ ಸರ್ಕಾರಗಳನ್ನು ದೂಷಿಸುತ್ತಾ, ಅಳಲು ಮತ್ತು ಆಕ್ರೋಶ ಹೊರಹಾಕಿದ್ದಾರೆ. ಇದಕ್ಕೂ ಮುಂಚೆ ಸಿಎಂ ಆಗಿದ್ದ ಎಂ.ಕೆ. ಸ್ಟಾಲಿನ್ ಅವರು ವಿಜಯ್ ಹೇಳಿಕೆಗೆ ಆಕ್ಷೇಪಿಸಿ, ತಿರುಗೇಟು ಕೊಟ್ಟಿದ್ದಾರೆ. ತಮಿಳುನಾಡು ಮಾಡಿರುವ ಸಾಲವು ಅದರ ಆರ್ಥಿಕ ಶಕ್ತಿಯ ಇತಿಮಿತಿಯಲ್ಲೇ ಇದೆ ಎಂದು ಹೇಳಿದ್ದಾರೆ.

ಭಾರತೀಯ ರಾಜ್ಯಗಳ ಪೈಕಿ ತಮಿಳುನಾಡು ಅತಿಹೆಚ್ಚು ಸಾಲ ಮಾಡಿರುವ ರಾಜ್ಯವಾಗಿದೆ. ಆದರೆ, ಶಕ್ತಿಮೀರಿ ಸಾಲ ಮಾಡಿದ ರಾಜ್ಯಗಳ ಸಾಲಿನಲ್ಲಿ ತಮಿಳುನಾಡು ಇಲ್ಲ ಎನ್ನುವುದು ಗಮನಾರ್ಹ. ರಾಜ್ಯದ ಜಿಡಿಪಿಗೆ ಹೋಲಿಸಿದರೆ ಅದರ ಸಾಲ ಎಷ್ಟಿದೆ, ಅದರ ಅನುಪಾತ ಎಷ್ಟು ಎಂಬುದರ ಮೇಲೆ ಸಾಲದ ತೀವ್ರತೆ ಅಥವಾ ಅಪಾಯವನ್ನು ಗಣಿಸಬಹುದು.

ಇದನ್ನೂ ಓದಿ: ವಿಜಯ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಮೊದಲು ವಂದೇ ಮಾತರಂ, ನಂತರ ಜನಗಣಮನ, ತಮಿಳು ಗೀತೆ; ಇದು ಹೊಸ ಮೆಸೇಜಾ?

ಅತಿಹೆಚ್ಚು ಸಾಲ ಹೊಂದಿರುವ ಟಾಪ್-10 ರಾಜ್ಯಗಳು

  1. ತಮಿಳುನಾಡು: 9.6 ಲಕ್ಷ ಕೋಟಿ ರೂ
  2. ಉತ್ತರಪ್ರದೇಶ: 8.6 ಲಕ್ಷ ಕೋಟಿ ರೂ
  3. ಮಹಾರಾಷ್ಟ್ರ: 8.1 ಲಕ್ಷ ಕೋಟಿ ರೂ
  4. ಕರ್ನಾಟಕ: 7.3 ಲಕ್ಷ ಕೋಟಿ ರೂ
  5. ಪಶ್ಚಿಮ ಬಂಗಾಳ: 7.1 ಲಕ್ಷ ಕೋಟಿ ರೂ
  6. ರಾಜಸ್ಥಾನ್: 6.4 ಲಕ್ಷ ಕೋಟಿ ರೂ
  7. ಆಂಧ್ರಪ್ರದೇಶ: 5.6 ಲಕ್ಷ ಕೋಟಿ ರೂ
  8. ಮಧ್ಯಪ್ರದೇಶ: 5.3 ಲಕ್ಷ ಕೋಟಿ ರೂ
  9. ಗುಜರಾತ್: 4.9 ಲಕ್ಷ ಕೋಟಿ ರೂ
  10. ಕೇರಳ: 4.7 ಲಕ್ಷ ಕೋಟಿ ರೂ

ಈ ಮೇಲಿನ 10 ಅತ್ಯಧಿಕ ಸಾಲವಂತ ರಾಜ್ಯಗಳಲ್ಲಿ ಶಕ್ತಿಮೀರಿ ಸಾಲ ಮಾಡಿರುವ ರಾಜ್ಯಗಳೆಂದರೆ ಪಶ್ಚಿಮ ಬಂಗಾಳ ಮತ್ತು ಕೇರಳ. ಇವೆರಡೂ ಕೂಡ ಶೇ. 30ಕ್ಕಿಂತಲೂ ಹೆಚ್ಚು ಸಾಲ ಜಿಎಸ್​ಡಿಪಿ ಅನುಪಾತ ಹೊಂದಿವೆ. ಈ ರೀತಿ ಶಕ್ತಿಮೀರಿ ಬಹ ಅಧಿಕ ಸಾಲ ಮಾಡಿರುವ ರಾಜ್ಯಗಳೆಂದರೆ ಅರುಣಾಚಲ ಪ್ರದೇಶ, ಪಂಜಾಬ್, ಹಿಮಾಚಲ, ಪಶ್ಚಿಮ ಬಂಗಾಳ, ಬಿಹಾರ, ನಾಗಾಲ್ಯಾಂಡ್, ಕೇರಳ ಮೊದಲಾದವು ಇವೆ.

ಇದನ್ನೂ ಓದಿ: ವಿಜಯ್ ಮಂತ್ರಿಮಂಡಲ; ಎಂಜಿಆರ್ ಒಡನಾಡಿ, ವೈದ್ಯ, ಸಂಘಟನಾ ಚತುರ, ಯುವತಿ, ಚಿತ್ರ ನಟ ಮೊದಲಾದವರು…

ಕರ್ನಾಟಕದ ಸಾಲ ಅನುಪಾತ ತಹಬದಿಯಲ್ಲಿದೆ. ಮಹಾರಾಷ್ಟ್ರ, ಉತ್ತರಪ್ರದೇಶ, ಒಡಿಶಾ ಮೊದಲಾದ ರಾಜ್ಯಗಳು ಉತ್ತಮ ಸಾಲ ಮತ್ತು ಜಿಡಿಪಿ ಅನುಪಾತ ಹೊಂದಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

CSK vs LSG: ಸತತ 7 ಎಸೆತಗಳಲ್ಲಿ 6 ಸಿಕ್ಸರ್..! ಐಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಿದ ಉರ್ವಿಲ್ ಪಟೇಲ್ – Kannada News | Urvil Patel IPL Record: CSK Batter Smashes Fastest 50 in 13 Balls vs LSG

ಲಕ್ನೋ ಸೂಪರ್​ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುವ ಬ್ಯಾಟ್ಸ್​ಮನ್ ಉರ್ವಿಲ್ ಪಟೇಲ್ ಸತತ ಏಳು ಎಸೆತಗಳಲ್ಲಿ ಆರು ಸಿಕ್ಸರ್‌ಗಳು ಮತ್ತು ಒಂದು ಬೌಂಡರಿ ಬಾರಿಸುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದರು. ಇದರೊಂದಿಗೆ, ಉರ್ವಿಲ್ ಕೇವಲ 13 ಎಸೆತಗಳಲ್ಲಿ ವೇಗದ ಅರ್ಧಶತಕ ಬಾರಿಸಿದ ದಾಖಲೆಯನ್ನು ಸರಿಗಟ್ಟಿದರು (PC- IPL X).

ಹಿಂದಿನ ಮೂರು ಪಂದ್ಯಗಳಲ್ಲಿ ಉತ್ತಮ ಆರಂಭದ ಹೊರತಾಗಿಯೂ ಕಡಿಮೆ ಸ್ಕೋರ್‌ಗಳಿಗೆ ಔಟಾಗಿದ್ದ ಉರ್ವಿಲ್ ಪಟೇಲ್, ಆವೇಶ್ ಖಾನ್ ಬೌಲ್ ಮಾಡಿದ ಐದನೇ ಓವರ್‌ನ ಕೊನೆಯ ಮೂರು ಎಸೆತಗಳಲ್ಲಿ ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ನಂತರ, ಅವರು ಆರನೇ ಓವರ್‌ನ ಎರಡನೇ ಮತ್ತು ಮೂರನೇ ಎಸೆತದಲ್ಲಿ ಎರಡು ಸಿಕ್ಸರ್‌ಗಳನ್ನು ಬಾರಿಸಿದರು (PC- IPL X).

ಈ ರೀತಿಯಾಗಿ, ಉರ್ವಿಲ್ ಸತತ ಐದು ಎಸೆತಗಳಲ್ಲಿ ಐದು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಸಂಚಲನ ಮೂಡಿಸಿದರು. ಸತತ ಆರನೇ ಸಿಕ್ಸರ್ ಹೊಡೆಯಲು ಸಾಧ್ಯವಾಗದಿದ್ದರೂ, ಈ ಎಸೆತದಲ್ಲಿ ಅವರು ಬೌಂಡರಿ ಹೊಡೆದರು. ಆದರೆ ಮುಂದಿನ ಎಸೆತದಲ್ಲಿ, ಉರ್ವಿಲ್ ಮತ್ತೆ ಚೆಂಡನ್ನು ಸಿಕ್ಸರ್‌ಗೆ ಕಳುಹಿಸಿದರು. ಹೀಗಾಗಿ, ಸತತ ಏಳು ಎಸೆತಗಳಲ್ಲಿ 6, 6, 6, 6, 6, 4, 6 ಬಾರಿಸುವ ಮೂಲಕ ಅವರು ಲಕ್ನೋ ತಂಡವನ್ನು ಬೆರಗುಗೊಳಿಸಿದರು (PC- IPL X).

ಈ ಮೂಲಕ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಉರ್ವಿಲ್, ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಅರ್ಧಶತಕ ಬಾರಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಯಶಸ್ವಿ ಜೈಸ್ವಾಲ್ ಅವರ ದಾಖಲೆಯನ್ನು ಸರಿಗಟ್ಟಿದರು (PC- IPL X).

2023 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಜೈಸ್ವಾಲ್ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಈ ದಾಖಲೆಯನ್ನು ನಿರ್ಮಿಸಿದ್ದರು. ಉರ್ವಿಲ್​ಗೆ ಈ ದಾಖಲೆಯನ್ನು ಮುರಿಯಲು ಸಾಧ್ಯವಾಗದಿದ್ದರೂ ಅದನ್ನು ಸರಿಗಟ್ಟಿದರು. ಅಂತಿಮವಾಗಿ ಉರ್ವಿಲ್ ಕೇವಲ 23 ಎಸೆತಗಳಲ್ಲಿ 8 ಸಿಕ್ಸರ್ ಮತ್ತು 2 ಬೌಂಡರಿಗಳನ್ನು ಒಳಗೊಂಡಂತೆ 65 ರನ್ ಗಳಿಸಿ ಔಟಾದರು (PC- IPL X).

Published On – 7:17 pm, Sun, 10 May 26

Source link

RCB vs MI IPL 2026 Live Score: ಟಾಸ್ ಗೆದ್ದ ಆರ್​​ಸಿಬಿ ಬೌಲಿಂಗ್ ಆಯ್ಕೆ – Kannada News | Royal Challengers Bengaluru vs Mumbai Indians IPL 2026 Live Cricket Score RCB vs MI Match on 10th May latest news in Kannada

ಐಪಿಎಲ್ 2026 ರ 54ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯುತ್ತಿದೆ. ಈ ಆವೃತ್ತಿಯಲ್ಲಿ ಉಭಯ ತಂಡಗಳ ಎರಡನೇ ಮುಖಾಮುಖಿ ಇದಾಗಿದೆ. ಮೊದಲ ಮುಖಾಮುಖಿಯಲ್ಲಿ ಆರ್​ಸಿಬಿ, ಮುಂಬೈ ತಂಡವನ್ನು ಸುಲಭವಾಗಿ ಮಣಿಸಿತ್ತು. ಹೀಗಾಗಿ ಮುಂಬೈಗೆ ತನ್ನ ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶವಿದ್ದರೆ, ಇತ್ತ ಆರ್​ಸಿಬಿಗೆ ತನ್ನ ಗೆಲುವಿನ ಸರಣಿಯನ್ನು ಮುಂದುವರೆಸುವ ಅವಕಾಶವಿದೆ.

Source link

ನಾಳೆಯ ಹವಾಮಾನ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ; ಉತ್ತರ ಕರ್ನಾಟಕದಲ್ಲಿ ಬಿಸಿಲಿನ ಧಗೆ – Kannada News | Karnataka Weather Update: Rain Likely in Coastal and South Karnataka; Heatwave to Continue in North Karnataka Tomorrow

ಬೆಂಗಳೂರು, ಮೇ 10: ರಾಜ್ಯದ ಹಲವು ಜಿಲ್ಲೆಗಳಲ್ಲಿ ನಾಳೆ ಒಣಹವೆ ಕಂಡುಬರಲಿದೆ. ಅದರ ಹೊರತಾಗಿಯೂ ಕರಾವಳಿ ಭಾಗದ ಎರಡು ಜಿಲ್ಲೆಗಳು ಸೇರಿ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಕೆಲ ಪ್ರದೇಶಗಳಲ್ಲಿ ಸಾಧಾರಣ ಅಥವಾ ಮಧ್ಯಮ ಪ್ರಮಾಣದ ಮಳೆಯನ್ನು ಅಂದಾಜಿಸಲಾಗಿದೆ. ಬೆಂಗಳೂರಿಗರಿಗೂ ನಾಳೆ ಸೆಕೆಯ ಮತ್ತಷ್ಟು ಅನುಭವ ಆಗಲಿದ್ದು, ಉತ್ತರ ಕನರ್ನಟಕಭಾದಲ್ಲಿ ಬಿಸಿಲು ಜನರ ಮೈ ಸುಡಲಿದೆ. ಕಲಬುರಗಿಯಲ್ಲಿ 40 ಡಿಗ್ರಿ ಸೆಲ್ಸಿಯಸ್​​, ರಾಯಚೂರಿನಲ್ಲಿ 39 ಮತ್ತು ಬೀದರ್​​ನಲ್ಲಿ 38 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡುಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಮಳೆ?

ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿಯಲ್ಲಿ ಸಣ್ಣ ಪ್ರಮಾಣದ ಮಳೆಯ ಸಾಧ್ಯತೆ ಇದ್ದು, ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿಯ ಕೆಲವೆಡೆ ಮಧ್ಯಮ ಪ್ರಮಾಣದ ಮಳೆಯನ್ನು ಅಂದಾಜಿಸಲಾಗಿದೆ. ಹಾಗೆಯೇ ದಕ್ಷಿಣ ಒಳನಾಡು ಭಾಗದ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಮತ್ತು ಶಿವಮೊಗ್ಗದಲ್ಲಿ ಸಣ್ಣ ಅಥವಾ ಮಧ್ಯಮ ಪ್ರಮಾಣದ ಮಳೆಯ ನಿರೀಕ್ಷೆ ಇದೆ.

ಇದನ್ನೂ ಓದಿ: ಮೂಡಿಗೆರೆಯಲ್ಲಿ ಬಿರುಗಾಳಿ ಮಳೆ ಆರ್ಭಟ; ಅಂಗನವಾಡಿ ಶಿಕ್ಷಕಿ ಮನೆಯ ಮೇಲೆ ಬಿದ್ದ ಮರ

ಉಳಿದಂತೆ ಉತ್ತರ ಕನ್ನಡ, ಬಾಗಲಕೋಟೆ, ಬೀದರ್​, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಣ ಹವೆ ಕಂಡುಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಲ್ಲಿಲ್ಲ ಮಳೆ

ರಾಜಧಾನಿ ಬೆಂಗಳೂರಲ್ಲಿ ನಾಳೆ ಮಳೆಯಾಗುವ ಸಾಧ್ಯತೆ ಇಲ್ಲ. ಬದಲಾಗಿ ನಗರದಲ್ಲಿ ಹಗಲಿನ ವೇಳೆ ಬಿಸಿಲಿನ ವಾತಾವರಣ ಕಂಡುಬರಲಿದೆ. ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್​ ಇರಲಿದ್ದು ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಗಾಳಿಯ ವೇಗ ಗಂಟೆಗೆ 10-15 ಕಿಲೋ ಮೀಟರ್​​ ಇರಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Spiritual remedies: ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿದ್ದೀರಾ? ಏಲಕ್ಕಿ ಬಳಸಿ ಈ ಸರಳ ಪರಿಹಾರ ಪ್ರಯತ್ನಿಸಿ – Kannada News | Elakki Spiritual Remedies: Overcome Financial and Debt Problems with Cardamom Power

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಆರ್ಥಿಕ ಸಮಸ್ಯೆ ಹಾಗೂ ಹೆಚ್ಚುತ್ತಿರುವ ಸಾಲದ ಸುಳಿಯಲ್ಲಿ ಸಿಲುಕಿ ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ. ಜ್ಯೋತಿಷ್ಯ ಶಾಸ್ತ್ರ ಮತ್ತು ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ಅಡುಗೆ ಮನೆಯಲ್ಲಿ ಬಳಸುವ ಸಾಧಾರಣ ಏಲಕ್ಕಿಗೆ ಅಪಾರವಾದ ದೈವಿಕ ಶಕ್ತಿಯನ್ನು ಹೊಂದಿದೆ. ಈ ಏಲಕ್ಕಿ ಬಳಸಿ ಸರಳ ಪರಿಹಾರವನ್ನು ಮಾಡುವುದರಿಂದ ಆರ್ಥಿಕ ಮತ್ತು ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಎನ್ನಲಾಗುತ್ತದೆ.

ಆಧ್ಯಾತ್ಮಿಕತೆಯಲ್ಲಿ ಏಲಕ್ಕಿಯ ಮಹತ್ವ:

ಏಲಕ್ಕಿಯನ್ನು ಕೇವಲ ಮಸಾಲೆ ಪದಾರ್ಥವೆಂದು ಪರಿಗಣಿಸದೆ, ಇದನ್ನು ಶುದ್ಧತೆ ಮತ್ತು ಶುಭದ ಸಂಕೇತವೆಂದು ನೋಡಲಾಗುತ್ತದೆ. ಏಲಕ್ಕಿಯು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯವಾದುದು. ಆದ್ದರಿಂದ, ಏಲಕ್ಕಿಯನ್ನು ಬಳಸಿ ಮಾಡುವ ಪೂಜೆಗಳು ಮನೆಯಲ್ಲಿ ಧನವೃದ್ಧಿಗೆ ಸಹಕಾರಿಯಾಗುತ್ತವೆ.

ಸಾಲದ ಸಮಸ್ಯೆ ನೀಗಿಸಲು ಏಲಕ್ಕಿ ಹಾರದ ಸೇವೆ:

ನಿಮ್ಮನ್ನು ಸಾಲದ ಬಾಧೆ ಸತತವಾಗಿ ಕಾಡುತ್ತಿದ್ದರೆ, ಶುಕ್ರವಾರದಂದು ಲಕ್ಷ್ಮಿ ದೇವಿಗೆ ಏಲಕ್ಕಿ ಮಾಲೆಯನ್ನು ಅರ್ಪಿಸಿ. ಇದಲ್ಲದೇ ಬುಧವಾರದಂದು ಕೂಡ ದೇವರಿಗೆ ಏಲಕ್ಕಿ ಹಾರವನ್ನು ಅರ್ಪಿಸುವುದರಿಂದ ವೃತ್ತಿಜೀವನದಲ್ಲಿ ಪ್ರಗತಿ ಕಂಡುಬರುತ್ತದೆ.

ವೆಂಕಟೇಶ್ವರ ಸ್ವಾಮಿ ಸೇವೆ:

ವೆಂಕಟೇಶ್ವರನಿಗೆ ಏಲಕ್ಕಿ ಎಂದರೆ ಪ್ರೀತಿ. ಏಳು ಏಲಕ್ಕಿಗಳ ಮಾಲೆಯನ್ನು ದೇವರಿಗೆ ಅರ್ಪಿಸುವುದರಿಂದ ಸಾಲದ ಹೊರೆ ಕಡಿಮೆಯಾಗುತ್ತದೆ ಎಂಬ ನಂಬಿಕೆಯಿದೆ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ದಿಂಬಿನ ಕೆಳಗೆ ಏಲಕ್ಕಿ ಇಡುವ ಸರಳ ಪರಿಹಾರ:

ಆರ್ಥಿಕ ಸಮಸ್ಯೆ ಹಾಗೂ ದೃಷ್ಟಿ ದೋಷ ನಿವಾರಣೆಗೆ ಶುಕ್ರವಾರದಂದು ಒಂದು ಕೆಂಪು ಬಟ್ಟೆಯನ್ನು ತೆಗೆದುಕೊಂಡು ಅದರಲ್ಲಿ ಐದು ಏಲಕ್ಕಿಗಳನ್ನು ಇಟ್ಟು ಸಣ್ಣ ಗಂಟು ಕಟ್ಟಿ. ಮಲಗುವಾಗ ಈ ಗಂಟನ್ನು ನಿಮ್ಮ ದಿಂಬಿನ ಕೆಳಗೆ ಇರಿಸಿಕೊಳ್ಳಿ. ಮರುದಿನ ಬೆಳಿಗ್ಗೆ ಆ ಏಲಕ್ಕಿಗಳನ್ನು ಯಾರೂ ತುಳಿಯದ ಅಥವಾ ಮುಟ್ಟದ ಪವಿತ್ರ ಸ್ಥಳದಲ್ಲಿ ಇರಿಸಿ. ಈ ಪ್ರಕ್ರಿಯೆಯನ್ನು ಸತತವಾಗಿ ಮೂರು ಶುಕ್ರವಾರಗಳ ಕಾಲ ಮಾಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗಿ ಹಣಕಾಸಿನ ಹರಿವು ಸುಧಾರಿಸುತ್ತದೆ ಎಂದು ನಂಬಲಾಗಿದೆ

ಅದ್ಭುತ ಫಲಿತಾಂಶಕ್ಕಾಗಿ ಐದು ವಾರಗಳ ವ್ರತ:

ಏಲಕ್ಕಿಯನ್ನು ಹಾರವಾಗಿ ಪೋಣಿಸಿ ಸತತ ಐದು ಶುಕ್ರವಾರಗಳ ಕಾಲ ಧರಿಸುವುದರಿಂದ ಅಥವಾ ದೇವಿಗೆ ಅರ್ಪಿಸುವುದರಿಂದ ಅದ್ಭುತ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ಇದು ಕೇವಲ ಸಾಲದ ಬಾಧೆಯನ್ನಷ್ಟೇ ಅಲ್ಲದೆ, ಅನಾರೋಗ್ಯ ಸಮಸ್ಯೆಗಳಿಂದಲೂ ಮುಕ್ತಿ ನೀಡುತ್ತದೆ ಎಂದು ಹೇಳಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link