All posts by nagaraj11081993

RCB vs MI: ಒಂದೇ ಪಂದ್ಯದಲ್ಲಿ ಒಟ್ಟಿಗೆ ಧೋನಿ ದಾಖಲೆ ಮುರಿದ ರೋಹಿತ್, ಕೊಹ್ಲಿ

Source link

ಡಾಗ್ ಸತೀಶ್​​ಗೆ ಟಾಂಗ್ ಕೊಟ್ಟ ಮಾಜಿ ಬಿಗ್​​ಬಾಸ್ ಸ್ಪರ್ಧಿ ರಿಷಿಕಾ ಸಿಂಗ್

ಬಿಗ್​​ಬಾಸ್ (Bigg Boss) ಮೊದಲ ಸೀಸನ್​​ನಲ್ಲಿ ನಟಿ ರಿಷಿಕಾ ಸಿಂಗ್ ಸ್ಪರ್ಧಿ ಆಗಿದ್ದರು. ವಿಜಯ್ ರಾಘವೇಂದ್ರ, ಅನುಶ್ರಿ, ಅರುಣ್ ಸಾಗರ್ ಅವರುಗಳ ಜೊತೆ ಸೇರಿ ಸಾಕಷ್ಟು ಎಂಟರ್ಟೈನ್ ಸಹ ಮಾಡಿದ್ದರು. ರಿಷಿಕಾ ಸಿಂಗ್ ಅವರು, ಖ್ಯಾತ ನಿರ್ದೇಶಕ ಬಾಬು ರಾಜೇಂದ್ರ ಸಿಂಗ್ ಅವರ ಪುತ್ರಿಯೂ ಹೌದು. ಇದೀಗ ಹಲವು ವರ್ಷಗಳ ಬಳಿಕ ರಿಷಿಕಾ ಸಿಂಗ್ ಅವರು ಹಾಡಿನೊಂದಿಗೆ ವಾಪಸ್ ಬಂದಿದ್ದಾರೆ. ಆ ಬಗ್ಗೆ ಟಿವಿ9 ಜೊತೆ ಮಾತನಾಡಿರುವ ರಿಷಿಕಾ ಸಿಂಗ್, ಬಿಗ್​​ಬಾಸ್​​ಗೆ ಹೋಗಿ ಬಂದು, ಬಿಗ್​​ಬಾಸ್ ಅನ್ನು, ಸುದೀಪ್ ಅವರನ್ನೂ ಟೀಕೆ ಮಾಡಿದ ಡಾಗ್ ಸತೀಶ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡು ನೂತನ ಸಿಎಂ ಜೋಸೆಫ್ ವಿಜಯ್​ಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ – Kannada News | PM Modi calls Joseph Vijay over phone, greets him for becoming Tamil Nadu CM

ಚೆನ್ನೈ, ಮೇ 10: ಭಾನುವಾರ ಬೆಳಗ್ಗೆ ತಮಿಳುನಾಡಿನ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಜೋಸೆಫ್ ವಿಜಯ್ (Joseph Vijay) ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿನಂದಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಇಂದು ಸಂಜೆ ದೂರವಾಣಿ ಕರೆ ಮಾಡಿ ವಿಜಯ್ ಜೊತೆ ಮಾತನಾಡಿದರು. ಹಾಗೆಯೇ, ನೂತನ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಿ, ಉತ್ತಮ ಆಡಳಿತಕ್ಕೆ ಶುಭ ಕೋರಿದರು ಎನ್ನಲಾಗಿದೆ.

ಪ್ರಧಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಸಲ್ಲಿಸಿದ ಅಭಿನಂದನೆಗೆ ಜೋಸೆಫ್ ವಿಜಯ್ ಪ್ರತಿಕ್ರಿಯಿಸಿದ್ದು, ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ. ತಮ್ಮ ಜನತೆಯ ಕಲ್ಯಾಣ ಮತ್ತು ಪ್ರಗತಿಯು ತನ್ನ ಏಕೈಕ ಗುರಿಯಾಗಿದೆ. ತಮಿಳುನಾಡಿನ ಪ್ರಗತಿಗೆ ಕೇಂದ್ರ ಸರ್ಕಾರ ಸಹಕಾರ ಮತ್ತು ಬೆಂಬಲ ನೀಡುವ ಅಪೇಕ್ಷೆಯಲ್ಲಿದ್ದೇವೆ ಎಂದು ಮಾಜಿ ನಟ ವಿಜಯ್ ತಿಳಿಸಿದ್ದಾರೆ.

ಜೋಸೆಫ್ ವಿಜಯ್ ಅವರ ಟ್ವೀಟ್

ಇದನ್ನೂ ಓದಿ: ವಿಜಯ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಮೊದಲು ವಂದೇ ಮಾತರಂ, ನಂತರ ಜನಗಣಮನ, ತಮಿಳು ಗೀತೆ; ಇದು ಹೊಸ ಮೆಸೇಜಾ?

ಇತ್ತೀಚಿನ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಜೋಸೆಫ್ ವಿಜಯ್ ಅವರ ಟಿವಿಕೆ ಪಕ್ಷ 108 ಸ್ಥಾನಗಳನ್ನು ಗೆದ್ದಿದೆ. 234 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 118 ಸ್ಥಾನಗಳು ಬೇಕಿತ್ತು. ಕಾಂಗ್ರೆಸ್ ಹಾಗು ಇತರ ಕೆಲ ಪಕ್ಷಗಳ ಬೆಂಬಲದೊಂದಿಗೆ ಟಿವಿಕೆ ಸರ್ಕಾರ ರಚಿಸಿದೆ. ಭಾನುವಾರ ವಿಜಯ್ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರ ಜೊತೆ 9 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ಮಾಡಿದ್ದಾರೆ.

ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ರಾಹುಲ್ ಗಾಂಧಿ ಮೊದಲಾದ ನಾಯಕರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಕ್ಕೆ ರಾಹುಲ್ ಗಾಂಧಿ ಅವರಿಗೆ ಜೋಸೆಫ್ ವಿಜಯ್ ಧನ್ಯವಾದ ಕೂಡ ಹೇಳಿದ್ದಾರೆ.

ಇದನ್ನೂ ಓದಿ: ವಿಜಯ್ ಮಂತ್ರಿಮಂಡಲ; ಎಂಜಿಆರ್ ಒಡನಾಡಿ, ವೈದ್ಯ, ಸಂಘಟನಾ ಚತುರ, ಯುವತಿ, ಚಿತ್ರ ನಟ ಮೊದಲಾದವರು…

ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ವಿಪಕ್ಷ ನಾಯಕರಾಗಿದ್ದಾರೆ. ಜೋಸೆಫ್ ವಿಜಯ್ ಅವರು ತಮ್ಮ ಸರ್ಕಾರದಲ್ಲಿ ತಾನೊಬ್ಬನೇ ಏಕೈಕ ಪವರ್ ಸೆಂಟರ್ ಆಗಿದ್ದು ಎಂದು ಹೇಳುವ ಮೂಲಕ ತಾನು ಸರ್ವೋಚ್ಚ ನಾಯಕ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಚುನಾವಣಾ ಪ್ರಣಾಳಿಕೆಯಲ್ಲಿ ಭರಪೂರ ಭರವಸೆಗಳನ್ನು ಕೊಟ್ಟಿದ್ದು, ಅದನ್ನು ಈಡೇರಿಸುವ ದೊಡ್ಡ ಸವಾಲು ವಿಜಯ್ ಎದುರಿಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡು ವಿಧಾನಸಭೆಯಲ್ಲಿನ್ನು ವಿಜಯ್​​ vs ಉದಯನಿಧಿ: ವಿಪಕ್ಷ ನಾಯಕನಾಗಿ ಮಾಜಿ ಡಿಸಿಎಂ ಆಯ್ಕೆ – Kannada News | DMK’s Udhayanidhi Stalin Elected Tamil Nadu Leader of Opposition

ಉದಯನಿಧಿ ಸ್ಟಾಲಿನ್​​Image Credit source: dinamalar.com

ಚೆನ್ನೈ, ಮೇ 10: ತಮಿಳುನಾಡು ಸಿಎಂ ಆಗಿ ತಮಿಳಗ ವೆಟ್ರಿ ಕಳಗಂ (TVK) ಸ್ಥಾಪಕ ಮತ್ತು ಅಧ್ಯಕ್ಷ ಸಿ. ಜೋಸೇಫ್​​ ವಿಜಯ್ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ, ವಿಧಾನಸಭೆಯ ವಿಪಕ್ಷ ನಾಯಕನ ಆಯ್ಕೆಯೂ ನಡೆದಿದೆ. ಚುನಾವಣಾ ಫಲಿತಾಂಶದಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿರುವ ಡಿಎಂಕೆ ಈ ಬಗ್ಗೆ ಮಾಹಿತಿ ನೀಡಿದ್ದು, ಮಾಜಿ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್​​ ಪ್ರತಿಪಕ್ಷ ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಪ್ರಕಟಣೆ ಮೂಲಕ ತಿಳಿಸಿದೆ.

ಎಂ.ಕೆ. ಸ್ಟಾಲಿನ್ ನೇತೃತ್ವದ ಸಭೆಯಲ್ಲಿ ತೀರ್ಮಾನ

ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್​​ ಅವರ ನೇತೃತ್ವದಲ್ಲಿ ಮೇ 7ರಂದು ಚೆನ್ನೈನಲ್ಲಿರುವ ಪಕ್ಷದ ಮುಖ್ಯ ಕಚೇರಿ ಅಣ್ಣಾ ಅರಿವಾಲಯಂನಲ್ಲಿ ನಡೆದ ಪಕ್ಷದ ಶಾಸಕರ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಕೆ.ಎನ್.​​ ನೆಹರು ಅವರನ್ನು ಪ್ರತಿಪಕ್ಷ ಉಪ ನಾಯಕ ಮತ್ತು ಇ.ವಿ. ವೇಲು ಅವರನ್ನು ಪಕ್ಷದ ವಿಪ್​​ ಆಗಿ ಆಯ್ಕೆ ಮಾಡಲಾಗಿದೆ ಎಂದು ಡಿಎಂಕೆ ತಿಳಿಸಿದೆ.

ಇದನ್ನೂ ಓದಿ: ತಮಿಳುನಾಡು ಸಾಲದ ಬಗ್ಗೆ ಆರೋಪಿಸಿದ್ದ ಮುಖ್ಯಮಂತ್ರಿ ವಿಜಯ್​​ ಮಾತಿಗೆ ಮಾಜಿ ಸಿಎಂ ಸ್ಟಾಲಿನ್​​ ಆಕ್ರೋಶ 

ತಂದೆಯ ಸ್ಥಾನ ತುಂಬಲಿರುವ ಉದಯನಿಧಿ

ಕೊಲತ್ತೂರು ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ ಸೋತಿರುವ ಹಿನ್ನೆಲೆ, ತಂದೆಯ ಸ್ಥಾನವನ್ನು ಉದಯನಿಧಿ ತುಂಬಲಿದ್ದಾರೆ. ಡಿಎಂಕೆ ಯುವ ಘಟಕದ ನಾಯಕನಾಗಿ ನೇಮಕವಾದ ನಂತರ ಉದಯನಿಧಿ ಸ್ಟಾಲಿನ್ ಪಕ್ಷದಲ್ಲಿ ವೇಗವಾಗಿ ಪ್ರಭಾವ ಹೆಚ್ಚಿಸಿಕೊಂಡಿದ್ದರು. 2021ರಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದ ಬಳಿಕ ಮೊದಲು ಸಚಿವರಾಗಿ, ನಂತರ ಉಪ ಮುಖ್ಯಮಂತ್ರಿಯಾಗಿ ಪದೋನ್ನತಿ ಪಡೆದದಿದ್ದರು. ತಂದೆಯ ನಂತರ ಪಕ್ಷದ ಪ್ರಮುಖ ಶಕ್ತಿಕೇಂದ್ರವಾಗಿ ಹೊರಹೊಮ್ಮಿದ್ದ ಅವರಿಗೀಗ ಪ್ರತಿಪಕ್ಷ ನಾಯಕನ ಸ್ಥಾನವೂ ಸಿಕ್ಕಿದೆ. ಚೆಪಾಕ್-ತಿರುವಲ್ಲಿಕೆಣಿ ಕ್ಷೇತ್ರದಿಂದ ಎರಡನೇ ಬಾರಿ ಗೆದ್ದಿರುವ ಉದಯನಿಧಿ ಈಗ ವಿಧಾನಸಭೆಯಲ್ಲಿ ಡಿಎಂಕೆಯ ಪರ ಹೋರಾಟವನ್ನು ಮುನ್ನಡೆಸಬೇಕಾಗಿದೆ. ವಿಶೇಷವಾಗಿ ಹೊಸ ಸರ್ಕಾರವು ಹಿಂದಿನ ಆಡಳಿತದ ವಿರುದ್ಧ ವಿವಿಧ ಆಡಳಿತಾತ್ಮಕ ವೈಫಲ್ಯಗಳ ಹೊಣೆಗಾರಿಕೆಯನ್ನು ಬೊಟ್ಟು ಮಾಡಲು ಯತ್ನಿಸುವ ಸಂದರ್ಭದಲ್ಲೂ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವ ಸವಾಲು ಎದುರಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 9:47 pm, Sun, 10 May 26

Source link

400 ಜನರಿಗೆ ಚಿನ್ನದ ಉಂಗುರ ಉಡುಗೊರೆ ನೀಡಿದ್ದರು ದಳಪತಿ ವಿಜಯ್ – Kannada News | Thalapathy Vijay once gifted 400 gold rings to his movie team

ದಳಪತಿ ವಿಜಯ್ (Thalapathy Vijay) ಈಗ ತಮಿಳುನಾಡಿನ ಸಿಎಂ. ಮೊದಲ ರಾಜಕೀಯ ಪ್ರಯತ್ನದಲ್ಲಿಯೇ ಯಶಸ್ವಿಯಾಗಿರುವ ವಿಜಯ್ ಇಂದು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವಿಜಯ್ ರಾಜಕೀಯ ಪಕ್ಷ ಸ್ಥಾಪಿಸಿ ಎರಡೇ ವರ್ಷಗಳಾಗಿದ್ದರೂ, ಅವರು ಸಾಮಾಜಿಕ ಕಾರ್ಯವನ್ನು ಎರಡು ದಶಕದಿಂದಲೂ ಮಾಡುತ್ತಲೇ ಬಂದಿದ್ದಾರೆ. ಅದರಲ್ಲೂ ಉದಾರವಾಗಿ ದಾನಗಳನ್ನು ಮಾಡುತ್ತಲೇ ಇರುತ್ತಾರೆ. ಹಿಂದೊಮ್ಮೆ ಒಂದೇ ಬಾರಿಗೆ 400 ಮಂದಿಗೆ ಚಿನ್ನದ ಉಂಗುರಗಳನ್ನು ಉಡುಗೊರೆಯಾಗಿ ನೀಡಿದ್ದರು ವಿಜಯ್.

ವಿಜಯ್ ಅವರು ವಿಶೇಷ ಸಂದರ್ಭಗಳಲ್ಲಿ ಚಿನ್ನದ ಆಭರಣಗಳನ್ನು ನೀಡುತ್ತಾರೆ. ತಮ್ಮ ಹುಟ್ಟಿದ ದಿನದಂದು ಸರ್ಕಾರಿ ಆಸ್ಪತ್ರೆಯಲ್ಲಿ ಹುಟ್ಟಿದ ಹೆಣ್ಣು ಮಕ್ಕಳಿಗೆ ಚಿನ್ನದ ಉಂಗುರಗಳನ್ನು ಕೆಲ ವರ್ಷ ನೀಡಿದ್ದರು. ತಮ್ಮ ಅಭಿಮಾನಿ ಸಂಘದ ಪ್ರಮುಖರ ಹುಟ್ಟುಹಬ್ಬಗಳಿಗೆ ಚಿನ್ನದ ಆಭರಣಗಳನ್ನು ಅವರು ನೀಡುತ್ತಿದ್ದರು. ಆದರೆ ಒಮ್ಮೆ ಏಕಕಾಲಕ್ಕೆ ಒಟ್ಟಿಗೆ 400 ಮಂದಿಗೆ ಚಿನ್ನದ ಉಂಗುರ ನೀಡಿದ್ದರು.

ಇದನ್ನೂ ಓದಿ:ವಿಜಯ್ ಬಗ್ಗೆ ಸ್ಟಾಲಿನ್ ಮಾತು, ವೈರಲ್ ಆಗುತ್ತಿದೆ ಹಳೆ ವಿಡಿಯೋ

ವಿಜಯ್ ನಟಿಸಿದ್ದ ‘ಬಿಗಿಲ್’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಯಶಸ್ಸಾಗಿತ್ತು. ಆ ಸಂದರ್ಭದಲ್ಲಿ ವಿಜಯ್ ಅವರು ‘ಬಿಗಿಲ್’ ಹೆಸರು ಅಚ್ಚು ಹಾಕಿಸಿ, ಸಿನಿಮಾಕ್ಕಾಗಿ ಕೆಲಸ ಮಾಡಿದ ಎಲ್ಲ ತಂತ್ರಜ್ಞರು, ನಟ-ನಟಿಯರು ಮತ್ತು ಇತರೆ ಸಿಬ್ಬಂದಿಗಳಿಗೆ ಚಿನ್ನದ ಉಂಗುರ ಕೊಟ್ಟಿದ್ದರು. ಸಾಮಾನ್ಯ ಲೈಟ್ ಬಾಯ್ ಇಂದ ಹಿಡಿದು ಎಲ್ಲರಿಗೂ ಚಿನ್ನದ ಉಂಗುರಗಳನ್ನು ವಿಜಯ್ ಅವರು ಕೊಟ್ಟಿದ್ದರು. ಆ ಚಿನ್ನದ ಉಂಗುರಗಳ ಚಿತ್ರಗಳನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಆಗ ಹಂಚಿಕೊಂಡಿದ್ದರು.

ಈಗ ವಿಜಯ್ ಸಿಎಂ ಆಗಿದ್ದಾರೆ. ಚುನಾವಣೆಗೆ ಮುಂಚೆ ಅವರ ಟಿವಿಕೆ ಪಕ್ಷದಿಂದ ಹೊರತಂದಿದ್ದ ಪ್ರಣಾಳಿಕೆಯಲ್ಲೂ ಸಹ ಅವರು ಮಹಿಳೆಯರಿಗೆ ಚಿನ್ನದ ಆಭರಣಗಳನ್ನು ನೀಡುವ ಭರವಸೆಯನ್ನು ನೀಡಿದ್ದಾರೆ. ಮದುವೆ ಆಗುವ ಪ್ರತಿ ಮಹಿಳೆಗೆ 8 ಗ್ರಾಂ ಚಿನ್ನವನ್ನು ನೀಡುವುದಾಗಿ ವಿಜಯ್ ಅವರು ಭರವಸೆ ನೀಡಿದ್ದಾರೆ. ಇದರ ಜೊತೆಗೆ ವರ್ಷಕ್ಕೆ ಆರು ಉಚಿತ ಸಿಲಿಂಡರ್, ತಿಂಗಳಿಗೆ 2500 ರೂಪಾಯಿ ಹಣ. ಮಹಿಳಾ ಸುರಕ್ಷತೆಗಾಗಿ ವಿಶೇಷ ದಳ ಹೀಗೆ ಹಲವು ಭರವಸೆಗಳನ್ನು ಅವರು ನೀಡಿದ್ದಾರೆ. ಇದೆಲ್ಲವನ್ನೂ ಈಡೇರಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಫ್ಯಾಟಿ ಲಿವರ್ ಸಮಸ್ಯೆ ಇದ್ದರೆ ಈ ಅಂಗಗಳು ಕೆಲಸ ಮಾಡುವುದನ್ನು ನಿಲ್ಲಸಬಹುದು ಹುಷಾರ್! – Kannada News | Systemic Effects of Fatty Liver: From Metabolism to Brain Health

ಇತ್ತೀಚಿನ ದಿನಗಳಲ್ಲಿ ಫ್ಯಾಟಿ ಲಿವರ್ (Fatty Liver) ಸಮಸ್ಯೆ ವೇಗವಾಗಿ ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಆರಂಭಿಕ ಹಂತದಲ್ಲಿ ಹೆಚ್ಚಿನ ಲಕ್ಷಣಗಳು ಕಾಣಿಸದ ಕಾರಣ ಅನೇಕರು ಇದನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ತಜ್ಞರ ಪ್ರಕಾರ, ಫ್ಯಾಟಿ ಲಿವರ್ ಕೇವಲ ಯಕೃತ್ತಿನ ಸಮಸ್ಯೆಯಲ್ಲ; ಇದು ದೇಹದ ಇತರ ಪ್ರಮುಖ ಅಂಗಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ವೈದ್ಯರ ಪ್ರಕಾರ, ಯಕೃತ್ತಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಕೊಬ್ಬು ಜಮೆಯಾಗುವುದನ್ನು ಫ್ಯಾಟಿ ಲಿವರ್ ಎಂದು ಕರೆಯಲಾಗುತ್ತದೆ. ಯಕೃತ್ತು ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುವುದು, ಜೀರ್ಣಕ್ರಿಯೆಗೆ ಸಹಾಯ ಮಾಡುವುದು ಹಾಗೂ ದೇಹದ ಶಕ್ತಿಯನ್ನು ಸಮತೋಲನದಲ್ಲಿ ಇಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದರೆ ಈ ಯಕೃತ್ತಿನ ಕಾರ್ಯಕ್ಷಮತೆ ಕುಂದಿದಾಗ ದೇಹದ ಇತರ ಅಂಗಗಳ ಮೇಲೂ ಪರಿಣಾಮ ಕಾಣಿಸಿಕೊಳ್ಳಬಹುದು. ಹಾಗಾದರೆ ಈ ಸಮಸ್ಯೆ ಯಾವ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ, ಫ್ಯಾಟಿ ಲಿವರ್ ಸಮಸ್ಯೆಯನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಯಾವ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ?

ಲೇಡಿ ಹಾರ್ಡಿಂಗ್ ಆಸ್ಪತ್ರೆಯ ಮೆಡಿಸಿನ್ ವಿಭಾಗದ ನಿರ್ದೇಶಕ ಡಾ. ಎಲ್.ಎಚ್. ಘೋಟೇಕರ್ ಹೇಳುವ ಪ್ರಕಾರ, ಫ್ಯಾಟಿ ಲಿವರ್ ಸಮಸ್ಯೆಯಿಂದ ಹೃದಯ, ಮೂತ್ರಪಿಂಡ, ಪ್ಯಾಂಕ್ರಿಯಾಸ್ ಮತ್ತು ದೇಹದ ಮೆಟಾಬಾಲಿಸಂ ಮೇಲೂ ದುಷ್ಪರಿಣಾಮ ಉಂಟಾಗಬಹುದು. ಜೊತೆಗೆ ಫ್ಯಾಟಿ ಲಿವರ್ ಇರುವವರಲ್ಲಿ ಹೈ ಬ್ಲಡ್ ಪ್ರೆಶರ್, ಕೊಲೆಸ್ಟ್ರಾಲ್ ಹೆಚ್ಚಳ, ಇನ್ಸುಲಿನ್ ರೆಸಿಸ್ಟೆನ್ಸ್ ಹಾಗೂ ಟೈಪ್- 2 ಮಧುಮೇಹದ ಅಪಾಯ ಹೆಚ್ಚಾಗುತ್ತದೆ. ಯಕೃತ್ತು ಸರಿಯಾಗಿ ಕೆಲಸ ಮಾಡದಿದ್ದರೆ ದೇಹದಲ್ಲಿ ಉರಿಯೂತ ಹೆಚ್ಚಾಗಿ ಹೃದಯ ಮತ್ತು ರಕ್ತನಾಳಗಳ ಆರೋಗ್ಯಕ್ಕೂ ಹಾನಿಯಾಗಬಹುದು. ಕೆಲವೊಮ್ಮೆ ಮೂತ್ರಪಿಂಡದ ಕಾರ್ಯಕ್ಷಮತೆಯೂ ಕುಂದಬಹುದು. ಪ್ಯಾಂಕ್ರಿಯಾಸ್ ಮೇಲೆ ಪರಿಣಾಮ ಬಿದ್ದರೆ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ ಕಷ್ಟವಾಗಬಹುದು. ಸಮಸ್ಯೆ ಗಂಭೀರವಾದರೆ ಲಿವರ್ ಉರಿಯೂತ, ಫೈಬ್ರೋಸಿಸ್, ಸಿರೋಸಿಸ್ ಮತ್ತು ಲಿವರ್ ಫೇಲ್ಯರ್ ಅಪಾಯವೂ ಎದುರಾಗಬಹುದು.

ಇದನ್ನೂ ಓದಿ: ಈ ಆಹಾರಗಳನ್ನು ಸೇವನೆ ಮಾಡ್ತೀರಾ? ಹಾಗಿದ್ರೆ ಫ್ಯಾಟಿ ಲಿವರ್ ಸಮಸ್ಯೆ ಬರುತ್ತೆ ಹುಷಾರ್!

ಫ್ಯಾಟಿ ಲಿವರ್ ತಡೆಗಟ್ಟಲು ಏನು ಮಾಡಬೇಕು?

ಆರೋಗ್ಯಕರ ಆಹಾರ ಪದ್ಧತಿ ಮತ್ತು ನಿಯಮಿತ ವ್ಯಾಯಾಮ ಅತ್ಯಂತ ಮುಖ್ಯ. ಹೆಚ್ಚು ಎಣ್ಣೆ, ಸಕ್ಕರೆ, ಜಂಕ್ ಫುಡ್ ಮತ್ತು ಪ್ರೊಸೆಸ್ಡ್ ಆಹಾರವನ್ನು ಕಡಿಮೆ ಮಾಡಬೇಕು. ಹಣ್ಣು, ತರಕಾರಿ, ಧಾನ್ಯಗಳು ಮತ್ತು ಪ್ರೋಟೀನ್‌ಯುಕ್ತ ಆಹಾರ ಸೇವನೆ ಮಾಡಬೇಕು. ಪ್ರತಿದಿನ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡುವುದು, ಸಾಕಷ್ಟು ನೀರು ಕುಡಿಯುವುದು ಮತ್ತು ತೂಕ ನಿಯಂತ್ರಣದಲ್ಲಿಡುವುದು ಅಗತ್ಯ. ಜೊತೆಗೆ ಧೂಮಪಾನ ಹಾಗೂ ಮದ್ಯಪಾನದಿಂದ ದೂರವಿರುವುದು ಲಿವರ್ ಆರೋಗ್ಯಕ್ಕೆ ಸಹಕಾರಿ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಮೆರಿಕಕ್ಕೆ ಇರಾನ್‌ನಿಂದ ‘ಸರ್ಪ್ರೈಸ್ ಅಟ್ಯಾಕ್’ ಎಚ್ಚರಿಕೆ: ಹಾರ್ಮುಜ್ ಜಲಸಂಧಿಯಲ್ಲಿ ಹೆಚ್ಚಿದ ಉದ್ವಿಗ್ನತೆ – Kannada News | Iran warns of surprise attack on US if it shows aggression in Hormuz Strait

ಟೆಹ್ರಾನ್, ಮೇ 10: ಅಮೆರಿಕವು ತನ್ನ ಮೇಲೆ ಯಾವುದೇ ರೀತಿಯ ಆಕ್ರಮಣಕಾರಿ ಧೋರಣೆ ತೋರಿದರೆ “ಸರ್ಪ್ರೈಸ್ ಅಟ್ಯಾಕ್” (ದಿಢೀರ್ ದಾಳಿ) ನಡೆಸಲಾಗುವುದು ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಎಚ್ಚರಿಕೆ ನೀಡಿದೆ. ಹಾರ್ಮುಜ್ ಜಲಸಂಧಿಯ (Strait of Hormuz) ನಿಯಂತ್ರಣದ ವಿಚಾರವಾಗಿ ಉಭಯ ದೇಶಗಳ ನಡುವೆ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಅಮೆರಿಕದ ಪಡೆಗಳು ಹಾರ್ಮುಜ್ ಜಲಸಂಧಿಯನ್ನು ಪ್ರವೇಶಿಸಲು ಅಥವಾ ಇರಾನ್‌ನ ಹಿತಾಸಕ್ತಿಗಳಿಗೆ ಧಕ್ಕೆ ತರಲು ಪ್ರಯತ್ನಿಸಿದರೆ, ಇರಾನ್ ತನ್ನಲ್ಲಿರುವ ಹೊಸ ತಂತ್ರಜ್ಞಾನದ ಶಸ್ತ್ರಾಸ್ತ್ರಗಳನ್ನು ಬಳಸಿ ಅನಿರೀಕ್ಷಿತ ದಾಳಿ ನಡೆಸಲಿದೆ ಎಂದು ಇರಾನ್ ಸೇನೆ ಹೇಳಿದೆ. ಹೊಸ ಶಸ್ತ್ರಾಸ್ತ್ರಗಳ ಬಳಕೆ ಮಾತ್ರವಲ್ಲ, ಹೊಸ ತಂತ್ರಗಾರಿಕೆಯನ್ನೂ ಈ ಪ್ರತಿದಾಳಿಯಲ್ಲಿ ಅಳವಡಿಸಲಾಗುವುದು ಎಂದು ಐಆರ್​ಜಿಸಿ ಹೇಳಿದೆ.

ಇದನ್ನೂ ಓದಿ: ಯುದ್ಧ ಕೊನೆಗೊಳಿಸಲು ಇರಾನ್ ಮುಂದೆ ಹೊಸ ಕದನವಿರಾಮದ ಪ್ರಸ್ತಾಪವಿಟ್ಟ ಟ್ರಂಪ್

‘ಇರಾನ್​ನ ತೈಲ ಹಡಗುಗಳು ಮತ್ತು ಕಮರ್ಷಿಯಲ್ ಹಡಗುಗಳ ಮೇಲೆ ಯಾವುದೇ ಆಕ್ರಮಣವಾದಲ್ಲಿ ಗಲ್ಫ್ ಪ್ರದೇಶದಲ್ಲಿರುವ ಅಮೆರಿಕನ್ ಕೇಂದ್ರಗಳು ಹಾಗೂ ಶತ್ರು ಹಡಗುಗಳ ಮೇಲೆ ಭಾರೀ ಪ್ರಹಾರ ಮಾಡುತ್ತೇವೆ’ ಎಂದು ಐಆರ್​ಜಿಸಿಯ ನೇವಿ ಕಮಾಂಡ್ ಎಚ್ಚರಿಕೆ ಕೊಟ್ಟಿದೆ.

‘ಈ ಪ್ರದೇಶದಲ್ಲಿ ಅಮೆರಿಕದ ಗುರಿಗಳ ಮೇಲೆ ಲಾಕ್ ಮಾಡಿದ್ದೇವೆ. ಹೊಡೆಯುವ ಆದೇಶಕ್ಕಾಗಿ ಕಾಯುತ್ತಿದ್ದೇವೆ’ ಎಂದು ಐಆರ್​ಜಿಸಿಯ ವಾಯು ವಿಭಾಗವು ಹೇಳಿದೆ.

ಜಗತ್ತಿನ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯ ಮೇಲೆ ತನಗೆ ಸಂಪೂರ್ಣ ಹಕ್ಕಿದೆ ಎಂದು ಇರಾನ್ ಪ್ರತಿಪಾದಿಸಿದೆ. ಅಮೆರಿಕ ಬೆಂಬಲದ ಹಡಗುಗಳು ಈ ಮಾರ್ಗದಲ್ಲಿ ಸಂಚರಿಸುವುದನ್ನು ತಡೆಯಲು ಇರಾನ್ ಸಮುದ್ರದಲ್ಲಿ ಮೈನ್‌ಗಳನ್ನು (Mines) ಅಳವಡಿಸಿದೆ ಎಂಬ ವರದಿಗಳಿವೆ.

ಇದನ್ನೂ ಓದಿ: ಜಾಗತಿಕ ತೈಲ ಸಂಕಷ್ಟದ ನಡುವೆ ಇಂಧನ ಬಳಕೆ ಕಡಿತಕ್ಕೆ ಮೋದಿ ಕರೆ: ಚಿನ್ನ ಖರೀದಿ ತಪ್ಪಿಸುವಂತೆಯೂ ಮನವಿ

ಅಮೆರಿಕದ ‘ಪ್ರಾಜೆಕ್ಟ್ ಫ್ರೀಡಂ’

ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಪ್ರಾಜೆಕ್ಟ್ ಫ್ರೀಡಂ’ ಆರಂಭಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಇರಾನ್ ತನ್ನ ಕ್ಷಿಪಣಿಗಳನ್ನು ಸನ್ನದ್ಧವಾಗಿರಿಸಿದೆ.

ಫೆಬ್ರವರಿ ಕೊನೆಯ ವಾರದಲ್ಲಿ ಆರಂಭವಾಗಿರುವ ಈ ಸಂಘರ್ಷದಿಂದಾಗಿ ಜಾಗತಿಕವಾಗಿ ತೈಲ ಬೆಲೆಗಳು ಗಗನಕ್ಕೇರಿವೆ. ಯುದ್ಧ ಅಂತ್ಯಗೊಳಿಸಲು ಎರಡೂ ದೇಶಗಳು ಇಚ್ಛಿಸಿವೆಯಾದರೂ, ಅನುಮಾನ ಮತ್ತು ಎಚ್ಚರಿಕೆಯಿಂದ ಹೆಜ್ಜೆಗಳನ್ನಿಡುತ್ತಿವೆ. ಹೀಗಾಗಿ, ಶಾಂತಿ ಒಪ್ಪಂದ ಏರ್ಪಡುವುದು ವಿಳಂಬವಾಗಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

RCB vs MI: W,W,W.. ಆರಂಭದಲ್ಲೇ ಮುಂಬೈಗೆ ಮರ್ಮಾಘಾತ ನೀಡಿದ ಭುವಿ – Kannada News | RCB vs MI IPL 2026: Bhuvneshwar Kumar Dismisses Rohit, Surya in Early Blitz

ಐಪಿಎಲ್ 2026 ರ 54ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈಗೆ, ಆರ್​ಸಿಬಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಮೊದಲ ಮೂರು ಓವರ್​ಗಳಲ್ಲೇ ಆಘಾತ ನೀಡಿದರು. ಆರ್​ಸಿಬಿ ಪರ ಬೌಲಿಂಗ್ ಆರಂಭಿಸಿದ ಭುವಿ, ಓವರ್​ನ ಕೊನೆಯ ಎಸೆತದಲ್ಲಿ ಮುಂಬೈ ಆರಂಭಿಕ ರಿಯಾನ್ ರಿಕಲ್ಟನ್ ಅವರ ವಿಕೆಟ್ ಉರುಳಿಸಿದರು. ರಿಕಲ್ಟನ್ ಕೇವಲ 2 ರನ್ ಬಾರಿಸಿ ಔಟಾದರು. ಆ ನಂತರ ಇನ್ನಿಂಗ್ಸ್​ನ ಮೂರನೇ ಓವರ್ ಎಸೆಯಲು ಬಂದ ಭುವಿ, ಈ ಓವರ್​ನ 5ನೇ ಎಸೆತದಲ್ಲಿ ರೋಹಿತ್ ಶರ್ಮಾ ಅವರ ವಿಕೆಟ್ ಪಡೆದರು. ಅದೇ ಓವರ್​ನ ಕೊನೆಯ ಎಸೆತದಲ್ಲಿ ಭುವಿಗೆ ಮತ್ತೊಂದು ವಿಕೆಟ್ ಸಿಕ್ಕಿತು. ರೋಹಿತ್ ವಿಕೆಟ್ ಬಳಿಕ ಬಂದಿದ್ದ ನಾಯಕ ಸೂರ್ಯಕುಮಾರ್ ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದರು. ಅಂದರೆ ಸೂರ್ಯ ಗೋಲ್ಡನ್ ಡಕ್​ಗೆ ಬಲಿಯಾದರು. ಈ ಮೂಲಕ ಭುವಿ ತಮ್ಮ ಖೋಟಾದ 2 ಓವರ್​ಗಳಲ್ಲಿ ಪ್ರಮುಖ 3 ವಿಕೆಟ್ ಉರುಳಿಸಿದರು.

Source link

ಜಾಗತಿಕ ತೈಲ ಸಂಕಷ್ಟದ ನಡುವೆ ಇಂಧನ ಬಳಕೆ ಕಡಿತಕ್ಕೆ ಮೋದಿ ಕರೆ: ಚಿನ್ನ ಖರೀದಿ ತಪ್ಪಿಸುವಂತೆಯೂ ಮನವಿ – Kannada News | PM Modi Urges Fuel Saving, Gold Purchase Halt Amidst Global Oil Crisis and Price Hike

ಹೈದರಾಬಾದ್, ಮೇ 10: ಪಶ್ಚಿಮ ಏಷ್ಯಾದ ಯುದ್ಧದಿಂದ ಉಂಟಾದ ಜಾಗತಿಕ ತೈಲ ಸಂಕಷ್ಟದ ನಡುವೆ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಭೀತಿ ಹೆಚ್ಚುತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ (Narendra Modi) ದೇಶದ ಜನತೆಗೆ ಇಂಧನ ಉಳಿತಾಯದ ಕರೆ ನೀಡಿದ್ದಾರೆ. ವರ್ಕ್ ಫ್ರಾಂ ಹೋಂ ಪದ್ಧತಿಯನ್ನು ಮತ್ತೆ ಆರಂಭಿಸುವುದು, ಪೆಟ್ರೋಲ್-ಡೀಸೆಲ್ ಬಳಕೆಯನ್ನು ಕಡಿಮೆ ಮಾಡುವುದು ಹಾಗೂ ಒಂದು ವರ್ಷ ಮದುವೆಗಳಿಗೆ ಚಿನ್ನ ಖರೀದಿಸದಿರುವಂತೆ ಅವರು ಮನವಿ ಮಾಡಿದ್ದಾರೆ.

ಇಂಧನ ಬಳಕೆ ಕಡಿತಕ್ಕೆ ಕರೆ

ಹೈದರಾಬಾದ್‌ನ ಪರೇಡ್ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಾದ ಮೆಟ್ರೋ ಮತ್ತು ಬಸ್‌ಗಳನ್ನು ಜನರು ಹೆಚ್ಚು ಬಳಸಬೇಕು. ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಒತ್ತು ನೀಡಬೇಕು. ವರ್ಕ್ ಫ್ರಾಂ ಹೋಂನಂತಹ ಕ್ರಮಗಳಿಂದ ಇಂಧನ ಉಳಿತಾಯ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಬ್ಲಾಸ್ಟ್​​ ಬೆದರಿಕೆ, ಜಿಲೆಟಿನ್​​ ಪತ್ತೆ; ಪ್ರಧಾನಿ ಮೋದಿ ಬೆಂಗಳೂರು ಭೇಟಿ ವೇಳೆ ಖಾಕಿಗೆ ಟೆನ್ಷನ್​​ ತಂದ ಭದ್ರತೆ

ದೇಶದ ಜನರಿಗೆ ಮೋದಿ ಕಿವಿಮಾತು

ದೇಶದ ವಿದೇಶಿ ವಿನಿಮಯ ಸಂಗ್ರಹ ಉಳಿಸಲು ಜನರು ಒಂದು ವರ್ಷ ಚಿನ್ನ ಖರೀದಿ ತಪ್ಪಿಸುವಂತೆ ಸಲಹೆ ನೀಡಿದ ಅವರು, ದೇಶದಲ್ಲಿ ತಾಮ್ರದ ಕೊರತೆ ಕೂಡ ಹೆಚ್ಚಾಗಿರುವುದರಿಂದ ಸಂಪನ್ಮೂಲಗಳನ್ನು ಮಿತವಾಗಿ ಬಳಸಬೇಕು ಎಂದಿದ್ದಾರೆ. ಅಲ್ಲದೆ ಅತಿರೇಕದ ಖರ್ಚು ಮತ್ತು ವೈಭವ ಪ್ರದರ್ಶನದಿಂದ ದೂರವಿರಬೇಕು ಎಂದು ಮಧ್ಯಮ ವರ್ಗಕ್ಕೆ ಕಿವಿ ಮಾತು ಹೇಳಿದ ಪ್ರಧಾನಿ, ಸದ್ಯದ ಸಂಕಷ್ಟದ ಸಮಯದಲ್ಲಿ ವಿದೇಶ ಪ್ರವಾಸಗಳನ್ನು ಕಡಿಮೆ ಮಾಡಿದರೆ ದೇಶದ ಸಂಪತ್ತು ಹೊರಹೋಗುವುದನ್ನು ತಡೆಯಬಹುದು ಎಂದು ಹೇಳಿದ್ದಾರೆ.

ವಿಪಕ್ಷಗಳ ವಿರುದ್ಧವೂ ವಾಗ್ದಾಳಿ

ಇದೇ ವೇಳೆ ಕಾಂಗ್ರೆಸ್ ಮತ್ತು ಟಿಎಂಸಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮೋದಿ, ದೇಶದಲ್ಲಿ ಕಾಂಗ್ರೆಸ್ ಆಡಳಿತ ಇರುವ ಎಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ದೇಶದಲ್ಲಿ ಕೇವಲ ಮೂರು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಸುಳ್ಳಿನ ರಾಜಕಾರಣ ನಡೆಸುತ್ತಿದೆ ಎಂದು ಟೀಕಿಸಿದ್ದಾರೆ. ಪಶ್ಚಿಮ ಬಂಗಾಳದ ಜನರು ಟಿಎಂಸಿ ಹಾಗೂ ಎಡಪಕ್ಷಗಳನ್ನು ತಿರಸ್ಕರಿಸಿ ಮಮತಾ ಬ್ಯಾನರ್ಜಿ ಅವರ ಸರ್ವಾಧಿಕಾರಕ್ಕೆ ತಿರುಗೇಟು ನೀಡಿದೆ. ದೇಶದಾದ್ಯಂತ ಬಿಜೆಪಿ ವಿಸ್ತರಿಸುತ್ತಿದ್ದು, ಕುಟುಂಬ ರಾಜಕಾರಣಕ್ಕಿಂತ ಜನರು ನಂಬಿಕೆಯ ರಾಜಕಾರಣಕ್ಕೆ ಬೆಂಬಲ ನೀಡುತ್ತಿದ್ದಾರೆ. ಒಮ್ಮೆ ಪಕ್ಷದ ಕಾರ್ಯಕರ್ತರೇ ಇಲ್ಲದಿದ್ದ ಪಶ್ಚಿಮ ಬಂಗಾಳದಲ್ಲಿಯೂ ಈಗ ಬಿಜೆಪಿ ಸರ್ಕಾರ ಬಂದಿದೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 8:44 pm, Sun, 10 May 26

Source link

CSK vs LSG: ಪ್ಲೇಆಫ್​ನಿಂದ ಅಧಿಕೃತವಾಗಿ ಹೊರಬಿದ್ದ ಲಕ್ನೋ; 5ನೇ ಸ್ಥಾನಕ್ಕೇರಿದ ಸಿಎಸ್​ಕೆ – Kannada News | IPL 2026: CSK Dominates LSG with Urvil Patel’s Fastest 50; Playoff Dream Alive!

ಐಪಿಎಲ್ 2026 ರ 53 ನೇ ಪಂದ್ಯದಲ್ಲಿ ಪ್ರಾಬಲ್ಯ ಮೆರೆದ ಚೆನ್ನೈ ಸೂಪರ್ ಕಿಂಗ್ಸ್ ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮಣಿಸಿ ಪ್ಲೇಆಫ್​ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಇದು ಈ ಆವೃತ್ತಿಯಲ್ಲಿ ಸಿಎಸ್​ಕೆ ತಂಡದ 5ನೇ ಗೆಲುವಾಗಿದ್ದು, ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಇತ್ತ ಲಕ್ನೋ ತಂಡದ ಈ ಸೋಲಿನೊಂದಿಗೆ 10ನೇ ಸ್ಥಾನದಲ್ಲೇ ಉಳಿಯುವುದರ ಜೊತೆಗೆ ಪ್ಲೇ ಆಫ್​ ರೇಸ್​ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಅಂದರೆ ಲೀಗ್ ಹಂತದಲ್ಲೇ ತನ್ನ ಪ್ರಯಾಣ ಮುಗಿಸಿದ ಮೊದಲ ತಂಡವಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ 203 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಸಿಎಸ್​ಕೆ ಕೊನೆಯ ಓವರ್​ನಲ್ಲಿ ಗೆಲುವು ದಾಖಲಿಸಿತು.

ಲಕ್ನೋಗೆ ಸ್ಫೋಟಕ ಆರಂಭ

ಈ ಪಂದ್ಯದಲ್ಲಿ, ಟಾಸ್ ಗೆದ್ದು ಚೆನ್ನೈ ಸೂಪರ್ ಕಿಂಗ್ಸ್ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಉತ್ತಮ ಆರಂಭವನ್ನು ಪಡೆಯಿತು. ಆರಂಭಿಕ ಜೋಶ್ ಇಂಗ್ಲಿಸ್ ಕೇವಲ 33 ಎಸೆತಗಳಲ್ಲಿ 10 ಬೌಂಡರಿ ಮತ್ತು 6 ಸಿಕ್ಸರ್‌ಗಳೊಂದಿಗೆ 85 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಆದರೆ ಅವರಿಗೆ ಇತರ ಆಟಗಾರರಿಂದ ಅಗತ್ಯ ಬೆಂಬಲ ಸಿಗಲಿಲ್ಲ. ಮಿಚೆಲ್ ಮಾರ್ಷ್ 10, ನಿಕೋಲಸ್ ಪೂರನ್ 1, ರಿಷಭ್ ಪಂತ್ 15, ಐಡೆನ್ ಮಾರ್ಕ್ರಾಮ್ 6, ಅಕ್ಷತ್ ರಘುವಂಶಿ 18, ಹಿಮ್ಮತ್ ಸಿಂಗ್ 17 ಮತ್ತು ಮೊಹಮ್ಮದ್ ಶಮಿ 0 ರನ್ ಗಳಿಸಿ ಔಟಾದರು. ಶಹಬಾಜ್ ಅಹ್ಮದ್ 25 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ ಅಜೇಯ 43 ರನ್ ಗಳಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ಪರ ಜೇಮೀ ಓವರ್ಟನ್ 4 ಓವರ್‌ಗಳಲ್ಲಿ 36 ರನ್‌ಗಳಿಗೆ 3 ವಿಕೆಟ್ ಪಡೆದರೆ, ಅನ್ಶುಲ್ ಕಾಂಬೋಜ್ 2 ಮತ್ತು ನೂರ್ ಅಹ್ಮದ್ 1 ವಿಕೆಟ್ ಪಡೆದರು.

ಉರ್ವಿಲ್ ಸಿಡಿಲಬ್ಬರ

ಈ ಗುರಿ ಬೆನ್ನಟ್ಟಿದ ಚೆನ್ನೈ ಪರ, ಸಂಜು ಸ್ಯಾಮ್ಸನ್ ಮತ್ತು ನಾಯಕ ರುತುರಾಜ್ ಗಾಯಕ್ವಾಡ್ ಕೂಡ ಆಕ್ರಮಣಕಾರಿ ಆರಂಭವನ್ನು ನೀಡಿದರು, ನಾಲ್ಕನೇ ಓವರ್ ವೇಳೆಗೆ ತಂಡವನ್ನು 50 ರನ್‌ಗಳ ಹತ್ತಿರಕ್ಕೆ ತಂದರು. ಆದರೆ ಮೊದಲ ವಿಕೆಟ್ ಪತನದ ನಂತರ, ಉರ್ವಿಲ್ ಪಟೇಲ್ ಆಗಮನದೊಂದಿಗೆ ನಿಜವಾದ ಬಿರುಗಾಳಿ ಆರಂಭವಾಯಿತು. ತಮ್ಮ ಮೊದಲ ಎಸೆತದಲ್ಲಿ ಸಿಂಗಲ್ ಪಡೆದ ನಂತರ, ಉರ್ವಿಲ್ ಮುಂದಿನ ಏಳು ಎಸೆತಗಳಲ್ಲಿ ಆರು ಸಿಕ್ಸರ್‌ಗಳು ಮತ್ತು ಒಂದು ಬೌಂಡರಿ ಬಾರಿಸಿದರು. ಈ ಸಿಕ್ಸರ್‌ಗಳಲ್ಲಿ ಐದು, ಸತತ ಐದು ಎಸೆತಗಳಲ್ಲಿ ಬಂದವು. ಹೀಗಾಗಿ ಉರ್ವಿಲ್ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಯಶಸ್ವಿ ಜೈಸ್ವಾಲ್ ಅವರ ವೇಗದ ಅರ್ಧಶತಕದ ದಾಖಲೆಯನ್ನು ಸರಿಗಟ್ಟಿದರು.

ಕೊನೆಯ ಓವರ್​ನಲ್ಲಿ ಗೆದ್ದ ಸಿಎಸ್​ಕೆ

ಉರ್ವಿಲ್ ಪಟೇಲ್ ಕ್ರೀಸ್​ನಲ್ಲಿರುವವರೆಗೂ, ಚೆನ್ನೈ ತಂಡವು ಆರಾಮದಾಯಕ ಗೆಲುವಿನತ್ತ ಸಾಗುವ ಲಕ್ಷಣ ತೋರುತ್ತಿತ್ತು. ಆದಾರೆ ಅವರ ವಿಕೆಟ್‌ ಪತನದ ಬಳಿಕ ತಂಡದ ರನ್ ವೇಗವೂ ನಿಧಾನವಾಯಿತು. ಇಲ್ಲಿಂದ ಲಕ್ನೋ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದಂತೆ ತೋರುತ್ತಿತ್ತು. ಅಂತಿಮ ಓವರ್‌ನಲ್ಲಿ ಚೆನ್ನೈ ಗೆಲ್ಲಲು 10 ರನ್‌ಗಳು ಬೇಕಾಗಿದ್ದವು, ಆದರೆ ರಿಷಭ್ ಪಂತ್ ಚೆಂಡನ್ನು ಶಿವಂ ದುಬೆ ಮುಂದೆ ಸ್ಪಿನ್ನರ್ ಐಡೆನ್ ಮಾರ್ಕ್ರಾಮ್‌ಗೆ ಹಸ್ತಾಂತರಿಸಿದರು. ದುಬೆ ಸತತ ಎರಡು ಸಿಕ್ಸರ್‌ಗಳನ್ನು ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:19 pm, Sun, 10 May 26

Source link