All posts by nagaraj11081993

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 28ರ ದಿನಭವಿಷ್ಯ

ಹನುಮಂತನ ದೇವಸ್ಥಾನದಲ್ಲಿ ಇಪ್ಪತ್ತೊಂದು ಪ್ರದಕ್ಷಿಣೆಗಳನ್ನು ಮಾಡುವುದಕ್ಕೆ ಸಾಧ್ಯವಿದ್ದಲ್ಲಿ ಮಾಡಿ. ಮನೆಯಲ್ಲಿಯೇ ಆದರೂ ಹೀಗೆ ಪ್ರದಕ್ಷಿಣೆ ಮಾಡಿ. ಇದರಿಂದ ಶತ್ರಬಾಧೆ, ಆರೋಗ್ಯ ಸಮಸ್ಯೆಗಳು, ವ್ಯಾಜ್ಯಗಳಿಂದ ಆಗುತ್ತಿರುವ ಕಿರಿಕಿರಿಯಿಂದ ಹೊರಗೆ ಬರುವುದಕ್ಕೆ ಮಾರ್ಗೋಪಾಯಗಳು ಗೋಚರ ಆಗುತ್ತವೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನಿಮ್ಮಿಂದ ಎಷ್ಟು ದಕ್ಕಿಸಿಕೊಳ್ಳುವುದಕ್ಕೆ ಸಾಧ್ಯ ಎಂಬ ಸ್ಪಷ್ಟ ಚಿತ್ರಣವೊಂದು ಇರಿಸಿಕೊಂಡ ನಂತರವೇ ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳಿಗೆ ಕೈ ಹಾಕುವುದು ಒಳ್ಳೆಯದು. ಏಕೆಂದರೆ ಈ ದಿನ ನಿಮಗೆ ಬರುವಂಥ ಕೆಲವು ಕೆಲಸಗಳು ಮೇಲ್ನೋಟಕ್ಕೆ ಬಹಳ ದೊಡ್ಡ ಲಾಭ ತಂದುಕೊಡುವಂತೆ ಅನಿಸಲಿದೆ. ಆದರೆ ಸರ್ಕಾರದ ಮಟ್ಟದಲ್ಲಿ ಆಗಿರುವ ಅಥವಾ ಮುಂದೆ ಆಗುವ ಬದಲಾವಣೆಗಳ ಕಾರಣಕ್ಕೆ ನೀವು ನಿರೀಕ್ಷೆ ಮಾಡಿರುವ ಮಟ್ಟಕ್ಕೆ ಲಾಭ ತಂದುಕೊಡುವುದಿಲ್ಲ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಹಣ್ಣು- ತರಕಾರಿ ಬೆಳೆಗಾರರಿಗೆ ಹೊಸ ವ್ಯಕ್ತಿಗಳ ಪರಿಚಯದಿಂದ ಲಾಭದ ಪ್ರಮಾಣ ಹೆಚ್ಚಿಸಿಕೊಳ್ಳಲು ಮಾರ್ಗೋಪಾಯ ಗೋಚರ ಆಗಲಿವೆ. ಇಷ್ಟು ದಿನ ಯಾವ ಅಡೆತಡೆಗಳು ನಿಮಗೆ ಸವಾಲಾಗಿ ಪರಿಣಮಿಸಿದ್ದವೋ ಅವುಗಳನ್ನು ದಾಟುವುದಕ್ಕೆ ಸಾಧ್ಯವಾಗಲಿದೆ. ಚಿತ್ರಮಂದಿರಗಳ ಮಾಲೀಕರು ವ್ಯವಹಾರದಲ್ಲಿ ಬದಲಾವಣೆ ಮಾಡಿಕೊಳ್ಳಲು ತೀರ್ಮಾನ ಮಾಡುತ್ತೀರಿ. ಇದಕ್ಕೆ ಕುಟುಂಬ ಸದಸ್ಯರ ಬೆಂಬಲ ಸಹ ದೊರೆಯಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಯಾಕೆ ಅವರು ಹಾಗೆ ಮಾತನಾಡಿದರು ಎಂದು ಒಬ್ಬರೇ ವ್ಯಕ್ತಿಯು ಆಡಿದ ಮಾತು, ಬಳಸಿದ ಪದಗಳು ದಿನವಿಡೀ ನಿಮ್ಮನ್ನು ಕಾಡಲಿವೆ. ಈ ಹಿಂದೆ ಇದ್ದಂಥ ಉತ್ಸಾಹದಲ್ಲಿ ನಿಮ್ಮ ವೃತ್ತಿ- ವ್ಯಾಪಾರ- ವ್ಯವಹಾರದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಎಲ್ಲರನ್ನೂ ಒಟ್ಟುಗೂಡಿಸಿಕೊಂಡು, ಮುಂದಕ್ಕೆ ಹೋಗಬೇಕಾದ ಜವಾಬ್ದಾರಿಗಳಿಂದ ಕಳಚಿಕೊಳ್ಳಬೇಕು ಎಂಬ ಭಾವ ಬಲವಾಗಿ ಆವರಿಸಿಕೊಳ್ಳುತ್ತದೆ.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 28ರ ದಿನಭವಿಷ್ಯ – Kannada News | February 28 Satursday Horoscope: Birth Numbers 4,5,6 Daily Forecast and Life Advice

ಉಪ್ಪು- ಮೆಣಸು ಈ ಎರಡರಿಂದ ದೃಷ್ಟಿ ದೋಷ ನಿವಾರಣೆಗಾಗಿ ನಿವಾಳಿಸಿಕೊಳ್ಳಿ. ಮುಖ್ಯವಾಗಿ ಪದೇಪದೇ ಅಪಘಾತ, ಗಾಯಗಳು ಆಗುತ್ತಿದ್ದಲ್ಲಿ ಸಂಜೆ ವೇಳೆಗೆ ಇದನ್ನು ಮಾಡಿಕೊಳ್ಳುವುದರಿಂದ ದೃಷ್ಟಿದೋಷದ ನಿವಾರಣೆ ಆಗಿ, ಸಮಸ್ಯೆಯಿಂದ ಹೊರಗೆ ಬರುತ್ತೀರಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ನೀವು ಎಲ್ಲ ರೀತಿಯಿಂದ ಶ್ರಮ ಪಟ್ಟು, ಇನ್ನು ಆಗಲಾರದು ಎಂದುಕೊಂಡಿದ್ದ ಕೆಲವು ಸರ್ಕಾರಕ್ಕೆ ಸಂಬಂಧಿಸಿದ ಕೆಲಸ- ಕಾರ್ಯಗಳಿಗೆ ಪವಾಡದ ರೀತಿಯಲ್ಲಿ ಮುಗಿಯಲಿದೆ. ನಿಮ್ಮ ಗೆಳೆಯ- ಗೆಳತಿಯರು ನೀಡುವ ಸಲಹೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಿ. ತಾತ್ಕಾಲಿಕ ಎಂಬಂತೆ ಸ್ವಲ್ಪ ಹಣಕಾಸಿನ ಅಗತ್ಯ ಕಂಡುಬರಲಿದೆ. ಸಂಗಾತಿ ಕಡೆಯಿಂದ ಈ ವಿಚಾರದಲ್ಲಿ ಸಹಾಯ ಒದಗಿ ಬರಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಸದ್ದಿಲ್ಲದೆ ಆರಂಭ ಮಾಡಿದ್ದ ವ್ಯಾಪಾರ- ವ್ಯವಹಾರಗಳು ಕೈ ಹಿಡಿಯುತ್ತಿರುವುದಕ್ಕೆ ಸೂಚನೆ ದೊರೆಯಲಿದ್ದು, ಆ ಕಡೆಗೆ ಪೂರ್ಣ ಪ್ರಮಾಣದಲ್ಲಿ ಗಮನ ನೀಡುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ಈಗಾಗಲೇ ನೀವು ಕೆಲಸ ಮಾಡಿದ್ದೀರಿ, ಅದಕ್ಕಾಗಿ ನಿಮಗೆ ಕೊಡಬೇಕಾದ ಹಣವನ್ನು ಇವತ್ತು- ನಾಳೆ ಎನ್ನುತ್ತಾ ಮುಂದಕ್ಕೆ ಹಾಕುತ್ತಾ ಬರುತ್ತಿರುವವರಿಗೆ ಗಟ್ಟಿಯಾದ ಧ್ವನಿಯಲ್ಲಿ ಕೇಳಲಿದ್ದೀರಿ, ಆ ಹಣ ವಸೂಲಿಯೇ ಆಗಿಬಿಡಲಿದೆ ಅಥವಾ ಇಂಥ ದಿನ ಖಚಿತವಾಗಿ ಹಣ ದೊರೆಯುವ ಭರವಸೆ ಸಿಗಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಸಂತೆ ಹೊತ್ತಿಗೆ ಮೂರು ಮೊಳ ಎಂಬ ರೀತಿಯಲ್ಲಿ ಯಾವ ಕೆಲಸವನ್ನು ಸಹ ಮಾಡುವುದಕ್ಕೆ ಹೋಗಬೇಡಿ. ತುರ್ತಾಗಿ ಕೆಲಸ ಮುಗಿಸುವ ಭರದಲ್ಲಿ ಗುಣಮಟ್ಟದ ಜೊತೆ ರಾಜೀ ಮಾಡಿಕೊಂಡು, ದೀರ್ಘಾವಧಿಯಲ್ಲಿ ಅದಕ್ಕಾಗಿ ಪಶ್ಚಾತಾಪ ಪಡುವಂತೆ ಆಗುತ್ತದೆ. ಸೋದರ- ಸೋದರಿಯರ ಜತೆಗಿನ ಭಿನ್ನಾಭಿಪ್ರಾಯ ಈಗಾಗಲೇ ಇದ್ದಲ್ಲಿ ಅದು ವಿಪರೀತಕ್ಕೆ ಹೋಗುವ ಸಾಧ್ಯತೆ ಇರುತ್ತದೆ.

ಲೇಖನ- ಸ್ವಾತಿ ಎನ್.ಕೆ.

Published On – 12:20 am, Sat, 28 February 26

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 28ರ ದಿನಭವಿಷ್ಯ

ಚಪ್ಪಲಿ, ಛತ್ರಿ ಈ ಎರಡನ್ನೂ ಯಾರಿಗೆ ಅಗತ್ಯ ಇದೆಯೋ ಅಂಥವರಿಗೆ ನೀಡಿ. ಹೀಗೆ ಮಾಡುವುದರಿಂದ ನಿಮ್ಮ ಮೇಲೆ ಬಂದಿರುವ ವೃಥಾರೋಪಗಳಿಂದ ಹೊರಗೆ ಬರುವುದಕ್ಕೆ ಸಾಧ್ಯವಾಗಲಿದೆ. ದೊಡ್ಡ ಮಟ್ಟದ ನಷ್ಟ ಆಗಬಹುದು ಎಂದು ನೀವಂದುಕೊಂಡಿದ್ದ ವ್ಯವಹಾರದಲ್ಲಿ ನಷ್ಟದ ಪ್ರಮಾಣ ಕಡಿಮೆ ಆಗಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ನಿಮ್ಮ ಜತೆ ಈ ಹಿಂದೆ ಉದ್ಯೋಗ ಮಾಡಿದ್ದವರು ಏನಾದರೂ ವ್ಯಾಪಾರ- ವ್ಯವಹಾರದ ಆಫರ್ ತಂದಲ್ಲಿ ಗಂಭೀರವಾಗಿ ಪರಿಗಣಿಸಿ. ಒಂದು ವೇಳೆ ಈ ದಿನ ಆ ಬಗ್ಗೆ ಚರ್ಚೆ ಮಾಡುವುದಕ್ಕೆ ಮನಸ್ಸಿಲ್ಲ ಅಂತಾದರೂ ಒಂದೆರಡು ದಿನ ಸಮಯ ತೆಗೆದುಕೊಳ್ಳವುದು ಒಳ್ಳೆ ತೀರ್ಮಾನ ಎನಿಸಿಕೊಳ್ಳಲಿದೆ. ಸಂಗಾತಿಯ ಉದ್ಯೋಗ ವಿಚಾರದಲ್ಲಿ ಅನಿಶ್ಚಿತತೆ ಕಾಡಲಿದೆ. ಇದರಿಂದ ಉಂಟಾಗುವ ಆತಂಕದಿಂದ ಹೊರಬರುವುದಕ್ಕೆ ನಾನಾ ಪ್ರಯತ್ನವನ್ನು ಮಾಡಲಿದ್ದೀರಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಸಾವಯವ ಉತ್ಪನ್ನಗಳ ಮಾರಾಟ ಮಾಡುತ್ತಾ ಇರುವವರು ವ್ಯಾಪಾರದ ವಿಸ್ತರಣೆಗೆ ಹಲವು ರೀತಿ ಪ್ರಯತ್ನಗಳನ್ನು ಮಾಡಲಿದ್ದೀರಿ. ನಿಮ್ಮ ಉಳಿತಾಯ ಹಾಗೂ ಹೂಡಿಕೆ ಮಾಡಿದ್ದ ಹಣವನ್ನು ತೆಗೆದು, ಅದನ್ನು ಈ ಉದ್ದೇಶಕ್ಕೆ ಬಳಸುವುದಕ್ಕೆ ಮುಂದಾಗಲಿದ್ದೀರಿ. ಹೊಸ ಮಾರುಕಟ್ಟೆಯಲ್ಲಿ ಈಗಷ್ಟೇ ಕೆಲಸ ಆರಂಭಿಸಿದವರು ತಾಳ್ಮೆ- ಸಂಯಮ ವಹಿಸುವುದು ಮುಖ್ಯವಾಗುತ್ತದೆ. ಸೇಲ್ಸ್- ಮಾರ್ಕೆಟಿಂಗ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಾ ಇದ್ದೀರಿ ಅಂತಾದಲ್ಲಿ ಮೇಲಧಿಕಾರಿ ನೀಡುವ ಸಲಹೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ದೂರ ಪ್ರಯಾಣ ಅನಿವಾರ್ಯ ಅಂತಾದಲ್ಲಿ ಯಾವುದೇ ಹಿಂಜರಿಕೆ ಮಾಡದೆ ಹೊರಟುಬಿಡಿ. ಇದರಿಂದ ನಿಮಗೆ ಹಲವು ರೀತಿಯಲ್ಲಿ ಅನುಕೂಲಗಳು ಒದಗಿಬರಲಿವೆ. ದೇವತಾ ಕಾರ್ಯಗಳಲ್ಲಿ ಭಾಗೀ ಆಗುವುದಕ್ಕೆ ಆಹ್ವಾನ ಬಂದಲ್ಲಿ ಇಲ್ಲ ಎನ್ನದೆ ಕಡ್ಡಾಯವಾಗಿ ಭಾಗಿ ಆಗುವುದಕ್ಕೆ ಪ್ರಯತ್ನಿಸಿ. ಬ್ಯಾಂಕ್ ಉದ್ಯೋಗಿಗಳಿಗೆ ಸ್ವಲ್ಪ ಮಟ್ಟಿಗೆ ಒತ್ತಡದ ದಿನ ಇದಾಗಿರುತ್ತದೆ.

ಲೇಖನ- ಸ್ವಾತಿ ಎನ್.ಕೆ.

Source link

PAK vs SL: ಪಾಕಿಸ್ತಾನ ಸೆಮಿಫೈನಲ್​ಗೇರಬೇಕೆಂದರೆ ಶ್ರೀಲಂಕಾ ವಿರುದ್ಧ ಎಷ್ಟು ಅಂತರದಲ್ಲಿ ಗೆಲ್ಲಬೇಕು? – Kannada News | T20 World Cup: England’s Win Boosts Pakistan’s Semi Final Hopes After NZ Loss

ಟಿ20 ವಿಶ್ವಕಪ್‌ನ (T20 World Cup) ಸೂಪರ್ 8 ಸುತ್ತಿನ ಗ್ರೂಪ್ 2 ರಲ್ಲಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದ ಫಲಿತಾಂಶವು ಕಮರಿ ಹೋಗಿದ್ದ ಪಾಕಿಸ್ತಾನದ ಕನಸಿಗೆ ಜೀವ ತುಂಬಿದೆ. ಕೊನೆಯವರೆಗೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ ನ್ಯೂಜಿಲೆಂಡ್, ತಾನು ಮಾಡಿದ ತಪ್ಪುಗಳಿಂದ ಸೋಲಿನ ಬೆಲೆ ತೆತ್ತಬೇಕಾಯಿತು. ಇತ್ತ ಕೊನೆಯ ಓವರ್​ನಲ್ಲಿ ಪಂದ್ಯ ಗೆದ್ದು ಅಜೇಯ ತಂಡವಾಗಿ ಇಂಗ್ಲೆಂಡ್‌ ಸೆಮಿಫೈನಲ್‌ ಪ್ರವೇಶಿಸಿತು. ಇಂಗ್ಲೆಂಡ್‌ ತಂಡದ ಈ ಗೆಲುವಿನಿಂದ ಪಾಕಿಸ್ತಾನದ ಸೆಮಿಫೈನಲ್ ಕನಸು ಜೀವಂತವಾಗಿದೆ. ಆದಾಗ್ಯೂ ಪಾಕಿಸ್ತಾನಕ್ಕೆ ಸೆಮಿಫೈನಲ್‌ ತಲುಪುವುದು ಅಷ್ಟು ಸುಲಭವಾಗಿಲ್ಲ. ಇದಕ್ಕಾಗಿ ಪಾಕಿಸ್ತಾನ, ಶ್ರೀಲಂಕಾವನ್ನು (Sri Lanka vs Pakistan) ಅವರ ತವರು ನೆಲದಲ್ಲಿ ಮಣಿಸಬೇಕಾಗಿದೆ. ಕೇವಲ ಸೋಲಿಸಿದರೆ ಮಾತ್ರ ಸಾಕಾಗದು ಬದಲಿಗೆ ಪಾಕಿಸ್ತಾನ ಗೆಲ್ಲುವುದರ ಜೊತೆಗೆ ಅದರ ನೆಟ್ ರನ್​ರೇಟ್ ಅನ್ನು ನ್ಯೂಜಿಲೆಂಡ್​ಗಿಂತ ಉತ್ತಮಗೊಳಿಸಬೇಕಿದೆ.

ವಾಸ್ತವವಾಗಿ ಪ್ರೇಮದಾಸ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಮೇಲುಗೈ ಸಾಧಿಸಿತ್ತು. ಇಂಗ್ಲೆಂಡ್ ಗೆಲ್ಲಲು ಕೊನೆಯ 18 ಎಸೆತಗಳಲ್ಲಿ 43 ರನ್‌ಗಳ ಅಗತ್ಯವಿತ್ತು. ಆದರೆ 18 ನೇ ಓವರ್ ನ್ಯೂಜಿಲೆಂಡ್‌ ಪಾಲಿಗೆ ದುಬಾರಿಯಾಯಿತು. ಗ್ಲೆನ್ ಪಿಲಿಪ್ಸ್ ಬೌಲ್ ಮಾಡಿದ ಈ ಓವರ್‌ನಲ್ಲಿ 22 ರನ್‌ಗಳು ಬಂದವು. ಇದರ ಪರಿಣಾಮವಾಗಿ ಇಂಗ್ಲೆಂಡ್ 4 ವಿಕೆಟ್‌ಗಳು ಮತ್ತು ಇನ್ನೂ 3 ಎಸೆತಗಳು ಬಾಕಿ ಇರುವಂತೆಯೇ ಪಂದ್ಯವನ್ನು ಗೆದ್ದುಕೊಂಡಿತು.

ಕಿವೀಸ್​ಗೆ ಈಗಲೂ ಇದೇ ಅವಕಾಶ

ಸೂಪರ್ 8 ಸುತ್ತಿನಲ್ಲಿ ಇಂಗ್ಲೆಂಡ್ ಆಡಿರುವ 3 ಪಂದ್ಯಗಳಲ್ಲಿ 3 ರಲ್ಲಿ ಗೆದ್ದು 6 ಅಂಕಗಳೊಂದಿಗೆ ಸೆಮಿಫೈನಲ್ ತಲುಪಿದೆ. ಮತ್ತೊಂದೆಡೆ, ಶ್ರೀಲಂಕಾ 2 ಪಂದ್ಯಗಳಲ್ಲಿ ಸೋತು ಸೆಮಿಫೈನಲ್‌ ರೇಸ್​ನಿಂದ ಹೊರಬಿದ್ದಿದೆ. ಈಗ, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ಗುಂಪು 2 ರಿಂದ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಅವಕಾಶವನ್ನು ಹೊಂದಿವೆ. ಆದಾಗ್ಯೂ ನ್ಯೂಜಿಲೆಂಡ್ ಸೂಪರ್ 8 ಸುತ್ತಿನ ಎಲ್ಲಾ ಮೂರು ಪಂದ್ಯಗಳನ್ನು ಆಡಿದ್ದು, ಆಡಿರುವ 3 ಪಂದ್ಯಗಳಲ್ಲಿ ಒಂದನ್ನು ಗೆದ್ದಿದ್ದು, ಒಂದು ಪಂದ್ಯವನ್ನು ಸೋತಿದೆ. ಉಳಿದಂತೆ 1 ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಇದರೊಂದಿಗೆ ನ್ಯೂಜಿಲೆಂಡ್ 3 ಅಂಕಗಳು ಮತ್ತು +1.390 ನೆಟ್​ ರನ್​ರೇಟ್​ನೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ENG vs NZ: ಗೆಲ್ಲುವ ಪಂದ್ಯ ಕೈಚೆಲ್ಲಿದ ನ್ಯೂಜಿಲೆಂಡ್; ಪಾಕ್ ಸೆಮೀಸ್ ಆಸೆ ಜೀವಂತ

ಸೆಮೀಸ್​ಗೇರಲು ಪಾಕ್ ಏನು ಮಾಡಬೇಕು?

ಇತ್ತ ಇಂಗ್ಲೆಂಡ್‌ ಗೆಲುವಿನಿಂದ ಸೆಮಿಫೈನಲ್​ಗೇರುವ ಅವಕಾಶ ಪಡೆದುಕೊಂಡಿರುವ ಪಾಕಿಸ್ತಾನ ತನ್ನ ಕೊನೆಯ ಸೂಪರ್ 8 ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸುತ್ತಿದೆ. ಶ್ರೀಲಂಕಾ ವಿರುದ್ಧದ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೆ, ಅದರ ಬಳಿಯೂ 3 ಅಂಕಗಳು ಇರಲಿವೆ. ಪ್ರಸ್ತುತ ಪಾಕಿಸ್ತಾನ 2 ಪಂದ್ಯಗಳನ್ನಾಡಿದ್ದು, ಅದರಲ್ಲಿ ಒಂದನ್ನು ಸೋತಿದ್ದು, ಉಳಿದ ಒಂದು ಪಂದ್ಯ ಡ್ರಾ ಆಗಿದೆ. ಆದ್ದರಿಂದ 1 ಪಾಯಿಂಟ್ ಜೊತೆಗೆ -0.461 ನೆಟ್ ರನ್​ರೇಟ್ ಹೊಂದಿದೆ. ಪಾಕಿಸ್ತಾನ ಈಗ ಗೆಲುವಿನ ಜೊತೆಗೆ ನೆಟ್ ರನ್ ರೇಟ್​ ಅನ್ನು ಸಹ ಸುಧಾರಿಸಬೇಕಾಗಿದೆ. ಹೀಗಾಗಿ ಪಾಕಿಸ್ತಾನ ನೆಟ್ ರನ್ ರೇಟ್​ ಸುಧಾರಿಸಬೇಕೆಂದರೆ ಮೊದಲು ಬ್ಯಾಟಿಂಗ್ ಮಾಡಿದರೆ ಪಂದ್ಯವನ್ನು 65 ರನ್‌ಗಳಿಂದ ಗೆಲ್ಲಬೇಕಾಗುತ್ತದೆ. ಒಂದು ವೇಳೆ ಮೊದಲು ಬೌಲಿಂಗ್ ಮಾಡಿದರೆ 13.2 ಓವರ್‌ಗಳಲ್ಲಿ ಲಂಕಾ ನೀಡುವ ಗುರಿಯನ್ನು ಬೆನ್ನಟ್ಟಬೇಕಾಗುತ್ತದೆ. ಈ ಎರಡನ್ನೂ ಮಾಡುವಲ್ಲಿ ಪಾಕ್ ಎಡವಿದರೆ, ನ್ಯೂಜಿಲೆಂಡ್ ಉತ್ತಮ ನೆಟ್ ರನ್​ರೇಟ್ ಆಧಾರದ ಮೇಲೆ ಸೆಮಿಫೈನಲ್​ಗೇರಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:06 pm, Fri, 27 February 26

Source link

ಚಡ್ಡಿ ಕಳ್ಳಿಯರು; ಅಂಗಡಿಯಲ್ಲಿ ಒಳ ಉಡುಪು ಕದ್ದ ಮಹಿಳೆಯರು – Kannada News | 3 Women Stealing Undergarments In Varanasi Store video Goes Viral

ವಾರಾಣಸಿ, ಫೆಬ್ರವರಿ 27: ವಾರಾಣಸಿಯ ಲಾಹುರಾಬಿರ್ ಅಂಗಡಿಯಿಂದ ಮೂವರು ಮಹಿಳೆಯರು 10,000 ರೂ. ಮೌಲ್ಯದ ಒಳ ಉಡುಪುಗಳನ್ನು ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ. ವಾರಾಣಸಿಯಲ್ಲಿ (Varanasi) ವ್ಯಾಪಾರಿಗಳ ಸಂಘದ ಪ್ರಮುಖ ನಾಯಕಿಯರಾಗಿರುವ ಮೂವರು ಮಹಿಳೆಯರು ಸುಮಾರು 10,000 ರೂ. ಮೌಲ್ಯದ ಒಳ ಉಡುಪುಗಳನ್ನು ಕದ್ದಿದ್ದಾರೆ ಎಂದು ಅಂಗಡಿ ಮಾಲೀಕರು ಆರೋಪಿಸಿದ್ದರು. ಸಿಸಿಟಿವಿ ಪರಿಶೀಲಿಸಿದಾಗ ಈ ಆರೋಪ ದೃಢಪಟ್ಟಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಗಲಕೋಟೆ ಕಲ್ಲು ತೂರಾಟ: ಹಿಂದೂ ಯುವಕರ ಬಂಧನಕ್ಕೆ ಹೋಗಿದ್ದ ಪೊಲೀಸರನ್ನ ಅಡ್ಡಗಟ್ಟಿದ ಮಹಿಳೆಯರು – Kannada News | Bagalkote: Stone Pelting During Shivaji Jayanti Procession case; Women obstruct police who were going to arrest Hindu youth

ಬಾಗಲಕೋಟೆ, ಫೆಬ್ರವರಿ 27: ಶಿವಾಜಿ‌ ಜಯಂತಿ (Shivaji Jayanti Procession) ಮೆರವಣಿಗೆ ವೇಳೆ ಕಲ್ಲುತೂರಾಟ ಪ್ರಕರಣ (Stone Pelting) ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ಹಿಂದೂ ಕಾರ್ಯಕರ್ತನ ಬಂಧನಕ್ಕೆ ಪೊಲೀಸರು ತೆರಳಿದ್ದ ತಳ್ಳಾಟ ನೂಕಾಟ ನಡೆದಿದೆ. ಬಾಗಲಕೋಟೆಯ ಕಿಲ್ಲಾ ಓಣಿಯಲ್ಲಿ ಘಟನೆ ನಡೆದಿದೆ. ಮುತ್ತು ಮಾಗಿ ಎಂಬ ಯುವಕನನ್ನ ಕರೆದೊಯ್ಯಲು ಯತ್ನಿಸಿದ ವೇಳೆ ಪೊಲೀಸರಿಗೆ ಅಡ್ಡ ನಿಂತು ಬಂಧಿಸದಂತೆ ಜನರು ತಡೆದಿದ್ದಾರೆ. ಅಮಾಯಕರನ್ನ ಬಂಧಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಹಿಳೆಯರು ಪೊಲೀಸರ‌ನ್ನ ತರಾಟೆಗೆ ತೆಗೆದುಕೊಂಡಿದ್ದು, ಹೈಡ್ರಾಮಾವೇ ನಡೆದಿದೆ.

ಪೊಲೀಸರನ್ನು ಅಡ್ಡಗಟ್ಟಿದ ಮಹಿಳೆಯರು

ಶಿವಾಜಿ ಮಹಾರಾಜರ ಜಯಂತಿ ದಿನ ಮೆರವಣಿಗೆ ವೇಳೆ ನಡೆದ ಕಲ್ಲು, ಚಪ್ಪಲಿ ತೂರಾಟ ಪ್ರಕರಣ ನಗರದಲ್ಲಿ ಕಿಚ್ಚು ಹಚ್ಚಿಸಿದೆ. ಘಟನೆ ನಡೆದು 7 ದಿನವಾದರೂ ಕಾವು ಆರಿಲ್ಲ. ನಿನ್ನೆ ಡಿಸಿ ಕಚೇರಿ ಎದುರು ಹಿಂದೂ ಕಾರ್ಯಕರ್ತರು ಬೃಹತ್ ಪ್ರತಿಭಟನೆ ಮಾಡಿದ್ದರು. ಇನ್ನು ಹಿಂದೂ ಕಾರ್ಯಕರ್ತರ ಬಂಧನಕ್ಕೆ ಬಾಗಲಕೋಟೆ ಪೊಲೀಸರು ಯತ್ನಿಸಿದ್ದು, ಈ ವೇಳೆ ಕಿಲ್ಲಾ ಓಣಿಯ ಮಹಿಳೆಯರು ಹಾಗೂ ಜನರು ಪೊಲೀಸರನ್ನು ಅಡ್ಡಗಟ್ಟಿದ್ದಾರೆ.

ಉದ್ರಿಕ್ತ ಜನರನ್ನ ಸಮಾಧಾನ ಮಾಡಿದ: ಮಾಜಿ ಶಾಸಕ ವೀರಣ್ಣ ಚರಂತಿಮಠ

ಇನ್ನು ಸ್ಥಳಕ್ಕೆ ಬಾಗಲಕೋಟೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಭೇಟಿ ನೀಡಿ ಉದ್ರಿಕ್ತಗೊಂಡ ಜನರನ್ನು ಸಮಾಧಾನಪಡಿಸಿದರು. ಸ್ಥಳಕ್ಕೆ ಎಸ್​ಪಿ ಬರಬೇಕು, ಪೊಲೀಸರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಮಹಿಳೆಯರು ಹಾಗೂ ಹಿಂದೂ ಕಾರ್ಯಕರ್ತರು ಆಗ್ರಹಿಸಿದರು. ಜನರ ಮಧ್ಯೆ ನಿಂತು ಎಸ್​ಪಿ ಸಿದ್ದಾರ್ಥ್ ಗೋಯೆಲ್​ಗೆ ಕರೆ ಮಾಡಿದ ವೀರಣ್ಣ ಚರಂತಿಮಠ, ಎಲ್ಲವೂ ಶಾಂತ ರೀತಿಯಿಂದ ಮುಗಿಯುತ್ತಿದೆ. ನೀವು ಬಂಧಿಸುವ ನೆಪದಲ್ಲಿ ಬಡ ಕಾಯಿಸಬೇಡಿ. ನಾನು ಇವರನ್ನು ಸಂತೈಸುತ್ತೇನೆ, ಸಮಾಧಾನ ಮಾಡುತ್ತೇನೆ. ನಿಮ್ಮ ಪೊಲೀಸರು ಈ ರೀತಿ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಇದನ್ನೂ ಓದಿ: ಶಿವಾಜಿ ಜಯಂತಿ ವೇಳೆ ಕಲ್ಲು ತೂರಾಟ ಪ್ರಕರಣ: ಫೆ. 26 ರಂದು ಬೃಹತ್ ಹೋರಾಟಕ್ಕೆ ಹಿಂದೂ ಸಂಘಟನೆಗಳ ಕರೆ

ಸ್ಥಳದಲ್ಲಿ ಉಪಸ್ಥಿತರಿದ್ದ ಡಿಎಸ್​​ಪಿ ಪ್ರಶಾಂತ ಮುನ್ನೊಳ್ಳಿ ಜೊತೆಗೆ ಮಾತನಾಡಿದ ವೀರಣ್ಣ ಚರಂತಿಮಠ, ಎಲ್ಲವೂ ಶಾಂತವಿದ್ದಾಗ ಪೊಲೀಸರನ್ನು ಏಕೆ ಕಳಿಸಿದರು. ಆ ಹುಡುಗನ ತಂದೆ-ತಾಯಿ ಇದಾರೆ, ಮಹಿಳೆಯರ ಬಟ್ಟೆ ಹರೆದು ಹಾಕಿದ್ದಾರೆ. ನೀವು ಈ ರೀತಿ ಮಾಡುತ್ತಾ ಹೋದರೆ ಉರಿಯುವ ಬೆಂಕಿಗೆ ತುಪ್ಪ ಹಾಕಿದ ಹಾಗೆ ಆಗುತ್ತದೆ. ಇದರಿಂದ ಏನೂ ಶಾಂತ ಆಗುವುದಿಲ್ಲ. ಏನು ಸಾಧನೆ ಮಾಡುವುದಕ್ಕೂ ಆಗುವುದಿಲ್ಲ. ಮೊದಲು ಅವರ ಹುಡುಗನನ್ನು ಅವರ ಮನೆಗೆ ಕಳುಹಿಸಿ. ನಾಳೆ ನಾನು ಎಸ್​​ಪಿ ಆಫೀಸ್​ಗೆ ಹೋಗಿ ಮಾತನಾಡುತ್ತೇನೆ. ಈ ರೀತಿ ಆಗದಂತೆ ನಾವು ನೋಡಿಕೊಳ್ಳುತ್ತೇವೆ. ದಯಮಾಡಿ ತಾವು ಈಗ ತಮ್ಮ ತಮ್ಮ ಮನೆಗಳಿಗೆ ಹೋಗಿ ಎಂದು ಜನರಿಗೆ ವೀರಣ್ಣ ಚರಂತಿಮಠ ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ದಿ ರೈಸ್ ಆಫ್ ಅಶೋಕ: ಇಂಗ್ಲಿಷ್ ಶೀರ್ಷಿಕೆ ಇಟ್ಟಿದ್ದಕ್ಕೆ ಕಾರಣ ತಿಳಿಸಿದ ಸತೀಶ್ ನೀನಾಸಂ – Kannada News | Sathish Ninasam talks about The Rise of Ashoka movie title

ಸತೀಶ್ ನೀನಾಸಂ ಅಭಿನಯಿಸಿದ ‘ದಿ ರೈಸ್ ಆಫ್ ಅಶೋಕ’ (The Rise of Ashoka) ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾದ ಶೀರ್ಷಿಕೆ ಬಗ್ಗೆ ಕೆಲವರು ತಕರಾರು ತೆಗೆದಿದ್ದರು. ಕನ್ನಡದ ಸಿನಿಮಾಗೆ ಇಂಗ್ಲಿಷ್ ಶೀರ್ಷಿಕೆ ಯಾಕೆ ಎಂಬುದು ಪ್ರಶ್ನೆ. ಅದಕ್ಕೆ ‘ಟಿವಿ9’ ವಿಶೇಷ ಸಂದರ್ಶನದಲ್ಲಿ ಸತೀಶ್ ನೀನಾಸಂ (Sathish Ninasam) ಅವರು ಉತ್ತರ ನೀಡಿದ್ದಾರೆ. ‘ಅಶೋಕನ ಬೆಳವಣಿಗೆ ಅಂತ ಇಡೋಕೆ ಆಗಲ್ಲ. ಅಶೋಕ ಎದ್ದ ಅನ್ನೋಕೆ ಅಲ್ಲ. ದಿ ರೈಸ್ ಆಫ್ ಅಶೋಕ ಎಂದರೆ ಅದರಲ್ಲಿ ಒಂದು ಫೋರ್ಸ್ ಇದೆ. ಕೆಜಿಎಫ್ ಅಂತ ಶೀರ್ಷಿಕೆ ಇಟ್ಟಿದ್ದರು. ಕೋಲಾರದ ಚಿನ್ನದ ಗಣಿ ಅಂತ ಶೀರ್ಷಿಕೆ ಇಟ್ಟರೆ ಯಾವುದೋ ಕಲಾತ್ಮಕ ಸಿನಿಮಾ ಅಂದುಕೊಂಡು ಯಾರೂ ಬರಲ್ಲ’ ಎಂದು ಸತೀಶ್ ನೀನಾಸಂ ಅವರು ನಕ್ಕಿದ್ದಾರೆ. ಈ ಸಂದರ್ಶನದಲ್ಲಿ ಚಿತ್ರದ ನಾಯಕಿ ಸಪ್ತಮಿ ಗೌಡ (Sapthami Gowda) ಕೂಡ ಭಾಗವಹಿಸಿದ್ದಾರೆ. ತಮ್ಮ ಪಾತ್ರದ ಬಗ್ಗೆ ಅವರು ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಾಂಗ್ರೆಸ್​​ನಿಂದ ಭಾರತದ ವರ್ಚಸ್ಸು ನಾಶಮಾಡುವ ಪ್ರಯತ್ನ; ಪ್ರಧಾನಿ ಮೋದಿ ವಾಗ್ದಾಳಿ – Kannada News | They Tried To Destroy India’s Image PM Narendra Modi Lashes Out At Congress Over shirtless Protest

ನವದೆಹಲಿ, ಫೆಬ್ರವರಿ 27: ಫೆಬ್ರವರಿ 21ರಂದು ಮುಕ್ತಾಯಗೊಂಡ AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಭಾರತದ ಇಮೇಜ್ ಅನ್ನು ನಾಶಮಾಡಲು ಪ್ರಯತ್ನಿಸಿದ ಕಾಂಗ್ರೆಸ್ ಪ್ರಯತ್ನಿಸಿತು ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ಕಾಂಗ್ರೆಸ್ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನ್ಯೂಸ್ 18 ರೈಸಿಂಗ್ ಭಾರತ್ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪಿಎಂ ಮೋದಿ, ಯುವ ಕಾಂಗ್ರೆಸ್ ಶರ್ಟ್ ಬಿಚ್ಚಿ ನಡೆಸಿದ ಪ್ರತಿಭಟನೆಯನ್ನು ಕೊಳಕು ತಂತ್ರ ಎಂದು ಟೀಕಿಸಿದರು.

“AI ಶೃಂಗಸಭೆಯು ಇಡೀ ದೇಶಕ್ಕೆ ಹೆಮ್ಮೆಯ ಕ್ಷಣವಾಗಿತ್ತು. ಆದರೆ, ಕಾಂಗ್ರೆಸ್ ಪಕ್ಷವು ರಾಷ್ಟ್ರೀಯ ಆಚರಣೆಯನ್ನು ಒಂದು ಪ್ರದರ್ಶನವನ್ನಾಗಿ ಮಾಡಲು ಪ್ರಯತ್ನಿಸಿತು. ವಿದೇಶಿ ಅತಿಥಿಗಳ ಮುಂದೆ ಕಾಂಗ್ರೆಸ್ ತನ್ನ ನಿಜವಾದ ಮುಖವನ್ನು ತಾನು ಬಹಿರಂಗಪಡಿಸಿಕೊಂಡಿತು. ಅಷ್ಟೇ ಅಲ್ಲದೆ ತನ್ನ ಸೈದ್ಧಾಂತಿಕ ದಿವಾಳಿತನವನ್ನೂ ಬಹಿರಂಗಪಡಿಸಿತು” ಎಂದು ಮೋದಿ ಟೀಕಿಸಿದರು.

ಇದನ್ನೂ ಓದಿ: ಮಾನವೀಯತೆ ಎಂದಿಗೂ ಸಂಘರ್ಷಕ್ಕೆ ಬಲಿಯಾಗಬಾರದು; ಇಸ್ರೇಲ್​ನಲ್ಲಿ ಪ್ರಧಾನಿ ಮೋದಿ

“ಕಾಂಗ್ರೆಸ್ ಜಿತ್ನಾ ಶರ್ಟ್ ಫಾರ್ತೇ ರಹೇ, ಹಮ್ ಅಪ್ನಾ ಕಾಮ್ ಕರ್ತೇ ರಹೇ (ಕಾಂಗ್ರೆಸ್ ಎಷ್ಟೇ ಶರ್ಟ್ ಇಲ್ಲದೆ ಪ್ರತಿಭಟನೆ ನಡೆಸಿದರೂ, ನಾವು ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ)” ಎಂದು ಅವರು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:35 pm, Fri, 27 February 26

Source link

ಬಾಗಲಕೋಟೆ ಕಲ್ಲು ತೂರಾಟ: ಹಿಂದೂ ಯುವಕರ ಬಂಧನಕ್ಕೆ ಹೋಗಿದ್ದ ಪೊಲೀಸರನ್ನ ಅಡ್ಡಗಟ್ಟಿದ ಮಹಿಳೆಯರು – Kannada News | Bagalkote stone pelting during shivaji jayanti procession case women obstruct police who were going to arrest hindu youth

ಬಾಗಲಕೋಟೆ, ಫೆಬ್ರವರಿ 27: ಶಿವಾಜಿ‌ ಜಯಂತಿ (Shivaji Jayanti Procession) ಮೆರವಣಿಗೆ ವೇಳೆ ಕಲ್ಲುತೂರಾಟ ಪ್ರಕರಣ (Stone Pelting) ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ಹಿಂದೂ ಕಾರ್ಯಕರ್ತನ ಬಂಧನಕ್ಕೆ ಪೊಲೀಸರು ತೆರಳಿದ್ದ ತಳ್ಳಾಟ ನೂಕಾಟ ನಡೆದಿದೆ. ಬಾಗಲಕೋಟೆಯ ಕಿಲ್ಲಾ ಓಣಿಯಲ್ಲಿ ಘಟನೆ ನಡೆದಿದೆ. ಮುತ್ತು ಮಾಗಿ ಎಂಬ ಯುವಕನನ್ನ ಕರೆದೊಯ್ಯಲು ಯತ್ನಿಸಿದ ವೇಳೆ ಪೊಲೀಸರಿಗೆ ಅಡ್ಡ ನಿಂತು ಬಂಧಿಸದಂತೆ ಜನರು ತಡೆದಿದ್ದಾರೆ. ಅಮಾಯಕರನ್ನ ಬಂಧಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಹಿಳೆಯರು ಪೊಲೀಸರ‌ನ್ನ ತರಾಟೆಗೆ ತೆಗೆದುಕೊಂಡಿದ್ದು, ಹೈಡ್ರಾಮಾವೇ ನಡೆದಿದೆ.

ಪೊಲೀಸರನ್ನು ಅಡ್ಡಗಟ್ಟಿದ ಮಹಿಳೆಯರು

ಶಿವಾಜಿ ಮಹಾರಾಜರ ಜಯಂತಿ ದಿನ ಮೆರವಣಿಗೆ ವೇಳೆ ನಡೆದ ಕಲ್ಲು, ಚಪ್ಪಲಿ ತೂರಾಟ ಪ್ರಕರಣ ನಗರದಲ್ಲಿ ಕಿಚ್ಚು ಹಚ್ಚಿಸಿದೆ. ಘಟನೆ ನಡೆದು 7 ದಿನವಾದರೂ ಕಾವು ಆರಿಲ್ಲ. ನಿನ್ನೆ ಡಿಸಿ ಕಚೇರಿ ಎದುರು ಹಿಂದೂ ಕಾರ್ಯಕರ್ತರು ಬೃಹತ್ ಪ್ರತಿಭಟನೆ ಮಾಡಿದ್ದರು. ಇನ್ನು ಹಿಂದೂ ಕಾರ್ಯಕರ್ತರ ಬಂಧನಕ್ಕೆ ಬಾಗಲಕೋಟೆ ಪೊಲೀಸರು ಯತ್ನಿಸಿದ್ದು, ಈ ವೇಳೆ ಕಿಲ್ಲಾ ಓಣಿಯ ಮಹಿಳೆಯರು ಹಾಗೂ ಜನರು ಪೊಲೀಸರನ್ನು ಅಡ್ಡಗಟ್ಟಿದ್ದಾರೆ.

ಉದ್ರಿಕ್ತ ಜನರನ್ನ ಸಮಾಧಾನ ಮಾಡಿದ: ಮಾಜಿ ಶಾಸಕ ವೀರಣ್ಣ ಚರಂತಿಮಠ

ಇನ್ನು ಸ್ಥಳಕ್ಕೆ ಬಾಗಲಕೋಟೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಭೇಟಿ ನೀಡಿ ಉದ್ರಿಕ್ತಗೊಂಡ ಜನರನ್ನು ಸಮಾಧಾನಪಡಿಸಿದರು. ಸ್ಥಳಕ್ಕೆ ಎಸ್​ಪಿ ಬರಬೇಕು, ಪೊಲೀಸರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಮಹಿಳೆಯರು ಹಾಗೂ ಹಿಂದೂ ಕಾರ್ಯಕರ್ತರು ಆಗ್ರಹಿಸಿದರು. ಜನರ ಮಧ್ಯೆ ನಿಂತು ಎಸ್​ಪಿ ಸಿದ್ದಾರ್ಥ್ ಗೋಯೆಲ್​ಗೆ ಕರೆ ಮಾಡಿದ ವೀರಣ್ಣ ಚರಂತಿಮಠ, ಎಲ್ಲವೂ ಶಾಂತ ರೀತಿಯಿಂದ ಮುಗಿಯುತ್ತಿದೆ. ನೀವು ಬಂಧಿಸುವ ನೆಪದಲ್ಲಿ ಬಡ ಕಾಯಿಸಬೇಡಿ. ನಾನು ಇವರನ್ನು ಸಂತೈಸುತ್ತೇನೆ, ಸಮಾಧಾನ ಮಾಡುತ್ತೇನೆ. ನಿಮ್ಮ ಪೊಲೀಸರು ಈ ರೀತಿ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಇದನ್ನೂ ಓದಿ: ಶಿವಾಜಿ ಜಯಂತಿ ವೇಳೆ ಕಲ್ಲು ತೂರಾಟ ಪ್ರಕರಣ: ಫೆ. 26 ರಂದು ಬೃಹತ್ ಹೋರಾಟಕ್ಕೆ ಹಿಂದೂ ಸಂಘಟನೆಗಳ ಕರೆ

ಸ್ಥಳದಲ್ಲಿ ಉಪಸ್ಥಿತರಿದ್ದ ಡಿಎಸ್​​ಪಿ ಪ್ರಶಾಂತ ಮುನ್ನೊಳ್ಳಿ ಜೊತೆಗೆ ಮಾತನಾಡಿದ ವೀರಣ್ಣ ಚರಂತಿಮಠ, ಎಲ್ಲವೂ ಶಾಂತವಿದ್ದಾಗ ಪೊಲೀಸರನ್ನು ಏಕೆ ಕಳಿಸಿದರು. ಆ ಹುಡುಗನ ತಂದೆ-ತಾಯಿ ಇದಾರೆ, ಮಹಿಳೆಯರ ಬಟ್ಟೆ ಹರೆದು ಹಾಕಿದ್ದಾರೆ. ನೀವು ಈ ರೀತಿ ಮಾಡುತ್ತಾ ಹೋದರೆ ಉರಿಯುವ ಬೆಂಕಿಗೆ ತುಪ್ಪ ಹಾಕಿದ ಹಾಗೆ ಆಗುತ್ತದೆ. ಇದರಿಂದ ಏನೂ ಶಾಂತ ಆಗುವುದಿಲ್ಲ. ಏನು ಸಾಧನೆ ಮಾಡುವುದಕ್ಕೂ ಆಗುವುದಿಲ್ಲ. ಮೊದಲು ಅವರ ಹುಡುಗನನ್ನು ಅವರ ಮನೆಗೆ ಕಳುಹಿಸಿ. ನಾಳೆ ನಾನು ಎಸ್​​ಪಿ ಆಫೀಸ್​ಗೆ ಹೋಗಿ ಮಾತನಾಡುತ್ತೇನೆ. ಈ ರೀತಿ ಆಗದಂತೆ ನಾವು ನೋಡಿಕೊಳ್ಳುತ್ತೇವೆ. ದಯಮಾಡಿ ತಾವು ಈಗ ತಮ್ಮ ತಮ್ಮ ಮನೆಗಳಿಗೆ ಹೋಗಿ ಎಂದು ಜನರಿಗೆ ವೀರಣ್ಣ ಚರಂತಿಮಠ ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ENG vs NZ: ಗೆಲ್ಲುವ ಪಂದ್ಯ ಕೈಚೆಲ್ಲಿದ ನ್ಯೂಜಿಲೆಂಡ್; ಪಾಕ್ ಸೆಮೀಸ್ ಆಸೆ ಜೀವಂತ

ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ಸೂಪರ್ 8 ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಇಂಗ್ಲೆಂಡ್ ತಂಡ ಅಜೇಯ ತಂಡವಾಗಿ ಸೆಮಿಫೈನಲ್​ಗೆ ಎಂಟ್ರಿಕೊಟ್ಟಿದೆ. ಇತ್ತ 17ನೇ ಓವರ್​ವರೆಗೂ ಪಂದ್ಯದಲ್ಲಿ ಹಿಡಿತ ಸಾಧಿಸಿದ್ದ ನ್ಯೂಜಿಲೆಂಡ್ ಕೊನೆಯ ಮೂರು ಓವರ್​ಗಳಲ್ಲಿ ಹಳಿತಪ್ಪಿದರಿಂದ ಸೋಲಿಗೆ ಕೊರಳೊಡ್ಡಬೇಕಾಯಿತು. ಈ ಪಂದ್ಯದಲ್ಲಿನ ಸೋಲಿನ ಹೊರತಾಗಿಯೂ ನ್ಯೂಜಿಲೆಂಡ್ ತಂಡದ ಸೆಮಿಫೈನಲ್‌ ಕನಸು ಜೀವಂತವಾಗಿದ್ದು, ನಾಳೆ ನಡೆಯಲಿರುವ ಶ್ರೀಲಂಕಾ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಶ್ರೀಲಂಕಾ ಗೆದ್ದರೆ, ನ್ಯೂಜಿಲೆಂಡ್ ಸೆಮಿಫೈನಲ್​ಗೇರಲಿದೆ. ಇತ್ತ ಪಾಕಿಸ್ತಾನ ದೊಡ್ಡ ಗೆಲುವು ದಾಖಲಿಸಿ ನೆಟ್ ರನ್​ರೇಟ್​ನಲ್ಲಿ ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕಿದರೆ, ಅದು ಸೆಮಿಫೈನಲ್​ಗೆ ಅರ್ಹತೆ ಪಡೆಯಲಿದೆ.

Source link