All posts by nagaraj11081993

ವಿಜಯ್ ಪ್ರಮಾಣವಚನ ಸ್ವೀಕರಿಸುವಾಗ ಭಾವುಕರಾದ ತ್ರಿಷಾ ಕೃಷ್ಣನ್ – Kannada News | Thalapathy Vijay CM: Trisha Krishnan’s Emotional Presence at Oath Ceremony Goes Viral

ತಮಿಳುನಾಡಿನಲ್ಲಿ ಪ್ರಮುಖ ರಾಜಕೀಯ ಬದಲಾವಣೆ ಆಗಿದೆ. ನಟ ವಿಜಯ್ ದಳಪತಿ ನೇರವಾಗಿ ರಾಜಕೀಯ ಪ್ರವೇಶಿಸಿದರು ಮತ್ತು ಅವರ ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಭರ್ಜರಿ ಗೆಲುವು ಸಾಧಿಸಿತು. ದಳಪತಿ ವಿಜಯ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ದೇಶದ ಕಣ್ಣುಗಳು ಈ ಪ್ರಮಾಣ ವಚನ ಸಮಾರಂಭದ ಮೇಲೆ ಇದ್ದವು. ವೇದಿಕೆ ಮೇಲೆ ವಿಜಯ್ ಪ್ರಮಾಣ ವಚನ ಸ್ವೀಕರಿಸುವಾಗ ತ್ರಿಷಾ ಭಾವುಕರಾದರು.

ವಿಜಯ್ ದಳಪತಿ ಅವರ ಗೆಳತಿ ಎಂದು ಹೇಳಲಾಗುವ ತ್ರಿಶಾ ಕೃಷ್ಣನ್ ಪ್ರಮಾಣವಚನ ಸಮಾರಂಭದಲ್ಲಿ ಹಾಜರಿದ್ದರು. ವಿಜಯ್ ಮತ್ತು ಅವರ ಪತ್ನಿಯ ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಹೀಗಾಗಿ, ಅವರ ಪತ್ನಿ ಮತ್ತು ಮಕ್ಕಳು ಪ್ರಮಾಣವಚನ ಸಮಾರಂಭಕ್ಕೆ ಬಂದಿರಲಿಲ್ಲ. ಆದರೆ, ಅವರ ವೃತ್ತಿ ಜೀವನದಲ್ಲಿ ಪ್ರತಿ ಹಂತದಲ್ಲೂ ಜೊತೆ ಇದ್ದ ತ್ರಿಶಾ ಕೃಷ್ಣನ್ ಉಪಸ್ಥಿತರಿದ್ದರು. ಈಗ, ಪ್ರಮಾಣವಚನ ಸಮಾರಂಭದ ವೇಳೆ ಅವರು ನಡೆದುಕೊಂಡ ರೀತಿ ಚರ್ಚೆಗೆ ಬಂದಿದೆ.

ದಶಕಗಳ ಕಾಲ ಬೆಳ್ಳಿತೆರೆಯ ಮೇಲೆ ವಿಜಯ್ ಅವರೊಂದಿಗೆ ಯಶಸ್ವಿ ಜೋಡಿಯಾಗಿ ತ್ರಿಷಾ ಗುರುತಿಸಿಕೊಂಡಿದ್ದಾರೆ. ತಮ್ಮ ಆಪ್ತ ಸ್ನೇಹಿತ ಮತ್ತು ಸಹೋದ್ಯೋಗಿ ರಾಜ್ಯದ ಅತ್ಯುನ್ನತ ಸ್ಥಾನಕ್ಕೇರುತ್ತಿರುವುದನ್ನು ಕಂಡು ಅವರ ಕಣ್ಣಾಲಿಗಳು ತೇವವಾಗಿದ್ದವು. ವಿಜಯ್ ಅವರು ಪ್ರಮಾಣವಚನ ಮುಗಿಸಿ ಜನರತ್ತ ಕೈಬೀಸಿದಾಗ, ತ್ರಿಷಾ ಅವರು ಎದ್ದು ನಿಂತು ಚಪ್ಪಾಳೆ ತಟ್ಟುತ್ತಾ ತಮ್ಮ ಸಂತಸ ಮತ್ತು ಹೆಮ್ಮೆಯನ್ನು ವ್ಯಕ್ತಪಡಿಸಿದರು. ಅವರು ಮಾತನಾಡುವಾಗ ತ್ರಿಷಾ ಭಾವುಕರಾಗಿದ್ದರು.

ಇದನ್ನೂ ಓದಿ: ವಿಜಯ್ ಪ್ರಮಾಣವಚನವನ್ನು ನೋಡಿ ‘ಬಾಹುಬಲಿ’ ದೃಶ್ಯ ನೆನೆದ ಫ್ಯಾನ್ಸ್

ಈ ಕ್ಷಣವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದು, ವೃತ್ತಿಪರ ಸಂಬಂಧವನ್ನೂ ಮೀರಿ ಒಬ್ಬ ಸ್ನೇಹಿತನ ಯಶಸ್ಸಿಗೆ ಮಿಡಿಯುವ ಅವರ ಮನಸ್ಸನ್ನು ಅಭಿಮಾನಿಗಳು ಶ್ಲಾಘಿಸಿದ್ದಾರೆ. ಪದಗ್ರಹಣದ ಗಂಭೀರತೆಯ ನಡುವೆ, ಈ ಮಾನವೀಯ ಭಾವನೆಯು ಸಮಾರಂಭದ ಒಂದು ವಿಶೇಷ ಆಕರ್ಷಣೆಯಾಗಿ ಉಳಿಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಈ ಗೆಲುವಿಗೆ ನಾವು ಅರ್ಹರಲ್ಲ: ರಜತ್ ಪಾಟಿದಾರ್ ಅಚ್ಚರಿಯ ಹೇಳಿಕೆ! – Kannada News | Rajat patidar post match interview after RCB vs MI Match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 54ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೋಚಕ ಜಯ ಸಾಧಿಸಿದೆ. ರಾಯ್​ಪುರ್​ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 167 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ ತಂಡವು 20ನೇ ಓವರ್​ನ ಕೊನೆಯ ಎಸೆತದಲ್ಲಿ 2 ರನ್​ ಬಾರಿಸಿ 2 ವಿಕೆಟ್​ಗಳ ರೋಚಕ ಗೆಲುವು ದಾಖಲಿಸಿತು.

ಈ ಗೆಲುವಿನ ಬಳಿಕ ಮಾತನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್, ಈ ಗೆಲುವಿಗೆ ನಾವು ಅರ್ಹರಲ್ಲ ಎಂದೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಆರ್​ಸಿಬಿ ನಾಯಕ, “ಇವತ್ತಿನ ಪಂದ್ಯ ಬಹಳ ರೋಚಕವಾಗಿತ್ತು. ತಂಡದ ಪರವಾಗಿ ಅದ್ಭುತವಾಗಿ ಆಡಿದ ಕೃಣಾಲ್ ಪಾಂಡ್ಯ ಅವರೇ ನಿಜವಾದ ಮ್ಯಾನ್ ಆಫ್ ದಿ ಮ್ಯಾಚ್. ತಂಡದ ಪ್ಲ್ಯಾನ್ ಪ್ರಕಾರ ಅವರಿಗೆ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ನೀಡಲಾಗಿತ್ತು. ಆ ಜವಾಬ್ದಾರಿಯನ್ನು ಅವರು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ಎಂದು ” ಎಂದು ರಜತ್ ಪಾಟಿದಾರ್ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುನ್ನ ಭೂವನೇಶ್ವರ್ ಕುಮಾರ್ ಅದ್ಭುತ ಬೌಲಿಂಗ್ ಮಾಡಿದ್ದರು. ಈ ಬಗ್ಗೆ ಮಾತನಾಡಿದ ರಜತ್,  “ಭುವಿ ಅವರ ಬೌಲಿಂಗ್ ನಿಯಂತ್ರಣ ನಂಬಲಸಾಧ್ಯ. ಪಿಚ್ ಎರಡು ರೀತಿಯಲ್ಲಿ ವರ್ತಿಸುತ್ತಿದ್ದರೂ ಅವರು ಚೆಂಡನ್ನು ಬಳಸಿದ ರೀತಿ ಅದ್ಭುತವಾಗಿತ್ತು. ಇಂತಹ ಪಿಚ್‌ನಲ್ಲಿ ಅವರನ್ನು ಎದುರಿಸುವುದು ಯಾವುದೇ ಬ್ಯಾಟರ್‌ಗೆ ಕಷ್ಟದ ಕೆಲಸ,” ಎಂದು ಮೆಚ್ಚುಗೆ ಸೂಚಿಸಿದರು.

 ಗೆಲುವಿಗೆ ನಾವು ಅರ್ಹವಲ್ಲ!

ಇನ್ನು ಈ ಪಂದ್ಯ ಗೆದ್ದರೂ ಸಹ ರಜತ್ ಪಾಟಿದಾರ್ ತಮ್ಮ ಬ್ಯಾಟರ್‌ಗಳ ಮೇಲೆ ತೀವ್ರ ಅಸಮಾಧಾನ ಹೊರಹಾಕಿದರು. “ಬೌಲರ್‌ಗಳು ಎದುರಾಳಿಗಳನ್ನು 166 ರನ್‌ಗಳಿಗೆ ಕಟ್ಟಿಹಾಕುವ ಮೂಲಕ ಅದ್ಭುತ ಕೆಲಸ ಮಾಡಿದ್ದರು. ನಮ್ಮಲ್ಲಿರುವಂತಹ ಪ್ರತಿಭಾವಂತ ಬ್ಯಾಟಿಂಗ್ ಪಡೆಯು ಈ ಮೊತ್ತವನ್ನು ಸುಲಭವಾಗಿ ಬೆನ್ನಟ್ಟಬೇಕಿತ್ತು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾವು ಗೆದ್ದಿರಬಹುದು. ಆದರೆ ಆಡಿದ ರೀತಿಗೆ ನಾವು ಈ ಗೆಲುವಿಗೆ ಅರ್ಹರಲ್ಲ. ಪರಿಸ್ಥಿತಿ ಯಾವುದೇ ಇರಲಿ, ಇಂತಹ ಮೊತ್ತವನ್ನು ನಾವು ಸುಲಭವಾಗಿ ಚೇಸ್ ಮಾಡಬೇಕಿತ್ತು,” ಎಂದರು.

ಇದನ್ನೂ ಓದಿ: RCB ಗೆಲುವಿನ ಬೆನ್ನಲ್ಲೇ ಐಪಿಎಲ್​​ನಿಂದ 2 ತಂಡಗಳು ಔಟ್!

ಅಂದರೆ ಅದ್ಭುತ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದರೂ ಸುಲಭ ಗುರಿಯನ್ನು ಕೊನೆಯ ಎಸೆತದಲ್ಲಿ ಚೇಸ್ ಮಾಡಿ ಗೆದ್ದಿರುವುದು ನಮ್ಮ ಬ್ಯಾಟಿಂಗ್ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಹೀಗಾಗಿ ಈ ಪಂದ್ಯವನ್ನು ನಾವು ಗೆದ್ದರೂ, ನಾವು ಆಡಿದ ರೀತಿಗೆ ಈ ಗೆಲುವಿಗೆ ನಾವು ಅರ್ಹರಲ್ಲ ಎಂಬುದನ್ನು ರಜತ್ ಪಾಟಿದಾರ್ ಎಂದು ರಜತ್ ಪಾಟಿದಾರ್ ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಾರೆಯಾಗಿ, ರಜತ್ ಪಾಟಿದಾರ್ ಅವರ ಈ ನೇರ ನುಡಿಗಳು ತಂಡದಲ್ಲಿನ ಆತ್ಮಾವಲೋಕನದ ಅಗತ್ಯತೆಯನ್ನು ಎತ್ತಿ ತೋರಿಸಿವೆ. ಗೆಲುವಿನ ಸಂಭ್ರಮದ ನಡುವೆಯೂ ತಪ್ಪುಗಳನ್ನು ತಿದ್ದಿಕೊಳ್ಳುವ ಅವರ ಈ ನಡೆ ಮುಂಬರುವ ಪಂದ್ಯಗಳಲ್ಲಿ ತಂಡಕ್ಕೆ ಹೇಗೆ ಸಹಕಾರಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Published On – 7:55 am, Mon, 11 May 26

Source link

ವಿಜಯ್ ಪ್ರಮಾಣವಚನವನ್ನು ನೋಡಿ ‘ಬಾಹುಬಲಿ’ ದೃಶ್ಯ ನೆನೆದ ಫ್ಯಾನ್ಸ್ – Kannada News | Thalapathy Vijay’s CM Oath: A Bahubali Moment for Tamil Nadu Politics

ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಕೆಲವು ದೃಶ್ಯಗಳು ಕೇವಲ ಸಿನಿಮಾ ಆಗಿ ಉಳಿಯದೆ, ಜನರ ಭಾವನೆಯಾಗಿ ಬದಲಾಗುತ್ತವೆ. ಅಂತಹ ಒಂದು ದೃಶ್ಯ ‘ಬಾಹುಬಲಿ’ ಚಿತ್ರದಲ್ಲಿ ಮಹೇಂದ್ರ ಬಾಹುಬಲಿ ಪಟ್ಟಾಭಿಷೇಕ ಮಾಡಿಕೊಳ್ಳುವ ಕ್ಷಣ. ಇಂದು ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ ಅವರು ‘ತಮಿಳಗ ವೆಟ್ರಿ ಕಳಗಂ’ (TVK) ಮೂಲಕ ರಾಜಕೀಯಕ್ಕೆ ಅಡಿಯಿಟ್ಟು ಸಿಎಂ ಆಗಿದ್ದಾರೆ. ಅವರು ಪ್ರಮಾಣ ವಚನ ದೃಶ್ಯವನ್ನು ಅನೇಕರು ಬಾಹುಬಲಿ ದೃಶ್ಯಕ್ಕೆ ಹೋಲಿಕೆ ಮಾಡಿದ್ದಾರೆ.

ಮೇ 10ರಂದು ನಡೆದ ಸಮಾರಂಭದಲ್ಲಿ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅತ್ಯಂತ ಗಂಭೀರ ಹಾಗೂ ಔಪಚಾರಿಕವಾಗಿ ನಡೆದ ಈ ಕಾರ್ಯಕ್ರಮದಲ್ಲಿ, ಅವರು ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಮಾಡಿದರು. ನೆರೆದಿದ್ದ ಅಪಾರ ಜನಸ್ತೋಮವು ಈ ಘಟನೆಗೆ ಸಾಕ್ಷಿಯಾಯಿತು. ವಿಜಯ್ ಅವರು ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಅಲ್ಲಿ ನೆರೆದಿದ್ದ ಲಕ್ಷಾಂತರ ಬೆಂಬಲಿಗರು ಹರ್ಷೋದ್ಗಾರ ವ್ಯಕ್ತಪಡಿಸಿದರು.

ಬಾಹುಬಲಿ ಚಿತ್ರದಲ್ಲಿ ರಾಜಮೌಳಿಯವರು ತೋರಿಸಿದಂತೆ, ಮಹೇಂದ್ರ ಬಾಹುಬಲಿ ಪ್ರಮಾಣವಚನ ಸ್ವೀಕರಿಸುವಾಗ ಇಡೀ ಸಾಮ್ರಾಜ್ಯದ ಜನತೆ “ಬಾಹುಬಲಿ… ಬಾಹುಬಲಿ…” ಎಂದು ಕೂಗುವ ಘೋಷಣೆ ಭೂಮಿಯನ್ನು ನಡುಗಿಸುತ್ತದೆ. ಅದೇ ರೀತಿ, ವಿಜಯ್ ಅವರು ‘ನಾನು ಸಿ ವಿಜಯ್ ಜೋಸೆಫ್’ ಎಂದು ಹೇಳುವಾಗ ಅಭಿಮಾನಿ ಸಾಗರ ಜೋರಾಗಿ ಕೂಗಿದೆ. ಎರಡನ್ನೂ ಈಗ ಹೋಲಿಕೆ ಮಾಡುತ್ತಿದ್ದಾರೆ. ಸಿನಿಮಾ ತೆರೆಯ ಮೇಲೆ ಜನನಾಯಕನಾಗಿ ಮೆರೆದ ವಿಜಯ್, ಈಗ ನಿಜ ಜೀವನದಲ್ಲಿ ಜನರ ಧ್ವನಿಯಾಗಲು ಹೊರಟಿರುವುದು ಈ ಹೋಲಿಕೆಗೆ ಮುಖ್ಯ ಕಾರಣ.

ಇದನ್ನೂ ಓದಿ: ಕಪ್ಪು ಕೋಟು ಧರಿಸಿ ಪ್ರಮಾಣ ವಚನ ಸ್ವೀಕರಿಸಿದ್ದೇಕೆ ದಳಪತಿ ವಿಜಯ್

ಬಾಹುಬಲಿಗೆ ಜನರ ಮೇಲಿದ್ದ ಪ್ರೀತಿ ಮತ್ತು ವಿಜಯ್ ಅವರಿಗೆ ತಮ್ಮ ಅಭಿಮಾನಿಗಳ (ತಮಿಳು ಜನತೆ) ಮೇಲಿರುವ ಕಳಕಳಿ ಒಂದೇ ತೆರನಾದ ಭಾವನೆಯನ್ನು ಮೂಡಿಸುತ್ತದೆ ಎಂದು ಅನೇಕರು ಹೇಳಿದ್ದಾರೆ. ವಿಜಯ್ ಅವರ ರಾಜಕೀಯ ಜರ್ನಿಯನ್ನು ಅನೇಕರು ಯಾವ ಚಿತ್ರಕ್ಕೂ ಕಡಿಮೆ ಇಲ್ಲ ಎಂದಿದ್ದಾರೆ. ‘ಮಹೇಂದ್ರ ಬಾಹುಬಲಿಯ ಆಗಮನ ಹೇಗೆ ಮಾಹಿಷ್ಮತಿ ಸಾಮ್ರಾಜ್ಯಕ್ಕೆ ಹೊಸ ಭರವಸೆ ನೀಡಿತೋ, ಅದೇ ರೀತಿ ವಿಜಯ್ ಅವರ ರಾಜಕೀಯ ಪ್ರವೇಶ ತಮಿಳುನಾಡಿನ ರಾಜಕಾರಣದಲ್ಲಿ ಹೊಸ ಬದಲಾವಣೆಯ ಗಾಳಿ ಬೀಸಲಿದೆ’ ಎಂದು ಅಭಿಮಾನಿಗಳು ವಿಡಿಯೋಗೆ ಕಮೆಂಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತಮ್ಮನ ಪ್ರೀತಿಗೆ ಅಣ್ಣನಿಗೆ ಶಿಕ್ಷೆ! ಪ್ರಿಯಕರನ ಅಣ್ಣನನ್ನೇ ಕಿಡ್ನಾಪ್ ಮಾಡಿ ಕೈಕಾಲು ಕಟ್ಟಿ ಥಳಿಸಿದ ಹುಡುಗಿಯ ಕಡೆಯವರು – Kannada News | Byadarahalli Abduction: Priest Brutally Beaten Over Brother’s Elopement

ಬೆಂಗಳೂರು, ಮೇ.11: ತಮ್ಮ ಮಾಡಿದ ತಪ್ಪಿಗೆ ಅಣ್ಣ ಶಿಕ್ಷೆ ಅನುಭವಿಸಿರುವ ಅವಮಾನಿಯ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಪ್ರೀತಿ ಮಾಡಿದ ತಮ್ಮನ ತಪ್ಪಿಗೆ ಅಣ್ಣನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಿಯಕರನ ಅಣ್ಣನನ್ನೇ ಕಿಡ್ನಾಪ್ ಮಾಡಿ, ಕೈಕಾಲು ಕಟ್ಟಿ ಹಾಕಿ ದೌರ್ಜನ್ಯ ನಡೆಸಿರುವ ವೀಡಿಯೋ ಈಗ ಆತಂಕ ಸೃಷ್ಟಿಸಿದೆ.

ಬ್ಯಾಡರಹಳ್ಳಿಯ ಶಿವಕುಮಾರ್ ಎಂಬಾತ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಆದರೆ ಇವರ ಪ್ರೀತಿಗೆ ಯುವತಿಯ ಮನೆಯವರಿಂದ ತೀವ್ರ ವಿರೋಧವಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರೂ ಇತ್ತೀಚೆಗೆ ಮನೆ ಬಿಟ್ಟು ಓಡಿ ಹೋಗಿದ್ದರು. ಇದರಿಂದ ಕೆರಳಿದ ಯುವತಿಯ ತಂದೆ ಬಸವರಾಜ್ ಮತ್ತು ಅವರ ಸಂಬಂಧಿಕರು, ಶಿವಕುಮಾರ್ ಸಿಗದಿದ್ದಕ್ಕೆ ಆತನ ಅಣ್ಣ ಕೊಟ್ರೇಶ್ ಎಂಬಾತನ ಮೇಲೆ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿದ್ದರು.

ಕೊಟ್ರೇಶ್ ಬ್ಯಾಡರಹಳ್ಳಿಯ ದೇವಸ್ಥಾನವೊಂದರಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದರು. “ಪೊಲೀಸ್ ಸ್ಟೇಷನ್‌ಗೆ ಹೋಗೋಣ ಬಾ” ಎಂದು ನಂಬಿಸಿ ಆರೋಪಿಗಳು ಕೊಟ್ರೇಶ್‌ನನ್ನು ಕಾರಿನಲ್ಲಿ ಅಪಹರಿಸಿದ್ದಾರೆ. ಅಜ್ಞಾತ ಸ್ಥಳಕ್ಕೆ ಕರೆದೊಯ್ದು, ಕೊಟ್ರೇಶ್‌ನ ಕೈಕಾಲುಗಳನ್ನು ಕಟ್ಟಿ ಹಾಕಿ ಮನಬಂದಂತೆ ಥಳಿಸಿದ್ದಾರೆ.

ಇದನ್ನೂ ಓದಿ: ಉದ್ಯೋಗಿಗಳೋ ಅಥವಾ ರೋಬೋಟ್‌ಗಳೋ?: ಕಂಪನಿಯ ವಿಚಿತ್ರ ನಿಯಮಕ್ಕೆ ‘ನೋ’ ಎಂದ ಯುವತಿ

ಹಲ್ಲೆ ನಡೆಸುವಾಗ ಆರೋಪಿಗಳು ವೀಡಿಯೋ ರೆಕಾರ್ಡ್ ಮಾಡಿದ್ದಾರೆ. “ಶಿವು ಎಲ್ಲೇ ಇದ್ದರೂ ಹುಡುಗಿಯನ್ನು ತಂದು ಒಪ್ಪಿಸು” ಎಂದು ಕೊಟ್ರೇಶ್ ಕೈಯಲ್ಲಿ ಹೇಳಿಸಿ, ಆ ವೀಡಿಯೋವನ್ನು ಅವರ ಸಂಬಂಧಿಕರಿಗೆ ಕಳುಹಿಸಿ ಬೆದರಿಕೆ ಹಾಕಿದ್ದಾರೆ. ವೀಡಿಯೋದಲ್ಲಿ ಕೊಟ್ರೇಶ್ ಜೀವಕ್ಕಾಗಿ ಅಂಗಲಾಚುತ್ತಿರುವುದು ಕಂಡುಬಂದಿದೆ. ವೀಡಿಯೋ ಬೆನ್ನಲ್ಲೇ ಕೊಟ್ರೇಶ್ ಸಂಬಂಧಿಕರು ಬ್ಯಾಡರಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಯಾವಗಾ ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ಮಾಡಲು ಶುರು ಮಾಡಿದದ್ದಾರೆ ಎಂದು ಆರೋಪಿಗಳಿಗೆ ಗೊತ್ತಾಯಿತಿ ತಕ್ಷಣ ಕೊಟ್ರೇಶ್‌ನನ್ನು ಬಿಟ್ಟು ಪರಾರಿಯಾಗಿದ್ದಾರೆ. ಇದೀಗ ಬ್ಯಾಡರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bengaluru Air Quality: ಬೆಂಗಳೂರಿನ ಜೊತೆ ಬೆಳಗಾವಿಯ ವಾಯುಗುಣಮಟ್ಟದಲ್ಲೂ ಭಾರೀ ಸುಧಾರಣೆ – Kannada News | Bangalore Air Pollution Crisis: Bengaluru and Belagavi Air Quality gets better

ಬೆಂಗಳೂರಿನ ಜೊತೆ ಬೆಳಗಾವಿಯ ವಾಯುಗುಣಮಟ್ಟದಲ್ಲೂ ಭಾರೀ ಸುಧಾರಣೆ

ಬೆಂಗಳೂರು, ಮೇ 11: ರಾಜ್ಯದಲ್ಲಿ ಬೆಂಗಳೂರು, ಬೆಳಗಾವಿಯ ಏರ್ ಕ್ವಾಲಿಟಿ (Bengaluru Air Quality) ಭಾರಿ ಸುಧಾರಣೆ ಕಂಡಿದೆ. ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅಪಾಯಕಾರಿ ಮಟ್ಟದಲ್ಲಿಯೇ ಇದೆ ಎಂದು ತಜ್ಞರು ಹೇಳುತ್ತಾರೆ. ಬೆಳಗಾವಿಯ ವಾಯು ಗುಣಮಟ್ಟ ಇಂದು ಭಾರೀ ಸುಧಾರಣೆ ಕಂಡಿದ್ದು, ಉಳಿದೆಡೆಗಿಂತ ಎಷ್ಟೋ ಉತ್ತಮವಾಗಿದೆ ಎನ್ನಲಾಗಿದೆ. ಬೆಂಗಳೂರಿನ AQI ಸಧ್ಯಕ್ಕೆ ಒಳ್ಳೆಯ ಮಟ್ಟದಲ್ಲಿದ್ದು, ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಬೆಂಗಳೂರಿನ ಏರ್ ಕ್ವಾಲಿಟಿ ಇಂದು ಕೇವಲ 114ರಷ್ಟಿದ್ದು, ಅತ್ಯಂತ ಒಳ್ಳೆಯ ಗುಣಮಟ್ಟದಲ್ಲಿದೆ. ಮಂಗಳೂರಿನಲ್ಲಿ ಕೆಲ ತಿಂಗಳ ಹಿಂದೆ ವಾಯು ಗುಣಮಟ್ಟ ಅಪಾಯಕಾರಿ ಮಟ್ಟಕ್ಕೆ ಇಳಿದಿತ್ತು. ಹಲವು ಬಾರಿ 200ರ ಗಡಿ ತಲುಪಿತ್ತು. ಆದರೆ ಇತ್ತೀಚೆಗೆ AQI ಸುಧಾರಣೆ ಕಂಡುಬಂದಿತ್ತು. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಳಗಾವಿಯ ಏರ್ ಕ್ವಾಲಿಟಿ ಇಂದು 62ಕ್ಕೆ ತಲುಪಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು – 114
  • ಮಂಗಳೂರು-138
  • ಮೈಸೂರು – 101
  • ಬೆಳಗಾವಿ – 62
  • ಕಲಬುರ್ಗಿ-82
  • ಶಿವಮೊಗ್ಗ –88
  • ಬಳ್ಳಾರಿ – 82
  • ಹುಬ್ಬಳ್ಳಿ- 62
  • ಉಡುಪಿ –118
  • ವಿಜಯಪುರ – 67

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಾನ್ವಿ ಸುದೀಪ್ ಬೆನ್ನಿನ ಮೇಲೆ ಮೂಡಿತು ಗಣೇಶನ ಟ್ಯಾಟೂ; ಎಷ್ಟು ಅದ್ಭುತವಾಗಿದೆ ನೋಡಿ – Kannada News | Shanvi Sudeep’s Stunning Ganesh Back Tattoo: Art, Music and Her Journey

ಸುದೀಪ್ ಮಗಳು ಶಾನ್ವಿ ಸುದೀಪ್ (Shanvi Sudeep) ಯಾವಾಗಲೂ ತಮ್ಮ ಸರಳತೆಯಿಂದ ಗುರುತಿಸಿಕೊಂಡವರು. ಅವರು ಹೆಚ್ಚು ಹೈಲೈಟ್ ಆಗೋಕೆ ಇಷ್ಟಪಡಲ್ಲ. ಇತ್ತೀಚೆಗೆ ಶಾನ್ವಿ ಅವರು ತಮ್ಮ ಬೆನ್ನಿನ ಮೇಲೆ ಹಾಕಿಸಿಕೊಂಡಿರುವ ಭವ್ಯವಾದ ಗಣೇಶನ ಟ್ಯಾಟೂ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಹೈದರಾಬಾದ್‌ನ ಜನಪ್ರಿಯ ಟ್ಯಾಟೂ ಸ್ಟುಡಿಯೋದಲ್ಲಿ ಸುಮಾರು 8 ಗಂಟೆಗಳ ಕಾಲ ತಾಳ್ಮೆಯಿಂದ ಕುಳಿತು ಈ ಕಲಾಕೃತಿಯನ್ನು ರಚಿಸಿಕೊಂಡಿದ್ದಾರೆ. ಕೆಂಪು ಮತ್ತು ಕಪ್ಪು ಬಣ್ಣದ ಮಿಶ್ರಣವಿರುವ ಈ ಟ್ಯಾಟೂ ಭವ್ಯವಾಗಿ ಮೂಡಿ ಬಂದಿದೆ.

ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಟ್ಯಾಟೂ ಕ್ರೇಜ್ ಇದ್ದೇ ಇದೆ. ಇದಕ್ಕೆ ಶಾನ್ವಿ ಕೂಡ ಹೊರತಾಗಿಲ್ಲ. ‘ನಾನು ಟ್ಯಾಟೂ ಹಾಕಿಸಿಕೊಳ್ಳೋಕೆ ಹೋಗ್ತಾ ಇದೀನಿ’ ಎಂದು ಶಾನ್ವಿ ವಿಡಿಯೋ ಹಂಚಿಕೊಂಡಿದ್ದಾರೆ. ನಂತರ ಟ್ಯಾಟೂ ಹಾಕಿಸಿಕೊಂಡ ಜರ್ನಿ ವಿವರಿಸಿದ್ದಾರೆ. ಅವರು ಹೈದರಾಬಾದ್​​ಗೆ ತೆರಳಿ ಟ್ಯಾಟೂ ಹಾಕಿಸಿಕೊಂಡರು. 8 ಗಂಟೆ ಇದಕ್ಕೆ ಬೇಕಾದರೂ ಮಧ್ಯದಲ್ಲಿ ಬ್ರೇಕ್​​ಗಳನ್ನು ಅವರು ಪಡೆದಿದ್ದರು. ಟ್ಯಾಟೂ ಮೂಡಿಬಂದ ರೀತಿ ನೋಡಿ ಅವರೇ ಬೆರಗಾದರು. ಅಭಿಮಾನಿಗಳು ಅವರ ಟ್ಯಾಟೂ ನೋಡಿ ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ: ಗೆಳತಿಯರೊಟ್ಟಿಗೆ ವಿದೇಶಿ ಪ್ರವಾಸದಲ್ಲಿ ನಟಿ ಶಾನ್ವಿ ಶ್ರೀವಾಸ್ತವ್

ಶಾನ್ವಿ ಕೇವಲ ಟ್ಯಾಟೂ ಪ್ರೇಮಿಯಲ್ಲ, ಅವರು ಪ್ರತಿಭಾವಂತ ಗಾಯಕಿ ಕೂಡ ಹೌದು. ಬಾಲ್ಯದಿಂದಲೇ ಸಂಗೀತದ ಕಡೆಗೆ ಹೆಚ್ಚಿನ ಒಲವು ಹೊಂದಿರುವ ಇವರು, ಸುದೀಪ್ ನಟನೆಯ ಸಿನಿಮಾಗಳಲ್ಲಿ ಈಗಾಗಲೇ ಹಾಡುವ ಮೂಲಕ ತಮ್ಮ ಕಂಠಸಿರಿಯನ್ನು ಪ್ರದರ್ಶಿಸಿದ್ದಾರೆ. ಪಾಶ್ಚಾತ್ಯ ಸಂಗೀತವಿರಲಿ ಅಥವಾ ದೇಶೀಯ ರಾಗವಿರಲಿ, ಶಾನ್ವಿ ಅದ್ಭುತವಾಗಿ ಹಾಡುತ್ತಾರೆ. ‘ಮಸ್ತ್ ಮಲೈಕಾ..’ ಹಾಡು ಅವರ ಕಂಠದಲ್ಲೇ ಮೂಡಿ ಬಂದಿತ್ತು. ಈ ಹಾಡು ಗಮನ ಸೆಳೆದಿತ್ತು.

ಒಬ್ಬ ಸ್ಟಾರ್ ನಟನ ಮಗಳಾಗಿದ್ದರೂ, ಶಾನ್ವಿ ಅವರು ಎಂದೂ ಕೂಡ ಹಮ್ಮು-ಬಿಮ್ಮು ತೋರಿಸಿದವರಲ್ಲ. ತಮ್ಮದೇ ಆದ ಸ್ವತಂತ್ರ ಹಾದಿಯನ್ನು ರೂಪಿಸಿಕೊಳ್ಳುತ್ತಿರುವ ಅವರು, ಕಲೆ ಮತ್ತು ಸಂಗೀತದ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:38 am, Mon, 11 May 26

Source link

RCB ಗೆಲುವಿನ ಬೆನ್ನಲ್ಲೇ ಐಪಿಎಲ್​​ನಿಂದ 2 ತಂಡಗಳು ಔಟ್! – Kannada News | RCB’s win has eliminated MI and LSG from the playoff race

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​​ನ 54ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ರೋಚಕ ಜಯ ಸಾಧಿಸಿದೆ. ರಾಯ್​ಪುರ್​ನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಬೌಲಿಂಗ್ ಆಯ್ದುಕೊಂಡಿದ್ದರು. (PC: IPL)

ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 167 ರನ್ ಕಲೆಹಾಕಿದ್ದರು. ಈ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20ನೇ ಓವರ್​ನ ಕೊನೆಯ ಎಸೆತದಲ್ಲಿ ಬೆನ್ನತ್ತಿ 2 ವಿಕೆಟ್​​ಗಳ ರೋಚಕ ಜಯ ಸಾಧಿಸಿದೆ. (PC: IPL)

ಈ ಗೆಲುವಿನೊಂದಿಗೆ ಆರ್​ಸಿಬಿ ತಂಡವು ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಾಯಿಂಟ್ಸಸ್​ ಟೇಬಲ್​ನಲ್ಲಿ ಅಗ್ರಸ್ಥಾನಕ್ಕೇರುತ್ತಿದ್ದಂತೆ ಐಪಿಎಲ್ ಪ್ಲೇಆಫ್​ ರೇಸ್​​ನಿಂದ ಎರಡು ತಂಡಗಳು ಹೊರಬಿದ್ದಿವೆ. ಆ ತಂಡಗಳೆಂದರೆ… (PC: IPL)

ಲಕ್ನೋ ಸೂಪರ್ ಜೈಂಟ್ಸ್​: ಈ ಬಾರಿ ಐಪಿಎಲ್​ನಲ್ಲಿ ಈವರೆಗೆ 11 ಪಂದ್ಯಗಳನ್ನಾಡಿರುವ ಲಕ್ನೋ ಸೂಪರ್ ಜೈಂಟ್ಸ್​ ತಂಡವು ಕೇವಲ 3 ಮ್ಯಾಚ್​ಗಳಲ್ಲಿ ಜಯ ಸಾಧಿಸಿದೆ. ಇನ್ನುಳಿದ ಮೂರು ಪಂದ್ಯಗಳಲ್ಲಿ ಎಲ್​ಎಸ್​​ಜಿ ಗೆದ್ದರೂ 12 ಅಂಕಗಳನ್ನು ಮಾತ್ರ ಪಡೆಯಲಿದೆ. ಇತ್ತ ಟಾಪ್-4 ನಲ್ಲಿರುವ ತಂಡಗಳು 13 ಕ್ಕಿಂತ ಹೆಚ್ಚಿನ ಅಂಕಗಳನ್ನು ಹೊಂದಿದ್ದು, ಹೀಗಾಗಿ ಎಲ್​ಎಸ್​ಜಿಗೆ ಪ್ಲೇಆಫ್​ಗೇರಲು ಅವಕಾಶ ಇರುವುದಿಲ್ಲ. (PC: IPL)

ಮುಂಬೈ ಇಂಡಿಯನ್ಸ್​: ಮುಂಬೈ ಪಡೆಯು ಈವರೆಗೆ 11 ಪಂದ್ಯಗಳನ್ನಾಡಿದ್ದು, ಈ ವೇಳೆ ಕೇವಲ 3 ಮ್ಯಾಚ್​ಗಳಲ್ಲಿ ಮಾತ್ರ ಗೆಲುವು ದಾಖಲಿಸಿದೆ. ಇನ್ನುಳಿದ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದರೂ 12 ಅಂಕಗಳನ್ನು ಮಾತ್ರ ಪಡೆಯಬಹುದು. ಇತ್ತ ಅಂಕ ಪಟ್ಟಿಯಲ್ಲಿ ಟಾಪ್-4 ನಲ್ಲಿರುವ ತಂಡಗಳು 13 ಕ್ಕಿಂತ ಹೆಚ್ಚಿನ ಅಂಕಗಳನ್ನು ಹೊಂದಿರುವ ಕಾರಣ ಮುಂಬೈ ಇಂಡಿಯನ್ಸ್​​ಗೆ ಪ್ಲೇಆಫ್​ಗೇರಲು ಸಾಧ್ಯವಾಗುವುದಿಲ್ಲ. (PC: IPL)

ಅದರಂತೆ 12 ಅಂಕಗಳನ್ನು ಹೊಂದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲುವುದರೊಂದಿಗೆ ಒಟ್ಟು 14 ಅಂಕಗಳನ್ನು ಪಡೆದುಕೊಂಡಿದೆ. ಇತ್ತ ಆರ್​ಸಿಬಿ 14 ಅಂಕಗಳನ್ನು ಪಡೆಯುತ್ತಿದ್ದಂತೆ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಅಧಿಕೃತವಾಗಿ ಪ್ಲೇಆಫ್​ ರೇಸ್​ನಿಂದ ಹೊರಬಿದ್ದಿದೆ. (PC: IPL)

Published On – 7:25 am, Mon, 11 May 26

Source link

ಉದ್ಯೋಗಿಗಳೋ ಅಥವಾ ರೋಬೋಟ್‌ಗಳೋ?: ಕಂಪನಿಯ ವಿಚಿತ್ರ ನಿಯಮಕ್ಕೆ ‘ನೋ’ ಎಂದ ಯುವತಿ – Kannada News | Employee or Robot? WFH Job Offer Rejected Due to Strict Surveillance Policy

ಕಂಪನಿಯ ನಿಯಮದ ಬಗ್ಗೆ ಅಕ್ರೋಶ ವ್ಯಕ್ತಪಡಿಸಿದ ಯುವತಿ Image Credit source: social Media

ದೆಹಲಿ. ಮೇ.11; ಮನೆಯಿಂದ ಕೆಲಸ ಎಂದರೆ ಯಾವ ಐಟಿ ಉದ್ಯೋಗಿಗಳಿಗೆ ಇಷ್ಟವಿಲ್ಲ ಹೇಳಿ. ಆದರೆ ಅದರಿಂದ ಆಗುವ ಹಿಂಸೆ ಯಾರಿಗೂ ಬೇಡ. ವರ್ಕ್ ಫ್ರಮ್ ಹೋಮ್ ನೀಡಿ ಅದಕ್ಕೆ ಒಂದಿಷ್ಟು ನಿಮಯಗಳನ್ನು ಮಾಡಿ ಪ್ರಾಣ ತೆಗೆಯುತ್ತಾರೆ. ಒಂದು ಕಡೆ ವರ್ಕ್ ಫ್ರಮ್ ಹೋಮ್ ಸಿಕ್ಕಿ ಖುಷಿಯಾದರೆ, ಇನ್ನೊಂದು ಕಡೆ ಅದರ ನಿಯಮಗಳನ್ನು ನೋಡಿ ವರ್ಕ್ ಫ್ರಮ್ ಹೋಮ್ ಬೇಡ ಎನ್ನುವ ಸ್ಥಿತಿ ಇದೀಗ ಅಂತಹದೇ ಒಂದು ನಿಯಮದ ಸಂಕಷ್ಟದಲ್ಲಿ ಯುವತಿಯೊಬ್ಬಳು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವರ್ಕ್ ಫ್ರಮ್ ಹೋಮ್ ಕೆಲಸದ ಆಫರ್ ಸಿಕ್ಕರೂ ಕಂಪನಿಯ ಕಠಿಣ ನಿಬಂಧನೆಗಳಿಂದಾಗಿ ಅದನ್ನು ತಿರಸ್ಕರಿಸಿದ ಗುರ್ಲೀನ್ ಎಂಬ ಯುವತಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ಸಂದರ್ಶನದ ಸಮಯದಲ್ಲಿ ಕಂಪನಿಯು ಗುರ್ಲೀನ್‌ಗೆ ಎರಡು ಪ್ರಮುಖ ಷರತ್ತುಗಳನ್ನು ವಿಧಿಸಿತ್ತು. ಒಂದು ಕೆಲಸದ ಸಮಯದಲ್ಲಿ ಉದ್ಯೋಗಿಗಳು ತಮ್ಮ ವೆಬ್‌ಕ್ಯಾಮ್ (Webcam) ಅನ್ನು ಯಾವಾಗಲೂ ಆನ್‌ನಲ್ಲಿ ಇಟ್ಟಿರಬೇಕು. ಉದ್ಯೋಗಿಯ ಉತ್ಪಾದಕತೆಯನ್ನು ಅಳೆಯಲು ಕಂಪನಿಯ ಸಾಫ್ಟ್‌ವೇರ್ ಪ್ರತಿ 10 ನಿಮಿಷಕ್ಕೊಮ್ಮೆ ಕಂಪ್ಯೂಟರ್ ಸ್ಕ್ರೀನ್‌ನ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳುತ್ತದೆ.

ಇಲ್ಲಿದೆ ನೋಡಿ ವಿಡಿಯೋ:

ಈ ನೀತಿಯನ್ನು ಕೇಳಿ ಬೆಚ್ಚಿಬಿದ್ದ ಗುರ್ಲೀನ್, ಇದು ಕೆಲಸವಲ್ಲ ಬದಲಾಗಿ ‘ಹಿಂಸೆ’ ಎಂದು ಕರೆದಿದ್ದಾರೆ. “ಮನೆಯಿಂದ ಕೆಲಸ ಮಾಡುವುದು ಅಂದರೆ ಅಲ್ಲಿ ನಮಗೆ ನಮ್ಯತೆ ಮತ್ತು ಸ್ವಾಯತ್ತತೆ ಇರಬೇಕು. ಆದರೆ ಪ್ರತಿ 10 ನಿಮಿಷಕ್ಕೊಮ್ಮೆ ಸ್ಕ್ರೀನ್‌ಶಾಟ್ ತೆಗೆಯುವುದು ಮತ್ತು ಸದಾ ಕ್ಯಾಮೆರಾ ಮುಂದೆ ಇರಬೇಕೆನ್ನುವುದು ಮನುಷ್ಯರನ್ನು ರೋಬೋಟ್‌ಗಳಂತೆ ನಡೆಸಿಕೊಂಡಂತೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಎರಗಿ ಬಂದ ಚಿರತೆಯ ಕುತ್ತಿಗೆ ಹಿಡಿದು ಪ್ರಾಣ ಉಳಿಸಿಕೊಂಡ 13 ವರ್ಷದ ಬಾಲಕ

ಇನ್ನು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದೆ. ಹೆಚ್ಚಿನವರು ಯುವತಿಯ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಇಂತಹ ಕಣ್ಗಾವಲು ಉದ್ಯೋಗಿಗಳಲ್ಲಿ ಆತಂಕ ಮತ್ತು ಅಪನಂಬಿಕೆಯನ್ನು ಸೃಷ್ಟಿಸುತ್ತದೆ ಹೊರತು ಕೆಲಸದ ಗುಣಮಟ್ಟವನ್ನಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ಕಂಪನಿಯ ಪರವಾಗಿ ವಾದಿಸಿದ್ದು, ಮನೆಯಿಂದ ಕೆಲಸ ಮಾಡುವಾಗ ಉದ್ಯೋಗಿಗಳು ಏಕಕಾಲಕ್ಕೆ ಎರಡು ಕೆಲಸ ಮಾಡುವುದನ್ನು ತಡೆಯಲು ಮತ್ತು ಹೊಣೆಗಾರಿಕೆ ಹೆಚ್ಚಿಸಲು ಇಂತಹ ಕ್ರಮಗಳು ಅನಿವಾರ್ಯ ಎಂದು ಹೇಳಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯಾಗುವ ಸಾಧ್ಯತೆ! – Kannada News | Karnataka Rain Update: Heavy Rainfall in Bengaluru and South Interior Districts, Dry weather elsewhere

ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯಾಗುವ ಸಾಧ್ಯತೆ!

ಬೆಂಗಳೂರು, ಮೇ 11: ಬೆಂಗಳೂರು ಸೇರಿದಂತೆ ಇಂದು ರಾಜ್ಯದ ಹಲವೆಡೆ ಮಳೆಯಾಗುವ ಮುನ್ಸೂಚನೆಯಿದೆ ಎಂದು ಹವಾಮಾನ (Weather)  ಇಲಾಖೆ ತಿಳಿಸಿದೆ. ಕೊಡಗು, ಶಿವಮೊಗ್ಗ ಸೇರಿದಂತೆ ದಕ್ಷಿಣ ಒಳನಾಡಿನ ಹಲವೆಡೆ ಇಂದು ಭಾರೀ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಖ್ಯಾಂಶಗಳು

  • ಮುಂದಿನ 2 ದಿನಗಳವರೆಗೆ ಬೆಂಗಳೂರಿನಲ್ಲಿ ಮಳೆ
  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ
  • ಕೊಡಗು ಸೇರಿದಂತೆ 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಎಲ್ಲೆಲ್ಲಿ ಮಳೆ?

ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 30-40 ಕಿ.ಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಶುಷ್ಕ ವಾತಾವರಣ ಇರಲಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಗಂಟೆಗೆ 40-50 ಕಿ.ಮೀ ಬಿರುಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ ಯೆಲ್ಲೋ ಅಲರ್ಟ್​

ಮೇ 9, 10ರಂದು ದಕ್ಷಿಣ ಒಳನಾಡಿನ ಕೆಲ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ. 64.5 ಮಿ.ಮೀ ಇಂದ 115.5 ಮಿ.ಮೀ ಮಳೆಯಾಗಲಿದ್ದು, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮುನ್ಸೂಚನೆ ನೀಡಿದೆ. ಹೀಗಾಗಿ ದಕ್ಷಿಣ ಒಳನಾಡಿಗೆ ಈ ಎರಡು ದಿನ ಯೆಲ್ಲೋ ಅಲರ್ಟ್​ ನೀಡಲಾಗಿದ್ದು, ಪ್ರಾಧಿಕಾರ ತನ್ನ ಅಧಿಕೃತ X ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು, ಜನರು ಮುನ್ನೆಚ್ಚರಿಕೆ ವಹಿಸುವಂತೆ ಕೋರಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇನ್ನೆರಡೇ ವಾರದಲ್ಲಿ ‘ಜನ ನಾಯಗನ್’ ರಿಲೀಸ್; ವಿಜಯ್ ಸಿಎಂ ಆಗ್ತಿದ್ದಂತೆ ಅಪ್​​​ಡೇಟ್ ಕೊಟ್ಟ ವೆಂಕಟ್ ಪ್ರಭು – Kannada News | Thalapathy Vijay CM: ‘Jana Nayagan’ Movie Releasing in 2 Weeks – Venkat Prabhu Confirms

ದಳಪತಿ ವಿಜಯ್ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಅವರ ನಟನೆಯ ಬಹುನಿರೀಕ್ಷಿತ ಚಿತ್ರ ‘ಜನ ನಾಯಗನ್’ ತೆರೆಗೆ ಬರಲು ಕೌಂಟ್​ಡೌನ್ ಶುರುವಾಗಿದೆ. ಚಿತ್ರದ ಬಿಡುಗಡೆ ತಡವಾಗುತ್ತಿರುವ ಬಗ್ಗೆ ಅಭಿಮಾನಿಗಳಲ್ಲಿ ಆತಂಕವಿತ್ತು. ಆದರೆ ಈಗ ಸಿನಿಮಾದ ನಿರ್ಮಾಪಕ ಕೆ ವೆಂಕಟ್ ಪ್ರಭು ಬಿಡುಗಡೆಯ ಬಗ್ಗೆ ಸ್ಪಷ್ಟನೆ ನೀಡುವ ಮೂಲಕ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದ್ದಾರೆ.

ಸೆನ್ಸಾರ್ ಮಂಡಳಿ ಜೊತೆ ಮಾತುಕತೆ

ಸಿನಿಮಾದ ವಿಳಂಬದ ಬಗ್ಗೆ ಮಾತನಾಡಿದ ವೆಂಕಟ್ ಪ್ರಭು, ‘ಚಿತ್ರವು ಸೆನ್ಸಾರ್ ಮಂಡಳಿಯಲ್ಲಿ ಕೊನೆಯ ಹಂತದ ಪ್ರಕ್ರಿಯೆಯಲ್ಲಿದೆ. ನಾವು ನಿರಂತರವಾಗಿ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಇನ್ನು ಕೇವಲ ಎರಡೇ ವಾರಗಳಲ್ಲಿ ಸಿನಿಮಾ ಅದ್ಧೂರಿಯಾಗಿ ತೆರೆಗೆ ಬರಲಿದೆ’ ಎಂದು ಖಚಿತಪಡಿಸಿದ್ದಾರೆ. ಈ ಸುದ್ದಿಯು ಕಳೆದ ಕೆಲವು ದಿನಗಳಿಂದ ಸಿನಿಮಾ ರಿಲೀಸ್ ಬಗ್ಗೆ ಹರಿದಾಡುತ್ತಿದ್ದ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದೆ. ಟೈಟಲ್ ಕಾರ್ಡ್​​ ಅಲ್ಲಿ ‘ಸಿಎಂ ದಳಪತಿ ವಿಜಯ್’ ಎಂದು ಇರಲಿದೆಯಂತೆ.

ಇದೇ ಸಂದರ್ಭದಲ್ಲಿ ವಿಜಯ್ ಅವರ ರಾಜಕೀಯ ಜೀವನದ ಬಗ್ಗೆಯೂ ವೆಂಕಟ್ ಪ್ರಭು ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ‘ತಮಿಳುನಾಡಿನಲ್ಲಿ ಹೊಸ ನಾಯಕತ್ವದೊಂದಿಗೆ ಹೊಸ ಯುಗ ಆರಂಭವಾಗಿದೆ. ನಾನು ಅವರನ್ನು ವೈಯಕ್ತಿಕವಾಗಿ ಹತ್ತಿರದಿಂದ ಬಲ್ಲೆ. ಅವರ ಶ್ರದ್ಧೆ ಮತ್ತು ಜನಪರ ಕಾಳಜಿಯಿಂದಾಗಿ ತಮಿಳುನಾಡು ಇನ್ನು ಮುಂದೆ ಉತ್ತಮವಾಗಲಿದೆ ಎಂಬ ಭರವಸೆ ನನಗಿದೆ. ಅವರು ಬೆಳ್ಳಿತೆರೆಯ ನಾಯಕನಾಗಿ ಮಾತ್ರವಲ್ಲದೆ, ಈಗ ಜನರ ನಿಜವಾದ ಜನ ನಾಯಕ ಆಗಿದ್ದಾರೆ’ ಎಂದು ಪ್ರಭು ತಿಳಿಸಿದ್ದಾರೆ. ತಮಿಳುನಾಡಿನ ರಾಜಕೀಯ ಚಿತ್ರಣ ಬದಲಾಗಿದ್ದು, ವಿಜಯ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಬರುತ್ತಿರುವ ಮೊದಲ ಸಿನಿಮಾ ಇದಾಗಿದೆ.

ಇದನ್ನೂ ಓದಿ: ತಮಿಳುನಾಡು ನೂತನ ಸಿಎಂ ಜೋಸೆಫ್ ವಿಜಯ್​ಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ

ವಿಜಯ್ ಸಿಎಂ ಆದ ಮೇಲೆ ತೆರೆಗೆ ಬರುತ್ತಿರುವ ‘ಜನ ನಾಯಗನ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸುವುದು ಖಚಿತ. ಸಿನಿಮಾದಲ್ಲಿರುವ ರಾಜಕೀಯ ಸಂಭಾಷಣೆಗಳು ಮತ್ತು ವಿಜಯ್ ಅವರ ಹೊಸ ಅವತಾರವನ್ನು ನೋಡಲು ಇಡೀ ದಕ್ಷಿಣ ಭಾರತವೇ ಕಾಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link