All posts by nagaraj11081993

ಗೋಣಿಬೀಡು ಬಳಿ ಕಾಫಿತೋಟದಲ್ಲಿ ಬೀಡುಬಿಟ್ಟ ಕಾಡಾನೆ ಭೀಮ – Kannada News | Wild Elephant Bhima Spotted in Coffee Estate Near Gonibeedu in Chikkamagaluru

ಚಿಕ್ಕಮಗಳೂರು, ಫೆಬ್ರವರಿ 28: ಗೋಣಿಬೀಡು ಸಮೀಪದ ಕಾಫಿ ತೋಟದ ಪ್ರದೇಶದಲ್ಲಿ ಕಾಡಾನೆ ಭೀಮ ಕಳೆದ ನಾಲ್ಕು ದಿನಗಳಿಂದ ಬೀಡುಬಿಟ್ಟಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಹಾಸನದ ಬೇಲೂರಿನಿಂದ ಬಂದ ಸುಮಾರು 30 ಕಾಡಾನೆಗಳ ಹಿಂಡು ಈ ಪ್ರದೇಶದಲ್ಲಿ ನೆಲೆಸಿದ್ದು, ಈ ಹಿಂಡಿನಿಂದ ಬೇರ್ಪಟ್ಟಿರುವ ಭೀಮ ಜನವಸತಿ ಪ್ರದೇಶಗಳು ಮತ್ತು ಕಾಫಿ ತೋಟಗಳಿಗೆ ಲಗ್ಗೆ ಇಟ್ಟಿದೆ. ಈ ಹಿನ್ನೆಲೆ ಅರಣ್ಯ ಇಲಾಖೆಯು ಸ್ಥಳೀಯರಿಗೆ ಮಹತ್ವದ ಮುಂಜಾಗ್ರತಾ ಸೂಚನೆಯನ್ನು ನೀಡಿದ್ದು, ಕಾಫಿ ತೋಟದ ಕೆಲಸಕ್ಕೆ ಹೋಗದಂತೆ ತಿಳಿಸಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ನಗು ಚೆಲ್ಲುತ್ತಾ ಗಂಡನ ಮನೆಗೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ – Kannada News | Rashmika Mandanna and Vijay Deverakonda Married: First Airport Appearance Post Wedding

ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ ಅವರು ಇತ್ತೀಚೆಗೆ ವಿವಾಹ ಆಗಿದ್ದಾರೆ. ಈ ದಂಪತಿ ಇಷ್ಟು ದಿನ ಕದ್ದು ಮುಚ್ಚಿ ಸುತ್ತಾಡುತ್ತಿದ್ದರು. ಈಗ ಇವರು ಖಾಸಗಿಯಾಗಿ ವಿವಾಹ ಆಗಿದ್ದಾರೆ. ವಿವಾಹ ಆದ ಬಳಿಕ ಇದೇ ಮೊದಲ ಬಾರಿಗೆ ಅವರು ಒಟ್ಟಾಗಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮಧ್ಯೆ ರಶ್ಮಿಕಾ ಮಂದಣ್ಣ ಅವರು ನಗು ಚೆಲ್ಲುತ್ತಾ ಗಂಡನ ಮನೆ ಸೇರಿದ್ದಾರೆ. ಈ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.

ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅವರು ರಾಜಸ್ಥಾನದ ಉದಯಪುರದಲ್ಲಿ ವಿವಾಹ ಆಗಿದ್ದಾರೆ. ಇವರ ಮದುವೆ ನಡೆಯುವ ಜಾಗವನ್ನು ಗುಟ್ಟಾಗಿಯೇ ಇಡಲಾಗಿತ್ತು. ಮದುವೆಯಲ್ಲಿ ಯುವರಾಜನಂತೆ ವಿಜಯ್ ದೇವರಕೊಂಡ ಗಮನ ಸೆಳೆದರೆ, ಯುವ ರಾಣಿಯಂತೆ ರಶ್ಮಿಕಾ ಮಂದಣ್ಣ ಕಂಗೊಳಿಸಿದರು. ಈಗ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಹೈದರಾಬಾದ್ ಸೇರಿದ್ದಾರೆ.

ಹೈದರಾಬಾದ್​​ನಲ್ಲಿ ಜುಬ್ಲಿ ಹಿಲ್ಸ್​​ನಲ್ಲಿರುವ ವಿಜಯ್ ದೇವರಕೊಂಡ ಮನೆಗೆ ರಶ್ಮಿಕಾ ಎಂಟ್ರಿ ಕೊಟ್ಟಿದ್ದಾರೆ. ಈ ಮೊದಲು ಅವರು ಅನೇಕ ಬಾರಿ ಇಲ್ಲಿಗೆ ತೆರಳಿದ್ದು ಇದೆ. ಕೆಲವು ವರದಿಗಳ ಪ್ರಕಾರ ಅವರು ಅಲ್ಲಿಯೇ ವಾಸವಿದ್ದರು ಎಂದು ಕೂಡ ಹೇಳಲಾಗುತ್ತಿದೆ. ಆದರೆ, ಮದುವೆಯಾದ ಬಳಿಕ ಈ ಮನೆ ಪ್ರವೇಶಿಸುವುದು ಅವರಿಗೆ ವಿಶೇಷ ಅನುಭವ. ಈ ಕಾರಣದಿಂದ, ನಗು ನಗುತ್ತಾ ರಶ್ಮಿಕಾ ಮಂದಣ್ಣ ಅವರು ಮನೆಗೆ ಪ್ರವೇಶಿಸಿದರು.

ರಶ್ಮಿಕಾ ಮಂದಣ್ಣ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ.ವಿಜಯ್ ದೇವರಕೊಂಡ ಕೂಡ ಗಮನ ಸೆಳೆಯುತ್ತಿದ್ದಾರೆ. ಇಬ್ಬರೂ ತಮ್ಮ ಪ್ರೀತಿಯನ್ನು ಮುಚ್ಚಿಟ್ಟಿದ್ದರು. ಈಗ ವಿವಾಹ ಆಗುವ ಮೂಲಕ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ-ವಿಜಯ್ ಧರಿಸಿದ್ದ ಚಿನ್ನದ ಬೆಲೆ ಎಷ್ಟು ಕೋಟಿ ರೂಪಾಯಿ?

ರಶ್ಮಿಕಾ ಮಂದಣ್ಣ ಅವರು ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳುವುದಕ್ಕೂ ಮೊದಲು ಒಂದು ದೊಡ್ಡ ಬ್ರೇಕ್ ಪಡೆಯಲಿದ್ದಾರೆ ಎನ್ನಲಾಗಿದೆ. ಆ ಬಳಿಕ ಅವರು ಮತ್ತೆ ಚಿತ್ರರಂಗದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ರಶ್ಮಿಕಾ ಹಾಗೂ ವಿಜಯ್ ಒಟ್ಟಾಗಿ ಸಿನಿಮಾ ಕೂಡ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:26 am, Sat, 28 February 26

Source link

Dharmasthala Temple: ಚಂದ್ರ ಗ್ರಹಣ ಹಿನ್ನೆಲೆ ಧರ್ಮಸ್ಥಳದಲ್ಲಿ ದೇವರ ದರ್ಶನ ಸಮಯ ಬದಲಾವಣೆ – Kannada News | Dharmasthala Temple Alters Darshan Timings for March 3rd Lunar Eclipse

ದಕ್ಷಿಣ ಕನ್ನಡ, ಫೆಬ್ರವರಿ 28: ಮಾರ್ಚ್ 3 ರಂದು ಸಂಭವಿಸಲಿರುವ ರಕ್ತ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಭಕ್ತಾದಿಗಳ ದೇವರ ದರ್ಶನ ಸಮಯವನ್ನು ತಾತ್ಕಾಲಿಕವಾಗಿ ಬದಲಾಯಿಸಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯು ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಭಕ್ತರಿಗೆ ಅಗತ್ಯ ಸೂಚನೆಗಳನ್ನು ನೀಡಿದೆ.

ಪ್ರಕಟಣೆಯ ಪ್ರಕಾರ, ಮಾರ್ಚ್ 3 ರಂದು ಮಧ್ಯಾಹ್ನ 1:30ರವರೆಗೆ ಮಾತ್ರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿರುತ್ತದೆ. ರಕ್ತ ಚಂದ್ರಗ್ರಹಣದ ಅವಧಿ ಮುಗಿದ ನಂತರ, ಅಂದರೆ ರಾತ್ರಿ 7:30ರಿಂದ ಪುನಃ ದೇವರ ದರ್ಶನವನ್ನು ಪ್ರಾರಂಭಿಸಲಾಗುವುದು. ಬಹುತೇಕ ದೇವಸ್ಥಾನಗಳಲ್ಲಿ ಗ್ರಹಣದ ಸಂದರ್ಭದಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂಬ ನಿಯಮಕ್ಕೆ ಅನುಗುಣವಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿಯೂ ಭಕ್ತಾದಿಗಳ ಅನುಕೂಲ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭಕ್ತಾದಿಗಳು ಈ ಬದಲಾದ ದರ್ಶನ ಸಮಯಗಳನ್ನು ಗಮನದಲ್ಲಿಟ್ಟುಕೊಂಡು ಶ್ರೀ ಮಂಜುನಾಥ ಸ್ವಾಮಿ ದೇವರ ದರ್ಶನಕ್ಕೆ ಆಗಮಿಸುವಂತೆ ಧರ್ಮಸ್ಥಳ ದೇವಸ್ಥಾನ ಆಡಳಿತ ಮಂಡಳಿ ವಿನಂತಿಸಿದೆ.\

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಣಜಿ ಫೈನಲ್​ನಲ್ಲಿ ಕರ್ನಾಟಕ ತಂಡದ ‘ಸೋಲು’ ಕನ್ಫರ್ಮ್​! – Kannada News | Karnataka’s loss in the Ranji Trophy final is all but confirmed

ಹುಬ್ಬಳ್ಳಿಯ ಕೆಎಸ್​ಸಿಎ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡದ ಸೋಲು ಖಚಿತವಾಗಿದೆ. ಅದು ಕೂಡ ಜಮ್ಮು-ಕಾಶ್ಮೀರ ತಂಡದ ಬೃಹತ್ ಮುನ್ನಡೆಯೊಂದಿಗೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಜಮ್ಮು-ಕಾಶ್ಮೀರ ತಂಡವು ಮೊದಲ ಇನಿಂಗ್ಸ್​ನಲ್ಲಿ ಬರೋಬ್ಬರಿ 584 ರನ್ ಕಲೆಹಾಕಿದ್ದರು.

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಕರ್ನಾಟಕ ತಂಡವು ಕೇವಲ 293 ರನ್​ಗಳಿಸಿ ಆಲೌಟ್ ಆಗಿತ್ತು. ಇತ್ತ 291 ರನ್​ಗಳ ಹಿನ್ನಡೆ ಅನುಭವಿಸಿದರೂ ಕರ್ನಾಟಕ ತಂಡಕ್ಕೆ ನಾಲ್ಕನೇ ದಿನದಾಟದಲ್ಲಿ ಕಂಬ್ಯಾಕ್ ಮಾಡಲು ಅವಕಾಶವಿತ್ತು.

ಆದರೆ ದ್ವಿತೀಯ ಇನಿಂಗ್ಸ್​ನಲ್ಲೂ ಜಮ್ಮು-ಕಾಶ್ಮೀರ ಬ್ಯಾಟರ್​ಗಳು ಕ್ರೀಸ್ ಕಚ್ಚಿ ನಿಂತಿದ್ದಾರೆ. ದ್ವಿತೀಯ ಇನಿಂಗ್ಸ್​ನ ಮೊದಲ ಮೂರು ಓವರ್​ಗಳಲ್ಲೇ 2 ವಿಕೆಟ್ ಕಬಳಿಸಿ ಕರ್ನಾಟಕ ಬೌಲರ್​ಗಳು ಪಂದ್ಯ ಹೊಸ ಭರವಸೆ ಮೂಡಿಸಿದ್ದರು. ಆದರೆ ಈ ಹಂತದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಖಮ್ರಾನ್ ಇಕ್ಬಾಲ್ ಕರ್ನಾಟಕ ತಂಡದ ಎಲ್ಲಾ ಲೆಕ್ಕಾಚಾರಗಳನ್ನು ತಲೆ ಕೆಳಗಾಗಿಸಿದ್ದಾರೆ.

ಇದೀಗ ಜಮ್ಮು-ಕಾಶ್ಮೀರ ತಂಡದ ಮುನ್ನಡೆ 500 ರನ್​ಗಳನ್ನು ದಾಟಿದೆ. ಅಂದರೆ ಕಾಶ್ಮೀರಿ ಪಡೆ ಇನ್ನು ಡಿಕ್ಲೇರ್ ಘೋಷಿಸಿದರೂ ಕರ್ನಾಟಕ ತಂಡಕ್ಕೆ ಈ ಗುರಿ ಬೆನ್ನತ್ತಲು ಸಾಧ್ಯವಾಗುವುದಿಲ್ಲ.

ಏಕೆಂದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಯಾವುದೇ ತಂಡ ಕೊನೆಯ ಇನಿಂಗ್ಸ್​ನಲ್ಲಿ 500 ರನ್​ಗಳನ್ನು ಬೆನ್ನತ್ತಿ ಗೆದ್ದ ಚರಿತ್ರೆಯೇ ಇಲ್ಲ. ಹೀಗಾಗಿ ಜಮ್ಮು-ಕಾಶ್ಮೀರ ತಂಡವು ಇನ್ನು ಡಿಕ್ಲೇರ್ ಘೋಷಿಸಿದರೂ ಕರ್ನಾಟಕ ತಂಡವು 500+ ರನ್​ಗಳನ್ನು ಚೇಸ್ ಮಾಡುವುದು ಅಸಾಧ್ಯ.

ಒಂದು ವೇಳೆ ನಾಲ್ಕನೇ ದಿನದಾಟದಲ್ಲೇ ಕರ್ನಾಟಕ ಬೌಲರ್​ಗಳು 4 ರಿಂದ 5 ವಿಕೆಟ್ ಕಬಳಸಿದ್ದರೆ, ಐದನೇ ದಿನದಾಟದ ಮೊದಲ ಸೆಷನ್​ನಲ್ಲಿ ಆಲೌಟ್ ಮಾಡಿ ಪಂದ್ಯದ ಮೇಲೆ ಹಿಡಿತ ಸಾಧಿಸಬಹುದಿತ್ತು. ಈ ಮೂಲಕ ಕೊನೆಯ ಎರಡು ಸೆಷನ್​ಗಳಲ್ಲಿ 400 ರಿಂದ 450 ರನ್​ಗಳ ಗುರಿ ಪಡೆದು ಚೇಸಿಂಗ್ ಪ್ರಯತ್ನಕ್ಕೆ ಕೈ ಹಾಕಬಹುದಿತ್ತು.

ಆದರೆ ಜಮ್ಮು-ಕಾಶ್ಮೀರ ತಂಡದ ಆರಂಭಿಕ ದಾಂಡಿಗ ಖಮ್ರಾನ್ ಇಕ್ಬಾಲ್ ಅವರ ಭರ್ಜರಿ ಶತಕದೊಂದಿಗೆ ಕರ್ನಾಟಕ ತಂಡದ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿದೆ. ಅಲ್ಲದೆ ಜಮ್ಮು-ಕಾಶ್ಮೀರ ತಂಡದ ಮುನ್ನಡೆ 500 ರನ್​ಗಳನ್ನು ದಾಟಿರುವ ಕಾರಣ ಈ ಮ್ಯಾಚ್ ಡ್ರಾನಲ್ಲಿ ಅಂತ್ಯಗೊಳ್ಳುವುದು ಸಹ ಖಚಿತವಾಗಿದೆ.

ಡ್ರಾ ಆದರೆ ಯಾರು ಚಾಂಪಿಯನ್:

ರಣಜಿ ಟೂರ್ನಿಯ ಫೈನಲ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡರೆ ಮೊದಲ ಇನಿಂಗ್ಸ್​ನಲ್ಲಿ ಮುನ್ನಡೆ ಸಾಧಿಸಿದ ತಂಡವನ್ನು ವಿಜಯಿ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಕರ್ನಾಟಕ ವಿರುದ್ಧ ಜಮ್ಮು-ಕಾಶ್ಮೀರ ಮೊದಲ ಇನಿಂಗ್ಸ್​ನಲ್ಲಿ ಬರೋಬ್ಬರಿ 291 ರನ್​ಗಳ ಮುನ್ನಡೆ ಪಡೆದುಕೊಂಡಿದೆ.

ಹೀಗಾಗಿ ಈ ಬಾರಿಯ ರಣಜಿ ಟೂರ್ನಿಯ ಚಾಂಪಿಯನ್ ಜಮ್ಮು-ಕಾಶ್ಮೀರ. ಇದರೊಂದಿಗೆ 11 ವರ್ಷಗಳ ಬಳಿಕ ಮತ್ತೊಮ್ಮೆ ರಣಜಿ ಟ್ರೋಫಿ ಎತ್ತಿ ಹಿಡಿಯುವ ಕರ್ನಾಟಕ ತಂಡದ ಕನಸು ಕೂಡ ಕಮರಿದೆ.

ಜಮ್ಮು ಮತ್ತು ಕಾಶ್ಮೀರ ಪ್ಲೇಯಿಂಗ್ XI: ಖಮ್ರಾನ್ ಇಕ್ಬಾಲ್, ಯಾವರ್ ಹಸನ್, ಶುಭಂ ಪುಂಡೀರ್, ಪರಸ್ ಡೋಗ್ರಾ (ನಾಯಕ), ಅಬ್ದುಲ್ ಸಮದ್, ಕನ್ಹಯ್ಯಾ ವಾಧವನ್ (ವಿಕೆಟ್ ಕೀಪರ್), ಅಬಿದ್ ಮುಷ್ತಾಕ್, ಆಖಿಬ್ ನಬಿ ದಾರ್, ಯುದ್ವೀರ್ ಸಿಂಗ್ ಚರಕ್, ಸಾಹಿಲ್ ಲೋತ್ರಾ, ಸುನೀಲ್ ಕುಮಾರ್.

ಇದನ್ನೂ ಓದಿ: ವಿರಾಟ್ ಕೊಹ್ಲಿಯ ವಿಶ್ವ ದಾಖಲೆಯನ್ನೇ ಅಳಿಸಿ ಹಾಕಿದ ಬ್ರಿಯಾನ್ ಬೆನ್ನೆಟ್

ಕರ್ನಾಟಕ ಪ್ಲೇಯಿಂಗ್ XI: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್ (ನಾಯಕ), ಕರುಣ್ ನಾಯರ್, ಸ್ಮರಣ್ ರವಿಚಂದ್ರನ್, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ (ವಿಕೆಟ್ ಕೀಪರ್), ವಿದ್ಯಾಧರ್ ಪಾಟೀಲ್, ವಿಜಯ್ ಕುಮಾರ್ ವೈಶಾಕ್, ಶಿಖರ್ ಶೆಟ್ಟಿ, ಪ್ರಸಿದ್ಧ್ ಕೃಷ್ಣ.

Published On – 10:58 am, Sat, 28 February 26

Source link

ಕುಡಿನ ನಶೆಯಲ್ಲಿ ವ್ಯಕ್ತಿ ಮೇಲೆ ಕಾರು ಹರಿಸಿ ಕೊಲೆ; ಪ್ರಭಾವಿ ಮುಖಂಡರ ಮಕ್ಕಳು ಅಂದರ್! – Kannada News | Hosur Drunk Driving Murder: Influential Kids Kill Man, Family Injured

ಕುಡಿನ ನಶೆಯಲ್ಲಿ ವ್ಯಕ್ತಿ ಮೇಲೆ ಕಾರು ಹರಿಸಿ ಕೊಲೆ; ಪ್ರಭಾವಿ ಮುಖಂಡರ ಮಕ್ಕಳು ಅಂದರ್!
Image Credit source: Tv9 kannada

ಆನೇಕಲ್, ಫೆಬ್ರವರಿ 28: ರಾಜ್ಯದ (Bengaluru) ಗಡಿಭಾಗ ತಮಿಳು ನಾಡಿನ ಹೊಸೂರು ನಗರದಲ್ಲಿ ಪ್ರಭಾವಿ ಮುಖಂಡರ ಮಕ್ಕಳಿಂದ ಓರ್ವನ ಹತ್ಯೆಯಾಗಿದೆ. ಕುಡಿದ ನಶೆಯಲ್ಲಿಯೇ ವಾಹನ ಚಾಲನೆ ಮಾಡಿದ್ದ ಕಾಲೇಜು ವಿದ್ಯಾರ್ಥಿಗಳು ಉದ್ದೇಶಪೂರ್ವಕವಾಗಿ ವ್ಯಕ್ತಿಯೊಬ್ಬರ ಮೇಲೆ ವಾಹನ ಹರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸಧ್ಯ ಮೂವರನ್ನೂ ಹೊಸೂರು ಪೊಲೀಸರು ಬಂಧಿಸಿದ್ದಾರೆ.

ಅಸಿಸ್ಟೆಂಟ್ ಲೇಬರ್ ಇನ್ಸ್‌ಪೆಕ್ಟರ್ ಆಗಿದ್ದ ವ್ಯಕ್ತಿ

ಕುಡಿದ ನಶೆಯಲ್ಲಿದ್ದ ಈ ಮೂವರು ಕಾಲೇಜು ವಿದ್ಯಾರ್ಥಿಗಳು ಮೊದಲು ವಾಹನವೊಂದಕ್ಕೆ ಗುದ್ದಿದ್ದು, ನಂತರ ಬೇಕಂತಲೇ ಶಿವಮೂರ್ತಿ (54) ಎನ್ನುವವರ ಮೇಲೆ ಕಾರು ಹರಿಸಲಾಗಿದೆ ಎಂದು ಹೇಳಲಾಗಿದೆ. ಶಿವಮೂರ್ತಿ ಹೊಸೂರಿನ ಅಣ್ಣೈ ಅರವಿಂದ್ ನಗರದ ನಿವಾಸಿಯಾಗಿದ್ದು, ಅಸಿಸ್ಟೆಂಟ್ ಲೇಬರ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಮನೆ ಮುಂದೆ ಬೈಕ್ ನಿಲ್ಲಿಸಿದ್ದ ಶಿವಮೂರ್ತಿ ಅವರ ವಾಹನಕ್ಕೆ ಕಾರಿನಲ್ಲಿ ಬಂದ ಮೂವರು ವಿದ್ಯಾರ್ಥಿಗಳು ಡಿಕ್ಕಿ ಹೊಡೆದಾಗ ಕೋಪಗೊಂಡ ಶಿವಮೂರ್ತಿ ಮತ್ತು ಕುಟುಂಬಸ್ಥರು ಹೊರಬಂದು ಪ್ರಶ್ನಿಸಿದ್ದಾರೆ. ಈ ನಡುವೆ ಪರಸ್ಪರ ವಾಗ್ವಾದ ನಡೆದಿದೆ. ಈ ವೇಳೆ ಆರೋಪಿಗಳು ಕಾರನ್ನು ಏಕಾಏಕಿ ಮುಂದೆ ಚಲಾಯಿಸಿ ಶಿವಮೂರ್ತಿ ಮೇಲೆ ಹರಿಸಿದ್ದಾರೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಶಿವಮೂರ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ಶಿವಮೂರ್ತಿ ಅವರ ಮಗ, ಸೊಸೆ ಮತ್ತು ಮೊಮ್ಮಗ ಕೂಡ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಆದಿತ್ಯ (20), ರಿತಿಕ್ ಕುಮಾರ್ (19) ಹಾಗೂ ಹರೀಶ್ (19) ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತು ಹೊಸೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಅಪಘಾತದ ಬಳಿಕ ಜನರ ಕಿರುಚಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಘಟನೆಯ ನಂತರದ ವೀಡಿಯೋ ಇಲ್ಲಿದೆ

ಆಸ್ತಿಗಾಗಿ ತಂದೆಯನ್ನೇ ಕೊಂದ ಮಗ!

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋವನಾಳ ಗ್ರಾಮದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿ ಮಗನಿಂದಲೇ ತಂದೆ ಹತ್ಯೆಯಾದ ದುರ್ಘಟನೆ ನಡೆದಿದೆ. ಶಂಕರಗೌಡ ದ್ಯಾವನಗೌಡ (60) ಅವರನ್ನು ಅವರ ಪುತ್ರ ಪ್ರಭು ದ್ಯಾವನಗೌಡ ಕೊಲೆ ಮಾಡಿದ ಆರೋಪ ಕೇಳಿಬಂದಿದೆ. ಎರಡು ಎಕರೆ ಜಮೀನು ವಿಚಾರವಾಗಿ ತಂದೆ-ಮಗನ ನಡುವೆ ಕೆಲ ದಿನಗಳಿಂದ ವೈಷಮ್ಯ ಉಂಟಾಗಿತ್ತು. ನಿನ್ನೆ(ಫೆ.27) ರಾತ್ರಿ ಜಮೀನು ವಿಷಯವಾಗಿ ಉಂಟಾದ ವಾಗ್ವಾದ ತೀವ್ರಗೊಂಡು, ಮಾತಿಗೆ ಮಾತು ಬೆಳೆದು ಕೊನೆಗೆ ಹೊಡೆದಾಟಕ್ಕೆ ತಿರುಗಿದೆ ಎನ್ನಲಾಗಿದೆ. ಈ ವೇಳೆ ಪ್ರಭು ತಂದೆಯನ್ನು ಕೈಯಿಂದ ಬಲವಾಗಿ ಹೊಡೆದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದು ವಸತಿ ಶಾಲೆಯ ಬಾಲಕಿಯರಿಗೆ ಲೈಂಗಿಕ ಕಿರುಕುಳ; ಶಾಲೆ ನಡೆಸುತ್ತಿದ್ದ ದಂಪತಿ ಮೇಲೆ ಪೋಕ್ಸೋ ಕೇಸ್!

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಲಕ್ಷ್ಮೇಶ್ವರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಹಾಗೂ ಡಿವೈಎಸ್ಪಿ ಮುರ್ತುಜ್ ಖಾದ್ರಿ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಆರೋಪಿ ಪ್ರಭುವನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Lunar Eclipse 2026: ಮಾ.03ರ ಚಂದ್ರಗ್ರಹಣದ ಬಳಿಕ ಈ ರಾಶಿಗೆ ಅದೃಷ್ಟವೋ ಅದೃಷ್ಟ! – Kannada News | March 2026 Lunar Eclipse: Libra’s Fortune and Remedies by Dr.Basavaraj Guruji

ಈ ವರ್ಷದ ಮೊದಲ ಚಂದ್ರಗ್ರಹಣವು ಫಾಲ್ಗುಣ ಮಾಸದ ಹುಣ್ಣಿಮೆಯಂದು ಅಂದರೆ ಮಾರ್ಚ್ 03 ರಂದು ಸಂಭವಿಸಲಿದೆ. ಈ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸಲಿದ್ದು, 12 ರಾಶಿಗಳ ಮೇಲೆ ಪರಿಣಾಮ ಬೀರಲಿದೆ. 12 ರಾಶಿಗಳ ಪೈಕಿ ಈ ಒಂದು ಈ ರಾಶಿಗೆ ಅದೃಷ್ಟದ ಬಾಗಿಲು ತೆರೆಯಲಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿಯವರು ಭವಿಷ್ಯ ನುಡಿದಿದ್ದಾರೆ. ತುಲಾ ರಾಶಿಯ ಅಧಿಪತಿ ಶುಕ್ರನಾಗಿದ್ದು, ಚಿತ್ತಾ, ಸ್ವಾತಿ ಮತ್ತು ವಿಶಾಖ ನಕ್ಷತ್ರದವರು ಈ ಗ್ರಹಣದ ಪ್ರಭಾವಕ್ಕೆ ಒಳಪಡುತ್ತಾರೆ. ಈ ಚಂದ್ರಗ್ರಹಣವು ತುಲಾ ರಾಶಿಯವರ 11ನೇ ಮನೆಯಾದ ಲಾಭ ಸ್ಥಾನದಲ್ಲಿ ಸಂಭವಿಸಲಿದ್ದು, ಇದು ಹಲವು ಮಹತ್ವದ ಫಲಿತಾಂಶಗಳನ್ನು ನೀಡಲಿದೆ.

ಸಕಾರಾತ್ಮಕ ಪ್ರಭಾವಗಳು:

ಗ್ರಹಣದ ಪರಿಣಾಮವಾಗಿ, ತುಲಾ ರಾಶಿಯವರಿಗೆ ನಿರೀಕ್ಷಿತ ಹಣದ ಹರಿವು ಹಾಗೂ ಅನಿರೀಕ್ಷಿತ ಆರ್ಥಿಕ ಲಾಭಗಳು ದೊರೆಯುವ ಸಾಧ್ಯತೆ ಇದೆ. ಶತ್ರುಗಳು ಮಿತ್ರರಾಗಿ ಬದಲಾಗುತ್ತಾರೆ. ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡುಬರುತ್ತದೆ ಮತ್ತು ಯಾವುದೇ ವಿಷಯದ ಬಗ್ಗೆ ಆಳವಾಗಿ ಯೋಚಿಸುವ ಸಾಮರ್ಥ್ಯ ಹೆಚ್ಚುತ್ತದೆ. ಮಕ್ಕಳಿಂದ ಶುಭ ಫಲಗಳು ಪ್ರಾಪ್ತವಾಗುತ್ತವೆ. ರಾಜಕೀಯ ಕ್ಷೇತ್ರದಲ್ಲಿ ಸ್ಥಾನಮಾನ ಮತ್ತು ಆದಾಯದಲ್ಲಿ ಏರಿಕೆ ಕಂಡುಬರುತ್ತದೆ. ದೀರ್ಘಕಾಲದ ಋಣಗಳಿಂದ ಮುಕ್ತಿ ಸಿಗುವ ಸಾಧ್ಯತೆಗಳಿದ್ದು, ಸಾಲಗಳನ್ನು ತೀರಿಸಲು ಇದು ಉತ್ತಮ ಸಮಯ. ವ್ಯಾಪಾರಸ್ಥರಿಗೆ ಈ ಅವಧಿ ಬಹಳ ಶುಭವಾಗಿದ್ದು, ವ್ಯಾಪಾರದಲ್ಲಿ ಪ್ರಗತಿ ಸಾಧಿಸುತ್ತಾರೆ. ಕಾನೂನು ವಿಷಯಗಳಲ್ಲಿ ಯಶಸ್ಸು ಲಭಿಸುತ್ತದೆ ಮತ್ತು ಜೀವನದ ಒತ್ತಡಗಳು ಕಡಿಮೆಯಾಗುತ್ತವೆ. ಪೂರ್ವಿಕರ ಆಸ್ತಿ ವಿಚಾರಗಳಲ್ಲಿಯೂ ಶುಭ ಫಲ ದೊರೆಯುತ್ತದೆ. ದಂಪತಿಗಳ ನಡುವೆ ಉತ್ತಮ ಅನ್ಯೋನ್ಯತೆ ಮೂಡಲಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಎಚ್ಚರಿಕೆ ಮತ್ತು ಸವಾಲುಗಳು:

ಸಕಾರಾತ್ಮಕ ಅಂಶಗಳ ಜೊತೆಗೆ ಕೆಲವು ಎಚ್ಚರಿಕೆಗಳನ್ನೂ ಗುರೂಜಿ ನೀಡಿದ್ದಾರೆ. ಹೆಣ್ಣು ಮಕ್ಕಳ ವಿವಾಹ ವಿಷಯಗಳ ಬಗ್ಗೆ ಚಿಂತೆ ಕಾಡಬಹುದು. ಕೆಲವರಿಗೆ ಸ್ಥಾನ ಪಲ್ಲಟ ಅಥವಾ ಮನೆ ಬದಲಾವಣೆಯ ಸಾಧ್ಯತೆ ಇದೆ. ದಾಯಾದಿ ಕಲಹಗಳು ಹೆಚ್ಚಾದರೂ, ಅವು ಅಂತಿಮವಾಗಿ ಇತ್ಯರ್ಥವಾಗುತ್ತವೆ. ತಾಳ್ಮೆ ಕಳೆದುಕೊಳ್ಳದೆ, ಸಹನೆಯಿಂದ ವರ್ತಿಸುವುದು ಮತ್ತು ಅನಗತ್ಯ ಖರ್ಚುಗಳನ್ನು ನಿಯಂತ್ರಿಸುವುದು ಮುಖ್ಯ. ಈ ರಾಶಿಯವರಿಗೆ ಪ್ರೀತಿಪಾತ್ರರ ಅಗಲಿಕೆ ಅಥವಾ ಅವರ ಅನಾರೋಗ್ಯದ ಚಿಂತೆ ಕಾಡುವ ಸಾಧ್ಯತೆಯೂ ಇದೆ. ಲೆಕ್ಕಾಚಾರಗಳಲ್ಲಿ ತಪ್ಪುಗಳಾಗಿ ಟೆನ್ಷನ್ ಆಗುವ ಸಂಭವ ಇರುವುದರಿಂದ, ಎಲ್ಲವನ್ನೂ ಸರಿಯಾಗಿ ದಾಖಲಿಸಿಕೊಳ್ಳುವುದು ಉತ್ತಮ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಾ.03 ವರ್ಷದ ಮೊದಲ ಚಂದ್ರಗ್ರಹಣ; ಇದು ಭಾರತದಲ್ಲಿ ಗೋಚರಿಸುತ್ತಾ?

ಪರಿಹಾರೋಪಾಯಗಳು:

ಡಾ. ಬಸವರಾಜ ಗುರೂಜಿಯವರು ಈ ಗ್ರಹಣದ ಪ್ರತಿಕೂಲ ಪರಿಣಾಮಗಳನ್ನು ಕಡಿಮೆ ಮಾಡಲು ಮತ್ತು ಶುಭ ಫಲಗಳನ್ನು ಹೆಚ್ಚಿಸಲು ಕೆಲವು ಪರಿಹಾರಗಳನ್ನು ಸೂಚಿಸಿದ್ದಾರೆ. ತುಲಾ ರಾಶಿಯವರು ದೇವಿಯ ಸ್ತೋತ್ರಗಳನ್ನು ಪಠಿಸುವುದು ಮತ್ತು ದೇವಿಯ ದರ್ಶನ ಮಾಡಿಕೊಳ್ಳುವುದು ಉತ್ತಮ. ವಿಶೇಷವಾಗಿ ಮಹಾಲಕ್ಷ್ಮಿಯ ಗಾಯತ್ರಿ ಮಂತ್ರವಾದ “ಓಂ ಮಹಾದೇವ್ಯೈ ಚ ವಿದ್ಮಹೇ ವಿಷ್ಣುಪತ್ನ್ಯೈ ಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್” ಇದನ್ನು ಪಠಿಸುವುದರಿಂದ ಬಹಳಷ್ಟು ಶುಭವಾಗುತ್ತದೆ. ಮಹಾಲಕ್ಷ್ಮಿಗೆ ಬಿಳಿ ಹೂವಿನ ಹಾರವನ್ನು ಅರ್ಪಿಸುವುದು ಫಲಪ್ರದ. ಜೊತೆಗೆ ಅನಾಥ ಮಕ್ಕಳಿಗೆ ಅಥವಾ ಪುಟ್ಟ ಮಕ್ಕಳಿಗೆ ಮೊಸರನ್ನ, ಹಾಲಿನ ಅನ್ನ, ಅಥವಾ ಬಾದಾಮಿ ಹಾಲು ದಾನ ಮಾಡುವುದು ಬಹಳಷ್ಟು ಶುಭವನ್ನು ತರುತ್ತದೆ ಎಂದು ಗುರೂಜಿ ತಿಳಿಸಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐಪಿಎಸ್ ಅಧಿಕಾರಿಗೆ ಸೇರಿದ ವಿಲ್ಲಾದಲ್ಲೇ ಸಾಮೂಹಿಕ ಅತ್ಯಾಚಾರ: ಕಟ್ಟಡದ ಮಾಲೀಕನ ಮೇಲೆ ಕ್ರಮ ಯಾಕಿಲ್ಲ? – Kannada News | Bengaluru Physical Assult Case: IPS Officers Villa Becomes Hub of Illegal Activities, Police Under Scrutiny

ಬೆಂಗಳೂರು, ಫೆಬ್ರವರಿ 28: ಅಮೃತಹಳ್ಳಿ ವಿಲ್ಲಾದಲ್ಲಿ ನಡೆದ ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರ ಪ್ರಕರಣವು ಹಲವು ಆಘಾತಕಾರಿ ಸತ್ಯಗಳನ್ನು ಬಯಲು ಮಾಡಿದೆ. ಈ ಘಟನೆ ನಡೆದ ವಿಲ್ಲಾ ಐಪಿಎಸ್ ಅಧಿಕಾರಿಯೊಬ್ಬರಿಗೆ ಸೇರಿದ್ದು ಎಂಬುದು ಪ್ರಮುಖ ವಿಷಯ. ಈ ವಿಲ್ಲಾ ದೀರ್ಘಕಾಲದಿಂದ ಕಾಲೇಜು ವಿದ್ಯಾರ್ಥಿಗಳಿಗೆ ಮೋಜು-ಮಸ್ತಿ, ಡ್ರಗ್ಸ್ ಸೇವನೆ ಮತ್ತು ಅನೈತಿಕ ಚಟುವಟಿಕೆಗಳ ಹಾಟ್‌ಸ್ಪಾಟ್ ಆಗಿ ಕಾರ್ಯನಿರ್ವಹಿಸುತ್ತಿತ್ತು ಎಂದು ವರದಿಯಾಗಿದೆ. ಈ ಹಿಂದಿನ ಹಲವು ಪ್ರಕರಣಗಳಲ್ಲಿ ವಿಲ್ಲಾ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದರೂ ಈ ವಿಲ್ಲಾ ಐಪಿಎಸ್ ಅಧಿಕಾರಿಗೆ ಸೇರಿದ್ದರಿಂದ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಕಾನೂನು ಎಲ್ಲರಿಗೂ ಒಂದೇ ಆಗಿದ್ದರೂ, ಐಪಿಎಸ್ ಅಧಿಕಾರಿಗಳಿಗೆ ವಿನಾಯಿತಿ ನೀಡಲಾಗಿದೆಯೇ ಎಂಬ ಸಂಶಯ ವ್ಯಕ್ತವಾಗಿದೆ.

ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ನಿಖಿಲ್ ಮತ್ತು ಡಿಕ್ಸನ್​​ನಂತಹ ಆರೋಪಿಗಳು, ಪೊಲೀಸ್ ಅಧಿಕಾರಿಯ ವಿಲ್ಲಾ ಎಂಬುದರಿಂದ ದಾಳಿ ಮಾಡುವುದಿಲ್ಲ ಎಂಬ ಅರಿವಿನಿಂದಲೇ ಇದನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಆ ವಿಲ್ಲಾದಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೆ ರಾಜಕಾರಣಿಗಳು ಮತ್ತು ಇತರ ಐಪಿಎಸ್ ಅಧಿಕಾರಿಗಳೂ ಭೇಟಿ ನೀಡುತ್ತಿದ್ದರು ಎಂಬ ಮಾಹಿತಿ ಇದೆ. ಪೊಲೀಸ್ ಆಯುಕ್ತರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ವಿಲ್ಲಾ ಮಾಲೀಕರ ವಿರುದ್ಧ ಕ್ರಮ ಆಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಎಫ್ಡಿ ಮೇಲೆ ಸಾಲ‌ ಕೊಡಿಸೋದಾಗಿ ಹೇಳಿ ವಂಚನೆ: ಕೋಟಿ ಕೋಟಿ ಹಣ ಸಂಗ್ರಹಿಸಿ ಬ್ಯಾಂಕ್​​ ಮ್ಯಾನೇಜರ್​​ ಎಸ್ಕೇಪ್​! – Kannada News | Hassan Bank Manager Absconds with 3 Cr on FD Loan Fraud Promise

ಆರೋಪಿ ಹೆಚ್​​.ಎಸ್​.ಪೂಜಾImage Credit source: Tv9 Kannada

ಹಾಸನ, ಫೆಬ್ರವರಿ 28: ನಿಗದಿತ ಠೇವಣಿ ಮೇಲೆ ಸಾಲ‌ ಕೊಡಿಸೋದಾಗಿ ಹೇಳಿ 50ಕ್ಕೂ ಅಧಿಕ ಗ್ರಾಹಕರಿಂದ 3 ಕೋಟಿಗೂ ಹೆಚ್ಚು ಹಣ ಸಂಗ್ರಹ ಮಾಡಿ ವಂಚಿಸಿರುವ ಆರೋಪ ಹಾಸನದ ಖಾಸಗಿ ಬ್ಯಾಂಕ್​​ ವಿರುದ್ಧ ಕೇಳಿಬಂದಿದೆ. ಸೂರ್ಯೋದಯ ಸ್ಮಾಲ್ ಫೈನಾನ್ಸ್​​​ ಬ್ಯಾಂಕ್​ನಲ್ಲಿ ಅಕ್ರಮ ನಡೆದಿದೆ ಎನ್ನಲಾಗಿದ್ದು, ಬ್ಯಾಂಕ್​ ಮ್ಯಾನೇಜರ್ ಹೆಚ್​​.ಎಸ್​.ಪೂಜಾ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತಾಗೆ ದೂರು ನೀಡಲಾಗಿದೆ. ಎಫ್​ಡಿ ಇಡುವಂತೆ ಹೇಳಿ ಕೋಟ್ಯಂತರ ಹಣ ಸಮೇತ ಮ್ಯಾನೇಜರ್​​ ನಾಪತ್ತೆಯಾಗಿರೋದಾಗಿ ಆರೋಪಿಸಲಾಗಿದೆ.

‘ಎಫ್ಡಿ ಮಾಡಿದ ಹಣಕ್ಕೆ ದಾಖಲೆ ನೀಡಿಲ್ಲ’

ಬ್ಯಾಂಕ್​​ನಲ್ಲಿ ಎಫ್ಡಿ ಇಟ್ಟರೆ 25 ಲಕ್ಷದಿಂದ 1 ಕೋಟಿವರೆಗೂ ಸಾಲ ಕೊಡಿಸುವ ಆಮಿಷವನ್ನು ಗ್ರಾಹಕರಿಗೆ ಬ್ಯಾಂಕ್​ ಮ್ಯಾನೇಜರ್ ಹೆಚ್​​.ಎಸ್​.ಪೂಜಾ ಒಡ್ಡಿದ್ದರು. ಜೊತೆಗೆ 25 ಲಕ್ಷ ಲೋನ್​ಗೆ 10 ಲಕ್ಷ ಸಬ್ಸಿಡಿ ಎಂದು ನಂಬಿಸಿ ಜನರಿಂದ ಹಣ ಸಂಗ್ರಹ ಮಾಡಿದ್ದರು. ಇವರ ಮಾತು ನಂಬಿ ಬ್ಯಾಂಕ್​​ನಲ್ಲಿ ಜನ ಹಣ ಇಟ್ಟಿದ್ದು, ಎಫ್​ಡಿ ಮಾಡಿರುವ ಹಣಕ್ಕೆ ಯಾವುದೇ ದಾಖಲೆಯನ್ನು ಮ್ಯಾನೇಜರ್​​ ನೀಡದ ಆರೋಪವೂ ಕೇಳಿಬಂದಿದೆ. ಗ್ರಾಹಕರು ಹಣ ವಾಪಸ್ ಕೇಳಿದ್ದಕ್ಕೆ ಕೆಲವರಿಗೆ ಚೆಕ್ ನೀಡಿ ಪೂಜಾ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ.ಹಾಸನದ ಪೆನ್ಷನ್ ಮೊಹಲ್ಲಾ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಬಲವಂತವಾಗಿ ಮಹಿಳೆಯ ಖಾಸಗಿ ಅಂಗಾಂಗ ಮುಟ್ಟಿ ಮೆಡಿಕಲ್ ಚೆಕಪ್; ಹನಿಟ್ರ್ಯಾಪ್ ಮಾಡಿಸಿ ಹಣ ವಸೂಲಿ ಮಾಡ್ತಿದ್ದ ಗ್ಯಾಂಗ್ ಬಂಧನ

ವಿದೇಶಕ್ಕೆ ಪರಾರಿಯಾಗಲು ಆರೋಪಿ ಯತ್ನ?

ಇನ್ನು ಹಣ ಸಂಗ್ರಹದ ಬಳಿಕ ಆರೋಪಿ ಹೆಚ್​​.ಎಸ್​.ಪೂಜಾ ವಿದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ದುಬೈಗೆ ಹಾರಲು ಅವರು ವಿಮಾನ ನಿಲ್ದಾಣದಲ್ಲಿ ಓಡಾಡುತ್ತಿರುವ ಮಾಹಿತಿ ಇದ್ದು, ಅವರು ಪರಾರಿಯಾಗಲು ಯಾವುದೇ ಕಾರಣಕ್ಕೂ ಬಿಡಬಾರದು. ಅವರ ಪಾಸ್​​ಪೋರ್ಟ್​​ ರದ್ದು ಮಾಡಿ ವಿದೇಶ ಪ್ರಯಾಣವನ್ನು ತಡೆಯಬೇಕು. ಸಾಲ ಕೊಡಿಸುವ ಆಮಿಷವೊಡ್ಡಿ ಗ್ರಾಹಕರನ್ನು ವಂಚಿಸಿರುವ ಆಕೆಯನ್ನು ಬಂಧಿಸಿ, ತಮಗೆ ನ್ಯಾಯ ಕೊಡಿಸಬೇಕು ಎಂದು ಸೂರ್ಯೋದಯ ಸ್ಮಾಲ್ ಫೈನಾನ್ಸ್​​​ ಬ್ಯಾಂಕ್​​ ಗ್ರಾಹಕರು ಎಸ್ಪಿಗೆ ನೀಡಿರುವ ದೂರಿನಲ್ಲಿ ಆಗ್ರಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 9:47 am, Sat, 28 February 26

Source link

ಪಾಕಿಸ್ತಾನ್ ಮುಂದಿರುವುದು ಎರಡೇ ಎರಡು ದಾರಿ..! – Kannada News | Pakistan must reach the target within 12.4 to 13.5 overs

T20 World Cup 2026: ಟಿ20 ವಿಶ್ವಕಪ್​ನಲ್ಲಿ ಸೆಮಿಫೈನಲ್​ಗೆ ಅರ್ಹತೆ ಪಡೆಯಬೇಕಿದ್ದರೆ ಪಾಕಿಸ್ತಾನ್ ತಂಡ ಶ್ರೀಲಂಕಾ ವಿರುದ್ಧ ಗೆಲ್ಲಲೇಬೇಕು. ಈ ಗೆಲುವಿನೊಂದಿಗೆ ಪಾಕ್ ಪಡೆ ನೆಟ್ ರನ್ ರೇಟ್ ಅನ್ನು ಹೆಚ್ಚಿಸಿಕೊಳ್ಳಲೇಬೇಕು. ಸೂಪರ್-8 ಸುತ್ತಿನ ಗ್ರೂಪ್-2 ಅಂಕ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡವು ಅಗ್ರಸ್ಥಾನದಲ್ಲಿದ್ದರೆ, ನ್ಯೂಝಿಲೆಂಡ್ ತಂಡ ದ್ವಿತೀಯ ಸ್ಥಾನದಲ್ಲಿದೆ.

ಇದೀಗ ನ್ಯೂಝಿಲೆಂಡ್ ತಂಡವನ್ನು ನೆಟ್ ರನ್ ರೇಟ್​ನಲ್ಲಿ ಹಿಂದಿಕ್ಕಿದರೆ ಮಾತ್ರ ಪಾಕಿಸ್ತಾನ್ ತಂಡಕ್ಕೆ ಸೆಮಿಫೈನಲ್​ಗೇರಲು ಅವಕಾಶ ದೊರೆಯಲಿದೆ. ಆದರೆ ಹೀಗೆ ನೆಟ್ ರನ್ ರೇಟ್​ನಲ್ಲಿ ಕಿವೀಸ್ ಪಡೆಯನ್ನು ಹಿಂದಿಕ್ಕಲು ಪಾಕ್ ತಂಡದ ಮುಂದಿರುವುದು ಎರಡೇ ಎರಡು ದಾರಿ.

ಎರಡೇ ಎರಡು ದಾರಿ:

ಒಂದು ಭಾರೀ ಅಂತರದ ಗೆಲುವು. ಇನ್ನೊಂದು ಅತೀ ಕಡಿಮೆ ಓವರ್​ಗಳಲ್ಲಿ ರನ್​ ಚೇಸ್. ಆದರೆ ಇವೆರಡು ಅಂದುಕೊಂಡಷ್ಟು ಸುಲಭವಲ್ಲ.

  • ಪಾಕ್ ತಂಡ ಮೊದಲು ಬ್ಯಾಟ್ ಮಾಡಿದರೆ 64 ರಿಂದ 65 ರನ್​ಗಳ ಅಂತರದಿಂದ ಜಯ ಸಾಧಿಸಲೇಬೇಕು.
  • ಪಾಕಿಸ್ತಾನ್ ಚೇಸಿಂಗ್ ಮಾಡಿದರೆ 12.4 ರಿಂದ 13.5 ಓವರ್​ಗಳ ಒಳಗೆ ಗರಿಷ್ಠ 200 ರನ್​ಗಳ ಗುರಿಯನ್ನು ಬೆನ್ನತ್ತಬೇಕು.

ಉದಾಹರಣೆಗೆ:- ಶ್ರೀಲಂಕಾ ತಂಡವು 201 ರನ್​ಗಳ ಗುರಿ ನೀಡಿದರೆ ಪಾಕಿಸ್ತಾನ್ ತಂಡವು 14 ಓವರ್​ಗಳ ಒಳಗೆನೇ ಪಂದ್ಯವನ್ನು ಮುಗಿಸುವುದು ಅನಿವಾರ್ಯ.

ಅಂದರೆ ನ್ಯೂಝಿಲೆಂಡ್ ತಂಡದ ನೆಟ್ ರನ್ ರೇಟ್ ಹಿಂದಿಕ್ಕಲು ಪಾಕಿಸ್ತಾನ್ ತಂಡಕ್ಕೆ ಕನಿಷ್ಠ 64 ರನ್​ಗಳ ಅಂತರದ ಗೆಲುವು ಅನಿವಾರ್ಯ. ಇನ್ನು ಶ್ರೀಲಂಕಾ ನೀಡುವ ಗುರಿಯನ್ನು 14 ಓವರ್​ಗಳಲ್ಲಿ ಚೇಸ್ ಮಾಡುವುದು ಸಹ ಅತ್ಯಗತ್ಯ.

ಪಾಕಿಸ್ತಾನ್ ಗೆದ್ದರೂ ಔಟ್:

ಒಂದು ವೇಳೆ ಪಾಕಿಸ್ತಾನ್ ತಂಡವು 64 ಕ್ಕಿಂತ ಕಡಿಮೆ ರನ್​ಗಳ ಅಂತರದಿಂದ ಗೆದ್ದರೆ ಟಿ20 ವಿಶ್ವಕಪ್​ನಿಂದ ಹೊರಬೀಳಲಿದೆ. ಹಾಗೆಯೇ ಶ್ರೀಲಂಕಾ 201 ರನ್​ಗಳ ಗುರಿ ನೀಡಿದರೆ ಪಾಕಿಸ್ತಾನ್ 14 ಓವರ್​ಗಳನ್ನು ಆಡಿದರೂ ಕೂಡ ವಿಶ್ವಕಪ್ ಅಭಿಯಾನ ಅಂತ್ಯವಾಗಲಿದೆ.

ಅಂದರೆ ಪಾಕಿಸ್ತಾನ್ ತಂಡದ ಟಿ20 ವಿಶ್ವಕಪ್​ನ ಭವಿಷ್ಯ 64 ರನ್​ ಹಾಗೂ 13.5 ಓವರ್​ಗಳ ನಡುವೆ ನಿಂತಿದೆ. ಹೀಗಾಗಿ ಇಂದಿನ ಮ್ಯಾಚ್​ನಲ್ಲಿ ಪಾಕ್ ಪಡೆ ಸಂಪೂರ್ಣ ಲೆಕ್ಕಾಚಾರದೊಂದಿಗೆ ಕಣಕ್ಕಿಳಿಯಲಿದೆ. ಈ ಲೆಕ್ಕಾಚಾರದ ಮೂಲಕ ಗೆಲುವು ಸಾಧಿಸಲು ವಿಫಲವಾದರೆ ನ್ಯೂಝಿಲೆಂಡ್ ತಂಡವು ಟಿ20 ವಿಶ್ವಕಪ್​ನ ಸೆಮಿಫೈನಲ್​ಗೇರಲಿದೆ.

ಇದನ್ನೂ ಓದಿ: T20 World Cup 2028: ಮುಂದಿನ ಟಿ20 ವಿಶ್ವಕಪ್​ಗೆ 12 ತಂಡಗಳು ಆಯ್ಕೆ

ಒಟ್ಟಿನಲ್ಲಿ ಆರಂಭದಿಂದಲೇ ಸೋಲು-ಗೆಲುವುಗಳ ಲೆಕ್ಕಾಚಾರದೊಂದಿಗೆ ಸೂಪರ್-8 ಸುತ್ತಿಗೆ ಎಂಟ್ರಿ ಕೊಟ್ಟಿರುವ ಪಾಕಿಸ್ತಾನ್ ಇಂದು ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಈ ಮ್ಯಾಚ್​ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿ ಕನಿಷ್ಠ 64 ರನ್​ಗಳ ಜಯ ಅಥವಾ ಗರಿಷ್ಠ 13.5 ಓವರ್​ಗಳಲ್ಲಿ ಪಂದ್ಯ ಮುಗಿಸಿ ಸೆಮಿಫೈನಲ್​ಗೇರಲಿದೆಯಾ ಕಾದು ನೋಡಬೇಕಿದೆ.

Source link

‘ಶಿವಕುಮಾರ್, ನೀನಾಸಂ ಸತೀಶ್ ಆದ ಕಥೆ’; ಜರ್ನಿ ನೆನೆದ ಕನ್ನಡದ ನಟ – Kannada News | Neenasam Satish’s Inspiring Journey: From Struggle to Stardom with ‘The Rise of Ashoka

ನೀನಾಸಂ ಸತೀಶ್ (Ninasam Satish) ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ನೀನಾಸಂ ಹಿನ್ನೆಲೆಯಿಂದ ಬಂದ ಅವರು ಇಂದು ಬೇಡಿಕೆಯ ನಟ ಎನಿಸಿಕೊಂಡಿದ್ದಾರೆ. ಅವರ ಅಭಿನಯದ ‘ದಿ ರೈಸ್ ಆಫ್ ಅಶೋಕ’ ಸಿನಿಮಾ ಗಮನ ಸೆಳೆದಿದೆ. ಜಾತಿ ತಾರತಮ್ಯ ವಿರುದ್ಧ ಹೋರಾಡುವ ಈ ಕಥೆ ಮೆಚ್ಚುಗೆ ಪಡೆದಿದೆ. ಈ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಸತೀಶ್ ಅವರು ತಮ್ಮ ಜರ್ನಿ ನೆನಪಿಸಿಕೊಂಡಿದ್ದಾರೆ. ಅವರು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ.

‘ಶಿವಕುಮಾರ್, ನೀನಾಸಂ ಸತೀಶ್ ಆದ ಕಥೆ’ ಎಂದು ಮಾತು ಆರಂಭಿಸಿದ್ದಾರೆ ಸತೀಶ್. ‘ಇದು ವಿಧಿ ಬರೆದ ಕಥೆಯಲ್ಲ, ನಾನೇ ಬರೆದುಕೊಂಡ ಸಾಧಾರಣ ಕಥೆ. ನಮ್ಮೂರು ಮದ್ದೂರು ಬಳಿ ಇದೆ. ನಮಗೆ ಇರೋದು 30 ಗುಂಟೆ ಜಾಗ. ನಮ್ಮದು ಸಣ್ಣ ರೈತರ ಕುಟುಂಬ. ಛಲ ಎಲ್ಲಿಂದ ಬಂತು ಎಂದಾಗ ನಮ್ಮಮ್ಮ ನೆನಪಾಗುತ್ತಾಳೆ’ ಎಂದು ಹಳೆಯ ಕಥೆ ನೆನಪಿಸಿಕೊಂಡಿದ್ದಾರೆ ಸತೀಶ್.

‘ಬೆಂಗಳೂರಿಗೆ ಮೊದಲು ಬಂದಾಗ ಸಿಕ್ಕಿದ್ದು ಗೋಪಾಲ್ ಥಿಯೇಟರ್. ಇಲ್ಲಿ, ಕಸ ಗುಡಿಸಿದ್ದೆ, ಟೀ ಮಾರಿದ್ದೆ. ಟಾರ್ಚ್ ಬಿಟ್ಟಿದ್ದೆ. ಆಗ ಹೀರೋ ಆಗ್ತೀನಿ ಎಂದು ಎಂದಿಗೂ ಅಂದುಕೊಂಡಿರಲಿಲ್ಲ’ ಎಂದಿದ್ದಾರೆ ನೀನಾಸಂ ಸತೀಶ್. ಸಿಕ್ಕ ಸಿಕ್ಕ ಕೆಲಸ ಮಾಡಿದೆ. ಮತ್ತೆ ಊರು ಸೇರಿದೆ. ಆ ಬಳಿಕ ನಾಟಕ ಎಂಬ ಹೊಸ ಬಾಗಿಲು ತೆರೆಯಿತು’ ಎಂದು ಜರ್ನಿ ನೆನೆದರು ಸತೀಶ್.

ಇದನ್ನೂ ಓದಿ: ದಿ ರೈಸ್ ಆಫ್ ಅಶೋಕ: ಇಂಗ್ಲಿಷ್ ಶೀರ್ಷಿಕೆ ಇಟ್ಟಿದ್ದಕ್ಕೆ ಕಾರಣ ತಿಳಿಸಿದ ಸತೀಶ್ ನೀನಾಸಂ

ಆ ಬಳಿಕ ಅವರು ನೀನಾಸಂ ಸೇರಿಕೊಂಡರು. ಇದಾದ ಬಳಿಕ ಅವರು ಮತ್ತೆ ಬೆಂಗಳೂರಿಗೆ ಬಂದರು. ‘ಹೀಗೆ ಶುರುವಾದ ಜರ್ನಿ ಇಲ್ಲಿವರೆಗೆ ಕರೆದುಕೊಂಡು ಬಂದು ನಿಲ್ಲಿಸಿದೆ. ಗೆಲುವು, ಸೋಲಿಗಿಂತ ಪ್ರಯತ್ನವನ್ನೇ ನಂಬಿದ್ದೇನೆ. ನಾನು ಪ್ರೀತಿಸಿ ಮಾಡಿರೋ ದಿ ರೈಸ್ ಆಫ್ ಅಶೋಕ ಚಿತ್ರ ಗೆಲ್ಲಿಸಿ’ ಎಂದು ಸತೀಶ್ ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link