All posts by nagaraj11081993

RR vs GT, IPL 2026: ಬೌಲಿಂಗ್‌ನಲ್ಲಿ ಫ್ಲಾಪ್ ಆದ ಜೋಫ್ರಾ ಆರ್ಚರ್: ಸೋಲಿನ ಬಳಿಕ ನಾಯಕ ಯಶಸ್ವಿ ಜೈಸ್ವಾಲ್ ಏನು ಹೇಳಿದ್ರು – Kannada News | Jofra Archer flopped in bowling What did captain Yashasvi Jaiswal say after the defeat

ಬೆಂಗಳೂರು (ಮೇ. 10): ರಾಜಸ್ಥಾನ ರಾಯಲ್ಸ್ (Rajasthan Royals) ತಂಡವು ಐಪಿಎಲ್ 2026ರಲ್ಲಿ ತನ್ನ ತವರಿನ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸತತ ಮೂರನೇ ಸೋಲನ್ನು ಕಂಡಿತು. ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಈ ಪಂದ್ಯದಲ್ಲಿ ರಾಜಸ್ಥಾನ 77 ರನ್‌ಗಳಿಂದ ಸೋತಿತು. ನಿಯಮಿತ ನಾಯಕ ರಿಯಾನ್ ಪರಾಗ್ ಗಾಯದ ಕಾರಣದಿಂದ ಹೊರಗುಳಿದ ಕಾರಣ, ಯಶಸ್ವಿ ಜೈಸ್ವಾಲ್ ಕ್ಯಾಪ್ಟನ್ ಜವಾಬ್ದಾರಿ ನಾಯಕತ್ವ ವಹಿಸಿದ್ದರು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ 229 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು. ಇದನ್ನು ಬೆನ್ನತ್ತಿದ ರಾಜಸ್ಥಾನ ತಂಡ 152 ರನ್‌ಗಳಿಗೆ ಮಾತ್ರ ಸೀಮಿತವಾಯಿತು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ತಂಡ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.

ಆರ್ಚರ್ ಬಗ್ಗೆ ಜೈಸ್ವಾಲ್ ಸಮರ್ಥನೆ

ಈ ಪಂದ್ಯದಲ್ಲಿ ಜೋಫ್ರಾ ಆರ್ಚರ್ ನಿರೀಕ್ಷಿತ ಮಟ್ಟದಲ್ಲಿ ಬೌಲಿಂಗ್ ಮಾಡಲಿಲ್ಲ. ತಮ್ಮ ಮೊದಲ ಓವರ್‌ನಲ್ಲೇ 11 ಎಸೆತಗಳನ್ನು ಎಸೆದು 18 ರನ್‌ಗಳನ್ನು ಬಿಟ್ಟುಕೊಟ್ಟರು. ತಮ್ಮ ಸ್ಪೆಲ್‌ನಲ್ಲಿ ಅವರು 3 ಓವರ್‌ಗಳಲ್ಲಿ 46 ರನ್‌ಗಳನ್ನು ನೀಡಿದರು. ಆದರೂ ನಾಯಕ ಜೈಸ್ವಾಲ್ ಅವರ ಪರ ನಿಂತು ಮಾತನಾಡಿದರು.

‘‘ಕ್ರಿಕೆಟ್‌ನಲ್ಲಿ ಎಲ್ಲ ದಿನವೂ ಒಂದೇ ರೀತಿಯ ಪ್ರದರ್ಶನ ಸಾಧ್ಯವಿಲ್ಲ. ಕೆಲ ದಿನಗಳು ನಮ್ಮದಾಗುತ್ತವೆ, ಕೆಲ ದಿನಗಳು ಹಾಗಾಗುವುದಿಲ್ಲ. ಆದರೆ ಆರ್ಚರ್ ಇತ್ತಿಚಿನ ಪಂದ್ಯಗಳಲ್ಲಿ ನಮ್ಮ ತಂಡಕ್ಕೆ ಉತ್ತಮವಾಗಿ ಸಹಕರಿಸಿದ್ದಾರೆ. ಅವರು ಮತ್ತೆ ಶೀಘ್ರದಲ್ಲೇ ಉತ್ತಮವಾಗಿ ಮರಳುತ್ತಾರೆ ಎಂಬ ವಿಶ್ವಾಸ ನನಗಿದೆ’’ ಎಂದು ಜೈಸ್ವಾಲ್ ಹೇಳಿದರು.

ಪವರ್‌ಪ್ಲೇನಲ್ಲಿ ಒತ್ತಡ

ಗುಜರಾತ್ ತಂಡದ ಶುಭ್​ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಪವರ್‌ಪ್ಲೇನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ರಾಜಸ್ಥಾನ ಬೌಲರ್‌ಗಳ ಮೇಲೆ ಭಾರೀ ಒತ್ತಡ ಹೇರಿದರು. ಆರಂಭಿಕ ಓವರ್‌ಗಳಲ್ಲಿ ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.

RR vs GT: ಗುಜರಾತ್ ಸಾಂಘಿಕ ಪ್ರದರ್ಶನಕ್ಕೆ ಮಣಿದ ರಾಜಸ್ಥಾನ

ಈ ಬಗ್ಗೆ ಜೈಸ್ವಾಲ್ ಮಾತನಾಡುತ್ತಾ, ‘‘ನಾವು ಸರಿಯಾದ ಲೈನ್ ಮತ್ತು ಲೆಂಗ್ತ್‌ನಲ್ಲಿ ಬೌಲಿಂಗ್ ಮಾಡಲು ಪ್ರಯತ್ನಿಸಿದ್ದೇವೆ. ಆದರೆ ಎದುರಾಳಿ ಬ್ಯಾಟ್ಸ್‌ಮನ್‌ಗಳು ತುಂಬಾ ಚೆನ್ನಾಗಿ ಆಡಿದರು. ಬೌಂಡರಿಗಳನ್ನು ಹೇಗೆ ತಡೆಯಬೇಕು ಎಂಬುದರ ಬಗ್ಗೆ ನಾವು ಯೋಚಿಸಿದ್ದೇವೆ. ಆದರೆ ಅದು ಅವರಿಂದ ಒಳ್ಳೆಯ ಪ್ರದರ್ಶನವಾಗಿತ್ತು’’ ಎಂದರು.

ಮುಂದಿನ ಪಂದ್ಯಕ್ಕೆ ಗಮನ

‘‘ಈ ಪಂದ್ಯದಿಂದ ನಾವು ಕಲಿಯಬೇಕಾದುದನ್ನು ಗಮನಿಸುತ್ತೇವೆ. ಮುಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ನಾವು ಸಿದ್ಧರಾಗುತ್ತೇವೆ’’ ಎಂದು ಜೈಸ್ವಾಲ್ ತಿಳಿಸಿದ್ದಾರೆ.

ಗುಜರಾತ್ ದೊಡ್ಡ ಜಿಗಿತ

ಈ ಪಂದ್ಯಕ್ಕೂ ಮೊದಲು ಐದನೇ ಸ್ಥಾನದಲ್ಲಿ ಸಂಕಷ್ಟದಲ್ಲಿದ್ದ ಗುಜರಾತ್ ಈಗ ಎರಡನೇ ಸ್ಥಾನಕ್ಕೆ ಜಿಗಿದಿದೆ. ಏತನ್ಮಧ್ಯೆ, ಇಲ್ಲಿಯವರೆಗೆ ಟೂರ್ನಿಯಲ್ಲಿ ಪ್ರಾಬಲ್ಯ ಹೊಂದಿದ್ದ ರಾಜಸ್ಥಾನ ತಂಡವು ದೊಡ್ಡ ಹಿನ್ನಡೆಯನ್ನು ಅನುಭವಿಸಿದೆ. ಜಿಟಿ 11 ಪಂದ್ಯಗಳಿಂದ ಏಳು ಗೆಲುವು ಮತ್ತು ನಾಲ್ಕು ಸೋಲುಗಳೊಂದಿಗೆ, 14 ಅಂಕಗಳನ್ನು ಹೊಂದಿದೆ. ಅತ್ತ ರಾಜಸ್ಥಾನಕ್ಕೆ ಈ ಸೋಲು ದುಃಸ್ವಪ್ನವಾಗಿದೆ. ಈ ಋತುವಿನಲ್ಲಿ ರಾಜಸ್ಥಾನ್ ಮೊದಲ ಬಾರಿಗೆ ಅಗ್ರ ನಾಲ್ಕರಿಂದ ಹೊರಬಿದ್ದಿದೆ. 11 ಪಂದ್ಯಗಳಿಂದ ಆರು ಗೆಲುವುಗಳು ಮತ್ತು ಐದು ಸೋಲುಗಳೊಂದಿಗೆ, ರಾಯಲ್ಸ್ 12 ಅಂಕಗಳನ್ನು ಹೊಂದಿ ಐದನೇ ಸ್ಥಾನಕ್ಕೆ ಕುಸಿದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

PWD ಕಚೇರಿಯಲ್ಲಿ ಮಳೆಗೆ ಮಹತ್ವದ ದಾಖಲೆಗಳು ನೀರುಪಾಲು! ಹಪ್ಪಳದಂತೆ ಫೈಲ್‌ಗಳನ್ನು ಒಣಗಿಸುತ್ತಿರುವ ಸಿಬ್ಬಂದಿ – Kannada News | Major Records Damaged as Rainwater Floods PWD Office in Bengaluru; Files Dried Like Papads

PWD ಕಚೇರಿಯಲ್ಲಿ ಮಳೆಗೆ ಮಹತ್ವದ ದಾಖಲೆಗಳು ನೀರುಪಾಲು!

ಬೆಂಗಳೂರು, ಮೇ 10: ಸರ್ಕಾರಿ ಕಚೇರಿಗಳಲ್ಲಿನ ಕಡತಗಳ ಸಂರಕ್ಷಣೆ ಅಧಿಕಾರಿಗಳ ಆದ್ಯ ಕರ್ತವ್ಯವಾಗಿದ್ದರೂ, ಬೆಂಗಳೂರಿನ (Bengaluru) ಕೆ.ಆರ್. ಸರ್ಕಲ್‌ನಲ್ಲಿರುವ ಲೋಕೋಪಯೋಗಿ ಇಲಾಖೆ (PWD) ಕಚೇರಿಯಲ್ಲಿ ಅಧಿಕಾರಿಗಳ ಭಾರೀ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ಮಳೆ ನೀರಿನಿಂದಾಗಿ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ವ್ಯವಹಾರಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳು ನೀರು ಪಾಲಾಗಿವೆ.

ಮುಖ್ಯಾಂಶಗಳು

  • ಬೆಂಗಳೂರಿನ ಪಿಡಬ್ಲ್ಯೂಡಿ ಕಚೇರಿಗೆ ಮಳೆ ನೀರು ನುಗ್ಗಿ ಮಹತ್ವದ ದಾಖಲೆಗಳು ಹಾನಿ.
  • ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಭೂಸ್ವಾಧೀನ ಮತ್ತು ಪರಿಹಾರದ ಕಡತಗಳು ನೀರು ಪಾಲು.
  • ಒದ್ದೆಯಾಗಿರುವ ಸರ್ಕಾರಿ ಫೈಲ್‌ಗಳನ್ನು ಹಪ್ಪಳದಂತೆ ಕಚೇರಿ ಮುಂದೆ ಒಣಗಿಸುತ್ತಿರುವ ಅಧಿಕಾರಿಗಳು

ಅಧಿಕಾರಿಗಳ ಎಡವಟ್ಟು

ಕಳೆದ ಕೆಲವು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ನೆಲಮಹಡಿಯಲ್ಲಿರುವ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಗೆ ನೀರು ನುಗ್ಗಿತ್ತು. ಈ ಸಂದರ್ಭದಲ್ಲಿ ಭೂಸ್ವಾಧೀನ ಮತ್ತು ಪರಿಹಾರಕ್ಕೆ ಸಂಬಂಧಿಸಿದ ಪ್ರಮುಖ ಕಡತಗಳು ಸಂಪೂರ್ಣವಾಗಿ ಒದ್ದೆಯಾಗಿವೆ. ದಾಖಲೆಗಳ ಮಹತ್ವ ಅರಿತೂ ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸದ ಅಧಿಕಾರಿಗಳ ಬೇಜವಾಬ್ದಾರಿತನವೇ ಈ ಎಡವಟ್ಟಿಗೆ ಕಾರಣ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ D. Sudhakar Passes Away: ಸಚಿವ ಡಿ. ಸುಧಾಕರ್ ನಿಧನ, ಅನಾರೋಗ್ಯದಿಂದ ಬಳಲುತ್ತಿದ್ದ ನಾಯಕ ಇನ್ನಿಲ್ಲ

ಸಾರ್ವಜನಿಕರ ಆಕ್ರೋಶ

ಪ್ರಸ್ತುತ ಹಾನಿಗೊಳಗಾದ ಫೈಲ್‌ಗಳನ್ನು ಕಚೇರಿಯ ಮುಂಭಾಗದಲ್ಲಿ ಹಪ್ಪಳ ಒಣಗಿಸುವ ರೀತಿಯಲ್ಲಿ ಬಿಸಿಲಿಗೆ ಹಾಕಲಾಗಿದೆ. ದಾಖಲೆಗಳಲ್ಲಿನ ಬರಹಗಳು ಮತ್ತು ಟಿಪ್ಪಣಿಗಳು ಅಳಿಸಿ ಹೋಗಿರುವ ಆತಂಕವಿದ್ದು, ಆಡಳಿತ ವ್ಯವಸ್ಥೆಯ ಈ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಟ್ಯಂತರ ರೂಪಾಯಿ ಮೊತ್ತದ ವ್ಯವಹಾರಗಳ ಮಾಹಿತಿಯುಳ್ಳ ಈ ದಾಖಲೆಗಳ ನಾಶದ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.

ವರದಿ: ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಫಿಫಾ ವಿಶ್ವಕಪ್ 2026: ಉದ್ಘಾಟನಾ ಸಮಾರಂಭದಲ್ಲಿ ಮಿಂಚಲಿರುವ ನೋರಾ ಫತೇಹಿ – Kannada News | Indian dancer Nora Fatehi to perform live at FIFA World Cup 2026 Opening Ceremony Toronto

ಭಾರತೀಯ ಚಿತ್ರರಂಗದ ಖ್ಯಾತ ನಟಿ, ಅದ್ಭುತ ನೃತ್ಯಗಾರ್ತಿ ನೋರಾ ಫತೇಹಿ (Nora Fatehi) ಅವರು ಮತ್ತೊಮ್ಮೆ ಜಾಗತಿಕ ವೇದಿಕೆಯಲ್ಲಿ ಭಾರತದ ಹೆಸರನ್ನು ರಾರಾಜಿಸುವಂತೆ ಮಾಡುತ್ತಿದ್ದಾರೆ. 2026ರ ಫಿಫಾ ವಿಶ್ವಕಪ್‌ನ (FIFA World Cup 2026) ಕೆನಡಾ ಆವೃತ್ತಿಯ ಅದ್ಧೂರಿ ಉದ್ಘಾಟನಾ ಸಮಾರಂಭದಲ್ಲಿ ನೋರಾ ಫತೇಹಿ ನೃತ್ಯ ಪ್ರದರ್ಶನದ ಜೊತೆಗೆ ಹಾಡನ್ನೂ ಹಾಡಲಿದ್ದಾರೆ. ಈ ಉದ್ಘಾಟನಾ ಸಮಾರಂಭವು ಜೂನ್ 12ರಂದು ಕೆನಡಾದ ಟೊರೊಂಟೊದಲ್ಲಿರುವ ಬಿಎಂಒ ಫೀಲ್ಡ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ನೋರಾ ಫತೇಹಿ ಅವರು ಈ ಬಾರಿ ಕೇವಲ ನೃತ್ಯಕ್ಕೆ ಸೀಮಿತವಾಗದೆ, ಗಾಯಕಿಯಾಗಿಯೂ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಗಾಯಕರ ಜೊತೆಗೆ ನೋರಾ ವೇದಿಕೆ ಹಂಚಿಕೊಳ್ಳಲಿದ್ದಾರೆ. 2022ರ ಫಿಫಾ ವಿಶ್ವಕಪ್ ಫೈನಲ್‌ನಲ್ಲೂ ನೋರಾ ಅದ್ಭುತ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು. ಈಗ ಎರಡನೇ ಬಾರಿಗೆ ವಿಶ್ವದ ಅತಿದೊಡ್ಡ ಕ್ರೀಡಾಕೂಟದಲ್ಲಿ ಅವಕಾಶ ಪಡೆದಿದ್ದಾರೆ.

ಭಾರತದಲ್ಲಿ ಹೆಸರು ಗಳಿಸಿರುವ ನೋರಾ ಫತೇಹಿ ಅವರ ಪ್ರತಿಭೆಗೆ ಈಗ ಜಾಗತಿಕ ಮಟ್ಟದಲ್ಲಿ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಈ ಹಿಂದೆ ಟಿ20 ವಿಶ್ವಕಪ್ ಸಂಬಂಧಿತ ಕಾರ್ಯಕ್ರಮಗಳಲ್ಲೂ ಅವರು ಕಾಣಿಸಿಕೊಂಡಿದ್ದರು. ಈಗ ಫಿಫಾ ಉದ್ಘಾಟನಾ ಸಮಾರಂಭದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅವರ ವೃತ್ತಿಜೀವನದ ಮೈಲಿಗಲ್ಲು ಎನ್ನಲಾಗಿದೆ.

‘ಟೊರೊಂಟೊದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭವು ಕೆನಡಾದ ಅಸ್ಮಿತೆ ಮತ್ತು ಫಿಫಾ ವಿಶ್ವಕಪ್‌ನ ಶಕ್ತಿಯನ್ನು ಪ್ರತಿಬಿಂಬಿಸಲಿದೆ’ ಎಂದು ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ ತಿಳಿಸಿದ್ದಾರೆ. ನೋರಾ ಫತೇಹಿ ಅವರು ಫುಟ್ಬಾಲ್ ಪ್ರೇಮಿಗಳನ್ನು ತಮ್ಮ ಹಾಡು ಮತ್ತು ನೃತ್ಯದ ಮೂಲಕ ರಂಜಿಸಲು ಸಿದ್ಧರಾಗಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಹೆಮ್ಮೆ ತಂದಿದೆ.

ಇದನ್ನೂ ಓದಿ: ಧುರಂಧರ್ ಗೆಲುವಿನ ಎಫೆಕ್ಟ್: ನೋರಾ ಫತೇಹಿ ಜೊತೆ ಡ್ಯಾನ್ಸ್ ಮಾಡಿದ ರಾಕೇಶ್ ಬೇಡಿ

ಒಂದೆಡೆ ಫಿಫಾ ಸುದ್ದಿ ಸದ್ದು ಮಾಡುತ್ತಿದ್ದರೆ, ಮತ್ತೊಂದೆಡೆ ನೋರಾ ಫತೇಹಿ ಅವರ ಹೊಸ ಐ-ಪಾಪ್ ಹಾಡು ‘ಬಾಡಿ ರೋಲ್’ ಬಿಡುಗಡೆಯಾಗುತ್ತಿದೆ. ಖ್ಯಾತ ರ‍್ಯಾಪರ್ ಹನಿ ಸಿಂಗ್ ಅವರೊಂದಿಗೆ ನೋರಾ ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಇದು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2026: RCB vs MI ಪಂದ್ಯಕ್ಕೆ 5 ಆಟಗಾರರು ಅಲಭ್ಯ

Source link

ಕರ್ನಾಟಕ ಹವಾಮಾನ ವರದಿ: ಕೊಡಗು, ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ! – Kannada News | Karnataka Rain Update: Heavy Rainfall in Bengaluru and South Interior Districts

ಕೊಡಗು, ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ!

ಬೆಂಗಳೂರು, ಮೇ 10: ಬೆಂಗಳೂರು ಸೇರಿದಂತೆ ಇಂದು ರಾಜ್ಯದ ಹಲವೆಡೆ ಮಳೆಯಾಗುವ ಮುನ್ಸೂಚನೆಯಿದೆ ಎಂದು ಹವಾಮಾನ (Weather) ಇಲಾಖೆ ತಿಳಿಸಿದೆ. ಕೊಡಗು, ಶಿವಮೊಗ್ಗ ಸೇರಿದಂತೆ ದಕ್ಷಿಣ ಒಳನಾಡಿನ ಹಲವೆಡೆ ಇಂದು ಭಾರೀ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಖ್ಯಾಂಶಗಳು

  • ಮುಂದಿನ 2 ದಿನಗಳವರೆಗೆ ಬೆಂಗಳೂರಿನಲ್ಲಿ ಮಳೆ
  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ
  • ಕೊಡಗು ಸೇರಿದಂತೆ 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಎಲ್ಲೆಲ್ಲಿ ಮಳೆ?

ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 30-40 ಕಿ.ಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಶುಷ್ಕ ವಾತಾವರಣ ಇರಲಿದೆ. ಉತ್ತರ ಒಳನಾಡಿನ ಹಾವೇರಿ, ಗದಗ ಜಿಲ್ಲೆಗಳಲ್ಲಿ ಗಂಟೆಗೆ 40-50 ಕಿ.ಮೀ ಬಿರುಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಬಿರುಗಾಳಿಯೊಂದಿಗೆ ಭಾರೀ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್​ ನೀಡಲಾಗಿದೆ. ಉಳಿದಂತೆ ಬೆಂಗಳೂರು ಸೇರಿ ಚಾಮರಾಜನಗರ, ರಾಮನಗರ, ಮೈಸೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ ಯೆಲ್ಲೋ ಅಲರ್ಟ್​

ಮೇ 9, 10ರಂದು ದಕ್ಷಿಣ ಒಳನಾಡಿನ ಕೆಲ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ. 64.5 ಮಿ.ಮೀ ಇಂದ 115.5 ಮಿ.ಮೀ ಮಳೆಯಾಗಲಿದ್ದು, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮುನ್ಸೂಚನೆ ನೀಡಿದೆ. ಹೀಗಾಗಿ ದಕ್ಷಿಣ ಒಳನಾಡಿಗೆ ಈ ಎರಡು ದಿನ ಯೆಲ್ಲೋ ಅಲರ್ಟ್​ ನೀಡಲಾಗಿದ್ದು, ಪ್ರಾಧಿಕಾರ ತನ್ನ ಅಧಿಕೃತ X ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು, ಜನರು ಮುನ್ನೆಚ್ಚರಿಕೆ ವಹಿಸುವಂತೆ ಕೋರಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope Today: ಇಂದು ಈ ರಾಶಿಯವರಿಗೆ ಆಕಸ್ಮಿಕ ಧನಾಗಮನ!

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 10, ಭಾನುವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ಪರಾಭವ ನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಕೃಷ್ಣ ಪಕ್ಷ, ಅಷ್ಟಮಿ, ಧನಿಷ್ಠ ನಕ್ಷತ್ರ, ಬ್ರಹ್ಮ ಯೋಗ, ಕೌಲವ ಕರಣಗಳ ವಿವರಗಳನ್ನು ನೀಡಲಾಗಿದೆ.

ಇದು ಕಾಲಭೈರವ ಜಯಂತಿ ಮತ್ತು ಕಾಲಾಷ್ಟಮಿ ಇರುವ ಪವಿತ್ರ ದಿನವಾಗಿದೆ. ಅಷ್ಟೇ ಅಲ್ಲದೆ, ಇದು ತಾಯಂದಿರ ದಿನವೂ ಆಗಿದ್ದು, ಎಲ್ಲ ತಾಯಂದಿರಿಗೆ ಶುಭಾಶಯಗಳನ್ನು ಕೋರಲಾಗಿದೆ. ರವಿ ಮೇಷ ರಾಶಿಯಲ್ಲಿ ಮತ್ತು ಚಂದ್ರ ಮಕರ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ ಎಂದು ಗುರೂಜಿ ತಿಳಿಸಿದ್ದಾರೆ.

 

 

 

Source link

D Sudhakar Passes Away: ಬಿಜೆಪಿ-ಕಾಂಗ್ರೆಸ್ ಎರಡೂ ಸರ್ಕಾರಗಳಲ್ಲಿ ಸಚಿವ! ಡಿ ಸುಧಾಕರ್ ರಾಜಕೀಯ ಹಾದಿಯ ಹಿನ್ನೋಟ ಇಲ್ಲಿದೆ – Kannada News | D Sudhakar Passes Away: Remembering the Political Journey of Karnataka Minister and Chitradurga Leader

ಸಚಿವ ಡಿ. ಸುಧಾಕರ್Image Credit source: tv9

ಚಿತ್ರದುರ್ಗ, ಮೇ 10: ರಾಜ್ಯ ರಾಜಕೀಯದ ಚತುರ ನಾಯಕ, ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ (D. Sudhakar) (65) ಅವರ ನಿಧನದಿಂದ ಹಿರಿಯೂರು ಮತ್ತು ಚಿತ್ರದುರ್ಗ (Chitradurga) ಜಿಲ್ಲೆಯ ರಾಜಕಾರಣದ ಒಂದು ಶಕೆಗೆ ತೆರೆಬಿದ್ದಿದೆ. ಕೃಷಿ ಮತ್ತು ಉದ್ಯಮದಿಂದ ಆರಂಭವಾಗಿ ವಿಧಾನಸಭೆಯವರೆಗೆ ಬೆಳೆದ ಇವರ ಪಯಣ ಅಸಂಖ್ಯಾತ ಏರಿಳಿತಗಳಿಂದ ಕೂಡಿದ್ದರೂ, ನಾಲ್ಕು ಬಾರಿ ಜಯಗಳಿಸುವ ಮೂಲಕ ಜಿಲ್ಲೆಯ ಅಪ್ರತಿಮ ನಾಯಕರಾಗಿ ಹೊರಹೊಮ್ಮಿದ್ದರು. ಡಿಸಿಎಂ ಡಿಕೆ ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಅವರು, ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಅಭಿವೃದ್ಧಿ ಕಾರ್ಯಗಳಿಗೆ ಶ್ರಮಿಸಿದ್ದರು.

ಮುಖ್ಯಾಂಶಗಳು

  • 2004ರಲ್ಲಿ ಚಳ್ಳಕೆರೆಯಿಂದ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದ ಡಿ. ಸುಧಾಕರ್.
  • 2008ರಲ್ಲಿ ಪಕ್ಷೇತರರಾಗಿ ಗೆದ್ದು ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿ ಮೊದಲ ಬಾರಿಗೆ ಸಚಿವ ಸ್ಥಾನ ಪಡೆದಿದ್ದರು.
  • ಹಿರಿಯೂರು ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿ ಜಿಲ್ಲೆಯ ಪ್ರಭಾವಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ರಾಜಕೀಯ ಪಯಣದ ಆರಂಭ ಮತ್ತು ಏಳಿಗೆ

1961ರಲ್ಲಿ ಜನಿಸಿದ ಡಿ. ಸುಧಾಕರ್, ಬಿ.ಕಾಂ ಪದವಿ ಮುಗಿಸಿ ತಂದೆಯವರ ಕೃಷಿ ಮತ್ತು ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಮಾಜಿ ಶಾಸಕ ಎನ್. ಜಯಣ್ಣ ಅವರಿಂದ ರಾಜಕೀಯದ ಪಟ್ಟುಗಳನ್ನು ಕಲಿತ ಇವರು, 2004ರಲ್ಲಿ ಚಳ್ಳಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಗೆಲುವು ಸಾಧಿಸಿದರು. ಕ್ಷೇತ್ರ ಮೀಸಲಾತಿ ಬದಲಾದಾಗ ಹಿರಿಯೂರಿಗೆ ಶಿಫ್ಟ್ ಆದ ಸುಧಾಕರ್, 2008ರಲ್ಲಿ ಅಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಅಚ್ಚರಿಯ ಜಯ ದಾಖಲಿಸಿದ್ದರು. ಅಂದು ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ ಇವರು ಯಡಿಯೂರಪ್ಪ ಸಂಪುಟದಲ್ಲಿ ಸಮಾಜ ಕಲ್ಯಾಣ, ಮುಜರಾಯಿ ಸೇರಿದಂತೆ ಹಲವು ಪ್ರಮುಖ ಖಾತೆಗಳನ್ನು ನಿಭಾಯಿಸಿದ್ದರು.

ಕೋರ್ಟ್​ ಮೆಟ್ಟಿಲೇರಿ ಶಾಸಕ ಸ್ಥಾನ ಉಳಿಸಿಕೊಂಡಿದ್ದ ಸುಧಾಕರ್!

2010ರಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಬಂಡಾಯ ಎದ್ದ 16 ಶಾಸಕರಲ್ಲಿ ಸುಧಾಕರ್ ಕೂಡ ಒಬ್ಬರಾಗಿದ್ದರು. ಅಂದು ಸ್ಪೀಕರ್ ಅವರಿಂದ ಅನರ್ಹಗೊಂಡರೂ, ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಿ ತಮ್ಮ ಶಾಸಕ ಸ್ಥಾನವನ್ನು ಉಳಿಸಿಕೊಂಡ ಚತುರ ಇವರು. 2013ರಲ್ಲಿ ಮತ್ತೆ ಕಾಂಗ್ರೆಸ್ ಸೇರಿ ಹಿರಿಯೂರಿನಿಂದ ಗೆದ್ದರು. 2018ರಲ್ಲಿ ಸೋಲು ಕಂಡಿದ್ದರೂ ಛಲ ಬಿಡದ ಸುಧಾಕರ್, 2023ರ ಚುನಾವಣೆಯಲ್ಲಿ ಮತ್ತೆ ಭರ್ಜರಿ ಜಯ ಸಾಧಿಸಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿ ಸಕ್ರಿಯರಾಗಿದ್ದರು.

ರೈತಪರ ನಿಲುವು ಮತ್ತು ಸರಳ ವ್ಯಕ್ತಿತ್ವ

ಸಚಿವ ಡಿ. ಸುಧಾಕರ್ ಕೇವಲ ಅಧಿಕಾರಕ್ಕಾಗಿ ರಾಜಕಾರಣ ಮಾಡಿದವರಲ್ಲ. ಚಿತ್ರದುರ್ಗ ಜಿಲ್ಲೆಯಲ್ಲಿ ಬರಗಾಲ ಬಂದಾಗ ಹಿರಿಯೂರಿನ ಕೆರೆಗಳ ಸುತ್ತಮುತ್ತ ಸ್ವತಃ ಮೇವು ಬೆಳೆಸಿ ರೈತರ ಜಾನುವಾರುಗಳಿಗೆ ಹಂಚಿದ ಅವರ ಕಾರ್ಯ ಇಂದಿಗೂ ಜನರ ಮನಸ್ಸಿನಲ್ಲಿದೆ. ಚಿತ್ರದುರ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಸಹಕಾರಿ ಕ್ಷೇತ್ರಕ್ಕೂ ದೊಡ್ಡ ಕೊಡುಗೆ ನೀಡಿದ್ದಾರೆ. ಪತ್ನಿ ಹರ್ಷಿಣಿ, ಮಗ ಸುಹಾಸ್ ಹಾಗೂ ಪುತ್ರಿ ಸ್ಫೂರ್ತಿ ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿರುವ ಸುಧಾಕರ್ ಅವರ ರಾಜಕೀಯ ಚತುರತೆ ಮತ್ತು ಜನಸೇವೆ ಜಿಲ್ಲೆಯ ಇತಿಹಾಸದಲ್ಲಿ ಸದಾ ನೆನಪಿನಲ್ಲುಳಿಯಲಿದೆ.

ಇದನ್ನೂ ಓದಿ: ಸಚಿವ ಡಿ. ಸುಧಾಕರ್ ನಿಧನ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಶ್ವ ದಾಖಲೆಗಳನ್ನೇ ಧೂಳೀಪಟ ಮಾಡಿದ ವೈಭವ್ ಸೂರ್ಯವಂಶಿ – Kannada News | Vaibhav Sooryavanshi Creates New World Records

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅಬ್ಬರಿಸುವ ಮೂಲಕ ವೈಭವ್ ಸೂರ್ಯವಂಶಿ (Vaibhav Sooryavanshi ) ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಸಿಕ್ಸರ್​​ಗಳ ಸುರಿಮಳೆಯೊಂದಿಗೆ. ಅಂದರೆ ಸಿಕ್ಸರ್​ ಸಿಡಿಸಿಯೇ ಇದೀಗ ವೈಭವ್ ಸೂರ್ಯವಂಶಿ ಎರಡು ಭರ್ಜರಿ ವರ್ಲ್ಡ್​ ರೆಕಾರ್ಡ್ ನಿರ್ಮಿಸಿದ್ದಾರೆ. (PC: IPL)

Source link

ರಾಜ್ ಬಿ. ಶೆಟ್ಟಿ ನಟನೆಯ ಹಿಂದಿ ಸಿನಿಮಾಗೆ ಸಿಕ್ತು ಸಲ್ಮಾನ್ ಖಾನ್ ಬೆಂಬಲ – Kannada News | Salman Khan shares Bandar Teaser ft Raj B Shetty Bobby Deol directed by Anurag Kashyap

Salman Khan, Raj B. Shetty

ಕನ್ನಡದ ಖ್ಯಾತ ನಟ ರಾಜ್ ಬಿ. ಶೆಟ್ಟಿ (Raj B Shetty) ಅವರು ಈಗ ಬಾಲಿವುಡ್ ಕದ ತಟ್ಟಿದ್ದಾರೆ. ಹಿಂದಿ ಸಿನಿಮಾದಲ್ಲಿ ನಟಿಸುವ ಮೂಲಕ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದಾರೆ. ಅನುರಾಗ್ ಕಶ್ಯಪ್ ನಿರ್ದೇಶನದ ‘ಬಂದರ್’ (Bandar) ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿ ಅವರಿಗೆ ಒಂದು ಪಾತ್ರವಿದೆ. ಈ ಚಿತ್ರದಲ್ಲಿ ಹೀರೋ ಆಗಿ ಬಾಬಿ ಡಿಯೋಲ್ ಅಭಿನಯಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ನಟ ಸಲ್ಮಾನ್ ಖಾನ್ (Salman Khan) ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಟೀಸರ್ ಹಂಚಿಕೊಂಡಿದ್ದಾರೆ. ಆ ಮೂಲಕ ಸಿನಿಮಾ ಮೇಲಿನ ಹೈಪ್ ಹೆಚ್ಚಲು ಕಾರಣರಾಗಿದ್ದಾರೆ.

ದಕ್ಷಿಣ ಭಾರತದಲ್ಲಿ ರಾಜ್ ಬಿ. ಶೆಟ್ಟಿ ಅವರು ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಪಡಿಸಿದ್ದಾರೆ. ಈಗ ಹಿಂದಿ ಪ್ರೇಕ್ಷಕರಿಗೆ ಅವರ ಪ್ರತಿಭೆಯ ದರ್ಶನ ಆಗುವ ಸಮಯ ಬಂದಿದೆ. ‘ಬಂದರ್’ ಟೀಸರ್​ನಲ್ಲಿ ರಾಜ್ ಬಿ. ಶೆಟ್ಟಿ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗ ಆಗಿಲ್ಲ. ಕೇವಲ ಒಂದು ಶಾಟ್​​ನಲ್ಲಿ ಮಾತ್ರ ಅವರು ಕಾಣಿಸಿಕೊಂಡಿದ್ದಾರೆ. ಹಾಗಿದ್ದರೂ ಕೂಡ ಜನರು ಅವರ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ.

ಈ ಸಿನಿಮಾಗೆ ಅನುರಾಗ್ ಕಶ್ಯಪ್ ಅವರು ನಿರ್ದೇಶನ ಮಾಡಿರುವ ಕಾರಣದಿಂದ ನಿರೀಕ್ಷೆ ಜಾಸ್ತಿ ಆಗಿದೆ. ರಾಜ್ ಬಿ. ಶೆಟ್ಟಿ ಬಗ್ಗೆ ಅನುರಾಗ್ ಕಶ್ಯಪ್ ಅವರಿಗೆ ವಿಶೇಷ ಗೌರವ ಇದೆ. ಈ ಮೊದಲು ರಾಜ್ ಬಿ. ಶೆಟ್ಟಿ ನಟನೆಯ ‘ಗರುಡ ಗಮನ ವೃಷಭ ವಾಹನ’ ಸಿನಿಮಾವನ್ನು ನೋಡಿ ಅನುರಾಗ್ ಕಶ್ಯಪ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

‘ಬಂದರ್’ ಸಿನಿಮಾ ಟೀಸರ್​:

ಅನುರಾಗ್ ಕಶ್ಯಪ್ ಹಾಗೂ ರಾಜ್ ಬಿ. ಶೆಟ್ಟಿ ಅವರ ನಡುವೆ ಉತ್ತಮ ಸ್ನೇಹ ಮೂಡಿದೆ. ಆ ಕಾರಣದಿಂದಲೇ ‘ಬಂದರ್’ ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಇದು ಅತಿಥಿ ಪಾತ್ರ ಆಗಿದ್ದರೂ ಕೂಡ ಅವರ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಅದರಲ್ಲೂ ಸಲ್ಮಾನ್ ಖಾನ್ ಅವರು ಟೀಸರ್ ಬಗ್ಗೆ ಪೋಸ್ಟ್ ಮಾಡಿದ ಬಳಿಕ ಹೈಪ್ ಜಾಸ್ತಿ ಆಗಿದೆ.

ಇದನ್ನೂ ಓದಿ: ನಾನು ಇರೋದೇ ಬೋಡ ಕಣೇ: ಬಾಲಕಿ ಜತೆ ರಾಜ್ ಬಿ. ಶೆಟ್ಟಿ ಕ್ಯೂಟ್ ಮಾತುಕಥೆ

ಜೂನ್ 5ರಂದು ‘ಬಂದರ್’ ಸಿನಿಮಾ ಬಿಡುಗಡೆ ಆಗಲಿದೆ. ನಟ ಬಾಬಿ ಡಿಯೋಲ್ ಅವರಿಗೆ ಈ ಸಿನಿಮಾ ಮೂಲಕ ಮತ್ತೊಂದು ಸಕ್ಸಸ್ ಸಿಗುವ ನಿರೀಕ್ಷೆ ಇದೆ. ಅದೇ ರೀತಿ, ರಾಜ್ ಬಿ. ಶೆಟ್ಟಿ ಅವರಿಗೆ ಬಾಲಿವುಡ್​ನಲ್ಲಿ ಜನಪ್ರಿಯತೆ ಹೆಚ್ಚಲಿದೆ ಎಂಬ ಭರವಸೆ ಅವರ ಅಭಿಮಾನಿಗಳಿಗೆ ಇದೆ. ಸದ್ಯಕ್ಕೆ ಈ ಸಿನಿಮಾದ ಟೀಸರ್ ಗಮನ ಸೆಳೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ಬೆಳಗ್ಗೆ ಎದ್ದು ಮನೆ ಮುಂದೆ ನೀರು ಹಾಕುವುದರಿಂದ ಏನೆಲ್ಲಾ ಲಾಭ ಇದೆ ಗೊತ್ತಾ? – Kannada News | The Significance of Sprinkling Water Outside Your Home Each Morning

ಬೆಳಗ್ಗೆ ಎದ್ದು ಮನೆ ಮುಂದೆ ನೀರು ಹಾಕುವುದರಿಂದ ಏನೆಲ್ಲಾ ಲಾಭ ಇದೆ ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ನೀರು ಮಾನವನ ಜೀವ ರಕ್ಷಕವಾಗಿದ್ದು, ಹುಟ್ಟಿದಾಗಿನಿಂದ ಸಾಯುವವರೆಗೂ ಮನುಷ್ಯ ನೀರನ್ನು ಅವಲಂಬಿಸಿರುತ್ತಾನೆ. ಪಂಚಭೂತಗಳಲ್ಲಿ ಪ್ರಮುಖವಾದ ನೀರು, ಶುದ್ಧಿ ಕಾರ್ಯಗಳಲ್ಲಿ ಪ್ರಥಮ ಸ್ಥಾನ ಪಡೆಯುತ್ತದೆ. ಮನೆಯ ಮುಂದೆ ಬೆಳಗಿನ ಜಾವ ನೀರನ್ನು ಚಿಮುಕಿಸುವುದು ಕೇವಲ ಒಂದು ಆಚರಣೆಯಲ್ಲ, ಬದಲಿಗೆ ಆಳವಾದ ಮಹತ್ವವನ್ನು ಹೊಂದಿದೆ.

ವೈಜ್ಞಾನಿಕವಾಗಿ, ನೀರು ಚಿಮುಕಿಸುವುದರಿಂದ ಧೂಳು ನಿವಾರಣೆಯಾಗಿ ಶುದ್ಧ ವಾತಾವರಣ ಸೃಷ್ಟಿಯಾಗುತ್ತದೆ, ತಂಪು ಇರುತ್ತದೆ ಮತ್ತು ಕ್ರಿಮಿಕೀಟಗಳು ದೂರವಾಗುತ್ತವೆ. ಆಧ್ಯಾತ್ಮಿಕವಾಗಿ ಮತ್ತು ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಆಚರಣೆಯು ನಕಾರಾತ್ಮಕ ಶಕ್ತಿಗಳನ್ನು ದೂರಮಾಡಿ, ದುಷ್ಟ ಗ್ರಹಗಳ ಪ್ರಭಾವವನ್ನು ತಡೆಯುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿ, ಅದೃಷ್ಟ ಮತ್ತು ನೆಮ್ಮದಿಯನ್ನು ತರುತ್ತದೆ ಎಂಬ ನಂಬಿಕೆಯಿದೆ. ಮನೆಯ ಸ್ತ್ರೀಯರು ಈ ಕಾರ್ಯವನ್ನು ಮಾಡುವುದರಿಂದ ಕುಟುಂಬಕ್ಕೆ ಶ್ರೇಯಸ್ಸು, ಮನಸ್ಸಿಗೆ ಶಾಂತಿ ದೊರೆಯುತ್ತದೆ. ಇದು ಕೇವಲ ನಂಬಿಕೆಯಲ್ಲ, ನಮ್ಮ ಪರಂಪರೆಯ ಭಾಗವಾಗಿದೆ ಎಂದು ಗುರೂಜಿ ವಿವರಿಸಿದ್ದಾರೆ.

 

 

 

Source link