All posts by nagaraj11081993

PM Modi in Bengaluru Live: ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ನೇರ ಪ್ರಸಾರ – Kannada News | PM Modi Bengaluru Visit LIVE: PM Addresses Public at HAL Airport; To Attend Art of Living Event Today

ಬೆಂಗಳೂರು, ಮೇ 10: ಪ್ರಧಾನಿ ನರೇಂದ್ರ ಮೋದಿ ಅವರು ಆರ್ಟ್ ಆಫ್ ಲಿವಿಂಗ್ ಆಶ್ರಮದ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ 70ನೇ ಜನ್ಮೋತ್ಸವ ಹಾಗೂ ಆಶ್ರಮದ 45ನೇ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಲು ಬೆಂಗಳೂರಿಗೆ ಆಗಮಿಸಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ಮೋದಿ ಹೆಚ್​ಎಎಲ್ ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದು, ನೇರ ಪ್ರಸಾರ ಇಲ್ಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Happy Mother’s Day 2026: ಮಮತೆಯ ಮಡಿಲು, ತ್ಯಾಗದ ಒಡಲು; ಇಲ್ಲಿವೆ ಅಮ್ಮಂದಿರ ದಿನದ ಅರ್ಥಪೂರ್ಣ ಶುಭ ಸಂದೇಶಗಳು – Kannada News | Happy Mother’s Day 2026: Here are some meaningful Mother’s Day messages to wish your mom

ತಾಯಂದಿರ ದಿನದ ಶುಭಾಶಯಗಳುImage Credit source: Getty Images

ಈ ಜಗತ್ತಿನಲ್ಲಿ ತಾಯಿಯ (Mother) ನಿಷ್ಕಲ್ಮಶ ಪ್ರೀತಿ, ತ್ಯಾಗಕ್ಕೆ ಬೆಲೆ ಕಟ್ಟಲಾಗದು. ಆಕೆ ತನ್ನ ಕುಟುಂಬ ಮತ್ತು ಮಕ್ಕಳಿಗಾಗಿ ಎಂತಹ ತ್ಯಾಗಕ್ಕೂ ಬೇಕಾದರೂ ಸಿದ್ಧಳಿರುತ್ತಾಳೆ, ತಾನು ನೋವುಂಡರೂ ತನ್ನ ಮಕ್ಕಳಿಗೆ ಬರೀ ಖುಷಿಯನ್ನೇ ಹಂಚುತ್ತಾಳೆ.  ಅದಕ್ಕಾಗಿಯೇ ತಾಯಿಯನ್ನು ಕಣ್ಣಿಗೆ ಕಾಣುವ ದೇವರು ಎಂದು ಹೇಳುವುದು. ಇಂತಹ ದೈವಸ್ವರೂಪಿ ತಾಯಿಗೆ ಗೌರವವನ್ನು ಸಲ್ಲಿಸಲು ಪ್ರತಿವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ವಿಶ್ವ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಮೇ 10 ಅಂದರೆ ಇಂದು ತಾಯಂದಿರ ದಿನವನ್ನು ಆಚರಿಸಲಾಗುತ್ತಿದ್ದು, ಈ ಶುಭ ಸಂದರ್ಭದಲ್ಲಿ ನಿಮ್ಮ ತಾಯಿಗೆ ಧನ್ಯವಾದ ತಿಳಿಸಲು, ಶುಭಾಶಯವನ್ನು ಕೋರಲು ಬಯಸಿದರೆ, ಇಲ್ಲಿವೆ ನಿಮಗಾಗಿ ಅರ್ಥಪೂರ್ಣ ಶುಭ ಸಂದೇಶಗಳು.

ತಾಯಂದಿರ ದಿನದಂದು ನಿಮ್ಮ ಅಮ್ಮನಿಗೆ ಈ ರೀತಿ ಶುಭಾಶಯ ಕೋರಿ:

  • ಮಮತೆಯ ಮಡಿಲು, ತ್ಯಾಗದ ಒಡಲು ಆಗಿರುವ ದೈವಸ್ವರೂಪಿಯಾದ ಎಲ್ಲಾ ತಾಯಂದಿರಿಗೂ ಮದರ್ಸ್‌ ಡೇ ಶುಭಾಶಯಗಳು.
  • ತಾಯಿ ಪ್ರೀತಿಗಿಂತ ಶ್ರೇಷ್ಠವಾದ ಪ್ರೀತಿಯಿಲ್ಲ, ತಾಯಿಗಿಂತ ದೊಡ್ಡ ದೇವರಿಲ್ಲ. ಎಲ್ಲಾ ತಾಯಂದಿರಿಗೂ ವಿಶ್ವ ತಾಯಂದಿರ ದಿನದ ಶುಭಾಶಯಗಳು.
  • ನನ್ನಿರುವಿಕೆಗೆ ಕಾರಣ ನೀವು, ನನ್ನ ಕನಸುಗಳಿಗೆ ಪ್ರೇರಣೆ ನೀವು, ನಿಮಗೆ ತಾಯಂದಿರ ದಿನದ ಶುಭಾಶಯಗಳು ಅಮ್ಮಾ.
  • ಈ ಜಗತ್ತುನಲ್ಲಿ ಕಣ್ಣಿಗೆ ಕಾಣುವ ದೇವರೆಂದರೆ ಅದು ಅಮ್ಮ… ನನ್ನ ಪಾಲಿನ ಶಕ್ತಿ ದೇವತೆಗೆ ಅಮ್ಮಂದಿರ ದಿನದ ಶುಭಾಶಯಗಳು.
  • ಹ್ಯಾಪಿ ಮದರ್ಸ್‌ ಡೇ, ಕಣ್ಣಿಗೆ ಕಾಣದ ದೇವರಲ್ಲಿ ಭಕ್ತಿ, ನಂಬಿಕೆ ಇಟ್ಟಿರುವಾಗ, ಕಣ್ಣಿಗೆ ಕಾಣುವ ದೇವಯೆ ನೀನು, ನಿನ್ನ ಮೇಲೆ ನನ್ನ ಪ್ರಾಣನೇ ಇಟ್ಟಿರುವೆ ಅಮ್ಮ…
  • ಈ ಪ್ರಪಂಚದಲ್ಲಿ ಒಂದಿಷ್ಟೂ ಸಂದೇಹ ಪಡದೆ ನಂಬಬಹುದಾದ ಜೀವ ಎಂದರೆ ಅದು ನೀವು, ನೀವು ಮಾತ್ರ ಅಮ್ಮಾ… ನಿಮ್ಮ ಪಡೆದ ನಾನೇ ಅದೃಷ್ಟವಂತ. ನನ್ನ ಪಾಲಿನ ಈ ಅದೃಷ್ಟ ದೇವತೆಗೆ ಅಮ್ಮಂದಿರ ದಿನದ ಶುಭಾಶಯಗಳು.
  • ಅತ್ತಾಗ ಕಣ್ಣೀರು ಒರೆಸಿದ ದೇವತೆ, ಬಿದ್ದಾಗ ಎತ್ತಿ ಮುನ್ನಡೆಸಿದ ಮಾತೆ.. ಅಮ್ಮಾ ನಿಮಗೆ ತಾಯಂದಿರ ದಿನದ ಶುಭಾಶಯಗಳು.
  • ಅಮ್ಮನೇ ಅದ್ಭುತ ಪ್ರಪಂಚ. ಅಮ್ಮನ ಪ್ರೀತಿಯೇ ಅಮೃತ, ಎಲ್ಲಾ ಅಮ್ಮಂದಿರಿಗೂ ವಿಶ್ವ ತಾಯಂದಿರ ದಿನದ ಶುಭಾಶಯಗಳು.
  • ನಿಸ್ವಾರ್ಥ ಪ್ರೀತಿ, ನಿರ್ಮಲ ಮನಸ್ಸಿನ ಅಮ್ಮನ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ, ಈ ಜಗತ್ತಿನ ಎಲ್ಲಾ ಅಮ್ಮಂದಿರಿಗೂ ತಾಯಂದಿರ ದಿನದ ಶುಭಾಶಯಗಳು.
  • ಪ್ರೀತಿಯಲ್ಲಿ ಆಗಸ, ತಾಳ್ಮೆಯಲ್ಲಿ ಭೂಮಿ, ಮಮಕಾರದಲ್ಲಿ ಕಡಲು ನೀನು. ಹ್ಯಾಪಿ ಮದರ್ಸ್‌ ಡೇ ಅಮ್ಮ.
  • ಅಮ್ಮಾ… ನನೆ ಬದುಕಿನ ಪಾಠ ಕಲಿಸಿದ ಗುರು ನೀವು, ಸರಿ ದಾರಿ ತೋರಿದ ಬೆಳಕು ನೀವು. ನಿಮಗೆ ಅಮ್ಮಂದಿರ ದಿನದ ಶುಭಾಶಯಗಳು.
  • ದೇವರು ನನಗೆ ಕೊಟ್ಟ ಅತಿ ದೊಡ್ಡ ಕೊಡುಗೆ ನೀವು ಅಮ್ಮಾ… ಹ್ಯಾಪಿ ಮದರ್ಸ್‌ ಡೇ
  • ನೀವು ನನಗೆ ಬದುಕು ನೀಡಿದ್ದೀರಿ. ನಾನೆಂದೂ ನಿಮಗೆ ಋಣಿ, ನನ್ನ ಬದುಕು ರೂಪಿಸಿದ ನಿಮಗೆ ಧನ್ಯವಾದ, ನಿಮಗೆ ಅಮ್ಮಂದಿರ ದಿನದ ಶುಭಾಶಯಗಳು.
  • ಅಮ್ಮಾ.. ನೀವೇ ನನ್ನ ಗುರಿ, ನೀವೇ ನನ್ನ ಸ್ನೇಹಿತೆ, ನೀವೇ ನನ್ನ ಬದುಕಿನ ದಾರಿ, ನಿಮಗೆ ಅಮ್ಮಂದಿರ ದಿನದ ಶುಭಾಶಯಗಳು.
  • ಇದು ನಿಮ್ಮ ದಿನ, ನಿಮ್ಮ ತ್ಯಾಗ, ನಿಷ್ಕಲ್ಮಶ ಪ್ರೀತಿ, ಶ್ರಮಕ್ಕೆ ಗೌರವ ಸಲ್ಲಿಸಲು ಇರುವ ದಿನ. ಎಲ್ಲಾ ತಾಯಂದಿರಿಗೂ ಅಮ್ಮಂದಿರ ದಿನದ ಶುಭಾಶಯಗಳು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Thalapathy Vijay Oath Taking Live: ತಮಿಳುನಾಡಿನ ಸಿಎಂ ಆಗಿ ವಿಜಯ್ ಪ್ರಮಾಣವಚನ ಸ್ವೀಕಾರ ನೇರಪ್ರಸಾರ – Kannada News | Thalapathy Vijay Swearing in Ceremony Live: Actor Vijay Takes Oath as Tamil Nadu CM Today

ಚೆನ್ನೈ, ಮೇ 10: ತಮಿಳು ನಾಡು ರಾಜಕಾರಣದಲ್ಲಿ ಇಂದು ಹೊಸ ಅಧ್ಯಾಯ ಆರಂಭವಾಗಿದೆ. ತಮಿಳಗ ವೆಟ್ರಿ ಕಳಗಂ (TVK) ನಾಯಕ, ಜನಪ್ರಿಯ ನಟ ವಿಜಯ್ (C. ಜೋಸೆಫ್ ವಿಜಯ್) ಅವರು ಇಂದು ಬೆಳಿಗ್ಗೆ 10 ಗಂಟೆಗೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ.

ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ವಿಜಯ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸುತ್ತಿದ್ದಾರೆ. ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ) ಸೇರಿದಂತೆ ವಿವಿಧ ಪಕ್ಷಗಳ ಬೆಂಬಲದೊಂದಿಗೆ 120 ಶಾಸಕರ ಬಲ ಹೊಂದಿರುವ ವಿಜಯ್, 1967ರ ನಂತರ ಡಿಎಂಕೆ ಮತ್ತು ಎಐಎಡಿಎಂಕೆ ಹೊರತಾಗಿ ಅಧಿಕಾರ ಹಿಡಿದ ಮೊದಲ ನಾಯಕ ಎಂಬ ಇತಿಹಾಸ ಬರೆದಿದ್ದಾರೆ. ಈ ಅದ್ಧೂರಿ ಸಮಾರಂಭದ ನೇರಪ್ರಸಾರ ಇಲ್ಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಐಪಿಎಲ್​​ ಬಗ್ಗೆ ಮಾತನಾಡಲು ಎಲ್ಲರಿಗೂ ಭಯ! ಕುಟುಕಿದ ಕುಕ್ – Kannada News | IPL Bosses Silence Critics: Alastair Cook’s Explosive Claim

ಕ್ರಿಕೆಟ್ ಜಗತ್ತಿನ ಅತಿದೊಡ್ಡ ಶ್ರೀಮಂತ ಲೀಗ್ ಐಪಿಎಲ್ (IPL) ಬಗ್ಗೆ ಸಣ್ಣ ಟೀಕೆ ಮಾಡಲು ಕೂಡ ಎಲ್ಲರೂ ಹೆದರುತ್ತಾರೆ! ಹೀಗೆಂದು ಹೇಳಿರುವುದು ಬೇರಾರೂ ಅಲ್ಲ, ಇಂಗ್ಲೆಂಡ್‌ನ ಮಾಜಿ ನಾಯಕ ಸರ್ ಅಲೆಸ್ಟೇರ್ ಕುಕ್. ಯುವ ಆಟಗಾರ ಜೇಕಬ್ ಬೆಥೆಲ್ ವಿಚಾರದಲ್ಲಿ ಕೆವಿನ್ ಪೀಟರ್ಸನ್ ಮತ್ತು ಕುಕ್ ನಡುವೆ ಶುರುವಾದ ಚರ್ಚೆ, ಈಗ ಐಪಿಎಲ್‌ನ ‘ಹಣದ ಬಲ’ ಮತ್ತು ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಕುರಿತಾದ ದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ.

ಜೇಕಬ್ ಬೆಥೆಲ್ ಅವರ ಐಪಿಎಲ್ ಭವಿಷ್ಯದ ಕುರಿತು ಇಂಗ್ಲೆಂಡ್‌ನ ಮಾಜಿ ದಿಗ್ಗಜರಾದ ಅಲೆಸ್ಟೇರ್ ಕುಕ್ ಮತ್ತು ಕೆವಿನ್ ಪೀಟರ್ಸನ್ ನಡುವಿನ ವಾಕ್ಸಮರ ಈಗ ಹೊಸ ರೂಪ ಪಡೆದುಕೊಂಡಿಡ್ದು, ಐಪಿಎಲ್ ಬಗ್ಗೆ ಯಾರೂ ಕೂಡ ಬಹಿರಂಗವಾಗಿ ಕೆಟ್ಟದಾಗಿ ಮಾತನಾಡುವುದಿಲ್ಲ. ಏಕೆಂದರೆ ಅವರಿಗೆ ತಮ್ಮ ‘ಬಾಸ್‌’ಗಳನ್ನು ಎದುರು ಹಾಕಿಕೊಳ್ಳುವ ಧೈರ್ಯವಿಲ್ಲ ಎಂದು ಕುಕ್ ನೇರವಾಗಿ ಹೇಳಿದ್ದಾರೆ.

ವಿವಾದದ ಹಿನ್ನೆಲೆ ಏನು?

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದಲ್ಲಿರುವ ಇಂಗ್ಲೆಂಡ್‌ನ ಯುವ ಆಟಗಾರ ಜೇಕಬ್ ಬೆಥೆಲ್, ಐಪಿಎಲ್‌ನಲ್ಲಿ ಬೆಂಚ್ ಕಾಯುವ ಬದಲು ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಆಡಿದ್ದರೆ ಅವರ ಕೆಂಪು ಚೆಂಡಿನ ಕ್ರಿಕೆಟ್ ಸುಧಾರಿಸುತ್ತಿತ್ತು ಎಂದು ಅಲೆಸ್ಟೇರ್ ಕುಕ್ ಅಭಿಪ್ರಾಯಪಟ್ಟಿದ್ದರು.

ಇದಕ್ಕೆ ಕೆವಿನ್ ಪೀಟರ್ಸನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, “ಕುಕ್ ಅವರಿಗೆ ಐಪಿಎಲ್ ಅನುಭವವೇ ಇಲ್ಲ, ಬೆಥೆಲ್ ವಿಶ್ವದ ಶ್ರೇಷ್ಠ ಆಟಗಾರರೊಂದಿಗೆ ಇರುವುದು ಅವರ ಬೆಳವಣಿಗೆಗೆ ಸಹಕಾರಿ” ಎಂದು ಟೀಕಿಸಿದ್ದರು.

ಕುಕ್ ತಿರುಗೇಟು:

‘ಸ್ಟಿಕ್ ಟು ಕ್ರಿಕೆಟ್’ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಅಲೆಸ್ಟೇರ್ ಕುಕ್, “ಐಪಿಎಲ್ ಒಂದು ಅದ್ಭುತ ಟೂರ್ನಿ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಯಾರೂ ಕೂಡ ಅದರ ಬಗ್ಗೆ ಸಣ್ಣ ಟೀಕೆಯನ್ನೂ ಮಾಡುವುದಿಲ್ಲ. ಏಕೆಂದರೆ ಅಲ್ಲಿ ಹಣದ ಪ್ರಭಾವ ದೊಡ್ಡದಿದೆ. ಟೀಕೆ ಮಾಡಿದರೆ ಮುಂದಿನ ಬಾರಿ ಒಪ್ಪಂದ ಸಿಗುವುದಿಲ್ಲ ಅಥವಾ ತಮ್ಮ ಮಾಲೀಕರು ಅಸಮಾಧಾನಗೊಳ್ಳುತ್ತಾರೆ ಎಂಬ ಭಯ ಎಲ್ಲರಿಗೂ ಇರುತ್ತದೆ,” ಎಂದು ಕುಕ್, ಕೆವಿನ್ ಪೀಟರ್ಸನ್​​ಗೆ ತಿರುಗೇಟು ನೀಡಿದ್ದಾರೆ.

“ಬೆಥೆಲ್ ಕಳೆದ ಎರಡು ಸೀಸನ್‌ಗಳಲ್ಲಿ ಕೇವಲ ಐದು ಪಂದ್ಯಗಳನ್ನು ಆಡಿದ್ದಾರೆ. ಬದಲಿ ಆಟಗಾರನಾಗಿ ಕೇವಲ ಡ್ರೆಸ್ಸಿಂಗ್ ರೂಂನಲ್ಲಿ ಕುಳಿತು ನೋಡುವುದಕ್ಕಿಂತ, ಮೈದಾನಕ್ಕಿಳಿದು ಪಂದ್ಯಗಳನ್ನು ಆಡುವುದು ಒಬ್ಬ ಯುವ ಆಟಗಾರನಿಗೆ ಹೆಚ್ಚು ಮುಖ್ಯ” ಎಂಬುದು ಕುಕ್ ವಾದ.

“ಐಪಿಎಲ್ ಎನ್ನುವುದು ಎಲ್ಲರೂ ಅಂದುಕೊಂಡಿರುವಷ್ಟು ಪರಿಪೂರ್ಣವಾಗಿಲ್ಲ. ಅಲ್ಲಿನ ವ್ಯವಸ್ಥೆಯ ಬಗ್ಗೆ ಮಾತನಾಡಲು ಜನ ಹಿಂಜರಿಯುತ್ತಾರೆ” ಎಂದು ಅಲೆಸ್ಟೇರ್ ಕುಕ್ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: RCB ತಂಡದ ತವರು ಮೈದಾನ ಬದಲಾಗಲು ಇದುವೇ ಕಾರಣ!

ಬೆಥೆಲ್ ಪ್ರತಿಕ್ರಿಯೆ:

ಇಂಗ್ಲೆಂಡ್ ದಿಗ್ಗಜರಿಬ್ಬರ ವಾಕ್ಸಮರ ನಡುವೆ ಖುದ್ದು ಜೇಕಬ್ ಬೆಥೆಲ್ ಕೂಡ ಪ್ರತಿಕ್ರಿಯಿಸಿದ್ದಾರೆ. ಆರ್​ಸಿಬಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬೆಥೆಲ್,  “ಐಪಿಎಲ್‌ನಲ್ಲಿ ಸ್ಟಾರ್ ಆಟಗಾರರೊಂದಿಗೆ ಇರುವುದು ನನ್ನ ವೃತ್ತಿಜೀವನಕ್ಕೆ ಯಾವುದೇ ಹಾನಿ ಮಾಡುವುದಿಲ್ಲ, ಬದಲಾಗಿ ಕಲಿಕೆಗೆ ಸಹಾಯ ಮಾಡುತ್ತದೆ” ಎಂದು  ಹೇಳಿದ್ದಾರೆ.

ಒಟ್ಟಿನಲ್ಲಿ, ಜೇಕಬ್ ಬೆಥೆಲ್ ವಿಚಾರವಾಗಿ ಶುರುವಾದ ಕುಕ್ ಹಾಗೂ ಪೀಟರ್ಸನ್ ನಡುವಣ ಚರ್ಚೆಯು, ಇದೀಗ ಐಪಿಎಲ್‌ನ ವ್ಯವಸ್ಥೆಯ ಮೇಲೆಯೇ ಪ್ರಶ್ನೆ ಎತ್ತುವಂತೆ ಮಾಡಿದೆ. ಅಲೆಸ್ಟೇರ್ ಕುಕ್ ನೀಡಿರುವ ‘ಒಪ್ಪಂದದ ಭಯ’ದ ಕುರಿತಾದ ತೀಕ್ಷ್ಣ ತಿರುಗೇಟಿಗೆ ಕೆವಿನ್ ಪೀಟರ್ಸನ್ ಯಾವ ರೀತಿಯಲ್ಲಿ ಉತ್ತರ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Source link

ಬಾಲಿವುಡ್‌ನಲ್ಲಿ ಲಿಂಗ ತಾರತಮ್ಯ: ಸಂಭಾವನೆ ವಿಚಾರದಲ್ಲಿ ಕೃತಿ ಸನನ್ ಬೇಸರ – Kannada News | Kriti Sanon opens up about gender pay gap and bias in Hindi Film Industry

ಬಾಲಿವುಡ್‌ನಲ್ಲಿ ನಾಯಕ ನಟರಿಗೆ ಸಿಗುವ ಪ್ರಾಮುಖ್ಯತೆ ಮತ್ತು ಸಂಭಾವನೆ ನಾಯಕಿಯರಿಗೆ ಸಿಗುತ್ತಿಲ್ಲ ಎಂಬ ಚರ್ಚೆ ಇಂದು ನಿನ್ನೆಯದಲ್ಲ. ಈಗ ಇದೇ ವಿಷಯವಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೃತಿ ಸನನ್ (Kriti Sanon) ಧ್ವನಿ ಎತ್ತಿದ್ದಾರೆ. ಚಿತ್ರದ ಬಜೆಟ್ ಕಡಿತ ಮಾಡುವ ಸಂದರ್ಭ ಬಂದಾಗ ಮೊದಲು ಕತ್ತರಿ ಬೀಳುವುದು ನಟಿಯರ ಸಂಭಾವನೆಗೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ‘ಜಿಕ್ಯೂ ಇಂಡಿಯಾ’ ಮ್ಯಾಗಜಿನ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಕುರಿತು ಮಾತನಾಡಿದರು.

‘ಚಿತ್ರದ ಬಜೆಟ್‌ನಲ್ಲಿ ಸಿಂಹಪಾಲು ನಾಯಕ ನಟರಿಗೆ ಹೋಗುತ್ತದೆ. ಆದರೆ ನಿರ್ಮಾಪಕರು ಎಲ್ಲಾದರೂ ಹಣ ಉಳಿಸಬೇಕು ಎಂದುಕೊಂಡರೆ, ಅವರು ಮೊದಲು ಸಂಧಾನ ಮಾಡುವುದು ನಾಯಕಿಯರ ಸಂಭಾವನೆಯಲ್ಲಿ’ ಎಂದು ಕೃತಿ ಸನನ್ ಅವರು ನೇರವಾಗಿ ಹೇಳಿದ್ದಾರೆ. ಈ ಮೊದಲು ಅನೇಕ ನಟಿಯರು ಕೂಡ ಈ ಬಗ್ಗೆ ಧ್ವನಿ ಎತ್ತಿದ್ದರು.

ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡ ಕೃತಿ ಸನನ್, ‘ಚಿತ್ರರಂಗದಲ್ಲಿ ಪುರುಷ ಪ್ರಧಾನ ವ್ಯವಸ್ಥೆ ಇನ್ನೂ ಆಳವಾಗಿ ಬೇರೂರಿದೆ. ನನ್ನ ಸಹನಟ ನನಗಿಂತ ಸೀನಿಯರ್ ಕೂಡ ಆಗಿರಲಿಲ್ಲ. ಆತ ನನಗಿಂತ ಉತ್ತಮವಾದ ಕಾರನ್ನು ಹೊಂದಿದ್ದ ದಿನಗಳು ನನಗೆ ನೆನಪಿವೆ. ಇಲ್ಲಿ ವಿಷಯ ಕಾರಿನದ್ದಲ್ಲ, ಬದಲಿಗೆ ಸಮಾನ ಗೌರವ ನೀಡುವ ಮನಸ್ಥಿತಿಯದ್ದು’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಟಿಯರನ್ನು ಹೇರ್ ಮತ್ತು ಮೇಕಪ್‌ಗಾಗಿ ನಟರಿಗಿಂತ ಮೊದಲೇ ಸೆಟ್‌ಗೆ ಕರೆಯಲಾಗುತ್ತದೆ. ಆದರೆ ನಟರು ಬಂದ ಮೇಲೆಯೇ ಚಿತ್ರೀಕರಣ ಆರಂಭವಾಗುತ್ತದೆ. ನಟರು ಕಾಯಬಾರದು ಎಂಬ ಕಾರಣಕ್ಕೆ ನಟಿಯರನ್ನು ಮೊದಲೇ ಕರೆಸಿ ಕಾಯಿಸಲಾಗುತ್ತದೆ. ಇಂತಹ ಸಣ್ಣ ಪುಟ್ಟ ವಿಷಯಗಳಲ್ಲೂ ಲಿಂಗ ತಾರತಮ್ಯ ಎದ್ದು ಕಾಣುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಧೋನಿ ಆಪ್ತನ ಜೊತೆ ಸುತ್ತಾಡುತ್ತಿರುವ ಪರಮ ಸುಂದರಿ ಕೃತಿ ಸನನ್

ಸದ್ಯ ಕೃತಿ ಸನನ್ ತಮ್ಮದೇ ಆದ ಸ್ಕಿನ್ ಕೇರ್ ಬ್ರಾಂಡ್ ಮತ್ತು ನಿರ್ಮಾಣ ಸಂಸ್ಥೆಯ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಅಭಿಮಾನಿಗಳು ಅವರ ‘ಕಾಕ್‌ಟೇಲ್ 2’ ಸಿನಿಮಾಗಾಗಿ ಕಾಯುತ್ತಿದ್ದಾರೆ. ಹೋಮಿ ಅದಾಜಾನಿಯಾ ನಿರ್ದೇಶನದ ಈ ಚಿತ್ರದಲ್ಲಿ ಶಾಹಿದ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಕೂಡ ನಟಿಸುತ್ತಿದ್ದಾರೆ. ಈ ಸಿನಿಮಾ ಜೂನ್ 19ರಂದು ತೆರೆಗೆ ಬರಲು ಸಜ್ಜಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Viral Video: ಸಾವಿನಂತಹ ಅಲೆಗಳ ಮಧ್ಯೆ ನೈಲ್ ನದಿಯಲ್ಲಿ ಈಜುತ್ತಿರುವ ವ್ಯಕ್ತಿಯ ಭಯಾನಕ ವಿಡಿಯೋ ವೈರಲ್ – Kannada News | Viral Video Horrifying video of man swimming in Nile River amidst death like waves goes viral

ಬೆಂಗಳೂರು (ಮೇ. 10): ಉಗಾಂಡಾದ ನೈಲ್ ನದಿಯಲ್ಲಿ ತೆಗೆದ ಒಂದು ವಿಡಿಯೋ (Viral Video) ಈಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ. ಭಯ ಹುಟ್ಟಿಸುವಷ್ಟು ವೇಗವಾಗಿ ಹರಿಯುವ ನದಿಯಲ್ಲಿ, ಒಬ್ಬ ವ್ಯಕ್ತಿ ಯಾವುದೇ ಭಯವಿಲ್ಲದೆ, ಬಗುತ್ತ ಈಜುತ್ತಿರುವ ದೃಶ್ಯ ಜನರನ್ನು ಅಚ್ಚರಿಗೊಳಿಸಿದೆ. ನದಿಯ ಅಲೆಗಳು ನೋಡಲೇ ಭಯಾನಕವಾಗಿದೆ. ಆದರೆ ವಿಡಿಯೋದಲ್ಲಿರುವ ವ್ಯಕ್ತಿ ಮಾತ್ರ ಯಾವುದೇ ಆತಂಕವಿಲ್ಲದೆ, ನದಿಯಲ್ಲಿ ಈಜುವಂತೆ ಆರಾಮವಾಗಿ ನೀರಿನಲ್ಲಿ ತೇಲುವುದು ಕಾಣಬಹುದು. ಇದೇ ಕಾರಣಕ್ಕೆ ಈ ದೃಶ್ಯ ನೆಟ್ಟಿಗರ ಗಮನ ಸೆಳೆದಿದೆ.

ಈ ವಿಡಿಯೋವನ್ನು @travel_sentas ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಪೋಸ್ಟ್ ಆದ ಕೆಲವೇ ಸಮಯದಲ್ಲಿ ಇದು ವೈರಲ್ ಆಗಿ, ಲಕ್ಷಾಂತರ ಮಂದಿ ನೋಡಿದ್ದಾರೆ. ‘‘ಇಷ್ಟು ಅಪಾಯಕಾರಿ ಪ್ರವಾಹದಲ್ಲಿ ಯಾರಾದರೂ ಹೀಗೆ ಶಾಂತವಾಗಿ ಇರೋದು ಹೇಗೆ ಸಾಧ್ಯ?’’ ಎಂದು ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ವಿಡಿಯೋವನ್ನು ಸೂಕ್ಷ್ಮವಾಗಿ ನೋಡಿದರೆ, ನದಿಯ ಹರಿವು ಎಷ್ಟು ಭಯಾನಕವಾಗಿದೆಯೆಂಬುದು ಗೊತ್ತಾಗುತ್ತದೆ. ನೀರು ಬಹಳ ವೇಗವಾಗಿ ಹರಿಯುತ್ತಿರುವುದರಿಂದ, ಸಣ್ಣ ತಪ್ಪು ಕೂಡ ಇಲ್ಲಿ ದೊಡ್ಡ ಅಪಾಯಕ್ಕೆ ಕಾರಣವಾಗಬಹುದು. ಆದರೂ ಆ ವ್ಯಕ್ತಿಯ ಮುಖದಲ್ಲಿ ಭಯವೇ ಇಲ್ಲದಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

Viral Video: ಮಾನವೀಯತೆ ಅಂದ್ರೆ ಇದು: ಸುಡುವ ಬಿಸಿಲಿನಿಂದ ರಕ್ಷಿಸಲು ತನ್ನ ಅಂಗಡಿಯೊಳಗೆ ಬೀದಿ ನಾಯಿಗಳಿಗೆ ಆಶ್ರಯ ನೀಡಿದ ವ್ಯಕ್ತಿ

ಆದರೆ ಈ ಘಟನೆಯ ಹಿನ್ನಲೆ ತಿಳಿದುಕೊಳ್ಳುವುದು ಮುಖ್ಯ. ವರದಿಗಳ ಪ್ರಕಾರ, ಉಗಾಂಡಾದ ಕೆಲವು ಸ್ಥಳೀಯರು ಬಾಲ್ಯದಿಂದಲೇ ಇಂತಹ ಪ್ರವಾಹಗಳಲ್ಲಿ ಬದುಕುತ್ತಾ ಬೆಳೆದಿದ್ದಾರೆ. ಅವರಿಗೆ ನದಿಯ ಸ್ವಭಾವ, ಆಳ, ಅಪಾಯಕಾರಿ ಭಾಗಗಳ ಬಗ್ಗೆ ಚೆನ್ನಾಗಿ ತಿಳಿದಿದೆ. ಹಲವು ವರ್ಷಗಳ ಅನುಭವದ ನಂತರವೇ ಅವರು ಇಂತಹ ಸಾಹಸಗಳನ್ನು ಮಾಡುತ್ತಾರೆ.

ಈ ವಿಡಿಯೋಗೆ ಸಾಮಾಜಿಕ ಮಾಧ್ಯಮದಲ್ಲಿ ವಿಭಿನ್ನ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಇದನ್ನು ಅದ್ಭುತ ದೃಶ್ಯ ಎಂದು ಹೊಗಳಿದರೆ, ಇನ್ನೂ ಕೆಲವರು ಇದು ಎಡಿಟ್ ಅಥವಾ AI ಆಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು ಇವನಿಗೆ ಭಯವೇ ಇಲ್ಲ ಎಂದು ತಮಾಷೆ ಮಾಡಿದ್ದಾರೆ. ಒಟ್ಟಿನಲ್ಲಿ, ಈ ವಿಡಿಯೋ ಸಾಹಸ, ಧೈರ್ಯದ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಗಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:27 am, Sun, 10 May 26

Source link

Shubman Gill: ಕೊಹ್ಲಿ-ರೋಹಿತ್-ಎಬಿಡಿಗೂ ಸಾಧ್ಯವಾಗದ ಸಾಧನೆ: ಐಪಿಎಲ್​ನಲ್ಲಿ ಶುಭ್​ಮನ್ ಗಿಲ್ ನೂತನ ದಾಖಲೆ – Kannada News | Shubman Gill equals IPL record with 7 consecutive 400+ run season

ಬೆಂಗಳೂರು (ಮೇ. 10): ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್​ಮನ್ ಗಿಲ್ (Shubman Gill) ಈ ಬಾರಿ ಐಪಿಎಲ್ 2026ರಲ್ಲಿ ಬೊಂಬಾಟ್ ಫಾರ್ಮ್‌ನಲ್ಲಿ ಇದ್ದಾರೆ. ಅವರ ಬ್ಯಾಟಿಂಗ್ ಈ ಸೀಸನ್‌ನಲ್ಲಿ ಭರ್ಜರಿ ರನ್ ಕಲೆಹಾಕುತ್ತಿದೆ. ಐಪಿಎಲ್ 2026ರ 52ನೇ ಪಂದ್ಯ ಜೈಪುರದ ಸವಾಯ್ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಗಿಲ್ ಅದ್ಭುತ ಇನ್ನಿಂಗ್ಸ್ ಆಡಿದರು. ಕೇವಲ 44 ಎಸೆತಗಳಲ್ಲಿ 84 ರನ್ ಗಳಿಸಿದ ಅವರು ತಂಡವನ್ನು ಭರ್ಜರಿ ಗೆಲುವಿನತ್ತ ಕೊಂಡೊಯ್ದರು. ಅಂತಿಮವಾಗಿ ಗುಜರಾತ್ ಟೈಟಾನ್ಸ್ 77 ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸಿತು.

ಈ ಇನ್ನಿಂಗ್ಸ್‌ನೊಂದಿಗೆ ಗಿಲ್ ಈ ಸೀಸನ್‌ನಲ್ಲಿ 10 ಪಂದ್ಯಗಳಲ್ಲಿ ಒಟ್ಟು 462 ರನ್ ಗಳಿಸಿದ್ದಾರೆ. ಈ ಸಾಧನೆಯ ಮೂಲಕ ಗಿಲ್ ಒಂದು ವಿಶೇಷ ದಾಖಲೆಯ ಕ್ಲಬ್‌ಗೆ ಸೇರಿದ್ದಾರೆ. ಐಪಿಎಲ್‌ನಲ್ಲಿ ಸತತ 7 ಸೀಸನ್‌ಗಳಲ್ಲಿ 400+ ರನ್ ಗಳಿಸಿದ ಮೂರನೇ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಈ ಸಾಧನೆ ಇದುವರೆಗೆ ಕೇವಲ ಸುರೇಶ್ ರೈನಾ ಮತ್ತು ಶಿಖರ್ ಧವನ್ ಮಾತ್ರ ಸಾಧಿಸಿದ್ದರು.

ಸುರೇಶ್ ರೈನಾ: 2008ರಿಂದ 2014ರವರೆಗೆ ಚೆನ್ನೈ ಸೂಪರ್ ಕಿಂಗ್ಸ್ ಪರ ನಿರಂತರವಾಗಿ 7 ಸೀಸನ್‌ಗಳಲ್ಲಿ 400+ ರನ್ ಗಳಿಸಿದ್ದರು.

ಶಿಖರ್ ಧವನ್: 2016ರಿಂದ 2022ರವರೆಗೆ ವಿವಿಧ ತಂಡಗಳ ಪರ ಧವನ್ ಇದೇ ಸಾಧನೆ ಮಾಡಿದ್ದಾರೆ.

ಇದೀಗ ಶುಭ್​ಮನ್ ಗಿಲ್ ಕೂಡ ಈ ಎಲೈಟ್ ಪಟ್ಟಿಯಲ್ಲಿ ತಮ್ಮ ಸ್ಥಾನ ಪಡೆದುಕೊಂಡಿದ್ದಾರೆ.

RR vs GT, IPL 2026: ಬೌಲಿಂಗ್‌ನಲ್ಲಿ ಫ್ಲಾಪ್ ಆದ ಜೋಫ್ರಾ ಆರ್ಚರ್: ಸೋಲಿನ ಬಳಿಕ ನಾಯಕ ಯಶಸ್ವಿ ಜೈಸ್ವಾಲ್ ಏನು ಹೇಳಿದ್ರು

ಗಿಲ್ 2022ರಿಂದ ಗುಜರಾತ್ ಟೈಟಾನ್ಸ್ ತಂಡದ ಭಾಗವಾಗಿದ್ದಾರೆ. ಅದಕ್ಕೂ ಮೊದಲು 2020 ಮತ್ತು 2021ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಉತ್ತಮ ಪ್ರದರ್ಶನ ನೀಡಿದ್ದರು.

ಇನ್ನೊಂದು ಕಡೆ, ಒಂದೇ ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಇನ್ನೂ ವಿರಾಟ್ ಕೊಹ್ಲಿ ಹೆಸರಲ್ಲೇ ಇದೆ. 2016ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ ಕೊಹ್ಲಿ 16 ಪಂದ್ಯಗಳಲ್ಲಿ 973 ರನ್ ಗಳಿಸಿದ್ದರು. ಈ ದಾಖಲೆಯನ್ನು ಇನ್ನೂ ಯಾರೂ ಮುರಿಯಲಿಲ್ಲ. ಹಾಗೇ, ಕೊಹ್ಲಿ ಒಂದೇ ಸೀಸನ್‌ನಲ್ಲಿ 400+ ರನ್ ಗಳಿಸಿರುವುದು ಒಟ್ಟು 11 ಬಾರಿ ಇದು ಇನ್ನೂ ಅಪ್ರತಿಮ ಸಾಧನೆ ಆಗಿದೆ. ಇದರ ನಡುವೆ, ಸತತ ಸೀಸನ್‌ಗಳಲ್ಲಿ 400+ ರನ್ ಗಳಿಸುವ ಸಾಧನೆಯಲ್ಲಿ ಗಿಲ್ ಈಗ ಎಬಿಡಿ ವಿಲಿಯರ್ಸ್ ಅವರನ್ನು ಹಿಂದಿಕ್ಕಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಧ್ಯಪ್ರಾಚ್ಯ ಯುದ್ಧದ ಬಿಸಿ: ಹೋಟೆಲ್, ಆಟೋ ಗ್ಯಾಸ್ ಅಷ್ಟೇ ಅಲ್ಲ ಈಗ ಮದುವೆ ಕೂಡ ದುಬಾರಿ! – Kannada News | Middle East Crisis Impact: Wedding Costs Surge by 30 Peercent in Karnataka; Imported Decor and Food Become Expensive

ಬೆಂಗಳೂರು, ಮೇ 10: ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನ ಪರಿಸ್ಥಿತಿಯು ಕೇವಲ ಪೆಟ್ರೋಲ್, ಡೀಸೆಲ್ ಅಥವಾ ಗ್ಯಾಸ್ ಬೆಲೆಗಳ ಮೇಲೆ ಮಾತ್ರವಲ್ಲದೆ, ಸಾಮಾನ್ಯ ಜನರ ಜೀವನದ ಅವಿಭಾಜ್ಯ ಅಂಗವಾದ ಮದುವೆ (Marriages) ಸಮಾರಂಭಗಳಿಗೂ ಭಾರಿ ಹೊಡೆತ ನೀಡಿದೆ. ಯುದ್ಧದ ಹಿನ್ನೆಲೆಯಲ್ಲಿ ಅಲಂಕಾರಿಕ ವಸ್ತುಗಳು ಮತ್ತು ಕಚ್ಚಾ ಪದಾರ್ಥಗಳ ಆಮದು ಕುಂಠಿತಗೊಂಡಿದ್ದು, ಬೆಂಗಳೂರಿನಲ್ಲಿ ಈ ಬಾರಿ ಮದುವೆಯ ಸೀಸನ್ ಅಧ್ವಾನಗೊಂಡಿದೆ. ಮದುವೆ ಸಂಘಟಕರ ವ್ಯವಹಾರದಲ್ಲಿ ಭಾರಿ ಏರಿಳಿತಗಳು ಕಂಡುಬರುತ್ತಿದ್ದು, ಬೆಲೆ ಏರಿಕೆಯ ಕಾರಣದಿಂದಾಗಿ ‘ಅದ್ದೂರಿ ಮದುವೆ’ಗಳು ಈಗ ಸರಳವಾಗುತ್ತಿವೆ ಎಂದು ವರದಿಯಾಗಿದೆ.

ಮುಖ್ಯಾಂಶಗಳು

  • ಆಮದು ಸಾಮಗ್ರಿಗಳ ಕೊರತೆಯಿಂದಾಗಿ ಮದುವೆ ವೆಚ್ಚದಲ್ಲಿ ಶೇ 30 ರಷ್ಟು ಹೆಚ್ಚಳ.
  • ಬೆಲೆ ಏರಿಕೆ ಬಿಸಿಯಿಂದಾಗಿ ಅತಿಥಿಗಳ ಪಟ್ಟಿ ಮತ್ತು ಕಾರ್ಯಕ್ರಮಗಳ ಸಂಖ್ಯೆಯಲ್ಲಿ ಕಡಿತ.
  • ಆಹಾರದ ಮೆನು ಉಳಿಸಿಕೊಳ್ಳಲು ಅಲಂಕಾರ ಮತ್ತು ಇತರೆ ವೆಚ್ಚಗಳಿಗೆ ಕತ್ತರಿ.

ಬಜೆಟ್ ಮೀರಿದ ಮದುವೆ ವೆಚ್ಚ

ಯುದ್ಧ ಮತ್ತು ಅಂತರಾಷ್ಟ್ರೀಯ ಬಿಕ್ಕಟ್ಟಿನಿಂದಾಗಿ ಮದುವೆಯ ಬಜೆಟ್ ಶೇ 30 ರಿಂದ 40 ರಷ್ಟು ಏರಿಕೆಯಾಗಿದೆ ಎಂದು ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಗಳು ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ತಿಳಿಸಿದೆ. ಒಂದು ವರ್ಷದ ಹಿಂದೆಯೇ ಮದುವೆ ಯೋಜನೆ ರೂಪಿಸಿದ್ದರೂ, ಪ್ರಸ್ತುತ ವಸ್ತುಗಳ ಬೆಲೆ ಹೆಚ್ಚಾಗಿರುವುದರಿಂದ ಅನಿವಾರ್ಯವಾಗಿ ಕಾರ್ಯಕ್ರಮಗಳನ್ನು ಕಡಿತಗೊಳಿಸಲಾಗುತ್ತಿದೆ. ವಿದೇಶಿ ಹೂವುಗಳು ಮತ್ತು ಅಲಂಕಾರಿಕ ವಸ್ತುಗಳ ಲಭ್ಯತೆ ಕಡಿಮೆಯಾಗಿದ್ದು, ಐಷಾರಾಮಿ ಮದುವೆಗಳ ಸಂದರ್ಭದಲ್ಲೂ ಜನರು ಅನಿವಾರ್ಯವಾಗಿ ಸ್ಥಳೀಯ ವಸ್ತುಗಳ ಮೊರೆ ಹೋಗಬೇಕಾಗಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಉಲ್ಲೇಖಿಸಿದೆ.

ಆಹಾರದ ಮೇಲೆ ಹೆಚ್ಚಿನ ಪ್ರಭಾವ

ಭಾರತೀಯ ಮದುವೆಗಳಲ್ಲಿ ಊಟಕ್ಕೆ ಅತಿ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ. ಗ್ಯಾಸ್ ಮತ್ತು ದಿನಸಿ ಪದಾರ್ಥಗಳ ಬೆಲೆ ಏರಿಕೆಯಾದರೂ, ಜನರು ಆಹಾರದ ಮೆನು ಬದಲಿಸಲು ಇಷ್ಟಪಡುತ್ತಿಲ್ಲ. ಬದಲಾಗಿ, ಹೋಟೆಲ್‌ಗಳು ಮತ್ತು ಕ್ಯಾಟರಿಂಗ್ ಸಂಸ್ಥೆಗಳು ಅಡುಗೆಗಾಗಿ ಅತಿ ಹೆಚ್ಚು ಗ್ಯಾಸ್ ಬಳಸುವ ಪದಾರ್ಥಗಳ ಬದಲಿಗೆ ಪರ್ಯಾಯ ವ್ಯವಸ್ಥೆಗಳನ್ನು ಹುಡುಕುತ್ತಿವೆ. ಕಾರ್ಮಿಕರ ಕೊರತೆಯೂ ಮದುವೆ ಉದ್ಯಮಕ್ಕೆ ದೊಡ್ಡ ಸವಾಲಾಗಿ ಪರಿಣಾಮ ಬೀರಿದೆ.

ಚಳಿಗಾಲದ ಮದುವೆಗಳಿಗೆ ಭೀತಿ

ಸದ್ಯಕ್ಕೆ ಮಾರುಕಟ್ಟೆಯಲ್ಲಿ ಹಳೆಯ ಸ್ಟಾಕ್ ಇರುವುದರಿಂದ ಬೆಲೆಗಳು ಸ್ವಲ್ಪ ಮಟ್ಟಿಗೆ ನಿಯಂತ್ರಣದಲ್ಲಿವೆ. ಆದರೆ, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಹೀಗೆಯೇ ಮುಂದುವರಿದು ಆಮದು ಸ್ಥಗಿತಗೊಂಡರೆ, ಬರುವ ಚಳಿಗಾಲದ ಮದುವೆ ಸೀಸನ್ ವೇಳೆ ಬೆಲೆಗಳು ಇನ್ನೂ ಗಗನಕ್ಕೇರಲಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಒಟ್ಟಿನಲ್ಲಿ ಯುದ್ಧದ ಪರಿಣಾಮವು ಮದುವೆ ಮನೆಯ ಸಂಭ್ರಮದ ಮೇಲೆ ಆರ್ಥಿಕ ಹೊರೆಯಾಗಿ ಪರಿಣಮಿಸಿರುವುದಂತೂ ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಚಿವ ಸುಧಾಕರ್ ಅಂತ್ಯ ಸಂಸ್ಕಾರಕ್ಕೆ ಚಳ್ಳಕೆರೆಯಲ್ಲಿ ಸಿದ್ಧತೆ – Kannada News | Challakere Prepares for D. Sudhakars Final Rites and Public Viewing

ಚಿತ್ರದುರ್ಗ, ಮೇ 10: ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿದ್ದ ಡಿ. ಸುಧಾಕರ್ (65) ನಿಧನರಾಗಿದ್ದಾರೆ. ಅವರ ನಿಧನಕ್ಕೆ ವಿವಿಧ ಗಣ್ಯರು ಮತ್ತು ಸಾರ್ವಜನಿಕರು ಸಂತಾಪ ಸೂಚಿಸಿದ್ದಾರೆ. ಡಿ. ಸುಧಾಕರ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿರುವ ಡಿ. ಸುಧಾಕರ್ ಸ್ಟೇಡಿಯಂನಲ್ಲಿ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ಸಾರ್ವಜನಿಕರು ಮತ್ತು ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗೆ ಅಂತಿಮ ನಮನ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಂತಿಮ ದರ್ಶನದ ಬಳಿಕ, ಡಿ. ಸುಧಾಕರ್ ಅವರ ಅಂತ್ಯ ಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಲು ವ್ಯವಸ್ಥೆ ಮಾಡಲಾಗಿದೆ. ಚಳ್ಳಕೆರೆಯಲ್ಲಿರುವ ಸುಧಾಕರ್ ಶಟಲ್ ಕಾಕ್ ಕೋರ್ಟ್‌ನಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆಗಳು ನಡೆಯುತ್ತಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB ತಂಡದ ತವರು ಮೈದಾನ ಬದಲಾಗಲು ಇದುವೇ ಕಾರಣ!

Source link