All posts by nagaraj11081993

ಬೆಂಗಳೂರಿನಲ್ಲಿ ರೌಡಿಶೀಟರ್ ಭೀಕರ ಹತ್ಯೆ, ಹೆತ್ತ ತಾಯಿಯ ಎದುರೇ ಕೊಚ್ಚಿ ಹಾಕಿದ್ರು! – Kannada News | Bengaluru rowdy sheeter pavan kumar brutal murder in front of his mother at thanisandra

ಬೆಂಗಳೂರು, (ಫೆಬ್ರವರಿ 26): ರೌಡಿಶೀಟರ್ ಪವನ್ ಕುಮಾರ್‌ನನ್ನು (Rowdy sheeter Pawan Kumar)  ಆತನ ತಾಯಿಯ ಕಣ್ಣೆದುರೇ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು (Bengaluru) ನಗರದ ಥಣಿಸಂದ್ರ ವ್ಯಾಪ್ತಿಯ ಅಮರಜ್ಯೋತಿ ಲೇಔಟ್‌ನಲ್ಲಿ ನಡೆದಿದೆ. ಡಿಜೆ ಹಳ್ಳಿಯ ಕಪಿಲ್ ಕೊಲೆಯಲ್ಲಿ ಭಾಗಿಯಾಗಿದ್ದ ಪವನ್ ಕುಮಾರ್ ಎನ್ನುವಾತನನ್ನೇ ಆತನ ತಾಯಿ ಎದುರೇ ಬರ್ಬರವಾಗಿ ಕೊಲೆ ಮಾಡಲಾಗಿದೆ. ಮೂರು ವರ್ಷಗಳ ಹಿಂದಿನ ಕಪಿಲ ಎಂಬಾತನ ಕೊಲೆಗೆ ಸೇಡಿಗಾಗಿ ನಡೆದ ರಿವೇಂಜ್ ಮರ್ಡರ್ ಎಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೂರು ಬೈಕ್‌ಗಳಲ್ಲಿ ಹೆಲ್ಮೆಟ್ ಧರಿಸಿಕೊಂಡು ಬಂದಿದ್ದ ಆರು ಮಂದಿ ದುಷ್ಕರ್ಮಿಗಳು, ಪವನ್ ಕುಮಾರ್ ಮನೆ ಬಳಿ ದಾಳಿ ನಡೆಸಿದ್ದಾರೆ. ಪವನ್ ಮನೆಗೆ ಬಂದು ನಿಂತ ಕ್ಷಣದಲ್ಲೇ, ಆತನ ಹೆತ್ತ ತಾಯಿಯ ಕಣ್ಣೆದುರಿನಲ್ಲೇ ಮಾರಕಾಸ್ತ್ರಗಳಿಂದ ಮನಬಂದತೆ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಇನ್ನು ಹೆತ್ತ ಮಗನನ್ನು ರಕ್ಷಿಸಲು ತಾಯಿ ಮುಂದಾಗಿದ್ದರೂ ಪ್ರಯೋಜನವಾಗಲಿಲ್ಲ.

ಇದನ್ನೂ ಓದಿ: ಅನೈತಿಕ ಸಂಬಂಧ ಗುಟ್ಟು ರಟ್ಟು: ಒಂದೇ ಅವಾಜ್​​​ಗೆ ಯುವಕ ದುರಂತ ಸಾವು, ಆಗಿದ್ದೇನು?

ರಿವೇಂಜ್ ಗೆ ನಡೀತಾ ಪವನ್ ಮರ್ಡರ್?

ಕಳೆದ ಮೂರು ವರ್ಷದ ಹಿಂದೆ ಡಿಜೆ ಹಳ್ಳಿಯ ಕಪಿಲ ಎಂಬಾತನ ಕೊಲೆ ನಡೆದಿತ್ತು. ಜುಲೈ 11 ,2023 ರಲ್ಲಿ ಕಪಿಲ ಎಂಬಾತನನ್ನು ಡಿಜೆ ಹಳ್ಳಿ ಬಳಿ ಹತ್ಯೆಯಾಗಿತ್ತು. ಅದೇ ಕೇಸ್ ನಲ್ಲಿ ಮೃತ ಪವನ್ ಕುಮಾರ್ A5 ಆರೋಪಿ ಆಗಿದ್ದ. ಕಪಿಲನ ಕೊಲೆ ಮಾಡಿದಾಗಲೂ ಮುಖ ತೋರಿಸದೆ ಹೆಲ್ಮೆಟ್ ಹಾಕಿಕೊಂಡು ಬಂದು 6 ಜನ ಕೊಚ್ಚಿ ಕೊಲೆ ಮಾಡಿದ್ದರು.ಅದೇ ಮಾದರಿಯಲ್ಲಿ ಬಂದು ಪವನ್ ಕುಮಾರ್ ಕೊಚ್ಚಿ ಕೊಲೆ ಮಾಡಲಾಗಿದೆ. ಕಪಿಲನ ತಮ್ಮ ಪ್ರೇಮ್ ಸೇರಿದಂತೆ ಹಲವರ ಮೇಲೆ ಅನುಮಾನವಿದ್ದು,ಪ್ರೇಮ್ ಫಾಲೋ ಮಾಡ್ತಿದ್ದಾನೆ ಎಂದು ತಾಯಿ ಬಳಿ ಪವನ್ ಹೇಳಿಕೊಂಡಿದ್ದ. ಹೀಗಾಗಿ ರಿವೆಂಜ್ ಗಾಗಿ ಅದೇ ಮಾದರಿಯಲ್ಲಿ ಪವನ್ ಕುಮಾರ್ ಕೊಲೆ ನಡೆಯಿತಾ ಎಂಬ ಅನುಮಾನ ಬಲವಾಗಿದೆ.

ಈಶಾನ್ಯ ವಿಭಾಗದ ಡಿಸಿಪಿ ಹೇಳಿದ್ದೇನು?


ಇನ್ನು ಪವನ್ ಹತ್ಯೆ ಪ್ರಕರಣದ ಬಗ್ಗೆ ಈಶಾನ್ಯ ವಿಭಾಗದ ಡಿಸಿಪಿ ಮಿಥುನ್ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಪವನ್ ಎಂಬಾತನನ್ನ ಆತನ ಮನೆಗೆ ಬರುವಾಗ ಫಾಲೋ ಮಾಡಿದ್ದಾರೆ. ಒಟ್ಟು ಐದು ಜನ ಫಾಲೋ ಮಾಡ್ಕೊಂಡು ಬಂದಿದ್ದರು. ಮನೆ ಬಳಿ ಆತ ಗಾಡಿ ನಿಲ್ಲಿಸುತ್ತಿದ್ದಂತೆಯೇ ಹಿಂದೆಯಿಂದ ಅಟ್ಯಾಕ್ ಮಾಡಿದ್ದಾರೆ. ಕೊಲೆ ಮಾಡಿದವರ ಗುರುತು ಪತ್ತೆ ಮಾಡಲಾಗಿದೆ. ಹಳೇ ದ್ವೇಷಕ್ಕೆ ಕೊಲೆ ಆಗಿದೆ ಎಂದು ಈಗಲೇ ಹೇಳೋದು ಸರಿಯಲ್ಲ. ಆರೋಪಿಗೆ ಅಪರಾಧ ಹಿನ್ನೆಲೆ ಇತ್ತು. ಸದ್ಯ ಆರೋಪಿಗಳನ್ನ ಹುಡುಕುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ವರದಿ: ಪ್ರದೀಪ್ ಚಿಕ್ಕಾಟೆ, ಟಿವಿ9 ಬೆಂಗಳೂರು.

Source link

ಬಹಳ ಹಿಂದೆಯೇ ನಿವೃತ್ತಿಯ ಮನಸ್ಸು ಮಾಡಿದ್ದರು ಅಣ್ಣಾವ್ರು ಆದರೆ ಸಾಧ್ಯವಾಗಲಿಲ್ಲ – Kannada News | Dr Rajkumar thought about retirement but it did not happen

ಐದು ದಶಕಗಳ ಕಾಲ ಬೆಳ್ಳಿ ಪರದೆಯ ಮೇಲೆ ರಾರಾಜಿಸಿದ, ಈಗಲೂ ಸಹ ಕನ್ನಡಿಗರ ಮನಸ್ಸುಗಳಲ್ಲಿ ಅಚ್ಚಳಿಯದೆ ನೆಲೆಸಿರುವ ನಟ ಡಾ ರಾಜ್​​ಕುಮಾರ್ (Dr Rajkumar). 1954ರಲ್ಲಿ ‘ಬೇಡರ ಕಣ್ಣಪ್ಪ’ ಸಿನಿಮಾ ಮೂಲಕ ನಾಯಕ ನಟನಾಗಿ ನಟಿಸಲು ಆರಂಭಿಸಿದ ರಾಜ್​ಕುಮಾರ್ ಅವರು 2000 ರಲ್ಲಿ ಬಿಡುಗಡೆ ಆದ ‘ಶಬ್ದವೇಧಿ’ ಸಿನಿಮಾದ ವರೆಗೂ ಸಹ ಸ್ಟಾರ್ ನಟನಾಗಿಯೇ ಉಳಿದುಕೊಂಡಿದ್ದರು. ಕೋಟ್ಯಂತರ ಸಿನಿಮಾ ಪ್ರೇಮಿಗಳನ್ನು ರಂಜಿಸಿದರು. ಆದರೆ ಡಾ ರಾಜ್​​ಕುಮಾರ್ ಅವರಿಗೆ ಒಂದು ಹಂತದಲ್ಲಿ ನಿವೃತ್ತಿಯ ಮನಸ್ಸಾಗಿತ್ತು. ಅವರು ಬಹುವಾಗಿ ಪ್ರೀತಿಸುತ್ತಿದ್ದ ನಟನೆಯಿಂದ ಹಿಂದೆ ಸರಿಯುವ ಮನಸ್ಸು ಮಾಡಿದ್ದರು. ಕೊನೆಯ ಸಿನಿಮಾನಲ್ಲಿ ನಟಿಸುವ ಹಲವು ವರ್ಷಗಳ ಹಿಂದೆಯೇ ಅವರು ನಿವೃತ್ತಿ ಪಡೆಯುವ ಆಸೆಯಾಗಿತ್ತು. ಆದರೆ ಅದು ಅವರ ಆಪ್ತರ ಕಾರಣದಿಂದಾಗಿ ಸಾಧ್ಯವಾಗಲಿಲ್ಲ.

ಡಾ ರಾಜ್​​ಕುಮಾರ್ ಅವರು ‘ಶಬ್ದವೇಧಿ’ ಸಿನಿಮಾನಲ್ಲಿ ನಟಿಸಿದಾಗ ಅವರಿಗೆ 71 ವರ್ಷ ವಯಸ್ಸು. ಆದರೂ ಸಹ ಆ ಆಕ್ಷನ್ ಥ್ರಿಲ್ಲರ್ ಸಿನಿಮಾನಲ್ಲಿ ಅದ್ಭುತವಾಗಿ ನಟಿಸಿದ್ದಲ್ಲದೆ ಸಿನಿಮಾವನ್ನು ಸೂಪರ್ ಹಿಟ್ ಆಗುವಂತೆ ಮಾಡಿದ್ದರು. ಅಣ್ಣಾವ್ರು ಎಷ್ಟೇ ಅದ್ಭುತ ನಟನಾಗಿದ್ದರೂ, ನಟನೆಯನ್ನು ಅಪಾರವಾಗಿ ಪ್ರೀತಿಸಿದ್ದರೂ ಸಹ ಒಂದು ಹಂತದ ಬಳಿಕ ಅವರ ಮಾನಸಿಕ ಉತ್ಸಾಹಕ್ಕೆ ದೇಹ ಜೊತೆಗೊಡುತ್ತಿರಲಿಲ್ಲ. ಹಾಗಾಗಿ ಅವರು ನಿವೃತ್ತಿಯ ಮನಸ್ಸು ಮಾಡಿದ್ದರು. ಅದೂ ‘ಶಬ್ದವೇಧಿ’ ಸಿನಿಮಾ ಬಡುವ ಬಹಳ ಮುಂಚೆಯೇ ನಿವೃತ್ತಿಯ ಬಗ್ಗೆ ಆಲೋಚಿಸಿದ್ದರು.

ರಾಜ್​ಕುಮಾರ್ ಅವರು 90ರ ದಶಕದಲ್ಲಿ ಖ್ಯಾತ ಚಿತ್ರಸಾಹಿತಿ ಚಿ ಉದಯಶಂಕರ್ ಅವರಿಗೆ ಒಂದು ಸಂದರ್ಶನ ನೀಡಿದ್ದರು. ಸಂದರ್ಶನದಲ್ಲಿ ಅವರು ತಮ್ಮ ನಿವೃತ್ತಿಯ ಬಗ್ಗೆ ಮಾತನಾಡಿದ್ದರು. ಉದಯಶಂಕರ್ ಅವರು, ಆಗಷ್ಟೆ ಬಿಡುಗಡೆ ಆಗಿದ್ದ ‘ಜೀವನ ಚೈತ್ರ’ ಸಿನಿಮಾದ ನಟನೆಯ ಬಗ್ಗೆ ಪ್ರಶ್ನೆ ಕೇಳಿದರು. ಅದಕ್ಕೆ ಉತ್ತರಿಸುತ್ತಾ ಮಾತನಾಡಿದ ರಾಜ್​​ಕುಮಾರ್ ಅವರು, ‘ನನಗೆ ಅದರ ರಹಸ್ಯವೆಲ್ಲ ಗೊತ್ತಿಲ್ಲ, ಹೇಗೋ ಜನರ ಅಪೇಕ್ಷೆ ನನ್ನ ಬಗ್ಗೆ, ನನ್ನ ನಟನೆ ಬಗ್ಗೆ ಇದೆ, ಜನರ ಅಪೇಕ್ಷೆ, ಪ್ರೀತಿ, ಗೌರವಗಳು ಇರುವಾಗಲೇ ಮೆಲ್ಲಗೆ ಪರದೆಯ ಹಿಂದೆ ಸರಿದುಬಿಡುವುದು ಉತ್ತಮ ಎಂದುಕೊಂಡಿದ್ದೆ’ ಎಂದಿದ್ದರು.

ಇದನ್ನೂ ಓದಿ:ಶೆಟ್ಟಿ ಗ್ಯಾಂಗ್ ಬಿಟ್ಟು ಕನ್ನಡದ ಕೆಲವರಿಗೆ ಮಾತ್ರ ಮದುವೆ ಆಹ್ವಾನ ನೀಡಿದ ರಶ್ಮಿಕಾ

‘ಆದರೆ ನೀವುಗಳು, ಇನ್ನೂ ಕೆಲವು ಆಪ್ತರು ನನ್ನ ಹುರಿದುಂಬಿಸಿ ಮತ್ತೆ ನಟಿಸುವಂತೆ ಮಾಡಿದಿರಿ. ನಿಮ್ಮಗಳ ಒತ್ತಾಸೆ ಮತ್ತು ಪ್ರೇಕ್ಷಕರ ಪ್ರಭುಗಳ ಒತ್ತಾಸೆಯಿಂದ ನಾನು ನಟಿಸಿದೆ. ಆದರೆ ಈ ಬಾರಿ (ಜೀವನ ಚೈತ್ರ ಸಿನಿಮಾ ಸಮಯದಲ್ಲಿ) ನಟಿಸುವಾಗ ಹೆಚ್ಚೇ ಭಯ ಆಗಿತ್ತು. ಏಕೆಂದರೆ ಎರಡು ವರ್ಷಗಳ ಕಾಲ ನಾನು ಕ್ಯಾಮೆರ ಎದುರು ನಿಂತಿರಲಿಲ್ಲ, ಹಾಗಾಗಿ ತುಸು ಹೆಚ್ಚೇ ಭಯ ಆಯ್ತು, ಆದರೆ ವೃತ್ತಿ ಬದುಕಿನ ಆರಂಭದಿಂದಲೂ ನನ್ನನ್ನು ಮುಂದೂಡಿಕೊಂಡು ಬರುತ್ತಿರುವ ಶಕ್ತಿಯೊಂದು ಈ ಸಿನಿಮಾದಲ್ಲಿಯೂ ನನಗೆ ಶಕ್ತಿ ತುಂಬಿ ನಟಿಸುವಂತೆ ಮಾಡಿತು’ ಎಂದಿದ್ದರು.

ಅಂದಹಾಗೆ ‘ಜೀವನ ಚೈತ್ರ’ ಸಿನಿಮಾ ಬಿಡುಗಡೆ ಆಗಿದ್ದು 1992 ರಲ್ಲಿ. ಆಗಲೇ ಅಣ್ಣಾವ್ರು ನಿವೃತ್ತಿಯ ಮನಸ್ಸು ಮಾಡಿದ್ದರು. ‘ಜೀವನ ಚೈತ್ರ’ ಸಿನಿಮಾನಲ್ಲಿ ನಟಿಸುವುದಕ್ಕೆ ಮುಂಚೆ ಬರೋಬ್ಬರಿ ಎರಡು ವರ್ಷ ಅವರು ಯಾವುದೇ ಸಿನಿಮಾನಲ್ಲಿ ನಟಿಸಿರಲಿಲ್ಲ. ‘ಜೀವನ ಚೈತ್ರ’ ಸಿನಿಮಾನಲ್ಲಿ ನಟಿಸಿದ ಬಳಿಕ ಅಣ್ಣಾವ್ರು ನಾಯಕನಾಗಿ ನಟಿಸಿದ್ದು ಮೂರೇ ಸಿನಿಮಾಗಳಲ್ಲಿ 1993 ರಲ್ಲಿ ಬಿಡುಗಡೆ ಆದ ‘ಆಕಸ್ಮಿಕ’, 1994ರಲ್ಲಿ ಬಿಡುಗಡೆ ಆದ ‘ಒಡಹುಟ್ಟಿದವರು’ ಮತ್ತು 2000 ರಲ್ಲಿ ಬಿಡುಗಡೆ ಆದ ಅವರ ಕೊನೆಯ ಸಿನಿಮಾ ‘ಶಬ್ದವೇಧಿ’.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆಂತರಿಕ ಜಗಳಗಳು ಅಲ್ಲೂ ಇದ್ವು, ಆದ್ರೆ ಇಸ್ರೇಲ್​​ನ ವಿಪಕ್ಷ ನಾಯಕರು ಪ್ರಧಾನಿ ಮೋದಿ ಭಾಷಣವನ್ನು ಭಹಿಷ್ಕರಿಸಲಿಲ್ಲ – Kannada News | PM Modi’s Historic Israel Visit: Knesset Speech and Unprecedented Honors Strengthen India Israel

ಇಸ್ರೇಲ್, ಫೆಬ್ರವರಿ 26: ಪ್ರಧಾನಿ ನರೇಂದ್ರ ಮೋದಿ(Narendra Modi) ಇಸ್ರೇಲ್ ಪ್ರವಾಸದಲ್ಲಿದ್ದಾರೆ. ಪ್ರಧಾನಿ ಮೋದಿ ಸಂಸತ್ತಿನಲ್ಲಿ ಭಾಷಣವನ್ನು ಕೂಡ ಮಾಡಿದ್ದಾರೆ.  ಅಲ್ಲೂ ಕೂಡ ಒಳಜಗಳಗಳಿದ್ದರೂ ಎಷ್ಟೇ ರಾಜಕೀಯವಿದ್ದರೂ ಇಸ್ರೇಲ್ ವಿಪಕ್ಷ ನಾಯಕರು ಪ್ರಧಾನಿ ಮೋದಿ ಭಾಷಣವನ್ನು ಬಹಿಷ್ಕರಿಸಲಿಲ್ಲ. ಭಾಷಣಕ್ಕಾಗಿ ಸಂಸತ್ತಿನಲ್ಲೇ ಉಳಿಯಲು ನಿರ್ಧರಿಸಿದರು. ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಆಮ್ ಇಸ್ರಾಯಿಲ್ ಚಾಯ್ ಅಂದರೆ ಇಸ್ರೇಲ್ ಜನರು ಜೀವಂತವಾಗಿದ್ದಾರೆ ಎಂದು ಹೇಳುವ ಮೂಲಕ ತಮ್ಮ ಭಾಷಣ ಸಮಾಪ್ತಿಗೊಳಿಸಿದರು, ಆಗ ಸಂಸತ್ತಿನಲ್ಲಿದ್ದ ಎಲ್ಲಾ ನಾಯಕರು ಎದ್ದು ಚಪ್ಪಾಳೆ ತಟ್ಟಿದ್ದರು.

ಸ್ಪೀಕರ್ ಆಫ್ ದಿ ನೆಸ್ಸೆಟ್ ಪದಕ ಪಡೆದ ಮೊದಲ ವಿಶ್ವ ನಾಯಕ ಮೋದಿ

ಫೆಬ್ರವರಿ 25ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ಪೀಕರ್ ಆಫ್ ದಿ ನೆಸ್ಸೆಟ್ ಪದಕ ಪಡೆದ ಮೊದಲ ವಿಶ್ವ ನಾಯಕರಾಗುವ ಮೂಲಕ ಇತಿಹಾಸ ಸೃಷ್ಟಿಸಿದರು. ಇದು ಇಸ್ರೇಲ್ ಸಂಸತ್ತು, ನೆಸ್ಸೆಟ್ ನೀಡುವ ಅತ್ಯುನ್ನತ ಗೌರವವಾಗಿದೆ. ಈ ಮನ್ನಣೆಯು ಭಾರತ ಮತ್ತು ಇಸ್ರೇಲ್ ನಡುವಿನ ಆಳವಾದ ಕಾರ್ಯತಂತ್ರದ ಪಾಲುದಾರಿಕೆ ಮತ್ತು ಬಲವಾದ ರಾಜತಾಂತ್ರಿಕ ಸಂಬಂಧಗಳನ್ನು ಪ್ರತಿಬಿಂಬಿಸುತ್ತದೆ.

ಇಸ್ರೇಲ್‌ನ ಶಿಷ್ಟಾಚಾರದಲ್ಲಿ ಪ್ರಧಾನಿ ಮೋದಿ ಅಮೆರಿಕದ ಅಧ್ಯಕ್ಷರಿಗೆ ಸಮಾನರು

ಇಸ್ರೇಲ್ ಸಂಪ್ರದಾಯದಲ್ಲಿ, ಪ್ರಧಾನಿ ವೈಯಕ್ತಿಕವಾಗಿ ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷರು ಅಥವಾ ಪೋಪ್ ಅವರನ್ನು ವಿಮಾನ ನಿಲ್ದಾಣಕ್ಕೆ ಹೋಗಿ ಬರಮಾಡಿಕೊಳ್ಳುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರಿಗೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಈ ಶಿಷ್ಟಾಚಾರವನ್ನು ಮುರಿದಿದ್ದಾರೆ. ಪತ್ನಿ ಸಾರಾ ನೆತನ್ಯಾಹು ಸಹ ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿ ಅವರನ್ನು ವೈಯಕ್ತಿಕವಾಗಿ ಸ್ವಾಗತಿಸಿದ್ದರು.

ಮತ್ತಷ್ಟು ಓದಿ: Video: ಮೋದಿ ಜಾಕೆಟ್ ತೊಟ್ಟು ಪ್ರಧಾನಿ ಮೋದಿಗೆ ಸರ್​ಪ್ರೈಸ್​ ಕೊಟ್ಟ ಇಸ್ರೇಲ್ ಪ್ರಧಾನಿ ನೆತನ್ಯಾಹು

ಮೋದಿ ಬರುವ ಮುನ್ನವೇ ತ್ರಿವರ್ಣದಲ್ಲಿ ಕಂಗೊಳಿಸಿದ ಇಸ್ರೇಲ್ ಸಂಸತ್ತು
ಪ್ರಧಾನಿ ಮೋದಿ ಭಾಷಣಕ್ಕೂ ಮುನ್ನವೇ ಇಸ್ರೇಲ್ ಸಂಸತ್ತು ತ್ರಿವರ್ಣದಿಂದ ಕಂಗೊಳಿಸಿತ್ತು. ಇಸ್ರೇಲ್‌ನ ಸಂಸತ್ತು ಕಟ್ಟಡವನ್ನು ವಿದೇಶಿ ಧ್ವಜದ ರಾಷ್ಟ್ರೀಯ ಬಣ್ಣಗಳಲ್ಲಿ ಬೆಳಗಿಸಲಾಯಿತು, ಇದು ಎರಡು ಪ್ರಜಾಪ್ರಭುತ್ವಗಳ ನಡುವಿನ ವಿಶೇಷ ಬಾಂಧವ್ಯವನ್ನು ಒತ್ತಿಹೇಳುತ್ತದೆ.

ಮೋದಿ: ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಎರಡೂ ಗೌರವಿಸಿದ ಏಕೈಕ ನಾಯಕ

ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಎರಡೂ ಕಡೆಯಿಂದ ಅತ್ಯುನ್ನತ ನಾಗರಿಕ ಗೌರವಗಳನ್ನು ಪಡೆದ ಅಪರೂಪದ ಜಾಗತಿಕ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಒಬ್ಬರು.

2026: ಸ್ಪೀಕರ್ ಆಫ್ ದಿ ನೆಸ್ಸೆಟ್ ಮೆಡಲ್
(ಇಸ್ರೇಲ್)

2018: ಗ್ರ್ಯಾಂಡ್ ಕಾಲರ್ ಆಫ್ ದಿ ಸ್ಟೇಟ್ ಪ್ಲ್ಯಾಲೆಸ್ತೀನ್ (ವಿದೇಶಿ ಗಣ್ಯರಿಗೆ ಪ್ಯಾಲೆಸ್ಟೈನ್‌ನಲ್ಲಿ ಅತ್ಯುನ್ನತ ಗೌರವ)

ಇಸ್ರೇಲ್ ಸಂಸತ್ತಿನಲ್ಲಿ ಐತಿಹಾಸಿಕ ಭಾಷಣದ ಸಮಯದಲ್ಲಿ ಮೋದಿ ಮೋದಿ ಘೋಷಣೆ
ಇಸ್ರೇಲ್ ಸಂಸತ್ತಿನೊಳಗಿನ ಅಸಾಧಾರಣ ದೃಶ್ಯ ಕಂಡುಬಂತು, ಪ್ರಧಾನಿ ನರೇಂದ್ರ ಮೋದಿ ಒಂದು ಕಡೆ ಭಾಷಣ ಮಾಡುತ್ತಿದ್ದರೆ ಮತ್ತೊಂದು ಕಡೆ ಮೋದಿ ಮೋದಿ ಎಂಬ ಘೋಷಣೆಗಳು ಪ್ರತಿಧ್ವನಿಸುತ್ತಿದ್ದವು.

ಇಸ್ರೇಲ್‌ನಲ್ಲಿ ಹೂವಿಗೆ ಮೋದಿ ಹೆಸರು

2017 ರ ಇಸ್ರೇಲ್ ಭೇಟಿಯ ಸಮಯದಲ್ಲಿ, ಹೊಸದಾಗಿ ಅಭಿವೃದ್ಧಿಪಡಿಸಿದ ಇಸ್ರೇಲಿ ಕ್ರೈಸಾಂಥೆಮಮ್ ಹೂವಿಗೆ ಪ್ರಧಾನಿ ನರೇಂದ್ರ ಮೋದಿಯವರ ಗೌರವಾರ್ಥವಾಗಿ ಮೋದಿ ಎಂದು ಹೆಸರಿಸಲಾಯಿತು. ಡ್ಯಾಂಜಿಗರ್ ಹೂವಿನ ತೋಟದಲ್ಲಿ ನಾಮಕರಣ ಸಮಾರಂಭ ನಡೆಯಿತು. ಇಸ್ರೇಲ್‌ನಲ್ಲಿ, ರಾಜ್ಯ ಭೇಟಿಯ ಸಮಯದಲ್ಲಿ ವಿದೇಶಿ ನಾಯಕರ ಹೆಸರನ್ನು ಹೂವಿಗೆ ಹೆಸರಿಸುವುದು ತುಂಬಾ ಅಪರೂಪ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಔಷಧ ಕೊರತೆ: ರೋಗಿಗಳ ಪರದಾಟ – Kannada News | Medicine Shortage Plagues Governments Bowring Hospital in Bengaluru

ಬೆಂಗಳೂರು, ಫೆಬ್ರವರಿ 26: ಶಿವಾಜಿನಗರದಲ್ಲಿರುವ ಬೌರಿಂಗ್ ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ಔಷಧಿಗಳ ಕೊರತೆ ಎದುರಾಗಿದ್ದು, ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವೈದ್ಯರು ಬರೆದುಕೊಟ್ಟ ಮಾತ್ರೆಗಳು ಆಸ್ಪತ್ರೆಯ ಔಷಧಾಲಯದಲ್ಲಿ ಲಭ್ಯವಿಲ್ಲದೆ, ರೋಗಿಗಳು ಔಷಧಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಡ ರೋಗಿಗಳು ಹೊರಗಿನ ವೈದ್ಯಕೀಯ ಅಂಗಡಿಗಳಲ್ಲಿ ದುಬಾರಿ ಬೆಲೆ ನೀಡಿ ಔಷಧಿಗಳನ್ನು ಖರೀದಿಸಲು ಅನಿವಾರ್ಯವಾಗಿದೆ. ಹಲವು ರೋಗಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದು, ರಕ್ತದೊತ್ತಡ, ಮಧುಮೇಹ ಮತ್ತು ನೋವಿನ ಮಾತ್ರೆಗಳು ಆಸ್ಪತ್ರೆಯಲ್ಲಿ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ. ಈ ಕುರಿತು ಬೌರಿಂಗ್ ಮತ್ತು ಕರ್ಜನ್ ಆಸ್ಪತ್ರೆಗಳ ವೈದ್ಯಕೀಯ ಅಧೀಕ್ಷಕ ಅರವಿಂದ್ ಅವರು ಮಾತನಾಡಿ, ಕೆಲವು ಸಣ್ಣ ಪ್ರಮಾಣದ ಔಷಧಿಗಳ ಕೊರತೆ ಇದೆ ಎಂದು ಒಪ್ಪಿಕೊಂಡಿದ್ದಾರೆ. ತುರ್ತು ಸಂದರ್ಭಗಳಲ್ಲಿ ಅವುಗಳನ್ನು ತರಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದ ಅವರು, ಈ ಲೋಪದೋಷಗಳನ್ನು ಸರಿಪಡಿಸಲು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಮತ್ತು ಶೀಘ್ರದಲ್ಲೇ ಔಷಧಿಗಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹನಿಮೂನ್​​ಗೆ ಬಲು ಸುಂದರ ದ್ವೀಪಕ್ಕೆ ಹೋಗಲಿದ್ದಾರೆ ವಿಜಯ್-ರಶ್ಮಿಕಾ: ಎಲ್ಲಿ ಗೊತ್ತೆ? – Kannada News | Rashmika Mandanna and Vijay Deverakonda’s honeymoon plan details are here

ವಿಜಯ್ ದೇವರಕೊಂಡ (Vijy Deverakonda) ಮತ್ತು ರಶ್ಮಿಕಾ ಮಂದಣ್ಣ ವಿವಾಹ ಉದಯಪುರದಲ್ಲಿ ನಡೆಯುತ್ತಿದೆ. ಇಂದು ಹಳದಿ, ಸಂಗೀತ್ ಇನ್ನಿತರೆ ಕಾರ್ಯಕ್ರಮಗಳು ಚಾಲ್ತಿಯಲ್ಲಿದ್ದು, ನಾಳೆ (ಫೆಬ್ರವರಿ 26) ಮದುವೆ ಸಮಾರಂಭ ನಡೆಯಲಿದೆ. ಮೊದಲಿಗೆ ತೆಲುಗು ಸಂಪ್ರದಾಯದಂತೆ ವಿವಾಹ ನಡೆಯಲಿದೆ, ಅದಾದ ಬಳಿಕ ಸಂಜೆ ನಡೆವ ಮತ್ತೊಂದು ಕಾರ್ಯಕ್ರಮದಲ್ಲಿ ಕೊಡವ ಸಂಪ್ರದಾಯದಂತೆ ಮದುವೆ ನಡೆಯಲಿದೆ. ಮಾರ್ಚ್ 04 ರಂದು ಹೈದರಾಬಾದ್​ನ ತಾಜ್ ಕೃಷ್ಣನಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ. ಆರತಕ್ಷತೆಗೆ ಟಾಲಿವುಡ್, ಸ್ಯಾಂಡಲ್​​ವುಡ್ ಮತ್ತು ಬಾಲಿವುಡ್​​ನ ಸಿನಿಮಾ ಸೆಲೆಬ್ರಿಟಿಗಳು ಹಾಗೂ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ರಾಜಕಾರಣಿಗಳು ಭಾಗಿ ಆಗಲಿದ್ದಾರೆ. ಆರತಕ್ಷತೆ ಮುಗಿದ ಎರಡೇ ದಿನಕ್ಕೆ ಈ ಜೋಡಿ ಹನಿಮೂನ್​​ಗೆ ರವಾನೆ ಆಗಲಿದೆ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರುಗಳು ತಮ್ಮ ಆರತಕ್ಷತೆ ಮುಗಿಸಿದ ಕೂಡಲೇ ಹನಿಮೂನ್​​ಗೆ ಹೊರಡಲಿದ್ದಾರಂತೆ. ಅದೂ ಅಂತಿಂಥ ಸಾಮಾನ್ಯ ಸ್ಥಳಕ್ಕೆ ಅಲ್ಲ ಬದಲಿಗೆ ಬಲು ಸುಂದರವಾದ ಮತ್ತು ಬಲು ಖಾಸಗಿಯಾದ ದ್ವೀಪದಲ್ಲಿ ಈ ನೂತನ ದಂಪತಿ ಹನಿಮೂನ್ ಆಚರಣೆ ಮಾಡಿಕೊಳ್ಳಲಿದ್ದಾರೆ. ವಿಜಯ್ ಮತ್ತು ರಶ್ಮಿಕಾ ಇಬ್ಬರೂ ಸಹ ಪ್ರವಾಸದ ಬಗ್ಗೆ ವಿಪರೀತ ಆಸಕ್ತಿ ಉಳ್ಳವರಾಗಿದ್ದು, ಹಾಗಾಗಿಯೇ ಬಲು ಸುಂದರವಾದ ಸ್ಥಳವನ್ನು ಹನಿಮೂನ್​​ಗೆ ಆಯ್ಕೆ ಮಾಡಿಕೊಂಡಿದ್ದಾರೆ.

ಮೂಲಗಳ ಪ್ರಕಾರ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಖಾಸಗಿ ದ್ವೀಪವಾದ ಕ್ಯಾಲಿವಿನಿ (Calivigny) ದ್ವೀಪಕ್ಕೆ ಹೋರಡಲಿದ್ದಾರೆ. ಅತ್ಯಂತ ಸುಂದರವಾದ ಮತ್ತು ಐಶಾರಾಮಿ ರೆಸಾರ್ಟುಗಳನ್ನು ಮಾತ್ರವೇ ಹೊಂದಿರುವ ದ್ವೀಪ ಇದಾಗಿದೆ. 80 ಎಕರೆ ವಿಶಾಲವಾದ ದ್ವೀಪ ಇದಾಗಿದ್ದು, ಐತಿಹಾಸಿಕ ಕಾರಣಕ್ಕೂ ಸಹ ಮಹತ್ವವಾದ ದ್ವೀಪ ಇದಾಗಿದೆ. ಐಶಾರಾಮಿ ರೆಸಾರ್ಟ್​ ಹೊಂದಿರುವ ಈ ದ್ವೀಪ ಅತ್ಯಂತ ದುಬಾರಿ ದ್ವೀಪವೂ ಸಹ ಹೌದು.

ಇದನ್ನೂ ಓದಿ:

ವಿಜಯ್ ಮತ್ತು ರಶ್ಮಿಕಾ ಅವರು ಕೇವಲ ಕ್ಯಾಲಿವಿನಿ ದ್ವೀಪ ಮಾತ್ರವೇ ಅಲ್ಲದೆ ಇನ್ನೂ ಕೆಲವು ದೇಶಗಳ ಪ್ರವಾಸ ಮಾಡಲಿದ್ದಾರೆ. ರಶ್ಮಿಕಾ ಅವರ ಮೆಚ್ಚಿನ ತಾಣವಾದ ಜಪಾನ್ ಮತ್ತು ವಿಜಯ್ ದೇವರಕೊಂಡ ಅವರ ಮೆಚ್ಚಿನ ತಾಣವಾದ ಇಟಲಿಗೆ ಸಹ ಇವರು ಹನಿಮೂನ್​​ಗೆ ತೆರಳಲಿದ್ದಾರೆ. ಜಪಾನ್, ರಶ್ಮಿಕಾರ ಮೆಚ್ಚಿನ ಪ್ರವಾಸಿ ತಾಣ ಆಗಿದ್ದು, ಈ ಹಿಂದೆ ಅವರು ಜಪಾನಿಗೆ ಹೋದಾಗಲೂ ಈ ಬಗ್ಗೆ ಮಾತನಾಡಿದ್ದರು. ಇದೀಗ ಪತಿಯೊಟ್ಟಿಗೆ ಹನಿಮೂನ್​​ಗೆ ಹೋಗಲಿದ್ದಾರೆ. ಇನ್ನು ವಿಜಯ್ ದೇವರಕೊಂಡಗೆ ಇಟಲಿ ಬಹು ಇಷ್ಟ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪರೀಕ್ಷೆ ಭಯ ಬೇಡ, ಧೈರ್ಯದಿಂದ ಮುನ್ನುಗ್ಗಿ: ವಿದ್ಯಾರ್ಥಿಗಳಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿಶೇಷ ಪತ್ರ

Source link

ರಶ್ಮಿಕಾ-ವಿಜಯ್ ದೇವರಕೊಂಡ ಮದುವೆಯಾದ ಐಷಾರಾಮಿ ರೆಸಾರ್ಟ್ ಹೇಗಿದೆ ಗೊತ್ತೇ? ಫೋಟೊಸ್ ಇಲ್ಲಿದೆ ನೋಡಿ

Source link

ಮಾರ್ಚ್ ತಿಂಗಳಲ್ಲಿ ವೃಶ್ಚಿಕ ರಾಶಿಯವರು ಈ ಕೆಲಸವನ್ನು ಮಾಡಲೇ ಬಾರದು… – Kannada News | March 2026 Scorpio Astrology: Navigate Planetary Transits and Boost Your Luck

ಮಾರ್ಚ್ 2026ರ ಗ್ರಹಗತಿಗಳ ಆಧಾರದ ಮೇಲೆ ವೃಶ್ಚಿಕ ರಾಶಿಯವರಿಗೆ ಈ ತಿಂಗಳು ಮಿಶ್ರಫಲಗಳಿಂದ ಕೂಡಿದೆ. ಶನಿ, ಗುರು ಮತ್ತು ರಾಹು-ಕೇತುಗಳ ಸ್ಥಾನಪಲ್ಲಟವು ನಿಮ್ಮ ಜೀವನದ ಮೇಲೆ ವಿಭಿನ್ನ ಪ್ರಭಾವ ಬೀರಲಿದೆ.

​ನಿಮ್ಮ ರಾಶಿಗೆ ಮಾರ್ಚ್ 2026 ರಲ್ಲಿ ಯಾವ ದಶೆಗಳು ಉತ್ತಮ, ಮಧ್ಯಮ ಮತ್ತು ಅಧಮ ಎಂಬುದರ ವಿವರವಿದು.

​ವೃಶ್ಚಿಕ ರಾಶಿ: ಮಾರ್ಚ್ 2026ರ ದಶಫಲ ವಿಶ್ಲೇಷಣೆ

​ಮಾರ್ಚ್ ತಿಂಗಳಲ್ಲಿ ಗ್ರಹಗಳ ಸಂಚಾರವು ವೃಶ್ಚಿಕ ರಾಶಿಯವರಿಗೆ ಸವಾಲು ಮತ್ತು ಅವಕಾಶಗಳೆರಡನ್ನೂ ಸಮಾನವಾಗಿ ನೀಡಲಿದೆ.

​ಉತ್ತಮ ಫಲ

​ಈ ದಶೆಗಳು ಅಥವಾ ಅಂತರ್ದಶೆಗಳು ನಡೆಯುತ್ತಿದ್ದರೆ ನಿಮಗೆ ಅಭಿವೃದ್ಧಿ ಖಚಿತ.

​ಗುರು ದಶೆ :

ಮಾರ್ಚ್‌ನಲ್ಲಿ ಗುರುವು ನಿಮ್ಮ ರಾಶಿಯಿಂದ 8ನೇ ಮನೆಯಲ್ಲಿ ಇದ್ದರೂ, ಅದರ ದೃಷ್ಟಿ ನಿಮ್ಮ ವ್ಯಕ್ತಿತ್ವ ಮತ್ತು ಕುಟುಂಬದ ಮೇಲೆ ಇರುತ್ತದೆ. ಸಂಶೋಧನೆ, ವಿಮೆ ಅಥವಾ ಹಠಾತ್ ಧನಲಾಭಕ್ಕೆ ಈ ದಶೆ ಪೂರಕವಾಗಿದೆ. ಆಧ್ಯಾತ್ಮಿಕ ಚಿಂತನೆ ಹೆಚ್ಚುತ್ತದೆ.

​ಮಂಗಳ ದಶೆ :

ನಿಮ್ಮ ರಾಶ್ಯಾಧಿಪತಿಯಾದ ಮಂಗಳನು ಮಾರ್ಚ್ 15 ರ ಅನಂತರ 4ನೇ ಮನೆಗೆ ಅಂದರೆ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಇದು ಆಸ್ತಿ ಖರೀದಿ, ಮನೆ ರಿಪೇರಿ ಅಥವಾ ಭೂಮಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಜಯ ತಂದುಕೊಡುತ್ತದೆ. ತಾಯಿಯ ಕಡೆಯಿಂದ ಬೆಂಬಲ ಸಿಗಲಿದೆ.

​ಮಧ್ಯಮ ಫಲ

​ಈ ದಶೆಗಳು ನಡೆಯುತ್ತಿದ್ದರೆ ಶ್ರಮಕ್ಕೆ ತಕ್ಕ ಪ್ರತಿಫಲ ಮಾತ್ರ ಸಿಗುತ್ತದೆ:

​ಶುಕ್ರ ದಶೆ :

ಮಾರ್ಚ್ 24ರ ಅನಂತರ ಶುಕ್ರನು 8ನೇ ಮನೆಗೆ ಪ್ರವೇಶಿಸುವುದರಿಂದ ವೈವಾಹಿಕ ಜೀವನದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ, ಭೌತಿಕ ಸುಖಕ್ಕೆ ಕೊರತೆಯಾಗುವುದಿಲ್ಲ. ಹೂಡಿಕೆ ಮಾಡುವಾಗ ಎಚ್ಚರಿಕೆ ವಹಿಸಿದರೆ ಲಾಭ ಸಾಧಾರಣವಾಗಿರುತ್ತದೆ.

​ಬುಧ ದಶೆ :

ಬುಧನು ವಕ್ರಗತಿಯಲ್ಲಿ ಚಲಿಸುವುದರಿಂದ ವ್ಯಾಪಾರ ಮತ್ತು ಸಂವಹನದಲ್ಲಿ ನಿಧಾನಗತಿ ಇರುತ್ತದೆ. ದೊಡ್ಡ ಬದಲಾವಣೆಗಳಿಗಿಂತ ಹಳೆಯ ಕೆಲಸಗಳನ್ನು ಪೂರ್ಣಗೊಳಿಸಲು ಇದು ಸೂಕ್ತ ಸಮಯ.

​ಅಧಮ ಫಲ

​ಈ ದಶೆಗಳು ನಡೆಯುತ್ತಿರುವಾಗ ಬಹಳ ಜಾಗರೂಕರಾಗಿರಬೇಕು.

​ಶನಿ ದಶೆ :

ವೃಶ್ಚಿಕ ರಾಶಿಯವರಿಗೆ ಶನಿಯು ಪ್ರಸ್ತುತ 5ನೇ ಮನೆಯಲ್ಲಿ ಅಂದರೆ ಮೀನ ರಾಶಿ ಸಂಚರಿಸುತ್ತಿದ್ದಾನೆ. ಇದು ಮಕ್ಕಳ ಶಿಕ್ಷಣ ಅಥವಾ ಪ್ರೇಮ ಜೀವನದಲ್ಲಿ ಅಡೆತಡೆಗಳನ್ನು ಉಂಟುಮಾಡಬಹುದು. ಶನಿ ದಶೆ ಅಥವಾ ಅಂತರ್ದಶೆ ನಡೆಯುತ್ತಿದ್ದರೆ ಮಾನಸಿಕ ಒತ್ತಡ ಹೆಚ್ಚಾಗಬಹುದು. ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವುದು ಬೇಡ.

​ರಾಹು-ಕೇತು ದಶೆ :

ರಾಹು 5ನೇ ಮನೆಯಲ್ಲಿ ಶನಿಯೊಂದಿಗೆ ಇರುವುದರಿಂದ ಗೊಂದಲಗಳು ಹೆಚ್ಚಾಗುತ್ತವೆ. ನಿರ್ಧಾರ ತೆಗೆದುಕೊಳ್ಳುವಲ್ಲಿ ಎಡವಬಹುದು. ಆರೋಗ್ಯದ ಕಡೆಗೆ ವಿಶೇಷ ಗಮನ ಅಗತ್ಯ.

​ವೃಶ್ಚಿಕ ರಾಶಿಯವರು ಈ ತಿಂಗಳ ಅಶುಭ ಫಲಗಳನ್ನು ಕಡಿಮೆ ಮಾಡಿಕೊಳ್ಳಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದು.

​ಮಂಗಳನು ನಿಮ್ಮ ರಾಶ್ಯಾಧಿಪತಿಯಾಗಿರುವುದರಿಂದ ಆಂಜನೇಯನ ಆರಾಧನೆ ನಿಮಗೆ ರಕ್ಷಾ ಕವಚವಾಗಲಿದೆ. ಶನಿವಾರದಂದು ಎಳ್ಳೆಣ್ಣೆ ದೀಪ ಹಚ್ಚುವುದು ಮತ್ತು ಬಡವರಿಗೆ ಅನ್ನದಾನ ಮಾಡುವುದು ಶನಿಯ ಕೆಟ್ಟ ದೃಷ್ಟಿಯನ್ನು ತಗ್ಗಿಸುತ್ತದೆ. ಐದನೇ ಮನೆಯಲ್ಲಿ ಗ್ರಹಗಳ ಸಂಯೋಗವಿರುವುದರಿಂದ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

– ಲೋಹಿತ ಹೆಬ್ಬಾರ್

Source link

ದೆಹಲಿ: ಮನೆಯಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಮಹಿಳೆ, ಮೂವರು ಹೆಣ್ಣುಮಕ್ಕಳ ಶವ ಪತ್ತೆ – Kannada News | Delhi Family Murder: Mother and Three Daughters Found Slain, Husband Missing Police Probe

ನವದೆಹಲಿ, ಫೆಬ್ರವರಿ 26: ಮನೆಯಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಮಹಿಳೆ ಮತ್ತು ಮೂರು ಹೆಣ್ಣುಮಕ್ಕಳ ಶವ ಪತ್ತೆಯಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಉತ್ತರ ದೆಹಲಿಯ ಸಮಯಪುರ್ ಬದ್ಲಿಯ ಲೇನ್‌ಗಳಲ್ಲಿನ ಮನೆಯೊಂದರಲ್ಲಿ ಒಂದು ಕೊಲೆ(Murder)ನಡೆದಿದೆ. ಮಹಿಳೆ ಮತ್ತು ಆಕೆಯ ಮೂವರು ಮಕ್ಕಳು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆಕೆಯ ಪತಿ ನಾಪತ್ತೆಯಾಗಿದ್ದಾನೆ. ಚಂದನ್ ಪಾರ್ಕ್ ಪ್ರದೇಶದಲ್ಲಿ ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದ್ದು, ಬುಧವಾರ ಬೆಳಕಿಗೆ ಬಂದಿದೆ.

ಘಟನೆಯ ರಾತ್ರಿ, ಮಕ್ಕಳ ಕಿರುಚಾಟದಿಂದ ಸ್ವಲ್ಪ ಸಮಯದ ಹಿಂದೆ ಎಚ್ಚರಗೊಂಡಿದ್ದ ಹತ್ತಿರದ ನಿವಾಸಿಯೊಬ್ಬರು ಮನೆಯತ್ತ ಕಣ್ಣು ಹಾಯಿಸಿದರು ಮತ್ತು ಹತ್ತಿರದಿಂದ ಪರಿಶೀಲಿಸಿದಾಗ, ಬಾಗಿಲಿನ ಬಿರುಕುಗಳ ಮೂಲಕ ಗಾಢವಾದ ಕೆಂಪು ರಕ್ತದ ಗೆರೆ ಸೋರುತ್ತಿರುವುದನ್ನು ಕಂಡಿದ್ದರು.

ಧೈರ್ಯ ತಂದುಕೊಂಡು ಒಳಗೆ ನೋಡಿದ್ದರು, ರಕ್ತಸಿಕ್ತ ಗೋಡೆಗಳನ್ನು ನೋಡಿ ಅವರ ಕಿರುಚಾಟ ಗಂಟಲಲ್ಲೇ ನಿಂತುಬಿಟ್ಟಿತ್ತು. ರಾತ್ರಿಯ ಮೌನದಲ್ಲಿ, ನಡುಗುವ ಕೈಗಳಿಂದ, ಅವರು ತನ್ನ ಫೋನ್ ಎತ್ತಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಸಮಯಪುರ್ ಬದ್ಲಿ ಪೊಲೀಸ್ ಠಾಣೆಯ ತಂಡವೊಂದು ಸ್ಥಳಕ್ಕೆ ಬಂದಿತ್ತು.

ಮತ್ತಷ್ಟು ಓದಿ: ಅನ್ಯಕೋಮಿನ ಹುಡುಗರಿಂದ ಸಂಕೇತ್ ಕೊಲೆ: ಸಹಾಯಕ್ಕೆ ಬಂದು ಹತ್ಯೆಯಾದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಟಿಟ್ಟ ಗೆಳೆಯ

ಬಾಗಿಲು ತೆರೆದಾಗ, ಊಹಿಸಲೂ ಅಸಾಧ್ಯವಾದ ದೃಶ್ಯವೊಂದು ಅವರ ಮುಂದೆ ಬಂತು, ಇದು ಪೊಲೀಸ್ ಅಧಿಕಾರಿಗಳನ್ನು ಸಹ ದಿಗ್ಭ್ರಮೆಗೊಳಿಸಿತು. ಕೋಣೆಯ ವಿವಿಧ ಭಾಗಗಳಲ್ಲಿ ನಾಲ್ಕು ಶವಗಳು ಬಿದ್ದಿದ್ದವು. ರಕ್ತದಲ್ಲಿ ತೋಯ್ದಿದ್ದವು. ನಿರ್ಜೀವ, ಮೌನ, ರಾತ್ರಿಯ ನಿಶ್ಯಬ್ದದಲ್ಲಿ, ರಕ್ತದ ಕಲೆಗಳು ಜೋರಾಗಿ ಕಿರುಚುತ್ತಿರುವಂತೆ ಭಾಸವಾಗುತ್ತಿತ್ತು. ತಾಯಿಯನ್ನು ಅನಿತಾ ಎಂದು ಗುರುತಿಸಲಾಗಿದೆ.

ಆಕೆಯ ಜೊತೆಗೆ ಆಕೆಯ ಮೂವರು ಮಕ್ಕಳೂ ಪ್ರಾಣ ಕಳೆದುಕೊಂಡಿದ್ದಾರೆ. ಹಿರಿಯ ಮಗುವಿಗೆ ಕೇವಲ ಏಳು ವರ್ಷ, ಎರಡನೆಯವಳಿಗೆ ಐದು ವರ್ಷ, ಮತ್ತು ಕಿರಿಯಳಿಗೆ ಕೇವಲ ಮೂರು ವರ್ಷ. ಮೂವರ ಕುತ್ತಿಗೆ ಸೀಳಲಾಗಿತ್ತು. ಹರಿತವಾದ ಆಯುಧದಿಂದ ನಡೆಸಲಾದ ಈ ಕೊಲೆ ಇಡೀ ಪ್ರದೇಶವನ್ನು ಬೆಚ್ಚಿಬೀಳಿಸಿತು.

ಅಪರಾಧ ತಂಡ ಮತ್ತು ವಿಧಿವಿಜ್ಞಾನ ತಜ್ಞರು ಶೀಘ್ರದಲ್ಲೇ ಬಂದಿದ್ದರು. ಸಾಕ್ಷ್ಯಗಳನ್ನು ಸಂಗ್ರಹಿಸಿ ಪ್ರತಿಯೊಂದು ಮೂಲೆಯನ್ನೂ ಶೋಧಿಸಿದ್ದಾರೆ. ಪೊಲೀಸರು ಆತನನ್ನು ಪತ್ತೆಹಚ್ಚಲು ತ್ವರಿತವಾಗಿ ಒಂದು ತಂಡವನ್ನು ರಚಿಸಿದರು. ರಾತ್ರಿಯಿಡೀ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಲಾಯಿತು, ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಯಿತು .ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹತ್ತಿರದ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

6ನೇ ದಿನದಾಟ, ಡ್ರಾ, ಕ್ವೋಶಿಯಂಟ್: ಹೀಗಿದೆ ರಣಜಿ ಟ್ರೋಫಿ ಫೈನಲ್ ನಿಯಮ – Kannada News | A 6th reserve day is typically allocated for the Ranji Trophy final

ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಣಜಿ ಟೂರ್ನಿ ಫೈನಲ್ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ಮತ್ತು ಕರ್ನಾಟಕ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಜಮ್ಮು-ಕಾಶ್ಮೀರ ಮೊದಲ ಇನಿಂಗ್ಸ್​ನಲ್ಲಿ 584 ರನ್​ ಕಲೆಹಾಕಿದೆ. ಇದೀಗ ಕರ್ನಾಟಕ ತಂಡವು ಮೊದಲ ಇನಿಂಗ್ಸ್ ಶುರು ಮಾಡಿದ್ದು, 20 ಓವರ್​ಗಳ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 60 ರನ್ ಕಲೆಹಾಕಿದೆ.

ಇದೀಗ (ಫೆ.26) ಮೂರನೇ ದಿನದಾಟ ನಡೆಯುತ್ತಿರುವುದರಿಂದ ಈ ಮ್ಯಾಚ್​ ಡ್ರಾನಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಹೆಚ್ಚು. ಏಕೆಂದರೆ ಆರಂಭಿಕ ಆಘಾತಕ್ಕೆ ಒಳಗಾಗಿರುವ ಕರ್ನಾಟಕ ತಂಡವು ಮೊದಲ ಇನಿಂಗ್ಸ್​ನಲ್ಲಿ ಮುನ್ನಡೆ ಸಾಧಿಸಲು ಇನ್ನೆರಡು ದಿನಗಳವರೆಗೆ ಬ್ಯಾಟಿಂಗ್ ಮುಂದುವರೆಸಲು ಪ್ಲ್ಯಾನ್ ರೂಪಿಸಲಿದ್ದಾರೆ.

ಒಂದು ವೇಳೆ ಕರ್ನಾಟಕ ತಂಡವು ಪಂದ್ಯದ ಕೊನೆಯ ದಿನದಾಟದವರೆಗೆ ಮೊದಲ ಇನಿಂಗ್ಸ್​ನಲ್ಲಿ ಆಲೌಟ್ ಆಗದೇ ಉಳಿದರೆ ಫಲಿತಾಂಶ ನಿರ್ಧರಿಸುವುದು ಹೇಗೆ ಎಂಬ ಪ್ರಶ್ನೆ ಮೂಡುವುದು ಸಹಜ. ಏಕೆಂದರೆ ರಣಜಿ ಟೂರ್ನಿಯ ಫೈನಲ್​ನಲ್ಲಿ ಫಲಿತಾಂಶ ನಿರ್ಧರಿಸಲು ಎರಡು ತಂಡಗಳ ಮೊದಲು ಇನಿಂಗ್ಸ್ ಪೂರ್ಣಗೊಂಡಿರಬೇಕು.

ಒಂದು ವೇಳೆ 2ನೇ ಬ್ಯಾಟಿಂಗ್ ಆಡಿದ ತಂಡವು ಮೊದಲ ಇನಿಂಗ್ಸ್ ಪೂರ್ಣಗೊಳಿಸದೇ ಇದ್ದರೆ ಮುಂದೇನು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ…

  • ಪಂದ್ಯದ ಅವಧಿ: ರಣಜಿ ಟ್ರೋಫಿಯ ನಾಕೌಟ್ ಹಂತದ ಪಂದ್ಯಗಳು ಸಾಮಾನ್ಯವಾಗಿ 5 ದಿನಗಳವರೆಗೆ ನಡೆಯುತ್ತವೆ.
  • 6ನೇ ದಿನದ ಬಳಕೆ: ಒಂದು ವೇಳೆ ಮೊದಲ 5 ದಿನಗಳಲ್ಲಿ ಪಂದ್ಯದ ಫಲಿತಾಂಶ ಬರದಿದ್ದರೆ ಅಥವಾ ಮಳೆ ಹಾಗೂ ಇನ್ನಿತರ ಕಾರಣಗಳಿಂದ ಪಂದ್ಯದ ಮೊದಲ ಇನಿಂಗ್ಸ್ ಪೂರ್ಣಗೊಳ್ಳದಿದ್ದರೆ, ಆಗ 6ನೇ ದಿನವನ್ನು ಬಳಸಲಾಗುತ್ತದೆ.
  • ವಿಜೇತರ ನಿರ್ಧಾರ: ಪಂದ್ಯವು ಡ್ರಾದಲ್ಲಿ ಕೊನೆಗೊಂಡರೆ, ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ ತಂಡವನ್ನು ವಿಜೇತರೆಂದು ಘೋಷಿಸಲಾಗುತ್ತದೆ.

ಉದಾಹರಣೆಗೆ: ಕರ್ನಾಟಕ ತಂಡವು ಇದೀಗ ಮೊದಲ ಇನಿಂಗ್ಸ್ ಆಡುತ್ತಿದೆ. ಭಾನುವಾರದೊಳಗೆ ಜಮ್ಮು-ಕಾಶ್ಮೀರ ತಂಡಕ್ಕೆ ಕರ್ನಾಟಕ ತಂಡವನ್ನು ಮೊದಲ ಇನಿಂಗ್ಸ್​ನಲ್ಲಿ ಆಲೌಟ್ ಮಾಡಲು ಸಾಧ್ಯವಾಗದೇ ಇದ್ದರೆ, ಪಂದ್ಯವನ್ನು ಆರನೇ ದಿನದಾಟಕ್ಕೆ ಕೊಂಡೊಯ್ಯಲಾಗುತ್ತದೆ. ಅಂದರೆ ಮೀಸಲು ದಿನದಾಟದಲ್ಲಿ ಪಂದ್ಯವನ್ನು ಮುಂದುವರೆಸಲಾಗುತ್ತದೆ.

ಮೊದಲ ಇನಿಂಗ್ಸ್​ ಪೂರ್ಣಗೊಳಿಸಲೆಂದೇ ಇಂತಹದೊಂದು ನಿಯಮ ರೂಪಿಸಲಾಗಿದೆ. ಅಂದರೆ ಎರಡೂ ತಂಡಗಳ ಮೊದಲ ಇನಿಂಗ್ಸ್ ಪೂರ್ಣಗೊಂಡರೆ ಒಂದು ತಂಡದ ಇನಿಂಗ್ಸ್​ನಲ್ಲಿ ಮುನ್ನಡೆ ಕಂಡು ಬರಲಿದೆ. ಹೀಗೆ ಮೊದಲ ಇನಿಂಗ್ಸ್ ಪೂರ್ಣಗೊಂಡಿದ್ದರೆ ಪ್ರಥಮ ಇನಿಂಗ್ಸ್​ನಲ್ಲಿ ಮುನ್ನಡೆ ಹೊಂದಿರುವ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.

ರಣಜಿ ಟ್ರೋಫಿ ಫೈನಲ್ ‘ಡ್ರಾ’ ನಿಯಮಗಳು:

  • ಮೊದಲ ಇನಿಂಗ್ಸ್ ಮುನ್ನಡೆ: ಐದು ಅಥವಾ ಆರು ದಿನಗಳ ಆಟದ ನಂತರವೂ ಪಂದ್ಯವು ಡ್ರಾದಲ್ಲಿ ಕೊನೆಗೊಂಡರೆ, ಮೊದಲ ಇನಿಂಗ್ಸ್‌ನಲ್ಲಿ ಹೆಚ್ಚು ರನ್ ಗಳಿಸಿದ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಪ್ರಸ್ತುತ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ 584 ರನ್ ಗಳಿಸಿದೆ. ಕರ್ನಾಟಕ ಈ ಮೊತ್ತವನ್ನು ದಾಟಿದರೆ ಮಾತ್ರ ಮುನ್ನಡೆಯ ಆಧಾರದ ಮೇಲೆ ಗೆಲ್ಲಲು ಸಾಧ್ಯ.
  • ಮೊದಲ ಇನಿಂಗ್ಸ್ ಪೂರ್ಣಗೊಳ್ಳದಿದ್ದರೆ: ಒಂದು ವೇಳೆ ಮಳೆ ಅಥವಾ ಇತರ ಕಾರಣಗಳಿಂದ ಎರಡೂ ತಂಡಗಳ ಮೊದಲ ಇನಿಂಗ್ಸ್ ಪೂರ್ಣಗೊಳ್ಳದಿದ್ದರೆ, ಅಂದರೆ ಕರ್ನಾಟಕ ತಂಡ  ತನ್ನ ಮೊದಲ ಇನಿಂಗ್ಸ್ ಮುಗಿಸುವ ಮೊದಲೇ ಪಂದ್ಯ ಅಂತ್ಯವಾದರೆ ಆಗ ಲೀಗ್ ಹಂತದ ಅಂಕಗಳನ್ನು ಪರಿಗಣಿಸಲಾಗುತ್ತದೆ.
  • ಲೀಗ್ ಹಂತದ ಅಂಕಗಳು ಸಮ: ಒಂದು ವೇಳೆ ಉಭಯ ತಂಡಗಳ ಲೀಗ್ ಹಂತದ ಅಂಕಗಳು ಸಮವಾಗಿದ್ದರೆ, ಈ ವೇಳೆ ಯಾವ ತಂಡಕ್ಕೆ ಹೆಚ್ಚು ಬೋನಸ್ ಅಂಕ ಸಿಕ್ಕಿದೆ ಎಂದು ನೋಡಲಾಗುತ್ತದೆ.
  • ಬೋನಸ್ ಅಂಕಗಳು ಸಮ: ಲೀಗ್ ಅಂಕಗಳು ಮತ್ತು  ಬೋನಸ್ ಅಂಕಗಳು ಸಮವಾಗಿದ್ದರೆ ಲೀಗ್ ಹಂತದಲ್ಲಿ ಹೆಚ್ಚಿನ ಗೆಲುವು ಸಾಧಿಸಿದ ತಂಡ ಯಾವುದೆಂದು ನೋಡಲಾಗುತ್ತದೆ.
  • ಹೆಚ್ಚಿನ ಗೆಲುವುಗಳು ಸಮ: ಇನ್ನು ಲೀಗ್ ಹಂತದಲ್ಲಿ ಉಭಯ ತಂಡಗಳು ಸಮಾನವಾದ ಗೆಲುವು ದಾಖಲಿಸಿದ್ದರೆ ಕ್ವೋಶಿಯಂಟ್​​ನ ಮೊರೆ ಹೋಗಲಾಗುತ್ತದೆ.
  • ಕ್ವೋಶಿಯಂಟ್: ಲೀಗ್ ಹಂತದಲ್ಲಿ ಎರಡು ತಂಡಗಳ ಗೆಲುವುಗಳ ಸಂಖ್ಯೆಯೂ ಸಮನಾಗಿದ್ದರೆ, ಇಡೀ ಟೂರ್ನಿಯಲ್ಲಿ ತಂಡಗಳ ಬ್ಯಾಟಿಂಗ್ ಸರಾಸರಿ ಮತ್ತು ಬೌಲಿಂಗ್ ಸರಾಸರಿಯ ಅನುಪಾತವನ್ನು ಲೆಕ್ಕ ಹಾಕಲಾಗುತ್ತದೆ. ಈ ವೇಳೆ ಯಾವ ತಂಡ ಕ್ವೋಶಿಯಂಟ್ ಹೆಚ್ಚಿರುತ್ತದೋ ಅವರೇ ಚಾಂಪಿಯನ್. ಕ್ವೋಶಿಯಂಟ್ ಎಂದರೆ- (ತಂಡದ ಒಟ್ಟು ರನ್ / ಒಟ್ಟು ವಿಕೆಟ್ ಪತನ) ÷ (ಎದುರಾಳಿ ತಂಡದ ಒಟ್ಟು ರನ್ / ಎದುರಾಳಿಯ ಒಟ್ಟು ವಿಕೆಟ್ ಪತನ)
  • ಕ್ವೋಶಿಯಂಟ್ ಸಮ: ಕ್ವೋಶಿಯಂಟ್ ಲೆಕ್ಕಾಚಾರ ಕೂಡ ಸಮವಾಗಿದ್ದರೆ ಪ್ರತಿ ವಿಕೆಟ್‌ಗೆ ಗಳಿಸಿದ ರನ್‌ಗಳ ಸರಾಸರಿಯನ್ನು ನೋಡಲಾಗುತ್ತದೆ. ಈ ವೇಳೆ ಯಾರು ಮುಂದಿರುತ್ತಾರೋ ಅವರನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.
  • ಜಂಟಿ ವಿಜೇತರು: ಮೇಲೆ ತಿಳಿಸಿದ ಎಲ್ಲಾ ಮಾನದಂಡಗಳಲ್ಲೂ (Points, Wins, Quotient) ಉಭಯ ತಂಡಗಳು ಸಮಬಲ ಸಾಧಿಸಿದರೆ ಮಾತ್ರ, ರಣಜಿ ಟ್ರೋಫಿಯನ್ನು ಉಭಯ ತಂಡಗಳಿಗೆ ಹಂಚಲಾಗುತ್ತದೆ. ಅಂದರೆ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.

ಇದನ್ನೂ ಓದಿ: IND vs ZIM: ಪಂದ್ಯ ಗೆಲ್ಲಲು ‘ಕೆಮಿಕಲ್’ ಮೊರೆ ಹೋದ ಟೀಮ್ ಇಂಡಿಯಾ?

ಪ್ರಸ್ತುತ ಸನ್ನಿವೇಶವನ್ನು ಗಮನಿಸಿದರೆ ಕರ್ನಾಟಕ ತಂಡದ ಮೊದಲ ಇನಿಂಗ್ಸ್​ ಐದನೇ ದಿನದಾಟದ ಮೊದಲೇ ಕೊನೆಗೊಳ್ಳುವ ಸಾಧ್ಯತೆಯಿದೆ. ಒಂದು ವೇಳೆ ಐದನೇ ದಿನದಾಟದ ಅಂತ್ಯದೊಳಗೆ ಕರ್ನಾಟಕ ತಂಡ ಮೊದಲ ಇನಿಂಗ್ಸ್​ನಲ್ಲಿ ಆಲೌಟ್ ಆಗದೇ ಇದ್ದರೆ ಮಾತ್ರ ಪಂದ್ಯವನ್ನು 6ನೇ ದಿನದಾಟಕ್ಕೆ ಕೊಂಡೊಯ್ಯಲಾಗುತ್ತದೆ. ಹೀಗಾಗಿ ಕರ್ನಾಟಕ ಮತ್ತು ಜಮ್ಮು-ಕಾಶ್ಮೀರ ನಡುವಣ ಪಂದ್ಯದಲ್ಲಿ ಫಲಿತಾಂಶವನ್ನು ಎದುರು ನೋಡಬಹುದು.

Source link