All posts by nagaraj11081993

Viral: ಬೆಂಗಳೂರಿನಲ್ಲಿ 38 ಲಕ್ಷ ರೂ ಆಫರ್, ದುಬೈನಲ್ಲಿ ತಿಂಗಳಿಗೆ 5 ಲಕ್ಷ ರೂ ಸಂಬಳ; ವೃತ್ತಿ ಆಯ್ಕೆಯ ಬಗ್ಗೆ ಸಲಹೆ ಕೇಳಿದ ಟೆಕ್ಕಿ – Kannada News | Bengaluru: 38 lakh annual offer in Bengaluru, Rs 5 lakh monthly salary in Dubai: Techie seeks advice on career choice

ಬೆಂಗಳೂರು, ಫೆಬ್ರವರಿ 26: ಉದ್ಯೋಗ (job) ಎಲ್ಲರಿಗೂ ಅತ್ಯವಶ್ಯಕ. ಕೈಯಲ್ಲಿ ಕೆಲಸವಿದ್ದರೆ ಮಾತ್ರ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಾಧ್ಯ. ಆದರೆ ಎರಡು ಉದ್ಯೋಗ ಅವಕಾಶಗಳು ಬಂದಾಗ ಯಾವುದನ್ನು ಆಯ್ಕೆ ಮಾಡಿಕೊಳ್ಳುವುದು ಎನ್ನುವ ಗೊಂದಲ ಮೂಡುತ್ತದೆ. ಇದೀಗ 27 ವರ್ಷದ ಬೆಂಗಳೂರಿನ (Bengaluru) ಟೆಕ್ಕಿಗೆ ಇದೇ ರೀತಿ ಆಗಿದ್ದು, ಹೀಗಾಗಿ ಅವರು ನೆಟ್ಟಿಗರ ಸಲಹೆ ಕೇಳಿದ್ದಾರೆ. 38 ಲಕ್ಷ ರೂ ಆಫರ್‌ನೊಂದಿಗೆ ಭಾರತದಲ್ಲಿಯೇ ಇರಬೇಕೇ ಅಥವಾ ತಿಂಗಳಿಗೆ ಸರಿಸುಮಾರು 5.19 ಲಕ್ಷ ರೂ ಸಂಬಳಕ್ಕೆ ದುಬೈಗೆ ಹೋಗಬೇಕೇ ಎಂದು ಕೇಳಿದ್ದಾರೆ. ಈ ಪೋಸ್ಟ್‌ಗೆ ನೆಟ್ಟಿಗರು ಕಾಮೆಂಟ್ ಮಾಡಿ ಸಲಹೆ ನೀಡಿದ್ದಾರೆ.

DubaiCentral ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ಗೆ ಬೆಂಗಳೂರಿನಲ್ಲಿ 38 ಲಕ್ಷ ರೂ ಹಾಗೂ ದುಬೈನಲ್ಲಿ ತಿಂಗಳಿಗೆ 5 ಲಕ್ಷ ರೂ – ದುಬೈ ಯೋಗ್ಯವಾಗಿದೆಯೇ?’ ಎಂಬ ಶೀರ್ಷಿಕೆ ನೀಡಲಾಗಿದೆ. ಎರಡು ಆಫರ್‌ಗಳಿವೆ. ಒಂದು ಭಾರತದ ಬ್ರ್ಯಾಂಡೆಡ್ ಹಾಗೂ ದೀರ್ಘಾವಧಿಯ ಬೆಳವಣಿಗೆಯುಳ್ಳ “ದೊಡ್ಡ ಬ್ಯಾಂಕ್” ಹಾಗೂ ಇನ್ನೊಂದು ಉದ್ಯೋಗವಕಾಶ ದುಬೈನಲ್ಲಿ. ಎರಡು ಕೆಲಸವು ಉತ್ತಮ ಕ್ಲೈಂಟ್‌ಗಳು, ಅತ್ಯುತ್ತಮ ಪ್ರಯೋಜನಗಳಿಂದ ಕೂಡಿದೆ ಎಂದು ಬರೆದಿದ್ದಾರೆ.

ರೆಡ್ಡಿಟ್‌ ಪೋಸ್ಟ್‌ ಇಲ್ಲಿದೆ

ಒಬ್ಬ ವ್ಯಕ್ತಿಗೆ ತಿಂಗಳಿಗೆ 21,000 ಎಇಡಿ ಒಂದು ಉತ್ತಮ ಸಂಬಳವೆಂದು ಪರಿಗಣಿಸಲಾಗಿದೆಯೇ. ಈ ಸಂಬಳದಲ್ಲಿ ಯಾವ ರೀತಿ ಜೀವನಶೈಲಿಯನ್ನು ನಿರೀಕ್ಷಿಸಬಹುದು. ಎಷ್ಟು ಹಣ ಉಳಿಸಬಹುದು ಎಂದು ಕೇಳಿರುವುದನ್ನು ನೋಡಬಹುದು. ಈ ಬೆಂಗಳೂರಿನಿಂದ ಸ್ಥಳಾಂತರಗೊಳ್ಳುವುದು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಒಳ್ಳೆಯದೇ. ದುಬೈ ಟ್ಯಾಗ್‌ಗಾಗಿ ವಿದೇಶಕ್ಕೆ ಸ್ಥಳಾಂತರಗೊಳ್ಳಲು ಬಯಸುವುದಿಲ್ಲ ಎಂದು ಹೇಳಿರುವುದನ್ನು ಗಮನಿಸಬಹುದು.

ಇದನ್ನೂ ಓದಿ: 2.9 ಕೋಟಿ ರೂ ಸಂಬಳದ ಉದ್ಯೋಗ ತೊರೆದು ಅಮೆರಿಕದಿಂದ ಭಾರತಕ್ಕೆ ಬರಲು ನಿರ್ಧರಿಸಿದ ಅನಿವಾಸಿ ಭಾರತೀಯ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ನಿಮಗೆ ಯಾವುದು ಸರಿ ಎನಿಸುತ್ತದೆ ಅದನ್ನು ಮಾಡಿ ಎಂದು ಹೇಳಿದ್ದಾರೆ. ಇನ್ನೊಬ್ಬರು ನಿಮ್ಮ ಉತ್ತಮ ಕೌಶಲ್ಯವಿದ್ದರೆ ಈಗಾಗಲೇ ಸಾಕಷ್ಟು ಅನುಭವವನ್ನು ಹೊಂದಿದ್ದರೆ, ಈ ರಿಸ್ಕ್ ತೆಗೆದುಕೊಳ್ಳಬಹುದು. ಕನಿಷ್ಠ 1 ವರ್ಷಕ್ಕೆ ದುಬೈಗೆ ಬಂದು ಜೀವನ ನಡೆಸಿ. ನಿಮಗೆ ಯಾವ ಆಯ್ಕೆ ಒಳ್ಳೆಯದು ಎಂದು ನೋಡಿ ಎಂದು ಕಾಮೆಂಟ್ ನಲ್ಲಿ ಸಲಹೆ ನೀಡಿದ್ದಾರೆ. ಮತ್ತೊಬ್ಬರು, ನೀವು ಒಂಟಿಯಾಗಿದ್ದರೆ, ದುಬೈಗೆ ತೆರಳುವುದು ಉತ್ತಮ ಆಯ್ಕೆ. ಖರ್ಚುಗಳನ್ನು ಕಳೆದು ತಿಂಗಳಿಗೆ 3 ಲಕ್ಷ ರೂ ಉಳಿಸಬಹುದು. ಕೆಲ ವರ್ಷಗಳ ಕಾಲ ದುಬೈನಲ್ಲಿ ಉಳಿದು ಆ ಬಳಿಕ ಹಿಂತಿರುಗಲು ಯೋಜಿಸಿ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ranji Final: ಗಂಡು ಮೆಟ್ಟಿದ ನಾಡಿನಲ್ಲಿ ಕೆಚ್ಚೆದೆಯ ಶತಕ ಬಾರಿಸಿದ ಮಯಾಂಕ್ ಅಗರ್ವಾಲ್ – Kannada News | Mayank Agarwal’s Ranji Trophy Century: Karnataka’s Lone Warrior in Hubballi Final

ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕದ ಮಾಜಿ ನಾಯಕ ಮಯಾಂಕ್ ಅಗರ್ವಾಲ್, ಜಮ್ಮು ಮತ್ತು ಕಾಶ್ಮೀರ ವಿರುದ್ಧ ಸ್ಮರಣೀಯ ಶತಕ ಬಾರಿಸಿ ತಂಡದ ಪರ ಏಕಾಂಗಿ ಹೋರಾಟ ನೀಡುತ್ತಿದ್ದಾರೆ. 153 ಎಸೆತಗಳಲ್ಲಿ ಮಯಾಂಕ್ ತಮ್ಮ ಪ್ರಥಮ ದರ್ಜೆ ವೃತ್ತಿಜೀವನದ 21ನೇ ಶತಕವನ್ನು ಪೂರೈಸಿದರು. ಈ ಶತಕದೊಂದಿಗೆ ತಂಡವನ್ನು ಕೂಡ 150 ರನ್​ಗಳ ಗಡಿ ದಾಟಿಸಿದರು.

ಮೊದಲ ಇನ್ನಿಂಗ್ಸ್​ನಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಮೊದಲ ಇನ್ನಿಂಗ್ಸ್​ನಲ್ಲಿ 584 ರನ್​ಗಳಿಗೆ ಆಲೌಟ್ ಮಾಡಿ ಬ್ಯಾಟಿಂಗ್‌ ಆರಂಭಿಸಿದ ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡವು ಕೇವಲ 57 ರನ್​ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡಿತು. ಅನುಭವಿ ಕೆಎಲ್ ರಾಹುಲ್ 13 ರನ್​ಗಳಿಗೆ ಔಟಾದರೆ, ನಾಯಕ ದೇವದತ್ ಪಡಿಕ್ಕಲ್ ಇನ್ನಿಂಗ್ಸ್ 11 ರನ್​ಗಳಿಗೆ ಅಂತ್ಯವಾಯಿತು. ಆ ಬಳಿಕ ಬಂದ ಇಬ್ಬರು ಬ್ಯಾಟ್ಸ್‌ಮನ್​ಗಳಾದ ಕರುಣ್ ನಾಯರ್ ಹಾಗೂ ಸ್ಮರಣ್ ರವಿಚಂದ್ರನ್​ಗೆ ಖಾತೆಯನ್ನು ತೆರೆಯಲು ಸಾಧ್ಯವಾಗಲಿಲ್ಲ.

ಈ ಹಂತದಲ್ಲಿ ಎಂದಿನಂತೆ ತಮ್ಮ ಬ್ಯಾಟಿಂಗ್‌ ಮುಂದುವರೆಸಿದ ಮಯಾಂಕ್, ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಜೊತೆಗೆ ಶತಕದ ಜೊತೆಯಾಟ ಕಟ್ಟಿದರು. ಇದರಲ್ಲಿ ಶ್ರೇಯಸ್ 27 ರನ್​ಗಳ ಕಾಣಿಕೆ ನೀಡಿದರೆ, ಉಳಿದ ರನ್​ಗಳು ಮಯಾಂಕ್ ಬ್ಯಾಟ್​​ನಿಂದ ಸಿಡಿದವು. ಈ ಪಂದ್ಯದಲ್ಲಿ ಕರ್ನಾಟಕ ತಂಡ ಮೇಲುಗೈ ಸಾಧಿಸಬೇಕೆಂದರೆ ಮಯಾಂಕ್ ಅವರಿಂದ ದೊಡ್ಡ ಇನ್ನಿಂಗ್ಸ್ ಮೂಡಿಬರಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Lunar Eclipse 2026: ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಸಿಂಹ ರಾಶಿಯ ಮೇಲೆ ಗ್ರಹಣದ ಪ್ರಭಾವ ಹೇಗಿರಲಿದೆ? – Kannada News | Lunar Eclipse 2026: Astrological Forecast for Leo by Dr. Basavaraj Guruji

2026ರಲ್ಲಿ ಸಂಭವಿಸಲಿರುವ ಕೇತುಗ್ರಸ್ತ ಚಂದ್ರಗ್ರಹಣವು ಸಿಂಹ ರಾಶಿಯವರಿಗೆ ನಿರ್ದಿಷ್ಟ ಪರಿಣಾಮಗಳನ್ನು ಬೀರಲಿದೆ ಎಂದು ಜ್ಯೋತಿಷಿ ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ. ಈ ಗ್ರಹಣವು ಸಿಂಹ ರಾಶಿಯವರ ತನು ಸ್ಥಾನದಲ್ಲಿ ಸಂಭವಿಸುವುದರಿಂದ ಹೆಚ್ಚಿನ ಜಾಗ್ರತೆ ವಹಿಸುವುದು ಅನಿವಾರ್ಯ.

ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರು, ಮಾನಸಿಕ ಒತ್ತಡಗಳು ಉಂಟಾಗಬಹುದು. ಆಸ್ತಿ ಕಲಹಗಳು ಹೆಚ್ಚಾಗುವ ಸಾಧ್ಯತೆಗಳಿದ್ದು, ಭೂಮಿ ವ್ಯವಹಾರಗಳಲ್ಲಿ ಎಚ್ಚರ ಅಗತ್ಯ. ಬೇಕಾದವರಿಂದ ಕಿರಿಕಿರಿ ಮತ್ತು ಉದ್ಯೋಗದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು. ಮಾತುಕತೆಗಳಲ್ಲಿ ಎಚ್ಚರಿಕೆ, ನಿರ್ಧಾರಗಳಲ್ಲಿ ಆತುರ ಬೇಡ. ದೈವ ಕೃಪೆ ಇರುವುದರಿಂದ ವ್ಯಾಪಾರದಲ್ಲಿ ಪ್ರಗತಿ, ವೈವಾಹಿಕ ವಿಷಯಗಳಲ್ಲಿ ಶುಭವಾಗಲಿದೆ. ಗ್ರಹಣದ ದೋಷ ನಿವಾರಣೆಗೆ ಜಪ, ದಾನ, ಅನ್ನದಾನ ಮತ್ತು ಶಿವನಿಗೆ ಅಭಿಷೇಕ ಮಾಡಲು ಗುರೂಜಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಮಾ.03 ವರ್ಷದ ಮೊದಲ ಚಂದ್ರಗ್ರಹಣ; ಇದು ಭಾರತದಲ್ಲಿ ಗೋಚರಿಸುತ್ತಾ?

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

 

Source link

ಬೆಂಗಳೂರಿನಲ್ಲಿ ಕೇರಳ ಪೊಲೀಸರ ಭರ್ಜರಿ ಕಾರ್ಯಾಚರಣೆ: 1 ಕೋಟಿ ರೂ ಮೌಲ್ಯದ ಡ್ರಗ್ಸ್ ಸೀಜ್, ಪೆಡ್ಲರ್ ಅರೆಸ್ಟ್ – Kannada News | Bengaluru MDMA Drug Bust: Kerala Police Seize 2KG Worth 1 Crore in Electronic City

ಬಂಧಿತ ಪೆಡ್ಲರ್, ವಶಕ್ಕೆ ಪಡೆದ ಗಾಂಜಾImage Credit source: tv9 kannada

ಆನೇಕಲ್​, ಫೆಬ್ರವರಿ 26: ಅಂತಾರಾಜ್ಯ ಗಾಂಜಾ ಪೆಡ್ಲರ್​​​ನ್ನು ಕೇರಳ ಪೊಲೀಸರು (Kerala Police) ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಕೇರಳದ ಮಾದಕವಸ್ತು ನಿಗ್ರಹ ದಳದಿಂದ ಕಾರ್ಯಾಚರಣೆ ನಡೆಸಿ ಅಸ್ಸಾಂ ಮೂಲದ ಪೆಡ್ಲರ್ ಧೀರೇಶ್ ಕುಟುಮ್(27)ರನ್ನು ಬಂಧಿಸಲಾಗಿದೆ. ಬಂಧಿತನಿಂದ 1 ಕೋಟಿ ರೂ ಮೌಲ್ಯದ ಎಂಡಿಎಂಎ (MDMA) ಡ್ರಗ್ಸ್ ಸೀಜ್ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ‌ ಪೊಲೀಸರಿಂದ ಒಟ್ಟು 9 ಆರೋಪಿಗಳನ್ನು  ಬಂಧಿಸಲಾಗಿದೆ.

ಡೆಲಿವರಿ ಬಾಯ್​ ರೀತಿ ಡ್ರಗ್ಸ್​ ಸರಬರಾಜು

ಆರೋಪಿ ಧೀರೇಶ್ ತಂಗಿಯ ಪತಿ ನೈಜೀರಿಯಾ ಮೂಲದವನು. ಆತನ ಮೂಲಕ ಅಸ್ಸಾಂಗೆ ಎಂಡಿಎಂಎ ರವಾನಿಸುತ್ತಿದ್ದ. ಅಸ್ಸಾಂನಲ್ಲಿರುವ ತಂಗಿ ಮೂಲಕ ಕೇರಳ ಮತ್ತು ಕರ್ನಾಟಕಕ್ಕೆ ಸಾಗಟ ಮಾಡಲಾಗುತ್ತಿತ್ತು. ಸೆರೆಲಾಕ್ ಪಾಕೆಟ್​ಗಳಲ್ಲಿ ಎಂಡಿಎಂಎ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಆನ್​ಲೈನ್ ಫುಡ್ ಡೆಲಿವರಿ ಬಾಯ್​ ರೀತಿ ಡ್ರಗ್ಸ್​ ಸರಬರಾಜು ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಮೈಲಸಂದ್ರದ ರಮೇಶ್ ರೆಡ್ಡಿ ಬಡಾವಣೆಯಲ್ಲಿರುವ ನಿವಾಸದ ಮೇಲೆ ದಾಳಿ ಮಾಡಿದ ಕೇರಳ ಪೊಲೀಸರಿಗೆ 15ಕ್ಕೂ ಹೆಚ್ಚು ಖಾಲಿಯಾದ ಸೆರೆಲಾಕ್ ಪಾಕೆಟ್​ಗಳು ಪತ್ತೆ ಆಗಿವೆ. ಎಲ್ಲಾ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಏರ್​ಪೋರ್ಟಲ್ಲಿ ಭರ್ಜರಿ ಕಾರ್ಯಾಚರಣೆ: ಬ್ಯಾಂಕಾಕ್, ಹಾಂಕಾಂಗ್​ನಿಂದ ಬರ್ತಿದ್ದ ಅಪಾರ ಪ್ರಮಾಣದ ಡ್ರಗ್ಸ್ ವಶ

ಇನ್ನು ವಾರದ ಹಿಂದೆ 1 ಕೆಜಿ ಎಂಡಿಎಂಎ ಸಹಿತ ಕೇರಳದ ಮಲಪುರಂನಲ್ಲಿ ಧೀರೇಶ್ ಸಹಚರರು ಸಿಕ್ಕಿಬಿದ್ದಿದ್ದರು. ಒಟ್ಟು 8 ಆರೋಪಿಗಳನ್ನು ಸೆರೆ ಹಿಡಿದಿದ್ದರು. ವಿಚಾರಣೆ ವೇಳೆ ಕಿಂಗ್​ಪಿನ್ ಧೀರೇಶ್ ಕುಟುಮ್ ಬಗ್ಗೆ ಮಾಹಿತಿ ನೀಡಿದ್ದರು. ಅದರಂತೆ ಇದೀಗ ಪೊಲೀಸರು ಕಿಂಗ್​ಪಿನ್ ಧೀರೇಶ್ ಕುಟುಮ್​​ ನನ್ನು ಬಂಧಿಸಿದ್ದಾರೆ.

ಒಂದೂವರೆ ಕೋಟಿ ರೂ ಮೌಲ್ಯದ ಮಾದಕವಸ್ತು ವಶಕ್ಕೆ

ಇತ್ತೀಚೆಗೆ ರಾಮನಗರದಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕರನ್ನೇ ಟಾರ್ಗೆಟ್ ಮಾಡಿಕೊಂಡು ಆನ್‌ಲೈನ್ ಮೂಲಕ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಜಾಲವನ್ನ ರಾಮನಗರ ಐಜೂರು ಠಾಣೆ ಪೊಲೀಸರು ಭೇದಿಸಿದ್ದರು. ಜೊತೆಗೆ ಒಂದೂವರೆ ಕೋಟಿ ರೂ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ: ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: 1.5 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ

ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ ಐಜೂರು ಠಾಣೆ ಪೊಲೀಸರು 750 ಗ್ರಾಂ ಮೆಥಾಂಫೆಟಮೈನ್ ಅನ್ನ ವಶಕ್ಕೆ ಪಡೆದಿದ್ದರು. ಅದರಲ್ಲಿ 450 MDMA ಮಾತ್ರೆಗಳು ಹಾಗೂ 550 ಗ್ರಾಂ ಕ್ರಿಸ್ಟಲ್ ಡ್ರಗ್ಸ್. ಒಟ್ಟು ಒಂದೂವರೆ ಕೋಟಿ ರೂ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು. ಇನ್ನು ಈ ಪ್ರಕರಣದಲ್ಲಿ ಮೂವರು ಪೆಡ್ಲರ್‌ಗಳನ್ನು ಬಂಧಿಸಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

AIIMS Recruitment 2026: 2551 ನರ್ಸಿಂಗ್ ಅಧಿಕಾರಿ ಹುದ್ದೆಗೆ ನೇಮಕಾತಿ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ – Kannada News | AIIMS NORCET 10 Recruitment 2026: 2551 Nursing Officer Posts. Apply by March 16!

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯು (AIIMS) ನರ್ಸಿಂಗ್ ಅಧಿಕಾರಿ ನೇಮಕಾತಿ ಸಾಮಾನ್ಯ ಅರ್ಹತಾ ಪರೀಕ್ಷೆ (NORCET-10) ಅಡಿಯಲ್ಲಿ ಒಟ್ಟು 2551 ಹುದ್ದೆಗಳ ಬೃಹತ್ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಈ ಮಹತ್ವದ ನೇಮಕಾತಿ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಮಾರ್ಚ್ 16 ರೊಳಗೆ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಈ ಪರೀಕ್ಷೆಯು ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದ ಪ್ರಾಥಮಿಕ ಪರೀಕ್ಷೆಯು ಏಪ್ರಿಲ್ 11 ರಂದು ಹಾಗೂ ಎರಡನೇ ಹಂತದ ಮುಖ್ಯ ಪರೀಕ್ಷೆಯು ಏಪ್ರಿಲ್ 30 ರಂದು ನಿಗದಿಯಾಗಿದೆ. ದೇಶಾದ್ಯಂತ ಇರುವ ವಿವಿಧ ಏಮ್ಸ್ ಸಂಸ್ಥೆಗಳು ಸೇರಿದಂತೆ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆ (SJH) ಮತ್ತು ಇಎಸ್‌ಐಸಿ (ESIC) ನಂತಹ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ಇದು ಉತ್ತಮ ಅವಕಾಶವಾಗಿದೆ.

ಅರ್ಜಿದಾರರು ಮಾನ್ಯತೆ ಪಡೆದ ಸಂಸ್ಥೆಯಿಂದ ಬಿಎಸ್ಸಿ ನರ್ಸಿಂಗ್ ಅಥವಾ ಪೋಸ್ಟ್ ಬೇಸಿಕ್ ಬಿಎಸ್ಸಿ ನರ್ಸಿಂಗ್ ಪದವಿಯನ್ನು ಹೊಂದಿರಬೇಕು ಅಥವಾ ಜನರಲ್ ನರ್ಸಿಂಗ್ ಮಿಡ್‌ವೈಫರಿಯಲ್ಲಿ (GNM) ಡಿಪ್ಲೊಮಾ ಪಡೆದವರಾಗಿರಬೇಕು. ಇದರೊಂದಿಗೆ ಅಭ್ಯರ್ಥಿಗಳು 18 ರಿಂದ 30 ವರ್ಷ ವಯೋಮಿತಿಯ ಒಳಗಿರಬೇಕು ಎಂಬ ನಿಯಮವನ್ನು ವಿಧಿಸಲಾಗಿದೆ.

ಇದನ್ನೂ ಓದಿ: ನಿರುದ್ಯೋಗಿಗಳಿಗೆ ಗುಡ್​ನ್ಯೂಸ್​​; ನಿಮ್ಮದೇ ಜಿಲ್ಲೆಯ ಆಧಾರ್ ಕೇಂದ್ರಗಳಲ್ಲಿ ಉದ್ಯೋಗವಕಾಶ

ಆಯ್ಕೆ ಪ್ರಕ್ರಿಯೆಯ ಮೊದಲ ಹಂತವಾದ ಪ್ರಾಥಮಿಕ ಪರೀಕ್ಷೆಯು ಒಟ್ಟು 100 ಅಂಕಗಳ ಬಹು ಆಯ್ಕೆಯ ಪ್ರಶ್ನೆಗಳನ್ನು (MCQ) ಒಳಗೊಂಡಿರುತ್ತದೆ. 90 ನಿಮಿಷಗಳ ಕಾಲಾವಧಿಯ ಈ ಪರೀಕ್ಷೆಯಲ್ಲಿ ಋಣಾತ್ಮಕ ಅಂಕದ (Negative Marking) ವ್ಯವಸ್ಥೆಯೂ ಇದ್ದು, ಪ್ರತಿ ತಪ್ಪು ಉತ್ತರಕ್ಕೆ 1/3 ಅಂಕಗಳನ್ನು ಕಳೆಯಲಾಗುತ್ತದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಕೆಗಾಗಿ aiimsexams.ac.in ವೆಬ್‌ಸೈಟ್​​ ಗೆ ಭೇಟಿ ನೀಡಿ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೋಕ್ಸೋ ಕೇಸ್​​:ತಲೆಮರೆಸಿಕೊಂಡಿರುವ ಮಲ್ಲಿಕಾರ್ಜುನ ಮುತ್ಯಾ ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್ – Kannada News | POCSO case: Yadagir self styled godman Mallikarjun Mutya Releases Old Statement

ಯಾದಗಿರಿ, (ಫೆಬ್ರವರಿ 26): ಮಲ್ಲಿಕಾರ್ಜುನ ಮುತ್ಯಾ (Mallikarjun Mutya ). ಯಾದಗಿರಿ (Yadagir) ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಠ ಮಾಡ್ಕೊಂಡಿರೋ ಮುತ್ಯಾ ಉತ್ತರ ಕರ್ನಾಟಕ ಭಾಗದಲ್ಲಿ ಹೆಸರುವಾಸಿ. ಯಾದಗಿರಿ, ಕಲಬರುಗಿ, ರಾಯಚೂರು, ವಿಜಯಪುರ, ಪಕ್ಕದ ತೆಲಂಗಾಣದ ಎರಡ್ಮೂರು ಜಿಲ್ಲೆಯಲ್ಲೂ ಈ ಸ್ವಯಂಘೋಷಿತ ದೇವಮಾನವ ಫುಲ್ ಫೇಮಸ್. ಮುತ್ಯಾನ ಅದೆಷ್ಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿವೆ. ಆದ್ರೆ, ಇದೊಂದು ವಿಡಿಯೋ ಈಗ ಮುತ್ಯಾನಿಗೆ ಕಂಟಕ ತಂದೊಡ್ಡಿದೆ. ಸೋಷಿಯಲ್ ಮೀಡಿಯಾದಿಂದಲೇ ಖ್ಯಾತಿ ಗಳಿಸಿದ್ದ ಮುತ್ಯಾನಿಗೆ ಸೋಷಿಯಲ್ ಮೀಡಿಯಾನೇ ಮುಳುವಾಗಿದೆ. ಬಾಲಕಿ ಜೊತೆ ಅನುಚಿತ ವರ್ತಿಸಿರೋ ಇದೇ ವಿಡಿಯೋ ವೈರಲ್ ಆಗ್ತಿದ್ದಂತೆ ಆಕ್ರೋಶ ವ್ಯಕ್ತವಾಗಿದೆ. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ.

ಮಕ್ಕಳ ಹಕ್ಕುಗಳ ಆಯೋಗ ದೂರು ದಾಖಲಿಸಿಕೊಂಡು ಯಾದಗಿರಿ ಎಸ್‌ಪಿಗೆ ಸೂಚನೆ ನೀಡಿದೆ. ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಕೂಡಲೇ ಅಲರ್ಟ್ ಆದ ಪೊಲೀಸರು, ಪೋಕ್ಸೋ ಕೇಸ್ (POCSO case) ದಾಖಲಿಸಿಕೊಂಡು, ಸ್ಥಳ ಮಹಜರು ನಡೆಸಿದ್ದಾರೆ. ಆದ್ರೆ, ಕೇಸ್ ದಾಖಲಾಗುತ್ತಿದ್ದಂತೆಯೇ ಮುತ್ಯಾ ಪರಾರಿಯಾಗಿದ್ದಾನೆ. ಇನ್ನು ಮಠದತ್ತ ಭಕ್ತರು ದೌಡಾಯಿಸುತ್ತಿದ್ದು, ಮುತ್ಯನ ಬೆಂಬಲಕ್ಕೆ ನಿಂತಿದ್ದಾರೆ. ಇನ್ನು ಅಜ್ಞಾತ ಸ್ಥಳದಿಂದಲೇ ಮುತ್ಯಾ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ತಾನು ಎಲ್ಲಿಗೆ ಹೋಗಿದ್ದೇನೆ ಎನ್ನುವುದನ್ನು ತಿಳಿಸಿದ್ದಾರೆ. ಹಾಗಾದ್ರೆ ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನು ವಿಡಿಯೋನಲ್ಲಿ ನೋಡಿ.

ಇದನ್ನೂ ಓದಿ: ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಮಕ್ಕಳ ಆಯೋಗದಿಂದ ಸ್ವಯಂ ಪ್ರೇರಿತ ದೂರು ದಾಖಲು

Source link

ಕಂಟೆಂಟ್ ಕ್ರಿಯೇಟರ್ಸ್​ಗೆ ಸರಿಯಾಗಿ ಆದಾಯ ಹಂಚಿಕೆ ಮಾಡಿ: ಡಿಜಿಟಲ್ ಪ್ಲಾಟ್​ಫಾರ್ಮ್​ಗಳಿಗೆ ಸಚಿವ ವೈಷ್ಣವ್ ಸೂಚನೆ – Kannada News | Content creators should get fair revenue share from digital platforms, says Ashwini Vaishnaw

ನವದೆಹಲಿ, ಫೆಬ್ರುವರಿ 28: ಕುಗ್ರಾಮದಲ್ಲಿ ಕೂತು ತಮಾಷೆಯ ವಿಡಿಯೋಗಳನ್ನು ಮಾಡುವವರಿಂದ ಹಿಡಿದು ಸೃಜನಶೀಲ ಕಲಾವಿದರವರೆಗೂ ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಲ್ಲಿ ಕಂಟೆಂಟ್ ಹಾಕುವ ಜನರಿಗೆ ಖುಷಿಯ ಸುದ್ದಿ ಇದೆ. ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳು ಕಂಟೆಂಟ್ ಕ್ರಿಯೇಟರ್​ಗಳಿಗೆ ತಮ್ಮ ಆದಾಯದಲ್ಲಿ ನ್ಯಾಯಯುತ ಹಂಚಿಕೆ ಮಾಡಬೇಕು ಎಂದು ಕೇಂದ್ರ ಸಚಿವ ಡಾ. ಅಶ್ವಿನಿ ವೈಷ್ಣವ್ ಒತ್ತಾಯಿಸಿದ್ದಾರೆ. ಡಿಜಿಟಲ್ ನ್ಯೂಸ್ ಪಬ್ಲಿಶನ್ಸ್ ಅಸೋಸಿಯೇಶನ್ (ಡಿಎನ್​ಪಿಎ) ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

‘ಮಾಧ್ಯಮ ವೃತ್ತಿಪರರು, ಸೃಜನಶೀಲ ಕಲಾವಿದರು, ಇನ್​ಫ್ಲುಯೆನ್ಸರ್​ಗಳು, ಬರಹಗಾರರು, ಸಂಶೋಧಕರು ಮೊದಲಾದವರು ಈ ಪ್ಲಾಟ್​ಫಾರ್ಮ್​ಗಳನ್ನು ಬಳಸುವುದರಿಂದ ಅದರ ಮೌಲ್ಯದ ಹಂಚಿಕೆ ನ್ಯಾಯಯುತವಾಗಿರಬೇಕು. ಈ ಕ್ರಿಯೇಟರ್​ಗಳು ಡಿಜಿಟಲ್ ಇಕೋಸಿಸ್ಟಂನ ಬೆನ್ನೆಲುಬಾಗಿರುತ್ತಾರೆ. ಆದರೂ ಕೂಡ ಹಲವರಿಗೆ ಸರಿಯಾದ ಮನ್ನಣೆಯಾಗಲೀ, ಸಂಭಾವನೆಯಾಗಲೀ ಸಿಕ್ಕುವುದಿಲ್ಲ’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವರಾದ ಎ ವೈಷ್ಣವ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಕಾಶ್ಮೀರದ ಬಜೆಟ್ ನಿಮ್ಮ ಐಎಂಎಫ್ ಸಾಲಕ್ಕಿಂತ ಎರಡು ಪಟ್ಟು ದೊಡ್ಡದು: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಭಾರತ ತರಾಟೆ

‘ಮಾನವ ಅಭಿವೃದ್ಧಿಯು ಯಾವಾಗಲೂ ಕೂಡ ಪ್ರೋತ್ಸಾಹಕಗಳಿಂದ ಪ್ರೇರಿತವಾಗಿರುತ್ತದೆ. ಪ್ರಾಮಾಣಿಕ ಕೆಲಸಕ್ಕೆ ನ್ಯಾಯಯುತವಾದ ಪ್ರಶಂಸೆ ಮತ್ತು ಬಹುಮಾನ ಸಿಗುವ ಖಚಿತ ಭರವಸೆಯ ಅಗತ್ಯ ಇರುತ್ತದೆ. ಕಂಟೆಂಟ್ ಕ್​ರಿಯೇಟರ್​ಗಳಿಗೆ ಉತ್ತೇಜನ ನೀಡಲು ಈ ರೀತಿಯ ಮನ್ನಣೆ ಬಹಳ ಮುಖ್ಯ’ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಡಿಜಿಟಲ್ ಪ್ಲಾಟ್​ಫಾರ್ಮ್​ಗಳು ಇನ್ನೂ ಹೆಚ್ಚು ಜವಾಬ್ದಾರಿಯುತವಾಗಿರಲಿ

ಡಿಎನ್​ಪಿಎ ಕಾಂಕ್ಲೇವ್ 2026 ಕಾರ್ಯಕ್ರಮದಲ್ಲಿ ಅಶ್ಚಿನಿ ವೈಷ್ಣವ್ ಅವರು ಡೀಪ್​ಫೇಕ್ ಇತ್ಯಾದಿ ಹಾವಳಿಯ ವಿಚಾರವನ್ನು ಪ್ರಸ್ತಾಪಿಸಿ, ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳು ಹೆಚ್ಚು ಜವಾಬ್ದಾರಿಯುತವಾಗಿರಲಿ ಎಂದು ಕರೆ ಕೊಟ್ಟಿದ್ದಾರೆ.

ಇದನ್ನೂ ಓದಿ: 1917ರಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಕೊಟ್ಟಿದ್ದ 35,000 ರೂ ಸಾಲ ವಾಪಸ್ ಕೇಳಲಿರುವ ಭಾರತೀಯ ಕುಟುಂಬ; ಈಗದರ ಮೌಲ್ಯ ಎಷ್ಟಿರಬಹುದು?

ಡೀಪ್​ಫೇಕ್​ನಂತಹ ನಕಲಿ ಚಿತ್ರ, ಸುಳ್ಳು ಮಾಹಿತಿ ಪ್ರಸರಣ ಇತ್ಯಾದಿ ಅಪಾಯಗಳು ಹೆಚ್ಚುತ್ತಲೇ ಇದ್ದು, ವಿಶ್ವಾದ್ಯಂತ ಡಿಜಿಟಲ್ ಪ್ಲಾಟ್​ಫಾರ್ಮ್​ಗಳ ಬಗ್ಗೆ ಸಾರ್ವಜನಿಕ ನಂಬಿಕೆ ಕಡಿಮೆ ಆಗುವ ಅಪಾಯ ಇದೆ. ಡಿಜಿಟಲ್ ಪ್ಲಾಟ್​ಫಾರ್ಮ್​ಗಳು ತಮ್ಮಲ್ಲಿ ಸೇರ್ಪಡೆಯಾಗುವ ಕಂಟೆಂಟ್ ಬಗ್ಗೆ ಜವಾಬ್ದಾರಿ ಹೊತ್ತುಕೊಳ್ಳಬೇಕು. ಅಪಾಯಕಾರಿ ಕಂಟೆಂಟ್​ಗಳನ್ನು ಗುರುತಿಸಿ ಕ್ರಮ ತೆಗೆದುಕೊಳ್ಳುವಂತಹ ವ್ಯವಸ್ಥೆ ರೂಪಿಸಬೇಕು ಎಂದು ವೈಷ್ಣವ್ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕಡ್ಡಾಯ ಗ್ರಾಮೀಣ ಸೇವೆಯಿಂದ ತಪ್ಪಿಸಿಕೊಂಡ 400ಕ್ಕೂ ಹೆಚ್ಚು ವೈದ್ಯ ವಿದ್ಯಾರ್ಥಿಗಳಿಗೆ ಶಾಕ್! – Kannada News | Karnataka MBBS students Face 15L Fine for Skipping Compulsory Rural Service

ಪ್ರಾತಿನಿಧಿಕ ಚಿತ್ರImage Credit source: theredpen.in

ಬೆಂಗಳೂರು, ಫೆಬ್ರವರಿ 26: ಸರ್ಕಾರಿ ಕೋಟಾದ ಅಡಿಯಲ್ಲಿ ಸರ್ಕಾರಿ ಕಾಲೇಜ್ ಅಥವಾ ಖಾಸಗಿ ಕಾಲೇಜ್​​ಗಳಲ್ಲಿ ಪ್ರವೇಶ ಪಡೆದ ಎಂಬಿಬಿಎಸ್​​​ ವಿದ್ಯಾರ್ಥಿಗಳು (MBBS students) ಕಡ್ಡಾಯವಾಗಿ ಗ್ರಾಮೀಣ ಸೇವೆ ಸಲ್ಲಿಸಬೇಕು ಎಂಬ ನಿಯಮ ಇದೆ. ಸದ್ಯ ಈ ನಿಯಮದಿಂದ ತಪ್ಪಿಸಿಕೊಂಡ ಎಂಬಿಬಿಎಸ್​​​ ವಿದ್ಯಾರ್ಥಿಗಳಿಗೆ ಸರ್ಕಾರ ಶಾಕ್​ ನೀಡಿದೆ. ಗ್ರಾಮೀಣ ಸೇವೆ ತಪ್ಪಿಸಿದ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ 15 ಲಕ್ಷ ರೂ ದಂಡದ (fine) ನೋಟಿಸ್​ ನೀಡಲಾಗಿದೆ.

ತಲಾ 15 ಲಕ್ಷ ರೂ ದಂಡ

ಕರ್ನಾಟಕದಲ್ಲಿ ಒಂದು ವರ್ಷದ ಕಡ್ಡಾಯ ಗ್ರಾಮೀಣ ಸೇವೆಗೆ ಹಾಜರಾಗದ 400ಕ್ಕೂ ಹೆಚ್ಚು ವೈದ್ಯ ವಿದ್ಯಾರ್ಥಿಗಳಿಗೆ ತಲಾ 15 ಲಕ್ಷ ರೂ ದಂಡ ಕಟ್ಟುವಂತೆ ರಾಜ್ಯ ಸರ್ಕಾರ ಶಾಕ್​ ನೀಡಿದೆ. ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನೋಟಿಸ್​​ ಹೊರಡಿಸಲಾಗಿದೆ. 30 ದಿನಗಳೊಳಗೆ ದಂಡ ಪಾವತಿಸದಿದ್ದರೆ ಕಾನೂನು ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಔಷಧ ಕೊರತೆ: ರೋಗಿಗಳ ಪರದಾಟ

2025ರಲ್ಲಿ ಪದವಿ ಪಡೆಯುತ್ತಿರುವ 8,171 ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಕಳುಹಿಸಿದೆ. ಈ ಪೈಕಿ ಕಡ್ಡಾಯ ಗ್ರಾಮೀಣ ಸೇವೆಗೆ 1,772 ಹುದ್ದೆಗಳು ಲಭ್ಯವಾಗಿವೆ. ಎಲ್ಲಾ ಹುದ್ದೆಗಳನ್ನು ಆನ್‌ಲೈನ್​​​ ಕೌನ್ಸಿಲಿಂಗ್​ ಮೂಲಕ ಭರ್ತಿ ಮಾಡಲಾಗಿದೆ. 6,119 ಹೆಚ್ಚುವರಿ ಅಭ್ಯರ್ಥಿಗಳಿಗೆ ಕಡ್ಡಾಯ ಸೇವೆಯಿಂದ ವಿನಾಯಿತಿ ನೀಡಲಾಗಿದೆ. ಕೌನ್ಸಿಲಿಂಗ್ ವೇಳೆ ಲಾಗಿನ್​ ಮಾಡದ ಅಥವಾ ಸ್ಥಳ ಆಯ್ಕೆ ಮಾಡದ ಹಾಗೂ ಸೇವೆಗೆ ಹಾಜರಾಗದ 208 ಅಭ್ಯರ್ಥಿಗಳಿಗೆ ನೋಟಿಸ್​​ ಜಾರಿ ಮಾಡಲಾಗಿದೆ. ನಿಯಮಗಳ ಪ್ರಕಾರ ಗ್ರಾಮೀಣ ಸೇವೆ ಕೈಬಿಟ್ಟರೆ 15 ಲಕ್ಷ ರೂ ದಂಡ ಸರ್ಕಾರಕ್ಕೆ ಪಾವತಿಸಬೇಕು.

ಸರ್ಕಾರಿ ವೈದ್ಯಕೀಯ ಕೋಟಾದಡಿ ಎಂಬಿಬಿಎಸ್ ಪದವಿ ಪಡೆದ ವಿದ್ಯಾರ್ಥಿಗಳಿಗೆ ಗ್ರಾಮೀಣ ಸೇವೆ ಕಡ್ಡಾಯವಾಗಿದೆ. ಕಾಯ್ದೆಗಳ ಪ್ರಕಾರ, ಇಂತಹ ಅಭ್ಯರ್ಥಿಗಳು ಕನಿಷ್ಠ ಒಂದು ವರ್ಷ ಗ್ರಾಮೀಣ ಪ್ರದೇಶಗಳ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿದ ನಂತರ ಮಾತ್ರ ಮುಂದಿನ ಹಂತಕ್ಕೆ ಹೋಗಬಹುದು.

ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಯಲ್ಲೇ ರೋಗಿಗಳಿಗೆ ನರಕಯಾತನೆ: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಕೊರತೆ, ರೋಗಿಗಳ ಪರದಾಟ

ಅಂದರೆ ಗ್ರಾಮೀಣ ಸೇವೆಯನ್ನು ಪೂರ್ಣಗೊಳಿಸಿದ ಬಳಿಕವೇ ಅವರು ಕರ್ನಾಟಕ ವೈದ್ಯಕೀಯ ಪರಿಷತ್‌ (ಕೆಎಂಸಿ)ನಲ್ಲಿ ನೋಂದಣಿ ಮಾಡಿಸಿಕೊಳ್ಳಲು ಅರ್ಹರಾಗುತ್ತಾರೆ. ಕೆಎಂಸಿ ನೋಂದಣಿ ಪ್ರಮಾಣಪತ್ರವಿಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡುವುದು, ಖಾಸಗಿ ಆಸ್ಪತ್ರೆಗಳಲ್ಲಿ ಉದ್ಯೋಗ ಮಾಡುವುದು, ಸ್ವಂತ ಕ್ಲಿನಿಕ್ ಅಥವಾ ನರ್ಸಿಂಗ್ ಹೋಂ ಆರಂಭಿಸುವುದು ಹಾಗೂ ವೈದ್ಯಕೀಯ ವೃತ್ತಿಗಾಗಿ ವಿದೇಶಗಳಿಗೆ ತೆರಳಲು ಸಾಧ್ಯವಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 3:13 pm, Thu, 26 February 26

Source link

‘ಧುರಂಧರ್ 2’ ಸಿನಿಮಾ ನೋಡಲು ದುಬೈನಿಂದ ಭಾರತಕ್ಕೆ ಬರಲಿರುವ ಪ್ರೇಕ್ಷಕರು – Kannada News | Dubai audience will watch Dhurandhar 2 in India Says R Madhavan

ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾ ಕಳೆದ ವರ್ಷ ಬ್ಲಾಕ್ ಬಸ್ಟರ್ ಹಿಟ್ ಆಯಿತು. ಈಗ ಆ ಚಿತ್ರದ ಸೀಕ್ವೆಲ್ ಸಿದ್ಧವಾಗಿದೆ. ಮಾರ್ಚ್ 19ರಂದು ‘ಧುರಂಧರ್ 2’ (Dhurandhar 2) ಸಿನಿಮಾ ರಿಲೀಸ್ ಆಗಲಿದೆ. ಆದರೆ ಕೆಲವು ದೇಶಗಳಲ್ಲಿ ಈ ಚಿತ್ರವನ್ನು ಬ್ಯಾನ್ ಮಾಡಲಾಗಿದೆ. ಮಿಡಲ್ ಈಸ್ಟ್ ದೇಶಗಳಲ್ಲಿ ಈ ಸಿನಿಮಾದ ಬಿಡುಗಡೆಗೆ ನಿಷೇಧ ಹೇರಲಾಗಿದೆ. ಆದರೂ ಪ್ರೇಕ್ಷಕರ ಕ್ರೇಜ್ ಕಡಿಮೆ ಆಗಿಲ್ಲ. ಅನೇಕರು ದುಬೈನಿಂದ ಭಾರತಕ್ಕೆ ಬಂದು ಸಿನಿಮಾ ನೋಡಲಿದ್ದಾರೆ ಎಂದು ಚಿತ್ರದ ನಟ ಆರ್. ಮಾಧವನ್ (R. Madhavan) ಅವರು ಹೇಳಿದ್ದಾರೆ.

‘ಧುರಂಧರ್ 2’ ಸಿನಿಮಾದಲ್ಲಿ ಆರ್. ಮಾಧವನ್ ಅವರು ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಸಿನಿಮಾ ಬಗ್ಗೆ ಜನರಿಗೆ ಇರುವ ಕ್ರೇಜ್ ಎಂಥದ್ದು ಎಂಬುದನ್ನು ಅವರು ವಿವರಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಕೆಲವು ದೇಶಗಳಲ್ಲಿ ಬ್ಯಾನ್ ಆಗಿದ್ದರೂ ಕೂಡ ಪ್ರೇಕ್ಷಕರ ಕ್ರೇಜ್ ಕಡಿಮೆ ಆಗಿಲ್ಲ ಎಂದು ಆರ್. ಮಾಧವನ್ ಹೇಳಿದ್ದಾರೆ.

‘ಅದು ಒಳ್ಳೆಯ ಕಂಟೆಂಟ್​ನ ಶಕ್ತಿ. ದುಬೈನಲ್ಲಿ ಇರುವವರು ಮಾರ್ಚ್ 19ರ ಆಸುಪಾಸಿನಲ್ಲಿ ತಮ್ಮ ಬಿಸ್ನೆಸ್ ಮೀಟಿಂಗ್ ಪ್ಲ್ಯಾನ್ ಮಾಡಿಕೊಂಡು ಭಾರತಕ್ಕೆ ಬರಲಿದ್ದಾರೆ. ಮೀಟಿಂಗ್​​ನಲ್ಲಿ ಭಾಗವಹಿಸುವುದರ ಜೊತೆಗೆ ‘ಧುರಂಧರ್ 2’ ಸಿನಿಮಾವನ್ನು ಕೂಡ ಅವರು ನೋಡಬಹುದು. ಯಾಕೆಂದರೆ ಈ ಸಿನಿಮಾ ದುಬೈನಲ್ಲಿ ರಿಲೀಸ್ ಆಗುತ್ತಿಲ್ಲ’ ಎಂದಿದ್ದಾರೆ ಆರ್. ಮಾಧವನ್.

ಪಾಕಿಸ್ತಾನ, ದುಬೈ ಮುಂತಾದ ಕಡೆಗಳಲ್ಲಿ ‘ಧುರಂಧರ್’ ಸಿನಿಮಾ ರಿಲೀಸ್ ಆಗಿರಲಿಲ್ಲ. ಆದರೆ ಪೈರಸಿ ಕಾಪಿ ಮೂಲಕ ಅಲ್ಲಿನ ಕೋಟ್ಯಂತರ ಜನರು ಸಿನಿಮಾ ನೋಡಿದರು. ಬಳಿಕ ಒಟಿಟಿಯಲ್ಲಿ ಕೂಡ ಸಿನಿಮಾವನ್ನು ವೀಕ್ಷಿಸಿದರು. ಮೊದಲ ಪಾರ್ಟ್ ಸೂಪರ್ ಹಿಟ್ ಆಗಿದ್ದರಿಂದ ಸೀಕ್ವೆಲ್ ಮೇಲೆ ಭಾರಿ ನಿರೀಕ್ಷೆ ಮನೆ ಮಾಡಿದೆ.

ಇದನ್ನೂ ಓದಿ: ಕೆಟ್ಟ ವಿಮರ್ಶೆಗೆ ತಿರುಗೇಟು: ಪ್ರಶಸ್ತಿ ತಿರಸ್ಕರಿಸಿ ಮುಖಭಂಗ ಮಾಡಿದ ‘ಧುರಂಧರ್’ ಚಿತ್ರತಂಡ

ಆರ್. ಮಾಧವನ್, ಸಾರಾ ಅರ್ಜುನ್, ರಣವೀರ್ ಸಿಂಗ್, ಸಂಜಯ್ ದತ್, ಅರ್ಜುನ್ ರಾಮ್​ಪಾಲ್ ಮುಂತಾದವರು ‘ಧುರಂಧರ್ 2’ ಸಿನಿಮಾದಲ್ಲಿ ನಟಿಸಿದ್ದಾರೆ. ಆದಿತ್ಯ ಧಾರ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಮಾರ್ಚ್ 19ರಂದು ‘ಧುರಂಧರ್ 2’ ಎದುರು ಕನ್ನಡದ ‘ಟಾಕ್ಸಿಕ್’ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ಆದ್ದರಿಂದ ಪೈಪೋಟಿ ಹೆಚ್ಚಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಂಗಾಳದ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ, ನುಸುಳುಕೋರರನ್ನು ಓಡಿಸುತ್ತೇವೆ; ಅಮಿತ್ ಶಾ ಶಪಥ – Kannada News | Bjp will win west bengal elections remove every infiltrators amit shah says in bihar

ಅರಾರಿಯಾ, ಫೆಬ್ರವರಿ 26: ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಇಂದು ಬಿಹಾರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) “ನರೇಂದ್ರ ಮೋದಿ ಸರ್ಕಾರವು ಪ್ರತಿಯೊಬ್ಬ ನುಸುಳುಕೋರರನ್ನು ಭಾರತೀಯ ನೆಲದಿಂದ ತೆಗೆದುಹಾಕಲು ದೃಢನಿಶ್ಚಯ ಹೊಂದಿದೆ” ಎಂದು ಘೋಷಿಸಿದ್ದಾರೆ. “ಒಳನುಸುಳುಕೋರರಿಂದ ಮುಕ್ತಿ ಎಂದರೆ ಮತದಾರರ ಪಟ್ಟಿಯಿಂದ ಅವರ ಹೆಸರುಗಳನ್ನು ತೆಗೆದುಹಾಕುವುದು ಎಂದರ್ಥವಲ್ಲ. ಭಾರತದ ನೆಲದಿಂದ ಪ್ರತಿಯೊಬ್ಬ ನುಸುಳುಕೋರರನ್ನು ತೆಗೆದುಹಾಕಲು ನಾವು ಒಂದು ಕಾರ್ಯಕ್ರಮವನ್ನು ಜಾರಿಗೆ ತರಲು ದೃಢನಿಶ್ಚಯ ಹೊಂದಿದ್ದೇವೆ. ಈ ಬಾರಿಯ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ” ಎಂದು ಮೋದಿ ಬಿಹಾರದ ಅರಾರಿಯಾದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಹೇಳಿದ್ದಾರೆ.

“ಪಶ್ಚಿಮ ಬಂಗಾಳದಲ್ಲಿ ಚುನಾವಣೆಗಳು ಸಮೀಪಿಸುತ್ತಿವೆ. ಬಿಜೆಪಿ ಗೆಲ್ಲುತ್ತದೆ ಎಂದು ನನಗೆ ವಿಶ್ವಾಸವಿದೆ. ಹೊಸ ಸರ್ಕಾರ ರಚನೆಯಾದ ನಂತರ, ನಾವು ಪ್ರತಿಯೊಬ್ಬ ನುಸುಳುವವರನ್ನು ದೇಶ ಬಿಟ್ಟು ಓಡಿಸುತ್ತೇವೆ” ಎಂದು ಅವರು ಹೇಳಿದ್ದಾರೆ. ಬಿಹಾರದಲ್ಲಿ ವಿಶೇಷವಾಗಿ ಸೀಮಾಂಚಲ್ ಪ್ರದೇಶದಲ್ಲಿ ಒಳನುಸುಳುವಿಕೆಯ ವಿರುದ್ಧ ಕ್ರಮ ಆರಂಭವಾಗಲಿದೆ. ಕಳೆದ ವರ್ಷ ಇದೇ ವಿಷಯದ ಮೇಲೆ ನಾವು ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದೇವೆ ಎಂದು ಅಮಿತ್ ಶಾ ಹೇಳಿದ್ದಾರೆ.

ಇದನ್ನೂ ಓದಿ: ಇನ್ನೊಮ್ಮೆ ಬಿಜೆಪಿಗೆ ಮತ ಹಾಕಿ, ಅಸ್ಸಾಂನಿಂದ ನುಸುಳುಕೋರರನ್ನು ಹೊರಹಾಕುತ್ತೇವೆ; ಅಮಿತ್ ಶಾ

ಒಳನುಸುಳುವಿಕೆ ದೊಡ್ಡ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂದು ಕರೆದ ಅಮಿತ್ ಶಾ, ಇದು ಜನಸಂಖ್ಯಾ ಸಮತೋಲನವನ್ನು ಅಡ್ಡಿಪಡಿಸುತ್ತದೆ ಮತ್ತು ಸಾರ್ವಜನಿಕ ಕಲ್ಯಾಣ ಸಂಪನ್ಮೂಲಗಳನ್ನು ಹಾಳು ಮಾಡುತ್ತದೆ ಎಂದು ಹೇಳಿದ್ದಾರೆ.

“ನರೇಂದ್ರ ಮೋದಿ ಸರ್ಕಾರವು ಇಡೀ ದೇಶವನ್ನು ನುಸುಳುಕೋರರಿಂದ ಮುಕ್ತಗೊಳಿಸಲು ದೃಢನಿಶ್ಚಯ ಹೊಂದಿದೆ ಮತ್ತು ಈ ಉಪಕ್ರಮವು ಶೀಘ್ರದಲ್ಲೇ ಇಡೀ ಸೀಮಾಂಚಲ್ ಪ್ರದೇಶದಲ್ಲಿ ಪ್ರಾರಂಭವಾಗಲಿದೆ” ಎಂದು ಅಮಿತ್ ಶಾ ಹೇಳಿದ್ದಾರೆ.

ಇದನ್ನೂ ಓದಿ: ಅಸ್ಸಾಂನಲ್ಲಿ 6,839 ಕೋಟಿ ರೂ. ವೆಚ್ಚದ 2ನೇ ಹಂತದ ವೈಬ್ರೆಂಟ್ ವಿಲೇಜಸ್ ಕಾರ್ಯಕ್ರಮಕ್ಕೆ ನಾಳೆ ಅಮಿತ್ ಶಾ ಚಾಲನೆ

ಅಕ್ರಮ ವಲಸೆ ಮಾರ್ಗಗಳು, ದಾಖಲೆ ವಂಚನೆ ಜಾಲಗಳು ಮತ್ತು ಗಡಿಯಾಚೆಗಿನ ಕಳ್ಳಸಾಗಣೆಗಳಿಗೆ ಹೆಸರುವಾಸಿಯಾದ ಬಾಂಗ್ಲಾದೇಶ-ನೇಪಾಳ ಗಡಿಯುದ್ದಕ್ಕೂ ಬಿಹಾರದ ಕಿಶನ್‌ಗಂಜ್, ಅರಾರಿಯಾ, ಪೂರ್ಣಿಯಾ ಮತ್ತು ಕತಿಹಾರ್ ಜಿಲ್ಲೆಗಳನ್ನು ಒಳಗೊಂಡಿರುವ ಸೀಮಾಂಚಲ್ ಪ್ರದೇಶದಲ್ಲಿ ಅಮಿತ್ ಶಾ 3 ದಿನಗಳ ಪ್ರವಾಸವನ್ನು ಪ್ರಾರಂಭಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 3:19 pm, Thu, 26 February 26

Source link