All posts by nagaraj11081993

Video: ಮೋದಿ ಜಾಕೆಟ್ ತೊಟ್ಟು ಪ್ರಧಾನಿ ಮೋದಿಗೆ ಸರ್​ಪ್ರೈಸ್​ ಕೊಟ್ಟ ಇಸ್ರೇಲ್ ಪ್ರಧಾನಿ ನೆತನ್ಯಾಹು – Kannada News | Netanyahu’s Modi Jacket Moment Steals Spotlight at Bilateral Dinner

ಇಸ್ರೇಲ್, ಫೆಬ್ರವರಿ 26: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾರತೀಯ ಉಡುಗೆ ತೊಟ್ಟು ಪ್ರಧಾನಿ ನರೇಂದ್ರ ಮೋದಿಯವರನ್ನು ಅಚ್ಚರಿಗೊಳಿಸಿರುವ ಘಟನೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್​​ಗೆ ಬುಧವಾರ ಹೋಗಿದ್ದು, ಇಂದು ಕೂಡ ಅಲ್ಲೇ ಇರಲಿದ್ದಾರೆ. ಇಸ್ರೇಲ್‌ಗೆ ಆಗಮಿಸಿದ ಮೋದಿ ಅವರು ವಿಮಾನ ಇಳಿದು ಬರುತ್ತಿದ್ದಂತೆ ನೆತನ್ಯಾಹು ನಗುನಗುತ್ತಾ ಕೈ ಹಿಡಿದು ಅಪ್ಪಿಕೊಂಡಿದ್ದರು. ಈ ಸಂದರ್ಭದಲ್ಲಿ ನೆತನ್ಯಾಹು ಪತ್ನಿ ಸಾರಾ ಅವರು ಜೊತೆಗಿದ್ದು ಮೋದಿ ಅವರನ್ನು ಸ್ವಾಗತಿಸಿದ್ದರು.

ಬುಧವಾರ ಜೆರುಸಲೇಂನಲ್ಲಿ ನಡೆದ ಜಂಟಿ ಭೋಜನಕೂಟಕ್ಕೂ ಮುನ್ನ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾರತದ ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸುವ ಮೂಲಕ ಪ್ರಧಾನಿ ಮೋದಿಗೆ ಸರ್​ಪ್ರೈಸ್ ಕೊಟ್ಟಿದ್ದಾರೆ.ಇಸ್ರೇಲಿ ಪ್ರಧಾನಿ ಮೋದಿ ಜಾಕೆಟ್ ಎಂದೂ ಕರೆಯಲ್ಪಡುವ ಕಲ್ಲಿನ ಬಣ್ಣದ ನೆಹರೂ ಜಾಕೆಟ್ ಅನ್ನು ಆಯ್ಕೆ ಮಾಡಿಕೊಂಡಿದ್ದರು.

ಪ್ರಧಾನಿ ಮೋದಿ ಎಕ್ಸ್​​ನಲ್ಲಿ ಪ್ರತಿಕ್ರಿಯಿಸಿದ್ದು, ನಿಜಕ್ಕೂ ಅದ್ಭುತ, ಭಾರತೀಯ ಉಡುಪಿನ ಮೇಲಿನ ನಿಮ್ಮ ಒಲವು ನಮ್ಮ ದೇಶದ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯಗಳ ಮೇಲಿನ ನಿಮ್ಮ ಗೌರವವನ್ನು ಪ್ರತಿಬಿಂಬಿಸುತ್ತದೆ ಎಂದು ಬರೆದಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರಿಗೆ ಜಲಾಘಾತದ ಭೀತಿ: 142 ಕೆರೆಗಳ ನೀರು ಕುಡಿಯಲು ಅಯೋಗ್ಯ ಎಂದ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ – Kannada News | Bengalurus Water Crisis Deepens: 142 Lakes Unfit for Drinking, Pollution Board Reveals

ಬೆಂಗಳೂರು, ಫೆಬ್ರವರಿ 26: ಬೇಸಿಗೆ ಆರಂಭಕ್ಕೂ ಮುನ್ನವೇ ಬೆಂಗಳೂರಿಗೆ ಜಲಾಘಾತದ ಭೀತಿ ಎದುರಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ವರದಿಯ ಪ್ರಕಾರ, ನಗರದ 142 ಕೆರೆಗಳ ನೀರು ಕುಡಿಯಲು ಯೋಗ್ಯವಲ್ಲ ಎಂದು ತಿಳಿದುಬಂದಿದೆ. ಈ ಕೆರೆಗಳಲ್ಲಿ 50 ಕೆರೆಗಳು ಡಿ ವರ್ಗದಲ್ಲಿದ್ದರೆ, ಉಳಿದ 92 ಕೆರೆಗಳು ಇ ವರ್ಗದಲ್ಲಿವೆ. ಇ ವರ್ಗವೆಂದರೆ ಅತ್ಯಂತ ಕಳಪೆ ಗುಣಮಟ್ಟದ ನೀರನ್ನು ಹೊಂದಿದ್ದು, ಸಂಸ್ಕರಿಸಿದ ನಂತರವೂ ಕುಡಿಯಲು ಯೋಗ್ಯವಲ್ಲ. ಮೋರಿ ನೀರು ಮತ್ತು ಕೈಗಾರಿಕಾ ತ್ಯಾಜ್ಯಗಳು ಕೆರೆಗಳ ಒಡಲು ಸೇರುತ್ತಿರುವುದೇ ಈ ಕಲುಷಿತಕ್ಕೆ ಪ್ರಮುಖ ಕಾರಣವಾಗಿದೆ. ಇದರಿಂದ ಅಂತರ್ಜಲ ಮಟ್ಟವೂ ಕಲುಷಿತಗೊಂಡು, ಜಲಚರಗಳ ಜೀವಕ್ಕೂ ಕುತ್ತು ಬಂದಿದೆ. ಸಾರ್ವಜನಿಕರು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

IND vs ZIM: ಪಂದ್ಯ ಗೆಲ್ಲಲು ‘ಕೆಮಿಕಲ್’ ಮೊರೆ ಹೋದ ಟೀಮ್ ಇಂಡಿಯಾ? – Kannada News | ‘Dew Cure” Chemical Used At Chepauk For IND vs ZIM T20 World Cup Match

T20 World Cup 2026: ಭಾರತ ಮತ್ತು ಝಿಂಬಾಬ್ವೆ ನಡುವಣ ನಿರ್ಣಾಯಕ ಪಂದ್ಯಕ್ಕಾಗಿ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಇಬ್ಬನಿಯನ್ನು ತಡೆಗಟ್ಟಲು “ಡ್ಯೂ ಕ್ಯೂರ್” (Dew Cure) ಎಂಬ ವಿಶೇಷ ರಾಸಾಯನಿಕವನ್ನು ಬಳಸಲಾಗಿದೆ. ಪಂದ್ಯದ ವೇಳೆ ಎದುರಾಗುವ ಇಬ್ಬನಿ ಸಮಸ್ಯೆಯನ್ನು ತಡೆಗಟ್ಟುವ ಸಲುವಾಗಿ ಈ ರಾಸಾಯನಿಕವನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗಿದೆ.

“ಡ್ಯೂ ಕ್ಯೂರ್” ಕೆಮಿಕಲ್​ ಅನ್ನು ಸಾಮಾನ್ಯವಾಗಿ ಅಮೆರಿಕದ ಮೇಜರ್ ಲೀಗ್ ಬೇಸ್‌ಬಾಲ್ (MLB) ಪಂದ್ಯಗಳಲ್ಲಿ ಮೈದಾನವನ್ನು ಒಣಗಿಸಲು ಬಳಸಲಾಗುತ್ತದೆ. ಇದೀಗ ಇದೇ ವಿಶೇಷ ರಾಸಾಯನಿಕವನ್ನು ಚೆನ್ನೈನ ಚೆಪಾಕ್ ಮೈದಾನಕ್ಕೆ ಸಿಂಪಡಿಸಲಾಗಿದೆ.

“ಡ್ಯೂ ಕ್ಯೂರ್” ಹೇಗೆ ಕಾರ್ಯ ನಿರ್ವಹಿಸುತ್ತೆ?

“ಡ್ಯೂ ಕ್ಯೂರ್” ಅನ್ನು ನೀರಿನೊಂದಿಗೆ ಬೆರೆಸಿ ಹುಲ್ಲಿನ ಮೇಲೆ ಸಿಂಪಡಿಸಲಾಗುತ್ತದೆ. ಇದು ಹುಲ್ಲಿನ ಎಲೆಗಳ ಮೇಲಿರುವ ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದರಿಂದಾಗಿ ರಾತ್ರಿಯ ಸಮಯದಲ್ಲಿ ವಾತಾವರಣದಲ್ಲಿ ಆರ್ದ್ರತೆ ಹೆಚ್ಚಿದ್ದರೂ ಮೈದಾನ ಒಣಗಿಯೇ ಇರುತ್ತದೆ.

ಚೆನ್ನೈನಲ್ಲಿ ತೇವಾಂಶ 80-90% ಕ್ಕಿಂತ ಹೆಚ್ಚಿರುವ ಕಾರಣ, ತಮಿಳುನಾಡು ಕ್ರಿಕೆಟ್ ಸಂಸ್ಥೆಯು (TNCA) ಮಂಗಳವಾರ ಮತ್ತು ಬುಧವಾರವೇ ಇದನ್ನು ಸಿಂಪಡಿಸಿದೆ. ಪಂದ್ಯದ ದಿನವಾದ ಗುರುವಾರ ಮಧ್ಯಾಹ್ನವೂ ಮತ್ತೊಮ್ಮೆ ಸಿಂಪಡಿಸುವ ಗುರಿ ಹೊಂದಿದೆ.

ಇದರಿಂದಾಗುವ ಲಾಭವೇನು?

ಸಾಮಾನ್ಯವಾಗಿ ರಾತ್ರಿ ಪಂದ್ಯಗಳ ವೇಳೆ ಇಬ್ಬನಿ ಬಿದ್ದಾಗ ಬಾಲ್ ಒದ್ದೆಯಾಗುವುದರಿಂದ ಬೌಲರ್‌ಗಳಿಗೆ ಚೆಂಡನ್ನು ಹಿಡಿಯಲು ಗ್ರಿಪ್ ಸಿಗುವುದಿಲ್ಲ. ಇದರಿಂದ ಎರಡನೇ ಬ್ಯಾಟಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ಲಾಭವಾಗುತ್ತದೆ. ಈ ಸಮಸ್ಯೆಯನ್ನು ನೀಗಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಅದರಂತೆ ಕಳೆದ ಎರಡು ದಿನಗಳ ಕಾಲ ಚೆನ್ನೈನ ಎಂಎ ಚಿದಂಬರಂ ಮೈದಾನಕ್ಕೆ “ಡ್ಯೂ ಕ್ಯೂರ್” ಅನ್ನು ಸಿಂಪಡಿಸಲಾಗಿದೆ. ಇನ್ನು ಕಳೆದ ರಾತ್ರಿ ಭಾರತ ತಂಡವು ಅಭ್ಯಾಸ ನಡೆಸಿದ್ದು, ಈ ವೇಳೆ ಮೈದಾನದಲ್ಲಿ ಇಬ್ಬನಿ ಇಲ್ಲದಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದೆ.

ಈ ಪ್ರಯೋಗ ಯಶಸ್ವಿಯಾದರೆ, ಮುಂಬರುವ ಐಪಿಎಲ್ 2026 ರ ಎಲ್ಲಾ ಪಂದ್ಯಗಳಲ್ಲಿ ಹಾಗೂ ವಿಶ್ವಕಪ್‌ನ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಲ್ಲಿಯೂ “ಡ್ಯೂ ಕ್ಯೂರ್” ಬಳಸಲು ಬಿಸಿಸಿಐ  ಚಿಂತನೆ ನಡೆಸಿದೆ.

ಪಂದ್ಯ ಗೆಲ್ಲಲು ಪ್ಲ್ಯಾನ್?

ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಒಟ್ಟು 6 ಪಂದ್ಯಗಳನ್ನಾಡಲಾಗಿದೆ. ಈ ಪಂದ್ಯಗಳ ವೇಳೆ ಒಮ್ಮೆಯೂ “ಡ್ಯೂ ಕ್ಯೂರ್” ಬಳಸಲಾಗಿಲ್ಲ. ಆದರೆ ಭಾರತ ತಂಡದ ನಿರ್ಣಾಯಕ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಗೆ ಅನುಕೂಲವಾಗಲೆಂದೇ “ಡ್ಯೂ ಕ್ಯೂರ್”  ಬಳಸಲಾಗಿದೆಯೇ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಏಕೆಂದರೆ ಚೆನ್ನೈ ಪಿಚ್​ನಲ್ಲಿ ಟಾಸ್ ಪ್ರಮುಖ ಪಾತ್ರವಹಿಸುತ್ತದೆ. ಏಕೆಂದರೆ 2ನೇ ಬ್ಯಾಟಿಂಗ್ ವೇಳೆ ಇಬ್ಬನಿ ಇರುವುದರಿಂದ ಬೌಲಿಂಗ್ ಮಾಡುವುದು ಕಷ್ಟಕರ. ಇತ್ತ ಟಾಸ್ ಸೋತರೆ ಟೀಮ್ ಇಂಡಿಯಾ ಗೆಲುವು ಕೂಡ ಕಷ್ಟವಾಗಲಿದೆ. ಅದರಲ್ಲೂ ನೆಟ್ ರನ್ ರೇಟ್ ಟಾರ್ಗೆಟ್​ನೊಂದಿಗೆ ಗೆಲ್ಲಲು ಭಾರತ ತಂಡ ಪ್ಲ್ಯಾನ್ ರೂಪಿಸುತ್ತಿದೆ.

ಇದರ ನಡುವೆ ಇಬ್ಬನಿ ಸಮಸ್ಯೆಯನ್ನೇ ಇಲ್ಲದಾಗಿಸುವ ಮೂಲಕ ಟಾಸ್ ಚಿಂತೆಯನ್ನು ದೂರ ಮಾಡಿದ್ದಾರೆ. ಇದು ಟೀಮ್ ಇಂಡಿಯಾಗೆ ಅನುಕೂಲ ಮಾಡಿಕೊಡಲೆಂದೇ ಮಾಡಿದ ತಂತ್ರ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ.  ಒಟ್ಟಿನಲ್ಲಿ ಭಾರತದ ಪಂದ್ಯಕ್ಕೂ ಚೆನ್ನೈ ಮೈದಾನದಲ್ಲಿ ಸಿಂಪಡಿಸಿದ “ಡ್ಯೂ ಕ್ಯೂರ್” ಹೊಸ ಚರ್ಚೆಯನ್ನು ಹುಟ್ಟುಹಾಕುವ ಸಾಧ್ಯತೆಯಿದೆ.

ಚೆನ್ನೈ ಪಿಚ್ ರಿಪೋರ್ಟ್​:

ಚೆನ್ನೈನ ಎಂಎ ಚಿದಂಬರಂ ಮೈದಾನವು ಸಾಂಪ್ರದಾಯಿಕವಾಗಿ ಸ್ಪಿನ್ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತದೆ. ಇಲ್ಲಿನ ಪಿಚ್ ಒಣಗಿದ್ದು, ಚೆಂಡು ನಿಧಾನವಾಗಿ ಬ್ಯಾಟ್‌ಗೆ ಬರುತ್ತದೆ. ಇದರಿಂದ ವರುಣ್ ಚಕ್ರವರ್ತಿ ಮತ್ತು ಅಕ್ಷರ್ ಪಟೇಲ್​ ಅವರಂತಹ ಸ್ಪಿನ್ನರ್‌ಗಳು ಪಂದ್ಯದ ಮೇಲೆ ಹಿಡಿತ ಸಾಧಿಸುವ ಸಾಧ್ಯತೆಯಿದೆ.

ಸಾಮಾನ್ಯವಾಗಿ ಚೆನ್ನೈನಲ್ಲಿ ರಾತ್ರಿ ವೇಳೆ ಇಬ್ಬನಿ ಬರುವುದರಿಂದ ಎರಡನೇ ಬ್ಯಾಟಿಂಗ್ ಮಾಡುವ ತಂಡಕ್ಕೆ ಲಾಭವಾಗುತ್ತಿತ್ತು. ಆದರೆ, ಈ ಬಾರಿ “ಡ್ಯೂ ಕ್ಯೂರ್” ರಾಸಾಯನಿಕ ಬಳಸಿರುವುದರಿಂದ ಮೈದಾನ ಒಣಗಿರಲಿದೆ. ಇದರಿಂದ ಟಾಸ್ ಗೆದ್ದ ತಂಡವು ಮೊದಲು ಬ್ಯಾಟಿಂಗ್ ಮಾಡಲು ಹೆಚ್ಚು ಆಸಕ್ತಿ ತೋರಿಸಬಹುದು, ಏಕೆಂದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಪಿಚ್ ಮತ್ತಷ್ಟು ನಿಧಾನಗತಿಯಾಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಝಿಂಬಾಬ್ವೆ ವಿರುದ್ಧ ಭಾರತ ಎಷ್ಟು ರನ್​ಗಳಿಂದ ಗೆಲ್ಲಬೇಕು?

ಇನ್ನು ಈ ಮೈದಾನದಲ್ಲಿ ಹೈ-ಸ್ಕೋರಿಂಗ್ ನಿರೀಕ್ಷಿಸುವಂತಿಲ್ಲ. ಇಲ್ಲಿ 160 ರಿಂದ 175 ರನ್‌ಗಳು ಸವಾಲಿನ ಮೊತ್ತವೆಂದು ಪರಿಗಣಿಸಲ್ಪಡುತ್ತವೆ. ಪಂದ್ಯ ಮುಂದುವರಿದಂತೆ ಬ್ಯಾಟಿಂಗ್ ಕಷ್ಟವಾಗುವುದರಿಂದ, ಮೊದಲ 6 ಓವರ್‌ಗಳ ಪವರ್‌ಪ್ಲೇನಲ್ಲಿ ಗರಿಷ್ಠ ರನ್ ಗಳಿಸುವುದು ತಂಡಗಳಿಗೆ ಮುಖ್ಯವಾಗುತ್ತದೆ.

Published On – 11:07 am, Thu, 26 February 26

Source link

‘ಆ ವಿಷಯಕ್ಕೆ ಡಿವೋರ್ಸ್ ಆಯ್ತು’; ಕೊನೆಗೂ ಮೌನ ಮುರಿದ ಅಖಿಲಾ ಪಜಿಮಣ್ಣು – Kannada News | Akhila Pajimannu Reveals Why She took divorce from Dhananjay

ಅಖಿಲಾ ಪಜಿಮಣ್ಣು ಹಾಗೂ ಧನಂಜಯ್ ಶರ್ಮಾ ವಿವಾಹ ಆಗಿ ಕೆಲವು ವರ್ಷ ಒಟ್ಟಿಗೆ ಇದ್ದರು. ಆ ಬಳಿಕ ಇವರು ಬೇರೆ ಆಗುವ ನಿರ್ಧಾರಕ್ಕೆ ಬಂದರು. ಈ ವಿಷಯ ಸಾಕಷ್ಟು ಚರ್ಚೆ ಆಯಿತು. ಈ ವರೆಗೆ ಅವರು ಈ ಬಗ್ಗೆ ಮಾತನಾಡಿಯೇ ಇರಲಿಲ್ಲ ಎಂಬುದು ಎಲ್ಲರಿಗೂ ತಿಳಿದೇ ಇದೆ. ಈಗ ಅಖಿಲಾ ಅವರು ಈ ಬಗ್ಗೆ ಮಾತನಾಡಿದ್ದಾರೆ. ಅವರು ತಮ್ಮ ಬಗ್ಗೆ ಕೇಳಿ ಬಂದ ವದಂತಿಗೆ ಫುಲ್ ಸ್ಟಾಪ್ ಹಾಕಿದ್ದಾರೆ. ಆ ಬಗ್ಗೆ ಇಲ್ಲಿ ನೋಡೋಣ.

‘ಕೊರೊನಾ ಸಮಯದಲ್ಲಿ ನಾನು ಮದುವೆ ಆದೆ. ಆ ಬಳಿಕ ಅಮೆರಿಕ ಹೋದೆ. ನಾನು ಅಲ್ಲಿ ಮ್ಯೂಸಿಕ್ ಕ್ಲಾಸ್ ಮಾಡುತ್ತಿದ್ದೆ. ಅಲ್ಲಿ ಗೆಳೆಯರನ್ನು ಮಾಡಿಕೊಳ್ಳಲು ಆರಂಭಿಸಿದೆ. ನಾನು ಖುಷಿಯಾಗಿದ್ದೆ’ ಎಂದು ದಿ ಪವರ್​ ಹೌಸ್​ ವೈನ್ಸ್​​ಗೆ ನೀಡಿದ ಸಂದರ್ಶನದಲ್ಲಿ ಅಖಿಲಾ ಅವರು ಮಾತನಾಡಿದ್ದಾರೆ.

‘ನನಗೆ ವಿಚ್ಛೇದನ ವಿಷಯವು ಲೀಕ್ ಆಗುವುದು ಇಷ್ಟವೇ ಇರಲಿಲ್ಲ. ನನ್ನ ತಂದೆ ನನ್ನನ್ನು ಪ್ರಿಪ್ಯಾರ್ ಮಾಡಿದ್ರು. ಸೆಲೆಬ್ರಿಟಿಗಳ ವಿಚ್ಛೇದನ ವಿಷಯ ಲೀಕ್ ಆಗುತ್ತದೆ ಎಂದು ನನ್ನ ತಂದೆಗೆ ಗೊತ್ತಿತ್ತು. ಇದು ಏಕಾಏಕಿ ತೆಗೆದುಕೊಂಡ ನಿರ್ಧಾರ ಅಲ್ಲವೇ ಅಲ್ಲ. ರಾತ್ರಿ ನಾವು ಡಿವೋರ್ಸ್ ಆಗೋಣ ಎಂದು ನಿರ್ಧರಿಸಿ, ಮರುದಿನ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದವರು ನಾವಲ್ಲ. ನಾವಿಬ್ಬರೂ ಒಂದೂವರೆ ವರ್ಷ ಸಂಬಂಧ ಸರಿದೂಗಿಸಲು ಪ್ರಯತ್ನ ಮಾಡಿದೆವು. ವರ್ಕ್ ಆಗುತ್ತಿಲ್ಲ ಎಂಬುದು ಗೊತ್ತಾದ ಬಳಿಕ ಭಾರತಕ್ಕೆ ಮರಳಿದೆ’ ಎಂದು ಅವರು ಹೇಳಿದರು.

‘ಸುದ್ದಿ ಬರುತ್ತೆ ಹೋಗುತ್ತೆ. ಆದರೆ, ನಾವು ಪಡುವ ಕಷ್ಟ ನನಗೆ ಮಾತ್ರ ಗೊತ್ತು ಎಂದು ನನಗೆ ಅನಿಸಿತು. ಸುದ್ದಿ ಬರುತ್ತೆ-ಹೋಗುತ್ತೆ. ನನಗೆ ರಿಯಾಲಿಶಿಟಿ ಶೋ ಆಫರ್ ಬಂತು ಎಂದು ನಾನು ವಿಚ್ಛೇದನ ನಿರ್ಧಾರ ತೆಗೆದುಕೊಂಡೆ ಎಂದೆಲ್ಲ ಹೇಳಲಾಯಿತು. ಆದರೆ, ಆ ರೀತಿ ಏನು ಇಲ್ಲ’ ಎಂದು ಅವರು ವಿವರಿಸಿದರು.

ಇದನ್ನೂ ಓದಿ:  ಖ್ಯಾತ ಗಾಯಕಿ ಅಖಿಲಾ ಪಜಿಮಣ್ಣು ವಿಚ್ಛೇದನಕ್ಕೆ ಕಾರಣವೇನು ಗೊತ್ತಾ?

ಧನಂಜಯ್ ಅವರು ಅಮೆರಿಕದಲ್ಲಿ ವಾಸವಿದ್ದಾರೆ. ಅವರು ಅಖಿಲಾಗೆ ಕೆಲಸ ಮಾಡುವ ಸ್ವಾತಂತ್ರ್ಯ ಕೊಟ್ಟಿಲ್ಲ ಎಂದೆಲ್ಲ ಹೇಳಲಾಗಿತ್ತು. ಆದರೆ, ಅಖಿಲಾ ಅದೆಲ್ಲವನ್ನೂ ತಳ್ಳಿ ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಲಕ್ಷ ಲಕ್ಷ ಸಾಲ ಮಾಡಿ ತೀರಿಸಲಾಗದೆ 120 ಅಡಿ ಹೈಟೆನ್ಶನ್ ಟವರ್ ಏರಿದ ಭೂಪ! ಆಮೇಲೇನಾಯ್ತು? ಇಲ್ಲಿದೆ ನೋಡಿ – Kannada News | Tumakuru: Man Climbs 120 Foot 400kV High Tension Tower in Pavagada Over Debt Pressure, Rescued by Fire Officials

ತುಮಕೂರು, ಫೆಬ್ರವರಿ 26: ಲಕ್ಷಾಂತರ ರೂಪಾಯಿ ಕೈಸಾಲ ಮಾಡಿ ಮರುಪಾವತಿಸಲು ಆಗದೆ ಸಂಕಷ್ಟಕ್ಕೊಳಗಾದ ವ್ಯಕ್ತಿಯೊಬ್ಬ 400 ಕೆವಿ ಹೈಟೆನ್ಶನ್ ವಿದ್ಯುತ್ ಟವರ್ ಏರಿ ಹುಚ್ಚಾಟ ಮೆರೆದ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಬಿಕೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಗೋಪಾಲ ಎಂಬಾತ ಬಿಕೆಹಳ್ಳಿ–ದಳವೆಹಳ್ಳಿ ರಸ್ತೆಯ ಮಧ್ಯೆ ಇರುವ ಸುಮಾರು 120 ಅಡಿ ಎತ್ತರದ ಹೈಟೆನ್ಶನ್ ಟವರ್‌ ಏರಿ ಕುಳಿತಿದ್ದಾನೆ. ಸಾಲದ ಒತ್ತಡದಿಂದ ಬೇಸತ್ತು ಈ ದುಸ್ಸಾಹಸಕ್ಕೆ ಕೈಹಾಕಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆ ಕುರಿತು ಮಾಹಿತಿ ತಿಳಿದ ತಿರುಮಣಿ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಗೋಪಾಲನನ್ನು ಸಮಾಧಾನಪಡಿಸುವ ಪ್ರಯತ್ನ ನಡೆಸಿದರು. ಹಲವು ಗಂಟೆಗಳ ಮಾತುಕತೆಯ ಬಳಿಕ ಗೋಪಾಲ ಸಮಾಧಾನಗೊಂಡರೂ, ಅಷ್ಟು ಎತ್ತರದಿಂದ ಸುರಕ್ಷಿತವಾಗಿ ಕೆಳಗಿಳಿಯುವುದು ಕಷ್ಟಕರವಾಗಿತ್ತು. ನಂತರ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಸಿಬ್ಬಂದಿ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಹಗ್ಗ, ಹಾರ್ನೆಸ್ ಬೆಲ್ಟ್, ಲ್ಯಾಡರ್ ಸೇರಿದಂತೆ ಅಗತ್ಯ ರಕ್ಷಣಾ ಉಪಕರಣಗಳನ್ನು ಬಳಸಿ ಎಚ್ಚರಿಕೆಯಿಂದ ಗೋಪಾಲನನ್ನು ಕೆಳಗಿಳಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕುವೈತ್​​ನಲ್ಲಿರುವ ತಾಯಿಗೆ ‘ಐ ಲವ್ ಯೂ ಸೋ ಮಚ್’ ಎಂದು ಸಂದೇಶ ಕಳುಹಿಸಿ ನೇಣಿನ ಕುಣಿಕೆಗೆ ಕೊರಳೊಡ್ಡಿದ ವಿದ್ಯಾರ್ಥಿನಿ – Kannada News | Hyderabad Student Suicide: YouTuber Komali Dies After Breakup, Texts Mother in Kuwait

ಹೈದರಾಬಾದ್, ಫೆಬ್ರವರಿ 26: ಯೂಟ್ಯೂಬರ್ ಹಾಗೂ ಬಿಎಸ್​ಸಿ ವಿದ್ಯಾರ್ಥಿನಿ ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿರುವ ತನ್ನ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಾಯುವ ಮುನ್ನ ಕುವೈತ್​​ನಲ್ಲಿರುವ ತಾಯಿಗೆ ಐ ಲವ್ ಯೂ ಸೋ ಮಚ್ ಎಂದು ಸಂದೇಶ ಕಳುಹಿಸಿದ್ದಾಳೆ.ಈ ಘಟನೆ ಫೆಬ್ರವರಿ 23 ರಂದು (ಸೋಮವಾರ) ನಡೆದಿದ್ದು, ಆಕೆಯ ತಾಯಿ ಕುವೈತ್​ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತಳನ್ನು ಕೋಮಲಿ ಎಂದು ಗುರುತಿಸಲಾಗಿದ್ದು, ಅವರು ಮೂಲತಃ ಆಂಧ್ರಪ್ರದೇಶದ ವಿಶಾಖಪಟ್ಟಣಂ ಮೂಲದವರು. ಅವರು ಕಳೆದ 11 ತಿಂಗಳಿನಿಂದ ಹೈದರಾಬಾದ್‌ನಲ್ಲಿರುವ ತಮ್ಮ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು, ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆಯುತ್ತಿದ್ದರು. ವಿಜ್ಞಾನ ವಿದ್ಯಾರ್ಥಿನಿಯಾಗುವುದರ ಜೊತೆಗೆ, ಯೂಟ್ಯೂಬರ್ ಕೂಡ ಆಗಿದ್ದರು.

ಫೆಬ್ರವರಿ 23 ರ ಬೆಳಗ್ಗೆ, ಆಕೆ ತನ್ನ ತಾಯಿ ಬಿ ಸತ್ಯ ವರಲಕ್ಷ್ಮಿಗೆ ಒಂದು ಸಂದೇಶ ಕಳುಹಿಸಿದ್ದಳು, ನಿಮ್ಮನ್ನು ತುಂಬಾ ಪ್ರೀತಿಸುತ್ತೀನಿ ಅಮ್ಮ ಎಂದು ಬರೆದಿದ್ದು, ಕಿರಿಯ ಸಹೋದರನನ್ನು ನೋಡಿಕೊಳ್ಳುವಂತೆ ಕೇಳಿಕೊಂಡಿದ್ದಾಳೆ. ಇದಾದ ನಂತರ, ಅವಳ ಫೋನ್ ಸ್ವಿಚ್ ಆಫ್ ಆಗಿತ್ತು.

ವರಲಕ್ಷ್ಮಿ ಕೋಮಲಿಗೆ ಕರೆ ಮಾಡಲು ಪ್ರಯತ್ನಿಸುತ್ತಲೇ ಇದ್ದರು, ಆದರೆ ಎಲ್ಲಾ ಕರೆಗಳಿಗೂ ಉತ್ತರ ಸಿಗಲಿಲ್ಲ. ನಂತರ, ಅವರು ಸ್ನೇಹಿತರಿಗೆ ಮಾಹಿತಿ ನೀಡಿ ಹೈದರಾಬಾದ್‌ನಲ್ಲಿರುವ ಕೋಮಲಿಯ ಫ್ಲಾಟ್‌ಗೆ ಹೋಗುವಂತೆ ಕೇಳಿಕೊಂಡಿದ್ದಾರೆ.

ಮತ್ತಷ್ಟು ಓದಿ: ಸಿ.ಜೆ ರಾಯ್ ಆತ್ಮಹತ್ಯೆ ಕೇಸ್ ಗೆ ಮೆಗಾ ಟ್ವಿಸ್ಟ್: ಕಾನ್ಫಿಡೆಂಟ್ ಒಡೆಯನಿಗೆ ಮುಳುವಾಯ್ತಾ 500 ಕೋಟಿ ರೂ.?

ಮಧ್ಯಾಹ್ನ 3 ಗಂಟೆ ಸುಮಾರಿಗೆ ಅವರು ಫ್ಲಾಟ್‌ಗೆ ಹೋಗಿದ್ದಾರೆ, ಆದರೆ ಪದೇ ಪದೇ ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಪೊಲೀಸರು ಕೂಡಲೇ, ಬೀಗ ಮುರಿದು ಅಪಾರ್ಟ್ಮೆಂಟ್ ಒಳಗೆ ಹೋದರು, ಅಲ್ಲಿ ಕೋಮಲಿಯ ಶವ ಸೀಲಿಂಗ್ ಫ್ಯಾನ್‌ನಿಂದ ನೇತಾಡುತ್ತಿರುವುದು ಕಂಡುಬಂದಿದೆ.

ಪೊಲೀಸರು ಒಂದು ಸಣ್ಣ ಏಣಿ ಮತ್ತು ಸೀರೆಯನ್ನು ಸಹ ವಶಪಡಿಸಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, 21 ವರ್ಷದ ಯುವತಿ ಕಳೆದ ಮೂರು ವರ್ಷಗಳಿಂದ 27 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಜೊತೆ ಸಂಬಂಧ ಹೊಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ, ಅವರು ಇತ್ತೀಚೆಗೆ ತಮ್ಮ ಸಂಬಂಧವನ್ನು ಕೊನೆಗೊಳಿಸಿದ್ದರು.

ಆರು ತಿಂಗಳ ಹಿಂದೆಯೂ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ಈಗ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆಗಾಗಿ ಪೊಲೀಸರು ಎಲ್ಲಾ ಭೌತಿಕ ಮತ್ತು ಡಿಜಿಟಲ್ ಪುರಾವೆಗಳನ್ನು ಸಂಗ್ರಹಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Gold Rate Today: ಚಿನ್ನದ ಬೆಲೆ ತುಸು ಇಳಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 26th February 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಫೆಬ್ರುವರಿ 26: ನಿನ್ನೆ 10 ರೂನಷ್ಟು ಅಲ್ಪ ಏರಿಕೆ ಆಗಿದ್ದ ಚಿನ್ನದ ಬೆಲೆ (Gold Rates) ಇವತ್ತು ಗುರುವಾರ 20 ರೂ ತಗ್ಗಿದೆ. ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಚಿನ್ನದ ಬೆಲೆಯಲ್ಲಿ ಅಲ್ಪ ಸ್ವಲ್ಪ ಏರುಪೇರುಗಳಾಗಿವೆ. ಉಳಿದಂತೆ ಅಮೂಲ್ಯ ಲೋಹಗಳ ಬೆಲೆ ಬಹುತೇಕ ಸ್ಥಿರವಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,48,200 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,61,680 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,48,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 28,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಫೆಬ್ರುವರಿ 26ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,168 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,820 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,126 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,168 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,820 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,820 ರೂ
  • ಚೆನ್ನೈ: 14,920 ರೂ
  • ಮುಂಬೈ: 14,820 ರೂ
  • ದೆಹಲಿ: 14,835 ರೂ
  • ಕೋಲ್ಕತಾ: 14,820 ರೂ
  • ಕೇರಳ: 14,820 ರೂ
  • ಅಹ್ಮದಾಬಾದ್: 14,825 ರೂ
  • ಜೈಪುರ್: 14,835 ರೂ
  • ಲಕ್ನೋ: 14,835 ರೂ
  • ಭುವನೇಶ್ವರ್: 14,820 ರೂ

ಇದನ್ನೂ ಓದಿ: ಕ್ಯಾಷ್ ಪೆಮೆಂಟ್​ನಿಂದ ಹಿಡಿದು ವಿತ್​ಡ್ರಾಯಲ್​ವರೆಗೆ, ಆದಾಯ ತೆರಿಗೆ ಇಲಾಖೆಯ ಕಣ್ಣಿಂದ ತಪ್ಪಿಸಿಕೊಳ್ಳಲಾಗದ 16 ಹಣಕಾಸು ವಹಿವಾಟುಗಳಿವು…

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 618 ರಿಂಗಿಟ್ (14,440 ರುಪಾಯಿ)
  • ದುಬೈ: 581.75 ಡಿರಾಮ್ (14,392 ರುಪಾಯಿ)
  • ಅಮೆರಿಕ: 162 ಡಾಲರ್ (14,723 ರುಪಾಯಿ)
  • ಸಿಂಗಾಪುರ: 204 ಸಿಂಗಾಪುರ್ ಡಾಲರ್ (14,675 ರುಪಾಯಿ)
  • ಕತಾರ್: 572.50 ಕತಾರಿ ರಿಯಾಲ್ (14,272 ರೂ)
  • ಸೌದಿ ಅರೇಬಿಯಾ: 590 ಸೌದಿ ರಿಯಾಲ್ (14,294 ರುಪಾಯಿ)
  • ಓಮನ್: 61.40 ಒಮಾನಿ ರಿಯಾಲ್ (14,493 ರುಪಾಯಿ)
  • ಕುವೇತ್: 47.42 ಕುವೇತಿ ದಿನಾರ್ (14,105 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 285 ರೂ
  • ಚೆನ್ನೈ: 295 ರೂ
  • ಮುಂಬೈ: 285 ರೂ
  • ದೆಹಲಿ: 285 ರೂ
  • ಕೋಲ್ಕತಾ: 285 ರೂ
  • ಕೇರಳ: 295 ರೂ
  • ಅಹ್ಮದಾಬಾದ್: 285 ರೂ
  • ಜೈಪುರ್: 285 ರೂ
  • ಲಕ್ನೋ: 285 ರೂ
  • ಭುವನೇಶ್ವರ್: 295 ರೂ
  • ಪುಣೆ: 285

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ ಕನ್ನಡದ ಸಿನಿಮಾ ಅಲ್ಲವೆಂದ ಹಿರಿಯ ನಿರ್ದೇಶಕ: ಕೊಟ್ಟ ಕಾರಣವೇನು? – Kannada News | Rajendra Singh Babu praised Toxic said its not only Kannada movie its international

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಭಾರತದ ಅತ್ಯಂತ ನಿರೀಕ್ಷೆಯ ಸಿನಿಮಾ ಎನಿಸಿಕೊಂಡಿದೆ. ಸಿನಿಮಾಕ್ಕಾಗಿ ದೇಶದಾದ್ಯಂತ ಮಾತ್ರವಲ್ಲದೆ ವಿದೇಶಿ ಸಿನಿಮಾ ಪ್ರೇಮಿಗಳು ಸಹ ಎದುರು ನೋಡುತ್ತಿದ್ದಾರೆ. ಇನ್ನು ಕನ್ನಡದ ಸಿನಿಮಾ ಕರ್ಮಿಗಳು ಸಹ ವೈಷಮ್ಯಗಳನ್ನು ಮರೆತು ತಮ್ಮ ಚಿತ್ರರಂಗದ ಸಿನಿಮಾ ಎಂಬ ಕಾರಣಕ್ಕೆ ಭರಪೂರ ಬೆಂಬಲ ನೀಡುತ್ತಿದ್ದಾರೆ. ‘ಟಾಕ್ಸಿಕ್’ ಸಿನಿಮಾದ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸಹ ಇದಕ್ಕೆ ಹೊರತಲ್ಲ. ‘ಟಾಕ್ಸಿಕ್’ ಸಿನಿಮಾವನ್ನು ಅದರ ಮೇಕಿಂಗ್ ಅನ್ನು ಅವರು ಕೊಂಡಾಡಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಹಲವಾರು ಬ್ಲಾಕ್ ಬಸ್ಟರ್, ಕಲ್ಟ್ ಕ್ಲಾಸಿಕ್ ಸಿನಿಮಾಗಳನ್ನು ನೀಡಿರುವ ರಾಜೇಂದ್ರ ಸಿಂಗ್ ಬಾಬು ಅವರು ಈಗಲೂ ಸಹ ಸಿನಿಮಾ ನಿರ್ದೇಶನದಲ್ಲಿ ತೊಡಗಿಕೊಂಡಿದ್ದು ಇದೀಗ ‘ವೀರಕಂಬಳ’ ಹೆಸರಿನ ಹೊಸ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಪ್ರಚಾರದ ವೇಳೆ ಟಿವಿ9 ಜೊತೆಗೆ ಮಾತನಾಡಿರುವ ಅವರು, ಬಹುನಿರೀಕ್ಷಿತ ಸಿನಿಮಾ ಮತ್ತು ಚರ್ಚೆಯಲ್ಲಿರುವ ಸಿನಿಮಾ ಆಗಿರುವ ‘ಟಾಕ್ಸಿಕ್’ ಸಿನಿಮಾದ ಬಗ್ಗೆಯೂ ಮಾತನಾಡಿದ್ದಾರೆ. ಈ ವೇಳೆ ‘ಟಾಕ್ಸಿಕ್’ ಸಿನಿಮಾವನ್ನು ಭಿನ್ನ ಕೋನದಿಂದ ನೋಡಿರುವ ಹಿರಿಯ ನಿರ್ದೇಶಕರು, ‘ಟಾಕ್ಸಿಕ್’ ಕನ್ನಡ ಸಿನಿಮಾ ಅಲ್ಲ ಎಂದಿದ್ದಾರೆ. ಅದಕ್ಕೆ ಕಾರಣವನ್ನೂ ನೀಡಿದ್ದಾರೆ.

ಇದನ್ನೂ ಓದಿ:‘ಟಾಕ್ಸಿಕ್’ ಚಿತ್ರದ ಇಂಗ್ಲಿಷ್ ಆವೃತ್ತಿ ರಿಲೀಸ್ ಬಗ್ಗೆ ಯಶ್ ಅಭಿಮಾನಿಗಳಲ್ಲಿ ಗೊಂದಲ

ಟಿವಿ9 ಜೊತೆಗೆ ಮಾತನಾಡಿರುವ ರಾಜೇಂದ್ರ ಸಿಂಗ್ ಬಾಬು, ‘ಟಾಕ್ಸಿಕ್’ ಅನ್ನು ಕೇವಲ ಕನ್ನಡ ಸಿನಿಮಾ ಎನ್ನಲಾಗದು, ಅದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಗುಣಮಟ್ಟ ಹೊಂದಿರುವ ಸಿನಿಮಾ, ಆ ಸಿನಿಮಾದ ಬಗ್ಗೆ ನಮಗೆಲ್ಲ ಹೆಮ್ಮೆ ಇದೆ’ ಎಂದಿದ್ದಾರೆ. ಮುಂದುವರೆದು ಮಾತನಾಡಿ, ‘ಅಲ್ಲಿ ನಾಯಕನಿಗೆ ವಿಶೇಷ ಮೌಲ್ಯ ಇದೆ, ಅದ್ಭುತವಾದ ಪ್ರೊಡಕ್ಷನ್ ಇದೆ, 600 ಕೋಟಿ ರೂಪಾಯಿ ಹಣ ಖರ್ಚು ಮಾಡಿದ್ದಾರೆ. ಅಂಥಹ ಸಿನಿಮಾ ಬಂದಿರುವುದು ನಮಗೆಲ್ಲ ಸಂತೋಷ’ ಎಂದಿದ್ದಾರೆ ಬಾಬು.

‘ಟಾಕ್ಸಿಕ್’ ಸಿನಿಮಾದ ಟೀಸರ್​​ ವಿರುದ್ಧ ಅಶ್ಲೀಲತೆ ಆರೋಪ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿರುವ ರಾಜೇಂದ್ರ ಸಿಂಗ್ ಬಾಬು, ‘ಅದ್ಭುತವಾದ ಮೇಕಿಂಗ್ ಮಾಡಿದ್ದಾರೆ. ಯಾವುದೇ ಇಂಗ್ಲೀಷ್ ಸಿನಿಮಾಕ್ಕೂ ಕಡಿಮೆ ಇಲ್ಲದಂತೆ ಅದನ್ನು ಅವರು ಮಾಡಿದ್ದಾರೆ. ಯಾವುದನ್ನೇ ಆದರೂ ಕೂದಲು ಸೀಳುತ್ತಾ ಕುಳಿತರೆ ಆಗವುದಿಲ್ಲ, ಹಾಗೆ ಮಾಡಿದಾಗ ಒಂದಲ್ಲ ಒಂದು ತಪ್ಪು ಸಿಗುತ್ತವೆ, ಆದರೆ ಅದನ್ನೇ ದೊಡ್ಡದು ಮಾಡಿ, ನಿಜವಾದ ಶ್ರಮವನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ, ಪ್ರಯತ್ನಕ್ಕೆ ನಾವು ಭೇಷ್ ಎನ್ನಬೇಕು’ ಎಂದಿದ್ದಾರೆ.

‘ಒಬ್ಬ ಮನುಷ್ಯ ತಾನು ಮನಸ್ಸು ಮಾಡಿದರೆ ಬೆಟ್ಟವನ್ನೇ ಅಲ್ಲಾಡಿಸಬಹುದು ಎಂಬುದಕ್ಕೆ ಯಶ್ ಉದಾಹರಣೆ. ಹತ್ತು ವರ್ಷಗಳ ಹಿಂದೆ ಒಮ್ಮೆ ಭೇಟಿ ಆಗಿದ್ದಾಗ ಹೀಗೆ ಸಿನಿಮಾಗಳ ಬಗ್ಗೆ ಮಾತನಾಡುತ್ತಿದ್ದೆವು, ಆಗಲೇ ಯಶ್ ಹೇಳಿದ್ದರು, ಸರ್ ನಾನು ಮಾಡೇ ಮಾಡ್ತೀನಿ, 250 ಕೋಟಿ ಸಿನಿಮಾ ಮಾಡ್ತೀನಿ ಎಂದಿದ್ದರು. ಅದರಂತೆ ಅವರು ಇಂದು ಮಾಡಿದ್ದಾರೆ, ಅದನ್ನೂ ಮೀರಿ ಹೋಗಿದ್ದಾರೆ’ ಎಂದಿದ್ದಾರೆ ಯಶ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವ್ಯಕ್ತಿಯ ಮರ್ಮಾಂಗ ಕತ್ತರಿಸಿ ಹತ್ಯೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್: ಕೊಲೆಗೆ ಸಾಥ್ ಕೊಟ್ಟು ಡ್ರಾಮಾ ಮಾಡಿದ್ದ ಹೆಂಡ್ತಿ, ಮಗ! – Kannada News | Belagavi: Wife, Son Among Four Arrested in Brutal Kittur Murder Over Property Dispute

ವ್ಯಕ್ತಿಯ ಮರ್ಮಾಂಗ ಕತ್ತರಿಸಿ ಹತ್ಯೆ ಪ್ರಕರಣ ಬಯಲಿಗೆಳೆದ ಪೊಲೀಸರು (ಒಳಚಿತ್ರದಲ್ಲಿ ಕಲ್ಮೇಶ್)Image Credit source: tv9

ಬೆಳಗಾವಿ, ಫೆಬ್ರವರಿ 26: ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಹೊರವಲಯದಲ್ಲಿ ವ್ಯಕ್ತಿಯ ಮರ್ಮಾಂಗ ಕತ್ತರಿಸಿ ಅಮಾನುಷವಾಗಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಇದೀಗ ಸ್ಫೋಟಕ ತಿರುವು ಸಿಕ್ಕಿದೆ. ಕೊಲೆಯಾದ ವ್ಯಕ್ತಿಯ ಪತ್ನಿ ಹಾಗೂ ಮಗನೇ ಕೃತ್ಯಕ್ಕೆ ಸಾಥ್ ನೀಡಿ, ನಂತರ ನಾಟಕವಾಡಿದ್ದರು ಎಂಬ ಆಘಾತಕಾರಿ ವಿಚಾರ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಫೆಬ್ರವರಿ 20ರಂದು ಹಿರೇನಂದಿಹಳ್ಳಿ ಗ್ರಾಮ ಹೊರವಲಯದ ಜಮೀನಿನಲ್ಲಿ ಶವ ಪತ್ತೆಯಾಗಿತ್ತು. ನಂತರ ಮೃತ ವ್ಯಕ್ತಿ ಹಿರೇನಂದಿಹಳ್ಳಿ ಗ್ರಾಮದ ಕಲ್ಮೇಶ್ ಕೋಟಿ ಎಂದು ಗುರುತಿಸಲಾಯಿತು. ತುಮಕೂರಿನಲ್ಲಿ ಹೋಮ್ ಕೇರ್ ಉದ್ಯೋಗದಲ್ಲಿ ತೊಡಗಿದ್ದ ಕಲ್ಮೇಶ್, ಶಿವರಾತ್ರಿ ಹಬ್ಬದ ಪ್ರಯುಕ್ತ ಊರಿಗೆ ಬಂದಿದ್ದ ವೇಳೆ ಸಂಚು ರೂಪಿಸಿ ಕೊಲೆಗೈಯಲಾಗಿತ್ತು.

ಪಾರ್ಟಿ ನೆಪದಲ್ಲಿ ಜಮೀನಿಗೆ ಕರೆದೊಯ್ದು ಕೊಲೆ

‘ಪಾರ್ಟಿ ಮಾಡಿ ಬರೋಣ’ ಎಂದು ಹೇಳಿ ಜಮೀನಿಗೆ ಕರೆದೊಯ್ದ ಆರೋಪಿಗಳು, ಹಲ್ಲೆ ಮಾಡಿ, ಮರ್ಮಾಂಗ ಕತ್ತರಿಸಿ ಕೊಲೆ ಮಾಡಿದ್ದರು. ಕೊಲೆಗೈದ ಬಳಿಕ ಆರೋಪಿಗಳಲ್ಲಿ ಒಬ್ಬ ತನ್ನ ಅಕ್ಕನಿಗೆ ಕರೆ ಮಾಡಿ ವಿಷಯ ತಿಳಿಸಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪತ್ನಿ–ಮಗನ ಡ್ರಾಮಾ ಬಯಲು

ಪ್ರಕರಣಕ್ಕೆ ಮತ್ತಷ್ಟು ಟ್ವಿಸ್ಟ್ ನೀಡಿದ ಸಂಗತಿ ಎಂದರೆ, ಕೊಲೆಗೆ ಸಾಥ್ ನೀಡಿದ್ದೇ ಪತ್ನಿ ಮತ್ತು ಪುತ್ರ ಎಂಬುದು. ಶವ ಪತ್ತೆಯಾದ ನಾಲ್ಕು ದಿನಗಳ ಬಳಿಕ ಗುರುತು ಪತ್ತೆಗೆ ಬಂದು ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದ ಪತ್ನಿ ಕಸ್ತೂರಿ ಕೋಟಿ ಹಾಗೂ ಪುತ್ರ ಕಿರಣ್ ಕೋಟಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ಕೈಜೋಡಿಸಿದ ಕಲ್ಮೇಶ್ ಬಾಮೈದ ಮಲ್ಲೇಶ ಅಂಬಣ್ಣವರ (32) ಹಾಗೂ ಅವನ ಸ್ನೇಹಿತ ಮುದುಕಪ್ಪ ಕೋಲೇಕರ್ ಅವರನ್ನು ಕೂಡ ಕಿತ್ತೂರು ಠಾಣೆ ಪೊಲೀಸರು ಬಂಧಿಸಿ ಹಿಂಡಲಗಾ ಜೈಲಿಗೆ ರವಾನಿಸಿದ್ದಾರೆ.

12 ವರ್ಷಗಳ ದಾಂಪತ್ಯ ಕಲಹ, ಮೂರು ಎಕರೆ ಆಸ್ತಿಯೇ ಮೂಲ ಕಾರಣ

ಕಲ್ಮೇಶ್ ಮತ್ತು ಪತ್ನಿ ಕಸ್ತೂರಿ ಕಳೆದ 12 ವರ್ಷಗಳಿಂದ ದಾಂಪತ್ಯ ಕಲಹದ ಹಿನ್ನೆಲೆ ದೂರವಿದ್ದು, ಕಸ್ತೂರಿ ಪುತ್ರನೊಂದಿಗೆ ಕುಂದಗೋಳದಲ್ಲಿರುವ ತವರು ಮನೆಯಲ್ಲಿ ವಾಸವಾಗಿದ್ದರು. ದಂಪತಿಗೆ ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಇದ್ದಾರೆ. ಐದು ವರ್ಷಗಳ ಹಿಂದೆ ಪುತ್ರಿಯ ಮದುವೆಗೆ 8 ಲಕ್ಷ ರೂಪಾಯಿ ಸಾಲವನ್ನು ಸಹೋದರ ಮಲ್ಲೇಶ ಅಂಬಣ್ಣವರಿಂದ ಪಡೆದಿದ್ದ ಕಸ್ತೂರಿ, ಕಲ್ಮೇಶ್ ಹೆಸರಿನ ಮೂರು ಎಕರೆ ಪಿತ್ರಾರ್ಜಿತ ಜಮೀನನ್ನು ಅಡಮಾನ ಇಟ್ಟು ಹಣ ಪಡೆದಿದ್ದಳು.

ಆದರೆ, ಜಮೀನು ಬರೆದುಕೊಡಲು ಕಲ್ಮೇಶ್ ನಿರಾಕರಿಸಿದ್ದಲ್ಲದೆ, ಸಾಲ ಮರುಪಾವತಿಗಾಗಿ ಒತ್ತಾಯಿಸುತ್ತಿದ್ದ. ಇದರಿಂದ ಬೇಸತ್ತ ಕಸ್ತೂರಿ, ತನ್ನ ಸಹೋದರರೊಂದಿಗೆ ಸಭೆ ನಡೆಸಿ ಸಂಚು ರೂಪಿಸಿದ್ದಳು ಎನ್ನಲಾಗಿದೆ. ಪತಿ ಸತ್ತರೆ ಜಮೀನು ತನ್ನ ಹೆಸರಿಗೆ ಬರುತ್ತದೆ ಎಂಬ ಲೆಕ್ಕಾಚಾರದಲ್ಲಿ ಕಲ್ಮೇಶ್ ಕಥೆ ಮುಗಿಸಲು ಸಂಚು ರೂಪಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಕೊಚ್ಚಿ, ಮರ್ಮಾಂಗ ಕತ್ತರಿಸಿ ವ್ಯಕ್ತಿಯ ಬರ್ಬರ ಹತ್ಯೆ!

ಮೊದಲಿನಿಂದಲೇ ಕೊಲೆ ಬಗ್ಗೆ ಹಲವು ಆಯಾಮಗಳಲ್ಲಿ ತನಿಖೆ ನಡೆಸಿದ್ದ ಕಿತ್ತೂರು ಪೊಲೀಸರು, ಆಸ್ತಿಯ ಲೆಕ್ಕಾಚಾರವೇ ಕೊಲೆಗೆ ಮೂಲ ಕಾರಣ ಎಂಬುದನ್ನು ಪತ್ತೆಹಚ್ಚಿದ್ದಾರೆ. ನಾಲ್ವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್‌ಗಿರಿ; ಅಪ್ರಾಪ್ತ ವಿದ್ಯಾರ್ಥಿಗಳ ಮೇಲೆ ಹಲ್ಲೆ, ಜಾತಿ ನಿಂದನೆ ಮಾಡಿದ ಅಪ್ಪ-ಮಗ – Kannada News | Karnataka Moral Policing: Arrests in Mangaluru, Bengaluru Bus Incident Sparks Outrage

ಮಂಗಳೂರು, ಫೆ.26: ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್‌ಗಿರಿ (Moral Policing) ಪ್ರಕರಣ ಬೆಳಕಿಗೆ ಬಂದಿದೆ. ರೈಲ್ವೆ ಹಳಿಯಲ್ಲಿ ಕುಳಿತಿದ್ದ ಅಪ್ರಾಪ್ತ ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ ಆರೋಪದ ಮೇಲೆ ತಂದೆ ಮತ್ತು ಮಗನನ್ನು ಮಂಗಳೂರು ದಕ್ಷಿಣ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಹೊರವಲಯದ ಅತ್ತಾವರ ಬಾಬುಗುಡ್ಡೆ ಎಂಬಲ್ಲಿ ಈ ಘಟನೆ ನಡೆದಿದೆ. ಅಪ್ರಾಪ್ತ ಬಾಲಕ ಮತ್ತು ಬಾಲಕಿ ರೈಲ್ವೆ ಹಳಿಯ ಬಳಿ ಕುಳಿತಿದ್ದರು. ಈ ವೇಳೆ ಅಲ್ಲಿಗೆ ಬಂದ ಸ್ಟೀವನ್ ಮೊಂತೇರೋ ಮತ್ತು ಆತನ ಪುತ್ರ ಅವಿಲ್ ಎಂಬುವವರು ವಿದ್ಯಾರ್ಥಿಗಳ ವಿಡಿಯೋ ಮಾಡಲಾರಂಭಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಅಡ್ಡಗಟ್ಟಿದ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಬಾಲಕನ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಕೇವಲ ಹಲ್ಲೆಯಷ್ಟೇ ಅಲ್ಲದೆ, ವಿದ್ಯಾರ್ಥಿಗಳ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವ ಮೂಲಕ ವಿದ್ಯಾರ್ಥಿಗಳ ಮಾನಹಾನಿಗೆ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಅಧಿಕಾರಿಗಳು, ಅಪ್ರಾಪ್ತ ವಿದ್ಯಾರ್ಥಿಗಳ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ್ದಾರೆ.

ಇನ್ನು ಈ ಪ್ರಕರಣದಲ್ಲಿ ಬಂಧಿತರನ್ನು ಸ್ಟೀವನ್ ಮೊಂತೇರೋ ಮತ್ತು ಆತನ ಪುತ್ರ ಅವಿಲ್ ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಅಟ್ರಾಸಿಟಿ (SC/ST Act) ಹಾಗೂ ಬಿಎನ್‌ಎಸ್ (BNS) ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಿಸಿ ಇಬ್ಬರನ್ನೂ ಬಂಧಿಸಲಾಗಿದೆ. ಇದೀಗ ಈ ಬಗ್ಗೆ ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ ಜನರಿಗೆ ಬಿಗ್​​ ಶಾಕ್: ಈ ನೀರು ಕುಡಿದ್ರೆ ಕಿಡ್ನಿ ಸಮಸ್ಯೆ ಬರುವುದು ಖಂಡಿತ! ಅಘಾತಕಾರಿ ವರದಿ ಬಯಲು

ಬೆಂಗಳೂರು ಬಸ್ಸಿನಲ್ಲಿ ನೈತಿಕ ಪೊಲೀಸ್‌ಗಿರಿ

22 ವರ್ಷದ ಯುವಕ ಮತ್ತು ಆತನ ಗೆಳತಿ ಬೆಂಗಳೂರಿನಿಂದ ಪ್ರಯಾಣಿಸಲು ಖಾಸಗಿ ಸ್ಲೀಪರ್ ಬಸ್‌ನಲ್ಲಿ 3 ಬರ್ತ್‌ಗಳನ್ನು ಬುಕ್ ಮಾಡಿದ್ದರು. ಹೆಚ್ಚು ಜಾಗವಿರಲಿ ಮತ್ತು ಆರಾಮದಾಯಕವಾಗಿ ಪ್ರಯಾಣಿಸಲಿ ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದರು. ಆದರೆ ಬಸ್ ಹತ್ತಿದ ನಂತರ ಕಂಡಕ್ಟರ್ ಇವರಿಬ್ಬರನ್ನು ಒಟ್ಟಿಗೆ ಕುಳಿತುಕೊಳ್ಳದಂತೆ ತಡೆದಿದ್ದಾರೆ. ಇಬ್ಬರೂ ವಯಸ್ಕರಾಗಿದ್ದರೂ ಮತ್ತು ಅಧಿಕೃತ ಟಿಕೆಟ್ ಹೊಂದಿದ್ದರೂ, ಕಂಡಕ್ಟರ್ ಇಬ್ಬರನ್ನು ಪ್ರತ್ಯೇಕ ಸೀಟುಗಳಲ್ಲಿ ಮಲಗುವಂತೆ ಒತ್ತಾಯಿಸಿದ್ದಾರೆ.ನಿಮ್ಮ ಪೋಷಕರಿಗೆ ಫೋನ್ ಮಾಡಿ” ಇಲ್ಲವೆಂದರೆ “ಪೊಲೀಸರಿಗೆ ದೂರು ನೀಡುತ್ತೇವೆ” ಎಂದು ಕಂಡಕ್ಟರ್ ನೈತಿಕ ಪೊಲೀಸ್‌ಗಿರಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link