ರಶ್ಮಿಕಾ-ವಿಜಯ್ ದೇವರಕೊಂಡ ಅರಿಶಿಣ ಶಾಸ್ತ್ರದ ಸುಂದರ ಚಿತ್ರಗಳು ಇಲ್ಲಿವೆ
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಉದಯಪುರದ ಐಶಾರಾಮಿ ರೆಸಾರ್ಟ್ನಲ್ಲಿ ಅದ್ಧೂರಿಯಾಗಿ ವಿವಾಹ ಆಗುತ್ತಿದ್ದು, ನಿನ್ನೆ ಅರಿಶಿಣ ಶಾಸ್ತ್ರ ಅಥವಾ ಹಳದಿ ಶಾಸ್ತ್ರ ಬಲು ಅದ್ಧೂರಿಯಾಗಿ ನೆರವೇರಿದೆ. ಹಳದಿ ಶಾಸ್ತ್ರಕ್ಕಾಗಿ ವಿಶೇಷ ಥೀಮ್ಗಳೊಂದಿಗೆ ವೇದಿಕೆ ಸಿದ್ಧಪಡಿಸಲಾಗಿತ್ತು. ‘ವಿಜಯ್’, ‘ರಶಿ’ ಎಂದು ಬರೆದ ಕೃತಕ ಹೂವುಗಳಿಂದ ಸಿಂಗಾರ ಮಾಡಲಾಗಿತ್ತು. ಮಣ್ಣಿನ ಮಡಿಕೆಗಳಿಂದ ಮಾಡಿದ ಮಾದರಿ ಗಮನ ಸೆಳೆಯುತ್ತಿತ್ತು. ವಧು-ವರರಿಗೆ, ಬಂದ ಅತಿಥಿಗಳು, ಸಂಬಂಧಿಗಳು ಹಳದಿ ಬಳಿದರು, ಮಾತ್ರವಲ್ಲದೆ ತಾವೂ ಸಹ ಮನಸೋಇಚ್ಛೆ ಹಳದಿಯನ್ನು ಬಳದಿಕೊಂಡರು. ವಧು-ವರರೊಟ್ಟಿಗೆ ಚಿತ್ರಗಳನ್ನು ತೆಗೆಸಿಕೊಂಡರು….