All posts by nagaraj11081993

ಹಿಮಾಚಲ ಪ್ರದೇಶ: 20 ದೆಹಲಿ ಪೊಲೀಸರನ್ನು ಬಂಧಿಸಿದ ಶಿಮ್ಲಾ ಪೊಲೀಸರು, ಕಾರಣವೇನು? – Kannada News | Shimla Police Arrest 20 Delhi Cops: Himachal Delhi Police Clash Over Protestors

ಶಿಮ್ಲಾ, ಫೆಬ್ರವರಿ 26: ಹಿಮಾಚಲ ಪ್ರದೇಶಕ್ಕೆ ಆಗಮಿಸಿದ್ದ 20 ಪೊಲೀಸ್(Police) ಸಿಬ್ಬಂದಿಯನ್ನು ಶಿಮ್ಲಾ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಈ ಘಟನೆ ರಾಜಕೀಯ ಮತ್ತು ಆಡಳಿತ ವಲಯದಲ್ಲಿ ಕೋಲಾಹಲವನ್ನು ಸೃಷ್ಟಿಸಿತು. ಎಐ ಇಂಪ್ಯಾಕ್ಟ್​ ಶೃಂಗಸಭೆಯಲ್ಲಿ ಶರ್ಟ್​ ಬಿಚ್ಚಿ ಪ್ರತಿಭಟನೆ ಮಾಡಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರ ಪೈಕಿ ಮೂವರನ್ನು ಹಿಡಿಯಲು ದೆಹಲಿ ಪೊಲೀಸರು ಹಿಮಾಚಲ ಪ್ರದೇಶಕ್ಕೆ ತೆರಳಿದಾಗ ಈ ಘಟನೆ ನಡೆದಿದೆ.

ಈ ಸಂಪೂರ್ಣ ಘಟನೆಯು ಚಂಡೀಗಢ-ಕಲ್ಕಾ-ಶಿಮ್ಲಾ ಹೆದ್ದಾರಿಯಲ್ಲಿ ನಡೆಯಿತು, ಎರಡೂ ರಾಜ್ಯಗಳ ಪೊಲೀಸರು ಇಲ್ಲಿ ಮುಖಾಮುಖಿಯಾದರು. ಈ ಶೃಂಗಸಭೆಯ ಸಮಯದಲ್ಲಿ, ಮೂವರು ಯುವ ಕಾಂಗ್ರೆಸ್ ಕಾರ್ಯಕರ್ತರು ಶರ್ಟ್ ಧರಿಸದೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ನಂತರ, ಮೂವರು ಕಾರ್ಯಕರ್ತರು ಶಿಮ್ಲಾ ಜಿಲ್ಲೆಯ ರೋಹ್ರು ಪ್ರದೇಶಕ್ಕೆ ಹೋಗಿ ಸ್ಥಳೀಯ ಹೋಟೆಲ್‌ನಲ್ಲಿ ತಂಗಿದ್ದರು ಎಂದು ವರದಿಯಾಗಿದೆ. ದೆಹಲಿ ಪೊಲೀಸರು ಅವರ ಸ್ಥಳದ ಬಗ್ಗೆ ತಿಳಿದುಕೊಂಡು, ಒಂದು ತಂಡ ರೋಹ್ರುಗೆ ಆಗಮಿಸಿತು.

ಈ ಕಾರ್ಯಾಚರಣೆಯ ಬಗ್ಗೆ ಸೋಲನ್ ಪೊಲೀಸರು ತಿಳಿದ ತಕ್ಷಣ, ಅವರು ತಕ್ಷಣ ಕ್ರಮ ಕೈಗೊಂಡರು. ಧರ್ಮಪುರ ಬಳಿಯ ಚಂಡೀಗಢ-ಕಲ್ಕಾ-ಶಿಮ್ಲಾ ಹೆದ್ದಾರಿಯಲ್ಲಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಿ ದಿಗ್ಬಂಧನ ಹಾಕಲಾಯಿತು. ಸೋಲನ್ ಪೊಲೀಸರು ದೆಹಲಿ ಪೊಲೀಸ್ ತಂಡವನ್ನು ಇಲ್ಲಿಯೇ ತಡೆದರು. ಇದಲ್ಲದೆ, 20 ದೆಹಲಿ ಪೊಲೀಸ್ ಸಿಬ್ಬಂದಿಯನ್ನು ಬಂಧಿಸಲಾಯಿತು. ಇದು ಪರಿಸ್ಥಿತಿಯನ್ನು ಉಲ್ಬಣಗೊಳಿಸಿತು ಮತ್ತು ಎರಡೂ ರಾಜ್ಯಗಳ ಪೊಲೀಸರ ನಡುವೆ ಘರ್ಷಣೆಗೆ ಕಾರಣವಾಯಿತು.

ಮತ್ತಷ್ಟು ಓದಿ: ದೇಶವೇ ನಾಚಿಕೆ ಪಡುವಂತಾಗಿದೆ; ಎಐ ಶೃಂಗಸಭೆಯಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ವಿರೋಧ ಪಕ್ಷದ ನಾಯಕರ ಟೀಕೆ

ಬಂಧಿತ ಮೂವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಶಿಮ್ಲಾ ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಅವರನ್ನು ಎಸಿಜೆಎಂ ನ್ಯಾಯಾಲಯ ಸಂಖ್ಯೆ 2 ಕ್ಕೆ ಕರೆತರಲಾಯಿತು. ವಿಚಾರಣೆಯ ಸಮಯದಲ್ಲಿ ದೆಹಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡ ಹಾಜರಿದ್ದರು.

ಮೂವರು ಆರೋಪಿಗಳನ್ನು ಸಾಗಿಸುತ್ತಿದ್ದಾಗ ದೆಹಲಿ ಪೊಲೀಸ್ ತಂಡವನ್ನು ಶಿಮ್ಲಾ ಪೊಲೀಸರು ತಡೆದಾಗ ಈ ವಾಗ್ವಾದ ನಡೆಯಿತು. ಶಿಮ್ಲಾ ಪೊಲೀಸರು ದೆಹಲಿ ಪೊಲೀಸ್ ಸಿಬ್ಬಂದಿ ವಿರುದ್ಧ ಅಪಹರಣ ಪ್ರಕರಣವನ್ನು ದಾಖಲಿಸಿದ್ದು, ಅವರ ವಾಹನಗಳನ್ನು ವಶಕ್ಕೆ ಪಡೆದಿದ್ದರು.

ಈ ಬಗ್ಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾಂಗ್ರೆಸ್ ನೇತೃತ್ವದ ಹಿಮಾಚಲ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ದೇಶದ ಮಾನ ಹಾಳು ಮಾಡಲು ಪ್ರಯತ್ನಿಸಿದವರಿಗೆ ರಕ್ಷಣೆ ನೀಡುವುದು ‘ನಾಚಿಕೆಗೇಡಿನ’ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಹೇಳಿದ್ದಾರೆ.

ಫೆಬ್ರವರಿ 20ರಂದು ಭಾರತ್ ಮಂಟಪ್​ನಲ್ಲಿ ನಡೆಯುತ್ತಿದ್ದ ಎಐ ಶೃಂಗಸಭೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಶರ್ಟ್​ ತೆಗೆದು ಪ್ರತಿಭಟನೆ ನಡೆಸಿದ್ದರು. ದೆಹಲಿ ಪೊಲೀಸರು ಇದುವರೆಗೆ ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಅಧ್ಯಕ್ಷ ಉದಯ್ ಭಾನು ಚಿಬ್ ಸೇರಿದಂತೆ 11 ಜನರನ್ನು ಬಂಧಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Daily Horoscope: ಈ ರಾಶಿಯಯವರಿಗೆ ಇಂದು ಡಬಲ್​​​​​​​​​​​​​ ಸಂಭ್ರಮ, ಜೀವನದಲ್ಲಿ ದೊಡ್ಡ ಬದಲಾವಣೆ

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು ಇಂದಿನ ಭವಿಷ್ಯದ ಬಗ್ಗೆ ತಿಳಿಸಿದ್ದಾರೆ. ವಿಶ್ವಾಸುನಾಮ ಸಂವತ್ಸರ, ಉತ್ತರಾಯಣ, ಪಾಲ್ಗುಣ ಮಾಸದ ಈ ಶುಭ ಗುರುವಾರದಂದು, ಮೃಗಶಿರಾ ನಕ್ಷತ್ರದಲ್ಲಿ ಚಂದ್ರನು ಮಿಥುನ ರಾಶಿಯಲ್ಲಿ ಸಂಚರಿಸುತ್ತಾನೆ. ರವಿ ಕುಂಭ ರಾಶಿಯಲ್ಲಿ ಇರುತ್ತಾನೆ. ದ್ವಾದಶ ರಾಶಿಗಳಿಗೆ ಇಂದು ವಿವಿಧ ಗ್ರಹಗಳ ಶುಭಫಲಗಳಿದ್ದು, ಪ್ರತಿಯೊಂದು ರಾಶಿಯವರಿಗೂ ಆರ್ಥಿಕ ಪ್ರಗತಿ, ವೃತ್ತಿ ಜೀವನದಲ್ಲಿ ಯಶಸ್ಸು, ಕುಟುಂಬದಲ್ಲಿ ಸಾಮರಸ್ಯ, ಮತ್ತು ಆರೋಗ್ಯದ ಕುರಿತು ಮಾಹಿತಿ ನೀಡಲಾಗಿದೆ. ಮೇಷ ರಾಶಿಯವರಿಗೆ ಆರ್ಥಿಕ ಪ್ರಗತಿ ಮತ್ತು ವೃತ್ತಿ ಜೀವನದಲ್ಲಿ ಶುಭವಾಗಲಿದೆ. ವೃಷಭ ರಾಶಿಯವರಿಗೆ ಆಕಸ್ಮಿಕ ಧನಲಾಭ ಮತ್ತು ವಾಹನ ಯೋಗವಿದೆ. ಮಿಥುನ ರಾಶಿಯವರಿಗೆ ಕಾನೂನು ವಿಷಯಗಳಲ್ಲಿ ಜಯ ಮತ್ತು ಉತ್ತಮ ಫಲಿತಾಂಶಗಳು ದೊರೆಯಲಿವೆ. ಕಟಕ ರಾಶಿಯವರಿಗೆ ಕೆಲಸದಲ್ಲಿ ಪ್ರಗತಿ ಮತ್ತು ಹಳೆ ಬಾಕಿ ವಸೂಲಿಯ ಯೋಗವಿದೆ. ಸಿಂಹ ರಾಶಿಯವರಿಗೆ ಶುಭ ಸುದ್ದಿಗಳು ಮತ್ತು ಒಳ್ಳೆಯ ವ್ಯಕ್ತಿಗಳ ಪರಿಚಯವಾಗಲಿದೆ. ಕನ್ಯಾ ರಾಶಿಯವರಿಗೆ ಸಂತೋಷದ ಸುದ್ದಿ ಮತ್ತು ಯೋಜನೆಗಳಿಗೆ ಮನ್ನಣೆ ಸಿಗಲಿದೆ. ತುಲಾ ರಾಶಿಯವರಿಗೆ ಮಾತಿನ ಪ್ರಭಾವದಿಂದ ಶುಭ ಯೋಗ ಮತ್ತು ವ್ಯಾಪಾರದಲ್ಲಿ ಉತ್ತಮ ಫಲಿತಾಂಶವಿದೆ. ವೃಶ್ಚಿಕ ರಾಶಿಯವರಿಗೆ ಉದ್ಯೋಗದಲ್ಲಿ ಶುಭ ಮತ್ತು ವ್ಯವಸಾಯದಿಂದ ಲಾಭ ದೊರೆಯಲಿದೆ. ಧನು ರಾಶಿಯವರಿಗೆ ಮಾನಸಿಕ ತೃಪ್ತಿ ಮತ್ತು ಆದಾಯದಲ್ಲಿ ಏರಿಕೆ ಇರಲಿದೆ. ಮಕರ ರಾಶಿಯವರಿಗೆ ಹೊಸ ಅವಕಾಶಗಳು ಮತ್ತು ಆಕಸ್ಮಿಕ ಪ್ರಯಾಣ ಯೋಗವಿದೆ. ಕುಂಭ ರಾಶಿಯವರಿಗೆ ಆರ್ಥಿಕವಾಗಿ ಮತ್ತು ವ್ಯವಹಾರಗಳಲ್ಲಿ ಶುಭವಾಗಲಿದೆ. ಮೀನ ರಾಶಿಯವರಿಗೆ ಆಕಸ್ಮಿಕ ಧನಯೋಗ ಮತ್ತು ಗುರಿ ತಲುಪುವ ಯತ್ನಗಳು ಫಲಿಸಲಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು: ಅಕ್ರಮ ವಲಸಿಗರ ವಿರುದ್ಧ ಪೊಲೀಸರ ಭರ್ಜರಿ ಬೇಟೆ, ಒಂದೇ ದಿನ 2000ಕ್ಕೂ ಹೆಚ್ಚು ಮಂದಿಯ ವಿಚಾರಣೆ – Kannada News | Bengaluru Police Crack Down on Illegal Immigrants; Over 2000 Foreign Nationals Questioned in One Day

ಬೆಂಗಳೂರು, ಫೆಬ್ರವರಿ 26: ಬೆಂಗಳೂರು (Bengaluru) ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಪತ್ತೆಗೆ ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ. ಪೊಲೀಸ್ ಆಯುಕ್ತರ ಸೂಚನೆಯಂತೆ ವಿವಿಧ ವಿಭಾಗಗಳ ಪೊಲೀಸರು ಅನುಮಾನಾಸ್ಪದ ಪ್ರದೇಶಗಳಲ್ಲಿ ತಲಾಶ್ ನಡೆಸಿ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ, ಬುಧವಾರ ಒಂದೇ ದಿನ ಸುಮಾರು 2,000ಕ್ಕೂ ಹೆಚ್ಚು ವಿದೇಶಿಗರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಇದರಲ್ಲಿ ಬಹುತೇಕರು ಸರಿಯಾದ ದಾಖಲೆಗಳಿಲ್ಲದೆ ಅಥವಾ ವೀಸಾ ಅವಧಿ ಮೀರಿಸಿ ನಗರದಲ್ಲಿ ವಾಸಿಸುತ್ತಿರುವುದು ಪತ್ತೆಯಾಗಿದೆ.

ವಿಶೇಷವಾಗಿ, ಕೆಲವು ನೈಜೀರಿಯನ್ ಹಾಗೂ ಬಾಂಗ್ಲಾ ಮೂಲದ ವಲಸಿಗರು ಅಕ್ರಮವಾಗಿ ನೆಲೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಅವರ ವಿರುದ್ಧ ಕಾನೂನು ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಸದ್ಯ ಅಕ್ರಮವಾಗಿ ನೆಲೆಸಿರುವವರ ಸಂಪೂರ್ಣ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

‘ಯಾವ ದೇಶದಿಂದ ಬಂದಿದ್ದಾರೆ? ಯಾವಾಗ ನಗರಕ್ಕೆ ಪ್ರವೇಶಿಸಿದ್ದಾರೆ? ಯಾರು ಕರೆತಂದಿದ್ದಾರೆ? ವೀಸಾ ಹಾಗೂ ಪಾಸ್‌ಪೋರ್ಟ್ ಮಾನ್ಯತೆಯ ಸ್ಥಿತಿ ಏನು?’ ಎಂಬ ವಿಷಯಗಳನ್ನು ಸಮಗ್ರವಾಗಿ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ಕಾರ್ಯಾಚರಣೆ ಮುಂದುವರಿಯಲಿದ್ದು, ಅಗತ್ಯವಿದ್ದಲ್ಲಿ ಸಂಬಂಧಿತ ಕೇಂದ್ರ ಸಂಸ್ಥೆಗಳ ಸಹಯೋಗ ಪಡೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆಯೂ ನಡೆದಿತ್ತು ಬಾಂಗ್ಲಾ ಅಕ್ರಮ ವಲಸಿಗರ ವಿರುದ್ಧ ಕಾರ್ಯಾಚರಣೆ

ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದು ಬೆಂಗಳೂರಿನಲ್ಲಿ ನೆಲೆಸಿರುವವರ ವಿರುದ್ಧ ಈ ಹಿಂದೆಯೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. 2026 ಜನವರಿಯಲ್ಲಿ ಎಲೆಕ್ಟ್ರಾನಿಕ್ ಸಿಟಿ ಮತ್ತು ಹೆಬ್ಬಗೋಡಿ ವ್ಯಾಪ್ತಿಯಲ್ಲಿ ನಡೆಸಿದ ದಾಳಿಯಲ್ಲಿ ಅಕ್ರಮವಾಗಿ ನೆಲೆಸಿದ್ದ ಸುಮಾರು 26ಕ್ಕೂ ಹೆಚ್ಚು ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿತ್ತು. ಇವರು ನಕಲಿ ಆಧಾರ್ ಕಾರ್ಡ್ ಮತ್ತು ಗುರುತಿನ ಚೀಟಿಗಳನ್ನು ಬಳಸಿ ನಗರದ ಸ್ಕ್ರ್ಯಾಪ್ ಯಾರ್ಡ್‌ಗಳಲ್ಲಿ ಕೆಲಸ ಮಾಡುತ್ತಿದ್ದರು ಎಂಬುದು ಗೊತ್ತಾಗಿತ್ತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ

2025ರ ನವೆಂಬರ್​​​ನಲ್ಲಿ ಸಿಸಿಬಿ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ 14 ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿತ್ತು. ಅವರಿಂದ 7.7 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಬಂಧಿತರಲ್ಲಿ ನೈಜೀರಿಯಾ ಮೂಲದ ಮಹಿಳೆಯೂ ಸೇರಿದ್ದು, ಆಕೆ ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಳು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope Today 26 February​: ಅಡುಗೆಯ ನಂತರ ಆಹಾರವನ್ನು ಯಾವ ದಿಕ್ಕಿಗೆ ಇರಿಸಬೇಕು – Kannada News | Kitchen Vastu: Which Direction to Place Food After Cooking for Good Fortune?

ಅಡುಗೆಯ ನಂತರ ಆಹಾರವನ್ನು ಯಾವ ದಿಕ್ಕಿಗೆ ಇರಿಸಬೇಕು ಎಂಬುದರ ಕುರಿತು ಚರ್ಚಿಸಲಾಗಿದೆ. ಅಡುಗೆಯು ಕೇವಲ ಶಕ್ತಿಯ ಮೂಲವಲ್ಲದೆ, ಜೀವ ಆಧಾರವೂ ಆಗಿದೆ. ಅನ್ನವನ್ನು ಪರಬ್ರಹ್ಮ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ಅಡುಗೆ ಮಾಡುವಾಗ ಪೂರ್ವ ದಿಕ್ಕಿಗೆ ಮುಖ ಮಾಡಬೇಕು. ಅಡುಗೆಮನೆಯು ಆಗ್ನೇಯ ಅಥವಾ ವಾಯುವ್ಯದಲ್ಲಿ ಇರಬಹುದು, ಆದರೆ ಯಾವಾಗಲೂ ಪೂರ್ವ ದಿಕ್ಕಿಗೆ ತಿರುಗಿ ಅಡುಗೆ ಮಾಡುವುದು ಉತ್ತಮ. ಅಡುಗೆ ಮುಗಿದ ನಂತರ, ಆಹಾರ ತುಂಬಿದ ಪಾತ್ರೆಗಳನ್ನು ಇರಿಸಲು ಸರಿಯಾದ ದಿಕ್ಕನ್ನು ಆಯ್ಕೆ ಮಾಡುವುದು ಮುಖ್ಯ. ಶಾಸ್ತ್ರಗಳ ಪ್ರಕಾರ, ಆಹಾರವನ್ನು ಉತ್ತರ ದಿಕ್ಕಿಗೆ, ಅಂದರೆ ಎಡಭಾಗಕ್ಕೆ ಇಳಿಸುವುದು ಅತ್ಯಂತ ಶುಭ. ಉತ್ತರ ದಿಕ್ಕು ಕುಬೇರನ ಅಧಿಪತ್ಯದಲ್ಲಿದ್ದು, ಇದು ಸಂತೃಪ್ತಿ, ಅಧಿಕ ಶಕ್ತಿ ಮತ್ತು ಸಮೃದ್ಧಿಯನ್ನು ನೀಡುತ್ತದೆ. ದಕ್ಷಿಣ ದಿಕ್ಕು ಪಿತೃಗಳಿಗೆ ಸಂಬಂಧಿಸಿದ್ದು, ಆ ದಿಕ್ಕಿಗೆ ಆಹಾರವನ್ನು ಇರಿಸಿದರೆ ಅನಾರೋಗ್ಯ, ಮಾನಸಿಕ ನೆಮ್ಮದಿ ಕೊರತೆ ಮತ್ತು ಕಲಹಗಳು ಉಂಟಾಗಬಹುದು. ಪಶ್ಚಿಮ ದಿಕ್ಕಿಗೂ ಆಹಾರ ಇರಿಸುವುದು ಶುಭಕರವಲ್ಲ. ಆದ್ದರಿಂದ, ಅಡುಗೆ ಮಾಡಿದ ನಂತರ ಆಹಾರವನ್ನು ಯಾವಾಗಲೂ ಉತ್ತರ ದಿಕ್ಕಿಗೆ ಇರಿಸಲು ಪ್ರಯತ್ನಿಸಿ ಎಂದು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸರ್ಕಾರಿ ಆಸ್ಪತ್ರೆಯಲ್ಲೇ ರೋಗಿಗಳಿಗೆ ನರಕಯಾತನೆ: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಕೊರತೆ, ರೋಗಿಗಳ ಪರದಾಟ – Kannada News | ICU Bed Shortage at Victoria Hospital Bengaluru Sparks Outcry; Patients Struggle Amid Emergency Crisis

ವಿಕ್ಟೋರಿಯಾ ಆಸ್ಪತ್ರೆ ಹಾಗೂ ಐಸಿಯು ಬೆಡ್​ಗಳ ಸಾಂದರ್ಭಿಕ ಚಿತ್ರImage Credit source: tv9

ಬೆಂಗಳೂರು, ಫೆಬ್ರವರಿ 26: ಅದು ಹೇಳಿಕೊಳ್ಳಲು ಬೆಂಗಳೂರು (Bengaluru) ನಗರದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆ. ಆದರೆ, ಚಿಕಿತ್ಸೆಗೆ ಬಂದರೆ ಜೀವಕ್ಕೆ ಗ್ಯಾರಂಟಿ ಇಲ್ಲ ಎಂಬಂಥ ಸ್ಥಿತಿ ಇದೆ. ಗ್ಯಾರಂಟಿಗಳನ್ನು ಕೊಟ್ಟಿರುವ ಸರ್ಕಾರದಿಂದ ಆರೋಗ್ಯ ಭಾಗ್ಯದ ಗ್ಯಾರಂಟಿಯೇ ಇಲ್ಲದಂತಾಗಿದೆ ಎಂಬ ಆರೋಪ ಕೇಳಿಬಂದಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ (Victoria Hospital) ಅವ್ಯವಸ್ಥೆಗಳ ಸಂಬಂಧ ಆರೋಪ ಈಗೀಗ ಜೋರಾಗಿಯೇ ಕೇಳಿಬರುತ್ತಿದೆ. ಸಮಸ್ಯೆಗಳು ತಾಂಡವ ಆಡುತ್ತಿದ್ದು, ರೋಗಿಗಳು ಎಮರ್ಜೆನ್ಸಿ ಎಂದು ಬಂದರೆ ಬೆಡ್ ಇಲ್ಲ ಎನ್ನುವ ಸ್ಥಿತಿ ಇದೆ.

ಆಸ್ಪತ್ರೆಗೆ ಪ್ರತಿದಿನ ರಾಜ್ಯದ ವಿವಿಧ ಭಾಗಗಳಿಂದ ನೂರಾರು ರೋಗಿಗಳು ಆಗಮಿಸುತ್ತಾರೆ. ಆದರೆ ಲಭ್ಯವಿರುವ ಐಸಿಯು ಬೆಡ್‌ಗಳ ಸಂಖ್ಯೆ ಕೇವಲ 60ರಿಂದ 70 ಮಾತ್ರ. ಹೀಗಾಗಿ ತುರ್ತು ಪರಿಸ್ಥಿತಿಯಲ್ಲಿ ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸಂಬಂಧಿಕರು ದೂರಿದ್ದಾರೆ. ಎಮರ್ಜೆನ್ಸಿ ವಿಭಾಗದಲ್ಲಿಯೂ ಒತ್ತಡ ಹೆಚ್ಚಿದ್ದು, ಕೆಲವು ಸಂದರ್ಭಗಳಲ್ಲಿ ಖಾಲಿ ಬೆಡ್ ಇಲ್ಲ ಎಂಬ ಕಾರಣ ನೀಡಿ ಕಾಯುವಂತೆ ಸೂಚಿಸಲಾಗುತ್ತಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.

ಕೆಲವರು ರೋಗಿಗಳ ಸಂಬಂಧಿಕರು, ಸಮಸ್ಯೆ ತಿಳಿಸಲು ಹೋದಾಗ ಸಮರ್ಪಕ ಸ್ಪಂದನೆ ದೊರೆಯುತ್ತಿಲ್ಲ ಎಂದು ಆರೋಪಿಸಿದ್ದಾರೆ. ಬೆಡ್ ಸಿಗದ ಹಿನ್ನೆಲೆ ಕೆಲವು ಕುಟುಂಬಗಳು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ ಎನ್ನಲಾಗಿದೆ. ಲ್ಯಾಬ್ ಪರೀಕ್ಷಾ ವರದಿಗಳು ತಡವಾಗಿ ದೊರಕುವುದು ಸೇರಿದಂತೆ ಇನ್ನೂ ಹಲವು ಆಡಳಿತಾತ್ಮಕ ಸಮಸ್ಯೆಗಳ ಬಗ್ಗೆ ಕೂಡ ಅಸಮಾಧಾನ ವ್ಯಕ್ತವಾಗುತ್ತಿದೆ.

ವೈದ್ಯಕೀಯ ಅಧೀಕ್ಷಕರು ಹೇಳಿದ್ದೇನು?

ಸಮಸ್ಯೆಗಳ ಬಗ್ಗೆ ಪ್ರತಿಕ್ರಿಯಿಸಿದ ವೈದ್ಯಕೀಯ ಅಧೀಕ್ಷಕರು, ‘ವಿಕ್ಟೋರಿಯಾ ಆಸ್ಪತ್ರೆ ದೊಡ್ಡ ಪ್ರಮಾಣದಲ್ಲಿ ರೋಗಿಗಳಿಗೆ ಸೇವೆ ನೀಡುತ್ತಿದೆ. ದಿನನಿತ್ಯ ಬಹಳ ಸಂಖ್ಯೆಯಲ್ಲಿ ತುರ್ತು ಪ್ರಕರಣಗಳು ಬರುತ್ತಿವೆ. ಲಭ್ಯವಿರುವ ಐಸಿಯು ಬೆಡ್‌ಗಳು ಸೀಮಿತವಾಗಿವೆ. ಈ ಕುರಿತು ಸರ್ಕಾರದ ಗಮನಕ್ಕೆ ವಿಷಯವನ್ನು ತರಲಾಗಿದೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಟ್ಟು ನಿಂತ ಸ್ಕ್ಯಾನಿಂಗ್ ಮಶಿನ್! ರೋಗಿಗಳ ಪರದಾಟ

ವೈದ್ಯಕೀಯ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಈ ಆಸ್ಪತ್ರೆಯಲ್ಲಿ ಮೂಲಸೌಕರ್ಯ ವೃದ್ಧಿ ಮತ್ತು ಹೆಚ್ಚುವರಿ ಐಸಿಯು ಬೆಡ್‌ಗಳ ವ್ಯವಸ್ಥೆ ಅಗತ್ಯವಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಆರೋಗ್ಯ ಸೇವೆ ಸುಧಾರಣೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.

ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಹವಾಮಾನ ವರದಿ: ರಾಜ್ಯದ ಕೆಲವು ಭಾಗಗಳಲ್ಲಿ ಹಗುರ ಮಳೆಯಾಗುವ ಮುನ್ಸೂಚನೆ – Kannada News | Karnataka Weather Today: Light Rain in Some Areas, Rising Temperatures

ಬೆಂಗಳೂರು, ಫೆ.26: ಕರ್ನಾಟಕದಲ್ಲಿ ಇಂದು (ಫೆಬ್ರವರಿ 26, 2026) ಮುಖ್ಯವಾಗಿ ಶುಷ್ಕ ಹವಾಮಾನವಿದ್ದು, ಕೆಲವು ಭಾಗಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ತಾಪಮಾನ 32°C ಮತ್ತು ಕನಿಷ್ಠ ತಾಪಮಾನ 20°C ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಕಲಬುರಗಿ, ಗದಗ ಮತ್ತು ವಿಜಯಪುರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲೂ ಹಗುರ ಮಳೆಯ ಮುನ್ಸೂಚನೆ ಇದೆ.

ಬೆಂಗಳೂರು (ನಗರ ಮತ್ತು ಗ್ರಾಮಾಂತರ), ಬಳ್ಳಾರಿ, ಚಾಮರಾಜನಗರ ಸೇರಿದಂತೆ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರಿಯಲಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30°C ಮತ್ತು ಕನಿಷ್ಠ ತಾಪಮಾನ 19°C ಇರಲಿದ್ದು, ಆಕಾಶವು ಭಾಗಶಃ ಮೋಡದಿಂದ ಕೂಡಿರುತ್ತದೆ. ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ಮಧ್ಯಾಹ್ನದ ಸಮಯದಲ್ಲಿ ಬಿಸಿಲು ಹೆಚ್ಚಿರಲಿದ್ದು, ಅಗತ್ಯ ಮುನ್ನೆಚ್ಚರಿಕೆ ವಹಿಸಿ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಆಕಾಶ ಮೋಡದಿಂದ ಕೂಡಿದ್ದು, ಸಂಜೆ ಅಥವಾ ರಾತ್ರಿಯ ವೇಳೆಗೆ ತುಂತುರು ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ. ಸುಮಾರು 33°C ರಿಂದ 34°C ವರೆಗೆ ಇರಲಿದ್ದು, ಮಧ್ಯಾಹ್ನ ಸೆಖೆಯ ಅನುಭವ ಹೆಚ್ಚಿರಲಿದೆ. ಸಮುದ್ರದ ಕಡೆಯಿಂದ ಬರುವ ಗಾಳಿಯಿಂದಾಗಿ ತೇವಾಂಶ (Humidity) ಹೆಚ್ಚಿರಲಿದ್ದು, ಬೆವರುವಿಕೆ ಮತ್ತು ಉಸಿರುಕಟ್ಟಿದ ವಾತಾವರಣ ಕಂಡುಬರಬಹುದು. ಈ ಭಾಗಗಳಲ್ಲಿ ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣವಿರುತ್ತದೆ.

ಇನ್ನು ಇಂದು ಕಲಬುರಗಿಯಲ್ಲಿ ತೀವ್ರವಾದ ಬಿಸಿಲು ಇರಲಿದೆ. ಮಧ್ಯಾಹ್ನದ ಸಮಯದಲ್ಲಿ ಸೆಖೆ ಹೆಚ್ಚಾಗಿರುತ್ತದೆ.ಗರಿಷ್ಠ ತಾಪಮಾನ 36°C ತಲುಪಬಹುದು, ಕನಿಷ್ಠ ತಾಪಮಾನ 22°C ಇರಲಿದೆ. ಆಕಾಶವು ಬಹುತೇಕ ಸ್ವಚ್ಛವಾಗಿದ್ದು, ಮಳೆಯ ಸಾಧ್ಯತೆ ತೀರಾ ಕಡಿಮೆ. ಬೆಳಗಾವಿಯಲ್ಲಿ ಬಿಸಿಲು ಇದ್ದರೂ ಸಹ, ಆಕಾಶವು ಮೋಡದಿಂದ ಕೂಡಿರುತ್ತದೆ.ಬೆಳಗಾವಿಯ ಕೆಲವು ಭಾಗಗಳಲ್ಲಿ ಇಂದು ಹಗುರ ಮಳೆಯಾಗುವ ಸಾಧ್ಯತೆ ಇದೆ. ಗುಡುಗು ಸಹಿತ ಮಳೆಯಾದರೂ ಆಶ್ಚರ್ಯವಿಲ್ಲ. ಗರಿಷ್ಠ ತಾಪಮಾನ 32°C ಮತ್ತು ಕನಿಷ್ಠ ತಾಪಮಾನ 19°C ಇರಲಿದೆ. ಮಲೆನಾಡು ಭಾಗದಲ್ಲಿ ಹವಾಮಾನವು ಮಿಶ್ರಫಲವಾಗಿರಲಿದೆ. ಶಿವಮೊಗ್ಗದಲ್ಲಿ ಇಂದು ಆಕಾಶವು ಭಾಗಶಃ ಮೋಡದಿಂದ ಕೂಡಿರುತ್ತದೆ.

ಇದನ್ನೂ ಓದಿ: ಇಂದಿನಿಂದ ಶಿರಸಿ ಜಾತ್ರೆ ಶುಭಾರಂಭ; ಗದ್ದುಗೆ ಏರಿ ಕುಳಿತ ಮಾರಿಕಾಂಬಾ

ಮಲೆನಾಡಿನ ಘಟ್ಟ ಪ್ರದೇಶಗಳಲ್ಲಿ ಮತ್ತು ಶಿವಮೊಗ್ಗದ ಕೆಲವು ಭಾಗಗಳಲ್ಲಿ ಸಂಜೆ ಅಥವಾ ರಾತ್ರಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ತಾಪಮಾನ 33°C ಮತ್ತು ಕನಿಷ್ಠ ತಾಪಮಾನ 20°C ಇರಲಿದೆ. ಬೆಳಗಿನ ಜಾವ ತಂಪಾದ ಗಾಳಿ ಇರಲಿದ್ದು, ಮಧ್ಯಾಹ್ನ ಸ್ವಲ್ಪ ಸೆಖೆ ಇರುತ್ತದೆ. ಮೈಸೂರಿನಲ್ಲಿ ಸದ್ಯಕ್ಕೆ ಮಳೆಯ ಮುನ್ಸೂಚನೆ ಕಡಿಮೆ ಇದ್ದು, ಒಣ ಹವಾಮಾನವಿರುತ್ತದೆ. ಮೈಸೂರಿನಲ್ಲಿ ಇಂದು ಬಿಸಿಲು ಸ್ವಲ್ಪ ಜಾಸ್ತಿ ಇರಲಿದೆ. ಹಗಲಿನಲ್ಲಿ ತಾಪಮಾನ ಏರಿಕೆಯಾಗುವುದರಿಂದ ಸಾರ್ವಜನಿಕರಿಗೆ ಸೆಖೆಯ ಅನುಭವವಾಗಲಿದೆ.ಗರಿಷ್ಠ ತಾಪಮಾನ 34°C ವರೆಗೆ ತಲುಪಬಹುದು ಮತ್ತು ಕನಿಷ್ಠ ತಾಪಮಾನ 19°C ಇರಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 26ರ ದಿನಭವಿಷ್ಯ

ಕೃಷ್ಣನ ದೇವಸ್ಥಾನಕ್ಕೆ ತೆರಳಿ, ದರ್ಶನ ಪಡೆದು ತುಳಸಿ ಹಾರವನ್ನು ಸಮರ್ಪಣೆ ಮಾಡಿ. ಒಂದು ವೇಳೆ ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗದಿದ್ದಲ್ಲಿ ಮನೆಯಲ್ಲಿಯೇ ಇರುವಂಥ ಕೃಷ್ಣನ ವಿಗ್ರಹ, ಚಿತ್ರಪಟಕ್ಕೆ ತುಳಸಿ ದಳ, ತುಳಸಿಹಾರವನ್ನು ಅರ್ಪಿಸಿ. ಯಾವುದೇ ವಿಚಾರದಲ್ಲಿ ನಿಮಗೆ ಕಾಡುತ್ತಿರುವ ಅಡೆತಡೆ ನಿವಾರಣೆ ಆಗುತ್ತದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ನಿಮ್ಮ ವಿಶ್ವಾಸಾರ್ಹತೆ, ನಿಷ್ಠೆ, ಪ್ರಾಮಾಣಿಕತೆಯನ್ನು ಸಾಬೀತು ಮಾಡಬೇಕಾದ ಅನಿವಾರ್ಯ ಸೃಷ್ಟಿ ಅಗಲಿದೆ. ಸಂಗಾತಿಯ ಆರ್ಥಿಕ ವಿಚಾರಗಳಿಗೆ ನಿಮ್ಮ ಬೆಂಬಲ ಹಾಗೂ ಸಹಕಾರ ಅಗತ್ಯವಿದೆ ಎಂಬುದು ಖಾತ್ರಿ ಆಗಲಿದೆ. ಉಪನ್ಯಾಸಕರು- ಮನೆಯಲ್ಲಿಯೇ ಟ್ಯೂಷನ್ ಮಾಡುತ್ತಾ ಆ ಮೂಲಕ ಆದಾಯ ಪಡೆಯುತ್ತಾ ಇರುವವರಿಗೆ ಹಣಕಾಸಿನ ಹರಿವಿನಲ್ಲಿ ಇಳಿಕೆ ಆಗುತ್ತಿರುವುದು ಆತಂಕಕ್ಕೆ ಕಾರಣ ಆಗಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಪೂಜಾ ಸಾಮಗ್ರಿಗಳು ಮಾಡಿಸುವುದಕ್ಕೆ- ಖರೀದಿ ಮಾಡುವುದಕ್ಕೆ ಅಥವಾ ದೇವರಮನೆ ರಿನೋವೇಷನ್ ಇಂಥವುಗಳ ಬಗ್ಗೆ ಈ ದಿನ ಹೆಚ್ಚಿನ ಸಮಯವನ್ನು ಮೀಸಲಿಡಲಿದ್ದೀರಿ. ಮತ್ತೆ ನಿಮ್ಮಲ್ಲಿ ಕೆಲವರು ಮನೆಯ ವಾಸ್ತುವಿನಲ್ಲಿ ಆಗಬೇಕಾದ ಬದಲಾವಣೆಗಳು ಇದ್ದಲ್ಲಿ ಅದನ್ನು ಮಾಡಿಸಲು ಬೇಕಾದಂಥ ವ್ಯಕ್ತಿಗಳನ್ನು ಕರೆಸಿ, ಕೆಲಸದ ಬಗ್ಗೆ ಮಾತುಕತೆ ನಡೆಸಲಿದ್ದೀರಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಕೃಷಿ ವಿಜ್ಞಾನಿಗಳಿಗೆ ತಮ್ಮ ಈಗಿನ ಪ್ರಾಜೆಕ್ಟ್ ಜೊತೆಗೆ ಮಹತ್ವಾಕಾಂಕ್ಷೆಯ- ದೊಟ್ಟ ಮಟ್ಟದ- ಪ್ರತಿಷ್ಠಿತ ಸಂಸ್ಥೆಯ ಅನುದಾನದ ಯೋಜನೆಗಳನ್ನು ಮುನ್ನಡೆಸುವಂತೆ ಸೂಚನೆ ಬರಲಿದೆ. ನಿಮ್ಮ ವೃತ್ತಿ ಜೀವನದಲ್ಲಿ ಬಹಳ ಮುಖ್ಯವಾದ ಪ್ರಾಜೆಕ್ಟ್ ಇದಾಗಿರಲಿದೆ ಎಂಬ ಖಾತ್ರಿ ಸಹ ನಿಮಗೆ ಸಿಗಲಿದೆ. ಡೇರಿ ಉತ್ಪನ್ನಗಳ ಮಾರಾಟ- ವಿತರಣೆ- ಉತ್ಪಾದನೆಯಲ್ಲಿ ತೊಡಗಿರುವವರಿಗೆ ಆದಾಯದಲ್ಲಿ ಹೆಚ್ಚಳ ಮಾಡಿಕೊಳ್ಳುವುದಕ್ಕೆ ನಾನಾ ಅವಕಾಶಗಳು ತೆರೆದುಕೊಳ್ಳಲಿವೆ.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 26ರ ದಿನಭವಿಷ್ಯ

ನೀವೇನಾದರೂ ಹರಕೆ ಹೊತ್ತುಕೊಂಡಿದ್ದು, ಅದನ್ನು ಪೂರ್ಣಗೊಳಿಸದೆ ಹಾಗೇ ಉಳಿಸಿಕೊಂಡಿದ್ದಲ್ಲಿ ಅದನ್ನು ಸಂಪೂರ್ಣ ಮಾಡುವ ಕಡೆಗೆ ಲಕ್ಷ್ಯವನ್ನು ನೀಡಿ. ಇದರಿಂದ ಆರೋಗ್ಯ ಸಮಸ್ಯೆ ನಿವಾರಣೆ, ನಿದ್ದೆಯ ತೊಂದರೆಯಿಂದ ಬಳಲುತ್ತಾ ಇದ್ದಲ್ಲಿ ಅದು ಕೂಡ ಸರಿಹೋಗುತ್ತದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ನಿಮ್ಮಲ್ಲಿ ಯಾರು ಫೋಟೋಗ್ರಾಫರ್ ಇದ್ದೀರಿ, ಸ್ಟುಡಿಯೋಗಳನ್ನು ನಡೆಸುತ್ತಾ ಇದ್ದೀರಿ ಅಂಥವರು ಹೊಸ ತಂತ್ರಜ್ಞಾನಗಳನ್ನು ವೃತ್ತಿಯಲ್ಲಿ ಅಳವಡಿಸಿಕೊಳ್ಳುವುದಕ್ಕಾಗಿ ಕೆಲವರ ಸಹಾಯವನ್ನು ಪಡೆದುಕೊಳ್ಳಲು ಮುಂದಾಗಲಿದ್ದೀರಿ. ಬೇಗನೇ ಹಣ ಮಾಡಿಬಿಡಬಹುದು, ಅದಕ್ಕೆ ತಾನು ಐಡಿಯಾಗಳನ್ನು ನೀಡುವುದಾಗಿ ನಿಮ್ಮ ಬಳಿ ಬರುವಂಥ ಹೊಸ ಪರಿಚಯಸ್ಥರಿಂದ ಅಂತರ ಕಾಯ್ದುಕೊಳ್ಳುವುದು ಕ್ಷೇಮ. ಈ ವಿಚಾರದಲ್ಲಿ ನಿಮ್ಮ ಸ್ನೇಹಿತರಿಗೋ ಸಂಬಂಧಿಗಳಿಗೋ ರೆಫರ್ ಕೂಡ ಮಾಡಬೇಡಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಎಲ್ಲಿಯಾದರೂ ಬರಿಗಾಲಲ್ಲಿ ನಡೆದಾಡುವ ಸಂದರ್ಭದಲ್ಲಿ ಎಚ್ಚರಿಕೆಯನ್ನು ವಹಿಸಿ. ನಿಮ್ಮಲ್ಲಿ ಕೆಲವರಿಗೆ ಚೂಪಾದ ಗಾಜು, ಮುಳ್ಳು ಅಥವಾ ಕಲ್ಲು ಚುಚ್ಚಿಕೊಂಡು, ಪಾದದಲ್ಲಿ ತೀವ್ರ ಸ್ವರೂಪದ ಗಾಯ ಆಗುವ ಸಾಧ್ಯತೆ ಇದೆ. ಸದ್ಯಕ್ಕೆ ಬೇಡ ಅಂದುಕೊಂಡಿದ್ದ ಕೆಲವೊಂದರ ನಿಮಿತ್ತವಾಗಿ ಸಾಲ ಪಡೆದುಕೊಳ್ಳುವುದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಿದ್ದೀರಿ. ನಿಮ್ಮಲ್ಲಿ ಕೆಲವರಿಗೆ ತೀವ್ರವಾದ ಹೊಟ್ಟೆನೋವು ಹಾಗೂ ಅದಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಚರ್ಮಕ್ಕೆ ಸಂಬಂಧಿಸಿದ ವ್ಯಾಧಿಗಳಿಂದ ಬಳಲುತ್ತಾ ಇರುವವರಿಗೆ ಪರಿಣಾಮಕಾರಿಯಾದ ಔಷಧೋಪಚಾರ ದೊರೆಯುವ ಮಾಹಿತಿ ಸಿಗಲಿದೆ. ನಿಮಗೆ ಬಹಳ ಆಪ್ತರಾದವರು ತಮ್ಮ ಜೊತೆಗೇ ಕರೆದುಕೊಂಡು ಹೋಗಿ, ವೈದ್ಯರ ಬಳಿ ಚಿಕಿತ್ಸೆಗೆ ಸಹಾಯ ಮಾಡಲಿದ್ದಾರೆ. ಮಾಂಸಾಹಾರ ಸೇವನೆ ಮಾಡುವವರಿದ್ದಲ್ಲಿ ಅತಿಯಾದ ಜಿಡ್ಡು, ಅತಿಯಾದ ಮಸಾಲೆಯುಕ್ತ ಮಾಂಸಹಾರ ಸೇವನೆಯಿಂದ ದೂರ ಇರುವುದು ಒಳ್ಳೆಯದು.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 26ರ ದಿನಭವಿಷ್ಯ

ಅಶಕ್ತರಿಗೆ ಒಂದು ಹೊತ್ತಿನ ಊಟದ ವ್ಯವಸ್ಥೆ ಮಾಡಲು ಸಾಧ್ಯವಾದರೆ ಮಾಡಿ. ಕನಿಷ್ಠ ಒಬ್ಬರಿಗಾದರೂ ಈ ರೀತಿ ಮಾಡುವುದರಿಂದ ದೃಷ್ಟಿದೋಷಗಳು ನಿವಾರಣೆ ಆಗುತ್ತವೆ. ಜೊತೆಗೆ ಹೇಳಿಕೊಳ್ಳಲು ಸಾಧ್ಯವಾಗದಂಥ ಅಂಜಿಕೆ- ಹಿಂಜರಿಕೆಗಳು ಇದ್ದಲ್ಲಿ ದೂರವಾಗುತ್ತವೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಸ್ನೇಹಿತರು- ಸಂಬಂಧಿಗಳ ಮನೆಯಲ್ಲಿ ಆಯೋಜನೆ ಆಗಿರುವ ಕಾರ್ಯಕ್ರಮ- ಸಮಾರಂಭಗಳಿಗೆ ನೆರವು ನೀಡಬೇಕೆಂದು ನಿಮ್ಮಲ್ಲಿ ಕೆಲವರನ್ನು ಜೊತೆಗೆ ಬರುವಂತೆ ಕೇಳಿಕೊಳ್ಳಲಿದ್ದಾರೆ. ಮನಸ್ಸಿಲ್ಲದ ಮನಸ್ಸಿನಲ್ಲಿ ಹೂಂ ಅನ್ನುವ ಮುನ್ನ ಆಲೋಚಿಸುವುದು ಒಳ್ಳೆಯದು. ಏಕೆಂದರೆ ಈ ದಿನ ನಿಮಗೆ ಇರುವಂಥ ನಿರುತ್ಸಾಹ ಅಥವಾ ಏಕಾಗ್ರತೆ ಇಲ್ಲದಿರುವುದನ್ನು ಬೇರೆ ರೀತಿಯಲ್ಲಿ ವ್ಯಾಖ್ಯಾನ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ದೇವಸ್ಥಾನ- ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡುವ ಯೋಗ ನಿಮ್ಮಲ್ಲಿ ಕೆಲವರಿಗೆ ಇದೆ. ನಿಮಗೆ ಅಂಥದ್ದೊಂದು ಉದ್ದೇಶ ಇದೆಯೋ ಇಲ್ಲವೋ ಕೊನೆಗೆ ತಮ್ಮ ಜೊತೆಗೆ ಡ್ರೈವಿಂಗ್ ಮಾಡುವುದಕ್ಕೆ ಜನರಲಿಲ್ಲ, ಆದ್ದರಿಂದ ತಮಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿಕೊಂಡು, ಆ ಮೂಲಕವಾದರೂ ನಿಮಗೆ ಇಂಥದ್ದೊಂದು ಅವಕಾಶ ಸಿಗಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಈ ದಿನದ ಬಹುಪಾಲು ಸಮಯ ನಿಮಗೊಂದು ನೀರಸತೆ ಕಾಡಲಿದೆ. ಎಂದಿನ ಉತ್ಸಾಹ- ಚಟುವಟಿಕೆಯಲ್ಲಿ ಕೆಲಸ- ಕಾರ್ಯದಲ್ಲಿ ತೊಡಗಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಇನ್ನು ನಿಮ್ಮಲ್ಲಿ ಯಾರು ಮಾಧ್ಯಮದಲ್ಲಿ ಕಾರ್ಯ ನಿರ್ವಹಿಸುತ್ತೀರೋ ಅಂಥವರಿಗೆ ಈಗ ಮಾಡುತ್ತಿರುವ ಕೆಲಸದ ಜೊತೆಗೆ ಹೊಸ ಜವಾಬ್ದಾರಿಗಳನ್ನು ನಿರ್ವಹಿಸುವಂತೆ ಸೂಚನೆ ನೀಡಬಹುದು. ಈ ದಿನ ಸಾಧ್ಯವಾದಷ್ಟೂ ಬಿಳಿ ಬಣ್ಣದ ಬಟ್ಟೆಗಳನ್ನು ಹಾಕಿಕೊಳ್ಳಿ.

ಲೇಖನ- ಸ್ವಾತಿ ಎನ್.ಕೆ.

Source link

ದಿನ ಭವಿಷ್ಯ: ಇಂದು ಈ ರಾಶಿಯವರು ಕಾಣಿಸಿದ್ದನ್ನೂ ನಿಜ ಎಂದು ಒಪ್ಪಲಾರರು.. – Kannada News | Horoscope 26 Thursday 2026; Dina Rashi Bhavishya Today, Checkout the details here

ಮೇಷ ರಾಶಿ:

ಏನಾದರೂ ಒಂದು ಅಸಂಬದ್ಧವನ್ನು ಮಾಡುವ ಹಣೆಪಟ್ಟಿ ಬರಬಹುದು. ದುರ್ಬಲರ ಜೊತೆ ಹೋರಾಡಿ ಗೆದ್ದು ಹೆಮ್ಮೆಪಡುವಿರಿ. ನಿಮ್ಮ ಬಗ್ಗೆ ಇರುವ ಭಾವವನ್ನು ನೀವು ಸದಾ ಉಳಿಸಿಕೊಳ್ಳುವ ಯೋಚನೆಯಲ್ಲಿಯೇ ಇರುವಿರಿ. ಆಪ್ತರನ್ನು ಕಳೆದುಕೊಂಡು ದುಃಖಿಸುವಿರಿ. ಕ್ರೀಡೆಗೆ ಸಂಬಂಧಿಸಿದಂತೆ ಮಾರ್ಗದರ್ಶನದ ಕೊರತೆ ಕಾಣುವುದು. ಎಲ್ಲ ಮಾತುಗಳನ್ನೂ ನೀವು ನಕಾರಾತ್ಮಕವಾಗಿಯೇ ತಿಳಿಯುವಿರಿ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯವಿದ್ದು, ಎದುರಿಸುವ ಬಗ್ಗೆ ಸಲಹೆಯನ್ನು ಪಡೆಯಿರಿ.

ವೃಷಭ ರಾಶಿ:

ಸ್ವಯಾರ್ಜಿತ ಆಸ್ತಿಯ ಮಾರಾಟದ ವಿಚಾರವು ಅಧಿಕವಾಗಿ ಕೇಳಿಬರಬಹುದು. ಉದ್ಯೋಗದ ಅವಕಾಶವನ್ನು ಬಿಟ್ಟುಬಿಡುವಿರಿ. ಸಂಗಾತಿಯ ಜೊತೆ ವಾಗ್ವಾದವನ್ನು ಮಾಡಲಿದ್ದೀರಿ. ನಿಮ್ಮ ಊಹೆಯು ಸತ್ಯವಾಗಬಹುದು. ಬಂಧುಗಳು ನಿಮ್ಮ ಬಗ್ಗೆ ಮಾತನಾಡಿಕೊಳ್ಳುವರು. ನಿಮ್ಮ ಮತ್ತೊಂದು ಮುಖದ ಪರಿಚಯವೂ ಆಪ್ತರಿಗೆ ಆಗಲಿದೆ. ಪ್ರಯಾಣದಿಂದ ಸ್ವಲ್ಪ ಆಯಾಸವಾಗಲಿದ್ದು ವಿಶ್ರಾಂತಿಯಿಂದ ಸರಿಮಡಿಕೊಳ್ಳಿ. ನಿಮ್ಮ ವಸ್ತುಗಳನ್ನು ಕಳೆದುಕೊಳ್ಳುವ ಸಂಭವವಿದೆ.

ಮಿಥುನ ರಾಶಿ:

ಇಂದು ಮಾಡಲಾಗದ ಕಾರ್ಯವನ್ನು ಮತ್ತೆಂದೋ ಮಾಡುವ ಬದಲು ಅದಕ್ಕಾಗಿ ಇಂದೇ ದಿನವನ್ನು ನಿಶ್ಚಯಿಸಿ. ಹೊಸತನ್ನು ಏನಾದರೂ ಮಾಡುವ ಉದ್ದೇಶ ನಿಮ್ಮಲ್ಲಿರಲಿದೆ. ಬಂಧುಗಳ ವಿಚಾರದಲ್ಲಿ ನಿಮಗೆ ಪೂರ್ಣ ವಿಶ್ವಾಸವಿರದು. ಮಾನಸಿಕ ಒತ್ತಡವು ನಿಮ್ಮ ಕಾರ್ಯವನ್ನು ನಿಧಾನ ಮಾಡುವುದು. ನಿಮ್ಮಲ್ಲಿ ಆದ ಬದಲಾವಣೆಯನ್ನು ಸಹೋದ್ಯೋಗಿಗಳು ಗಮನಿಸಬಹುದು. ವಿದ್ಯಾರ್ಥಿಗಳು ಮನೆಯ ಜವಾಬ್ದಾರಿಯನ್ನೂ ನಡೆಸುವ ಸಂದರ್ಭವು ಬರಬಹುದು.

ಕರ್ಕಾಟಕ ರಾಶಿ:

ವಾಗ್ವಾದದಿಂದ ನಿಮ್ಮ ಹೆಸರನ್ನು ಕೆಡಿಸಿಕೊಳ್ಳುವಿರಿ. ಯಾವುದೋ ಆಲೋಚನೆಯಲ್ಲಿ ಮಗ್ನರಾಗಿ ಮಾಡಬೇಕಾದ ಕೆಲಸವನ್ನು ಮಾಡಲಾಗದು. ಕುರುಡಾಗಿ ಮುನ್ನುಗ್ಗುವುದು ಬೇಡ. ವಿವಾಹದ ಮಾತುಕತೆಗೆ ವಿಘ್ನಗಳು ಬರಬಹುದು. ಸಮಯವನ್ನು ಬಹಳ ದುರುಪಯೋಗ ಮಾಡಿಕೊಳ್ಳುವ ಸಂಭವವಿದೆ. ಸಂಗಾತಿಯಿಂದ ನಿಮಗೆ ಅಪರೂಪದ ವಸ್ತುಗಳು ಸಿಗಬಹುದು. ರಾಜಕೀಯವು ನಿಮಗೆ ಇಷ್ಟವಾಗದು. ಒಂದು ಕೆಲಸವನ್ನು ಮೈ ಮೇಲೆ ಬಿದ್ದು ಮಾಡಿಸಿಕೊಳ್ಳಬೇಕಾಗುವುದು. ನಿಮಗೆ ಆಗುವಷ್ಟೇ ಕೆಲಸವನ್ನು ಮಾಡಿ.

ಸಿಂಹ ರಾಶಿ:

ಸಹೋದರರ ಜೊತೆ ಕಲಹವಾಗಬಹುದು. ಸಂಗಾತಿಯ ಮೌನವು ನಿಮಗೆ ಕಷ್ಟವಾಗಬಹುದು. ಅಧಿಕ ಪ್ರಯಾಣದಿಂದ ಆಯಾಸವಾಗಬಹುದು. ಪ್ರೀತಿಯಲ್ಲಿ ನಿಮಗೆ ನೋವಾಗುವ ಸಾಧ್ಯತೆ ಇದೆ. ಏನೂ ಬೇಡ ಎನಿಸಬಹುದು. ಸಣ್ಣ ಸಣ್ಣ ವಿಚಾರಗಳೂ ದೊಡ್ಡದಾಗಿ ಕಾಣಿಸುವುದು. ಸುರಕ್ಷಿತ ವಾಹನ ಚಾಲನೆಯನ್ನು ಮಾಡಿ. ವಿದ್ಯಾಭ್ಯಾಸವನ್ನು ಮುಗಿಸಿ ಹೊಸ ಉದ್ಯೋಗವನ್ನು ಹುಡುಕುವಿರಿ. ಆಹಾರದ ವ್ಯಾಪಾರದಿಂದ ಲಾಭವಾಗುವುದು. ಸರ್ಕಾರದಿಂದ ಆಗಬೇಕಾದ ಕೆಲಸಕ್ಕೆ ಹೆಚ್ಚು ಖರ್ಚನ್ನು ಮಾಡಬೇಕಾಗುದು.

ಕನ್ಯಾ ರಾಶಿ:

ನಿಮ್ಮ ಉದ್ಯಮದ ಪ್ರಗತಿಯು ನಿಮಗೆ ಖುಷಿಕೊಡುವುದು. ಹಳೆಯ ಹೂಡಿಕೆಗೆ ಪುನಃ ನವೀಕರಣ ಮಾಡಿಕೊಳ್ಳುವಿರಿ. ಸಮಾಧಾನಚಿತ್ತದಿಂದ ನೀವು ಇಂದಿನ ಮಧುರ ಕ್ಷಣಗಳನ್ನು ಆನಂದಿಸುವಿರಿ. ನಿಮ್ಮ ಸಾಹಸಕ್ಕೆ ಯಾರ ಪ್ರೇರಣೆಯೂ ಸಿಗಲಿಕ್ಕಿಲ್ಲ. ಭೂಮಿಯ ವ್ಯವಹಾರದಿಂದ ಅಲ್ಪ ಹಣವು ನಷ್ಟವಾಗುವುದು. ಯಾರನ್ನೋ ನಂಬಿ ಹಣವ್ಯವಹಾರವನ್ನು ಮಾಡಿ ಮೋಸ ಹೋಗುವಿರಿ. ವಿದ್ಯಾಭ್ಯಾಸದ ಹಿನ್ನಡೆಯ ಕಾರಣ ಎಲ್ಲರಿಂದ ಅವಮಾನವಾಗಬಹುದು. ಕೃಷಿಯನ್ನು ಆದಾಯದ ಮೂಲವಾಗಿಸಿಕೊಳ್ಳಬಹುದು. ನಿಮಗೆ ಪ್ರೋತ್ಸಾಹದ ಕೊರತೆ ಅಧಿಕವಾಗಿ ಕಾಣಿಸುವುದು.

ತುಲಾ ರಾಶಿ:

ಮಾರಾಟದ ವಿಭಾಗದಲ್ಲಿ ಇರುವವರಿಗೆ ಲಾಭವನ್ನು ಹೆಚ್ಚಿಸಿದ ಕಾರಣಕ್ಕೆ ಪ್ರಶಂಸೆಯು ಸಿಗಲಿದೆ. ಯಾವ ವಿದ್ಯೆಯೂ ಕರಗತ ಆಗದ ಹೊರತೂ ಧೈರ್ಯವನ್ನು ಕೊಡದು. ನಿಮ್ಮನ್ನು ಅವ್ಯವಹಾರಕ್ಕೆ ಸಹೋದ್ಯೋಗಿಗಳು ಪ್ರೇರಿಸಬಹುದು. ಅಪ್ರಯೋಜಕ ಎಂದುಕೊಂಡ ವಿದ್ಯೆಯಿಂದ ಪ್ರಯೋಜನವಾಗುವುದು. ಹಿತಶತ್ರುಗಳನ್ನೇ ನಿಮ್ಮ ಬೆಂಬಲಕ್ಕೆ ಇಟ್ಟುಕೊಳ್ಳುವಿರಿ. ನೀವೇ ಸಾಯಬೇಕು, ಸ್ವರ್ಗಕಾಣಬೇಕು. ರಾಜಕೀಯದವರಿಗೆ ಬೆಂಬಲಿಗರಿಂದ ಒತ್ತಡಗಳು ಬರಬಹುದು.

ವೃಶ್ಚಿಕ ರಾಶಿ:

ಗೆಲುವಿಗೆ ಬಹಳ ಪ್ರಯತ್ನಪಟ್ಟು ಯಶಸ್ವಿಯಾಗುವಿರಿ. ವ್ಯಕ್ತಿತ್ವವನ್ನು ಗಮನಿಸಿಕೊಂಡು ಯಾರ ಬಳಿಯಾದರೂ ಮಾತನಾಡಿ. ನಿಮ್ಮ ಸ್ಥಾನದ ಬಗ್ಗೆ ಭಯ ಉಂಟಾಗಬಹುದು. ಪವಿತ್ರಕ್ಷೇತ್ರಗಳಿಗೆ ತೆರಳುವ ಅವಕಾಶ ಸಿಗಬಹುದು. ತಂದೆಯ ಅಸಮಾಧಾನವನ್ನು ಕುಳಿತು ಬಗೆಹರಿಸಿ. ಪೋಷಕರ ಜೊತೆ ಮನೋರಂಜನೆಯಲ್ಲಿ ಪಾಲ್ಗೊಳ್ಳುವಿರಿ. ಕಾರ್ಯಕ್ಕೆ ಎಲ್ಲರಿಂದ ಪ್ರಶಂಸೆ ಸಿಕ್ಕರೂ ನಿಮ್ಮ ಕೆಲಸವು ಸಮಾಧಾನ ಕೊಡದು. ಪರೋಪಕಾರ ಗುಣವು ನಿಮ್ಮಲ್ಲಿ ಇಂದು ಜಾಗರೂಕವಾಗಿ ಇರುವುದು.

ಧನು ರಾಶಿ:

ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ವಿಚಾರದಲ್ಲಿ ತಜ್ಞರ ಸಂಪರ್ಕ ಮಾಡುವುದು ಉತ್ತಮ. ನಿಮ್ಮ ಇಂದಿನ ಕೆಲಸವನ್ನು ಪೂರ್ಣ ಮಾಡಲು ಬಹಳ ಆತುರದಿಂದ ಇರುವಿರಿ. ವೃತ್ತಿಯ ಜೊತೆ ಉನ್ನತ ಶಿಕ್ಷಣವನ್ನೂ ಮಾಡುವಿರಿ. ಇಂದು ನಿಮ್ಮ ಕುಟುಂಬದ ಸದಸ್ಯರು ನಿಮ್ಮನ್ನು ಬಿಟ್ಟು ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳುವರು. ನಿಮ್ಮ ಸ್ಥಾನಕ್ಕೆ ಗೌರವವಿಲ್ಲದಂತೆ ತೋರಬಹುದು. ನಿಮ್ಮ ಸೋಲನ್ನು ಸುಲಭಕ್ಕೆ ಒಪ್ಪಿಕೊಳ್ಳಲಾರಿರಿ. ಯಾರ ಮೇಲೂ ಸಿಟ್ಟಿನಿಂದ ಮಾತನಾಡುವುದು ಬೇಡ.

ಮಕರ ರಾಶಿ:

ಮೋಸಕ್ಕೆ ಅನೇಕ ಮುಖಗಳಿವೆ ಎಂದು ಗೊತ್ತಾಗುವುದು. ಎಲ್ಲದಕ್ಕೂ ಇನ್ನೊಬ್ಬರನ್ನು ಅವಲಂಬಿಸುವುದು ನಿಮಗೆ ಇಷ್ಟವಾಗದು. ಇದಕ್ಕಾಗಿ ಬೇರೆ ಮಾರ್ಗವನ್ನೂ ಅನ್ವೇಷಿಸುವಿರಿ. ನಿಮ್ಮ ಸಂಗಾತಿಯ ಆರೋಗ್ಯವು ಕ್ಷೀಣಸಲಿದ್ದು ಚಿಂತೆಯೂ ಕಾಡುವುದು. ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ. ನಿಮ್ಮ ಅಪರೂಪದ ವ್ಯಕ್ತಿಗಳು ಆಕಸ್ಮಾತ್ತಾಗಿ ಭೇಟಿಯಾಗುವರು. ನಿಮಗೆ ಕೊಟ್ಟ ಕಾರ್ಯವನ್ನು ಮರೆತು ಅನ್ಯರ ಕಾರ್ಯದಲ್ಲಿ ಮಗ್ನರಾಗುವಿರಿ. ಕೂಡಿಟ್ಟ ಹಣದಿಂದ ಕೆಲವು ಪ್ರಯೋಜನಗಳು ನಿಮಗೆ ಆಗಲಿವೆ.

ಕುಂಭ ರಾಶಿ:

ನೀವು ಇತರರ ಮನೋಭಾವಕ್ಕೆ ಸ್ಪಂದಿಸಲು ಹೆಚ್ಚು ಉತ್ಸುಕತೆ ಇರಲಿದೆ. ಇಂದು ನಿಮ್ಮ ಮಕ್ಕಳ ಬಗ್ಗೆ ಸಕಾರಾತ್ಮಕ ವಾರ್ತೆಯನ್ನು ಕೇಳುವಿರಿ. ನಿಮ್ಮ ಆದಾಯಕ್ಕೆ ಹೊಡೆತ ಬೀಳಬಹುದು. ವೃತ್ತಿಪರರಾದ ನಿಮಗೆ ಕಛೇರಿಯಿಂದ ಶುಭ ಸುದ್ದಿಯನ್ನು ನಿರೀಕ್ಷಿಸುವುದು ಬೇಡ. ಸಂಗಾತಿಯು ನಿಮ್ಮ ನಡವಳಿಕೆಯ ಬಗ್ಗೆ ಏನಾದರೂ ಹೇಳಬಹುದು. ಕೇಳಿ ಸುಮ್ಮನಾಗಿ. ಉತ್ತರದಿಂದ ಮತ್ತೇನಾದರೂ ಆದೀತು. ಸುಲಭವಾಗಿ ಸಿಗುವ ಸಂಪತ್ತಿಗೆ ಆಸೆಪಡುವುದು ಬೇಡ.

ಮೀನ ರಾಶಿ:

ವಿವಾಹದ ವಾತಾವರಣವು ಮನೆಯಲ್ಲಿ ಇದ್ದರೂ ಉದ್ವೇಗಕ್ಕೆ ಒಳಗಾಗದೇ ನೀವೂ ನೆಮ್ಮದಿಯಿಂದ ಓಡಾಡುವಿರಿ. ಚಲಿಸುವ ವಾಹನದಿಂದ ಬೀಳುವ ಸಾಧ್ಯತೆ ಇದೆ. ನಿಷ್ಕಪಟವು ನಿರಾತಂಕ ಸ್ಥಿತಿಯನ್ನು ಕೊಡುವುದು. ಮನಸ್ಸನ್ನು ಪ್ರಶಾಂತವಾಗಿ ಇಟ್ಟುಕೊಳ್ಳಲು ನಿಮಗೆ ಆಗದು. ನಿಮ್ಮ ವಸ್ತುವು ಕಳ್ಳತನವಾಗಬಹುದು ಎಂಬ ಭೀತಿಯು ಉಂಟಾಗಬಹುದು. ಸ್ವಂತ ಉದ್ಯೋಗದ ಮೇಲೆ ಕಾಳಜಿಯು ಅನ್ಯ ಕಾರ್ಯದ ನಿಮಿತ್ತ ಕಡಿಮೆ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಕುಂಭ, ಮಹಾನಕ್ಷತ್ರ : ಶತಭಿಷಾ, ವಾರ : ಗುರು, ಪಕ್ಷ : ಶುಕ್ಲ, ತಿಥಿ : ದಶಮೀ, ನಿತ್ಯನಕ್ಷತ್ರ : ಮೃಗಶಿರಾ, ಯೋಗ : ಪ್ರೀತಿ, ಕರಣ : ತೈತುಲ, ಸೂರ್ಯೋದಯ – 06 – 43 am, ಸೂರ್ಯಾಸ್ತ – 06 – 30 pm, ಇಂದಿನ ಶುಭಾಶುಭ ಕಾಲ : ರಾಹು 14:06 – 15:34, ಯಮಗಂಡ ಕಾಲ 06:44 – 08:12, ಗುಳಿಕ ಕಾಲ 09:41 – 11:09

-ಲೋಹಿತ ಹೆಬ್ಬಾರ್ – 8762924271 (what’s app only)

Source link