All posts by nagaraj11081993

ಕೇಂದ್ರದಿಂದ ಉಚಿತ ಲಸಿಕೆ: 14 ವಯಸ್ಸಿನ ಹೆಣ್ಮಕ್ಕಳಿಗೆ ಏಕೆ? ಲಸಿಕೆ ಏನ್ ಕೆಲಸ ಮಾಡುತ್ತೆ? ಇಲ್ಲಿದೆ ವಿವರ – Kannada News | Free HPV Vaccine For Young Women over Cervical Cancer: What is it and how does it work?

ನವದೆಹಲಿ, (ಫೆಬ್ರವರಿ 25): ಗರ್ಭಕಂಠದ ಕ್ಯಾನ್ಸರ್‌ ತಡೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಹದಿಹರೆಯದ ಹೆಣ್ಣು ಮಕ್ಕಳಿಗೆ ಉಚಿತ ಕ್ಯಾನ್ಸರ್ ಲಸಿಕೆ ನೀಡಲು ಸಿದ್ಧತೆ ನಡೆಸಿದೆ. ದೇಶಾದ್ಯಂತ ಹದಿಹರೆಯದ ಬಾಲಕಿಯರಿಗಾಗಿ ‘ಡ್ಯೂಮನ್ ಪ್ಯಾಪಿಲೋಮ ವೈರಸ್(HPV) ಲಸಿಕೆ ವಿತರಣೆ ಕಾರ್ಯ ಕ್ರಮವನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರವು ಸಜ್ಜಾಗಿದ್ದು, ಗರ್ಭಕಂಠದ ಕ್ಯಾನ್ಸರ್ (Cervical Cancer) ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ದೇಶಾದ್ಯಂತ ‘ಸ್ವಸ್ಥ ನಾರಿ’ (Swastha Nari) ಮಿಷನ್ ಅಡಿಯಲ್ಲಿ ಬೃಹತ್ ಲಸಿಕಾ ಅಭಿಯಾನಕ್ಕೆ ಸಿದ್ಧತೆ ನಡೆಸಿದೆ. ಇದರ ಭಾಗವಾಗಿ ಮೆರ್ಕ್ ಸಂಸ್ಥೆಯು ತಯಾರಿಸಿರುವ ‘ಗಾರ್ಡಾಸಿಲ್’ ಚುಚ್ಚುಮದ್ದನ್ನು ದೇಶಾದ್ಯಂತ ಉಚಿತವಾಗಿ ನೀಡಲಾಗುವುದು. ಯಾಕೆ ಈ ನಿರ್ಧಾರ? 14ನೇ ವಯಸ್ಸಿಗೇ ಏಕೆ? ಇಲ್ಲಿದೆ ವಿವರ

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಭಯೋತ್ಪಾದನೆಯನ್ನು ಯಾರೂ ಸಮರ್ಥಿಸಲು ಸಾಧ್ಯವಿಲ್ಲ; ಇಸ್ರೇಲ್ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಐತಿಹಾಸಿಕ ಭಾಷಣ – Kannada News | Nothing can justify terrorism PM Narendra Modi Says India Stands With Israel in Knesset Speech

ಟೆಲ್ ಅವಿವ್, ಫೆಬ್ರವರಿ 25: ಇಸ್ರೇಲ್​ನ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಸ್ರೇಲ್‌ನ ಸಂಸತ್​​​ ಕೆನೆಸೆಟ್‌ನಲ್ಲಿ ಭಾಷಣ ಮಾಡಿದ್ದಾರೆ. ಭಾರತದ ಪ್ರಧಾನಿಯೊಬ್ಬರು ಇಸ್ರೇಲ್ ಸಂಸತ್​​ನಲ್ಲಿ ಮಾಡುತ್ತಿರುವ ಮೊದಲ ಭಾಷಣ ಇದಾಗಿದ್ದರಿಂದ ಇದು ಐತಿಹಾಸಿಕ ಕ್ಷಣವಾಗಿದೆ. ಹಲವು ವರ್ಷಗಳಿಂದ ಭಾರತದಲ್ಲಿ ಭಯೋತ್ಪಾದನಾ ದಾಳಿಗಳು ನಡೆದಿವೆ. ಭಯೋತ್ಪಾದನೆಯನ್ನು ಭಾರತ ಎಂದಿಗೂ ಸಹಿಸುವುದಿಲ್ಲ. ಭಯೋತ್ಪಾದನೆಯು ಜಾಗತಿಕ ಶಾಂತಿ, ಭದ್ರತೆ ಮತ್ತು ಸ್ಥಿರತೆಗೆ ಅತ್ಯಂತ ದೊಡ್ಡ ಬೆದರಿಕೆಯಾಗಿದೆ. ಇದು ಮಾನವೀಯತೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಭಯೋತ್ಪಾದನೆಯನ್ನು ಯಾರೂ ಒಪ್ಪಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದ್ದಾರೆ.

ಈ ಪ್ರತಿಷ್ಠಿತ ಸದನದ ಮುಂದೆ ನಿಲ್ಲುವುದು ನನಗೆ ಸಿಕ್ಕ ಸೌಭಾಗ್ಯ, ಗೌರವ. ನಾನು ಭಾರತದ ಪ್ರಧಾನಮಂತ್ರಿಯಾಗಿ ಮತ್ತು ಒಂದು ಪ್ರಾಚೀನ ನಾಗರಿಕತೆಯ ಪ್ರತಿನಿಧಿಯಾಗಿ ಮತ್ತೊಂದು ನಾಗರಿಕತೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದೇನೆ. ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಯನ್ನು ಕೂಡ ಭಾರತ ಖಂಡಿಸುತ್ತದೆ. ಹಮಾಸ್ ನಡೆಸಿದ ಬರ್ಬರ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಪ್ರತಿಯೊಬ್ಬರಿಗೂ ಭಾರತೀಯರ ಪರವಾಗಿ ನಾನು ಸಂತಾಪವನ್ನು ಸೂಚಿಸುತ್ತೇನೆ. ನಿಮ್ಮ ನೋವು, ನಿಮ್ಮ ದುಃಖವನ್ನು ನಾವು ಹಂಚಿಕೊಳ್ಳುತ್ತೇವೆ. ಭಾರತವು ಸದಾ ಇಸ್ರೇಲ್‌ನೊಂದಿಗೆ ದೃಢವಾಗಿ ನಿಲ್ಲುತ್ತದೆ. ಭಾರತವು ಇಸ್ರೇಲ್‌ ಅನ್ನು ಔಪಚಾರಿಕವಾಗಿ ಗುರುತಿಸಿದ ದಿನವಾದ 1950ರ ಸೆಪ್ಟೆಂಬರ್ 17ರಂದು ನಾನು ಜನಿಸಿದ್ದೇನೆ ಎಂದು ಪ್ರಧಾನಿ ಮೋದಿ ಇಸ್ರೇಲ್ ಸಂಸತ್​​ನಲ್ಲಿ ಮಾತನಾಡಿದ್ದಾರೆ.

ಇದನ್ನೂ ಓದಿ: ನಾವು ಗೆಳೆಯರಿಗಿಂತ ಹೆಚ್ಚಾಗಿ ಸಹೋದರರು; ಮೋದಿ ಬಗ್ಗೆ ಇಸ್ರೇಲ್ ಸಂಸತ್​​ನಲ್ಲಿ ಪ್ರಧಾನಿ ನೆತನ್ಯಾಹು ಬಣ್ಣನೆ

2023ರ ಅಕ್ಟೋಬರ್ 7ರಂದು ನಡೆದ ಹಮಾಸ್ ದಾಳಿಗೆ ಸಂತಾಪ ಸೂಚಿಸಿ, ಭಾರತವು ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಇಸ್ರೇಲ್ ಜೊತೆ ನಿಲ್ಲುತ್ತದೆ ಎಂದು ಮೋದಿ ದೃಢಪಡಿಸಿದ್ದಾರೆ. ಭಾರತವು ಗಾಜಾ ಶಾಂತಿ ಉಪಕ್ರಮವನ್ನು ಬೆಂಬಲಿಸುತ್ತದೆ. ಇದು ಈ ಪ್ರದೇಶದಲ್ಲಿ ನ್ಯಾಯಯುತ ಮತ್ತು ಶಾಶ್ವತ ಶಾಂತಿಯ ಭರವಸೆಯನ್ನು ಹೊಂದಿದೆ. ಶಾಂತಿಯ ಹಾದಿ ಯಾವಾಗಲೂ ಸುಲಭವಲ್ಲ. ಈ ಪ್ರದೇಶದಲ್ಲಿ ಸಂವಾದ, ಶಾಂತಿ ಮತ್ತು ಸ್ಥಿರತೆಗಾಗಿ ಭಾರತವು ನಿಮ್ಮೊಂದಿಗೆ ಮತ್ತು ಜಗತ್ತಿನೊಂದಿಗೆ ಸದಾ ನಿಲ್ಲುತ್ತದೆ” ಎಂದು ಪ್ರಧಾನಿ ಮೋದಿ ನೆಸ್ಸೆಟ್‌ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಮೋದಿ ಆಗಮನಕ್ಕೂ ಮುನ್ನವೇ ತ್ರಿವರ್ಣ ದೀಪಗಳಿಂದ ಕಂಗೊಳಿಸಿದ ಇಸ್ರೇಲ್ ಸಂಸತ್ತು, ನಾಳೆ ಮೋದಿ ಭಾಷಣ

ಅಮೆರಿಕ ಮತ್ತು ಇರಾನ್ ನಡುವಿನ ಸಂಬಂಧ ಹದಗೆಡುತ್ತಿರುವುದು ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ದ್ವಿಪಕ್ಷೀಯ ರಕ್ಷಣೆ ಮತ್ತು ವ್ಯಾಪಾರ ಸಂಬಂಧಗಳನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಎರಡು ದಿನಗಳ ಇಸ್ರೇಲ್ ಭೇಟಿಯನ್ನು ಪ್ರಾರಂಭಿಸಿದ್ದಾರೆ. ಪ್ರಧಾನಿ ಮೋದಿ ಇಸ್ರೇಲ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಇದಕ್ಕೂ ಮುನ್ನ ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಮಳೆರಾಜೇಂದ್ರಸ್ವಾಮಿ ರಥೋತ್ಸವ: ತೇರು ಎಳೆದ ಸಹಸ್ರಾರು ಭಕ್ತರು; ವಿಡಿಯೋ ನೋಡಿ – Kannada News | Bagalkote Hosamuranala Witnesses Grand Malerajendra Swamy Rathotsava; Lakhs of Devotees Participate

ಬಾಗಲಕೋಟೆ, ಫೆಬ್ರವರಿ 25: ಜಿಲ್ಲೆಯ ಹೊಸಮುರನಾಳ ಗ್ರಾಮದಲ್ಲಿ ಮಳೆರಾಜೇಂದ್ರಸ್ವಾಮಿ ರಥೋತ್ಸವವು ಅದ್ದೂರಿಯಾಗಿ ನೆರವೇರಿತು. ಈ ಭವ್ಯ ಕಾರ್ಯಕ್ರಮಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು. ಭಾವೈಕ್ಯತೆಗೆ ಹೆಸರಾದ ಈ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಉತ್ಸಾಹದಿಂದ ತೇರನ್ನು ಎಳೆದರು. ಪಲ್ಲಕ್ಕಿ ಮೆರವಣಿಗೆ, ಮಹಿಳೆಯರಿಂದ ಆರತಿ ಸೇವೆ ಮತ್ತು ಕುದುರೆ ಮೇಲೆ ಆದಿತ್ಯನಾಥ ಸ್ವಾಮೀಜಿ ಅವರ ಮೆರವಣಿಗೆಯು ರಥೋತ್ಸವದ ಪ್ರಮುಖ ಆಕರ್ಷಣೆಯಾಗಿತ್ತು. ಹೊಸಮುರನಾಳ ಗ್ರಾಮದಾದ್ಯಂತ ಸಂಭ್ರಮದ ವಾತಾವರಣ ನೆಲೆಸಿತ್ತು. ಭಕ್ತರು ಶ್ರೀ ಮಳೆರಾಜೇಂದ್ರಸ್ವಾಮಿಯ ದರ್ಶನ ಪಡೆದು ಪುನೀತರಾದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Sirsi Marikamba Jatre: ಇಂದಿನಿಂದ ಶಿರಸಿ ಜಾತ್ರೆ ಶುಭಾರಂಭ; ಗದ್ದುಗೆ ಏರಿ ಕುಳಿತ ಮಾರಿಕಾಂಬಾ

Source link

ನಾವು ಗೆಳೆಯರಿಗಿಂತ ಹೆಚ್ಚಾಗಿ ಸಹೋದರರು; ಮೋದಿ ಬಗ್ಗೆ ಇಸ್ರೇಲ್ ಸಂಸತ್​​ನಲ್ಲಿ ಪ್ರಧಾನಿ ನೆತನ್ಯಾಹು ಬಣ್ಣನೆ – Kannada News | PM Modi is more than a friend he is a brother Israel PM Netanyahu highlights bond in Parliament

ಟೆಲ್ ಅವಿವ್, ಫೆಬ್ರವರಿ 25: ಇಸ್ರೇಲ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿಮಾನ ನಿಲ್ದಾಣಕ್ಕೇ ಆಗಮಿಸಿ ಆತ್ಮೀಯವಾಗಿ ಸ್ವಾಗತ ನೀಡಿದರು. ಇಂದು ಪ್ರಧಾನಿ ಮೋದಿ (PM Modi in Israel) ಇಸ್ರೇಲ್ ಸಂಸತ್​​ ಅನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಮೂಲಕ ಇಸ್ರೇಲ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಮೊದಲ ಭಾರತೀಯ ಪ್ರಧಾನಿಯೆಂಬ ಹೆಗ್ಗಳಿಕೆಗೂ ಮೋದಿ ಪಾತ್ರರಾಗಲಿದ್ದಾರೆ. ಅದಕ್ಕೂ ಮುನ್ನ ಮಾತನಾಡಿದ ಪ್ರಧಾನಿ ನೆತನ್ಯಾಹು ಪ್ರಧಾನಿ ಮೋದಿಯನ್ನು ತಮ್ಮ ಸಹೋದರನಿದ್ದಂತೆ ಎಂದು ಬಣ್ಣಿಸಿದ್ದಾರೆ. ಈ ಮೂಲಕ ಭಾರತ ಮತ್ತು ಇಸ್ರೇಲ್ ನಡುವಿನ ಗೆಳೆತನ, ಬಾಂಧವ್ಯವನ್ನು ಮತ್ತೊಮ್ಮೆ ಜಗತ್ತಿಗೆ ಸಾರಿದ್ದಾರೆ.

ಈ ಸ್ನೇಹದ ಪ್ರತಿಬಿಂಬವಾಗಿ, ಭಾರತ ಮತ್ತು ಇಸ್ರೇಲ್ ತಮ್ಮ ವ್ಯಾಪಾರವನ್ನು ದ್ವಿಗುಣಗೊಳಿಸಿದೆ. ಎರಡೂ ದೇಶಗಳ ನಡುವಿನ ಸಹಕಾರ 3 ಪಟ್ಟು ಹೆಚ್ಚಾಗಿದೆ, ಎರಡೂ ದೇಶಗಳ ನಡುವಿನ ತಿಳುವಳಿಕೆ 4 ಪಟ್ಟು ಹೆಚ್ಚಾಗಿದೆ ಎಂದು ನೆತನ್ಯಾಹು ಹೇಳಿದ್ದಾರೆ. “ಇದು ನಮಗೆ ಹೆಮ್ಮೆಯ ಕ್ಷಣ. ಪ್ರಧಾನಿ ಮೋದಿ ನನ್ನ ಉತ್ತಮ ಸ್ನೇಹಿತ. ನನ್ನ ಗೆಳೆಯ ಎನ್ನುವುದಕ್ಕಿಂತಲೂ ಸಹೋದರ ಎಂದರೂ ತಪ್ಪಾಗಲಾರದು. ಭಾರತದೊಂದಿಗಿನ ವ್ಯಾಪಾರ ದ್ವಿಗುಣಗೊಂಡಿದೆ ಮತ್ತು ಸಹಕಾರ 4 ಪಟ್ಟು ಹೆಚ್ಚಾಗಿದೆ” ಎಂದು ಮೋದಿ ಹೇಳಿದ್ದಾರೆ.

ಕಳೆದ 9 ವರ್ಷಗಳಲ್ಲಿ ಪ್ರಧಾನಿ ಮೋದಿ ಎರಡನೇ ಬಾರಿಗೆ ಇಸ್ರೇಲ್‌ಗೆ ಆಗಮಿಸಿದ್ದಾರೆ. ಇಸ್ರೇಲ್ ಪ್ರಧಾನಿ ನೆತನ್ಯಾಹು ಮತ್ತು ಅವರ ಪತ್ನಿ ಪ್ರಧಾನಿಯನ್ನು ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು.

ಇಸ್ರೇಲ್ ಸಂಸತ್ತಿನಲ್ಲಿ “ಮೋದಿ, ಮೋದಿ” ಎಂಬ ಘೋಷಣೆಗಳು ಕೇಳಿಬಂದವು. ನೆಸ್ಸೆಟ್ ಸ್ಪೀಕರ್ ಅಮೀರ್ ಒಹಾನಾ “ಇದು ನಮಗೆ ಹೆಮ್ಮೆಯ ಕ್ಷಣ” ಎಂದು ಹೇಳಿದರು. ಅವರು ಪ್ರಧಾನಿಯನ್ನು “ನಮಸ್ತೆ” ಯೊಂದಿಗೆ ಸ್ವಾಗತಿಸಿದರು. ಈ ವೇಳೆ ಸಂಸತ್​​ನ ಎಲ್ಲ ಸದಸ್ಯರೂ ಎದ್ದುನಿಂತು ಕೈ ಜೋಡಿಸಿ ನಮಸ್ಕಾರ ಮಾಡಿ ಮೋದಿಯನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 9:23 pm, Wed, 25 February 26

Source link

ಶಿವಮೊಗ್ಗ SSLC ವಿದ್ಯಾರ್ಥಿ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​: ಸಂಕೇತ್ ಕೊಲೆ ರಹಸ್ಯ ಬಯಲು! – Kannada News | Big Twist To Shivamogga SSLC Student Murder Case: Sanketh Killed from classmates

ಶಿವಮೊಗ್ಗ, (ಫೆಬ್ರವರಿ 25): ಶಿವಮೊಗ್ಗ (Shivamogga) ಹೊರವಲಯದಲ್ಲಿರುವ ಸೂಳೆಬೈಲಿನಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಸಂಕೇತ್ ಕೊಲೆ ರಾಜ್ಯದ ಜನರನ್ನು ಬೆಚ್ಚಿಬೀಳಿಸಿದೆ. ಸೂಳೆಬೈಲಿನಲ್ಲಿ ಸಂಕೇತ್ ಕೊಲೆ ನಡೆದು ಇಂದಿಗೆ ಮೂರನೇ ದಿನ. ಫೆ. 23. ರ ರಾತ್ರಿ 9.30 ಆಸುಪಾಸಿನಲ್ಲಿ ಆತನ ಕೊಲೆ ನಡೆದಿತ್ತು. ಕೊಲೆ ಕೇಸ್ ನಲ್ಲಿ ಈಗಾಗಲೇ ತುಂಗಾ ನಗರ ಪೊಲೀಸರು 7 ಅಪ್ರಾಪ್ತರನ್ನು ಬಂಧಿಸಿದ್ದಾರೆ. ಈ ಕೊಲೆ ಕೇಸ್ ನಲ್ಲಿ ಅದೇ ಶಾಲೆಯ ನಾಲ್ವರು ಇರುವುದು ಆಘಾತಕಾರಿ ಬೆಳವಣಿಗೆಯಾಗಿದೆ. ಕೊಲೆ ದಿನ ನಡೆದಿದ್ದು ಏನು? ಕೊಲೆ ಮಾಡಿದ್ದು ಯಾರು? ಎನ್ನುವುದನ್ನು ಹತ್ಯೆಯಾದ ಸಂಕೇತ್ ಸಹಪಾಠಿಗಳು ಬಿಚ್ಚಿಟ್ಟಿದ್ದಾರೆ. ಇನ್ನು ಸಂಕೇತ ಜೀವ ಉಳಿಸಿಲು ಶಿಕ್ಷಕ ನಡೆಸಿದ ಹೋರಾಟ ಹೇಗಿತ್ತು ಎನ್ನುವ ಡಿಟೇಲ್ಸ್ ವಿಡಿಯೋನಲ್ಲಿದೆ.

Source link

IND vs ZIM: ಭಾರತ- ಜಿಂಬಾಬ್ವೆ ಫೈಟ್​ಗೆ ಮಳೆ ಅಡ್ಡಿ? ಪಂದ್ಯ ರದ್ದಾದರೆ ಭಾರತದ ಕನಸು ಭಗ್ನ – Kannada News | IND vs ZIM T20 World Cup: Chennai Pitch, Rain and Semi Final Race | Super 8 Battle

ಭಾರತ ಹಾಗೂ ಜಿಂಬಾಬ್ವೆ (India vs Zimbabwe) ಎರಡೂ ತಂಡಗಳು ಟಿ20 ವಿಶ್ವಕಪ್​ನ (T20 World Cup) ಗುಂಪು ಹಂತದಲ್ಲಿ ಅಜೇಯರಾಗಿ ಉಳಿದು ಸೂಪರ್ 8 ಸುತ್ತಿಗೆ ಅರ್ಹತೆ ಪಡೆದಿದ್ದವು. ಆದರೆ ಈ ಎರಡೂ ತಂಡಗಳು ಸೂಪರ್ 8 ಸುತ್ತಿನಲ್ಲಿ ಗೆಲುವಿನ ಆರಂಭವನ್ನು ಪಡೆಯುವಲ್ಲಿ ವಿಫಲವಾಗಿವೆ. ಆದ್ದರಿಂದ ಈಗ ಎರಡೂ ತಂಡಗಳಿಗೆ ಪರಸ್ಪರ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಈ ಪಂದ್ಯ ಚೆನ್ನೈನಲ್ಲಿ ನಡೆಯುತ್ತಿರುವುದರಿಂದ ಟೀಂ ಇಂಡಿಯಾಗೆ ತವರಿನ ಲಾಭ ಸಿಗಬಹುದು. ಆದಾಗ್ಯೂ ಟೀಂ ಇಂಡಿಯಾ ಈ ಪಂದ್ಯದಲ್ಲಿ ಮೈಮರೆತರೆ ಸೋಲು ಕಟ್ಟಿಟ್ಟ ಬುತ್ತಿ. ಏಕೆಂದರೆ, ಗುಂಪು ಹಂತದಲ್ಲಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳಿಗೆ ಜಿಂಬಾಬ್ವೆ ಆಘಾತ ನೀಡಿದೆ. ಆದ್ದರಿಂದ, ಜಿಂಬಾಬ್ವೆಗೆ ಹೋಲಿಸಿದರೆ, ಈ ಪಂದ್ಯದಲ್ಲಿ ಭಾರತ ಹೆಚ್ಚಿನ ಒತ್ತಡದೊಂದಿಗೆ ಕಣಕ್ಕಿಳಿಯಲಿದೆ.

ಚೆನ್ನೈ ಹವಾಮಾನ ಹೇಗಿರಲಿದೆ?

ಎರಡೂ ತಂಡಗಳ ನಡುವಿನ ಪಂದ್ಯವು ಫೆಬ್ರವರಿ 26 ರ ಗುರುವಾರ ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಸೆಮಿಫೈನಲ್ ರೇಸ್‌ನಲ್ಲಿ ಉಳಿಯಬೇಕಾದರೆ ಎರಡೂ ತಂಡಗಳು ಗೆಲ್ಲುವುದು ಕಡ್ಡಾಯವಾಗಿದೆ. ಆದ್ದರಿಂದ, ಎರಡೂ ತಂಡಗಳು ಗೆಲ್ಲುವ ಇರಾದೆಯೊಂದಿಗೆ ಕಣಕ್ಕಿಳಿಯಲಿವೆ. ಆದರೆ ಈ ಪಂದ್ಯ ಮಳೆಯಿಂದಾಗಿ ರದ್ದಾದರೆ ಏನಾಗಲಿದೆ?. ಇದಕ್ಕೆ ಉತ್ತರ, ಮಳೆ ಅಥವಾ ಇನ್ನಾವುದೇ ಕಾರಣದಿಂದಾಗಿ ಈ ಪಂದ್ಯ ನಡೆಯದಿದ್ದರೆ, ಟೀಂ ಇಂಡಿಯಾ ಬಹುತೇಕ ಟೂರ್ನಿಯಿಂದ ಹೊರಬೀಳಲಿದೆ.

ಪಂದ್ಯ ರದ್ದಾದರೆ, ಎರಡೂ ತಂಡಗಳು ತಲಾ 1 ಅಂಕಗಳನ್ನು ಪಡೆಯುತ್ತವೆ. ಅಲ್ಲದೆ, ಭಾರತ ಮತ್ತು ಜಿಂಬಾಬ್ವೆ ಎರಡೂ ತಂಡಗಳು ಸೂಪರ್ 8 ಸುತ್ತಿನಲ್ಲಿ ತಮ್ಮ ಮೊದಲ ಪಂದ್ಯವನ್ನು ದೊಡ್ಡ ಅಂತರದಿಂದ ಸೋತಿವೆ. ಆದ್ದರಿಂದ, ಸೆಮಿಫೈನಲ್ ತಲುಪಲು ಎರಡೂ ತಂಡಗಳು ಉಳಿದ ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆಲ್ಲಬೇಕು. ಮಳೆ ಅದಕ್ಕೆ ಅಡ್ಡಿಪಡಿಸಿದರೆ, ಬ್ಯಾಕಪ್ ಖಚಿತ. ಹವಾಮಾನ ಮುನ್ಸೂಚಕ ಅಕ್ಯೂವೆದರ್ ಪ್ರಕಾರ, ಗುರುವಾರ ಚೆನ್ನೈನಲ್ಲಿ ಮಳೆಯಾಗುವ ಸಾಧ್ಯತೆಗಳಿಲ್ಲ. ಹೀಗಾಗಿ ಅಭಿಮಾನಿಗಳು ಯಾವುದೇ ಆತಂಕವಿಲ್ಲದೆ ಪೂರ್ಣ ಪಂದ್ಯವನ್ನು ವೀಕ್ಷಿಸಬಹುದು.

IND vs ZIM: ಭಾರತ- ಜಿಂಬಾಬ್ವೆ ನಡುವಿನ ನಿರ್ಣಾಯಕ ಪಂದ್ಯ ಎಲ್ಲಿ, ಯಾವಾಗ, ಎಷ್ಟು ಗಂಟೆಗೆ ಆರಂಭ?

ಸ್ಪಿನ್ನರ್‌ಗಳ ಸವಾಲು

ಚೆನ್ನೈ ಪಿಚ್‌ನಲ್ಲಿ ಆರಂಭದಲ್ಲಿ ಬ್ಯಾಟಿಂಗ್ ಮಾಡುವುದು ಸುಲಭ. ಆದರೆ ಬ್ಯಾಟ್ಸ್‌ಮನ್‌ಗಳು ಸ್ಪಿನ್ನರ್‌ಗಳನ್ನು ಹೇಗೆ ನಿಭಾಯಿಸುತ್ತಾರೆ? ಎಂಬುದರ ಮೇಲೆ ಟಾರ್ಗೆಟ್ ನಿರ್ಧಾರವಾಗುತ್ತದೆ. 2026 ರ ಟಿ20 ವಿಶ್ವಕಪ್‌ನಲ್ಲಿ ಇಲ್ಲಿ ಇಲ್ಲಿಯವರೆಗೆ ಆರು ಪಂದ್ಯಗಳು ನಡೆದಿದ್ದು, ಬ್ಯಾಟ್ಸ್‌ಮನ್‌ಗಳು ಸ್ಪಷ್ಟವಾಗಿ ಪ್ರಾಬಲ್ಯ ಸಾಧಿಸಿದ್ದಾರೆ, ಸ್ಪಿನ್ನರ್‌ಗಳು ಮತ್ತು ವೇಗದ ಬೌಲರ್‌ಗಳು ವಿಕೆಟ್ ಪಡೆಯುವುದು ಕಷ್ಟಕರವಾಗಿದೆ. ಟಿ 20 ವಿಶ್ವಕಪ್‌ನಲ್ಲಿ ಇಲ್ಲಿ ಮೊದಲು ಬ್ಯಾಟಿಂಗ್ ಮಾಡುವವರ ಸರಾಸರಿ ಸ್ಕೋರ್ 180 ರಿಂದ 200 ರನ್‌ಗಳವರೆಗೆ ಇದೆ. ಆದ್ದರಿಂದ, ಮೊದಲು ಬ್ಯಾಟಿಂಗ್ ಮಾಡುವ ತಂಡವು 200 ಕ್ಕಿಂತ ಹೆಚ್ಚು ಸ್ಕೋರ್‌ಗೆ ಗುರಿಯಿಡಬೇಕು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿ.ಜೆ ರಾಯ್ ಆತ್ಮಹತ್ಯೆ ಕೇಸ್ ಗೆ ಮೆಗಾ ಟ್ವಿಸ್ಟ್: ಕಾನ್ಫಿಡೆಂಟ್ ಒಡೆಯನಿಗೆ ಮುಳುವಾಯ್ತಾ 500 ಕೋಟಿ ರೂ.? – Kannada News | Confident Group Chairman CJ Roy suicide for IT probe into Rs 500 crore transactions, suspected to be Hawala dealings

ಬೆಂಗಳೂರು, ಫೆಬ್ರವರಿ 25): ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ (CJ Roy )ಆತ್ಮಹತ್ಯೆಗೆ ಹವಾಲಾ ಹಣ(Hawala dealings) ಕಾರಣ ಎನ್ನುವುದು ಈ ಹಿಂದೆ ಬಟಾಬಯಾಲಾಗಿತ್ತು. ಆದರೆ ಆ ಹವಲಾ ಹಣ ಎಷ್ಟು ಎನ್ನುವುದು ಮಾತ್ರ ಗೊತ್ತಿರಲಿಲ್ಲ. ಸದ್ಯ Tv9ಗೆ ಸಿಕ್ಕಿರುವ ಮಾಹಿತಿ ಪ್ರಕಾರ ಸಿಜೆ ರಾಯ್ ಆತ್ಮಹತ್ಯೆಗೆ ಬರೋಬ್ಬರಿ 500 ಕೋಟಿ ರೂಪಾಯಿ ‌ಹವಲಾ ಹಣ ಕಾರಣ ಎಂದು ತಿಳಿದುಬಂದಿದೆ. 500 ಕೋಟಿ ರೂ. ಹವಾಲಾ ವ್ಯವಹಾರದ ಬಗ್ಗೆ ಲೆಕ್ಕ ಕೊಡಲಾಗದ ಸಿಜೆ ರಾಯ್ ಸಂಕಷ್ಟಕ್ಕೆ ಸಿಲುಕಿದ್ದರು. ಅಲ್ಲದೇ ಸಿಜೆ ರಾಯ್ ಮಾನಸಿಕವಾಗಿ ಕುಗ್ಗಿ ಹೋಗಿದ್ದು. ಇದರಿಂದ ಪ್ರಾಣಕಳೆದುಕೊಂಡಿದ್ದಾರೆ ಎನ್ನಲಾಗಿದೆ.

500 ಕೋಟಿ ಮತ್ತು ಸಿ.ಜೆ.ರಾಯ್

ಸಿ.ಜೆ.ರಾಯ್ ವ್ಯವಹಾರದಲ್ಲಿ 500 ಕೋಟಿ ರೂ.‌ ಮಿಸ್ ಮ್ಯಾಚ್ ಆಗಿದ್ದು, ಕೇರಳ, ಕೊಚ್ಚಿ ಪ್ರಾಜೆಕ್ಟ್ ಬೆನ್ನಲ್ಲೇ ಡಿಸೆಂಬರ್​ನಲ್ಲೇ ತನಿಖೆ ನಡೆಸ್ತಿದ್ದ ಐಟಿ ಇಲಾಖೆ 500 ಕೋಟಿ ಲೆಕ್ಕ ಕೇಳಿತ್ತು. ಇದರಿಂದ ರಾಯ್ ದುಬೈನಿಂದ ಭಾರತಕ್ಕೆ ವಾಪಸ್ ಬಾರದೆ ಮೀನಾಮೇಶ ಎಣಿಸುತ್ತಿದ್ದರು. ಅಲ್ಲದ ಐಟಿ ಅಧಿಕಾರಿಗಳ ಸಂಪರ್ಕಕ್ಕೆ ಸಿಗದೆ ಐಟಿ ರೇಡ್ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕೊನೆಗೂ ಭಾರತಕ್ಕೆ ಬಂದ ಸಿಜೆ ರಾಯ್ ಗೆ ಅನೇಕ ಪ್ರಶ್ನೆಗಳನ್ನ ಮುಂದಿಟ್ಟಿದ್ದರು. ಹೀಗಾಗಿಯೇ ತಮ್ಮ ಪಾರ್ಟ್​ನರ್, ಸಿಎ ಸಲಹೆಯಂತೆ ರಾಯ್ ಕೋರ್ಟ್ ಹಾಕಿದ್ದ ಅರ್ಜಿ ವಾಪಸ್ ಪಡೆದುಕೊಂಡಿದ್ದರು. ಕೊನೆಗೆ 500 ಕೋಟಿ ರೂಪಾಯಿ ಮೂಲ ನೀಡಲಾಗದೆ, ತಮಗೆ ಬಂದಿದ್ದ ಹವಾಲಾ ಹಣದ ಲೆಕ್ಕ ಕೊಡದೆ ಸಿ.ಜೆ.ರಾಯ್ ಪರದಾಡಿದ್ದರು.

ಇದನ್ನೂ ಓದಿ: ಸಿಜೆ ರಾಯ್‌ ಸಾವಿನ ಹಿಂದೆ ಹತ್ತಾರು ಅನುಮಾನ, ಹಲವಾರು ಪ್ರಶ್ನೆ: ಇಲ್ಲಿದೆ ದೊಡ್ಡ ಪಟ್ಟಿ!

ಹೀಗೆ 500 ಕೋಟಿ ರೂ. ಹವಾಲಾ ವ್ಯವಹಾರದ ಬಗ್ಹೆ ಲೆಕ್ಕ ಕೊಡಲಾಗದ ಸಿಜೆ ರಾಯ್ ಗೆ ಅತ್ತ ದರಿ ಇತ್ತ ಪುಲಿ ಅನ್ನೋ ಪರಿಸ್ಥಿತಿ ಆಗಿತ್ತು. ಇದರಿಂದ ಸಿಜೆ ರಾಯ್ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಆದರೂ ಆತ್ಮಹತ್ಯೆ ದಿನ ಐಟಿಗೆ ಉತ್ತರಿಸುವುದಾಗಿ ಹೇಳಿದ್ದ ರಾಯ್, ಅಂದು ಮಾನಸಿಕ ಖಿನ್ನತೆಯ ಟ್ಯಾಬ್ಲೆಟ್ ಕೂಡಾ ಸೇವಿಸರಿಲಿಲ್ಲ. ಮಾತ್ರೆ ಸೇವಿಸದೆ ಇದ್ದಿದ್ದು ಖಿನ್ನತೆ ಮತ್ತಷ್ಟು ಹೆಚ್ಚಳಕ್ಕೆ ಕಾರಣವಾಗಿ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ಇದೆ. ಸದ್ಯ ಇಂತ ವ್ಯವಹಾರದ ಬಗ್ಗೆ ಸಿಜೆ ರಾಯ್, ಕೇರಳ ಮೂಲದ ಬ್ಯುಸಿನೆಸ್ ಪಾರ್ಟನರ್, ಐಟಿ ಅಧಿಕಾರಿಗಳು & ಸಿಜೆ ರಾಯ್ ಸಿಎಗೆ ಮಾತ್ರ ಗೊತ್ತಿರೋದು 500 ಕೋಟಿ ರೂ. ಕುತೂಹಲ ಜೀವಂತವಾಗಿಸಿದೆ.

ಹೋಟೆಲ್ ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ರಾ ರಾಯ್?

ಸಿಜೆ ರಾಯ್ ತಮ್ಮ ಕಚೇರಿಗೂ ಮುನ್ನ ಇದ್ದಂತ ಖಾಸಗಿ ಹೋಟೆಲ್ ನಲ್ಲಿ ಸಜೀವ ಗುಂಡು ಸಿಕ್ಕಿದ್ದವು. ಹೀಗಾಗಿ ಖಾಸಗಿ ಹೋಟೆಲ್ ನಲ್ಲಿ ಆತ್ಮಹತ್ಯೆಗೆ ಮುಂದಾಗಿ ಕೊನೆಗೆ ಪ್ರೈವಸಿ ಸ್ಥಳದಲ್ಲಿ ಆತ್ಮಹತ್ಯೆಗೆ ಸೂಕ್ತ ಸ್ಥಳ ಅಲ್ಲವೆಂದು ನಿರ್ಧರಿಸ ಹೋಟೆಲ್ ಬದಲು ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಕಚೇರಿಯ ಚೇಂಬರ್​ನಲ್ಲಿ ಪಾಯಿಂಟ್ ಬ್ಲ್ಯಾಂಕ್​ನಲ್ಲಿ ಎದೆಗೆ ಗುರಿ ಇಟ್ಟು ಫೈರ್ ಮಾಡಿಕೊಂಡಿದ್ದ ರಾಯ್ ಕ್ಯಾಬಿನ್​ನಲ್ಲೇ ಕ್ಷಣಾರ್ಧದಲ್ಲಿ ಕುಸಿದು ಬಿದ್ದಿದ್ದರು. ಆದರೆ ಆತ್ಮಹತ್ಯೆ ಸ್ಥಳದಲ್ಲಿ ಕೆಲವೇ ಹನಿ ರಕ್ತ ಮಾತ್ರ ಚೆಲ್ಲಿತ್ತು . ಯಾಕೆಂದ್ರೆ ಸಿಡಿದ ಗುಂಡು ದೇಹದಿಂದ ಹೊರ ಬಾರದ ಹಿನ್ನೆಲೆ, ರಾಯ್ ದೇಹದಿಂದ ಹೆಚ್ಚು ರಕ್ತ ಸೋರಿಕೆಯಾಗಿರಲಿಲ್ಲ. ಬುಲೇಟ್ ರಾಯ್ ಹೃದಯ ಸೀಳಿ, ಕಿಡ್ನಿಗೆ ತಾಗಿದೆ. ಬಳಿಕ ರಿಬ್ಸ್​ನಲ್ಲಿ ಗುಂಡು ಸಿಲುಕಿದ್ದ ಹಿನ್ನೆಲೆ ರಕ್ತ ಬಂದಿಲ್ಲ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಸಿಜೆ ರಾಯ್ ಆತ್ಮಹತ್ಯೆ ಕೇಸ್ ಗೆ ಹವಾಲ ಹಣ ಮ್ಯಾಟರ್ ತಗ್ಲಾಕೊಂಡಿರುವುದು ಗೊತ್ತಾಗಿದೆ. ಆದರೆ ಈ ಹಣ ಯಾರದ್ದು, ಯಾಕಾಗಿ ನೀಡಿದ್ರು ಎನ್ನುವುದು ತನಿಖೆಯಿಂದ ಬಯಲಾಗಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶೆಟ್ಟಿ ಗ್ಯಾಂಗ್ ಬಿಟ್ಟು ಕನ್ನಡದ ಕೆಲವರಿಗೆ ಮಾತ್ರ ಮದುವೆ ಆಹ್ವಾನ ನೀಡಿದ ರಶ್ಮಿಕಾ – Kannada News | Rashmika Mandanna invites a few people from Kannada Film Industry

ನಟಿ ರಶ್ಮಿಕಾ ಮಂದಣ್ಣ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದೇ ರಿಷಬ್ ಶೆಟ್ಟಿ ನಿರ್ದೇಶನದ, ರಕ್ಷಿತ್ ಶೆಟ್ಟಿ (Rakshit Shetty) ನಟನೆಯ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ. ಆದರೆ ಈಗ ಮದುವೆಯ ಸಂದರ್ಭದಲ್ಲಿ ಶೆಟ್ಟಿ ಗ್ಯಾಂಗ್​ ಅನ್ನು ಅವರು ಮರೆತಿದ್ದಾರೆ. ರಶ್ಮಿಕಾ ಮಂದಣ್ಣ ಅವರು ತಮ್ಮ ಮದುವೆಯ ಆಹ್ವಾನವನ್ನು ಕನ್ನಡ ಚಿತ್ರರಂಗದ ಕೆಲವೇ ಕೆಲವು ಮಂದಿಗೆ ಮಾತ್ರ ನೀಡಿದ್ದಾರೆ. ಈ ಬಗ್ಗೆ ಭಾರಿ ಚರ್ಚೆ ಆಗುತ್ತಿದೆ. ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ಅವರು ಮದುವೆ ಆಗುತ್ತಿದ್ದಾರೆ. ನಟಿ ಆಶಿಕಾ ರಂಗನಾಥ್ ಅವರು ಈ ಮದುವೆಗೆ ಹಾಜರಿ ಹಾಕುತ್ತಿದ್ದಾರೆ. ಇನ್ನು ಯಾರೆಲ್ಲ ಮದುವೆಗೆ ಬರಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ಅಭಿಮಾನಿಗಳಿಗೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

10ನೇ ತರಗತಿ ಬೋರ್ಡ್ ಎಕ್ಸಾಂ ಬರೆಯುತ್ತಿದ್ದ ಬಾಲಕಿಗೆ ಹೆರಿಗೆ; ಆಕೆ ಗರ್ಭಿಣಿಯೆಂದೇ ಗೊತ್ತಿರಲಿಲ್ಲ! – Kannada News | Class 10 student delivered a Baby at exam centre in Madhya Pradesh family unaware of pregnancy

ಧಾರ್, ಫೆಬ್ರವರಿ 25: ಈಗಿನ ಕಾಲದಲ್ಲಿ ಮಕ್ಕಳ ಕೈಯಲ್ಲಿ ಮೊಬೈಲ್ ಇರುವುದರಿಂದ ಅವರ ಬೆರಳ ತುದಿಯಲ್ಲೇ ಎಲ್ಲ ಮಾಹಿತಿ ಲಭ್ಯವಿರುತ್ತದೆ. ತಮಗೆ ಬೇಕಾದ ಎಲ್ಲ ವಿಷಯವನ್ನೂ ಮಕ್ಕಳು ಮೊಬೈಲಿನಿಂದಲೇ ತಿಳಿದುಕೊಳ್ಳುತ್ತಾರೆ. ಹೀಗಿದ್ದರೂ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ತಾನು ಗರ್ಭಿಣಿಯಾದ (Pregnant) ವಿಷಯ ಮುಚ್ಚಿಟ್ಟು ಮಗುವನ್ನು ಹೆತ್ತಿದ್ದಾಳೆ. ಬೋರ್ಡ್ ಎಕ್ಸಾಂ ಬರೆಯುವಾಗ ಪರೀಕ್ಷಾ ಕೇಂದ್ರದಲ್ಲಿಯೇ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ! ಎಸ್​ಎಸ್​ಎಲ್​ಸಿ ಓದುವ ಹುಡುಗಿಗೆ ತನ್ನ ದೇಹದಲ್ಲಾದ ಬದಲಾವಣೆಗಳು ಗೊತ್ತಾಗಲಿಲ್ಲವೇ? ಹೆರಿಗೆಯ ಸಮಯ ಬಂದರೂ ಆಕೆ ಪರೀಕ್ಷೆ ಬರೆಯಲು ನಿರ್ಧರಿಸಿದ್ದೇಕೆ? ಆಕೆ ತನ್ನ ತಂದೆ-ತಾಯಿಯಿಂದ ತಾನು ಗರ್ಭಿಣಿಯಾದ ವಿಷಯ ಮುಚ್ಚಿಟ್ಟಿದ್ದೇಕೆ? ಆಕೆ ಗರ್ಭಿಣಿಯಾಗಲು ಕಾರಣ ಯಾರು? ಎಂಬ ಹಲವು ಪ್ರಶ್ನೆಗಳು ಈ ಘಟನೆಯ ಬಳಿಕ ಎದ್ದಿವೆ.

ಮಧ್ಯಪ್ರದೇಶದ ಧಾರ್ ಜಿಲ್ಲೆಯ ಕೈಗಾರಿಕಾ ಪ್ರದೇಶವಾದ ಪಿತಾಂಪುರದಲ್ಲಿ ಮಂಗಳವಾರ ಬೋರ್ಡ್ ಪರೀಕ್ಷೆ ಬರೆಯುತ್ತಿದ್ದಾಗ 10ನೇ ತರಗತಿಯ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯೊಬ್ಬಳು ಪರೀಕ್ಷಾ ಕೇಂದ್ರದ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿರುವುದು ತೀವ್ರ ಆತಂಕ ಮತ್ತು ಚರ್ಚೆಗೆ ಕಾರಣವಾಗಿದೆ. ವಿದ್ಯಾವಂತೆಯಾದ ಬಾಲಕಿ ತಾನು ಗರ್ಭಿಣಿಯಾದರೂ ಆ ವಿಷಯ ಮುಚ್ಚಿಟ್ಟಿದ್ದೇಕೆ? ಮೊದಲೇ ಹೇಳಿದ್ದರೆ ಇಷ್ಟು ಚಿಕ್ಕ ವಯಸ್ಸಿಗೆ ತಾಯಿಯಾಗುವ ಅಪಾಯ ತಪ್ಪಿಸಬಹುದಿತ್ತು, ಆ ಮಗುವಿನ ತಂದೆ ಯಾರು ಎಂಬಿತ್ಯಾದಿ ಪ್ರಶ್ನೆಗಳೆದ್ದಿವೆ.

ಇದನ್ನೂ ಓದಿ: ಧರ್ಮಗುರುವಿನಿಂದ ಬಾಲಕಿಗೆ ಲೈಂಗಿಕ ಕಿರುಕುಳ; ಮಗು ಹುಟ್ಟೋವರೆಗೂ ಗರ್ಭಿಣಿಯಾದ ವಿಷಯವೇ ಗೊತ್ತಾಗಲಿಲ್ಲ!

ಮಧ್ಯಪ್ರದೇಶದ ಮಾಧ್ಯಮಿಕ ಶಿಕ್ಷಣ ಮಂಡಳಿಯ ಪರೀಕ್ಷೆಗಳ ಕೇಂದ್ರವಾದ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ನಿನ್ನೆ ಗಣಿತ ಪತ್ರಿಕೆ ಬರೆಯಲು ಹಾಜರಾಗಿದ್ದ ಬಾಲಕಿ ಒಂದೂವರೆ ಗಂಟೆ ಪರೀಕ್ಷೆ ಬರೆದಿದ್ದಳು. ಆದರೆ, ಆಗ ಇದ್ದಕ್ಕಿದ್ದಂತೆ ಆಕೆಗೆ ಹೊಟ್ಟೆನೋವು ಜೋರಾಗಿತ್ತು. ಹೀಗಾಗಿ, ಪರೀಕ್ಷೆಯ ಮಧ್ಯದಲ್ಲಿ ಆಕೆ ಬಾತ್​ರೂಂಗೆ ಹೋಗಲು ಅನುಮತಿ ಕೇಳಿದ್ದಳು. ವಿಪರೀತ ಹೊಟ್ಟೆನೋವಿದ್ದುದರಿಂದ ಆಕೆಗೆ ಬಾತ್​ರೂಂಗೆ ಹೋಗಲು ಅನುಮತಿ ನೀಡಲಾಗಿತ್ತು. ಅದಾದ ಕೆಲವೇ ನಿಮಿಷಗಳಲ್ಲಿ ಬಾತ್​ರೂಂನಿಂದ ಮಗು ಅಳುವ ಶಬ್ದ ಕೇಳಿತ್ತು.

ಆಕೆ ಬಾತ್​​ರೂಂಗೆ ಹೋದಾಗ ಅಲ್ಲೇ ಆಕೆಗೆ ಹೆರಿಗೆಯಾಗಿದೆ. ಟಾಯ್ಲೆಟ್​​ನಲ್ಲೇ ಆ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಅಳುವ ಶಬ್ದ ಕೇಳಿದ್ದರಿಂದ ಶಿಕ್ಷಕಿ ಟಾಯ್ಲೆಟ್ ಒಳಗೆ ಹೋಗಿ ನೋಡಿದರು. ಅಲ್ಲಿ ಆ ಬಾಲಕಿ ಹಾಗೂ ರಕ್ತ ಮೆತ್ತಿಕೊಂಡಿದ್ದ ಮಗುವನ್ನು ಕಂಡು ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಿಗೆ ವಿಷಯ ತಿಳಿಸಿದರು.

ಇದನ್ನೂ ಓದಿ: ಹೆರಿಗೆಯ ನಂತರ ಮುಟ್ಟು ವಿಳಂಬವಾಗುವುದು ಅಪಾಯಕಾರಿಯೇ? ಯಾವಾಗ ವೈದ್ಯರ ಸಲಹೆ ಪಡೆಯಬೇಕು?

ಪರೀಕ್ಷಾ ಕೇಂದ್ರದ ಆಡಳಿತ ಮಂಡಳಿಯು ತಕ್ಷಣ 108 ತುರ್ತು ಆಂಬ್ಯುಲೆನ್ಸ್ ಸೇವೆಗೆ ಮಾಹಿತಿ ನೀಡಿತು. ಆ ವಿದ್ಯಾರ್ಥಿನಿ ಮತ್ತು ಆಕೆಯ ನವಜಾತ ಶಿಶುವನ್ನು ಪಿತಾಂಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ದೃಢಪಡಿಸಿದರು. ಪ್ರಸ್ತುತ ತಾಯಿ ಹಾಗೂ ಮಗುವನ್ನು ಅಬ್ಸರ್ವೇಷನ್​​ನಲ್ಲಿಡಲಾಗಿದೆ.

ಈ ಘಟನೆಯು ವಿದ್ಯಾರ್ಥಿಗಳು ಮತ್ತು ಪರೀಕ್ಷಾ ಕೇಂದ್ರದ ಸಿಬ್ಬಂದಿಯಲ್ಲಿ ಭಯವನ್ನುಂಟುಮಾಡಿದೆ. ವಿಚಿತ್ರವೆಂದರೆ, ಆ ಬಾಲಕಿ ಗರ್ಭಿಣಿಯಾದ ವಿಷಯ ಆಕೆಯ ಮನೆಯಲ್ಲಿ ಯಾರಿಗೂ ಗೊತ್ತಿರಲಿಲ್ಲ. ಹೀಗಾಗಿ, ಮಗಳಿಗೆ ಹೆರಿಗೆಯಾಗಿದೆ ಎಂಬ ವಿಷಯ ತಿಳಿದು ಅವರು ಶಾಕ್ ಆಗಿದ್ದಾರೆ. ಆದರೆ, 9 ತಿಂಗಳ ತುಂಬು ಗರ್ಭಿಣಿಯಾಗಿದ್ದರೂ ಆಕೆ ಈ ವಿಷಯವನ್ನು ಮನೆಯವರಿಂದ, ಶಾಲೆಯವರಿಂದ ಹೇಗೆ ಮುಚ್ಚಿಟ್ಟಳು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.

ಸದ್ಯದ ಪೊಲೀಸ್ ತನಿಖೆಯ ಪ್ರಕಾರ, ಆ ಅಪ್ರಾಪ್ತ ಬಾಲಕಿ ಕಳೆದ 2 ವರ್ಷಗಳಿಂದ ಯುವಕನೊಂದಿಗೆ ಸಂಪರ್ಕದಲ್ಲಿದ್ದಾಳೆ ಎಂಬುದು ಗೊತ್ತಾಗಿದೆ. ಕಳೆದ ವರ್ಷದಿಂದ ಆಕೆ ಆತನೊಂದಿಗೆ ಪದೇ ಪದೇ ದೈಹಿಕ ಸಂಬಂಧ ಹೊಂದಿದ್ದಳು. ಇದರಿಂದಾಗಿ ಆಕೆ ಗರ್ಭಿಣಿಯಾಗಿದ್ದಾಳೆ. ಆಕೆ ಈ ವಿಷಯವನ್ನು ಮನೆಯವರ ಬಳಿ ಹೇಳಿರಲಿಲ್ಲ. ಆರೋಪಿಯನ್ನು ಗುರುತಿಸಲಾಗಿದೆ. ಅವನನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link