Headlines

nagaraj11081993

ಡಾ. ರಾಜ್‌ಕುಮಾರ್ ಅಪಹರಣ ಪ್ರಕರಣ: ವೀರಪ್ಪನ್ ಸಹಚರರ ಖುಲಾಸೆ ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್ – Kannada News | Madras High Court upholds acquittal of Veerappan associates in Dr Rajkumar abduction case

ಕನ್ನಡದ ವರನಟ ಡಾ. ರಾಜ್‌ಕುಮಾರ್ (Dr Rajkumar) ಅವರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರಕ್ಕೆ ಹಿನ್ನಡೆಯಾಗಿದೆ. ಕಾಡುಗಳ್ಳ ವೀರಪ್ಪನ್‌ನ (Veerappan) ಒಂಬತ್ತು ಮಂದಿ ಸಹಚರರನ್ನು ಖುಲಾಸೆಗೊಳಿಸಿ ಕೆಳ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಮದ್ರಾಸ್ ಹೈಕೋರ್ಟ್ ಬುಧವಾರ (ಫೆಬ್ರವರಿ 26) ವಜಾಗೊಳಿಸಿದೆ. ಇದರೊಂದಿಗೆ, 2018ರಲ್ಲಿ ಗೋಪಿಶೆಟ್ಟಿಪಾಳ್ಯದ ಸೆಷನ್ಸ್ ನ್ಯಾಯಾಲಯ ನೀಡಿದ್ದ ತೀರ್ಪನ್ನು ಹೈಕೋರ್ಟ್ (Madras High Court) ಎತ್ತಿಹಿಡಿದಂತಾಗಿದೆ. ನ್ಯಾಯಮೂರ್ತಿಗಳಾದ ಪಿ. ವೇಲ್ಮುರುಗನ್ ಮತ್ತು ಎಂ. ಜ್ಯೋತಿರಾಮನ್ ಅವರನ್ನೊಳಗೊಂಡ ವಿಭಾಗೀಯ ಪೀಠವು…

Read More

ಕನ್ನಡಿಗನಿಗೆ ಡಿಚ್ಚಿ ಹೊಡೆದಿದ್ದ ಜೆಕೆ ನಾಯಕನಿಗೆ ಭಾರಿ ಮೊತ್ತದ ದಂಡ ವಿಧಿಸಿದ ಬಿಸಿಸಿಐ – Kannada News | Ranji Final Shocker: J&K Captain Paras Dogra Fined for Headbutt on Karnataka Fielder

ಕರ್ನಾಟಕ ಮತ್ತು ಜಮ್ಮು ಮತ್ತು ಕಾಶ್ಮೀರ (Karnataka vs J&K) ನಡುವೆ ರಣಜಿ ಟ್ರೋಫಿ ಫೈನಲ್ ಪಂದ್ಯ ನಡೆಯುತ್ತಿದೆ. ಒಂದೆಡೆ ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್ (Ranji Trophy Final) ಆಡುತ್ತಿರುವ ಜಮ್ಮು ಮತ್ತು ಕಾಶ್ಮೀರ ತಂಡವು ಎಂಟು ಬಾರಿಯ ರಣಜಿ ಚಾಂಪಿಯನ್ ಕರ್ನಾಟಕದ ವಿರುದ್ಧ ಅತ್ಯದ್ಭುತ ಪ್ರದರ್ಶನ ನೀಡಿದೆ. ಆದರೆ ಈ ಪಂದ್ಯದಲ್ಲಿ ಆಟದ ನಿಯಮದ ವಿರುದ್ಧ ನಡೆದುಕೊಂಡ ಜಮ್ಮು ಮತ್ತು ಕಾಶ್ಮೀರದ ನಾಯಕ ಪರಾಸ್ ಡೋಗ್ರಾ ವಿರುದ್ಧ ಬಿಸಿಸಿಐ ಕಠಿಣ ಕ್ರಮ ತೆಗೆದುಕೊಂಡಿದ್ದು,…

Read More

ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ದೇವೇಗೌಡರ ಅಚ್ಚರಿಯ ಹೇಳಿಕೆ: ಜೆಡಿಎಸ್​​ ಮುಂದಿನ ನಡೆ ಏನು? – Kannada News | H.D. Deve Gowda Favors Contesting All Upcoming Elections Along with NDA

ಬೆಂಗಳೂರು, ಫೆಬ್ರವರಿ 25: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯ ಕುರಿತು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಬೆಂಗಳೂರಿನಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ. ಜೆಡಿಎಸ್ ಎನ್​ಡಿಎ ಮೈತ್ರಿಕೂಟದ ಭಾಗವಾಗಿರುವುದರಿಂದ, ಮುಂಬರುವ ಕಾರ್ಪೊರೇಷನ್, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಎನ್​ಡಿಎ ಜೊತೆಗೇ ಎದುರಿಸಲು ತಮ್ಮ ಪಕ್ಷಕ್ಕೆ ಆಕಾಂಕ್ಷೆ ಇದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದು ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಮತ್ತು ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿ ನಡುವಿನ ನಿರ್ಧಾರವಾಗಿದ್ದು, ಅಂತಿಮ ತೀರ್ಮಾನವನ್ನು ಬಿಜೆಪಿ ತೆಗೆದುಕೊಳ್ಳಬೇಕು. ಬಿಜೆಪಿಯವರು ಯಾವ…

Read More

ಊಟ ಮಾಡಿದ ತಕ್ಷಣ ವಾಕಿಂಗ್ ಮಾಡುವುದು ಸರಿಯೋ ತಪ್ಪೋ? ಇಲ್ಲಿದೆ ತಜ್ಞರ ಅಭಿಪ್ರಾಯ – Kannada News | Is Walking After Eating Good or Bad?

ಅನೇಕರು ಊಟ ಮಾಡಿದ ತಕ್ಷಣ ವಾಕಿಂಗ್ ಮಾಡಲು ಹೋಗುತ್ತಾರೆ. ಇದು ಆಹಾರವನ್ನು ತ್ವರಿತವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಹೊಟ್ಟೆ ಭಾರವಾಗುವುದನ್ನು ತಡೆಯುತ್ತದೆ ಎಂಬುದು ಅವರು ನಂಬಿಕೆಯಾಗಿರುತ್ತದೆ. ಇನ್ನು ಕೆಲವರು ತೂಕವನ್ನು ನಿಯಂತ್ರಿಸಲು, ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸಲು ಅಥವಾ ಆಲಸ್ಯವನ್ನು ಹೋಗಲಾಡಿಸಲು ಈ ರೀತಿ ಮಾಡುತ್ತಾರೆ. ಆಫೀಸ್ ಅಥವಾ ಮನೆಯಲ್ಲಿ ದೀರ್ಘಕಾಲ ಕುಳಿತು ಕೆಲಸ ಮಾಡುವವರು ಊಟದ ನಂತರ ಸ್ವಲ್ಪ ನಡೆಯುವುದು ಅಗತ್ಯವೆಂದು ಭಾವಿಸುತ್ತಾರೆ. ಗ್ಯಾಸ್, ಆಮ್ಲೀಯತೆ ಅಥವಾ ಮಲಬದ್ಧತೆಯನ್ನು (Constipation) ತಪ್ಪಿಸಲು ಅನೇಕರು ಈ ಅಭ್ಯಾಸವನ್ನು…

Read More

ಅಸ್ಸಾಂನಲ್ಲಿ 28 ವರ್ಷದ ಮಹಿಳೆಯನ್ನು ಕಾರಿನಿಂದ ಹೊರಗೆಳೆದು ಸಾಮೂಹಿಕ ಅತ್ಯಾಚಾರ – Kannada News | 28 Year Old Woman gangraped infront of lover Made To Transfer Rs 10000 In Assam

ಗುವಾಹಟಿ, ಫೆಬ್ರವರಿ 25: ಅಸ್ಸಾಂನ (Assam) ಸಿಲ್ಚಾರ್ ಬೈಪಾಸ್‌ನಲ್ಲಿ ರಾತ್ರಿ ತನ್ನ ಭಾವಿ ಪತಿಯೊಂದಿಗೆ ಲಾಂಗ್ ಡ್ರೈವ್ ಹೋಗಿದ್ದ 28 ವರ್ಷದ ಯುವತಿಗೆ ಆ ರಾತ್ರಿ ದುಃಸ್ವಪ್ನವಾಗಿ ಮಾರ್ಪಟ್ಟಿತು. ಆಕೆಯ ಜೊತೆ ನಿಶ್ಚಿತಾರ್ಥವಾದ ಹುಡುಗನ ಮುಂದೆ ಯುವಕರ ಗುಂಪೊಂದು ಆಕೆಯನ್ನು ಕಾರಿನಿಂದ ಹೊರಗೆ ಎಳೆದು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದೆ. ಅಲ್ಲದೆ, 10,000 ರೂ. ಹಣ ನೀಡುವಂತೆ ಆಕೆಯನ್ನು ಒತ್ತಾಯಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅತ್ಯಾಚಾರಕ್ಕೊಳಗಾದ ಯುವತಿಯ…

Read More

ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಮಕ್ಕಳ ಆಯೋಗದಿಂದ ಸ್ವಯಂ ಪ್ರೇರಿತ ದೂರು ದಾಖಲು – Kannada News | Child Rights Commission Files Complaint Against Godman Mallikarjuna Mutya After Viral Video

ಮಲ್ಲಿಕಾರ್ಜುನ ಮುತ್ಯಾImage Credit source: Tv9 Kannada ಯಾದಗಿರಿ, ಫೆಬ್ರವರಿ 25: ಅಪ್ರಾಪ್ತ ಬಾಲಕಿ ಜೊತೆ ಅನುಚಿತವಾಗಿ ವರ್ತಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಹಿನ್ನೆಲೆ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಂಡಿದೆ. ಪ್ರಕರಣ ದಾಖಲು ಮಾಡಿಕೊಂಡ ಬಳಿಕ ಯಾದಗಿರಿ ಎಸ್​ಪಿಗೆ ಪತ್ರ ಬರೆದಿರುವ ಆಯೋಗ, ಜಿಲ್ಲೆಯ ಶಹಾಪುರ ತಾಲೂಕಿನ ಮಹಲ್ ರೋಜಾ ಗ್ರಾಮದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕೋರಿದೆ. ಪೊಲೀಸ್​​…

Read More

ಅಪ್ಪುಗೆ, ನಗು, ತಮಾಷೆ; ಇಸ್ರೇಲ್​ ಪ್ರಧಾನಿಯಿಂದ ಮೋದಿಗೆ ಆತ್ಮೀಯ ಸ್ವಾಗತ – Kannada News | Israel PM Netanyahu warmly welcomes PM Narendra Modi in Tel Aviv

ಟೆಲ್ ಅವಿವ್, ಫೆಬ್ರವರಿ 25: ಪ್ರಧಾನಿ ಮೋದಿ (PM Modi in Israel) ಇಸ್ರೇಲ್​ಗೆ ಭೇಟಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ 4.15ರ ಸುಮಾರಿಗೆ ಇಸ್ರೇಲ್​ನ ಟೆಲ್ ಅವಿವ್‌ಗೆ ತಲುಪಿದ್ದಾರೆ. 6 ಗಂಟೆಗಳ ಸುದೀರ್ಘ ಪ್ರಯಾಣದ ಬಳಿಕ ಇಸ್ರೇಲ್​ಗೆ ತೆರಳಿದ ಮೋದಿಯನ್ನು ವಿಮಾನ ನಿಲ್ದಾಣದಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ವಾಗತಿಸಿದರು. ವಿಮಾನದಿಂದ ಇಳಿಯುತ್ತಿದ್ದಂತೆ ನೆತನ್ಯಾಹು ಪ್ರಧಾನಿ ಮೋದಿಯನ್ನು ಅಪ್ಪುಗೆ ಮೂಲಕ ಸ್ವಾಗತಿಸಿದರು. ಈ ವೇಳೆ ನೆತನ್ಯಾಹು ಅವರ ಪತ್ನಿ ಬೆನ್ ಗುರಿಯನ್ ಕೂಡ…

Read More

ಜೈಲಿನಿಂದ ಹೊರಬರುತ್ತಿದ್ದಂತೆಯೇ ಶಾಕಿಂಗ್ ವಿಚಾರ ಬಿಚ್ಚಿಟ್ಟ ಮ್ಯೂಸಿಕ್ ಮೈಲಾರಿ – Kannada News | Pocso case: Singer music mailari first Reaction after Released From Jail

ಬಾಗಲಕೋಟೆ, (ಫೆಬ್ರವರಿ 25): ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೊಕ್ಸೋ ಪ್ರಕರಣದಲ್ಲಿ (pocso case)  ಜೈಲು ಪಾಲಾಗಿದ್ದ ಉತ್ತರ ಕರ್ನಾಟಕದ ಖ್ಯಾತ ಜನಪದ ಗಾಯಕ ‘ಮ್ಯೂಸಿಕ್ ಮೈಲಾರಿ’ಗೆ (Singer music mailari )  ಜಾಮೀನು ಸಿಕ್ಕಿದೆ. 2025ರ ಡಿಸೆಂಬರ್ 17ರಂದು ಜೈಲು ಸೇರಿದ್ದ ಮ್ಯೂಸಿಕ್ ಮೈಲಾರಿ ಇಂದು (ಫೆಬ್ರವರಿ 25) ಜಾಮೀನ ಮೇಲೆ ಬಿಡುಗಡೆಯಾಗಿದ್ದಾರೆ. ಜೈಲಿನಿಂದ ಆಚೆ ಬರುತ್ತಿದ್ದಂತೆಯೇ ಟಿವಿ9ಗೆ ಪ್ರತಿಕ್ರಿಯಿಸಿರುವ ಮೈಲಾರಿ, ಡಾ ಅಂಬೇಡ್ಕರ್ ಅವರ ಸಂವಿಧಾನದೊಳಗೆ ನಾವು ಕಾನೂನಾತ್ಮಕವಾಗಿಯೇ ಹೋರಾಟ…

Read More

ವಿದ್ಯುತ್​ ಬಿಲ್ ಪಾವತಿಸದಷ್ಟು ಬಡವಾಯ್ತಾ ಬೀದರ್​​​​​​ ಬ್ರಿಮ್ಸ್ ಆಸ್ಪತ್ರೆ? ಬಾಕಿ ಮೊತ್ತ ಕೇಳಿದ್ರೆ ಶಾಕ್​​​ ಆಗ್ತೀರಾ – Kannada News | Bidar BRIMS Hospital Owes GESCOM 1.70 Cr Electricity Bill: Public Outcry

ಬೀದರ್​​, ಫೆಬ್ರವರಿ 25: ಜನಸಾಮಾನ್ಯರು ಕರೆಂಟ್ ಬಿಲ್ (Current Bill) ಕಟ್ಟುವುದು ತಡವಾದರೆ ಕನೆಕ್ಷನ್ ಕಟ್ ಮಾಡಲಾಗುತ್ತದೆ. ಆದರೆ ಬೀದರ್​ನ ಬ್ರಿಮ್ಸ್ ಆಸ್ಪತ್ರೆ 1.70 ಕೋಟಿ ರೂ ಜೆಸ್ಕಾಂಗೆ ಹಣ ಕಟ್ಟಿಲ್ಲ. ಹಣ ಕಟ್ಟಿ ಅಂತಾ ನೋಟಿಸ್ ಮೇಲೆ ನೋಟಿಸ್ ಕೊಟ್ಟರು ಬ್ರಿಮ್ಸ್ ಆಡಳಿತ ಮಂಡಳಿ ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಜೆಸ್ಕಾಂ ಇಲಾಖೆಯ ಈ ತಾರತಮ್ಯ ನೀತಿಗೆ ಗಡೀ ಜಿಲ್ಲೆಯ ಬೀದರ್​ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. 1 ಕೋಟಿ 70 ಲಕ್ಷ 80 ಸಾವಿರ ರೂ ಬಿಲ್…

Read More

ರಶ್ಮಿಕಾ, ವಿಜಯ್ ಮದುವೆ: ಹಳದಿ ಶಾಸ್ತ್ರ ಆರಂಭ; ಫೋಟೋ ಹಂಚಿಕೊಂಡ ಆಶಿಕಾ – Kannada News | Rashmika Mandanna Vijay Deverakonda haldi ceremony begins Ashika Ranganath shares photo

ರಾಜಸ್ಥಾನದ ಉದಯಪುರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ (Vijay Deverakonda) ಅವರ ಮದುವೆ ಶಾಸ್ತ್ರಗಳು ಆರಂಭ ಆಗಿವೆ. ಕುಟುಂಬದವರು ಮತ್ತು ಕೆಲವೇ ಕೆಲವು ಆಪ್ತರು ಈ ವಿವಾಹದಲ್ಲಿ ಭಾಗಿ ಆಗಿದ್ದಾರೆ. ಮದುವೆಗೂ ಮುನ್ನ ಅನೇಕ ಶಾಸ್ತ್ರಗಳನ್ನು ಮಾಡಲಾಗಿದೆ. ಬುಧವಾರ (ಫೆಬ್ರವರಿ 25) ಹಳದಿ ಶಾಸ್ತ್ರ ಮಾಡಲಾಗುತ್ತಿದೆ. ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ (Rashmika Mandanna), ಆಶಿಕಾ ರಂಗನಾಥ್ ಅವರು ಹಳದಿ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಹಳ ಅದ್ದೂರಿಯಾಗಿ ವಿರೋಶ್ ಮದುವೆ ನಡೆಯುತ್ತಿದೆ. ಕನ್ನಡ ಚಿತ್ರರಂಗದ ಕೆಲವೇ…

Read More