All posts by nagaraj11081993

ವಾಚಾಳಿ ವಂಶಿ, ನಾಚಿಕೆ ಕೃಷ್ಣನ ಕಥೆಯಿರುವ ಹೊಸ ಧಾರಾವಾಹಿ ‘ಕೃಷ್ಣವಂಶಿ’ – Kannada News | Udaya Tv new serial Krishna Vamshi to go on air from 2nd March

ಕನ್ನಡ ಕಿರುತೆರೆ ಸೀರಿಯಲ್ ಕ್ಷೇತ್ರದಲ್ಲಿ ‘ಉದಯ ಟಿವಿ’ (Udaya Tv) ಪರಂಪರೆ ದೊಡ್ಡದು. ಹೊಸ ಥರದ ಕೌಟುಂಬಿಕ ಕಥೆಗಳಿಂದ ನೋಡುಗರ ಮನ ಗೆಲ್ಲುತ್ತಿರುವ ಉದಯ ವಾಹಿನಿ ಈಗ ಹೊಸ ಧಾರಾವಾಹಿ ‘ಕೃಷ್ಣವಂಶಿ’ ಮೂಲಕ ಮತ್ತೊಂದು ಭಾವನಾತ್ಮಕ ಪ್ರಪಂಚಕ್ಕೆ ವೀಕ್ಷಕರನ್ನು ಕರೆದೊಯ್ಯಲು ಸಜ್ಜಾಗಿದೆ. ಮಾರ್ಚ್ 2ರಿಂದ ಸೋಮವಾರದಿಂದ ಶನಿವಾರ ರಾತ್ರಿ 9.30ಕ್ಕೆ ಪ್ರಸಾರ ಆರಂಭಿಸಲಿರುವ ‘ಕೃಷ್ಣವಂಶಿ’ (Krishna Vamshi) ಧಾರಾವಾಹಿಯು ಒಂದು ವಿಶೇಷವಾದ ಕಥೆಯನ್ನು ಪ್ರೇಕ್ಷಕರ ಎದುರು ತರುತ್ತಿದೆ. ಆ ಬಗ್ಗೆ ಉಯಯ ವಾಹಿನಿ ಮಾಹಿತಿ ಹಂಚಿಕೊಂಡಿದೆ.

ನಾಚಿಕೆ ಸ್ವಭಾವದ ಹುಡುಗ ಕೃಷ್ಣ, ವಾಚಾಳಿ ಹುಡುಗಿ ವಂಶಿಯ ಮಧ್ಯೆ ಅರಳುವ ಪ್ರೀತಿಯ ಕಥಾಹಂದರ ಈ ಧಾರಾವಾಹಿಯಲ್ಲಿ ಇದೆ. ಒಳ್ಳೆಯ ಹುಡುಗಿ ವಂಶಿ ಮಾತಿನ ಮಲ್ಲಿ. ನಾಚಿಕೆ ಹುಡುಗ ಕೃಷ್ಣ ಹೆಚ್ಚು ಓದಿದವನಲ್ಲ. ಅಣ್ಣನ ಹೊಟೇಲ್‌ ನಡೆಸುತ್ತಿರುತ್ತಾನೆ. ವಂಶಿಗೆ ಕೃಷ್ಣನ ನಾಚಿಕೆ ಸ್ವಭಾವವೇ ಇಷ್ಟವಾಗುತ್ತದೆ. ಕೃಷ್ಣನಿಗೂ ನಾಚಿಕೆಯ ನಡುವೆ ಪ್ರೀತಿ ಅರಳುತ್ತದೆ. ಇಬ್ಬರ ಪ್ರೀತಿಗೆ ಅನೇಕ ಸಲ ಅಗ್ನಿಪರೀಕ್ಷೆ ಎದುರಾಗುತ್ತದೆ. ಅಲ್ಲಿಂದ ಕಥೆ ಆರಂಭ.

ಇದರ ಜೊತೆಗೆ ತಂದೆಯ ಮಮತೆಯ ಕಥೆ ಕೂಡ ಇದೆ. ತಂದೆ ದೊರೆಸ್ವಾಮಿಗೆ ತನ್ನ ಮಗಳು ವಂಶಿಯೇ ಪ್ರಪಂಚ. ಮಗಳು ಮದುವೆಯಾಗಿ ದೂರ ಹೋಗುವ ಕಲ್ಪನೆಯೇ ಅವರಿಗೆ ಅಸಹನೀಯ. ಮನೆ ಅಳಿಯನಾಗಲು ಒಪ್ಪುವಂಥ ಹುಡುಗನನ್ನೇ ಮಗಳು ಮದುವೆಯಾಗಲಿ ಎಂಬ ಆಸೆ ಅವರದ್ದು. ಆದರೆ ವಂಶಿಯ ಕನಸು ಬೇರೆ ದಿಕ್ಕಿನಲ್ಲಿ ಸಾಗುತ್ತದೆ.

ವಂಶಿ ಪ್ರೀತಿಯಿಂದ ಕೂಡಿದ ಅವಿಭಕ್ತ ಕುಟುಂಬದಲ್ಲಿ ಅಪ್ಪನ ಮನೆಯವರೆಲ್ಲರ ಜೊತೆ ಗಂಡನ ಮನೆಯಲ್ಲಿ ಒಟ್ಟಿಗೇ ಬದುಕುವ ಕನಸು ಹೊತ್ತಿದ್ದಾಳೆ. ಅವಳ ಆಶಯ ಮತ್ತು ಪ್ರೀತಿ ಒಟ್ಟೊಟ್ಟಿಗೆ ಸಾಗಲು ಕಷ್ಟಪಡಬೇಕಿದೆ. ವಂಶಿ ಕನಸು ನನಸಾಗುತ್ತಾ? ಕೃಷ್ಣ ಮತ್ತು ವಂಶಿಯರ ಪ್ರೀತಿ ಯಶಸ್ವಿಯಾಗುತ್ತಾ ಎನ್ನುವುದೇ ಮುಂದಿನ ಕಥಾಹಂದರ ಎಂದು ಉದಯ ವಾಹಿನಿ ತಿಳಿಸಿದೆ.

ಇದನ್ನೂ ಓದಿ: 35 ವರ್ಷಗಳ ಹಿಂದಿನ ಉಪೇಂದ್ರ ಧಾರಾವಾಹಿಯ ಕ್ಲಿಪ್ ವೈರಲ್; ಆಗ ಉಪ್ಪಿ ಹೇಗಿದ್ರು ನೋಡಿ

ನಾಯಕ ಕೃಷ್ಣನ ಪಾತ್ರದಲ್ಲಿ ರೋಹನ್ ಎ. ಅಭಿನಯಿಸುತ್ತಿದ್ದಾರೆ. ನಾಯಕಿ ವಂಶಿ ಪಾತ್ರವನ್ನು ಶಾರದಾ ಪುಂಡಿ ಮಾಡುತ್ತಿದ್ದಾರೆ. ಗಿರಿಜಾ ಲೋಕೇಶ್, ಹಂಸ, ವಿಜಯ್, ಹನುಮಂತೇಗೌಡ, ರಜಿನಿ ಟಿ.ಡಿ, ಸಿದ್ದಾರ್ಥ್ ಮಾಧ್ಯಮಿಕ, ಸಿಂಧೂ ಪಿ, ಸಂದೀಪ್ ಎಸ್.ಆರ್, ಪುಷ್ಪ ಅನಿಲ್‌ ಕುಮಾರ್, ಸುಕೃತಾ ನಾಗ್ ಮತ್ತಿತರರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಾಗಲಕೋಟೆ: ಕಲ್ಲು ತೂರಾಟದ ಕಾವು ಆರುವ ಮುನ್ನವೇ ಜಾಲತಾಣದಲ್ಲಿ ಮುಸ್ಲಿಂ ಯುವಕರಿಂದ ವಿವಾದಾತ್ಮಕ ಪೋಸ್ಟ್ – Kannada News | Bagalkot Tension: Controversial Social Media Post by Youth Surfaces Amid Ongoing Stone Pelting Probe

ಮುಸ್ಲಿಂ ಯುವಕರ ವಿವಾದಾತ್ಮಕ ಪೋಸ್ಟ್ ಸ್ಕ್ರೀನ್​ಶಾಟ್Image Credit source: tv9

ಬಾಗಲಕೋಟೆ, ಫೆಬ್ರವರಿ 25: ಬಾಗಲಕೋಟೆ (Bagalkot) ನಗರದಲ್ಲಿ ಛತ್ರಪತಿ ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ನಡೆದ ಕಲ್ಲೆಸೆತ ಪ್ರಕರಣದ ಕಾವು ಆರುವ ಮುನ್ನವೇ ಸಾಮಾಜಿಕ ಜಾಲತಾಣ ಪೋಸ್ಟ್​ನಿಂದಾಗಿ ಮತ್ತೊಂದು ವಿವಾದ ಸೃಷ್ಟಿಯಾಗಿದೆ. ಕೆಲವು ಮುಸ್ಲಿಂ ಯುವಕರು ಪಂಕಾ ಮಸೀದಿಯ ಭಾವಚಿತ್ರ ಹಾಗೂ ವಿಡಿಯೋವನ್ನು ಹಂಚಿಕೊಂಡು ಪ್ರಚೋದನಕಾರಿ ಪೋಸ್ಟ್ ಮಾಡಿರುವುದು ಗಮನಸೆಳೆದಿದೆ. ‘15 ನಿಮಿಷ ಪೊಲೀಸರು ಸುಮ್ಮನಿರಲಿ, ಇಸ್ಲಾಂ ಪವರ್ ತೋರಿಸುತ್ತೇವೆ’ ಎಂಬ ಅರ್ಥದ ಹೇಳಿಕೆಯನ್ನು ಪೋಸ್ಟ್‌ನಲ್ಲಿ ಉಲ್ಲೇಖಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಹೇಳಿಕೆ ಕೆಲವು ವರ್ಷಗಳ ಹಿಂದೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ನಾಯಕ ಅಕ್ಬರುದ್ದಿನ್ ಓವೈಸಿ ನೀಡಿದ್ದ ವಿವಾದಾತ್ಮಕ ಭಾಷಣವನ್ನು ನೆನಪಿಸುವಂತಿದೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಪೋಸ್ಟ್ ಬಗ್ಗೆ ಪೊಲೀಸರು ಗಮನ ಹರಿಸಿದ್ದು, ಕಾನೂನು ಕ್ರಮದ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಚೋದನಕಾರಿ ಹೇಳಿಕೆಗಳು ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಸಾಧ್ಯತೆ ಇರುವುದರಿಂದ, ಜವಾಬ್ದಾರಿಯುತವಾಗಿ ವರ್ತಿಸುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಬಾಗಲಕೋಟೆ ಗಲಭೆ ಹಿನ್ನೆಲೆ

ಛತ್ರಪತಿ ಶಿವಾಜಿ ಜಯಂತಿ ಅಂಗವಾಗಿ ಬಾಗಲಕೋಟೆಯಲ್ಲಿ ಫೆಬ್ರವರಿ 19ರ ರಾತ್ರಿ 10ಗಂಟೆ ವೇಳೆ ಶಿವಾಜಿ ಭಾವಚಿತ್ರ ಮೆರವಣಿಗೆ ಮಾಡಲಾಗಿತ್ತು. ಆಗ ಮೆರವಣಿಗೆ ಮೇಲೆ ಕಲ್ಲುಗಳು ಹಾಗೂ ಚಪ್ಪಲಿ ತೂರಲಾಗಿತ್ತು. ಇದು ಹಿಂದೂ ಕಾರ್ಯಕರ್ತರನ್ನು ಕೆರಳಿಸಿದ್ದಲ್ಲದೆ, ಉದ್ವಿಗ್ನ ಪರಿಸ್ಥಿತಿ ಸೃಷ್ಟಿಮಾಡಿತ್ತು. ನಂತರ ಕಲ್ಲು ತೂರಾಟ ಸಂಬಂಧ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು

ಘಟನೆಯು ರಾಜಕೀಯ ಆಯಾಮವನ್ನೂ ಪಡೆದುಕೊಂಡಿದೆ. ಸದ್ಯ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆಯಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ. ಹಿಂದೂ ಸಮುದಾಯವು ಫೆಬ್ರವರಿ 26 ರಂದು ದೊಡ್ಡ ಮಟ್ಟದ ಹೋರಾಟ ನಡೆಸಲು ಸಿದ್ಧತೆ ಮಾಡಿಕೊಂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಸಿಲ ಝಳಕ್ಕೆ ತತ್ತರಿಸಿದ ಪ್ರಯಾಣಿಕರಿಗೆ ಆಸರೆಯಾದ ಕೆಎಸ್​ಆರ್​ಟಿಸಿ ಬಸ್! – Kannada News | KSRTC Free Water: Mysuru Route Staff Quench Passengers’ Thirst in Summer Travel

ಮೈಸೂರು, ಫೆಬ್ರವರಿ 25: ಟಿ.ನರಸೀಪುರ–ಬನ್ನೂರು–ಮಂಡ್ಯ ಬಸ್‌ಗಳಲ್ಲಿ ಸುಡುವ ಬೇಸಿಗೆಯಲ್ಲಿ ಪ್ರಯಾಣಿಕರಿಗೆ KSRTC ಸಿಬ್ಬಂದಿ ಆಶ್ರಯ ನೀಡಿದ್ದಾರೆ. ನಿರ್ವಾಹಕ ಲಕ್ಷ್ಮೇಶ್ ಮತ್ತು ಚಾಲಕ ಹೇಮಂತ್ ತಮ್ಮ ಆಸಕ್ತಿಯಿಂದ ಬಸ್ಸಿನೊಳಗೆ ಶುದ್ಧ ಕುಡಿಯುವ ನೀರಿನ ಕ್ಯಾನ್ ಅಳವಡಿಸಿ, ಪ್ರಯಾಣಿಕರ ದಾಹ ನಿವಾರಣೆ ಮಾಡಿದ್ದಾರೆ. ಪ್ರತಿದಿನ 2–3 ಕ್ಯಾನ್ ನೀರನ್ನು ಶುದ್ಧ ನೀರಿನ ಘಟಕಗಳಿಂದ ತರುತ್ತಿರುವ ಅವರ ಮಾನವೀಯ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ. ಇದರಿಂದ ಪ್ರೇರಣೆ ಪಡೆದು ಇದೇ ಮಾರ್ಗದ 5 ಬಸ್‌ಗಳಲ್ಲಿ ಸಹ ಉಚಿತ ನೀರಿನ ವ್ಯವಸ್ಥೆ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮದುವೆ ಮನೆಗೆ ಬಂದು ವೇದಿಕೆಯಲ್ಲಿದ್ದ ವಧುವಿನ ಹೊಟ್ಟೆಗೆ ಗುಂಡು ಹಾರಿಸಿದ ಮಾಜಿ ಪ್ರಿಯಕರ – Kannada News | Bihar: Wedding Celebration Turns Violent as Bride Shot During Ceremony

ಬಕ್ಸಾರ್, ಫೆಬ್ರವರಿ 25: ಮದುವೆ(Marriage) ಮನೆಗೆ ಬಂದು ವೇದಿಕೆಯಲ್ಲಿದ್ದ ಮಾಜಿ ಪ್ರೇಯಸಿಯ ಹೊಟ್ಟೆಗೆ ವ್ಯಕ್ತಿ ಗುಂಡು ಹಾರಿಸಿರುವ ಘಟನೆ ಬಿಹಾರದ ಬಕ್ಸಾರ್​​ನಲ್ಲಿ ನಡೆಯಲಿದೆ. ಗುಂಡು ಹಾರಿಸಿದಾಗ ಆರತಿ ಕುಮಾರಿ ವರನ ಜೊತೆಗೆ ವೇದಿಕೆಯಲ್ಲಿದ್ದರು. ವಧು-ವರರ ಪಕ್ಕದಲ್ಲಿ ಅವರ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಇದ್ದರು. ಆರತಿಯ ಸಂಬಂಧಿಕರೊಬ್ಬರು ವೇದಿಕೆಯಲ್ಲಿ ವರನ ಹಣೆಗೆ ಸಿಂಧೂರ ಹಚ್ಚುವ ಆಚರಣೆಯನ್ನು ಮಾಡುತ್ತಿದ್ದರು. ವೇದಿಕೆಯ ಮುಂದೆ ನಿಂತಿದ್ದ ಅತಿಥಿಗಳಲ್ಲಿ ಒಬ್ಬ ವ್ಯಕ್ತಿ ವಧುವಿನ ಮೇಲೆ ಗುಂಡು ಹಾರಿಸಿದ್ದಾನೆ.

ಆರತಿಯ ಹೊಟ್ಟೆಗೆ ಗುಂಡು ತಗುಲಿತ್ತು, ಜನರು ಭಯಭೀತರಾಗಿ, ಕಿರುಚುತ್ತಾ ಹೊರಗೆ ಓಡಿಹೋದರು. ಆರತಿ ಕುಸಿದು ಬಿದ್ದಾಗ ಕೆಲವರು ಆಕೆ ಪ್ರಜ್ಞೆ ತಪ್ಪದಂತೆ ನೋಡಿಕೊಳ್ಳಲು ಪ್ರಯತ್ನಿಸಿದರು. ಆರತಿಯನ್ನು ತಕ್ಷಣವೇ ಹತ್ತಿರದ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ಅವರನ್ನು ವಾರಾಣಸಿ ಟ್ರಾಮಾ ಸೆಂಟರ್‌ಗೆ ಕರೆದೊಯ್ಯಲಾಯಿತು. ಆರತಿ ಜೀವನ್ಮರಣ ಹೋರಾಟ ನಡೆಸುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯರ ಪ್ರಕಾರ, ಗುಂಡಿನ ದಾಳಿ ಘಟನೆಗೆ ಶಂಕಿತ ಪ್ರೇಮ ಪ್ರಕರಣ ಕಾರಣ ಎನ್ನಲಾಗಿದೆ. ಶಂಕಿತ ದೀನಬಂಧು ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಆರೋಪಿಯ ಪೋಷಕರನ್ನು ವಿಚಾರಣೆ ನಡೆಸುತ್ತಿದ್ದು, ಅವರನ್ನು ವಶಕ್ಕೆ ಪಡೆದಿದ್ದಾರೆ.

ಮತ್ತಷ್ಟು ಓದಿ: ಕಲ್ಯಾಣ ಮಂಟಪದಲ್ಲೇ ಹೃದಯಾಘಾತದಿಂದ ಕುಸಿದುಬಿದ್ದು ಫೋಟೊಗ್ರಾಫರ್ ಸಾವು!

ದೀನಬಂಧು ಈ ಹಿಂದೆ ಮದ್ಯದ ಪ್ರಕರಣವೊಂದರಲ್ಲಿ ಜೈಲಿನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಶೀಘ್ರವೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಮದುವೆ ಮೆರವಣಿಗೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಿಂದ ಬಂದಿತ್ತು. ಘಟನೆ ನಡೆದ ಕೂಡಲೇ ಅದು ಹಿಂತಿರುಗಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನಮ್ಮ ಮೆಟ್ರೋ ವಿರುದ್ಧ ಉದ್ಯಮಿ ಮೋಹನ್ ದಾಸ್ ಪೈ ಆಕ್ರೋಶ: ಕಾರಣ ಇಲ್ಲಿದೆ – Kannada News | Mohan Das Pai Slams BMRCL: Pink Line Barricades Cause Bengaluru Traffic Chaos

ಉದ್ಯಮಿ ಮೋಹನ್ ದಾಸ್ ಪೈ ಆಕ್ರೋಶImage Credit source: Tv9 Kannada

ಬೆಂಗಳೂರು, ಫೆಬ್ರವರಿ 25: ರಾಜ್ಯ ರಾಜಧಾನಿಯಲ್ಲಿನ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಒಂದಲ್ಲ ಒಂದು ವಿಚಾರಕ್ಕೆ ಧ್ವನಿ ಎತ್ತುತಲೇ ಬಂದಿರುವ ಉದ್ಯಮಿ ಮೋಹನ್ ದಾಸ್ ಪೈ ಇದೀಗ ನಮ್ಮ ಮೆಟ್ರೋ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪಿಂಕ್ ಲೈನ್​​​​​ನಲ್ಲಿ ಪಿಲ್ಲರ್ ಕಾಮಗಾರಿ ಹಿನ್ನೆಲೆ ಕಿಲೋ ಮೀಟರ್​​ ಗಟ್ಟಲೆ ದೂರದ ವರೆಗೆ ಬಿಎಂಆರ್​​ಸಿಎಲ್​​ ಬ್ಯಾರಿಕೇಡ್​​ ಅಳವಡಿಸಿತ್ತು. ಆದರೀಗ ಕಾಮಗಾರಿ ಮುಗಿದಿದ್ದರೂ, ಅವುಗಳನ್ನು ತೆರವು ಮಾಡದ ಕಾರಣ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಬಿಎಂಆರ್​ಸಿಎಲ್​​​​​ಗೆ ಈ ಬಗ್ಗೆ ಯಾವುದೇ ಕಾಳಜಿಯಿಲ್ಲ ಎಂದು ಮೋಹನ್ ದಾಸ್ ಪೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಳೇನ ಅಗ್ರಹಾರ-ನಾಗವಾರವರೆಗೆ ಪಿಂಕ್ ಲೈನ್ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಆದರೆ ಈ ಮಾರ್ಗದ ಪಿಲ್ಲರ್ ಕಾಮಗಾರಿ ಮುಗಿದು 6 ತಿಂಗಳಾಗಿವೆ. ಹೀಗಿದ್ದರೂ ಪಿಲ್ಲರ್ ಅಕ್ಕಪಕ್ಕದಲ್ಲಿ ಅಳವಡಿಸಿರುವ ಬ್ಯಾರಿಕೇಡ್​​ಗಳನ್ನು ಇನ್ನೂ ತೆರವು ಮಾಡಲಾಗಿಲ್ಲ. ಹೀಗಾಗಿ ವಾಹನ ಸವಾರರು ಪರದಾಡುತ್ತಿದ್ದು, ಹೊಸೂರು ಮತ್ತು ಬನ್ನೇರುಘಟ್ಟ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗ್ತಿದೆ. ಅಲ್ಲದೆ ಮೆಟ್ರೋ ಕಾಮಗಾರಿ ಹಿನ್ನೆಲೆ ತೆಗೆಯಲಾಗಿದ್ದ ಗುಂಡಿಗಳನ್ನು ಮುಚ್ಚುವ ಕೆಲಸ ಈವರೆಗೂ ನಡೆದಿಲ್ಲ ಎಂದು ವಾಹನ ಸವಾರರು ಮತ್ತು ಸ್ಥಳೀಯ ನಿವಾಸಿಗಳು ಬಿಎಂಆರ್​​ಸಿಎಲ್​​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ.

ಇದನ್ನೂ ಓದಿ:  ಹಳಿ ತಪ್ಪಿದ ನಮ್ಮ ಮೆಟ್ರೋ ಡ್ರೈವರ್ಲೆಸ್ ರೈಲು!

ಏಪ್ರಿಲ್​​ನಿಂದ ಪಿಂಕ್​​ ಲೈನ್ ಮೆಟ್ರೋ​​ ಆರಂಭ?

ಒಟ್ಟು 21.26 ಕಿಲೋಮೀಟರ್ ಉದ್ದದ ಈ ಪಿಂಕ್ ಲೈನ್ ಮಾರ್ಗದಲ್ಲಿ 7.5 ಕಿಲೋಮೀಟರ್ ಎಲಿವೇಟೆಡ್ ವಿಭಾಗವಿದ್ದು, ಈ ಭಾಗದಲ್ಲಿ ಈಗಾಗಲೇ ಪರೀಕ್ಷಾ ಕಾರ್ಯಗಳು ಆರಂಭವಾಗಿವೆ. ಎಲಿವೇಟೆಡ್ ಮಾರ್ಗದಲ್ಲಿ ಒಟ್ಟು ಆರು ಸ್ಟೇಷನ್‌ಗಳು ನಿರ್ಮಾಣವಾಗುತ್ತಿದ್ದು, ಪ್ರಯಾಣಿಕರ ಸುರಕ್ಷತೆ ಮತ್ತು ರೈಲಿನ ತಾಂತ್ರಿಕ ಗುಣಮಟ್ಟ ಪರಿಶೀಲನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮೊದಲ ಹಂತದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆಯವರೆಗೆ ಮೆಟ್ರೋ ಸಂಚಾರ ಆರಂಭಿಸಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸುತ್ತಿದೆ. ಈ ಮಾರ್ಗವನ್ನು ಏಪ್ರಿಲ್ ತಿಂಗಳಲ್ಲಿ ಸಾರ್ವಜನಿಕ ಸೇವೆಗೆ ತೆರೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕಾಂಗ್ರೆಸ್ ಸರ್ಕಾರದ ಆರನೇ ಗ್ಯಾರೆಂಟಿ ಅರಾಜಕತೆ! ವಿಪಕ್ಷ ನಾಯಕ ಆರ್ ಅಶೋಕ್ ವ್ಯಂಗ್ಯ – Kannada News | R. Ashoka Slams Karnataka Congress Govt Amidst Rising Public Protests

ಕಾಂಗ್ರೆಸ್ ಸರ್ಕಾರದ ಆರನೇ ಗ್ಯಾರೆಂಟಿ ಅರಾಜಕತೆ! ವಿಪಕ್ಷ ನಾಯಕ ಆರ್ ಅಶೋಕ್ ವ್ಯಂಗ್ಯ
Image Credit source: R Ashoka X account

ಬೆಂಗಳೂರು, ಫೆಬ್ರವರಿ 25: ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಟೀಕಿಸಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿಪಕ್ಷ ನಾಯಕ ಆರ್. ಅಶೋಕ್, ಕಾಂಗ್ರೆಸ್ (Congress) ಅಧಿಕಾರದಲ್ಲಿದೆ, ಜನರು ಬೀದಿಗಿಳಿದಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಖಾಲಿ ಹುದ್ದೆ ಭರ್ತಿಗಾಗಿ ವೈದ್ಯರಿಂದ ಮತ್ತು ಧಾರವಾಡದಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ ಸೇರಿದಂತೆ ಹಲವು ಹೋರಾಟಗಳನ್ನು ಕೇಂದ್ರವಾಗಿಸಿಕೊಂಡು ಕಾಂಗ್ರೆಸ್​ ಆಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಧಾರವಾಡದಲ್ಲಿ ಹಲವು ಬಾರಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ನಡೆದಿದ್ದು, ಖಾಲಿ ಹುದ್ದೆ ಭರ್ತಿಗಾಗಿ ರಾಜ್ಯ ಸರ್ಕಾರಿ ವೈದ್ಯರ OPD ಬಂದ್, ಪರಿಶಿಷ್ಟ ಜಾತಿ ಸಮುದಾಯಗಳು ಹಾಗೂ ಎಸ್ಸಿ ಬಲಗೈ ಸಮುದಾಯಗಳ ಪ್ರತಿಭಟನೆ ಸೇರಿದಂತೆ ಮುಂದೆ ನಡೆಯಬೇಕಿರುವ ಹೋರಾಟಗಳ ಪಟ್ಟಿಯನ್ನೇ ಉಲ್ಲೇಖಿಸಿರುವ ಅಶೋಕ್, ನಿಮ್ಮ ಭ್ರಷ್ಟ ಆಡಳಿತದಲ್ಲಿ ಒಬ್ಬರಾದರೂ ನೆಮ್ಮದಿಯಿಂದ ಇದ್ದಾರಾ? ಎಂದು ಸಿಎಂ ಸಿದ್ದರಾಮಯ್ಯಗೆ ಪ್ರಶ್ನಿಸಿದ್ದಾರೆ.

ಅಶೋಕ್ ಟ್ವೀಟ್​ನಲ್ಲೇನಿದೆ?

ಇದನ್ನೂ ಓದಿ ರಾಜ್ಯ ಸರ್ಕಾರ ದಿವಾಳಿ, ಸಂಬಳ ನೀಡಲೂ ಹಣವಿಲ್ಲ: ವಿಪಕ್ಷ ನಾಯಕ ಅಶೋಕ್​​ ಸ್ಫೋಟಕ ಆರೋಪ

ಕಾಂಗ್ರೆಸ್ ಆಡಳಿತವು ಭ್ರಷ್ಟತೆ ಮತ್ತು ಅರಾಜಕತೆಯಿಂದ ಕೂಡಿದೆ ಎಂದು ಆರೋಪಿಸುತ್ತಾ, ಸರ್ಕಾರದ ಖಜಾನೆ ಖಾಲಿಯಾಗಿರುವುದಕ್ಕೆ ಈ ಹೋರಾಟಗಳಿಗಿಂತ ಬೇರೆ ಸಾಕ್ಷಿ ಬೇಕೆ? ಎಂದು ಪ್ರಶ್ನಿಸಿದ್ದಾರೆ. ಅವರ ಟ್ವೀಟ್‌ನಲ್ಲಿ ರಾಜ್ಯದ ಪ್ರತಿ ಹಂತದಲ್ಲಿ ಜನರ ಆಕ್ರೋಶ ಹೆಚ್ಚುತ್ತಿರುವುದನ್ನು, ಸರ್ಕಾರವು ಜನರ ಬೇಡಿಕೆಗಳಿಗೆ ಸ್ಪಂದಿಸುವ ಅಗತ್ಯವಿರುವುದನ್ನು ಉಲ್ಲೇಖಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 1:11 pm, Wed, 25 February 26

Source link

ಬಿಜೆಪಿ ಶಾಸಕ ವಿರುದ್ಧದ ಲಂಚ ಕೇಸ್: ಕಾಂಗ್ರೆಸ್ ನಾಯಕಿ ಜೊತೆ ಸ್ವಾಮೀಜಿ ಮಾತಾಡಿರೋ ಆಡಿಯೋ ರಿಲೀಸ್ – Kannada News | BJP MLA Chandru Lamani Bribe Case: contractor Sonu Lamani Releases Swamiji And Congress Woman Leader Audio clip

ಗದಗ, (ಫಬ್ರವರಿ 25): ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಶಿರಹಟ್ಟಿ ಶಾಸಕ ಡಾ ಚಂದ್ರು ಲಮಾಣಿ (BJP MLA Chandru Lamani Bribe Case) ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರನ್ನು ಯಾವುದಾದರೊಂದು ಪ್ರಕರಣದಲ್ಲಿ ಸಿಲುಕಿಸುವ ಬಗ್ಗೆ ಸ್ವಾಮೀಜಿಯೊಬ್ಬರ ಕೈವಾಡ ಇರುವ ಆರೋಪ ಕೇಳಿಬಂದಿದೆ. ಶಿರಹಟ್ಟಿ ತಾಲೂಕಿನ ಅದರಹಳ್ಳಿ ಕುಮಾರ ಮಹಾರಾಜರ ಸ್ವಾಮೀಜಿ ಹಾಗೂ ಬಿಜೆಪಿ ಕಾರ್ತಕರ್ತರೊಬ್ಬರು 2.36 ನಿಮಿಷಗಳ ಕಾಲ ಮಾತನಾಡಿರುವ ಆಡಿಯೋವೊಂದು ವೈರಲ್ ಆಗಿದ್ದು, ಭಾರೀ ಸಂಚಲನ ಸೃಷ್ಟಿಸಿದೆ. ಇದರ ನಡುವೆ ಇದೀಗ ಕಾಂಗ್ರೆಸ್ ನಾಯಕಿ ಜೊತೆ ಸ್ವಾಮೀಜಿ ಮಾತಾಡಿರೋ ಆಡಿಯೋವನ್ನು ಸಹ ಗುತ್ತಿಗೆದಾರ ಸೋನು ಲಮಾಣಿ ಬಿಡುಗಡೆ ಮಾಡಿದ್ದಾರೆ. ಆಡಿಯೋದಲ್ಲಿ ಏನಿದೆ? ಈ ಆಡಿಯೋ ಬಗ್ಗೆ ಸೋನು ಲಮಾಣಿ ಹೇಳಿದ್ದೇನು ಎನ್ನುವುದನ್ನು ಕೇಳಿ.

ಇದನ್ನೂ ನೋಡಿ: ಲಂಚ ತೆಗೆದುಕೊಳ್ಳುವ ಸಿಕ್ಕಿಬಿದ್ದ ಬಿಜೆಪಿ ಶಾಸಕನ ವಿರುದ್ಧ ಸ್ವಾಮೀಜಿ ಗಂಭೀರ ಆರೋಪ

Source link

ನಿರ್ಣಾಯಕ ಪಂದ್ಯಕ್ಕೆ ಹೀಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ 11 – Kannada News | India playing 11 for zimbabwe match

T20 World Cup 2026: ಟಿ20 ವಿಶ್ವಕಪ್​ನ 48ನೇ ಪಂದ್ಯದಲ್ಲಿ ಭಾರತ ಮತ್ತು ಝಿಂಬಾಬ್ವೆ ತಂಡಗಳು ಮುಖಾಮುಖಿಯಾಗಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಾಳೆ (ಫೆ.26) ನಡೆಯಲಿರುವ ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಮಹತ್ವದ ಬದಲಾವಣೆ ಕಂಡು ಬರುವ ಸಾಧ್ಯತೆಯಿದೆ. ಏಕೆಂದರೆ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟರ್​ಗಳು ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿ ಈ ನಿರ್ಣಾಯಕ ಪಂದ್ಯಕ್ಕಾಗಿ ಟೀಮ್ ಇಂಡಿಯಾ ತನ್ನ ಬ್ಯಾಟಿಂಗ್​ ಲೈನಪ್​ನಲ್ಲಿ ಬದಲಾವಣೆ ಮಾಡಿಕೊಳ್ಳಬಹುದು.

ಅದರಂತೆ ಝಿಂಬಾಬ್ವೆ ವಿರುದ್ಧ ಆರಂಭಿಕರಾಗಿ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಕಣಕ್ಕಿಳಿಯಬಹುದು. ಇನ್ನು ತಿಲಕ್ ವರ್ಮಾ ಬದಲಿಗೆ ಇಶಾನ್ ಕಿಶನ್​ನ ಮೂರನೇ ಕ್ರಮಾಂಕದಲ್ಲಿ ಆಡಿಸುವ ಸಾಧ್ಯತೆಯಿದೆ. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಕಣಕ್ಕಿಳಿಯಬಹುದು.

ಆಲ್​ರೌಂಡರ್​ಗಳಾಗಿ ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ವಾಷಿಂಗ್ಟನ್ ಸುಂದರ್​ ಕಣಕ್ಕಿಳಿಯುವುದನ್ನು ಎದುರು ನೋಡಬಹುದು. ಇನ್ನು ವೈಯುಕ್ತಿಕ ಕಾರಣಗಳಿಂದಾಗಿ ಮನೆಗೆ ತೆರಳಿರುವ ರಿಂಕು ಸಿಂಗ್ ಈ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಅವರ ಸ್ಥಾನದಲ್ಲಿ ಅಕ್ಷರ್ ಪಟೇಲ್​ಗೆ ಅವಕಾಶ ಸಿಗಬಹುದು.

ಇನ್ನುಳಿದಂತೆ ಬೌಲರ್​ಗಳಾಗಿ ಅರ್ಷದೀಪ್ ಸಿಂಗ್, ಜಸ್​ಪ್ರೀತ್ ಬುಮ್ರಾ ಹಾಗೂ ವರುಣ್ ಚಕ್ರವರ್ತಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

  • ಅಭಿಷೇಕ್ ಶರ್ಮಾ
  • ಸಂಜು ಸ್ಯಾಮ್ಸನ್
  • ಇಶಾನ್ ಕಿಶನ್
  • ಸೂರ್ಯಕುಮಾರ್ ಯಾದವ್
  • ಹಾರ್ದಿಕ್ ಪಾಂಡ್ಯ
  • ಶಿವಂ ದುಬೆ
  • ವಾಷಿಂಗ್ಟನ್ ಸುಂದರ್
  • ಅಕ್ಷರ್ ಪಟೇಲ್
  • ಜಸ್​ಪ್ರೀತ್ ಬುಮ್ರಾ
  • ಅರ್ಷದೀಪ್ ಸಿಂಗ್
  • ವರುಣ್ ಚಕ್ರವರ್ತಿ

ಚೆನ್ನೈ ಪಿಚ್​ನಲ್ಲಿ ಆರಂಭದಲ್ಲಿ ವೇಗದ ಬೌಲರ್‌ಗಳಿಗೆ ಸ್ವಲ್ಪ ಸ್ವಿಂಗ್ ದೊರೆತರೂ, ಪಂದ್ಯ ಮುಂದುವರಿದಂತೆ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಹೀಗಾಗಿ ಟೀಮ್ ಇಂಡಿಯಾ ಮೂವರು ಸ್ಪಿನ್ನರ್​ಗಳೊಂದಿಗೆ ರಣತಂತ್ರ ರೂಪಿಸುವ ಸಾಧ್ಯತೆಯಿದೆ.

ಅದರಂತೆ ಟೀಮ್ ಇಂಡಿಯಾ ಪರ ಸ್ಪಿನ್ನರ್ ಆಗಿ ವರುಣ್ ಚಕ್ರವರ್ತಿ ಕಣಕ್ಕಿಳಿಯುವುದು ಖಚಿತ. ಅವರೊಂದಿಗೆ ಸ್ಪಿನ್ ಆಲ್​ರೌಂಡರ್​ಗಳಾಗಿ ಅಕ್ಷರ್ ಪಟೇಲ್ ಹಾಗೂ ವಾಷಿಂಗ್ಟನ್ ಸುಂದರ್​ಗೆ ಚಾನ್ಸ್ ನೀಡುವ ಸಾಧ್ಯತೆಯಿದೆ. ಈ ಮೂಲಕ ಮೂವರು ಸ್ಪಿನ್ನರ್​ಗಳೊಂದಿಗೆ ಟೀಮ್ ಇಂಡಿಯಾ ಝಿಂಬಾಬ್ವೆ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಲು ಪ್ಲ್ಯಾನ್ ರೂಪಿಸಬಹುದು.

ಇದನ್ನೂ ಓದಿ: ಇಂಗ್ಲೆಂಡ್​ಗೆ ಜಯ… ಭಾರತ vs ಪಾಕಿಸ್ತಾನ್ ‘ಸೆಮಿ’ ಮುಖಾಮಖಿ ಇಲ್ಲ!

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

Published On – 2:08 pm, Wed, 25 February 26

Source link

ರಶ್ಮಿಕಾ ಮಂದಣ್ಣ ಮದುವೆ ಸಿಂಗಾರಗೊಂಡ ಕೊಡಗಿನ ಮನೆ: ವಿಡಿಯೋ ನೋಡಿ – Kannada News | Rashmika Mandanna wedding her Kodagu house decorated with flower and light

ರಶ್ಮಿಕಾ ಮಂದಣ್ಣ (Rashmika Mandanna) ಮೂಲತಃ ಕೊಡಗಿನವರು. ಕೊಡಗಿನ ವಿರಾಜಪೇಟೆ ಸಮೀಪದ ಕದಿಲೂರು ಗ್ರಾಮದವರು. ರಶ್ಮಿಕಾ ಅವರ ಪೋಷಕರು ಇಂದಿಗೂ ಅಲ್ಲಿಯೇ ವಾಸವಿದ್ದಾರೆ. ಇದೀಗ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಜೊತೆಗೆ ಉದಯಪುರದಲ್ಲಿ ಅದ್ಧೂರಿಯಾಗಿ ಮದುವೆ ಆಗುತ್ತಿದ್ದಾರೆ. ರಶ್ಮಿಕಾ ಮದುವೆ ಕಾರಣಕ್ಕೆ ಅವರ ಮೂಲ ಮನೆಯನ್ನು ಸಿಂಗರಿಸಲಾಗಿದೆ. ಮನೆಯ ಮುಂಚೆ ಚಪ್ಪರ ಹಾಕಲಾಗಿದೆ, ಮನೆಯ ಬಾಗಿಲನ್ನು ಹೂವಿನಿಂದ ಅಲಂಕರಿಸಲಾಗಿದೆ. ಮನೆಯಲ್ಲಿ ಈಗ ಯಾರೂ ಇಲ್ಲವಾದರೂ ಮನೆಯನ್ನು ನೋಡಿಕೊಳ್ಳುತ್ತಿರುವ ಮಹಿಳೆ ಟಿವಿ9 ಜೊತೆಗೆ ಮಾತನಾಡಿದ್ದು, ರಶ್ಮಿಕಾ ಅವರ ಕುಟುಂಬದ ಬಗ್ಗೆ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಭಾರತ ಮೂಲದ ಅರವಿಂದ್ ಕೆ.ಸಿ. ಓಪನ್​ಎಐನ ನೂತನ ಸಿಪಿಒ; ಯಾವುದಿದು ಹುದ್ದೆ? – Kannada News | Indian origin Arvind KC appointed as Chief People Office at OpenAI

ಸ್ಯಾನ್ ಫ್ರಾನ್ಸಿಸ್ಕೋ, ಫೆಬ್ರುವರಿ 25: ವಿಶ್ವದ ನಂಬರ್ ಒನ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಂಸ್ಥೆ ಎನಿಸಿರುವ ಓಪನ್​ಎಐನ ಚೀಫ್ ಪೀಪಲ್ ಆಫೀಸರ್ ಹುದ್ದೆಗೆ (OpenAI Chief People Officer) ಭಾರತ ಮೂಲದ ಅರವಿಂದ್ ಕೆ.ಸಿ. (Arvind KC) ನೇಮಕವಾಗಿದ್ದಾರೆ. ಓಪನ್​ಎಐನ ಚಟುವಟಿಕೆ ಮತ್ತು ಬ್ಯುಸಿನೆಸ್ ವಿಸ್ತರಣೆ ಬಹಳ ವೇಗದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅರವಿಂದ್ ಕೆ.ಸಿ. ಅವರಿಗೆ ಹೊಣೆಗಾರಿಕೆ ಬಹಳ ದೊಡ್ಡದಿದೆ.

ಚೀಫ್ ಪೀಟಲ್ ಆಫೀಸರ್ ಎಂಬುದು ಎಚ್​ಆರ್​ಗೆ ಸಂಬಂಧಿಸಿದ ಹುದ್ದೆ. ಮಾನವ ಸಂಪನ್ಮೂಲದ ಹಂಚಿಕೆಯ ಜವಾಬ್ದಾರಿ ಇರುವಂತಹ ಹುದ್ದೆ. ನೇಮಕಾತಿ, ಪ್ರತಿಭಾ ಬಳಕೆ, ಉದ್ಯೋಗಿ ಕ್ಷಮತೆ ಅಭಿವೃದ್ಧಿ ಇತ್ಯಾದಿ ಕಾರ್ಯಗಳನ್ನು ಗಮನಿಸುವುದು ಈ ಹುದ್ದೆಯಲ್ಲಿರುವವರ ಜವಾಬ್ದಾರಿ.

ಓಪನ್​ಎಐನಲ್ಲಿ ಈ ಮುಂಚೆ ಚೀಫ್ ಪೀಪಲ್ ಆಫೀಸರ್ ಆಗಿದ್ದ ಜೂಲಿಯಾ ವಿಲ್ಲಾಗ್ರ ಅವರು 2025ರ ಆಗಸ್ಟ್​ನಲ್ಲೇ ಕಂಪನಿ ತರೆದಿದ್ದರು. ಐದಾರು ತಿಂಗಳ ನಂತರ ಹೊಸ ನೇಮಕಾತಿ ಆಗಿದೆ. ಅರವಿಂದ್ ಕೆ.ಸಿ. ಅವರು ಮಹಾರಾಷ್ಟ್ರದ ಯೂನಿವರ್ಸಿಟಿ ಇನ್ಸ್​ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿಯಿಂದ ಕೆಮಿಕಲ್ ಎಂಜಿನಿಯರಿಂಗ್ ಮಾಡಿದ್ದಾರೆ. ಅಮೆರಿಕದ ಸಂಟಾ ಕ್ಲಾರಾ ಯೂನಿವರ್ಸಿಟಿಯಲ್ಲಿ ಎಂಬಿಎಂ ಮಾಡಿದ್ದಾರೆ. ರೋಬ್ಲೋಕ್ಸ್, ಗೂಗಲ್, ಪಲಂಟಿರ್ ಟೆಕ್ನಾಲಜೀಸ್, ಮೆಟಾ ಪ್ಲಾಟ್​ಫಾರ್ಮ್ಸ್ ಮೊದಲಾದ ಕಂಪನಿಗಳಲ್ಲಿ ಹಿರಿಯ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ನಿರ್ವಹಣೆ, ಹೀಗೆ ಎರಡು ವಿಭಿನ್ನ ಜವಾಬ್ದಾರಿಗಳನ್ನು ನಿಭಾಯಿಸಿದ ಅನುಭವ ಅವರಿಗಿದೆ.

ಇದನ್ನೂ ಓದಿ: ನಮ್ಮನ್ನು ಕಿತ್ತು ತಿನ್ನುತ್ತಿದ್ದವರು ಇವತ್ತು ಟ್ಯಾರಿಫ್ ಕಟ್ತಿದಾರೆ, ಅವರೂ ಖುಷ್, ನಾವೂ ಖುಷ್: ಡೊನಾಲ್ಡ್ ಟ್ರಂಪ್

ಅರವಿಂದ್ ಕೆ.ಸಿ. ಅವರು ಓಪನ್​ಎಐನ ಚೀಫ್ ಸ್ಟ್ರಾಟಿಜಿ ಆಫೀಸರ್ ಆಗಿರುವ ಜೇಸನ್ ಕ್ವೋನ್ ಅವರಿಗೆ ರಿಪೋರ್ಟ್ ಮಾಡಿಕೊಳ್ಳಲಿದ್ದಾರೆ. ಜಾಗತಿಕವಾಗಿ ಎಐ ಬೂಮ್ ಹೆಚ್ಚುತ್ತಿದ್ದು, ಆ ಕ್ಷೇತ್ರದಲ್ಲಿ ಪರಿಣಿತರ ಅವಶ್ಯಕತೆ ಬಹಳ ಹೆಚ್ಚಿದೆ. ಎಐ ಪರಿಣಿತರಿಗೆ ಬೇಡಿಕೆ ಬಹಳ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಅರವಿಂದ್ ಕೆ.ಸಿ. ಅವರು ಚೀಫ್ ಪೀಪಲ್ ಆಫೀಸರ್ ಆಗಿ ಗುರುತರ ಹೊಣೆ ಹೊಂದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link