All posts by nagaraj11081993

ಮುದಾದ ಮಗುವಿಗೆ ಜನ್ಮ: ಕರುಳ ಬಳ್ಳಿ ಕಣ್ತುಂಬಿಕೊಳ್ಳುವ ಮೊದಲೇ ತಾಯಿ ದುರಂತ ಸಾವು – Kannada News | A mother dies In Hassan Hims after delivery, family alleges hospital negligence

ಹಾಸನ, (ಫೆಬ್ರವರಿ 24): ಹೆರಿಗೆ ನಂತರ ಬಾಣಂತಿ ಸಾವನ್ನಪ್ಪಿರುವ ಘಟನೆ ಹಾಸನದ (Hassan) ಹಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಶೃತಿ ಎನ್ನುವ ಮಹಿಳೆ ಹೆರಿಗೆಗೆಂದು ಹಾಸನದ ಹಿಮ್ಸ್ ಆಸ್ಪತ್ರೆ (Hims Hospital) ದಾಖಲಾಗಿದ್ದರು. ಆದ್ರೆ, ಮಗುವಿಗೆ ಜನ್ಮ ನೀಡಿದ ಬಳಿಕ ಬಾಣಂತಿ ಶೃತಿ (30) ಸಾವನ್ನಪ್ಪಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಬಾಣಂತಿ ಶೃತಿ ಸಾವಿಗೆ ಹಿಮ್ಸ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಶೃತಿ ಸಂಬಂಧಿಕರು ಹಾಗೂ ಪತಿ ಆರೋಪಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರು ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಶೃತಿಗೆ ಸರಿಯಾಗಿ ಚಿಕಿತ್ಸೆ ನೀಡಿಲ್ಲ. ಹೀಗಾಗಿ ಶೃತಿ ಸಾವಿಗೆ ವೈದ್ಯರೇ ಕಾರಣ ಎಂದು ಆಸ್ಪತ್ರೆ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದ ಶೃತಿಗೆ ಐದು ವರ್ಷದ ಗಂಡು ಮಗುವಿದ್ದು, ಇದೀಗ ಹೆಣ್ಣು ಮಗು ಜನಿಸಿತ್ತು. ಇದರಿಂದ ಕುಟುಂಬಸ್ಥರು ಸಹ ಸಂತಸಗೊಂಡಿದ್ದರು. ಆದ್ರೆ, ಈ ಸತೋಷ ಬಹಳ ಹೊತ್ತು ಇರಲಿಲ್ಲ. ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಶೃತಿ(30) ಅವರಿಗೆ ಮರುದಿನ ಭಾನುವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಹೆರಿಗೆಯೂ ಆಗಿದ್ದು, ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಶೃತಿ ಕೆಲವೇ ಸಮಯದಲ್ಲಿ ಕೋಮಾಗೆ ಹೋಗಿದ್ದಾರೆ. ಆಗ ಅಗತ್ಯ ಚಿಕಿತ್ಸೆ ನೀಡಿದ ವೈದ್ಯರು ಅರೋಗ್ಯ ಬಿಗಡಾಯಿಸುತ್ತಿದೆ, ಬೇರೆ ಕಡೆ ಕರೆದುಕೊಂಡು ಹೋಗಿ ಎಂದು ಹೇಳಿದ್ದಾರೆ. ಆಗ ಪತಿ ಪುನೀತ್ ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ ಮಾರ್ಗಮದ್ಯೆಯೇ ಶೃತಿ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ಅನೈತಿಕ ಸಂಬಂಧ ಗುಟ್ಟು ರಟ್ಟು: ಒಂದೇ ಅವಾಜ್​​​ಗೆ ಯುವಕ ದುರಂತ ಸಾವು, ಆಗಿದ್ದೇನು?

ಹಾಸನದ ಸರ್ಕಾರಿ ಆಸ್ಪತ್ರೆ, ದೊಡ್ಡ ಕಟ್ಟಡ ಸುಸಜ್ಜಿತ ಹೆರಿಗೆ ವ್ಯವಸ್ಥೆ, ತಜ್ಞ ವೈದ್ಯರೂ ಇರ್ತಾರೆ ಎಂದು ಕುಟುಂಬಸ್ಥರು ನಂಬಿದ್ದರು. ಹೀಗಾಗಿ ಫೆಬ್ರವರಿ 21ರ ಶನಿವಾರ ನಡು ರಾತ್ರಿಯಲ್ಲಿ ಹೆರಿಗೆ ನೋವು ಎಂದು ಒದ್ದಾಡಿದಾಕೆಯನ್ನ ಹಿಮ್ಸ್​​ಗೆ ಕರೆತಂದಿದ್ದರು. ಮರುದಿನ ಹೆರಿಗೆಯೂ ಆಗಿತ್ತು. ಆದ್ರೆ, ದುರ್ವೈವ ಮುದ್ದಾದ ಮಗುವಿಗೆ ಜನ್ಮ ಕೊಟ್ಟ ತಾಯಿ ಕರುಳ ಬಳ್ಳಿಯನ್ನ ಕಣ್ತುಂಬಿಕೊಳ್ಳೋ ಮೊದಲೇ ಸಾವನ್ನಪ್ಪಿದ್ದಾಳೆ. ವೈದ್ಯರ ನಿರ್ಲಕ್ಷ್ಯ, ಸರಿಯಾದ ಚಿಕಿತ್ಸೆ ನೀಡದೆ ತಾತ್ಸಾರ ಮಾಡಿದ್ದೇ ಶೃತಿ ಸಾವಿಗೆ ಕಾರಣ ಎಂದು ಸಂಬಂಧಿಕರು ಆರೊಪಿಸಿದ್ದಾರೆ.

ನನ್ನ ಪತ್ನಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ. ಶನಿವಾರ ರಾತ್ತಿ ಬಂದು ಭಾನುವಾರದ ಮಧ್ಯಾಹ್ನದ ವರೆಗೂ ಯಾವ ವೈದ್ಯರು ಬಂದು ನೋಡಲಿಲ್ಲ. ಹೊಟ್ಟೆ ನೋವು ಎಂದರೆ ಇಲ್ಲಿನ ಸಿಬ್ಬಂದಿ ಬಾಯಿಗೆ ಬಂದಂತೆ ಮಾತನಾಡಿದ್ರು. ವೈದ್ಯರಾದ ಸುಮಾ ಅವರು ಹೆರಿಗೆ ಮಾಡಿಸಿದ್ದು, ದಿಢೀರ್ ರಕ್ತ ಬೇಕು ಎಂದು ಹೇಳಿದ್ರು. ಎಲ್ಲವನ್ನು ಹೊಂದಿಸಿಕೊಟ್ಟರೂ ಪತ್ನಿ ಪರಿಸ್ಥಿತಿ ಕೆಟ್ಟದಾಗಿದೆ ಎಂದು ಇಲ್ಲಿಂದ ಸಾಗ ಹಾಕಿದ್ರು ಎಂದು ಗೋಳಾಡಿದರು. ಆದ್ರೆ, ಆರೋಪವನ್ನು ಆಸ್ಪತ್ರೆ ಆಡಳಿತ ಮಂಡಳಿ ಅಲ್ಲಗಳೆದಿದೆ.

ವೈದ್ಯರು ಹೇಳಿದ್ದೇನು?

ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಹಿಮ್ಸ್ ಶಸ್ತ್ರ ಚಿಕಿತ್ಸಕ, ಈ ಹಿಂದೆ ಅವರು ನಮ್ಮ ಆಸ್ಪತ್ರೆಗೆ ಬಂದಿರಲಿಲ್ಲ. ರಾತ್ರಿ ವೇಳೆ ಬಂದರೂ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆಯಲ್ಲಿ ಯಾವುದೇ ನಿರ್ಲಕ್ಷ್ಯ ಆಗಿಲ್ಲ. ಮಹಿಳೆಗೆ ಹಠಾತ್ ಹೃದಯ ಸ್ಥಂಭನ ಆಗಿ ಕೋಮಾಗೆ ಹೋಗಿ ಸಮಸ್ಯೆ ಎದುರಾಗಿದೆ. ಆಸ್ಪತ್ರೆಯ ಸಿಬ್ಬಂದಿ ಅಥವಾ ವೈದ್ಯರಿಂದ ಯಾವುದೇ ಸಮಸ್ಯೆ ಆಗಿಲ್ಲ. ಮಗು ಕೂಡ ನಮ್ಮದೇ ಆಸ್ಪತ್ರೆಯ ಐಸಿಯುನಲ್ಲಿದ್ದು ಆರೈಕೆ ಮಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.ಈ ಮೂಲಕ ಶೃತಿ ಕುಟುಂಬಸ್ಥರ ಆರೋಪವನ್ನು ಅಲ್ಲಗಳೆದಿದ್ದಾರೆ.

ಒಟ್ಟಿನಲ್ಲಿ ಮತ್ತೊಂದು ಜೀವಕ್ಕೆ ಉಸಿರು ನೀಡಿ, ತನ್ನ ಕರುಳ ಬಳ್ಳಿಯನ್ನ ಕಣ್ತುಂಬಿಕೊಳ್ಳೋ ಮೊದಲೇ ತಾಯಿ ಸಾವನ್ನಪ್ಪಿರುವುದು ದುರಂತ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ವಿಕ್ರಮ ವರ್ಷದ ಅಧಿಪತಿ ಗುರು… ಏನೆಲ್ಲ ಆಗಲಿದೆ ಈ ವರ್ಷ? – Kannada News | Raudri Samvatsara 2083: Guru’s Auspicious Reign and Impact on India’s Future

ಮಾರ್ಚ್ ೧೯ರಿಂದ ವಿಕ್ರಮ ಸಂವತ್ಸರ 2083 ಆರಂಭವಾಗಲಿಸೆ. ರೌದ್ರಿ ಅಥವಾ ರೌದ್ರ ಸಂವತ್ಸರದ ಆರಂಭ. ಈ ಕಾಲಗಣನೆಯನ್ನು ವಿಶೇಷವಾಗಿ ಉತ್ತರ ಭಾರತದಲ್ಲಿ ಅನುಸರಿಸುತ್ತಾರೆ. ದಕ್ಷಿಣ ಭಾರತದಲ್ಲಿ ಈ ಕ್ರಮ ಕಂಡುಬರುವುದಿಲ್ಲ.

ಈ ಸಂವತ್ಸರದ ಆರಂಭ ಹಾಗೂ ಯುಗಾದಿಯ ಆರಂಭ ಎರಡೂ ಒಂದೇ. ಆದರೆ ವಿಕ್ರಮ ಎನ್ನುವ ರಾಜನ ಆಳ್ವಿಕೆಯ ‌ಕಾಲದಿಂದ ಇದು ಆರಂಭವಾದ‌ ಕಾರಣ ಸಂವತ್ಸರದಲ್ಲಿ ಮಾತ್ರ ವ್ಯತ್ಯಾಸ ಕಾಣಸಿಗುತ್ತದೆ. ಈ ವರ್ಷದ ರಾಜ ಗುರು ಅಂದರೆ ಬೃಹಸ್ಪತಿ. ಮಿಥುನ ಹಾಗೂ ತನ್ನ ಪರಮೋಚ್ಚ ರಾಶಿಯಾದ ಕರ್ಕಾಟಕದಲ್ಲಿ ಸಂಚರಿಸುತ್ತಾ ಸಕಲರಿಗೂ ಅತ್ಯಂತ ಶುಭದಾಯಕ ಸಂಗತಿಯಾಗಿದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರುವನ್ನು ಪರಮಶುಭ ಗ್ರಹ ಮತ್ತು ಜ್ಞಾನದ ಕಾರಕ ಎಂದು ಕರೆಯಲಾಗುತ್ತದೆ. ಇಂತಹ ಗ್ರಹವು ರಾಜನ ಸ್ಥಾನದಲ್ಲಿ ಕುಳಿತಾಗ ಇಡೀ ವರ್ಷದ ಮೇಲೆ ಬೀರುವ ಸಾತ್ವಿಕ ಪ್ರಭಾವ ವಿಶೇಷವಾಗಿರಲಿದೆ.

ಸುಭಿಕ್ಷೆ ಮತ್ತು ಕೃಷಿ ಫಲ :

​ಗುರುವು ರಾಜನಾದಾಗ ಪ್ರಕೃತಿಯು ಮೃದುವಾಗುತ್ತದೆ. ಕಾಲಕಾಲಕ್ಕೆ ಮಳೆಯಾಗಿ ಭೂಮಿಯು ಹಸಿರಿನಿಂದ ಕಂಗೊಳಿಸುತ್ತದೆ. ವಿಶೇಷವಾಗಿ ಈ ವರ್ಷ ಧಾನ್ಯಗಳ ಇಳುವರಿ ಉತ್ತಮವಾಗಿರುತ್ತದೆ. ಕೃಷಿ ಕ್ಷೇತ್ರದಲ್ಲಿ ಲಾಭದಾಯಕ ವಾತಾವರಣ ನಿರ್ಮಾಣವಾಗಿ, ದೇಶದಲ್ಲಿ ಆಹಾರದ ಕೊರತೆ ನೀಗುತ್ತದೆ. ಹೈನುಗಾರಿಕೆ ಮತ್ತು ಹಣ್ಣು-ಹಂಪಲುಗಳ ಉತ್ಪಾದನೆ ಹೆಚ್ಚಾಗುತ್ತದೆ. ಜಲರಾಶಿಯಲ್ಲಿ ಸಂಚಾರ ಮಾಡುವ ಕಾರಣ ನೀರಿನಿಂದ ದ್ರವರೂಪದ ವಸ್ತುಗಳಿಂದ ಆಗಬಹುದಾದ ಎಲ್ಲ ರೀತಿ ಲಾಭಗಳೂ ಆಗಲಿವೆ.

ಧಾರ್ಮಿಕ ಮತ್ತು ಸಾಂಸ್ಕೃತಿಕ ಜಾಗರಣೆ :

​ರಾಜ ಗುರುವಾಗಿರುವುದರಿಂದ ಒಳ್ಳೆಯ ಕಾರ್ಯಕ್ಕೆ ಅಥವಾ ಶುಭ ಕಾರ್ಯಕ್ಕೆ ಹೆಚ್ಚು ಒತ್ತು ನೀಡುತ್ತಾನೆ. ಸಮಾಜದಲ್ಲಿ ಧಾರ್ಮಿಕ ಚಿಂತನೆಗಳು ಹೆಚ್ಚುತ್ತವೆ. ಯಜ್ಞ, ಯಾಗಾದಿಗಳು ಮತ್ತು ದೇವತಾ ಕಾರ್ಯಗಳಲ್ಲಿ ಜನರ ಆಸಕ್ತಿ ಹೆಚ್ಚಾಗುತ್ತದೆ. ಜನರು ಸನ್ಮಾರ್ಗದಲ್ಲಿ ನಡೆಯಲು ಪ್ರಯತ್ನಿಸುತ್ತಾರೆ. ಅಧ್ಯಾತ್ಮಿಕ ಗುರುಗಳ ಪ್ರಭಾವ ಹೆಚ್ಚಾಗಲಿದ್ದು, ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯ ನೆಲೆಸುತ್ತದೆ. ಪ್ರಾಚೀನ ಸಂಸ್ಕೃತಿ ಮತ್ತು ಪರಂಪರೆಗಳ ಪುನರುತ್ಥಾನಕ್ಕೆ ಈ ವರ್ಷ ಪೂರಕವಾಗಿರುತ್ತದೆ. ರಾಜರಿಗೂ ಕೂಡ ಅಂತಹ ವಿಚಾರದಲ್ಲಿ ಆಸಕ್ತಿ ಹಾಗೂ ತೊಡಗಿಕೊಳ್ಳುವಿಕೆ ಅಧಿಕವಾಗಲಿದೆ.

ಶಿಕ್ಷಣ ಮತ್ತು ನ್ಯಾಯಾಂಗ ವ್ಯವಸ್ಥೆ :

​ಗುರುವು ಜ್ಞಾನದ ಸಂಕೇತ. ಹೀಗಾಗಿ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗುತ್ತವೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಸಿಗುತ್ತವೆ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ದೇಶವು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆಯುತ್ತದೆ. ನ್ಯಾಯಾಂಗ ವ್ಯವಸ್ಥೆಯು ಅತ್ಯಂತ ಪಾರದರ್ಶಕವಾಗಿದ್ದು, ಜನಸಾಮಾನ್ಯರಿಗೆ ನ್ಯಾಯ ಸಿಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆಡಳಿತಗಾರರು ಪ್ರಜೆಗಳ ಹಿತದೃಷ್ಟಿಯಿಂದ ಸೌಮ್ಯ ಮತ್ತು ದೂರದೃಷ್ಟಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

ಆರ್ಥಿಕ ಮತ್ತು ಸಾಮಾಜಿಕ ಪ್ರಭಾವ :

​ದೇಶದ ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರುತ್ತದೆ. ಬಂಗಾರ ಮತ್ತು ಅಮೂಲ್ಯ ರತ್ನಗಳ ಬೆಲೆಯಲ್ಲಿ ಏರಿಕೆ ಕಂಡುಬಂದರೂ, ಜನರ ಖರೀದಿ ಸಾಮರ್ಥ್ಯ ಚೆನ್ನಾಗಿರುತ್ತದೆ. ಸಮಾಜದಲ್ಲಿ ಗೌರವ, ಮರ್ಯಾದೆ ಮತ್ತು ಮಾನವೀಯ ಮೌಲ್ಯಗಳಿಗೆ ಬೆಲೆ ಸಿಗುತ್ತದೆ. ಕ್ರೂರ ಕೃತ್ಯಗಳು ಕಡಿಮೆಯಾಗಿ, ಜನರು ಪರಸ್ಪರ ಸಹಕಾರದಿಂದ ಬದುಕುತ್ತಾರೆ. ವೈಮನಸ್ಯ, ಯುದ್ಧ ಇಂತಹವುಗಳು ಕಡಿಮೆಯಾಗುತ್ತವೆ.

ರೌದ್ರ ಸಂವತ್ಸರದ ಪ್ರಭಾವ :

​ಸಂವತ್ಸರದ ಹೆಸರು ‘ರೌದ್ರ’ ಎಂದಿದ್ದರೂ, ರಾಜ ಗುರುವಾಗಿರುವುದರಿಂದ ನಕಾರಾತ್ಮಕ ಅಂಶಗಳು ನಿಯಂತ್ರಣದಲ್ಲಿರುತ್ತವೆ. ಆದರೆ, ಮಂತ್ರಿಯಾಗಿ ಮಂಗಳನಿರುವುದರಿಂದ ಕೆಲವು ರಾಜತಾಂತ್ರಿಕ ಸಂಘರ್ಷಗಳು ಅಥವಾ ಸಣ್ಣಪುಟ್ಟ ವಿವಾದಗಳು ತಲೆದೋರಬಹುದು. ಆದರೂ, ಗುರುವಿನ ಮಾರ್ಗದರ್ಶನದಿಂದ ಅಂತಿಮವಾಗಿ ಶಾಂತಿ ನೆಲೆಸುತ್ತದೆ ಅಥವಾ ಅದರ ಪರಿಣಾಮ ಸಮಾಜಕ್ಕೆ ಒಳ್ಳೆಯಾದೇ ಆಗಲಿದೆ.

​ವಿಕ್ರಮ ಸಂವತ್ಸರ 2083ರಲ್ಲಿ ರಾಜ ಗುರುವಾಗಿರುವುದು ದೇಶಕ್ಕೆ ಶುಭೋದಯದ ಮುನ್ಸೂಚನೆಯಾಗಿದೆ. ಇದು ಜ್ಞಾನ, ಸಮೃದ್ಧಿ ಮತ್ತು ಶಾಂತಿಯ ವರ್ಷವಾಗಲಿದೆ.

​ಲೋಹಿತ ಹೆಬ್ಬಾರ್

Source link

ತನ್ನ ದುಡ್ಡಲ್ಲೇ ಇನ್​ಫ್ಲುಯೆನ್ಸರ್​​ಗೆ ಬೇಲ್​ಪುರಿ ಕೊಡಿಸಿದ ಬೀದಿ ಬದಿ ಬಾಲಕಿ; ವಿಡಿಯೋ ವೈರಲ್ – Kannada News | Homeless child Spends Her Own Money To Buy Bhel Puri For Influencer video goes viral

ನವದೆಹಲಿ, ಫೆಬ್ರವರಿ 24: ಬೀದಿ ಬದಿಯ ಹುಡುಗಿ ಮತ್ತು ಸೋಷಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್​ಗೆ ತನ್ನ ದುಡ್ಡಿನಲ್ಲೇ ಬೇಲ್​ಪುರಿ ಕೊಡಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. 24 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿರುವ ವಿಡಿಯೋ ಕ್ಲಿಪ್‌ನಲ್ಲಿ ಇನ್​ಫ್ಲುಯೆನ್ಸರ್​​​ ರಿತಿಕಾ ಶರ್ಮಾ ರಸ್ತೆಬದಿಯ ಭೇಲ್ ಪುರಿ ಅಂಗಡಿಯ ಬಳಿ ನಿಂತಿರುವುದನ್ನು ಕಾಣಬಹುದು. ಆಗ ಮುಸ್ಕಾನ್ ಎಂಬ ಬಾಲಕಿ ಆಕೆಯನ್ನು ಬೇಲ್​ಪುರಿ ತಿನ್ನಲು ಬಾ ಎಂದು ಕರೆದಳು. ಅದಕ್ಕೆ ಆಕೆ ನನ್ನ ಬಳಿ ಹಣವಿಲ್ಲ ಎಂದು ಹೇಳಿದಳು. ಆಗ ಆ ಬಾಲಕಿ ನನ್ನ ಹತ್ತಿರ ಇರೋ ದುಡ್ಡಲ್ಲೇ ತಿನ್ನೋಣ ಬಾ ಎಂದು ಕರೆದಳು. ತಿನ್ನದಿದ್ದರೆ ನಾವು ಸತ್ತುಹೋಗುತ್ತೇವೆ ಬಾ ಎಂದು ಆ ಬಾಲಕಿ ಇನ್​ಫ್ಲುಯೆನ್ಸರ್​ ಅನ್ನು ಕರೆದು ತಾನೇ ಬೇಲ್​ಪುರಿ ಕೊಡಿಸುವ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮದುವೆಗೆ ತೆರಳಿದ ಆಶಿಕಾ ರಂಗನಾಥ್ – Kannada News | Ashika Ranganath to attend Rashmika Mandanna Vijay Deverakonda Marriage

ಖ್ಯಾತ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಜೊತೆ ಅವರು ಸಪ್ತಪದಿ ತುಳಿಯಲಿದ್ದಾರೆ. ಈ ಹೈ-ಪ್ರೊಫೈಲ್ ಮದುವೆಗೆ ಯಾರೆಲ್ಲ ಬರಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ಇದೆ. ಮೂಲಗಳ ಪ್ರಕಾರ ಕೇವಲ 100 ಮಂದಿಗೆ ಮಾತ್ರ ಆಹ್ವಾನ ನೀಡಲಾಗಿದೆ. ವಿಶೇಷ ಏನೆಂದರೆ, ಕನ್ನಡದ ನಟಿ ಆಶಿಕಾ ರಂಗನಾಥ್ (Ashika Ranganath) ಅವರಿಗೆ ಆಹ್ವಾನ ಬಂದಿದೆ. ಈಗಾಗಲೇ ಅವರು ಮದುವೆಗೆ ತೆರಳಿದ್ದಾರೆ. ಫೆಬ್ರವರಿ 26ರಂದು ಉದಯಪುರದಲ್ಲಿ ರಶ್ಮಿಕಾ ಮಂದಣ್ಣ ಮದುವೆ ನಡೆಯಲಿದೆ.

ರಶ್ಮಿಕಾ ಮಂದಣ್ಣ ಅವರು ಚಿತ್ರರಂಗಕ್ಕೆ ಕಾಲಿಟ್ಟ ದಿನಗಳಿಂದಲೂ ಆಶಿಕಾ ರಂಗನಾಥ್ ಜೊತೆ ಸ್ನೇಹ ಹೊಂದಿದ್ದಾರೆ. ಅಲ್ಲದೇ, ಕನ್ನಡದಲ್ಲಿ ಮಿಂಚಿದ ಬಳಿಕ ಈ ಇಬ್ಬರೂ ಕೂಡ ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಆತ್ಮೀಯ ಗೆಳತಿಯನ್ನು ರಶ್ಮಿಕಾ ಮಂದಣ್ಣ ಅವರು ಆಹ್ವಾನಿಸಿದ್ದಾರೆ. ಹಾಗಾಗಿ ಆಶಿಕಾ ಈಗಾಗಲೇ ಉದಯಪುರ ತಲುಪಿದ್ದಾರೆ.

ರಾಜಸ್ಥಾನದ ಉದಯಪುರದಲ್ಲಿ ಇರುವ ಖಾಸಗಿ ಹೋಟೆಲ್​​ನಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಮದುವೆ ನಡೆಯಲಿದೆ. ಇವರಿಬ್ಬರು ಪ್ಯಾನ್ ಇಂಡಿಯಾ ಸ್ಟಾರ್​ಗಳು. ಹಾಗಾಗಿ ಎಲ್ಲ ಭಾಷೆಯ ಚಿತ್ರರಂಗದಲ್ಲೂ ಅವರಿಗೆ ಸ್ನೇಹಿತರಿದ್ದಾರೆ. ಆದರೂ ಕೂಡ ಆಯ್ದ ಕೆಲವು ವ್ಯಕ್ತಿಗಳಿಗೆ ಮಾತ್ರ ಮದುವೆಯ ಆಮಂತ್ರಣವನ್ನು ನೀಡಲಾಗಿದೆ.

ಕನ್ನಡ ಚಿತ್ರರಂಗದ ಹಲವರು ಜೊತೆ ರಶ್ಮಿಕಾ ಮಂದಣ್ಣ ಕೆಲಸ ಮಾಡಿದ್ದಾರೆ. ‘ಕಿರಿಕ್ ಪಾರ್ಟಿ’, ‘ಅಂಜನಿಪುತ್ರ’, ‘ಚಮಕ್’, ‘ಪೊಗರು’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಹಾಗಾಗಿ ಕನ್ನಡ ಚಿತ್ರರಂಗದ ಯಾವೆಲ್ಲ ಸೆಲೆಬ್ರಿಟಿಗಳಿಗೆ ಅವರು ಆಹ್ವಾನ ನೀಡಬಹುದು ಎಂಬ ಕೌತುಕ ಅಭಿಮಾನಿಗಳಿಗೆ ಇತ್ತು. ಸದ್ಯಕ್ಕೆ ಆಶಿಕಾ ರಂಗನಾಥ್ ಮಾತ್ರ ಈ ಮದುವೆಗೆ ಹಾಜರಿ ಹಾಕುತ್ತಾರೆ ಎಂಬುದು ಗೊತ್ತಾಗಿದೆ.

ಇದನ್ನೂ ಓದಿ: ರಶ್ಮಿಕಾ, ವಿಜಯ್ ಮದುವೆಗೆ 100 ಮಂದಿಗೆ ಆಹ್ವಾನ: ಅತಿಥಿಗಳಿಗೆ ಜಪಾನೀಸ್ ಖಾದ್ಯ

ರಶ್ಮಿಕಾ ಮಂದಣ್ಣ ಮದುವೆಗೆ ಅಲ್ಲು ಅರ್ಜುನ್, ಸುಕುಮಾರ್, ರಣಬೀರ್ ಕಪೂರ್ ಮುಂತಾದವರು ಹಾಜರಿ ಹಾಕುವ ನಿರೀಕ್ಷೆ ಇದೆ. ನಿರ್ದೇಶಕ ತರುಣ್ ಭಾಸ್ಕರ್, ರಾಹುಲ್ ರವೀಂದ್ರನ್, ಇಶಾ ರೆಬ್ಬಾ, ಆಶಿಕಾ ರಂಗನಾಥ್ ಅವರು ಈಗಾಗಲೇ ಉದಯಪುರವನ್ನು ತಲುಪಿದ್ದಾರೆ. ಅವರ ಫೋಟೋಗಳು ವೈರಲ್ ಆಗುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

PAK vs ENG: ಸೆಮಿಫೈನಲ್​ಗೇರಿದ ಇಂಗ್ಲೆಂಡ್; ಟೂರ್ನಿಯಿಂದ ಹೊರಬಿದ್ದ ಪಾಕಿಸ್ತಾನ – Kannada News | Pakistan Eliminated: England Enters Cricket World Cup Semi Finals with Decisive Win

ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಸೂಪರ್ 8 ಸುತ್ತಿನ ಪಂದ್ಯವನ್ನು 2 ವಿಕೆಟ್​ಗಳಿಂದ ಗೆದ್ದುಕೊಂಡ ಇಂಗ್ಲೆಂಡ್ ಈ ಸುತ್ತಿನಲ್ಲಿ ಸತತ ಎರಡನೇ ಗೆಲುವು ದಾಖಲಿಸುವ ಮೂಲಕ ಟೂರ್ನಿಯ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಇತ್ತ ಇಂಗ್ಲೆಂಡ್ ವಿರುದ್ಧ ಸೋತ ಪಾಕಿಸ್ತಾನ ಟೂರ್ನಿಯಿಂದ ಭಾಗಶಃ ಹೊರಬಿದ್ದಿದೆ. ಪ್ರಸ್ತುತ ಖಾತೆಯಲ್ಲಿ ಏಕೈಕ ಅಂಕ ಹೊಂದಿರುವ ಪಾಕಿಸ್ತಾನ ಸೆಮಿಫೈನಲ್​ಗೇರಬೇಕೆಂದರೆ ಪವಾಡವೇ ನಡೆಯಬೇಕಿದೆ. ಆ ಪವಾಡ ನಡೆಯುವುದು ಅಸಾಧ್ಯವಾಗಿರುವುದರಿಂದ ಪಾಕ್ ತಂಡ ಸೂಪರ್ 8 ಸುತ್ತಿನಲ್ಲೇ ತನ್ನ ವಿಶ್ವಕಪ್ ಪ್ರಯಾಣವನ್ನು ಮುಗಿಸಬೇಕಾಗಿದೆ. ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ 165 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 20ನೇ ಓವರ್​ನಲ್ಲಿ ಗೆಲುವು ದಾಖಲಿಸಿ ಸೆಮಿಫೈನಲ್​ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿತು.

Published On – 10:30 pm, Tue, 24 February 26

Source link

5 ವರ್ಷದಲ್ಲಿ ನಕಲಿ ತುಪ್ಪದಿಂದ ತಯಾರಿಸಿದ 20 ಕೋಟಿ ತಿರುಪತಿ ಲಡ್ಡು ವಿತರಣೆ; ಸಿಎಂ ಚಂದ್ರಬಾಬು ನಾಯ್ಡು ಮಾಹಿತಿ – Kannada News | 20 Crore Tirupati Laddus Made With Fake Ghee Over 5 Years cm Chandrababu Naidu says

ಅಮರಾವತಿ, ಫೆಬ್ರವರಿ 24: ವೈಎಸ್‌ಆರ್‌ಸಿಪಿ ಸರ್ಕಾರದ ಆಡಳಿತದ ಅವಧಿಯಲ್ಲಿ 20 ಕೋಟಿಗೂ ಹೆಚ್ಚು ತಿರುಪತಿ ಲಡ್ಡುಗಳನ್ನು (Tirupati Laddu) ಕಲಬೆರಕೆ ತುಪ್ಪದಿಂದ ತಯಾರಿಸಿ ಮಾರಾಟ ಮಾಡಲಾಗಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ. 2019 ಮತ್ತು 2024ರ ನಡುವೆ ತಿರುಮಲ ತಿರುಪತಿ ದೇವಸ್ಥಾನಕ್ಕೆ (ಟಿಟಿಡಿ) 59.71 ಲಕ್ಷ ಲೀಟರ್ ಕಲಬೆರಕೆ ತುಪ್ಪವನ್ನು ಪೂರೈಕೆ ಮಾಡಲಾಗಿದೆ. ಅದಕ್ಕಾಗಿ 234 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.

ತಿರುಪತಿ ಲಡ್ಡು ಕಲಬೆರಕೆ ಕುರಿತು ರಾಜ್ಯ ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ಸಿಎಂ ಚಂದ್ರಬಾಬು ನಾಯ್ಡು, 20.01 ಕೋಟಿ ಲಡ್ಡುಗಳನ್ನು ಕಲಬೆರಕೆ ತುಪ್ಪದಿಂದ ತಯಾರಿಸಿ ಭಕ್ತರಿಗೆ ಮಾರಾಟ ಮಾಡಲಾಗಿದೆ. ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಮತ್ತು ಗುಣಮಟ್ಟವನ್ನು ಪರೀಕ್ಷಿಸಲು ಪ್ರಯೋಗಾಲಯಗಳನ್ನು ಬೈಪಾಸ್ ಮಾಡುವ ಮೂಲಕ ಕಲಬೆರಕೆ ತುಪ್ಪವನ್ನು ಉತ್ಪಾದಿಸಲು ಮತ್ತು ಟಿಟಿಡಿಗೆ ಪೂರೈಸಲು ಸಿಂಡಿಕೇಟ್ ರಚಿಸಲಾಗಿದೆ ಎಂದು ಅವರು ಆರೋಪಿಸಿದರು.

ಇದನ್ನೂ ಓದಿ: ತಿರುಪತಿ ಲಡ್ಡುವಿನ ಕಲಬೆರಕೆ ಆಗಿದೆ ಎಂಬುದಕ್ಕೆ ಸಾಕ್ಷಿ ನೀಡಿದ ಎಸ್‌ಐಟಿ! ನಾಲ್ವರ ಬಂಧನ

ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ತುಪ್ಪ ಕಲಬೆರಕೆ ಕುರಿತು ನೀಡಲಾದ ಎನ್‌ಡಿಡಿಬಿ ವರದಿಯನ್ನು ಉಲ್ಲೇಖಿಸಿ ಅವರು ಸ್ಪಷ್ಟಪಡಿಸಿದರು. ಈ ವಿಷಯ ಸರ್ಕಾರದ ಗಮನಕ್ಕೆ ಬಂದ ನಂತರ, ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ನಿರ್ಧರಿಸಲಾಯಿತು. ಇದನ್ನೂ ಅವರು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹೋದರು. ಇದರಲ್ಲಿ ಯಾವುದೇ ರಾಜಕೀಯ ಭಾಗವಹಿಸುವಿಕೆ ಇರಬಾರದು, ಎಸ್‌ಐಟಿ ರಚಿಸಿ ತನಿಖೆ ನಡೆಸಬೇಕು ಎಂದು ನ್ಯಾಯಾಲಯ ಹೇಳಿದೆ ಎಂದು ಸಿಎಂ ಚಂದ್ರಬಾಬು ನಾಯ್ಡು ಹೇಳಿದರು.

ಎಸ್‌ಐಟಿ ವರದಿಯ ಪ್ರಕಾರ ಕ್ರಮ ಕೈಗೊಳ್ಳಲು ಸರ್ಕಾರ ಏಕವ್ಯಕ್ತಿ ಸಮಿತಿಯನ್ನು ರಚಿಸಿದೆ. ಏಕಸದಸ್ಯ ಸಮಿತಿಯ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಇದನ್ನೂ ಓದಿ: ತಿರುಪತಿ ಲಡ್ಡು ಇತಿಹಾಸ ಮತ್ತು ಉತ್ಪಾದನೆ: ಪವಿತ್ರ ಪ್ರಸಾದ ಕುರಿತು ಕುತೂಹಲಕಾರಿ ಸಂಗತಿಗಳು ಇಲ್ಲಿವೆ

2022ರಲ್ಲಿ ತುಪ್ಪ ಕಲಬೆರಕೆಯ ಕುರಿತು ಸಿಎಫ್‌ಟಿಆರ್‌ಐ ತನ್ನ ವರದಿಯನ್ನು ನೀಡಿದ್ದರೂ, ಆಗಿನ ಟಿಟಿಡಿ ಅಧ್ಯಕ್ಷರು ಅದನ್ನು ಒಪ್ಪಿರಲಿಲ್ಲ. ನಿಯಮಗಳನ್ನು ಗಾಳಿಗೆ ತೂರಿ ಅರ್ಹತೆ ಇಲ್ಲದ ಕಂಪನಿಗಳ ಜೊತೆ ತುಪ್ಪ ಪೂರೈಕೆ ಒಪ್ಪಂದಗಳನ್ನು ಮಾಡಿಕೊಳ್ಳಲಾಯಿತು. ಟಿಟಿಡಿ ಅಧ್ಯಕ್ಷ ಸುಬ್ಬಾರೆಡ್ಡಿ ಅವರ ಆಪ್ತ ಸಹಾಯಕ ಚಿನ್ನಪ್ಪಣ್ಣ 4.5 ಕೋಟಿ ರೂ. ಲಂಚ ಪಡೆದಿದ್ದಾರೆ. ಕಲಬೆರಕೆ ತುಪ್ಪ ತಯಾರಿಸಲು ವಿವಿಧ ರೀತಿಯ ರಾಸಾಯನಿಕಗಳನ್ನು ಬಳಸಲಾಗುತ್ತಿತ್ತು ಎಂದು ಕಂಡುಬಂದಿದೆ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೆಟ್ಟ ವಿಮರ್ಶೆಗೆ ತಿರುಗೇಟು: ಪ್ರಶಸ್ತಿ ತಿರಸ್ಕರಿಸಿ ಮುಖಭಂಗ ಮಾಡಿದ ‘ಧುರಂಧರ್’ ಚಿತ್ರತಂಡ – Kannada News | Ranveer Singh starrer Dhurandhar team rejects THI award after its bad review

‘ಧುರಂಧರ್’ (Dhurandhar) ಸಿನಿಮಾ 2025ರ ವರ್ಷದ ಅತಿದೊಡ್ಡ ಬ್ಲಾಕ್ ಬಸ್ಟರ್ ಎನಿಸಿಕೊಂಡಿತು. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಈ ಸಿನಿಮಾ ಕೂಡ ಒಂದಾಗಿದೆ. ಇದೀಗ ಪ್ರಶಸ್ತಿ ಪ್ರದಾನ ಸಮಾರಂಭವೊಂದರ ಕಾರಣದಿಂದಾಗಿ ‘ಧುರಂಧರ್’ ಸಿನಿಮಾ ಮತ್ತೆ ಭಾರೀ ಸುದ್ದಿಯಲ್ಲಿದೆ. ಇತ್ತೀಚೆಗಷ್ಟೇ ನಡೆದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಯೊಂದರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಿತ್ರತಂಡ ಗೈರಾಗುವ ಮೂಲಕ ಎಲ್ಲರ ಗಮನ ಸೆಳೆದಿದೆ.

ಸಿನಿಮಾ ಪತ್ರಿಕೋದ್ಯಮದಲ್ಲಿ ಪ್ರಮುಖ ಮಾಧ್ಯಮ ಸಂಸ್ಥೆ ಎನಿಸಿಕೊಂಡಿರುವ ‘ಹಾಲಿವುಡ್ ರಿಪೋರ್ಟರ್ ಇಂಡಿಯಾ’ ಆಯೋಜಿಸಿದ್ದ ಇತ್ತೀಚಿನ ಪ್ರಶಸ್ತಿ ಸಮಾರಂಭದಲ್ಲಿ ‘ಧುರಂಧರ್’ ಚಿತ್ರಕ್ಕೆ ಪ್ರಶಸ್ತಿ ಘೋಷಿಸಲಾಗಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಚಿತ್ರ ಮಾಡಿದ ಅದ್ಭುತ ಸಾಧನೆಗಾಗಿ ಈ ಗೌರವವನ್ನು ನೀಡಲಾಗಿತ್ತು. ಆದರೆ, ಅಚ್ಚರಿಯೆಂಬಂತೆ ಚಿತ್ರತಂಡದ ಯಾವೊಬ್ಬ ಸದಸ್ಯರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ ಮತ್ತು ಪ್ರಶಸ್ತಿಯನ್ನು ಸ್ವೀಕರಿಸಲು ವೇದಿಕೆ ಏರಲಿಲ್ಲ!

ಚಿತ್ರತಂಡದ ಗೈರಿಗೆ ಕಾರಣವೇನು? ಚಿತ್ರತಂಡದ ಈ ನಡೆಯ ಹಿಂದೆ ಅಚ್ಚರಿಯ ಹಿನ್ನೆಲೆಯೊಂದಿದೆ. ಚಿತ್ರ ಬಿಡುಗಡೆಯಾದ ಸಮಯದಲ್ಲಿ ‘ಹಾಲಿವುಡ್ ರಿಪೋರ್ಟರ್’ನ ಪ್ರಮುಖ ವಿಮರ್ಶಕಿ ಅನುಪಮಾ ಚೋಪ್ರಾ ಅವರು ಈ ಚಿತ್ರದ ಬಗ್ಗೆ ವಿವಾದಾತ್ಮಕ ವಿಮರ್ಶೆ ಮಾಡಿದ್ದರು. ‘ಧುರಂಧರ್ ಚಿತ್ರವು ಉದ್ದೇಶಪೂರ್ವಕವಾಗಿ ಪಾಕಿಸ್ತಾನ ವಿರೋಧಿ ನಿರೂಪಣೆಯನ್ನು ಹೊಂದಿದೆ’ ಎಂದು ಅವರು ಟೀಕಿಸಿದ್ದರು.

ವಿಮರ್ಶಕಿಯ ಈ ಮಾತುಗಳು ಚಿತ್ರತಂಡದ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೀಗ, ತಮ್ಮ ಸಿನಿಮಾವನ್ನ ಟೀಕಿಸಿದ ಅದೇ ಮಾಧ್ಯಮ ಸಂಸ್ಥೆ ನೀಡಿದ ಪ್ರಶಸ್ತಿಯನ್ನು ಬಹಿಷ್ಕರಿಸುವ ಮೂಲಕ ‘ಧುರಂಧರ್’ ತಂಡವು ಅಂದಿನ ವಿಮರ್ಶೆಗೆ ತಕ್ಕ ತಿರುಗೇಟು ನೀಡಿದೆ. ಪ್ರಶಸ್ತಿ ಸಮಾರಂಭವನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿಕೊಳ್ಳುವ ಮೂಲಕ ಚಿತ್ರತಂಡವು ಮಾಧ್ಯಮ ಸಂಸ್ಥೆಗೆ ತಕ್ಕ ಪ್ರತ್ಯುತ್ತರ ನೀಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಧುರಂಧರ್ 2 Vs ಟಾಕ್ಸಿಕ್: 10 ಕೋಟಿ ಮಂದಿ ಚಿತ್ರಮಂದಿರಕ್ಕೆ ಬರುವ ನಿರೀಕ್ಷೆ

‘ಧುರಂಧರ್’ ಚಿತ್ರದ ಭಾರಿ ಯಶಸ್ಸಿನ ಬಳಿಕ ಸೀಕ್ವೆಲ್ ಮೇಲೆ ನಿರೀಕ್ಷೆ ಹೆಚ್ಚಿದೆ. ಮಾರ್ಚ್ 19ರಂದು ‘ಧುರಂಧರ್ 2’ ಸಿನಿಮಾ ರಿಲೀಸ್ ಆಗಲಿದೆ. ಹಾಗಾದರೆ ‘ಧುರಂಧರ್ 2’ ಸಿನಿಮಾಗೆ ‘ಹಾಲಿವುಡ್ ರಿಪೋರ್ಟರ್ ಇಂಡಿಯಾ’ ಯಾವ ರೀತಿ ವಿಮರ್ಶೆ ನೀಡಲಿದೆ ಎಂಬ ಕುತೂಹಲ ಸಿನಿಪ್ರಿಯರಿಗೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಾಲ ತೀರಿಸಲು ಕೆನರಾ, HDFC ಎಟಿಎಂನಲ್ಲಿ ಕಳ್ಳತನಕ್ಕೆ ಯತ್ನ: ಸೈರನ್ ಸದ್ದಿಗೆ ಬೆದರಿ ಓಡಿದ್ದ ಕಳ್ಳ ಈಗ ಪೊಲೀಸ್ ವಶಕ್ಕೆ! – Kannada News | Bengaluru Crime: Hasan Saab Busted in Seshadripuram for Failed Bank ATM Heist

ಬೆಂಗಳೂರು, ಫೆ.24: ಶನಿವಾರ ಬೆಳಗಿನ ಜಾವ ಶೇಷಾದ್ರಿಪುರಂನಲ್ಲಿರುವ ಕೆನರಾ ಬ್ಯಾಂಕ್ ಮತ್ತು ಕಬ್ಬನ್ ಪೇಟೆಯ ಹೆಚ್.ಡಿ.ಎಫ್.ಸಿ (HDFC) ಎಟಿಎಂನಲ್ಲಿ ಕಳ್ಳತನಕ್ಕೆ ಯತ್ನಸಿದ್ದ ಆರೋಪಿಯನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಶೇಷಾದ್ರಿಪುರಂ ನಿವಾಸಿ ಹಸನ್ ಸಾಬ್ ಎಂದು ಗುರುತಿಸಲಾಗಿದೆ. ಶನಿವಾರ ಬೆಳಗಿನ ಜಾವ ಸುಮಾರು 3 ಗಂಟೆ ಸುಮಾರಿಗೆ ಹಸನ್ ಸಾಬ್, ಶೇಷಾದ್ರಿಪುರಂನ ಕೆನರಾ ಬ್ಯಾಂಕ್‌ನ ಗ್ರಿಲ್ ಕಟ್ ಮಾಡಿ ಒಳಗೆ ನುಗ್ಗಿದ್ದನು. ಆದರೆ, ಬ್ಯಾಂಕ್‌ನಲ್ಲಿದ್ದ ಸೆಕ್ಯೂರಿಟಿ ಸೈರನ್ ಮೊಳಗಿದೆ ಗಾಬರಿಗೊಂಡು ಏನನ್ನೂ ಕಡಿಯಲಾಗದೆ ಅಲ್ಲಿಂದ ಓಡಿಹೋಗಿದ್ದನು.

ಇದರ ನಂತರ ಆರೋಪಿಯು ಕಬ್ಬನ್‌ಪೇಟೆಯಲ್ಲಿರುವ ಹೆಚ್.ಡಿ.ಎಫ್.ಸಿ ಬ್ಯಾಂಕ್ ಎಟಿಎಂನಲ್ಲೂ ಕಳ್ಳತನ ಮಾಡಿದ್ದಾನೆ ತನಿಖೆಯಿಂದ ತನಿಖೆಗೆ ಯತ್ನಿಸಿದ್ದ. ಸಿಸಿಟಿವಿ ದೃಶ್ಯಾವಳಿ ಮತ್ತು ತಾಂತ್ರಿಕ ದಾಖಲೆಗಳ ಆಧಾರದ ಮೇಲೆ ಶೇಷಾದ್ರಿಪುರಂ ಪೊಲೀಸರು ಹಸನ್ ಸಾಬ್ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ, “ತನ್ನ ಮೇಲಿರುವ ಸಾಲವನ್ನು ತೀರಿಸಲು ಬೇರೆ ದಾರಿ ಕಾಣದೆ ಈ ಕಳ್ಳತನಕ್ಕೆ ಕೈ ಹಾಕಿದ್ದೆ” ಎಂದು ಆರೋಪಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: ಬೆಡ್​​​​​ ರೂಮ್​​ನಲ್ಲಿ ಹೆಂಡತಿ ಜತೆ ಮತ್ತೊಬ್ಬ ಗಂಡಸನ್ನು ನೋಡಿ ಪ್ರಜ್ಞೆ ತಪ್ಪಿದ ಪತಿ: ಕ್ಷಮಿಸು ಎಂದು ಗೋಳಾಡಿದ ಪತ್ನಿ

ಸದ್ಯ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ, ಈ ಹಿಂದೆ ಬೇರೆ ಯಾವುದಾದರೂ ಕೃತ್ಯಗಳಲ್ಲಿ ಭಾಗವಹಿಸಿದ್ದಾನೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

ವರದಿ: ಪ್ರದೀಪ್​​​​​ ಟಿವಿ9 ಬೆಂಗಳೂರು

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ranji Trophy Final: ಕರ್ನಾಟಕ ವಿರುದ್ಧ ಭರ್ಜರಿ ಶತಕ ಸಿಡಿಸಿದ ಶುಭಂ ಪುಂಡೀರ್ – Kannada News | Shubham Pundir’s Historic Ranji Final Century Powers J&K vs Karnataka in Hubballi

ಕರ್ನಾಟಕದ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್‌ನಲ್ಲಿ ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಜಮ್ಮು ಮತ್ತು ಕಾಶ್ಮೀರ ಪರ 27 ವರ್ಷದ ಶುಭಂ ಪುಂಡೀರ್ ಅಜೇಯ ಶತಕ ಬಾರಿಸಿ ತಂಡವನ್ನು ಸುಭದ್ರ ಸ್ಥಿತಿಗೆ ಕೊಂಡೊಯ್ದಿದ್ದಾರೆ. ಶುಭಂ ಪುಂಡೀರ್ 186 ನೇ ಎಸೆತದಲ್ಲಿ ಬೃಹತ್ ಸಿಕ್ಸರ್‌ ಬಾರಿಸುವ ಮೂಲಕ ತಮ್ಮ ಶತಕವನ್ನು ಪೂರ್ಣಗೊಳಿಸಿ ಇತಿಹಾಸ ನಿರ್ಮಿಸಿದರು. ಇದೀಗ ಶುಭಂ ರಣಜಿ ಟ್ರೋಫಿ ಫೈನಲ್‌ನಲ್ಲಿ ಶತಕ ಗಳಿಸಿದ ಜಮ್ಮು ಮತ್ತು ಕಾಶ್ಮೀರದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಶುಭಂ ಪುಂಡಿರ್ 186 ಎಸೆತಗಳಲ್ಲಿ 10 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿ ಶತಕ ಪೂರೈಸಿದರು. ಇದು ರಣಜಿ ಟ್ರೋಫಿ ನಾಕೌಟ್ ಪಂದ್ಯದಲ್ಲಿ ಅವರ ಮೊದಲ ಶತಕ ಮತ್ತು ಅವರ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ ಅವರ ನಾಲ್ಕನೇ ಶತಕವಾಗಿದೆ. ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್‌ನಲ್ಲಿ ಶುಭಂ ಪುಂಡಿರ್ ಅವರ ಬ್ಯಾಟ್ ಈ ಹಿಂದೆ ಮೌನವಾಗಿತ್ತು ಎಂಬುದನ್ನು ಗಮನಿಸಬೇಕಾದ ಸಂಗತಿ. ಆ ಎರಡು ಪಂದ್ಯಗಳ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಅವರು ಕೇವಲ 40 ರನ್‌ ಬಾರಿಸಿದ್ದರು. ಆದಾಗ್ಯೂ, ಫೈನಲ್‌ನಂತಹ ಭವ್ಯ ವೇದಿಕೆಯಲ್ಲಿ ಶತಕ ಗಳಿಸುವ ಮೂಲಕ, ಶುಭಂ ಪುಂಡಿರ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಪ್ರಸ್ತುತ ರಣಜಿ ಟ್ರೋಫಿ ಆವೃತ್ತಿಯಲ್ಲಿ ಇದು ಅವರ ಎರಡನೇ ಶತಕವಾಗಿದೆ.

ಶುಭಂ ಪುಂಡೀರ್ ಅವರ ಶತಕದಿಂದಾಗಿ, ಜಮ್ಮು ಮತ್ತು ಕಾಶ್ಮೀರ ತಂಡವು ಕರ್ನಾಟಕ ವಿರುದ್ಧದ ಫೈನಲ್‌ನಲ್ಲಿ ಉತ್ತಮ ಆರಂಭವನ್ನು ಪಡೆದುಕೊಂಡಿದೆ. ಮೊದಲ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ಗೆ 284 ರನ್ ಗಳಿಸಿದೆ. ಶುಭಂ ಪುಂಡೀರ್ ಮೊದಲ ದಿನ 117 ರನ್ ಗಳಿಸಿ ಅಜೇಯರಾಗಿ ಉಳಿದರೆ, ಅವರ ಜೊತೆಗೆ, ಜಮ್ಮು ಮತ್ತು ಕಾಶ್ಮೀರದ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಅಬ್ದುಲ್ ಸಮದ್ 52 ರನ್ ಗಳಿಸಿ ಅಜೇಯರಾಗಿದ್ದಾರೆ. ಆದ್ದರಿಂದ, ಜಮ್ಮು ಮತ್ತು ಕಾಶ್ಮೀರ ತಂಡವು ಎರಡನೇ ದಿನವೂ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಡ್​​​​​ ರೂಮ್​​ನಲ್ಲಿ ಹೆಂಡತಿ ಜತೆ ಮತ್ತೊಬ್ಬ ಗಂಡಸನ್ನು ನೋಡಿ ಪ್ರಜ್ಞೆ ತಪ್ಪಿದ ಪತಿ: ಕ್ಷಮಿಸು ಎಂದು ಗೋಳಾಡಿದ ಪತ್ನಿ – Kannada News | Viral Video: Man Faints Seeing Wife with Another; Emotional Trauma and Health Risks

ತನ್ನ ಪತ್ನಿ ಮತ್ತೊಬ್ಬ ವ್ಯಕ್ತಿಯೊಂದಿಗೆ ತನ್ನದೇ ಮನೆಯಲ್ಲಿ ಇರುವುದನ್ನು ಕಂಡು 37 ವರ್ಷದ ವ್ಯಕ್ತಿಯೊಬ್ಬರು ತೀವ್ರ ಆಘಾತದಿಂದ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ ಎಂದು ಹೇಳಲಾಗಿರುವ ವಿಡಿಯೋವೊಂದು ಎಕ್ಸ್​​​​ ಖಾತೆಯಲ್ಲಿ ವೈರಲ್​ ಆಗಿದೆ. ಪತಿಯು ಕೆಲಸ ಮುಗಿಸಿ ಮನೆಗೆ ಮರಳಿದಾಗ ತನ್ನ 25 ವರ್ಷದ ಪತ್ನಿ ಬೇರೊಬ್ಬ ವ್ಯಕ್ತಿಯೊಂದಿಗೆ ಇರುವುದನ್ನು ಕಂಡಿದ್ದಾನೆ ಎಂದು ಹೇಳಲಾಗಿದೆ. ಅತಿಯಾದ ಮಾನಸಿಕ ಒತ್ತಡ ಮತ್ತು ಭಾವನಾತ್ಮಕ ನೋವಿನಿಂದಾಗಿ ಆತನ ರಕ್ತದೊತ್ತಡದಲ್ಲಿ ಏರುಪೇರಾಗಿ, ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಗಂಡ ಬಿದ್ದಿರುವುದನ್ನು ಕಂಡು ಹೆಂಡತಿ ನನ್ನನ್ನು ಕ್ಷಮಿಸು ಎಂದು ಗೋಳಾಡುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಇನ್ನು ಈ ಘಟನೆ ಎಲ್ಲಿ ನಡೆದಿದೆ ಎಂದು ತಿಳಿದಿಲ್ಲ. ಭಾಷೆಯನ್ನು ನೋಡಿದಾಗ ಇದು ಉತ್ತರ ಭಾರತದ ಘಟನೆ ಎಂದು ತಿಳಿಯುತ್ತದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link