All posts by nagaraj11081993

Ranji Trophy Final: ಕರ್ನಾಟಕವನ್ನು ದಿನವಿಡೀ ಕಾಡಿದ ಜಮ್ಮು ಕಾಶ್ಮೀರ ಬ್ಯಾಟರ್ಸ್ – Kannada News | Ranji Final Day 1: J&K Dominates Karnataka in Hubballi with Pundir’s Century

ಕರ್ನಾಟಕದ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್‌ನಲ್ಲಿ ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಜಮ್ಮು ಮತ್ತು ಕಾಶ್ಮೀರ ತಂಡ ಮೊದಲ ದಿನದಾಟದಂತ್ಯಕ್ಕೆ ಕೇವಲ 2 ವಿಕೆಟ್ ಕಳೆದುಕೊಂಡು 284 ರನ್ ಕಲೆಹಾಕಿದೆ. ಇತ್ತ ಕರ್ನಾಟಕ ತಂಡ ಅನುಭವಿ ಬೌಲಿಂಗ್ ವಿಭಾಗವನ್ನೇ ಹೊಂದಿದ್ದರೂ ತನ್ನ ತವರು ನೆಲದಲ್ಲಿ ಎದುರಾಳಿ ತಂಡವನ್ನು ಕಟ್ಟಿಹಾಕುವಲ್ಲಿ ವಿಫಲವಾಗಿದೆ. ಇನ್ನು ಜಮ್ಮ ಮತ್ತು ಕಾಶ್ಮೀರ ತಂಡದ ಪರ ಅಜೇಯ ಶತಕ ಬಾರಿಸಿರುವ ಶುಭಂ ಪುಂಡೀರ್ 117 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಅವರ ಜೊತೆಗೆ ಅಬ್ದುಲ್ ಸಮದ್ ಕೂಡ 52 ರನ್ ಗಳಿಸಿ ಅಜೇಯರಾಗಿದ್ದಾರೆ. ಕರ್ನಾಟಕ ಪರ ವೇಗಿ ಪ್ರಸಿದ್ಧ್ ಕೃಷ್ಣ 2 ವಿಕೆಟ್ ಕಬಳಿಸಿದ್ದನ್ನು ಬಿಟ್ಟರೆ, ಉಳಿದವರು ವಿಕೆಟ್ ಬರ ಎದುರಿಸಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಜಮ್ಮು ಮತ್ತು ಕಾಶ್ಮೀರ ತಂಡದ ನಾಯಕ ಪರಾಸ್ ಡೋಗ್ರಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಅದರಂತೆ ಮೊದಲ ದಿನ 87 ಓವರ್‌ಗಳು ಬ್ಯಾಟಿಂಗ್ ಮಾಡಿದ ಜಮ್ಮು ಮತ್ತು ಕಾಶ್ಮೀರ 2 ವಿಕೆಟ್‌ಗಳ ನಷ್ಟಕ್ಕೆ 284 ರನ್ ಗಳಿಸಿತು. ಆದಾಗ್ಯೂ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡ 18 ರನ್‌ಗಳಾಸಿದ್ದಾಗ ತಂಡದ ಮೊದಲ ವಿಕೆಟ್ ಪತನವಾಯಿತು. ಕಮ್ರಾನ್ ಇಕ್ಬಾಲ್ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಜೊತೆಯಾದ ಶುಭಂ ಪುಂಡಿರ್ ಮತ್ತು ಯಾವರ್ ಹಸನ್ ಎರಡನೇ ವಿಕೆಟ್‌ಗೆ 139 ರನ್‌ಗಳ ಜೊತೆಯಾಟ ನೀಡಿದರು.

ಆದರೆ 88 ರನ್ ಬಾರಿಸಿದ್ದ ಯಾವರ್ ಹಸನ್ ವಿಕೆಟ್ ಪತನದೊಂದಿಗೆ ಈ ಜೊತೆಯಾಟ ಮುರಿದಿತ್ತು. ಆ ಬಳಿಕ ಬಂದ ನಾಯಕ ಪರಾಸ್ ಡೋಗ್ರಾ 9 ರನ್ ಗಳಿಸಿದ್ದಾಗ ಗಾಯಕ್ಕೆ ತುತ್ತಾಗಿ ನಿವೃತ್ತರಾದರು. ಆ ನಂತರ ತಂಡದ ಇನ್ನಿಂಗ್ಸ್ ನಿಭಾಯಿಸಿದ ಶುಭಂ ಪುಂಡೀರ್ ಮತ್ತು ಅಬ್ದುಲ್ ಸಮದ್ ತಂಡವನ್ನು 250 ರನ್​ಗಳ ಗಡಿ ದಾಟಿಸಿದರು. ಇಬ್ಬರೂ ಅಜೇಯ 105 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ದಿನದಾಟದಂತ್ಯಕ್ಕೆ ಶುಭಂ ಪುಂಡೀರ್ ಔಟಾಗದೆ 117 ಮತ್ತು ಅಬ್ದುಲ್ ಸಮದ್ ಔಟಾಗದೆ 52 ರನ್ ಗಳಿಸಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Published On – 6:01 pm, Tue, 24 February 26

Source link

‘iPhone ಬಾಯ್‌ಫ್ರೆಂಡ್ ಕೊಡಿಸಿದ್ದಾ’?: ಹುಡುಗಿಯರು ಸ್ವಂತ ಹಣದಲ್ಲಿ ಏನು ಖರೀದಿಸುವುದಿಲ್ವಾ? ಸಿಟ್ಟಾದ ಬೆಂಗಳೂರಿನ ಯುವತಿ – Kannada News | Societal Bias: Why Are Women’s Expensive Purchases Attributed to Men’s Wealth?

ಬೆಂಗಳೂರು, ಫೆ.24: ಈ ಹುಡುಗಿಯರು ಹೊಸ ಫೋನ್​, ಬಟ್ಟೆ, ಅಥವಾ ಯಾವುದೇ ವಸ್ತು ತೆಗೆದುಕೊಂಡರು ಯಾರೂ ಗಿಫ್ಟ್​​ ಕೊಟ್ಟದ್ದು ಎಂದು ಪ್ರಶ್ನೆಗಳು ಬರುತ್ತದೆ. ಆರ್ಥಿಕವಾಗಿ ಎಷ್ಟೇ ಸದೃಢರಾದರೂ, ಅವರ ದುಬಾರಿ ವಸ್ತುಗಳ ಖರೀದಿಯನ್ನು ಸಮಾಜವು ಇಂದಿಗೂ ಅವರ ಜೀವನದಲ್ಲಿರುವ ಪುರುಷನ ಯಶಸ್ಸಿಗೆ ಹೋಲಿಸುತ್ತಾರೆ. ಇದೀಗ ಮಹಿಳೆಯರು ಸ್ವಂತವಾಗಿ ಏನನ್ನು ಖರೀದಿ ಮಾಡುವುದಿಲ್ಲ ಎಂಬ ಪ್ರಶ್ನೆ ಎದ್ದಿದೆ. ಈ ಪ್ರಶ್ನೆಯನ್ನು ಮಾಡಿರುವುದು ಬೆಂಗಳೂರಿನ ಅನು ಎಂಬುವವರು. ಅನು ಅವರು ಇತ್ತೀಚೆಗೆ ತಮ್ಮ ಸ್ವಂತ ದುಡಿಮೆಯ ಹಣದಿಂದ ಹೊಸ iPhone ಒಂದನ್ನು ಖರೀದಿಸಿದ್ದರು. ಅದನ್ನು ನೋಡಿದ ಅವರ ಐದು ವರ್ಷಗಳ ಹಳೆಯ ಸ್ನೇಹಿತ, “ಸಖತ್ ಆಗಿದೆ ಗುರು, ನಿನ್ನ ಬಾಯ್‌ಫ್ರೆಂಡ್ ಕೊಡಿಸಿದ್ದಾ?” ಎಂದು ಕೇಳಿದ್ದಾನೆ.

ಗೆಳಯನ ಮಾತಿಗೆ ಸಿಟ್ಟಾದ ಅನು, ಅಲ್ಲ ನಿನಗೆ ಯಾಕೆ ನಾನು ಖರೀದಿ ಮಾಡಿರಬಹುದು ಎಂದು ಅನ್ನಿಸಿಲ್ಲ ಎಂದು ಕೇಳಿದ್ದಾರೆ. ಅದಕ್ಕೆ ಆ ಸ್ನೇಹಿತ, “ನಿನ್ನವನು ಶ್ರೀಮಂತನಿದ್ದಾನೆ, ನೀನು ಅವನನ್ನು ಆರಿಸಿಕೊಂಡಿದ್ದೇ ಅದಕ್ಕೆ ಅಲ್ವಾ?” ಎಂದು ಉಡಾಫೆಯಿಂದ ಉತ್ತರಿಸಿದ್ದಾನೆ. ಅನು ಅವರು ಹೇಳಿರುವ ಪ್ರಕಾರ, ಅವನಿಗೆ ಕೆಲಸ ಇಲ್ಲದಾಗ, ಹೋದ ಕಡೆಯಲ್ಲಾ ಇವರೇ ಬಿಲ್ ಪಾವತಿಸುತ್ತಿದ್ದರು. ಇಷ್ಟಾದರೂ ಆತ ಮಹಿಳೆಯ ಸ್ವಾವಲಂಬನೆಯನ್ನು ಒಪ್ಪದೆ, ಬಾಯ್‌ಫ್ರೆಂಡ್ ಶ್ರೀಮಂತಿಕೆ ಬಗ್ಗೆ ಮಾತನಾಡಿದ್ದು ಅನು ಅವರಿಗೆ ಬೇಸರ ಉಂಟು ಮಾಡಿದೆ.

ಇದನ್ನೂ ಓದಿ: ಬೆಂಗಳೂರು ಜೀವನ ಇಷ್ಟೊಂದು ದುಬಾರಿನಾ?; ತಿಂಗಳ ಖರ್ಚು 70 ಸಾವಿರ ರೂ., ಪಟ್ಟಿ ಬಿಚ್ಚಿಟ್ಟ ಯುವಕ

ಇಲ್ಲಿದೆ ವೈರಲ್​​ ಪೋಸ್ಟ್​;

ನಮ್ಮ ಸಾಧನೆಗಳ ಹಿಂದೆ ಒಬ್ಬ ಪುರುಷನಿದ್ದಾನೆ ಎಂದು ಬಿಂಬಿಸುವುದು ಯಾವಾಗ ನಿಲ್ಲುತ್ತದೆ? ಎಂದು ಪ್ರಶ್ನೆ ಮಾಡಿದ್ದಾರೆ. ಅನು ಅವರ ಈ ಪೋಸ್ಟ್ 45,000 ಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, ಇವರ ಈ ಪೋಸ್ಟ್​​ಗೆ ಮಿಶ್ರ ಪ್ರಕ್ರಿಯೆಗಳು ಬಂದಿದೆ. “ಮಹಿಳೆಯರು ಮನೆ, ಕಾರು ಕೊಂಡರೂ ಜನರು ಅದನ್ನು ಗಂಡ ಅಥವಾ ತಂದೆ ಕೊಡಿಸಿದ್ದು ಎಂದುಕೊಳ್ಳುತ್ತಾರೆ. ಈ ಪಿತೃಪ್ರಧಾನ ಮನಸ್ಥಿತಿ ಬದಲಾಗಬೇಕು” ಎಂದು ಮಹಿಳೆಯರು ಬೆಂಬಲ ಹೇಳುತ್ತಾರೆ ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ. “ಇತ್ತೀಚಿನ ದಿನಗಳಲ್ಲಿ ಅನೇಕ ಯುವತಿಯರು ದುಬಾರಿ ಉಡುಗೊರೆಗಳನ್ನು ನಿರೀಕ್ಷಿಸುತ್ತಾರೆ, ಹಾಗಾಗಿ ಸ್ನೇಹಿತ ಹಾಗೆ ಹೇಳಿರಬಹುದು” ಎಂದು ಮತ್ತೊಬ್ಬರು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪದೇ ಪದೇ ಹಸಿವಾಗುವುದು ಮಧುಮೇಹದ ಆರಂಭಿಕ ಲಕ್ಷಣವೇ? ಇಲ್ಲಿದೆ ತಜ್ಞರ ಉತ್ತರ – Kannada News | Early Warning Signs of Diabetes

ಊಟ ಮಾಡಿದ ಕೆಲವೇ ಗಂಟೆಗಳಲ್ಲಿ ಹಸಿವಾಗುವುದು ಅಥವಾ ಆಗಾಗ ಏನನ್ನಾದರೂ ತಿನ್ನಬೇಕೆಂಬ ಆಸೆಯಾಗುವುದು ಸಾಮಾನ್ಯವಲ್ಲ. ಇದು ದೇಹದಲ್ಲಿ ಇನ್ಸುಲಿನ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದರ ಸಂಕೇತವಾಗಿದೆ. ಹೌದು, ಇದು ಮಧುಮೇಹದ (Diabetes) ಸೂಚನೆಯೂ ಆಗಿರಬಹುದು. ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ​​ಪ್ರಕಾರ, ಆಗಾಗ ಹಸಿವಾಗುವುದು ದೇಹದಲ್ಲಿನ ಸಕ್ಕರೆ ಮಟ್ಟದಲ್ಲಿ ವ್ಯತ್ಯಾಸ ಉಂಟಾಗಿ ಇನ್ಸುಲಿನ್ ಕಾರ್ಯ ದುರ್ಬಲಗೊಂಡಿದೆ ಎಂಬುದರ ಸಂಕೇತವಾಗಿದೆ. ಅಂದರೆ ದೇಹದಲ್ಲಿರುವ ಇನ್ಸುಲಿನ್ ಹಾರ್ಮೋನ್, ರಕ್ತದಲ್ಲಿನ ಗ್ಲೂಕೋಸ್ ಅನ್ನು ಜೀವಕೋಶಗಳಿಗೆ ಸರಿಯಾಗಿ ತಲುಪಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ, ದೇಹಕ್ಕೆ ಸರಿಯಾದ ಶಕ್ತಿ ಸಿಗುವುದಿಲ್ಲ ಇದರಿಂದ ಮೆದುಳು ಪದೇ ಪದೇ ಹಸಿವನ್ನು ಸಂಕೇತಿಸುತ್ತದೆ. ವೈದ್ಯಕೀಯ ಪರಿಭಾಷೆಯಲ್ಲಿ, ಇದನ್ನು ಪಾಲಿಫೇಜಿಯಾ ಎಂದು ಕರೆಯಲಾಗುತ್ತದೆ. ಹಾಗಾದರೆ ಯಾವ ಯಾವ ಲಕ್ಷಣಗಳು ಮಧುಮೇಹದ ಎಚ್ಚರಿಕೆಯ ಸೂಚನೆಗಳಾಗಿರುತ್ತವೆ, ಈ ರೀತಿಯ ಸಮಸ್ಯೆಯನ್ನು ತಡೆಯಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ದೇಹದಲ್ಲಿ ಮಧುಮೇಹ ಆರಂಭವಾಗುವ ಮೊದಲು ಕೆಲವು ಲಕ್ಷಣಗಳು ಕಂಡುಬರುತ್ತವೆ. ಅನೇಕರು ಈ ಸಮಸ್ಯೆಯನ್ನು ಸಾಮಾನ್ಯವೆಂದು ನಿರ್ಲಕ್ಷಿಸುತ್ತಾರೆ. ಆದರೆ ಈ ರೀತಿ ಮಾಡುವುದು ಒಳ್ಳೆಯದಲ್ಲ, ಆರಂಭಿಕ ಹಂತದಲ್ಲಿದ್ದಾಗ ಆಹಾರದಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ಈ ರೀತಿಯ ಕಾಯಿಲೆಗಳನ್ನು ತಡೆಯಬಹುದು. ಇಲ್ಲವಾದಲ್ಲಿ ಮಧುಮೇಹ ನಿಮ್ಮ ಜೀವನವನ್ನೇ ಹಾಳು ಮಾಡುತ್ತದೆ. ಅದಕ್ಕೆ ಯಾವುದೇ ರೀತಿಯ ಚಿಕಿತ್ಸೆ ಇಲ್ಲದಿರುವುದರಿಂದ ನೀವು ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಅದರ ಹೊರತಾಗಿ ಅದರಿಂದ ಮುಕ್ತಿ ಪಡೆಯಲು ಸಾಧ್ಯವಾಗುವುದಿಲ್ಲ ಹಾಗಾಗಿ ಕೆಲವು ಲಕ್ಷಣಗಳನ್ನು ನಿರ್ಲಕ್ಷಿಸಬಾರದು.

ಮಧುಮೇಹ ಸೂಚಿಸುವ ಲಕ್ಷಣಗಳು:

  • ಹಸಿವು ಹೆಚ್ಚಾಗುವುದರ ಜೊತೆಗೆ ಬಾಯಾರಿಕೆ ಹೆಚ್ಚಾಗುತ್ತದೆ.
  • ಆಗಾಗ ಮೂತ್ರ ವಿಸರ್ಜನೆ.
  • ದೌರ್ಬಲ್ಯ.
  • ದೃಷ್ಟಿ ಮಂದವಾಗುವುದು.

ಇದನ್ನೂ ಓದಿ: ಹೈಬಿಪಿ, ಡಯಾಬಿಟಿಸ್ ಕಿಡ್ನಿಗೆ ಹಾನಿ ಮಾಡುತ್ತದೆಯೇ? ನೀವು ತಿಳಿಯಬೇಕಾದ ವಿಷಯಗಳಿವು!

ಯಾರಿಗೆ ಹೆಚ್ಚಿನ ಅಪಾಯವಿದೆ?

  • ಕುಟುಂಬದಲ್ಲಿ ಯಾರಿಗಾದರೂ ಮಧುಮೇಹವಿದ್ದರೆ
  • ಬಹಳಷ್ಟು ಸಿಹಿತಿಂಡಿಗಳನ್ನು ತಿನ್ನುವುದು
  • ಅಧಿಕ ತೂಕ ಇರುವುದು
  • ವ್ಯಾಯಾಮ ಮಾಡದಿರುವುದು
  • ಒಂದೇ ಸ್ಥಳದಲ್ಲಿ ದೀರ್ಘಕಾಲ ಕುಳಿತು ಕೆಲಸ ಮಾಡುವುದು

ತಡೆಯುವುದು ಹೇಗೆ?

  • ಆಹಾರದಲ್ಲಿ ಕಡಿಮೆ ಕೊಬ್ಬಿನಂಶ ಮತ್ತು ಹೆಚ್ಚು ಪ್ರೋಟೀನ್ ಸೇವಿಸಿ
  • ಪ್ರತಿದಿನ ಕನಿಷ್ಠ 15 ನಿಮಿಷ ವ್ಯಾಯಾಮ ಮಾಡಿ
  • ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಸೇವನೆ ಮಾಡಿ
  • ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ
  • ಸಕ್ಕರೆ ಮಟ್ಟವನ್ನು ಪರಿಶೀಲಿಸುತ್ತಿರಿ, ಹೆಚ್ಚಿದ್ದರೆ, ವೈದ್ಯರನ್ನು ಸಂಪರ್ಕಿಸಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಪ್ರಾಪ್ತೆ ಮೇಲೆ ಅತ್ಯಾಚಾರ ಕೇಸ್​​ನಲ್ಲಿ ಜೈಲು ಪಾಲಾಗಿದ್ದ ಮ್ಯೂಸಿಕ್ ಮೈಲಾರಿಗೆ ಬಿಗ್ ರಿಲೀಫ್ – Kannada News | Bagalkot Court Grants Bail to Singer music mailari In pocso case

ಬಾಗಲಕೋಟೆ, (ಫೆಬ್ರವರಿ 24): ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ  ಆರೋಪದ ಮೇಲೆ ಪೊಕ್ಸೋ ಪ್ರಕರಣದಲ್ಲಿ (pocso case) ಜೈಲು ಸೇರಿದ್ದ ಉತ್ತರ ಕರ್ನಾಟಕದ ಖ್ಯಾತ ಜನಪದ ಗಾಯಕ ಮ್ಯೂಸಿಕ್ ಮೈಲಾರಿಗೆ (Singer music mailari ) ಜಾಮೀನು ಸಿಕ್ಕಿದೆ. ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪಿ ಮ್ಯೂಸಿಕ್ ಮೈಲಾರಿಗೆ ಬಾಗಲಕೋಟೆ ಕೋರ್ಟ್​ ನ್ಯಾಯಾಧೀಶರಾದ ಪ್ರೀತಿ ಸಗರ ಜೋಷಿ ಅವರು ಕೆಲ ಷರತ್ತುಗಳನ್ನು ವಿಧಿಸಿ ಇಂದು (ಫೆಬ್ರವರಿ 24) ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ. ಒಂದು ಲಕ್ಷ ಶ್ಯುರಿಟಿ ಬಾಂಡ್,ಪ್ರಾಷಿಕ್ಯೂಷನ್‌ ಮೇಲೆ ಪ್ರಭಾವ ಬೀರಬಾರದು, ಇದೇ ತರಹದ ಅಪರಾಧ ಮತ್ತೆ‌ ಮಾಡಬಾರದು ಎನ್ನುವ ಷರತ್ತುಗಳನ್ನು ವಿಧಿಸಲಾಗಿದೆ. ಇದರೊಂದಿಗೆ ಕಳೆದ ಡಿಸೆಂಬರ್​​ನಿಂದ ಜೈಲು ಪಾಲಾಗಿದ್ದ ಮೈಲಾರಿಗೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ.

Source link

ಆದಾಯ ಕೊರತೆ ನೀಗಿಸಲು ಫ್ರೀಡಂ ಪಾರ್ಕ್ ಆವರಣ ಬಾಡಿಗೆ ನೀಡಲು ಮುಂದಾದ ಜಿಬಿಎ – Kannada News | GBA’s Plan to Commercially Rent Out Freedom Park Sparks Massive Opposition

ಬೆಂಗಳೂರು, ಫೆಬ್ರವರಿ 24: ಸಿಲಿಕಾನ್​​ ಸಿಟಿ ಬೆಂಗಳೂರಲ್ಲಿ ಪ್ರತಿಭಟನೆ ಅಂದ್ರೆ ಮೊದಲಿಗೆ ನೆನಪಾಗೋದೇ ಫ್ರೀಡಂ ಪಾರ್ಕ್​​. ರಾಜಕೀಯ ಪಕ್ಷಗಳಿಂದ ಹಿಡಿದು, ಸಂಘ ಸಂಸ್ಥೆಗಳು ಕೂಡ ಇದೇ ಜಾಗದಲ್ಲಿ ಪ್ರತಿಭಟನೆ ನಡೆಸುತ್ತವೆ. ಹೀಗಾಗಿ ಯಾವಾಗ ನೋಡಿದರೂ ಫ್ರೀಡಂ ಪಾರ್ಕ್​​ನಲ್ಲಿ ಒಂದಿಲ್ಲೊಂದು ಪ್ರೊಟೆಸ್ಟ್​​ ಇದ್ದೇ ಇರುತ್ತೆ. ಆದರೆ ಸದ್ಯದ ಮಾಹಿತಿಯ ಪ್ರಕಾರ ಇಡೀ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡೋದಕ್ಕೆ ಇರುವ ಏಕೈಕ ಈ ಜಾಗವನ್ನೂ ಹಣ ಸಂಪಾದನೆಗೆ ಬಳಕೆ ಮಾಡಿಕೊಳ್ಳಲು ತಯಾರಿ ನಡೆದಿದ್ದು, ಫ್ರೀಡಂ ಪಾರ್ಕ್​​ನ ಬಾಡಿಗೆ ನೀಡಲು ಜಿಬಿಎ ಮುಂದಾಗಿದೆ.

ಜಿಬಿಎ ಅಡಿಯ 5 ನಗರ ಪಾಲಿಕೆಗಳಿಗೆ ಆದಾಯ ಕೊರತೆ ನೀಗಿಸಲು ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದ್ದು, ಅದರಲ್ಲಿ ಇದೂ ಒಂದು ಎನ್ನಲಾಗಿದೆ. ಮಲ್ಟಿ ಲೆವೆಲ್ ಪಾರ್ಕಿಂಗ್ ನಿರ್ಮಾಣಕ್ಕೂ ಮೊದಲೇ ಈ ಭಾಗ ಪ್ರತಿಭಟನೆಗೆ ಮಾತ್ರ ಸೀಮಿತ ಮಾಡಬೇಕು ಎಂಬ ಒಪ್ಪಂದವಾಗಿತ್ತು. ಹೀಗಾಗಿ 10 ಸಾವಿರ ಮಂದಿ ಕೂರಬಹುದಾದ ಸಭಾಂಗಣವೂ ನಿರ್ಮಾಣವಾಗಿತ್ತು. ಆದರೀಗ ಇದೇ ಜಾಗವನ್ನು ವಾಣಿಜ್ಯ ಬಳಕೆಗೆ ನೀಡಲು ಜಿಬಿಎ ಮುಂದಾಗಿರೋದು ಪ್ರತಿಭಟನಾಕಾರರನ್ನು ಕೆರಳಿಸಿದೆ. ಈಗಾಗಲೇ ಫ್ರೀಡಂ ಪಾರ್ಕ್ ಆವರಣದಲ್ಲಿ ಪ್ರತಿಭಟನಾಕಾರರಿಗೆ ಕುಡಿಯುವ ನೀರು, ಶೌಚಾಲಯ ಸೇರಿ ಮೂಲಸೌಕರ್ಯಗಳಿಲ್ಲ. ಆದರೆ ಈ ಹೊಸ ಸಭಾಂಗಣ ಸುಸಜ್ಜಿತವಾಗಿದೆ. ಈಗ ಇದನ್ನೂ ದೂರ ಮಾಡಲು ಹೊರಟಿರುವ ಜಿಬಿಎ ನಡೆಗೆ ವ್ಯಾಪಕ ವಿರೋಧ ಕೇಳಿಬಂದಿದೆ.

ಇದನ್ನೂ ಓದಿ: ಬೆಂಗಳೂರು ಫ್ರೀಡಂ ಪಾರ್ಕ್ ಕ್ಲೋಸ್, ಹೋರಾಟಗಾರರ ಪರದಾಟ; ಕಾರಣ ಏನು ಗೊತ್ತೇ?

ಫ್ರೀಡಂ ಪಾರ್ಕ್ ಆವರಣದಲ್ಲಿನ ಪಾರ್ಕಿಂಗ್ ಮೇಲ್ಭಾಗದ ಜಾಗ ಬಾಡಿಗೆಗೆ ನೀಡಲು ಚಿಂತನೆ ನಡೆದಿದೆ. ಆದರೆ ಈಗಾಗಲೇ ಪ್ರತಿಭಟನೆ ಮಾಡಲು ಫ್ರೀಡಂ ಪಾರ್ಕ್ ಆವರಣದ ಕಿರಿದಾಗಿದ್ದು, ಹಲವು ಪ್ರತಿಭಟನೆಗಳ ವೇಳೆ ಸ್ಥಳಾವಕಾಶ ಕೊರತೆ ಉಂಟಾಗಿ ಪ್ರತಿಭಟನಾಕಾರರು ಪರದಾಟ ನಡೆಸಿದ ಉದಾಹರಣೆಗಳಿವೆ. ಹೀಗಿರುವಾಗ ಆದಾಯದ ಕೊರತೆ ನೆಪವೊಡ್ಡಿ ಪ್ರತಿಭಟನೆಗೆಂದೇ ಇರುವ ಜಾಗ ಬಾಡಿಗೆಗೆ ಕೊಡಲು ಹೊರಟ ಜಿಬಿಎ ನಿರ್ಧಾರದ ವಿರುದ್ಧ ಫ್ರೀಡಂ ಪಾರ್ಕ್ ಹೋರಾಟ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಪ್ರತಿಭಟನಾ ಸ್ಥಳವನ್ನು ವಾಣಿಜ್ಯ ಉದ್ದೇಶಕ್ಕೆ ಬಿಟ್ಟು ಕೊಡುವುದಕ್ಕೆ ನಾವು ಒಪ್ಪಲ್ಲ ಎಂದು ಸಮಿತಿ ಅಧ್ಯಕ್ಷ ಗಂಡಸಿ ಸದಾನಂದಸ್ವಾಮಿ ಹೇಳಿದ್ದಾರೆ.

ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:26 pm, Tue, 24 February 26

Source link

ಶುಭ ಮುಹೂರ್ತದಲ್ಲಿ ಸೇವಾ ತೀರ್ಥದಲ್ಲಿ ಮೊದಲ ಸಭೆ ನಡೆಸಿದ ಪ್ರಧಾನಿ ಮೋದಿ; ಈ ದಿನದ ವಿಶೇಷವೇನು? – Kannada News | Yad Bhadram Tanna A Suva first meeting of the Central Cabinet was held at the newly constructed Seva Tirtha

ನವದೆಹಲಿ, ಫೆಬ್ರವರಿ 24: ನರೇಂದ್ರ ಮೋದಿ ಸಂಪುಟದ ಮೊದಲ ಸಭೆಯು ಹೊಸ ಪ್ರಧಾನ ಮಂತ್ರಿ ಕಚೇರಿಯಾದ ಸೇವಾ ತೀರ್ಥದಲ್ಲಿ (Seva Teertha) ನಡೆಯಿತು. ಹಿಂದೂ ಪಂಚಾಂಗದ ಪ್ರಕಾರ ಇಂದು ಬಹಳ ವಿಶೇಷವಾದ ದಿನವೂ ಹೌದು. ಇಂದಿನ ಸಂಪುಟ ಸಭೆಯಲ್ಲಿ ಸೇವಾ ಸಂಕಲ್ಪ ನಿರ್ಣಯವನ್ನು ಅಂಗೀಕರಿಸಲಾಯಿತು. ಕೇರಳವನ್ನು ಕೇರಳಂ ಎಂದು ಮರುನಾಮಕರಣ ಮಾಡಲು ಅನುಮೋದನೆ ನೀಡಲಾಯಿತು. ಶ್ರೀನಗರದಲ್ಲಿನ ಸಮಗ್ರ ವಿಮಾನ ನಿಲ್ದಾಣ ಟರ್ಮಿನಲ್ ಯೋಜನೆಗೆ ಸಹ ಅನುಮೋದನೆ ನೀಡಲಾಯಿತು.

ಸೇವಾ ತೀರ್ಥದಲ್ಲಿ ನಡೆದ ಮೊದಲ ಸಭೆಯ ಕುರಿತು ಪ್ರಧಾನಿ ಮೋದಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, “ಇಂದು ಯುಗಾಬ್ದ 5127, ವಿಕ್ರಮ್ ಸಂವತ್ 2082, ಫಾಲ್ಗುಣ ಶುಕ್ಲ ಅಷ್ಟಮಿಯಂದು ಕೇಂದ್ರ ಸಂಪುಟದ ಮೊದಲ ಸಭೆಯನ್ನು ಹೊಸದಾಗಿ ನಿರ್ಮಿಸಲಾದ ಸೇವಾ ತೀರ್ಥದಲ್ಲಿ ನಡೆಸಲಾಯಿತು. ದೇಶಕ್ಕಾಗಿ ಅನೇಕ ಅಭೂತಪೂರ್ವ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ” ಎಂದು ಬರೆದಿದ್ದಾರೆ.

ಇದನ್ನೂ ಓದಿ: ಗುಲಾಮಗಿರಿಯನ್ನು ಮೆಟ್ಟಿ ಹೊಸ ಇತಿಹಾಸ ಸೃಷ್ಟಿಸಿದ್ದೇವೆ; ಸೇವಾ ತೀರ್ಥದಲ್ಲಿ ಪ್ರಧಾನಿ ಮೋದಿ ಮೊದಲ ಭಾಷಣ

“ಸ್ಥಳೀಯ ಚಿಂತನೆ ಆಧುನಿಕ ವಿನ್ಯಾಸ ಮತ್ತು 1.4 ಶತಕೋಟಿ ದೇಶವಾಸಿಗಳ ಅನಂತ ಸಾಮರ್ಥ್ಯದ ಅಡಿಪಾಯದ ಮೇಲೆ ನಿರ್ಮಿಸಲಾದ ಸೇವಾ ತೀರ್ಥವು ರಾಷ್ಟ್ರೀಯ ಸೇವೆಯ ಕರ್ತವ್ಯ ಆಧಾರಿತ ಯಾಗವನ್ನು ನಿರಂತರವಾಗಿ ಮುನ್ನಡೆಸುತ್ತದೆ ಎಂದು ಸಚಿವ ಸಂಪುಟ ನಿರ್ಧರಿಸಿದೆ. ಈ ರಾಷ್ಟ್ರೀಯ ಯಾಗದಲ್ಲಿ ನಮ್ಮ ಮಂತ್ರ: ಯದ್ ಭದ್ರಮ್ ತನ್ನ್ ಆ ಸುವಾ. ಶುಭ ಮತ್ತು ಪ್ರಯೋಜನಕಾರಿಯಾದ ಹೊಸದೆಲ್ಲವನ್ನೂ ನಾವು ನಿರಂತರವಾಗಿ ಸ್ವೀಕರಿಸುವಂತಾಗಲಿ ಎಂದು ಇದರ ಅರ್ಥ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:24 pm, Tue, 24 February 26

Source link

ಧಾರವಾಡದಲ್ಲಿ ಉದ್ಯೋಗಾಂಕ್ಷಿಗಳ ಹೋರಾಟ ಬೆನ್ನಲ್ಲೇ 56 ಸಾವಿರ ಹುದ್ದೆ ಭರ್ತಿಗೆ ಮುಂದಾದ ಸಿದ್ದರಾಮಯ್ಯ – Kannada News | CM Siddaramaiah will be Announce 56 thousand Jobs appointment This Budget Says Minister Santosh lad In Dharwad

ಧಾರವಾಡ (ಫೆಬ್ರವರಿ 24): ಕಳೆದ ಕೆಲವು ದಿನಗಳಿಂದ ಧಾರವಾಡದಲ್ಲಿ (Dharwad) ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಸರಣಿ ಪ್ರತಿಭಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಿದ್ದರಾಮಯ್ಯ (Siddaramaiah) ಸರ್ಕಾರ, ಅಭ್ಯರ್ಥಿಗಳಿಗೆ ದೊಡ್ಡ ಸಮಾಧಾನಕರ ಸುದ್ದಿಯೊಂದನ್ನು ನೀಡಿದ್ದಾರೆ. ಈ ಬಜೆಟ್​​ನಲ್ಲಿ 56 ಸಾವಿರ ಹುದ್ದೆ ಭರ್ತಿಗೆ ನಿರ್ಧರಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ (Santosh lad )ಮಾಹಿತಿ ನೀಡಿದ್ದಾರೆ.

ಇನ್ನು ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಸಂತೋಷ ಲಾಡ್ , ಇದೀಗ ಸಿಎಂ 56 ಸಾವಿರ ಹುದ್ದೆ ಭರ್ತಿಗೆ ನಿರ್ಧರಿಸಿದ್ದಾರೆ. ಬರವ ಬಜೆಟ್‌ನಲ್ಲಿ ಈ ಬಗ್ಗೆ ಹೇಳುತ್ತಾರೆ.ಬಿಜೆಪಿ ಅಧಿಕಾರದಲ್ಲಿದ್ದಾಗ ಎಷ್ಟು ಹುದ್ದೆ ಭರ್ತಿ ಮಾಡಿತ್ತು? ಅವರು ಒಂದೇ ಒಂದು ಹುದ್ದೆ ತುಂಬಿಲ್ಲ. ಆದರೆ ಅವರೇನು ಮಾಡಿದರು? ಬಿಜೆಪಿಯವರದ್ದು ಬರೀ ಇದೇ ನಾಟಕ. ಯುವಕರ ಮೂಲಕ ರಾಜಕೀಯ ಮಾಡುತ್ತಿದ್ದಾರೆ. ಈಗ ರಾಜ್ಯ ಸರಕಾರ ಹುದ್ದೆ ತುಂಬಿಕೊಳ್ಳುತ್ತೆ ಎನ್ನುವುದು ಗೊತ್ತಾಗಿದೆ. ಅದಕ್ಕಾಗಿ ಇದೀಗ ಹೋರಾಟ ಶುರು ಮಾಡಿದ್ದಾರೆ. ನಾಳೆ ಸಿಎಂ ಅನೌನ್ಸ್ ಮಾಡಿದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮಿಂದಲೇ ಇದು ಆಗಿದ್ದು ಎಂದು ಬರೆದುಕೊಳ್ಳುತ್ತಾರೆ. ಇದೇ ಕಾರಣಕ್ಕೆ ಹೋರಾಟ ಮಾಡುತ್ತಾರೆ. ಯುವಕರ ಬೇಡಿಕೆ ಸರಿಯಾಗಿಯೇ ಇದೆ.ನಾವು ಅವರೊಂದಿಗೆ ಇದ್ದೇವೆ. ಇದೀಗ ಅವರು ರಾಜ್ಯ ಸರಕಾರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅದೇ ರೀತಿ ಕೇಂದ್ರದ ವಿರುದ್ಧವೂ ಹೋರಾಟ ಮಾಡಲಿ. ನಾನು ಯುವಕರಲ್ಲಿ ಮನವಿ ಮಾಡಿಕೊಳ್ಳುವೆ. ನಿಮ್ಮ ಹೋರಾಟ ಶಾಂತಿಯುತವಾಗಿರಲಿ ಎಂದು ಮನವಿ ಮಾಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದೈವದ ಅನುಕರಣೆ ಮಾಡಿದ ಬಾಲಿವುಡ್ ಸ್ಟಾರ್ ರಣ್ವೀರ್​​ಗೆ ಹೈಕೋರ್ಟ್ ತರಾಟೆ – Kannada News | Karnataka High Court slams Ranveer Singh in hurting religious sentiment case

ಕಾಂತಾರ’ (Kantara) ಸಿನಿಮಾ ಕರಾವಳಿಯ ಸಂಸ್ಕೃತಿ, ದೈವದ ಆಚರಣೆಗಳನ್ನು ವಿಶ್ವದಾದ್ಯಂತ ಪರಿಚಯ ಮಾಡಿಸಿತು. ಆದರೆ ಸಿನಿಮಾ ನೋಡಿದ ಮಂದಿ ಕೆಲವರು ಹಾಸ್ಯಕ್ಕಾಗಿ, ಇನ್ನಿತರೆ ಕಾರಣಗಳಿಗಾಗಿ ದೈವದ ಅನುಕರಣೆ ಮಾಡಲು ಆರಂಭಿಸಿದರು. ಇದರಿಂದ ದೈವವನ್ನು ನಂಬುವ ಭಕ್ತರ ಭಾವನೆಗಳಿಗೆ ಧಕ್ಕೆ ಆಗುತ್ತದೆ ಎಂದು ಚಿತ್ರತಂಡ ಹೇಳಿದರೂ ಸಹ ಅನುಕರಣೆ ನಿಂತಿಲ್ಲ. ಕೆಲ ತಿಂಗಳ ಹಿಂದೆ ಬಾಲಿವುಡ್ ಸ್ಟಾರ್ ನಟ ರಣ್​​ವೀರ್ ಸಿಂಗ್ ಸಹ ಗೋವಾ ಸಿನಿಮೋತ್ಸವದಲ್ಲಿ ವೇದಿಕೆ ಮೇಲೆ ಅಸಭ್ಯವಾಗಿ ದೈವದ ಅನುಕರಣೆ ಮಾಡಿದ್ದರು. ಬಳಿಕ ಕ್ಷಮೆ ಕೇಳಿದರಾದರೂ ರಣ್​​ವೀರ್ ವಿರುದ್ಧ ದೂರುಗಳು ದಾಖಲಾಗಿದ್ದವು. ಇದೀಗ ಹೈಕೋರ್ಟ್​​ನಲ್ಲಿ ದೂರಿನ ವಿಚಾರಣೆ ನಡೆದಿದ್ದು, ರಣ್​​ವೀರ್​ ಅವರ ವರ್ತನೆಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಸ್ಟಾರ್ ಆಗಿದ್ದರೇನು ಕಾನೂನಿಗಿಂತಲೂ ಮೇಲಲ್ಲ ಎಂದಿದ್ದಾರೆ ನ್ಯಾಯಮೂರ್ತಿಗಳು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Lunar Eclipse 2026: ಮಾ.03 ಚಂದ್ರಗ್ರಹಣ; ಮೇಷ ರಾಶಿಯ ಮೇಲೆ ಗ್ರಹಣದ ಪ್ರಭಾವ ಹೇಗಿರಲಿದೆ? – Kannada News | Lunar Eclipse 2026: Astrological Forecast for Aries by Dr. Basavaraj Guruji

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿ ಅವರ ಪ್ರಕಾರ, 2026ರ ಕೇತುಗ್ರಸ್ತ ಚಂದ್ರಗ್ರಹಣವು ಮೇಷ ರಾಶಿಯವರಿಗೆ ಐದನೇ ಮನೆಯಲ್ಲಿ ಸಂಭವಿಸುತ್ತದೆ. ಇದು ಚಂದ್ರ ಮತ್ತು ಕೇತುವಿನ ಗ್ರಹಣವಾಗಿದ್ದು, ಅಶ್ವಿನಿ, ಭರಣಿ, ಕೃತಿಕಾ ನಕ್ಷತ್ರದವರ ಮೇಲೆ ಪರಿಣಾಮ ಬೀರುತ್ತದೆ. ಈ ಗ್ರಹಣದ ಪ್ರಭಾವವು 90 ದಿನಗಳ ಕಾಲ ಇರುತ್ತದೆ.

ಮೇಷ ರಾಶಿಯವರಿಗೆ ಈ ಗ್ರಹಣದಿಂದ ಆರ್ಥಿಕ ವಿಷಯಗಳಲ್ಲಿ ಜಾಗ್ರತೆ ಅಗತ್ಯ. ಮಾನಸಿಕವಾಗಿ ದುರಾಸೆಗಳನ್ನು ತಪ್ಪಿಸಬೇಕು ಮತ್ತು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ವೃತ್ತಿಯಲ್ಲಿ ಪ್ರಗತಿ, ಆದಾಯದಲ್ಲಿ ಏರಿಕೆ, ವ್ಯಾಪಾರದಲ್ಲಿ ಯಶಸ್ಸು, ಪ್ರೇಮ ಮತ್ತು ವಿವಾಹ ವಿಷಯಗಳಲ್ಲಿ ಶುಭವಾಗುವ ಸಾಧ್ಯತೆ ಇದೆ. ಅರ್ಧಂಬರ್ಧ ಕೆಲಸಗಳು ಪೂರ್ಣಗೊಳ್ಳುತ್ತವೆ ಮತ್ತು ಬಾಕಿ ವಸೂಲಿ ಆಗುತ್ತದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಬಹುದು. ಕುಟುಂಬದ ಬೆಂಬಲ ಉತ್ತಮವಾಗಿರುತ್ತದೆ. ಮಹಿಳೆಯರಿಗೆ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಗ್ರಹಣ ಶಾಂತಿಗಾಗಿ ಓಂ ನಮಃ ಶಿವಾಯ ಜಪವನ್ನು ಹೆಚ್ಚಾಗಿ ಮಾಡುವುದು, ಗ್ರಹಣವಾದ ಒಂದು ವಾರದೊಳಗೆ ಮಹಾಲಕ್ಷ್ಮಿಯ ದರ್ಶನ ಮಾಡುವುದು ಮತ್ತು ಬೆಲ್ಲ ಅಥವಾ ಖರ್ಜೂರವನ್ನು ದಾನ ಮಾಡುವುದು ಉತ್ತಮ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಮಾ.03 ವರ್ಷದ ಮೊದಲ ಚಂದ್ರಗ್ರಹಣ; ಇದು ಭಾರತದಲ್ಲಿ ಗೋಚರಿಸುತ್ತಾ?

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿಸಿ ಎದುರು ಕಣ್ಣೀರು ಹಾಕಿ ನೋವು ತೋಡಿಕೊಂಡ ಉದ್ಯೋಗಾಕಾಂಕ್ಷಿ ಮಹಿಳೆ – Kannada News | Job aspirant Woman Tears Infront of DC at Dharwad

ಧಾರವಾಡ, (ಫೆಬ್ರವರಿ 24): ಕರ್ನಾಟಕದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ (Jobs) ಭರ್ತಿಗೆ ಆಗ್ರಹಿಸಿ ಇಂದು (ಫೆಬ್ರವರಿ 24) ವಿದ್ಯಾಕಾಶಿ ಧಾರವಾಡದಲ್ಲಿ (Dharwad) ಉದ್ಯೋಗಾಕಾಂಕ್ಷಿಗಳು ಸರ್ಕಾರದ ವಿರುದ್ಧ ಬೀದಿಗಿಳಿದು ಉಗ್ರ ಹೋರಾಟ ನಡೆಸುತ್ತಿದ್ದಾರೆ. ಸಾವಿರಾರು ಯುವಕ-ಯುವತಿಯರು ಜುಬಿಲಿ ವೃತ್ತಕ್ಕೆ ದೌಡಾಯಿಸಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು. ಇನ್ನು ಸ್ಥಳಕ್ಕೆ ಜಿಲ್ಲಾಧಿಕಾರಿ ಆರ್.ಸ್ನೇಹಲ್ ಆಗಮಿಸಿ ಉದ್ಯೋಗಾಕಾಂಕ್ಷಿಗಳ ಮನವಿ ಸ್ವೀಕರಿಸಿದರು. ಈ ವೇಳೆ ಜಿಲ್ಲಾಧಿಕಾರಿ ಆರ್.ಸ್ನೇಹಲ್ ಮುಂದೆ ಮಹಿಳಾ ಉದ್ಯೋಗಾಕಾಂಕ್ಷಿಯೊಬ್ಬರು ತಮ್ಮ ನೋವು ತೋಡಿಕೊಂಡು ಕಣ್ಣೀರಿಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link