All posts by nagaraj11081993

ಲಕ್ನೋ ವಿವಿ ಆವರಣದಲ್ಲಿ ನಮಾಜ್ ವರ್ಸಸ್ ಹನುಮಾನ್ ಚಾಲೀಸಾ ಹಗ್ಗಜಗ್ಗಾಟ; 13 ವಿದ್ಯಾರ್ಥಿಗಳಿಗೆ ನೋಟಿಸ್ ಜಾರಿ – Kannada News | Namaz vs Hanuman Chalisa in Lucknow University campus 13 Students Issued Notice ABVP workers Detained

ನವದೆಹಲಿ, ಫೆಬ್ರವರಿ 24: ಲಕ್ನೋ ವಿಶ್ವವಿದ್ಯಾಲಯದ ಆವರಣದೊಳಗೆ ನಮಾಜ್ ಮಾಡಿದ್ದನ್ನು ವಿರೋಧಿಸಿ ಹಿಂದೂ ವಿದ್ಯಾರ್ಥಿಗಳು ಹನುಮಾನ್ ಚಾಲೀಸಾ (Hanuman Chalisa) ಪಠಿಸಿರುವ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರು, ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗ ದಳದ ಕಾರ್ಯಕರ್ತರು ಲಕ್ನೋ ವಿಶ್ವವಿದ್ಯಾಲಯದ ಕ್ಯಾಂಪಸ್‌ನೊಳಗಿನ ಐತಿಹಾಸಿಕ ಲಾಲ್ ಬರಾದಾರಿಯಲ್ಲಿ ಹನುಮಾನ್ ಚಾಲೀಸಾ ಪಠಿಸಲು ಪ್ರಯತ್ನಿಸಿದ ನಂತರ ಇಂದು ಲಕ್ನೋ ವಿಶ್ವವಿದ್ಯಾಲಯದಲ್ಲಿ ಉದ್ವಿಗ್ನತೆ ಉಂಟಾಯಿತು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ, ಹಲವಾರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

ಲಕ್ನೋ ವಿಶ್ವವಿದ್ಯಾನಿಲಯದ ಆವರಣದೊಳಗಿನ ಲಾಲ್ ಬರಾದರಿಯಲ್ಲಿ ನಮಾಜ್ ಮಾಡಿದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿಗೆ ಭಂಗ ತಂದ ಆರೋಪದ ಮೇಲೆ ಲಕ್ನೋ ವಿಶ್ವವಿದ್ಯಾನಿಲಯದ 13 ವಿದ್ಯಾರ್ಥಿಗಳಿಗೆ ನೋಟಿಸ್ ನೀಡಲಾಗಿದೆ. ಕಾಲೇಜು ಆವರಣದಲ್ಲಿ ನಮಾಜ್ ಮಾಡಿದ 13 ವಿದ್ಯಾರ್ಥಿಗಳಿಗೆ ತಲಾ 50,000 ರೂ. ವೈಯಕ್ತಿಕ ಬಾಂಡ್ ಮತ್ತು ತಲಾ 50,000 ರೂ. ದಂಡ, ಇಬ್ಬರು ಶ್ಯೂರಿಟಿಗಳನ್ನು ಸಲ್ಲಿಸುವಂತೆ ನಿರ್ದೇಶಿಸಲಾಗಿದೆ. 1 ವರ್ಷದ ಅವಧಿಗೆ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಖಾತರಿಯಾಗಿ ಈ ಬಾಂಡ್ ಅನ್ನು ಪಡೆಯಲಾಗಿದೆ.

ಇದನ್ನೂ ಓದಿ: ನಮಾಜ್ ವೇಳೆ ಶಾಂತಿ ಇರಬೇಕಾದ ಮಸೀದಿಯೊಳಗೇ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ

ಲಾಲ್ ಬರಾದಾರಿಯಲ್ಲಿ ನಮಾಜ್ ಮಾಡಲು ಅನುಮತಿ ನೀಡಲಾಗಿದೆ. ಹಿಂದೂ ವಿದ್ಯಾರ್ಥಿಗಳಿಗೆ ಅದೇ ಸ್ಥಳದಲ್ಲಿ ಹನುಮಾನ್ ಚಾಲೀಸಾ ಪಠಿಸಲು ಅವಕಾಶ ನೀಡಿಲ್ಲ ಎಂಬ ಆರೋಪದ ಮೇಲೆ ಪ್ರತಿಭಟನೆ ಭುಗಿಲೆದ್ದಿತು. “ಇಲ್ಲಿ ನಮಾಜ್ ಮಾಡಲು ಅನುಮತಿ ನೀಡಲಾಗಿದೆ. ಆದರೆ ಇಲ್ಲಿ ಹನುಮಾನ್ ಚಾಲೀಸಾ ಪಠಿಸಲು ಅನುಮತಿ ನೀಡಿಲ್ಲ” ಎಂದು ಪ್ರತಿಭಟನಾಕಾರರೊಬ್ಬರು ಹೇಳಿದ್ದಾರೆ.

ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್, ಇಡೀ ವಿಷಯದ ಕುರಿತು ತನಿಖೆ ನಡೆಯುತ್ತಿದೆ. ನಾವು ಯಾವುದೇ ಸಂದರ್ಭದಲ್ಲೂ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಲು ಬಿಡುವುದಿಲ್ಲ ಎಂದು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಜಯ್ ದೇವರಕೊಂಡ-ರಶ್ಮಿಕಾ ಮದುವೆಯಲ್ಲಿ ಹಲವು ವಿಶೇಷತೆಗಳು – Kannada News | Vijay Deverakonda and Rashmika Mandanna wedding rituals details

ವಿಜಯ್ ದೇವರಕೊಂಡ (Vijay Deverakonda) ಮತ್ತು ಕನ್ನಡತಿ ರಶ್ಮಿಕಾ ಮಂದಣ್ಣ ವಿವಾಹವಾಗುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದಲೂ ಪ್ರೀತಿಯಲ್ಲಿದ್ದ ಈ ಜೋಡಿ ಇದೀಗ ತಮ್ಮ ಪ್ರೀತಿಗೆ ಮದುವೆಯ ಮೊಹರು ಒತ್ತುತ್ತಿದೆ. ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದ ರಶ್ಮಿಕಾ ಮತ್ತು ವಿಜಯ್ ಫೆಬ್ರವರಿ 26 ರಂದು ವಿವಾಹ ಆಗಲಿದ್ದಾರೆ. ಇವರ ವಿವಾಹವು ಉದಯಪುರದ ಅತ್ಯಂತ ಖಾಸಗಿ ಮತ್ತು ಐಶಾರಾಮಿ ರೆಸಾರ್ಟ್​​ನಲ್ಲಿ ನಡೆಯುತ್ತಿದೆ. ಕೆಲ ದಿನಗಳ ಮುಂಚೆಯೇ ಈ ಜೋಡಿ ಮತ್ತು ಅವರ ಆಪ್ತರು, ಕುಟುಂಬದವರು ರೆಸಾರ್ಟ್ ತಲುಪಿದ್ದು ಮದುವೆ ಕಾರ್ಯ ಆರಂಭವಾಗಿದೆ. ಇವರ ಮದುವೆಯಲ್ಲಿ ಕೆಲವು ವಿಶೇಷತೆಗಳು ಇರಲಿವೆ.

ರಶ್ಮಿಕಾ ಮತ್ತು ವಿಜಯ್ ಅವರ ಮದುವೆ ಹಲವು ಸಂಪ್ರದಾಯಗಳ ಮಿಶ್ರಣ ಆಗಿರಲಿದೆ. ಇವರ ಮದುವೆ ಉತ್ತರ ಭಾರತ ಮತ್ತು ದಕ್ಷಿಣ ಭಾರತ ಸಂಪ್ರದಾಯಗಳ ಮಿಳಿತವಾಗಿರಲಿದೆ. ಉತ್ತರ ಭಾರತದ ಮದುವೆಗಳಂತೆ ಹಳದಿ, ಮೆಹಂದಿ, ಸಂಗೀತ್​​ಗಳನ್ನು ಆಚರಣೆ ಮಾಡಲಾಗುತ್ತಿದೆ. ಮದುವೆಗೆ ಮುಂಚೆ ಎರಡೂ ಕುಟುಂಬದವರನ್ನು ಒಟ್ಟಿಗೆ ಸೇರಿಸಿ ಹಲವು ಆಟಗಳನ್ನು ಸಹ ಆಡಿಸಲಾಗುತ್ತಿದೆ. ಇದರಿಂದ ಎರಡೂ ಕುಟುಂಬದವರ ನಡುವೆ ಬೆಸುಗೆ ಹೆಚ್ಚುವಂತೆ ಮಾಡುವ ಯೋಜನೆ ಇದೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಫೆಬ್ರವರಿ 26 ರಂದು ನಡೆಯಲಿದ್ದು, ಈ ಮದುವೆ ಸಹ ತೆಲಂಗಾಣ ಮತ್ತು ಕೊಡವ ಸಂಸ್ಕೃತಿಯಂತೆ ನಡೆಯಲಿದೆ. ವಿಜಯ್ ದೇವರಕೊಂಡ ತೆಲಂಗಾಣದ ಪದ್ಮಸಾಲಿ ಸಮುದಾಯಕ್ಕೆ ಸೇರಿದವರು ಎನ್ನಲಾಗುತ್ತಿದ್ದು, ಅವರ ಸಮುದಾಯಕ್ಕೆ ಸೇರಿದ ಸಂಪ್ರದಾಯ ಮತ್ತು ರಶ್ಮಿಕಾ ಮಂದಣ್ಣ ಕೊಡವತಿ ಆಗಿದ್ದು, ಅವರ ಕೊಡವ ಸಮುದಾಯದ ಆಚರಣೆಗಳೆರಡನ್ನೂ ಸೇರಿಸಿ ಮದುವೆ ಮಾಡಲಾಗುತ್ತಿರುವುದು ವಿಶೇಷ. ಹಾಗಾಗಿ ಈ ಮದುವೆ ಸಂಪ್ರದಾಯಗಳ ಮಿಶ್ರಣ ಆಗಿರಲಿದೆ.

ಇದನ್ನೂ ಓದಿ:ಅವರು ರಶೀ, ಇವರು ವಿಜು: ರಶ್ಮಿಕಾ, ವಿಜಯ್ ದೇವರಕೊಂಡ ಪರಸ್ಪರ ಕರೆಯೋದು ಹೀಗೆ

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ವಿವಾಹವು ಭಾರಿ ಅದ್ಧೂರಿಯಾಗಿ ನಡೆಯುತ್ತಿದ್ದ ರಾಜಸ್ಥಾನದ ಉದಯಪುರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಅರಾವಳಿ ಬೆಟ್ಟಗಳಲ್ಲಿರುವ ಈ ಐಷಾರಾಮಿ ರೆಸಾರ್ಟ್​​ನಲ್ಲಿ ಮದುವೆ ಸಮಾರಂಭ ನಡೆಯಲಿದೆ. ಈ ರೆಸಾರ್ಟ್​​ ಬರೋಬ್ಬರಿ 117 ಖಾಸಗಿ ವಿಲ್ಲಾಗಳು, ನದಿ-ಕೊಳ, ಖಾಸಗಿ ಹೆಲಿಪ್ಯಾಡ್ ಹೊಂದಿದೆ. ಮದುವೆ ಸಮಾರಂಭದಲ್ಲಿ ವಿಜಯ್ ದೇವರಕೊಂಡ ಅವರ ಕುಟುಂಬದವರು ಅತ್ಯಾಪ್ತ ಸಂಬಂಧಿಗಳು ಮತ್ತು ರಶ್ಮಿಕಾ ಮಂದಣ್ಣ ಅವರ ಕುಟುಂಬದವರು ಮತ್ತು ಅತ್ಯಾಪ್ತ ಸಂಬಂಧಿಗಳು ಹಾಗೂ ಕೆಲವೇ ಕೆಲವು ಸ್ನೇಹಿತರಷ್ಟೆ ಭಾಗಿ ಆಗಿದ್ದಾರೆ. ಮಾರ್ಚ್ 04 ರಂದು ಹೈದರಾಬಾದ್​​ನ ತಾಜ್ ಕೃಷ್ಣನಲ್ಲಿ ಅದ್ಧೂರಿಯಾಗಿ ರಿಸೆಪ್ಷನ್ ಆಯೋಜನೆ ಮಾಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಧಾರವಾಡದಲ್ಲಿ ಉಗ್ರ ಹೋರಾಟ ಬೆನ್ನಲ್ಲೇ ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್ – Kannada News | Karnataka finance department approves appointment 24 thousand Jobs after Youths Protest in Dharwad

ಬೆಂಗಳೂರು, (ಫೆಬ್ರವರಿ 24):ಕರ್ನಾಟಕದಲ್ಲಿ (Karnataka) ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ (Jobs) ಭರ್ತಿಗೆ ಆಗ್ರಹಿಸಿ ವಿದ್ಯಾಕಾಶಿ ಧಾರವಾಡದಲ್ಲಿ ಈ ಹಿಂದೆಯೂ ಉದ್ಯೋಗಾಕಾಂಕ್ಷಿಗಳು ಬೃಹತ್ ಪ್ರತಿಭಟನೆ ನಡೆಸಿದ್ದು. ಆದರೂ ಸರ್ಕಾರ ಯಾವುದೇ ಕ್ರಮಕೈಗೊಳ್ಳದಿದ್ದರಿಂದ ರೊಚ್ಚಿಗೆದ್ದ ಯುವಕರು ಸರ್ಕಾರದ ವಿರುದ್ಧ ಮತ್ತೆ ಬೀದಿಗಿಳಿದು ಉಗ್ರ ಹೋರಾಟ ನಡೆಸುತ್ತಿದ್ದಾರೆ. ಯುವಕರ ಕಿಚ್ಚು ಜೋರಾಗುತ್ತಿದ್ದಂತೆಯೇ ಇತ್ತ ಕರ್ನಾಟಕ ಆರ್ಥಿಕ ಇಲಾಖೆ (Karnataka finance department ), 24 ಸಾವಿ ಹುದ್ದೆಗಳ ನೇಮಕಾತಿಗೆ ನೇಮಕಾತಿಗೆ ಮಂಜೂರಾತಿ ನೀಡಿದೆ.

ಕರ್ನಾಟಕದ ವಿವಿಧ ಒಟ್ಟು 32 ಇಲಾಖೆಯಲ್ಲಿ 24,300 ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಮಂಜೂರಾತಿ ನೀಡಿದೆ. ಎ ದರ್ಜೆಯ 542 ಹುದ್ದೆ, ಬಿ ದರ್ಜೆಯ 619 ಹುದ್ದೆ ಹಾಗೂ ಎಫ್ ಡಿ ಸಿ ದರ್ಜೆಯ 23119 ಹುದ್ದೆಗಳ ಭರ್ತಿಗೆ ಹಣಕಾಸು ಇಲಾಖೆ ಕ್ಲಿಯರೆನ್ಸ್ ನೀಡಿದೆ. ಇದರೊಂದಿಗೆ ರಾಜ್ಯದಲ್ಲಿ ಉದ್ಯೋಗಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ನಿರುದ್ಯೋಗಿಗಳ ಮುಖದಲ್ಲಿ ಮಂದಹಾಸ ಮೂಡುವಂಥ ತೀರ್ಮಾನವನ್ನು ಸರ್ಕಾರ ತೆಗದುಕೊಂಡಿದೆ.

ಇದನ್ನೂ ನೋಡಿ: ಸರ್ಕಾರದ ವಿರುದ್ಧ ಉದ್ಯೋಗಾಕಾಂಕ್ಷಿಗಳ ಕಿಚ್ಚು: ಅನುಮತಿ ಇಲ್ಲದಿದ್ರೂ ಪ್ರೊಟೆಸ್ಟ್​​

ರಾಜ್ಯದ ವಿವಿಧ ಇಲಾಖೆಗಳಲ್ಲಿ 2.5 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿದ್ದು ಹಂತ ಹಂತವಾಗಿ ಭರ್ತಿ ಮಾಡುವುದಾಗಿ ಈ ಹಿಂದೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದರು. ಇನ್ನು ರಾಜ್ಯ ಸಿವಿಲ್ ಸೇವಾ ಹುದ್ದೆಗಳ ನೇರ ನೇಮಕಾತಿಯಲ್ಲಿ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಮಾಡಲಾಗಿದ್ದು, 2027ರ ಡಿಸೆಂಬರ್ 31ರವರೆಗೆ ಹೊರಡಿಸುವ ಅಧಿಸೂಚನೆಗಳಿಗೆ ಇದು ಅನ್ವಯವಾಗಲಿದೆ.

ಧಾರವಾಡದ ಬೃಹತ್ ಪ್ರತಿಭಟನೆಗೆ ಸಿಎಂ ಪ್ರತಿಕ್ರಿಯೆ

ಇನ್ನು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಸಾವಿರಾರು ವಿದ್ಯಾರ್ಥಿಗಳು ಧಾರವಾಡದಲ್ಲಿ ನಡೆಸುತ್ತಿರುವ ಬೃಹತ್ ಉಗ್ರ ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಸುದೀರ್ಘ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಸಿಎಂ, ಪ್ರತಿಯೊಂದು ಅರ್ಜಿಯ ಹಿಂದೆ ಒಂದು ಕುಟುಂಬದ ಭರವಸೆ ಮತ್ತು ವರ್ಷಗಳ ಪರಿಶ್ರಮವಿರುತ್ತದೆ ಎಂಬುದು ನನಗೆ ತಿಳಿದಿದೆ. ಉದ್ಯೋಗಾಕಾಂಕ್ಷಿಗಳು ಅನುಭವಿಸುತ್ತಿರುವ ಆತಂಕ ಮತ್ತು ಹತಾಶೆಯನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ನಿಮ್ಮ ಭವಿಷ್ಯ ನಮಗೆ ಅತ್ಯಂತ ಮುಖ್ಯವಾಗಿದೆ ಎಂದಿದ್ದಾರೆ.

ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳು ಬೃಹತ್ ಪ್ರಮಾಣದಲ್ಲಿ ಖಾಲಿ ಇರುವುದಕ್ಕೆ ಹಿಂದಿನ ಬಿಜೆಪಿ ಸರ್ಕಾರವೇ ಕಾರಣ ಎಂದು ಸಿದ್ದರಾಮಯ್ಯ ನೇರ ವಾಗ್ದಾಳಿ ನಡೆಸಿದ್ದಾರೆ. ‘ನಾವು ಅಧಿಕಾರಕ್ಕೆ ಬಂದಾಗ ರಾಜ್ಯದಲ್ಲಿ 2.64 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದವು. ಇದು ಹಿಂದಿನ ಸರ್ಕಾರದ ನಿಷ್ಕ್ರಿಯತೆಯ ಫಲ. 2019 ರಿಂದ 2023ರ ನಡುವೆ ನಡೆದ ನೇಮಕಾತಿ ಅಕ್ರಮಗಳು ಮತ್ತು ಭ್ರಷ್ಟಾಚಾರದ ಹಗರಣಗಳು ಇಡೀ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಕುಂದಿಸಿದವು. ಈಗ ವಿರೋಧ ಪಕ್ಷದ ನಾಯಕರು ರಾಜಕೀಯ ಹಿತಾಸಕ್ತಿಗಾಗಿ ಮುಗ್ಧ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿರುವುದು ದುರದೃಷ್ಟಕರ’ ಎಂದು ಕಿಡಿಕಾರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ನಕಲಿ ಕಾಲ್ ಸೆಂಟರ್ ಮೇಲೆ ಪೊಲೀಸರ ದಾಳಿ: ಷೇರು ಮಾರುಕಟ್ಟೆ ಹೆಸರಲ್ಲಿ ವಂಚಿಸುತ್ತಿದ್ದ ಇಬ್ಬರ ಬಂಧನ! – Kannada News | Jayanagar Stock Market Fraud: High Returns Scam Call Center Busted by Cyber Police

ಬೆಂಗಳೂರು, ಫೆ.24: ಸ್ಟಾಕ್ ಮಾರ್ಕೆಟ್‌ನಲ್ಲಿ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಸಾರ್ವಜನಿಕರ ಹಣಕ್ಕೆ ಕನ್ನ ಹಾಕುತ್ತಿದ್ದ ಹೈಟೆಕ್ ವಂಚಕರ ಜಾಲವನ್ನು ಕರ್ನಾಟಕ ಸೈಬರ್ ಕಮಾಂಡ್ ಪತ್ತೆಹಚ್ಚಿದೆ. ಜಯನಗರದಲ್ಲಿ ಕಾಲ್ ಸೆಂಟರ್ ರೂಪದಲ್ಲಿ (stock market scam) ಕಾರ್ಯನಿರ್ವಹಿಸುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿರುವ ಪೊಲೀಸರು ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಜಯನಗರದ 9ನೇ ಬ್ಲಾಕ್‌ನ ಅಂಜನಾದ್ರಿ ಅವೆನ್ಯೂನಲ್ಲಿರುವ ‘ಮಲ್ಟಿವೇವ್ ಬಿಸಿನೆಸ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್’ ಎಂಬ ಕಚೇರಿಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಈ ಸಂಸ್ಥೆಯು ಹೊರರಾಜ್ಯದ 15 ಮಂದಿ ಎಕ್ಸಿಕ್ಯೂಟಿವ್‌ಗಳನ್ನು ಕೆಲಸಕ್ಕೆ ಇಟ್ಟುಕೊಂಡಿತ್ತು. ಇವರು ಅಮಾಯಕರಿಗೆ ಕರೆ ಮಾಡಿ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಅತಿ ಹೆಚ್ಚು ಲಾಭ ನೀಡುವುದಾಗಿ ಆಮಿಷವೊಡ್ಡುತ್ತಿದ್ದರು. ಗ್ರಾಹಕರು ಹಣ ವರ್ಗಾವಣೆ ಮಾಡಿದ ತಕ್ಷಣ ಫೋನ್ ಸ್ವಿಚ್ ಆಫ್ ಮಾಡಿ ಪರಾರಿಯಾಗುತ್ತಿದ್ದರು. ಗುಜರಾತ್‌ನ ಸೂರತ್ ಮೂಲದ ಕುಮಾವತ್ ಯೋಗೇಶ್ ಅಮರರಾಮ್ (ಪ್ರಸ್ತುತ ಜಯನಗರ ನಿವಾಸಿ) ಮತ್ತು ದೆಹಲಿಯ ಹಜರತ್ ನಿಜಾಮುದ್ದೀನ್ ಮೂಲದ ಇಮ್ರಾನ್ (ಬಿಟಿಎಂ ಲೇಔಟ್ ನಿವಾಸಿ) ಬಂಧಿತ ಆರೋಪಿಗಳು.

ಇದನ್ನೂ ಓದಿ: ಸಾರ್ವಜನಿಕರ ಪ್ರಾಣ ತೆಗೆಯಲು ಕಾಯುತ್ತಿದೆ ಈ ರಸ್ತೆ: ತೆರೆದ ಗುಂಡಿಯಲ್ಲಿ ಬಿದ್ದು ಕೈಕಾಲು ಮುರಿದುಕೊಂಡ ಜನ

ಇಲ್ಲಿದೆ ನೋಡಿ ಎಕ್ಸ್​​ ಪೋಸ್ಟ್​​;

ಬಿಟಿಎಂ ಲೇಔಟ್‌ನಿಂದ ಬರುತ್ತಿದ್ದ ಕರೆಗಳನ್ನು ಡಿಜಿಟಲ್ ಫೋರೆನ್ಸಿಕ್ ಮೂಲಕ ಪತ್ತೆಹಚ್ಚಿದ ಪೊಲೀಸರು, ಐಎಂಇಐ (IMEI) ಸಂಖ್ಯೆ ಮತ್ತು ಗೂಗಲ್ ಇಮೇಲ್ ಐಡಿಗಳ ಮೂಲಕ ಆರೋಪಿ ಅಮರರಾಮ್‌ನನ್ನು ಟ್ರೇಸ್ ಮಾಡಿದ್ದಾರೆ. ಆರೋಪಿಗಳು ಗೂಗಲ್ ಮೂಲಕ ಸಂಭವನೀಯ ಗ್ರಾಹಕರ ಡೇಟಾ ಸಂಗ್ರಹಿಸುತ್ತಿದ್ದರು. ಕೊಳೆಗೇರಿ ನಿವಾಸಿಗಳ ಹೆಸರಿನಲ್ಲಿ ಸಿಮ್ ಕಾರ್ಡ್‌ಗಳನ್ನು ಪಡೆದು ಮತ್ತು ಹೊರರಾಜ್ಯದ ಬ್ಯಾಂಕ್ ಖಾತೆಗಳನ್ನು ವಂಚನೆಗೆ ಬಳಸಿಕೊಳ್ಳುತ್ತಿದ್ದರು. ವಂಚಿಸಿದ ಹಣವನ್ನು ಹಲವು ‘ಮ್ಯೂಲ್’ (Mule) ಖಾತೆಗಳಿಗೆ ವರ್ಗಾಯಿಸಿ, ನಂತರ ಎಟಿಎಂ ಮೂಲಕ ಡ್ರಾ ಮಾಡಿ ಹಂಚಿಕೊಳ್ಳುತ್ತಿದ್ದರು. ದಾಳಿಯ ವೇಳೆ ಪೊಲೀಸರು 31 ಮೊಬೈಲ್ ಫೋನ್‌ಗಳು, 13 ಲ್ಯಾಪ್‌ಟಾಪ್‌ಗಳು, 16 ಸಿಮ್ ಕಾರ್ಡ್‌ಗಳು, ಕಂಪನಿಯ ಲೆಟರ್‌ಹೆಡ್‌ಗಳು ಮತ್ತು ಸಂತ್ರಸ್ತರ ವಿವರಗಳಿರುವ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉದ್ಯೋಗಾಂಕ್ಷಿಗಳ ಪ್ರತಿಭಟನೆಗೆ ಸಿಎಂ ಸ್ಪಂದನೆ: ಸಮಸ್ಯೆಗೆ ಬಿಜೆಪಿಯೇ ಕಾರಣ ಎಂದ ಸಿದ್ದರಾಮಯ್ಯ – Kannada News | CM Responds to Job Protests: Siddaramaiah Blames BJP for Karnataka Vacancy Crisis

ಉದ್ಯೋಗಾಂಕ್ಷಿಗಳ ಪ್ರತಿಭಟನೆಗೆ ಸಿಎಂ ಸ್ಪಂದನೆImage Credit source: Google

ಬೆಂಗಳೂರು, ಫೆಬ್ರವರಿ 24: ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿಗಳಿಂದ ಬೃಹತ್ ಪ್ರತಿಭಟನೆ ಬೆನ್ನಲ್ಲೇ,  ವಿಚಾರವನ್ನು ಗಂಭೀರವಾಗಿ ಪರಿಗಣಿಸಿರೋದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಅನೇಕ ಸರ್ಕಾರಿ ಉದ್ಯೋಗಾರ್ಥಿಗಳು ಅನುಭವಿಸುತ್ತಿರುವ ಆತಂಕ, ನಿರಾಶೆ ಮತ್ತು ಅನಿಶ್ಚಿತತೆಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಪ್ರತಿಯೊಂದು ಅರ್ಜಿಯ ಹಿಂದೆ ಒಂದು ಕನಸು, ಒಂದು ಕುಟುಂಬದ ಆಸೆ, ಹಲವು ವರ್ಷಗಳ ಪರಿಶ್ರಮ  ಮತ್ತು ಕರ್ನಾಟಕಕ್ಕೆ ಸೇವೆ ಸಲ್ಲಿಸುವ ಉದ್ದೇಶ ಇದೆ. ಮುಖ್ಯಮಂತ್ರಿಯಾಗಿ, ನಿಮ್ಮ ಪ್ರತಿಯೊಬ್ಬರ ಕಾಳಜಿಯೂ ನಮ್ಮ ಗಮನದಲ್ಲಿದೆ ಎಂದವರು ಹೇಳಿದ್ದಾರೆ.

ಸಿದ್ದರಾಮಯ್ಯ ಹೇಳಿದ್ದೇನು?

ಈ ಕುರಿತು ಎಕ್ಸ್​​ ಪೋಸ್ಟ್​​ ಮಾಡಿರುವ ಸಿದ್ದರಾಮಯ್ಯ, ನಾವು ಅಧಿಕಾರ ಸ್ವೀಕರಿಸಿದಾಗ 2.64 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿಯಾಗಿದ್ದವು. ಇದು ಕೇವಲ ಒಂದೇ ದಿನಕ್ಕೆ ಉಂಟಾದ ಸಮಸ್ಯೆಯಲ್ಲ. ಹಿಂದಿನ ಬಿಜೆಪಿ ಸರ್ಕಾರದ ದೀರ್ಘಕಾಲದ ನಿರ್ಲಕ್ಷ್ಯದಿಂದಾಗಿ, ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಯಾವುದೇ ಸಮರ್ಪಕ ಯೋಜನೆ ರೂಪಿಸದೇ ಇದ್ದದ್ದರಿಂದ ಸಮಸ್ಯೆ ಉಂಟಾಗಿದೆ. ಹೀಗಿದ್ದರೂ ಬಿಜೆಪಿ ನಾಯಕರು ವಿದ್ಯಾರ್ಥಿಗಳನ್ನು ತಪ್ಪುದಾರಿಗೆಳೆಯಲು ಪ್ರಯತ್ನಿಸುತ್ತಿರುವುದು ಅತ್ಯಂತ ವಿಷಾದನೀಯ. ಉದ್ಯೋಗಾರ್ಥಿಗಳನ್ನು ತಮ್ಮ ಭವಿಷ್ಯದ ಸಿದ್ಧತೆಯತ್ತ ಗಮನ ಹರಿಸಲು ಪ್ರೋತ್ಸಾಹಿಸುವ ಬದಲು, ಅಶಾಂತಿ ಉಂಟುಮಾಡಲು ಯತ್ನಿಸುತ್ತಿದ್ದಾರೆ. 2019ರಿಂದ 2023ರ ನಡುವೆ ನಡೆದ ನೇಮಕಾತಿ ಅಕ್ರಮಗಳು ಮತ್ತು ಭ್ರಷ್ಟಾಚಾರ ಪ್ರಕರಣಗಳು ವ್ಯವಸ್ಥೆಯ ಮೇಲೆ ನಂಬಿಕೆಯನ್ನು ಕುಗ್ಗಿಸಿದೆ. ಖಾಲಿ ಹುದ್ದೆಗಳ ನೇಮಕ ವಿಚಾರದಲ್ಲೂ ಹಿನ್ನೆಡೆಗೆ ಕಾರಣವಾಗಿದೆ. ನಮ್ಮ ಸರ್ಕಾರ ನೇಮಕಾತಿ ಪ್ರಕ್ರಿಯೆಯಲ್ಲಿ ವಿಶ್ವಾಸಾರ್ಹತೆ, ಪಾರದರ್ಶಕತೆ ಪುನಃ ಸ್ಥಾಪಿಸಲು ಬದ್ಧವಾಗಿದೆ.

ಇದನ್ನೂ ಓದಿ: ರಾಜ್ಯ ಸರ್ಕಾರ ದಿವಾಳಿ, ಸಂಬಳ ನೀಡಲೂ ಹಣವಿಲ್ಲ; ವಿಪಕ್ಷ ನಾಯಕ ಅಶೋಕ್​​ ಸ್ಫೋಟಕ ಆರೋಪ

ಅಲ್ಲದೆ, ಆಂತರಿಕ ಮೀಸಲಾತಿ ಕುರಿತಂತೆ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿದ್ದ ಕಾರಣ ಕೆಲವು ನೇಮಕಾತಿ ಪ್ರಕ್ರಿಯೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾಯಿತು. ಸಂವಿಧಾನಬದ್ಧತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಬದ್ಧವಾದ ಸರ್ಕಾರವಾಗಿ, ಸಾವಿರಾರು ಅಭ್ಯರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗುವ ನಿರ್ಧಾರಗಳನ್ನು ತುರ್ತಾಗಿ ತೆಗೆದುಕೊಳ್ಳುವ ಬದಲು ಕಾನೂನು ಚೌಕಟ್ಟಿನೊಳಗೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಲು ನಾವು ತೀರ್ಮಾನಿಸಿದ್ದೇವೆ. ಕಳೆದ 2.5 ವರ್ಷಗಳಲ್ಲಿ 40,000ಕ್ಕೂ ಹೆಚ್ಚು ನೇಮಕಾತಿಗಳನ್ನು ವಿವಿಧ ಇಲಾಖೆಗಳಲ್ಲಿ ಮಾಡಲಾಗಿದೆ. ಹಲವು ವರ್ಷಗಳಿಂದ ವಿಳಂಬದಿಂದ ಬಳಲುತ್ತಿರುವ ಅಭ್ಯರ್ಥಿಗಳ ಸಂಕಷ್ಟವನ್ನು ಮನಗಂಡು, ಮುಂದಿನ ನೇಮಕಾತಿಗಳಲ್ಲಿ ವಯೋಮಿತಿ ಮಿತಿಯನ್ನು 5 ವರ್ಷಕ್ಕಿಂತ ಹೆಚ್ಚು ಸಡಿಲಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಉಳಿದಿರುವ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ವೇಗವಾಗಿ ಮತ್ತು ಪಾರದರ್ಶಕವಾಗಿ ನಡೆಸುವ ಭರವಸೆಯನ್ನು ನೀಡುತ್ತಿದ್ದು, ಮುಂದಿನ ವರ್ಷಗಳಲ್ಲಿ ಹೆಚ್ಚಿನ ಹುದ್ದೆಗಳ ನೇಮಕಾತಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಆತ್ಮವಿಶ್ವಾಸ ಮತ್ತು ಸಹನೆಯೊಂದಿಗೆ ನಿಮ್ಮ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಸಿದ್ಧತೆಯತ್ತ ಗಮನ ಹರಿಸಿ. ಕರ್ನಾಟಕದ ಯುವಕರು ನಮ್ಮ ಭವಿಷ್ಯದ ಶಿಲ್ಪಿಗಳು. ನಿಮ್ಮ ಪರಿಶ್ರಮ ನಮಗೆ ಪ್ರೇರಣೆ. ನನ್ನ ಸರ್ಕಾರ ನಿಮ್ಮೊಂದಿಗೆ ಮಾತಿನಲ್ಲಿ ಮಾತ್ರವಲ್ಲ, ಕಾರ್ಯದಲ್ಲಿಯೂ ದೃಢವಾಗಿ ನಿಂತಿದೆ ಎಂದು ಸಿಎಂ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಶಿವಮೊಗ್ಗದಲ್ಲಿ SSLC ವಿದ್ಯಾರ್ಥಿ ಹತ್ಯೆ: ಕೊಲೆಗೆ ಸ್ಫೋಟಕ ಕಾರಣ ಬಿಚ್ಚಿಟ್ಟ ಎಸ್ಪಿ – Kannada News | Shivamogga SP Nikhil Reveals Reason to SSLC Student Sanketh Murder Case

ಶಿವಮೊಗ್ಗ, (ಫೆಬ್ರವರಿ 24): ಶಿವಮೊಗ್ಗದ SSLC ವಿದ್ಯಾರ್ಥಿ ಸಂಕೇತ್ ಕೊಲೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಪ್ರಕರಣ ಸಂಬಂಧ ಬಿಜೆಪಿ ನಾಯಕರು ಸಹ ಪ್ರತಿಕ್ರಿಯಿಸಿದ್ದು, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇನ್ನು ಕೇಸ್​​ ಬಗ್ಗೆ ಶಿವಮೊಗ್ಗ ಎಸ್.ಪಿ. ನಿಖಿಲ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಈಗಾಗಲೇ 7 ಜನ ಅಪ್ರಾಪ್ತರನ್ನು ಕೊಲೆ ಸಂಬಂಧ ಬಂಧಿಸಲಾಗಿದೆ. ಕ್ರಿಕೆಟ್ ಆಟದಲ್ಲಿ ನಡೆದಿದ್ದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಗಿರೀಶ್ ಜೊತೆ ಆರೋಪಿಗಳು ಕ್ರಿಕೆಟ್ ಆಟವಾಡಿದ್ದ ಹಿನ್ನೆಲೆಯಲ್ಲಿ ಗಲಾಟೆ ಮಾಡುತ್ತಿದ್ದರು. ಈ ವೇಳೆ ಸಂಕೇತ್ ಗಲಾಟೆ ಬಿಡಿಸಲು ತೆರಳಿದ್ದ. ಆ ವೇಳೆ ಸಂಕೇತ್ ಮರ್ಡರ್ ಆಗಿದೆ. ಕೈಯಲ್ಲಿ ಗುದ್ದಿ ಹಲ್ಲೆ ಮಾಡಿರುವ ಹಿನ್ನೆಲೆಯಲ್ಲಿ ಸಾವಾಗಿದೆ. ಕಳೆದೆರೆಡು ದಿನಗಳ ಹಿಂದೆಯಷ್ಟೇ ಕ್ರಿಕೆಟ್ ಆಟ ಆಡಿದ್ದರು. ಈ ಹಿನ್ನೆಲೆಯಲ್ಲಿ ಗಲಾಟೆ ನಡೆದು ಕೊಲೆ ನಡೆದಿದೆ. ಕೊಲೆ ಮಾಡಿರುವ ಅಪ್ರಾಪ್ತ ಬಾಲಕರ ಗಾಂಜಾ ಸೇವನೆ ಬಗ್ಗೆ ಪರೀಕ್ಷೆ ನಡೆಸಲಾಗುವುದು. ಊರುಗಡೂರಿನಲ್ಲಿ ವಿಶೇಷ ಬೀಟ್ ವ್ಯವಸ್ಥೆ ಮಾಡಲಾಗುವುದು. ಔಟ್ ಪೊಸ್ಟ್ ತೆರೆಯಲು ಕೂಡ ಕ್ರಮ ವಹಿಸಲಾಗಿದೆ ಎಂದರು.

ಇದನ್ನೂ ಓದಿ: ಶಿವಮೊಗ್ಗ ಎಸ್​ಎಸ್​ಎಲ್​ಸಿ ವಿದ್ಯಾರ್ಥಿ ಕೊಲೆ ಪ್ರಕರಣ: 15 ಲಕ್ಷ ರೂ. ಪರಿಹಾರ ಘೋಷಿಸಿದ ಸರ್ಕಾರ

Source link

ಮಹಿಳೆಯರ ಮೇಲೆ ಹರಿದ ಸರ್ಕಾರಿ ಬಸ್​​: ಓರ್ವ ಮಹಿಳೆಯ ಕಾಲು ಕಟ್, ಇಬ್ಬರಿಗೆ ಗಂಭೀರ ಗಾಯ! – Kannada News | KKRTC Driver Negligence Causes Horrific Accident at Gadag Bus Stand; 3 Women Critical

ಗದಗ,ಫೆ.24: ಚಾಲಕನ ಅತಿಯಾದ ವೇಗ ಮತ್ತು ನಿರ್ಲಕ್ಷ್ಯಕ್ಕೆ ಅಮಾಯಕ ಪ್ರಯಾಣಿಕರು ಬಲಿಯಾಗುತ್ತಿರುವ ಘಟನೆಗಳು ಮುಂದುವರಿದಿವೆ. ಗದಗ ನಗರದ ಹೊಸ ಬಸ್ ನಿಲ್ದಾಣದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (KKRTC) ಬಸ್ ಹರಿದು ಮೂವರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಯಚೂರು ವಿಭಾಗದ ಮಾಸ್ಕಿ ಡಿಪೋಗೆ ಸೇರಿದ ಬಸ್ ಚಾಲಕ, ನಿಲ್ದಾಣದ ಒಳಗೆ ಅತಿವೇಗವಾಗಿ ಬಸ್ ಚಾಲನೆ ಮಾಡಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿ ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯರ ಮೇಲೆ ಬಸ್ ಹರಿದಿದೆ. ಸುನಗ ಗ್ರಾಮದ ನಿವಾಸಿ ಶಾಂತವ್ವ ಸಿದ್ದಪ್ಪ ಕೊರ್ತಿ ಎಂಬುವವರು ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ಚಕ್ರ ಹರಿದ ಪರಿಣಾಮ ಅವರ ಕಾಲು ತುಂಡಾಗಿದ್ದು, ಬೆನ್ನಿನ ಭಾಗಕ್ಕೂ ಗಂಭೀರ ಗಾಯಗಳಾಗಿವೆ. ಥಮಿಕ ಚಿಕಿತ್ಸೆಯ ನಂತರ ಶಾಂತವ್ವ ಅವರ ಸ್ಥಿತಿ ಚಿಂತಾಜನಕವಾಗಿದ್ದರಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಎಸ್‌ಡಿಎಂ (SDM) ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಇಬ್ಬರು ಮಹಿಳೆಯರಿಗೂ ಗಂಭೀರ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ ಗದಗ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿರ್ಲಕ್ಷ್ಯದ ಚಾಲನೆ ತೋರಿದ ಬಸ್ ಚಾಲಕನ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಬಸ್ ನಿಲ್ದಾಣದ ಒಳಗೆ ಇಷ್ಟು ವೇಗವಾಗಿ ಬಸ್ ಚಲಿಸಲು ಕಾರಣವೇನು ಎಂಬ ಬಗ್ಗೆ ಸಾರಿಗೆ ಸಂಸ್ಥೆಯೂ ಆಂತರಿಕ ತನಿಖೆಗೆ ಆದೇಶಿಸಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಾರ್ವಜನಿಕರ ಪ್ರಾಣ ತೆಗೆಯಲು ಕಾಯುತ್ತಿದೆ ಈ ರಸ್ತೆ: ತೆರೆದ ಗುಂಡಿಯಲ್ಲಿ ಬಿದ್ದು ಕೈಕಾಲು ಮುರಿದುಕೊಂಡ ಜನ – Kannada News | Devanahalli’s Open Pits: BESCOM’s Cable Laying Negligence Endangers Lives and Causes Accidents

ದೇವನಹಳ್ಳಿ, ಫೆ.24: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿ ಬೆಸ್ಕಾಂ ಸಿಬ್ಬಂದಿಯ ನಿರ್ಲಕ್ಷ್ಯ ಅತಿರೇಕಕ್ಕೆ ತಲುಪಿದೆ. ಭೂಗತ ಕೇಬಲ್ ಅಳವಡಿಕೆ ಹೆಸರಿನಲ್ಲಿ ಪಟ್ಟಣದ ಹೃದಯ ಭಾಗದಲ್ಲಿ ತೆಗೆದಿರುವ ಗುಂಡಿಗಳನ್ನು ಮುಚ್ಚದೆ ಹಾಗೆಯೇ ಬಿಡಲಾಗಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರು ಪ್ರತಿನಿತ್ಯ ಅಪಘಾತಕ್ಕೀಡಾಗುತ್ತಿದ್ದಾರೆ. ಪಟ್ಟಣದ ಬಸ್ ನಿಲ್ದಾಣ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಒಂದು ಟ್ರಾನ್ಸ್‌ಫಾರ್ಮರ್‌ನಿಂದ ಮತ್ತೊಂದಕ್ಕೆ ಕೇಬಲ್ ಅಳವಡಿಸಲು ನಾಲ್ಕೈದು ಅಡಿ ಆಳದ ಗುಂಡಿಗಳನ್ನು ತೋಡಲಾಗಿದೆ. ಕೆಲಸ ಮುಗಿದರೂ ಗುಂಡಿಗಳನ್ನು ಮುಚ್ಚದೆ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಕಳೆದ ಎರಡು ಮೂರು ವಾರಗಳಿಂದ ಈ ಗುಂಡಿಗಳು ತೆರೆದ ಸ್ಥಿತಿಯಲ್ಲೇ ಇವೆ. ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನಾಗಲಿ ಅಥವಾ ಬ್ಯಾರಿಕೇಡ್‌ಗಳನ್ನಾಗಲಿ ಹಾಕದೆ ನಿರ್ಲಕ್ಷ್ಯ ತೋರಲಾಗಿದೆ. ರಾತ್ರಿ ವೇಳೆ ಹಾಗೂ ಜನನಿಬಿಡ ಸಮಯದಲ್ಲಿ ಗುಂಡಿಗಳು ಕಾಣದೆ ಅನೇಕ ಮಹಿಳೆಯರು ಮತ್ತು ಮಕ್ಕಳು ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಸ್ಥಳೀಯರು ಹತ್ತಾರು ಬಾರಿ ದೂರು ನೀಡಿದರೂ ಬೆಸ್ಕಾಂ ಸಿಬ್ಬಂದಿ ಮಾತ್ರ ಎಚ್ಚೆತ್ತುಕೊಂಡಿಲ್ಲ. ಯಾವುದಾದರೂ ದೊಡ್ಡ ಅನಾಹುತ ಸಂಭವಿಸುವವರೆಗೆ ಅಧಿಕಾರಿಗಳು ಕಾಯುತ್ತಿದ್ದಾರೆಯೇ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಕೂಡಲೇ ಈ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಪಟ್ಟಣದ ನಿವಾಸಿಗಳು ಒತ್ತಾಯಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ವಸ್ತುಗಳನ್ನು ಫ್ರಿಡ್ಜ್‌ ಮೇಲೆ ಇಡುವ ತಪ್ಪನ್ನು ಮಾಡಲೇಬೇಡಿ – Kannada News | Don’t make the mistake of keeping these items in the fridge

ಅನೇಕರಿಗೆ ಮನೆಯಲ್ಲಿ ಎಷ್ಟು ಜಾಗ ಇದ್ರೂ ಸಾಕಾಗೋದೇ ಇಲ್ಲ. ಏನಾದ್ರೂ ಖಾಲಿ ಜಾಗ ಕಂಡ್ರೆ ಅಲ್ಲಿ ಯಾವುದಾದರೂ ವಸ್ತುಗಳನ್ನು ತುಂಬಿಸಿಡುತ್ತಾರೆ. ಅದರಲ್ಲೂ ಫ್ರಿಡ್ಜ್‌ ಮೇಲೆ ಏನಾದ್ರೂ ಒಂದು ವಸ್ತುಗಳನ್ನು ಇಟ್ಟೇ ಇಡುತ್ತಾರೆ. ಬಹುತೇಕ ಹೆಚ್ಚಿನ ಮನೆಗಳಲ್ಲಿ ರೆಫ್ರಿಜರೇಟರ್‌ನ (refrigerator)ಮೇಲೆ ಬಾಕ್ಸ್‌ಗಳು, ಮಾತ್ರೆ, ಡೆಕೊರೇಟಿವ್‌ ಐಟಂ ಹೀಗೆ ಯಾವುದಾದರೂ ವಸ್ತು ಇದ್ದೇ ಇರುತ್ತದೆ. ಆದ್ರೆ ಕೆಲವೊಂದು ವಸ್ತುಗಳನ್ನು ಈ ರೀತಿ ಫ್ರಿಡ್ಜ್‌ ಮೇಲೆ ಇಡುವುದು ತಪ್ಪು,ಇದರಿಂದ ಅಪಾಯ ಉಂಟಾಗುವ ಸಾಧ್ಯತೆ ಇದೆ ಜೊತೆಗೆ ಇದು ರೆಫ್ರಿಜರೇಟರ್‌ನ ಕಾರ್ಯಕ್ಷಮತೆಯ ಮೇಲೂ ಪರಿಣಾಮ ಬೀರಬಹುದು. ಹಾಗಿದ್ರೆ ಯಾವ ವಸ್ತುಗಳನ್ನು ಫ್ರಿಡ್ಜ್‌ ಮೇಲೆ ಇಡಲೇಬಾರದು ಎಂಬುದನ್ನು ನೋಡೋಣ ಬನ್ನಿ.

ಈ ವಸ್ತುಗಳನ್ನು ಫ್ರಿಡ್ಜ್‌ ಮೇಲೆ ಇಡಬೇಡಿ:

ಔಷಧಿಗಳು: ಕೆಲವು ಜನರು ತಮ್ಮ ಔಷಧಿಗಳನ್ನು ರೆಫ್ರಿಜರೇಟರ್ ಮೇಲೆ ಇಡುತ್ತಾರೆ, ಆದರೆ ಇದು ಒಳ್ಳೆಯ ಅಭ್ಯಾಸವಲ್ಲ. ರೆಫ್ರಿಜರೇಟರ್ ಒಳಗೆ ತಂಪಾಗಿದ್ದರೂ, ಹಿಂಭಾಗ ಮತ್ತು ಮೇಲ್ಭಾಗವು ತುಂಬಾ ಬಿಸಿಯಾಗಿರುತ್ತದೆ. ಈ ಶಾಖ ಔಷಧಿಗಳ ಗುಣಮಟ್ಟದ ಮೇಲೆ  ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಔಷಧಿಗಳನ್ನು ಯಾವಾಗಲೂ ಒಣ ಅಥವಾ ತಂಪಾದ ಸ್ಥಳದಲ್ಲಿ ಸಂಗ್ರಹಿಸಿಡುವುದು ಸೂಕ್ತ.

ನೀರಿನ ಕ್ಯಾನ್‌ಗಳು ಅಥವಾ ಬಾಟಲಿಗಳು: ಕೆಲವು ಜನರು, ಜಾಗವನ್ನು ಉಳಿಸುವ ಪ್ರಯತ್ನದಲ್ಲಿ, ತಮ್ಮ ರೆಫ್ರಿಜರೇಟರ್ ಮೇಲೆ ನೀರಿನ ಕ್ಯಾನ್‌ಗಳನ್ನು ಅಥವಾ ಬಾಟಲಿಗಳನ್ನು ಇಡುತ್ತಾರೆ. ಇದು ರೆಫ್ರಿಜರೇಟರ್ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ಅದರ ಸಮತೋಲನವನ್ನು ಹಾಳುಮಾಡುತ್ತದೆ. ಇದಲ್ಲದೆ ನೀರು ಚೆಲ್ಲಿದರೆ ಶಾರ್ಟ್ ಸರ್ಕ್ಯೂಟ್ ಉಂಟಾಗುವ ಸಾಧ್ಯತೆಯೂ ಇರುತ್ತದೆ.

ಎಲೆಕ್ಟ್ರಾನಿಕ್ ಉಪಕರಣಗಳು: ಸ್ಥಳಾವಕಾಶದ ಕೊರತೆಯಿಂದಾಗಿ, ಹೆಚ್ಚಿನವರು ಫ್ರಿಡ್ಜ್‌  ಮೇಲೆ ಟೋಸ್ಟರ್‌ಗಳು, ಮೈಕ್ರೋವೇವ್‌ಗಳು, ಓವನ್‌ಗಳು ಅಥವಾ ಇತರ ಸಣ್ಣ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಇಡುತ್ತಾರೆ. ಈ ವಸ್ತುಗಳನ್ನು ಫ್ರಿಡ್ಜ್‌ ಮೇಲೆ ಇಡುವುದರಿಂದ ರೆಫ್ರಿಜರೇಟರ್‌ನಿಂದ ಬರುವ ಶಾಖ ಮತ್ತು ಕಂಪನಗಳು ಆ ಎಲೆಕ್ಟ್ರಾನಿಕ್ ವಸ್ತುಗಳನ್ನು ಹಾನಿಗೊಳಿಸಬಹುದು.

ಅಕ್ವೇರಿಯಂ: ರೆಫ್ರಿಜರೇಟರ್‌ಗಳ ಮೇಲೆ ಮೀನಿನ ಅಕ್ವೇರಿಯಂಗಳನ್ನು ಇಡಬಾರದು ಎಂದು ಹೇಳಲಾಗುತ್ತದೆ, ಏಕೆಂದರೆ ರೆಫ್ರಿಜರೇಟರ್‌ನಿಂದ ಬರುವ ಸ್ವಲ್ಪ ಶಾಖ ಮತ್ತು ಕಂಪನಗಳು ನೀರಿನ ತಾಪಮಾನವನ್ನು ಹೆಚ್ಚಿಸಬಹುದು, ಇದು ಮೀನುಗಳಿಗೆ ಹಾನಿಯನ್ನುಂಟುಮಾಡುವ ಸಾಧ್ಯತೆಯಿದೆ.

ಕಾಗದ, ವೃತ್ತಪತ್ರಿಕೆ ಅಥವಾ ಪ್ಲಾಸ್ಟಿಕ್ ಚೀಲ: ರೆಫ್ರಿಜರೇಟರ್ ಮೇಲೆ ಪತ್ರಿಕೆಗಳು, ಪುಸ್ತಕಗಳು ಅಥವಾ ಪ್ಲಾಸ್ಟಿಕ್‌ ಚೀಲಗಳನ್ನು ಇಡುವುದು ಸೂಕ್ತವಲ್ಲ. ರೆಫ್ರಿಜರೇಟರ್‌ನ ಹಿಂಭಾಗದಿಂದ ಬೆಚ್ಚಗಿನ ಗಾಳಿ ಹೊರಬರುತ್ತದೆ. ಕಾಗದ ಅಥವಾ ಪ್ಲಾಸ್ಟಿಕ್ ಈ ಶಾಖವನ್ನು ಹಿಡಿದಿಟ್ಟುಕೊಳ್ಳಬಹುದು, ಇದು ಫ್ರಿಡ್ಜ್‌  ಅಧಿಕ ಬಿಸಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಗೃಹಣಿಯರೇ… ಪಾತ್ರೆ ತೊಳೆಯುವ ಸ್ಪಾಂಜ್‌ಗಳನ್ನು ಎಷ್ಟು ಬಾರಿ ಬದಲಾಯಿಸಬೇಕು ತಿಳ್ಕೊಳ್ಳಿ

ಬೆಂಕಿ ಹೊತ್ತಿಕೊಳ್ಳುವ ವಸ್ತುಗಳು: ಬೆಂಕಿಕಡ್ಡಿಗಳು, ಲೈಟರ್‌ಗಳು ಅಥವಾ ಸ್ಪ್ರೇಗಳಂತಹ ವಸ್ತುಗಳನ್ನು ರೆಫ್ರಿಜರೇಟರ್‌ನ ಮೇಲ್ಭಾಗದಲ್ಲಿ ಇಡುವುದು ಸಹ ಸುರಕ್ಷಿತವಲ್ಲ. ರೆಫ್ರಿಜರೇಟರ್‌ನ ಮೇಲ್ಭಾಗ ಮತ್ತು ಹಿಂಭಾಗವು ಬಿಸಿಯಾಗಿರುವುದರಿಂದ, ಇದರಿಂದ ಬೆಂಕಿ ಹತ್ತಿಕೊಳ್ಳುವ ಅಪಾಯ ಇರುತ್ತದೆ.

ಪ್ಲಾಸ್ಟಿಕ್ ಅಥವಾ ಬಟ್ಟೆಯ ಹೊದಿಕೆ: ಹೆಚ್ಚಿನ ಜನರು ತಮ್ಮ ರೆಫ್ರಿಜರೇಟರ್‌ಗಳನ್ನು ಧೂಳು ಮತ್ತು ಕೊಳಕಿನಿಂದ ರಕ್ಷಿಸಲು ಫ್ರಿಡ್ಜ್‌ ಮೇಲೆ ಪ್ಲಾಸ್ಟಿಕ್ ಅಥವಾ ಬಟ್ಟೆಯ ಕವರ್‌ಗಳನ್ನು ಮುಚ್ಚುತ್ತಾರೆ. ಇದು ಸುರಕ್ಷಿತವಲ್ಲ, ಏಕೆಂದರೆ ಇದು ಶಾಖವು ಹೊರಹೋಗುವುದನ್ನು ತಡೆಯುತ್ತದೆ ಮತ್ತು ಅದನ್ನು ಒಳಗೆ ಹಿಡಿದಿಟ್ಟುಕೊಳ್ಳುತ್ತದೆ. ಪರಿಣಾಮವಾಗಿ, ರೆಫ್ರಿಜರೇಟರ್ ಹೆಚ್ಚು ಬಿಸಿಯಾಗುತ್ತದೆ ಮತ್ತು ಹಾನಿಯಾಗುವ ಸಾಧ್ಯತೆ ಹೆಚ್ಚು.

ಪ್ಲಾಂಟ್‌, ಅಲಂಕಾರಿಕ ವಸ್ತು: ಕೆಲವರು ಮನೆಯ ಅಲಂಕಾರವನ್ನು ಹೆಚ್ಚಿಸಲು ರೆಫ್ರಿಜರೇಟರ್‌ಗಳ ಮೇಲೆ ಪ್ಲಾಂಟ್‌ ಇತ್ಯಾದಿ ಅಲಂಕಾರಿಕ ವಸ್ತುಗಳನ್ನು ಇಡುತ್ತಾರೆ. ಈ ರೀತಿಯ ಭಾರವಾದ ವಸ್ತುಗಳು ರೆಫ್ರಿಜರೇಟರ್ ಮೇಲೆ ಹೆಚ್ಚುವರಿ ಒತ್ತಡ ಉಂಟುಮಾಡುತ್ತದೆ. ಇದರಿಂದ ಫ್ರಿಡ್ಜ್‌ ಹಾನಿಗೊಳಗಾಗುವ ಸಾಧ್ಯತೆ ಇರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:13 pm, Tue, 24 February 26

Source link

ಧಾರವಾಡದಲ್ಲಿ ಯುವಕರ ಉಗ್ರ ಹೋರಾಟ ಡ್ರೋನ್​​ನಲ್ಲಿ ಕಂಡಿದ್ದು ಹೀಗೆ – Kannada News | Job aspirants Protest In Dharwad, here drone view

ಧಾರವಾಡ, (ಫೆಬ್ರವರಿ 24): ತಾಳ್ಮೆ ಕಟ್ಟೆಯೊಡೆದಿದೆ. ಆಕ್ರೋಶ ಭುಗಿಲೆದ್ದಿದೆ.. ಉದ್ಯೋಗಾಕಾಂಕ್ಷಿಗಳ (Job aspirants) ಕಿಚ್ಚು ಕ್ಷಣ ಕ್ಷಣಕ್ಕೂ ಕಾವೇರುತ್ತಿದೆ. ಹೀಗಾಗಿ ಧಾರವಾಡದಲ್ಲಿ (Dharwad) ರೋಷಾಗ್ನಿ ಧಗಧಗ ಹೊತ್ತಿ ಉರಿಯುತ್ತಿದೆ. ಹೌದು…ವಿದ್ಯಾಕಾಶಿ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ಸರ್ಕಾರದ ವಿರುದ್ಧ ಬೀದಿಗಿಳಿದು ಉಗ್ರ ಹೋರಾಟ ನಡೆಸುತ್ತಿದ್ದು, ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನ ಕೂಡಲೇ ಭರ್ತಿ ಮಾಡುವಂತೆ ಆಗ್ರಹಿಸಿ ಸಿಡಿದೆದ್ದಿದ್ದಾರೆ.

ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಇಂದು (ಫೆಬ್ರವರಿ 24) ಧಾರವಾಡದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು. ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಶ್ರೀನಗರ ವೃತ್ತದಿಂದ ಜುಬ್ಲಿ ಸರ್ಕಲ್ -ವರೆಗೆ ಪ್ರತಿಭಟನಾ ರ್ಯಾಲಿಗೆ ಕರೆ ನೀಡಿದ್ರು. ಆದ್ರೆ ಬಿಜೆಪಿ ಪ್ರತಿಭಟನೆಯನ್ನೇ ಹೈಜಾಕ್ ಮಾಡಿ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಬೀದಿಗಿಳಿದಿದ್ದು, ಬ್ಯಾರಿಕೇಡ್​ಗಳನ್ನ ತಳ್ಳಿ ಮುನ್ನುಗ್ಗಿದ್ರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತಳ್ಳಾಟ ನೂಕಾಟ ನಡೀತು.

ಇದನ್ನೂ ನೋಡಿ: Live: ಧಾರವಾಡದಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ, ನೇರಪ್ರಸಾರ

Source link