ಪರಿಸರಸ್ನೇಹಿ ಯೋಜನೆಗಳಿಗೆ ಆಪಲ್ ಭರ್ಜರಿ ಹೂಡಿಕೆ; ಸ್ವಚ್ಛ ಇಂಧನ, ಪ್ಲಾಸ್ಟಿಕ್ ನಿವಾರಣೆ, ತ್ಯಾಜ್ಯ ನಿರ್ವಹಣೆ ಇತ್ಯಾದಿ ಉಪಕ್ರಮಗಳ ಘೋಷಣೆ – Kannada News | Apple announces series of initiatives for 2030 carbon neutral goal, including Rs 100 cr renewable energy project
ನವದೆಹಲಿ, ಮೇ 7: ವಿಶ್ವದ ದೈತ್ಯ ತಂತ್ರಜ್ಞಾನ ಸಂಸ್ಥೆಯಾದ ಆಪಲ್ (Apple Inc), ಭಾರತದಲ್ಲಿ ಪರಿಸರ ಸ್ನೇಹಿ ಇಂಧನಕ್ಕಾಗಿ ದೊಡ್ಡ ಹೆಜ್ಜೆಯನ್ನಿಟ್ಟಿದೆ. ತನ್ನ ‘2030 ಕಾರ್ಬನ್ ನ್ಯೂಟ್ರಲ್’ (2030 Carbon Neutral) ಗುರಿಯನ್ನು ತಲುಪುವ ನಿಟ್ಟಿನಲ್ಲಿ ಭಾರತದ ಕ್ಲೀನ್ ಎನರ್ಜಿ (Clean Energy) ವಲಯದಲ್ಲಿ 100 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಆಪಲ್ ಘೋಷಿಸಿದೆ. ಇದೂ ಒಳಗೊಂಡಂತೆ ವಿವಿಧ ಪರಿಸರ ಉಪಕ್ರಮಗಳನ್ನು ಆ್ಯಪಲ್ ಕಂಪನಿ ಕೈಗೊಳ್ಳುತ್ತಿದೆ. 2030ರ ವೇಳೆಗೆ ತನ್ನ ಸಂಪೂರ್ಣ ಪೂರೈಕೆ ಸರಪಳಿ (Supply Chain)…