All posts by nagaraj11081993

ಅವರು ರಶೀ, ಇವರು ವಿಜು: ರಶ್ಮಿಕಾ, ವಿಜಯ್ ದೇವರಕೊಂಡ ಪರಸ್ಪರ ಕರೆಯೋದು ಹೀಗೆ – Kannada News | Rashmika Mandanna Vijay Deverakonda call each other nickname Vijju and Rushie

ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ (Vijay Deverakonda) ಅವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಉದಯಪುರದಲ್ಲಿ ಫೆಬ್ರವರಿ 26ರಂದು ಈ ಸೆಲೆಬ್ರಿಟಿ ಜೋಡಿಯ ಮದುವೆ ನಡೆಯಲಿದೆ. ಹಲವು ವರ್ಷಗಳ ಕಾಲ ಪರಸ್ಪರ ಪ್ರೀತಿಸಿದ್ದ ರಶ್ಮಿಕಾ (Rashmika Mandanna) ಮತ್ತು ವಿಜಯ್ ದೇವರಕೊಂಡ ಅವರು ಈ ಮೊದಲೇ ಹಲವು ಬಾರಿ ಸೂಚನೆ ನೀಡಿದ್ದರು. ನೇರವಾಗಿ ಪ್ರೀತಿಯನ್ನು ಒಪ್ಪಿಕೊಳ್ಳದೇ ಇದ್ದರೂ ಕೂಡ ಅವರ ವರ್ತನೆಯಲ್ಲಿ ಎಲ್ಲವೂ ಗೋಚರ ಆಗುತ್ತಿತ್ತು. ಪರಸ್ಪರ ಪ್ರೀತಿಯಿಂದ ಅಡ್ಡಹೆಸರು (Nickname) ಕರೆಯುತ್ತಿದ್ದಿದ್ದೇ ಈ ಮಾತಿಗೆ ಸಾಕ್ಷಿ.

ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಅವರನ್ನು ವಿಜು ಎಂದು ಕರೆಯುತ್ತಿದ್ದರು. ಅದೇ ರೀತಿ, ರಶ್ಮಿಕಾ ಮಂದಣ್ಣ ಅವರನ್ನು ವಿಜಯ್ ದೇವರಕೊಂಡ ಅವರು ರಶೀ ಎಂದು ಕರೆಯುತ್ತಿದ್ದರು. ಇದೆಲ್ಲ ಗುಟ್ಟಾಗಿ ನಡೆದಿದ್ದಲ್ಲ. ಸೋಶಿಯಲ್ ಮೀಡಿಯಾದಲ್ಲಿ ಕೂಡ ರಶ್ಮಿಕಾ ಮಂದಣ್ಣ ಅವರು ಪ್ರೀತಿಯಿಂದ ವಿಜು ಎಂದು ಕರೆದಿದ್ದರು. ಆಗಲೇ ಅಭಿಮಾನಿಗಳಿಗೆ ಎಲ್ಲವೂ ಖಚಿತ ಆಗಿತ್ತು.

ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದ ಬಳಿಕ ರಶ್ಮಿಕಾ ಮಂದಣ್ಣ ಅವರು ತೆಲುಗು ಚಿತ್ರರಂಗಕ್ಕೆ ಹಾರಿದರು. ಅಲ್ಲಿ ಅವರಿಗೆ ವಿಜಯ್ ದೇವರಕೊಂಡ ಜೊತೆ ಆಪ್ತತೆ ಬೆಳೆಯಿತು. ಇಬ್ಬರು ಜೊತೆಯಾಗಿ ‘ಗೀತ ಗೋವಿಂದಂ’, ‘ಡಿಯರ್ ಕಾಮ್ರೇಡ್’ ಸಿನಿಮಾಗಳನ್ನು ಮಾಡಿದರು. ಆ ನಂತರ ಅವರು ಇನ್ನಷ್ಟು ಕ್ಲೋಸ್ ಆದರು. ಅವರಿಬ್ಬರ ನಡುವೆ ಪ್ರೀತಿ ಚಿಗುರಿತು.

2025ರ ಅಕ್ಟೋಬರ್​ ತಿಂಗಳಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ನಿಶ್ಚಿತಾರ್ಥ ಮಾಡಿಕೊಂಡರು. ಆದರೆ ಒಂದೇ ಒಂದು ಫೋಟೋ ಕೂಡ ಹೊರಬರಲಿಲ್ಲ. ಆ ನಂತರ ‘ದಿ ಗರ್ಲ್​ಫ್ರೆಂಡ್’ ಸಿನಿಮಾದ ಸಕ್ಸಸ್ ಮೀಟ್​​ನಲ್ಲಿ ರಶ್ಮಿಕಾ ಕೈಗೆ ವಿಜಯ್ ದೇವರಕೊಂಡ ಕಿಸ್ ಮಾಡಿದರು. ಆ ಮೂಲಕ ಅವರು ಪರೋಕ್ಷವಾಗಿ ತಮ್ಮ ಎಂಗೇಜ್​​ಮೆಂಟ್ ವಿಷಯವನ್ನು ಒಪ್ಪಿಕೊಂಡಂತೆ ಆಗಿತ್ತು.

ಇದನ್ನೂ ಓದಿ: ಮದುವೆಗೂ ಮುನ್ನ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಗಡಿಬಿಡಿ; ವಿಡಿಯೋ ವೈರಲ್

ಬಣ್ಣದ ಲೋಕದಲ್ಲಿ ಇಬ್ಬರಿಗೂ ಬೇಡಿಕೆ ಇದೆ. ಸಾಲು ಸಾಲು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ‘ರಣಬಾಲಿ’ ಸಿನಿಮಾದಲ್ಲಿ ಮತ್ತೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಒಟ್ಟಿಗೆ ಅಭಿನಯಿಸಲಿದ್ದಾರೆ. ಸದ್ಯಕ್ಕೆ ಮದುವೆ ಸಲುವಾಗಿ ಬ್ರೇಕ್ ಪಡೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಾಹುಲ್ ಗಾಂಧಿ ಇಂಡಿಯ ಬ್ಲಾಕ್ ನಾಯಕನ ಸ್ಥಾನದಿಂದ ಕೆಳಗಿಳಿಯಬೇಕು; ಮಣಿಶಂಕರ್ ಅಯ್ಯರ್ ಒತ್ತಾಯ – Kannada News | Mani Shankar Aiyar attack on Congress urges Rahul Gandhi to step down as INDIA bloc leader

ನವದೆಹಲಿ, ಫೆಬ್ರವರಿ 23: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ಬಿಸಿ ತುಪ್ಪವಾಗಿದ್ದಾರೆ. ತಮ್ಮದೇ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿರುವ ಮಣಿಶಂಕರ್ ಅಯ್ಯರ್ ರಾಹುಲ್ ಗಾಂಧಿ (Rahul Gandhi) ಇಂಡಿಯ ಬ್ಲಾಕ್ ನಾಯಕ ಸ್ಥಾನದಿಂದ ಕೆಳಗಿಳಿಯಬೇಕೆಂದು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ರಾಹುಲ್ ಗಾಂಧಿ ಅವರ ನಾಯಕತ್ವವನ್ನು ಪ್ರಶ್ನಿಸಿದ್ದು, ಕಾಂಗ್ರೆಸ್ ನೇತೃತ್ವದ ಇಂಡಿಯ ಬ್ಲಾಕ್‌ನ ನಾಯಕ ಸ್ಥಾನದಿಂದ ಕೆಳಗಿಳಿಯುವಂತೆ ಒತ್ತಾಯಿಸಿದ್ದಾರೆ. ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ಎಂ.ಕೆ. ಸ್ಟಾಲಿನ್ ಮತ್ತು ತೇಜಸ್ವಿ ಯಾದವ್ ಸೇರಿದಂತೆ ಹಲವಾರು ಪ್ರಮುಖ ವಿರೋಧ ಪಕ್ಷದ ನಾಯಕರು ರಾಹುಲ್ ಗಾಂಧಿಯ ಬದಲಾಗಿ ಇಂಡಿಯ ಬ್ಲಾಕ್ ನಾಯಕರಾಗಲು ಅರ್ಹತೆ ಹೊಂದಿದ್ದಾರೆ ಎಂದು ಅಯ್ಯರ್ ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ಪಕ್ಷದ ಇತ್ತೀಚಿನ ಚುನಾವಣಾ ಹಿನ್ನಡೆಗಳ ಕಾರಣದಿಂದಾಗಿ ರಾಹುಲ್ ಗಾಂಧಿ ಬದಲು ಈ ನಾಯಕರು ಇಂಡಿಯ ಮೈತ್ರಿಕೂಟವನ್ನು ಬಲಪಡಿಸಲು ಮತ್ತು ಮುನ್ನಡೆಸಲು ಹೆಚ್ಚಿನ ಸಮಯವನ್ನು ಮೀಸಲಿಡುತ್ತಾರೆಂಬ ಭರವಸೆಯಿದೆ. ಹೀಗಾಗಿ, ಅವರ ಪೈಕಿ ಒಬ್ಬರು ಇಂಡಿಯ ಬ್ಲಾಕ್ ನಾಯಕರಾಗಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿಯ ಸಂಸತ್ ಸದಸ್ಯತ್ವ ರದ್ದುಗೊಳಿಸುವಂತೆ ಬಿಜೆಪಿ ಸಂಸದರ ಆಗ್ರಹ

“ನಾವು ಈಗ ತುಂಬಾ ಅಸಮರ್ಥರಾಗಿದ್ದೇವೆ. ನಾವು ಮಮತಾ ಬ್ಯಾನರ್ಜಿಯನ್ನು ದೂರವಿಟ್ಟಿದ್ದು ಕಾಂಗ್ರೆಸ್ ಅನ್ನು ದುರ್ಬಲಗೊಳಿಸಲು ಕಾರಣವಾಯಿತು. ಹೀಗಾಗಿ, ರಾಹುಲ್ ಗಾಂಧಿ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟು ಪ್ರಾದೇಶಿಕ ಪಕ್ಷದ ನಾಯಕರಾದ ಸ್ಟಾಲಿನ್, ಮಮತಾ ಬ್ಯಾನರ್ಜಿ, ಅಖಿಲೇಶ್, ತೇಜಸ್ವಿ ಅಥವಾ ಬೇರೆ ಯಾರಿಗಾದರೂ ಈ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಅವಕಾಶ ನೀಡುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದ್ದಾರೆ.

ಹಾಗೇ, ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್ ಅವರು ಭಾರತ ಬಣದ ಸಂಚಾಲಕರಾಗಲು “ಅತ್ಯುತ್ತಮ” ಎಂದು ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ. “2029ರ ಗುರಿಯನ್ನು ಹೊಂದಿರುವ ಪ್ರಸ್ತುತ ಪರಿಸ್ಥಿತಿಯಲ್ಲಿ ಇಂಡಿಯ ಬಣವನ್ನು ಮುನ್ನಡೆಸಲು ಎಂ.ಕೆ ಸ್ಟಾಲಿನ್ ಅವರಿಗಿಂತ ಉತ್ತಮ ವ್ಯಕ್ತಿ ಯಾರೂ ಇಲ್ಲ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Video: ಪಿಣರಾಯಿ ವಿಜಯನ್ ಅವರೇ ಮತ್ತೆ ಕೇರಳದ ಸಿಎಂ ಆಗಲಿದ್ದಾರೆ: ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಭವಿಷ್ಯ

ಮಣಿಶಂಕರ್ ಅಯ್ಯರ್ ಕಾಂಗ್ರೆಸ್ ಬಗ್ಗೆ ಈ ರೀತಿಯ ನಿಲುವು ತಳೆದಿರುವುದು ಇದೇ ಮೊದಲಲ್ಲ. ಈ ಹಿಂದಿನ ಹೇಳಿಕೆಯಲ್ಲಿ, ಪಿಣರಾಯಿ ವಿಜಯನ್ ಅವರು ಕೇರಳದ ಮುಖ್ಯಮಂತ್ರಿಯಾಗಿ ತಮ್ಮ ಪಾತ್ರವನ್ನು ಉಳಿಸಿಕೊಳ್ಳಲು ಉತ್ತಮ ಸ್ಥಾನದಲ್ಲಿದ್ದಾರೆ ಎಂದು ಅಯ್ಯರ್ ಹೇಳಿದ್ದರು. ಕೇರಳ ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸಜ್ಜಾಗುತ್ತಿರುವಾಗ ಅವರು ನೀಡಿದ ಈ ಹೇಳಿಕೆ ಕಾಂಗ್ರೆಸ್ ಹೈಕಮಾಂಡ್​​ಗೆ ಮುಜುಗರ ತಂದಿತ್ತು.

ಮಣಿಶಂಕರ್ ಅಯ್ಯರ್ ಅವರ ಹೇಳಿಕೆಗಳಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದ್ದು, ಕಳೆದ ಕೆಲವು ವರ್ಷಗಳಿಂದ ಅವರಿಗೆ ಪಕ್ಷದೊಂದಿಗೆ ಯಾವುದೇ ಸಂಬಂಧವಿಲ್ಲ ಮತ್ತು ಅವರು ಸಂಪೂರ್ಣವಾಗಿ ತಮ್ಮ ವೈಯಕ್ತಿಕ ನಿಲುವನ್ನು ಮಾತ್ರ ಮಾತನಾಡುತ್ತಾರೆ ಎಂದು ಕಾಂಗ್ರೆಸ್ ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 3:27 pm, Mon, 23 February 26

Source link

ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ಇನ್ನಷ್ಟು ವಿಳಂಬ? ಕಾರಣ ಇಲ್ಲಿದೆ – Kannada News | Bengaluru–Chennai Expressway Opening Delayed to 2027; Only Eighty Percent Work Completed in Tamil Nadu Region

ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇImage Credit source: Google

ಬೆಂಗಳೂರು, ಫೆಬ್ರವರಿ 23: ಶೀಘ್ರದಲ್ಲಿಯೇ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಪ್ರಯಾಣಿಕರಿಗೆ, ನಿರಾಸೆ ಮೂಡಿಸುವ ಸುದ್ದಿಯೊಂದು ಹೊರಬಂದಿದೆ. ಈ ರಸ್ತೆಯಲ್ಲಿ ಸಂಚರಿಸಲು ಪ್ರಯಾಣಿಕರು 2027ರ ವರೆಗೂ ಕಾಯಬೇಕಾಗಬಹುದು ಎನ್ನಲಾಗಿದ್ದು, ಕೆಲವು ಅಡಚಣೆಗಳು ಕಾಮಗಾರಿಯ ವೇಗಕ್ಕೆ ಬ್ರೇಕ್​​ ಹಾಕಿದೆ. ಈ ಕಾರಿಡಾರ್ ಮೂರು ರಾಜ್ಯಗಳನ್ನು ಸಂಪರ್ಕಿಸುವುದರಿಂದ ಗಡಿ ದಾಟಿ ಸಮನ್ವಯ ಸಾಧಿಸುವುದು ಅಧಿಕಾರಿಗಳಿಗೆ ಸವಾಲಾಗುತ್ತಿದೆ. ವರದಿಗಳ ಪ್ರಕಾರ, 263 ಕಿಲೋ ಮೀಟರ್ ಉದ್ದದ ಈ ಕಾರಿಡಾರ್ ಯೋಜನೆಯಲ್ಲಿ ತಮಿಳುನಾಡು ಭಾಗದಲ್ಲೇ ಪ್ರಮುಖ ಅಡಚಣೆಗಳು ಎದುರಾಗಿವೆ ಎನ್ನಲಾಗಿದೆ.

ಸದ್ಯದ ಸ್ಥಿತಿಗತಿ ಏನು?

  • ಕರ್ನಾಟಕ ಭಾಗದಲ್ಲಿ ಶೇ.100ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಹೊಸಕೋಟೆಯಿಂದ ಕೆಜಿಎಫ್‌ವರೆಗೆ 72 ಕಿ.ಮೀ. ಸುಮಾರು ಒಂದು ವರ್ಷದಿಂದ ಸಂಚಾರಕ್ಕೆ ಮುಕ್ತವಾಗಿದೆ.
  • ಆಂಧ್ರ ಪ್ರದೇಶ ವ್ಯಾಪ್ತಿಯಲ್ಲಿ ಶೇ.92ರಷ್ಟು ಅಂದರೆ 85 ಕಿ.ಮೀ. ಉದ್ದದ ರಸ್ತೆಯ ಪೈಕಿ ಬಹುತೇಕ ಕಾಮಗಾರಿ ಕಂಪ್ಲೀಟ್​​ ಆಗಿದೆ.
  • ಆದರೆ ತಮಿಳುನಾಡು ಭಾಗದಲ್ಲಿಯೇ ಹೆಚ್ಚಿನ ಪ್ರಮಾಣದ ಕಾಮಗಾರಿ ಬಾಕಿ ಉಳಿದಿದೆ. ಶೇ.80ರಷ್ಟು ಮಾತ್ರ ಕೆಲಸ ಆಗಿದ್ದು, 106 ಕಿ.ಮೀ. ಉದ್ದದ ಈ ಭಾಗದಲ್ಲಿಯೇ ಇನ್ನೂ ಶೇ.20ರಷ್ಟು ಕಾಮಗಾರಿ ಆಗಬೇಕಿದೆ.

ಇದನ್ನೂ ಓದಿ:  ಮತ್ತಷ್ಟು ವಿಳಂಬವಾಗಲಿದೆ ಬೆಂಗಳೂರು ಚೆನ್ನೈ ಎಕ್ಸ್​ಪ್ರೆಸ್ ವೇ ಕಾಮಗಾರಿ

ವಿಳಂಬಕ್ಕೆ ಕಾರಣವೇನು?

ಮೊದಲಿನ ಯೋಜನೆಯ ಪ್ರಕಾರ 2024ರೊಳಗೆ ರಸ್ತೆ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಅರಣ್ಯ ಅನುಮತಿಗಳನ್ನು ಪಡೆಯುವಲ್ಲಿ ವಿಳಂಬ, ಭೂಸ್ವಾಧೀನ ಸಮಸ್ಯೆಗಳು ಮತ್ತು ಹಣಕಾಸು ಸಂಕಷ್ಟ ಯೋಜನೆಗೆ ಹಿನ್ನೆಡೆ ಉಂಟು ಮಾಡಿವೆ. ತಮಿಳುನಾಡಿನ ಅರಕ್ಕೋಣಂ–ಕಾಂಚೀಪುರಂ ಭಾಗದ ಕಾಮಗಾರಿ ಕೈಗೊಂಡ ಗುತ್ತಿಗೆದಾರರಿಗೆ ನಿಧಿ ಕೊರತೆ ಉಂಟಾಗಿ, 2025ರ ಮೇ ತಿಂಗಳಲ್ಲಿ ಕೆಲಸ ಸಂಪೂರ್ಣ ನಿಂತಿದೆ.

ಇನ್ನು ಇದು ಗ್ರೀನ್‌ಫೀಲ್ಡ್ (ಹೊಸ ಮಾರ್ಗ) ಯೋಜನೆಯಾಗಿರುವುದರಿಂದ, ಸಂಪೂರ್ಣ ಎಕ್ಸ್‌ಪ್ರೆಸ್‌ವೇ ಪೂರ್ಣಗೊಂಡ ಬಳಿಕವೇ ಸಂಚಾರಕ್ಕೆ ಮುಕ್ತವಾಗಲು ಸಾಧ್ಯ. ಮಧ್ಯದಲ್ಲಿ 25 ಕಿ.ಮೀ. ಕಾಮಗಾರಿ ಬಾಕಿ ಇರುವಾಗ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲು ಬರಲ್ಲ. ಹೀಗಾಗಿ ಕುಂಟುತ್ತಾ ಕಾಮಗಾರಿ ಸಾಗಿರುವ ಹಿನ್ನೆಲೆ, ಕ್ರಮಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮುಂದಾಗಿರೋದಾಗಿ ಟೈಮ್ಸ್​​ ನೌ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಾಕು ಮಗ-ತಂಗಿಯಿಂದಲೇ ಮಹಿಳೆಯ ಹತ್ಯೆ: ಓರ್ವ ವ್ಯಕ್ತಿಯಿಂದ ಬಯಲಾಯ್ತು ಕೊಲೆ ರಹಸ್ಯ – Kannada News | Tumakuru: FDA Officer Jayalakshmi Murder case: Family Betrayal for Property Exposed

ತುಮಕೂರು, ಫೆಬ್ರವರಿ 23: ಅವರು ವಿದ್ಯಾವಂತರು. ತುರುವೇಕೆರೆ ಬಿಇಒ ಕಚೇರಿಯ ಎಫ್​ಡಿಎ (FDA) ಅಧಿಕಾರಿ. ನಿವೃತ್ತಿಗೆ ಇನ್ನು ಎರಡು ವರ್ಷ ಬಾಕಿ ಇತ್ತು. ಎಲ್ಲರ ಜೊತೆ ಖುಷಿ ಖುಷಿಯಾಗಿದ್ದು, ಅವರ ಆರೋಗ್ಯ ಸಹ ಚೆನ್ನಾಗಿಯೇ ಇತ್ತು. ಆದರೆ ಅದೊಂದು ದಿನ ರಾತ್ರಿ ಮಲಗಿದ ಅವರು ಮತ್ತೆ ಮೇಲೇಳಲೇ ಇಲ್ಲ. ಜೊತೆಗಿದ್ದ ಸಹೋದರಿ ಮತ್ತು ಸಾಕು ಮಗ ಹೃದಯಾಘಾತದಿಂದ ಸಾವನಪ್ಪಿದ್ದಾರೆಂದು ಕಣ್ಣೀರು ಹಾಕಿದ್ದರು. ಇಬ್ಬರ ಮಾತನ್ನು ನಂಬಿದ ಇಡಿ ಊರೇ ಅವರ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿತ್ತು. ಇನ್ನೇನು ಮೃತದೇಹ ಮಣ್ಣಿ ಗಿಡುವ ಸಮಯ, ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಅದು ಅಸಹಜ ಸಾವಲ್ಲ ಬದಲಿಗೆ ಕೊಲೆ (murder) ಎನ್ನುವುದು ಬಯಲಾಗಿದೆ.

ಕೊಲೆಯಾದ ಮಹಿಳೆ ಹೆಸರು ಜಯಲಕ್ಷ್ಮಿ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಜೋಗಿಪಾಳ್ಯ ನಿವಾಸಿ. ವೃತ್ತಿಯಲ್ಲಿ ತುರುವೇಕೆರೆ ಬಿಇಒ ಕಚೇರಿಯ ಎಫ್​ಡಿಎ ಅಧಿಕಾರಿ. ಸರ್ಕಾರಿ ಶಿಕ್ಷಕನಾಗಿದ್ದ ಪತಿ ಶ್ರೀನಿವಾಸ್ ಕಳೆದ 25 ವರ್ಷಗಳ ಹಿಂದೆ ನಿಧನ ಹೊಂದಿದ್ದು, ಆ ಬಳಿಕ ಅನುಕಂಪದ ಆಧಾರದ ಮೇಲೆ ಸಿಕ್ಕ ಕೆಲಸವದು. ಆರ್ಥಿಕವಾಗಿ ಚೆನ್ನಾಗಿದ್ದ ಇವರು ಫೆಬ್ರವರಿ 19ರ ರಾತ್ರಿ ಸಾವನಪ್ಪಿದ್ದಾರೆ.

ಇದನ್ನೂ ಓದಿ: Tumakuru: ಸಾಕು ಮಗ, ಸಹೋದರಿಯಿಂದಲೇ ಮಹಿಳೆಯ ಕೊಲೆ; ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರ!

ಗಂಡನ ನಿಧನದ ಬಳಿಕ ಒಂಟಿಯಾಗಿದ್ದ ಜಯಲಕ್ಷ್ಮಿ ಅವರಿಗೆ ಮಕ್ಕಳಿರಲಿಲ್ಲ. ಹೀಗಾಗಿ ತುಮಕೂರು ಪಟ್ಟಣದಲ್ಲಿ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದ ತನ್ನ ತಂಗಿ ಅನುಸೂಯ ಮಗ ಚಂದ್ರಶೇಖರ್​​ನನ್ನೇ ದತ್ತು ಪಡೆದು ಸಾಕಿದ್ದರು. ಆತ ಸಹ ಚೆನ್ನಾಗಿ ಓದಿಕೊಂಡಿದ್ದ. ಬೆಳೆದು ದೊಡ್ಡವಾನದ ಆತ ಖಾಸಗಿ ಆಸ್ಪತ್ರೆಯ ಲ್ಯಾಬ್​ನಲ್ಲಿ ಕೆಲಸ ಮಾಡಿಕೊಂಡು ತುಮಕೂರಿನಲ್ಲಿ ವಾಸವಿದ್ದ. ಆದರೇ ಅದ್ಯಾಕೋ ಕಳೆದ ಎಂಟು ತಿಂಗಳ ಹಿಂದಷ್ಟೇ ತನ್ನ ತಾಯಿ ಅನುಸೂಯ ಜೊತೆ‌ ಸಾಕು ತಾಯಿ ಜಯಲಕ್ಷ್ಮಿಯ ಚಿಕ್ಕನಾಯಕನಹಳ್ಳಿ ಮನೆಗೆ ಬಂದು ವಾಸವಿದ್ದ. ಹೀಗೆ ಮೂವರು ವಾಸವಿದ್ದ ಜೋಗಿಪಾಳ್ಯದ ಮನೆಯಲ್ಲಿ ರಾತ್ರಿ ಎಲ್ಲರೊಟ್ಟಿಗೆ ಊಟ ಮಾಡಿದ್ದ ಜಯಲಕ್ಷ್ಮಿ ಬೆಳಗಾಗುವಷ್ಟರಲ್ಲಿ ಸಾವನಪ್ಪಿದ್ದರು.

ಶವ ಮಣ್ಣು ಮಾಡುವಷ್ಟರಲ್ಲೇ ಸ್ಫೋಟಕ ಟ್ವಿಸ್ಟ್

ಮಲಗಿದ್ದ ಜಾಗದಲ್ಲೇ ಜಯಲಕ್ಷ್ಮಿ ಕೊನೆಯುಸಿರು ಎಳೆದರೆ, ಮಗ ಹಾಗೂ ತಂಗಿ ಅನುಸೂಯ ಕಣ್ಣೀರು ಹಾಕಿದ್ದರು. ಸಂಬಂಧಿಕರಿಗೆ ಕರೆ ಮಾಡಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದಿದ್ದರು. ಜೊತೆಗೆ ಮೃತದೇಹ ಊರಿಗೆ ತರುವುದಾಗಿ, ಅಂತ್ಯಕ್ರಿಯೆಗೆ ಸಿದ್ಧತೆ ಮಾಡಲು ಹೇಳಿದ್ದರು. ಹೀಗೆ ರಾತ್ರಿ ಮೃತಪಟ್ಟ ಜಯಲಕ್ಷ್ಮಿ ಶವ ಬೆಳಗಾಗುವಷ್ಟರಲ್ಲಿ ಕಂಟಲಕೆರೆ ಊರು ತಲುಪಿತ್ತು. ಅದಾಗಲೇ ವಿಚಾರ ಬಾಯಿಂದ ಬಾಯಿಗೆ ಎಂಬಂತೆ ಎಲ್ಲರಿಗೂ ತಲುಪಿತ್ತು. ಸಂಬಂಧಿಕರು ಸಹ ಕಂಟಲಕೆರೆಯ ನಿವಾಸದತ್ತು ಬಂದಿದ್ದರು. ಅಂತ್ಯಕ್ರಿಯೆಗೆ ಸಿದ್ಧತೆ ಸಹ ನಡೆದು ಮಣ್ಣು ಮಾಡುವ ಕಾರ್ಯಕ್ಕೆಂದು ಶವ ಜಮೀನಿನತ್ತ ತೆಗೆದುಕೊಂಡು ಹೊರಟಿದ್ದರು. ಆದರೆ ಈ ವೇಳೆ ಅಲ್ಲಿಗೆ ಎಂಟ್ರಿ ಕೊಟ್ಟ ಪೊಲೀಸರು ಅವರ ಸಾವಿನ ಸಂಗತಿಗೆ ಸ್ಫೋಟಕ ಟ್ವಿಸ್ಟ್ ಕೊಟ್ಟಿದ್ದರು. ಅಸಲಿಗೆ ಜಯಲಕ್ಷ್ಮಿ ಹೃದಯಾಘಾತದಿಂದ ಸಾವನಪ್ಪಿರಲಿಲ್ಲ, ಬದಲಾಗಿ ಅವರ ಕೊಲೆಯಾಗಿತ್ತು.

ಜಯಲಕ್ಷ್ಮಿ ಸಾವಿನ ಬಗ್ಗೆ ವ್ಯಕ್ತಿ ಅನುಮಾನ

ಜಯಲಕ್ಷ್ಮಿ ಸಾವಿನ ಪ್ರಕರಣದಲ್ಲಿ ತಿರುವು ಕೊಟ್ಟಿದ್ದು ಅದೊಬ್ಬ ವ್ಯಕ್ತಿಯ ದೂರು. ಅವರ ಸಾವಿನ ಸಂಗತಿ ಕೇಳಿ ಎಲ್ಲರಿಗಿಂತ ಆ ವ್ಯಕ್ತಿ ಅತಿಯಾಗಿ ಮರುಗಿದ್ದರು. ಜಯಲಕ್ಷ್ಮಿಗೆ ಜೀವಕ್ಕೆ ಜೀವವಾಗಿದ್ದ ವ್ಯಕ್ತಿ. ಜಯಲಕ್ಷ್ಮಿ ಎಂದರೇ ಆತನಿಗೆ ಎಲ್ಲಿಲ್ಲದ ಪ್ರೀತಿ. ಅಸಲಿಗೆ ಜಯಲಕ್ಷ್ಮಿಗೂ ಸಹ ಆತನ ಮೇಲೆ ಅದೇ ರೀತಿಯ ಭಾವನೆ. ಆತನ ಹೆಸರು ಶ್ರೀನಿವಾಸ್.

ಜಯಲಕ್ಷ್ಮಿ ಗಂಡ ಕಳೆದುಕೊಂಡ ಬಳಿಕ ಪರಿಚಯವಾಗಿದ್ದ ಶ್ರೀನಿವಾಸ್, ಆಕೆಗೆ ಆತ್ಮೀಯನಾಗಿದ್ದ. ಗಂಡನಂತೆ ಆಕೆಯ ಜೊತೆಗಿದ್ದರು ಸಹ ಮದುವೆಯಾಗಿರಲಿಲ್ಲ ಅಷ್ಟೇ. ಪೊಲೀಸ್ ಮಾಹಿತಿ ಪ್ರಕಾರ ಇಬ್ಬರಲ್ಲೂ ಅತಿಯಾದ ಪ್ರೀತಿ ಇತ್ತು. ಒಟ್ಟಿಗೆ ವಾಸ ಸಹ ಮಾಡುತಿದ್ದರು. ಇಷ್ಟು ಚೆನ್ನಾಗಿದ್ದ ಇಬ್ಬರು ಕಳೆದ ಕೆಲ ತಿಂಗಳಿಂದ ಪ್ರತ್ಯೇಕವಾಗಿ ವಾಸ ಮಾಡುತಿದ್ದರು. ಇದರ ನಡುವೆ ಜಯಲಕ್ಷ್ಮಿ ಸಾವು ಶ್ರೀನಿವಾಸ್​ಗೆ ಅನುಮಾನ ಮೂಡಿಸಿತ್ತು. ಹೀಗಾಗಿಯೇ ಆತ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ. ಜಯಲಕ್ಷ್ಮಿ ಸಾವಿನ ಬಗ್ಗೆ ಅನುಮಾನದ ದೂರು ನೀಡಿದ್ದ.

ದೂರು ಹಿನ್ನಲೆ ತನಿಖೆ ಕೈಗೊಂಡ ಪೊಲೀಸರಿಗೆ ಮೃತ ಜಯಲಕ್ಷ್ಮಿ ಸಹೋದರಿ ಅನುಸೂಯ ಹಾಗೂ ಸಾಕು ಮಗ ಚಂದ್ರಶೇಖರ್ ಕಳ್ಳಾಟ ಬಯಲಾಗಿದೆ. ಎಲ್ಲರ ಮುಂದೆ ಇಬ್ಬರು ಹಾಕಿದ‌‌ ಮೊಸಳೆ ಕಣ್ಣೀರಿನ ಹಿಂದಿನ ಸತ್ಯ ಪತ್ತೆಯಾಗಿದೆ. ಅನುಸೂಯ ತನ್ನ ಒಡಹುಟ್ಟಿದ ಅಕ್ಕನನ್ನು ತಾನು ಜನ್ಮ ನೀಡಿದ ಮಗನೊಂದಿಗೆ ಸೇರಿ ಕೊಲೆ ಮಾಡಿ ಬಿಟ್ಟಿದ್ದಳು. ಮಾಡಿದ ಕೊಲೆ ಮುಚ್ಚಿ ಹಾಕಲು ಹೃದಯಾಘಾತದ ಕಥೆ ಕಟ್ಟಿದ್ದಳು. ಆ ಕಥೆ ಮುಚ್ಚಿ ಹಾಕಲು ತರಾತುರಿಯಲ್ಲಿ ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದಳು. ಈ ಎಲ್ಲಾ ವಿಚಾರ ತಿಳಿದ ಪೊಲೀಸರು ಕೂಡಲೇ ಇಬ್ಬರನ್ನು ಬಂಧಿಸಿ ತನಿಖೆ ಆರಂಭಿಸಿದ್ದರು. ಆಗಲೇ ಬಯಲಾಗಿದ್ದು ಜಯಲಕ್ಷ್ಮಿ ಸಾವಿನ ಹಿಂದಿನ ಸ್ಫೋಟಕ ಸಂಗತಿ.

ಶ್ರೀನಿವಾಸ್ ಪರಿಚಯ: ಒಂದೇ ಮನೆಯಲ್ಲಿ ವಾಸ

ಜಯಲಕ್ಷ್ಮಿಗೆ ಆಗಿನ್ನು ವಯಸ್ಸು 22. ಕುಟುಂಬ ನಿಶ್ಚಿಸಿದಂತೆ ಸರ್ಕಾರಿ ನೌಕರ ಶ್ರೀನಿವಾಸ್ ಎಂಬಾತನ ಜೊತೆ ಮದುವೆಯಾಗಿತ್ತು. ದುರಂತ ಅಂದರೆ ಮದುವೆಯಾದ 3 ವರ್ಷಕ್ಕೆ ಆತ ಸಾವನಪ್ಪಿದ್ದ. ಆತನ ಸಾವಿನ ಬಳಿಕ ಜಯಲಕ್ಷ್ಮಿ ಒಂಟಿಯಾಗಿದ್ದರು. ಗಂಡನ ಸರ್ಕಾರಿ ಕೆಲಸ ಅನುಕಂಪದ ಆಧಾರದಲ್ಲಿ ಜಯಲಕ್ಷ್ಮಿಗೆ ಸಿಕ್ಕಿತ್ತು. ಆಗ ಅವರಿಗೆ 25 ವರ್ಷ. ಒಂದು ಕಡೆ ಗಂಡನನ್ನು ಕಳೆದುಕೊಂಡ ವಿಧವೆ, ಈ ನಡುವೆ ಅನುಕಂಪದ ಸರ್ಕಾರಿ ಉದ್ಯೋಗ ಅವರ ಜೀವನ ಬದಲಿಸಿತ್ತು. ಚಿಕ್ಕವಯಸ್ಸಿಗೆ ಒಂಟಿಯಾಗಿದ್ದ ಅವರಿಗೆ ಅದೇಗೋ ಅದೇ ಊರಿನ ಕೇಬಲ್ ವ್ಯವಹಾರ ಮಾಡುತಿದ್ದ ಶ್ರೀನಿವಾಸ್ ಎಂಬುವವರ ಪರಿಚಯವಾಗಿದೆ. ಆರಂಭದಲ್ಲಿ ಸಿಕ್ಕಾಗ ಮಾತನಾಡುತ್ತಿದ್ದ ಇಬ್ಬರು ನಂತರದಲ್ಲಿ ಮಾತಾಡಲೆಂದೇ ಸುತಿದ್ದರು. ಪರಿಚಯ ಗೆಳೆತನವಾಗಿ ಬಹುಬೇಗ ಪ್ರೀತಿಗೆ ಬದಲಾಗಿತ್ತು.  ನಂತರದಲ್ಲಿ ಇಬ್ಬರು ಸಹ ಒಟ್ಟಿಗೆ ಒಂದೇ ಮನೆಯಲ್ಲಿ ವಾಸ ಮಾಡುತಿದ್ದರಾದರೂ ಸಹ ಮದುವೆಯಾಗಿರಲಿಲ್ಲ.

ಸರ್ಕಾರಿ ನೌಕರಿಯಲ್ಲಿದ್ದ ಜಯಲಕ್ಷ್ಮಿ ಎಲ್ಲವನ್ನು ನೋಡಿಕೊಳ್ಳುತಿದ್ದರು. ಒಂಟಿಯಾಗಿದ್ದ ಅವರಿಗೆ ಶ್ರೀನಿವಾಸನ ಸಂಗತಿ ಜೀವನ ದಿನ ದೂಡುವಂತೆ ಮಾಡಿತ್ತಾದರೂ ಅವರಿಗೆ ಮಕ್ಕಳಿರಲಿಲ್ಲ. ಹೀಗಾಗಿಯೇ ಜಯಲಕ್ಷ್ಮಿ ತುಮಕೂರಿನಲ್ಲಿ ವಾಸವಿದ್ದ ತನ್ನ ತಂಗಿ ಅನುಸೂಯಳ ಮಗ ಚಂದ್ರಶೇಖರ್ ನನ್ನು ದತ್ತು ಪಡೆದಿದ್ದಳು. ಚಂದ್ರಶೇಖರ್ ಸಹ ಓದಿನಲ್ಲಿ ಮುಂದಿದ್ದ. ಇನ್ನು ಅನುಸೂಯಾಳಿಗೆ ಕೌಟುಂಬಿಕ ಸಮಸ್ಯೆ ಇತ್ತು. ಗಂಡನಿಂದ ದೂರದ ಅವರು ಖಾಸಗಿ ಆಸ್ಪತ್ರೆಯ ನರ್ಸ್ ಆಗಿ ಕೆಲಸ ಮಾಡುತಿದ್ದರು. ಹೀಗಾಗಿ ತಂಗಿಯ ಮಗನ ದತ್ತು ಪಡೆದ ಜಯಲಕ್ಷ್ಮಿ ಆತನ ಆರ್ಥಿಕ ವೆಚ್ಚವನ್ನು ನೋಡಿಕೊಂಡಿದ್ದರು. ನಂತರದಲ್ಲಿ ಬೆಳೆದು ದೊಡ್ಡವನಾದ ಆತ ಖಾಸಗಿ ಆಸ್ಪತ್ರೆಯ ಲ್ಯಾಬ್​ನಲ್ಲಿ ಕೆಲಸಕ್ಕೆ ಸೇರಿದ್ದ.

ಶ್ರೀನಿವಾಸ್ ಕಂಡು ಕೆಂಡ

ಇತ್ತ ಎಲ್ಲವೂ ಚೆನ್ನಾಗಿತ್ತು ಅನ್ನುವಾಗಲೇ ಜಯಲಕ್ಷ್ಮಿ ಬದುಕಿನಲ್ಲಿ ವಿಧಿಯಾಟ ಎಲ್ಲವನ್ನೂ ಬದಲಾಯಿಸ ತೊಡಗಿತ್ತು. ಜಯಲಕ್ಷ್ಮಿ 58ನೇ ವಯಸ್ಸಿಗೆ ಕಾಲಿಟ್ಟ ಬಳಿಕ ನಿವೃತ್ತಿಯ ಸಮಯಕ್ಕೆ ಕೆಲವೇ ವರ್ಷ ಬಾಕಿ ಇತ್ತು. ಈ ನಡುವೆ ತುಮಕೂರಿನಲ್ಲಿ ವಾಸವಿದ್ದ ಅನುಸೂಯ ಹಾಗೂ ಮಗ ಚಂದ್ರಶೇಖರ್ ಕೆಲಸ ಬಿಟ್ಟಿದ್ದರು. ಬಳಿಕ ನೇರವಾಗಿ ಚಿಕ್ಕನಾಯಕನಹಳ್ಳಿಯ ಜಯಲಕ್ಷ್ಮಿ ಮನೆಗೆ ಬಂದವರೇ ಅಲ್ಲಿಯೇ ಸೆಟಲ್ ಆಗಿ ಬಿಟ್ಟರು. ಆದರೆ ಜಯಲಕ್ಷ್ಮಿ ಮನೆಯಲ್ಲಿ ಅದಾಗಲೇ ಶ್ರೀನಿವಾಸ್ ವಾಸವಿದ್ದ. ಆತನನ್ನು ಕಂಡು ಕಣ್ಣು ಕೆಂಡ ಮಾಡಿಕೊಂಡಿದ್ದ ಇಬ್ಬರು ಒಳಗೊಳಗೆ ಕತ್ತಿ ಮಸೆದಿದ್ದರು. ಅದರಂತೆ ಬಂದ ಎರಡು ತಿಂಗಳಿಗೆ ಶ್ರೀನಿವಾಸ್ ಮನೆ ಬಿಡುವಂತೆ ಮಾಡಿದ್ದರು. ಹೀಗೆ ಮನೆಯಿಂದ ಹೊರಟ ಶ್ರೀನಿವಾಸ್ ವಿಚಾರದಲ್ಲಿ ಜಯಲಕ್ಷ್ಮಿ ಬೇಸರಗೊಂಡಿದ್ದರು. ಇದೇ ವಿಚಾರವಾಗಿ ಸಾಕು ಮಗ ಚಂದ್ರಶೇಖರ್, ತಂಗಿ ಅನುಸೂಯ ಜೊತೆ ಮನೆಯಲ್ಲಿ ಹಲವು ಬಾರಿ ಚರ್ಚೆ ನಡೆದಿದೆ. ಹೀಗೆ ನಡೆದ ಮಾತಿನ ನಡುವೆ ತಾನು ಕಟ್ಟಿಸಿದ್ದ ಸ್ವಂತ ಮನೆಯನ್ನೇ ಜಯಲಕ್ಷ್ಮಿ ಬಿಡಲು ಸಿದ್ಧವಾಗಿದ್ದರು. ಅಷ್ಟೇ ಅಲ್ಲದೇ ಶ್ರೀನಿವಾಸ್ ಜೊತೆ ಮತ್ತೊಂದು ಮನೆ ಮಾಡಿಕೊಂಡು ವಾಸ ಮಾಡಲು ನಿರ್ಧರಿಸಿದ್ದರು.

ತಾನು ಸಂಪಾದಿಸಿದ್ದ ಮನೆ ಬಿಡಲು ಮುಂದಾದ ಜಯಲಕ್ಷ್ಮಿ ತುರುವೇಕೆರೆಯಲ್ಲಿ ಶ್ರೀನಿವಾಸ್ ಜೊತೆ ವಾಸಿಸೊದಕ್ಕೆ ಬಾಡಿಗೆ ಮನೆ ಮಾಡಲು ಮುಂದಾಗಿದ್ದರು. ಅದಕ್ಕಾಗಿ ಮನೆಯೊಂದನ್ನು ನೋಡಿದ್ದ ಅವರು ಅಡ್ವಾನ್ಸ್ ಸಹ ನೀಡಿದ್ದರು. ಅವರು ಸಹ ಶಿಫ್ಟ್ ಆಗಲು ತಯಾರಿ ನಡೆಸಿದ್ದರು. ಮತ್ತೊಂದು ಕಡೆ ಶ್ರೀನಿವಾಸ್, ಜಯಲಕ್ಷ್ಮಿ ಜೊತೆ ಬದುಕು ಸಾಗಿಸಲು ಕಾಯುತಿದ್ದ. ಈ ನಡುವೆ ಜಯಲಕ್ಷ್ಮಿ ಕೊಲೆಯಾಗಿದೆ.

ಅತ್ತ ಕೆಲಸ ಬಿಟ್ಟು ಜಯಲಕ್ಷ್ಮಿ ಮನೆಗೆ ಬಂದ ಅನುಸೂಯ ಹಾಗೂ ಚಂದ್ರಶೇಖರ್ ತಲೆಯಲ್ಲಿದ್ದ ಯೋಚನೆಗಳೇ ಬೇರೆಯಾಗಿದ್ದವು. ಕೈ ತುಂಬ ಸಂಬಳ ಇದ್ದ ಜಯಲಕ್ಷ್ಮಿ ಹೇಗಿದ್ದರೂ ಒಂಟಿ. ತನ್ನ ಮಗನನ್ನೇ ದತ್ತು ಪಡೆದಿದ್ದಾಳೆ. ಹೀಗಾಗಿ ಆಕೆಯ ಸಂಪತ್ತೆಲ್ಲಾ ನಮ್ಮದೇ ಎಂದು ಮನೆಗೆ ಬಂದು ಸೆಟಲ್ ಆಗಿ ಬಿಟ್ಟಿದ್ದರು. ಆದರೆ ಈ ನಡುವೆ ಆಕೆಯ ಜೊತೆಗಿದ್ದ ಶ್ರೀನಿವಾಸ್ ಇವರ ಯೋಚನೆಗಳಿಗೆ ಗೊಂದಲ ಸೃಷ್ಟಿಸಿದ್ದ. ಎಲ್ಲವನ್ನು ಬಿಟ್ಟು ಜಯಲಕ್ಷ್ಮಿ ಆತನ ಜೊತೆ ಹೊಗಲು ನಿರ್ಧರಿಸಿದ್ದರು. ನಾವು ನಂಬಿದ ಜಯಲಕ್ಷ್ಮಿ ಎಲ್ಲಿ ನಮ್ಮನ್ನು ಬಿಟ್ಟು ಹೊಗುತ್ತಾಳೋ ಎಂಬ ಯೋಚನೆಯಲ್ಲಿದ್ದ ಅನುಸೂಯ ಹಾಗೂ ಚಂದ್ರಶೇಖರ್​ಗೆ ಮುಂದೊಂದು ದಿನ ಆರ್ಥಿಕವಾಗಿ ಸಂಕಷ್ಟ ಎದುರಾಗುವ ಆತಂಕ ಮೂಡಿತ್ತು. ಹೀಗಾಗಿಯೇ ಇಬ್ಬರು ಸೇರೆ ಅದೊಂದು ಪ್ಲ್ಯಾನ್ ರೆಡಿ ಮಾಡಿದ್ದಾರೆ.

ಸರ್ಕಾರಿ ಕೆಲಸಕ್ಕಾಗಿ ಕೊಲೆ 

ಜಯಲಕ್ಷ್ಮಿ ಹೇಗೊ ನಿವೃತ್ತಿ ಹಂತದಲ್ಲಿದ್ದಾರೆ. ಆಕೆಗೆ ಲಕ್ಷ ಲಕ್ಷ ಹಣ ಬರುತ್ತದೆ. ಎಲ್ಲವೂ ನಮ್ಮದೇ ಅಂದುಕೊಂಡಿದ್ದ ಅನುಸೂಯ ಹಾಗೂ ಚಂದ್ರಶೇಖರ್​ಗೆ, ಶ್ರೀನಿವಾಸ್ ವಿಚಾರ ತಲೆಗೆ ಹುಳ ಬಿಟ್ಟಿತ್ತು. ಹೀಗಾಗಿಯೇ ಜೊತೆಗಿದ್ದ ಜಯಲಕ್ಷ್ಮಿ ಮುಗಿಸುವುದಕ್ಕೆ ಮುಂದಾದ ಇಬ್ಬರಲ್ಲಿ ಹೊಸ ಲೆಕ್ಕಾಚಾರ ಶುರುವಾಗಿತ್ತು. ಅಸಲಿಗೆ ಜಯಲಕ್ಷ್ಮಿ ಸರ್ಕಾರಿ ನೌಕರಸ್ಥೆ. ಅವರ ಅಸಹಜ ಸಾವಿನಿಂದ ಮೃತಪಟ್ಟರೆ ಸರ್ಕಾರಿ ನೌಕರಿ ಅನುಕಂಪದಲ್ಲಿ ಸಂಬಂಧಿಕರಿಗೆ ಸಿಗಲಿದೆ. ಹಾಗೆ ಯೋಚನೆ ಮಾಡಿದರೇ ಅದು ದತ್ತು ಮಗ ಚಂದ್ರಶೇಖರ್​ನಿಗೆ ಬರಲಿದೆ. ಆದರೆ ಕೊಲೆ ಎಂದು ಗೊತ್ತಾದರೆ ಅದೂ ಸಹ ಕೈತಪ್ಪುತ್ತದೆ ಎಂದು ಯೋಚಿಸಿದವರೇ ಮಾಸ್ಟರ್ ಪ್ಲ್ಯಾನ್ ಮಾಡಿದ್ದರು. ಅದಾಗಲೇ ಮನೆ ಬಿಡಲು ನಿರ್ಧರಿಸಿದ್ದ ಜಯಲಕ್ಷ್ಮಿಯನ್ನ ಮುಗಿಸುವುದಕ್ಕೆ ಸಿದ್ದರಾದ ಅನುಸೂಯ ಹಾಗೂ ಚಂದ್ರಶೇಖರ್ ಇದೇ ಫೆಬ್ರವರಿ 19ರಂದು ರಾತ್ರಿ ತಂತ್ರ ಎಣೆದಿದ್ದರು.

ಇದನ್ನೂ ಓದಿ: ಬಿಹಾರದಲ್ಲಿ ಕರ್ನಾಟಕದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಕೇಸ್​​ಗೆ ಟ್ವಿಸ್ಟ್​​: ಮೃತರ ಸಂಬಂಧಿ ಹೇಳಿದ್ದೇನು?

ಅವತ್ತಿನ ರಾತ್ರಿ ಊಟ ಮಾಡಿ ಮಲಗಿದ್ದ ಜಯಲಕ್ಷ್ಮಿ ಬಳಿ ಬಂದ ಇಬ್ಬರು ಆಕೆಯ ಮುಖಕ್ಕೆ ದಿಂಬಿಟ್ಟು ಉಸಿರುಗಟ್ಟಿಸಿ ಕೊಲೆಗೈದಿದ್ದರು. ಬಳಿಕ ರಾತ್ರೋರಾತ್ರಿಯೇ ಸಹೋದರ ರವೀಶ್​ ಸೇರಿದಂತೆ ಹಲವರಿಗೆ ಕರೆ ಮಾಡಿ ಕಥೆ ಕಟ್ಟಿದ್ದರು. ಜಯಲಕ್ಷ್ಮಿಗೆ ಹೃದಯಾಘಾತವಾಗಿದೆ. ಮನೆಯಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಿದ್ದರು. ಮಧ್ಯರಾತ್ರಿ ಜಯಲಕ್ಷ್ಮಿ ಹತ್ಯೆಗೈದ ಇಬ್ಬರು ಬೆಳಗಾಗುವಷ್ಟರಲ್ಲೇ ಮೃತದೇಹವನ್ನು ಕಂಟಲಗೆರೆಗೆ ಸಾಗಿಸಿದ್ದರು. ಅಲ್ಲಿ ಕಾರ್ಯಕ್ಕೂ ಸಹ ಸಿದ್ಧಗೊಳಿಸಿದ್ದರು. ಎಲ್ಲವೂ ಅಂದುಕೊಂಡಂತಾಗಿದೆ ಎಂದು ಹೊರಗೆ ಮೊಸಳೆ ಕಣ್ಣೀರು ಹಾಕುತ್ತ ನಾಟಕವಾಡಿದ್ದ ಇಬ್ಬರ ಸ್ಟೋರಿಗೆ ಶ್ರೀನಿವಾಸ್ ಬ್ರೇಕ್ ಹಾಕಿದ್ದ.

ಅನುಸೂಯ, ಚಂದ್ರಶೇಖರ್​​ ಬಂಧನ

ಜಯಲಕ್ಷ್ಮಿಯನ್ನು ಎಲ್ಲರಿಗಿಂತ ಹೆಚ್ಚಾಗಿ ಬಲ್ಲವನಾಗಿದ್ದ ಶ್ರೀನಿವಾಸ್​ಗೆ ಮನೆಯೊಳಗಿದ್ದ ಸಮಸ್ಯೆಗಳು ಸಹ ಅರಿವಿಗಿತ್ತು. ಯಾವಾಗ ಅವರ ಮೃತಪಟ್ಟಿದ್ದಾಳೆಂಬ ಸುದ್ದಿ ಬಂತೋ ಆತ ಅನುಮಾನಗೊಂಡಿದ್ದ. ಕೂಡಲೇ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದ. ಆತನ ಮಾಹಿತಿ ಆಧರಿಸಿ ಬಂದ ಚಿಕ್ಕನಾಯಕನಹಳ್ಳಿ ಪೊಲೀಸರಿಗೆ ಕೊಲೆಯ ಸಂಗತಿ ಬಯಲಾಗಿದೆ. ಕೂಡಲೇ ಇಬ್ಬರನ್ನು ಬಂಧಿಸಿದ್ದಾರೆ. ಆದರೆ ಇಲ್ಲಿ ಜಯಲಕ್ಷ್ಮಿ ಮಾಡಿದ ತಪ್ಪಾದರೂ ಏನು, ಕಷ್ಟದಲ್ಲಿದ್ದ ಸಹೋದರಿಗೆ ಆರ್ಥಿಕವಾಗಿ ಹೆಗಲು ಕೊಟ್ಟಿದ್ದು ತಪ್ಪಾ? ಆಕೆಯ ಮಗನಿಗೆ ಶಿಕ್ಷಣ ನೀಡಿದ್ದು ತಪ್ಪಾ? ಎಲ್ಲವನ್ನೂ ಕೊಟ್ಟ ಜಯಲಕ್ಷ್ಮಿ ಅಕ್ಷರಶಃ ಅನುಸೂಯಗೆ ಚಿನ್ನದ ಮೊಟ್ಟೆ ಇಡುವ ಕೊಳಿಯಂತಾಗಿದ್ದರು. ಆದರೆ ಅತಿಯಾಸೆಗೆ ಬಿದ್ದ ಅನುಸೂಯ ಜಯಲಕ್ಷ್ಮಿ ಕೊಂದಿದ್ದರು. ಮತ್ತೊಂದೆಡೆ ಇನ್ನು 22 ವರ್ಷದ ಯುವಕ ಚಂದ್ರಶೇಖರ್ ಸಹ ಕೊಲೆ ಆರೋಪಿಯಾಗಿದ್ದಾನೆ. ಆದರೆ ಇದೀಗ ಮಾಡಿದ್ದುಣ್ಣೋ ಮಾರಾಯ ಎಂಬಂತೆ ಜೈಲು ಸೇರಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರೇಣುಕಾಸ್ವಾಮಿ ಕೊಲೆ ಕೇಸ್; ದರ್ಶನ್​​ಗೆ ಕೋರ್ಟ್​​ನಿಂದ ಸಿಕ್ತು ಸಣ್ಣ ರಿಲೀಫ್ – Kannada News | Darshan Renukaswamy Case: High Court Halts Gun License Suspension; Temporary Relief for Actor

ನಟ ದರ್ಶನ್ (Darshan) ಅವರು ರೇಣುಕಾಸ್ವಾಮಿ ಕೊಲೆ ಕೇಸ್​​​ನಲ್ಲಿ ಜೈಲಿನಲ್ಲಿ ಇದ್ದಾರೆ. ಈ ಪ್ರಕರಣದಲ್ಲಿ ಅವರು ಒಮ್ಮೆ ಜಾಮೀನು ಪಡೆದಿದ್ದರು. ನಂತರ ಸುಪ್ರೀಂಕೋರ್ಟ್ ಜಾಮೀನನ್ನು ರದ್ದು ಮಾಡಿತ್ತು. ಈಗ ದರ್ಶನ್ ಅವರ ಪರವಾಗಿ ಕೋರ್ಟ್​ ಅಲ್ಲಿ ಆದೇಶ ಒಂದು ಬಂದಿದೆ. ಇದರಿಂದ ಅವರಿಗೆ ಸಣ್ಣ ರಿಲೀಫ್ ಸಿಕ್ಕಿದೆ. ಅಷ್ಟಕ್ಕೂ ದರ್ಶನ್ ಸಲ್ಲಿಕೆ ಮಾಡಿದ್ದ ಅರ್ಜಿ ಏನು? ಕೋರ್ಟ್ ಕೊಟ್ಟ ಆದೇಶ ಏನು? ಆ ಬಗ್ಗೆ ಇಲ್ಲಿದೆ ವಿವರ.

ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್​​ನಲ್ಲಿ A2 ಆಗಿದ್ದಾರೆ. ಅವರಿಗೆ 2024ರಲ್ಲಿ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿತ್ತು. ಜಾಮೀನು ಸಿಕ್ಕ ಬಳಿಕ ಗನ್ ಲೈಸೆನ್ಸ್ ಅನ್ನು ಪೊಲೀಸರು ಅಮಾನತುಗೊಳಿಸಿದ್ದರು. ಈ ಗನ್ ಬಳಸಿ ಸಾಕ್ಷಿಗಳಿಗೆ ಬೆದರಿಸಬಹುದೆಂದು ಗನ್ ಲೈಸೆನ್ಸ್ ಅಮಾನತುಪಡಿಸಲಾಗಿತ್ತು. ನಟ ದರ್ಶನ್ ಅವರು ಪೊಲೀಸರ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

‘2008ರಿಂದಲೂ ದರ್ಶನ್ ಲೈಸೆನ್ಸ್ ಇರುವ ಗನ್ ಹೊಂದಿದ್ದಾರೆ. ಜಾಮೀನು ರದ್ದಾದ ಬಳಿಕ ಗನ್ ಸರಂಡರ್ ಮಾಡಲಾಗಿದೆ. ದರ್ಶನ್ ಹೆಸರಿನ ಕಾರಣಕ್ಕೆ ಲೈಸೆನ್ಸ್ ಅಮಾನತುಪಡಿಸಿದ್ದಾರೆ’ ಎಂದು ದರ್ಶನ್ ಪರ ವಕೀಲ ಎಸ್.ಸುನೀಲ್ ಕುಮಾರ್ ವಾದ ಮಾಡಿದರು. ‘ಹೆಸರಿನ ಕಾರಣಕ್ಕಲ್ಲ ಆರೋಪವಿರುವ ಕಾರಣಕ್ಕೆ’ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿತು. ಆ ಬಳಿಕ ಗನ್ ಲೈಸೆನ್ಸ್ ಅಮಾನತು ಕ್ರಮಕ್ಕೆ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಮಧ್ಯಂತರ ತಡೆ ನೀಡಿದೆ. ಮಾರ್ಚ್ 6ರವರೆಗೆ ಮಧ್ಯಂತರ ತಡೆ ಅನ್ವಯ ಆಗಲಿದೆ.

ಇದನ್ನೂ ಓದಿ: ಅಭಿಮಾನಿಗಳ ಆ ಒಂದು ಮಹತ್ ಕಾರ್ಯಕ್ಕೆ ಜೈಲಿನಿಂದಲೇ ಧನ್ಯವಾದ ಹೇಳಿದ ದರ್ಶನ್

ದರ್ಶನ್ ಅವರು ಇನ್ನೂ ಜೈಲಿನಲ್ಲಿಯೇ ಇದ್ದಾರೆ. ಅವರಿಗೆ ಪ್ರಕರಣದಲ್ಲಿ ಸದ್ಯಕ್ಕೆ ಜಾಮೀನು ಸಿಗೋದು ಅನುಮಾನ ಎಂದೇ ಹೇಳಲಾಗುತ್ತಿದೆ. ಅವರ ಅಭಿಮಾನಿಗಳು ದರ್ಶನ್​​ ಆಗಮನಕ್ಕೆ ಕಾದಿದ್ದಾರೆ. ಇದರ ಜೊತೆಗೆ ಪ್ರಕರಣದ ವಿಚಾರಣೆ ಕೋರ್ಟ್​​ನಲ್ಲಿ ನಡೆಯುತ್ತಿದ್ದು, ಸಾಕ್ಷಿಗಳ ವಿಚಾರಣೆ ಮಾಡಲಾಗತ್ತಿದೆ. ಅವರು ಜೈಲಿನಿಂದ ಹೊರ ಬಂದರೂ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರು ಜೀವನ ಇಷ್ಟೊಂದು ದುಬಾರಿನಾ?; ತಿಂಗಳ ಖರ್ಚು 70 ಸಾವಿರ ರೂ., ಪಟ್ಟಿ ಬಿಚ್ಚಿಟ್ಟ ಯುವಕ – Kannada News | Bangalore Expenses Soar: Man’s Rs70,000 Monthly Budget Shocks X Users

ಬೆಂಗಳೂರು, ಫೆ.23: ಸಿಲಿಕಾನ್​​ ಸಿಟಿಯನ್ನು ಭಾರತದ ತಂತ್ರಜ್ಞಾನಗಳ ತವರು ಎಂದರೆ ತಪ್ಪಾಗಲಾರದು, ಇಲ್ಲಿ ಜೀವನ ನಡೆಸುವುದು ತುಂಬಾ ಸುಲಭ ಎಂದುಕೊಂಡವರಿಗೆ ಖರ್ಚಿನ ಲೆಕ್ಕಚಾರದ (Bengaluru Living Costs) ಪಟ್ಟಿಯನ್ನು ವ್ಯಕ್ತಿಯೊಬ್ಬರು ನೀಡಿದ್ದಾರೆ. ಬೆಂಗಳೂರಿನಲ್ಲಿ ಜೀವನ ನಿರ್ವಹಣೆ ಎಷ್ಟು ದುಬಾರಿ? ಎಂಬುದಕ್ಕೆ ಅಭಿಷೇಕ್ ಸಿಂಗ್ ಎಂಬುವವರು ಎಕ್ಸ್ (X) ನಲ್ಲಿ ತಮ್ಮ ತಿಂಗಳ ಬಜೆಟ್ ಬಗ್ಗೆ ಹಂಚಿಕೊಂಡಿದ್ದಾರೆ. ಇದೀಗ ಈಗ ಈ ಪೋಸ್ಟ್​​ ಭಾರೀ ವೈರಲ್ ಆಗಿದೆ. ತಾವೊಬ್ಬರೇ ಆರಾಮದಾಯಕ ಜೀವನ ನಡೆಸಲು ತಿಂಗಳಿಗೆ 70,000 ರೂ. ಖರ್ಚು ಮಾಡುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಸುಮಾರು 74,000ಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ನೆಟ್ಟಿಗರು ಕೂಡ ಕಮೆಂಟ್​​​ ಮಾಡಿದ್ದಾರೆ. ಅಭಿಷೇಕ್ ಸಿಂಗ್ ಅವರು ಬೆಂಗಳೂರಿನಲ್ಲಿ ನನ್ನ ಮಾಸಿಕ ಜೀವನ ವೆಚ್ಚದ ಬಗ್ಗೆ ಹಂಚಿಕೊಂಡಿದ್ದಾರೆ. ಅದು ಯಾವುದೆಲ್ಲ ಎಂಬುದನ್ನು ಇಲ್ಲಿ ವಿವರಿಸಲಾಗಿದೆ ನೋಡಿ.

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ:

ಬಾಡಿಗೆ + ನಿರ್ವಹಣೆ: 25,000 ರೂ.

ಆಹಾರ, ಮಾಂಸ, ಮೀನು, ಮೊಟ್ಟೆಗಳು: 12,000 ರೂ.

ರೆಸ್ಟೋರೆಂಟ್‌ಗಳು, ಕಾಫಿ: 5,500

ವಿವಿಧ ವೆಚ್ಚಗಳು (ಆನ್‌ಲೈನ್ ಆರ್ಡರ್‌ಗಳು, ಇತ್ಯಾದಿ): 4,000 ರೂ.

ರಜೆ ಮೋಜು: 12,500 ರೂ.

ಬಂಬಲ್ ಡೇಟ್ಸ್: 4,000 ರೂ.

ಶೇರ್​ ಹೂಡಿಕೆ : 3,000 ರೂ.

ಜಿಮ್ + ಕ್ರೀಡೆ: 1,500 ರೂ.

ಇಂಟರ್ನೆಟ್ + ಫೋನ್ : 1,000 ರೂ.

ಒಟಿಟಿ, ಮೂವಿ ಚಂದಾದಾರಿಕೆ: 1,500 ರೂ.

ಒಟ್ಟು ತಿಂಗಳ ಖರ್ಚು: 70,000 ರೂ.

ಇದನ್ನೂ ಓದಿ: “ಬೆಂಗಳೂರನ್ನು ಮತ್ತೆ ಶ್ರೇಷ್ಠ ನಗರವನ್ನಾಗಿಸೋಣ”: ಈ ಬದಲಾವಣೆಯಾದರೆ ಸಿಲಿಕಾನ್ ಸಿಟಿ ವಿಶ್ವ ದರ್ಜೆಯ ನಗರ ಆಗುವುದು ಖಂಡಿತ

ಸೋಶಿಯಲ್​​ ಮೀಡಿಯಾದಲ್ಲಿ ಈ ಬಗ್ಗೆ ವ್ಯಂಗ್ಯವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಕೇವಲ 3,000 ರೂ. ಹೂಡಿಕೆ ಮಾಡುತ್ತಿದ್ದೀರಾ? ಇಷ್ಟು ದೊಡ್ಡ ಮೊತ್ತದ ‘ಪೀಳಿಗೆಯ ಸಂಪತ್ತಿನಿಂದ’ ಇಡೀ ಮಾರುಕಟ್ಟೆಯನ್ನೇ ಖರೀದಿಸುವ ಪ್ಲಾನ್ ಇದೆಯೇ?” ಎಂದು ಇಬ್ಬರು ತಮಾಷೆ ಮಾಡಿದ್ದಾರೆ. ನಾನು ಬೆಂಗಳೂರಿನಲ್ಲಿ ಕೇವಲ 25,000 ರೂ. ನಲ್ಲಿ ‘ಡ್ರೀಮ್ ಲೈಫ್’ ನಡೆಸುತ್ತಿದ್ದೇನೆ. ಕಂಪನಿಯ ಜಿಮ್ ಮತ್ತು ಫುಡ್ ಕೋರ್ಟ್ ಬಳಸಿದರೆ ಖರ್ಚು ಕಡಿಮೆ ಮಾಡಬಹುದು ಎಂದು ಮತ್ತೊಬ್ಬರು ಹೇಳಿದ್ದಾರೆ. ಇಷ್ಟೆಲ್ಲಾ ಖರ್ಚು ಮಾಡುತ್ತಿದ್ದೀರಿ, ನಿಮ್ಮ ಸಂಬಳ ಎಷ್ಟು?” ಎಂದು ಕೇಳಿದ್ದಕ್ಕೆ, “ಆರಾಮದಾಯಕ ಜೀವನ ನಡೆಸುವಷ್ಟು ಸಂಪಾದಿಸುತ್ತೇನೆ,” ಎಂದು ಅಭಿಷೇಕ್ ಉತ್ತರಿಸಿದ್ದಾರೆ.

ಬೆಂಗಳೂರಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bengaluru: ಹನಿಟ್ರ್ಯಾಪ್​​​​ ಕೇಸ್ ಆರೋಪಿ ಯುವತಿಯಿಂದ ಸಾಮೂಹಿಕ ಅತ್ಯಾಚಾರ ದೂರು – Kannada News | Honeytrap Accused Files Physical Harassment Complaint Against Two Youths in Bengaluru

ಬೆಂಗಳೂರು, ಫೆಬ್ರವರಿ 23: ಹನಿಟ್ರ್ಯಾಪ್​​​​ ಕೇಸ್ ಆರೋಪಿತ ಯುವತಿ ತನ್ನ ಮೇಲೆ ಗ್ಯಾಂಗ್​ರೇಪ್ ನಡೆದಿದೆ ಎಂದು ಆರೋಪಿಸಿ ಬೆಂಗಳೂರಿನ ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಪಾರ್ಟಿಯೊಂದಕ್ಕೆ ಕರೆದೊಯ್ದು ನನ್ನ ಮೇಲೆ ಅತ್ಯಾಚಾರ ಮಾಡಲಾಗಿದೆ ಎಂದು ಸಂತ್ರಸ್ತೆ ದೂರಿದ್ದು, ಈ ಸಂಬಂಧ ನಿಖಿಲ್​ ಮತ್ತು ಡಿಕ್ಸನ್​ ಸಾಂಡ್ರಾ ಎಂಬ ಇಬ್ಬರ ವಿರುದ್ಧ ಫೆ.22ರಂದು ಎಫ್​​ಐಆರ್​​ ದಾಖಲಾಗಿದೆ. ಇದಕ್ಕೂ ಮುನ್ನ ಒಂದು ದಿನ ಮೊದಲಷ್ಟೇ ಅಂದರೆ ಫೆ.21ರಂದು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಯುವತಿ ವಿರುದ್ಧ ಹನಿಟ್ರ್ಯಾಪ್ ಕೇಸ್ ದಾಖಲಾಗಿತ್ತು.

ಯುವತಿ ಆರೋಪವೇನು?

2026ರ ಜನವರಿಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಡಿಕ್ಸನ್​ ಸಾಂಡ್ರಾ ಎಂಬಾತನ ಪರಿಚಯವಾಗಿದ್ದು, ಸ್ನೇಹ ಪ್ರೀತಿಗೆ ತಿರುಗಿತ್ತು. ಬಳಿಕ ಇಬ್ಬರೂ ಹಲವು ಬಾರಿ ಭೇಟಿ ಆಗಿದ್ದೆವು. ಹೀಗಿರುವಾಗ ಫೆಬ್ರವರಿ 14ರಂದು ಕರೆ ಮಾಡಿದ್ದ ಡಿಕ್ಸನ್, ಜಕ್ಕೂರಿನಲ್ಲಿರುವ ವಿಲ್ಲಾವೊಂದಕ್ಕೆ ಪಾರ್ಟಿಗೆ ಬರುವಂತೆ ಕರೆದಿದ್ದ. ಹೀಗಾಗಿ ಗೆಳತಿಯ ಜೊತೆ ತಾನು ಮಧ್ಯರಾತ್ರಿ ಸುಮಾರು 1.15ಕ್ಕೆ ವಿಲ್ಲಾಗೆ ತೆರಳಿದ್ದು, ಈ ವೇಳೆ ಡಿಕ್ಸನ್​​ ಆತನ ಗೆಳೆಯ ಎಂದು ನಿಖಿಲ್​​ ಎಂಬಾತನನ್ನು ಪರಿಚಯಿಸಿದ್ದ. ಪಾರ್ಟಿ ನಡುವೆ ಡಿಕ್ಸನ್​​ ಮತ್ತು ನಿಖಿಲ್​​ ಸೇರಿ ಬಲವಂತವಾಗಿ ಮಾತ್ರೆಯನ್ನು ತಿನ್ನಿಸಿದ್ದಾರೆ. ಈ ವೇಳೆ ಕಣ್ಣುಗಳು ಮಂಜಾಗತೊಡಗಿದ್ದು, ಡಿಕ್ಸನ್​​ ರೂಮಿಗೆ ಕರೆದೊಯ್ದು ತನ್ನ ಮಲಗಿಸಿದ್ದ. ಆದಾದ ನಂತರ ನನಗೆ ಪ್ರಜ್ಞೆತಪ್ಪಿದೆ. ನನಗೆ ಎಚ್ಚರ ಆದಾಗ ನನ್ನ ದೇಹದ ಮೇಲೆ ಅರ್ಧಂಬರ್ಧ ಬಟ್ಟೆ ಇರುವುದರ ಜೊತೆಗೆ ಪಕ್ಕದಲ್ಲಿ ನಿಖಿಲ್​​ ಇರುವುದನ್ನು ಕಂಡು ಶಾಕ್​​ ಆಗಿದ್ದೇನೆ ಎಂದು ಯುವತಿ ಆರೋಪಿಸಿದ್ದಾಳೆ.

ಇದನ್ನೂ ಓದಿ: ಮಹಿಳಾ ಅಧಿಕಾರಿ ಮನೆಯಲ್ಲಿ ಹಿಡನ್ ಕ್ಯಾಮರಾ ಇಟ್ಟಿದ್ದ ಕೇಸ್; ನಕಲಿ ಪತ್ರಕರ್ತರ ಮೊಬೈಲಲ್ಲಿತ್ತು 100ಕ್ಕೂ ಹೆಚ್ಚು ಬೆತ್ತಲೆ ವಿಡಿಯೋ!

ಮೊದಲೇ ಗಾಬರಿಗೊಂಡಿದ್ದ ತಾನು ಡಿಕ್ಸನ್​​ ಬಗ್ಗೆ ಕೇಳಿದಾಗ ಹೊರಗಿನಿಂದ ಬಂದ ಆತ ತನ್ನ ಬಟ್ಟೆಯನ್ನು ಕಿತ್ತೆಸೆದಿದ್ದು, ಇಬ್ಬರೂ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಈ ವೇಳೆ ತಾನು ಜೋರಾಗಿ ಕಿರುಚಾಡಿದ ಪರಿಣಾಮ ನನ್ನನ್ನು ರೂಮ್​​ನಲ್ಲಿ ಲಾಕ್​​ ಮಾಡಲಾಗಿತ್ತು. ಬಳಿಕ ಮರುದಿನ ಮಧ್ಯಾಹ್ನದ ವೇಳೆಗೆ ಆರೋಪಿಗಳು ರೂಮ್​​ ಬಾಗಿಲು ತೆರೆದಿದ್ದು, ರಾತ್ರಿ ನಡೆದ ವಿಚಾರವನ್ನು ಯಾರಿಗಾದರೂ ಅಥವಾ ಪೊಲೀಸರಿಗೆ ಹೇಳಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ನಿಖಿಲ್​​ ಬೆದರಿಕೆ ಹಾಕಿರೋದಾಗಿ ಯುವತಿ ಆರೋಪಿಸಿದ್ದಾಳೆ.

ಇನ್ನು ಫೆ.21ರಂದು ಇದೇ ಯುವತಿಯ ವಿರುದ್ಧ ನಿಖಿಲ್​​ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ. ನಿಖಿಲ್​​ ಮತ್ತು ಡಿಕ್ಸನ್​​ ತನಗೆ ಮಾದಕ ವಸ್ತು ನೀಡಿ ಲೈಂಗಿಕ ದೌರ್ಜನ್ಯ ನಡೆಸಿರೋದಾಗಿ ಯುವತಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾಳೆ. ಅದರ ಬೆನ್ನಲ್ಲೇ ಖಾಸಗಿ ವಾಹನಿಯ ಕ್ರೈಂ ಬ್ಯೂರೋ ಹೆಡ್​​ ಎಂದು ಪರಿಚಯಿಸಿಕೊಂಡ ವ್ಯಕ್ತಿಯೋರ್ವರ ಕರೆ ಬಂದಿದ್ದು, ನಾವು ಹೇಳಿದ ಜಾಗಕ್ಕೆ ನೀವು ಬರಬೇಕು. ಹೇಳಿದಷ್ಟು ಹಣ ಕೊಡಬೇಕು. ಇಲ್ಲದಿದ್ದರೆ ಈ ವಿಚಾರವನ್ನು ನ್ಯೂಸ್​​ ಚಾನೆಲ್​​ನಲ್ಲಿ ಹಾಕಿ ಮಾನ ತೆಗೆಯೋ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದ್ದ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಲಂಚ ತೆಗೆದುಕೊಳ್ಳುವ ಸಿಕ್ಕಿಬಿದ್ದ ಬಿಜೆಪಿ ಶಾಸಕನ ವಿರುದ್ಧ ಸ್ವಾಮೀಜಿ ಗಂಭೀರ ಆರೋಪ – Kannada News | BJP MLAS Chandru Lamani Bribery Case: Kumara Maharaja Swamiji Clarify about His Audio Viral

ಗದಗ, (ಫೆಬ್ರವರಿ 22): ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಶಿರಹಟ್ಟಿ ಶಾಸಕ ಡಾ ಚಂದ್ರು ಲಮಾಣಿ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರನ್ನು ಯಾವುದಾದರೊಂದು ಪ್ರಕರಣದಲ್ಲಿ ಸಿಲುಕಿಸುವ ಬಗ್ಗೆ ಸ್ವಾಮೀಜಿಯೊಬ್ಬರ ಕೈವಾಡ ಇರುವ ಆರೋಪ ಕೇಳಿಬಂದಿದೆ. ಶಿರಹಟ್ಟಿ ತಾಲೂಕಿನ ಅದರಹಳ್ಳಿ ಕುಮಾರ ಮಹಾರಾಜರ ಸ್ವಾಮೀಜಿ ಹಾಗೂ ಬಿಜೆಪಿ ಕಾರ್ತಕರ್ತರೊಬ್ಬರು 2.36 ನಿಮಿಷಗಳ ಕಾಲ ಮಾತನಾಡಿರುವ ಆಡಿಯೋವೊಂದು ವೈರಲ್ ಆಗಿದೆ.

ಇನ್ನು ಈ ಬಗ್ಗೆ ಟಿವಿ9ಗೆ ಆದರಹಳ್ಳಿ ಗವಿಮಠದ ಕುಮಾರ ಮಹಾರಾಜ ಸ್ವಾಮೀಜಿ ಪ್ರತಿಕ್ರಿಯಿಸಿದ್ದು, ಶಾಸಕ ಡಾ.ಚಂದ್ರು ಲಮಾಣಿ ಬಗ್ಗೆ ನಾನು ಮಾತನಾಡಿರೋದು ಸತ್ಯ. ಆಡಿಯೋದಲ್ಲಿ ಇರುವ ಧ್ವನಿ ನನ್ನದೇ ನಾನೇ ಮಾತನಾಡಿರುವುದು. 6 ತಿಂಗಳ ಹಿಂದೆ ಚಂದ್ರು ಲಮಾಣಿ ಬಗ್ಗೆ ಮಾತಾಡಿರೋ ಆಡಿಯೋ. ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಮಾತಾಡಿದ್ದೆ. ಆದ್ರೆ, ಲೋಕಾಯುಕ್ತ ದಾಳಿಗೂ ನಾನು ಮಾತಾಡಿದ ಆಡಿಯೋಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ ಲೋಕಾಯುಕ್ತ ಟ್ರ್ಯಾಪ್​​​ಗೂ ನನ್ನ ಆಡಿಯೋಗೂ ಸಂಬಂಧವಿಲ್ಲ. ಬೇಕಿದ್ದರೆ ಆಡಿಯೋ ಬಗ್ಗೆ ತನಿಖೆ ನಡೆಸಲಿ. ಶಾಸಕರು ನನ್ನನ್ನು ಗ್ರಾಮದಿಂದ ಓಡಿಸಲು ಸಂಚು ರೂಪಿಸಿದ್ದರು. 18 ಲಕ್ಷ ರೂಪಾಯಿ ಖರ್ಚು ಮಾಡಿ ಮಠದಿಂದ ಓಡಿಸಲು ಪ್ಲ್ಯಾನ್​ ಮಾಡಿದ್ರು. ಇಡೀ ಕ್ಷೇತ್ರದಲ್ಲಿ ಶಾಸಕರ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲ. ಒಳಮೀಸಲಾತಿಯಲ್ಲಿ ಬಂಜಾರ ಸಮುದಾಯಕ್ಕೆ ಅನ್ಯಾಯವಾಗಿತ್ತು ಎಂದು ಶಾಸಕ ಚಂದ್ರು ಲಮಾಣಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: ಪುಟ್ಟ ಕಂದಮ್ಮನನ್ನು ಹುಲ್ಲಿನ ಹೊರೆಯಲ್ಲಿ ಕಟ್ಟಿ ತಲೆ ಮೇಲೆ ಹೊತ್ತು ಸಾಗಿದ ಹೆತ್ತಮ್ಮ – Kannada News | A mother carried her son sleeping on her grass bundle

ತಾಯಿ (mother) ಪ್ರೀತಿಯೇ ಹಾಗೆ, ಬೆಲೆ ಕಟ್ಟಲು ಸಾಧ್ಯವಿಲ್ಲ. ಮಕ್ಕಳ ಲಾಲನೆ ಪಾಲನೆ ಮಾಡುತ್ತಾ ಮಕ್ಕಳಿಗೆ ಸದಾ ನೆರಳಾಗಿರುವ ಜೀವವೇ ಈ ಅಮ್ಮ. ಆದರೆ ನಗರದಲ್ಲಿ ತಾಯಂದಿರು ತಮ್ಮ ಮಕ್ಕಳನ್ನು ಬೆಳೆಯುವ ರೀತಿಗೂ ಹಳ್ಳಿಯಲ್ಲಿ ಮಕ್ಕಳು ಬೆಳೆಯುವ ರೀತಿಗೆ ಸಾಕಷ್ಟು ವ್ಯತ್ಯಾಸವಿದೆ. ಇದಕ್ಕೆ ಉದಾಹರಣೆಯಂತಿದೆ ಈ ವಿಡಿಯೋ. ಇಲ್ಲೊಬ್ಬಳು ತಾಯಿ ಕೆಲಸದ ನಡುವೆಯೂ ತನ್ನ ಮಗನ ಬಗ್ಗೆ ಕಾಳಜಿ ವಹಿಸಿದ್ದಾಳೆ. ಹುಲ್ಲಿನ ಹೊರೆಯೊಂದರಲ್ಲಿ ಪುಟ್ಟ ಮಗುವನ್ನು ಸೇರಿಸಿ ಕಟ್ಟಿ ತಾಯಿಯೊಬ್ಬಳು ಹೊತ್ತುಕೊಂಡು ಸಾಗಿದ್ದಾಳೆ . ಈ ವಿಡಿಯೋ ನೋಡಿದ ನೆಟ್ಟಿಗರು ತಾಯಿ ಪ್ರೀತಿ ಎಂದೆಂದಿಗೂ ಶಾಶ್ವತ ಎಂದು ಕಾಮೆಂಟ್ ಮಾಡಿದ್ದಾರೆ.

ರೋಶಿ (Rosy) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಹಳ್ಳಿಯ ಮಹಿಳೆಯೊಬ್ಬಳು ಮೇವಿನ ಹೊರೆಯಲ್ಲಿ ತನ್ನ ಪುಟ್ಟ ಕಂದಮ್ಮನನ್ನು ಸೇರಿ ಕಟ್ಟಿ ಹೊತ್ತುಕೊಂಡು ಹೋಗುತ್ತಿರುವುದನ್ನು ಕಾಣಬಹುದು.

ವೈರಲ್‌ ಪೋಸ್ಟ್‌ ಇಲ್ಲಿದೆ ನೋಡಿ

ಇದನ್ನೂ ಓದಿ: ಕರುವನ್ನು ಕಂಡೊಡನೆ ಓಡೋಡಿ ಬಂದು ಮುದ್ದಿಸಿದ ಹಸು

ಈ ವಿಡಿಯೋ ಎರಡು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನನ್ನ ಬಾಲ್ಯವನ್ನು ನೆನಪಿಸಿದ ವಿಡಿಯೋ, ನನ್ನ ತಾಯಿ ಹೀಗೆಯೇ ಕಟ್ಟಿ ಹೊತ್ತುಕೊಂಡು ಹೋಗುತ್ತಿದ್ದರು ಎಂದು ಹೇಳಿದ್ದಾರೆ. ಮತ್ತೊಬ್ಬರು, ತಾಯಿ ಪ್ರೀತಿ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಹಳ್ಳಿಯಲ್ಲಿ ಬೆಳೆದ ಮಕ್ಕಳಿಗೂ ಮಾತ್ರ ಇಂತಹ ಅನುಭವವಾಗಲು ಸಾಧ್ಯ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದಲ್ಲಿ ಪ್ರತಿದಿನ ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿವೆ 31 ಜೀವಗಳು! ಬೆಂಗಳೂರಿನಲ್ಲೇ ಅತಿಹೆಚ್ಚು ಸಾವು! – Kannada News | Karnataka Road Accidents: 31 Daily Deaths Highlight Urgent Safety Crisis

ಕರ್ನಾಟಕದಲ್ಲಿ ಪ್ರತಿದಿನ ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿವೆ 31 ಜೀವಗಳು!

ಬೆಂಗಳೂರು, ಫೆಬ್ರವರಿ 23: ಕರ್ನಾಟಕದಲ್ಲಿ ಪ್ರತಿದಿನ ಸರಾಸರಿ 31 ಮಂದಿ ರಸ್ತೆ ಅಪಘಾತಗಳಲ್ಲಿ (Road accidents) ಸಾವನ್ನಪ್ಪುತ್ತಿದ್ದು, 86 ಮಂದಿ ಗಾಯಗೊಳ್ಳುತ್ತಿದ್ದಾರೆ ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ. 2025ರಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಶೇ 62.68 ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲೇ ನಡೆದಿದ್ದು, 2026ರ ಜನವರಿಯಲ್ಲಿಯೇ 1,009 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಈ ವರದಿ ಬಹಿರಂಗಪಡಿಸಿದೆ. ವೇಗದ ಚಾಲನೆ, ನಿರ್ಲಕ್ಷ್ಯ, ಹೆದ್ದಾರಿ ಕಾಮಗಾರಿಗಳು ಮತ್ತು ಮೂಲಸೌಕರ್ಯ ಸಮಸ್ಯೆಗಳೇ ಇದಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಒಂದೇ ವರ್ಷದಲ್ಲಿ 800ಕ್ಕೂ ಹೆಚ್ಚು ಬೆಂಗಳೂರಿಗರು ಬಲಿ

2025ರಲ್ಲಿ 11,408 ಅಪಘಾತಗಳಲ್ಲಿ ಜನರು ಪ್ರಾಣ ಕಳೆದುಕೊಂಡರೆ, 31,751 ಅಪಘಾತಗಳಿಂದ ಜನರು ಗಂಭೀರವಾಗಿ ಗಾಯಗೊಂಡಿದ್ದಾಗಿ ಈ ವರದಿ ತಿಳಿಸಿದೆ. ಬೆಂಗಳೂರಿನಲ್ಲೇ ಅತಿ ಹೆಚ್ಚುಸಾವುಗಳು ಸಂಭವಿಸಿದ್ದು, 891 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ ಬೆಳಗಾವಿ ಮತ್ತು ತುಮಕೂರು ಜಿಲ್ಲೆಗಳೂ ಹೆಚ್ಚು ಸಾವಿನ ಪ್ರಕರಣಗಳನ್ನು ಹೊಂದಿರುವುದಾಗಿ ತಿಳಿದು ಬಂದಿದೆ. ಅಪಘಾತ ತಡೆಗೆ ಉತ್ತಮ ಮೂಲಸೌಕರ್ಯ, ಕಠಿಣ ಕ್ರಮ ಜಾರಿ ಜೊತೆಗೆ ಜಾಗೃತಿ ಅಭಿಯಾನ ಅಗತ್ಯವೆಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ರಸ್ತೆ ಅಪಘಾತಗಳ ಹೆಚ್ಚಳ ಹಿನ್ನೆಲೆ ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ಸಾಮಾಜಿಕ ಜಾಲತಾಣಗಳ ಅಭಿಯಾನಗಳ ಮೂಲಕ ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ರಸ್ತೆಗಳಲ್ಲಿ ಪ್ರತಿಫಲಕ ಗುರುತುಗಳ ಕೊರತೆ ಹಾಗೂ ಅಡ್ಡವಾಗಿ ಬೆಳೆದ ಗಿಡಗಂಟಿಗಳು ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತಿವೆ. ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತಗಳಿಗೆ ಅತಿ ವೇಗದ ಚಾಲನೆ, ನಿರ್ಲಕ್ಷ್ಯವೇ ಪ್ರಮುಖ ಕಾರಣಗಳಾಗಿವೆ ಎಂದು ಅಧಿಕಾರಿಗಳು ‘ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್​ಗೆ’ ತಿಳಿಸಿದ್ದಾರೆ.

ಇದನ್ನೂ ಓದಿ ಹಾಸನ: ಅವೈಜ್ಞಾನಿಕ ಹಂಪ್​​ಗೆ ವಿದ್ಯಾರ್ಥಿನಿ ಬಲಿ, ಮತ್ತೋರ್ವಳ ಸ್ಥಿತಿ ಗಂಭೀರ

ಇಷ್ಟೆಲ್ಲಾ ಸಾವು ನೋವುಗಳಿಗೆ ಕಾರಣವೇನು?

ಹಾಸನದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಹೆದ್ದಾರಿಗಳಲ್ಲಿ ನಿಯಮಿತ ಪೆಟ್ರೋಲಿಂಗ್ ನಡೆಸಿ, ಶಿಸ್ತಿನ ಉಲ್ಲಂಘನೆ ಮತ್ತು ಅತಿವೇಗ ಚಾಲನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಹೆಲ್ಮೆಟ್ ಮತ್ತು ಸೀಟ್‌ಬೆಲ್ಟ್ ಧರಿಸುವಂತಹ ನಿಯಮಗಳನ್ನು ಪಾಲಿಸಿದರೆ ಅಪಘಾತಗಳಿಂದಾಗುವ ಸಾವುಗಳನ್ನು ಕಡಿಮೆ ಮಾಡಬಹುದು. ಅತಿವೇಗ ಮತ್ತು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ದೊಡ್ಡ ತಪ್ಪುಗಳಾಗಿವೆ ಎಂದು ಹೇಳಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಅವೈಜ್ಞಾನಿಕ ಸ್ಪೀಡ್ ಬ್ರೇಕರ್‌ಗಳು, ಅಪಾಯಕಾರಿ ತಿರುವುಗಳು ಅಪಘಾತಗಳಿಗೆ ಕಾರಣವಾಗುತ್ತಿರುವುದು ಉಪವಿಭಾಗ ಡಿವೈಎಸ್ಪಿಗಳು ಗುರುತಿಸಿದ್ದಾರೆ.ರಾಜ್ಯ ಹೆದ್ದಾರಿಗಳ ಕುರಿತು ಸಾರ್ವಜನಿಕ ಕಾಮಗಾರಿಗಳ ಇಲಾಖೆ (PWD)ಗೆ ವರದಿ ಸಲ್ಲಿಸಲಾಗಿದೆ. ತುಮಕೂರು ಜಿಲ್ಲೆಯಲ್ಲಿ ಬಹುತೇಕ ಹೆದ್ದಾರಿಗಳು ಕಾಮಗಾರಿ ಹಂತದಲ್ಲಿದ್ದು, ಹಲವೆಡೆ ಸಮರ್ಪಕ ಬೆಳಕಿನ ಕೊರತೆ ಇದೆ ಎಂದು ಎಸ್‌ಪಿ ಕೆ.ವಿ. ಅಶೋಕ್ ತಿಳಿಸಿದ್ದಾರೆ. 2025ರಲ್ಲಿ ಅತಿವೇಗ ಪ್ರಕರಣಗಳು ದ್ವಿಗುಣಗೊಂಡಿವೆ. ಸೇವಾ ರಸ್ತೆಗಳ ಕೊರತೆಯೂ ದೂರ ಪ್ರಯಾಣಿಕರಿಗೆ ತೊಂದರೆ ತಂದಿದೆ. ಬೆಂಗಳೂರು ನಗರದಲ್ಲಿ ಜನಸಂಖ್ಯೆ ಮತ್ತು ವಾಹನಗಳ ಹೆಚ್ಚಳದಿಂದ ಸಂಚಾರ ದಟ್ಟಣೆ ಹೆಚ್ಚಾಗಿ ಅಪಘಾತಗಳ ಪ್ರಮಾಣವೂ ಏರಿಕೆಯಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 2:22 pm, Mon, 23 February 26

Source link