All posts by nagaraj11081993

ಬೆವರು ಹೆಚ್ಚಾಗಿ ಬರುವವರಲ್ಲಿ ಚರ್ಮಕ್ಕೆ ಸಂಬಂಧಪಟ್ಟ ಸೋಂಕಿನ ಅಪಾಯ ಹೆಚ್ಚುತ್ತದೆಯೇ? – Kannada News | Hyperhidrosis and Skin Health: What Doctors Want You to Know

ಬೇಸಿಗೆ ಆರಂಭವಾದಾಗಿನಿಂದ ತಾಪಮಾನ ಮತ್ತು ಉಷ್ಣಾಂಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರ ಪರಿಣಾಮವಾಗಿ ಹೆಚ್ಚಿನವರಲ್ಲಿ ಅತಿಯಾಗಿ ಬೆವರು ಕಾಣಿಸಿಕೊಳ್ಳುತ್ತಿದೆ. ಸಾಮಾನ್ಯವಾಗಿ ಬೆವರು ದೇಹದ ತಾಪಮಾನ ನಿಯಂತ್ರಣಕ್ಕೆ ಸಹಾಯಕವಾದರೂ, ಅತಿಯಾಗಿ ಬೆವರು (Sweat) ಬಂದಾಗ ಚರ್ಮದ ಸಮಸ್ಯೆಗಳು (Skin Problems) ಹೆಚ್ಚಾಗುವ ಸಾಧ್ಯತೆ ಇರುತ್ತದೆ. ವೈದ್ಯರು ಹೇಳುವ ಪ್ರಕಾರ, ಬೆವರು ಹೆಚ್ಚು ಸಮಯ ಚರ್ಮದ ಮೇಲೆ ಇದ್ದಲ್ಲಿ ತೇವಾಂಶ ಹೆಚ್ಚಾಗಿ ಬ್ಯಾಕ್ಟೀರಿಯಾ ಮತ್ತು ಫಂಗಸ್ ವೇಗವಾಗಿ ಬೆಳೆಯಲು ಅನುಕೂಲವಾಗುತ್ತದೆ. ಇದರಿಂದ ಚರ್ಮದಲ್ಲಿ ಉರಿ, ಕೆರೆತ, ಕೆಂಪು ಚುಕ್ಕೆಗಳು ಮತ್ತು ಫಂಗಲ್ ಇನ್‌ಫೆಕ್ಷನ್‌ಗಳಂತಹ ಸಮಸ್ಯೆಗಳು ಕಾಣಿಸಬಹುದು. ವಿಶೇಷವಾಗಿ ಕುತ್ತಿಗೆ, ಕೈಕುಳಿಗಳು, ಬೆನ್ನು ಮತ್ತು ತೊಡೆ ಭಾಗಗಳಲ್ಲಿ ಹೆಚ್ಚು ಬೆವರು ಬಂದರೆ ಸೋಂಕಿನ ಅಪಾಯ ಹೆಚ್ಚಾಗುತ್ತದೆ. ಹಾಗಾದರೆ ಈ ರೀತಿ ಸಮಸ್ಯೆಯನ್ನು ತಡೆಯುವುದು ಹೇಗೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಾಮಾನ್ಯವಾಗಿ ಧೂಳು ಮತ್ತು ಮಲಿನತೆ ಬೆವರಿನೊಂದಿಗೆ ಸೇರಿ ಚರ್ಮದ ಮೇಲೆ ಉಳಿದರೆ ಸಮಸ್ಯೆ ಮತ್ತಷ್ಟು ಗಂಭೀರವಾಗಬಹುದು. ಹೆಚ್ಚು ಸಮಯ ಒದ್ದೆಯಾದ ಬಟ್ಟೆ ಧರಿಸುವುದು ಅಥವಾ ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳದಿರುವುದು ಸೋಂಕಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಸಂವೇದನಾಶೀಲ ಚರ್ಮ ಹೊಂದಿರುವವರಲ್ಲಿ ಈ ಸಮಸ್ಯೆ ಹೆಚ್ಚು ಕಂಡುಬರುತ್ತದೆ. ಹಾಗಾಗಿ ಈ ಸಮಸ್ಯೆ ತಡೆಯಲು ಕೆಲವು ಸಿಂಪಲ್ ಸಲಹೆಗಳನ್ನು ಅನುಸರಿಸುವುದು ಬಹಳ ಉತ್ತಮ.

ಇದನ್ನೂ ಓದಿ: ಚರ್ಮದ ಮೇಲೆ ಕಾಣಿಸಿಕೊಳ್ಳುವ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಅವು ಮಧುಮೇಹ ಬರುವ ಮುನ್ಸೂಚನೆಯಾಗಿರಬಹುದು

ಚರ್ಮದ ಸೋಂಕು ತಡೆಯಲು ಏನು ಮಾಡಬೇಕು?

  • ತಜ್ಞರ ಸಲಹೆಯಂತೆ, ಬೇಸಿಗೆಯಲ್ಲಿ ದೇಹವನ್ನು ಸದಾ ಸ್ವಚ್ಛ ಮತ್ತು ಒಣಗಿರುವಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯ. ಹೆಚ್ಚು ಬೆವರು ಬಂದಾಗ ಮುಖ ಮತ್ತು ದೇಹವನ್ನು ತೊಳೆಯಬೇಕು. ಗಾಳಿ ಸರಿಯಾಗಿ ಹರಿಯಲು ಸಡಿಲ ಮತ್ತು ಕಾಟನ್ ಬಟ್ಟೆ ಧರಿಸುವುದು ಉತ್ತಮ. ಇದರಿಂದ ಬೆವರು ಬೇಗ ಒಣಗಲು ಸಹಾಯವಾಗುತ್ತದೆ.
  • ಸಾಕಷ್ಟು ನೀರು ಕುಡಿಯುವುದು ಹಾಗೂ ಹೆಚ್ಚು ಸಮಯ ಒದ್ದೆಯಾದ ಬಟ್ಟೆಗಳಲ್ಲಿ ಉಳಿಯದಿರುವುದು ಕೂಡ ಮುಖ್ಯ. ಇತರರ ಟವೆಲ್, ಬಟ್ಟೆ ಅಥವಾ ವೈಯಕ್ತಿಕ ವಸ್ತುಗಳನ್ನು ಬಳಸುವುದನ್ನು ತಪ್ಪಿಸಬೇಕು, ಏಕೆಂದರೆ ಇದರಿಂದ ಸೋಂಕು ಹರಡುವ ಸಾಧ್ಯತೆ ಇರುತ್ತದೆ.
  • ಚರ್ಮದಲ್ಲಿ ನಿರಂತರ ಉರಿ, ಕೆಂಪು ಚುಕ್ಕೆಗಳು ಅಥವಾ ಕೆರೆತ ಕಾಣಿಸಿಕೊಂಡರೆ ಅದನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಸರಿಯಾದ ಸ್ವಚ್ಛತೆ ಮತ್ತು ಕಾಳಜಿಯಿಂದ ಬೇಸಿಗೆಯಲ್ಲಿ ಚರ್ಮದ ಸೋಂಕಿನ ಅಪಾಯವನ್ನು ಕಡಿಮೆ ಮಾಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಈ ಜೀವ ನಿಮಗೆ ಅರ್ಪಣೆ’: ಡಿಕೆ ಶಿವಕುಮಾರ್ ಸ್ನೇಹವನ್ನು ಕೊಂಡಾಡಿದ ಕ್ರೇಜಿಸ್ಟಾರ್ – Kannada News | Ravichandran praised DK Shivakumar and said his life is dedicated for DKS only

ನಟ ರವಿಚಂದ್ರನ್ (Ravichandran) ದಶಕಗಳಿಂದಲೂ ಚಿತ್ರರಂಗದಲ್ಲಿರುವವರು. ಅವರ ತಂದೆ ವೀರಾಸ್ವಾಮಿ ಖ್ಯಾತ ನಿರ್ಮಾಪಕರು ಮತ್ತು ಉದ್ಯಮಿಗಳು ಸಹ ಆಗಿದ್ದವರು. ರವಿಚಂದ್ರನ್ ಅವರಿಗೆ ಚಿತ್ರರಂಗದ ಜೊತೆಗೆ ರಾಜಕೀಯ ರಂಗದ ಹಲವು ಪ್ರಮುಖರ ಆಪ್ತ ಪರಿಚಯವಿದೆ. ಆದರೆ ರವಿಚಂದ್ರನ್ ಅವರು ಎಂದಿಗೂ ರಾಜಕೀಯದ ಅಖಾಡದತ್ತ ಮುಖ ಸಹ ಹಾಕಿದವರಲ್ಲ. ಅವರ ಗೆಳೆತನವನ್ನು ಬಳಸಿಕೊಂಡವರೂ ಅಲ್ಲ. ಆದರೆ ಇದೀಗ ಕಾರ್ಯಕ್ರಮವೊಂದರಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಮನಸಾರೆ ಕೊಂಡಾಡಿರುವ ರವಿಚಂದ್ರನ್, ‘ಈ ಜೀವ ನಿಮಗೆ ಅರ್ಪಣೆ’ ಎಂದು ಭಾವುಕರಾಗಿ ಹೇಳಿದ್ದಾರೆ.

ಕಳೆದ ಕೆಲ ದಿನಗಳಿಂದಲೂ ನಡೆಯುತ್ತಿರುವ ಮದ್ದೂರು ಉತ್ಸವ 2026 ಕಾರ್ಯಕ್ರಮದಲ್ಲಿ ನಿನ್ನೆ (ಮೇ 06) ಭಾಗಿ ಆಗಿದ್ದ ನಟ ರವಿಚಂದ್ರನ್, ಕೆಲ ಹಳೆಯ ವಿಷಯಗಳನ್ನು ನೆನಪು ಮಾಡಿಕೊಂಡರು. ಜೊತೆಗೆ ಅದೇ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗಿ ಆಗಿದ್ದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಬಗ್ಗೆಯೂ ಮಾತನಾಡಿದರು. ‘ಮನುಷ್ಯ ಅಂದ ಮೇಲೆ ಕಟ್ಟ ಗಳಿಗೆಗಳು ಕೆಲವೊಮ್ಮೆ ಬಂದು ಬಿಡುತ್ತವೆ. ಅಂಥಹಾ ಸಮಯ ಬಂದಾಗ, ಯಾರು ನಮ್ಮ ಕೈ ಹಿಡಿಯುತ್ತಾರೆ ಎಂದು ನಾವೂ ಸಹ ಎದುರು ನೋಡುತ್ತಿರುತ್ತೇವೆ. ಆದರೆ ನನಗೆ (ರವಿಚಂದ್ರನ್) ಕೈ ಚಾಚಿ ಅಭ್ಯಾಸವೇ ಇಲ್ಲ. ಆದರೆ ನಾನು ಕೈ ಚಾಚುವ ಮುಂಚೆಯೇ ನನ್ನ ಕೈ ಹಿಡಿದವರು ಡಿಕೆ ಶಿವಕುಮಾರ್ ಅವರು’ ಎಂದಿದ್ದಾರೆ ಕ್ರೇಜಿ ಸ್ಟಾರ್.

‘ನಿಮ್ಮನ್ನು ಈ ಜೀವನದಲ್ಲಿ ಮರೆಯೋದಿಲ್ಲ ಸರ್, ಈ ಜೀವ ನಿಮಗೇ ಅರ್ಪಣೆ ಸರ್’ ಎಂದು ವೇದಿಕೆ ಮುಂದೆ ಆಸೀನರಾಗಿದ್ದ ಡಿಕೆ ಶಿವಕುಮಾರ್ ಅವರನ್ನು ಉದ್ದೇಶಿಸಿ ಹೇಳಿದ ರವಿಚಂದ್ರನ್, ‘ಚಿತ್ರರಂಗಕ್ಕೆ ಬಂದು 40 ವರ್ಷವಾಯ್ತು. ಆದರೆ ನಾನು ಕೈಚಾಚುವ ಮುಂಚೆ, ನನ್ನ ಹೆಗಲ ಮೇಲೆ ಕೈಹಾಕಿ ಡಿಕೆ ಶಿವಕುಮಾರ್ ಅವರು ಕೇಳಿದ್ದು ಒಂದೇ ಮಾತು, ‘ನಾನು ಏನು ಮಾಡಬೇಕು ಏಳಪ್ಪ’ ಎಂದಿದ್ದರು’ ಎಂದು ರವಿಚಂದ್ರನ್ ಹೇಳಿದರು.

ಇದನ್ನೂ ಓದಿ:ಜೂ ಎನ್​​ಟಿಆರ್-ಪ್ರಶಾಂತ್ ನೀಲ್ ಸಿನಿಮಾಕ್ಕೆ ಮತ್ತೊಬ್ಬ ಕನ್ನಡದ ನಟ ಸೇರ್ಪಡೆ

‘ನಾನು ಬಿದ್ದಾಗ ಹೆದರಲಿಲ್ಲ, ಜನ ಕೈಬಿಟ್ಟಿರಲಿಲ್ಲ. ‘ರಾಮಾಚಾರಿ’ಯಲ್ಲಿ ಪಂಚೆ ಹಾಕಿ ಬಂದಾಗಲೂ ಜನ ನನ್ನ ಕೈಬಿಡಲಿಲ್ಲ. ಈಗ ನೀವು ನನ್ನ ಕೈಹಿಡಿದಿದ್ದೀರ ನನಗೆ ಅಷ್ಟೇ ಸಾಕು. ನಾವು ಒಟ್ಟಿಗೆ ಶಾಲೆ ಕಲಿತವರು, 40-50 ವರ್ಷಗಳ ಸ್ನೇಹ ನಮ್ಮದು ಆದರೆ ಎಂದಿಗೂ ಆ ಸ್ನೇಹವನ್ನು ನಾನು ಬಳಸಿಕೊಂಡಿಲ್ಲ. ಆದರೆ ಇತ್ತೀಚೆಗೆ ಅವರು ನನಗೆ ಮಾಡಿದ ಉಪಕಾರವನ್ನು ನನ್ನ ಜೀವನದಲ್ಲಿ ಮರೆಯುವುದಿಲ್ಲ’ ಎಂದರು ರವಿಚಂದ್ರನ್.

‘ಅದೇ ರೀತಿ, ಮದ್ಧೂರು ಶಾಸಕ ಉದಯ್ ಸಹ ನನಗೆ ಸಹಾಯ ಮಾಡಿದ್ದಾರೆ. ಅದೂ ನನಗೆ ಗೊತ್ತಿಲ್ಲದೆ. ಅವರು ನನಗೆ ಸಹಾಯ ಮಾಡಿರುವ ವಿಷಯ ನನಗೆ ಒಂದೆರಡು ವರ್ಷ ಆದ ಮೇಲೆ ಗೊತ್ತಾಯ್ತು. ನನ್ನ ಸ್ನೇಹಿತರ ಮೂಲಕ ಅವರು ನನಗೆ ಸಹಾಯ ಮಾಡಿದ್ದಾರೆ. ನನ್ನ ಜೀವ ಇರುವವರೆಗೆ ಪ್ರೀತಿಗೆ, ಸ್ನೇಹಕ್ಕೆ ಮಾತ್ರವೇ ನಾನು ತಲೆ ಬಾಗೋದು. ಇಲ್ಲಿಗೆ ಬಂದಿದ್ದು ಸಹ ಉದಯ್ ಅವರಿಗಾಗಿ ಹಾಗೂ ಡಿಕೆ ಶಿವಕುಮಾರ್ ಅವರಿಗಾಗಿ. ಡಿಕೆ ಶಿವಕುಮಾರ್ ಎಲ್ಲಿರುತ್ತಾರೋ ಅಲ್ಲಿ ರವಿಚಂದ್ರನ್ ಇರುತ್ತಾರೆ’ ಎಂದರು ರವಿಚಂದ್ರನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪಶ್ಚಿಮ ಬಂಗಾಳದ ಸಂಪುಟವನ್ನು ವಿಸರ್ಜಿಸಿದ ರಾಜ್ಯಪಾಲ; ಮಮತಾ ಬ್ಯಾನರ್ಜಿ ಈಗ ಮಾಜಿ ಸಿಎಂ – Kannada News | West Bengal Governor RN Ravi dissolves Mamata Banerjee Cabinet after she refuses to resign

ಕೊಲ್ಕತ್ತಾ, ಮೇ 7: ಪಶ್ಚಿಮ ಬಂಗಾಳದ (West Bengal) ರಾಜ್ಯಪಾಲ ಆರ್.ಎನ್. ರವಿ ಇಂದು ಪಶ್ಚಿಮ ಬಂಗಾಳದ ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿದೆ. ಆದರೂ ಬಿಜೆಪಿ ಮತ ಕಳ್ಳತನ ಮಾಡಿದೆ ಎಂದು ಆರೋಪ ಹೊರಿಸಿ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದ್ದರು. ಈಗಾಗಲೇ ಮಮತಾ ಬ್ಯಾನರ್ಜಿ ಅವರ ಅಧಿಕಾರಾವಧಿ ಮುಗಿದಿರುವುದರಿಂದ ಕಾನೂನು ಸಲಹೆ ಪಡೆದ ಪಶ್ಚಿಮ ಬಂಗಾಳದ ರಾಜ್ಯಪಾಲ ಆರ್.ಎನ್. ರವಿ ಬಂಗಾಳದ ಸಂಪುಟವನ್ನು ವಿಸರ್ಜಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಹೀಗಾಗಿ, ಬಿಜೆಪಿ ಸರ್ಕಾರ ರಚನೆಯಾಗಲು ಅವಕಾಶ ಸಿಕ್ಕಂತಾಗಿದೆ. ಮೇ 9ರಂದು ಬಂಗಾಳದಲ್ಲಿ ಬಿಜೆಪಿಯ ಮೊದಲ ಸರ್ಕಾರ ರಚನೆಯಾಗಲಿದೆ ಎನ್ನಲಾಗುತ್ತಿದೆ. ಆದರೆ, ಇನ್ನೂ ಬಿಜೆಪಿ ಸರ್ಕಾರ ರಚನೆಗೆ ರಾಜ್ಯಪಾಲರಿಗೆ ಹಕ್ಕು ಮಂಡನೆ ಮಾಡಿಲ್ಲ.

ಭಾರತದ ಸಂವಿಧಾನದ 174ನೇ ವಿಧಿಯ ಷರತ್ತು (2)ರ ಉಪ-ಷರತ್ತು (ಬಿ) ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಬಳಸಿಕೊಂಡು ಬಂಗಾಳದ ರಾಜ್ಯಪಾಲರು ಪಶ್ಚಿಮ ಬಂಗಾಳ ವಿಧಾನಸಭೆಯನ್ನು ವಿಸರ್ಜಿಸಲು ಆದೇಶಿಸಿದ್ದಾರೆ. ಈ ಘೋಷಣೆಯನ್ನು ಬುಧವಾರ, ಮೇ 6, 2026 ರಂದು ಪ್ರಕಟವಾದ ವಿಶೇಷ ಗೆಜೆಟ್ ಅಧಿಸೂಚನೆಯಲ್ಲಿ (ಅಧಿಸೂಚನೆ ಸಂಖ್ಯೆ: 275-PA/1L-03/2026) ಮಾಡಲಾಗಿದೆ. ಸರ್ಕಾರದ ಸಂಸದೀಯ ವ್ಯವಹಾರಗಳ ಇಲಾಖೆ ಹೊರಡಿಸಿದ ಈ ನಿರ್ದೇಶನದ ಪ್ರಕಾರ, ಪ್ರಸ್ತುತ ವಿಧಾನಸಭೆಯನ್ನು ಮೇ 7ರಿಂದ ಜಾರಿಗೆ ಬರುವಂತೆ ಔಪಚಾರಿಕವಾಗಿ ವಿಸರ್ಜಿಸಲಾಗಿದೆ.

ಇದನ್ನೂ ಓದಿ: ಸಿಎಂ ಸ್ಥಾನಕ್ಕೆ ಮಮತಾ ಬ್ಯಾನರ್ಜಿ ರಾಜೀನಾಮೆ ಕೊಡದಿದ್ದರೆ ಪಶ್ಚಿಮ ಬಂಗಾಳದಲ್ಲಿ ಏನಾಗುತ್ತದೆ?

ರಾಜ್ಯಪಾಲ ಆರ್.ಎನ್. ರವಿ ಅವರು ಸಹಿ ಮಾಡಿದ ಈ ಆದೇಶವನ್ನು ಸಾರ್ವಜನಿಕ ಹಿತಾಸಕ್ತಿಗಾಗಿ ರಾಜ್ಯದ ಮುಖ್ಯ ಕಾರ್ಯದರ್ಶಿ ದುಶ್ಯಂತ ನರಿಯಾಲ (ಐಎಎಸ್) ಪ್ರಕಟಿಸಿದ್ದಾರೆ. ಹೊಸ ಸರ್ಕಾರ ಅಧಿಕಾರ ವಹಿಸಿಕೊಳ್ಳುವ ಮೊದಲು ಚುನಾವಣೆಯ ನಂತರ ಹಳೆಯ ವಿಧಾನಸಭೆಯನ್ನು ವಿಸರ್ಜಿಸುವುದು ಸಾಮಾನ್ಯವಾಗಿ ಸಾಂವಿಧಾನಿಕ ಪದ್ಧತಿಯಾಗಿದೆ. ಈ ಆದೇಶವು 17 ನೇ ವಿಧಾನಸಭೆಯ ಅವಧಿಯನ್ನು ಕೊನೆಗೊಳಿಸಲಿದ್ದು, ಹೊಸದಾಗಿ ಆಯ್ಕೆಯಾದ ಪ್ರತಿನಿಧಿಗಳೊಂದಿಗೆ 18ನೇ ವಿಧಾನಸಭೆಯ ರಚನೆಗೆ ದಾರಿ ಮಾಡಿಕೊಡುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:47 pm, Thu, 7 May 26

Source link

ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಸಾವು: ಅಣ್ಣನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ತಂಗಿ – Kannada News | Ballari: Life Convict Dies in Hospital; Sister Raises Doubts Over Death

ಆಸ್ಪತ್ರೆಯಲ್ಲಿ ಕೈದಿ ಸಾವು (ಎಐ ಚಿತ್ರ)Image Credit source: tv9 kannada

ಬಳ್ಳಾರಿ, ಮೇ 07: ನಗರದ ಬಿಮ್ಸ್ ಆಸ್ಪತ್ರೆಯಲ್ಲಿ (BIMS Hospital) ಚಿಕಿತ್ಸೆ ಪಡೆಯುತ್ತಿದ್ದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿ ಮೃತಪಟ್ಟಿದ್ದು (Prisoner Death), ಸಾವಿನ ಹಿಂದೆ ಜೈಲು ಸಿಬ್ಬಂದಿ ಹಾಗೂ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಸಂಕನಾಳು ಗ್ರಾಮದ ನಿವಾಸಿ ಹನುಮಂತು (25) ಮೃತಪಟ್ಟ ದುರ್ದೈವಿ. ಅಣ್ಣ ಸಾವಿಗೆ ನ್ಯಾಯಬೇಕೆಂದು ತಂಗಿ ಮರಿಯಮ್ಮ ಆಗ್ರಹಿಸಿದ್ದಾರೆ.

ಮುಖ್ಯಾಂಶಗಳು

  • ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕೈದಿ ಸಾವು
  • ಬಿಮ್ಸ್ ವೈದ್ಯರು ಮತ್ತು ಜೈಲು ಸಿಬ್ಬಂದಿ ನಿರ್ಲಕ್ಷ್ಯದಿಂದ ಸಾವು ಆರೋಪ
  • ಅಣ್ಣನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ತಂಗಿ

ನಡೆದಿದ್ದೇನು?

ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಹನುಮಂತು ನನ್ನು ಕಳೆದ ಜನವರಿಯಲ್ಲಿ ರಾಯಚೂರು ಜೈಲಿನಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು. ಏಪ್ರಿಲ್ 29ರಂದು ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆ ಜೈಲು ಅಧಿಕಾರಿಗಳು ಆತನನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, 1 ವಾರದಿಂದ ಆಸ್ಪತ್ರೆಗೆ ದಾಖಲಿಸಿದ್ದರೂ ಈ ಬಗ್ಗೆ ರಾಯಚೂರಿನಲ್ಲಿರುವ ಅವರ ಪೋಷಕರಿಗೆ ಕಿಂಚಿತ್ತೂ ಮಾಹಿತಿ ನೀಡಿರಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ವಿಚಾರಣೆ ವೇಳೆ ಲಾಕರ್ ಕೀ ನುಂಗಿ ಹೈಡ್ರಾಮಾ: ಆರೋಪಿಯ ವಿಚಿತ್ರ ವರ್ತನೆಗೆ ಪೊಲೀಸರೇ ಶಾಕ್!

ಸದ್ಯ ಮೃತನ ತಂಗಿ ಮರಿಯಮ್ಮ ನಮ್ಮ ಅಣ್ಣನ ಸಾವಿಗೆ ಪೊಲೀಸರು ಮತ್ತು ವೈದ್ಯರ ಅಕ್ಷಮ್ಯ ನಿರ್ಲಕ್ಷ್ಯವೇ ಕಾರಣ ಎಂದು ದೂರಿದ್ದಾರೆ. ಆಸ್ಪತ್ರೆಗೆ ದಾಖಲಿಸಿದ ಬಗ್ಗೆ ಮಾಹಿತಿ ನೀಡಿಲ್ಲ. ಮೇ 6ರ ಮಧ್ಯರಾತ್ರಿ ಕರೆ ಮಾಡಿ ಮೃತಪಟ್ಟ ಬಗ್ಗೆ ಮಾಹಿತಿ ನೀಡಿದ್ದಾರೆಂದು ಆರೋಪಿಸಿದರು.

ಅಣ್ಣನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ತಂಗಿ

ಇನ್ನು ಜೈಲಲ್ಲಿ ಆರಾಮವಾಗಿಯೇ ಇದ್ದ ಹನುಮಂತು ಏಕಾಏಕಿ ಮೃತಪಟ್ಟಿದ್ದೇಗೆ ಎಂದು ಅಣ್ಣ ಹನುಮಂತು ಸಾವಿನ ಬಗ್ಗೆ ಮರಿಯಮ್ಮ ಅನುಮಾನ ವ್ಯಕ್ತಪಡಿಸಿದ್ದು, ಅಣ್ಣನ ಸಾವಿಗೆ ನ್ಯಾಯಬೇಕೆಂದು ಆಗ್ರಹಿಸಿದ್ದಾರೆ.

ಪೊಲೀಸರ ವಶದಲ್ಲಿದ್ದ ಕೊಲೆ ಆರೋಪಿ ಸಾವು

ಇನ್ನೊಂದು ಪ್ರಕರಣದಲ್ಲಿ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಪೊಲೀಸರ ವಶದಲ್ಲಿದ್ದ ಕೊಲೆ ಆರೋಪಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಶೇಷಾದ್ರಿಪುರಂ ನಿವಾಸಿ ಮಂಜುನಾಥ್(36) ಮೃತ ಆರೋಪಿ. ಸದ್ಯ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಯುಡಿಆರ್ ದಾಖಲಾಗಿದೆ.

ಇದನ್ನೂ ಓದಿ: ಸೋದರಸಂಬಂಧಿಯನ್ನೇ ವರಿಸಿದ ಯುವತಿ! ಚಿಕ್ಕಬಳ್ಳಾಪುರದಲ್ಲೊಂದು ವಿಚಿತ್ರ ವಿವಾಹ

ಏಪ್ರಿಲ್ 28ರಂದು ಪೊಲೀಸರು ಮಂಜುನಾಥ್ ಬಂಧಿಸಿದ್ದರು. ಮೇ 1ರಂದು ಹೊಟ್ಟೆನೋವು ಎಂದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿಗೆ ಪಿತ್ತಜನಕಾಂಗ ಮತ್ತು ಸಕ್ಕರೆ ಕಾಯಿಲೆ ಇತ್ತು. ಚಿಕಿತ್ಸೆ ಫಲಿಸದೇ ಮೇ 3ರಂದು ಮಂಜುನಾಥ್ ಮೃತಪಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IPL 2026: ಉಚಿತ ಟಿಕೆಟ್​ಗಳ ಬೇಡಿಕೆಯಿಂದಲೇ ಫೈನಲ್ ಪಂದ್ಯ ಶಿಫ್ಟ್; ಬಿಸಿಸಿಐ ಸ್ಪಷ್ಟನೆ – Kannada News | PL 2026 Final: Bengaluru Loses Hosting Due to Free Ticket Demands; Ahmedabad Steps In

2026 ರ ಐಪಿಎಲ್ (IPL 2026) ಫೈನಲ್ ಪಂದ್ಯದ ಆತಿಥ್ಯ ಬೆಂಗಳೂರಿನ ಕೈತಪ್ಪಿದೆ. ಶಾಸಕರ ಉಚಿತ ಟಿಕೆಟ್​ಗಳ ಬೇಡಿಕೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಆದರೆ ಕರ್ನಾಟಕ ಸರ್ಕಾರ ಮಾತ್ರ ಈ ಆರೋಪವನ್ನು ಅಲ್ಲಗಳೆದಿದ್ದು, ತನ್ನದೆಯಾದ ಹೇಳಿಕೆಗಳನ್ನು ನೀಡುತ್ತಿದೆ. ಇದೆಲ್ಲದರ ನಡುವೆ ಐಪಿಎಲ್ ಫೈನಲ್ ಪಂದ್ಯದ ಸ್ಥಳವನ್ನು ಬೆಂಗಳೂರಿನಿಂದ ಅಹಮದಾಬಾದ್​ಗೆ ಬದಲಿಸಿದ್ದು ಏಕೆ ಎಂಬುದನ್ನು ಬಿಸಿಸಿಐ (BCCI) ಕಾರ್ಯದರ್ಶಿ ದೇವಜಿತ್ ಸೈಕಿಯಾ ಸ್ಪಷ್ಟವಾಗಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ.

15% ಮಾತ್ರ ಉಚಿತ ಟಿಕೆಟ್‌

ಈ ಬಗ್ಗೆ ಎಎನ್​ಐ ಜೊತೆ ಮಾತನಾಡಿರುವ ಸೈಕಿಯಾ, ‘ಐಪಿಎಲ್ ಶಿಷ್ಟಾಚಾರದ ಪ್ರಕಾರ, ಆತಿಥೇಯ ಸಂಘಕ್ಕೆ ಒಟ್ಟು ಆಸನ ಸಾಮರ್ಥ್ಯದ 15% ಮಾತ್ರ ಉಚಿತ ಟಿಕೆಟ್‌ಗಳನ್ನು ನಾವು ಒದಗಿಸಬೇಕಾಗುತ್ತದೆ. ಇದು ಪ್ರಮಾಣಿತ ಶಿಷ್ಟಾಚಾರವಾಗಿದೆ. ಎಲ್ಲಾ ಆತಿಥೇಯ ರಾಜ್ಯ ಸಂಘಗಳು ತಮ್ಮ ಒಟ್ಟು ಸಾಮರ್ಥ್ಯದ 15% ಮಾತ್ರ ಉಚಿತ ಟಿಕೆಟ್‌ಗಳನ್ನು ಪಡೆಯುತ್ತವೆ. ಆದಾಗ್ಯೂ, ಐಪಿಎಲ್ ಲೀಗ್ ಪಂದ್ಯಗಳನ್ನು ಆಯೋಜಿಸುವಾಗ, ಕರ್ನಾಟಕ ರಾಜ್ಯ ಸಂಘವು ಗಮನಾರ್ಹವಾಗಿ ಹೆಚ್ಚಿನ ಸಂಖ್ಯೆಯ ಉಚಿತ ಟಿಕೆಟ್‌ಗಳನ್ನು ಪಡೆಯುತ್ತಿದೆ ಎಂದು ವಿವಿಧ ಮೂಲಗಳಿಂದ ನಮಗೆ ಮಾಹಿತಿ ಬಂದಿದೆ. ಇದು ನಿಗದಿತ 15% ಕ್ಕಿಂತ ಹೆಚ್ಚು ಎಂಬುದು ನಮಗೆ ಖಚಿತವಾಗಿದೆ.

10,000 ಹೆಚ್ಚುವರಿ ಟಿಕೆಟ್‌ಗಳ ಬೇಡಿಕೆ

ಪರಿಣಾಮವಾಗಿ, ಈ ವಿಷಯದ ಬಗ್ಗೆ ವಿವರಣೆಯನ್ನು ಕೋರಿ ನಾವು ಕೆಎಸ್​ಸಿಎಗೆ ಇಮೇಲ್ ಕಳುಹಿಸಿದ್ದೇವು. ಮೇ 2 ರಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದಿಂದ ನಮಗೆ ಇಮೇಲ್ ಮೂಲಕ ಪ್ರತಿಕ್ರಿಯೆ ಬಂದಾಗ ನಾವು ಆಘಾತಕ್ಕೊಳಗಾಗಿದ್ದೇವೆ. ಆ ಇಮೇಲ್‌ನಲ್ಲಿ ಕೆಎಸ್​ಸಿಎ, ತಮ್ಮ ಸದಸ್ಯರು, ಅಂಗಸಂಸ್ಥೆ ಕ್ಲಬ್‌ಗಳು ಮತ್ತು ಇತರ ಹಲವಾರು ಸದಸ್ಯರಿಗೆ ಹೆಚ್ಚುವರಿಯಾಗಿ 15% ಉಚಿತ ಟಿಕೆಟ್ ಕೋಟಾಕ್ಕಿಂತ ಹೆಚ್ಚು ಟಿಕೆಟ್‌ಗಳು ಬೇಕು ಎಂದು ಹೇಳಿದೆ. ಅತ್ಯಂತ ಆಶ್ಚರ್ಯಕರವಾಗಿ ಕೆಎಸ್​ಸಿಎ, ರಾಜ್ಯದ ಶಾಸಕರು ಮತ್ತು ವಿಧಾನ ಪರಿಷತ್ತಿನ ಸದಸ್ಯರಿಗೂ ಉಚಿತ ಟಿಕೆಟ್‌ಗಳನ್ನು ವಿನಂತಿಸಿದೆ. ಇದರರ್ಥ 700ಕ್ಕೂ ಹೆಚ್ಚು ಟಿಕೆಟ್‌ಗಳನ್ನು ಉಚಿತವಾಗಿ ನೀಡಬೇಕೆಂಬ ಬೇಡಿಕೆ ಇಟ್ಟಿದೆ. ಇದು 15% ಹಂಚಿಕೆಗಿಂತ ಹೆಚ್ಚಾಗಿದ್ದು, ಇದರ ಜೊತೆಗೆ ಕೆಎಸ್​ಸಿಎ ಸರಿಸುಮಾರು 10,000 ಹೆಚ್ಚುವರಿ ಟಿಕೆಟ್‌ಗಳನ್ನು ಕೇಳುತ್ತಿದೆ.

IPL 2026: ಆರ್​ಸಿಬಿ ಫ್ಯಾನ್ಸ್​ಗೆ ಬಿಗ್​ ಶಾಕ್; ಐಪಿಎಲ್ ಫೈನಲ್ ಬೆಂಗಳೂರಿನಿಂದ ಅಹಮದಾಬಾದಿಗೆ ಶಿಫ್ಟ್

ಶಿಷ್ಟಾಚಾರಗಳನ್ನು ಉಲ್ಲಂಘಿಸಲು ಸಾಧ್ಯವಿಲ್ಲ

ನಿಮಗೆಲ್ಲರಿಗೂ ತಿಳಿದಿರುವಂತೆ, ಬಿಸಿಸಿಐ ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳಿಗೆ ಆತಿಥೇಯ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ, ಐಪಿಎಲ್‌ನ ನಿಯಮಗಳು ಮತ್ತು ನಿಬಂಧನೆಗಳ ಅಡಿಯಲ್ಲಿ ಅನುಮತಿಸಲಾಗದ ಹೆಚ್ಚುವರಿ ಟಿಕೆಟ್‌ಗಳನ್ನು ನೀಡುವ ಮೂಲಕ ನಾವು ನಮ್ಮ ಶಿಷ್ಟಾಚಾರಗಳನ್ನು ಉಲ್ಲಂಘಿಸಲು ಸಾಧ್ಯವಿಲ್ಲ. ಪರಿಣಾಮವಾಗಿ, ಕರ್ನಾಟಕದಿಂದ ಪಂದ್ಯಗಳನ್ನು ಸ್ಥಳಾಂತರಿಸುವ ಕಠಿಣ ನಿರ್ಧಾರವನ್ನು ನಾವು ತೆಗೆದುಕೊಳ್ಳಬೇಕಾಯಿತು ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:01 pm, Thu, 7 May 26

Source link

ಆಟೋ ಪ್ರಯಾಣಿಕರಿಗೆ ಬ್ಯಾಡ್​​ ನ್ಯೂಸ್​​: ಮೀಟರ್​ ದರ ಹೆಚ್ಚಳಕ್ಕೆ ಚಾಲಕ ಸಂಘಟನೆಗಳ ಮನವಿ – Kannada News | Bangalore Auto Fare Hike Looms: LPG Price Soars, Drivers Demand Rupees 50 Minimum

ಬೆಂಗಳೂರು, ಮೇ 07: ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಣಾಮ ಆಟೋ ಎಲ್ಪಿಜಿ ದರ ನಿರಂತರವಾಗಿ ಏರಿಕೆ ಕಂಡಿದೆ. ಹೀಗಾಗಿ ಆಟೋ ಮೀಟರ್ ದರ ಏರಿಕೆ ಮಾಡುವಂತೆ ಆಗ್ರಹಿಸಿ ಆಟೋ ಚಾಲಕ ಸಂಘಟನೆಗಳು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಯುದ್ಧಕ್ಕೂ ಮುನ್ನ ಒಂದು ಲೀಟರ್ ಆಟೋ ಎಲ್ಪಿಜಿ ದರ 56 ರೂ. ಇತ್ತು. ಬಳಿಕ ಅದು ಕಳೆದ ಒಂದು ವಾರದ ಹಿಂದೆ 90 ರೂ.ಗಳಿಗೆ ಏರಿತ್ತು. ಆದರೆ ಸದ್ಯ ಬೆಂಗಳೂರಲ್ಲಿ ಒಂದು ಲೀಟರ್ ಆಟೋ ಎಲ್ಪಿಜಿ ದರವೀಗ 95 ರೂಪಾಯಿಗಳಿಗೆ ತಲುಪಿದೆ. ಹೀಗಾಗಿ ಮೀಟರ್​​ ದರ ಏರಿಕೆ ಅನಿವಾರ್ಯ ಎಂಬುದು ಆಟೋ ಚಾಲಕರ ಅಭಿಪ್ರಾಯ.

  • ಯುದ್ಧದ ಪರಿಣಾಮ ಆಟೋ ಎಲ್ಪಿಜಿ ದರ ನಿರಂತರವಾಗಿ ಏರಿಕೆ
  • ಆಟೋ ಮೀಟರ್ ದರ ಏರಿಕೆಗೆ ಚಾಲಕ ಸಂಘಟನೆಗಳಿಂದ ಮನವಿ
  • ಮೀಟರ್​​ ದರ ಎಷ್ಟು ಹೆಚ್ಚಳಕ್ಕೆ ಆಟೋ ಚಾಕರಿಂದ ಪ್ರಸ್ತಾಪ?

ಇದನ್ನೂ ಓದಿ: ಬೆಂಗಳೂರು ಆಟೋ ಪ್ರಯಾಣಿಕರಿಗೆ ದರ ಏರಿಕೆ ಬಿಸಿ? ಎಲ್.ಪಿ.ಜಿ ದರ ಹೆಚ್ಚಳಕ್ಕೆ ಚಾಲಕರ ಆಕ್ರೋಶ!

ಎಷ್ಟು ದರ ಹೆಚ್ಚಳಕ್ಕೆ ಮನವಿ?

ಆಟೋ ಮೀಟರ್ ಕನಿಷ್ಠ ದರವನ್ನು 50 ರೂ. ಹಾಗೂ ಆ ನಂತರ ಕಿಲೋ ಮೀಟರ್​​ಗೆ 25 ರೂ. ಹೆಚ್ಚಿಸಲು ಆಟೋ ಚಾಲಕ ಸಂಘಟನೆಗಳು ಬೇಡಿಕೆ ಇಟ್ಟಿವೆ. ಬೆಂಗಳೂರಲ್ಲಿ ಸದ್ಯ ಆಟೋ ಮೀಟರ್ ಕನಿಷ್ಠ ದರ 36 ರೂ. ಇದ್ದು, ಆ ನಂತರದ ಪ್ರತಿ ಕಿಲೋ ಮೀಟರ್​​ಗೆ 18 ರೂ. ನಿಗದಿಪಡಿಸಲಾಗಿದೆ. ಮೊದಲೇ ಆಟೋ ಎಲ್ಪಿಜಿ ಅಗತ್ಯಕ್ಕೆ ತಕ್ಕಂತೆ ಸಿಗ್ತಿಲ್ಲ. ಈ ನಡುವೆ ಗ್ಯಾಸ್​​ ದರವನ್ನೂ ಕೇಂದ್ರ ಸರ್ಕಾರ ದಿಢೀರ್​​ ಏರಿಸಿರೋದು ಚಾಲಕರನ್ನು ಸಂಕಷ್ಟ ತಳ್ಳಿದೆ ಎಂಬ ಮಾತುಗಳು ಕೇಳಿಬಂದಿವೆ.

ಇನ್ನು ಚಾಲಕ ಸಂಘಟನೆಗಳ ಆಗ್ರಹದ ಬಗ್ಗೆ ಪ್ರಯಾಣಿಕರಿಂದಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗ್ಯಾಸ್​​ ರೇಟ್​​ ಹೆಚ್ಚಳದ ಕಾರಣಕ್ಕೆ ಆಟೋ ಚಾಲಕರ ಬೇಡಿಕೆಯೇನೋ ಸರಿಯಿದೆ. ಆದರೆ ದರ ಏರಿಕೆ ಮಾಡಿದಲ್ಲಿ ಅದು ಪ್ರಯಾಣಿಕರಿಗೆ ಹೊರೆಯಾಗಲಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದರೆ, ಇನ್ನು ಹಲವರು ಆಟೋ ಎಲ್ಪಿಜಿ ದರ ದುಪ್ಪಟ್ಟಾಗಿರುವ ಕಾರಣ ದರ ಏರಿಕೆ ಆಗಲಿ ಎಂದು ತಿಳಿಸಿದ್ದಾರೆ. ಈ ನಡುವೆ ಸಾರಿಗೆ ಸಚಿವರಿಗೂ ತಮ್ಮ ಬೇಡಿಕೆ ಒಳಗೊಂಡ ಮನವಿಯನ್ನು ನೀಡೋದಾಗಿ ಆಟೋ ಚಾಲಕ ಸಂಘಟನೆಗಳು ತಿಳಿಸಿವೆ. ಅಂತಿಮವಾಗಿ ನಿರ್ಧಾರ ಏನಾಗುತ್ತೆ ಎಂಬುದನ್ನು ಕಾದುನೋಡಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮದುವೆಗೆ ತೆರಳುತ್ತಿದ್ದಾಗ ಬಿರುಗಾಳಿಗೆ ಸಿಲುಕಿದ ಏಕನಾಥ್ ಶಿಂಧೆ ಅವರ ಹೆಲಿಕಾಪ್ಟರ್ – Kannada News | Maharashtra DCM Eknath Shindes helicopter caught in thunderstorm Forced To Turn Back

ಮುಂಬೈ, ಮೇ 7: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಬಿರುಗಾಳಿಗೆ ಸಿಲುಕಿದೆ. ಮುಂಬೈನಲ್ಲಿ ದಿಢೀರ್ ಬಿರುಗಾಳಿ ಎಚ್ಚರಿಕೆಯ ನಂತರ ಹೆಲಿಕಾಪ್ಟರ್ ಹಿಂದಕ್ಕೆ ತಿರುಗಬೇಕಾಯಿತು. ಆದರೆ, ಯಾರಿಗೂ ಯಾವುದೇ ತೊಂದರೆಯಾಗಿಲ್ಲ. ಹೆಲಿಕಾಪ್ಟರ್​​ನ ಸುರಕ್ಷಿತ ಲ್ಯಾಂಡಿಂಗ್ ನಂತರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಅಧಿಕೃತ ನಿವಾಸಕ್ಕೆ ತೆರಳಿದರು.

ಥಾಣೆ ಗ್ರಾಮೀಣ ಪ್ರದೇಶದಲ್ಲಿ ಹಠಾತ್ ಬಿರುಗಾಳಿಯಿಂದಾಗಿ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಹೆಲಿಕಾಪ್ಟರ್ ಮಾರ್ಗ ಬದಲಾಯಿಸಲ್ಪಟ್ಟಿತು. ಮಹಾಲಕ್ಷ್ಮಿ ರೇಸ್‌ಕೋರ್ಸ್ ಹೆಲಿಪ್ಯಾಡ್‌ನಿಂದ ಏಕನಾಥ್ ಶಿಂಧೆ ಮಧ್ಯಾಹ್ನ 3.30ರ ಸುಮಾರಿಗೆ ಹೊರಟು ತಮ್ಮ ಪಕ್ಷದ ಕಾರ್ಯಕರ್ತರೊಬ್ಬರಿಗೆ ಸಂಬಂಧಿಸಿದ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಮುರ್ಬಾದ್ ಕಡೆಗೆ ತೆರಳುತ್ತಿದ್ದರು. ಆದರೆ, ಹೆಲಿಕಾಪ್ಟರ್ ಐರೋಲಿ ಪ್ರದೇಶವನ್ನು ದಾಟಿದ ಸ್ವಲ್ಪ ಸಮಯದ ನಂತರ, ಹವಾಮಾನ ಪರಿಸ್ಥಿತಿ ಹದಗೆಡಲು ಪ್ರಾರಂಭಿಸಿತು.

ಇದನ್ನೂ ಓದಿ: ಮುಂಬೈನಲ್ಲಿ ರೆಸಾರ್ಟ್ ರಾಜಕೀಯ ಶುರು; ಶಿಂಧೆ ಬಣದ ಶಿವಸೇನೆ ಕಾರ್ಪೋರೇಟರ್​​ಗಳು ಫೈವ್ ಸ್ಟಾರ್​​ ಹೋಟೆಲ್‌ಗೆ ಶಿಫ್ಟ್

ಮೋಡ, ಬಿರುಗಾಳಿಯಿಂದಾಗಿ ಹೆಲಿಕಾಪ್ಟರ್ ಮುಂದೆ ಚಲಿಸಲು ಕಷ್ಟವಾಯಿತು. ತಕ್ಷಣ ಎಚ್ಚೆತ್ತುಕೊಂಡ ಪೈಲಟ್ ಹೆಲಿಕಾಪ್ಟರ್ ಅನ್ನು ಹಿಂದಕ್ಕೆ ತಿರುಗಿಸಿ ಲ್ಯಾಂಡ್ ಮಾಡಿದ್ದಾರೆ. ಹೆಲಿಕಾಪ್ಟರ್ ಅನ್ನು ಜುಹು ಪವನ್ ಹನ್ಸ್‌ನಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು. ಈ ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ವಿಮಾನದಲ್ಲಿದ್ದ ಎಲ್ಲರೂ ಸುರಕ್ಷಿತರೆಂದು ಘೋಷಿಸಲಾಗಿದೆ.

ಏಕನಾಥ್ ಶಿಂಧೆ ಅವರನ್ನು ಹೊರತುಪಡಿಸಿ, ಹೆಲಿಕಾಪ್ಟರ್‌ನಲ್ಲಿ ಅವರ ಪಿಎ ಪ್ರಭಾಕರ್ ಕೇಲ್, ವಿಶೇಷ ಕರ್ತವ್ಯ ಅಧಿಕಾರಿ ಬಾಲಸಿಂಗ್ ರಜಪೂತ್, ಸಾರ್ವಜನಿಕ ಸಂಪರ್ಕ ವಿಭಾಗದ ಓಎಸ್‌ಡಿ ವಿನಾಯಕ್ ಪಟ್ರುಡ್ಕರ್, ಭದ್ರತಾ ಸಿಬ್ಬಂದಿ ಮತ್ತು ವಿಮಾನಯಾನ ಕಂಪನಿಯ ಪ್ರತಿನಿಧಿಗಳು ಇದ್ದರು.

ಇದನ್ನೂ ಓದಿ: ಮುಂಬೈನಲ್ಲಿ ರೆಸಾರ್ಟ್ ರಾಜಕೀಯ ಶುರು; ಶಿಂಧೆ ಬಣದ ಶಿವಸೇನೆ ಕಾರ್ಪೋರೇಟರ್​​ಗಳು ಫೈವ್ ಸ್ಟಾರ್​​ ಹೋಟೆಲ್‌ಗೆ ಶಿಫ್ಟ್

ಕಳಪೆ ಗೋಚರತೆ, ಭಾರೀ ಗಾಳಿ ಮತ್ತು ಅಸ್ಥಿರ ಗಾಳಿಯಿಂದಾಗಿ, ಪೈಲಟ್ ಮುನ್ನೆಚ್ಚರಿಕೆಯಾಗಿ ಹೆಲಿಕಾಪ್ಟರ್ ಅನ್ನು ಮುಂಬೈಗೆ ಹಿಂತಿರುಗಿಸಲು ನಿರ್ಧರಿಸಿದರು. ವಿಮಾನವು ಜುಹು ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು. ಉಪಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಾಟಾ ಟ್ರಸ್ಟ್​ಗಳ ಮಂಡಳಿ ಸಭೆಗೆ ತಡೆ ನೀಡಲು ಬಾಂಬೆ ಹೈಕೋರ್ಟ್ ನಕಾರ – Kannada News | Tata Trusts Legal Battle: Bombay HC Rejects Plea to Halt Board Meetings

ಮುಂಬೈ, ಮೇ 7: ಭಾರತದ ಅತ್ಯಂತ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಟಾಟಾ ಟ್ರಸ್ಟ್‌ನ ಆಡಳಿತ ಮಂಡಳಿಯ (Tata Trust Board) ನೇಮಕಾತಿ ಮತ್ತು ಅಧಿಕಾರಕ್ಕೆ ಸಂಬಂಧಿಸಿದಂತೆ ಕಾನೂನು ಸಮರ ಶುರುವಾಗಿದೆ. ಟ್ರಸ್ಟ್‌ನ ಕಾರ್ಯವೈಖರಿಯಲ್ಲಿನ ಕೆಲವು ಬದಲಾವಣೆಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ನಡೆಸುತ್ತಿದೆ. ಇದೇ ವೇಳೆ, ಟಾಟಾ ಟ್ರಸ್ಟ್ಸ್​ನ ಅಡಿಯಲ್ಲಿರುವ ಎರಡು ಪ್ರಮುಖ ಟ್ರಸ್ಟ್​ಗಳ ಮಂಡಳಿ ಸಭೆ ಮೇ 8ರಂದು ನಡೆಯಲಿದ್ದು, ಅದಕ್ಕೆ ತಡೆ ನೀಡಬೇಕೆಂದು ಪಿಐಎಲ್ ಮೂಲಕ ಮಾಡಲಾಗಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ. ಇದರಿಂದ ಮೇ 8, ಶುಕ್ರವಾರಂದು ನಿಗದಿಯಾದಂತೆ ಸರ್ ದೊರಾಬ್​ಜಿ ಟಾಟಾ ಟ್ರಸ್ಟ್ ಮತ್ತು ಶ್ರೀ ರತನ್ ಟಾಟಾ ಟ್ರಸ್ಟ್​ಗಳ ಮಂಡಳಿ ಸಭೆಗಳು ನಡೆಯಲಿವೆ.

ಟಾಟಾ ಟ್ರಸ್ಟ್​ಗಳ ವಿರುದ್ಧ ಸಲ್ಲಿಸಿರುವ ದೂರಿನ ವಿಚಾರಣೆಯನ್ನು ತುರ್ತಾಗಿ ಆರಂಭಿಸಬೇಕು. ಮತ್ತು ಮೇ 8ರಂದು ನಿಗದಿಯಾಗಿರುವ ಟ್ರಸ್ಟ್ ಮಂಡಳಿ ಸಭೆಗೆ ತಡೆ ನೀಡಬೇಕು ಎಂದು ಕೋರ್ಟ್​ಗೆ ಕೋರಲಾಗಿತ್ತು. ಮುಖ್ಯ ನ್ಯಾಯಾಧೀಶ ಚಂದ್ರಶೇಖರ್ ನೇತೃತ್ವ ಬಾಂಬೆ ಹೈಕೋರ್ಟ್ ಪೀಠವು ಈ ಪ್ರಕರಣದ ತುರ್ತು ವಿಚಾರಣೆ ನಡೆಸಲು ನಿರಾಕರಿಸಿತು. ಮೊದಲು ನಿಗದಿಯಾದಂತೆಯೇ ವಿಚಾರಣೆ ಆರಂಭವಾಗುತ್ತದೆ. ತುರ್ತಾಗಿ ವಿಚಾರಣೆ ನಡೆಸುವಂತಹದ್ದು ಏನಿಲ್ಲ ಎಂದು ನ್ಯಾಯಪೀಠ ಹೇಳಿತು. ಆದರೆ, ತುರ್ತಾಗಿ ವಿಚಾರಣೆ ನಡೆಸಲೇಬೇಕು ಎಂದು ಅರ್ಜಿದಾರರಿಗೆ ಅನಿಸಿದಲ್ಲಿ ರಜಾದಿನ ನ್ಯಾಯಪೀಠದ ಮುಂದೆ ಅಹವಾಲು ಸಲ್ಲಿಸಬಹುದು ಎಂದೂ ಅವಕಾಶ ಕೊಟ್ಟಿತು.

ಇದನ್ನೂ ಓದಿ: ಪರಿಸರಸ್ನೇಹಿ ಯೋಜನೆಗಳಿಗೆ ಆಪಲ್ ಭರ್ಜರಿ ಹೂಡಿಕೆ; ಸ್ವಚ್ಛ ಇಂಧನ, ಪ್ಲಾಸ್ಟಿಕ್ ನಿವಾರಣೆ, ತ್ಯಾಜ್ಯ ನಿರ್ವಹಣೆ ಇತ್ಯಾದಿ ಉಪಕ್ರಮಗಳ ಘೋಷಣೆ

ವಿವಾದದ ಮೂಲ

ಟಾಟಾ ಟ್ರಸ್ಟ್‌ನ ವಿಶ್ವಸ್ತ ಮಂಡಳಿಯ (Board of Trustees) ಕೆಲವು ನಿರ್ಧಾರಗಳು ಮತ್ತು ನೇಮಕಾತಿ ಪ್ರಕ್ರಿಯೆಗಳು ಟ್ರಸ್ಟ್‌ನ ಮೂಲ ನಿಯಮಾವಳಿಗಳಿಗೆ (Trust Deed) ವಿರುದ್ಧವಾಗಿವೆ ಎಂಬುದು ಅರ್ಜಿದಾರರ ವಾದ. ವಿಶೇಷವಾಗಿ ರತನ್ ಟಾಟಾ ಅವರ ನಿಧನದ ನಂತರದ ಆಡಳಿತಾತ್ಮಕ ಬದಲಾವಣೆಗಳು ಈ ವಿವಾದಕ್ಕೆ ಕಾರಣವಾಗಿವೆ ಎನ್ನಲಾಗಿದೆ.

ಟ್ರಸ್ಟ್‌ನಲ್ಲಿ ಅಧಿಕಾರ ಹಂಚಿಕೆ ಮತ್ತು ಪ್ರಮುಖ ಹುದ್ದೆಗಳಿಗೆ ವ್ಯಕ್ತಿಗಳನ್ನು ಆಯ್ಕೆ ಮಾಡುವ ಕ್ರಮವು ಪಾರದರ್ಶಕವಾಗಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಮಧ್ಯಪ್ರವೇಶಿಸಿ ತನಿಖೆ ನಡೆಸಬೇಕು ಅಥವಾ ನಿರ್ದೇಶನ ನೀಡಬೇಕು ಎಂದು ಕೋರಲಾಗಿದೆ.

ಟಾಟಾ ಸಮೂಹದ ಬಹುಪಾಲು ಷೇರುಗಳನ್ನು ಟಾಟಾ ಟ್ರಸ್ಟ್ ಹೊಂದಿದೆ. ಹಾಗಾಗಿ, ಇಲ್ಲಿ ನಡೆಯುವ ಯಾವುದೇ ಆಡಳಿತಾತ್ಮಕ ಬದಲಾವಣೆಗಳು ಇಡೀ ಟಾಟಾ ಸಾಮ್ರಾಜ್ಯದ ಮೇಲೆ ಪರಿಣಾಮ ಬೀರುತ್ತವೆ. ಈ ಕಾರಣಕ್ಕಾಗಿಯೇ ಈ ಕಾನೂನು ಹೋರಾಟವು ಕಾರ್ಪೊರೇಟ್ ವಲಯದಲ್ಲಿ ಹೆಚ್ಚು ಗಮನ ಸೆಳೆದಿದೆ.

ಇದನ್ನೂ ಓದಿ: ಬ್ಯಾಂಕ್ ಸಾಲಗಾರರ ಗಮನಕ್ಕೆ; ಅಡಮಾನ ಆಸ್ತಿ ವಿಚಾರದಲ್ಲಿ ಆರ್​ಬಿಐ ಕರಡು ನಿಯಮಗಳಿವು…

ಆಡಳಿತ ಮಂಡಳಿಯ ಸಮರ್ಥನೆ

ಇನ್ನೊಂದೆಡೆ, ಟಾಟಾ ಟ್ರಸ್ಟ್ ತನ್ನ ನಿರ್ಧಾರಗಳು ಕಾನೂನುಬದ್ಧವಾಗಿವೆ ಮತ್ತು ಸಂಸ್ಥೆಯ ಹಿತದೃಷ್ಟಿಯಿಂದಲೇ ತೆಗೆದುಕೊಳ್ಳಲಾಗಿದೆ ಎಂದು ವಾದಿಸುವ ಸಾಧ್ಯತೆಯಿದೆ. ಟ್ರಸ್ಟ್‌ನ ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಮಂಡಳಿಯ ಮುಖ್ಯ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಂಬೈ ಹೈಕೋರ್ಟ್ ಈ ಅರ್ಜಿಯನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದು, ಸಂಬಂಧಪಟ್ಟ ವ್ಯಕ್ತಿಗಳಿಗೆ ಮತ್ತು ಟ್ರಸ್ಟ್‌ಗೆ ನೋಟಿಸ್ ನೀಡುವ ಅಥವಾ ವಿವರಣೆ ಕೇಳುವ ಸಾಧ್ಯತೆಯಿದೆ.

ಒಟ್ಟಾರೆಯಾಗಿ, ಟಾಟಾ ಟ್ರಸ್ಟ್‌ನಂತಹ ದೊಡ್ಡ ಸಂಸ್ಥೆಯ ಒಳಾಡಳಿತದಲ್ಲಿ ಭಿನ್ನಾಭಿಪ್ರಾಯ ಮೂಡಿದ್ದು, ಈಗ ಅದು ನ್ಯಾಯಾಲಯದ ಅಂಗಳ ತಲುಪಿದೆ. ಈ ತೀರ್ಪು ಟ್ರಸ್ಟ್‌ನ ಭವಿಷ್ಯದ ಆಡಳಿತ ಶೈಲಿಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಹವಾಮಾನ: 18ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನಾಳೆ ಮಳೆ ಸಾಧ್ಯತೆ; ಹೇಗಿರಲಿದೆ ಬೆಂಗಳೂರು ವೆದರ್​​? – Kannada News | Karnataka Weather Update: Light to Moderate Rain Likely in Over 18 Districts on May 8

ಬೆಂಗಳೂರು, ಮೇ 07: ಉತ್ತರ ಮತ್ತು ಕಲ್ಯಾಣ ಕರ್ನಾಟಕ ಭಾಗದ ಕೆಲವೆಡೆ ತೀವ್ರ ಬಿಸಿಯ ಹವಾಮಾನದ ನಡುವೆಯೂ ರಾಜ್ಯ ವಿವಿಧ ಜಿಲ್ಲೆಗಳಲ್ಲಿ ನಾಳೆ ಸಣ್ಣ ಅಥವಾ ಮಧ್ಯಮ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು ಭಾಗದ ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್​​, ವಿಜಯಪುರ ಮತ್ತು ಬಳ್ಳಾರಿಯಲ್ಲಿ ವಿಪರೀತ ಉಷ್ಣ ವಾತಾವರಣ ಇರಲಿದ್ದು, ಸುಮಾರು 42 ಡಿಗ್ರಿ ಸೆಲ್ಸಿಯಸ್​​ ವರೆಗೆ ತಾಪಮಾನ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಮಳೆ?

ಕರಾವಳಿ ಭಾಗದ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಹಾಗೆಯೇ ಉತ್ತರ ಒಳನಾಡು ಭಾಗದ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಮತ್ತು ರಾಯಚೂರಿನಲ್ಲಿ ಸಾಧಾರಣ ಮಳೆಯ ನಿರೀಕ್ಷೆ ಇದೆ. ದಕ್ಷಿಣ ಒಳನಾಡು ಭಾಗದ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗದಲ್ಲಿ ಭಾರಿ ಮಳೆಯ ಸಾಧ್ಯತೆ ಇದ್ದು, ಚಾಮರಾಜನರ, ದಾವಣಗೆರೆ, ಹಾಸನ, ಮಂಡ್ಯ ಮತ್ತು ಮೈಸೂರಿನಲ್ಲೂ ಸಣ್ಣ ಪ್ರಮಾಣದ ಮಳೆಯನ್ನು ಅಂದಾಜಿಸಲಾಗಿದೆ.

ಇದನ್ನೂ ಓದಿ: ಮೇ 9ರವರೆಗೆ ಬೆಂಗಳೂರು ಸೇರಿ ರಾಜ್ಯದಲ್ಲಿ ಮಳೆ

ಉಳಿದಂತೆ ಬೀದರ್​​, ಕಲಬುರಗಿ, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಳ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಹೇಗಿರಲಿದೆ ಬೆಂಗಳೂರು ವಾತಾವರಣ?

ಬೆಂಗಳೂರಿನಲ್ಲಿ ನಾಳೆ ಬಿಸಿಲಿನ ವಾತಾವರಣ ಇರಲಿದ್ದು ನಗರದ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್​ ಇರಲಿದ್ದರೆ, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್​ ತಲುಪಲಿದೆ. ಹಗಲಿನ ವೇಳೆ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಲಿದೆಯಾದರೂ ಮಳೆಯ ಸಾಧ್ಯತೆ ತೀರಾ ಕಡಿಮೆ ಎಂದು ಅಂದಾಜಿಸಲಾಗಿದೆ. ಗಾಳಿಯ ವೇಗ ಗಂಟೆಗೆ 6.4ರಿಂದ 16 ಕಿಲೋ ಮೀಟರ್​​ ವರೆಗೆ ಇರಲಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:04 pm, Thu, 7 May 26

Source link

LSG vs RCB IPL 2026 Live Score: ಟಾಸ್ ಗೆದ್ದ ಆರ್​ಸಿಬಿ ಬೌಲಿಂಗ್ ಆಯ್ಕೆ – Kannada News | Lucknow Super Giants vs Royal Challengers Bengaluru B IPL 2026 Live Cricket Score LSG vs RCB Match on 7th May latest news in Kannada

07 May 2026 07:05 PM (IST)

LSG vs RCB IPL 2026: ಆರ್​ಸಿಬಿ

ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಸುಯಾಶ್ ಶರ್ಮಾ, ರಸಿಖ್ ಸಲಾಂ.

ಇಂಪ್ಯಾಕ್ಟ್ ಪ್ಲೇಯರ್: ಜಾಕೋಬ್ ಬೆಥೆಲ್, ಜೋರ್ಡಾನ್ ಕಾಕ್ಸ್, ಮಂಗೇಶ್ ಯಾದವ್, ವಿಕಿ ಓಸ್ಟ್ವಾಲ್ ಮತ್ತು ವೆಂಕಟೇಶ್ ಅಯ್ಯರ್.

07 May 2026 07:02 PM (IST)

LSG vs RCB IPL 2026: ಟಾಸ್ ಗೆದ್ದ ಆರ್​ಸಿಬಿ

ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

Source link