ಹಾಸನ: ಅವೈಜ್ಞಾನಿಕ ಹಂಪ್ಗೆ ವಿದ್ಯಾರ್ಥಿನಿ ಬಲಿ, ಮತ್ತೋರ್ವಳ ಸ್ಥಿತಿ ಗಂಭೀರ – Kannada News | Hassan Road Safety Crisis: Unscientific Speed Hump Kills Student, Injures Another
ಹಾಸನ/ಚಾಮರಾಜನಗರ, ಫೆಬ್ರವರಿ 23: ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಹಂಪ್ಗಳಿಗೆ ಬಲಿ ಮುಂದುವರಿದಿದೆ. ಇತ್ತೀಚೆಗೆ ಶಿವಮೊಗ್ಗದಲ್ಲಿ ಅಪಘಾತ ನಡೆದು ಯುವಕ ಮೃತಪಟ್ಟಿದ್ದ ಘಟನೆ ಮಾಸುವ ಮುನ್ನವೇ ಹಾಸನದಲ್ಲಿಯೂ ಯುವತಿಯೋರ್ವಳು ಪ್ರಾಣ ಕಳೆದುಕೊಂಡಿದ್ದಾಳೆ. ದಾರಿಯಲ್ಲಿದ್ದ ಹಂಪ್ಸ್ ಕಾಣದ ಪರಿಣಾಮ ದ್ವಿಚಕ್ರ ವಾಹನ ರಸ್ತೆಗೆ ಉರುಳಿ ಪ್ರಿಯಾ (23) ಸ್ಥಳದಲ್ಲೇ ಮೃತಪಟ್ಟಿದ್ದರೆ, ಸ್ವಾತಿ(24) ಸ್ಥಿತಿ ಗಂಭೀರವಾಗಿದೆ. ಹಾಸನ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಘಟನೆ, ನಡೆದಿದ್ದು, ಗಾಯಾಳು ಸ್ವಾತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹಾಸನ ಮಹಾನಗರ ಪಾಲಿಕೆ…