All posts by nagaraj11081993

ಹಾಸನ: ಅವೈಜ್ಞಾನಿಕ ಹಂಪ್​​ಗೆ ವಿದ್ಯಾರ್ಥಿನಿ ಬಲಿ, ಮತ್ತೋರ್ವಳ ಸ್ಥಿತಿ ಗಂಭೀರ – Kannada News | Hassan Road Safety Crisis: Unscientific Speed Hump Kills Student, Injures Another

ಹಾಸನ/ಚಾಮರಾಜನಗರ, ಫೆಬ್ರವರಿ 23: ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಹಂಪ್​​ಗಳಿಗೆ ಬಲಿ ಮುಂದುವರಿದಿದೆ. ಇತ್ತೀಚೆಗೆ ಶಿವಮೊಗ್ಗದಲ್ಲಿ ಅಪಘಾತ ನಡೆದು ಯುವಕ ಮೃತಪಟ್ಟಿದ್ದ ಘಟನೆ ಮಾಸುವ ಮುನ್ನವೇ ಹಾಸನದಲ್ಲಿಯೂ ಯುವತಿಯೋರ್ವಳು ಪ್ರಾಣ ಕಳೆದುಕೊಂಡಿದ್ದಾಳೆ. ದಾರಿಯಲ್ಲಿದ್ದ ಹಂಪ್ಸ್ ಕಾಣದ ಪರಿಣಾಮ ದ್ವಿಚಕ್ರ ವಾಹನ ರಸ್ತೆಗೆ ಉರುಳಿ ಪ್ರಿಯಾ (23) ಸ್ಥಳದಲ್ಲೇ ಮೃತಪಟ್ಟಿದ್ದರೆ, ಸ್ವಾತಿ(24) ಸ್ಥಿತಿ ಗಂಭೀರವಾಗಿದೆ. ಹಾಸನ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಘಟನೆ, ನಡೆದಿದ್ದು, ಗಾಯಾಳು ಸ್ವಾತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಹಾಸನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅವೈಜ್ಞಾನಿಕ ಸ್ಪೀಡ್ ಬ್ರೇಕರ್​​ಗಳನ್ನು ಹಾಕಲಾಗಿದ್ದು, ಈ ಬಗ್ಗೆ ಕನಿಷ್ಠ ಸೂಚನಾ ಫಲಕಗಳನ್ನೂ ಹಾಕಿಲ್ಲ. ಈ ರೀತಿಯ ಅವೈಜ್ಞಾನಿಕ ಹಂಪ್​​ಗಳ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಮಾಯಕರು ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ಆರೋಪಿಸಿದ್ದಾರೆ. ಹಂಪ್​​ಗಳ ಮೇಲೆ ಬಿಳಿ ಬಣ್ಣದ ಪಟ್ಟಿ ಬಳಿಯಲಾಗಿತ್ತಾದರೂ ಅವು ಈಗ ಅಳಿಸಿಹೋಗಿವೆ. ಹೀಗಾಗಿ ಅವುಗಳಿಗೆ ಮತ್ತೆ ಬಣ್ಣ ಬಳಿಯುವ ಜೊತೆಗೆ ಸೂಚನಾ ಫಲಕಗಳನ್ನು ಅಳವಡಿಸಬೇಕೆಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಇದನ್ನೂ ಓದಿ: ಅಸಲಿ ಬದಲು ನಕಲಿ ಚಿನ್ನ ಇಟ್ಟು 3 ಲಕ್ಷ ರೂ. ಮೌಲ್ಯದ ಬಂಗಾರ ಕದ್ದ ಕದೀಮರು!

ಟ್ರ್ಯಾಕ್ಟರ್‌ ಪಲ್ಟಿಯಾಗಿ ಚಾಲಕ ಸಾವು

ಮಣ್ಣು ಸಾಗಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್‌ ಪಲ್ಟಿಯಾದ ಪರಿಣಾಮ ಚಾಲಕ ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಸರಗೂರು ಸಮೀಪ ನಡೆದಿದೆ. ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದ ರಾಜೇಶ್(25) ಮೃತ ದುರ್ದೈವಿಯಾಗಿದ್ದು, ಜಮೀನಿನ ಬಳಿಯ ಹಳ್ಳದಿಂದ ರಸ್ತೆಯತ್ತ ಬರುವಾಗ ಅಪಘಾತ ನಡೆದಿದೆ. ಚಾಲಕ ಟ್ರ್ಯಾಕ್ಟರ್‌ ಅಡಿ ಸಿಲುಕಿಕೊಂಡ ಹಿನ್ನೆಲೆ ಸ್ಥಳದಲ್ಲೇ ಕೊನೆಯುಸಿರು ಎಳೆದಿದ್ದಾರೆ. ಈ ಬಗ್ಗೆ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸ್ನೇಹಮಯಿ ಕೃಷ್ಣ ಆಡಿಯೋ ಬಾಂಬ್​ಗೆ ಸ್ಫೋಟಕ ತಿರುವು: ಮುಡಾ ಮಾಜಿ ಆಯುಕ್ತರಿಂದಲೇ ಮನಿ ಟ್ರ್ಯಾಪ್ ಶಂಕೆ! – Kannada News | Snehamayi Krishna Audio Bomb Takes Dramatic Turn: Money Trap Angle Emerges Involving Former MUDA Commissioner

ಸ್ನೇಹಮಯಿ ಕೃಷ್ಣ ಆಡಿಯೋ ಬಾಂಬ್​ಗೆ ಸ್ಫೋಟಕ ತಿರುವುImage Credit source: tv9

ಮೈಸೂರು, ಫೆಬ್ರವರಿ 23: ಸ್ನೇಹಮಯಿ ಕೃಷ್ಣ (Snehamayi Krishna) ಆಡಿಯೋ ಬಾಂಬ್ ಪ್ರಕರಣ ಇದೀಗ ನಾಟಕೀಯ ತಿರುವು ಪಡೆದಿದೆ. ಚಿನ್ನದ ಉದ್ಯಮಿ ವಿನೋದ್ ಮತ್ತು ಮುಡಾ ಮಾಜಿ ಆಯುಕ್ತ ನಟೇಶ್ ಸೇರಿ ಸ್ನೇಹಮಯಿ ಕೃಷ್ಣರನ್ನು ಸಿಲುಕಿಸಲು ಪಕ್ಕಾ ಪ್ಲಾನ್ ರೂಪಿಸಿದ್ದಾರಾ ಎಂಬ ಗಂಭೀರ ಅನುಮಾನಗಳು ಸಿಸಿಬಿ (CCB Police) ತನಿಖೆಯಲ್ಲಿ ಮೂಡಿವೆ. ಬೆಂಗಳೂರು ಸಿಸಿಬಿ ಅಧಿಕಾರಿಗಳು ವಿನೋದ್ ಮತ್ತು ನಟೇಶ್ ಜೊತೆಗಿರುವ ಹಲವು ಫೋಟೋಗಳನ್ನು ಪತ್ತೆ ಮಾಡಿದ್ದು, ಇದೀಗ ಸ್ನೇಹಮಯಿ ಕೃಷ್ಣರನ್ನು ಟ್ರ್ಯಾಪ್ ಮಾಡುವ ಯತ್ನ ನಡೆದಿತ್ತೇ ಎಂಬ ಸಂಶಯ ಬಲವಾಗಿದೆ.

ವಿನೋದ್ ಆರಂಭದಲ್ಲಿ ಸ್ನೇಹಮಯಿ ಕೃಷ್ಣರ ವಿಶ್ವಾಸ ಗಳಿಸಿದ್ದರು. ನಟೇಶ್ ಮಾತನಾಡಿದ್ದು ಎನ್ನಲಾದ ಆಡಿಯೋ ಒಂದನ್ನು ಸ್ನೇಹಮಯಿ ಕೃಷ್ಣರಿಗೆ ನೀಡಿದ್ದರು. ಈ ಆಡಿಯೋದಲ್ಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ನಟೇಶ್ ಲಂಚ ನೀಡಿದ ಬಗೆಗೆ ಮಾತನಾಡಲಾಗಿದೆ ಎಂದು ವಿನೋದ್ ತಿಳಿಸಿದ್ದರು. ಲಂಚವಾಗಿ ನೀಡಿದ ಕಾರು ಮತ್ತು ಹಣದ ಚೀಲದ ಬಗ್ಗೆ ಕಥೆ ಹೇಳಿ, ಕಾರಿನ ಫೋಟೋಗಳನ್ನೂ ಸ್ನೇಹಮಯಿ ಕೃಷ್ಣರಿಗೆ ವಿನೋದ್ ಕೊಟ್ಟಿದ್ದರು. ವಿನೋದ್ ಮಾತುಗಳನ್ನು ನಂಬಿದ ಸ್ನೇಹಮಯಿ ಕೃಷ್ಣ, ಸಿಎಸ್ ಶಾಲಿನಿ ರಜನೀಶ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಅಷ್ಟೇ ಅಲ್ಲದೆ, ಮಾಧ್ಯಮಗಳ ಎದುರು ಸಹ ಇದೇ ಆರೋಪಗಳನ್ನು ಪುನರುಚ್ಚರಿಸಿ, ದೂರು ಸಹ ದಾಖಲಿಸಿದ್ದರು.

ಆದರೆ, ಪ್ರಕರಣದ ತನಿಖೆ ಮುಂದುವರಿದಂತೆ, ಸ್ನೇಹಮಯಿ ಕೃಷ್ಣ ಅವರು ಸಿಎಸ್‌ಗೆ ಕ್ಷಮೆಯಾಚಿಸಿ ತಾವು ನೀಡಿದ ದೂರನ್ನು ವಾಪಸ್ ಪಡೆದರು. ಸಿಎಸ್ ಮೇಲಿನ ಆರೋಪಗಳು ಸುಳ್ಳು ಎಂದು ಹೇಳಿದ್ದರು. ಆದರೂ, ನಟೇಶ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ಲಂಚದ ವಿಚಾರ ಸತ್ಯ ಎಂದು ಸ್ನೇಹಮಯಿ ಕೃಷ್ಣ ಸಮರ್ಥಿಸಿಕೊಂಡಿದ್ದರು. ಇದೀಗ ಪ್ರಕರಣದಲ್ಲಿ ಹೊಸ ವಿಚಾರ ಬಯಲಾಗಿದ್ದು, ವಿನೋದ್ ಮತ್ತು ನಟೇಶ್ ಇಬ್ಬರು ಪರಸ್ಪರ ಸ್ನೇಹಿತರು ಎಂಬ ಅಂಶ ಬೆಳಕಿಗೆ ಬಂದಿದೆ.

ವಿನೋದ್, ನಟೇಶ್ ಸ್ನೇಹ ಬಯಲು: ಸಿಸಿಬಿ ತನಿಖೆಯ ದಿಕ್ಕೇ ಬದಲು

ವಿನೋದ್ ಮತ್ತು ನಟೇಶ್ ಸ್ನೇಹ ಬಯಲಾದ ನಂತರ, ಸಿಸಿಬಿ ತನಿಖೆಯ ದಿಕ್ಕು ಬದಲಾಗಿದೆ. ಸ್ನೇಹಮಯಿ ಕೃಷ್ಣರನ್ನು ಬಲೆಗೆ ಬೀಳಿಸಲು ಇವರಿಬ್ಬರು ಉದ್ದೇಶಪೂರ್ವಕವಾಗಿ ಪಿತೂರಿ ನಡೆಸಿದ್ದಾರಾ ಎಂಬ ಅನುಮಾನ ಬಲವಾಗಿದೆ. ವಿಶೇಷವಾಗಿ ವಿನೋದ್, ಈಗ ತಾನು ಸಿಎಸ್ ವಿಚಾರ ಹೇಳಿಯೇ ಇಲ್ಲ ಎಂದು ಉಲ್ಟಾ ಹೊಡೆಯುತ್ತಿದ್ದು, ಇವರ ಮಾತುಗಳಲ್ಲಿನ ವೈರುಧ್ಯಗಳು ಮತ್ತಷ್ಟು ಸಂಶಯಗಳಿಗೆ ಕಾರಣವಾಗಿವೆ.

ಇದನ್ನೂ ಓದಿ: ಸಿಸಿಬಿ ವಿಚಾರಣೆ ಬಳಿಕ ಉಲ್ಟಾ ಹೊಡೆದ ಸ್ನೇಹಮಯಿ ಕೃಷ್ಣ: ಶಾಲಿನಿ ರಜನೀಶ್​​ಗೆ ಕ್ಷಮೆ ಕೇಳಿದ ಸಾಮಾಜಿಕ ಕಾರ್ಯಕರ್ತ

ಸಿಸಿಬಿ ಅಧಿಕಾರಿಗಳು ವಿನೋದ್ ಮತ್ತು ನಟೇಶ್‌ರನ್ನು ಈಗಾಗಲೇ ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆಡಿಯೋ ಸತ್ಯವಾಗಿದ್ದರೂ, ಸಿಎಸ್ ಮೇಲಿನ ಆರೋಪಗಳು ಸುಳ್ಳು ಎಂದು ಸಾಬೀತುಪಡಿಸಲು ಹೊರಟಿರುವುದು ಈ ಪಿತೂರಿಯ ಭಾಗವಾಗಿರಬಹುದು ಎಂದು ಹೇಳಲಾಗುತ್ತಿದೆ. ಈ ಪ್ರಕರಣದ ಮೂಲವನ್ನು ಭೇದಿಸಲು ಸಿಸಿಬಿ ತೀವ್ರ ತನಿಖೆ ನಡೆಸುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಂತಿಲ್ಲ ರಾಜಾತಿಥ್ಯ: ಲಕ್ಷಾಂತರ ಮೌಲ್ಯದ ವಸ್ತುಗಳು ಜಪ್ತಿ – Kannada News | Parappana Agrahara Jail: Officers Seize Illicit Luxury Items in Major Raid

ಬೆಂಗಳೂರು, ಫೆಬ್ರವರಿ 23: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿರುವ ಬೃಹತ್ ಕಾರ್ಯಾಚರಣೆ ವೇಳೆ ಕೈದಿಗಳು ಐಷಾರಾಮಿ ವಸ್ತುಗಳನ್ನು ಬಳಸುತ್ತಿರುವ ಸಂಗತಿ ಮತ್ತೆ ಬಯಲಾಗಿದೆ. ಈ ಹಿಂದೆ ಫೈವ್ ಸ್ಟಾರ್ ಹೋಟೆಲ್ ಆಗಿ ಮಾರ್ಪಟ್ಟಿದೆ ಎಂಬ ಆರೋಪಗಳನ್ನು ಎದುರಿಸಿದ್ದ ಕಾರಾಗೃಹದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂಬುದನ್ನುಈ ಕಾರ್ಯಾಚರಣೆ ದೃಢಪಡಿಸಿದೆ. ಕೈದಿಗಳ ಬಳಿ ಇದ್ದ ಫೋನ್‌ಗಳು, ಸಿಮ್ ಕಾರ್ಡ್‌ಗಳು, ಚಾರ್ಜರ್‌ಗಳು, ಇಯರ್‌ಫೋನ್‌ಗಳು, ವಿವಿಧ ಬಗೆಯ ಶೂಗಳು, ದಿಂಬುಗಳು, ಪಾತ್ರೆಗಳು, ಅಡುಗೆ ಸಾಮಗ್ರಿಗಳು ಮತ್ತು ಚೇರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸುಮಾರು ಎರಡು ಟ್ರ್ಯಾಕ್ಟರ್ ಲೋಡ್‌ನಷ್ಟು ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ಇವುಗಳಲ್ಲಿ ಹಲವನ್ನು ನಾಶಪಡಿಸಲಾಗಿದೆ. ಜೈಲಿನಲ್ಲಿರುವ ಕೆಲವು ಅಧಿಕಾರಿಗಳ ಸಹಕಾರದಿಂದಲೇ ಕೈದಿಗಳಿಗೆ ಬೇಕಾದ ವಸ್ತುಗಳು ಪೂರೈಕೆಯಾಗುತ್ತಿವೆ ಎಂಬ ಆರೋಪಗಳು ಈ ಹಿಂದೆಯೂ ಕೇಳಿಬಂದಿದ್ದವು.  ದರ್ಶನ್ ಅವರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜೈಲು ಪರಿಸ್ಥಿತಿ ಕುರಿತು ತರಾಟೆಗೆ ತೆಗೆದುಕೊಂಡಿದ್ದರೂ, ವಾಸ್ತವದಲ್ಲಿ ಯಾವುದೇ ಸುಧಾರಣೆ ಆಗಿಲ್ಲ ಎಂಬುದು ಮತ್ತೊಮ್ಮೆ ಬಹಿರಂಗಗೊಂಡಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಎಐ ಸಮ್ಮಿಟ್​ನಲ್ಲಿ ಅರೆಬೆತ್ತಲೆ ಪ್ರತಿಭಟನೆ: ಯುವ ಕಾಂಗ್ರೆಸ್ ನಾಯಕರಿಗೆ ಮಾರ್ಗರೇಟ್ ಆಳ್ವಾ ಶಿಸ್ತಿನ ಪಾಠ – Kannada News | Margaret Alva Slams Youth Congress Over Shirtless Protest at India AI Summit in Delhi

ಎಐ ಸಮ್ಮಿಟ್​ನಲ್ಲಿ ಅರೆಬೆತ್ತಲೆ ಪ್ರತಿಭಟನೆ: ಯುವ ಕಾಂಗ್ರೆಸ್ ನಾಯಕರಿಗೆ ಮಾರ್ಗರೇಟ್ ಆಳ್ವಾ ಶಿಸ್ತಿನ ಪಾಠImage Credit source: TV9 Network and IANS

ಬೆಂಗಳೂರು, ಫೆಬ್ರವರಿ 23: ‘ಇಂಡಿಯಾ ಎಐ ಸಮ್ಮಿಟ್ (India AI Summit)’ ಸಂದರ್ಭ ಯುವ ಕಾಂಗ್ರೆಸ್ (Youth Congress) ನಾಯಕರು ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದ್ದಕ್ಕೆ ವಿಪಕ್ಷಗಳ ನಾಯಕರಿಂದಲೇ ವಿರೋಧ ವ್ಯಕ್ತವಾಗಿತ್ತು. ಇದೀಗ ಖುದ್ದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಹಾಗೂ ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್ ಆಳ್ವಾ (Margaret Alva) ಅವರೇ ಯುವ ಕಾಂಗ್ರೆಸ್ ನಾಯಕರ ನಡೆಯನ್ನು ಖಂಡಿಸಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ಶಿಸ್ತು ಮತ್ತು ಸಭ್ಯತೆ ಅತ್ಯಂತ ಮುಖ್ಯ ಎಂದು ಅವರು ಒತ್ತಿ ಹೇಳಿದ್ದಾರೆ. ‘ಇಂಡಿಯಾ ಎಐ ಸಮ್ಮಿಟ್’ ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಅರೆನಗ್ನ ಪ್ರತಿಭಟನೆ ಕುರಿತು ಉದ್ಭವಿಸಿರುವ ವಿವಾದ ಸಂಬಂಧ ಪ್ರತಿಕ್ರಿಯಿಸಿದ ಅವರು, ಅಂತರರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ಘನತೆ, ಶಿಸ್ತು ಮತ್ತು ಜವಾಬ್ದಾರಿ ಇರಬೇಕು ಎಂದು ಭಾವಿಸುತ್ತೇನೆ ಎಂದಿದ್ದಾರೆ.

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಎಐ ಶೃಂಗಸಭೆ ಸಂದರ್ಭ ಭಾರತ ಯುವ ಕಾಂಗ್ರೆಸ್ ಸದಸ್ಯರು ಶರ್ಟ್‌ಗಳನ್ನು ಬಿಚ್ಚಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದ್ದರು. ಈ ಘಟನೆ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.

ಮಾರ್ಗೆರೇಟ್ ಆಳ್ವಾ ಮಾತಿನ ವಿಡಿಯೋ

ದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಎಐ ಶೃಂಗಸಭೆ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಬಂಡವಾಳಗಾರರ ಗಮನಸೆಳೆದ ಕಾರ್ಯಕ್ರಮವಾಗಿತ್ತು. ಆ ಸಂದರ್ಭದಲ್ಲಿ ನಡೆದ ಯುವ ಕಾಂಗ್ರೆಸ್ ಪ್ರತಿಭಟನೆ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಪ್ರತಿಭಟನೆ ವೇಳೆ ಭಾರತ ಯುವ ಕಾಂಗ್ರೆಸ್ ರಾಷ್ಟ್ರೀಯ ಸಂಯೋಜಕ ನರಸಿಂಹ ಅವರನ್ನು ಪೊಲೀಸರು ಬಂಧಿಸಿದ್ದರು.

ಇನ್ನೊಂದೆಡೆ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಸಹ ಯುವ ಕಾಂಗ್ರೆಸ್ ನಾಯಕರ ಅರೆನಗ್ನ ಪ್ರತಿಭಟನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಇದೊಂದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದ್ದಾರೆ.

ಎಐ ಶೃಂಗಸಭೆ ವೇಳೆ ನಡೆದಿದ್ದೇನು?

ಭಾರತ್ ಮಂಟಪಂನಲ್ಲಿ ನಡೆದ ಎಐ ಶೃಂಗಸಭೆಯ ಸಂದರ್ಭದಲ್ಲಿ ಯುವ ಕಾಂಗ್ರೆಸ್ಸಿನ 10 ಮಂದಿ ನಾಯಕರು ಏಕಾಏಕಿ ತಾವು ತೊಟ್ಟಿದ್ದ ಶರ್ಟನ್ನು ಕಳಚಿ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಟ್ರಂಪ್ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.

ಇದನ್ನೂ ಓದಿ: ‘ನೀವೀಗಾಗಲೇ ಬೆತ್ತಲಾಗಿದ್ದೀರಿ, ಬಟ್ಟೆ ಬಿಚ್ಚಿದ್ಯಾಕೆ?’ – ಕಾಂಗ್ರೆಸ್​ಗೆ ಪ್ರಧಾನಿ ಮೋದಿ ತರಾಟೆ

ಈ ಬಗ್ಗೆ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದರು. ಕಾಂಗ್ರೆಸ್ ಪಕ್ಷದ ಕೊಳಕು ಮತ್ತು ಬೆತ್ತಲೆ ರಾಜಕಾರಣ ಹಾಗೂ ಆ ಪಕ್ಷ ತಾತ್ವಿಕವಾಗಿ ಅದೆಷ್ಟು ದಿವಾಳಿ ಎದ್ದಿದೆ ಎಂಬುದನ್ನು ಈ ಪ್ರತಿಭಟನೆ ತೋರಿಸಿಕೊಟ್ಟಿದೆ ಎಂದು ಮೋದಿ ಹೇಳಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:04 pm, Mon, 23 February 26

Source link

ಬ್ರೇಕ್ ಫೇಲ್ ಆಗಿ ಎಲೆಕ್ಟ್ರಿಕ್ ಪೋಲ್​ಗೆ ಡಿಕ್ಕಿ ಹೊಡೆದ ಸ್ಕೂಲ್ ಬಸ್! – Kannada News | Bengaluru School Bus Accident in Mahalakshmi Layout: Kids Safe After Brake Failure Incident

ಬೆಂಗಳೂರು, ಫೆಬ್ರವರಿ 23: ಮಹಾಲಕ್ಷ್ಮಿ ಲೇಔಟ್‌ನಲ್ಲಿ ಶಾಲಾ ಬಸ್ ಅಪಘಾತ ನಡೆದಿದೆ. ಇಳಿಜಾರಿನಲ್ಲಿ ಬ್ರೇಕ್ ಫೇಲ್ ಆಗಿದ್ದರಿಂದ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಬಸ್ ಎಲೆಕ್ಟ್ರಿಕ್ ಪೋಲ್‌ಗೆ ಡಿಕ್ಕಿ ಹೊಡೆದಿತ್ತು. ಅದೃಷ್ಟವಶಾತ್ ಎಲ್ಲಾ ಮಕ್ಕಳು ಸುರಕ್ಷಿತವಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮಲ್ಲೇಶ್ವರ ಸಂಚಾರ ವಿಭಾಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

ಕೇರಳದಲ್ಲಿ ಡಾಮಿನೇಷನ್ ಮಾಡಲು ರೆಡಿ ಆದ ‘ಟಾಕ್ಸಿಕ್’; ದೊಡ್ಡ ಸಂಸ್ಥೆ ಪಾಲಾಯ್ತು ಹಂಚಿಕೆ ಹಕ್ಕು – Kannada News | Yash’s Toxic Movie Kerala Release: A4 Entertainment Bags Distribution Rights

‘ಟಾಕ್ಸಿಕ್’ ಸಿನಿಮಾ (Toxic Movie) ಬಗ್ಗೆ ಭಾರೀ ಕ್ರೇಜ್ ಸೃಷ್ಟಿ ಆಗಿದೆ. ಈ ಚಿತ್ರದ ಹಕ್ಕುಗಳನ್ನು ಖರೀದಿ ಮಾಡಲು ವಿವಿಧ ಸಂಸ್ಥಗಳು ಕಣ್ಣಿಟ್ಟಿವೆ. ಈ ಚಿತ್ರವನ್ನು ವಿದೇಶದಲ್ಲಿ ಹಂಚಿಕೆ ಮಾಡಲು ‘ಫಾರ್​ಸ್​ ಫಿಲ್ಮ್ಸ್’ ಮುಂದೆ ಬಂದಿದೆ. ಈಗ ಸಿನಿಮಾನ ಕೇರಳದಲ್ಲಿ ಹಂಚಿಕೆ ಮಾಡಲು ‘ಎ4 ಎಂಟರ್​​ಟೇನ್​​ಮೆಂಟ್ಸ್ ಮುಂದೆ ಬಂದಿದೆ. ಈ ಸಂಸ್ಥೆಯನ್ನು ಸಿವಿ ಸಾರಥಿ ಹಾಗೂ ಮುಕೇಶ್ ಮೆಹ್ತಾ ಮುನ್ನಡೆಸುತ್ತಿದ್ದಾರೆ. ಕೇರಳಾದ್ಯಂತ ದೊಡ್ಡ ಮಟ್ಟದಲ್ಲಿ ಸಿನಿಮಾ ರಿಲೀಸ್ ಮಾಡಲು ಇವರು ಪ್ಲ್ಯಾನ್ ಮಾಡ್ತಿದ್ದಾರೆ.

‘ಎ4 ಎಂಟರ್​​ಟೇನ್​​ಮೆಂಟ್’ಗೆ ಕೇರಳದಲ್ಲಿ ‘ಪುಷ್ಪ 2’, ‘ಅನಿಮಲ್’, ‘ಲಿಯೋ’, ‘ಅವತಾರ್’ ರೀತಿಯ ದೊಡ್ಡ ಚಿತ್ರಗಳನ್ನು ಹಂಚಿಕೆ ಮಾಡಿದ ಅನುಭವ ಇದೆ. ಹೀಗಾಗಿ, ದೊಡ್ಡ ಮಟ್ಟದಲ್ಲಿ ‘ಟಾಕ್ಸಿಕ್’ ಚಿತ್ರವನ್ನು ಇವರು ರಿಲೀಸ್ ಮಾಡಲು ಪ್ಲ್ಯಾನ್ ನಡೆಸಿದ್ದಾರೆ. ಈ ಸಿನಿಮಾ ಹಕ್ಕನ್ನು ಇವರು ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದ್ದಾರೆ ಎಂದು ಹೇಳಲಾಗುತ್ತಾ ಇದೆ.

ಕೇರಳದಲ್ಲಿ ‘ಕೆಜಿಎಫ್ 2’ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಮಲಯಾಳಂ ಸಿನಿಮಾ ಅಲ್ಲದಿದ್ದರೂ, ‘ಕೆಜಿಎಫ್ 2’ ಕೇರಳದಲ್ಲಿ ಸಾಕಷ್ಟು ದಾಖಲೆಗಳನ್ನು ಬರೆದಿತ್ತು. ಈಗ ಯಶ್ ಅವರ ಸಿನಿಮಾ ‘ಟಾಕ್ಸಿಕ್’ ರಿಲೀಸ್ ಆಗುತ್ತಿರುವುದರಿಂದ ಸಾಕಷ್ಟು ನಿರೀಕ್ಷೆ ಇದೆ. ಕೇರಳದಲ್ಲಿ 350ಕ್ಕೂ ಅಧಿಕ ಪರದೆಗಳಲ್ಲಿ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್​​ದಾಸ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಕಾರಣದಿಂದ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ.

ಇದನ್ನೂ ಓದಿ: ಯಶ್ ‘ಟಿಕೆಟ್’ ಲುಕ್ ಎಐ ಎಂದವರಿಗೆ ಸಿಕ್ತು ಉತ್ತರ; ಯಶ್ ಮೇಕೋವರ್ ನೋಡಿ

ಹಿಂದಿಯಲ್ಲಿ ಅನಿಲ್ ತಡಾನಿ ಅವರ ‘ಎಎ ಫಿಲ್ಮ್ಸ್’ ಹಿಂದಿಯಲ್ಲಿ ಹಂಚಿಕೆ ಮಾಡುತ್ತಿದೆ. ತೆಲುಗಿನಲ್ಲಿ ದಿಲ್ ರಾಜು ಅವರ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಖರೀದಿ ಮಾಡಿದೆ. ಕನ್ನಡದಲ್ಲಿ ಕೆವಿಎನ್ ಹಂಚಿಕೆ ಮಾಡಲಿದೆ.
ಯಶ್ ಹಾಗೂ ಗೀತು ಒಟ್ಟಾಗಿ ‘ಟಾಕ್ಸಿಕ್’ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಕನ್ನಡ ಹಾಗೂ ಇಂಗ್ಲಿಷ್​​ನಲ್ಲಿ ಸಿನಿಮಾ ಶೂಟ್ ಮಾಡಿದ್ದಾರೆ. ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗೆ ಡಬ್ ಆಗಿ ಸಿನಿಮಾ ರಿಲೀಸ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಧ್ಯಂತರ ಟ್ರೇಡ್ ಡೀಲ್​ಗೆ ಮಾತುಕತೆ: ಭಾರತ ತಂಡದ ಅಮೆರಿಕ ಭೇಟಿ ಮುಂದೂಡಿಕೆ – Kannada News | India US interim trade deal talks, Indian delegation’s US visit postponed

ನವದೆಹಲಿ, ಫೆಬ್ರುವರಿ 23: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ಯಾರಿಫ್ ಕ್ರಮವನ್ನು ಅವರ ದೇಶದ ಸುಪ್ರೀಂಕೋರ್ಟ್ ಅಸಿಂಧುಗೊಳಿಸಿರುವ ಹಿನ್ನೆಲೆಯಲ್ಲಿ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ರೂಪುರೇಖೆಯಲ್ಲಿ (India US interim trade deal framework) ಬದಲಾವಣೆಗಳಾಗುವ ಸಾಧ್ಯತೆ ಇದೆ. ಮಧ್ಯಂತರ ಒಪ್ಪಂದಕ್ಕೆ ನಿಯಮಾವಳಿಗಳನ್ನು ಅಂತಿಮಗೊಳಿಸಲು ಎರಡೂ ದೇಶಗಳ ತಂಡಗಳ ಮಧ್ಯೆ ನಡೆಯಬೇಕಿದ್ದ ಮಾತುಕತೆ ಸದ್ಯಕ್ಕೆ ಸ್ಥಗಿತಗೊಂಡಿದೆ. ಭಾರತ ತಂಡದ ಅಮೆರಿಕ ಭೇಟಿಯು ಮುಂದೂಡಿಕೆ ಆಗಿದೆ.

ಮಾತುಕತೆ ಮುಂದೂಡಿಕೆ ಮಾಡಬೇಕೆನ್ನುವ ನಿರ್ಧಾರ ಭಾರತದ ವತಿಯಿಂದ ಮಾತ್ರವೇ ಅಲ್ಲ, ಅಮೆರಿಕನ್ ನಿಯೋಗದ್ದೂ ಆಗಿದೆ. ಸುಪ್ರೀಂಕೋರ್ಟ್ ತೀರ್ಪಿನ ಪರಿಣಾಮಗಳು ಹಾಗೂ ಸರ್ಕಾರದ ಹೊಸ ಕ್ರಮಗಳು ಇವೆಲ್ಲವೂ ಸ್ಪಷ್ಟಗೊಂಡ ಬಳಿಕ ಮಾತುಕತೆ ಪುನಾರಂಭಿಸುವುದು ಉತ್ತಮ ಎನ್ನುವ ಅಭಿಪ್ರಾಯಕ್ಕೆ ಎರಡೂ ಕಡೆಯವರು ಬಂದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸುಪ್ರೀಂ ಕೋರ್ಟ್ ಆದೇಶಕ್ಕೆ ಸೆಡ್ಡು ಹೊಡೆದ ಟ್ರಂಪ್; ಅಮೆರಿಕದ ಸುಂಕ ಮತ್ತೆ ಶೇ. 15ಕ್ಕೆ ಹೆಚ್ಚಳ

ಕೇಂದ್ರ ವಾಣಿಜ್ಯ ಸಚಿವಾಲಯದ ಅಧಿಕಾರಿಯಾಗಿರುವ ದರ್ಪಣ್ ಜೈನ್ ಅವರು ಅಮೆರಿಕದೊಂದಿಗೆ ಟ್ರೇಡ್ ಡೀಲ್ ಕುದುರಿಸಲು ಸಂಧಾನ ನಡೆಸುತ್ತಿರುವ ಭಾರತೀಯ ನಿಯೋಗದ ಮುಖ್ಯಸ್ಥರಾಗಿದ್ದಾರೆ. ಅವರ ತಂಡವು ಇಂದಿನಿಂದ (ಫೆ. 23) ಮೂರು ದಿನಗಳ ಕಾಲ ಅಮೆರಿಕದಲ್ಲಿ ಸಂಧಾನ ಮತ್ತು ಮಾತುಕತೆ ನಡೆಸುವುದಿತ್ತು. ಈಗ ಈ ಭೇಟಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ಮಾರ್ಚ್ ತಿಂಗಳಲ್ಲಿ ಮಧ್ಯಂತರ ಒಪ್ಪಂದ ಏರ್ಪಟ್ಟು, ಏಪ್ರಿಲ್ ತಿಂಗಳಿಂದ ಹೊಸ ಟ್ಯಾರಿಫ್ ಕ್ರಮಗಳು ಜಾರಿಗೆ ಬರುವ ನಿರೀಕ್ಷೆ ಇತ್ತು. ಆದರೆ, ಈಗ ಮಾತುಕತೆ ಮುಂದೂಡಿಕೆ ಆಗಿರುವುದರಿಂದ ಮಾರ್ಚ್ ಟೈಮ್​ಲೈನ್ ಕೂಡ ಮುಂದೂಡಿಕೆ ಆಗಬಹುದು. ಏಪ್ರಿಲ್ ನಂತರ ಒಪ್ಪಂದ ಏರ್ಪಟ್ಟರೆ ಅಚ್ಚರಿ ಇಲ್ಲ.

ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪೇನು?

ಡೊನಾಲ್ಡ್ ಟ್ರಂಪ್ ಅವರು ಹೆಚ್ಚಿನ ದೇಶಗಳ ಸರಕುಗಳ ಮೇಲೆ ಶೇ. 10ರಿಂದ ಶೇ. 50ರವರೆಗೆ ಟ್ಯಾರಿಫ್​ಗಳನ್ನು ಘೋಷಿಸಿದ್ದರು. ಭಾರತದ ಮೇಲೆ ಶೇ. 25 ಪ್ರತಿಸುಂಕ ಹಾಗೂ ಶೇ. 25 ದಂಡಸುಂಕವನ್ನು ಅಮೆರಿಕ ಹಾಕಿತ್ತು. ಆದರೆ, ರಷ್ಯನ್ ತೈಲ ಖರೀದಿಗೆ ಪ್ರತಿಯಾಗಿ ವಿಧಿಸುತ್ತಿದ್ದ ಶೇ. 25 ದಂಡಸುಂಕವನ್ನು ಅಮೆರಿಕ ಹಿಂಪಡೆದಿದೆ. ಪ್ರತಿಸುಂಕವನ್ನು ಶೇ. 25ರಿಂದ ಶೇ. 18ಕ್ಕೆ ಇಳಿಸಲು ನಿರ್ಧರಿಸಿದೆ. ಮಧ್ಯಂತರ ಡೀಲ್ ಏರ್ಪಟ್ಟ ನಂತರ ಈ ಶೇ. 18 ಪ್ರತಿಸುಂಕ ಜಾರಿಗೆ ಬರುವುದಿತ್ತು.

ಇದನ್ನೂ ಓದಿ: ಟ್ರಂಪ್ ಸೊಕ್ಕು ಮುರಿದ ಅಮೆರಿಕ ಸುಪ್ರೀಂ ಕೋರ್ಟ್: ಭಾರತದ ಉತ್ಪನ್ನಗಳ ಮೇಲಿನ ತೆರಿಗೆಯೂ ಶೇ 10ಕ್ಕೆ ಇಳಿಕೆ!

ಆದರೆ, ಅಮೆರಿಕದ ಸುಪ್ರೀಂಕೋರ್ಟ್ ಒಟ್ಟಾರೆಯಾಗಿ ಅಲ್ಲಿಯ ಸರ್ಕಾರದ ಟ್ಯಾರಿಫ್ ನೀತಿಯನ್ನೇ ಅಲ್ಲಗಳೆದಿದೆ. ಕಾನೂನು ಪ್ರಕಾರ ಟ್ಯಾರಿಫ್ ಹಾಕುವಂತಿಲ್ಲ ಎಂದು ಹೇಳಿದೆ. ಇದೇ ವೇಳೆ ಡೊನಾಲ್ಡ್ ಟ್ರಂಪ್ ಅವರು ಲಭ್ಯ ಇರುವ ಕೆಲ ಕಾನೂನು ಮಾರ್ಗ ಬಳಸಿ ಟ್ಯಾರಿಫ್ ಅನ್ನು ಶೇ. 10ರಿಂದ ಶೇ. 15ಕ್ಕೆ ಏರಿಸಿದ್ದಾರೆ. ಸುಪ್ರೀಂಕೋರ್ಟ್ ಇದನ್ನೂ ಅಸಿಂಧುಗೊಳಿಸುತ್ತಾ ಕಾದುನೋಡಬೇಕು. ಈ ಕಾರಣಕ್ಕೆ ಭಾರತವು ಮಧ್ಯಂತರ ವ್ಯಾಪಾರ ಒಪ್ಪಂದದ ಮಾತುಕತೆಗಳನ್ನು ಮುಂದಕ್ಕೆ ಹಾಕಿರುವುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪೊಲೀಸರ ಲಾಠಿಚಾರ್ಚ್​​ ಖಂಡಿಸಿ ಕಾಫಿನಾಡು ಕೊತ ಕೊತ: ಹಲವೆಡೆ ಬಂದ್​, ಪ್ರತಿಭಟನೆ – Kannada News | Chikkamagaluru Erupts in Protest Over Police Lathi Charge; Bandh in Several Areas

ಚಿಕ್ಕಮಗಳೂರು ಜಿಲ್ಲೆ ಬಹುತೇಕ ಬಂದ್​Image Credit source: Tv9 Kannada

ಚಿಕ್ಕಮಗಳೂರು, ಫೆಬ್ರವರಿ 23: ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆ ಸಾವು ಮತ್ತು ನಂತರದ ಲಾಠಿಚಾರ್ಜ್ ವಿಚಾರವಾಗಿ ಕಾಫಿನಾಡು ಚಿಕ್ಕಮಗಳೂರಿನ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪ, ಎನ್.ಆರ್.ಪುರ, ಮತ್ತು ಶೃಂಗೇರಿ ತಾಲೂಕುಗಳಲ್ಲಿ ಬಂದ್‌ಗೆ ಕರೆ ನೀಡಲಾಗಿದ್ದು, ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕಡಬಗೆರೆ ಸಂಪೂರ್ಣ ಸ್ತಬ್ಧವಾಗಿದ್ದು, ಅಂಗಡಿ ಮುಂಗಟ್ಟು ಮುಚ್ಚಿ ವರ್ತಕರು ಬಂದ್​​ ಬೆಮಬಲಿಸಿದ್ದಾರೆ. ನಿನ್ನೆ ಇಡೀ ದಿನ ಕಡಬಗೆರೆ ಪಟ್ಟಣದಲ್ಲಿ ಪ್ರತಿಭಟನೆ ನಡೆದಿದ್ದು, ಸಂಜೆ ಲಾಠಿಚಾರ್ಜ್​​ ಕೂಡ ನಡೆದಿತ್ತು.

ಚಿಕ್ಕಮಗಳೂರು ಜಿಲ್ಲೆ ಭಾಗಶಃ ಬಂದ್​​

ಜನರ ಆಕ್ರೋಶದ ಕಟ್ಟೆ ಒಡೆದ ಪರಿಣಾಮ ಚಿಕ್ಕಮಗಳೂರು ಜಿಲ್ಲೆ ಭಾಗಶಃ ಬಂದ್​​ ಆಗಿದೆ. ನಿನ್ನೆ ನಡೆದ ಘಟನೆ ಖಂಡಿಸಿ ಬಾಳೆಹೊನ್ನೂರಿನ JCI ಸರ್ಕಲ್ ನಲ್ಲಿ ಪ್ರತಿಭಟನೆ ನಡೆದಿದ್ದು, ನೂರಾರು ಜನರು ಭಾಗಿಯಾಗಿದ್ದಾರೆ. ರಾಜ್ಯದಕಾಂಗ್ರೆಸ್ ಸರ್ಕಾರ ಮತ್ತು ಶೃಂಗೇರಿ ಕ್ಷೇತ್ರದ ಶಾಸಕ ರಾಜೇಗೌಡ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಪಡಿಸಿದ್ದಾರೆ. ಪ್ರತಿಭಟನೆಯಲ್ಲಿ ಬಿಜೆಪಿ, ಜೆಡಿಎಸ್ ಮತ್ತು ರೈತ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿದ್ದು, ರೈತ ವಿರೋಧಿ ರಾಜ್ಯ ಸರ್ಕಾರ ಎಂಬ ಘೋಷಣೆಗಳು ಈ ವೇಳೆ ಮೊಳಗಿವೆ.

ಇದನ್ನೂ ಓದಿ:  ಕಾಡಾನೆಗೆ ಮತ್ತೊಂದು ಬಲಿ ಬೆನ್ನಲ್ಲೇ ರಣರಂಗವಾದ ಚಿಕ್ಕಮಗಳೂರು; ಕಲ್ಲು ತೂರಾಟ-ಲಾಠಿ ಚಾರ್ಜ್‌, ಶೃಂಗೇರಿ ಬಂದ್​​ಗೆ ಕರೆ

ಇನ್ನು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಿಕ್ಕಮಗಳೂರು ಎಸ್ಪಿ ಜಿತೇಂದ್ರ ಕುಮಾರ್ ದಯಾಮ್, ಮೃತ ದೇಹ ರವಾನೆ ವೇಳೆ ಜನರನ್ನು ಚದುರಿಸುವ ಕೆಲಸ ಮಾಡಿದ್ದೇವೆಯೇ ಹೊರತು ಲಾಠಿಚಾರ್ಜ್​​ ಮಾಡಿಲ್ಲ. 29 ಜನರ ಮೇಲೆ FIR ದಾಖಲು ‌ಮಾಡಲಾಗಿದ್ದು, ತನಿಖೆ ನಡೆಯುತ್ತಿದೆ. ಘಟನೆ ವೇಳೆ ನಮ್ಮ‌ ಸಿಬ್ಬಂದಿಗೆ ಗಾಯವಾಗಿದ್ದು, ತನಿಖೆ ನಡೆಸಿ ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಜಿಲ್ಲಾಧಿಕಾರಿ ಮತ್ತು ನಾನು ಹೋರಾಟಗಾರರಿಗೆ ಮನವಿ ಕೂಡ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಪೊಲೀಸ್ ಬಿಗಿ ಭದ್ರತೆ

ಪ್ರತಿಭಟನೆಗೆ ಕರೆ ಹಿನ್ನೆಲೆ ಬಾಳೆಹೊನ್ನೂರಿನ ಅರಣ್ಯ ಇಲಾಖೆ ಕಚೇರಿಗೆ ಪೊಲೀಸ್​​ ಬಿಗಿ ಭದ್ರತೆ ಒದಗಿಸಲಾಗಿದೆ. ಸ್ಥಳದಲ್ಲಿ KSRP ತುಕಡಿ ಸೇರಿದಂತೆ ಹೆಚ್ಚಿನ ಪೊಲೀಸರ ನಿಯೋಜನೆ ಮಾಡುವ ಮೂಲಕ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಒಂದು ಸಲ ಕಪಾಳಕ್ಕೆ ಹೊಡೆದಿದ್ದಕ್ಕೆ 30 ಸೆಕೆಂಡಲ್ಲಿ 27 ಸಲ ಚೂರಿಯಿಂದ ಬಾಲಕನಿಗೆ ಚುಚ್ಚಿದ ಅಪ್ರಾಪ್ತರು – Kannada News | Bhopal Minor Stabs Boy 27 Times in 30 Seconds Over Slap: Juvenile Crime Shocks Nation

ಭೋಪಾಲ್, ಫೆಬ್ರವರಿ 23: ಒಂದು ಸಲ ಕಪಾಳಕ್ಕೆ ಹೊಡೆದಿದ್ದಕ್ಕೆ ಅಪ್ರಾಪ್ತರಿಬ್ಬರು 30 ಸೆಕೆಂಡಲ್ಲಿ 27 ಬಾರಿ ಬಾಲಕನಿಗೆ ಚೂರಿಯಿಂದ ಚುಚ್ಚಿರುವ ಘಟನೆ ಮಧ್ಯಪ್ರದೇಶದ ಭೋಪಾಲ್​​ನಲ್ಲಿ ನಡೆದಿದೆ. ಸ್ನೂಕರ್ ಕ್ಲಬ್‌ನಲ್ಲಿ 10 ನೇ ತರಗತಿಯ ವಿದ್ಯಾರ್ಥಿ(Student)ಯೊಬ್ಬನಿಗೆ ವ್ಯಕ್ತಿಯೊಬ್ಬ ಮನ ಬಂದಂತೆ ಇರಿದಿದ್ದಾನೆ. ಘಟನೆ ನಡೆಯುವಾಗ ಮೂವರಿದ್ದರು. ಆರೋಪಿಗಳೇ ಸಿಸಿಟಿವಿ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದಾರೆ.

ಸಿಸಿಟಿವಿ ದೃಶ್ಯಾವಳಿಯಲ್ಲಿ ಇಬ್ಬರು ಅಪ್ರಾಪ್ತ ವಯಸ್ಕರು ಕ್ಲಬ್‌ಗೆ ಪ್ರವೇಶಿಸುವುದನ್ನು ಕಾಣಬಹುದು. ಅರ್ಧ ನಿಮಿಷದಲ್ಲಿ, 16 ವರ್ಷದ ಬಾಲಕನಿಗೆ 27 ಬಾರಿ ಇರಿದಿದ್ದರು. ನಂತರ ದಾಳಿಕೋರರು ಬಂದಷ್ಟೇ ವೇಗವಾಗಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಬಾಲಕನ ಒಂದು ಮಣಿಕಟ್ಟಿನ ಮೇಲೆ 10 ಕ್ಕೂ ಹೆಚ್ಚು ಆಳವಾದ ಗಾಯಗಳಾಗಿದ್ದರೆ, ಇನ್ನೊಂದು ಕೈಯಲ್ಲಿ ಎರಡು ಬೆರಳುಗಳು ತುಂಡಾಗಿದ್ದವು.ಅವನ ಭುಜ ಮತ್ತು ಬೆನ್ನಿಗೂ ಗಂಭೀರ ಗಾಯಗಳಾಗಿವೆ.

ಕ್ರೂರ ಹಲ್ಲೆಯ ಹೊರತಾಗಿಯೂ ಹೇಗೋ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.ಅವನನ್ನು ಆಸ್ಪತ್ರೆಗೆ ಸಾಗಿಸಲಾಯಿತು ಮತ್ತು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾನೆ. ಗೌತಮ್ ನಗರ ಪೊಲೀಸ್ ಠಾಣೆ ಪ್ರದೇಶದ ನಿವಾಸಿಯಾಗಿರುವ ವಿದ್ಯಾರ್ಥಿ ಸ್ನೂಕರ್ ಕ್ಲಬ್​​ಗೆ ಪದೇ ಪದೇ ಹೋಗುತ್ತಿದ್ದ. ಆರೋಪಿ 16 ವರ್ಷದ 10 ನೇ ತರಗತಿ ವಿದ್ಯಾರ್ಥಿಯಾಗಿದ್ದು, ಬಲಿಪಶುವಿನಂತೆಯೇ ಅದೇ ತರಬೇತಿ ಕೇಂದ್ರದಲ್ಲಿ ಕಲಿಯುತ್ತಿದ್ದಾನೆ.

ಮತ್ತಷ್ಟು ಓದಿ: ಪರೀಕ್ಷೆಯಲ್ಲಿ ಕಾಪಿ ಮಾಡುವ ವೇಳೆ ಸಿಕ್ಕಿಬಿದ್ದ ವಿದ್ಯಾರ್ಥಿ: ಪ್ರಶ್ನಿಸಿದ್ದಕ್ಕೆ ಮೇಲ್ವಿಚಾರಕರ ಮೇಲೆ ಹಲ್ಲೆ

ಸೇಡು ತೀರಿಸಿಕೊಳ್ಳುವ ಉದ್ದೇಶವಿತ್ತು. ಘಟನೆಗೆ ಕೆಲವು ದಿನಗಳ ಮೊದಲು, ಪೂಲ್ ಆಟದ ಸಮಯದಲ್ಲಿ ಪ್ರಾಬಲ್ಯಕ್ಕಾಗಿ ವಾಗ್ವಾದ ನಡೆದಿತ್ತು ಎಂದು ವರದಿಯಾಗಿದೆ. ಬಾಲಕ ಇಬ್ಬರೂ ಆರೋಪಿಗಳಿಗೆ ಕಪಾಳಮೋಕ್ಷ ಮಾಡಿದ್ದ ಎಂದು ಆರೋಪಿಸಲಾಗಿದೆ.ಅದೇ ಸೇಡು ತೀರಿಸಿಕೊಳ್ಳಲು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಫೆಬ್ರವರಿ 15 ರ ರಾತ್ರಿ ಗಣೇಶ್ ಚೌಕ್‌ನಲ್ಲಿರುವ ಕ್ಲಬ್‌ನಲ್ಲಿ ಈ ದಾಳಿ ನಡೆದಿತ್ತು. ಈ ವಿಡಿಯೋ ಭಾನುವಾರ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ನಗರದಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

ಈ ಪ್ರಕರಣವು ಕಾನೂನು ಜಾರಿ ಅಧಿಕಾರಿಗಳ ಪ್ರತಿಕ್ರಿಯೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹಲ್ಲೆಗೆ ಸಂಬಂಧಿಸಿದ ವಿಭಾಗಗಳ ಅಡಿಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ. ಬಂಧನದ ನಂತರ, ಇಬ್ಬರು ಅಪ್ರಾಪ್ತ ವಯಸ್ಕರಿಗೆ ನೋಟಿಸ್ ನೀಡಿ ಬಿಡುಗಡೆ ಮಾಡಲಾಗಿದೆ. ಆರಂಭದಲ್ಲಿ ಹಲ್ಲೆಗೆ ಸಂಬಂಧಿಸಿದ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳೇ ಈ ದೃಶ್ಯಗಳನ್ನು ಪೋಸ್ಟ್ ಮಾಡಿದ್ದಾರೆ ಎಂಬ ಅಂಶವು ಸಾರ್ವಜನಿಕರ ಕೋಪವನ್ನು ಹೆಚ್ಚಿಸಿದೆ. ಶಾಲೆಗೆ ಹೋಗುವ ವಿದ್ಯಾರ್ಥಿಗಳಲ್ಲಿ ಕೊಲ್ಲುವ ಮನಸ್ಥಿತಿ ಹೇಗೆ ಬಂತು ಎಂಬುದು ಎಲ್ಲರ ಪ್ರಶ್ನೆಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಇಬ್ಬರಲ್ಲಿ ಒಬ್ಬರು… ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆ – Kannada News | India coach hints at Sanju Samson’s inclusion in Playing XI

T20 World Cup 2026: ಟಿ20 ವಿಶ್ವಕಪ್​ನ ಲೀಗ್ ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಭಾರತ ತಂಡವು ಸೂಪರ್-8 ಸುತ್ತಿನ ಮೊದಲ ಪಂದ್ಯದಲ್ಲೇ ಮುಗ್ಗರಿಸಿದೆ. ಅದು ಸಹ ಸೌತ್ ಆಫ್ರಿಕಾ ವಿರುದ್ಧ. ಈ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆಯಾಗುವ ಸೂಚನೆ ನೀಡಿದ್ದ ಭಾರತ ತಂಡದ ಸಹಾಯಕ ಕೋಚ್ ರಯಾನ್ ಟೆನ್ ಡುಸ್ಕಾಟ.

ಸೌತ್ ಆಫ್ರಿಕಾ ವಿರುದ್ಧದ ಹೀನಾಯ ಸೋಲಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದ ರಯಾನ್ ಟೆನ್ ಡುಸ್ಕಾಟಗೆ ತಂಡದ ಪ್ಲೇಯಿಂಗ್ ಇಲೆವೆನ್​ ಬಗ್ಗೆ ಪ್ರಶ್ನೆಗಳು ಎದುರಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ರಯಾನ್, ಮುಂದಿನ ಪಂದ್ಯದಲ್ಲಿ  ಸಂಜು ಸ್ಯಾಮ್ಸನ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಮಹತ್ವದ ಸುಳಿವು ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ರಯಾನ್ ಟೆನ್ ಡುಸ್ಕಾಟ, ಭಾರತದ ಅಗ್ರ ಕ್ರಮಾಂಕವು ಹೆಚ್ಚಾಗಿ ಎಡಗೈ ಬ್ಯಾಟರ್‌ಗಳಿಂದ ಕೂಡಿದೆ. ಇದು ಎದುರಾಳಿ ತಂಡದ ಆಫ್-ಸ್ಪಿನ್ನರ್‌ಗಳಿಗೆ ಅನುಕೂಲವಾಗುತ್ತಿದೆ. ಈ ಸಮತೋಲನವನ್ನು ಸರಿಪಡಿಸಲು ಬಲಗೈ ಬ್ಯಾಟರ್ ಆಗಿರುವ ಸಂಜು ಸ್ಯಾಮ್ಸನ್ ಅವರನ್ನು ಪ್ಲೇಯಿಂಗ್ ಇಲೆವೆನ್​ಗೆ ಸೇರಿಸಿಕೊಳ್ಳುವ ಯೋಚನೆ ಇದೆ ಎಂದು ತಿಳಿಸಿದ್ದಾರೆ.

ಆರಂಭಿಕ ಆಟಗಾರರಾದ ಅಭಿಷೇಕ್ ಶರ್ಮಾ ಮತ್ತು ತಿಲಕ್ ವರ್ಮಾ ಸತತವಾಗಿ ರನ್ ಗಳಿಸಲು ಪರದಾಡುತ್ತಿದ್ದಾರೆ. ಅದರಲ್ಲೂ ಅಭಿಷೇಕ್ ಶರ್ಮಾ ಈ ಟೂರ್ನಿಯಲ್ಲಿ ಈಗಾಗಲೇ ಮೂರು ಬಾರಿ ‘ಡಕ್’ ಔಟ್ ಆಗಿರುವುದು ತಂಡಕ್ಕೆ ಚಿಂತೆಯಾಗಿದೆ. ಇದಾದ ಬಳಿಕ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ತಿಲಕ್ ವರ್ಮಾ ಕಡೆಯಿಂದಲೂ ನಿರೀಕ್ಷಿತ ಪ್ರದರ್ಶನ ಮೂಡಿ ಬರುತ್ತಿಲ್ಲ.

ಅದರಲ್ಲೂ ಆಫ್ ಸ್ಪಿನ್ ಎಸೆತಗಳಿಗೆ ಟೀಮ್ ಇಂಡಿಯಾದ ಎಡಗೈ ದಾಂಡಿಗರು ವಿಕೆಟ್ ಒಪ್ಪಿಸುತ್ತಿದ್ದಾರೆ. ಪಾಕಿಸ್ತಾನ್ ಮತ್ತು ನೆದರ್​ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಆಫ್ ಸ್ಪಿನ್​ಗೆ ಔಟಾಗಿದ್ದರು. ಇನ್ನು ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಇಶಾನ್ ಕಿಶನ್ ಕೂಡ ಆಫ್ ಸ್ಪಿನ್ ಎಸೆತದಲ್ಲಿ ಕ್ಯಾಚ್ ನೀಡಿದ್ದರು.

ಹೀಗಾಗಿ ಆಫ್ ಸ್ಪಿನ್ ಸಮಸ್ಯೆಯನ್ನು ಸರಿಪಡಿಸಲು ಟೀಮ್ ಇಂಡಿಯಾ ಸಂಜು ಸ್ಯಾಮ್ಸನ್ ಅವರನ್ನು ಕಣಕ್ಕಿಳಿಸಲು ಪ್ಲ್ಯಾನ್ ರೂಪಿಸುತ್ತಿದೆ. ಅದರಂತೆ ಝಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಸ್ಯಾಮ್ಸನ್ ಕಣಕ್ಕಿಳಿಯುವ ಸಾಧ್ಯತೆಯಿದೆ.

ಇದಾಗ್ಯೂ ಅವರು ಆರಂಭಿಕರಾಗಿ ಆಡಲಿದ್ದಾರಾ ಅಥವಾ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರಾ ಎಂಬುದನ್ನು ಖಚಿತಪಡಿಸಿಲ್ಲ. ಅಂದರೆ ಇಲ್ಲಿ ಅಭಿಷೇಕ್ ಶರ್ಮಾ ಹಾಗೂ ತಿಲಕ್ ವರ್ಮಾ ಕಳಪೆ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ.

ಹೀಗಾಗಿ ಇವರಿಬ್ಬರಲ್ಲಿ ಒಬ್ಬರನ್ನು ಮುಂದಿನ ಪಂದ್ಯದಿಂದ ಕೈ ಬಿಡುವುದು ಖಚಿತ. ಅವರ ಸ್ಥಾನದಲ್ಲಿ ಸಂಜು ಸ್ಯಾಮ್ಸನ್ ಕಣಕ್ಕಿಳಿಯಲಿದ್ದಾರೆ. ಇಲ್ಲಿ ಅಭಿಷೇಕ್ ಶರ್ಮಾ ಹೊರಗುಳಿದರೆ ಸ್ಯಾಮ್ಸನ್ ಆರಂಭಿಕನಾಗಿ ಬ್ಯಾಟ್ ಬೀಸಲಿದ್ದಾರೆ.

ಇನ್ನು ತಿಲಕ್ ವರ್ಮಾ ಅವರನ್ನು ಪ್ಲೇಯಿಂಗ್ ಇಲೆವೆನ್​ನಿಂದ ಕೈ ಬಿಟ್ಟರೆ ಸಂಜು ಸ್ಯಾಮ್ಸನ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಬಹುದು.

ಇದನ್ನೂ ಓದಿ: T20 World Cup 2028: ಮುಂದಿನ ಟಿ20 ವಿಶ್ವಕಪ್​ಗೆ 12 ತಂಡಗಳು ಆಯ್ಕೆ

ಒಟ್ಟಿನಲ್ಲಿ ಝಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್​ನಲ್ಲಿ ಮಹತ್ವದ ಬದಲಾವಣೆ ಕಂಡು ಬರಲಿದೆ ಎಂಬುದನ್ನು ಭಾರತ ತಂಡದ ಸಹಾಯಕ ಕೋಚ್ ರಯಾನ್ ಟೆನ್ ಡುಸ್ಕಾಟ ಖಚಿತಪಡಿಸಿದ್ದಾರೆ.

Source link