IPL ಫೈನಲ್ ಪಂದ್ಯ ಬೆಂಗಳೂರಿನಿಂದ ಅಹಮದಾಬಾದ್ಗೆ ಸ್ಥಳಾಂತರಗೊಂಡಿದ್ದೇಕೆ? ಅಸಲಿ ಕಾರಣ ಬಿಚ್ಚಿಟ್ಟ ಪರಮೇಶ್ವರ್ – Kannada News | Why IPL Final Shifted from Bengaluru to Ahmedabad? G. Parameshwar Reveals Real Commercial Reasons
ಬೆಂಗಳೂರು, ಮೇ 7: ಐಪಿಎಲ್ ಕ್ವಾಲಿಫೈಯರ್ ಹಾಗೂ ಫೈನಲ್ ಪಂದ್ಯಗಳು ಬೆಂಗಳೂರಿನಿಂಂದ ಸ್ಥಳಾಂತರಗೊಂಡಿದ್ದರ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸಂಬಂಧಿಸಿದಂತೆ ಭದ್ರತೆ ಅಥವಾ ಆಡಳಿತಾತ್ಮಕವಾಗಿ ಯಾವುದೇ ಲೋಪದೋಷಗಳಿಲ್ಲ. ಪಂದ್ಯಗಳು ಸ್ಥಳಾಂತರಗೊಳ್ಳಲು ಮುಖ್ಯವಾಗಿ ‘ವಾಣಿಜ್ಯ ಉದ್ದೇಶ’ ಕಾರಣ ಎಂದು ಅವರು ವಿವರಿಸಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸರಿಸುಮಾರು 32,000 ಆಸನಗಳ ಸಾಮರ್ಥ್ಯವಿದೆ. ಇದರಲ್ಲಿ ಸುಮಾರು 7,000 ರಿಂದ 8,000 ಸೀಟುಗಳನ್ನು ವಿಐಪಿಗಳು,…