Headlines

nagaraj11081993

Lunar Eclipse 2026: ಮಾ.03 ವರ್ಷದ ಮೊದಲ ಚಂದ್ರಗ್ರಹಣ; ಇದು ಭಾರತದಲ್ಲಿ ಗೋಚರಿಸುತ್ತಾ? – Kannada News | Lunar Eclipse March 3, 2026: India Visibility, Sutak Timings and Duration

ಈ ವರ್ಷದ ಮೊದಲ ಚಂದ್ರಗ್ರಹಣವು ಫಾಲ್ಗುಣ ಮಾಸದ ಹುಣ್ಣಿಮೆಯಂದು ಸಂಭವಿಸಲಿದೆ. ಈ ವರ್ಷ, ಫಾಲ್ಗುಣ ಹುಣ್ಣಿಮೆಯ ದಿನವು ಮಾರ್ಚ್ 03 ರಂದು ಬಂದಿದ್ದು, ಚಂದ್ರಗ್ರಹಣವು ಈ ದಿನದಂದು ಸಂಭವಿಸುತ್ತದೆ. ಈ ಚಂದ್ರಗ್ರಹಣವು ವರ್ಷದ ಅತ್ಯಂತ ದೀರ್ಘವಾಗಿರುತ್ತದೆ. ಗ್ರಹಣದ ದಿನದಂದು, ಚಂದ್ರನು ಸಿಂಹ ರಾಶಿಯಲ್ಲಿ ಸಾಗುತ್ತಾನೆ. ಪರಿಣಾಮವಾಗಿ, ಚಂದ್ರಗ್ರಹಣವು ಸಿಂಹ ಮತ್ತು ಪೂರ್ವಾ ಫಾಲ್ಗುಣಿ ನಕ್ಷತ್ರಪುಂಜದಲ್ಲಿ ಸಂಭವಿಸುತ್ತದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುತ್ತದೆ. ಪರಿಣಾಮವಾಗಿ, ಈ ಚಂದ್ರಗ್ರಹಣದ ಸೂತಕ ಅವಧಿಯು ಭಾರತದಲ್ಲಿಯೂ ಕಂಡುಬರುತ್ತದೆ. 2026 ರ ಚಂದ್ರ ಗ್ರಹಣ…

Read More

ನಾ ಬದಲಾಗಲ್ಲ… ಅಭಿಷೇಕ್ ಶರ್ಮಾ ತಿರುಗೇಟು – Kannada News | ‘I Will Not Change’: Abhishek Sharma

ಟೀಮ್ ಇಂಡಿಯಾ ಆರಂಭಿಕ ದಾಂಡಿಗ ಅಭಿಷೇಕ್ ಶರ್ಮಾ ಫಾರ್ಮ್​ನಲ್ಲಿದ್ದಾರಾ? ಈ ಪ್ರಶ್ನೆಗೆ ಉತ್ತರ ಹುಡುಕುವುದೇ ದೊಡ್ಡ ಸವಾಲು. ಏಕೆಂದರೆ ಒಬ್ಬ ಆಟಗಾರ ಫಾರ್ಮ್​ನಲ್ಲಿ ಇಲ್ಲ ಎನ್ನಲು ಆತನ ಕೆಲ ಇನಿಂಗ್ಸ್​ಗಳನ್ನು ನೋಡಬೇಕಾಗುತ್ತದೆ. ಇನ್ನು ಫಾರ್ಮ್​ನಲ್ಲಿದ್ದಾರೆ ಎಂದು ಗೊತ್ತಾಗಲು ಒಂದೆರಡು ಇನಿಂಗ್ಸ್ ನೋಡಿದ್ರೂ ಸಾಕಾಗುತ್ತದೆ. ಆದರೆ ಅಭಿಷೇಕ್ ವಿಷಯದಲ್ಲಿ ಅವರು ಫಾರ್ಮ್​ನಲ್ಲಿದ್ದಾರಾ ಅಥವಾ ಇಲ್ಲವಾ ಎಂದೇಳುವುದೇ ಕಷ್ಟಕರ. ಏಕೆಂದರೆ ಅಭಿಷೇಕ್ ಅಬ್ಬರಿಸಿದರೆ ಅದು ಸಿಡಿಲಬ್ಬರ. ಇಲ್ಲದಿದ್ದರೆ ಶೂನ್ಯ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸಾಕ್ಷಿ ಅವರು ಟಿ20 ವಿಶ್ವಕಪ್​ಗೂ…

Read More

ಕಾರಿಗೆ ಟಚ್​​ ಆಗಿದ್ದಕ್ಕೆ ಆ್ಯಂಬುಲೆನ್ಸ್ ಅಡ್ಡಗಟ್ಟಿ ರಸ್ತೆ ರಂಪಾಟ – Kannada News | Road Rage: Car Driver Abuses Ambulance Driver in Anekal

ಆನೇಕಲ್​​, ಫೆಬ್ರವರಿ 22: ಬೆಂಗಳೂರು ಹೊರವಲಯದಲ್ಲಿ ಆ್ಯಂಬುಲೆನ್ಸ್ ಅಡ್ಡಗಟ್ಟಿ ರಸ್ತೆ ರಂಪಾಟ ನಡೆಸಿರುವ ಘಟನೆ ವರದಿಯಾಗಿದೆ. ಆನೇಕಲ್‌ನ ಅಲಯನ್ಸ್ ಕಾಲೇಜು ಮುಂಭಾಗದಲ್ಲಿ ಘಟನೆ ನಡೆದಿದ್ದು, ರೋಗಿಯೊಬ್ಬರನ್ನು ಕರೆತರಲು ತೆರಳುತ್ತಿದ್ದ ಆ್ಯಂಬುಲೆನ್ಸ್​​ನ ಕಾರು ಚಾಲಕ ಮತ್ತು ಕೆಲ ವಿದ್ಯಾರ್ಥಿಗಳು ತಡೆದಿದ್ದಾರೆ. ಕಾಲೇಜು ಮುಂಭಾಗದ ರಸ್ತೆಯಲ್ಲಿ ಪಾರ್ಕ್ ಮಾಡಿದ್ದ ಕಾರಿಗೆ ಆ್ಯಂಬುಲೆನ್ಸ್  ಸ್ಪರ್ಶಿಸಿದೆ ಎಂಬ ಕಾರಣಕ್ಕೆ  ಗಲಾಟೆ ಶುರುವಾಗಿದೆ. ಸುಮಾರು ಹದಿನೈದು ನಿಮಿಷಗಳ ಕಾಲ ಆ್ಯಂಬುಲೆನ್ಸ್ ತಡೆದು ನಿಲ್ಲಿಸಿದ್ದು, ಆ್ಯಂಬುಲೆನ್ಸ್ ಚಾಲಕನನ್ನು ಅಶ್ಲೀಲ ಪದಗಳಿಂದ ಬಾಯಿಗೆ ಬಂದಂತೆ ನಿಂದಿಸಲಾಗಿದೆ. ರೋಗಿಗಳನ್ನು…

Read More

‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ – Kannada News | Rishab Shetty arrives at Anjanadri Hills for Jai Hanuman movie muhurtha

ರಿಷಬ್ ಶೆಟ್ಟಿ ಅವರು ‘ಜೈ ಹನುಮಾನ್’ (Jai Hanuman) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ತೆಲುಗಿನ ಪ್ರಶಾಂತ್ ವರ್ಮಾ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇಂದು (ಫೆಬ್ರವರಿ 22) ಕರ್ನಾಟಕದಲ್ಲಿ ಈ ಸಿನಿಮಾಗೆ ಮುಹೂರ್ತ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟಕ್ಕೆ ಇಡೀ ಚಿತ್ರತಂಡ ಆಗಮಿಸಿದೆ. ರಿಷಬ್ ಶೆಟ್ಟಿ ಜೊತೆ ಪತ್ನಿ ಪ್ರಗತಿ ಶೆಟ್ಟಿ ಕೂಡ ಆಗಮಿಸಿದ್ದಾರೆ. ಹನುಮ ಹುಟ್ಟಿದ ಸ್ಥಳ ಅಂಜನಾದ್ರಿಯಲ್ಲಿಯೇ ‘ಜೈ ಹನುಮಾನ್’ ಸಿನಿಮಾಗೆ ಪೂಜೆ ಮಾಡಿರುವುದು ವಿಶೇಷ. ಈ ಮೂಲಕ ಚಿತ್ರಕ್ಕೆ…

Read More

ಎಂಟು ಮಂದಿ ಶಂಕಿತ ಉಗ್ರರ ಬಂಧನ; ಗಾರ್ಮೆಂಟ್ಸ್ ಫ್ಯಾಕ್ಟರಿ ಮತ್ತಿತರೆಡೆಯಲ್ಲಿ ಕೆಲಸ ಮಾಡುತ್ತಿದ್ದವರಿವರು – Kannada News | Police arrest many terror suspects from Tamil Nadu and West Bengal

ನವದೆಹಲಿ, ಫೆಬ್ರುವರಿ 22: ರಾಷ್ಟ್ರರಾಜಧಾನಿಯಲ್ಲಿ ಮತ್ತೊಂದು ಉಗ್ರ ದಾಳಿಗೆ ಸಂಚು (Terror plot) ರೂಪಿಸಲಾಗುತ್ತಿದೆ ಎನ್ನುವ ಗುಪ್ತಚರ ಮಾಹಿತಿ ಬರುತ್ತಿರುವ ಬೆನ್ನಲ್ಲೇ ಎಂಟು ಮಂದಿ ಉಗ್ರ ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಈ ಎಂಟು ಮಂದಿಯನ್ನು ಬಂಧಿಸಲಾಗಿದೆ. ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯ ಗಾರ್ಮೆಂಟ್ಸ್ ಫ್ಯಾಕ್ಟರಿಗಳಲ್ಲಿ ಆರು ಮಂದಿ ಶಂಕಿತರು ಬಂಧಿತರಾದರೆ, ಪಶ್ಚಿಮ ಬಂಗಾಳದಲ್ಲಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಮಿಳುನಾಡಿನಲ್ಲಿ ಬಂಧಿತರಾದ ಆರು ಮಂದಿ ಶಂಕಿತ ಉಗ್ರರನ್ನು ಮಿಜಾನುರ್ ರಹಮಾನ್, ಮೊಹಮ್ಮದ್ ಶಬತ್,…

Read More

ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ: ಇಲ್ಲಿದೆ ಮಾಹಿತಿ – Kannada News | CM Siddaramaiah on Teacher Recruitment: Promises Phased Hiring

ಬೆಂಗಳೂರು, ಫೆಬ್ರವರಿ 22: ವಿಶ್ವವಿದ್ಯಾಲಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಶಿಕ್ಷಕರ ನೇಮಕಾತಿ ಮತ್ತು ಉನ್ನತ ಶಿಕ್ಷಣ ಕ್ಷೇತ್ರದ ಸವಾಲುಗಳ ಕುರಿತು ಪ್ರಮುಖ ಹೇಳಿಕೆಗಳನ್ನು ನೀಡಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ ಮೌಲ್ಯವರ್ಧನೆಗೆ ಶಿಕ್ಷಕರು ಅತ್ಯಗತ್ಯ. ಪ್ರಸ್ತುತ, ವಿಶ್ವವಿದ್ಯಾಲಯಗಳಲ್ಲಿ ಸುಮಾರು ಶೇ.65ರಷ್ಟು ಬೋಧಕ ಸಿಬ್ಬಂದಿ ಹುದ್ದೆಗಳು ಖಾಲಿ ಇವೆ. ಈ ಕೊರತೆಯನ್ನು ನಿಭಾಯಿಸಲು ಸರ್ಕಾರ ಬದ್ಧವಾಗಿದೆ. ಕಳೆದ ವರ್ಷ 2000 ಶಿಕ್ಷಕರನ್ನು ಭರ್ತಿ ಮಾಡಲಾಗಿದೆ. ಮುಂದೆಯೂ ಹಂತ ಹಂತವಾಗಿ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಲಾಗುವುದು ಎಂದು ಅವರು ಭರವಸೆ…

Read More

Love Tragedy: ಕ್ಷುಲ್ಲಕ ಕಾರಣಕ್ಕೆ ಜಗಳ; ಪ್ರೇಯಸಿ ಸಾವನ್ನಪ್ಪಿದ ಬೆನ್ನಲ್ಲೇ ವಿಷ ಕುಡಿದು ನೇಣಿಗೆ ಶರಣಾದ ಟೆಕ್ಕಿ – Kannada News | Hyderabad Techie Suicide: Love Story Ends in Tragedy, Software Engineer Found Dead in Bhimili

ಹೈದರಾಬಾದ್‌, ಫೆಬ್ರವರಿ 22: ಹೈದರಾಬಾದ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ವಿಶಾಖಪಟ್ಟಣ ಜಿಲ್ಲೆಯ ಭೀಮಿಲಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಚಲನ ಮೂಡಿಸಿದೆ. ಕೆಲವೇ ದಿನಗಳ ಅಂತರದಲ್ಲಿ ಪ್ರೇಮಿಗಳಿಬ್ಬರು ಸಾವನ್ನಪ್ಪಿರುವ ಘಟನೆ ಎರಡೂ ಕುಟುಂಬಗಳನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಮೃತ ಯುವಕನನ್ನು ಶ್ಯಾಮ್ ಕುಮಾರ್ ಎಂದು ಗುರುತಿಸಲಾಗಿದ್ದು, ಆತ ಹೈದರಾಬಾದ್‌ನಲ್ಲಿ ಉದ್ಯೋಗದಲ್ಲಿದ್ದು, ಪಾವನಿ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ ಎಂದು ತಿಳಿದುಬಂದಿದೆ. ಪ್ರೇಮಿಗಳ ನಡುವೆ ಇತ್ತೀಚೆಗೆ ಜಗಳ ಉಂಟಾದ ಹಿನ್ನೆಲೆಯಲ್ಲಿ, ಪಾವನಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕುಟುಂಬಸ್ಥರು ತಕ್ಷಣವೇ ಆಸ್ಪತ್ರೆಗೆ…

Read More

ಜಿಬಿಎ ನಿರ್ಲಕ್ಷ್ಯ! ಇಂದಿರಾ ಕ್ಯಾಂಟೀನ್​ನಲ್ಲಿ ಅಧ್ವಾನ – Kannada News | Indira Canteens and Bengaluru Parks Face Neglect: A TV9 Reality Check Reveals GBAs Failures

ಬೆಂಗಳೂರು, ಫೆಬ್ರವರಿ 22: ಜಿಬಿಎ ನಿರ್ಲಕ್ಷ್ಯದಿಂದ ಕಾಂಗ್ರೆಸ್‌ನ ಕನಸಿನ ಯೋಜನೆಯಾದ ಇಂದಿರಾ ಕ್ಯಾಂಟೀನ್‌ಗಳ ಅವ್ಯವಸ್ಥೆ ಟಿವಿ9 ರಿಯಾಲಿಟಿ ಚೆಕ್‌ನಲ್ಲಿ ಬಹಿರಂಗಗೊಂಡಿದೆ. ಬಡವರ ಹಸಿವು ನೀಗಿಸುವ ಉದ್ದೇಶದಿಂದ ಆರಂಭವಾದ ಇಂದಿರಾ ಕ್ಯಾಂಟೀನ್‌ಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಬೆಂಗಳೂರಿನ ಸಂಪಂಗಿರಾಮನಗರದ ಇಂದಿರಾ ಕ್ಯಾಂಟೀನ್‌ನಲ್ಲಿ ಮೆನು ಪ್ರಕಾರ ತಿಂಡಿ ನೀಡಲಾಗುತ್ತಿಲ್ಲ. ಶನಿವಾರ ವಾಂಗೀಬಾತ್ ಮತ್ತು ಇಡ್ಲಿ ನೀಡಬೇಕಿದ್ದರೂ, ಕೇವಲ ಇಡ್ಲಿ ಮತ್ತು ಸಾಂಬಾರ್ ಮಾತ್ರ ಒದಗಿಸಲಾಗುತ್ತಿದೆ. ಚಟ್ನಿ ನೀಡದೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬೆಲ್ಲಾ ಆರೋಪಗಳು ಕೇಳಿಬಂದಿದ್ದು, ಗ್ರಾಹಕರು ಈ ಬಗ್ಗೆ ಆಕ್ರೋಶ…

Read More

Gold Rate Today: ಚಿನ್ನದ ಬೆಲೆ ಗ್ರಾಮ್​ಗೆ 285 ರೂ ಹೆಚ್ಚಳ; ಇಲ್ಲಿದೆ ದರಪಟ್ಟಿ – Kannada News | Gold Price Today on 22nd February 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಫೆಬ್ರುವರಿ 22: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮತ್ತೆ ಏರಿಕೆಯ ಹಾದಿಗೆ ಬಂದಂತಿದೆ. ಈ ವಾರಾಂತ್ಯದಲ್ಲಿ ಚಿನ್ನದ ಬೆಲೆಯಲ್ಲಿ (Gold Rates) ಗ್ರಾಮ್​ಗೆ 285 ರೂನಷ್ಟು ಹೆಚ್ಚಳ ಆಗಿದೆ. ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿ ಬಹುತೇಕ ಕಡೆ ಇದರ ಬೆಲೆಯಲ್ಲಿ ಏರಿಕೆ ಆಗಿದೆ. ಬೆಳ್ಳಿ ಬೆಲೆಯೂ ಕೂಡ ಗ್ರಾಮ್​ಗೆ 5 ರೂನಿಂದ 20 ರೂವರೆಗೆ ಹೆಚ್ಚಳ ಆಗಿದೆ. ಬೆಂಗಳೂರು ಮೊದಲಾದೆಡೆ ಬೆಳ್ಳಿ ಬೆಲೆ 5 ರೂ ಏರಿ 275 ರೂ ಮುಟ್ಟಿದೆ. ಚೆನ್ನೈ ಮೊದಲಾದೆಡೆ ಬೆಲೆ 20…

Read More

Mann Ki Baat: AI ಇಂಪ್ಯಾಕ್ಟ್ ಸಮಿಟ್, ಡಿಜಿಟಲ್​​ ವಂಚನೆ ಸೇರಿ ಹಲವು ಅಂಶ ಉಲ್ಲೇಖಿಸಿದ ನಮೋ – Kannada News | 131st Mann Ki Baat: PM Modi Warns of Digital Fraud, Highlights AI Impact Summit

ಪ್ರಧಾನಿ ಮೋದಿ ಮನ್​​ ಕಿ ಬಾತ್​​Image Credit source: Google ನವದೆಹಲಿ, ಫೆಬ್ರವರಿ 22: AI ಇಂಪ್ಯಾಕ್ಟ್ ಸಮಿಟ್ 2026 ವಿಶ್ವ ನಾಯಕರಿಗೆ ಅನೇಕ ವಿಷಯಗಳನ್ನು ತೋರಿಸಿದೆ. AI ಪಶು ಚಿಕಿತ್ಸೆಯಲ್ಲಿ ಹೇಗೆ ಸಹಾಯ ಮಾಡುತ್ತಿದೆ ಹಾಗೂ ರೈತರು 24×7 AI ಸಹಾಯದಿಂದ ತಮ್ಮ ಹಾಲು ಉತ್ಪಾದನೆ ಮತ್ತು ಪಶುಸಂಗೋಪನೆಯನ್ನು ಹೇಗೆ ಮೇಲ್ವಿಚಾರಣೆ ಮಾಡಬಹುದು ಎಂಬುದನ್ನು ಪ್ರದರ್ಶಿಸಿದೆ. ಭಾರತೀಯ ಉತ್ಪಾದಕರು ಹಾಗೂ ಸ್ಟಾರ್ಟ್‌ಅಪ್ ಸಂಸ್ಥೆಗಳು ‘ಶೂನ್ಯ ದೋಷ’ (Zero-Defect) ಮತ್ತು ಉನ್ನತ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವತ್ತ ಗಮನಹರಿಸಬೇಕು…

Read More