World Athletics Day 2026: ವಿಶ್ವ ಅಥ್ಲೆಟಿಕ್ಸ್ ದಿನವನ್ನು ಯಾವ ಕಾರಣಕ್ಕಾಗಿ ಆಚರಿಸಲಾಗುತ್ತದೆ ಗೊತ್ತಾ? – Kannada News | World Athletics Day 2026: Why is World Athletics Day celebrated on May 7? Know its purpose
ವಿಶ್ವ ಅಥ್ಲೆಟಿಕ್ಸ್ ದಿನImage Credit source: vecteezy ಇಂದಿನ ಈ ಡಿಜಿಟಲ್ ಯುಗದಲ್ಲಿ ಜನ ದೈಹಿಕ ಚಟುವಟಿಕೆಯಲ್ಲಿ (Physical activity) ತೊಡಗಿಕೊಳ್ಳುವುದು ಕಡಿಮೆಯಾಗಿದೆ. ಅದರಲ್ಲೂ ಯುವಕರು ಮತ್ತು ಮಕ್ಕಳು ಕ್ರೀಡೆ ಇತ್ಯಾದಿ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದೆ ಮೊಬೈಲ್ ನೋಡುತ್ತಾ ಕಾಲಹರಣ ಮಾಡುತ್ತಾರೆ. ಇದು ಆರೋಗ್ಯಕ್ಕೂ ಹಾಳು. ಅದೇ ಕ್ರೀಡೆಗಳು ಜನರು ಹೆಚ್ಚು ಸಕ್ರಿಯರಾಗಲು, ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಹೆಚ್ಚು ಚಲನಶೀಲರನ್ನಾಗಿರುವಂತೆ ಪ್ರೋತ್ಸಾಹಿಸಲು ಸಹಾಯ ಮಾಡುತ್ತದೆ. ಇದು ವಿವಿಧ ಕಾಯಿಲೆಗಳನ್ನು ನಿವಾರಿಸಲು ಮತ್ತು ಹೆಚ್ಚು ಸದೃಢ ಮತ್ತು ಆರೋಗ್ಯಕರ…