All posts by nagaraj11081993

World Thinking Day 2026: ಹೆಣ್ಣುಮಕ್ಕಳ ಜೀವನವನ್ನು ಸುಧಾರಿಸಲು ಸಂಕಲ್ಪ ಮಾಡುವ ದಿನವಿದು – Kannada News | World Thinking Day 2026: Know the purpose behind celebrating World Thinking Day

ಗರ್ಲ್ ಗೈಡ್ಸ್ ಮತ್ತು ಗರ್ಲ್ ಸ್ಕೌಟ್‌ ವತಿಯಿಂದ ಪ್ರತಿವರ್ಷ ಫೆಬ್ರವರಿ 22 ರಂದು ಆಚರಿಸಲ್ಪಡುವ ವಿಶ್ವ ಚಿಂತನಾ ದಿನವು (World Thinking Day) ವಿಶ್ವಾದ್ಯಂತ ಹುಡುಗಿಯರ ಜೀವನವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಇದು ಲಿಂಗ ಸಮಾನತೆಯನ್ನು ಉತ್ತೇಜಿಸುವ, ಯುವತಿಯರ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ, ಪ್ರಪಂಚದಾದ್ಯಂತ ಮಹಿಳೆಯರು ಮತ್ತು ಹುಡುಗಿಯರು ಎದುರಿಸುತ್ತಿರುವ ಸವಾಲುಗಳನ್ನು ಚರ್ಚಿಸಲು ಅವಕಾಶವನ್ನು ಒದಗಿಸುತ್ತದೆ. ವಿಶ್ವ ಚಿಂತನಾ ದಿನವು ಕೇವಲ ಔಪಚಾರಿಕ ಕಾರ್ಯಕ್ರಮವಲ್ಲ, ಅದು ಜಗತ್ತಿನಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಬಯಸುವ ಲಕ್ಷಾಂತರ ಹುಡುಗಿಯರ ಧ್ವನಿಯಾಗಿದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವೇನು ಎಂಬುದನ್ನು ತಿಳೀಯೋಣ ಬನ್ನಿ.

ವಿಶ್ವ ಚಿಂತನಾ ದಿನದ ಇತಿಹಾಸವೇನು?

ಹುಡುಗಿಯರು ಮತ್ತು ಯುವಕರಲ್ಲಿ ನಾಯಕತ್ವ, ಏಕತೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಉತ್ತೇಜಿಸುವ ಉದ್ದೇಶದಿಂದ ಗರ್ಲ್ ಗೈಡ್ಸ್ ಮತ್ತು ಗರ್ಲ್ ಸ್ಕೌಟ್ಸ್ ಸಂಘ (WAGGGS) 1926 ರಿಂದ ವಿಶ್ವ ಚಿಂತನಾ ದಿನವನ್ನು ಆಚರಿಸುತ್ತಿದೆ. 1926 ರಲ್ಲಿ ನಡೆದ ನಾಲ್ಕನೇ ಗರ್ಲ್ ಸ್ಕೌಟ್ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಈ ವಿಶ್ವ ಚಿಂತನಾ ದಿನದ ಕುರಿತು ಪ್ರಸ್ತಾನೆ ಮಾಡಲಾಯಿತು. ಫೆಬ್ರವರಿ 22 ರಂದು ಚಿಂತನಾ ದಿನವನ್ನು ಆಚರಿಸಲು ಒಪ್ಪಿಗೆ ದೊರೆಯಿತು. ಹೀಗಾಗಿ ವರ್ಲ್ಡ್ ಅಸೋಸಿಯೇಷನ್ ​​ಆಫ್ ಗರ್ಲ್ ಗೈಡ್ಸ್ ಮತ್ತು ಗರ್ಲ್ ಸ್ಕೌಟ್ಸ್ (WAGGGS) ಪ್ರತಿ ವರ್ಷ ಫೆಬ್ರವರಿ 22 ರಂದು ವಿಶ್ವ ಚಿಂತನಾ ದಿನವನ್ನು ಆಚರಿಸಲಾಗುತ್ತದೆ. ಬಾಯ್ ಸ್ಕೌಟ್ಸ್ ಆಫ್ ಅಮೇರಿಕಾವನ್ನು ಸ್ಥಾಪಿಸಿದ ರಾಬರ್ಟ್ ಬೇಡೆನ್-ಪೊವೆಲ್ ಅವರ ಜನ್ಮದಿನ ಕೂಡ ಹೌದು. ಅವರ ಜನ್ಮದಿನವನ್ನು ನೆನಪಿಸುವ ಮೂಲಕ ವಿಶ್ವ ಚಿಂತನಾ ದಿನ ಮತ್ತು ವಿಶ್ವ ಸ್ಕೌಟ್ ದಿನವನ್ನಾಗಿ ಆಚರಿಸಲಾಗುತ್ತಿದೆ.

ಇದನ್ನೂ ಓದಿ: ಮಾತೃಭಾಷಾ ದಿನವನ್ನು ಆಚರಿಸುವುದೇಕೇ ಗೊತ್ತಾ?

ವಿಶ್ವ ಚಿಂತನಾ ದಿನದ ಮಹತ್ವವೇನು?

  • ವಿಶ್ವ ಚಿಂತನಾ ದಿನವು ಹುಡುಗಿಯರಿಗೆ ಸಮಾನತೆ, ಸಬಲೀಕರಣ ಮತ್ತು ನಾಯಕತ್ವದ ಮಹತ್ವದ ಬಗ್ಗೆ ಶಿಕ್ಷಣ ನೀಡಲು ಒಂದು ಪ್ರಮುಖ ಅವಕಾಶವಾಗಿದೆ.
  • ಈ ದಿನವು ಪ್ರಪಂಚದಾದ್ಯಂತದ ಹುಡುಗಿಯರು ಒಂದಾಗಲು ಮತ್ತು ಪರಸ್ಪರ ಬೆಂಬಲಿಸಲು ಅವಕಾಶವನ್ನು ಒದಗಿಸುತ್ತದೆ.
  • ಈ ದಿನವು ಹುಡುಗಿಯರು ಜಾಗತಿಕ ನಾಗರಿಕರಾಗಲು ಮತ್ತು ಜಗತ್ತಿನಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಪ್ರೇರೇಪಿಸುತ್ತದೆ.
  • ಪ್ರಪಂಚದಾದ್ಯಂತದ ಗರ್ಲ್ ಗೈಡ್‌ಗಳು ಮತ್ತು ಸ್ಕೌಟ್‌ಗಳಲ್ಲಿ ಸ್ನೇಹ ಮತ್ತು ಸಹೋದರತ್ವದ ಮನೋಭಾವವನ್ನು ಬಲಪಡಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ.
  • ಸಂಪನ್ಮೂಲಗಳು ಸೀಮಿತವಾಗಿರುವ ದೇಶಗಳಲ್ಲಿ ಹುಡುಗಿಯರಿಗೆ ಸಹಾಯ ಮಾಡಲು ಈ ದಿನದಂದು ವಿಶ್ವಾದ್ಯಂತ ನಿಧಿಸಂಗ್ರಹ ಅಭಿಯಾನಗಳನ್ನು ಸಹ ನಡೆಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:16 am, Sun, 22 February 26

Source link

70ನೇ ಫಿಲ್ಮ್​ಫೇರ್ ಪ್ರಶಸ್ತಿ: ಕನ್ನಡದಲ್ಲಿ ಅವಾರ್ಡ್ ಗೆದ್ದವರ ಪಟ್ಟಿ ಇಲ್ಲಿದೆ.. – Kannada News | 70th Filmfare Awards South Kannada Winners full List Best Actor Best Film

ಕೇರಳದ ಕೊಚ್ಚಿಯಲ್ಲಿ ‘70ನೇ ಫಿಲ್ಮ್​​ಫೇರ್ ಪ್ರಶಸ್ತಿ’ (70th Filmfare Awards South) ಪ್ರದಾನ ಸಮಾರಂಭ ನಡೆದಿದೆ. 2024ರಲ್ಲಿ ತೆರೆಕಂಡ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಝಗಮಗಿಸುವ ವೇದಿಕೆಯಲ್ಲಿ ಅವಾರ್ಡ್ ಫಂಕ್ಷನ್ ನಡೆಯಿತು. ‘ಕೋಳಿ ಎಸ್ರು’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅಕ್ಷತಾ ಪಾಂಡವಪುರ (Akshatha Pandavapura) ಅವರು ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ‘ಬಘೀರ’ ಸಿನಿಮಾದ ನಟನೆಗಾಗಿ ಶ್ರೀಮುರಳಿ (Sri Murali) ಅವರಿಗೆ ಬೆಸ್ಟ್ ಆ್ಯಕ್ಟರ್ ಅವಾರ್ಡ್ ನೀಡಲಾಯಿತು.

‘ಕೆರೆಬೇಟೆ’ ಸಿನಿಮಾದಲ್ಲಿನ ನಟನೆಗಾಗಿ ಗೌರಿಶಂಕರ್ ಅವರು ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ) ಪ್ರಶಸ್ತಿ ಪಡೆದುಕೊಂಡರು. ಅಂಕಿತಾ ಅಮರ್ ಅವರಿಗೆ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರಕ್ಕಾಗಿ ಅತ್ಯುತ್ತಮ ನಟಿ (ವಿಮರ್ಶಕರ ಆಯ್ಕೆ) ಪ್ರಶಸ್ತಿ ಸಿಕ್ಕಿದೆ. ‘ಬ್ಲಿಂಕ್’ ಚಿತ್ರಕ್ಕಾಗಿ ಗೋಪಾಲಕೃಷ್ಣ ದೇಶಪಾಂಡೆ ಅವರು ಅತ್ಯುತ್ತಮ ಪೋಷಕ ನಟ ಪಶಸ್ತಿ ಪಡೆದರು. ‘ಭೀಮ’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಪ್ರಿಯಾ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಸಿಕ್ಕಿದೆ.

70ನೇ ಫಿಲ್ಮ್ ಫೇರ್ ಪ್ರಶಸ್ತಿ ಪಡೆದವರ ಪಟ್ಟಿ:
ಅತ್ಯುತ್ತಮ ಸಿನಿಮಾ: ಶಾಖಾಹಾರಿ (ನಿರ್ದೇಶನ: ಸಂದೀಪ್ ಸುಂಕದ್)
ಅತ್ಯುತ್ತಮ ನಿರ್ದೇಶಕ: ಪೃಥ್ವಿ ಕೋಣನೂರು (ಹದಿನೇಳೆಂಟು)
ಅತ್ಯುತ್ತಮ ನಿನಿಮಾ: ವಿಮರ್ಶಕರ ಆಯ್ಕೆ- ಬ್ಲಿಂಕ್ (ನಿರ್ದೇಶನ: ಶ್ರೀನಿಧಿ ಬೆಂಗಳೂರು)
ಅತ್ಯುತ್ತಮ ಸಂಗೀತ: ಅರ್ಜುನ್ ಜನ್ಯ (ಕೃಷ್ಣಂ ಪ್ರಣಯ ಸಖಿ)

ಅತ್ಯುತ್ತಮ ಹೊಸ ನಟಿ: ಬಿಂಧು ಶಿವರಾಮ್ (ಕೆರೆಬೇಟೆ)
ಅತ್ಯುತ್ತಮ ಹೊಸ ನಟ: ಸಮರ್​ಜಿತ್ ಲಂಕೇಶ್ (ಗೌರಿ)
ಅತ್ಯುತ್ತಮ ಹಿನ್ನೆಲೆ ಗಾಯಕಿ: ಶ್ರುತಿ ಪ್ರಹ್ಲಾದ (ಹಿತ್ತಲಕ ಕರಿಬ್ಯಾಡ)
ಅತ್ಯುತ್ತಮ ಹಿನ್ನೆಲೆ ಗಾಯಕ: ಜಸ್ಕರಣ್ ಸಿಂಗ್ (ದ್ವಾಪರ ದಾಟುತ)
ಅತ್ಯುತ್ತಮ ಗೀತರಚನೆ: ನಾಗೇಂದ್ರ ಪ್ರಸಾದ್ (ದ್ವಾಪರ ದಾಟುತ)

ಇದನ್ನೂ ಓದಿ: ರಾಜ್ಯ ಪ್ರಶಸ್ತಿ ಪುರಸ್ಕೃತ ನಟಿ ಅಕ್ಷತಾ ಪಾಂಡವಪುರ ಹೊಸ ಸಿನಿಮಾ

ಅತ್ಯುತ್ತಮ ನಟ: ಶ್ರೀಮುರಳಿ (ಬಘೀರ)
ಅತ್ಯುತ್ತಮ ನಟಿ: ಅಕ್ಷತಾ ಪಾಂಡವಪುರ (ಕೋಳಿ ಎಸ್ರು)
ಅತ್ಯುತ್ತಮ ಪೋಷಕ ನಟಿ: ಪ್ರಿಯಾ (ಭೀಮ)
ಅತ್ಯುತ್ತಮ ಪೋಷಕ ನಟ: ಗೋಪಾಲಕೃಷ್ಣ ದೇಶಪಾಂಡೆ (ಬ್ಲಿಂಕ್)
ಅತ್ಯುತ್ತಮ ನಟ: ವಿಮರ್ಶಕರ ಆಯ್ಕೆ- ಗೌರಿಶಂಕರ್ (ಕೆರೆಬೇಟೆ)
ಅತ್ಯುತ್ತಮ ನಟಿ: ವಿಮರ್ಶಕರ ಆಯ್ಕೆ- ಅಂಕಿರಾ ಅಮರ್ (ಇಬ್ಬನಿ ತಬ್ಬಿದ ಇಳೆಯಲಿ)

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಿಹಾರದಲ್ಲಿ ಕರ್ನಾಟಕದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಕೇಸ್​​ಗೆ ಟ್ವಿಸ್ಟ್​​: ಮೃತರ ಸಂಬಂಧಿ ಹೇಳಿದ್ದೇನು? – Kannada News | Tumakuru Family Suicide in Bihar: Shocking Information Revealed by Relatives

ಮೃತರಿಗೆ ಅಂತಿಮ ವಿಧಿ ವಿಧಾನ ಪೂಜೆImage Credit source: Tv9 Kannada

ತುಮಕೂರು, ಫೆಬ್ರವರಿ 22: ಮೊಬೈಲ್​​ ಗೀಳಿಗೆ ಬಿದ್ದಿದ್ದ ಅಳಿಯ ಅಮೋಘ ಕೀರ್ತಿ ಕೊಲೆ ಬಳಿಕ ನೊಂದು ಬಿಹಾರದ ರಾಜಗಿರಿಯಲ್ಲಿ ಆರೋಪಿ ನಾಗಪ್ರಸಾದ್ ಸೇರಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್​​ ಸಿಕ್ಕಿದೆ. ನಾಲ್ವರ ಆತ್ಮಹತ್ಯೆ ಬಗ್ಗೆ ಮೃತರ ಸಂಬಂಧಿ ಸ್ಯಾಮ್ ಟಿವಿ9ಗೆ ಮಾಹಿತಿ ನೀಡಿದ್ದು, ಸಾಯುವ ಬಗ್ಗೆ ಇವರು ದೇವಾಲಯದಲ್ಲಿ ನಿರ್ಧರಿಸಿಯೇ ಬಂದಿದ್ದರು. ಆತ್ಮಹತ್ಯೆ ಬಳಿಕ ಅಂತ್ಯಕ್ರಿಯೆ ಮಾಡಲೆಂದೇ ಒಂದು ಲಕ್ಷದ ಹದಿನೇಳು ಸಾವಿರ ಹಣ ಬೆಡ್ ಮೇಲೆ ಕಾಣುವಂತೆ ಇಟ್ಟು, ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ವಿಚಾರವೀಗ ಬಹಿರಂಗವಾಗಿದೆ.

ಇನ್ನು ರಾಜಗಿರಿ ಮಂದಿರದಲ್ಲಿ ಈ ನಾಲ್ವರು ತಂಗಿದ್ದ ಕೊಣೆಯಲ್ಲಿ ನಗದು,  50 ಗ್ರಾಂ ಚಿನ್ನಾಭರಣವಷ್ಟೇ ಅಲ್ಲದೆ ನಿದ್ರೆ ಮಾತ್ರೆಯೂ ಪತ್ತೆಯಾಗಿತ್ತು. ನೇಣು ಬಿಗಿದ ಸ್ಥಿತಿಯಲ್ಲಿದ್ದ ನಾಲ್ವರಲ್ಲಿ ಸುಮಂಗಲ, ಶಿಲ್ಪ ಮತ್ತು ಶೃತ ಬಾಯಿಗೆ ಟೇಪ್ ಹಾಕಲಾಗಿತ್ತು. ಆದರೆ ನಾಗಪ್ರಸಾದ್ ಬಾಯಲ್ಲಿ ಮಾತ್ರ ಟೇಪ್ ಇರಲಿಲ್ಲ. ಹೀಗಾಗಿ ಮೊದಲು ಎಲ್ಲರನ್ನು ಆತ್ಮಹತ್ಯೆಗೆ ದೂಡಿ ಬಳಿಕ ನಾಗಪ್ರಸಾದ್ ಪ್ರಾಣ ಬಿಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸಮಸ್ಯೆಯಾದಾಗ ನಮ್ಮನ್ನು ಸಂಪರ್ಕಿಸಬಹುದಿತ್ತು. ಖಿನ್ನತೆಯಾದಾಗ ಆತ್ಮಹತ್ತೆಯೇ ದಾರಿಯಲ್ಲ. ನಮ್ಮ ಜೊತೆ ಅವರು ಮಾತನಾಡಬಹುದಿತ್ತು ಎಂದು ಟಿವಿ9 ಎದುರು ಸ್ಯಾಮ್ ಕಣ್ಣೀರು ಹಾಕಿದ್ಧಾರೆ.

ಇದನ್ನೂ ಓದಿ: ಫ್ರೀಫೈರ್​​ಗೆ ಅಡಿಕ್ಟ್ ಆಗಿದ್ದ ಅಕ್ಕನ ಮಗನನ್ನೇ ಕೊಂದಿದ್ದ ಮಾವ ಸೇರಿ ಕುಟುಂಬದ ನಾಲ್ವರು ಬಿಹಾರದಲ್ಲಿ ಆತ್ಮಹತ್ಯೆಗೆ ಶರಣು!

ತುಮಕೂರಿನಲ್ಲಿ ಮೃತರಿಗೆ ಅಂತಿಮ ವಿಧಿವಿಧಾನದ ಪೂಜೆ

ಮೃತ ಕುಟುಂಬ ಜೈನ ಸಮುದಾಯಕ್ಕೆ ಸೇರಿರುವ ಹಿನ್ನೆಲೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಜೈನ ಮಂದಿರಲ್ಲಿ ಅಂತಿಮ ವಿಧಿವಿಧಾನ ಪೂಜೆಗಳನ್ನು ನಡೆಸಲಾಗಿದೆ. ಈ ವೇಳೆ ಮಾವನಿಂದ ಕೊಲೆಯಾದ ಅಮೋಘ ಕೀರ್ತಿಗೂ ಸಂಬಂಧಿಕರು ಪೂಜೆ ಸಲ್ಲಿಸಿದ್ದಾರೆ. ಸುಮಂಗಲ, ನಾಗಪ್ರಸಾದ್, ಶಿಲ್ಪ ಹಾಗೂ ಶೃತ ಶವಗಳು ರಾಜಗಿರಿಯ ಜೈನ ಮಂದಿರದ ಕೊಠಡಿಯಲ್ಲಿ ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಕರ್ನಾಟಕಕ್ಕೆ ಶವಗಳನ್ನು ತರಲಾಗದ ಕಾರಣ ಸಹೋದರ ಸಂಬಂಧಿ ಅವನ್ನು ಅಲ್ಲೇ ದಫನ್ ಮಾಡಿದ್ದರು. ಈ ಹಿನ್ನೆಲೆ ನೂರಾರು ಸಂಬಂಧಿಕರ ಸಮ್ಮುಖದಲ್ಲಿ ಶ್ರೀ ಆದಿಮಾಥ ಸ್ವಾಮಿಗೆ 108 ಕಲಶಾಭಿಷೇಕ ಪೂಜೆ ಮುಖಾಂತರ ಅಂತಿಮ ವಿಧಿ ವಿಧಾನದ ಪೂಜೆ ಸಲ್ಲಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ನೆಟ್ ರನ್ ರೇಟ್ ಸಮಗೊಂಡರೆ ಸೆಮಿಫೈನಲ್​ಗೇರುವುದು ಯಾರು? – Kannada News | What will happen if the net run rate of two teams is tied in t20 World Cup 2026?

T20 World Cup 2026: ಟಿ20 ವಿಶ್ವಕಪ್​ನ ಸೂಪರ್-8 ಸುತ್ತಿನ ಮೊದಲ ಪಂದ್ಯವೇ ಮಳೆಗೆ ಆಹುತಿಯಾಗಿದೆ. ಕೊಲಂಬೊದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ನಡುವಣ ಪಂದ್ಯವನ್ನು ರದ್ದು ಮಾಡಲಾಗಿದೆ. ಇನ್ನು ಪಂದ್ಯ ರದ್ದಾಗಿರುವ ಕಾರಣ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕಗಳನ್ನು ಹಂಚಲಾಗಿದೆ.

ಇತ್ತ ಉಭಯ ತಂಡಗಳು ಒಂದೊಂದು ಅಂಕ ಪಡೆದಿರುವ ಕಾರಣ ಮುಂದಿನ ಎರಡು ಮ್ಯಾಚ್​ಗಳಲ್ಲಿ ಗೆಲ್ಲುವ ಮೂಲಕ ಸೆಮಿಫೈನಲ್​ಗೇರಬಹುದು. ಒಂದು ವೇಳೆ ಗ್ರೂಪ್ ಮುಂದಿನ ಪಂದ್ಯಗಳು ಕೂಡ ಮಳೆಗೆ ಆಹುತಿಯಾಗಿ ಎಲ್ಲಾ ತಂಡಗಳು ಸಮವಾದ ಅಂಕಳನ್ನು ಪಡೆದರೆ ಯಾರಿಗೆ ಚಾನ್ಸ್ ಎಂಬ ಪ್ರಶ್ನೆ ಮೂಡುವುದು ಸಹಜ.

ಈ ಪ್ರಶ್ನೆಗೆ ಸಾಮಾನ್ಯವಾಗಿ ಸಿಗುವ ಉತ್ತರ ನೆಟ್ ರನ್ ರೇಟ್. ಅಂದರೆ ಅಂಕ ಪಟ್ಟಿಯಲ್ಲಿ ಎರಡಕ್ಕಿಂತ ಹೆಚ್ಚಿನ ತಂಡಗಳು ಸಮನಾದ ಅಂಕಗಳನ್ನು ಪಡೆದುಕೊಂಡಿದ್ದರೆ ಯಾವ ತಂಡ ಹೆಚ್ಚಿನ ನೆಟ್ ರನ್ ರೇಟ್ ಹೊಂದಿರುತ್ತವೆಯೋ ಆ ತಂಡವು ಮುಂದಿನ ಹಂತಕ್ಕೇರಲಿದೆ.  ಒಂದು ವೇಳೆ ಅಂಕಗಳೊಂದಿಗೆ ನೆಟ್ ರನ್ ರೇಟ್ ಕೂಡ ಸಮವಾಗಿದ್ದರೆ? ಈ ಪ್ರಶ್ನೆಗೆ ಉತ್ತರ ಈ ಕೆಳಗಿನಂತಿದೆ…

  • ಗೆಲುವಿನ ಲೆಕ್ಕಾಚಾರ: ಪಾಯಿಂಟ್ಸ್ ಮತ್ತು ನೆಟ್ ರನ್ ರೇಟ್ ಎರಡೂ ಸಮವಾಗಿದ್ದಾಗ, ಟೂರ್ನಮೆಂಟ್‌ನಲ್ಲಿ ಯಾರು ಹೆಚ್ಚು ಪಂದ್ಯಗಳನ್ನು ಗೆದ್ದಿದ್ದಾರೋ ಆ ತಂಡಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ.
  • ಹೆಡ್-ಟು-ಹೆಡ್: ಟೂರ್ನಿಯಲ್ಲಿ ಉಭಯ ತಂಡಗಳ ಗೆಲುವು ಕೂಡ ಸಮನಾಗಿದ್ದರೆ, ಟೈ ಆಗಿರುವ ಆ ಎರಡು ತಂಡಗಳು ಲೀಗ್ ಹಂತದಲ್ಲಿ ಪರಸ್ಪರ ಮುಖಾಮುಖಿಯಾದಾಗ ಯಾರು ಹೆಚ್ಚು ಗೆದ್ದಿದ್ದರು ಎಂಬುದನ್ನು ನೋಡಲಾಗುತ್ತದೆ. ಹೀಗೆ ಪರಸ್ಪರ ಮುಖಾಮುಖಿಯಲ್ಲಿ ಹೆಚ್ಚು ಗೆದ್ದಿರುವ ತಂಡ ಮುಂದಿನ ಹಂತಕ್ಕೇರುತ್ತದೆ.
  • ಐಸಿಸಿ ಶ್ರೇಯಾಂಕ: ಅಂತರಾಷ್ಟ್ರೀಯ ಪಂದ್ಯಗಳಲ್ಲಿ (ವಿಶ್ವಕಪ್‌ನಂತಹ ಟೂರ್ನಿಗಳಲ್ಲಿ), ಎಲ್ಲವೂ ಸಮನಾದಾಗ ಪಂದ್ಯಾವಳಿ ಆರಂಭಕ್ಕೂ ಮೊದಲು ಇದ್ದ ICC ಟೀಮ್ ರ‍್ಯಾಂಕಿಂಗ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಅಂದರೆ ಗೆಲುವು, ನೆಟ್ ರನ್ ರೇಟ್, ಹೆಡ್ ಟು ಹೆಡ್ ಎಲ್ಲವೂ ಸಮವಾಗಿದ್ದರೆ ಈ ವೇಳೆ ಈ ಐಸಿಸಿ ರ್ಯಾಂಕಿಂಗ್​ನಲ್ಲಿ ಯಾವ ತಂಡ ಮೇಲಿರುತ್ತದೆಯೋ ಆ ತಂಡ ಮುಂದಿನ ಹಂತಕ್ಕೇರಲಿದೆ.
  • ಹೆಚ್ಚು ವಿಕೆಟ್ ಲೆಕ್ಕಾಚಾರ: ಕೆಲವು ಟೂರ್ನಿಗಳಲ್ಲಿ (ಉದಾಹರಣೆಗೆ IPL), ಮೇಲಿನ ಹಂತಗಳಲ್ಲೂ ಫಲಿತಾಂಶ ಸಿಗದಿದ್ದರೆ, ಇಡೀ ಟೂರ್ನಿಯಲ್ಲಿ ಯಾವ ತಂಡ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದೆ ಎಂದು ನೋಡಲಾಗುತ್ತದೆ. ಈ ಮೂಲಕ ಮುಂದಿನ ಹಂತಕ್ಕೇರುವುದನ್ನು ನಿರ್ಧರಿಸಲಾಗುತ್ತದೆ.

ಅಂದರೆ ಐಸಿಸಿ ಟೂರ್ನಿಗಳಲ್ಲಿ ಪಾಯಿಂಟ್ಸ್, ಗೆಲುವು, ನೆಟ್ ರನ್ ರೇಟ್, ಹೆಡ್ ಟು ಹೆಡ್ ಎಲ್ಲವೂ ಸಮವಾಗಿದ್ದರೂ ತಂಡಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲು ಕೊನೆಗೆ ಐಸಿಸಿ ತಂಡಗಳ ರ್ಯಾಂಕಿಂಗ್ ಅನ್ನು ಬಳಸಲಾಗುತ್ತದೆ. ಹೀಗಾಗಿ ಪ್ರಸ್ತುತ ಟೂರ್ನಿಯಲ್ಲಿ ತಂಡಗಳ ಅಂಕಗಳು, ಗೆಲುವು, ನೆಟ್ ರನ್​ ರೇಟ್ ಎಲ್ಲವೂ ಸಮವಾದರೂ ಸೂಪರ್-8 ಸುತ್ತಿನಿಂದ 4 ತಂಡಗಳು ಮುಂದಿನ ಹಂತಕ್ಕೇರುವುದು ಖಚಿತ.

Source link

ಪ್ರತ್ಯೇಕ ಘಟನೆ: ರಸ್ತೆ ಅಪಘಾತದಲ್ಲಿ ಮೂವರು ಸಾವು; ಮಾಜಿ ಶಾಸಕ ಸುರೇಶ್ ಗೌಡರಿಗೆ ಗಾಯ – Kannada News | Karnataka Road Accidents: 3 Dead, Ex MLA Suresh Gowda Injured in Separate Crashes

ಹಿಟ್​ ಆ್ಯಂಡ್​ ರನ್​ಗೆ ಇಬ್ಬರು ಬಲಿImage Credit source: Tv9 Kannada

ಚಿತ್ರದುರ್ಗ/ ಮಂಡ್ಯ, ಫೆಬ್ರವರಿ 22: ಹಿಟ್​ ಆ್ಯಂಡ್​ ರನ್​ಗೆ ಇಬ್ಬರು ಬಲಿಯಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಪಟ್ರೆಹಳ್ಳಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ರಸ್ತೆಬದಿ ನಿಂತಿದ್ದವರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದರೆ, ಮತ್ತಿಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಕಾರು ಕೆಟ್ಟಿದ್ದರಿಂದ ರಿಪೇರಿಗೆಂದು ರಸ್ತೆ ಬದಿ ನಾಲ್ವರು ನಿಂತಿದ್ದರು. ಈ ವೇಳೆ ಅಪರಿಚಿತ ವಾಹನ ಡಿಕ್ಕಿಯಾಗಿದ್ದು, ಅಪಘಾತದ ಬಳಿಕ ವಾಹನ ಸಮೇತ ಚಾಲಕ ಪರಾರಿಯಾಗಿದ್ದಾನೆ. ಹಿರಿಯೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬೈಕ್​​ಗಳ ಮುಖಾಮುಖಿ ಡಿಕ್ಕಿ: ಓರ್ವ ಸಾವು

ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಮದ ಬಳಿ 2 ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ವ್ಯಕ್ತಿಯೋರ್ವ ಮೃತಪಟ್ಟಿದ್ದಾರೆ. ದಾಸಗೊಂಡನಹಳ್ಳಿಯ ನರಸಿಂಹಪ್ಪ(67) ಮೃತರಾಗಿದ್ದು, ಗಾಯಗೊಂಡ ಮತ್ತೋರ್ವನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮದುವೆ ಮುಗಿಸಿಕೊಂಡು ಮನೆಗೆ ಹೋಗ್ತಿದ್ದ ನರಸಿಂಹಪ್ಪಗೆ ಎದುರಿನಿಂದ ಬಂದ ಬೈಕ್​​ ಡಿಕ್ಕಿಯಾಗಿದ್ದು, ತೀವ್ರ ರಕ್ತ ಸಾವ್ರದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಫೆ.20ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಬಾಗಲಕೋಟೆಯಲ್ಲಿ ಭೀಕರ ಅಪಘಾತ; ಟ್ರ್ಯಾಕ್ಟರ್​ ಪಲ್ಟಿಯಾಗಿ ಮಗು ಸೇರಿ ನಾಲ್ವರ ದುರ್ಮರಣ

ಮಾಜಿ ಶಾಸಕ ಸುರೇಶ್ ಗೌಡ ಕಾರು ಅಪಘಾತ

ಅಪಘಾತದಲ್ಲಿ ಜಖಂ ಆಗಿರುವ ಕಾರು

ಪಕ್ಷದ ಕಾರ್ಯಕರ್ತರ ಮದುವೆಗೆಂದು ಮಂಡ್ಯ ಜಿಲ್ಲೆ ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ  ಸುರೇಶ್ ಗೌಡ ಪ್ರಯಾಣಿಸುತ್ತಿದ್ದ ಕಾರು ಮಂಡ್ಯದ ಬೊಂತೆಕೊಪ್ಪಲು ಸಮೀಪ ನಿನ್ನೆ ರಾತ್ರಿ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಮಾಜಿ ಶಾಸಕರು ಪ್ರಾಣಾಪಾಯದಿಂದ ಪಾರಾಗಿದ್ದು, ಚಾಲಕನ ನಿಯಂತ್ರಣ ತಪ್ಪಿ‌ ಕಾರು ಪಲ್ಟಿಯಾಗಿದೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ ಕಾರು ಭಾಗಶಃ ಜಖಂಗೊಂಡಿದ್ದು, ಸುರೇಶ್ ಗೌಡ ಕೈಗೆ ಪೆಟ್ಟಾಗಿದೆ. ಚಾಲಕನಿಗೂ ಸಣ್ಣಪುಟ್ಟ ಗಾಯಗಲಾಗಿದ್ದು, ತಕ್ಷಣ ಗನ್​ಮ್ಯಾನ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಲೋಕಾಯುಕ್ತ ಬಲೆಗೆ ಬಿದ್ದ ಬಿಜೆಪಿ ಶಾಸಕ ಚಂದ್ರು ಲಮಾಣಿ: ಬೆಂಬಲಿಗರಿಂದ ಹೈಡ್ರಾಮಾ – Kannada News | MLA Chandru Lamani Trapped by Lokayukta in Bribe Case: Supporters Create High Drama

ಗದಗ, ಫೆಬ್ರವರಿ 22: 5 ಲಕ್ಷ ರೂ. ಲಂಚ ಸ್ವೀಕರಿಸುವಾಗ ಬಲೆಗೆ ಬಿದ್ದಿದ್ದ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿ ಕರೆತರುವಾಗ ಬೆಂಬಲಿಗರು ಲಕ್ಷ್ಮೇಶ್ವರದಲ್ಲಿ ವಾಹನ ಅಡ್ಡಗಟ್ಟಿ ತೀವ್ರ ಹೈಡ್ರಾಮಾ ನಡೆಸಿದ್ದಾರೆ. ಶಾಸಕರನ್ನು ಕರೆದುಕೊಂಡು ಹೋಗುತ್ತಿದ್ದ ವಾಹನವನ್ನು ಬೆಂಬಲಿಗರು ತಡೆಯಲು ಯತ್ನಿಸಿದ್ದು, ಪರಿಸ್ಥಿತಿ ಕೆಲಕಾಲ ಉದ್ವಿಗ್ನಗೊಂಡಿತ್ತು. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ ಪ್ರಸಂಗ ನಡೆದಿದೆ. ಈ ವೇಳೆ, ಮಾಧ್ಯಮದವರು ಶಾಸಕ ಚಂದ್ರು ಲಮಾಣಿ ಅವರ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಿದರು. ಆದರೆ, ಶಾಸಕರು ಯಾವುದೇ ಹೇಳಿಕೆ ನೀಡಲಿಲ್ಲ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಒಂದು ಪಾಯಿಂಟ್ ಸಿಕ್ಕಿರುವುದೇ ಪಾಕಿಸ್ತಾನ್ ಪಾಲಿಗೆ ಪ್ಲಸ್ ಪಾಯಿಂಟ್ – Kannada News | How Can Pakistan Qualify For T20 World Cup 2026 Semi Final

T20 World Cup 2026: ಟಿ20 ವಿಶ್ವಕಪ್​ನ ಸೂಪರ್-8 ಸುತ್ತಿನ ಮೊದಲ ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಕೊಲಂಬೊದ ಆರ್​. ಪ್ರೇಮದಾಸ ಮೈದಾನದಲ್ಲಿ ನಡೆಯಬೇಕಿದ್ದ ಈ ಪಂದ್ಯದಲ್ಲಿ ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಬೇಕಿತ್ತು. ಆದರೆ ಭಾರೀ ಮಳೆಯಿಂದಾಗಿ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಅಲ್ಲದೆ ಪಂದ್ಯ ರದ್ದಾಗಿರುವ ಕಾರಣ ಉಭಯ ತಂಡಗಳು ಒಂದೊಂದು ಪಾಯಿಂಟ್ ಹಂಚಿಕೊಂಡಿದೆ. ಹೀಗೆ ಸಿಕ್ಕ ಒಂದು ಪಾಯಿಂಟ್ ಪಾಕಿಸ್ತಾನ್ ಪಾಲಿಗೆ ಪ್ಲಸ್ ಪಾಯಿಂಟ್ ಎಂಬುದೇ ವಿಶೇಷ.

ಏಕೆಂದರೆ ಸೂಪರ್-8 ಸುತ್ತಿನ ಗ್ರೂಪ್-2 ನಲ್ಲಿರುವ ಕಾಣಿಸಿಕೊಂಡಿರುವ ನ್ಯೂಝಿಲೆಂಡ್, ಇಂಗ್ಲೆಂಡ್, ಶ್ರೀಲಂಕಾ ತಂಡಗಳಿಗೆ ಹೋಲಿಸಿದರೆ ಪಾಕ್ ತಂಡವು ತುಂಬಾ ದುರ್ಬಲ. ಅದರಲ್ಲೂ ಪಾಕಿಸ್ತಾನ್ ವಿರುದ್ಧ ನ್ಯೂಝಿಲೆಂಡ್ ಗೆಲ್ಲುವ ಫೇವರೇಟ್ ತಂಡವಾಗಿ ಗುರುತಿಸಿಕೊಂಡಿತ್ತು. ಆದರೀಗ ಮ್ಯಾಚ್ ರದ್ದಾದ ಕಾರಣ ಪಾಕಿಸ್ತಾನ್ ತಂಡಕ್ಕೆ ಒಂದು ಪಾಯಿಂಟ್ ಲಭಿಸಿದೆ.

ಈ ಒಂದು ಪಾಯಿಂಟ್​ನೊಂದಿಗೆ ಪಾಕಿಸ್ತಾನ್ ತಂಡವು ಸೆಮಿಫೈನಲ್​ಗೇರಬಹುದು. ಆದರೆ ಅದಕ್ಕೂ ಮುನ್ನ ಇಂಗ್ಲೆಂಡ್ ಮತ್ತು ಶ್ರೀಲಂಕಾ ವಿರುದ್ಧ ಜಯ ಸಾಧಿಸಬೇಕು.

  • ಪಾಕಿಸ್ತಾನ್ ತನ್ನ ಮುಂದಿನ ಎರಡೂ ಪಂದ್ಯಗಳನ್ನು ಗೆದ್ದರೆ ನೇರವಾಗಿ ಸೆಮಿಫೈನಲ್ ಪ್ರವೇಶಿಸಲಿದೆ. ಏಕೆಂದರೆ ಈ ಎರಡು ಗೆಲುವಿನೊಂದಿಗೆ ಪಾಕ್ ತಂಡ ಒಟ್ಟು ಪಾಯಿಂಟ್ಸ್ 5 ಕ್ಕೇರಲಿದೆ.
  • ಒಂದು ಪಂದ್ಯ ಸೋತರೆ, ಇತರ ತಂಡಗಳ ಫಲಿತಾಂಶ ಮತ್ತು ನೆಟ್ ರನ್ ರೇಟ್ (NRR) ಮೇಲೆ ಅವಲಂಬಿತವಾಗಬೇಕಾಗುತ್ತದೆ.
  • ಒಂದೊಮ್ಮೆ ಮುಂದಿನ ಎರಡೂ ಪಂದ್ಯಗಳಲ್ಲಿ ಸೋತರೆ ಮಾತ್ರ ಅವರು ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದ್ದಾರೆ.

ಅಂದರೆ ಪಾಕಿಸ್ತಾನ್ ತಂಡವು ಮುಂದಿನ ಎರಡು ಮ್ಯಾಚ್​ಗಳಲ್ಲಿ ಜಯ ಸಾಧಿಸಿದರೆ ಒಟ್ಟು 5 ಅಂಕಗಳನ್ನು ಪಡೆದು ಸೆಮಿಫೈನಲ್ ಹಾದಿಯನ್ನು ಸುಗಮಗೊಳಿಸಬಹುದು.

ಇತ್ತ ಪಾಕ್ ತಂಡ ಶ್ರೀಲಂಕಾ ಹಾಗೂ ಇಂಗ್ಲೆಂಡ್ ತಂಡಗಳಿಗೆ ಸೋಲುಣಿಸಿದರೆ, ಉಳಿದ ಪಂದ್ಯಗಳನ್ನು ಗೆದ್ದರೂ ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳು 5 ಪಾಯಿಂಟ್ಸ್ ಕಲೆಹಾಕಲು ಸಾಧ್ಯವಾಗುವುದಿಲ್ಲ.

ಅತ್ತ ನ್ಯೂಝಿಲೆಂಡ್ ಕೂಡ ಶ್ರೀಲಂಕಾ ಮತ್ತು ಇಂಗ್ಲೆಂಡ್ ವಿರುದ್ಧ ಗೆದ್ದರೆ 5 ಪಾಯಿಂಟ್ಸ್ ಗಳಿಸಿ ಸೆಮಿಫೈನಲ್​ಗೇರಲು ಉತ್ತಮ ಅವಕಾಶವಿದೆ.

ಅಂದರೆ ಇಲ್ಲಿ ಇಂಗ್ಲೆಂಡ್ ಹಾಗೂ ಶ್ರೀಲಂಕಾ ತಂಡಗಳು 6 ಅಂಕಗಳನ್ನು ಕಲೆಹಾಕಿದರೆ ಮಾತ್ರ ನೇರವಾಗಿ ಸೆಮಿಫೈನಲ್​ಗೇರಬಹುದು. ಅದೇ ಮೊದಲ ಪಂದ್ಯದ ರದ್ದತಿಯಿಂದಾಗಿ ನ್ಯೂಝಿಲೆಂಡ್ ಮತ್ತು ಪಾಕಿಸ್ತಾನ್ ಮುಂದಿನ ಎರಡು ಮ್ಯಾಚ್​ಗಳಲ್ಲಿ ಗೆಲುವು ದಾಖಲಿಸಿದರೆ 5 ಅಂಕಗಳೊಂದಿಗೆ ಸೆಮಿಫೈನಲ್​ ಆಡುವುದನ್ನು ಖಚಿತಪಡಿಸಿಕೊಳ್ಳಬಹುದು.

ಒಂದು ವೇಳೆ ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ಮುಂದಿನ 2 ಪಂದ್ಯಗಳಲ್ಲಿ ಒಂದರಲ್ಲಿ ಸೋತರೆ ಶ್ರೀಲಂಕಾ ಮತ್ತು ಇಂಗ್ಲೆಂಡ್​ಗೆ 4 ಅಂಕಗಳೊಂದಿಗೆ ಸೆಮಿಫೈನಲ್​ಗೇರುವ ಅವಕಾಶ ದೊರೆಯಲಿದೆ.

ಆದರೆ ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಶ್ರೀಲಂಕಾ ಮತ್ತು ಇಂಗ್ಲೆಂಡ್ ಮುಖಾಮುಖಿಯಲ್ಲಿ ಒಂದು ಟೀಮ್ ಸೋಲುತ್ತೆ ಎಂಬುದು. ಇದರಿಂದ ಈ ಎರಡು ಟೀಮ್​ಗಳಲ್ಲಿ ಒಂದು ತಂಡಕ್ಕೆ ಕೇವಲ 4 ಅಂಕಗಳನ್ನು ಮಾತ್ರ ಸಾಧಿಸಲು ಸಾಧ್ಯವಾಗಲಿದೆ.

ಇನ್ನೂ ಸರಳವಾಗಿ ಹೇಳಬೇಕೆಂದರೆ ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ ಗೆದ್ದು, ಇಂಗ್ಲೆಂಡ್ ವಿರುದ್ಧ ನ್ಯೂಝಿಲೆಂಡ್ ಗೆದ್ದರೆ ಪಾಕಿಸ್ತಾನ್ ತಂಡವು ಮುಂದಿನ 2 ಪಂದ್ಯಗಳಲ್ಲಿ ಜಯ ಸಾಧಿಸಿ ಸೆಮಿಫೈನಲ್​ ಅನ್ನು ಖಚಿತಪಡಿಸಿಕೊಳ್ಳಬಹುದು. ಏಕೆಂದರೆ ಇಂಗ್ಲೆಂಡ್ ಮತ್ತು ಶ್ರೀಲಂಕಾ ಒಂದೊಂದು ಪಂದ್ಯಗಳನ್ನು ಸೋತರೆ ಉಳಿದ 2 ಮ್ಯಾಚ್​ಗಳ ಮೂಲಕ ಕೇವಲ 4 ಅಂಕಗಳನ್ನು ಮಾತ್ತ ಪಡೆಯಬಹುದು.

ಇದನ್ನೂ ಓದಿ: ಸ್ಮೃತಿ ಮಂಧಾನ ಆರ್ಭಟಕ್ಕೆ ಬಾಬರ್ ಆಝಂ ವಿಶ್ವ ದಾಖಲೆಯೇ ಶೇಕಿಂಗ್

ಇತ್ತ ಮುಂದಿನ ಎರಡು ಪಂದ್ಯಗಳಲ್ಲೂ ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್​ಗಳು ಜಯ ಸಾಧಿಸಿದರೆ ಒಟ್ಟು 5 ಅಂಕಗಳನ್ನು ಪಡೆಯುವ ಮೂಲಕ ಶ್ರೀಲಂಕಾ ಮತ್ತು ಇಂಗ್ಲೆಂಡ್ ತಂಡಗಳನ್ನು ಹಿಂದಿಕ್ಕಿ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ಮೂಲಕ ಸೆಮಿಫೈನಲ್​ಗೆ ಎಂಟ್ರಿ ಕೊಡಬಹುದು.

Source link

ಮತ್ತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಗಿಲ್ಲಿ ನಟ, ಅಶ್ವಿನಿ ಗೌಡ – Kannada News | Gilli Nata and Ashwini Gowda attend Hayagrriva movie trailer launch event

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ಶೋ ಮುಗಿದು ಹಲವು ದಿನಗಳು ಕಳೆದಿದ್ದರೂ ಕೂಡ ಸ್ಪರ್ಧಿಗಳ ಹವಾ ಕಡಿಮೆ ಆಗಿಲ್ಲ. ಹಲವು ಕಾರ್ಯಕ್ರಮಗಳಿಗೆ ಅವರು ಅತಿಥಿಗಳಾಗಿ ತೆರಳುತ್ತಿದ್ದಾರೆ. ಮಂಡ್ಯದಲ್ಲಿ ‘ಹಯಗ್ರೀವ’ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮ ನಡೆದಿದೆ. ಆ ವೇದಿಕೆಯಲ್ಲಿ ಅಶ್ವಿನಿ ಗೌಡ (Ashwini Gowda) ಮತ್ತು ಗಿಲ್ಲಿ ನಟ ಅವರ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ‘ಈಗ ನಮ್ಮ ಅತ್ತೆ ಮಗಳು ಮಾತಾಡುತ್ತಾರೆ’ ಎಂದು ಗಿಲ್ಲಿ ನಟ ಅವರು ಅಶ್ವಿನಿಯ ಕಾಲೆಳೆದರು. ‘ಬಿಗ್ ಬಾಸ್ ಬಳಿಕ ಮೊದಲ ಬಾರಿ ಮಾವನ ಮಗನ ಜೊತೆ ವೇದಿಕೆ ಹಂಚಿಕೊಳ್ಳುತ್ತಾ ಇದ್ದೇನೆ. ಖುಷಿ ಆಗುತ್ತಿದೆ. ಹಯಗ್ರೀವ ಸಿನಿಮಾಗೆ ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಇರಲಿ’ ಎಂದು ಅಶ್ವಿನಿ ಗೌಡ ಅವರು ಹೇಳಿದರು. ಮಂಡ್ಯ ಜನರ ಪ್ರೀತಿಗೆ ಗಿಲ್ಲಿ ನಟ (Gilli Nata) ಅವರು ಧನ್ಯವಾದ ತಿಳಿಸಿದರು. ಟ್ರೇಲರ್ ಬಿಡುಗಡೆ ಕಾರ್ಯಕ್ರಮದ ವೇಳೆ ಮಳೆ ಬಂದಿದ್ದು, ಅದನ್ನು ಶುಭ ಸೂಚನೆ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಶಿವಮೊಗ್ಗದಲ್ಲಿ ಕುಸಿಯುತ್ತಲೇ ಇದೆ ವಾಯುಗುಣಮಟ್ಟ! – Kannada News | Bangalore Air Pollution Crisis: Shivamogga’s Air quality is getting worse

ಶಿವಮೊಗ್ಗದಲ್ಲಿ ಕುಸಿಯುತ್ತಲೇ ಇದೆ ವಾಯುಗುಣಮಟ್ಟ!

ಬೆಂಗಳೂರು, ಫೆಬ್ರವರಿ 22: ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಶಿವಮೊಗ್ಗ, ಮಂಗಳೂರು ಮತ್ತು ಉಡುಪಿಯ ವಾಯು ಗುಣಮಟ್ಟವೂ (Bengaluru Air Quality) ಹದಗೆಟ್ಟಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ನಗರಗಳ ಗಾಳಿಯ ಗುಣಮಟ್ಟ, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಇಂದೂ ಸಹ ಹಲವೆಡೆ ಕಳಪೆ ಏರ್ ಕ್ವಾಲಿಟಿ ದಾಖಲಾಗಿದ್ದು, ಶಿವಮೊಗ್ಗದ AQI ಇನ್ನಷ್ಟು ಹದಗೆಟ್ಟಿದೆ.

ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 125ಕ್ಕೆ ತಲುಪಿದೆ. ಅದಕ್ಕಿಂತ ಹೆಚ್ಚಾಗಿ ಶಿವಮೊಗ್ಗದ ಏರ್ ಕ್ವಾಲಿಟಿ 176 ಆಗಿದೆ. ಹಲವು ದಿನಗಳಿಂದ ವಿಪರೀತ ಏರಿಕೆ ಕಾಣುತ್ತಿರುವ ಶಿವಮೊಗ್ಗದ ಏರ್ ಕ್ವಾಲಿಟಿ ಇಂದು 200ರ ಗಡಿ ತಲುಪಿರುವುದು ಆತಂಕಕಾರಿಯಾಗಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –125
  • ಮಂಗಳೂರು-150
  • ಮೈಸೂರು –137
  • ಬೆಳಗಾವಿ – 157
  • ಕಲಬುರ್ಗಿ-126
  • ಶಿವಮೊಗ್ಗ – 176
  • ಬಳ್ಳಾರಿ – 114
  • ಹುಬ್ಬಳ್ಳಿ- 151
  • ಉಡುಪಿ –150
  • ವಿಜಯಪುರ –121

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸ್ಮೃತಿ ಮಂಧಾನ ಆರ್ಭಟಕ್ಕೆ ಬಾಬರ್ ಆಝಂ ವಿಶ್ವ ದಾಖಲೆಯೇ ಶೇಕಿಂಗ್ – Kannada News | Smriti Mandhana is rapidly closing the gap on Babar Azam’s total T20I runs

ಇದೀಗ ಸ್ಮೃತಿ ಮಂಧಾನ ಅವರ ಮುಂದಿರುವುದು ಪಾಕಿಸ್ತಾನದ ಬಾಬರ್ ಆಝಂ. ಅಂದರೆ ಪುರುಷರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್​ಗಳಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಬಾಬರ್ ಅಗ್ರಸ್ಥಾನದಲ್ಲಿದ್ದು, ಈವರೆಗೆ 135 ಇನಿಂಗ್ಸ್​ಗಳ ಮೂಲಕ 4571 ರನ್​ ಕಲೆಹಾಕಿದ್ದಾರೆ.

Source link