All posts by nagaraj11081993

ಚಾಕೋಲೇಟ್ ಆಸೆ ತೋರಿಸಿ ರೈಲ್ವೆ ಸ್ಟೇಷನ್​​ನಲ್ಲೇ 4 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ – Kannada News | Man lures 4 year old Child with chocolates rapes her at Pune Railway station

ಪುಣೆ, ಫೆಬ್ರವರಿ, 21: ಪುಣೆಯಲ್ಲಿ 4 ವರ್ಷದ ಬಾಲಕಿಯ ಮೇಲೆ ಪುಣೆ ರೈಲು ನಿಲ್ದಾಣದ ಆವರಣದಲ್ಲಿ ಅತ್ಯಾಚಾರ ನಡೆಸಲಾಗಿದೆ. 25 ವರ್ಷದ ಆರೋಪಿಯು ಆ ಮಗುವಿಗೆ ಚಾಕೊಲೇಟ್ ಮತ್ತು ಬಿಸ್ಕತ್ತುಗಳನ್ನು ಕೊಡಿಸುವ ಆಸೆ ತೋರಿಸಿ, ಆಕೆಯನ್ನು ರೈಲ್ವೆ ನಿಲ್ದಾಣದ ಬದಿಗೆ ಕರೆದುಕೊಂಡು ಹೋಗಿ ಅಲ್ಲೇ ಅತ್ಯಾಚಾರ (Child Harassment) ನಡೆಸಿದ್ದಾನೆ. ಮಧ್ಯಪ್ರದೇಶದ ಕೂಲಿ ಕಾರ್ಮಿಕರ ಮಗಳಾದ ಆ ಬಾಲಕಿ ತನ್ನ ತಂದೆಯ ಜೊತೆ ನಿನ್ನೆ ರಾತ್ರಿ ರೈಲಿಗಾಗಿ ಕಾಯುತ್ತಿದ್ದಾಗ ಈ ಘಟನೆ ನಡೆದಿದೆ. ಪ್ಲಾಟ್​​ಫಾರ್ಮ್​ನಲ್ಲೇ ಕುಳಿತು ಊಟ ಮಾಡಿದ್ದ ಅಪ್ಪ-ಮಗಳು ರೈಲಿಗಾಗಿ ಕಾಯುತ್ತಿದ್ದರು. ಆಗ ಅಪ್ಪ ಟಾಯ್ಲೆಟ್​​ಗೆ ಹೋಗಿ ಬರುವಾಗ ಮಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿತು. ಮಗಳು ಎಲ್ಲೂ ಕಾಣದಿದ್ದಾಗ ಇಂದು ಬೆಳಗಿನ ಜಾವ 3 ಗಂಟೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪೊಲೀಸರು ರೈಲ್ವೆ ನಿಲ್ದಾಣದ ಸಿಸಿಟಿವಿ ಪರಿಶೀಲಿಸಿದಾಗ ಒಬ್ಬ ವ್ಯಕ್ತಿ ಆ ಬಾಲಕಿಯನ್ನು ಕರೆದುಕೊಂಡು ಹೋಗುತ್ತಿರುವುದು ರೆಕಾರ್ಡ್ ಆಗಿತ್ತು. ಆಕೆ ಆತನ ಕೈ ಹಿಡಿದುಕೊಂಡು ಹೋಗುತ್ತಿದ್ದಳು. ಆದರೆ, ಆತ ಯಾರೆಂದು ಆ ಮಗುವಿನ ಅಪ್ಪ-ಅಮ್ಮನಿಗೆ ಗೊತ್ತಿರಲಿಲ್ಲ. ಕೊನೆಗೂ ಆಕೆ ಸಿಕ್ಕಿದ್ದು, ಆಕೆಯ ಮೇಲೆ ಅತ್ಯಾಚಾರ ನಡೆಸಿರುವುದು ಗೊತ್ತಾಗುತ್ತಿದ್ದಂತೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: 3 ವರ್ಷದ ಮಗುವಿನ ಮೇಲೆ ಅಪ್ಪನ ಗೆಳೆಯನಿಂದಲೇ ಅತ್ಯಾಚಾರ

ಆರೋಪಿಯು ಬಾಲಕಿಯನ್ನು ರೈಲ್ವೆ ನಿಲ್ದಾಣದ ಆವರಣದೊಳಗಿನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಮಗು ನೀಡಿದ ವಿವರಣೆಯ ಮೇರೆಗೆ ತನಿಖೆ ಆರಂಭಿಸಿದ ಪೊಲೀಸರು ತನಿಖೆ ಆರಂಭಿಸಿ ಆರೋಪಿಯನ್ನು ಗುರುತಿಸಿದರು. ಪೊಲೀಸರು ಈ ಘಟನೆ ನಡೆದ 4 ಗಂಟೆಗಳಲ್ಲಿ ಆತನನ್ನು ಬಂಧಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪತ್ನಿಗೆ ಪಕ್ಕದ ಮನೆಯ ವ್ಯಕ್ತಿಯ ಜತೆ ಅಕ್ರಮ ಸಂಬಂಧ: ಮರ್ಯಾದೆ ಹೋಯಿತು ಎಂದು ಪತಿ ಆತ್ಮಹತ್ಯೆ! – Kannada News | Karnataka Suicides: Police Harassment and False Complaints Spark Tragedies

ಚಿಕ್ಕಮಗಳೂರು, ಫೆ.21: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ನೆನ್ನೆ ಪೊಲೀಸ್ ಕಿರುಕುಳಕ್ಕೆ ವಿಧವೆ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವಂತಹ ಘಟನೆ ನಡೆದಿತ್ತು. ಇದೀಗ ಇಂತಹದೇ ಮತ್ತೊಂದು ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಏಳು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯ ಅಕ್ರಮ ಸಂಬಂಧ ಮತ್ತು ಆಕೆ ತನ್ನ ವಿರುದ್ಧವೇ ನೀಡಿದ ಸುಳ್ಳು ದೂರಿನಿಂದ ಮನನೊಂದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವೃತ್ತಿಯಲ್ಲಿ ಚಾಲಕನಾಗಿದ್ದ ಮನು, ಸಖರಾಯಪಟ್ಟಣ ಮೂಲದ ಹರಿಣಿ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದನು. ದಾಂಪತ್ಯ ಜೀವನ ಸುಗಮವಾಗಿಯೇ ಸಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಪತ್ನಿ ಹರಿಣಿಗೆ ಪಕ್ಕದ ಮನೆಯ ಅಶೋಕ್ ಎಂಬಾತನ ಜೊತೆ ಸಲುಗೆ ಬೆಳೆದಿತ್ತು.

ಕಳೆದ ರಾತ್ರಿ ಮನು ತನ್ನ ಪತ್ನಿಯ ಮೊಬೈಲ್‌ನಲ್ಲಿ ಅಶೋಕ್ ಕಳುಹಿಸಿದ್ದ ಸಂದೇಶಗಳನ್ನು ನೋಡಿದ್ದನು. ಇದೇ ವಿಚಾರವಾಗಿ ಮನು ಮತ್ತು ಅಶೋಕ್ ನಡುವೆ ತೀವ್ರ ಗಲಾಟೆ ನಡೆದಿದೆ. ಈ ವೇಳೆ ಅಶೋಕ್, “ನಿನ್ನ ಹೆಂಡತಿ ಜೊತೆ ನನಗೆ ಸಂಬಂಧ ಇರುವುದು ನಿಜ” ಎಂದು ಹೇಳಿ ಮನುಗೆ ಅವಮಾನ ಮಾಡಿದ್ದಾನೆ ಎನ್ನಲಾಗಿದೆ. ಈ ಗಲಾಟೆಯ ಬೆನ್ನಲ್ಲೇ ಪತ್ನಿ ಹರಿಣಿ, ಗಂಡ ಮನು ವಿರುದ್ಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಗಂಡ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆಕೆ ದೂರಿನಲ್ಲಿ ಉಲ್ಲೇಖಿಸಿದ್ದಳು. ಪೊಲೀಸರು ವಿಚಾರಣೆಗೆ ಕರೆದಾಗ, ಇಡೀ ಊರಿನ ಮುಂದೆ ತನ್ನ ಮರ್ಯಾದೆ ಹೋಯಿತು ಎಂದು ಮನು ತೀವ್ರವಾಗಿ ನೊಂದಿದ್ದನು.

ಇದನ್ನೂ ಓದಿ: ಪೊಲೀಸಪ್ಪನ ಕಾಟಕ್ಕೆ ವಿಧವೆ ಮಹಿಳೆ ಆತ್ಮಹತ್ಯೆ: ವಾಟ್ಸಾಪ್​​ನಲ್ಲಿದ್ದ ಡೆತ್​ನೋಟ್​​​ನಲ್ಲಿ ಏನಿದೆ?

ಮರ್ಯಾದೆಗೆ ಹೆದರಿದ ಮನು ಅಂತಿಮವಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ. “ನನ್ನ ಮಗನ ಸಾವಿಗೆ ಆತನ ಪತ್ನಿ ಹರಿಣಿ ಮತ್ತು ಅಶೋಕ್ ಅವರೇ ನೇರ ಕಾರಣ. ಅವರಿಬ್ಬರ ಅಕ್ರಮ ಸಂಬಂಧವೇ ಈ ದುರಂತಕ್ಕೆ ನಾಂದಿ ಹಾಡಿದೆ” ಎಂದು ಮನುವಿನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಪೋಷಕರ ದೂರಿನ ಮೇರೆಗೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:08 pm, Sat, 21 February 26

Source link

IND vs SA: ಮಳೆಯಿಂದ ಮೊದಲ ಸೂಪರ್ 8 ಪಂದ್ಯ ರದ್ದು; ಭಾರತ- ಆಫ್ರಿಕಾ ಪಂದ್ಯಕ್ಕೂ ಮಳೆ ಅಡ್ಡಿ? – Kannada News | India vs SA T20 World Cup Super 8: Ahmedabad Weather and Pitch Report for Crucial Match

2026 ರ ಟಿ20 ವಿಶ್ವಕಪ್‌ನ ಸೂಪರ್ 8 (T20 World Cup Super 8) ಸುತ್ತು ನಿರೀಕ್ಷೆಯಂತೆ ಆರಂಭವಾಗಿಲ್ಲ. ಇಂದು ನಡೆಯಬೇಕಿದ್ದ ಮೊದಲ ಸೂಪರ್ 8 ಪಂದ್ಯ ಮಳೆಯಿಂದ ರದ್ದಾಗಿದೆ. ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಿನ ಸೂಪರ್ 8 ಪಂದ್ಯ ಮಳೆಯಿಂದಾಗಿ ಟಾಸ್ ನಡೆದ ಬಳಿಕ ಒಂದೇ ಒಂದು ಎಸೆತವನ್ನು ಎಸೆಯಲು ಸಾಧ್ಯವಾಗದೆ ರದ್ದಾಯಿತು. ಹೀಗಾಗಿ ಮುಂದಿನ ಪಂದ್ಯಕ್ಕೂ ಮಳೆ ಅಡ್ಡಿಪಡಿಸುತ್ತಾ ಎಂಬ ಆತಂಕ ಅಭಿಮಾನಿಗಳ ಮನದಲ್ಲಿ ಮೂಡಿದೆ. ಈ ಸುತ್ತಿನ ಎರಡನೇ ಪಂದ್ಯ ಶ್ರೀಲಂಕಾ ಹಾಗೂ ಇಂಗ್ಲೆಂಡ್ ನಡುವೆ ನಡೆದರೆ, ಅದೇ ದಿನ ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವೆಯೂ ಪಂದ್ಯ ನಡೆಯಲಿದೆ. ಹೀಗಾಗಿ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಆತಂಕದಲ್ಲಿ ಅಭಿಮಾನಿಗಳಿದ್ದಾರೆ.

ಭಾರತ-ದಕ್ಷಿಣ ಆಫ್ರಿಕಾ ನಡುವಿನ ಸೂಪರ್ 8 ಪಂದ್ಯ ಫೆಬ್ರವರಿ 22 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಸೆಮಿಫೈನಲ್ ದೃಷ್ಟಿಯಿಂದ ಈ ಪಂದ್ಯ ಎರಡೂ ತಂಡಗಳಿಗೆ ಮುಖ್ಯವಾಗಿದೆ. ಏಕೆಂದರೆ ಈ ಸುತ್ತಿನ ಪ್ರತಿ ಗೆಲುವು ತಂಡವನ್ನು ಸೆಮಿಫೈನಲ್‌ಗೆ ಕರೆದೊಯ್ಯುತ್ತದೆ. ಆದ್ದರಿಂದ, ಎರಡೂ ತಂಡಗಳು ಗೆಲುವಿಗಾಗಿ ಹೋರಾಡಲಿವೆ. ಹೀಗಾಗಿ ಈ ಪಂದ್ಯಕ್ಕೂ ಮುನ್ನ ಮೋದಿ ಮೈದಾನದ ಪಿಚ್ ಹೇಗಿರಲಿದೆ? ಈ ಪಂದ್ಯಕ್ಕೂ ಮಳೆ ಅಡ್ಡಿಪಡಿಸುತ್ತಾ ಎಂಬುದನ್ನು ನೋಡುವುದಾದರೆ..

ಹವಾಮಾನ ಹೇಗಿರುತ್ತದೆ?

ಅಹಮದಾಬಾದ್‌ನಲ್ಲಿ ಆಕಾಶವು ಶುಭ್ರವಾಗಿರುತ್ತದೆ, ಆದ್ದರಿಂದ ಮಳೆ ಬರುವ ಸಾಧ್ಯತೆ ಇಲ್ಲ. ಅಂದರೆ ಈ ಪಂದ್ಯವು ಯಾವುದೇ ಅಡೆತಡೆಯಿಲ್ಲದೆ ನಡೆಯಲಿದೆ. ಟಾಸ್ ಸಂಜೆ 6.30 ಕ್ಕೆ ಭಾರತೀಯ ಕಾಲಮಾನ ಮತ್ತು ಪಂದ್ಯ ಸಂಜೆ 7 ಗಂಟೆಗೆ ಪ್ರಾರಂಭವಾಗುತ್ತದೆ. ಮೈದಾನ ಮತ್ತು ಸುತ್ತಮುತ್ತಲಿನ ತಾಪಮಾನವು 24 ರಿಂದ 29 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆರ್ದ್ರತೆಯು ಶೇಕಡಾ 40 ಕ್ಕಿಂತ ಹೆಚ್ಚಿರುವ ಸಾಧ್ಯತೆಯಿದೆ. ಒಟ್ಟಾರೆಯಾಗಿ, ಇದು ಆಟಕ್ಕೆ ಉತ್ತಮ ವಾತಾವರಣವಾಗಿದೆ.

IND vs SA: ಭಾರತ- ಆಫ್ರಿಕಾ ನಡುವಿನ ಸೂಪರ್ 8 ಪಂದ್ಯ ಯಾವಾಗ ಎಲ್ಲಿ ಎಷ್ಟು ಗಂಟೆಗೆ ಆರಂಭ?

ಅಹಮದಾಬಾದ್‌ ಪಿಚ್ ಹೇಗಿದೆ?

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿರುವ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾಗಿದೆ. ಮೈದಾನ ದೊಡ್ಡದಾಗಿರುವುದರಿಂದ, ಬ್ಯಾಟ್ಸ್‌ಮನ್‌ಗಳಿಗೆ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಸಿಡಿಸುವುದು ಸುಲಭವಾಗುತ್ತದೆ. ಆದ್ದರಿಂದ, ಟಾಸ್ ಗೆದ್ದ ನಂತರ, ಮೊದಲು ಬೌಲಿಂಗ್‌ಗೆ ಆದ್ಯತೆ ನೀಡಲಾಗುವುದು. ಮೊದಲ ಇನ್ನಿಂಗ್ಸ್ ಅನ್ನು ಕಡಿಮೆ ರನ್‌ಗಳಿಗೆ ಸೀಮಿತಗೊಳಿಸುವ ಮೂಲಕ ಎರಡನೇ ಇನ್ನಿಂಗ್ಸ್‌ನಲ್ಲಿ ರನ್‌ಗಳನ್ನು ಬೆನ್ನಟ್ಟುವುದು ಸುಲಭವಾಗುತ್ತದೆ. ಇಬ್ಬನಿ ಅಂಶದಿಂದಾಗಿ, ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲರ್‌ಗಳು ಬೌಲಿಂಗ್ ಮಾಡುವುದು ಸುಲಭವಲ್ಲ. ಆದ್ದರಿಂದ, ಟಾಸ್ ನಿರ್ಧಾರವು ಅಷ್ಟೇ ಮುಖ್ಯವಾಗಿರುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs SA: ಭಾರತ- ಆಫ್ರಿಕಾ ನಡುವೆ ಸೂಪರ್ 8 ಫೈಟ್; ಮುಖಾಮುಖಿ ದಾಖಲೆ ಹೇಗಿದೆ? – Kannada News | India vs South Africa: T20 World Cup Super 8 Clash & Dominant Head to Head Record

2026 ರ ಟಿ20 ವಿಶ್ವಕಪ್​ನ (T20 World Cup 2026) ಗುಂಪು ಹಂತದಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಆತಿಥೇಯ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿ ಆಡಿದ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡಿತು. ಮೊದಲು ಸುತ್ತಿನಲ್ಲಿ ಯುಎಸ್ಎ, ನಮೀಬಿಯಾ, ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ತಂಡಗಳು ಸೋಲಿಸುವ ಮೂಲಕ ಭಾರತ ತಂಡ 4 ಸೂಪರ್ 8 ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ಈಗ ಟೀಂ ಇಂಡಿಯಾ ವಿಶ್ವಕಪ್ ಟ್ರೋಫಿಯತ್ತ ಒಂದು ಹೆಜ್ಜೆ ಮುಂದಿಡಲು ಸಿದ್ಧವಾಗಿದ್ದು, ಸೂಪರ್ 8 ಅಭಿಯಾನದ ತನ್ನ ಮೊದಲ ಪಂದ್ಯವನ್ನು ಆಡಲು ಸಜ್ಜಾಗಿದೆ. ಈ ಸುತ್ತಿನಲ್ಲಿ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ (India vs South Africa) ತಂಡವನ್ನು ಎದುರಿಸಲಿದೆ. ಈ ಪಂದ್ಯ ಫೆಬ್ರವರಿ 22 ರಂದು ನಡೆಯಲಿದೆ. ಆದರೆ ಆ ಪಂದ್ಯಕ್ಕೂ ಮುನ್ನ ಟಿ20ವಿಶ್ವಕಪ್ ಮತ್ತು ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಪ್ರದರ್ಶನ ಹೇಗಿದೆ ಎಂಬುದನ್ನು ನೋಡೋಣ.

ಸೂಪರ್ 8 ಸುತ್ತಿನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾಕ್ಕೆ ಇದು ಮೊದಲ ಪಂದ್ಯವಾಗಲಿದೆ. ಈ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಲ್ಲದೆ, ಎರಡೂ ತಂಡಗಳು ಗುಂಪು ಹಂತದಲ್ಲಿ ಅಜೇಯವಾಗಿ ಉಳಿದಿವೆ. ಆದ್ದರಿಂದ, ಭಾನುವಾರ ಎರಡು ತಂಡಗಳಲ್ಲಿ ಒಂದು ತಂಡವು ತನ್ನ ಗೆಲುವಿನ ಓಟಕ್ಕೆ ಬ್ರೇಕ್ ಹಾಕುವುದು ಖಚಿತ. ಅಂತಹ ಪರಿಸ್ಥಿತಿಯಲ್ಲಿ, ದಕ್ಷಿಣ ಆಫ್ರಿಕಾ ವಿರುದ್ಧದ ಸೂಪರ್ 8 ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸುವಲ್ಲಿ ಮತ್ತು ಸತತ ಐದನೇ ಪಂದ್ಯವನ್ನು ಗೆಲ್ಲುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗುತ್ತದೆಯೇ? ಎಂಬುದನ್ನು ಕಾದುನೋಡುಬೇಕಿದೆ.

ಟಿ20 ವಿಶ್ವಕಪ್ ಮುಖಾಮುಖಿ

ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿರುವುದು ಇದು ಎಂಟನೇ ಬಾರಿ. ಇಲ್ಲಿಯವರೆಗೆ ಆಡಿರುವ 7 ಪಂದ್ಯಗಳಲ್ಲಿ ಹೆಚ್ಚಿನ ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದಿದೆ. ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 7 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದಿದೆ. ಉಳಿದಂತೆ ದಕ್ಷಿಣ ಆಫ್ರಿಕಾ ಕೇವಲ 2 ಪಂದ್ಯಗಳನ್ನು ಗೆದ್ದಿದೆ.

ಟಿ20 ಕ್ರಿಕೆಟ್​ನಲ್ಲಿ ಮುಖಾಮುಖಿ

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ನಾಳಿನ ಟಿ20 ಪಂದ್ಯ ಉಭಯ ತಂಡಗಳ ನಡುವಿನ 36ನೇ ಪಂದ್ಯವಾಗಿರಲಿದೆ . ಹೆಡ್-ಟು-ಹೆಡ್ ದಾಖಲೆಗಳ ಬಗ್ಗೆ ಹೇಳುವುದಾದರೆ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾದ ಮೇಲೆ ಮೇಲುಗೈ ಸಾಧಿಸಿದೆ. ಇಲ್ಲಿಯವರೆಗೆ ಆಡಿರುವ 35 ಪಂದ್ಯಗಳಲ್ಲಿ, ಭಾರತೀಯ ಕ್ರಿಕೆಟ್ ತಂಡವು 21 ಪಂದ್ಯಗಳನ್ನು ಗೆದ್ದುಕೊಂಡಿದೆ. ಇತ್ತ ದಕ್ಷಿಣ ಆಫ್ರಿಕಾ ತಂಡವು 13 ಪಂದ್ಯಗಳನ್ನು ಮಾತ್ರ ಗೆದ್ದಿದೆ. ಉಳಿದಂತೆ ಒಂದು ಪಂದ್ಯವು ಫಲಿತಾಂಶವಿಲ್ಲದೆ ಕೊನೆಗೊಂಡಿದೆ.

IND vs SA: ಭಾರತ- ಆಫ್ರಿಕಾ ನಡುವಿನ ಸೂಪರ್ 8 ಪಂದ್ಯ ಯಾವಾಗ ಎಲ್ಲಿ ಎಷ್ಟು ಗಂಟೆಗೆ ಆರಂಭ?

ಮೋದಿ ಮೈದಾನದಲ್ಲಿ ಭಾರತದ ದಾಖಲೆ

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಉಭಯ ತಂಡಗಳ ಪಂದ್ಯ ನಡೆಯಲಿದೆ. ಈ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಅಜೇಯವಾಗಿದೆ. ಈ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವಿನ ಏಕೈಕ ಟಿ20 ಪಂದ್ಯವನ್ನು ಆಡಲಾಗಿದೆ. 2025 ರಲ್ಲಿ ಈ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾವನ್ನು 30 ರನ್‌ಗಳಿಂದ ಸುಲಭವಾಗಿ ಸೋಲಿಸಿತ್ತು.

ಭಾರತ ನೀಡಿದ್ದ 232 ರನ್​ಗಳ ಗೆಲುವಿನ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 201 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಆದ್ದರಿಂದ, ಕ್ರಿಕೆಟ್ ಅಭಿಮಾನಿಗಳು ಸೂಪರ್ 8 ಸುತ್ತಿನಲ್ಲಿ ಎರಡೂ ತಂಡಗಳ ನಡುವೆ ಹೈ-ಸ್ಕೋರಿಂಗ್ ಪಂದ್ಯವನ್ನು ನೋಡುವ ಸಾಧ್ಯತೆಯಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದರ್ಶನ್ ಮಾನಸಿಕ ಸ್ಥಿತಿ ಬಗ್ಗೆ ದೊಡ್ಡ ಅಪ್ಡೇಟ್ ಕೊಟ್ಟ ವಿಜಯಲಕ್ಷ್ಮೀ – Kannada News | Vijayalakshmi Confirms Darshan’s Strength: Dispels Rumors, Reassures Fans

ನಟ ದರ್ಶನ್ (Darshan) ಅವರು ಜೈಲಿನಲ್ಲಿ ಮಾನಸಿಕವಾಗಿ ಕುಗ್ಗಿದ್ದಾರೆ ಎಂಬಿತ್ಯಾದಿ ವದಂತಿಗಳು ಈ ಮೊದಲು ಹರಿದಾಡಿದ್ದವು. ಆ ಬಳಿಕ ಮಾತನಾಡಿದ್ದ ವಿಜಯಲಕ್ಷ್ಮೀ ದರ್ಶನ್ ಅವರು, ಇದು ಸುಳ್ಳು ಎಂದು ಸ್ಪಷ್ಟನೆ ಕೊಟ್ಟಿದ್ದರು. ಈಗ ವಿಜಯಲಕ್ಷ್ಮೀ ದರ್ಶನ್ ಅವರು ಮತ್ತೊಮ್ಮೆ ಈ ಬಗ್ಗೆ ಮಾತನಾಡಿದ್ದಾರೆ. ಧನ್ವೀರ್ ನಟನೆಯ ‘ಹಯಗ್ರೀವ’ ಟ್ರೇಲರ್ ಲಾಂಚ್ ಈವೆಂಟ್​​ನಲ್ಲಿ ಅವರು ಮಾತನಾಡಿ, ದರ್ಶನ್ ಫ್ಯಾನ್ಸ್​​ಗೆ ಖುಷಿ ಸುದ್ದಿ ಕೊಟ್ಟಿದ್ದಾರೆ.

ಮಂಡ್ಯದಲ್ಲಿ ‘ಹಯಗ್ರೀವ’ ಟ್ರೇಲರ್ ಲಾಂಚ್ ಈವೆಂಟ್ ನಡೆಯಿತು. ಇದಕ್ಕೆ ವಿಜಯಲಕ್ಷ್ಮೀ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರು ದರ್ಶನ್ ಬಗ್ಗೆ ಅಭಿಮಾನಿಗಳಿಗೆ ಅಪ್​​​ಡೇಟ್ ಕೊಟ್ಟಿದ್ದಾರೆ. ‘ಹಯಗ್ರೀವ ಸಿನಿಮಾದಲ್ಲಿ ನಟಿಸಿರುವ ಧನ್ವೀರ್, ಸಂಜನಾಗೆ ಒಳ್ಳೆದಾಗಲಿ. ಧನ್ವೀರ್ ನಮ್ಮ‌ ಕುಟುಂಬದ ಸದಸ್ಯ. ನಮಗೆ ಪ್ರೀತಿ ತೋರಿಸಿದ ಹಾಗೇ ಧನ್ವೀರ್‌ಗೂ ಪ್ರೀತಿ ತೋರಿಸಿ.ಪೈರಸಿ ಸಪೋರ್ಟ್ ಮಾಡಬೇಡಿ, ಸಿನಿಮಾ ಥಿಯೇಟರಲ್ಲಿ ನೋಡಿ ಎಂಜಾಯ್ ಮಾಡಿ’ ಎಂದು ವಿಜಯಲಕ್ಷ್ಮೀ ಕೋರಿದರು.


ವಿಜಯಲಕ್ಷ್ಮೀ ಅವರು ಸಾರ್ವಜನಿಕವಾಗಿ ಮಾತನಾಡುತ್ತಿದ್ದಾರೆ ಎಂದರೆ ಅವರು ದರ್ಶನ್ ಬಗ್ಗೆ ಮಾತನಾಡಲಿ ಎಂದು ನಿರೀಕ್ಷಿಸೋದು ಸಾಮಾನ್ಯ. ಹೀಗಾಗಿ, ವಿಜಯ​ಲಕ್ಷ್ಮೀ ಅವರು ದರ್ಶನ್ ಬಗ್ಗೆ ಮಾತನಾಡಿದರು. ‘ಡಿ ಬಾಸ್ ಚೆನ್ನಾಗಿದ್ದಾರೆ. ಇಷ್ಟು ಕಷ್ಟದಲ್ಲೂ ತುಂಬಾ ಸ್ಟ್ರಾಂಗ್ ಆಗಿದ್ದಾರೆ. ಅದಕ್ಕೆಲ್ಲಾ ಕಾರಣ ನೀವು, ನಿಮ್ಮಿಂದ ಅವರು ಚೆನ್ನಾಗಿದ್ದಾರೆ’ ಎಂದು ಹೇಳಿದರು. ಅವರು ಸ್ಟ್ರಾಂಗ್ ಆಗಿದ್ದಾರೆ ಎಂಬ ವಿಷಯ ಅಭಿಮಾನಿಗಳಿಗೆ ಖುಷಿ ನೀಡಿದೆ.

ಇದನ್ನೂ ಓದಿ: ‘ಹಯಗ್ರೀವ’ನಾಗಿ ಧನ್ವೀರ್ ಗೌಡ, ಗೌಪ್ಯವಾಗಿರಲಿದೆ ಮತ್ತೊಬ್ಬ ನಾಯಕನ ಹೆಸರು

‘ಹಯಗ್ರೀವ’ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿದೆ. ನಿರಂತರವಾಗಿ ನಡೆಯೋ ಭೀಕರ ಕೊಲೆಯ ಸುತ್ತ ಸಾಗುವ ಕಥೆಯನ್ನು ಇದು ಹೊಂದಿದೆ. ಫೆಬ್ರವರಿ 27ರಂದು ಸಿನಿಮಾ ತೆರೆಗೆ ಬರುತ್ತಿದೆ ಎಂಬುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

BMRCL ಜೊತೆಗೆ ಪ್ರೆಸ್ಟೀಜ್ ಗ್ರೂಪ್ 90 ಕೋಟಿ ಒಪ್ಪಂದ: ಬೆಳ್ಳಂದೂರು ಮೆಟ್ರೋ ಇನ್ಮುಂದೆ ‘ಪ್ರೆಸ್ಟೀಜ್ ಬೆಳ್ಳಂದೂರು ಸ್ಟೇಷನ್’ – Kannada News | Prestige Secures Bellandur Metro Station Naming Rights for 90 Cr; BMRCL Blue Line Deal

ಬಿಎಂಆರ್ಸಿಎಲ್ ಜೊತೆ ಒಪ್ಪಂದ ಮಾಡಿಕೊಂಡ ಪ್ರೆಸ್ಟೀಜ್ ಗ್ರೂಪ್

ಬೆಂಗಳೂರು, ಫೆಬ್ರವರಿ 21: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಇಂದು ಪ್ರೆಸ್ಟೀಜ್ ಬೀಟಾ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ಜೊತೆ ಹಂತ-2ಎ ಹೊರ ವರ್ತುಲ ರಸ್ತೆ (ORR) ಕಾರಿಡಾರ್‌ನ ಬೆಳ್ಳಂದೂರು ಮೆಟ್ರೋ ನಿಲ್ದಾಣದ ನಾಮಕರಣ ಹಕ್ಕುಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದಂತೆ, ವಾಣಿಜ್ಯ ಕಾರ್ಯಾಚರಣೆ ಪ್ರಾರಂಭವಾದ ದಿನಾಂಕದಿಂದ 30 ವರ್ಷಗಳ ಕಾಲ ಈ ನಿಲ್ದಾಣವನ್ನು “ಪ್ರೆಸ್ಟೀಜ್ ಬೆಳ್ಳಂದೂರು ಮೆಟ್ರೋ ನಿಲ್ದಾಣ” ಎಂದು ಕರೆಯಲಾಗುತ್ತದೆ.

90 ಕೋಟಿ ರೂ ವ್ಯವಹಾರ

ಈ ಬಗ್ಗೆ ಬಿಎಂಆರ್​​ಸಿಎಲ್​​ನಿಂದ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ‘ನಾಮಕರಣ ಹಕ್ಕುಗಳು ಮತ್ತು ಇತರೆ ಅನುಕೂಲಗಳಿಗೆ ಸಂಬಂಧಿಸಿದ ಒಪ್ಪಂದದ ಮೌಲ್ಯ 80 ಕೋಟಿ ರೂ ಆಗಿದ್ದು, ಮೆಟ್ರೋ ನಿಲ್ದಾಣದಿಂದ ಅವರ ಆವರಣಕ್ಕೆ ಸಂಪರ್ಕಿಸುವ ವಿಶೇಷ ಪಾದಚಾರಿ ಮೇತುವೆ (ಸೈವಾಕ್) ಆಯ್ಕೆ ಮಾಡಿದಲ್ಲಿ ಹೆಚ್ಚುವರಿ 10 ಕೋಟಿ ರೂ ಪಾವತಿಸಬೇಕಾಗುತ್ತದೆ. ಇದರಿಂದ ಒಟ್ಟು ಸಹಭಾಗಿತ್ವದ ಮೌಲ್ಯ 90 ಕೋಟಿ ರೂ ಆಗುತ್ತದೆ.

ನಮ್ಮ ಮೆಟ್ರೋ ಟ್ವೀಟ್​​

ನಾನ್ ಫೇರ್ ಬಾಕ್ಸ್ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಮೆಟ್ರೋ ಜಾಲದ ಆರ್ಥಿಕ ಸ್ಥಿರತೆಯನ್ನು ಬಲಪಡಿಸುವ ಯೋಜನೆಯ ಭಾಗವಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ವ್ಯವಸ್ಥೆಯ ಭಾಗವಾಗಿ, ಪ್ರಯಾಣಿಕರ ಸೌಕರ್ಯಗಳು ಮತ್ತು ಒಳಾಂಗಣ ಗುಣಮಟ್ಟವನ್ನು ಮೇಲ್ದರ್ಜೆಗೇರಿಸಲು ಬಿಎಂಆರ್​ಸಿಎಲ್ ನೊಂದಿಗೆ ಸಮನ್ವಯದಿಂದ, ನಿಗದಿತ ಸುರಕ್ಷತೆ ಮತ್ತು ವಿನ್ಯಾಸ ಮಾನದಂಡಗಳನ್ನು ಅನುಸರಿಸುವ ಮೂಲಕ ನಿಲ್ದಾಣದ ನಿರ್ವಹಣೆಯ ಜವಾಬ್ದಾರಿಯನ್ನು ಪ್ರೆಸ್ಟೀಜ್ ಗ್ರೂಪ್ ವಹಿಸಿಕೊಳ್ಳಲಿದೆ.

ಇದನ್ನೂ ಓದಿ: Namma Metro: ಹಳಿ ತಪ್ಪಿದ ನಮ್ಮ ಮೆಟ್ರೋ ಡ್ರೈವರ್ಲೆಸ್ ರೈಲು!

ಈ ನಿಲ್ದಾಣವು ನಿಗಮದ ಸ್ವಾಮ್ಯದಲ್ಲಿ ಹಾಗೂ ನಿಯಂತ್ರಣದಲ್ಲಿರುವ ಸಾರ್ವಜನಿಕ ಆಸ್ತಿಯಾಗಿಯೇ ಉಳಿಯುತ್ತದೆ. ಈ ಒಪ್ಪಂದದಲ್ಲಿ ನಿಲ್ದಾಣದ ನಾಮಕರಣ ಹಕ್ಕುಗಳು, ಗರಿಷ್ಠ 1 ಸಾವಿರ ಚದರ ಅಡಿ ಒಳಾಂಗಣ ಜಾಹೀರಾತು ಹಕ್ಕುಗಳು ಹಾಗೂ ನಿಲ್ದಾಣದ ಆವರಣದಲ್ಲಿ 3 ಸಾವಿರ ಚದರ ಅಡಿ ವಾಣಿಜ್ಯ ಸ್ಥಳದ ಹಂಚಿಕೆ ಸೇರಿವೆ.

ನಿಯಂತ್ರಿತ ಅನುಮೋದನೆಗಳು ಮತ್ತು ಹೆಚ್ಚುವರಿ 10 ಕೋಟಿ ರೂ ಪಾವತಿಗೆ ಒಳಪಟ್ಟು, ನಿಲ್ದಾಣವನ್ನು ಸಂಪರ್ಕಿಸುವ ವಿಶೇಷ ಪಾದಚಾರಿ ಮೇಲ್ ಸೇತುವೆಯ ಸಾಧ್ಯತೆಯನ್ನು ಒಪ್ಪಂದವು ಒದಗಿಸಿರುತ್ತದೆ. ಭವಿಷ್ಯದಲ್ಲಿ ಯೋಜನಾ ಹಂತದಲ್ಲಿ ಕಾರ್ಯಸಾಧ್ಯತೆಯನ್ನು ಖಚಿತಪಡಿಸಿಕೊಳ್ಳಲು ಅಂತಹ ಸಂಪರ್ಕಕ್ಕಾಗಿ ವಿನ್ಯಾಸ ನಿಬಂಧನೆಗಳನ್ನು ಸೇರಿಸಲಾಗಿದೆ.

ಸಾರ್ವಜನಿಕ ಮಾಲೀಕತ್ವದ ಸಂಸ್ಥೆ ಯೊಂದಿಗೆ ಖಾಸಗಿ ಭಾಗವಹಿಸುವಿಕೆಯನ್ನು ಬಳಸಿಕೊಳ್ಳುವಲ್ಲಿ ಆಯಾ ಕಾರ್ಯಾಚರಣೆಯ ಸಮಗ್ರತೆಗೆ ಧಕ್ಕೆಯಾಗದಂತೆ ಮೆಟ್ರೋ ಮೂಲಸೌಕರ್ಯವನ್ನು ಹೆಚ್ಚಿಸಲು ಈ ಪಾಲುದಾರಿಕೆಯು ಒಂದು ಮೈಲಿಗಲ್ಲು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.

ಪ್ರೆಸ್ಟೀಜ್ ಗ್ರೂಪ್​​​ನ ಜಗ್ಗಿ ಮರ್ವಾಹಾ ಹೇಳಿದ್ದಿಷ್ಟು 

ಈ ಕುರಿತು ಪ್ರತಿಕ್ರಿಯಿಸಿದ ಪ್ರೆಸ್ಟೀಜ್ ಗ್ರೂಪ್​​​ನ ಜಗ್ಗಿ ಮರ್ವಾಹಾ ಅವರು, ಬೆಂಗಳೂರು ನಗರದ ವೇಗವಾಗಿ ಬೆಳೆಯುತ್ತಿರುವ ಸಾರಿಗೆ-ಆಧಾರಿತ ಅಭಿವೃದ್ಧಿ ವಲಯಗಳಲ್ಲಿ ನಗರ ಚಲನವಲನ ಮೂಲಸೌಕರ್ಯಕ್ಕೆ ಬೆಂಬಲ ನೀಡುವ ಮತ್ತು ಪ್ರಯಾಣಿಕರ ಅನುಭವವನ್ನು ಹೆಚ್ಚಿಸುವ ಸಂಸ್ಥೆಯ ಬದ್ಧತೆಯನ್ನು ಈ ಸಹಕಾರ ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಖಾಲಿ ಟ್ರಂಕ್ ಹಿಡಿದು ಬಂದ ಬಿಜೆಪಿ ಸಂಸದ ತೇಜಸ್ವಿ ಸೂರ್ಯಗೆ ಸಂಕಷ್ಟ

ಬೆಳ್ಳಂದೂರು ಮೆಟ್ರೋ ನಿಲ್ಯಾಣವು ಹೊರ ವರ್ತುಲ ರಸ್ತೆಯ ಕಾರಿಡಾರ್‌ನ ಪ್ರಮುಖ ನಿಲ್ದಾಣವಾಗಿದ್ದು, ಬೆಂಗಳೂರಿನ ಐಟಿ ಮತ್ತು ವಾಣಿಜ್ಯ ಕೇಂದ್ರ ಪ್ರದೇಶಗಳಲ್ಲಿ ಗಣನೀಯ ಪ್ರಮಾಣದ ಪ್ರಯಾಣಿಕರಿಗೆ ಸೇವೆ ಸಲ್ಲಿಸಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸುಪ್ರೀಂ ಕೋರ್ಟ್ ಆದೇಶಕ್ಕೆ ಸೆಡ್ಡು ಹೊಡೆದ ಟ್ರಂಪ್; ಅಮೆರಿಕದ ಸುಂಕ ಮತ್ತೆ ಶೇ. 15ಕ್ಕೆ ಹೆಚ್ಚಳ – Kannada News | Donbald Trump Raises global tariff to 15 percent Calls US supreme Court Ruling Anti American

ವಾಷಿಂಗ್ಟನ್, ಫೆಬ್ರವರಿ 21: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಕ್ಷಣವೇ ಜಾರಿಗೆ ಬರುವಂತೆ ಜಾಗತಿಕ ಸುಂಕವನ್ನು ಶೇ. 10ರಿಂದ ಶೇ. 15ಕ್ಕೆ ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ಡೊನಾಲ್ಡ್ ಟ್ರಂಪ್ ವಿಧಿಸಿದ್ದ ಸುಂಕವನ್ನು ಅಮೆರಿಕದ ಸುಪ್ರೀಂ ಕೋರ್ಟ್​ ರದ್ದುಗೊಳಿಸಿದ ಬೆನ್ನಲ್ಲೇ ಇಂದು ಮತ್ತೆ ಟ್ರಂಪ್ ಹೊಸ ಸುಂಕ ಘೋಷಣೆ ಮಾಡಿದ್ದಾರೆ. “ನಾನು, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಅಧ್ಯಕ್ಷನಾಗಿ, ತಕ್ಷಣವೇ ಜಾರಿಗೆ ಬರುವಂತೆ ಜಗತ್ತಿನ ಎಲ್ಲ ದೇಶಗಳ ಮೇಲಿನ ಶೇ. 10ರಷ್ಟು ಸುಂಕವನ್ನು ಕಾನೂನುಬದ್ಧವಾಗಿಯೇ ಶೇ. 15ಕ್ಕೆ ಹೆಚ್ಚಿಸಿದ್ದೇನೆ” ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಟ್ರಂಪ್ ಘೋಷಣೆ ಮಾಡಿದ್ದಾರೆ.

Published On – 10:28 pm, Sat, 21 February 26

Source link

IND vs SA: ಭಾರತ- ಆಫ್ರಿಕಾ ನಡುವಿನ ಸೂಪರ್ 8 ಪಂದ್ಯ ಯಾವಾಗ ಎಲ್ಲಿ ಎಷ್ಟು ಗಂಟೆಗೆ ಆರಂಭ? – Kannada News | T20 World Cup 2026: India vs SA Super 8 Clash Teams, Live Stream, Match Details

2026 ರ ಟಿ20 ವಿಶ್ವಕಪ್​ನ (T20 World Cup 2026) ಸೂಪರ್ 8 ಸುತ್ತಿಗೆ ಇಂದಿನಿಂದ ಚಾಲನೆ ದೊರೆತಿದೆ. ಸುತ್ತಿನ ಮೊದಲ ಪಂದ್ಯ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವೆ ಇಂದು ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಆದರೆ ಮಳೆಯಿಂದಾಗಿ ಈ ಪಂದ್ಯ ಒಂದು ಎಸೆತವನ್ನು ಕಾಣದೆ ರದ್ದಾಗಿದೆ. ಇದೀಗ ಈ ಸುತ್ತಿನ ಎರಡನೇ ದಿನದ ಎರಡನೇ ಪಂದ್ಯ ಆತಿಥೇಯ ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವೆ ನಡೆಯಲಿದೆ. ಫೆಬ್ರವರಿ 22 ರಂದು ನಡೆಯಲಿರುವ ಈ ಪಂದ್ಯಕ್ಕೆ ಉಭಯ ತಂಡಗಳು ಸಜ್ಜಾಗಿವೆ.

ಅಜೇಯ ತಂಡಗಳ ನಡುವೆ ಪಂದ್ಯ

ಒಂದೆಡೆ ಗುಂಪು ಹಂತದಲ್ಲಿ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಟೀಂ ಇಂಡಿಯಾ, ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದು ಅಜೇಯ ತಂಡವಾಗಿ ಸೂಪರ್ 8 ಸುತ್ತಿಗೆ ಅರ್ಹತೆ ಪಡೆದುಕೊಂಡಿದ್ದರೆ, ಇತ್ತ ದಕ್ಷಿಣ ಆಫ್ರಿಕಾ ಕೂಡ ಒಂದೇ ಒಂದು ಸೋಲನ್ನು ಕಂಡಿಲ್ಲ. ಹೀಗಾಗಿ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಕಾಳಗವನ್ನು ನಿರೀಕ್ಷಿಸಬಹುದಾಗಿದೆ. ಇದರ ಜೊತೆಗೆ ಕಳೆದ ಟಿ20 ವಿಶ್ವಕಪ್​ ಫೈನಲ್​ನಲ್ಲಿ ಇದೇ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಆಫ್ರಿಕಾವನ್ನು ಮಣಿಸಿದ್ದ ಭಾರತ ಚಾಂಪಿಯನ್ ಪಟ್ಟಕ್ಕೇರಿತ್ತು. ಹೀಗಾಗಿ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳುವ ಗುರಿಯಲ್ಲಿ ಆಫ್ರಿಕಾ ತಂಡವಿದ್ದರೆ, ಭಾರತ ತಂಡ ತನ್ನ ಅಜೇಯ ಓಟವನ್ನು ಮುಂದುವರೆಸುವ ಇರಾದೆಯಲ್ಲಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸೂಪರ್ 8 ಪಂದ್ಯ ಯಾವಾಗ ನಡೆಯಲಿದೆ?

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸೂಪರ್ 8 ಪಂದ್ಯ ಫೆಬ್ರವರಿ 22 ರಂದು ನಡೆಯಲಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸೂಪರ್ 8 ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸೂಪರ್ 8 ಪಂದ್ಯ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸೂಪರ್ 8 ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸೂಪರ್ 8 ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸೂಪರ್ 8 ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸೂಪರ್ 8 ಪಂದ್ಯವನ್ನು ನಾವು ಸ್ಟಾರ್ ಸ್ಪೋರ್ಟ್ಸ್​ನ ವಿವಿದ ಚಾನೆಲ್​ಗಳಲ್ಲಿ ವೀಕ್ಷಿಸಬಹುದು. ಹಾಗೆಯೇ ಜಿಯೋ ಹಾಟ್​ಸ್ಟಾರ್​ನಲ್ಲೂ ಪಂದ್ಯವನ್ನು ವೀಕ್ಷಿಸಬಹುದು.

ಉಭಯ ತಂಡಗಳು

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಸರ್ ಪಟೇಲ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಕುಲ್ದೀಪ್ ಯಾದವ್, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಶಿವಂ ದುಬೆ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಅರ್ಶ್ದೀಪ್ ಸಿಂಗ್ ಮತ್ತು ಜಸ್ಪ್ರೀತ್ ಬುಮ್ರಾ.

ದಕ್ಷಿಣ ಆಫ್ರಿಕಾ ತಂಡ: ಐಡೆನ್ ಮಾರ್ಕ್ರಾಮ್ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಯಾನ್ ರಿಕಲ್ಟನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಕೇಶವ್ ಮಹಾರಾಜ್, ಜಾರ್ಜ್ ಲಿಂಡೆ, ಕಾರ್ಬಿನ್ ಬಾಷ್, ಕಗಿಸೊ ರಬಾಡ, ಜೇಸನ್ ಸ್ಮಿತ್, ಅನ್ರಿಚ್ ನೋಕಿಯಾ, ಲುಂಗಿ ಎನ್‌ಗಿಡಿ, ಮಾರ್ಕೊ ಯಾನ್ಸೆನ್, ಟ್ರಿಸ್ಟಾನ್ ಸ್ಟಬ್ಸ್, ಡೆವಾಲ್ಡ್ ಬ್ರೆವಿಸ್ ಮತ್ತು ಕ್ವೆನಾ ಮಫಾಕ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:25 pm, Sat, 21 February 26

Source link

Weekly Love Horoscope: ಫೆ.22ರಿಂದ 28ರವರೆಗೆ ಈ ರಾಶಿಯವರಿಗೆ ದಾಂಪತ್ಯ – ಸ್ನೇಹದಲ್ಲಿ ಏರಿಳಿತ – Kannada News | Feb 22 28 Love Horoscope: Astro Predictions for Your Relationships and Emotional Well being

ಫೆಬ್ರವರಿ 22ರಿಂದ ಫೆಬ್ರವರಿ 28ರ ವರೆಗೆ ಮೂರನೇ ವಾರವಾಗಿದ್ದು ಭಾವನಾತ್ಮಕ ಸಂಬಂಧಕ್ಕೆ ಹೆಚ್ಚು ಪ್ರಭಾವ ಬೀರುವುದಾಗಿದೆ. ಮಾತು ಹಾಗು ವರ್ತನೆಗಳು ಸರಿಯಾಗಿರಲಿ. ಸಹಜತೆಯೂ ಉದ್ದೇಶದಿಂದ ಕೂಡಿರುವ ಶಂಕೆ ಬರಬಹುದು. ಅಲ್ಲಿಯೇ ಬಿರುದುಗಳು ಸರಿಮಾಡಿಕೊಂಡು ಮುಂದುವರಿಯಿರಿ.

ಮೇಷ :

​ಪ್ರೇಮಿಗಳ ನಡುವೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬರಬಹುದು, ಮಾತಿನಲ್ಲಿ ಸಂಯಮವಿರಲಿ. ದಾಂಪತ್ಯ ಜೀವನದಲ್ಲಿ ಮಧುರತೆ ಇರುತ್ತದೆ. ಸಂಗಾತಿಯಿಂದ ಅನಿರೀಕ್ಷಿತ ಉಡುಗೊರೆ ಸಿಗಬಹುದು. ಹಳೆಯ ಸ್ನೇಹಿತರನ್ನು ಭೇಟಿ ಮಾಡುವ ಅವಕಾಶ ಸಿಗಲಿದೆ.

​ವೃಷಭ :

​ಪ್ರೀತಿಯಲ್ಲಿರುವವರಿಗೆ ಇದು ಶುಭ ಕಾಲ. ಹೊಸ ಸಂಬಂಧಗಳು ಚಿಗುರಲಿವೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರುವ ಸಾಧ್ಯತೆ ಇದೆ. ಮನೆಯಲ್ಲಿ ಶುಭ ಕಾರ್ಯದ ಚರ್ಚೆ ನಡೆಯಲಿದೆ. ಸ್ನೇಹಿತರೊಂದಿಗೆ ಪ್ರವಾಸ ಕೈಗೊಳ್ಳುವ ಯೋಜನೆ ರೂಪಿಸುವಿರಿ.

ಮಿಥುನ :

​ನಿಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ. ಪ್ರೇಮ ಜೀವನ ಸುಗಮವಾಗಿರುತ್ತದೆ. ಸಂಗಾತಿಯ ಆರೋಗ್ಯದ ಬಗ್ಗೆ ಗಮನವಿರಲಿ. ಪರಸ್ಪರ ಹೊಂದಾಣಿಕೆ ಅಗತ್ಯ. ಹೊಸ ಗೆಳೆಯರ ಸೇರ್ಪಡೆಯಿಂದ ನಿಮ್ಮ ಸಾಮಾಜಿಕ ವಲಯ ವಿಸ್ತಾರವಾಗಲಿದೆ.

ಕರ್ಕಾಟಕ :

​ಭಾವನಾತ್ಮಕವಾಗಿ ಸ್ವಲ್ಪ ಏರಿಳಿತ ಇರಬಹುದು. ಸಂಗಾತಿಗೆ ಹೆಚ್ಚಿನ ಸಮಯ ನೀಡಿ. ವೈವಾಹಿಕ ಜೀವನದಲ್ಲಿ ನೆಮ್ಮದಿ ಇರಲಿದೆ. ಹಿರಿಯರ ಆಶೀರ್ವಾದ ನಿಮ್ಮ ಮೇಲಿರುತ್ತದೆ. ಕಷ್ಟಕಾಲದಲ್ಲಿ ಗೆಳೆಯರು ನಿಮ್ಮ ಬೆನ್ನಿಗೆ ನಿಲ್ಲಲಿದ್ದಾರೆ.

​ಸಿಂಹ :

​ನಿಮ್ಮ ಆಕರ್ಷಣೆ ಹೆಚ್ಚಾಗಲಿದೆ. ಪ್ರೇಮ ಪ್ರಸ್ತಾಪ ಮಾಡಲು ಇದು ಸೂಕ್ತ ಸಮಯ. ಸಂಗಾತಿಯೊಂದಿಗೆ ಸಣ್ಣ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಸಂಬಂಧ ಗಟ್ಟಿಯಾಗಲಿದೆ. ಸ್ನೇಹಿತರೊಂದಿಗೆ ವಿನೋದಮಯ ಕ್ಷಣಗಳನ್ನು ಕಳೆಯುವಿರಿ.


ಕನ್ಯಾ :

​ಪ್ರೀತಿಯಲ್ಲಿ ಪ್ರಾಮಾಣಿಕತೆ ಮುಖ್ಯ. ಸುಳ್ಳು ಹೇಳುವುದನ್ನು ತಪ್ಪಿಸಿ. ದಾಂಪತ್ಯದಲ್ಲಿ ಹೊಂದಾಣಿಕೆ ಕಂಡುಬರುತ್ತದೆ. ಮನೆ ಕೆಲಸಗಳಲ್ಲಿ ಸಂಗಾತಿ ಸಹಾಯ ಮಾಡುತ್ತಾರೆ. ತಪ್ಪು ತಿಳುವಳಿಕೆಯಿಂದ ದೂರವಿರಿ, ಸ್ನೇಹಿತರ ಮಾತುಗಳಿಗೆ ಕಿವಿಗೊಡಿ.


ತುಲಾ :

​ಪ್ರೇಮ ಜೀವನದಲ್ಲಿ ರೋಮಾಂಚನವಿರಲಿದೆ. ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯುವಿರಿ. ವಿವಾಹ ಸಂಬಂಧಿ ಮಾತುಕತೆಗಳು ಯಶಸ್ವಿಯಾಗುತ್ತವೆ. ಹಳೆಯ ಗೆಳೆಯರೊಂದಿಗೆ ಮನಸ್ತಾಪವಿದ್ದರೆ ಅದು ಈ ವಾರ ಬಗೆಹರಿಯಲಿದೆ.

ವೃಶ್ಚಿಕ :

​ಪ್ರೀತಿಯ ವಿಚಾರದಲ್ಲಿ ಆತುರದ ನಿರ್ಧಾರ ಬೇಡ. ತಾಳ್ಮೆಯಿಂದಿರಿ. ಸಂಗಾತಿಯ ಮೇಲೆ ಅನಗತ್ಯ ಸಂಶಯ ಬೇಡ. ವಿಶ್ವಾಸವೇ ಸಂಬಂಧದ ಅಡಿಪಾಯ. ಹೊಸ ಗೆಳೆಯರಿಂದ ಆರ್ಥಿಕವಾಗಿ ಅಥವಾ ವೃತ್ತಿಪರವಾಗಿ ಸಹಾಯ ಸಿಗಬಹುದು.

ಧನು :

ಪ್ರೇಮಿಗಳ ನಡುವೆ ಮಧುರ ಬಾಂಧವ್ಯ ಇರಲಿದೆ. ಪರಸ್ಪರ ಗೌರವ ಹೆಚ್ಚಾಗುತ್ತದೆ. ಅವಿವಾಹಿತರಿಗೆ ಉತ್ತಮ ಸಂಬಂಧಗಳು ಹುಡುಕಿಕೊಂಡು ಬರುತ್ತವೆ. ಸೃಜನಾತ್ಮಕ ಕೆಲಸಗಳಲ್ಲಿ ಗೆಳೆಯರು ಪ್ರೋತ್ಸಾಹ ನೀಡಲಿದ್ದಾರೆ.

ಮಕರ ;

​ಕೆಲಸದ ಒತ್ತಡದಿಂದ ಪ್ರೇಮ ಜೀವನಕ್ಕೆ ಸಮಯ ನೀಡುವುದು ಕಷ್ಟವಾಗಬಹುದು. ಕುಟುಂಬ ಸದಸ್ಯರ ಹಸ್ತಕ್ಷೇಪದಿಂದ ಸಣ್ಣ ಅಸಮಾಧಾನ ಮೂಡಬಹುದು, ಎಚ್ಚರಿಕೆ ಇರಲಿ. ಆತ್ಮೀಯ ಗೆಳೆಯರೊಂದಿಗೆ ನಿಮ್ಮ ಗುಟ್ಟುಗಳನ್ನು ಹಂಚಿಕೊಳ್ಳುವಿರಿ.

ಕುಂಭ :

​ನೀವು ಇಷ್ಟಪಟ್ಟ ವ್ಯಕ್ತಿಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಗಲಿದೆ. ವೈವಾಹಿಕ ಜೀವನದಲ್ಲಿ ಶಾಂತಿ ಮತ್ತು ಸಂತೋಷ ನೆಲೆಸಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಸ್ನೇಹಿತರೊಂದಿಗೆ ಪಾಲ್ಗೊಳ್ಳುವಿರಿ.

ಮೀನ :

​ಪ್ರೇಮ ಜೀವನದಲ್ಲಿ ಹೊಸ ತಿರುವು ಬರಲಿದೆ. ಸಂಗಾತಿಯ ಮೇಲೆ ಪ್ರೀತಿ ಹೆಚ್ಚಾಗುತ್ತದೆ. ಮನೆಗೆ ಅತಿಥಿಗಳ ಆಗಮನವಾಗಬಹುದು. ದಾಂಪತ್ಯ ಸುಖಮಯವಾಗಿರುತ್ತದೆ. ಗೆಳೆಯರ ಸಲಹೆಯು ನಿಮಗೆ ಹೊಸ ದಾರಿಯನ್ನು ತೋರಿಸಲಿದೆ.

– ಲೋಹಿತ ಹೆಬ್ಬಾರ್

Source link

ದಲಿತ ನಾಯಕರನ್ನು ಹತ್ತಿಕ್ಕುವ ಸಂಚು: ಶಾಸಕ ಚಂದ್ರು ಲಮಾಣಿ ಪರ ದಲಿತ ಮುಖಂಡರ ಆಕ್ರೋಶ – Kannada News | Dalit Leaders Condemn MLA Chandru Lamani’s Lokayukta Detention, Call it Political Plot

ಗದಗ, ಫೆ.21: ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕ ಚಂದ್ರು ಲಮಾಣಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿರುವುದನ್ನು ಖಂಡಿಸಿ ದಲಿತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ದಲಿತ ಮುಖಂಡ ಹರೀಶ್, ಇದೊಂದು ರಾಜಕೀಯ ಪ್ರೇರಿತ ಸಂಚು ಎಂದು ಕಿಡಿಕಾರಿದ್ದಾರೆ. ಶಾಸಕ ಚಂದ್ರು ಲಮಾಣಿ ಮತ್ತು ಮಾಜಿ ಶಾಸಕ ಪಿ. ರಾಜೀವ್ ಅವರು ಲಂಬಾಣಿ ಹಾಗೂ ದಲಿತ ಸಮುದಾಯದ ಪ್ರಬಲ ಧ್ವನಿಯಾಗಿದ್ದಾರೆ. ಸಮುದಾಯಕ್ಕಾಗಿ ಹೋರಾಡುವ ಇಂತಹ ನಾಯಕರನ್ನು ಹತ್ತಿಕ್ಕುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. ದಲಿತ ಮತ್ತು ಹಿಂದುಳಿದ ವರ್ಗದ ನಾಯಕರು ರಾಜಕೀಯವಾಗಿ ಬೆಳೆಯುವುದನ್ನು ಸಹಿಸದ ಶಕ್ತಿಗಳು ಈ ರೀತಿಯ ಲೋಕಾಯುಕ್ತ ಟ್ರ್ಯಾಪ್‌ಗಳ ಮೂಲಕ ಅವರ ಚಾರಿತ್ರ್ಯಕ್ಕೆ ಧಕ್ಕೆ ತರುತ್ತಿವೆ. ಇಬ್ಬರು ಪ್ರಮುಖ ನಾಯಕರ ಮೇಲೆ ನಡೆಯುತ್ತಿರುವ ಈ ರೀತಿಯ ಒತ್ತಡದ ತಂತ್ರಗಳನ್ನು ಲಂಬಾಣಿ ಮತ್ತು ದಲಿತ ಸಮಾಜ ಸಹಿಸುವುದಿಲ್ಲ. ಇವರ ವಿರುದ್ಧದ ಸಂಚನ್ನು ಕಾನೂನಾತ್ಮಕವಾಗಿ ಎದುರಿಸುತ್ತೇವೆ ಎಂದು ಅವರು ಎಚ್ಚರಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link