ಈಗಂತೂ ಪ್ರತಿ ಮನೆಯಲ್ಲೂ ಕುಕ್ಕರ್ (pressure cooker) ಬಳಕೆ ಮಾಡಲಾಗುತ್ತದೆ. ಅನ್ನ ಬೇಯಿಸುವುದರಿಂದ ಹಿಡಿದು ಸಾರು, ಸಾಂಬಾರ್ ಮಾಡುವವರೆಗೆ ಪ್ರತಿಯೊಂದು ಅಡುಗೆಯನ್ನೂ ಹೆಚ್ಚಿನವರು ಕುಕ್ಕರ್‌ನಲ್ಲಿಯೇ ಮಾಡುತ್ತಾರೆ. ಕುಕ್ಕರ್‌ನಲ್ಲಿ ಅಡುಗೆ ಮಾಡುವುದರಿಂದ ಸಮಯ ಉಳಿತಾಯವಾಗುವುದಲ್ಲದೆ ಗ್ಯಾಸ್ ಕೂಡ ಉಳಿತಾಯವಾಗುತ್ತದೆ. ವಿಷಯ ಏನೆಪ್ಪಾ ಅಂದ್ರೆ ಅನೇಕರಿಗೆ ಕುಕ್ಕರ್ ಹೇಗೆ ಬಳಸಬೇಕು ಎಂಬ ಅರಿವಿಲ್ಲ. ಈ ಸಣ್ಣ ನಿರ್ಲಕ್ಷ್ಯ, ಅಜಾಗರೂಕತೆ ಕುಕ್ಕರ್ ಸ್ಫೋಟಗೊಳ್ಳಲು ಕಾರಣವಾಗಬಹುದು. ಆದ್ದರಿಂದ ಕುಕ್ಕರ್‌ನಲ್ಲಿ ಅಡುಗೆ ಮಾಡುವಾಗ ಈ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ವಹಿಸುವುದು ಅತ್ಯಗತ್ಯ.
ನಿಮ್ಮ ಈ ತಪ್ಪುಗಳಿಂದ ಕುಕ್ಕರ್ ಸ್ಫೋಟಗೊಳ್ಳಬಹುದು:
ಗ್ಯಾಸ್ಕೆಟ್ ರಬ್ಬರ್‌ನ ನಿರ್ಲಕ್ಯ: ಪ್ರೆಶರ್ ಕುಕ್ಕರ್‌ನಲ್ಲಿ ರಬ್ಬರ್ ಗ್ಯಾಸ್ಕೆಟ್ ಮತ್ತು ಸೀಟಿ ಅತ್ಯಗತ್ಯ. ಒಟ್ಟಾಗಿ, ಅವೆರಡು ಆಂತರಿಕ ಒತ್ತಡವನ್ನು ನಿಯಂತ್ರಿಸುತ್ತವೆ ಮತ್ತು ಹೆಚ್ಚುವರಿ ಉಗಿಯನ್ನು ಬಿಡುಗಡೆ ಮಾಡುತ್ತವೆ. ಆದರೆ ಅನೇಕ ಮಂದಿ ಗ್ಯಾಸ್ಕೆಟ್ ರಬ್ಬರ್ ಸಡಿಲವಾದರೂ, ಅವು ಸವೆದು ಹೋದರು ಅದನ್ನು ಚೇಂಜ್ ಮಾಡುವುದುದಿಲ್ಲ. ಇದು ಪ್ರೆಶರ್ ಕುಕ್ಕರ್‌ನೊಳಗಿನ ಒತ್ತಡವನ್ನು ಹೆಚ್ಚಿಸಲು ಕಾರಣವಾಗುತ್ತದೆ, ಇದು ಕುಕ್ಕರ್ ಬ್ಲಾಸ್ಟ್ ಆಗಲು ಕಾರಣವಾಗುತ್ತದೆ. ಆದ್ದರಿಂದ ಸೀಟಿ ಮತ್ತು ಗ್ಯಾಸ್ಕೆಟ್ ಅನ್ನು ನಿಯತಕಾಲಿಕವಾಗಿ ಪರಿಶೀಲಿಸಿ ಮತ್ತು ಅಗತ್ಯವಿದ್ದರೆ ತಕ್ಷಣ ಅವುಗಳನ್ನು ಬದಲಾಯಿಸಿ.
ಕುಕ್ಕರ್ ಅನ್ನು ಅತಿಯಾಗಿ ತುಂಬಿಸುವುದು: ಅನೇಕರು ಕುಕ್ಕರ್‌ನ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಆಹಾರ ತುಂಬಿಸುತ್ತಾರೆ. ಹೀಗೆ ಕುಕ್ಕರ್ ಸಂಪೂರ್ಣವಾಗಿ ತುಂಬುವವರೆಗೆ ಅದರಲ್ಲಿ ಅನ್ನ, ತರಕಾರಿ ಬೇಯಿಸಬಾರದು. ಇದರಿಂದ ಕುಕ್ಕರ್ ಒಳಗೆ ಉತ್ಪತ್ತಿಯಾಗುವ ಉಗಿ ಹೊರಗೆ ಹೋಗಲು ಯಾವುದೇ ಮಾರ್ಗವಿರುವುದಿಲ್ಲ. ಇದು ಒತ್ತಡದ ಮಟ್ಟ ವೇಗವಾಗಿ ಏರಿಕೆಯಾಗಲು ಕಾರಣವಾಗುತ್ತದೆ. ಇದರಿಂದ ಕುಕ್ಕರ್ ಸ್ಫೋಟಗೊಳ್ಳಬಹುದು. ಆದ್ದರಿಂದ ಯಾವಾಗಲೂ ಕಕ್ಕರ್‌ನ ಸಾಮರ್ಥ್ಯದ 2/3 ರಷ್ಟು ಮಾತ್ರ ಆಹಾರವನ್ನು ತುಂಬಿಸಬೇಕು.
ಸೀಟಿಯನ್ನು ಸ್ವಚ್ಛಗೊಳಿಸದಿರುವುದು: ಸೀಟಿ ಒತ್ತಡ ಬಿಡುಗಡೆಗೆ ಕುಕ್ಕರ್‌ನ ಪ್ರಮುಖ ಭಾಗವಾಗಿದೆ. ಅದರಲ್ಲಿ ಕೊಳೆ ಅಥವಾ ಆಹಾರ ಕಣಗಳು ಸಿಲುಕಿಕೊಂಡರೆ, ಅದು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇದು ಉಗಿ ತಪ್ಪಿಸಿಕೊಳ್ಳುವುದನ್ನು ತಡೆಯುತ್ತದೆ, ಇದರಿಂದ ಕುಕ್ಕರ್ ಒಳಗೆ ಒತ್ತಡ ಹೆಚ್ಚಾಗುತ್ತದೆ ಮತ್ತು ಕುಕ್ಕರ್ ಸ್ಫೋಟಗೊಳ್ಳುವ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಪ್ರತಿ ಬಳಕೆಯ ನಂತರ ಸೀಟಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಮತ್ತು ವೆಂಟ್ ಪೈಪ್‌ನಲ್ಲಿ ಯಾವುದೇ ಅಡಚಣೆ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಇದನ್ನೂ ಓದಿ: ಪಾತ್ರೆ ತೊಳೆಯುವ ಸ್ಪಾಂಜ್‌ಗಳ ಸ್ವಚ್ಛತೆಯ ಬಗ್ಗೆ ಇರಲಿ ತುಸು ಹೆಚ್ಚು ಕಾಳಜಿ
ಕಡಿಮೆ ನೀರು ಸೇರಿಸುವುದು: ಕೆಲವರು ಕುಕ್ಕರ್‌ನಲ್ಲಿ ಆಹಾರ ಬೇಯಿಸುವಾಗ ಅಗತ್ಯಕ್ಕಿಂತಲೂ ಕಡಿಮೆ ಪ್ರಮಾಣದ ನೀರನ್ನು ಸೇರಿಸುತ್ತಾರೆ. ಇದು ಆಹಾರವನ್ನು ಸುಡುವುದಲ್ಲದೆ, ಒಳಗೆ ಅತಿಯಾದ ಶಾಖವನ್ನು ಉತ್ಪಾದಿಸುತ್ತದೆ. ಇದು ಕುಕ್ಕರ್ ಅತಿಯಾಗಿ ಬಿಸಿಯಾಗಲು ಮತ್ತು ಸ್ಫೋಟಗೊಳ್ಳಲು ಕಾರಣವಾಗಬಹುದು. ಆದ್ದರಿಂದ ಆಹಾರ ಬೇಯಿಸುವಾಗ ಸರಿಯಾದ ಪ್ರಮಾಣದಲ್ಲಿ ನೀರನ್ನು ಸೇರಿಸಿ.
ಹಳೆಯ ಪ್ರೆಶರ್ ಕುಕ್ಕರ್ ಬಳಕೆ: ಕೆಲವರು ಹಲವು ವರ್ಷಗಳ ಹಳೆಯ ಕುಕ್ಕರ್‌ಗಳನ್ನೇ ಬಳಕೆ ಮಾಡುತ್ತಾರೆ. ಕಾಲ ಕಳೆದಂತೆ ಕುಕ್ಕರ್‌ನ ಮುಚ್ಚಳ ಮತ್ತು ಲಾಕ್ ವ್ಯವಸ್ಥೆಯು ದುರ್ಬಲಗೊಳ್ಳುವ ಕಾರಣ ಹಳೆಯ ಪ್ರೆಶರ್ ಕುಕ್ಕರ್‌ನಲ್ಲಿ ಅಡುಗೆ ಮಾಡುವುದು ತುಂಬಾನೇ ಡೇಂಜರ್. ಏಕೆಂದರೆ ಇದು ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಕುಕ್ಕರ್ ಅನ್ನು ನಿಯಮಿತವಾಗಿ ಪರಿಶೀಲಿಸುತ್ತಿರಿ, ಮತ್ತು ಯಾವಾಗಲೂ ಐಎಸ್‌ಐ ಗುರುತು ಹೊಂದಿರುವ ಉತ್ತಮ ಗುಣಮಟ್ಟದ ಕುಕ್ಕರ್‌ಗಳನ್ನೇ ಬಳಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
