All posts by nagaraj11081993

ಬೆಳಗಾವಿ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ! – Kannada News | Belagavi Shocker: Man brutally murdered in Kittur; investigation begins

ಬೆಳಗಾವಿ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ!

ಬೆಳಗಾವಿ, ಫೆಬ್ರವರಿ 22: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಗ್ರಾಮದ ಸಮೀಪದ ಮೆಕ್ಕೆಜೋಳ ಗದ್ದೆಯಲ್ಲಿ ಕಲ್ಮೇಶ್ ಕೋಟಿ (50) ಅವರ ಶವ ಪತ್ತೆಯಾಗಿದ್ದು,ಕಿತ್ತೂರಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹತ್ಯೆಗೆ ಕಾರಣವೇನು?

ತುಮಕೂರಿನಲ್ಲಿ ಹೋಮ್ ಕೇರ್‌ನಲ್ಲಿ ಕೆಲಸ ಮಾಡುತ್ತಿದ್ದ ಕಲ್ಮೇಶ್, ಸುಮಾರು ಹತ್ತು ದಿನಗಳ ಹಿಂದಷ್ಟೇ ಗ್ರಾಮಕ್ಕೆ ಬಂದಿದ್ದರು. ನಾಲ್ಕು ದಿನಗಳ ಹಿಂದೆ ನಡೆದಿರುವ ಈ ಕೊಲೆ ತಡವಾಗಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದುಷ್ಕರ್ಮಿಗಳು ಕಲ್ಮೇಶ್​ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದು, ಬಳಿಕ ಮರ್ಮಾಂಗ ಕತ್ತರಿಸಿ ವಿಕೃತಿ ಮೆರೆದಿರುವುದು ಬೆಳಕಿಗೆ ಬಂದಿದೆ.

ಹತ್ತು ವರ್ಷಗಳ ಹಿಂದೆ ಕಲ್ಮೇಶ್ ಪತ್ನಿ ದೂರವಾಗಿದ್ದ ಕಾರಣ ತಮ್ಮ ವೃದ್ಧ ತಾಯಿಯೊಂದಿಗೆ ವಾಸವಿದ್ದರು. ಘಟನೆ ತಿಳಿದು ಪತ್ನಿ ಹಾಗೂ ಪುತ್ರ ಗ್ರಾಮಕ್ಕೆ ಆಗಮಿಸಿದ್ದಾರೆ. ಪ್ರಕರಣ ಸಂಬಂಧ ಎಸ್‌ಪಿ ರಾಮರಾಜನ್ ಸೇರಿದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಣಕಾಸು, ಆಸ್ತಿ ಹಾಗೂ ಮಹಿಳೆ ಸಂಬಂಧಿತ ವಿಚಾರಗಳಿಗೆ ಕೊಲೆ ಆಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ! ಕೊನೆಗೂ ಸೆರೆ ಸಿಕ್ತು ಕಿಲ್ಲರ್ ಒಂಟಿ ಸಲಗ

ತಾಯಿ ಕಳೆದುಕೊಂಡ ದುಃಖದಲ್ಲಿ ಮಗನಿಂದ ಆತ್ಮಹತ್ಯೆ ಯತ್ನ

ಇನ್ನೊಂದೆಡೆ ತಾಯಿ ನಿಧನದಿಂದ ಮನನೊಂದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮದಲ್ಲಿ ನಡೆದಿದೆ. ಬಾಬು ಪಾಂಡು ಸಾಂಬರೇಕರ (41) ಬಾವಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ವೇಳೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾವಿಗೆ ಜಿಗಿದ ತಕ್ಷಣ ಕೇಬಲ್ ಅಡಿಯಲ್ಲಿ ಸಿಲುಕಿಕೊಂಡಿದ್ದ ಅವರನ್ನು ಗಮನಿಸಿದ ಸ್ಥಳೀಯರು ತಕ್ಷಣ ಹೆಲ್ಫ್ ಲೈನ್ ಎಮರ್ಜೆನ್ಸಿ ರೆಸ್ಕ್ಯೂ ಫೌಂಡೇಶನ್ ಮುಖ್ಯಸ್ಥ ಬಸವರಾಜ್ ಹಿರೇಮಠ ಅವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ದೌಡಾಯಿಸಿದ ತಂಡ ಬಾವಿಯೊಳಗೆ ಇಳಿದು ಬಾಬು ಅವರನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿತು. 15 ದಿನಗಳ ಹಿಂದೆ ಅನಾರೋಗ್ಯದಿಂದ ತಾಯಿ ಮೃತಪಟ್ಟಿದ್ದರಿಂದ ಅವರು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಾಯಚೂರಿನಲ್ಲಿ ತಿಪ್ಪೆ ಸೇರಿದ ಸರ್ಕಾರಿ ಆಸ್ಪತ್ರೆ ಔಷಧಿ: ಸ್ಥಳೀಯರ ಆಕ್ರೋಶ – Kannada News | Raichur Locals Shocked as Lakhs Worth of Unexpired Medicines Found in Waste

ರಾಯಚೂರು, ಫೆಬ್ರವರಿ 22: ಎಲ್​ಬಿಎಸ್ ನಗರದ ಸ್ಮಶಾನದ ಬಳಿಯ ಕಸದ ಗುಂಡಿಯಲ್ಲಿ ಅವಧಿ ಇರುವ ಸರ್ಕಾರಿ ಆಸ್ಪತ್ರೆಯ ಲಕ್ಷಾಂತರ ಮೌಲ್ಯದ ಔಷಧಿಗಳು ಪತ್ತೆಯಾಗಿರುವುದು ಸ್ಥಳೀಯರಲ್ಲಿ ಆಘಾತ ಮೂಡಿಸಿದೆ. ಜ್ವರದ ಸಿರಪ್, ಡ್ರೈ ಕಫ್ ಸಿರಪ್, ಹಸಿವು ಹೆಚ್ಚಿಸುವ ಸಿರಪ್, ಮಲ್ಟಿವಿಟಮಿನ್ ಸಿರಪ್, ಸಿರಿಂಜ್‌ಗಳು ಹಾಗೂ ಬ್ಯಾಕ್ಟೀರಿಯಾ ನಿರೋಧಕ ಮುಲಾಮು ಸೇರಿದಂತೆ ವಿವಿಧ ಬಗೆಯ ಔಷಧಿಗಳನ್ನು ಸಿಬ್ಬಂದಿ ತಿಪ್ಪೆಗೆ ಬಿಸಾಡಿದ್ದಾರೆ. ಈ ಔಷಧಿಗಳು 2026, 2027 ಮತ್ತು 2028ರವರೆಗೂ ಅವಧಿ ಹೊಂದಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಇರುವಾಗ ಮತ್ತು ಬಡ ರೋಗಿಗಳಿಗೆ ಚಿಕಿತ್ಸೆ ಸರಿಯಾಗಿ ಸಿಗದಿದ್ದಾಗ ಅವಧಿ ಇರುವ ಔಷಧಿಗಳನ್ನು ಬಿಸಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯನ್ನು ಬಯಲಿಗೆಳೆದ ಯುವಕರ ತಂಡ, ತಪ್ಪಿತಸ್ಥರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಗೌಡ ಪಾಟೀಲ್ ಅವರಿಗೆ ಮನವಿ ಮಾಡಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

2 ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ರವಿ ಬಸ್ರೂರು: ತೆಲುಗು ವೇದಿಕೆಯಲ್ಲಿ ಎಮೋಷನಲ್ ಮಾತು – Kannada News | Music director Ravi Basrur emotional speech in Cult movie teaser launch

ಭಾರತೀಯ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ರವಿ ಬಸ್ರೂರು (Ravi Basrur) ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ‘ಕೆಜಿಎಫ್’, ‘ಸಲಾರ್’, ‘ಮಾರ್ಕೋ’ ಮುಂತಾದ ಸೂಪರ್ ಹಿಟ್ ಸಿನಿಮಾಗಳಿಗೆ ಸಂಗೀತ ನೀಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಇಂದು ಅವರು ಬಹುಬೇಡಿಕೆಯ ಸಂಗೀತ ನಿರ್ದೇಶಕ. ಬಹುಭಾಷೆಯ ಚಿತ್ರರಂಗದಲ್ಲಿ ಅವರು ಬ್ಯುಸಿ ಆಗಿದ್ದಾರೆ. ಆದರೆ ಹಲವು ವರ್ಷಗಳ ಹಿಂದೆ ಅವರು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು! ಆ ಘಟನೆಯನ್ನು ಅವರು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ. ತೆಲುಗಿನ ‘ಕಲ್ಟ್’ (Cult) ಸಿನಿಮಾದ ವೇದಿಕೆಯಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.

ವಿಶ್ವಕ್ ಸೇನ್ ನಟನೆಯ ‘ಕಲ್ಟ್’ ಸಿನಿಮಾದ ಟೀಸರ್ ಲಾಂಚ್ ಕಾರ್ಯಕ್ರಮ ನಡೆದಿದೆ. ಈ ಸಿನಿಮಾಗೆ ರವಿ ಬಸ್ರೂರು ಅವರು ಸಂಗೀತ ನೀಡಿದ್ದಾರೆ. ಟೀಸರ್ ಲಾಂಚ್ ವೇದಿಕೆಯಲ್ಲಿ ನಟ ವಿಶ್ವಕ್ ಸೇನ್ ಅವರು ರವಿ ಬಸ್ರೂರು ಅವರಿಗೆ 35 ಲಕ್ಷ ರೂಪಾಯಿ ಬೆಲೆಯ ರೋಲೆಕ್ಸ್ ವಾಚ್ ಉಡುಗೊರೆಯಾಗಿ ನೀಡಿದರು. ಆ ಬಳಿಕ ಮಾತನಾಡಿದ ರವಿ ಬಸ್ರೂರು ಅವರು ಎಮೋಷನಲ್ ಆದರು.

‘ನಾನು 18ನೇ ವಯಸ್ಸಿನಲ್ಲಿ 2 ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದೆ. ನನಗೆ ಈ ಜೀವನ ಬೇಕಾಗಿರಲಿಲ್ಲ. ಆದರೆ ಎರಡೂ ಬಾರಿ ನನ್ನನ್ನು ಬದುಕಿಸಿದರು. 2ನೇ ಬಾರಿ ನನ್ನನ್ನು ಬದುಕಿಸಿದವರು ನನ್ನ ಸಂಗೀತವನ್ನು ಕೇಳಿದರು. ನನಗೆ ಕೀಬೋರ್ಡ್ ಕೊಡಿಸಿದರು. 35 ಸಾವಿರ ರೂಪಾಯಿ ಹಣ ನೀಡಿದರು. ಆ ದಿನ ನಾನು ನನ್ನ ಹೆಸರನ್ನು ರವಿ ಎಂದು ಬದಲಾಯಿಸಿಕೊಂಡೆ. ನನ್ನನ್ನು ಬದುಕಿಸಿದ ವ್ಯಕ್ತಿಯ ಹೆಸರು ರವಿ’ ಎಂದು ಅವರು ಹೇಳಿದ್ದಾರೆ.

‘ನನಗೆ 25 ವರ್ಷಗಳ ಅನುಭವ ಇದೆ. ನಾನು ಯಾವಾಗಲೂ ಒಳ್ಳೆಯ ಸಂಗೀತ ನೀಡಲು ಪ್ರಯತ್ನಿಸಿದ್ದೇನೆ. ನನಗೆ ಇಂದು ವಿಶ್ವಕ್ ಸೇನ್ ಅವರು ಈ ಉಡುಗೊರೆ ನೀಡುವ ಮೂಲಕ ನನ್ನನ್ನು ಪ್ರಶಂಸಿಸಿದ್ದಾರೆ. ಸಂಗೀತದ ಬಗ್ಗೆ ನನಗೆ ಇರುವ ಬದ್ಧತೆಯನ್ನು ಮೆಚ್ಚಿದ್ದಾರೆ. ಇದು ಕೇವಲ ವಾಚ್ ಅಲ್ಲ. ಸಂಗೀತರಾರರಿಗೆ ಸಿಕ್ಕ ಮೆಚ್ಚುಗೆ’ ಎಂದು ರವಿ ಬಸ್ರೂರು ಅವರು ಹೇಳಿದ್ದಾರೆ.

ಇದನ್ನೂ ಓದಿ: ನರೇಂದ್ರ ಮೋದಿ ಬಯೋಪಿಕ್ ‘ಮಾ ವಂದೇ’ ಶೂಟಿಂಗ್ ಶುರು; ರವಿ ಬಸ್ರೂರು ಸಂಗೀತ

‘ಕಲ್ಟ್’ ಸಿನಿಮಾದ ವೇದಿಕೆಯ ಮೇಲೆ ರವಿ ಬಸ್ರೂರು ಆಡಿದ ಮಾತುಗಳನ್ನು ಕೇಳಿ ಅವರ ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ಯಶಸ್ವಿ ಸಂಗೀತ ನಿರ್ದೇಶಕನ ಬದುಕಿನಲ್ಲಿ ಎಂಥ ನೋವಿನ ಇತಿಹಾಸ ಇದೆ ಎಂಬುದನ್ನು ತಿಳಿದು ಫ್ಯಾನ್ಸ್ ಕೂಡ ಎಮೋಷನಲ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಪವರ್’​ ಇಲ್ಲ… ಬಾಬರ್ ಆಝಂ ಮಾನ ಕಳೆದ ಪಾಕ್ ಕೋಚ್ – Kannada News | Pakistan coach Mike Hesson expose Babar Azam’s flaws

ಪಾಕಿಸ್ತಾನ್ ತಂಡದಲ್ಲಿ ಬಾಬರ್ ಆಝಂ ಅವರ ರೋಲ್ ಏನು? ಈ ಪ್ರಶ್ನೆಗೆ ಪಾಕ್ ತಂಡ ಕೋಚ್ ಮೈಕ್ ಹೆಸ್ಸನ್ ಬಳಿಯೇ ಸ್ಪಷ್ಟ ಉತ್ತರವಿಲ್ಲ. ಇದಕ್ಕೆ ಸಾಕ್ಷಿ ಸುದ್ದಿಗೋಷ್ಠಿಯಲ್ಲಿ ಅವರು ನೀಡಿರುವ ಹೇಳಿಕೆ. ನಮೀಬಿಯ ವಿರುದ್ಧದ ಪಂದ್ಯದಲ್ಲಿ ಬಾಬರ್ ಆಝಂ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್​​ಗೆ ಇಳಿಸದೇ ಇರುವ ಕಾರಣವೇನು? ಎಂಬ ಪ್ರಶ್ನೆಯನ್ನು ಹೆಸ್ಸನ್ ಮುಂದಿಡಲಾಗಿತ್ತು.

ಈ ಪ್ರಶ್ನೆಗೆ ಅವರಿಂದ ಬಂದ ಉತ್ತರ ಪವರ್ ಇಲ್ಲ. ಅಂದರೆ ಪಾಕ್ ತಂಡದ ಮೂರನೇ ವಿಕೆಟ್ ಪತನವಾಗಿದ್ದು 12ನೇ ಓವರ್​ನಲ್ಲಿ. ಈ ವೇಳೆ ಬಿರುಸಿನ ಬ್ಯಾಟಿಂಗ್ ಮಾಡುವುದು ಅಗತ್ಯವಿತ್ತು. ಆದರೆ ಬಾಬರ್ ಆಝಂಗೆ ಆಕ್ರಮಣಕಾರಿ ಬ್ಯಾಟಿಂಗ್ ಬರುವುದಿಲ್ಲ. ಹೀಗಾಗಿ ಖ್ವಾಜಾ ನಫಾಯ್ ಹಾಗೂ ಶಾದಾಬ್ ಖಾನ್​ಗೆ ಮುಂಬಡ್ತಿ ನೀಡಲಾಯಿತು ಎಂದಿದ್ದಾರೆ.

ಇದೇ ವೇಳೆ ಬಾಬರ್ ಆಝಂ ಈ ಹಿಂದೆ ಪಾಕಿಸ್ತಾನ್ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದರು ಎಂಬುದನ್ನು ಪತ್ರಕರ್ತರು ಜ್ಞಾಪಿಸಿದರು. ಇದಕ್ಕೆ ಸ್ಪಷ್ಟನೆ ನೀಡಿದ ಮೈಕ್ ಹೆಸ್ಸನ್, ಬಾಬರ್ ಅವರ ಪವರ್‌ಪ್ಲೇ ಸ್ಟ್ರೈಕ್ ರೇಟ್ 100 ಕ್ಕಿಂತ ಕಡಿಮೆ ಇರುವುದರಿಂದ, ಅವರನ್ನು ಆರಂಭಿಕ ಆಟಗಾರನ ಸ್ಥಾನದಿಂದ ಕೆಳಗಿಳಿಸಿದ್ದೇವೆ. ಹೀಗಾಗಿ ಅವರು ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆ.

ಮಧ್ಯಮ ಓವರ್‌ಗಳಲ್ಲಿ ತಂಡವು ಸಂಕಷ್ಟದಲ್ಲಿದ್ದಾಗ ಇನ್ನಿಂಗ್ಸ್‌ಗೆ ಸ್ಥಿರತೆ ನೀಡಲು ಬಾಬರ್ ಆಝಂ ಸೂಕ್ತ ಆಟಗಾರ. ಆದರೆ ಅವರು ಪವರ್ ಹಿಟ್ಟರ್ ಅಲ್ಲ ಎಂಬುದೇ ಸತ್ಯ.

ಪಂದ್ಯದ 12ನೇ ಓವರ್ ನಂತರ ಬಾಬರ್ ಆಝಂ ಕ್ರೀಸ್‌ಗೆ ಬರುವುದು ತಂಡಕ್ಕೆ ಅಷ್ಟೊಂದು ಲಾಭದಾಯಕವಲ್ಲ. ಆ ಸಮಯದಲ್ಲಿ ಅವರಿಗಿಂತ ವೇಗವಾಗಿ ರನ್ ಗಳಿಸುವ “ಪವರ್ ಹಿಟ್ಟರ್‌ಗಳು” ತಂಡಕ್ಕೆ ಅಗತ್ಯ ಎಂದು ಹೆಸ್ಸನ್ ಅಭಿಪ್ರಾಯಪಟ್ಟಿದ್ದಾರೆ.

ಇದೇ ಕಾರಣದಿಂದಾಗಿ ನಾವು ನಮೀಬಿಯ ವಿರುದ್ಧದ ಪಂದ್ಯದಲ್ಲಿ ಬಾಬರ್ ಆಝಂ ಅವರನ್ನು ಬ್ಯಾಟಿಂಗ್​ಗೆ ಇಳಿಸಿರಲಿಲ್ಲ. ಅವರ ಬದಲಿಗೆ ಖ್ವಾಜಾ ಹಾಗೂ ಶಾದಾಬ್​ ಖಾನ್​ಗೆ ಮುಂಬಡ್ತಿ ನೀಡಲಾಗಿದೆ ಎಂದು ಹೆಸ್ಸನ್ ತಿಳಿಸಿದ್ದಾರೆ.

ಇನ್ನು ಬಾಬರ್  ಆಝಂ ತಮ್ಮ ಸ್ಟ್ರೈಕ್ ರೇಟ್ ಹೆಚ್ಚಿಸಿಕೊಳ್ಳುವತ್ತ ಮತ್ತು ವಿಶೇಷವಾಗಿ ಸ್ಪಿನ್ ಬೌಲಿಂಗ್ ವಿರುದ್ಧ ಉತ್ತಮವಾಗಿ ಆಡುವತ್ತ ಗಮನಹರಿಸಬೇಕು ಎಂದು ಮೈಕ್ ಹೆಸ್ಸನ್ ಸೂಚಿಸಿದ್ದಾರೆ.

ಈ ಕಾರ್ಯತಂತ್ರದ ಬದಲಾವಣೆಗಳ ಬಗ್ಗೆ ಬಾಬರ್ ಅವರೂ ಅರಿವಿದ್ದು, ತಂಡದ ಹಿತದೃಷ್ಟಿಯಿಂದ ಇದನ್ನು ಒಪ್ಪಿಕೊಂಡಿದ್ದಾರೆ ಎಂದು ಪಾಕಿಸ್ತಾನ್ ತಂಡದ ಕೋಚ್ ತಿಳಿಸಿದ್ದಾರೆ.

ಕುತೂಹಲಕಾರಿ ವಿಷಯ ಎಂದರೆ, ಬಾಬರ್ ಆಝಂ ಅವರ ಈ ಎಲ್ಲಾ ನೂನ್ಯತೆಗಳನ್ನು ಮತ್ತು ದೌರ್ಬಲ್ಯಗಳನ್ನು ಪಾಕಿಸ್ತಾನ್ ಕೋಚ್ ಮೈಕ್ ಹೆಸ್ಸನ್ ತೆರೆದಿಟ್ಟಿರುವುದು ಸುದ್ದಿಗೋಷ್ಠಿಯಲ್ಲಿ. ಅಂದರೆ ಬಹಿರಂಗ ಹೇಳಿಕೆಯ ಮೂಲಕ ಎಂಬುದೇ ಅಚ್ಚರಿ.

ಕೋಚ್​ನ ಈ ಬಹಿರಂಗ ಹೇಳಿಕೆಯ ಬೆನ್ನಲ್ಲೇ, ಪವರ್​ಪ್ಲೇನಲ್ಲೂ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ, 12 ಓವರ್​ಗಳ ಬಳಿಕ ಬಿರುಸಿನಿಂದ ಬ್ಯಾಟ್ ಬೀಸಲು ಸಾಧ್ಯವಿಲ್ಲವಾದರೆ ಬಾಬರ್ ಆಝಂ ತಂಡದಲ್ಲಿ ಯಾಕಿದ್ದಾರೆ? ಎಂದು ಪಾಕಿಸ್ತಾನದ ಕೆಲ ಮಾಜಿ ಕ್ರಿಕೆಟಿಗರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಇದುವೇ ಟೀಮ್ ಇಂಡಿಯಾದ ಅತೀ ದೊಡ್ಡ ವೀಕ್​ನೆಸ್​​!

ಒಟ್ಟಿನಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಕೇವಲ 128.19ರ ಸ್ಟ್ರೈಕ್ ರೇಟ್ ಹೊಂದಿರುವ ಬಾಬರ್ ಆಝಂ ಪಾಕ್ ತಂಡದ ಕೋಚ್​ನ ಹೇಳಿಕೆಯಿಂದ ಮುಜುಗರಕ್ಕೊಳಗಾಗಿರುವುದಂತು ದಿಟ. ಈ ಮುಜುಗರದಿಂದ ಪಾರಾಗಲು ಅವರು ಮುಂಬರುವ ಪಂದ್ಯಗಳಲ್ಲಿ ಸ್ಟ್ರೈಕ್ ರೇಟ್ ಹೆಚ್ಚಿಸಿಕೊಳ್ಳಲಿದ್ದಾರಾ ಅಥವಾ ಶೊಯೆಬ್ ಅಖ್ತರ್ ಹೇಳಿದಂತೆ ಬಾಬರ್ ಆಝಂ ಟುಕ್ ಟುಕ್ ಕಿಂಗ್ ಆಗಿ ಮುಂದುವರೆಯಲಿದ್ದಾರಾ ಕಾದು ನೋಡಬೇಕಿದೆ.

Source link

ಶೀಘ್ರದಲ್ಲೇ ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್​? ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ – Kannada News | CM Siddaramaiah Hints Mobile Ban in Karnataka Schools and Colleges for Student Welfare

ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್​?Image Credit source: Google

ಬೆಂಗಳೂರು, ಫೆಬ್ರವರಿ 22: ಶೀಘ್ರದಲ್ಲೇ ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್​ ಆಗುವ ಸಾಧ್ಯತೆ ಇದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ವಿವಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸುಳಿವು ನೀಡಿದ್ದಾರೆ. ಮೊಬೈಲ್ ಬ್ಯಾನ್​ ವಿಚಾರವಾಗಿ ಮುಖ್ಯಮಂತ್ರಿಗಳು ವಿಸಿಗಳಿಂದಲೂ ಅಭಿಪ್ರಾಯ ಕೇಳಿದ್ದು, ಪ್ರಸ್ತಾಪಕ್ಕೆ ವಿಶ್ವವಿದ್ಯಾಲಯದ ಕುಲಪತಿಗಳಿಂದಲೂ ಒಪ್ಪಿಗೆ ಸಿಕ್ಕಿದೆ. 16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಮೊಬೈಲ್​ ಬಳಕೆಗೆ ಕಡಿವಾಣ ಹಾಕಬೇಕಿದ್ದು, ಆಸ್ಟ್ರೇಲಿಯಾ ಸೇರಿ ಅನೇಕ ದೇಶಗಳಲ್ಲಿ ಈ ನಿಯಮ ಮಾಡಿದ್ದಾರೆ. ಸೋಷಿಯಲ್​ ಮೀಡಿಯಾಗಳಿಂದ ವಿದ್ಯಾರ್ಥಿಗಳು ಹಾಳಾಗುತ್ತಿರುವ ಆರೋಪ ಹಿನ್ನೆಲೆ ವಿದ್ಯಾರ್ಥಿಗಳ ಮೊಬೈಲ್ ಬಳಕೆ ನಿಷೇಧಕ್ಕೆ ಚಿಂತನೆ ಇದೆ ಎನ್ನಲಾಗಿದೆ.

ವಿವಿ ಕ್ಯಾಂಪಸ್​​ಗಳನ್ನ ಡ್ರಗ್ಸ್​​ ಮುಕ್ತ ಮಾಡಲು ಸೂಚನೆ

ಡ್ರಗ್ಸ್​​ ಒಂದು ಪಿಡುಗಾಗಿದ್ದು, ವಿಶ್ವ ವಿದ್ಯಾಲಯಗಳ ಕಾಂಪಸ್​​ಗಳು ಮಾದಕ ವಸ್ತುಗಳಿಂದ ಮುಕ್ತವಾಗಿರಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಇದೇ ವೇಳೆ ವಿಸಿಗಳಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಮಕ್ಕಳ ಪರೀಕ್ಷಾ ಒತ್ತಡ ನಿವಾರಣೆಗೆ ಪೋಷಕರು ಮಾಡಬೇಕಾದ್ದು ಏನು?

ಕಾಲೇಜುಗಳಲ್ಲಿ ಚುನಾವಣೆಗೆ ವಿರೋಧ

ಸ್ಟೂಡೆಂಟ್ ಎಲೆಕ್ಷನ್ ಬಗ್ಗೆಯೂ ಸಿಎಂ ಸಿದ್ದರಾಮಯ್ಯ ಸುಳಿವು ನೀಡಿದ್ದಾರೆ. ವಿದ್ಯಾರ್ಥಿ ಚುನಾವಣೆ ಮಾಡುವ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ. ನಮ್ಮ ಕಾಲದಲ್ಲಿ ಚುನಾವಣೆ ಇತ್ತು, ನಾವು ಅಲ್ಲಿಂದಲೇ ಬಂದಿರುವುದು. ಹೀಗಾಗಿ ಷರತ್ತುಗಳನ್ನು ‌ಹಾಕಿ ಚುನಾವಣೆಗೆ ಅವಕಾಶ ಕೊಡಲು ಚಿಂತನೆ ಇದೆ. ಚುನಾವಣೆ ಆಗದಿದ್ರೆ ವಿದ್ಯಾರ್ಥಿಗಳು ನಾಯಕರಾಗಿ ಹೇಗೆ ಬೆಳೆಯೋದು? ಭಾರತದಲ್ಲಿ ವಿದ್ಯಾರ್ಥಿ ನಾಯಕರು ಇಲ್ಲವೇ ಇಲ್ಲ ಎಂದ ಸಿಎಂ, ಈ ಬಗ್ಗೆ ಸಲಹೆ ಕೊಡುವಂತೆ ವಿಸಿಗಳಿಗೆ ಸೂಚಿಸಿದ್ದಾರೆ.

ಆದರೆ ಕಾಲೇಜುಗಳಲ್ಲಿ ಚುನಾವಣೆ ನಡೆಸಲು ಬಹುತೇಕ ವಿಸಿಗಳಿಂದ ವಿರೋಧ ವ್ಯಕ್ತವಾಗಿದೆ. ಯಾವುದೇ ಕಾರಣಕ್ಕೂ ಕಾಲೇಜುಗಳಲ್ಲಿ ಚುನಾವಣೆ ಬೇಡ ಎಂದ ವಿಸಿಗಳು, JNU ಸೇರಿ ಹಲವೆಡೆ ಗಲಾಟೆ ಆಗ್ತಿದೆ. ಈಗ ಪಕ್ಷಾತೀತವಾಗಿ ಚುನಾವಣೆಗಳು ನಡೆಯುವುದು ಕಷ್ಟ. ಚುನಾವಣೆಯಾದ್ರೆ ಕ್ಯಾಂಪೇನ್​​ಗೆ ಬಹಳ ಸಮಯ ಬೇಕಿರುವ ಕಾರಣ ಸ್ಟೂಡೆಂಟ್​ ಎಲೆಕ್ಷನ್​ ಬೇಡ ಎಂದು ಬಹುತೇಕ ಕುಲಪತಿಗಳು ಸಿಎಂಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Clapping: ಚಪ್ಪಾಳೆ ತಟ್ಟುವುದರ ಹಿಂದಿನ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಮಹತ್ವ – Kannada News | The Spiritual and Scientific Significance of Clapping in Daily Life

ನಾವು ಮಾಡುವ ಹಲವಾರು ಸನ್ನೆಗಳು, ಮುಖಭಾವಗಳು ನಮ್ಮ ಮೇಲೆ ಮತ್ತು ನಮ್ಮ ಸುತ್ತಮುತ್ತಲಿನವರ ಮೇಲೆ ಧನಾತ್ಮಕ ಅಥವಾ ಋಣಾತ್ಮಕ ಪ್ರಭಾವ ಬೀರುತ್ತವೆ. ಇವುಗಳಲ್ಲಿ ಚಪ್ಪಾಳೆ ತಟ್ಟುವುದೂ ಒಂದು ಪ್ರಮುಖ ಕ್ರಿಯೆ. ಇತಿಹಾಸ ಪೂರ್ವದಿಂದಲೂ ನಮ್ಮ ಸಂಸ್ಕೃತಿಯಲ್ಲಿ ಚಪ್ಪಾಳೆಗೆ ಒಂದು ವಿಶೇಷ ಸ್ಥಾನವಿದೆ. ಹಿಂದೂ ಮತ್ತು ಸನಾತನ ಧರ್ಮದಲ್ಲಿ ಚಪ್ಪಾಳೆ ಕೇವಲ ಶಬ್ಧ ಉತ್ಪಾದಿಸುವ ಕ್ರಿಯೆಗಿಂತಲೂ ಹೆಚ್ಚಿನ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಮಹತ್ವವನ್ನು ಹೊಂದಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.

ಚಪ್ಪಾಳೆ ಹಲವು ಸಂದರ್ಭಗಳಲ್ಲಿ ಶುಭ ಅಥವಾ ಅಶುಭ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ಸಾಮಾನ್ಯವಾಗಿ ಸಂತೋಷ, ಯಶಸ್ಸು, ವಿಜಯ ಮತ್ತು ಜಯವನ್ನು ಆಚರಿಸಲು ಬಳಸಲಾಗುತ್ತದೆ. ಪ್ರೋತ್ಸಾಹಿಸಲು, ಮೆಚ್ಚುಗೆ ಸೂಚಿಸಲು ಅಥವಾ ಮಕ್ಕಳನ್ನು ಒಳ್ಳೆಯ ಕಾರ್ಯಗಳಿಗೆ ಹುರಿದುಂಬಿಸಲು ಕೂಡ ಚಪ್ಪಾಳೆ ತಟ್ಟಲಾಗುತ್ತದೆ. ಇದು ಸಾಧನೆಯನ್ನು ಕೊಂಡಾಡಲು ಮತ್ತು ಆತ್ಮವಿಶ್ವಾಸ ಹಾಗೂ ಧೈರ್ಯವನ್ನು ಮೂಡಿಸಲು ಸಹಾಯಕವಾಗಿದೆ.

ಆಧ್ಯಾತ್ಮಿಕವಾಗಿ, ಭಜನೆಗಳು, ದೇವತಾರಾಧನೆಗಳು ಮತ್ತು ಸಂಕೀರ್ತನೆಗಳ ಸಮಯದಲ್ಲಿ ಚಪ್ಪಾಳೆ ತಟ್ಟುವುದರಿಂದ ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ. “ಶ್ರೀರಾಮ್ ಜೈರಾಮ್” ಎಂದು ಚಪ್ಪಾಳೆ ತಟ್ಟುವಾಗ ಧನಾತ್ಮಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಹಸ್ತಸಾಮುದ್ರಿಕ ಶಾಸ್ತ್ರ ಹೇಳುತ್ತದೆ. ಇದು ಭಕ್ತಿಯನ್ನು ಜಾಗೃತಗೊಳಿಸಿ, ಮನಸ್ಸನ್ನು ತೃಪ್ತಿಪಡಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಈ ರೀತಿಯ ಚಪ್ಪಾಳೆ ಮೆಡಿಸಿನ್‌ಗಳ ಅವಶ್ಯಕತೆಯನ್ನೂ ದೂರ ಮಾಡಬಲ್ಲದು ಎಂದು ನಂಬಲಾಗಿದೆ. ವೈಜ್ಞಾನಿಕವಾಗಿ, ಚಪ್ಪಾಳೆ ತಟ್ಟುವುದರಿಂದ ದೇಹದ ರೋಗನಿರೋಧಕ ಶಕ್ತಿ ಕೂಡ ವೃದ್ಧಿಸುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ

ಆದಾಗ್ಯೂ, ಚಪ್ಪಾಳೆಯನ್ನು ತಟ್ಟುವ ಸಂದರ್ಭ ಮತ್ತು ಉದ್ದೇಶ ಮುಖ್ಯವಾಗಿದೆ. ಇದನ್ನು ಕೆಲವೊಮ್ಮೆ ಅಪಹಾಸ್ಯ, ವ್ಯಂಗ್ಯ, ಅವಮಾನ ಅಥವಾ ಅಣಕ ಮಾಡಲು ಬಳಸಲಾಗುತ್ತದೆ, ಇದು ನಕಾರಾತ್ಮಕ ಶಕ್ತಿಯನ್ನು ಉಂಟುಮಾಡುತ್ತದೆ. ನಕಾರಾತ್ಮಕ ಘಟನೆಗಳ ಸಂದರ್ಭದಲ್ಲಿ, ಉದಾಹರಣೆಗೆ ಒಂದು ಪ್ರಾಣಿಗೆ ಹಿಂಸೆಯಾಗುತ್ತಿರುವಾಗ ಚಪ್ಪಾಳೆ ತಟ್ಟುವುದರಿಂದ ನಮ್ಮ ದೇಹಕ್ಕೆ ನಕಾರಾತ್ಮಕ ಶಕ್ತಿ ಸೇರುತ್ತದೆ. ಶೋಕದ ಸಮಯದಲ್ಲಿ ಅಥವಾ ಸಾವಿನ ಸಂದರ್ಭದಲ್ಲಿ ಭಜನೆ ಮಾಡುತ್ತಾ ಕುಣಿಯುವುದು ಅಥವಾ ಚಪ್ಪಾಳೆ ತಟ್ಟುವುದು ಶುಭವಲ್ಲ.

ಸರಿಯಾದ ಉದ್ದೇಶದಿಂದ, ಸಕಾರಾತ್ಮಕ ಭಾವನೆಯೊಂದಿಗೆ ಚಪ್ಪಾಳೆ ತಟ್ಟುವುದರಿಂದ ಆಯುಷ್ಯ ವೃದ್ಧಿಯಾಗುತ್ತದೆ ಮತ್ತು ಧನಾತ್ಮಕ ಶಕ್ತಿ ಆವರಿಸುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಂದೇ ಮನೆಯಲ್ಲಿ ಐವರ ಶವ ಪತ್ತೆ: ಆರ್ಥಿಕ ಸಂಕಷ್ಟಕ್ಕೆ ನಾಮಾವಶೇಷವಾಯ್ತಾ ಕುಟುಂಬ? – Kannada News | Kasganj Family Tragedy: Five Found Dead; Financial Distress Suspected as Cause of Suicide

ಕಾಸಗಂಜ್, ಫೆಬ್ರವರಿ 22: ಉತ್ತರ ಪ್ರದೇಶದ ಕಾಸಗಂಜ್ ಜಿಲ್ಲೆ ಅಮಾಪುರದ ಕೋಟ್ವಾಲಿ ವ್ಯಾಪ್ತಿಯ ಏಟಾ ರಸ್ತೆಯ ಇಂಡಿಯನ್ ಪೆಟ್ರೋಲ್ ಬಂಕ್ ಸಮೀಪ ಮನೆಯಲ್ಲಿ ಒಂದೇ ಕುಟುಂಬದ ಐವರ ಶವಗಳು ಪತ್ತೆಯಾಗಿವೆ. ಮೃತರನ್ನು ಸತ್ಯವೀರ್ ಅಲಿಯಾಸ್ ಶ್ಯಾಮವೀರ್ ‘ಫೌಜಿ’ (50), ಅವರ ಪತ್ನಿ ರಾಮಶ್ರೀ (48), ಪುತ್ರಿಯರಾದ ಪ್ರಾಚಿ (12) ಮತ್ತು ಅಮರವತಿ (10), ಹಾಗೂ ಪುತ್ರ ಗಿರೀಶ್ (9) ಎಂದು ಗುರುತಿಸಲಾಗಿದೆ. ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದು, ಐವರ ಅನುಮಾನಸ್ಪದ ಸಾವಿನ ಬಗ್ಗೆ ಪೊಲೀಸರ ತನಿಖೆಗೆ ಮುಂದಾಗಿದ್ದಾರೆ.

ಸ್ಥಳೀಯರ ಮಾಹಿತಿ ಪ್ರಕಾರ ಸತ್ಯವೀರ್ ವೃತ್ತಿಯಲ್ಲಿ ವೆಲ್ಡರ್ ಆಗಿದ್ದು, ಕಳೆದ 2-3 ದಿನಗಳಿಂದ ಕುಟುಂಬದವರು ಮನೆಯಿಂದ ಹೊರಬಂದಿರಲಿಲ್ಲ. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ, ಮನೆ ಬಾಗಿಲು ಒಳಗಿನಿಂದ ಬೀಗ ಹಾಕಲ್ಪಟ್ಟಿರುವುದು ಗೊತ್ತಾಗಿದೆ. ಹೀಗಾಗಿ ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಸತ್ಯವೀರ್ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಅವರ ಪತ್ನಿ ಮತ್ತು ಮೂವರು ಮಕ್ಕಳು ಹಾಸಿಗೆಯ ಮೇಲೆ ಮೃತ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.

ಇದನ್ನೂ ಓದಿ: ಪೊಲೀಸ್​ ವ್ಯಾನ್​​ಗೆ​​ ಟ್ರಕ್​​ ಡಿಕ್ಕಿ; ಐವರು ಸ್ಥಳದಲ್ಲೇ ಸಾವು, ಮೂವರು ಗಂಭೀರ

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಎಸ್‌ಪಿ ಅಂಕಿತಾ ಶರ್ಮಾ, ಸತ್ಯವೀರ್ ಅಲಿಯಾಸ್ ಶ್ಯಾಮವೀರ್ ಮತ್ತು ಅವರ ಕುಟುಂಬವು 2-3 ದಿನಗಳಿಂದ ಹೊರಗೆ ಕಾಣಿಸದಿರುವ ಬಗ್ಗೆ ಮಾಹಿತಿ ಬಂದಿತ್ತು. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಕುಟುಂಬ ಮೃತಪಟ್ಟಿರೋದು ಗೊತ್ತಾಗಿದೆ. ಘಟನಾ ಸ್ಥಳಕ್ಕೆ ಫಾರೆನ್ಸಿಕ್ ತಂಡ ಮತ್ತು ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪ್ರಾಥಮಿಕ ತನಿಖೆ ಆಧಾರದಲ್ಲಿ ಹೇಳುವುದಾದರೆ, ಕುಟುಂಬದ ಉಳಿದ ಸದಸ್ಯರನ್ನು ಹತ್ಯೆ ಮಾಡಿ ಬಳಿಕ ಸತ್ಯವೀರ್ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ. ಹೀಗಿದ್ದರೂ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಸ್ಥಳೀಯರ ಮಾಹಿತಿ ಪ್ರಕರಾ ಆರ್ಥಿಕ ಸಂಕಷ್ಟವೇ ಈ ಘಟನೆಗೆ ಕಾರಣವಾಗಿರಬಹುದು ಎನ್ನಲಾಗಿದೆ. ಪೊಲೀಸರು ಪಂಚನಾಮೆ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿ, ಶವಗಳನ್ನು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

VIDEO: ಬ್ಯಾಟರ್​ ಸಿಕ್ಸ್ ಬಾರಿಸದೇ ಸಿಕ್ಸರ್..!

ಸಿಕ್ಸ್ ಬಾರಿಸದೇ ಸಿಕ್ಸ್​ ಆದರೆ ಹೇಗಿರುತ್ತೆ? ಇಂತಹದೊಂದು ಅಪರೂಪದ ಸಿಕ್ಸರ್​ಗೆ ಆಸ್ಟ್ರೇಲಿಯಾದ ಒನ್​ ಡೇ ಕಪ್ ಟೂರ್ನಿ ಸಾಕ್ಷಿಯಾಗಿದೆ.  ಫೆಬ್ರವರಿ 21, 2026 ರಂದು ನಡೆದ ಈ ಪಂದ್ಯದಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ ಹಾಗೂ ವಿಕ್ಟೋರಿಯಾ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾದ ಓಪನರ್ ಸ್ಯಾಮ್ ಫ್ಯಾನಿಂಗ್  ಬಾಲ್ ಬಿಡಲು ಹೋಗಿ ಅಚ್ಚರಿಯ ರೀತಿಯಲ್ಲಿ ಸಿಕ್ಸರ್ ಬಾರಿಸಿದ್ದಾರೆ.

ಅನಿರೀಕ್ಷಿತಯಾಗಿ ಎದುರಾದ ಶಾರ್ಟ್ ಬಾಲ್ ಅನ್ನು ಆಡಬಾರದೆಂದು ನಿರ್ಧರಿಸಿದ ಫ್ಯಾನಿಂಗ್, ಬ್ಯಾಟ್ ಅನ್ನು ಪಕ್ಕಕ್ಕೆ ಸರಿಸಲು ಪ್ರಯತ್ನಿಸಿದರು. ಈ ವೇಳೆ ಚೆಂಡು ಅಂದುಕೊಂಡಿದ್ದಕ್ಕಿಂತ ಹೆಚ್ಚು ಎತ್ತರಕ್ಕೆ ಬೌನ್ಸ್ ಆಗಿ, ಅವರು ಹಿಂದಕ್ಕೆ ಸರಿಸುತ್ತಿದ್ದ ಬ್ಯಾಟ್‌ನ ಮೇಲ್ಭಾಗಕ್ಕೆಬಡಿಯಿತು.

ಬ್ಯಾಟ್‌ಗೆ ತಗುಲಿದ ವೇಗಕ್ಕೆ ಚೆಂಡು ನೇರವಾಗಿ ವಿಕೆಟ್ ಕೀಪರ್ ತಲೆಯ ಮೇಲಿಂದ ಹಾರಿ ಬೌಂಡರಿ ಗೆರೆ ದಾಟಿ ಸಿಕ್ಸರ್ ಆಯಿತು.
ಕ್ರಿಕೆಟ್ ಲೋಕದಲ್ಲಿ ಶಾರ್ಟ್ ಬಾಲ್ ಅನ್ನು ಲೀವ್ ಮಾಡುವಾಗ ಸಿಕ್ಸರ್ ಹೋಗುವುದು ಅತ್ಯಂತ ವಿರಳ. ಹೀಗಾಗಿ ಈ ಸಿಕ್ಸರ್​ ಅನ್ನು ಕಮೆಂಟೇಟರ್‌ಗಳು  ಕ್ರಿಕೆಟ್ ಇತಿಹಾಸದ “ಅತ್ಯಂತ ಅದೃಷ್ಟದ ಸಿಕ್ಸರ್” ಎಂದು ಕರೆದಿದ್ದಾರೆ.

 

Source link

‘ಉಂಡಾಡಿ ಗುಂಡ’ ನಾಟಕಕ್ಕೆ 80 ವರ್ಷ: ಕಲಾದ್ಯುತಿ ಪ್ರೊಡಕ್ಷನ್ ಹೌಸ್ ವತಿಯಿಂದ ಪ್ರದರ್ಶನ – Kannada News | Sihi Kahi Chandru to act in Undaadi Gunda drama by Parvathavani

ನಾಟಕ ರಚನೆಕಾರರಾಗಿ, ನಿರ್ದೇಶಕರಾಗಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ಪರ್ವತವಾಣಿ (Parvathavani) ಅವರ ಕೊಡುಗೆ ಅಪಾರ. ಡಾ. ರಾಜ್​ಕುಮಾರ್ ನಾಯಕರಾಗಿದ್ದ ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ಚಿತ್ರದಲ್ಲಿ ನಟಿಸುವ ಮೂಲಕವೂ ಅವರು ಮನೆ ಮಾತಾಗಿದ್ದರು. ಪರ್ವತವಾಣಿ ಅವರು ರಚಿಸಿದ್ದ ಹಾಸ್ಯ ನಾಟಕ ‘ಉಂಡಾಡಿ ಗುಂಡ’ (Undaadi Gunda) ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು.

‘ಉಂಡಾಡಿ ಗುಂಡ’ ನಾಟಕ ರಚನೆಗೆ ಇದೀಗ ಎಂಬತ್ತು ವರ್ಷ ತುಂಬಿದೆ. ಈ ಸಂದರ್ಭದಲ್ಲಿ, ಪರ್ವತವಾಣಿ ಅವರಿಗೆ ಗೌರವ ಸಲ್ಲಿಸಲು ‘ಕಲಾದ್ಯುತಿ ಪ್ರೊಡಕ್ಷನ್ ಹೌಸ್’ ಮುಂತಾಗಿದೆ. ಸಂಸ್ಥೆಯ ಈ ಆಶಯಕ್ಕೆ ಖುದ್ದು ಪರ್ವತವಾಣಿಯವರ ಮೊಮ್ಮಗ ಶರತ್ ಪರ್ವತವಾಣಿ ಜೊತೆಯಾಗಿದ್ದಾರೆ. ತಾತ ಬರೆದಿದ್ದ ಪ್ರಸಿದ್ಧ ನಾಟಕವನ್ನು ಮೊಮ್ಮಗ ಶರತ್ ನಿರ್ದೇಶನ ಮಾಡಲಿದ್ದಾರೆ.

ಸಂಜಯ್ ಧ್ರುವ ಅವರು ಇತ್ತೀಚಿನ ವರ್ಷಗಳಲ್ಲಿ ಜಾಹೀರಾತು ಏಜೆನ್ಸಿಯ ಮೂಲಕ ಪರಿಚಿತರಾಗಿದ್ದಾರೆ. ವಿಭಿನ್ನವಾದ ರೂಪುರೇಷೆಗಳೊಂದಿಗೆ ಅವರು ಈಗ ‘ಕಲಾದ್ಯುತಿ ಪ್ರೊಡಕ್ಷನ್ ಹೌಸ್’ ಸಂಸ್ಥೆಯನ್ನು ಶುರು ಮಾಡಿದ್ದಾರೆ. ನೃತ್ಯ, ನಾಟಕ ಸೇರಿದಂತೆ ಪ್ರದರ್ಶನ ಕಲೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸುವುದು, ಹೊಸತನದ ಕಾರ್ಯಕ್ರಮಗಳನ್ನು ಆಯೋಜಿಸುವ ಗುರಿಯೊಂದಿಗೆ ಈ ಸಂಸ್ಥೆಯನ್ನು ಆರಂಭಿಸಲಾಗಿದೆ. ಪರ್ವತವಾಣಿ ಬರೆದ ‘ಉಂಡಾಡಿ ಗುಂಡ’ ನಾಟಕ ಪ್ರದರ್ಶನದ ಮೂಲಕವೇ ‘ಕಲಾದ್ಯುತಿ ಪ್ರೊಡಕ್ಷನ್ ಹೌಸ್’ ತನ್ನ ಮೊದಲ ಹೆಜ್ಜೆಯನ್ನು ಇಡುತ್ತಿದೆ.

ಇದನ್ನೂ ಓದಿ: ನಾಟಕ ಪ್ರದರ್ಶನ, ಕಿಡಿಗೇಡಿಗಳ ಸಂದೇಶಕ್ಕೆ ಕಿವಿಗೊಡದಂತೆ ಸಮಾಜಿಕ ಜಾಲತಾಣಗಳಲ್ಲಿ ಪೊಲೀಸರ ಮನವಿ

ಫೆಬ್ರವರಿ 24ರಂದು ರಂಗಶಂಕರದಲ್ಲಿ ‘ಉಂಡಾಡಿ ಗುಂಡ’ ನಾಟಕ ಪ್ರದರ್ಶನಗೊಳ್ಳಲಿದೆ. ನಂತರ ಫೆಬ್ರವರಿ 27ರಂದು ಯುವಪಥ ಜಯನಗರದಲ್ಲಿ, ಮಾರ್ಚ್ 7ರಂದು ಬಿಪಿ ವಾಡಿಯಾ ಸಭಾಂಗಣದಲ್ಲಿ ಮತ್ತು ಮಾರ್ಚ್ 14ರಂದು KEA ಪ್ರಭಾತ್ ಬಸವೇಶ್ವರನಗರದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ಫೆಬ್ರವರಿ 24, ಮಾರ್ಚ್7 ಹಾಗೂ ಮಾರ್ಚ್ 14ರಂದು ನಡೆಯಲಿರುವ ಪ್ರದರ್ಶನಗಳಲ್ಲಿ ಜನಪ್ರಿಯ ನಟ ಸಿಹಿಕಹಿ ಚಂದ್ರು ಅವರು ಅಭಿನಯಿಸಲಿರುವುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ! ಕೊನೆಗೂ ಸೆರೆ ಸಿಕ್ತು ಕಿಲ್ಲರ್ ಕಾಡಾನೆ – Kannada News | Chikkamagaluru Elephant Attack: Second Worker Killed in Coffee Estate; Elephant Captured

ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ!

ಚಿಕ್ಕಮಗಳೂರು, ಫೆಬ್ರವರಿ 22: ಕೆಲ ದಿನಗಳ ಹಿಂದಷ್ಟೇ ಜಿಲ್ಲೆಯಲ್ಲಿ ಕಾಫಿ ತೋಟದಲ್ಲಿ (Chikkamagaluru) ಕೆಲಸ ಮಾಡುತ್ತಿದ್ದ ಕಾರ್ಮಿಕ ಆನೆ ದಾಳಿಗೆ ಬಲಿಯಾದ ಬೆನ್ನಲ್ಲೇ ಅದೇ ಕಾಫಿತೋಟದಲ್ಲಿ ಕಾಡಾನೆ ದಾಳಿಗೆ ಇನ್ನೊಂದು ಜೀವ ಬಲಿಯಾಗಿದೆ. ಹೊಸಪೇಟೆ ಮೂಲದ ಬೋರಮ್ಮ (34) ಕಾಡಾನೆ ದಾಳಿಯಲ್ಲಿ ಮೃತಪಟ್ಟ ಕಾರ್ಮಿಕ ಮಹಿಳೆ. ಈ ಘಟನೆಯ ಬಳಿಕ ವೇಗದಿಂದ ಸಾಗಿದ ಆನೆ ಸೆರೆ ಕಾರ್ಯಾಚರಣೆಯು ಇದೀಗ ಯಶಸ್ವಿಯಾಗಿದೆ.

ಏಳು ದಿನಗಳಲ್ಲೇ ಎರಡನೇ ಬಲಿ

ನಾಗೇಶ್ ಗೌಡ ಅವರಿಗೆ ಸೇರಿದ ಕಾಫಿ ತೋಟದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆ ಮೇಲೆ ಏಕಾಏಕಿ ಕಾಡಾನೆ ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಬೋರಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇದೇ ತೋಟದಲ್ಲಿ ಕಳೆದ ಏಳು ದಿನಗಳ ಹಿಂದೆ ಹಾವೇರಿ ಮೂಲದ ಕಾರ್ಮಿಕ ಯಲ್ಲಪ್ಪ ಎಂಬವರು ಕೂಡ ಕಾಡಾನೆ ದಾಳಿಗೆ ಬಲಿಯಾಗಿದ್ದರು. ಏಳು ದಿನಗಳ ಅಂತರದಲ್ಲಿ ಎರಡನೇ ಬಲಿ ಸಂಭವಿಸಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

ಕಾರ್ಯಾಚರಣೆ ಯಶಸ್ವಿ

ಏಳು ಕುಮ್ಕಿ ಆನೆಗಳು ಹಾಗೂ ಸುಮಾರು 75 ಸಿಬ್ಬಂದಿಗಳ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಹಿಳೆಗೆ ದಾಳಿ ನಡೆಸಿದ ಸ್ಥಳದಿಂದ ಅಲ್ಪ ದೂರದಲ್ಲಿರುವ ಕಾಫಿ ತೋಟದಲ್ಲಿ ಕಾಡಾನೆಯನ್ನು ಪತ್ತೆ ಮಾಡಲಾಯಿತು. ಸೂಕ್ತ ಸಮಯದಲ್ಲಿ ಅರವಳಿಕೆ ಚುಚ್ಚುಮದ್ದು ನೀಡಿ ಆನೆಯನ್ನು ಅಚೇತನಗೊಳಿಸಿ, ಬಳಿಕ ಕುಮ್ಕಿ ಆನೆಗಳ ಸಹಾಯದಿಂದ ಕಾಡಾನೆಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ಪಡೆದು ಸೆರೆ ಹಿಡಿಯಲಾಗಿದೆ.

ಕಾಫಿ ತೋಟಗಳಿಗೆ ಕೆಲಸಕ್ಕೆ ತೆರಳಬಾರದು ಎಂದು ಅರಣ್ಯ ಇಲಾಖೆ ಮುನ್ನೆಚ್ಚರಿಕೆ ಸೂಚನೆ ನೀಡಿದ್ದರೂ, ಜೀವನೋಪಾಯದ ಅನಿವಾರ್ಯತೆಯಿಂದ ಕಾರ್ಮಿಕರು ತೋಟಗಳಿಗೆ ತೆರಳುತ್ತಿರುವುದು ದುರಂತಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಕಾಫಿ ತೋಟದ ಕಾರ್ಮಿಕ ಸಾವು!

ಗ್ರಾಮಸ್ಥರ ಆಕ್ರೋಶ

ಈ ಮಧ್ಯೆ ಮಹಿಳೆಯ ಮೃತದೇಹವನ್ನು ಸಾಗಿಸುತ್ತಿದ್ದ ವಾಹನವನ್ನು ಚಿಕ್ಕಮಗಳೂರು ತಾಲೂಕಿನ ಕಡಬಗೆರೆ ಗ್ರಾಮದಲ್ಲಿ ಸ್ಥಳೀಯರು ತಡೆದು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಮಧ್ಯೆ ಶವವಿಟ್ಟು ಪ್ರತಿಭಟನೆ ನಡೆಸಿದ ನೂರಾರು ಗ್ರಾಮಸ್ಥರು ಪೀಡಿತ ಕುಟುಂಬಕ್ಕೆ ಸಮರ್ಪಕ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link