All posts by nagaraj11081993

ಮಗುವಿನ ಪಾಲಿಗೆ ರಾಕ್ಷಸಿಯಾದ ಚಿಕ್ಕಮ್ಮ; ಪಾರ್ಕ್​ನಲ್ಲೇ 2 ವರ್ಷದ ಕೂಸನ್ನು ಕೊಂದ ಮಹಿಳೆ – Kannada News | Delhi Crime News 2 Year Old Baby Strangled To Death By Aunt in Park

ನವದೆಹಲಿ, ಫೆಬ್ರವರಿ 20: ದೆಹಲಿಯ ಮುಖರ್ಜಿ ನಗರದಲ್ಲಿ 2 ವರ್ಷದ ಗಂಡು ಮಗುವನ್ನು ಅವನ ಚಿಕ್ಕಮ್ಮ ಕೊಲೆ (Killing) ಮಾಡಿದ್ದಾಳೆ. ಪಾರ್ಕ್​ವೊಂದರಲ್ಲಿ ಈ ಕೊಲೆ ನಡೆದಿದೆ. ಮಗುವನ್ನು ಕತ್ತು ಹಿಸುಕಿ ಕೊಂದು ಆ ಶವದೊಂದಿಗೆ ಆಕೆ ಪಾರ್ಕ್​ನಲ್ಲಿ ಕುಳಿತಿದ್ದಳು. ಮಗು ರಂಜಾನ್ ಹಬ್ಬಕ್ಕೆ ತನ್ನ ತಾಯಿಯೊಂದಿಗೆ ತನ್ನ ಅಜ್ಜಿಯ ಮನೆಗೆ ಹೋಗಿತ್ತು. ಆಗ ಅಲ್ಲಿಗೆ ಬಂದಿದ್ದ ಆ ಮಗುವಿನ ತಾಯಿಯ ತಂಗಿ ಮಗುವನ್ನು ಕರೆದುಕೊಂಡು ಪಾರ್ಕ್​ಗೆ ಹೋಗಿ ಕೊಲೆ ಮಾಡಿದ್ದಾಳೆ.

ನಂತರ ಆಕೆ ಉದ್ಯಾನವನದಲ್ಲಿ ಕುಳಿತು ಮಗುವಿನ ಶವವನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಅಳುತ್ತಾ ನಾಟಕವಾಡಿದ್ದಾಳೆ. ಸ್ಥಳೀಯರು ಮಹಿಳೆಯನ್ನು ಈ ಸ್ಥಿತಿಯಲ್ಲಿ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಮಹಿಳೆಯಿಂದ ಶವವನ್ನು ಪಡೆದುಕೊಂಡಿದ್ದಾರೆ. ಆಗ ಆ ಮಹಿಳೆ ಮಗುವಿನ ಶವವನ್ನು ಬಿಡಲು ನಿರಾಕರಿಸಿದ್ದಾಳೆ. ಪೊಲೀಸರು ಆಕೆಯ ಮನವೊಲಿಸಿ ಮಗುವಿನ ಶವವನ್ನು ವಶಕ್ಕೆ ಪಡೆದಿದ್ದಾರೆ. ಆ ಮಹಿಳೆ ಮಗುವಿನ ಜೀವವನ್ನು ಏಕೆ ತೆಗೆದಳು ಎಂಬುದನ್ನು ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: 3 ವರ್ಷದ ಮಗುವಿನ ಮೇಲೆ ಅಪ್ಪನ ಗೆಳೆಯನಿಂದಲೇ ಅತ್ಯಾಚಾರ

ದೆಹಲಿ ಪೊಲೀಸರ ಪ್ರಕಾರ, ಇಂದು ಮಧ್ಯಾಹ್ನ 1.30ರ ಸುಮಾರಿಗೆ ಮುಖರ್ಜಿ ನಗರ ಪೊಲೀಸ್ ಠಾಣೆಗೆ ಫೋನ್ ಬಂದಿತು. ಎಸ್‌ಎಫ್‌ಎಸ್ ಫ್ಲಾಟ್‌ಗಳ ಬಳಿಯ ಉದ್ಯಾನವನದಲ್ಲಿ ಅಜ್ರಾ (30) ಎಂಬ ಮಹಿಳೆ 2 ವರ್ಷದ ಮಗುವನ್ನು ಕತ್ತು ಹಿಸುಕಿ ಕೊಂದಿದ್ದಾಳೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತು. ಅಜ್ರಾ ಮಗುವಿನ ಚಿಕ್ಕಮ್ಮನಾಗಿದ್ದು, ಆಕೆ ಮಗುವಿನ ಶವವನ್ನು ಹಿಡಿದು ಉದ್ಯಾನವನದಲ್ಲಿ ಕುಳಿತಿದ್ದಳು. ಅಜ್ರಾಳನ್ನು ಈ ಸ್ಥಿತಿಯಲ್ಲಿ ನೋಡಿ ಸ್ಥಳೀಯ ವ್ಯಕ್ತಿಯೊಬ್ಬರು ಆಘಾತಕ್ಕೊಳಗಾದರು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು.

ಹಾದಿ ಎಂಬ ಮೃತ 2 ವರ್ಷದ ಮಗು ದೆಹಲಿಯ ಸೀಲಾಂಪುರದಲ್ಲಿ ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದ. ಹಾದಿ ಮತ್ತು ಆತನ ತಾಯಿ ಉಜ್ಮಾ ಎಸ್‌ಎಫ್‌ಎಸ್ ಫ್ಲಾಟ್‌ನಲ್ಲಿ ತಾಯಿಯ ಮನೆಗೆ ಬಂದಿದ್ದರು. ಈ ವೇಳೆ ಆಕೆಯ ತಂಗಿ ಮಗುವನ್ನು ಪಾರ್ಕ್​ಗೆ ಕರೆದುಕೊಂಡು ಹೋಗಿದ್ದಳು. ಆಗ ಈ ಕೃತ್ಯ ನಡೆದಿದೆ. ವೈಯಕ್ತಿಕ ದ್ವೇಷದಿಂದ ಈ ರೀತಿ ಮಾಡಲಾಗಿದೆಯೇ ಎಂಬ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ಆರಂಭಿಸಿದ್ದಾರೆ. ಹಾದಿಯ ಚಿಕ್ಕಮ್ಮ ಅಜ್ರಾಳನ್ನೂ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಮರು ಮದುವೆಯಾದರೂ ಬಿಡಲಿಲ್ಲ, ಮನೆಗೆ ನುಗ್ಗಿ ಮೂರು ತಿಂಗಳ ಗರ್ಭಿಣಿಯಾಗಿದ್ದ ಮಾಜಿ ಪತ್ನಿಯ ಇರಿದು ಕೊಂದ ಟೆಕ್ಕಿ

ಈ ಘಟನೆಯಿಂದಾಗಿ ಸುತ್ತಲೂ ಭಯದ ವಾತಾವರಣ ಉಂಟಾಗಿದೆ. ಚಿಕ್ಕಮ್ಮ ಮಗುವನ್ನು ಕತ್ತು ಹಿಸುಕಿ ಕೊಂದಿದ್ದು ಏಕೆ ಎಂದು ಜನರು ಆಶ್ಚರ್ಯ ಪಡುತ್ತಿದ್ದಾರೆ. ಉದ್ಯಾನವನದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಆಜ್ರಾ ಮಗುವನ್ನು ಕತ್ತು ಹಿಸುಕುವುದನ್ನು ನೋಡಿದ್ದ. ಅವನು ಕಿರುಚಿದಾಗ ಜನರು ಬಂದು ಪೊಲೀಸರಿಗೆ ವಿಷಯ ತಿಳಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ – Kannada News | Tanisha Kuppanda and Namratha Gowda share review after watching Karthik Mahesh new movie Alpha

‘ಆಲ್ಫಾ’ ಸಿನಿಮಾದಲ್ಲಿ ಕಾರ್ತಿಕ್ ಮಹೇಶ್ (Karthik Mahesh) ಅವರು ನೆಗೆಟಿವ್ ಪಾತ್ರ ಮಾಡಿದ್ದಾರೆ. ಬಿಗ್ ಬಾಸ್ ಶೋ ಗೆದ್ದ ಅವರು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರ ಹೊಸ ಸಿನಿಮಾ ನೋಡಲು ಸ್ನೇಹಿತರು ಬಂದಿದ್ದಾರೆ. ತನಿಷಾ ಕುಪ್ಪಂಡ, ನಮ್ರತಾ ಗೌಡ ಮುಂತಾದವರು ಬಂದು ‘ಆಲ್ಫಾ’ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಕಾರ್ತಿಕ್ ಮಹೇಶ್ ಮಾಡಿರುವ ವಿಲನ್ ಪಾತ್ರ ತನಿಷಾ ಅವರಿಗೆ ಸಖತ್ ಇಷ್ಟ ಆಗಿದೆ. ‘ನಾನು ಈ ಸಿನಿಮಾ ನೋಡೋಕೆ ಬಂದಿದ್ದೇ ಕಾರ್ತಿಕ್ ಮಹೇಶ್ ಅವರಿಗಾಗಿ. ಈವರೆಗೂ ನಾವು ಅವರನ್ನು ಕ್ಯೂಟ್ ಆಗಿ ನೋಡಿದ್ದೆವು. ಆದರೆ ಈಗ ಅವರು ವಿಲನ್ ಆಗಿರುವುದು ನನಗೆ ಖುಷಿ ಆಗಿದೆ. ಅವರನ್ನು ಈ ರೀತಿ ನೋಡಿದ ಬಳಿಕ ನಮ್ಮ ಕನ್ನಡ ಚಿತ್ರರಂಗಕ್ಕೆ ಒಬ್ಬ ಹೊಸ ವಿಲನ್ ಹುಟ್ಟಿಕೊಂಡರು ಎನಿಸುತ್ತದೆ’ ಎಂದು ತನಿಷಾ ಕುಪ್ಪಂಡಾ (Tanisha Kuppanda) ಅವರು ಹೇಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿನ ಟೆಕ್ಕಿ ಸಾವಿಗೆ ಬಿಗ್ ಟ್ವಿಸ್ಟ್​​: ಯುವಕನ ಕಾಮೋನ್ಮಾದಕ್ಕೆ ಶರ್ಮಿಳಾ ಬಲಿ – Kannada News | big twist to bengaluru techie sharmila murder case: killer admits Try to physical assault

ಟೆಕ್ಕಿ ಶರ್ಮಿಳಾ, ಕರ್ನಲ್ ಕುರೈ (ಹಂತಕ)

ಬೆಂಗಳೂರು, ಫೆಬ್ರವರಿ 20): ಬೆಂಗಳೂರಿನ ರಾಮಮೂರ್ತಿ ಇದೇ ಜನವರಿ 16ರಂದು ನಡೆದಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಮಂಗಳೂರು ಮೂಲದ ಶರ್ಮಿಳಾ ಅವರ ನಿಗೂಢ ಸಾವು ಪ್ರಕರಣಕ್ಕೆ ತಿರುವು ಸಿಕ್ಕಿದೆ. ಅತ್ಯಾಚಾರಕ್ಕೆ ಯತ್ನಿಸಿ ವಿಫಲನಾದ ನೆರೆಮನೆಯ 18 ವರ್ಷದ ಯುವಕನೇ ಆಕೆಯನ್ನು ಕೊಲೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ. ಬಳಿಕ ಪೊಲೀಸರು ಮತ್ತಷ್ಟು ತನಿಖೆ ನಡೆಸಿದಾಗ ಆರೋಪಿ ಕರ್ನಲ್ ಕುರೈ ತನ್ನ ವಿಕೃತ ಮನಸ್ಥಿತಿಯನ್ನು ಬಿಚ್ಚಿಟ್ಟಿದ್ದಾನೆ. ಶರ್ಮಿಳಾ ಫ್ಲಾಟ್ ಗೆ ನುಗ್ಗುವ ಮುನ್ನ ನಾಲ್ಕೈದು ಬಾರಿ ರೆಕ್ಕಿ ಮಾಡಿದ್ದನಂತೆ. ಇದು ಸುಲಭವಾಗಿ ಶರ್ಮಿಳಾ ಮನೆಗೆ ನುಗ್ಗಲು ಕುರೈಗೆ ಸಹಕಾರಿಯಾಗಿತ್ತು‌ ಎಂಬುದು ಗೊತ್ತಾಗಿತ್ತು‌. ಮನೆಗೆ ನುಗ್ಗಿದವನೇ ಹಿಂಬದಿಯಿಂದ ಬಂದು ಶರ್ಮಿಳಾನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ. ಆಕೆ ಪ್ರತಿರೋಧ ಒಡ್ಡಿದಾಗ ಆತ ಮಾಡಿರೋದೆ ಘನಘೋರ ಕೃತ್ಯವನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾನೆ.

ಕೊಂದು ಅತ್ಯಾಚಾರಕ್ಕೆ ಯತ್ನಿಸಿದ್ದ ಹಂತಕ!

ಹಂತಕ ಕರ್ನಲ್ ಕುರೈ, ಶರ್ಮಿಳಾಳನ್ನು ತಬ್ಬಿ ಹಿಡಿದಾಗ ಆಕೆ ಬೇಡಿಕೊಂಡ್ರೂ ಆರೋಪಿ ಬಿಟ್ಟಿಲ್ಲ. ಸೋಪಾಗೆ ಶರ್ಮಿಳಾ ತಲೆ ತಗುಲಿ ತೀವ್ರ ರಕ್ತಸ್ರಾವವಾಗಿತ್ತು. ಆದರೂ ಬಿಡದೆ ಶರ್ಮಿಳಾನ್ನ ಹಿಡಿದುಕೊಂಡು ಅತ್ಯಾಚಾರಕ್ಕೆ ಯತ್ನಿಸಿದ್ದನಂತೆ. ಯಾವಾಗ ಪ್ರತಿರೋಧ ಜಾಸ್ತಿಯಾಯ್ತೋ ಎರಡು ಕೈಯಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದ. ಬಳಿಕ ತಾನೇ ಯುವತಿ ಬಟ್ಟೆ ಬಿಚ್ಚಿ ,ಅದೇ ಬಟ್ಟೆಯಿಂದ ರಕ್ತ ಒರೆಸಿ ನೀರಲ್ಲಿ ತೊಳೆದಿದ್ದಾನಂತೆ. ಇದಾದ ಮೇಲೂ ತನ್ನ ವಿಕೃತಿ ಮುಂದುವರೆಸಿದ್ದ ಪಾಪಿ ಶವದ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ್ದನಂತೆ. ತನ್ನ ವಿಕೃತಿಯನ್ನು ಪೊಲೀಸರ ಮುಂದೆ ಆರೋಪಿ ಹೇಳಿಕೊಂಡಿದ್ದಾನೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳಾ ಟೆಕ್ಕಿ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್​: ತನಿಖೆಯಲ್ಲಿ ಕೊಲೆ ರಹಸ್ಯ ಬಯಲು!

ಟೆಕ್ಕಿ ಶರ್ಮಿಳಾ ಕೊಲೆ ಬಳಿಕ ಬೀರುವಿನಲ್ಲಿದ್ದ ಬಟ್ಟೆಗಳನ್ನ ತಂದು ತಾನೇ ಯುವತಿ ಶವಕ್ಕೆ ಹಾಕಿ, ಅಂಗಾತ ಮಲಗಿಸಿ ಅನುಮಾನ ಬರದಂತೆ ಎಸ್ಕೇಪ್ ಆಗಿದ್ದ. ಅದಕ್ಕೂ ಮೊದಲು ಟಾಪ್ ಸೇರಿ ಬಟ್ಟೆಗಳನ್ನ ಮಂಚದ ಮೇಲಿಟ್ಟು ಟಿಶ್ಯು ಪೇಪರ್ ಗೆ ಬೆಂಚಿ ಹಚ್ಚಿದ್ದ. ಆದ್ರೆ ಪ್ಯಾಂಟ್ ಮಿಸ್ ಆಗಿದ್ದು, ಅದನ್ನು ಪಕ್ಕದ ಮನೆಯ ಮರದ ಮೇಲೆ ಬಿಸಾಡಿ ಹೋಗಿದ್ದ. ಇದೇ ವೇಳೆ ಯುವತಿಯ ಪೋನ್ ತೆಗೆದುಕೊಂಡು ಹೋಗಿದ್ದ ಎಂಬುದು ಗೊತ್ತಾಗಿದೆ. ಸದ್ಯ ರಾಮಮೂರ್ತಿನಗರ ಪೊಲೀಸರ ನಿರಂತರ ಡ್ರಿಲ್ ನಿಂದಾಗಿ ಕರ್ನಲ್ ಕುರೈ ಅಸಲಿ ಸತ್ಯ ಬಾಯಿಬಿಟ್ಟಿದ್ದಾನೆ.

ಒಟ್ಟಿನಲ್ಲಿ ನೆರೆಮನೆಯ ಯುವಕನ ಕಾಮೋನ್ಮಾದಕ್ಕೆ ಮಹಿಳಾ ಟೆಕ್ಕಿ ಬಲಿಯಾಗಿರುವುದು ದುರಂತವೇ ಸರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮುಡಾ ಹಗರಣದ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು? – Kannada News | Snehamayi krishna Mother Talks about Bengaluru CCB raids On Mysuru House

ಮೈಸೂರು, (ಫೆಬ್ರವರಿ 20):ಮುಂಬಡ್ತಿ ಪಡೆಯಲು ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ನಟೇಶ್ 1.60 ಕೋಟಿ ಲಂಚ ಕೊಟ್ಟಿದ್ದಾರೆಂದು ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ರು.. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಬಗ್ಗೆ ಜಾರಿ ನಿರ್ದೇಶಾನಾಲಯ ಹಾಗೂ ಆದಾಯ ತೆರಿಗೆ ಇಲಾಖೆಗೂ ದೂರು ನೀಡಿದ್ರು. ಇದರ ಬೆನ್ನಲೇ ಮಾನಹಾನಿ ಪ್ರಕರಣದಡಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮುಡಾ ಮಾಜಿ ಆಯುಕ್ತ ನಟೇಶ್ ದೂರು ನೀಡಿದ್ದು, ಈ ದೂರಿನ ಅನ್ವಯ ಸಿಸಿಬಿಯ ಸೈಬರ್ ಕ್ರೈಮ್ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿದೆ. ಇದರ ಬೆನ್ನಲ್ಲೇ ಸಿಸಿಬಿ ಅಧಿಕಾರಿಗಳು ಸ್ನೇಹಮಯಿ ಕೃಷ್ಣನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇನ್ನು ಮೈಸೂರು ನಿವಾಸದ ಮೇಲೆ ಬೆಂಗಳೂರು ಸಿಸಿಬಿ ದಾಳಿ ಮಾಡಿದ್ದು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ. ಇನ್ನು ಮನೆಯಲ್ಲಿ ಸಿಸಿಬಿಗೆ ಏನೆಲ್ಲಾ ಸಿಕ್ತು ಎನ್ನುವುದನ್ನುಸ್ನೇಹಮಯಿ ಕೃಷ್ಣ ಅವರ ತಾಯಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಸರ್ಕಾರದ ಮುಖ್ಯಕಾರ್ಯದರ್ಶಿ ವಿರುದ್ಧ ಲಂಚ ಆರೋಪ ಮಾಡಿದ್ದ ಸ್ನೇಹಮಯಿ ಕೃಷ್ಣ ಸಿಸಿಬಿ ವಶಕ್ಕೆ

Source link

Maarnami Movie: ‘ಮಾರ್ನಮಿ’ ಸಿನಿಮಾಗೆ ಪ್ರೇಕ್ಷಕರಿಂದ ಸಿಕ್ತು ಭರ್ಜರಿ ರೆಸ್ಪಾನ್ಸ್ – Kannada News | Ritvvikk Chaithra J Achar starrer Maarnami Kannada movie audience Review and reaction

ಕರಾವಳಿ ಭಾಗದ ಕತೆ ಹೊಂದಿರುವ ‘ಮಾರ್ನಮಿ’ (Maarnami) ಸಿನಿಮಾ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ರಿತ್ವಿಕ್ ಮಠದ್ ಮತ್ತು ಚೈತ್ರಾ ಆಚಾರ್ ಅವರು ಜೋಡಿಯಾಗಿ ನಟಿಸಿದ್ದಾರೆ. ಸೋನು ಗೌಡ, ಪ್ರಕಾಶ್ ತುಮ್ಮಿನಾಡು, ಸುಮನ್ ತಲ್ವಾರ್, ಜ್ಯೋತಿ ಶೆಟ್ಟಿ, ಸ್ವರಾಜ್ ಶೆಟ್ಟಿ ಮುಂತಾದವರು ಕೂಡ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಶಿಲ್ಪಾ ನಿಶಾಂತ್ ನಿರ್ಮಾಣ ಮಾಡಿದ ಈ ಚಿತ್ರಕ್ಕೆ ರಿಷಿತ್ ಶೆಟ್ಟಿ ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ಫೆಬ್ರವರಿ 20ರಂದು ತೆರೆಕಂಡ ಈ ಸಿನಿಮಾಗೆ ಪ್ರೇಕ್ಷಕರಿಗೆ ಮೆಚ್ಚುಗೆ ಸಿಕ್ಕಿದೆ.

ನಟಿ ಚೈತ್ರಾ ಆಚಾರ್ ಅವರು ಒಳ್ಳೆಯ ಕಥೆ ಇರುವ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆ ಸಾಲಿಗೆ ‘ಮಾರ್ನಮಿ’ ಕೂಡ ಸೇರ್ಪಡೆ ಆಗಿದೆ. ‘ಈ ಸಿನಿಮಾದ ಕತೆ ಚೆನ್ನಾಗಿದೆ. ನೀಡಿರುವ ಮೆಸೇಜ್ ಕೂಡ ಉತ್ತಮವಾಗಿದೆ. ಫೈಟಿಂಗ್ ಕೂಡ ಚೆನ್ನಾಗಿ ಮಾಡಿದ್ದಾರೆ. ಫ್ಯಾಮಿಲಿ ಆಡಿಯನ್ಸ್ ನೋಡುವಂತಹ ಸಿನಿಮಾ ಇದು. ಮಾಮೂಲಿ ಎಂಬಂತಹ ಸಿನಿಮಾ ಅಲ್ಲ’ ಎಂದು ಪ್ರೇಕ್ಷಕರು ಪ್ರತಿಕ್ರಿಯಿಸಿದ್ದಾರೆ.

‘ಸೆಕೆಂಡ್ ಹಾಫ್​​ನಲ್ಲಿ ಅನಿರೀಕ್ಷಿತ ಟ್ವಿಸ್ಟ್ ಇದೆ. ತಾಯಿ ಸೆಂಟಿಮೆಂಟ್ ದೃಶ್ಯಗಳು ಪ್ರೇಕ್ಷಕರಿಗೆ ಕನೆಕ್ಟ್ ಆಗುತ್ತವೆ. ಎಲ್ಲ ದೃಶ್ಯದಲ್ಲೂ ಕುತೂಹಲ ಇದೆ. ರೂಪಕದ ರೀತಿ ಮೂಡಿಬಂದಿದೆ. ನಿರೀಕ್ಷಿಸಿಯೇ ಇಲ್ಲದ ರೀತಿಯಲ್ಲಿ ಕ್ಲೈಮ್ಯಾಕ್ಸ್ ಮೂಡಿಬಂದಿದೆ. ಫ್ಯಾಮಿಲಿಗೋಸ್ಕರ ಹೀರೋ ಏನೆಲ್ಲ ಮಾಡುತ್ತಾನೆ ಎಂಬುದನ್ನು ತೋರಿಸಲಾಗಿದೆ. ಚಿತ್ರದ ಸೆಕೆಂಡ್ ಹಾಫ್ ಬಹಳ ಚೆನ್ನಾಗಿದೆ’ ಎಂದು ಕೂಡ ಪ್ರೇಕ್ಷಕರು ಹೇಳಿದ್ದಾರೆ.

‘ಕಾಂತಾರ ರೀತಿಯ ಸಿನಿಮಾಗಳು ಕರಾವಳಿ ಶೈಲಿಯಲ್ಲಿ ಬಂದಿದ್ದವು. ಮಾರ್ನಮಿ ಸಿನಿಮಾ ಕೂಡ ಅದೇ ರೀತಿ ಮೂಡಿಬಂದಿದೆ. ಚಿತ್ರತಂಡದವರು ಚೆನ್ನಾಗಿ ಮಾಡಿದ್ದಾರೆ. ಸೈಲೆಂಟ್ ಆಗಿಯೇ ಈ ಸಿನಿಮಾ ನಮ್ಮನ್ನು ಆವರಿಸುತ್ತದೆ. ಕರಾವಳಿ ಸೊಗಡನ್ನು ಈ ಸಿನಿಮಾದಲ್ಲಿ ಎತ್ತಿ ಹಿಡಿದಿದ್ದಾರೆ. ಹೆಣ್ಣು ಯಾಕೆ ಚಂಚಲ ಆಗುತ್ತಾಳೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಿದ್ದಾರೆ’ ಎಂಬ ಪ್ರತಿಕ್ರಿಯೆ ಸಹ ಬಂದಿದೆ.

ಇದನ್ನೂ ಓದಿ: ‘ಮಾರ್ನಮಿ’ ನೋಡಲು ಬನ್ನಿ: ಅಭಿಮಾನಿಗಳಿಗೆ ಚೈತ್ರಾ ಜೆ. ಆಚಾರ್ ಆಹ್ವಾನ

ಈ ವಾರ ಕನ್ನಡದ 7 ಸಿನಿಮಾಗಳು ಬಿಡುಗಡೆ ಆದವು. ಹಾಗಾಗಿ ಪೈಪೋಟಿ ಜಾಸ್ತಿ ಇದೆ. ಅವುಗಳ ನಡುವೆ ‘ಮಾರ್ನಮಿ’ ಸಿನಿಮಾ ಭಿನ್ನವಾಗಿ ಗುರುತಿಸಿಕೊಂಡಿದೆ. ಪ್ರೀಮಿಯರ್ ಶೋ ಮತ್ತು ಫಸ್ಟ್ ಡೇ ಸಿನಿಮಾ ನೋಡಿದ ಪ್ರೇಕ್ಷಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮನಬಂದಂತೆ ಸುಂಕ ಹೇರಿದ ಟ್ರಂಪ್​ಗೆ ಶಾಕ್ ಕೊಟ್ಟ ಅಮೆರಿಕದ ಸುಪ್ರೀಂ ಕೋರ್ಟ್ – Kannada News | US Supreme Court strikes down Donald Trump’s global tariffs terms them illegal

ವಾಷಿಂಗ್ಟನ್, ಫೆಬ್ರವರಿ 20: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರಿಗೆ ಕ್ಯಾಬಿನೆಟ್​​ ಒಪ್ಪಿಗೆಯಿಲ್ಲದೆ ಸರ್ವಾಧಿಕಾರದಿಂದ ಜಾಗತಿಕ ಸುಂಕಗಳನ್ನು ವಿಧಿಸುವ ಅಧಿಕಾರವಿಲ್ಲ ಎನ್ನುವ ಮೂಲಕ ಅಮೆರಿಕದ ಸುಪ್ರೀಂ ಕೋರ್ಟ್​ ಟ್ರಂಪ್​ಗೆ ದೊಡ್ಡ ಶಾಕ್ ನೀಡಿದೆ. ಅಲ್ಲದೆ, ಟ್ರಂಪ್ ಅವರ ಸುಂಕ ನೀತಿ ಕಾನೂನುಬಾಹಿರ ಎಂದು ಕೂಡ ಹೇಳಿದೆ. ಈ ಮೂಲಕ ಟ್ರಂಪ್ ಅವರ ಜಾಗತಿಕ ಸುಂಕಗಳನ್ನು ಅಮೆರಿಕದ ಸುಪ್ರೀಂ ಕೋರ್ಟ್ 6-3 ಅಂತರದಿಂದ ರದ್ದುಗೊಳಿಸಿದೆ. ಹೀಗಾಗಿ, ಟ್ರಂಪ್ ಅವರ ಮುಂದಿನ ಕಾನೂನು ನಡೆಯ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವಾರು ದೇಶಗಳ ಮೇಲೆ ಏಕಪಕ್ಷೀಯವಾಗಿ ವ್ಯಾಪಕ ಸುಂಕಗಳನ್ನು ವಿಧಿಸುವ ಮೂಲಕ ಫೆಡರಲ್ ಕಾನೂನನ್ನು ಉಲ್ಲಂಘಿಸಿದ್ದಾರೆ ಎಂದು ಯುಎಸ್ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇದು ಜಾಗತಿಕ ಆರ್ಥಿಕತೆಗೆ ವ್ಯಾಪಕ ಪರಿಣಾಮಗಳನ್ನು ಹೊಂದಿರುವ ಟ್ರಂಪ್ ಅವರ ಆಕ್ರಮಣಕಾರಿ ವ್ಯಾಪಾರ ನೀತಿಗಳಿಗೆ ಪ್ರಮುಖ ಹಿನ್ನಡೆಯಾಗಿದೆ. ಟ್ರಂಪ್ ಅವರು ಜಗತ್ತಿನಾದ್ಯಂತದ ದೇಶಗಳ ಮೇಲೆ ವಿಧಿಸಿರುವ ಸುಂಕಗಳು ಕಾನೂನುಬಾಹಿರ ಎಂದು ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಲು ವಿನ್ಯಾಸಗೊಳಿಸಲಾದ ಅಮೆರಿಕದ ಫೆಡರಲ್ ಕಾನೂನಿನಡಿ ಜಾರಿಗೆ ತರಲಾದ ಡೊನಾಲ್ಡ್ ಟ್ರಂಪ್ ಅವರ ಜಾಗತಿಕ ಸುಂಕಗಳ ವಿರುದ್ಧ ಅಮೆರಿಕದ ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪು ಇದಾಗಿದೆ. ಇಂತಹ ಪ್ರಕರಣಗಳಲ್ಲಿ ಅಧ್ಯಕ್ಷರು ತುರ್ತು ಅಧಿಕಾರವನ್ನು ಬಳಸುವಂತಿಲ್ಲ, ಕ್ಯಾಬಿನೆಟ್ ಅಭಿಪ್ರಾಯವೂ ಮುಖ್ಯ ಎಂದು ಕೋರ್ಟ್ ಹೇಳಿದೆ.

ಇದನ್ನೂ ಓದಿ: ನಾನೇ ಭಾರತ-ಪಾಕ್ ಸಂಘರ್ಷ ನಿಲ್ಲಿಸಿದ್ದು; ಮತ್ತೆ ಹಳೇ ರಾಗ ಹಾಡಿದ ಟ್ರಂಪ್, ಶೆಹಬಾಜ್ ಷರೀಫ್ ಗಪ್​ಚುಪ್

ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ (ಐಇಇಪಿಎ) ಅಡಿಯಲ್ಲಿ ಡೊನಾಲ್ಡ್ ಟ್ರಂಪ್ ಅವರಿಗೆ ನೀಡಲಾದ ಅಧಿಕಾರವನ್ನು ಅತಿಯಾಗಿ ಬಳಸಿಕೊಂಡಿದ್ದಾರೆ ಎಂದು ಕೆಳ ನ್ಯಾಯಾಲಯಗಳು ತೀರ್ಪು ನೀಡಿವೆ. ಯುಎಸ್ ಸಂವಿಧಾನದ ಪ್ರಕಾರ, ಸುಂಕಗಳನ್ನು ವಿಧಿಸುವ ಅಧಿಕಾರ ಕಾಂಗ್ರೆಸ್‌ಗೆ ಇದೆ. ಅಮೆರಿಕದ ಅಧ್ಯಕ್ಷರು ಈ ಹಿಂದೆ 1977ರ ಈ ಕಾನೂನನ್ನು ನಿಷೇಧಗಳನ್ನು ವಿಧಿಸಲು ಮಾತ್ರ ಬಳಸುತ್ತಿದ್ದರು. ಆದರೆ, ಆಮದುಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ತೆರಿಗೆ ವಿಧಿಸಲು ಇದನ್ನು ಬಳಸಿದ ಮೊದಲ ಅಧ್ಯಕ್ಷರೆಂದರೆ ಡೊನಾಲ್ಡ್ ಟ್ರಂಪ್.

ಟ್ರಂಪ್ ಅವರ ತುರ್ತು ಅಧಿಕಾರಗಳ ಅಡಿಯಲ್ಲಿ ಸುಂಕಗಳನ್ನು ವಿಧಿಸುವ ಅಧಿಕಾರವಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಟ್ರಂಪ್ ಹಲವಾರು ದೇಶಗಳಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಭಾರೀ ಸುಂಕಗಳನ್ನು ವಿಧಿಸಿದ್ದರು. ಅದರಲ್ಲಿ ಭಾರತವೂ ಸೇರಿತ್ತು. ಇದೀಗ ಭಾರತದ ಮೇಲಿನ ಸುಂಕವನ್ನು ಕಡಿತಗೊಳಿಸಲಾಗಿದೆ. ಏಪ್ರಿಲ್ 2025ರಲ್ಲಿ ಟ್ರಂಪ್ ವ್ಯಾಪಾರ ಕೊರತೆಯನ್ನು ರಾಷ್ಟ್ರೀಯ ತುರ್ತುಸ್ಥಿತಿ ಎಂದು ಘೋಷಿಸಿದರು. ಬಹುತೇಕ ಎಲ್ಲಾ ಇತರ ದೇಶಗಳ ಮೇಲೆ ಭಾರೀ ಆಮದು ಸುಂಕಗಳನ್ನು ವಿಧಿಸುವುದಾಗಿ ಘೋಷಿಸಿದರು.

ಇದನ್ನೂ ಓದಿ: ಹತ್ತು ದಿನ ಟೈಂ ಕೊಡ್ತೀನಿ, ಹೇಳಿದ್ದು ಕೇಳದೆ ಇದ್ರೆ ಯುದ್ಧ ಗ್ಯಾರಂಟಿ, ಇರಾನ್​ಗೆ ಗಡುವು ಕೊಟ್ಟ ಟ್ರಂಪ್

ಅವರು ಚೀನಾ, ಕೆನಡಾ ಮತ್ತು ಮೆಕ್ಸಿಕೊದ ಮೇಲೂ ಅದೇ ಕಾನೂನಿನಡಿಯಲ್ಲಿ ಸುಂಕಗಳನ್ನು ವಿಧಿಸಿದ್ದರು. ಫೆಂಟನಿಲ್ ಮತ್ತು ಇತರ ಅಕ್ರಮ ಔಷಧಿಗಳ ಕಳ್ಳಸಾಗಣೆಯನ್ನೂ ಅವರು ರಾಷ್ಟ್ರೀಯ ತುರ್ತುಸ್ಥಿತಿ ಎಂದು ಘೋಷಿಸಿದ್ದರು. ಇದರ ವಿರುದ್ಧ ನ್ಯಾಯಾಲಯದಲ್ಲಿ ಹಲವು ದಾವೆಗಳು ದಾಖಲಾಗಿತ್ತು. ಆ ಪ್ರಕರಣದಲ್ಲಿ ಇದೀಗ ತೀರ್ಪು ಹೊರಬಿದ್ದಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 9:38 pm, Fri, 20 February 26

Source link

ಸರ್ಕಾರಿ ಆಸ್ಪತ್ರೆ ವೈದ್ಯರ ಕಳ್ಳಾಟಕ್ಕೆ ಬ್ರೇಕ್: ಏನಿದು ಹಾಜಾರಾತಿಗೆ ಸ್ಯಾಲರಿ ಲಿಂಕ್? – Kannada News | Karnataka Health Department Plan Doctors Attendance Link To Salary, What Is this?

ಬೆಂಗಳೂರು, (ಫೆಬ್ರವರಿ 20): ಇತ್ತೀಚೆಗೆ ರಾಜಧಾನಿ ಬೆಂಗಳೂರು ಸೇರಿದ್ದಂತೆ ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದು ನೆಟ್ಟಗಿಲ್ಲ. ವೈದ್ಯರು(Doctors) ಸರಿಯಾದ ಟೈಮ್ ಗೆ ಬರುವುದಿಲ್ಲ. ಇನ್ನು ಕೆಲವು ವೈದ್ಯರು ಹಾಗೂ ಸಿಬ್ಬಂದಿ ಆಸ್ಪತ್ರೆಗೆ ಬಂದು ಬಯೋಮೇಟ್ರಿಕ್ ಪಂಚ್ ಮಾಡಿ ಬೇರೆ ಆಸ್ಪತ್ರೆಗೆ ಹೋಗುವುದು ಹಾಗೂ ಡ್ಯೂಟಿ ಬಿಟ್ಟು ಬೇರೆ ಪರ್ಸನಲ್ ಕೆಲಸದಲ್ಲಿ ಭಾಗಿಯಾಗುವುದು ಆರೋಪ ಕೇಳಿ ಬಂದಿದೆ. ಹೀಗಾಗಿ ಆರೋಗ್ಯ ಇಲಾಖೆ (Karnataka Health Department) ಸರ್ಜಿಕಲ್ ಸ್ಟ್ರೈಕ್ ಗೆ ಮುಂದಾಗಿದೆ.. ಆರೋಗ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ಆರೋಗ್ಯ ಕೇಂದ್ರಗಳು, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಫೇಸಿಯಲ್ ಅಟೆಂಡೆನ್ಸ್ ಮೂಲಕ ಮೊಬೈಲ್ ಹಾಜರಾತಿಗೆ ಸ್ಯಾಲರಿ ಲಂಕ್ ಮಾಡಲು ಮುಂದಾಗಿದೆ.

ಹೌದು…ಇದಕ್ಕೆ ಸ್ಯಾಲರಿ ಲಿಂಕ್ ಆಗಲಿದ್ದು ಹಾಜರಾತಿಯಾದಷ್ಟೇ ಸಂಬಂಳ ವೈದ್ಯರಿಗೆ ಸಿಗಲಿದೆ. ಆಸ್ಪತ್ರೆಗೆ ಜಿಪಿಎಸ್ ಫಿಕ್ಸ್ ಆಗಲಿದ್ದು, ವೈದ್ಯರ ಕಳ್ಳಾಟಕ್ಕೆ ಕಡಿವಾಣ ಬೀಳಲಿದೆ. ಮೊಬೈಲ್ ನಲ್ಲಿ ಫೇಸಿಯಲ್ ಅಟೆಂಡೆನ್ಸ್ ಸ್ಕ್ರೀನಿಂಗ್ ಆ್ಯಪ್ ಮೂಲಕ ಟ್ರ್ಯಾಕಿಂಗ್ ಮಾಡಲು ಮುಂದಾಗಿದೆ. ವೈದ್ಯರು ಡ್ಯೂಟಿ ಟೈಮ್ ನಲ್ಲಿ ನಿಗಧಿತ ಆಸ್ಪತ್ರೆ ವ್ಯಾಪ್ತಿಯಿಂದ ಹೊರ ಹೋದ್ರೆ ಮಾಹಿತಿ ಸಿಗಲಿದೆ.ಜೊತೆಗೆ ತಡವಾಗಿ ಕರ್ತವ್ಯಕ್ಕೆ ಬಂದ್ರೆ ಕೂಡಾ ಮಾಹಿತಿ ಸಿಗಲಿದ್ದು, ಹಾಜರಾತಿಗೆ ಸ್ಯಾಲರಿ ಲಿಂಕ್ ಮಾಡಿದ್ರೆ ಕೆಲಸ ಮಾಡಿದಷ್ಟು ವೇತನ ಸಿಗಲಿದೆ.ವೈದ್ಯರ ವಿರುದ್ಧ ಕಾನೂನು ಶಿಸ್ತು ಕ್ರಮದ ಅಸ್ತ್ರ ಪ್ರಯೋಗಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

ಇದನ್ನೂ ಓದಿ: ನಮ್ಮ ಮೆಟ್ರೋದಿಂದ ಮದ್ಯಪ್ರಿಯರಿಗೆ ಶೀಘ್ರವೇ ಗುಡ್​​ನ್ಯೂಸ್​? ಸೀಲ್ಡ್ ಲಿಕ್ಕರ್​​ ಬಾಟಲ್​​ ಸಾಗಾಟಕ್ಕೆ ಅನುಮತಿ?

ಒಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಂದ್ರೆ ಹೇಳೊರಿಲ್ಲ ಕೇಳೊರಿಲ್ಲ ಎಂಬಂತೆ ಇದ್ದು, ಎಷ್ಟೋ ವೈದ್ಯರು ಆಸ್ಪತ್ರೆಗೆ ಬಂದು ಅಟೆಂಡೆನ್ಸ್ ಪಂಚ್ ಮಾಡಿ ಹೋಗಿ ಬೀಡ್ತಾರೆ. ಹೀಗೆ ಕಳ್ಳಾಟವಾಡುವ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಈಗ ಆರೋಗ್ಯ ಇಲಾಖೆ ಬಿಸಿ ಮುಟ್ಟಿಸಲು ಮಂದಾಗಿದೆ.

ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ ಸಮಯಕ್ಕೆ ಚಿಕಿತ್ಸೆ ಸಿಗದೇ ಅದೆಷ್ಟೋ ರೋಗಿಗಳು ಸಾವನ್ನಪ್ಪಿವೆ. ಇದೀಗ ಆರೋಗ್ಯ ಇಲಾಖೆ ಈ ಕ್ರಮ ಕೈಗೊಳ್ಳುತ್ತಿರುವುದರಿಂದ ಹೀಗಲಾದರೂ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗಲಿದೆಯಾ ಎನ್ನುವುದನ್ನು ಕಾದುನೋಡಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Rahul Chahar divorce: ಮತ್ತೊಬ್ಬ ಟೀಮ್​ ಇಂಡಿಯಾ ಕ್ರಿಕೆಟರ್​​ ಬಾಳಲ್ಲಿ ಬಿರುಕು; ವಿಚ್ಛೇದನ ಘೋಷಣೆ – Kannada News | Indian Team Spinner, CSK Player Rahul Chahar Announces Divorce from Wife Ishani Johar

ರಾಹುಲ್ ಚಾಹರ್, ಇಶಾನಿImage Credit source: timesnownews

ಬೆಂಗಳೂರು, ಫೆಬ್ರವರಿ 20: ಭಾರತೀಯ ಸ್ಪಿನ್ನರ್ ಹಾಗೂ ಸಿಎಸ್​​ಕೆ ಆಟಗಾರ ರಾಹುಲ್ ಚಾಹರ್ ವಿಚ್ಛೇದನ ಘೋಷಿಸಿದ್ದಾರೆ. 2022ರಲ್ಲಿ ಇಶಾನಿ ಅವರನ್ನು ವಿವಾಹವಾಗಿದ್ದ ರಾಹುಲ್, 4ನೇ ವಾರ್ಷಿಕೋತ್ಸವಕ್ಕೂ ಮುನ್ನ ಈ ನಿರ್ಧಾರಕ್ಕೆ ಬಂದಿದ್ದಾರೆ. ಕಳೆದ 15 ತಿಂಗಳು ನ್ಯಾಯಾಲಯದ ಕೋಣೆಗಳಲ್ಲಿ ಕಳೆದೆ ಎಂದು ಚಾಹರ್ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ ತಿಳಿಸಿದ್ದು, ತಮ್ಮ ಜೀವನದ ಒಂದು ಅಧ್ಯಾಯ ಮುಕ್ತಾಯಗೊಳ್ಳುತ್ತಿದೆ ಎಂದಿದ್ದಾರೆ.

ಮತ್ತಷ್ಟು ಮಾಹಿತಿ ಅಪ್​ಡೇಟ್​ ಆಗಲಿದೆ.

Source link

ಭಾರತೀಯರಿಗೆ ಬಾಂಗ್ಲಾದೇಶದ ವೀಸಾ ಸೇವೆ ಮತ್ತೆ ಆರಂಭ; ಪ್ರಧಾನಿ ತಾರಿಕ್ ರೆಹಮಾನ್ ನಿರ್ಧಾರ – Kannada News | Bangladesh Restores visa services for Indians Days After Tarique Rahman Takes oath

ಢಾಕಾ, ಫೆಬ್ರವರಿ 20: ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ) ಈ ಬಾರಿಯ ಚುನಾವಣೆಯಲ್ಲಿ ಗೆಲುವು ಕಂಡ ನಂತರ ಫೆಬ್ರವರಿ 17ರಂದು ಬಾಂಗ್ಲಾದೇಶದ ಹೊಸ ಪ್ರಧಾನಿಯಾಗಿ ತಾರಿಕ್ ರೆಹಮಾನ್ (Tarique Rahman) ಅಧಿಕಾರ ವಹಿಸಿಕೊಂಡಿದ್ದರು. ಅದಾದ ಮೂರೇ ದಿನದಲ್ಲಿ ನವದೆಹಲಿಯಲ್ಲಿರುವ ಬಾಂಗ್ಲಾದೇಶ ಹೈಕಮಿಷನ್‌ನಲ್ಲಿ ಭಾರತೀಯ ನಾಗರಿಕರಿಗೆ ವೀಸಾ ಸೇವೆಗಳನ್ನು ಮರು ಸ್ಥಾಪಿಸುವ ಮೂಲಕ ಭಾರತದೊಂದಿಗೆ ಸಂಬಂಧವನ್ನು ಸರಿಪಡಿಸಲು ಅವರು ಕ್ರಮ ಕೈಗೊಂಡಿದ್ದಾರೆ.

ಇಂದಿನಿಂದಲೇ ಈ ನಿರ್ಧಾರ ಜಾರಿಗೆ ಬರಲಿದೆ. ಮಹಮ್ಮದ್ ಯೂನಸ್ ಸರ್ಕಾರ 2025ರಿಂದ ಭಾರತಕ್ಕೆ ವೀಸಾ ಸೇವೆಯನ್ನು ರದ್ದುಗೊಳಿಸಿತ್ತು. ಇದೀಗ ಹೊಸ ಸರ್ಕಾರ ರಚನೆಯಾದ ನಂತರ ಭಾರತ ಹಾಗೂ ಬಾಂಗ್ಲಾದೇಶದ ನಡುವಿನ ಸಂಬಂಧ ಸುಧಾರಿಸುವ ಲಕ್ಷಣಗಳು ಕಾಣುತ್ತಿವೆ. ಇಂದು ದೆಹಲಿಯ ಬಾಂಗ್ಲಾ ಹೈಕಮಿಷನ್ ನಿರ್ಬಂಧಗಳಿಲ್ಲದೆ ಭಾರತೀಯರಿಗೆ ಪ್ರವಾಸಿ, ವೈದ್ಯಕೀಯ, ವ್ಯವಹಾರ, ಕೆಲಸ ಮತ್ತು ಇತರ ವೀಸಾ ವರ್ಗಗಳನ್ನು ನೀಡಿತು.

ಇದನ್ನೂ ಓದಿ: ಬಾಂಗ್ಲಾದೇಶದ ಚುನಾವಣಾ ಗೆಲುವಿನ ಬಳಿಕ ಭಾರತದ ಬಗ್ಗೆ ತಾರಿಕ್ ರೆಹಮಾನ್ ಮೊದಲ ಹೇಳಿಕೆಯೇನು?

ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರದ ಉಸ್ತುವಾರಿ ಮಹಮ್ಮದ್ ಯೂನಸ್ ಅವರ ಅಡಿಯಲ್ಲಿ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿವೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತ ವಿರೋಧಿ ಯುವ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ಹತ್ಯೆಯ ನಂತರ ಎರಡೂ ದೇಶದ ನಡುವಿನ ಸಂಬಂಧಗಳು ಮತ್ತಷ್ಟು ಹದಗೆಟ್ಟವು. ಅವರ ಹತ್ಯೆಯ ನಂತರ ವ್ಯಾಪಕ ಪ್ರತಿಭಟನೆಗಳು ಮತ್ತು ಹಿಂದೂಗಳ ವಿರುದ್ಧ ಹಲವಾರು ಹಿಂಸಾಚಾರದ ಘಟನೆಗಳು ನಡೆದವು.

ಇದರ ನಡುವೆ ಬಾಂಗ್ಲಾ ಪ್ರಧಾನಿ ತಾರಿಕ್ ರೆಹಮಾನ್ ಅವರ ಮೊದಲ ಅಧಿಕೃತ ವಿದೇಶ ಪ್ರವಾಸದ ಬಗ್ಗೆ ರಾಜತಾಂತ್ರಿಕ ವಲಯಗಳಲ್ಲಿ ಊಹಾಪೋಹಗಳು ಕೇಳಿಬರುತ್ತಿವೆ. ಈ ವಾರದ ಆರಂಭದಲ್ಲಿ, ಭಾರತೀಯ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಪ್ರಧಾನಿ ನರೇಂದ್ರ ಮೋದಿಯವರ ಪ್ರತಿನಿಧಿಯಾಗಿ ರೆಹಮಾನ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಪ್ರಮಾಣವಚನ ಸ್ವೀಕಾರ

ಭಾರತಕ್ಕೆ ಭೇಟಿ ನೀಡುವಂತೆ ಓಂ ಬಿರ್ಲಾ ಅವರು ಪ್ರಧಾನಿ ಮೋದಿಯ ಪರವಾಗಿ ತಾರಿಕ್ ರೆಹಮಾನ್ ಅವರಿಗೆ ಆಹ್ವಾನವನ್ನು ನೀಡಿದ್ದರು. ಕಳೆದ ವರ್ಷ ಮಹಮ್ಮದ್ ಯೂನಸ್ ಅವರು ಹಿಂದಿನ ಸರ್ಕಾರ ಸಂಪ್ರದಾಯವನ್ನು ಮುರಿದು ಮೊದಲ ಅಧಿಕೃತ ಭೇಟಿಗೆ ಚೀನಾವನ್ನು ಆಯ್ಕೆ ಮಾಡಿಕೊಂಡಿದ್ದು ಚರ್ಚೆಗೆ ಕಾರಣವಾಗಿತ್ತು. ಇದಾದ ನಂತರ ಭಾರತ ಹಾಗೂ ಬಾಂಗ್ಲಾದೇಶದ ನಡುವಿನ ಸಂಬಂಧ ನಾನಾ ಕಾರಣಗಳಿಂದ ಹದಗೆಟ್ಟಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ನೋಡ ನೋಡ ಎಷ್ಟು ಚಂದ ಅಲಾ: ಉದ್ಯಾನ ನಗರಿ ಬೆಂಗಳೂರಿನಲ್ಲಿ ಹೂಗಳದ್ದೇ ದರ್ಬಾರ್ – Kannada News | Bengaluru Blooms: Yellow and Pink Flowers Enhance Garden City Beauty

ಉದ್ಯಾನನಗರಿ ತುಂಬೆಲ್ಲಾ ಹಳದಿ ಹಾಗೂ ತಿಳಿ ಗುಲಾಬಿ ಬಣ್ಣದ ಹೂಗಳು ಅರಳಿ ನಿಂತಿವೆ. ಈ ಕಲರ್ ಫುಲ್ ಹೂವಿನಿಂದ ಬೆಂಗಳೂರಿನ ಬ್ಯುಟಿ ದುಪ್ಪಟ್ಟಾಗಿದ್ದು, ಕಣ್ಣಿಗೆ ಹಬ್ಬದಂತಿದೆ. ನಮ್ಮ ಬೆಂಗಳೂರಿನಲ್ಲಿ ಹಳದಿ ಹಾಗೂ ಗುಲಾಬಿ ಬಣ್ಣದ ಕಲರವ ಜೋರಾಗಿದೆ. 

ಹಚ್ಚ ಹಸಿರಿನ ಪ್ರಕೃತಿ ದೇವಿಗೆ ಹಳದಿ ಸೀರೆಯುಟ್ಟಿಸಿ ಮುಡಿಗೆ ಸೊಗಸಾದ ಗುಲಾಬಿ ಬಣ್ಣದ ಹೂವನ್ನ ಮುಡಿಸಿರುವ ಪರಿಯನ್ನ ನೋಡುತ್ತಿದ್ದರೆ ಯಾರ ಮನಸ್ಸು ಕಳೆದು ಹೋಗಲ್ಲ ಹೇಳಿ. ನಿಜಕ್ಕೂ ಈ ಅದ್ಬುತ ದೃಶ್ಯ ನಮ್ಮ ಕಣ್ಣಿಗೆ ಹಬ್ಬ. ಈ ರೀತಿಯ ಕಲರ್‌ಫುಲ್‌ ಹೂಗಳಿಂದಲೇ ಉದ್ಯಾನನಗರಿಯ ಸೌಂದರ್ಯಕ್ಕೆ ಮತ್ತಷ್ಟು ಮೆರಗು ಬಂದಿದೆ. 

ಸದ್ಯ ಬೆಂಗಳೂರಿನಲ್ಲಿ ಹಳದಿ ಹಾಗೂ ಗುಲಾಬಿ ಬಣ್ಣದ ಹೂಗಳು ಅರಳಿ ನಿಂತ್ತಿವೆ. ಕೊಳವೆ ಆಕಾರದಲ್ಲಿ ಕಾಣುವ ಗುಲಾಬಿ ಬಣ್ಣದ ಹೂವನ್ನ ಟಬುಬಿಯಾ ರೋಸುಯಾ ಪಿಂಕ್ ಪೋಯ್‌ ಅಂತ ಕರೆಯಲಾಗಿತ್ತೆ. ಹಳದಿ ಬಣ್ಣದ ಹೂಗಳನ್ನ ಯೆಲ್ಲೋ ಟ್ರಂಪೆಟ್ ಪ್ಲವರ್ ಅಂತ ಕರೆಯಲಾಗುತ್ತೆ. ವಿಶೇಷತೆ ಅಂದರೆ ಮರದಲ್ಲಿ ಎಲೆಗಳು ವಿರಳವಾಗಿದ್ದು, ಸಂಪೂರ್ಣವಾಗಿ ಹೂಗಳಿಂದ ತುಂಬಿರುತ್ತವೆ.

ಬೆಂಗಳೂರಿನ ರಸ್ತೆಗಳಲ್ಲಿ, ಕಬ್ಬನ್ ಪಾರ್ಕ್, ಲಾಲ್‌ಬಾಗ್ ಸೇರಿದಂತೆ ಅನೇಕ ಪಾರ್ಕ್‌ಗಳಲ್ಲಿ ಈ ಚಂದದ ಹೂಗಳನ್ನ ನೋಡಬಹುದಾಗಿದೆ. ಅಲಂಕಾರಿಕ ದೃಷ್ಟಿಯಿಂದ ಅನೇಕ ಕಡೆ ಗಿಡ ಮರಗಳನ್ನ ಬೆಳೆಸಲಾಗಿದ್ದು, ಜನರು ಕೂಡ ಕಲರ್ ಫುಲ್ ಹೂಗಳ ನಡುವೆ ಫೋಟೋ ಕ್ಲಿಕಿಸಿಕೊಂಡು ಖುಷಿ ಪಟ್ಟರು.

ಈ ರೀತಿ ಮತ್ತಷ್ಟು ಗಿಡ ಮರಗಳನ್ನ‌ನೆಟ್ಟರೇ ಬೆಂಗಳೂರು ಮತ್ತಷ್ಟು ಸುಂದರವಾಗಿ ಕಾಣುತ್ತೆ ಎಂದು ಸಿಲಿಕಾನ್ ಸಿಟಿ ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಬೆಂಗಳೂರಿನ ಮೆರಗು ಹೆಚ್ಚಿಸುವ ಟೆಬುಬಿಯಾ ರೀತಿಯ ಮರ ಗಿಡಗಳನ್ನ‌ ಮತ್ತಷ್ಟು ಬೆಳೆಸಿದರೆ ಉದ್ಯಾನನಗರಿ ಬೆಂಗಳೂರಿನ ಸೌಂದರ್ಯವನ್ನ ಮತ್ತಷ್ಟು ಹೆಚ್ಚಿಸುತ್ತವೆ. 

Published On – 9:08 pm, Fri, 20 February 26

Source link