All posts by nagaraj11081993

ಪರೀಕ್ಷೆಯಲ್ಲಿ ಕಾಪಿ ಮಾಡುವ ವೇಳೆ ಸಿಕ್ಕಿಬಿದ್ದ ವಿದ್ಯಾರ್ಥಿ: ಪ್ರಶ್ನಿಸಿದ್ದಕ್ಕೆ ಮೇಲ್ವಿಚಾರಕರ ಮೇಲೆ ಹಲ್ಲೆ – Kannada News | Kalaburagi: Student Assaults Professor for Preventing Malpractice During Exam

ವಿದ್ಯಾರ್ಥಿಯಿಂದ ಮೇಲ್ವಿಚಾರಕರ ಮೇಲೆ ಹಲ್ಲೆImage Credit source: tv9 kannada

ಕಲಬುರಗಿ, ಫೆಬ್ರವರಿ 20: ಪರೀಕ್ಷೆಯಲ್ಲಿ ಕಾಪಿ ಮಾಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಸಹಾಯಕ ಪ್ರಾಧ್ಯಾಪಕರ ಮೇಲೆ ವಿದ್ಯಾರ್ಥಿ (Student) ಹಲ್ಲೆ (attacks) ಮಾಡಿರುವಂತಹ ಘಟನೆಯೊಂದು ನಗರದ ಡಾ. ಮಾಲಕರೆಡ್ಡಿ ಹೋಮಿಯೋಪಥಿಕ್ ಕಾಲೇಜಿನಲ್ಲಿ ನಡೆದಿದೆ. ವಿದ್ಯಾರ್ಥಿ ಶಹಬಾಜ್​​ ಎಂಬಾತನಿಂದ ಸಹಾಯಕ ಪ್ರಾಧ್ಯಾಪಕ ಶಿವರಾಜಕುಮಾರ್​ ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ.

ನಡೆದಿದ್ದೇನು? 

ಡಾ.ಮಾಲಕರೆಡ್ಡಿ ಹೋಮಿಯೋಪಥಿಕ್ ಕಾಲೇಜಿನಲ್ಲಿ ಇಂದು ಮಟೇರಿಯಾ ಮೆಡಿಕಾ ವಿಷಯದ ಇಂಟರ್ನಲ್ ಎಕ್ಸಾಮ್​ ನಡೆದಿತ್ತು. ಈ ವೇಳೆ ವಿದ್ಯಾರ್ಥಿ ಶಹಬಾಜ್​ ಮೊಬೈಲ್ ಬಳಸಿಕೊಂಡು ಕಾಪಿ ಮಾಡಲು ಮುಂದಾಗಿದ್ದ. ಇದನ್ನು ಗಮನಿಸಿದ ಪರೀಕ್ಷಾ ಮೇಲ್ವಿಚಾರಕರಾಗಿದ್ದ ಸಹಾಯಕ ಪ್ರಾಧ್ಯಾಪಕ ಶಿವರಾಜಕುಮಾರ್​, ಪ್ರಶ್ನಿಸಿ ಉತ್ತರ ಪತ್ರಿಕೆ ಪಡೆದುಕೊಂಡಿದ್ದರು.

ವಿದ್ಯಾರ್ಥಿ ಹಲ್ಲೆ ಮಾಡುತ್ತಿರುವ ವಿಡಿಯೋ

ವಿದ್ಯಾರ್ಥಿಯನ್ನು ತಕ್ಷಣವೇ ಪರೀಕ್ಷಾ ಹಾಲ್‌ನಿಂದ ಹೊರಹೋಗುವಂತೆ ಸೂಚಿಸಿದ್ದಾರೆ. ಇದರಿಂದ ಕೋಪಗೊಂಡ ವಿದ್ಯಾರ್ಥಿ ತಕ್ಷಣ ಪ್ರಾಧ್ಯಾಪಕ ಶಿವರಾಜಕುಮಾರ್ ಅವರ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾನೆ. ಈ ಆಕಸ್ಮಿಕ ಘಟನೆಯಿಂದ ಕೆಲಕಾಲ ಕಾಲೇಜು ಆವರಣದಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: SSLC ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಇಲಾಖೆ ಹೊಸ ಪ್ಲಾನ್; ಪರೀಕ್ಷೆ ಮುಗಿಯುವವರೆಗೂ ಟಿವಿ–ಮೊಬೈಲ್ ಆಫ್!

ಇನ್ನು ವಿದ್ಯಾರ್ಥಿ ಶಹಬಾಜ್ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ವಿದ್ಯಾರ್ಥಿಯ ನಡುವಳಿಕೆ ಬಗ್ಗೆ ಆಡಳಿತ ಮಂಡಳಿ ಪಾಲಕರಿಗೆ ಮಾಹಿತಿ ನೀಡಿದ್ದಾರೆ. ಮುಂದಿನ ಪರೀಕ್ಷೆಗಳಿಗೆ ಅವಕಾಶ ನೀಡದಿರಲು ಕಾಲೇಜು ಮಂಡಳಿ ನಿರ್ಧರಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಟಾಕ್ಸಿಕ್’ ಡೈರೆಕ್ಟರ್ ಮಹಿಳೆ ಆದ್ರೂ ಟೀಸರ್​​ನಲ್ಲಿ ನಟಿಯರಿಗೆ ಜಾಗ ಇಲ್ಲ; ನೆಟ್ಟಿಗರ ಟೀಕೆ – Kannada News | Why no female characters shown in Yash starrer Toxic teaser

ಬಹುನಿರೀಕ್ಷಿತ ‘ಟಾಕ್ಸಿಕ್’ (Toxic)  ಸಿನಿಮಾದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಮಾರ್ಚ್ 19ರಂದು ಈ ಸಿನಿಮಾ ವಿಶ್ವಾದ್ಯಂತ ತೆರೆಕಾಣಲಿದೆ. ಚಿತ್ರದ ಬಿಡುಗಡೆಗೆ ಒಂದು ತಿಂಗಳು ಬಾಕಿ ಇದೆ ಎನ್ನುವಾಗ ಟೀಸರ್ ಅನಾವರಣ ಮಾಡಲಾಗಿದೆ. ಈ ಟೀಸರ್ ನೋಡಿ ಯಶ್ (Yash) ಅಭಿಮಾನಿಗಳಿಗೆ ಖುಷಿ ಆಗಿದೆ. ಆದರೆ ಒಂದು ಕೊರತೆ ಕಾಣಿಸಿದೆ. ಇಡೀ ಟೀಸರ್​​ನಲ್ಲಿ ಯಾವುದೇ ನಟಿಯರ ಮುಖ ಕಾಣಿಸಿಲ್ಲ! ನಯನತಾರಾ, ರುಕ್ಮಿಣಿ ವಸಂತ್ ಮುಂತಾದ ಸ್ಟಾರ್ ನಟಿಯರು ‘ಟಾಕ್ಸಿಕ್’ ಚಿತ್ರದಲ್ಲಿ ಅಭಿನಯಿಸಿದ್ದರೂ ಕೂಡ ಟೀಸರ್​ನಲ್ಲಿ ಅವರು ದರ್ಶನ ನೀಡಿಲ್ಲ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ಒಟ್ಟಾರೆ ‘ಟಾಕ್ಸಿಕ್’ ಸಿನಿಮಾದ ಕಥೆ ಬಗ್ಗೆ ಜನರಿಗೆ ಭಾರಿ ಕುತೂಹಲ ಇದೆ. ಯಾಕೆಂದರೆ, ಇದು ಭರ್ಜರಿ ಮಾಸ್ ಸಿನಿಮಾ ಆಗಿದ್ದರೂ ಕೂಡ ಮಹಿಳೆಯರ ಪಾಲ್ಗೊಳ್ಳುವಿಕೆ ಜಾಸ್ತಿ ಇದೆ. ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುವುದು ನಿರ್ದೇಶಕಿ ಗೀತು ಮೋಹನ್​ದಾಸ್. ಪಾತ್ರವರ್ಗದಲ್ಲಿ ನಟಿಯರಾದ ರುಕ್ಮಿಣಿ ವಸಂತ್, ನಯನತಾರಾ, ಹುಮಾ ಖುರೇಷಿ, ಕಿಯಾರಾ ಅಡ್ವಾಣಿ ಅವರಂತಹ ಸ್ಟಾರ್ ಕಲಾವಿದೆಯರು ನಟಿಸಿದ್ದಾರೆ.

ಪಾತ್ರವರ್ಗದಲ್ಲಿ ಮಹಿಳೆಯರ ಸಂಖ್ಯೆ ಜಾಸ್ತಿ ಇದ್ದರೂ ಕೂಡ ಟೀಸರ್​​ನಲ್ಲಿ ಯಾರನ್ನೂ ತೋರಿಸಿಲ್ಲ. ಆದ್ದರಿಂದ ಈ ನಟಿಯರ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಹಾಗಂತ ಜಾಸ್ತಿ ಬೇಸರ ಮಾಡಿಕೊಳ್ಳುವ ಅಗತ್ಯ ಇಲ್ಲ. ಸದ್ಯದಲ್ಲೇ ಟ್ರೇಲರ್ ಬಿಡುಗಡೆ ಆಗಲಿದೆ. ಅದರಲ್ಲಾದರೂ ನಟಿಯರ ಪಾತ್ರದ ಬಗ್ಗೆ ಮಾಹಿತಿ ಬಿಟ್ಟುಕೊಡುವ ಸಾಧ್ಯತೆ ಇದೆ. ಸಿನಿಮಾದಲ್ಲಿ ಎಲ್ಲ ಪಾತ್ರಗಳಿಗೂ ನ್ಯಾಯ ಒದಗಿಸಲಾಗುತ್ತದೆ ಎಂಬ ನಂಬಿಕೆ ಪ್ರೇಕ್ಷಕರಿಗೆ ಇದೆ.

ಟಾಕ್ಸಿಕ್ ಟೀಸರ್​:

ಬಹಳ ಅದ್ದೂರಿಯಾಗಿ ‘ಟಾಕ್ಸಿಕ್’ ಸಿನಿಮಾ ಮೂಡಿಬಂದಿದೆ ಎಂಬುದು ಟೀಸರ್ ನೋಡಿದರೆ ತಿಳಿಯುತ್ತದೆ. ಕನ್ನಡ, ಹಿಂದಿ, ಮಲಯಾಳಂ, ತೆಲುಗು ವರ್ಷನ್​​ಗಳಲ್ಲಿ ಟೀಸರ್ ಬಿಡುಗಡೆ ಆಗಿದೆ. ಟೀಸರ್​​ನಲ್ಲಿ ಸಿಕ್ಕಾಪಟ್ಟೆ ಕ್ರೌರ್ಯ ಕಾಣಿಸಿದೆ. ಸಿನಿಮಾದಲ್ಲಿ ಅದು ಡಬಲ್ ಆಗಿರುವ ಸಾಧ್ಯತೆ ಕೂಡ ಇದೆ.

ಇದನ್ನೂ ಓದಿ: Toxic Movie: ‘ಟಾಕ್ಸಿಕ್’ ಟೀಸರ್​ನ ಆ​ ಡೈಲಾಗ್​​ನಲ್ಲೇ ಅಡಗಿದೆ ಚಿತ್ರದ ಕಥೆ

ನಟಿಯರನ್ನು ‘ಟಾಕ್ಸಿಕ್’ ಟೀಸರ್​​ನಲ್ಲಿ ಯಾಕೆ ತೋರಿಸಿಲ್ಲ ಎಂದು ಕೆಲವರು ಸೋಶಿಯಲ್ ಮೀಡಿಯಾ ಮೂಲಕ ಪ್ರಶ್ನೆ ಮಾಡುತ್ತಿದ್ದಾರೆ. ‘ಡೈರೆಕ್ಟರ್ ಮಹಿಳೆ ಆಗಿದ್ದರೂ ಕೂಡ ನಟಿಯರು ಪಾತ್ರವನ್ನು ಹೈಲೈಟ್ ಮಾಡುತ್ತಿಲ್ಲ’ ಎಂದು ನೆಟ್ಟಿಗರು ತಕರಾರು ತೆಗೆದಿದ್ದಾರೆ. ಈ ಎಲ್ಲ ಟೀಕೆಗಳಿಗೆ ಸಿನಿಮಾದಲ್ಲಿ ಖಂಡಿತಾ ಉತ್ತರ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶ್ರೀಮಂತ ದೇಶಗಳಿಗೆ ಎಐ ಕುತ್ತು; ಶೇ. 60 ಉದ್ಯೋಗನಷ್ಟ ಸಾಧ್ಯತೆ: ಐಎಂಎಫ್ ಎಚ್ಚರಿಕೆ – Kannada News | AI can take away 40pc jobs, warns IMF MD Kristalina Georgieva

ನವದೆಹಲಿ, ಫೆಬ್ರುವರಿ 20: ಎಐನಿಂದ ಒಳಿತೂ ಇದೆ, ಕೆಡಕೂ ಇದೆ. ದೂರಗಾಮಿಯಾಗಿ ಎಐನಿಂದ ಮನುಕುಲಕ್ಕೆ ಸಾಕಷ್ಟು ಪ್ರಯೋಜನಗಳಾಗಬಹುದು ಎಂದು ಅನೇಕರು ಹೇಳುತ್ತಿದ್ದಾರೆ. ಐಎಂಎಫ್​ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಕ್ರಿಸ್ಟಾಲಿನಾ ಜಾರ್ಜಿಯೆವಾ (Kristalina Georgieva) ಅವರು ಎಐನಿಂದ ಸದ್ಯೋಭವಿಷ್ಯದಲ್ಲಿ ಆಗಬಹುದಾದ ಒಳಿತು ಮತ್ತು ಅಪಾಯಗಳೆರಡನ್ನೂ ಪ್ರಸ್ತಾಪಿಸಿದ್ದಾರೆ.

ಉದ್ಯೋಗ ಮಾರುಕಟ್ಟೆಯಲ್ಲಿ ಎಐ ಸುನಾಮಿಯಂತೆ ಅಪ್ಪಳಿಸಲಿದೆ ಎಂದು ಜಾರ್ಜಿಯೆವಾ ಎಚ್ಚರಿಸಿದ್ದಾರೆ. ಉದಯೋನ್ಮುಖ ಆರ್ಥಿಕತೆಯ ದೇಶಗಳಲ್ಲಿ ಶೇ. 40ರಷ್ಟು ಉದ್ಯೋಗಗಳು ಎಐನಿಂದಾಗಿ ಇಲ್ಲವಾಗುತ್ತವೆ. ಶ್ರೀಮಂತ ದೇಶಗಳಲ್ಲಂತೂ ಇದರ ಪರಿಣಾಮ ಇನ್ನೂ ಭಿಕರವಾಗಿರುತ್ತದೆ. ಅಲ್ಲಿ ಶೇ 60ರಷ್ಟು ಉದ್ಯೋಗನಷ್ಟ ಆಗಬಹುದು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಹಿರಿಯ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಎಐ, ಡೀಪ್​ಟೆಕ್ ಸ್ಟಾರ್ಟಪ್​ಗಳ ಸಿಇಒಗಳೊಂದಿಗೆ ಪ್ರಧಾನಿ ಮೋದಿ ಸಭೆ; ಓಪನ್​ಎಐ, ಆಂಥ್ರೋಪಿ ಸಿಇಒಗಳ ವೈಮನಸ್ಸು ಬಹಿರಂಗ?

ಜಗತ್ತಿಗೆ ಎಐನಿಂದ ಚುರುಕು ಬೆಳವಣಿಗೆ

ಎಐನಿಂದ ಜಾಗತಿಕ ಆರ್ಥಿಕ ಬೆಳವಣಿಗೆಗೆ ಪುಷ್ಟಿ ಸಿಗುತ್ತದೆ ಎಂದೂ ಐಎಂಎಫ್​ನ ಎಂಡಿ ತಿಳಿಸಿದ್ದಾರೆ. ‘ನಾವು ಕೆಲ ಸಂಶೋಧನೆ ಮೂಕ ಉತ್ತರ ಕಂಡುಕೊಂಡಿದ್ದೇವೆ. ನಮಗೆ ಗೊತ್ತಾದಂತೆ, ಎಐನಿಂದ ಜಾಗತಿಕ ಬೆಳವಣಿಗೆಯಲ್ಲಿ ಒಂದು ಪ್ರತಿಶತ ಅಂಕ ಹೆಚ್ಚಬಹುದು. ಶೇ 0.8ರಷ್ಟು ಪ್ರಗತಿ ಹೆಚ್ಚಬಹುದು. ಕೋವಿಡ್​ಗೆ ಮುಂಚಿನದಕ್ಕಿಂತ ಹೆಚ್ಚು ವೇಗವಾಗಿ ಜಗತ್ತು ಬೆಳೆಯಬಹುದು’ ಎಂದು ಎಐ ಇಂಪ್ಯಾಕ್ಟ್ ಸಮಿಟ್​ನಲ್ಲಿ ನಡೆದ ಪ್ಯಾನಲ್ ಚರ್ಚೆಯ ವೇಳೆ ಆಕೆ ಮಾಹಿತಿ ನೀಡಿದ್ದಾರೆ.

ಭಾರತಕ್ಕೆ ವಿಕಸಿತ ದೇಶವಾಗಲು ಅವಕಾಶ

ಎಐನಿಂದಾಗಿ ಭಾರತವು ಹೆಚ್ಚು ವೇಗದಲ್ಲಿ ಬೆಳವಣಿಗೆ ದಾಖಲಿಸಲು ಅವಕಾಶ ಇರುತ್ತದೆ. ಭಾರತದ ವಿಕಸಿತ ಭಾರತದ ಗುರಿ ಈಡೇರಿಕೆ ಅಸಾಧ್ಯವೇನೂ ಆಗುವುದಿಲ್ಲ ಎಂದು ಕ್ರಿಸ್ಟಾಲಿನಾ ಜಾರ್ಜಿಯೆವಾ ಅಭಿಪ್ರಾಯಪಟ್ಟಿದ್ಧಾರೆ. ಭಾರತವು 2047ರೊಳಗೆ ವಿಕಸಿತ ದೇಶವಾಗುವ ಮತ್ತು 30 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಗುರಿ ಹೊಂದಲಾಗಿದೆ. ಈ ಸಾಧ್ಯತೆ ಬಗ್ಗೆ ಐಎಂಎಫ್ ಎಂಡಿ ಮಾತನಾಡುತ್ತಿದ್ದರು.

ಇದನ್ನೂ ಓದಿ: ಭಾರತ-ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದ ಏಪ್ರಿಲ್​ನಿಂದ ಚಾಲನೆ ಸಾಧ್ಯತೆ; ಓಮನ್, ಬ್ರಿಟನ್ ಒಪ್ಪಂದಗಳೂ ಏಪ್ರಿಲ್​ನಲ್ಲೇ?

ಐಟಿ ಸೆಕ್ಟರ್​ನಲ್ಲಿ ಕೋಡಿಂಗ್ ಬದಲು ಈ ಕೆಲಸ ಮಾಡಬೇಕು: ನಂದನ್ ನಿಲೇಕಣಿ

ಎಐ ಕ್ರಾಂತಿ ನಡೆಯುತ್ತಿರುವಾಗ ಕೋಡಿಂಗ್ ರಚಿಸುವುದು ಗುರಿಯಾಗಿರಬಾರದು. ಕೋಡಿಂಗ್ ಬದಲು, ಎಐ ಸಿಸ್ಟಂಗಳನ್ನು ನಿರ್ವಹಿಸುವ ಕೆಲಸಗಳಿಗೆ ವರ್ಗಾವಣೆ ಆಗಬೇಕು ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಮೊನ್ನೆಮೊನ್ನೆ (ಫೆ. 17) ಹೇಳಿದ್ದಾರೆ. ಅವರ ಪ್ರಕಾರ ಎಐ ತಂತ್ರಜ್ಞಾನವು ಜಾಗತಿಕವಾಗಿ 17 ಕೋಟಿ ಹೊಸ ಪ್ರಬಲ ಉದ್ಯೋಗಗಳನ್ನು ಸೃಷ್ಟಿಸಬಲ್ಲುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು – Kannada News | Bagalkote Shivaji Jayanti Stone Pelting: Onnce Again Rally From Same Place Says Narayansa Bandage

ಬಾಗಲಕೋಟೆ, (ಫೆಬ್ರವರಿ 20): ಬಾಗಲಕೋಟೆಯಲ್ಲಿ (Bagalkot) ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ತೂರಾಟ (Stone Pelting) ನಡೆದಿದೆ. ಘಟನೆಯಲ್ಲಿ ಪೊಲೀಸರು ಸೇರಿ ಹಲವರಿಗೆ ಗಾಯಗಳಾಗಿವೆ. ಪರಿಸ್ಥಿತಿ ತಿಳಿಗೊಳಿಸಲು ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಹೆಚ್ಚುವರಿ ಭದ್ರತೆ ನಿಯೋಜಿಸಲಾಗಿದೆ. ಇನ್ನು ಪೊಲೀಸರು ಇಂದು (ಫೆಬ್ರವರಿ 20) ಡಿಸಿ ಕಚೇರಿಯಲ್ಲಿ ಕರೆದಿದ್ದ ಶಾಂತಿ ಸಭೆಗೆ ಮುಸ್ಲಿಂ ಮುಖಂಡರು ಗೈರಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ಹಿಂದೂ ಮುಖಂಡರು ಸಹ ಶಾಂತಿ ಸಭೆ ಬಹಿಷ್ಕರಿಸಿ ಹೊರ ನಡೆದಿದ್ದಾರೆ.

ಇದೇ ವೇಳೆ ಟಿವಿ9ಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ, ಕೇವಲ ನಮ್ಮನ್ನ ಮಾತ್ರ ಶಾಂತಿ ಸಭೆಗೆ ಕರೆದಿದ್ದಾರೆ. ಮುಸ್ಲಿಂ ಸುಮುದಾಯದ ಮುಖಂಡರು ಸಭೆಗೆ ಹಾಜಾರಾಗಿಲ್ಲ. ಶಾಂತಿ ಸಭೆ ಅಂದರೆ ಎರಡು ಕಡೆಯವರು ಇರಬೇಕು. ಅವರಿಗೆ ಶಾಂತಿ ಬೇಕಿಲ್ಲ. ಹಾಗಾಗಿ ಅವರು ಬಂದಿಲ್ಲ. ಡಿಸಿ,ಎಸ್ ಪಿ ಎಲ್ಲರೂ ಕರೆದ ಸಭೆಗೆ ಅವರು ಬರೋದಿಲ್ಲ ಅಂದರೆ ಎಷ್ಟಿರಬೇಕು? ಅದಕ್ಕೆ ಹೇಳೋದು ಇದು ಕಾಂಗ್ರೆಸ್ ಓಲೈಕೆಯ ಪರಿಣಾಮ ಅಂತ. ನಾವು ಯಾವುದಕ್ಕೂ ಸುಮ್ಮನೆ ಇರುವುದಿಲ್ಲ. ಎಲ್ಲಿ ಶಿವಾಜಿ ಮೂರ್ತಿಗೆ ಕಲ್ಲು ಹೊಡೆದಿದ್ದಾರೆ ಅದೇ ಜಾಗದಿಂದ ಪುಷ್ಪಗಳ ವೃಷ್ಟಿಗೈದು ಶಿವಾಜಿ ಮೆರವಣಿಗೆ ಮಾಡುತ್ತೇವೆ. ಯಾವಾಗ ಶಿವಾಜಿ‌ ಮೆರವಣಿಗೆ ಮಾಡುತ್ತೇವೆ ಎನ್ನುವುದನ್ನು ನಂತರ ತಿಳಿಸುತ್ತೇವೆ ಎಂದರು.

ಇದನ್ನೂ ಓದಿ: ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ತೂರಾಟ: ಬಾಗಲಕೋಟೆ ಉದ್ವಿಗ್ನ

Source link

ಶಿವಾಜಿ ಜಯಂತಿ ವೇಳೆ ಕಲ್ಲು ತೂರಾಟ: ನಿಮಗೆ ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್ – Kannada News | Bagalkote Shivaji Jayanti Stone Pelting: BJP Former MLA charantimath Angry On Police

ಬಾಗಲಕೋಟೆ, (ಫೆಬ್ರವರಿ 20): ಶಿವಾಜಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.ಮಸೀದಿ ಮುಂದೆ ಕಲ್ಲು ಹಾಗೂ ಚಪ್ಪಲಿ ಎಸೆದಿರೋದು ಕೋಮು ಉದ್ವಿಗ್ನತೆ ಪಡೆದುಕೊಂಡಿದೆ. ಇಷ್ಟು ಮಾತ್ರವಲ್ಲದೇ ಕೆಲ ಕಿಡಿಗೇಡಿಗಳು ಅಂಗಡಿಗಳಿಗೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಇದರಿಂದ ಬಾಗಲಕೋಟೆ ಬೂದಿ ಮುಚ್ಚಿದ ಕೆಂಡದಂತಾಗಿದೆ. ಇನ್ನೊಂದೆಡೆ ಈ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಹಿಂದೂ ಮುಖಂಡರು, ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಸ್ಥಳಕ್ಕೆ ಬಂದ ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೋಯಲ್ ಎದುರು ಬಿಜೆಪಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಗರಂ ಆಗಿದ್ದು, ನಿಮಗೆ ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ತೂರಾಟ: 8 ಆರೋಪಿಗಳ ಬಂಧನ!

Source link

ಲಕ್ಕುಂಡಿಯಲ್ಲಿ‌ ನಿಧಿ ಸಿಕ್ಕ ಬಳಿಕ ಮತ್ತೊಂದು ರಹಸ್ಯ ಬಯಲು: ಹಳೆ ಪ್ರಕರಣಕ್ಕೆ ಮರುಜೀವ; ಮೌಲ್ವಿ ಬಂಧನ – Kannada News | Gadag Police Bust Lakkundi Fake Treasure Scam: Inter State Kingpin Arrested

ಗದಗ, ಫೆಬ್ರವರಿ 20: ಐತಿಹಾಸಿಕ ಲಕ್ಕುಂಡಿ (Lakkundi) ಗ್ರಾಮದಲ್ಲಿ ಸಾಕಷ್ಟು ಸಂಪತ್ತು ಇದೆ ಎನ್ನುವ ನಂಬಿಕೆಯಿದೆ. ಅದಕ್ಕೆ ಪುಷ್ಟಿ ನೀಡುವಂತೆ ಮನೆಯ ಪಾಯ ಮುಚ್ಚುವ ವೇಳೆ ಚಿನ್ನದ ನಿಧಿ ಸಿಕ್ಕಿದೆ. ಇದರ ಬೆನ್ನಲ್ಲೇ ಲಕ್ಕುಂಡಿ ಚಿನ್ನದ ನಿಧಿ ರಹಸ್ಯ ಬಯಲಾಗಿದೆ. 2೦22ರಲ್ಲಿ ಲಕ್ಕುಂಡಿ ಗ್ರಾಮದಲ್ಲಿ ಅಪಾರ ಪ್ರಮಾಣದ ಚಿನ್ನದ ಸಂಪತ್ತು ಸಿಕ್ಕಿದ್ದು, ಅದನ್ನು ಮಾರಾಟ ಮಾಡಲು ಸಂಚು ರೂಪಿಸಲಾಗಿತ್ತು. ಅಂದು ನಿಧಿ ಶೋಧ ಮಾಡಿದ್ದ ಮಾಸ್ಟರ್ ಮೈಂಡ್​ನನ್ನು ಇದೀಗ ಪೊಲೀಸರು ಅರೆಸ್ಟ್ (Arrest) ಮಾಡಿದ್ದು, ಆ ಮೂಲಕ ಚಿನ್ನದ ನಿಧಿಯ ಅಸಲಿ ಸತ್ಯ ಬಯಲಿಗೆಳೆದಿದ್ದಾರೆ.

ಹಳೆ ಪ್ರಕರಣಕ್ಕೆ ಮರುಜೀವ

ಲಕ್ಕುಂಡಿ ಗ್ರಾಮದ ರಿತ್ತಿ ಕುಟುಂಬದ ಮನೆಯ ಪಾಯ ಮುಚ್ಚುವ ವೇಳೆ 455 ಗ್ರಾಂ ಚಿನ್ನದ ನಿಧಿ ಸಿಕ್ಕಿದೆ. ಈ ವಿಚಾರ  ದೇಶ ಸೇರಿದಂತೆ ವಿದೇಶದಲ್ಲಿ ಭಾರೀ ಸುದ್ದಿ ಮಾಡಿದೆ. ಇದೇ ವೇಳೆ ಹಳೆ ಪ್ರಕರಣವೊಂದು ಮರು ಜೀವ ಪಡೆದುಕೊಂಡಿದೆ. 2022ರಲ್ಲಿ ಧಾರವಾಡ ನಿವಾಸಿ ಬಸೀರಾಬೇಗಂ ಅವರು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಿಧಿ ಆಸೆ ತೋರಿಸಿ ವಂಚಿಸಿರುವುದಾಗಿ ದೂರು ನೀಡಿದ್ದರು. ಆಗ ಪೊಲೀಸರು ಆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳದೆ ಕೈಬಿಟ್ಟಿದ್ದರು.

ಇದನ್ನೂ ಓದಿ: Gold Treasure Fraud: ಸಣ್ಣಬಸಪ್ಪ ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ

ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಬೆನ್ನಲ್ಲೇ, 2026 ಫೆಬ್ರವರಿ 11ರಂದು ಸಮಾಜ ಸೇವಕ ಪೀರಸಾಬ್ ಗೌತಾಳ ಎನ್ನುವವರು, ಸರ್ಕಾರಕ್ಕೆ ಸೇರಬೇಕಾದ ನಿಧಿ ಕಂಡವರ ಪಾಲಾಗಿದೆ ಎಂದು ದೂರು ನೀಡಿದ್ದರು. ಆಗ ಎಸ್ಪಿ ರೋಹನ್ ಜಗದೀಶ್ ತಂಡ ರಚನೆ ಮಾಡಿ ತನಿಖೆ ನಡೆಸಿದ್ದರು. ಆ ವೇಳೆ ಹಂಡೆಯಲಿ ಚಿನ್ನ ಇರುವ ವಿಡಿಯೋ ಕೂಡ ನೀಡಿದ್ರು. ಮತ್ತೊಮ್ಮೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಉತ್ತರಾಖಂಡದ ಹಜರತ್ ಎನ್ನುವವನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದು, ಈ ವೇಳೆ ಅದು ನಕಲಿ ಚಿನ್ನ ಎನ್ನುವ ಸತ್ಯ ಬಹಿರಂಗವಾಗಿದೆ. 2022 ರಲ್ಲಿ ಗದಗ ನಗರದಲ್ಲಿ ಒಂದು ಹಂಡೆ ಖರೀದಿ ಮಾಡಿದ್ದಾನೆ, ನಂತರ ಮತ್ತೊಂದು ಅಂಗಡಿಯಲ್ಲಿ ಗೋಲ್ಡ್ ಬಣ್ಣದ ಬಿಸ್ಕೆಟ್ ಖರೀದಿ ಮಾಡಿ, ಇದೇ ನಿಧಿಯಂದು ತೋರಿಸಿದ್ದ. ಆ ವಿಡಿಯೋ ಇಟ್ಟುಕೊಂಡು ಸಾಕಷ್ಟು ಜನರಿಗೆ ಮೋಸ ಮಾಡಿದ್ದ ಎಂದು ಎಸ್ಪಿ ಹೇಳಿದ್ದಾರೆ.

22 ಲಕ್ಷ ರೂ. ಹಣ ಸುಲಿಗೆ

ಧಾರವಾಡ ನಿವಾಸಿಯಾದ ಬಸೀರಾಬೇಗಂ ಅವರು ವ್ಯಾಪಾರಸ್ಥರು. ಲಕ್ಕುಂಡಿ ಗ್ರಾಮದ ಸಣ್ಣ ಬಸಪ್ಪ ಹಾಗೂ ದೊಡ್ಡ ಬಸಪ್ಪ ಪಶು ಆಹಾರ ಖರೀದಿ ‌ಮಾಡಲು ಹೋಗಿದ್ದಾಗ, ಆ ಸಮಯದಲ್ಲಿ ಗ್ಯಾಸ್ ಹಾಕಿಸಿಕೊಳ್ಳಲು ಬಂದಿದ್ದ ಉತ್ತರಾಖಂಡದ ಹಜರತ್ ಪರಿಚಯ ಆಗುತ್ತೆ. ಈ ವೇಳೆ ಹಜರತ್ ನಾನು ನಿಧಿ ಶೋಧ ಮಾಡುತ್ತೇನೆ ಅಂತಾ ಹೇಳಿದ್ದಾನೆ. ಹಜರತ್ ನಿಧಿ ಸಿಕ್ಕ ಮೇಲೆ ಸಾಕಷ್ಟು ಹಣ ಬರುತ್ತದೆ ಎಂದು ನಂಬಿಸಿದ್ದ. ಹೀಗಾಗಿ ಪ್ರಮುಖ ಆರೋಪಿ ಹಜರತ್ ಉತ್ತರಾಖಂಡದಿಂದ ಬರಲು ಆತನ ಖರ್ಚು ವೆಚ್ಚ ಅಂತಾ ಮಹಿಳೆಯೊಬ್ಬರಿಂದ ಸುಮಾರು 22 ಲಕ್ಷ ರೂ. ಹಣ ಸುಲಿಗೆ ‌ಮಾಡಿದ್ದಾರೆ. ಇದು ಎಫ್​ಐಆರ್​ನಲ್ಲಿ ಕೂಡ ಉಲ್ಲೇಖವಾಗಿದೆ.

ಪ್ಲಾನ್ ಮಾಡಿ‌ ಒಂದು ದಿನ ಲಕ್ಕುಂಡಿ ಗ್ರಾಮಕ್ಕೆ ಹಜರತ್ ಬಂದು, ಗದಗನಲ್ಲಿ ಹಂಡೆ ಖರೀದಿ ಮಾಡಿ, ಗೋಲ್ಡ್​ ಬಣ್ಣದ ನಕಲಿ ಬಿಸ್ಕೆಟ್ ಇಟ್ಟು, ಸಣ್ಣ ಬಸಪ್ಪ ಹಾಗೂ ದೊಡ ಬಸಪ್ಪ ಅವರ ಜಮೀನಿನಲ್ಲಿ ನಿಧಿ ಶೋಧ ಮಾಡಿದ ಹಾಗೇ ನಾಟಕ ಮಾಡಿದ್ದ. ಸಣ್ಣ ಬಸಪ್ಪನಿಗೆ 20 ಲಕ್ಷ ರೂ ಹಣ ಕೊಡು ಈ ನಿಧಿ ನಿನಗೆ ಕೊಡುತ್ತೇನೆ ಅಂತಾ ಹೇಳಿದ್ದ. ಆಗ ಸ್ವಲ್ಪ ವೈಮನಸ್ಸು ಉಂಟಾಗಿದೆ. ನಿಧಿ ಶೋಧ ಮಾಡಲು ಬಂದ ಹಜರತ್ ಅದನ್ನು ಕಾಲಿನಿಂದ ಒದ್ದು ಆಗ ಆ ಚಿನ್ನವು ಮಣ್ಣಾಗಿದೆ ಎಂದು ವಂಚನೆ ಮಾಡಿ‌ ಎಸ್ಕೇಪ್ ಆಗಿದ್ದಾನೆ. ಈವಾಗ ಪೊಲೀಸರು ಕಿಂಗ್ ಪಿನ್​ನನ್ನ ಅರೆಸ್ಟ್ ಮಾಡಿದ್ದು, ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್, ಬೇರೆ ರಾಜ್ಯದ ವ್ಯಕ್ತಿಗೆ ಲಕ್ಕುಂಡಿ ನಿಧಿ ಗೊತ್ತಾಗಿದ್ಹೇಗೆ?

ಈ ನಕಲಿ ನಿಧಿ ಆಸೆಗೆ ಬಿದ್ದ ಹಜರತ್ ಮೌಲ್ವಿ ಸುಮಾರು 8ಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿದ್ದಾ‌ನೆ. ದೆಹಲಿ ಮಹಿಳೆ ಹಾಗೂ ಧಾರವಾಡ ಮಹಿಳೆ ಸೇರಿದಂತೆ ಹಲವು ಜನರು ಮೊಸಕ್ಕೆ ಒಳಗಾಗಿದ್ದಾರೆ. ಒಟ್ಟಿನಲ್ಲಿ ಲಕ್ಕುಂಡಿ ಗ್ರಾಮದಲ್ಲಿ ಚಿನ್ನದ ನಿಧಿ ಸಿಕ್ಕ ಬೆನ್ನಲ್ಲೇ ಹಳೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಇನ್ನು ಈ ಪ್ರಕರಣ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳುತ್ತೆ ಕಾದು ನೋಡ್ಬೇಕು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 6:15 pm, Fri, 20 February 26

Source link

ನಾನೇ ಭಾರತ-ಪಾಕ್ ಸಂಘರ್ಷ ನಿಲ್ಲಿಸಿದ್ದು; ಮತ್ತೆ ಹಳೇ ರಾಗ ಹಾಡಿದ ಟ್ರಂಪ್, ಶೆಹಬಾಜ್ ಷರೀಫ್ ಗಪ್​ಚುಪ್ – Kannada News | Donald Trump Says 11 Jets Shot Down During India Pakistan Conflict Praises PM Modi

ವಾಷಿಂಗ್ಟನ್, ಫೆಬ್ರವರಿ 20: ಕಳೆದ ವರ್ಷ ಭಾರತ-ಪಾಕಿಸ್ತಾನ ದೇಶಗಳ ನಡುವಿನ ಉದ್ವಿಗ್ನತೆಯ ಸಮಯದಲ್ಲಿ 11 ದುಬಾರಿ ಜೆಟ್‌ಗಳನ್ನು ಹೊಡೆದುರುಳಿಸಲಾಯಿತು. ಆಗ ನಾನು ಎರಡೂ ದೇಶಗಳು ಯುದ್ಧ ನಿಲ್ಲಿಸದಿದ್ದರೆ ಶೇ. 200ರಷ್ಟು ಸುಂಕ ವಿಧಿಸುತ್ತೇನೆ ಎಂದು ಬೆದರಿಕೆ ಹಾಕಿದ್ದೆ. ಎರಡೂ ದೇಶಗಳ ನಡುವಿನ ಸಂಘರ್ಷ ನಿಲ್ಲಿಸಲು ಮಧ್ಯಸ್ಥಿಕೆ ವಹಿಸಿದ್ದೆ ಎಂದು ಮತ್ತೊಮ್ಮೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದೇ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು “ಒಬ್ಬ ಮಹಾನ್ ವ್ಯಕ್ತಿ” ಎಂದು ಹೊಗಳಿದ್ದಾರೆ.

ಟ್ರಂಪ್ ಈ ಹೇಳಿಕೆ ನೀಡುವ ವೇಳೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಕೂಡ ಅಲ್ಲೇ ಇದ್ದರು. ಆದರೂ ಅವರು ಈ ಹೇಳಿಕೆಯನ್ನು ಅಲ್ಲಗಳೆಯಲಿಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯಲಿದ್ದ ಯುದ್ಧವನ್ನು ನಿಲ್ಲಿಸಲು ನಾನು ವೈಯಕ್ತಿಕವಾಗಿ ಮಧ್ಯಪ್ರವೇಶಿಸಿದ್ದೆ. ಯುದ್ಧಗಳು ಉಲ್ಬಣಗೊಳ್ಳುತ್ತಿದ್ದ ಸಮಯದಲ್ಲಿ ಎರಡೂ ದೇಶಗಳ ನಾಯಕರೊಂದಿಗೆ ನೇರವಾಗಿ ಮಾತನಾಡಿದ್ದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ. ಈ ಹೇಳಿಕೆಯನ್ನು ಭಾರತ ಈ ಹಿಂದೆ ಸಾಕಷ್ಟು ಬಾರಿ ನಿರಾಕರಿಸಿದೆ.

ಇದನ್ನೂ ಓದಿ: ಹತ್ತು ದಿನ ಟೈಂ ಕೊಡ್ತೀನಿ, ಹೇಳಿದ್ದು ಕೇಳದೆ ಇದ್ರೆ ಯುದ್ಧ ಗ್ಯಾರಂಟಿ, ಇರಾನ್​ಗೆ ಗಡುವು ಕೊಟ್ಟ ಟ್ರಂಪ್

ಮೇ 2025ರಲ್ಲಿ ಭಾರತ-ಪಾಕ್ ಸಂಘರ್ಷದ ಸಮಯದಲ್ಲಿ ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪ ಇರಲಿಲ್ಲ ಎಂದು ಭಾರತ ನಿರಂತರವಾಗಿ ಹೇಳುತ್ತಲೇ ಇದೆ. ಹಾಗೇ, ಭಾರತ ಎಷ್ಟು ಯುದ್ಧವಿಮಾನಗಳನ್ನು ಕಳೆದುಕೊಂಡಿದೆ ಎಂಬ ಬಗ್ಗೆ ಭಾರತ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಆದರೂ ಟ್ರಂಪ್ 11 ದುಬಾರಿ ಜೆಟ್​ಗಳು ಪತನವಾಗಿವೆ ಎಂಬ ಹೇಳಿಕೆ ನೀಡಿದ್ದಾರೆ.

“ಆ ಯುದ್ಧವು ಬಿರುಸಾಗಿತ್ತು. ವಿಮಾನಗಳನ್ನು ಹೊಡೆದುರುಳಿಸಲಾಗುತ್ತಿತ್ತು. ನಾನು ಅವರಿಬ್ಬರೊಂದಿಗೂ ಫೋನ್ ಮಾತುಕತೆ ನಡೆಸಿದ್ದೆ. ನನಗೆ ಪ್ರಧಾನಿ ಮೋದಿ ಚೆನ್ನಾಗಿ ತಿಳಿದಿದ್ದರು. ಅವರು ಆತ್ಮೀಯವಾಗಿದ್ದರಿಂದ ಈ ಬಗ್ಗೆ ಮಾತನಾಡಿ ಮನವೊಲಿಸಿದ್ದೆ” ಎಂದು ಟ್ರಂಪ್ ಹೇಳಿದ್ದಾರೆ.

“ನಾನು ಅವರಿಗೆ ಕರೆ ಮಾಡಿ, ನೀವು ಈ ಸಂಘರ್ಷವನ್ನು ಇತ್ಯರ್ಥಪಡಿಸದಿದ್ದರೆ ನಾನು ನಿಮ್ಮಿಬ್ಬರೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುವುದಿಲ್ಲ. ನೀವು ದಾಳಿ ಮುಂದುವರೆಸಿದರೆ ನಿಮ್ಮ ಎರಡೂ ದೇಶಗಳ ಮೇಲೆ ನಾನು ಶೇ. 200ರಷ್ಟು ಸುಂಕಗಳನ್ನು ವಿಧಿಸುತ್ತೇನೆ ಎಂದು ಹೇಳುವ ಮೂಲಕ ಎರಡೂ ದೇಶಗಳಿಗೆ ಗಂಭೀರ ಆರ್ಥಿಕ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದ್ದೆ. ಇದರಿಂದಲೇ ಅವರು ಒಪ್ಪಿಕೊಂಡರು” ಎಂದು ಟ್ರಂಪ್ ಹೇಳಿದ್ದಾರೆ. ಭಾರತದ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಂಡ ನಂತರವೂ ಟ್ರಂಪ್ ಅದೇ ಹಳೆಯ ಹೇಳಿಕೆ ನೀಡುತ್ತಿರುವುದು ಭಾರತದ ಅಸಮಾಧಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಜೊತೆ ಟ್ರಂಪ್ ಮಾಡಿಕೊಂಡ ವ್ಯಾಪಾರ ಒಪ್ಪಂದದ 7 ಹೈಲೈಟ್ಸ್ ಇಲ್ಲಿವೆ

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಈ ಕದನವಿರಾಮದಲ್ಲಿ ಟ್ರಂಪ್ ಅವರ ಪಾತ್ರವನ್ನು ಸಾರ್ವಜನಿಕವಾಗಿ ಶ್ಲಾಘಿಸಿದ್ದಾರೆ. ಅವರ ಹಸ್ತಕ್ಷೇಪವನ್ನು ಸಮಯೋಚಿತ ಮತ್ತು ಪರಿಣಾಮಕಾರಿ ಎಂದು ಕರೆದಿದ್ದಾರೆ. ಆದರೆ ಭಾರತವು ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಇರಲಿಲ್ಲ ಎಂದು ನಿರಾಕರಿಸಿದೆ. ಎರಡು ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (DGMOs) ನಡುವಿನ ಮಾತುಕತೆಗಳ ಮೂಲಕ ದ್ವಿಪಕ್ಷೀಯವಾಗಿ ಯುದ್ಧವನ್ನು ನಿಲ್ಲಿಸಲಾಗಿದೆ ಎಂದು ಭಾರತ ಸಮರ್ಥಿಸಿಕೊಂಡಿದೆ.

2025ರ ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ದಾಳಿಯಲ್ಲಿ 26 ನಾಗರಿಕರನ್ನು ಕೊಂದ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಕಳೆದ ವರ್ಷ ಮೇ 7ರಂದು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:17 pm, Fri, 20 February 26

Source link

Ranji Trophy final 2026: ಫೈನಲ್​​ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟ – Kannada News | Ranji Trophy final 2026: Karnataka squad Announced for final Match Against Jammu Kashmir at hubballi On feb 24

ಬರೋಬ್ಬರಿ 11 ವರ್ಷದ ಬಳಿಕ ಕರ್ನಾಟಕ (Karnataka) ಕ್ರಿಕೆಟ್ ತಂಡ ರಣಜಿ ಟ್ರೋಫಿ (Ranji Trophy) ಫೈನಲ್‌ ಪ್ರವೇಶಿಸಿದೆ. ಉತ್ತರಾಖಂಡ(Uttarakhand) ವಿರುದ್ಧದ ಸೆಮಿಫೈನಲ್​​ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡರೂ ಮೊದಲ ಇನ್ನಿಂಗ್ಸ್‌ನಲ್ಲಿ ಭಾರೀ ಮುನ್ನಡೆ ಸಾಧಿಸಿದ್ದರಿಂದ ಕರ್ನಾಟಕ ಸುಲಭವಾಗಿ ಫೈನಲ್‌ ಪ್ರವೇಶಿಸಿದ್ದು,  ಫೆಬ್ರವರಿ 24 ರಿಂದ ಹುಬ್ಬಳ್ಳಿಯಲ್ಲಿ ನಡೆಯಲಿರುವ  ಫೈನಲ್‌ (Final) ಪಂದ್ಯದಲ್ಲಿ ಜಮ್ಮು ಕಾಶ್ಮೀರ (Jammu Kashmir) ತಂಡವನ್ನು ಎದುರಿಸಲಿದೆ. ಹೀಗಾಗಿ ಅಂತಿಮ ಫೈನಲ್ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಟೀಂನಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಸೆಮಿಫೈನಲ್​​​ ಆಡಿದ ತಂಡವೇ ಫೈನಲ್​​​​​​​ ನಲ್ಲಿ ಕಣಕ್ಕಿಳಿಯಲಿದೆ.

ಫೈನಲ್​ ಮ್ಯಾಚ್​​​ಗೆ ಪ್ರಕಟಿಸಲಾದ 15 ಆಟಗಾರರ ತಂಡವನ್ನು ನೋಡಿದರೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಲಿಷ್ಠವಾಗಿದೆ. ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಇನಿಂಗ್ಸ್ ಆರಂಭಿಸಲಿದ್ದು, ಮೂರನೇ ಕ್ರಮಾಂಕದಲ್ಲಿ ಕರುಣ್ ನಾಯರ್ ಕಣಕ್ಕಿಳಿಯಲಿದ್ದಾರೆ. ಹಾಗೆಯೇ ನಾಲ್ಕನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಬ್ಯಾಟ್ ಬೀಸಲಿದ್ದಾರೆ. ಹೀಗೆ ಸಾಲು ಸಾಲು ದಾಂಡಿಗರು ಇದ್ದಾರೆ.

ಇದನ್ನೂ ಓದಿ: Ranji Trophy 2025-26: ಹುಬ್ಬಳ್ಳಿಯಲ್ಲಿ ರಣಜಿ ಫೈನಲ್​​ ಪಂದ್ಯ; ರಾಜ್ ನಗರ ಸ್ಟೇಡಿಯಂ ಬಗ್ಗೆ ನಿಮಗೆಷ್ಟು ಗೊತ್ತು?

ಲಕ್ನೋನ ಎಕಾನ ಮೈದಾನದಲ್ಲಿ ಉತ್ತರಾಖಂಡದ ವಿರುದ್ಧದ ಸೆಮೀಸ್​​ನಲ್ಲಿ ಮೊದಲು ಬ್ಯಾಟಿಂಗ್​ಗಿಳಿದ ಕರ್ನಾಟಕ ತಂಡ ಡಾಮಿನೇಟಿಂಗ್​ ಪರ್ಫಾಮೆನ್ಸ್​ ನೀಡಿತು. ನಾಯಕ ದೇವದತ್​ ಪಡಿಕ್ಕಲ್​ ಡಬಲ್​ ಸೆಂಚುರಿ ಬಾರಿಸಿದ್ರೆ, ಕೆ.ಎಲ್​ ರಾಹುಲ್, ಸ್ಮರಣ್​ ರವಿಚಂದ್ರನ್ ಶತಜ ಸಿಡಿಸಿ ಮಿಂಚಿದ್ದರು. ಕೃತಿಕ್ ಕೃಷ್ಣ, ವಿದ್ಯಾದರ್​ ಪಾಟೀಲ್​ ಆಫ್​ ಸೆಂಚುರಿ ಬಾರಿಸಿ ತಂಡಕ್ಕೆ ಆಸರೆಯಾಗಿದ್ದರು. ಹೀಗೆ ಕರ್ನಾಟಕ ಬ್ಯಾಟ್ಸ್​​ಮನ್​ಗಳು ಫಾರ್ಮ್​​ನಲ್ಲಿದ್ದು, ಫೈನಲ್​​​ನಲ್ಲೂ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ.

ಇನ್ನು ಕರ್ನಾಟಕ ಬೌಲಿಂಗ್ ವಿಭಾಗದಲ್ಲೂ ಸಹ ಸ್ಟ್ರಾಂಗ್ ಆಗಿದೆ. ಸೆಮೀಸ್​​ನಲ್ಲಿ ವಿಧ್ಯಾದರ್​ ಪಾಟೀಲ್, ವೈಶಾಕ್ ವಿಜಯ್ ಕುಮಾರ್​ ಬಿರುಗಾಳಿಯ ದಾಳಿ ಸಂಘಟಿಸಿದ್ರೆ, ಶ್ರೇಯಸ್​ ಗೋಪಾಲ್ ಸ್ಪಿನ್ ಮ್ಯಾಜಿಕ್ ಮಾಡಿದ್ದರು. ಶಿಖರ್​​ ಶೆಟ್ಟಿ, ಪ್ರಸಿದ್ಧ್​​ ಕೃಷ್ಣ ಕೂಡ ಬ್ಯಾಟರ್ಸ್​ಗೆ ಕಾಟ ಕೊಟ್ಟಿದ್ದರು. ಇದರಿಂದ ಕನ್ನಡಿಗರ ಸಂಘಟಿತ ದಾಳಿಗೆ ಉತ್ತರಾಖಾಂಡ ಉಡೀಸ್​ ಆಯ್ತು. ಇದೇ ಪರ್ಫಾಮೆನ್ಸ್​ ಫೈನಲ್​​​ನಲ್ಲೂ ತೋರಿದರೆ ಕರ್ನಾಟಕ ಪ್ರಶಸ್ತಿಗೆ ಮುತ್ತಿಕ್ಕುವುದು  ಗ್ಯಾರಂಟಿ.

ಇದನ್ನೂ ಓದಿ: 11 ವರ್ಷಗಳ ಬಳಿಕ ಫೈನಲ್​ಗೇರಿದ ಕರ್ನಾಟಕ

ಕರ್ನಾಟಕ ತಂಡ: ದೇವದತ್ ಪಡಿಕ್ಕಲ್ (ನಾಯಕ), ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್, ಕರುಣ್ ನಾಯರ್, ಕೆವಿ ಅನೀಶ್, ಸ್ಮರಣ್ ರವಿಚಂದ್ರನ್, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ, ವಿದ್ಯಾಧರ್ ಪಾಟೀಲ್, ವಿದ್ವತ್ ಕಾವೇರಪ್ಪ, ಪ್ರಸಿದ್ಧ್ ಕೃಷ್ಣ, ಮೊಹ್ಸಿನ್ ಖಾನ್, ಶಿಖರ್ ಶೆಟ್ಟಿ, ಕೆಎಲ್ ಶ್ರೀಜಿತ್, ವಿಜಯಕುಮಾರ್ ವೈಶಾಕ್.

ಹುಬ್ಬಳ್ಳಿಯಲ್ಲಿ ಫೈನಲ್​ ಕದನ

ಈ ಸೀಸನ್​ನಲ್ಲಿ ಬೊಂಬಾಟ್​ ಪ್ರದರ್ಶನ ನೀಡಿದ ಕರ್ನಾಟಕ ತಂಡ ಬರೋಬ್ಬರಿ 11 ವರ್ಷಗಳ ಫೈನಲ್​​ಗೆ ಎಂಟ್ರಿ ಕೊಟ್ಟಿದೆ. ಅತ್ತ ರಣಜಿ ಟ್ರೋಫಿ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಜಮ್ಮು ಕಾಶ್ಮೀರ ತಂಡ ಫೈನಲ್​ಗೆ ಬಂದಿದೆ. ಕರ್ನಾಟಕ ತಂಡ 9ನೇ ಟ್ರೋಫಿ ಗೆಲುವಿನ ಮೇಲೆ ಕಣ್ಣಿಟ್ಟಿದ್ರೆ, ಜಮ್ಮು ಕಾಶ್ಮೀರ ಚೊಚ್ಚಲ ಟ್ರೋಫಿ ಗೆಲುವಿನ ಕನವರಿಕೆಯಲ್ಲಿದೆ. ಹೀಗಾಗಿ ಹುಬ್ಬಳ್ಳಿಯ ರಾಜ್​ನಗರ್​ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್​ ಕದನ ರೋಚಕತೆ ಪಡೆಯಲಿದೆ. ಇನ್ನು ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ಪಕ್ಕಾ.

Published On – 6:11 pm, Fri, 20 February 26

Source link

ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು – Kannada News | Valsad Tragedy: Speeding Lorry Collides with Car, Seven Fatalities in Kaprada

ವಲ್ಸಾದ್, ಫೆ.20: ಗುಜರಾತ್‌ನ ವಲ್ಸಾದ್ ಜಿಲ್ಲೆಯ ಕಪ್ರಡಾ (Kaprada) ತಾಲ್ಲೂಕಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ. ಅತಿ ವೇಗವಾಗಿ ಬಂದ ಸರಕು ಸಾಗಣೆ ಲಾರಿ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಕಾರಿನಲ್ಲಿದ್ದ ಏಳು ಮಂದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಭೇಟಿ ನೀಡಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಗಾಯಗೊಂಡವರನ್ನು ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಲು ಸೂಚಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಶ್ಚಿಮ ಬಂಗಾಳದ SIR ಪ್ರಕ್ರಿಯೆಗೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಸುಪ್ರೀಂ ಕೋರ್ಟ್‌ ಆದೇಶ – Kannada News | Supreme court orders deployment of judicial officers to oversee west bengal sir claims

ನವದೆಹಲಿ, ಫೆಬ್ರವರಿ 20: ಪಶ್ಚಿಮ ಬಂಗಾಳದ SIR (West Bengal SIR) ಮೇಲ್ವಿಚಾರಣೆಗೆ ನ್ಯಾಯಾಂಗ ಅಧಿಕಾರಿಗಳನ್ನು ನಿಯೋಜಿಸಲು ಕೊಲ್ಕತ್ತಾ ಹೈಕೋರ್ಟ್​ಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಪಶ್ಚಿಮ ಬಂಗಾಳ ರಾಜ್ಯದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (SIR) ಅಧಿಕಾರಿಗಳ ನಿಯೋಜನೆ ಕುರಿತು ಭಾರತದ ಚುನಾವಣಾ ಆಯೋಗ (ECI) ಮತ್ತು ಪಶ್ಚಿಮ ಬಂಗಾಳ ಸರ್ಕಾರದ ನಡುವಿನ ಬಿಕ್ಕಟ್ಟನ್ನು ಪರಿಹರಿಸಲು ಭಾರತದ ಸುಪ್ರೀಂ ಕೋರ್ಟ್ (SC) ಮಧ್ಯಪ್ರವೇಶಿಸಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ನೇತೃತ್ವದ ನ್ಯಾಯಪೀಠವು, ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮತ್ತು ತೆಗೆದುಹಾಕುವಿಕೆಗೆ ಸಂಬಂಧಿಸಿದ ಬಾಕಿ ಇರುವ ಆಕ್ಷೇಪಣೆಗಳನ್ನು ನಿರ್ಣಯಿಸಲು ಜಿಲ್ಲಾ ನ್ಯಾಯಾಧೀಶರು ಅಥವಾ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಶ್ರೇಣಿಯ ಹಾಲಿ ಮತ್ತು ಮಾಜಿ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸುವಂತೆ ಕೊಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಸೂಚಿಸಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಎಸ್​ಐಆರ್​ಗೆ ಫೆ. 21ರವರೆಗೆ ಗಡುವು ವಿಸ್ತರಿಸಿದ ಸುಪ್ರೀಂ ಕೋರ್ಟ್

ಹಾಗೇ, ಸುಪ್ರೀಂ ಕೋರ್ಟ್ ಬಂಗಾಳದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಮತ್ತು ರಾಜ್ಯ ಚುನಾವಣಾ ಆಯುಕ್ತರು ಕೊಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನು ಭೇಟಿ ಮಾಡಲು ನಿರ್ದೇಶಿಸಿತು. ಫೆಬ್ರವರಿ 28ರೊಳಗೆ ಸಾಧ್ಯವಾದಷ್ಟು ಬೇಗ ಎಸ್‌ಐಆರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಡ್ವೊಕೇಟ್ ಜನರಲ್ ಮತ್ತು ಸಾಲಿಸಿಟರ್ ಜನರಲ್ ಸಮ್ಮುಖದಲ್ಲಿ ಈ ಸಭೆ ನಡೆಯಲಿದೆ.

ರಾಜ್ಯ-ಸರ್ಕಾರ ಮತ್ತು ಸಾಂವಿಧಾನಿಕ ಸಂಸ್ಥೆಗಳ ನಡುವೆ ಭಿನ್ನಾಭಿಪ್ರಾಯ ಇರುವುದರಿಂದ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದೆ. ಮತದಾರರ ಪಟ್ಟಿಯಲ್ಲಿನ ತಾರ್ಕಿಕ ವ್ಯತ್ಯಾಸಗಳ ಕುರಿತಾದ ವಿವಾದಗಳನ್ನು ಆಲಿಸಲು ಜಿಲ್ಲಾ ಮಟ್ಟದ ನ್ಯಾಯಾಧೀಶರನ್ನು ನೇಮಿಸುವ ಮೂಲಕ, ಆಕ್ಷೇಪಣೆಗಳ ನ್ಯಾಯಯುತ, ಸಕಾಲಿಕ ಮತ್ತು ಕಾನೂನು ಆಧಾರಿತ ಪರಿಹಾರವನ್ನು ನೀಡುವ ಗುರಿಯನ್ನು ಸುಪ್ರೀಂ ಕೋರ್ಟ್ ಹೊಂದಿದೆ.

ಇದನ್ನೂ ಓದಿ: ಎಸ್​ಐಆರ್ ಒತ್ತಡದಿಂದ ಬಂಗಾಳದಲ್ಲಿ 150 ಜನ ಸಾವು; ಸುಪ್ರೀಂ ಕೋರ್ಟ್​ನಲ್ಲಿ ಮಮತಾ ಬ್ಯಾನರ್ಜಿ ವಾದ

ಚುನಾವಣಾ ವಿಷಯಗಳಲ್ಲಿ ಅದರಲ್ಲೂ ವಿಶೇಷವಾಗಿ ಪಶ್ಚಿಮ ಬಂಗಾಳದಂತಹ ರಾಜಕೀಯವಾಗಿ ಸೂಕ್ಷ್ಮ ರಾಜ್ಯದಲ್ಲಿ ಪಾರದರ್ಶಕ ತೀರ್ಪು ಕಾರ್ಯವಿಧಾನಗಳ ಮೇಲೆ ನ್ಯಾಯಾಂಗವು ಇರಿಸುವ ಪ್ರಾಮುಖ್ಯತೆಯನ್ನು ಈ ಆದೇಶವು ಒತ್ತಿಹೇಳುತ್ತದೆ. ಫೆಬ್ರವರಿ 21ರ ಕರಡು ಅಥವಾ ಅಂತಿಮ ಪ್ರಕಟಣೆ ದಿನಾಂಕವನ್ನು ನಿರ್ಣಾಯಕವೆಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link