ಕುಟುಂಬದ ಜೊತೆ ಕಾಡಿನ ಪಿಸಿಮಾತು ಕೇಳಿದ ರಾಧಿಕಾ ಪಂಡಿತ್ – Kannada News | Radhika Pandit Trekking Video with Kids Ayra and Yatharv Goes Viral; Yash Busy with Toxic
ಸ್ಯಾಂಡಲ್‌ವುಡ್ ನಟಿ ರಾಧಿಕಾ ಪಂಡಿತ್ (Radhika Pandit) ಸದ್ಯ ಬಣ್ಣದ ಲೋಕದಿಂದ ದೂರವಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಈ ಮೂಲಕ ತಮ್ಮ ವೈಯಕ್ತಿಕ ಬದುಕಿನ ಸುಂದರ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಈಗ ಅವರು ತಮ್ಮ ಮಕ್ಕಳಾದ ಆಯ್ರಾ, ಯಥರ್ವ್ ಹಾಗೂ ಪೋಷಕರೊಂದಿಗೆ ದಟ್ಟ ಅರಣ್ಯದ ನಡುವೆ ಚಾರಣ ಕೈಗೊಂಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಚಾರಣದ ಹಿಂದಿನ ಕಾರಣ ನೀಡಿದ್ದಾರೆ. ಸದ್ಯ ರಾಧಿಕಾ ಪಂಡಿತ್ ಅವರ ಮಕ್ಕಳಿಗೆ ಶಾಲಾ ರಜೆ ಇರುವುದರಿಂದ, ಈ ಬಿಡುವಿನ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಅವರು…